10.02.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಹಳೆಯ ಪ್ರಪಂಚದಿಂದ ಸತ್ತು ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಈ ವಿಶ್ವ ವಿದ್ಯಾಲಯಕ್ಕೆ
ಬಂದಿದ್ದೀರಿ, ಈಗ ನಿಮ್ಮ ಪ್ರೀತಿಯು ಒಬ್ಬ ಭಗವಂತನೊಂದಿಗೆ ಜೋಡಿಸಲ್ಪಟ್ಟಿದೆ.”
ಪ್ರಶ್ನೆ:
ಯಾವ ವಿಧಿಯಿಂದ
ತಂದೆಯ ನೆನಪು ನಿಮ್ಮನ್ನು ಸಾಹುಕಾರನನ್ನಾಗಿ ಮಾಡಿ ಬಿಡುತ್ತದೆ?
ಉತ್ತರ:
ತಂದೆಯು ಬಿಂದುವಾಗಿದ್ದಾರೆ, ಬಿಂದುವಾಗಿ ಬಿಂದು ತಂದೆಯನ್ನು ನೆನಪು ಮಾಡಿ ಆಗ ಸಾಹುಕಾರರಾಗಿ
ಬಿಡುವಿರಿ. ಹೇಗೆ ಒಂದರ ಜೊತೆ ಬಿಂದು(0)ವನ್ನು ಹಾಕಿದಾಗ ಅದು 10 ಆಗುತ್ತದೆ, ಇನ್ನೊಂದು
ಬಿಂದುವನ್ನು ಹಾಕಿದಾಗ 100, ಮತ್ತೊಂದನ್ನು ಹಾಕಿದಾಗ 1000 ಆಗಿ ಬಿಡುತ್ತದೆ. ಹಾಗೆಯೇ ತಂದೆಯ
ನೆನಪಿನಿಂದ ಬಿಂದುಗಳು ಸೇರುತ್ತಾ ಹೋಗುತ್ತದೆ. ನೀವು ಧನವಂತರಾಗುತ್ತಾ ಹೋಗುತ್ತೀರಿ.
ನೆನಪಿನಲ್ಲಿಯೇ ಸತ್ಯ ಸಂಪಾದನೆಯಿದೆ.
ಗೀತೆ:
ಸಭೆಯಲ್ಲಿ
ಜ್ಯೋತಿ ಬೆಳಗಿತು......
ಓಂ ಶಾಂತಿ.
ಈ ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ. ಪ್ರೀತಿಯು ಏತಕ್ಕಾಗಿ ಏರ್ಪಟ್ಟಿದೆ ಮತ್ತು ಯಾರೊಂದಿಗೆ
ಇದೆ? ಭಗವಂತನೊಂದಿಗೆ ಏಕೆಂದರೆ ಈ ಪ್ರಪಂಚದಿಂದ ಸತ್ತು ಅವರ ಬಳಿ ಹೋಗಬೇಕಾಗಿದೆ. ಈ ರೀತಿ ಎಂದಾದರೂ
ಯಾರ ಜೊತೆಯಾದರೂ ಪ್ರೀತಿಯೇರ್ಪಡುತ್ತದೆಯೇ? ನಾವು ಸತ್ತು ಹೋಗುತ್ತೇವೆಂಬ ವಿಚಾರ ಬರುತ್ತದೆಯೇ? ಆ
ವಿಚಾರ ಬಂದರೆ ಮತ್ತೆ ಯಾರಾದರೂ ಪ್ರೀತಿಯನ್ನು ನೀಡುವರೇ? ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ.
ಜ್ಯೋತಿಯೊಂದಿಗೆ ಪತಂಗವು ಪ್ರೀತಿಯನ್ನಿಟ್ಟು ಅದನ್ನು ಸುತ್ತಿ-ಸುತ್ತಿ ಸುಟ್ಟು ಹೋಗುತ್ತದೆ. ನೀವೂ
ಸಹ ತಂದೆಯ ಪ್ರೀತಿಯಲ್ಲಿ ಶರೀರವನ್ನು ಬಿಡಬೇಕಾಗಿದೆ ಅರ್ಥಾತ್ ತಂದೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ಶರೀರ ಬಿಡಬೇಕಾಗಿದೆ. ಈ ಗಾಯನವು ಕೇವಲ ಒಬ್ಬರಿಗಾಗಿಯೇ ಇದೆ. ಆ ತಂದೆಯು
ಬಂದಾಗ ಯಾರು ಅವರೊಂದಿಗೆ ಪ್ರೀತಿಯನ್ನಿಡುವರೋ ಅವರು ಈ ಪ್ರಪಂಚದಿಂದ ಸಾಯಬೇಕಾಗುತ್ತದೆ.
ಭಗವಂತನೊಂದಿಗೆ ಪ್ರೀತಿಯನ್ನಿಡುವುದರಿಂದ ಸತ್ತು ಎಲ್ಲಿಗೆ ಹೋಗುತ್ತೀರಿ? ಅವಶ್ಯವಾಗಿ ಭಗವಂತನ
ಬಳಿಯೇ ಹೋಗುತ್ತೀರಿ. ಮನುಷ್ಯರು ಭಗವಂತನ ಬಳಿ ಹೋಗುವುದಕ್ಕಾಗಿ ದಾನ-ಪುಣ್ಯ, ತೀರ್ಥ ಯಾತ್ರೆಗಳನ್ನು
ಮಾಡುತ್ತಾರೆ. ಶರೀರ ಬಿಡುವ ಸಮಯದಲ್ಲಿಯೂ ಮನುಷ್ಯರಿಗೆ ಭಗವಂತನನ್ನು ನೆನಪು ಮಾಡಿ ಎಂದು
ಹೇಳುತ್ತಾರೆ. ಭಗವಂತನು ಎಷ್ಟು ಪ್ರಸಿದ್ಧವಾಗಿದ್ದಾರೆ! ಅವರು ಬರುತ್ತಾರೆಂದರೆ ಇಡೀ ಪ್ರಪಂಚವನ್ನು
ಸಮಾಪ್ತಿ ಮಾಡಿ ಬಿಡುತ್ತಾರೆ. ನಿಮಗೆ ತಿಳಿದಿದೆ – ಹಳೆಯ ಪ್ರಪಂಚದಿಂದ ಸತ್ತು ಹೊಸ ಪ್ರಪಂಚದಲ್ಲಿ
ಹೋಗುವುದಕ್ಕಾಗಿ ಈ ವಿಶ್ವ ವಿದ್ಯಾಲಯಕ್ಕೆ ಬರುತ್ತೇವೆ. ಹಳೆಯ ಪ್ರಪಂಚಕ್ಕೆ ಪತಿತ ಪ್ರಪಂಚ,
ನರಕವೆಂದು ಹೇಳಲಾಗುತ್ತದೆ. ತಂದೆಯು ಹೊಸ ಪ್ರಪಂಚಕ್ಕೆ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ಕೇವಲ
ನನ್ನನ್ನು ನೆನಪು ಮಾಡಿ, ನಾನು ಸ್ವರ್ಗದ ರಚಯಿತನಾಗಿದ್ದೇನೆ. ಆ ತಂದೆಯಿಂದ ನಿಮಗೆ ಸಂಪತ್ತು, ಹಣ,
ಮನೆಯೆಲ್ಲವೂ ಸಿಗುತ್ತದೆ. ವಾಸ್ತವದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ, ಅವರನ್ನು
ಇನ್ನೊಂದು ಮನೆಗೆ ಕಳುಹಿಸಿ ಬಿಡುತ್ತಾರೆ ಅಂದರೆ ಅವರು ವಾರಸುಧಾರರಾಗಲಿಲ್ಲ. ಆದರೆ ಭಗವಂತನಂತೂ
ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಇವರ ಬಳಿ ಎಲ್ಲರೂ ಬರಬೇಕಾಗಿದೆ. ಯಾವುದಾದರೊಂದು ಸಮಯದಲ್ಲಿ
ತಂದೆಯು ಖಂಡಿತ ಬರುತ್ತಾರೆ, ಎಲ್ಲರನ್ನೂ ಖಂಡಿತ ಮನೆಗೆ ಕರೆದುಕೊಂಡು ಹೋಗುತ್ತಾರೆ ಏಕೆಂದರೆ ಹೊಸ
ಪ್ರಪಂಚದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ, ಹಳೆಯ ಪ್ರಪಂಚದಲ್ಲಿ ಅನೇಕರಿದ್ದಾರೆ. ಹೊಸ
ಪ್ರಪಂಚದಲ್ಲಿ ಮನುಷ್ಯರೂ ಕಡಿಮೆ ಮತ್ತು ಸುಖವು ಬಹಳಷ್ಟಿರುತ್ತದೆ. ಹಳೆಯ ಪ್ರಪಂಚದಲ್ಲಿ ಬಹಳ
ಮನುಷ್ಯರಿರುವುದರಿಂದ ದುಃಖವೂ ಬಹಳ ಇದೆ ಆದ್ದರಿಂದ ಕೂಗುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು
ಬಾಪೂಜಿಯೂ ಹೇಳುತ್ತಿದ್ದರು. ಕೇವಲ ಅವರನ್ನು ತಿಳಿದುಕೊಂಡಿರಲಿಲ್ಲ. ಪತಿತ-ಪಾವನ ಪರಮಪಿತ
ಪರಮಾತ್ಮನಾಗಿದ್ದಾರೆ, ಅವರೇ ವಿಶ್ವದ ಮುಕ್ತಿದಾತನಾಗಿದ್ದಾರೆ ಎಂಬುದನ್ನೂ ತಿಳಿದುಕೊಂಡಿದ್ದಾರೆ.
ರಾಮ-ಸೀತೆಯನ್ನು ಇಡೀ ಪ್ರಪಂಚದವರು ನಂಬುವುದಿಲ್ಲ. ಇಡೀ ಪ್ರಪಂಚವು ಪರಮಪಿತ ಪರಮಾತ್ಮನನ್ನು
ಮುಕ್ತಿದಾತ, ಮಾರ್ಗದರ್ಶಕನೆಂದು ನಂಬುತ್ತದೆ. ತಂದೆಯು ದುಃಖದಿಂದ ಮುಕ್ತಗೊಳಿಸುತ್ತಾರೆ. ಒಳ್ಳೆಯದು
- ದುಃಖ ಕೊಡುವವರು ಯಾರು? ತಂದೆಯಂತೂ ದುಃಖವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಅವರು
ಪತಿತ-ಪಾವನನಾಗಿದ್ದಾರೆ. ಪಾವನ ಪ್ರಪಂಚ, ಸುಖಧಾಮದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ನೀವು
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಾಗಿದ್ದೀರಿ. ಎಂತಹ ತಂದೆಯೋ ಅಂತಹ ಮಕ್ಕಳು. ಲೌಕಿಕ ತಂದೆಗೆ ಲೌಕಿಕ
ಅರ್ಥಾತ್ ದೈಹಿಕ ಮಕ್ಕಳಿರುತ್ತಾರೆ. ಈಗ ನೀವು ಮಕ್ಕಳು ಇದನ್ನು ತಿಳಿದುಕೊಳ್ಳಬೇಕಾಗಿದೆ -
ನಾವಾತ್ಮರಾಗಿದ್ದೇವೆ, ಪರಮಪಿತ ಪರಮಾತ್ಮನು ನಮಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನಾವು ಅವರ
ಮಕ್ಕಳು ಆಗುತ್ತೇವೆಂದ ಮೇಲೆ ಸ್ವರ್ಗದ ಆಸ್ತಿಯು ಖಂಡಿತ ಸಿಗುವುದು. ಅವರು ಸ್ವರ್ಗ ಸ್ಥಾಪನೆ
ಮಾಡುವವರಾಗಿದ್ದಾರೆ. ನಾವು ವಿದ್ಯಾರ್ಥಿಗಳಾಗಿದ್ದೇವೆ ಎಂಬುದನ್ನು ಮರೆಯಬಾರದು. ಶಿವ ತಂದೆಯು
ಮಧುಬನದಲ್ಲಿ ಮುರುಳಿಯನ್ನು ನುಡಿಸುತ್ತಾರೆಂದು ಮಕ್ಕಳ ಬುದ್ಧಿಯಲ್ಲಿರುತ್ತದೆ. ಆ ಕಟ್ಟಿಗೆಯ
ಮುರುಳಿಯಂತೂ ಇಲ್ಲಿ ಇಲ್ಲ. ಕೃಷ್ಣನು ನೃತ್ಯ ಮಾಡುವುದು, ಮುರುಳಿಯನ್ನು ನುಡಿಸುವುದು ಅದೆಲ್ಲವೂ
ಭಕ್ತಿಮಾರ್ಗದ್ದಾಗಿದೆ. ಬಾಕಿ ಜ್ಞಾನಮಾರ್ಗದ ಮುರುಳಿಯನ್ನು ಶಿವ ತಂದೆಯೇ ನುಡಿಸುತ್ತಾರೆ. ನಿಮ್ಮ
ಬಳಿ ಒಳ್ಳೊಳ್ಳೆಯ ಗೀತೆಗಳನ್ನು ರಚಿಸುವವರು ಬರುತ್ತಾರೆ. ಗೀತೆಗಳನ್ನು ಬಹುತೇಕವಾಗಿ ಪುರುಷರೇ
ರಚಿಸುತ್ತಾರೆ. ನೀವು ಜ್ಞಾನದ ಗೀತೆಗಳನ್ನೇ ಹಾಡಬೇಕು ಅದರಿಂದ ಶಿವ ತಂದೆಯ ನೆನಪು ಬರಬೇಕು.
ತಂದೆಯು ತಿಳಿಸುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿ. ಶಿವನಿಗೆ ಬಿಂದುವೆಂದು ಹೇಳುತ್ತಾರೆ.
ವ್ಯಾಪಾರಿಗಳು ಬಿಂದುವನ್ನು ಬರೆಯುತ್ತಾರೆ ಅದಕ್ಕೆ ಶಿವನೆಂದು ಹೇಳುತ್ತಾರೆ. ಒಂದರ ಮುಂದೆ
ಬಿಂದುವನ್ನಿಟ್ಟರೆ(0) 10 ಆಗುವುದು, ಇನ್ನೊಂದು ಬಿಂದುವನ್ನಿಟ್ಟರೆ 100 ಆಗುವುದು, ಮತ್ತೊಂದು
ಬಿಂದುವನ್ನಿಟ್ಟರೆ 1000 ಆಗಿ ಬಿಡುವುದು. ಅಂದಾಗ ನೀವೂ ಸಹ ಶಿವನನ್ನು ನೆನಪು ಮಾಡಬೇಕಾಗಿದೆ.
ಶಿವನನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಬಿಂದುವಿನ ಮುಂದೆ ಬಿಂದು ಸೇರುತ್ತಾ ಹೋಗುವುದು.
ನೀವು ಅರ್ಧಕಲ್ಪಕ್ಕಾಗಿ ಸಾಹುಕಾರರಾಗಿ ಬಿಡುತ್ತೀರಿ. ಅಲ್ಲಿ ಬಡವರಿರುವುದೇ ಇಲ್ಲ, ಎಲ್ಲರೂ
ಸುಖಿಯಾಗಿರುತ್ತಾರೆ. ದುಃಖದ ಹೆಸರಿರುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತಾ
ಹೋಗುತ್ತವೆ. ನೀವು ಬಹಳ ಧನವಂತರಾಗುತ್ತೀರಿ. ಇದಕ್ಕೆ ಸತ್ಯ ತಂದೆಯ ಮೂಲಕ ಸತ್ಯ ಸಂಪಾದನೆಯೆಂದು
ಹೇಳಲಾಗುತ್ತದೆ. ಈ ಸಂಪಾದನೆಯೇ ಜೊತೆ ಬರುತ್ತದೆ. ಮನುಷ್ಯರೆಲ್ಲರೂ ಖಾಲಿ ಕೈಯಲ್ಲಿ ಹೋಗುತ್ತಾರೆ,
ನೀವು ಕೈ ತುಂಬಿಕೊಂಡು ಹೋಗಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸಿದ್ದಾರೆ,
ಪವಿತ್ರತೆಯಿದ್ದಾಗ ಸುಖ-ಶಾಂತಿಯೂ ಸಿಗುವುದು. ನೀವಾತ್ಮರು ಮೊದಲು ಪವಿತ್ರರಾಗಿದ್ದಿರಿ ನಂತರ
ಅಪವಿತ್ರರಾದಿರಿ. ಸನ್ಯಾಸಿಗಳಿಗೂ ಸಹ ಅರ್ಧ ಪವಿತ್ರರೆಂದು ಹೇಳುತ್ತಾರೆ. ನಿಮ್ಮದು ಪೂರ್ಣ
ಸನ್ಯಾಸವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಅವರು ಎಷ್ಟು ಸುಖವನ್ನು ತೆಗೆದುಕೊಳ್ಳುತ್ತಾರೆ,
ಸ್ವಲ್ಪ ಸುಖವಿದ್ದರೆ ಇನ್ನುಳಿದದ್ದು ದುಃಖವೇ ಇರುತ್ತದೆ. ಮೊದಲು ಅವರು ತಂದೆಯನ್ನು ಸರ್ವವ್ಯಾಪಿ
ಎಂದು ಹೇಳುತ್ತಿರಲಿಲ್ಲ. ಸರ್ವವ್ಯಾಪಿ ಎಂದು ಹೇಳುವುದರಿಂದ ಇನ್ನೂ ಬೀಳುತ್ತಲೇ ಹೋಗುತ್ತಾರೆ.
ಪ್ರಪಂಚದಲ್ಲಿ ಅನೇಕ ಪ್ರಕಾರದ ಮೇಳಗಳಾಗುತ್ತವೆ ಏಕೆಂದರೆ ಸಂಪಾದನೆಯಾಗುತ್ತದೆಯಲ್ಲವೆ. ಇದೂ ಸಹ
ಅವರ ವ್ಯಾಪಾರವಾಗಿದೆ. ಹೇಳಲಾಗುತ್ತದೆ - ನರನಿಂದ ನಾರಾಯಣನಾಗುವ ವ್ಯಾಪಾರ ಬಿಟ್ಟರೆ ಮತ್ತೆಲ್ಲಾ
ವ್ಯಾಪಾರಗಳಲ್ಲಿ ಧೂಳೇ ಇದೆ. ಈ ವ್ಯಾಪಾರವನ್ನು ಮಾಡುವವರು ಕೆಲವರೇ ವಿರಳ. ತಂದೆಯ ಮಕ್ಕಳಾಗಿ
ಎಲ್ಲವನ್ನೂ ದೇಹ ಸಹಿತ ತಂದೆಗೆ ಕೊಡಬೇಕಾಗಿದೆ ಏಕೆಂದರೆ ಹೊಸ ಶರೀರ ಬೇಕೆಂದು ಬಯಸುತ್ತೀರಿ. ತಂದೆಯು
ತಿಳಿಸುತ್ತಾರೆ - ನೀವು ಕೃಷ್ಣ ಪುರಿಯಲ್ಲಿ ಹೋಗಬಲ್ಲಿರಿ ಆದರೆ ಆತ್ಮವು ತಮೋಪ್ರಧಾನದಿಂದ
ಸತೋಪ್ರಧಾನವಾದಾಗ. ಕೃಷ್ಣ ಪುರಿಯಲ್ಲಿ ನಮ್ಮನ್ನು ಪಾವನ ಮಾಡಿ ಎಂದು ಹೇಳುವುದಿಲ್ಲ, ಇಲ್ಲಿ ಎಲ್ಲಾ
ಮನುಷ್ಯ ಮಾತ್ರರೂ ಕರೆಯುತ್ತಾರೆ - ಹೇ ಮುಕ್ತಿದಾತ ಬನ್ನಿ, ಈ ಪಾಪಾತ್ಮರ ಪ್ರಪಂಚದಿಂದ ನಮ್ಮನ್ನು
ಮುಕ್ತ ಮಾಡಿ.
ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ನಿಮ್ಮನ್ನು ತನ್ನ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ,
ಅಲ್ಲಿ ಹೋಗುವುದಂತೂ ಒಳ್ಳೆಯದಲ್ಲವೆ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಅಂದಾಗ ಶಾಂತಿಯೆಂದು
ಯಾವುದಕ್ಕೆ ಹೇಳುತ್ತಾರೆ? ಕರ್ಮ ಮಾಡದೆ ಯಾರೂ ಇರಲು ಸಾಧ್ಯವಿಲ್ಲ. ಶಾಂತಿಯು ಶಾಂತಿಧಾಮದಲ್ಲಿಯೇ
ಇರುತ್ತದೆ ಆದರೂ ಮತ್ತೆ ಶರೀರವನ್ನು ತೆಗೆದುಕೊಂಡು ಕರ್ಮವನ್ನು ಮಾಡಲೇಬೇಕಾಗಿದೆ. ಸತ್ಯಯುಗದಲ್ಲಿ
ಕರ್ಮ ಮಾಡುತ್ತಿದ್ದರೂ ಶಾಂತಿಯಿರುತ್ತದೆ. ಅಶಾಂತಿಯಲ್ಲಿ ಮನುಷ್ಯರಿಗೆ ದುಃಖವಾಗುತ್ತದೆ,
ಆದ್ದರಿಂದ ಶಾಂತಿಯು ಹೇಗೆ ಸಿಗುವುದೆಂದು ಹೇಳುತ್ತಾರೆ. ಈಗಂತೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ
- ಶಾಂತಿಧಾಮವಂತೂ ನಮ್ಮ ಮನೆಯಾಗಿದೆ, ಸತ್ಯಯುಗದಲ್ಲಿ ಶಾಂತಿಯೂ ಇರುತ್ತದೆ, ಸುಖವೂ ಇರುತ್ತದೆ,
ಎಲ್ಲವೂ ಇರುತ್ತದೆ. ಈಗ ಅದು ಬೇಕೋ, ಕೇವಲ ಶಾಂತಿ ಬೇಕೋ? ಇಲ್ಲಂತೂ ದುಃಖವಿದೆ. ಆದ್ದರಿಂದ ಪತಿತ
ಪಾವನ ತಂದೆಯನ್ನೂ ಸಹ ಇಲ್ಲಿಗೇ ಕರೆಯುತ್ತಾರೆ. ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಭಕ್ತಿ
ಮಾಡುತ್ತಾರೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿಯಾಗುತ್ತದೆ.
ವ್ಯಭಿಚಾರಿ ಭಕ್ತಿಯಲ್ಲಿ ನೋಡಿ ಏನೇನು ಮಾಡುತ್ತಾರೆ! ಏಣಿ ಚಿತ್ರದಲ್ಲಿ ಎಷ್ಟು ಚೆನ್ನಾಗಿ
ತೋರಿಸಿದ್ದಾರೆ. ಆದರೆ ಮೊಟ್ಟ ಮೊದಲು ಸಿದ್ಧ ಮಾಡಬೇಕು - ಭಗವಂತ ಯಾರು? ಶ್ರೀಕೃಷ್ಣನನ್ನು ಈ ರೀತಿ
ಮಾಡಿದವರು ಯಾರು? ಮೊದಲ ಜನ್ಮದಲ್ಲಿ ಇವರು ಯಾರಾಗಿದ್ದರು? ತಿಳಿಸಲು ಬಹಳ ಯುಕ್ತಿಬೇಕು. ಯಾರು
ಚೆನ್ನಾಗಿ ಸರ್ವೀಸ್ ಮಾಡುವರೋ ಅವರ ಹೃದಯವೂ ಸಹ ಸಾಕ್ಷಿ ಕೊಡುತ್ತದೆ. ವಿಶ್ವ ವಿದ್ಯಾಲಯದಲ್ಲಿ ಯಾರು
ಚೆನ್ನಾಗಿ ಓದುವರೋ ಅವರು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ.
ಕೆಲವರು ಮಂಧ ಬುದ್ಧಿಯವರೂ ಇರುತ್ತಾರೆ. ಶಿವ ತಂದೆಗೆ ಆತ್ಮವು ಹೇಳುತ್ತದೆ - ನನ್ನ ಬುದ್ಧಿ
ಬೀಗವನ್ನು ತೆರೆಯಿರಿ. ಅದಕ್ಕೆ ತಂದೆಯು ಹೇಳುತ್ತಾರೆ – ಬುದ್ಧಿ ಬೀಗವನ್ನು ತೆರೆಯುವುದಕ್ಕಾಗಿಯೇ
ಬಂದಿದ್ದೇನೆ ಆದರೆ ನಿಮ್ಮ ಕರ್ಮವು ಹೀಗಿದೆ ಬುದ್ಧಿ ಬೀಗವು ತೆರೆಯುವುದೇ ಇಲ್ಲ. ಮತ್ತೆ ತಂದೆಯು
ಏನು ಮಾಡುವರು? ಬಹಳ ಪಾಪಗಳನ್ನು ಮಾಡಿದ್ದೀರಿ, ಈಗ ತಂದೆಯು ಅವರನ್ನು ಏನು ಮಾಡುವರು? ನಾವು ಕಡಿಮೆ
ಓದುತ್ತೇವೆಂದು ಶಿಕ್ಷಕರಿಗೆ ಹೇಳುತ್ತಾರೆ ಅಂದಾಗ ಶಿಕ್ಷಕರು ಏನು ಮಾಡುವರು? ಶಿಕ್ಷಕರು
ಕೃಪೆಯನ್ನಂತೂ ಮಾಡುವುದಿಲ್ಲ. ಭಲೆ ಅಧಿಕ ಸಮಯವನ್ನು ಕೊಡುತ್ತಾರೆ. ಅದನ್ನಂತೂ ನಿಮಗೆ
ನಿರಾಕರಿಸುವುದಿಲ್ಲ. ಪ್ರದರ್ಶನಿಯು ತೆರೆದಿರುತ್ತದೆ, ಕುಳಿತು ಅಭ್ಯಾಸ ಮಾಡಿ. ಭಕ್ತಿಮಾರ್ಗದಲ್ಲಿ
ಮಾಲೆಯನ್ನು ಜಪಿಸಿ ಎಂದು ಕೆಲವರು ಹೇಳುತ್ತಾರೆ. ಈ ಮಂತ್ರವನ್ನು ನೆನಪು ಮಾಡಿಕೊಳ್ಳಿ ಎಂದು ಕೆಲವರು
ಹೇಳುತ್ತಾರೆ. ಇಲ್ಲಂತೂ ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ತಂದೆಯನ್ನು ನೆನಪು
ಮಾಡಬೇಕಾಗಿದೆ, ಅವರಿಂದ ಆಸ್ತಿಯು ಸಿಗುತ್ತದೆ ಅಂದಮೇಲೆ ಚೆನ್ನಾಗಿ ತಂದೆಯಿಂದ ಪೂರ್ಣ ಆಸ್ತಿಯನ್ನು
ತೆಗೆದುಕೊಳ್ಳಬೇಕಲ್ಲವೆ. ಇದರಲ್ಲಿಯೂ ತಂದೆಯು ತಿಳಿಸುತ್ತಾರೆ - ವಿಕಾರದಲ್ಲೆಂದೂ ಹೋಗಬಾರದು.
ವಿಕಾರದ ರುಚಿಯು ಸ್ವಲ್ಪ ಕುಳಿತುಕೊಂಡರೂ ಸಹ ಮತ್ತೆ ವೃದ್ಧಿಯಾಗಿ ಬಿಡುವುದು. ಹೇಗೆ ಸಿಗರೇಟ್
ಇತ್ಯಾದಿಗಳ ರುಚಿ ಒಂದು ಸಲ ನೋಡಿದರೂ ಸಹ ಸಂಗದ ರಂಗು ಕೂಡಲೇ ಅಂಟಿ ಬಿಡುತ್ತದೆ. ಮತ್ತೆ ಆ ಚಟವನ್ನು
ಬಿಡುವುದೇ ಕಷ್ಟವಾಗಿ ಬಿಡುತ್ತದೆ. ಎಷ್ಟೊಂದು ನೆಪ ಹೇಳುತ್ತಾರೆ ಆದ್ದರಿಂದ ಯಾವುದೇ
ಹವ್ಯಾಸವಾಗಬಾರದು. ಛೀ ಛೀ ಹವ್ಯಾಸಗಳನ್ನು ಕಳೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ -
ಜೀವಿಸಿದ್ದಂತೆಯೇ ಶರೀರದ ಪರಿವೆಯನ್ನು ಬಿಟ್ಟು ನನ್ನನ್ನು ನೆನಪು ಮಾಡಿ. ದೇವತೆಗಳಿಗೆ ಯಾವಾಗಲೂ
ಪವಿತ್ರ ಭೋಜನವನ್ನೇ ನೈವೇದ್ಯವನ್ನಿಡಲಾಗುತ್ತದೆ ಅಂದಾಗ ನೀವೂ ಸಹ ಪವಿತ್ರ ಭೋಜನವನ್ನು ಸ್ವೀಕರಿಸಿ.
ಇತ್ತೀಚೆಗಂತೂ ಅಪ್ಪಟವಾದ ತುಪ್ಪವೂ ಸಿಗುವುದಿಲ್ಲ. ಎಣ್ಣೆಯನ್ನು ತಿನ್ನುತ್ತಾರೆ. ಸತ್ಯಯುಗದಲ್ಲಿ
ಎಣ್ಣೆ ಇತ್ಯಾದಿಗಳಿರುವುದಿಲ್ಲ, ಇಲ್ಲಂತೂ ಡೈರಿಯಲ್ಲಿ ನೋಡಿ, ಎಷ್ಟು ಶುದ್ಧವಾದ
ತುಪ್ಪವನ್ನಿಟ್ಟಿದ್ದಾರೆ, ಕಲಬೆರಕೆ ತುಪ್ಪವನ್ನೂ ಇಟ್ಟಿದ್ದಾರೆ. ಎರಡರ ಮೇಲೂ ಶುದ್ಧ ತುಪ್ಪವೆಂದು
ಬರೆದಿದ್ದಾರೆ. ಬೆಲೆಯಲ್ಲಿ ಅಂತರವಾಗಿ ಬಿಡುತ್ತದೆ. ಈಗ ನೀವು ಮಕ್ಕಳು ಅರಳಿರುವ ಹೂವಿನ ತರಹ
ಹರ್ಷಿತರಾಗಿರಬೇಕು. ಸ್ವರ್ಗದಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ, ಅಲ್ಲಿ ಪ್ರಕೃತಿಯೂ
ಸತೋಪ್ರಧಾನವಾಗಿರುತ್ತದೆ. ಲಕ್ಷ್ಮೀ-ನಾರಾಯಣರಂತಹ ಸ್ವಾಭಾವಿಕ ಸೌಂದರ್ಯವಂತರನ್ನಾಗಿ ಇಲ್ಲಿ ಯಾರೂ
ಮಾಡಲು ಸಾಧ್ಯವಿಲ್ಲ. ಅವರನ್ನು ಈ ಕಣ್ಣುಗಳಿಂದ ಯಾರಾದರೂ ನೋಡಲು ಸಾಧ್ಯವೇ? ಹಾ!
ಸಾಕ್ಷಾತ್ಕಾರವಾಗುತ್ತದೆ. ಆದರೆ ಸಾಕ್ಷಾತ್ಕಾರವಾದ ಮಾತ್ರಕ್ಕೆ ಯಾರು ಅದೇ ಮಾದರಿಯಲ್ಲಿ ರಚಿಸಲು
ಸಾಧ್ಯವಿಲ್ಲ. ಹಾ! ಯಾರಾದರೂ ಕಲಾಕಾರನಿಗೆ ಸಾಕ್ಷಾತ್ಕಾರವಾಗುತ್ತಾ ಹೋದರೆ ಆ ಸಮಯದಲ್ಲಿ ಕುಳಿತು
ಬರೆಯಬಹುದು.... ಆದರೆ ಪರಿಶ್ರಮವಿದೆ. ಈಗ ನೀವು ಮಕ್ಕಳಿಗೆ ಬಹಳ ನಶೆಯಿರಬೇಕು. ಈಗ ನಮ್ಮನ್ನು
ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗಬೇಕಾಗಿದೆ. ಈಗ ನಮ್ಮ
84 ಜನ್ಮಗಳು ಪೂರ್ಣವಾಯಿತು, ಇಂತಿಂತಹ ವಿಚಾರಗಳು ಬುದ್ಧಿಯಲ್ಲಿದ್ದಾಗ ಖುಷಿಯಿರುವುದು. ಸ್ವಲ್ಪವೂ
ವಿಕಾರದ ವಿಚಾರವೇ ಬರಬಾರದು. ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ದ್ರೌಪದಿಯೂ ಸಹ
ಇದಕ್ಕಾಗಿಯೇ ಕರೆದಳಲ್ಲವೆ. ಅವಳಿಗೆ ಯಾವುದೇ 5 ಮಂದಿ ಪತಿಯರಿರಲಿಲ್ಲ. ದ್ರೌಪದಿಯಂತೂ
ಕರೆಯುತ್ತಿದ್ದಳು, ನನ್ನನ್ನು ಈ ದುಶ್ಯಾಸನನು ವಿವಸ್ತ್ರ ಮಾಡುತ್ತಾನೆ, ಇದರಿಂದ ರಕ್ಷಿಸು ಎಂದು.
ಅಂದಮೇಲೆ ಮತ್ತೆ 5 ಮಂದಿ ಪತಿಯರಿರಲು ಹೇಗೆ ಸಾಧ್ಯ. ಇಂತಹ ಮಾತಿರಲು ಸಾಧ್ಯವಿಲ್ಲ. ಮತ್ತೆ-ಮತ್ತೆ
ನೀವು ಮಕ್ಕಳಿಗೆ ಹೊಸ-ಹೊಸ ವಿಚಾರಗಳು ಸಿಗುತ್ತಿರುತ್ತವೆ ಅಂದಮೇಲೆ ತಿದ್ದು ಪಡಿ ಮಾಡುತ್ತಿರಬೇಕು.
ಯಾವುದಾದರೊಂದು ಬದಲಾವಣೆ ಮಾಡಿ ಶಬ್ಧಗಳನ್ನು ಹಾಕಬೇಕು.
ಇನ್ನು ಸ್ವಲ್ಪ ಸಮಯದಲ್ಲಿಯೇ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ನೀವು
ಬರೆಯುತ್ತೀರಿ, ಚಾಲೆಂಜ್ ಮಾಡುತ್ತೀರಿ. ತಂದೆಯು ಮಕ್ಕಳೊಂದಿಗೆ ಹೇಳುತ್ತಾರೆ - ಸನ್ ಶೋಜ್ ಫಾದರ್,
ಫಾದರ್ ಶೋಜ್ ಸನ್ ಅರ್ಥಾತ್ ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುವರು, ತಂದೆಯು ಮಕ್ಕಳನ್ನು
ಪ್ರತ್ಯಕ್ಷ ಮಾಡುವರು ಅಂದಾಗ ಯಾವ ತಂದೆ? ಶಿವ ಮತ್ತು ಸಾಲಿಗ್ರಾಮಗಳು. ಶಿವ ತಂದೆಯು ಏನನ್ನು
ತಿಳಿಸುತ್ತಾರೆಯೋ ಅದರಂತೆಯೇ ಫಾಲೋ ಮಾಡಿ. ಫಾಲೋಫಾದರ್ ಅವರದೇ ಗಾಯನವಿದೆ. ಲೌಕಿಕ ತಂದೆಯನ್ನು ಫಾಲೋ
ಮಾಡುವುದರಿಂದ ನೀವು ಪತಿತರಾಗಿ ಬಿಡುತ್ತೀರಿ. ಈ ತಂದೆಯಂತೂ ಪಾವನರನ್ನಾಗಿ ಮಾಡಲು ಫಾಲೋ
ಮಾಡಿಸುತ್ತಾರೆ, ಅಂತರವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಫಾಲೋ ಮಾಡಿ
ಪವಿತ್ರರಾಗಿ. ಫಾಲೋ ಮಾಡುವುದರಿಂದಲೇ ಸ್ವರ್ಗದ ಮಾಲೀಕರಾಗುವಿರಿ. ಲೌಕಿಕ ತಂದೆಯನ್ನು ಫಾಲೋ
ಮಾಡುವುದರಿಂದ 63 ಜನ್ಮಗಳು ನೀವು ಏಣಿಯನ್ನು ಕೆಳಗಿಳಿದಿದ್ದೀರಿ. ಈಗ ತಂದೆಯನ್ನು ಫಾಲೋ ಮಾಡಿ
ಮೇಲೇರಬೇಕಾಗಿದೆ. ತಂದೆಯ ಜೊತೆ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಈ ಒಂದೊಂದು ರತ್ನವು
ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವಂತದ್ದಾಗಿದೆ. ನೀವು ತಂದೆಯನ್ನರಿತು ತಂದೆಯಿಂದ ಆಸ್ತಿಯನ್ನು
ಪಡೆಯುತ್ತೀರಿ. ಬ್ರಹ್ಮ್ನಲ್ಲಿ ಲೀನವಾಗಿ ಬಿಡುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ ಆದರೆ
ಲೀನವಾಗುವುದಿಲ್ಲ, ಪುನಃ ಬರುತ್ತಾರೆ. ತಂದೆಯು ನಿತ್ಯವೂ ತಿಳಿಸುತ್ತಿರುತ್ತಾರೆ - ಮಧುರಾತಿ ಮಧುರ
ಮಕ್ಕಳೇ, ಮೊಟ್ಟ ಮೊದಲು ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಪಾರಲೌಕಿಕ ತಂದೆಯು ಪಾವನರನ್ನಾಗಿ
ಮಾಡುವ ಆಸ್ತಿಯನ್ನು ಕೊಡುತ್ತಾರೆ ಆದ್ದರಿಂದ ಪಾವನರನ್ನಾಗಿ ಮಾಡಿ ಎಂದು ಬೇಹದ್ದಿನ ತಂದೆಗೆ
ಹೇಳುತ್ತಾರೆ. ಅವರು ಪತಿತ-ಪಾವನನಾಗಿದ್ದಾರೆ. ಲೌಕಿಕ ತಂದೆಗೆ ಪತಿತ-ಪಾವನನೆಂದು ಹೇಳುವುದಿಲ್ಲ.
ಅವರೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಿರುತ್ತಾರೆ ಅಂದಾಗ ಎಲ್ಲರಿಗೆ ಇಬ್ಬರು ತಂದೆಯರ
ಪರಿಚಯ ಕೊಡಬೇಕಾಗಿದೆ. ವಿವಾಹ ಮಾಡಿಕೊಂಡು ಪತಿತನಾಗು ಎಂದು ಲೌಕಿಕ ತಂದೆಯು ಹೇಳುತ್ತಾರೆ.
ಪಾವನರಾಗಿ ಎಂದು ಪಾರಲೌಕಿಕ ತಂದೆಯು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದರೆ ನೀವು
ಪಾವನರಾಗುತ್ತೀರಿ. ಒಬ್ಬ ತಂದೆಯೇ ಎಲ್ಲರನ್ನೂ ಪಾವನ ಮಾಡುವವರಾಗಿದ್ದಾರೆ. ಇವು ತಿಳಿಸಿ ಕೊಡುವ
ಬಹಳ ಒಳ್ಳೆಯ ಮಾತುಗಳಾಗಿವೆ. ಭಿನ್ನ-ಭಿನ್ನ ಪ್ರಕಾರದ ಮಾತುಗಳನ್ನು ವಿಚಾರ ಸಾಗರ ಮಂಥನ ಮಾಡಿ
ತಿಳಿಸುತ್ತಾರೆ. ಇದೇ ನಿಮ್ಮ ವ್ಯಾಪಾರವಾಯಿತು. ನೀವು ಪತಿತರನ್ನು ಪಾವನ ಮಾಡುವವರಾಗಿದ್ದೀರಿ.
ಪಾರಲೌಕಿಕ ತಂದೆಯು ಈಗ ಹೇಳುತ್ತಾರೆ - ಪಾವನರಾಗಿ, ಈಗ ವಿನಾಶವು ಸಮ್ಮುಖದಲ್ಲಿ ನಿಂತಿದೆ ಅಂದಮೇಲೆ
ಈಗ ಏನು ಮಾಡಬೇಕು? ಖಂಡಿತವಾಗಿಯೂ ಪಾರಲೌಕಿಕ ತಂದೆಯ ಮತದಂತೆ ನಡೆಯಬೇಕಲ್ಲವೆ. ಪ್ರದರ್ಶನಿಯಲ್ಲಿ ಈ
ಪ್ರತಿಜ್ಞೆಯನ್ನೂ ಬರೆಯಬೇಕು - ಪಾರಲೌಕಿಕ ತಂದೆಯನ್ನು ಫಾಲೋ ಮಾಡುತ್ತೇವೆ, ಪತಿತರಾಗುವುದನ್ನು
ಬಿಡುತ್ತೇವೆ. ಬರೆಯಿರಿ - ತಂದೆಯಿಂದ ಗ್ಯಾರಂಟಿ ತೆಗೆದುಕೊಳ್ಳುತ್ತೇವೆ, ಎಲ್ಲವೂ ಪವಿತ್ರತೆಯ
ಮಾತಾಗಿದೆ. ನೀವು ಮಕ್ಕಳಿಗೆ ದಿನ-ರಾತ್ರಿ ಖುಷಿಯಿರಬೇಕು - ತಂದೆಯು ನಮಗೆ ಸ್ವರ್ಗದ ಆಸ್ತಿಯನ್ನು
ಕೊಡುತ್ತಿದ್ದಾರೆ. ತಂದೆ ಮತ್ತು ಆಸ್ತಿ. ನೀವೀಗ ತಿಳಿದುಕೊಂಡಿದ್ದೀರಿ – ಶಿವ ಜಯಂತಿಯೆಂದರೆ
ಭಾರತದ ಸ್ವರ್ಗ ಜಯಂತಿಯಾಗಿದೆ. ಗೀತೆಯೇ ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ, ಗೀತಾ ಮಾತೆಯಾಗಿದೆ.
ಆಸ್ತಿಯಂತೂ ತಂದೆಯಿಂದಲೇ ಸಿಗುವುದು. ಗೀತೆಯ ರಚಯಿತನು ಶಿವ ತಂದೆಯೇ ಆಗಿದ್ದಾರೆ. ಪಾರಲೌಕಿಕ
ತಂದೆಯಿಂದ ಪಾವನರಾಗುವ ಆಸ್ತಿಯು ಸಿಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವು
ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ - ಇದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಬೇಕಾಗಿದೆ. ಯಾವುದೇ
ಛೀ ಛೀ ಹವ್ಯಾಸಗಳನ್ನು ಮಾಡಿಕೊಳ್ಳಬಾರದು, ಅವುಗಳನ್ನು ಕಳೆಯಬೇಕಾಗಿದೆ. ವಿಕಾರದ ವಿಚಾರವು ಅಂಶ
ಮಾತ್ರವೂ ಬರಬಾರದು.
2. ಜೀವಿಸಿದ್ದಂತೆಯೇ ಶರೀರದ ಭಾನವನ್ನು ಮರೆತು ತಂದೆಯನ್ನು ನೆನಪು ಮಾಡಬೇಕಾಗಿದೆ. ಭಿನ್ನ-ಭಿನ್ನ
ಅಂಶಗಳನ್ನು ವಿಚಾರ ಸಾಗರ ಮಂಥನ ಮಾಡಿ ಪತಿತರನ್ನು ಪಾವನ ಮಾಡುವ ವ್ಯಾಪಾರ ಮಾಡಬೇಕಾಗಿದೆ.
ವರದಾನ:
ಜನ್ಮ ಸಿದ್ಧ
ಹಕ್ಕಿನ ನಶೆಯ ಮುಖಾಂತರ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಮಾಡುವಂತಹ ಶ್ರೇಷ್ಠ ಅದೃಷ್ಟಶಾಲಿ ಭವ.
ಹೇಗೆ ಲೌಕಿಕ ಜನ್ಮದಲ್ಲಿ
ಸ್ಥೂಲ ಸಂಪತ್ತು ಜನ್ಮ ಸಿದ್ಧ ಹಕ್ಕಾಗಿರುತ್ತೆ, ಹಾಗೆಯೇ ಬ್ರಾಹ್ಮಣ ಜನ್ಮದಲ್ಲಿ ದಿವ್ಯ ಗುಣರೂಪಿ
ಸಂಪತ್ತು, ಈಶ್ವರೀಯ ಸುಖ ಮತ್ತು ಶಕ್ತಿ ಜನ್ಮ ಸಿದ್ಧ ಹಕ್ಕಾಗಿದೆ. ಜನ್ಮ ಸಿದ್ಧ ಹಕ್ಕಿನ ನಶೆ
ಸ್ವಾಭಾವಿಕ ರೂಪದಲ್ಲಿ ಇದ್ದಲ್ಲಿ ಪರಿಶ್ರಮ ಪಡುವ ಅವಶ್ಯಕತೆ ಇಲ್ಲ. ಈ ನಶೆಯಲ್ಲಿರುವುದರಿಂದ
ಲಕ್ಷ್ಯ ಮತ್ತು ಲಕ್ಷಣ ಸಮಾನವಾಗಿ ಬಿಡುವುದು. ಸ್ವಯಂಗೆ ಯಾರಾಗಿರುವೆನು, ಹೇಗಿರುವೆನು, ಎಂತಹ
ಶ್ರೇಷ್ಠ ತಂದೆ ಮತ್ತು ಪರಿವಾರದವನು ಹಾಗೆಯೇ ತಿಳಿಯುತ್ತಾ ಮತ್ತು ಒಪ್ಪುತ್ತಾ ಶ್ರೇಷ್ಠ
ಅದೃಷ್ಟಶಾಲಿಗಳಾಗಿ.
ಸ್ಲೋಗನ್:
ಪ್ರತಿ ಕರ್ಮವನ್ನು ಸ್ವ
ಸ್ಥಿತಿಯಲ್ಲಿ ಸ್ಥಿತರಾಗಿ ಮಾಡಿದಾಗ ಸಹಜವಾಗಿ ಸಫಲತೆಯ ನಕ್ಷತ್ರ ಆಗಿ ಬಿಡುವಿರಿ.