10.02.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಎಲ್ಲರಿಗೆ ಈ ಖುಷಿಯ ಸಮಾಚಾರವನ್ನು ತಿಳಿಸಿ - ಭಾರತವು ಈಗ ಪುನಃ ಸ್ವರ್ಗವಾಗುತ್ತಿದೆ, ಸ್ವರ್ಗದ ರಚಯಿತ ತಂದೆಯು ಬಂದಿದ್ದಾರೆ

ಪ್ರಶ್ನೆ:
ಯಾವ ಮಕ್ಕಳಿಗೆ ಸ್ವರ್ಗದ ಮಾಲೀಕರಾಗುವ ಖುಷಿಯಿದೆಯೋ ಅವರ ಚಿಹ್ನೆಗಳೇನು?

ಉತ್ತರ:
ಅವರಲ್ಲಿ ಯಾವುದೇ ಪ್ರಕಾರದ ದುಃಖವಾಗಲು ಸಾಧ್ಯವಿಲ್ಲ. ನಾವು ಬಹಳ ದೊಡ್ಡ ವ್ಯಕ್ತಿಗಳಾಗಿದ್ದೇವೆ, ನಮ್ಮನ್ನು ಬೇಹದ್ದಿನ ತಂದೆಯು ಇಂತಹ ಲಕ್ಷ್ಮಿ-ನಾರಾಯಣರನ್ನಾಗಿ ಮಾಡುತ್ತಾರೆಂದು ಅವರಿಗೆ ನಶೆಯಿರುವುದು. ಚಹರೆಯು ಬಹಳ ಘನತೆಯಿಂದ ಕೂಡಿರುವುದು. ಅವರು ಅನ್ಯರಿಗೆ ಖುಷಿಯ ಸಮಾಚಾರವನ್ನು ತಿಳಿಸದೇ ಇರಲು ಸಾಧ್ಯವಿಲ್ಲ.

ಓಂ ಶಾಂತಿ.
ತಂದೆಯು ತಿಳಿಸುತ್ತಾರೆ ಮತ್ತು ಮಕ್ಕಳು ತಿಳಿದುಕೊಂಡಿದ್ದೀರಿ - ಇಡೀ ಪ್ರಪಂಚ, ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಎಲ್ಲರಿಗೂ ಈ ಸಂದೇಶವನ್ನು ನೀಡಬೇಕಾಗಿದೆ. ನೀವೆಲ್ಲರೂ ಸಂದೇಶಿಗಳಾಗಿದ್ದೀರಿ. ಬಹಳ ಖುಷಿಯ ಸಂದೇಶವನ್ನು ಎಲ್ಲರಿಗೂ ಈಗ ಕೊಡಬೇಕಾಗಿದೆ - ಭಾರತವು ಈಗ ಪುನಃ ಸ್ವರ್ಗವಾಗುತ್ತಿದೆ ಅಥವಾ ಸ್ವರ್ಗದ ಸ್ಥಾಪನೆಯಾಗುತ್ತಿದೆ. ಭಾರತದಲ್ಲಿ ಯಾವ ತಂದೆಗೆ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆಯೋ ಅವರೇ ಸ್ಥಾಪನೆ ಮಾಡಲು ಬಂದಿದ್ದಾರೆ. ನೀವು ಮಕ್ಕಳಿಗೆ ಆದೇಶವಾಗಿದೆ - ಈ ಖುಷಿಯ ಸಂದೇಶವನ್ನು ಎಲ್ಲರಿಗೆ ಬಹಳ ಚೆನ್ನಾಗಿ ತಿಳಿಸಿಕೊಡಿ. ಪ್ರತಿಯೊಬ್ಬರಿಗೆ ತಮ್ಮ ಧರ್ಮದ ಚಿಂತೆಯಿರುತ್ತದೆ. ನಿಮಗೂ ಸಹ ಇದೇ ಚಿಂತೆಯಿದೆ, ನೀವು ಖುಷಿಯ ಸಂದೇಶವನ್ನು ತಿಳಿಸುತ್ತೀರಿ, ಭಾರತದ ಸೂರ್ಯವಂಶಿ, ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ ಅರ್ಥಾತ್ ಭಾರತವು ಪುನಃ ಸ್ವರ್ಗವಾಗುತ್ತಿದೆ. ನಾವೀಗ ಸ್ವರ್ಗದ ಮಾಲೀಕರಾಗುತ್ತಿದ್ದೇವೆ ಎಂಬ ಖುಷಿಯು ಆಂತರ್ಯದಲ್ಲಿರಬೇಕು. ಯಾರಲ್ಲಿ ಈ ಖುಷಿಯಿರುವುದೋ ಅವರಿಗೆ ಯಾವುದೇ ಪ್ರಕಾರದ ದುಃಖವಿರಲು ಸಾಧ್ಯವಿಲ್ಲ. ಇದಂತೂ ಮಕ್ಕಳಿಗೆ ತಿಳಿದಿದೆ ಹೊಸ ಪ್ರಪಂಚದ ಸ್ಥಾಪನೆಯಾಗುವುದರಲ್ಲಿ ಕಷ್ಟವೂ ಆಗುತ್ತದೆ, ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ! ಮಕ್ಕಳಿಗೆ ಇದು ಸದಾ ಸ್ಮೃತಿಯಲ್ಲಿರಬೇಕು - ನಾವು ಭಾರತಕ್ಕೆ ಬೇಹದ್ದಿನ ಖುಷಿಯ ಸಂದೇಶವನ್ನು ತಿಳಿಸುತ್ತೇವೆ. ಹೇಗೆ ತಂದೆಯೂ ಸಹ ಮೊದಲು ಸಹೋದರ-ಸಹೋದರಿಯರೇ ಬಂದು ಈ ಖುಷಿಯ ಸಂದೇಶವನ್ನು ಕೇಳಿ ಎಂದು ಪತ್ರಗಳನ್ನು ಮುದ್ರಿಸಿದ್ದರು. ಹೇಗೆ ಎಲ್ಲರಿಗೆ ಈ ಸಂದೇಶವನ್ನು ತಿಳಿಸುವುದೆಂದು ಇಡೀ ದಿನ ವಿಚಾರಗಳು ನಡೆಯುತ್ತವೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ಈ ಲಕ್ಷ್ಮಿ-ನಾರಾಯಣರ ಚಿತ್ರವನ್ನು ನೋಡಿ ಇಡೀ ದಿನ ಹರ್ಷಿತರಾಗಿರಬೇಕು. ನೀವಂತೂ ಬಹಳ ದೊಡ್ಡ ವ್ಯಕ್ತಿಗಳಾಗಿದ್ದೀರಿ ಆದ್ದರಿಂದ ನಿಮ್ಮ ಚಲನೆಯು ಕಾಡು ಮನುಷ್ಯರ ಚಲನೆಯಂತಿರಬಾರದು. ನೀವು ತಿಳಿದುಕೊಂಡಿದ್ದೀರಿ - ನಾವು ಮಂಗನಿಗಿಂತಲೂ ಕಡೆಯಾಗಿದ್ದೇವೆ, ಈಗ ತಂದೆಯು ನಮ್ಮನ್ನು ಇಂತಹ ದೇವಿ-ದೇವತೆಗಳನ್ನಾಗಿ ಮಾಡುತ್ತಾರೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಆದರೆ ಆಶ್ಚರ್ಯವೇನೆಂದರೆ ಮಕ್ಕಳಿಗೆ ಆ ಖುಷಿಯೇ ಇರುವುದಿಲ್ಲ ಮತ್ತು ಉಮ್ಮಂಗ-ಉತ್ಸಾಹದಿಂದ ಎಲ್ಲರಿಗೆ ಖುಷಿಯ ಸಮಾಚಾರವನ್ನೂ ತಿಳಿಸುವುದಿಲ್ಲ. ತಂದೆಯು ನಿಮ್ಮನ್ನು ಸಂದೇಶಿಗಳನ್ನಾಗಿ ಮಾಡಿದ್ದಾರೆ. ಎಲ್ಲರ ಕಿವಿಯಲ್ಲಿ ಈ ಸಂದೇಶವನ್ನು ಕೊಡುತ್ತಾ ಇರಿ - ನಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ರಚಿಸಲ್ಪಟ್ಟಿತು, ಮತ್ತೆ ಎಲ್ಲಿ ಹೋಯಿತು - ಇದು ಭಾರತವಾಸಿಗಳಿಗೆ ತಿಳಿದೇ ಇಲ್ಲ, ಈಗ ಕೇವಲ ಚಿತ್ರಗಳೇ ಇವೆ. ಮತ್ತೆಲ್ಲಾ ಧರ್ಮಗಳಿವೆ ಕೇವಲ ಆದಿ ಸನಾತನ ದೇವಿ-ದೇವತಾ ಧರ್ಮವಿಲ್ಲ. ಭಾರತದಲ್ಲಿಯೇ ಚಿತ್ರಗಳಿವೆ. ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ ಅಂದಾಗ ಈ ಖುಷಿಯ ಸಂದೇಶವನ್ನು ಎಲ್ಲರಿಗೆ ತಿಳಿಸುತ್ತಾ ಹೋಗಿ ಆಗ ನಿಮಗೂ ಸಹ ಆಂತರ್ಯದಲ್ಲಿ ಖುಷಿಯಿರುವುದು. ಪ್ರದರ್ಶನಿಯಲ್ಲಿ ನೀವು ಈ ಖುಷಿಯ ಸಮಾಚಾರವನ್ನು ತಿಳಿಸುತ್ತೀರಲ್ಲವೆ - ಬಂದು ಬೇಹದ್ದಿನ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆದುಕೊಳ್ಳಿ. ಈ ಲಕ್ಷ್ಮಿ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರಲ್ಲವೆ ಮತ್ತೆ ಅವರು ಎಲ್ಲಿಗೆ ಹೋದರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದಲೇ ಹೇಳಲಾಗುತ್ತದೆ - ಮುಖವು ಮನುಷ್ಯನದು, ಗುಣಗಳು ಮಂಗನ ಸಮಾನವಾಗಿದೆ. ಈಗ ನಿಮ್ಮ ಮುಖವು ಮನುಷ್ಯನದಾಗಿದೆ, ಗುಣಗಳು ದೇವತೆಗಳ ತರಹ ಆಗುತ್ತಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ಪುನಃ ಸರ್ವಗುಣ ಸಂಪನ್ನರಾಗುತ್ತೇವೆ ಮತ್ತೆ ಅನ್ಯರಿಂದಲೂ ಈ ಪುರುಷಾರ್ಥವನ್ನು ಮಾಡಿಸಬೇಕಾಗಿದೆ. ಪ್ರದರ್ಶನಿಯ ಸೇವೆಯು ಬಹಳ ಒಳ್ಳೆಯದಾಗಿದೆ, ಯಾರಿಗೆ ಗೃಹಸ್ಥವ್ಯವಹಾರದ ಬಂಧನವಿಲ್ಲವೋ, ವಾನಪ್ರಸ್ಥಿಗಳಾಗಿದ್ದಾರೆಯೋ ಅಥವಾ ವಿಧವೆಯರಿದ್ದಾರೆಯೋ ಮತ್ತು ಕುಮಾರಿಯರಿಗೂ ಸಹ ಸೇವೆಯ ಬಹಳ ಅವಕಾಶವಿದೆ. ಸರ್ವೀಸಿನಲ್ಲಿ ತೊಡಗಬೇಕಾಗಿದೆ, ಈ ಸಮಯದಲ್ಲಿ ವಿವಾಹ ಮಾಡುವುದು ಅವನತಿ ಮಾಡಿಕೊಳ್ಳುವುದಾಗಿದೆ, ವಿವಾಹ ಮಾಡಿಕೊಳ್ಳದೇ ಇರುವುದು ಉನ್ನತಿಯಾಗಿದೆ. ತಂದೆಯು ತಿಳಿಸುತ್ತಾರೆ - ಈ ಮೃತ್ಯುಲೋಕ, ಪತಿತ ಪ್ರಪಂಚದ ವಿನಾಶವಾಗುತ್ತಿದೆ. ನೀವು ಪಾವನ ಪ್ರಪಂಚದಲ್ಲಿ ಹೋಗಬೇಕೆಂದರೆ ಈ ಸೇವೆಯಲ್ಲಿ ತೊಡಗಬೇಕು. ಪ್ರದರ್ಶನಿಯ ಹಿಂದೆ ಪ್ರದರ್ಶನಿಯನ್ನು ಇಡಬೇಕು. ಯಾರು ಸೇವಾಧಾರಿ ಮಕ್ಕಳಿದ್ದಾರೆಯೋ ಅವರಿಗೆ ಸೇವೆಯ ಬಹಳ ಉಮ್ಮಂಗವಿರುವುದು, ನಾವು ವೃತ್ತಿಯನ್ನು ಬಿಡುವುದೇ ಎಂದು ತಂದೆಯೊಂದಿಗೆ ಕೆಲವರು ಕೇಳುತ್ತಾರೆ. ಆಗ ತಂದೆಯು ನೋಡುತ್ತಾರೆ - ಯೋಗ್ಯರಾಗಿದ್ದರೆ ಭಲೆ ಸರ್ವೀಸ್ ಮಾಡಿ ಎಂದು ಅನುಮತಿ ಕೊಡುತ್ತಾರೆ. ಇಂತಹ ಖುಷಿಯ ಸಂದೇಶವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ಬಂದು ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಿ. ನೀವು 5000 ವರ್ಷಗಳ ಮೊದಲೂ ರಾಜ್ಯಭಾಗ್ಯವನ್ನು ತೆಗೆದುಕೊಂಡಿದ್ದಿರಿ ಈಗ ಪುನಃ ತೆಗೆದುಕೊಳ್ಳಿ, ಕೇವಲ ನನ್ನ ಮತದಂತೆ ನಡೆಯಿರಿ ಎಂದು ತಂದೆಯು ತಿಳಿಸುತ್ತಾರೆ.

ನಮ್ಮಲ್ಲಿ ಯಾವ ಅವಗುಣಗಳಿವೆ ಎಂದು ತಮ್ಮನ್ನು ನೋಡಿಕೊಳ್ಳಬೇಕು. ನೀವು ಬ್ಯಾಡ್ಜ್ ನ ಮೂಲಕವೂ ಸಹ ಬಹಳ ಸೇವೆ ಮಾಡಬಹುದು, ಸೇವೆಗಾಗಿ ಇದು ಬಹಳ ಒಳ್ಳೆಯ ಸಾಧನವಾಗಿದೆ. ಭಲೆ ಇದು ಅತಿ ಕಡಿಮೆ ಬೆಲೆಯದು ಆದರೆ ಇದರಿಂದ ಎಷ್ಟೊಂದು ಶ್ರೇಷ್ಠ ಪದವಿಯನ್ನು ಪಡೆಯಬಹುದಾಗಿದೆ. ಮನುಷ್ಯರು ಓದುವುದಕ್ಕಾಗಿ ಪುಸ್ತಕ ಇತ್ಯಾದಿಗಳಿಗಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ. ಇಲ್ಲಿ ಯಾವುದೇ ಪುಸ್ತಕಗಳ ಅವಶ್ಯಕತೆಯಿಲ್ಲ, ಕೇವಲ ಎಲ್ಲರ ಕಿವಿಯಲ್ಲಿ ಸಂದೇಶವನ್ನು ಕೊಡಬೇಕಾಗಿದೆ. ಇದು ತಂದೆಯ ಸತ್ಯವಾದ ಮಂತ್ರವಾಗಿದೆ ಉಳಿದೆಲ್ಲರೂ ಅಸತ್ಯ ಮಂತ್ರಗಳನ್ನೇ ಹೇಳುತ್ತಿರುತ್ತಾರೆ. ಸುಳ್ಳು ವಸ್ತುಗಳಿಗೆ ಬೆಲೆಯಿರುತ್ತದೆಯೇ! ಬೆಲೆಯು ವಜ್ರಗಳಿಗೇ ಇರುತ್ತದೆ, ಕಲ್ಲುಗಳಿಗಲ್ಲ. ಒಂದೊಂದು ಮಹಾವಾಕ್ಯವು ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವಂತದ್ದಾಗಿದೆ ಎಂದು ಯಾವ ಗಾಯನವಿದೆಯೋ ಅದು ಈ ಜ್ಞಾನಕ್ಕಾಗಿ ಹೇಳಲಾಗಿದೆ. ತಂದೆಯು ತಿಳಿಸುತ್ತಾರೆ - ಶಾಸ್ತ್ರಗಳು ಬಹಳಷ್ಟಿವೆ, ನೀವು ಅರ್ಧಕಲ್ಪದಿಂದ ಓದುತ್ತಾ ಬಂದಿದ್ದೀರಿ ಅದರಿಂದೇನೂ ಸಿಗಲಿಲ್ಲ. ಈಗ ಜ್ಞಾನರತ್ನಗಳನ್ನು ಕೊಡುತ್ತೇನೆ. ಅವರು ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ, ತಂದೆಯು ಜ್ಞಾನಸಾಗರನಾಗಿದ್ದಾರೆ. ತಂದೆಯ ಒಂದೊಂದು ಮಹಾವಾಕ್ಯವು ಲಕ್ಷಾಂತರ, ಕೋಟ್ಯಾಂತರ ರೂಪಾಯಿಗಳಷ್ಟು ಬೆಲೆಬಾಳುವಂತದ್ದಾಗಿದೆ. ನೀವು ವಿಶ್ವದ ಮಾಲೀಕರಾಗಿ ಪದಮಾಪತಿಗಳಾಗುತ್ತೀರಿ. ಈ ಜ್ಞಾನಕ್ಕೆ ಮಹಿಮೆಯಿದೆ. ಆ ಶಾಸ್ತ್ರ ಮೊದಲಾದುವುಗಳನ್ನು ಓದುತ್ತಾ ಕಂಗಾಲರಾಗಿ ಬಿಟ್ಟಿದ್ದೀರಿ. ಆದ್ದರಿಂದ ಈಗ ಈ ಜ್ಞಾನರತ್ನಗಳ ದಾನವನ್ನೂ ಮಾಡಬೇಕಾಗಿದೆ. ತಂದೆಯು ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ತಿಳಿಸಿ, ತಮ್ಮ ಧರ್ಮವನ್ನು ಮರೆತು ನೀವು ಹೊರಗೆ ಅಲೆಯುತ್ತಿರುತ್ತೀರಿ, ನೀವು ಭಾರತವಾಸಿಗಳ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಆ ಧರ್ಮವು ಎಲ್ಲಿ ಹೋಯಿತು. 84 ಲಕ್ಷ ಯೋನಿಗಳೆಂದು ಹೇಳಿರುವುದರಿಂದ ಯಾವ ಮಾತುಗಳೂ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಈಗ ತಂದೆಯು ಯಥಾರ್ಥವಾಗಿ ತಿಳಿಸುತ್ತಾರೆ. ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಈ ಲಕ್ಷ್ಮಿ-ನಾರಾಯಣರು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಾರಲ್ಲವೆ. ಈಗ ಧರ್ಮಭ್ರಷ್ಟರು, ಕರ್ಮಭ್ರಷ್ಟರಾಗಿ ಬಿಟ್ಟಿದ್ದಾರೆ. ಮತ್ತೆಲ್ಲಾ ಧರ್ಮಗಳಿವೆ ಆದರೆ ಈ ಆದಿ ಸನಾತನ ಧರ್ಮವೇ ಇಲ್ಲ. ಯಾವಾಗ ಈ ಧರ್ಮವಿತ್ತೋ ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಎಷ್ಟು ಸಹಜವಾಗಿದೆ! ಇವರು ತಂದೆ, ಇವರು ದಾದಾ ಆಗಿದ್ದಾರೆ. ಪ್ರಜಾಪಿತ ಬ್ರಹ್ಮಾರವರಿದ್ದಾರಲ್ಲವೆ. ಅವಶ್ಯವಾಗಿ ಅನೇಕ ಮಂದಿ ಬ್ರಹ್ಮಾಕುಮಾರ-ಕುಮಾರಿಯರೂ ಇರುವರಲ್ಲವೆ. ತಂದೆಯು ಬಂದು ರಾವಣನ ಜೈಲಿನಿಂದ, ಶೋಕವಾಟಿಕೆಯಿಂದ ಬಿಡಿಸುತ್ತಾರೆ. ಶೋಕವಾಟಿಕೆಯ ಅರ್ಥವನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಇದು ಶೋಕ, ದುಃಖದ ಪ್ರಪಂಚವಾಗಿದೆ. ಅದು ಸುಖದ ಪ್ರಪಂಚವಾಗಿದೆ, ನೀವು ತಮ್ಮ ಶಾಂತಿಯ ಪ್ರಪಂಚ ಮತ್ತು ಸುಖದ ಪ್ರಪಂಚವನ್ನು ನೆನಪು ಮಾಡುತ್ತಾ ಇರಿ. ಇನ್ಕಾರ್ಪೋರಿಯಲ್ ವಲ್ರ್ಡ್ ಎಂದು ಹೇಳುತ್ತಾರಲ್ಲವೆ. ಆಂಗ್ಲ ಶಬ್ಧವು ಬಹಳ ಚೆನ್ನಾಗಿದೆ. ಆಂಗ್ಲ ಭಾಷೆಯಂತೂ ನಡೆಯುತ್ತಲೇ ಬರುತ್ತದೆ. ಈಗಂತೂ ಅನೇಕ ಭಾಷೆಗಳಾಗಿ ಬಿಟ್ಟಿದೆ! ಏನನ್ನೂ ತಿಳಿದುಕೊಂಡಿಲ್ಲ. ನಿರ್ಗುಣ ಬಾಲ ಸಂಸ್ಥೆ ಎಂದು ಹೇಳುತ್ತಾರೆ. ನಿರ್ಗುಣ ಅರ್ಥಾತ್ ಯಾವುದೇ ಗುಣವಿಲ್ಲ. ಹಾಗೆಯೇ ಕೇವಲ ಸಂಸ್ಥೆಯನ್ನು ಮಾಡಿ ಬಿಟ್ಟಿದ್ದಾರೆ. ನಿರ್ಗುಣ ಎಂಬುದರ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ಅರ್ಥವಿಲ್ಲದೆ ಹೆಸರುಗಳನ್ನಿಟ್ಟು ಬಿಡುತ್ತಾರೆ. ಅನೇಕ ಸಂಸ್ಥೆಗಳಿವೆ, ಭಾರತದಲ್ಲಿ ಒಂದೇ ಆದಿ ಸನಾತನ ಧರ್ಮದ ಸಂಸ್ಥೆಯಿತ್ತು, ಮತ್ತ್ಯಾವ ಧರ್ಮವೂ ಇರಲಿಲ್ಲ ಆದರೆ ಮನುಷ್ಯರು 5000 ವರ್ಷಗಳ ಮೊದಲು ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಆದ್ದರಿಂದ ಈಗ ನೀವು ಎಲ್ಲರನ್ನೂ ಅಜ್ಞಾನ ಅಂಧಕಾರದಿಂದ ಹೊರ ತೆಗೆಯಬೇಕಾಗಿದೆ. ಸರ್ವೀಸ್ ಮಾಡಬೇಕಾಗಿದೆ. ಭಲೆ ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ ಆದರೆ ಶಿವ ತಂದೆಯ ಯಜ್ಞದಿಂದ ತಿಂದು-ಕುಡಿದು, ಏನೂ ಸೇವೆ ಮಾಡಲಿಲ್ಲವೆಂದರೆ ಧರ್ಮರಾಜನು ಯಾರು ಬಲಭುಜವಾಗಿದ್ದಾರೆಯೋ ಅವರು ಅವಶ್ಯವಾಗಿ ಶಿಕ್ಷೆಯನ್ನು ಕೊಡುತ್ತಾರೆ. ಆದ್ದರಿಂದ ಎಚ್ಚರಿಕೆ ನೀಡಲಾಗುತ್ತದೆ. ಸೇವೆ ಮಾಡುವುದು ಬಹಳ ಸಹಜ. ಪ್ರೀತಿಯಿಂದ ಯಾರಿಗಾದರೂ ತಿಳಿಸುತ್ತಾ ಇರಿ. ತಂದೆಯ ಬಳಿ ಕೆಲವರ ಸಮಾಚಾರವು ಬರುತ್ತದೆ - ನಾವು ಮಂದಿರಕ್ಕೆ ಹೋದೆವು, ಗಂಗಾ ತೀರದಲ್ಲಿ ಹೋದೆವು. ಮುಂಜಾನೆ ಎದ್ದು ಮಂದಿರಕ್ಕೆ ಹೋಗುತ್ತಾರೆ. ಧಾರ್ಮಿಕ ವ್ಯಕ್ತಿಗಳಿಗೆ ತಿಳಿಸುವುದು ಬಹಳ ಸಹಜ. ಲಕ್ಷ್ಮಿ-ನಾರಾಯಣರ ಮಂದಿರದಲ್ಲಿ ಸರ್ವೀಸ್ ಮಾಡುವುದು ಬಹಳ ಒಳ್ಳೆಯದಿದೆ. ಅಂದಮೇಲೆ ಅವರನ್ನು (ಲಕ್ಷ್ಮಿ-ನಾರಾಯಣರ) ಆ ರೀತಿ ಮಾಡುವವರು ಶಿವ ತಂದೆಯಾಗಿದ್ದಾರೆ. ಅಲ್ಲಿಯೂ ಹೋಗಿ ತಿಳಿಸಿಕೊಡಿ - ಈ ಕಾಡಿಗೆ ಬೆಂಕಿ ಬೀಳುವುದು, ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ ಮತ್ತೆ ನಿಮ್ಮ ಪಾತ್ರವೂ ಸಹ ಮುಕ್ತಾಯವಾಗುತ್ತದೆ. ನೀವು ಹೋಗಿ ರಾಜವಂಶಾವಳಿಯಲ್ಲಿ ಜನ್ಮ ಪಡೆಯುತ್ತೀರಿ. ರಾಜ್ಯಭಾಗ್ಯವು ಹೇಗೆ ಸಿಗುವುದೆಂದು ಮುಂದೆ ಹೋದಂತೆ ತಿಳಿಯುವುದು. ನಾಟಕದಲ್ಲಿ ಮೊದಲೇ ಏನನ್ನೂ ತಿಳಿಸುವುದಿಲ್ಲ. ತಿಳಿಸಿದ್ದೇ ಆದರೆ ನಾವು ಯಾವ ಪದವಿಯನ್ನು ಪಡೆಯುತ್ತೇವೆ ಎಂಬುದನ್ನು ತಿಳಿದುಕೊಂಡು ಬಿಡುತ್ತೀರಿ. ಹೆಚ್ಚಿನ ದಾನ-ಪುಣ್ಯ ಮಾಡುವವರು ರಾಜಧಾನಿಯಲ್ಲಿ ಬರುತ್ತಾರಲ್ಲವೆ! ರಾಜರ ಬಳಿ ಬಹಳಷ್ಟು ಹಣವಿರುತ್ತದೆ, ಈಗ ನೀವು ಅವಿನಾಶಿ ಜ್ಞಾನರತ್ನಗಳ ದಾನ ಮಾಡುತ್ತೀರಿ.

ಭಾರತವಾಸಿಗಳಿಗಾಗಿಯೇ ಈ ಜ್ಞಾನವಿದೆ. ಹೇಳಿ, ಈಗ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ, ಪತಿತರಿಂದ ಪಾವನರನ್ನಾಗಿ ಮಾಡುವ ತಂದೆಯು ಬಂದಿದ್ದಾರೆ. ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಎಷ್ಟು ಸಹಜವಾಗಿದೆ ಆದರೆ ಎಷ್ಟು ತಮೋಪ್ರಧಾನ ಬುದ್ಧಿಯವರಾಗಿದ್ದಾರೆಂದರೆ ಅವರಲ್ಲಿ ಏನೂ ಧಾರಣೆಯಾಗುವುದಿಲ್ಲ. ವಿಕಾರಗಳ ಪ್ರವೇಶತೆಯಾಗಿದೆ. ಪ್ರಾಣಿಗಳಲ್ಲಿಯೂ ಸಹ ಭಿನ್ನ-ಭಿನ್ನ ಪ್ರಕಾರದ್ದಿರುತ್ತದೆ. ಕೆಲವು ಪ್ರಾಣಿಗಳಲ್ಲಿ ಬಹಳ ಕ್ರೋಧವಿರುತ್ತದೆ. ಪ್ರತಿಯೊಂದು ಪ್ರಾಣಿಯ ಸ್ವಭಾವವು ಬೇರೆ-ಬೇರೆಯಾಗಿರುತ್ತದೆ. ಭಿನ್ನ-ಭಿನ್ನ ಪ್ರಕಾರದ ದುಃಖ ಕೊಡುವ ಸ್ವಭಾವವಿರುತ್ತದೆ. ಎಲ್ಲದಕ್ಕಿಂತ ಮೊದಲು ದುಃಖ ಕೊಡುವ ವಿಕಾರವು ಕಾಮದ ಕತ್ತಿಯನ್ನು ನಡೆಸುವುದಾಗಿದೆ. ರಾವಣ ರಾಜ್ಯದಲ್ಲಿ ಇರುವುದೇ ಈ ವಿಕಾರಗಳ ರಾಜ್ಯ, ತಂದೆಯಂತೂ ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ, ಎಷ್ಟು ಒಳ್ಳೊಳ್ಳೆಯ ಮಕ್ಕಳಿದ್ದಾರೆ, ಪಾಪ! ಬಂಧನದಲ್ಲಿದ್ದಾರೆ, ಅವರಿಗೆ ಬಂಧಿತರೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಅವರಲ್ಲಿ ಒಂದುವೇಳೆ ಜ್ಞಾನದ ಪರಾಕಾಷ್ಟತೆಯು ಬಂದು ಬಿಟ್ಟರೆ ಅವರನ್ನು ಯಾರೂ ಹಿಡಿದುಕೊಳ್ಳಲು ಸಾಧ್ಯವಿಲ್ಲ, ಅಲ್ಲದೆ ಮೋಹದ ಅಂಶವೂ ಬಹಳಷ್ಟಿದೆ. ಸನ್ಯಾಸಿಗಳಿಗೂ ಸಹ ಮನೆಯು ನೆನಪಿಗೆ ಬರುತ್ತದೆ. ಮೋಹವು ಕಳೆಯಬೇಕಾದರೆ ಬಹಳ ಕಷ್ಟವಿದೆ. ಈಗ ನೀವು ಮಿತ್ರ ಸಂಬಂಧಿ ಮೊದಲಾದವರೆಲ್ಲರನ್ನೂ ಮರೆಯಲೇಬೇಕಾಗಿದೆ, ಏಕೆಂದರೆ ಈ ಹಳೆಯ ಪ್ರಪಂಚವೇ ಸಮಾಪ್ತಿಯಾಗುವುದಿದೆ. ಈ ಶರೀರವನ್ನೂ ಮರೆಯಬೇಕಾಗಿದೆ. ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು, ಪವಿತ್ರರಾಗಬೇಕಾಗಿದೆ. 84 ಜನ್ಮಗಳ ಪಾತ್ರವನ್ನಂತೂ ಅಭಿನಯಿಸಲೇಬೇಕಾಗಿದೆ. ಮಧ್ಯದಲ್ಲಿಯೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ನಾಟಕವು ಮುಕ್ತಾಯವಾಗುತ್ತದೆ ಅಂದಾಗ ಈಗ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು - ಈಗ ನಾವು ನಮ್ಮ ಮನೆಗೆ ಹೋಗಬೇಕಾಗಿದೆ. ಪಾತ್ರವು ಮುಕ್ತಾಯವಾಯಿತು ಅಂದಾಗ ಈಗ ನಾವು ತಂದೆಯನ್ನು ಬಹಳ ನೆನಪು ಮಾಡಬೇಕೆಂಬ ಕಾತುರವಿರಬೇಕು. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆ, ಮನೆಗೆ ಹೋಗಿ ಮತ್ತೆ ಸುಖಧಾಮದಲ್ಲಿ ಬರುತ್ತೀರಿ. ಬೇಗನೆ ಈ ಪ್ರಪಂಚದಿಂದ ಮುಕ್ತರಾಗಬೇಕೆಂದು ಕೆಲವರು ತಿಳಿಯುತ್ತಾರೆ. ಆದರೆ ಹೋಗುವುದಾದರೂ ಎಲ್ಲಿಗೆ? ಮೊದಲು ಶ್ರೇಷ್ಠ ಪದವಿಯನ್ನು ಪಡೆಯಲು ಪರಿಶ್ರಮ ಪಡಬೇಕಲ್ಲವೆ. ನಾವು ಎಲ್ಲಿಯವರೆಗೆ ಯೋಗ್ಯರಾಗಿದ್ದೇವೆ, ಸ್ವರ್ಗದಲ್ಲಿ ಹೋಗಿ ಏನು ಮಾಡುತ್ತೇವೆ? ಎಂದು ಮೊದಲು ತಮ್ಮ ನಾಡಿಯನ್ನು ನೋಡಿಕೊಳ್ಳಬೇಕಾಗಿದೆ. ಮೊದಲು ಯೋಗ್ಯರಾಗಬೇಕಲ್ಲವೆ. ತಂದೆಗೆ ಸುಪುತ್ರ ಮಕ್ಕಳಾಗಬೇಕು, ಈ ಲಕ್ಷ್ಮಿ-ನಾರಾಯಣರು ಸುಪುತ್ರರು, ಯೋಗ್ಯರಾಗಿದ್ದಾರಲ್ಲವೆ. ಮಕ್ಕಳನ್ನು ನೋಡಿ, ಇವರು ಬಹಳ ಒಳ್ಳೆಯವರಾಗಿದ್ದಾರೆ, ಸೇವೆ ಮಾಡಲು ಯೋಗ್ಯರಾಗಿದ್ದಾರೆಂದು ಭಗವಂತನೂ ಹೇಳುತ್ತಾರೆ. ಇನ್ನೂ ಕೆಲವರಿಗೆ ಇವರು ಯೋಗ್ಯರಲ್ಲ, ತಮ್ಮ ಪದವಿಯನ್ನೇ ಭ್ರಷ್ಟ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ತಂದೆಯಂತೂ ಸತ್ಯವನ್ನೇ ಹೇಳುತ್ತಾರಲ್ಲವೆ. ಪತಿತ-ಪಾವನನೇ ಬನ್ನಿ, ಬಂದು ಸುಖಧಾಮದ ಮಾಲೀಕರನ್ನಾಗಿ ಮಾಡಿ ಎಂದು ಕರೆಯುತ್ತಾರೆ, ಅಪಾರ ಸುಖವನ್ನು ಬಯಸುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಸೇವೆ ಮಾಡಲು ಯೋಗ್ಯರಾದರೂ ಆಗಿ! ಯಾರು ನನ್ನ ಭಕ್ತರಿದ್ದಾರೆ ಅವರಿಗೆ ಈ ಖುಷಿಯ ಸಂದೇಶವನ್ನು ತಿಳಿಸಿ - ಈಗ ಶಿವ ತಂದೆಯು ಆಸ್ತಿಯನ್ನು ಕೊಡುತ್ತಿದ್ದಾರೆ, ನನ್ನನ್ನು ನೆನಪು ಮಾಡಿ ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗುವಿರೆಂದು ತಿಳಿಸುತ್ತಿದ್ದಾರೆ. ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುತ್ತಿದೆ, ನಾವು ಈ ರೀತಿ ಶ್ರೇಷ್ಠರಾಗಬೇಕಾಗಿದೆ ಎಂದು ಸನ್ಮುಖದಲ್ಲಿ ಗುರಿ-ಧ್ಯೇಯದ ಚಿತ್ರವನ್ನು ನೋಡಿ ಬಹಳ ಖುಷಿಯಿರುತ್ತದೆ. ಇಡೀ ದಿನ ಬುದ್ಧಿಯಲ್ಲಿ ಇದೇ ನೆನಪಿರಲಿ ಆಗ ಎಂದೂ ಯಾವುದೇ ಕೆಟ್ಟ ಕೆಲಸವು ಆಗುವುದಿಲ್ಲ. ನಾವು ಇಷ್ಟು ಶ್ರೇಷ್ಠರಾಗುತ್ತಿದ್ದೇವೆ ಎಂದಮೇಲೆ ಇಂತಹ ಉಲ್ಟಾ ಕೆಲಸ ಮಾಡಲು ಹೇಗೆ ಸಾಧ್ಯ? ಆದರೆ ಅದೃಷ್ಟದಲ್ಲಿಲ್ಲವೆಂದರೆ ಇಂಥಹ ಯುಕ್ತಿಗಳನ್ನೂ ರಚಿಸುವುದಿಲ್ಲ, ಸಂಪಾದನೆಯನ್ನೂ ಮಾಡುವುದಿಲ್ಲ. ಎಷ್ಟು ಒಳ್ಳೆಯ ಸಂಪಾದನೆಯಾಗಿದೆ, ಮನೆಯಲ್ಲಿಯೇ ಕುಳಿತು ಎಲ್ಲರೂ ತಮ್ಮ ಸಂಪಾದನೆ ಮಾಡಿಕೊಳ್ಳಬೇಕಾಗಿದೆ ಮತ್ತು ಅನ್ಯರಿಂದಲೇ ಮಾಡಿಸಬೇಕಾಗಿದೆ. ಮನೆಯಲ್ಲಿ ಕುಳಿತೇ ಸ್ವದರ್ಶನ ಚಕ್ರವನ್ನು ತಿರುಗಿಸಿ, ಅನ್ಯರನ್ನು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡಿ. ಯಾರು ಅನೇಕರು ಈ ರೀತಿ ಮಾಡುವರೋ ಅಷ್ಟು ನಿಮ್ಮ ಪದವಿಯೂ ಶ್ರೇಷ್ಠವಾಗಿರುವುದು. ಈ ಲಕ್ಷ್ಮಿ-ನಾರಾಯಣರಂತೆ ಆಗಬಹುದು. ನಿಮ್ಮ ಗುರಿ-ಧ್ಯೇಯವೇ ಇದಾಗಿದೆ. ಎಲ್ಲರೂ ಸೂರ್ಯವಂಶಿಯರಾಗುವುದಕ್ಕೇ ಕೈಯನ್ನೆತ್ತುತ್ತಾರೆ, ಈ ಚಿತ್ರವು ಪ್ರದರ್ಶನಿಯಲ್ಲಿ ಬಹಳ ಕೆಲಸಕ್ಕೆ ಬರುತ್ತದೆ. ಇದನ್ನು ಕುರಿತು ತಿಳಿಸಬೇಕಾಗಿದೆ - ನಮಗೆ ಶ್ರೇಷ್ಠಾತಿ ಶ್ರೇಷ್ಠ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನೇ ಕೇಳುತ್ತೇವೆ, ಭಕ್ತಿಮಾರ್ಗದ ಮಾತುಗಳನ್ನು ಕೇಳಲು ನಾವು ಇಷ್ಟ ಪಡುವುದಿಲ್ಲ. ಈ ಚಿತ್ರಗಳು ಬಹಳ ಒಳ್ಳೆಯ ಚಿತ್ರಗಳಾಗಿವೆ. ಇದರ ಮೇಲೆ ನೀವು ಬಹಳಷ್ಟು ಸೇವೆ ಮಾಡಬಲ್ಲಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ಎಲ್ಲಿಯವರೆಗೆ ಯೋಗ್ಯರಾಗಿದ್ದೇವೆಂದು ತಮ್ಮ ನಾಡಿ ನೋಡಿಕೊಳ್ಳಬೇಕಾಗಿದೆ. ಯೋಗ್ಯರಾಗಿ ಸರ್ವೀಸಿನ ಪ್ರತ್ಯಕ್ಷ ಪ್ರಮಾಣವನ್ನು ತೋರಿಸಬೇಕಾಗಿದೆ. ಜ್ಞಾನದ ಪರಾಕಾಷ್ಟತೆಯಿಂದ ಬಂಧನ ಮುಕ್ತರಾಗಬೇಕಾಗಿದೆ.

2. ಒಬ್ಬ ತಂದೆಯ ಮತದಂತೆ ನಡೆದು ಒಳಗಿನ ಅವಗುಣಗಳನ್ನು ತೆಗೆಯಬೇಕಾಗಿದೆ. ದುಃಖದಾಯಿ ಸ್ವಭಾವವನ್ನು ಬಿಟ್ಟು ಸುಖದಾಯಿಯಾಗಬೇಕಾಗಿದೆ. ಜ್ಞಾನರತ್ನಗಳ ದಾನ ಮಾಡಬೇಕಾಗಿದೆ.

ವರದಾನ:
ಅಟಲ ಭವಿಷ್ಯವನ್ನು ತಿಳಿದಿದ್ದರೂ ಸಹಾ ಶ್ರೇಷ್ಠ ಕಾರ್ಯಕ್ಕೆ ಪ್ರತ್ಯಕ್ಷ ರೂಪಕೊಡುವಂತಹ ಸದಾ ಸಮರ್ಥ ಭವ.

ಹೊಸ ಶ್ರೇಷ್ಠ ವಿಶ್ವ ನಿರ್ಮಾಣವಾಗುವ ಭವಿಷ್ಯ ಅಟಲವಾಗಿದ್ದರೂ ಸಹ ಸಮರ್ಥ ಭಾವದ ವರದಾನಿ ಮಕ್ಕಳು ಕೇವಲ ಕರ್ಮ ಮತ್ತು ಫಲದ, ಪುರುಷಾರ್ಥ ಮತ್ತು ಪ್ರಾಲಭ್ಧದ, ನಿಮಿತ್ತ ಮತ್ತು ನಿರ್ಮಾಣದ ಕರ್ಮ ಸಿದ್ಧಾಂತದನುಸಾರ ನಿಮಿತ್ತರಾಗಿ ಕಾರ್ಯ ಮಾಡುತ್ತಾರೆ. ಪ್ರಪಂಚದ ಜನರಿಗೆ ಭರವಸೆ ಕಂಡು ಬರುತ್ತಿಲ್ಲ. ಆದರೆ ನೀವು ಹೇಳುವಿರಿ ಈ ಕಾರ್ಯ ಅನೇಕ ಬಾರಿ ಆಗಿದೆ, ಈಗಲೂ ಆಗೇ ಹೋಗಿದೆ. ಏಕೆಂದರೆ ಸ್ವ ಪರಿವರ್ತನೆಯ ಪ್ರತ್ಯಕ್ಷ ಪ್ರಮಾಣದ ಮುಂದೆ ಬೇರೆ ಯಾವ ಪ್ರಮಾಣದ ಆವಶ್ಯಕತೆಯೇ ಇಲ್ಲ. ಜೊತೆ-ಜೊತೆಯಲ್ಲಿ ಪರಮಾತ್ಮನ ಕಾರ್ಯ ಸಫಲವಾಗೇ ಇದೆ.

ಸ್ಲೋಗನ್:
ಹೇಳುವುದು ಕಡಿಮೆ, ಮಾಡುವುದು ಹೆಚ್ಚು - ಈ ಶ್ರೇಷ್ಠ ಲಕ್ಷ್ಯ ಮಹಾನ್ ಆಗಿ ಮಾಡಿಬಿಡುವುದು.