10.02.19    Avyakt Bapdada     Kannada Murli     19.04.84     Om Shanti     Madhuban


ಭಾವುಕ ಆತ್ಮ ಹಾಗೂ ಜ್ಞಾನಿ ಆತ್ಮನ ಲಕ್ಷಣ


ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ನೋಡುತ್ತಿದ್ದಾರೆ - ಯಾವ ಮಕ್ಕಳು ಭಾವನೆಯಿಂದ ತಂದೆಯ ಬಳಿ ತಲುಪಿದ್ದಾರೆ, ಯಾವ ಮಕ್ಕಳು ಗುರುತಿಸಲು ಅರ್ಥಾತ್ ಆಗುವುದಕ್ಕಾಗಿ ತಲುಪಿದ್ದಾರೆ. ಎರಡೂ ಪ್ರಕಾರದ ಮಕ್ಕಳು ತಂದೆಯ ಮನೆಯಲ್ಲಿ ತಲುಪಿದ್ದಾರೆ. ಭಾವನೆಯಿರುವ ಭಾವನೆಯ ಫಲವು ಯಥಾಶಕ್ತಿ ಖುಷಿ, ಶಾಂತಿ, ಜ್ಞಾನ ಹಾಗೂ ಪ್ರೇಮದ ಫಲವನ್ನು ಪ್ರಾಪ್ತಿ ಮಾಡಿಕೊಂಡು, ಇದರಲ್ಲಿಯೇ ಖುಷಿಯಾಗಿ ಬಿಡುತ್ತಾರೆ. ಆದರೂ ಭಕ್ತಿಯ ಭಾವನೆ ಮತ್ತು ಈಗ ತಂದೆಯ ಪರಿಚಯದಿಂದ ತಂದೆ ಹಾಗೂ ಪರಿವಾರದ ಪ್ರತಿ ಭಾವನೆ - ಇದರಲ್ಲಿ ಅಂತರವಿದೆ. ಭಕ್ತಿಯ ಭಾವನೆಯು ಅಂಧಶ್ರದ್ಧೆಯ ಭಾವನೆಯಾಗಿದೆ. ಪರೋಕ್ಷವಾಗಿ ಮಿಲನವಾಗುವ ಭಾವನೆ, ಅಲ್ಪಕಾಲದ ಸ್ವಾರ್ಥದ ಭಾವನೆಯಿದೆ. ವರ್ತಮಾನ ಸಮಯದ ಜ್ಞಾನದ ಆಧಾರದ ಮೇಲೆ ಮಕ್ಕಳ ಯಾವ ಭಾವನೆಯಿದೆ, ಅದು ಭಕ್ತಿ ಮಾರ್ಗದಿಂದ ಅತೀ ಶ್ರೇಷ್ಠವಿದೆ. ಏಕೆಂದರೆ ಪರೋಕ್ಷವಾಗಿ ದೇವಾತ್ಮರ ಮೂಲಕವಲ್ಲ, ಪ್ರತ್ಯಕ್ಷ ತಂದೆಯ ಬಗ್ಗೆ ಭಾವನೆಯಿದೆ, ಪರಿಚಯವಿದೆ ಆದರೆ ಭಾವನಾ ಪೂರ್ವಕವಾಗಿ ಪರಿಚಯ ಮತ್ತು ಜ್ಞಾನದ ಮೂಲಕ ಪರಿಚಯ... ಇದರಲ್ಲಿ ಅಂತರವಿದೆ. ಜ್ಞಾನದ ಮೂಲಕ ಪರಿಚಯ ಅರ್ಥಾತ್ ತಂದೆಯು ಯಾರಾಗಿದ್ದಾರೆ, ಹೇಗಿದ್ದಾರೆ, ನಾನೂ ಸಹ ಯಾರಾಗಿದ್ದೇನೆ, ಹೇಗಿದ್ದೇನೆ - ಅದನ್ನು ವಿಧಿಪೂರ್ವಕವಾಗಿ ತಿಳಿಯುವುದು ಅರ್ಥಾತ್ ತಂದೆಯ ಸಮಾನರಾಗುವುದು. ತಿಳಿಯುವುದಂತು ಎಲ್ಲರೂ ತಿಳಿಯುತ್ತಾರೆ ಆದರೆ ಭಾವನಾ ಪೂರ್ವಕವಾಗಿದೆಯೇ ಅಥವಾ ಜ್ಞಾನದ ವಿಧಿಪೂರ್ವಕವಾಗಿದೆಯೇ...... ಈ ಅಂತರವನ್ನು ತಿಳಿಯಬೇಕಾಗುತ್ತದೆ. ಅಂದಮೇಲೆ ಇಂದು ಬಾಪ್ದಾದಾರವರು ಕೆಲವು ಮಕ್ಕಳ ಭಾವನೆಯನ್ನು ನೋಡುತ್ತಿದ್ದಾರೆ. ಭಾವನೆಯ ಮೂಲಕವೂ ತಂದೆಯನ್ನು ಗುರುತಿಸುವುದರಿಂದ ಆಸ್ತಿಯನ್ನಂತು ಪ್ರಾಪ್ತಿ ಮಾಡಿಕೊಂಡು ಬಿಡುತ್ತಾರೆ. ಆದರೆ ಸಂಪೂರ್ಣ ಆಸ್ತಿಯ ಅಧಿಕಾರಿ ಮತ್ತು ಆಸ್ತಿಯ ಅಧಿಕಾರಿಯಾಗುವುದರಲ್ಲಿ ಅಂತರವಾಗಿ ಬಿಡುತ್ತದೆ. ಸ್ವರ್ಗದ ಭಾಗ್ಯ ಹಾಗೂ ಜೀವನ್ಮುಕ್ತಿಯ ಅಧಿಕಾರವು ಭಾವನೆಯಿರುವವರಿಗೆ ಹಾಗೂ ಜ್ಞಾನವಿರುವವರಿಗೆ ಇಬ್ಬರಿಗೂ ಸಿಗುತ್ತದೆ. ಕೇವಲ ಪದವಿಯ ಪ್ರಾಪ್ತಿಯಲ್ಲಿ ಅಂತರವಾಗಿ ಬಿಡುತ್ತದೆ. ಬಾಬಾ ಶಬ್ಧವನ್ನು ಇಬ್ಬರೂ ಹೇಳುತ್ತಾರೆ ಮತ್ತು ಖುಷಿಯಿಂದ ಹೇಳುತ್ತಾರೆ. ಆದ್ದರಿಂದ ಬಾಬಾ ಹೇಳುವ ಮತ್ತು ತಿಳಿದುಕೊಳ್ಳುವ ಫಲದ ಆಸ್ತಿಯ ಪ್ರಾಪ್ತಿಯಂತು ಆಗಲೇಬೇಕು. ಜೀವನ್ಮುಕ್ತಿಯ ಅಧಿಕಾರದ ಹಕ್ಕುದಾರರಂತು ಆಗಿ ಬಿಡುತ್ತಾರೆ ಆದರೆ ಅಷ್ಟರತ್ನ, 108 ವಿಜಯಿರತ್ನ, 16 ಸಾವಿರ ಮತ್ತು 9 ಲಕ್ಷ. ಎಷ್ಟೊಂದು ಅಂತರವಾಯಿತು! ಮಾಲೆಯು 16 ಸಾವಿರದ್ದೂ ಇದೆ ಮತ್ತು 108ರದೂ ಇದೆ. 108ರಲ್ಲಿ 8 ವಿಶೇಷವೂ ಇದೆ. ಮಾಲೆಯ ಮಣಿಗಳಂತು ಎಲ್ಲರೂ ಆಗುತ್ತಾರೆ. ಹೇಳುವುದಂತು ಇಬ್ಬರನ್ನೂ ಮಣಿಗಳೆಂದಲ್ಲವೆ! 16 ಸಾವಿರದ ಮಾಲೆಯ ಮಣಿಯೂ ಸಹ ಖುಷಿ ಮತ್ತು ನಶೆಯಿಂದ ಹೇಳುತ್ತಾರೆ - ನನ್ನ ಬಾಬಾ ಮತ್ತು ನನ್ನ ರಾಜ್ಯ. ರಾಜ್ಯ ಪದವಿಯಲ್ಲಿ ರಾಜ್ಯ ಸಿಂಹಾಸನಾಧಿಕಾರಿ ಮತ್ತು ರಾಜ ಮನೆತನದ ಅಧಿಕಾರಿ ಮತ್ತು ರಾಜ ಮನೆತನದ ಸಂಪರ್ಕದಲ್ಲಿ ಬರುವ ಅಧಿಕಾರಿ - ಇದು ಅಂತರವಾಗಿ ಬಿಡುತ್ತದೆ. ಭಾವುಕ ಆತ್ಮರು ಮತ್ತು ಜ್ಞಾನಿ ಆತ್ಮನ ನಶೆಯು ಇಬ್ಬರಿಗೂ ಇರುತ್ತದೆ. ಬಹಳ ಒಳ್ಳೆಯ ಪ್ರಭು ಪ್ರೇಮದ ಮಾತನ್ನು ತಿಳಿಸುತ್ತಾರೆ. ಪ್ರೇಮ ಸ್ವರೂಪದಲ್ಲಿ ಪ್ರಪಂಚವನ್ನೂ ಮರೆತು ಬಿಡುತ್ತಾರೆ. ನನ್ನವರಂತು ಒಬ್ಬ ತಂದೆ, ಈ ಲಗನ್ನಿನ ಗೀತೆಯನ್ನೂ ಬಹಳ ಚೆನ್ನಾಗಿಯೇ ಹಾಡುತ್ತಾರೆ ಆದರೆ ಶಕ್ತಿ ರೂಪದವರಾಗುವುದಿಲ್ಲ. ಜ್ಞಾನದ ಶಕ್ತಿಯು ಕಡಿಮೆಯಿರುತ್ತದೆ. ಈಗೀಗ ನೋಡುತ್ತಾರೆ - ಬಹಳ ಮೋಜಿನಲ್ಲಿ ತಂದೆಯ ಹಾಡನ್ನು ಹಾಡುತ್ತಿದ್ದಾರೆ ಮತ್ತು ಈಗೀಗ ಮಾಯೆಯ ಚಿಕ್ಕದಾಗಿರುವ ಯುದ್ಧವೂ ಸಹ ಖುಷಿಯ ಹಾಡಿಗೆ ಬದಲು, ಏನು ಮಾಡಲಿ, ಹೇಗೆ ಮಾಡಲಿ, ಏನಾಗುತ್ತದೆಯೋ, ಹೇಗಾಗುತ್ತದೆಯೋ! ಹೀಗೆ ಏನು-ಏನು ಎನ್ನುವ ಹಾಡನ್ನಾಡುವುದರಲ್ಲಿಯೂ ಕಡಿಮೆಯಿಲ್ಲ. ಜ್ಞಾನಿ ಆತ್ಮರು - ಸದಾ ಸ್ವಯಂನ್ನು ತಂದೆಯ ಜೊತೆಯಿರುವ ಮಾII ಸರ್ವಶಕ್ತಿವಂತನೆಂದು ತಿಳಿಯುವುದರಿಂದ ಮಾಯೆಯನ್ನು ಪಾರು ಮಾಡಿ ಬಿಡುತ್ತಾರೆ. ಏನೆ, ಏನು ಎಂಬ ಹಾಡನ್ನಾಡುವುದಿಲ್ಲ. ಭಾವುಕ ಆತ್ಮರು ಕೇವಲ ಪ್ರೇಮದ ಶಕ್ತಿಯಿಂದ ಮುಂದುವರೆಯುತ್ತಿರುತ್ತಾರೆ. ಮಾಯೆಯೊಂದಿಗೆ ಎದುರಿಸುವ ಶಕ್ತಿಯಿರುವುದಿಲ್ಲ. ಜ್ಞಾನಿ ಆತ್ಮನು ಸಮಾನರಾಗುವ ಲಕ್ಷ್ಯದಿಂದ ಸರ್ವಶಕ್ತಿಗಳ ಅನುಭವ ಮಾಡುತ್ತಾ ಎದುರಿಸಲು ಸಾಧ್ಯವಾಗುತ್ತದೆ. ಈಗ ತಾವು ತಮ್ಮೊಂದಿಗೆ ಕೇಳಿಕೊಳ್ಳಿರಿ - ನಾನು ಯಾರು! ಭಾವುಕ ಆತ್ಮನೇ ಅಥವಾ ಜ್ಞಾನಿ ಆತ್ಮನೇ? ತಂದೆಯವರಂತು ಭಾವನೆಯಿರುವವರನ್ನೂ ನೋಡುತ್ತಾ ಖುಷಿಯಾಗುತ್ತಾರೆ. ನನ್ನ ಬಾಬಾ ಎಂದು ಹೇಳುವುದರಿಂದ ಅಧಿಕಾರಿಯಂತು ಆಗಿಯೇ ಬಿಟ್ಟರಲ್ಲವೆ! ಮತ್ತು ಅಧಿಕಾರವನ್ನು ತೆಗೆದುಕೊಳ್ಳುವುದರಲ್ಲಿಯೂ ಹಕ್ಕುದಾರರಾಗಿಯೇ ಬಿಟ್ಟರು. ಸಂಪೂರ್ಣವಾಗಿ ತೆಗೆದುಕೊಳ್ಳುವುದು ಅಥವಾ ಸ್ವಲ್ಪ ತೆಗೆದುಕೊಳ್ಳುವುದು.... ಅದು ಪುರುಷಾರ್ಥದನುಸಾರವಾಗಿ ಜೋಳಿಗೆಯನ್ನು ಎಷ್ಟು ತುಂಬಿಕೊಳ್ಳಬಯಸುವರೋ ಅಷ್ಟೂ ತುಂಬಿಕೊಳ್ಳಬಹುದು. ಏಕೆಂದರೆ ನನ್ನ ಬಾಬಾ ಹೇಳಿದರೆಂದರೆ, ಅದರ ಬೀಗದ ಕೈ ಹಾಕಿ ಬಿಟ್ಟರಲ್ಲವೆ. ಮತ್ತ್ಯಾವುದೇ ಕೀಲಿ ಕೈ ಇಲ್ಲ. ಏಕೆಂದರೆ ಬಾಪ್ದಾದಾ ಸಾಗರನಲ್ಲವೆ. ಅಕೂಟವಿದೆ, ಬೇಹದ್ದಿನದಾಗಿದೆ, ತೆಗೆದುಕೊಳ್ಳುವವರು ಸುಸ್ತಾಗಿ ಬಿಡುತ್ತಾರೆ. ಕೊಡುವವರು ಸುಸ್ತಾಗುವುದಿಲ್ಲ. ಏಕೆಂದರೆ ಅವರು ಪರಿಶ್ರಮವೇನು ಮಾಡಬೇಕಾಗುತ್ತದೆ! ದೃಷ್ಟಿ ಕೊಟ್ಟರು ಮತ್ತು ಅಧಿಕಾರವನ್ನು ಕೊಟ್ಟರು ಅಷ್ಟೇ. ಪರಿಶ್ರಮ ತೆಗೆದುಕೊಳ್ಳುವವರಿಗೂ ಇಲ್ಲ ಕೇವಲ ಹುಡುಗಾಟಿಕೆಯ ಕಾರಣದಿಂದ ಕಳೆದುಕೊಂಡು ಬಿಡುತ್ತಾರೆ. ಮತ್ತು ತನ್ನ ಬಲಹೀನತೆಯ ಕಾರಣದಿಂದ ಕಳೆದುಕೊಂಡು, ನಂತರ ಪಡೆಯುವುದಕ್ಕಾಗಿ ಪರಿಶ್ರಮ ಪಡಬೇಕಾಗುತ್ತದೆ. ಕಳೆದು ಪಡೆದುಕೊಳ್ಳುವುದು, ಪಡೆದು ಕಳೆದುಕೊಳ್ಳುವುದು - ಈ ಪರಿಶ್ರಮದ ಕಾರಣದಿಂದ ಸುಸ್ತಾಗಿ ಬಿಡುತ್ತಾರೆ. ಎಚ್ಚರಿಕೆಯಿರುವವರು, ಬುದ್ಧಿವಂತರಾಗಿದ್ದರೆ ಸದಾ ಪ್ರಾಪ್ತಿ ಸ್ವರೂಪರಾಗಿರುತ್ತೀರಿ. ಹೇಗೆ ಸತ್ಯಯುಗದಲ್ಲಿ ದಾಸಿಯರು ಸದಾ ಸೇವೆಗಾಗಿ ಹಿಂದೆ - ಮುಂದೆ ಜೊತೆಯಿರುತ್ತಾರೆ. ಹಾಗೆಯೇ ಜ್ಞಾನಿ ಆತ್ಮನು ತಂದೆಯ ಸಮಾನ ಶ್ರೇಷ್ಠಾತ್ಮನ, ಈಗಲೂ ಸರ್ವ ಶಕ್ತಿಗಳು, ಸರ್ವ ಗುಣಗಳು ಸೇವಾಧಾರಿಯ ರೂಪದಲ್ಲಿ ಸದಾ ಜೊತೆಯನ್ನು ನಿಭಾಯಿಸುತ್ತಾರೆ. ಯಾವ ಶಕ್ತಿಯನ್ನೇ ಆಹ್ವಾನ ಮಾಡಿರಿ, ಯಾವುದೇ ಗುಣದ ಆಹ್ವಾನ ಮಾಡಿರಿ ಸಿದ್ಧವಾಗಿ ನಿಂತು ಬಿಡುತ್ತದೆ. ಇಂತಹ ಸ್ವರಾಜ್ಯ ಅಧಿಕಾರಿಗಳು ವಿಶ್ವ ರಾಜ್ಯಾಧಿಕಾರಿ ಆಗುತ್ತಾರೆ. ಅಂದಮೇಲೆ ಪರಿಶ್ರಮವಂತು ಆಗುವುದಿಲ್ಲವಲ್ಲವೆ. ಪ್ರತೀ ಶಕ್ತಿ, ಪ್ರತೀ ಗುಣದಿಂದ ಸದಾ ವಿಜಯಿಯೇ ಆಗಿದ್ದೇವೆ - ಇಂತಹ ಅನುಭವ ಮಾಡುತ್ತಾರೆ. ಹೇಗೆ ಡ್ರಾಮಾ ತಯಾರು ಮಾಡಿಕೊಂಡು ತೋರಿಸುತ್ತೀರಲ್ಲವೆ. ರಾವಣನು ತನ್ನ ಜೊತೆಗಾರರಿಗೆ ಉತ್ತೇಜಿಸುತ್ತಾನೆ ಮತ್ತು ಬ್ರಾಹ್ಮಣ ಆತ್ಮರು, ಸ್ವರಾಜ್ಯ ಅಧಿಕಾರಿ ಆತ್ಮರು, ತನ್ನ ಶಕ್ತಿಗಳು ಹಾಗೂ ಗುಣಗಳನ್ನು ಉತ್ತೇಜಿಸುತ್ತಾರೆ. ಅಂದಮೇಲೆ ಇಂತಹ ಸ್ವರಾಜ್ಯ ಅಧಿಕಾರಿ ಆಗಿದ್ದೀರಲ್ಲವೆ? ಅಥವಾ ಸಮಯದಲ್ಲಿ ಈ ಶಕ್ತಿಗಳನ್ನು ಕಾರ್ಯದಲ್ಲಿ ಉಪಯೋಗಿಸಲು ಸಾಧ್ಯವಿಲ್ಲವೆ! ಬಲಹೀನ ರಾಜನದನ್ನು ಯಾರೂ ಒಪ್ಪುವುದಿಲ್ಲ. ರಾಜನು ಪ್ರಜೆಗಳದನ್ನು ಒಪ್ಪಬೇಕಾಗುತ್ತದೆ. ಶಕ್ತಿಶಾಲಿ ರಾಜನು ಎಲ್ಲರನ್ನೂ ತನ್ನ ಆದೇಶದಿಂದ ನಡೆಸುತ್ತಾನೆ ಮತ್ತು ರಾಜ್ಯ ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಅಂದಮೇಲೆ ಸಹಜವನ್ನು ಕಷ್ಟವನ್ನಾಗಿಸಿಕೊಳ್ಳುವುದು ಮತ್ತು ಸುಸ್ತಾಗುವುದು - ಇದು ಹುಡುಗಾಟಿಕೆಯ ಚಿಹ್ನೆಯಾಗಿದೆ. ಹೆಸರು ರಾಜಾ ಮತ್ತು ಆದೇಶದಂತೆ ಯಾವುದೂ ಇಲ್ಲ - ಇವರಿಗೇನು ಹೇಳಲಾಗುತ್ತದೆ! ಕೆಲವರು ಹೇಳುತ್ತಾರೆ - ನಾನು ಸಹನಶಕ್ತಿಯಿರಬೇಕೆಂದು ತಿಳಿದುಕೊಂಡಿದ್ದೇನೆ. ಆದರೆ ಆ ನಂತರ ನೆನಪಿಗೆ ಬಂದಿತು. ಆ ಸಮಯದಲ್ಲಿ ಯೋಚಿಸುತ್ತಿದ್ದರೂ ಸಹನ ಶಕ್ತಿಯಿಂದ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಅರ್ಥ - ಕರೆದಿದ್ದು ಈಗ ಮತ್ತು ಬಂದಿದ್ದು ನಾಳೆ. ಅಂದಮೇಲೆ ಆದೇಶದಂತೆ ಇದೆಯೆಂದಾಯಿತೆ! ಆಗಿ ಬಿಟ್ಟಿತು ಅಂದರೆ ತಮ್ಮ ಶಕ್ತಿಗಳು ಆದೇಶದಂತಿಲ್ಲ. ಸೇವಾಧಾರಿಯು ಸಮಯದಲ್ಲಿ ಸೇವೆಯನ್ನು ಮಾಡಲಿಲ್ಲವೆಂದರೆ, ಅವರನ್ನು ಸೇವಾಧಾರಿಯೆಂದು ಹೇಗೆ ಹೇಳುವುದು? ಅಂದಾಗ ಸದಾ ಸ್ವರಾಜ್ಯ ಅಧಿಕಾರಿಯಾಗಿದ್ದು ಸರ್ವ ಶಕ್ತಿಗಳನ್ನು, ಗುಣಗಳನ್ನು ಸ್ವಯಂ ಪ್ರತಿ ಹಾಗೂ ಸರ್ವರ ಪ್ರತಿ ಸೇವೆಯಲ್ಲಿ ಉಪಯೋಗ ಮಾಡಿರಿ. ತಿಳಿಯಿತೆ - ಕೇವಲ ಭಾವುಕರಾಗಬಾರದು, ಶಕ್ತಿಶಾಲಿಯಾಗಿರಿ. ಒಳ್ಳೆಯದು - ವಿಭಿನ್ನ ಪ್ರಕಾರದ ಆತ್ಮರ ಮಿಲನವನ್ನು ನೋಡುತ್ತಾ ಖುಷಿಯಾಗುತ್ತಿದ್ದೀರಲ್ಲವೆ! ಮಧುಬನದವರು ಎಷ್ಟು ಮಿಲನಗಳನ್ನು ನೋಡುತ್ತೀರಿ! ಎಷ್ಟು ವಿಧವಿಧವಾದ ಗ್ರೂಪುಗಳು ಬರುತ್ತದೆ. ಬಾಪ್ದಾದಾರವರೂ ಸಹ ವಿವಿಧ ಪ್ರಕಾರದ ಹೂ ಗುಚ್ಛಗಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಭಲೇ ಬಂದಿದ್ದಾರೆ. ಶಿವನ ದಿಬ್ಬಣದ ಗಾಯನವೇನಿದೆ, ಅದನ್ನು ನೋಡುತ್ತಿದ್ದೀರಲ್ಲವೆ! ಬಾಬಾ-ಬಾಬಾ ಎನ್ನುತ್ತಾ, ಎಲ್ಲರೂ ನಡೆದು ಬಿಟ್ಟಿರಲ್ಲವೆ, ಮಧುಬನದಲ್ಲಂತು ತಲುಪಿ ಬಿಟ್ಟಿರಿ. ಈಗ ಸಂಪೂರ್ಣ ಗುರಿಯಲ್ಲಿ ತಲುಪಬೇಕಾಗಿದೆ. ಒಳ್ಳೆಯದು.

ಸದಾ ಶ್ರೇಷ್ಠಾಧಿಕಾರವನ್ನು ಪಡೆಯುವ ವಿಜಯಿ ಆತ್ಮರಿಗೆ , ಸದಾ ತಮ್ಮ ಅಧಿಕಾರದಿಂದ ಸರ್ವಶಕ್ತಿಗಳ ಮೂಲಕ ಸೇವೆಯನ್ನು ಮಾಡುವ ಶಕ್ತಿಶಾಲಿ ಆತ್ಮರಿಗೆ , ಸದಾ ರಾಜ್ಯ ಸಿಂಹಾಸನ ಅಧಿಕಾರಿಯಾಗುವ ಅಧಿಕಾರಿ ಆತ್ಮರಿಗೆ , ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಅನೇಕ ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ -

ಪಂಜಾಬ್ ಜೋ ನಿನೊಂದಿಗೆ:- ಪಂಜಾಬ್ ನಿವಾಸಿಗಳೆಲ್ಲರೂ ಮಹಾವೀರರಾಗಿದ್ದೀರಲ್ಲವೆ! ಭಯ ಪಡುವವರಂತು ಅಲ್ಲವೇ? ಯಾವುದೇ ಮಾತಿನ ಭಯವಂತು ಆಗುವುದಿಲ್ಲವೇ! ಎಲ್ಲದಕ್ಕಿಂತಲೂ ಬಹಳ ಭಯವಾಗುತ್ತದೆ - ಮೃತ್ಯುವಿನಿಂದ. ತಾವೆಲ್ಲರಂತು ಸತ್ತು ಹೋಗಿದ್ದೀರಿ. ಸತ್ತಿರುವವರಿಗೆ ಸಾಯುವ ಭಯವೇನಿದೆ! ಮೃತ್ಯುವಿನಿಂದ ಆಗ ಭಯವೆನಿಸುತ್ತದೆ ಯಾವಾಗ ಯೋಚಿಸುತ್ತೀರಿ - ಈಗ ಇದನ್ನು ಮಾಡಬೇಕಾಗಿದೆ, ಇದನ್ನು ಮಾಡಬೇಕು ಮತ್ತು ಅದು ಪೂರ್ತಿಯಾಗಲಿಲ್ಲವೆಂದರೆ ಮೃತ್ಯುವಿನಿಂದ ಭಯವಾಗುತ್ತದೆ. ತಾವಂತು ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಎವರೆಡಿಯಾಗಿದ್ದೀರಿ. ಈ ಹಳೆಯ ವಸ್ತ್ರವನ್ನು ಬಿಡುವುದಕ್ಕಾಗಿ ಎವರೆಡಿಯಾಗಿದ್ದೀರಲ್ಲವೆ, ಆದ್ದರಿಂದ ಭಯವಿಲ್ಲ. ಯಾರು ಇನ್ನೂ ಭಯಭೀತರಾಗಿರುವ ಆತ್ಮರಿದ್ದಾರೆ, ಅವರನ್ನೂ ಶಕ್ತಿಶಾಲಿ ಮಾಡುವ, ದುಃಖದ ಸಮಯದಲ್ಲಿ ಸುಖವನ್ನು ಕೊಡುವ ಆತ್ಮರಾಗಿದ್ದೀರಿ. ಸುಖದಾತನ ಮಕ್ಕಳಾಗಿದ್ದೀರಿ. ಹೇಗೆ ಅಂಧಕಾರದಲ್ಲಿ ಅಂಧಕಾರವು ಆವರಿಸಿರುತ್ತದೆಯೋ ಆಗಲೇ ಪ್ರಕಾಶತೆಯಾಗಿ ಬಿಡುತ್ತದೆ. ಇದೇ ರೀತಿ ದುಃಖದ ವಾತಾವರಣದಲ್ಲಿ ಸುಖ ಕೊಡುವವರು ತಾವು ಶ್ರೇಷ್ಠಾತ್ಮರಾಗಿದ್ದೀರಿ. ಅಂದಮೇಲೆ ಸದಾ ಸುಖ ಕೊಡುವ ಶ್ರೇಷ್ಠ ಭಾವನೆಯಿರುತ್ತದೆಯೇ! ಸದಾ ಸುಖವನ್ನು ಕೊಡಬೇಕು, ಶಾಂತಿಯನ್ನು ಕೊಡಬೇಕು. ಶಾಂತಿದಾತನ ಮಕ್ಕಳು ಶಾಂತಿದೇವ ಆಗಿದ್ದೀರಿ. ಅಂದಮೇಲೆ ಶಾಂತಿದೇವ ಯಾರು? ಒಬ್ಬ ತಂದೆಯಲ್ಲ, ತಾವೆಲ್ಲರೂ ಆಗಿದ್ದೀರಿ. ಅಂದಮೇಲೆ ಶಾಂತಿ ಕೊಡುವ ಶಾಂತಿ ದೇವ - ಶಾಂತಿ ಕೊಡುವ ಕಾರ್ಯವನ್ನು ಮಾಡುತ್ತಿದ್ದೀರಲ್ಲವೆ! ಜನರು ಕೇಳುತ್ತಾರೆ - ತಾವುಗಳು ಏನು ಸೇವೆಯನ್ನು ಮಾಡುತ್ತೀರಿ? ಆಗ ತಾವೆಲ್ಲರೂ ಇದನ್ನೇ ಹೇಳಿರಿ - ಈ ಸಮಯದಲ್ಲಿ ಯಾವ ವಿಶೇಷ ಮಾತಿನ ಅವಶ್ಯಕತೆಯಿದೆಯೋ, ಆ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಒಳ್ಳೆಯದು - ಬಟ್ಟೆಯನ್ನೂ ಕೊಡುತ್ತಾರೆ, ಆಹಾರ ಧಾನ್ಯಗಳನ್ನೂ ಕೊಡುತ್ತಾರೆ. ಆದರೆ ಎಲ್ಲದಕ್ಕಿಂತಲೂ ಅವಶ್ಯಕವಾಗಿರುವ ವಸ್ತುವಾಗಿದೆ - ಶಾಂತಿ. ಯಾವುದು ಎಲ್ಲರಿಗೂ ಅವಶ್ಯಕವಾಗಿರುವ ವಸ್ತುವಾಗಿದೆ ಅದನ್ನು ನಾವು ಕೊಡುತ್ತಿದ್ದೇವೆ, ಇದಕ್ಕಿಂತ ದೊಡ್ಡ ಸೇವೆಯೇನಿದೆ! ಮನಸ್ಸು ಶಾಂತವಾಗಿದೆಯೆಂದರೆ ಧನವೂ ಕೆಲಸಕ್ಕೆ ಬರುತ್ತದೆ. ಮನಸ್ಸು ಶಾಂತವಾಗಿಲ್ಲವೆಂದರೆ ಧನದ ಶಕ್ತಿಯೂ ಬೇಸರ ಪಡಿಸುತ್ತದೆ. ಈಗ ಇಂತಹ ಶಾಂತಿಯ ಶಕ್ತಿಶಾಲಿ ಪ್ರಕಂಪನಗಳನ್ನು ಹರಡಿಸಿರಿ, ಅದರಿಂದ ಎಲ್ಲರೂ ಅನುಭವ ಮಾಡಲಿ- ಇಡೀ ದೇಶದಲ್ಲಿ ಇದು ಶಾಂತಿಯ ಸ್ಥಾನವಾಗಿದೆ. ಒಬ್ಬರಿನ್ನೊಬ್ಬರೊಂದಿಗೆ ಕೇಳಲಿ ಮತ್ತು ಅನುಭವ ಮಾಡುವುದಕ್ಕಾಗಿ ಬರಲಿ - ಎರಡು ಗಳಿಗೆಗಾದರೂ ಹೋಗುವುದರಿಂದ ಇಲ್ಲಿ ಬಹಳ ಶಾಂತಿ ಸಿಗುತ್ತದೆ. ಇಂತಹ ಧ್ವನಿಯು ಹರಡಲಿ. ಶಾಂತಿಯ ಸ್ಥಾನವು ಇದೇ ಸೇವಾ ಸ್ಥಾನವಾಗಿದೆ, ಈ ಧ್ವನಿಯು ಹರಡಬೇಕಾಗಿದೆ. ಎಷ್ಟೇ ಅಶಾಂತ ಆತ್ಮರಾಗಿರಲಿ, ಹೇಗೆ ರೋಗಿಯು ಆಸ್ಪತ್ರೆಯಲ್ಲಿ ತಲುಪುತ್ತಾನೆಯೋ ಹಾಗೆಯೇ ಇವರು ತಿಳಿಯಲಿ - ಅಶಾಂತಿಯ ಸಮಯದಲ್ಲಿ ಈ ಶಾಂತಿಯ ಸ್ಥಾನದಲ್ಲಿಯೇ ಹೋಗಬೇಕು. ಇಂತಹ ಪ್ರಕಂಪನವನ್ನು ಹರಡಿಸಿರಿ. ಇದು ಹೇಗೆ ಹರಡುತ್ತದೆ? ಇದಕ್ಕಾಗಿ ಒಬ್ಬರು-ಇಬ್ಬರು ಆತ್ಮರನ್ನಾದರೂ ಕರೆಸಿ ಅನುಭವ ಮಾಡಿಸಿರಿ. ಒಬ್ಬರಿಂದ ಒಬ್ಬರು, ಒಬ್ಬರಿಂದ ಒಬ್ಬರು ಹೀಗೆ ಹರಡುತ್ತಾ ಹೋಗುತ್ತದೆ. ಯಾರು ಅಶಾಂತರಾಗಿದ್ದಾರೆ, ಅವರನ್ನು ವಿಶೇಷವಾಗಿ ಕರೆಸಿಯಾದರೂ ಶಾಂತಿಯ ಅನುಭವವನ್ನು ಮಾಡಿಸಿರಿ. ಯಾರೇ ಸಂಪರ್ಕದಲ್ಲಿ ಬರಲಿ, ಅವರಿಗೆ ಈ ಸಂದೇಶವನ್ನು ಕೊಡಿ - ಶಾಂತಿಯ ಅನುಭವ ಮಾಡಿರಿ. ಪಂಜಾಬಿನವರು ವಿಶೇಷವಾಗಿ ಈ ಸೇವೆಯನ್ನು ಮಾಡಬೇಕಾಗಿದೆ. ಈಗ ಧ್ವನಿಯು ಮೊಳಗಿಸಲು ಅವಕಾಶವಿದೆ. ಈಗ ಶಾಂತಿಗಾಗಿ ಎಲ್ಲಾ ಕಡೆ ಹುಡುಕುತ್ತಿದ್ದಾರೆ, ಯಾವುದಾದರೂ ಸ್ಥಾನವಿರಬೇಕು. ಯಾವ ಸ್ಥಾನವಿದೆ... ಅದರ ಪರಿಚಯವಿಲ್ಲ, ಹುಡುಕುತ್ತಿದ್ದಾರೆ. ಒಂದು ಸ್ಥಾನದಿಂದಂತು ಅಲೆದಾಡಿ ಬಿಟ್ಟರು, ಇದು ಸ್ಥಾನವಲ್ಲ ಎನ್ನುವುದನ್ನು ತಿಳಿದು ಬಿಟ್ಟರು. ಹೀಗೆ ಅಲೆದಾಡುತ್ತಿರುವ ಆತ್ಮರಿಗೆ ಈಗ ಸಹಜವಾಗಿ ನೆಲೆಯನ್ನು ಕೊಡಲು ಸಾಧ್ಯವಿಲ್ಲವೇ? ಇಂತಹ ಸೇವೆಯನ್ನು ಮಾಡಿರಿ. ಕರ್ಫ್ಯೂ ಆಗಲಿ, ಏನೇ ಆಗಲಿ, ಸಂಪರ್ಕದಲ್ಲಂತು ಬರುತ್ತೀರಲ್ಲವೆ. ಸಂಪರ್ಕದವರಿಗೆ ಅನುಭವ ಮಾಡಿಸಿರಿ, ಆಗಲೇ ಇಂತಹ ಆತ್ಮರ ಧ್ವನಿಯು ಹರಡುತ್ತದೆ. ಅವರಿಗೆ ಒಂದೆರಡು ಗಂಟೆಯಾದರೂ ಯೋಗ ಶಿಬಿರವನ್ನು ಮಾಡಿಸಿರಿ. ಒಂದು ವೇಳೆ ಸ್ವಲವೇನಾದರೂ ಶಾಂತಿಯ ಅನುಭವ ಮಾಡಿಸಿದಿರೆಂದರೆ ಬಹಳ ಖುಷಿಯಾಗುತ್ತದೆ, ಧನ್ಯವಾದಗಳನ್ನು ಹೇಳಲು ಒಪ್ಪುತ್ತಾರೆ. ನಾವು ಮಾಡಲೇಬೇಕು ಎನ್ನುವ ಲಕ್ಷ್ಯವು ಯಾವಾಗ ಇರುತ್ತದೆಯೋ, ಆಗ ಮಾರ್ಗವೂ ಸಿಕ್ಕಿ ಬಿಡುತ್ತದೆ. ಅಂದಮೇಲೆ ಪಂಜಾಬಿನ ಧರಣಿಯು ಎಷ್ಟು ಗಟ್ಟಿಯಿದೆಯೋ ಅಷ್ಟು ಮೃದು ಮಾಡಬಹುದು. ಒಳ್ಳೆಯದು!

2. ಸದಾ ತಮ್ಮನ್ನು ಫರಿಶ್ಥಾ ಅರ್ಥಾತ್ ಡಬಲ್ಲೈಟ್ ಎಂದು ಅನುಭವ ಮಾಡುತ್ತೀರಾ? ಈ ಸಂಗಮಯುಗದ ಅಂತಿಮ ಸ್ವರೂಪವು ಫರಿಶ್ಥೆಯಲ್ಲವೆ. ಬ್ರಾಹ್ಮಣ ಜೀವನದ ಪ್ರಾಪ್ತಿಯಿರುವುದೇ ಫರಿಶ್ಥಾ ಜೀವನ. ಫರಿಶ್ಥಾ ಅರ್ಥಾತ್ ಯಾರಿಗೆ ಯಾವುದೇ ದೇಹ ಮತ್ತು ದೇಹದ ಸಂಬಂಧದಲ್ಲಿ ಬಂಧನವಿಲ್ಲ. ದೇಹ ಮತ್ತು ದೇಹದ ಸಂಬಂಧ, ಎಲ್ಲದರೊಂದಿಗೂ ಬಂಧನವು ಸಮಾಪ್ತಿಯಾಯಿತೆ ಅಥವಾ ಸ್ವಲ್ಪ ಸಿಕ್ಕಿ ಹಾಕಿಕೊಂಡಿದೆಯೇ? ಒಂದು ವೇಳೆ ಸ್ವಲ್ಪವೇನಾದರೂ ಸೂಕ್ಷ್ಮ ಸೆಳೆತದ ಎಳೆಯಿರುತ್ತದೆಯೆಂದರೆ ಹಾರಲು ಸಾಧ್ಯವಿಲ್ಲ, ಕೆಳಗೆ ಬಂದು ಬಿಡುತ್ತೀರಿ. ಆದ್ದರಿಂದ ಫರಿಶ್ಥಾ ಎಂದರೆ ಯಾವುದೇ ಹಳೆಯ ಸಂಬಂಧದ ಬಂಧನವಿಲ್ಲ. ಯಾವಾಗ ಜೀವನವೇ ಹೊಸದಾಯಿತು, ಅಂದಮೇಲೆ ಎಲ್ಲವೂ ಹೊಸದಿರುತ್ತದೆ. ಸಂಕಲ್ಪವೂ ಹೊಸದು, ಸಂಬಂಧವೂ ಹೊಸದು. ಕರ್ತವ್ಯವೂ ಹೊಸದು, ಎಲ್ಲವೂ ಹೊಸದಾಗಿರುತ್ತದೆ. ಈಗ ಹಳೆಯ ಜೀವನವು ಸ್ವಪ್ನದಲ್ಲಿಯೂ ಸ್ಮೃತಿಯಲ್ಲಿ ಬರಲು ಸಾಧ್ಯವಿಲ್ಲ. ಒಂದು ವೇಳೆ ಸ್ವಲ್ಪವೇನಾದರೂ ದೇಹದ ಪರಿವೆಯಲ್ಲಿ ಬರುತ್ತೀರೆಂದರೆ ಸಂಬಂಧವಿದೆ ಆದ್ದರಿಂದ ಬರುತ್ತೀರಿ. ಒಂದು ವೇಳೆ ಸಂಬಂಧವೇ ಇಲ್ಲವೆಂದರೆ ಬುದ್ಧಿಯು ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ವಿಶ್ವದಲ್ಲಿ ಇಷ್ಟೊಂದು ಆತ್ಮರಿದ್ದಾರೆ, ಅವರೊಂದಿಗೆ ಸಂಬಂಧವಿಲ್ಲ. ಆದ್ದರಿಂದ ನೆನಪಿಗೆ ಬರುವುದಿಲ್ಲ ಅಲ್ಲವೆ. ನೆನಪಿಗೆ ಅವರೇ ಬರುತ್ತಾರೆ, ಯಾರೊಂದಿಗೆ ಸಂಬಂಧವಿದೆ. ಅಂದಮೇಲೆ ದೇಹದ ಪರಿವೆಯಲ್ಲಿ ಬರುವುದು ಅರ್ಥಾತ್ ದೇಹದ ಸಂಬಂಧವಿದೆ. ಒಂದು ವೇಳೆ ದೇಹದ ಜೊತೆ ಸ್ವಲ್ಪವೇನಾದರೂ ಸೆಳೆತವಿರುತ್ತದೆಯೆಂದರೆ ಹಾರುವುದು ಹೇಗೆ! ಭಾರವಾಗಿರುವ ವಸ್ತುವನ್ನು ಎಷ್ಟಾದರೂ ಮೇಲಕ್ಕೆ ಎಸೆಯಿರಿ, ಅದು ಕೆಳಗಡೆ ಬಂದು ಬಿಡುತ್ತದೆ. ಅಂದ ಮೇಲೆ ಫರಿಶ್ಥಾ ಎಂದರೆ ಹಗುರ, ಯಾವುದೇ ಹೊರೆಯಿಲ್ಲ. ಮರುಜೀವಾ ಆಗಬೇಕು ಅರ್ಥಾತ್ ಹೊರೆಯಿಂದ ಮುಕ್ತರಾಗುವುದು. ಒಂದು ವೇಳೆ ಸ್ವಲ್ಪವೇನಾದರೂ ಉಳಿದುಕೊಂಡಿದೆ, ಬೇಗ ಬೇಗನೆ ಸಮಾಪ್ತಿ ಮಾಡಲಿಲ್ಲವೆಂದರೆ ಸಮಯದ ಸೀಟಿಯನ್ನು ಯಾವಾಗ ಮೊಳಗಿಸಲಾಗುತ್ತದೆ, ಆಗ ಎಲ್ಲರೂ ಹಾರತೊಡಗುತ್ತಾರೆ ಮತ್ತು ಹೊರೆಯಿರುವುದು ಕೆಳಗೆ ಉಳಿದು ಬಿಡುತ್ತದೆ. ಹೊರೆಯಿರುವವರು ಹಾರುವವರನ್ನು ನೋಡುವವರಾಗಿ ಬಿಡುತ್ತಾರೆ. ಅಂದ ಮೇಲೆ ಇದನ್ನು ಪರಿಶೀಲನೆ ಮಾಡಿರಿ - ಸೂಕ್ಷ್ಮವಾದ ಯಾವುದೇ ಎಳೆಗಳೂ ಸಹ ಉಳಿದುಕೊಂಡಿಲ್ಲವಲ್ಲವೆ. ತಿಳಿಯಿತೆ! ಅಂದಮೇಲೆ ಇಂದು ವಿಶೇಷವಾದ ವರದಾನವನ್ನು ನೆನಪಿಟ್ಟುಕೊಳ್ಳಿರಿ - ನಿರ್ಬಂಧನ ಫರಿಶ್ಥಾ ಆತ್ಮರಾಗಿದ್ದೇವೆ. ಬಂಧನಮುಕ್ತ ಆತ್ಮರಾಗಿದ್ದೇವೆ. ಫರಿಶ್ಥಾ ಶಬ್ಧವನ್ನೆಂದಿಗೂ ಮರೆಯಬಾರದು. ಫರಿಶ್ಥಾ ಎಂದು ತಿಳಿಯುವುದರಿಂದ ಹಾರಿ ಬಿಡುತ್ತೀರಿ. ವರದಾತನ ವರದಾನವನ್ನು ನೆನಪಿಟ್ಟುಕೊಳ್ಳುತ್ತೀರೆಂದರೆ ಸದಾ ಸಂಪನ್ನರಾಗಿರುತ್ತೀರಿ.

3. ಸದಾ ತಮ್ಮನ್ನು ಶಾಂತಿಯ ಸಂದೇಶವನ್ನು ಕೊಡುವಂತಹ ಸಂದೇಶಿ ಎಂದು ತಿಳಿಯುತ್ತೀರಾ? ಬ್ರಾಹ್ಮಣ ಜೀವನದ ಕಾರ್ಯವಾಗಿದೆ - ಸಂದೇಶವನ್ನು ಕೊಡುವುದು. ಈ ಕಾರ್ಯವನ್ನೆಂದಿಗೂ ಮರೆಯುವುದಿಲ್ಲವೇ? ಪ್ರತಿನಿತ್ಯವೂ ಪರಿಶೀಲನೆ ಮಾಡಿಕೊಳ್ಳಿರಿ - ನಾನು ಶ್ರೇಷ್ಠಾತ್ಮನ ಶ್ರೇಷ್ಠ ಕಾರ್ಯವೇನಿದೆಯೋ, ಅದು ಎಲ್ಲಿಯವರೆಗೆ ಮಾಡಿರುವೆನು! ಎಷ್ಟು ಮಂದಿಗೆ ಸಂದೇಶವನ್ನು ಕೊಟ್ಟಿರುವೆನು? ಎಷ್ಟು ಮಂದಿಗೆ ಶಾಂತಿಯ ದಾನವನ್ನು ಕೊಟ್ಟಿರುವೆನು? ಸಂದೇಶವನ್ನು ಕೊಡುವ ಮಹಾದಾನಿ, ವರದಾನಿ ಆತ್ಮರಾಗಿದ್ದೀರಿ. ತಮ್ಮ ಬಿರುದುಗಳು ಎಷ್ಟಿವೆ? ವರ್ತಮಾನದ ಪ್ರಪಂಚದಲ್ಲಿ ಎಷ್ಟೇ ದೊಡ್ಡ ದೊಡ್ಡ ಬಿರುದುಗಳಿರಲಿ, ತಮ್ಮ ಮುಂದೆ ಅದೆಲ್ಲವೂ ಚಿಕ್ಕದೇ ಆಗಿದೆ. ಆ ಬಿರುದುಗಳನ್ನು ಕೊಡುವವರು ಆತ್ಮರಾಗಿದ್ದಾರೆ, ಆದರೆ ಈಗ ತಂದೆಯು ಮಕ್ಕಳಿಗೆ ಬಿರುದುಗಳನ್ನು ಕೊಡುತ್ತಾರೆ. ಅಂದ ಮೇಲೆ ತಮ್ಮ ಭಿನ್ನ-ಭಿನ್ನ ಬಿರುದುಗಳನ್ನು ಸ್ಮೃತಿಯಲ್ಲಿಟ್ಟುಕೊಂಡು, ಅದೇ ಖುಷಿ ಅದೇ ಸೇವೆಯಲ್ಲಿ ಸದಾ ಇರಿ. ಬಿರುದುಗಳ ಸ್ಮೃತಿಯಿಂದ ಸೇವೆಯು ಸ್ವತಹವಾಗಿ ಸ್ಮೃತಿಯಲ್ಲಿ ಬರುತ್ತದೆ. ಒಳ್ಳೆಯದು.

ವರದಾನ:
ಏಕಾಗ್ರತೆಯ ಶಕ್ತಿಯಿಂದ ಪರವಶ ಸ್ಥಿತಿಯನ್ನು ಪರಿವರ್ತನೆ ಮಾಡುವಂತಹ ಅಧಿಕಾರಿ ಆತ್ಮಾ ಭವ.
ಬ್ರಾಹ್ಮಣ ಅರ್ಥಾತ್ ಅಧಿಕಾರಿ ಆತ್ಮವೆಂದಿಗೂ ಯಾವುದರಲ್ಲಿಯೂ ಪರವಶನಾಗಲು ಸಾಧ್ಯವಿಲ್ಲ. ತನ್ನ ಬಲಹೀನ ಸ್ವಭಾವ-ಸಂಸ್ಕಾರಗಳ ವಶನಾಗಿಯೂ ಇರುವುದಿಲ್ಲ. ಏಕೆಂದರೆ ಸ್ವಭಾವ ಅರ್ಥಾತ್ ಸ್ವ ಪ್ರತಿ ಮತ್ತು ಸರ್ವರ ಪ್ರತಿ ಆತ್ಮಿಕ ಭಾವವಿದೆಯೆಂದರೆ ಬಲಹೀನ ಸ್ವಭಾವಕ್ಕೆ ವಶನಾಗಲು ಸಾಧ್ಯವಿಲ್ಲ ಮತ್ತು ಅನಾದಿ-ಆದಿ ಸಂಸ್ಕಾರಗಳ ಸ್ಮೃತಿಯಿಂದ ಬಲಹೀನ ಸಂಸ್ಕಾರಗಳೂ ಸಹ ಸಹಜವಾಗಿಯೇ ಪರಿವರ್ತನೆಯಾಗಿ ಬಿಡುತ್ತದೆ. ಏಕಾಗ್ರತೆಯ ಶಕ್ತಿಯು ಪರವಶ ಸ್ಥಿತಿಯನ್ನು ಪರಿವರ್ತನೆ ಮಾಡಿ ಮಾಲೀಕನೆನ್ನುವ ಸ್ಥಿತಿಯ ಆಸನದಲ್ಲಿ ಸ್ಥಿತ ಮಾಡಿ ಬಿಡುತ್ತದೆ.

ಸ್ಲೋಗನ್:
ಕ್ರೋಧವು ಜ್ಞಾನಿ ಆತ್ಮನಿಗಾಗಿ ಮಹಾಶತ್ರುವಾಗಿದೆ.