10.03.19    Avyakt Bapdada     Kannada Murli     01.05.84     Om Shanti     Madhuban


" ಪರಮಾತ್ಮನ ಮೊಟ್ಟಮೊದಲ ಶ್ರೇಷ್ಠ ರಚನೆ - ಬ್ರಾಹ್ಮಣ "


ಇಂದು ರಚೈತ ತಂದೆಯು ತನ್ನ ರಚನೆಯನ್ನು, ಅದರಲ್ಲಿಯೂ ಮೊದಲ ರಚನೆಯಾದ ಬ್ರಾಹ್ಮಣ ಆತ್ಮರನ್ನು ನೋಡುತ್ತಿದ್ದಾರೆ. ಮೊಟ್ಟ ಮೊದಲ ಶ್ರೇಷ್ಠ ರಚನೆಯು ತಾವು ಬ್ರಾಹ್ಮಣರು ಶ್ರೇಷ್ಠಾತ್ಮರಾಗಿದ್ದೀರಿ, ಆದ್ದರಿಂದ ಸರ್ವ ರಚನೆಗಿಂತಲೂ ಪ್ರಿಯರಾಗಿದ್ದೀರಿ. ಬ್ರಹ್ಮಾರವರ ಮೂಲಕ ಸರ್ವ ಶ್ರೇಷ್ಠ ರಚನೆ ಮುಖವಂಶಾವಳಿ ಮಹಾನ್ ಆತ್ಮರು, ಬ್ರಾಹ್ಮಣ ಆತ್ಮರಾಗಿದ್ದೀರಿ. ದೇವತೆಗಳಿಗಿಂತಲೂ ಶ್ರೇಷ್ಠ ಬ್ರಾಹ್ಮಣ ಆತ್ಮರೆಂದು ಗಾಯನವಾಗಿದೆ. ಬ್ರಾಹ್ಮಣರೇ ಫರಿಶ್ತೆಯಿಂದ ದೇವತೆಯಾಗುವರು. ಆದರೆ ಬ್ರಾಹ್ಮಣ ಜೀವನದ ಆದಿ ಪಿತನ ಮೂಲಕ ಸಂಗಮಯುಗಿ ಆದಿ ಜೀವನವಿದೆ. ಆದಿ ಸಂಗಮವಾಸಿಗಳು ಜ್ಞಾನ ಸ್ವರೂಪ ತ್ರಿಕಾಲದರ್ಶಿ, ತ್ರಿನೇತ್ರಿ ಬ್ರಾಹ್ಮಣ ಆತ್ಮರಾಗಿದ್ದಾರೆ. ಸಾಕಾರ ಸ್ವರೂಪದಲ್ಲಿ ಸಾಕಾರಿ ಸೃಷ್ಟಿಯಲ್ಲಿ ಆತ್ಮ ಮತ್ತು ಪರಮಾತ್ಮನ ಮಿಲನ ಹಾಗೂ ಸರ್ವ ಸಂಬಂಧದ ಪ್ರೀತಿಯ ರೀತಿಯ ಅನುಭವ, ಪರಮಾತ್ಮ - ಅವಿನಾಶಿ ಖಜಾನೆಗಳ ಅಧಿಕಾರ, ಸಾಕಾರ ಸ್ವರೂಪದಿಂದ ಬ್ರಾಹ್ಮಣರದೇ ಈ ಗೀತೆಯಾಗಿದೆ - ಹಮ್ ನೆ ದೇಖಾ, ಹಮ್ ನೆ ಪಾಯಾ ಶಿವ ಬಾಪ್ ಕೊ ಬ್ರಹ್ಮಾ ಬಾಪ್ ದ್ವಾರಾ(ಬ್ರಹ್ಮಾ ತಂದೆಯ ಮೂಲಕ ಶಿವ ತಂದೆಯನ್ನು ನಾವು ನೋಡಿದೆವು, ನಾವು ಪಡೆದೆವು) ಇದು ದೇವತಾ ಜೀವನದ ಗೀತೆಯಲ್ಲ. ಸಾಕಾರ ಸೃಷ್ಟಿಯಲ್ಲಿ ಈ ಸಾಕಾರಿ ನೇತ್ರಗಳ ಮೂಲಕ ಇಬ್ಬರೂ ತಂದೆಯರನ್ನು ನೋಡುವುದು, ಅವರ ಜೊತೆ ಸೇವನೆ ಮಾಡುವುದು, ನಡೆಯುವುದು, ಮಾತನಾಡುವುದು, ಕೇಳುವುದು, ಪ್ರತಿಯೊಂದು ಚರಿತ್ರೆಯ ಅನುಭವ ಮಾಡುವುದು, ವಿಚಿತ್ರನನ್ನು ಚಿತ್ರದಿಂದ ನೋಡುವುದು - ಈ ಶ್ರೇಷ್ಠ ಭಾಗ್ಯವು ಬ್ರಾಹ್ಮಣ ಜೀವನದ್ದಾಗಿದೆ. ಬ್ರಾಹ್ಮಣರೇ ಹೇಳುತ್ತಾರೆ - ನಾವು ಭಗವಂತನನ್ನು ತಂದೆಯ ರೂಪದಲ್ಲಿ ನೋಡಿದೆವು. ಮಾತಾ, ಸಖಾ, ಬಂಧು, ಪ್ರಿಯತಮನ ಸ್ವರೂಪದಲ್ಲಿ ನೋಡಿದೆವು. ಯಾವ ಋಷಿ, ಮುನಿ, ತಪಸ್ವಿ, ವಿದ್ವಾನ ಆಚಾರ್ಯ, ಶಾಸ್ತ್ರಿಗಳು ಕೇವಲ ಮಹಿಮೆಯನ್ನು ಹಾಡುತ್ತಲೇ ಉಳಿದು ಬಿಟ್ಟರು. ದರ್ಶನದ ಅಭಿಲಾಷೆಯು ಉಳಿದುಕೊಂಡಿತು. ಯಾವಾಗ ಬರುವರು, ಯಾವಾಗ ಮಿಲನವಾಗಿಯೇ ಬಿಡುವರು.... ಇದೇ ನಿರೀಕ್ಷಣೆಯಲ್ಲಿ ಜನ್ಮ-ಜನ್ಮದ ಚಕ್ರದಲ್ಲಿ ನಡೆದರು. ಆದರೆ ಬ್ರಾಹ್ಮಣ ಆತ್ಮರು ನಶೆಯಿಂದ, ನಿಶ್ಚಯದಿಂದ ಹೇಳುತ್ತಾರೆ, ನಶೆಯಿಂದ ಹೇಳುತ್ತಾರೆ, ಖುಷಿ-ಖುಷಿಯಿಂದ ಹೇಳುತ್ತಾರೆ, ಮನಃಪೂರ್ವಕವಾಗಿ ಹೇಳುತ್ತಾರೆ - ನಮ್ಮ ತಂದೆಯು ಈಗ ಸಿಕ್ಕಿ ಬಿಟ್ಟರು. ಅವರು ಬಯಸುವವರು ಮತ್ತು ತಾವು ಮಿಲನವನ್ನಾಚರಿಸುವವರು. ಬ್ರಾಹ್ಮಣ ಜೀವನ ಅರ್ಥಾತ್ ಸರ್ವ ಅವಿನಾಶಿ ಅಕೂಟ, ಅಟಲ, ಅಚಲ ಸರ್ವ ಪ್ರಾಪ್ತಿ ಸ್ವರೂಪ ಜೀವನ, ಬ್ರಾಹ್ಮಣ ಜೀವನ - ಈ ಕಲ್ಪವೃಕ್ಷದ ಬುನಾದಿ, ಬುಡವಾಗಿದೆ. ಬ್ರಾಹ್ಮಣ ಜೀವನದ ಆಧಾರದ ಮೇಲೆ ಆ ವೃಕ್ಷದ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತದೆ. ಬ್ರಾಹ್ಮಣ ಜೀವನದ ಬುಡದಿಂದ ಸರ್ವ ವಿಭಿನ್ನ ಆತ್ಮರಿಗೆ ಬೀಜದ ಮೂಲಕ ಮುಕ್ತಿ-ಜೀವನ್ಮುಕ್ತಿಯ ಪ್ರಾಪ್ತಿಯ ನೀರು ಸಿಗುತ್ತದೆ. ಬ್ರಾಹ್ಮಣ ಜೀವನದ ಆಧಾರದಿಂದ ಈ ರೆಂಬೆ-ಕೊಂಬೆಗಳು ವಿಸ್ತಾರವನ್ನು ಪಡೆದುಕೊಳ್ಳುತ್ತದೆ. ಅಂದಮೇಲೆ ಬ್ರಾಹ್ಮಣ ಆತ್ಮರು ಇಡೀ ವಿಭಿನ್ನ ವಂಶಾವಳಿಗೆ ಪೂರ್ವಜರಾಗಿದ್ದಾರೆ. ಬ್ರಾಹ್ಮಣ ಆತ್ಮರು ವಿಶ್ವದ ಸರ್ವ ಶ್ರೇಷ್ಠ ಕಾರ್ಯದ, ನಿರ್ಮಾಣದ ಮುಹೂರ್ತವನ್ನು ಮಾಡುವವರಾಗಿದ್ದಾರೆ. ಬ್ರಾಹ್ಮಣ ಆತ್ಮರೇ ಅಶ್ವಮೇಧ ರಾಜಸ್ವ ಯಜ್ಞ, ಜ್ಞಾನ ಯಜ್ಞವನ್ನು ರಚಿಸುವಂತಹ ಶ್ರೇಷ್ಠಾತ್ಮರಾಗಿದ್ದಾರೆ. ಬ್ರಾಹ್ಮಣ ಆತ್ಮರು ಪ್ರತಿಯೊಂದು ಆತ್ಮನ 84 ಜನ್ಮಗಳ ಜನ್ಮ ಪತ್ರಿಯನ್ನು ತಿಳಿದಿರುವವರಾಗಿದ್ದಾರೆ. ಪ್ರತಿಯೊಂದು ಆತ್ಮನ ಶ್ರೇಷ್ಠ ಭಾಗ್ಯದ ರೇಖೆಯನ್ನು ವಿದಾತನ ಮೂಲಕ ಶ್ರೇಷ್ಠವನ್ನಾಗಿ ಮಾಡುವವರಾಗಿದ್ದಾರೆ. ಬ್ರಾಹ್ಮಣ ಆತ್ಮರು, ಮಹಾನ್ ಯಾತ್ರೆ ಅಂದರೆ ಮುಕ್ತಿ-ಜೀವನ್ಮುಕ್ತಿಯ ಯಾತ್ರೆಯನ್ನು ಮಾಡಿಸಲು ನಿಮಿತ್ತರಾಗಿರುವವರಾಗಿದ್ದಾರೆ. ಬ್ರಾಹ್ಮಣ ಆತ್ಮರು ಸರ್ವ ಆತ್ಮರುಗಳ ಸಾಮೂಹಿಕ ವಿವಾಹವನ್ನು ತಂದೆಯೊಂದಿಗೆ ಮಾಡಿಸುವವರಾಗಿದ್ದಾರೆ. ಪರಮಾತ್ಮನ ಕೈಯಲ್ಲಿ ಕೈ - ಈ ಕಂಕಣವನ್ನು ಕಟ್ಟಿಸುವವರಾಗಿದ್ದಾರೆ. ಬ್ರಾಹ್ಮಣ ಆತ್ಮರು ಜನ್ಮ-ಜನ್ಮಕ್ಕಾಗಿ ಸದಾ ಪವಿತ್ರತೆಯ ಬಂಧನವನ್ನು ಬಂಧಿಸುವವರಾಗಿದ್ದಾರೆ. ಅಮರ ಕಥೆಯನ್ನು ಹೇಳಿ ಅಮರರನ್ನಾಗಿ ಮಾಡುವವರಾಗಿದ್ದಾರೆ. ತಿಳಿಯಿತೆ - ಎಷ್ಟೊಂದು ಮಹಾನರಾಗಿರುವಿರಿ ಮತ್ತು ಎಷ್ಟು ಜವಾಬ್ದಾರಿಯಿರುವ ಆತ್ಮರಾಗಿದ್ದೀರಿ! ಪೂರ್ವಜರಾಗಿದ್ದೀರಿ! ಹೇಗೆ ಪೂರ್ವಜರೋ ಹಾಗೆಯೇ ವಂಶಾವಳಿ ಆಗುತ್ತದೆ. ಸಾಧಾರಣರಲ್ಲ. ಪರಿವಾರದ ಜವಾಬ್ದಾರಿ ಅಥವಾ ಯಾವುದೇ ಸೇವಾಸ್ಥಾನದ ಜವಾಬ್ದಾರಿ - ಈ ಅಲ್ಪಕಾಲದ ಜವಾಬ್ದಾರರಲ್ಲ, ವಿಶ್ವದ ಆತ್ಮರ ಆಧಾರಮೂರ್ತಿ ಆಗಿದ್ದೀರಿ, ಉದ್ಧಾರಮೂರ್ತಿ ಆಗಿದ್ದೀರಿ. ಬೇಹದ್ದಿನ ಜವಾಬ್ದಾರಿಯಂತು ಪ್ರತಿಯೊಂದು ಬ್ರಾಹ್ಮಣ ಆತ್ಮನ ಮೇಲೂ ಇದೆ. ಒಂದು ವೇಳೆ ಬೇಹದ್ದಿನ ಜವಾಬ್ದಾರಿಯನ್ನು ನಿಭಾಯಿಸುವುದಿಲ್ಲ, ತಮ್ಮ ಲೌಕಿಕ ಪ್ರವೃತ್ತಿ ಅಥವಾ ಅಲೌಕಿಕ ಪ್ರವೃತ್ತಿಯಲ್ಲಿಯೇ ಕೆಲವೊಮ್ಮೆ ಹಾರುವ ಕಲೆ, ಕೆಲವೊಮ್ಮೆ ಏರುವ ಕಲೆ, ಕೆಲವೊಮ್ಮೆ ನಡೆಯುವ ಕಲೆ, ಕೆಲವೊಮ್ಮೆ ನಿಲ್ಲುವ ಕಲೆ, ಇದೇ ಕಲೆಯಲ್ಲಿಯೇ ಸಮಯವನ್ನು ಉಪಯೋಗಿಸುವವರು ಬ್ರಾಹ್ಮಣರಲ್ಲ, ಆದರೆ ಕ್ಷತ್ರೀಯ ಆತ್ಮರಾಗಿದ್ದಾರೆ. ಪುರುಷಾರ್ಥದ ಚಮತ್ಕಾರದಲ್ಲಿ ಇದನ್ನು ಮಾಡುತ್ತೇವೆ, ಹೀಗೆ ಮಾಡುತ್ತೇವೆ, ಮಾಡುತ್ತೇವೆ ಎಂಬ ಬಾಣವನ್ನು ಹೊಡೆಯುವ ಅಂದಾಜನ್ನೇ ಮಾಡುತ್ತಿರುತ್ತಾರೆ. ಮಾಡುತ್ತೇವೆ ಎನ್ನುವ ಅಂದಾಜು ಮಾಡುವವರು ಮತ್ತು ಮಾಡಿ ಬಿಡುವುದರಲ್ಲಿ ಅಂತರವಿದೆ. ಅವರು ಮಾಡುತ್ತೇವೆ ಎನ್ನುವುದರಲ್ಲಿಯೇ ಉಳಿದುಕೊಂಡು ಬಿಡುತ್ತಾರೆ. ಈಗ ಮಾಡುತ್ತೇವೆ, ಹೀಗೆ ಮಾಡುತ್ತೇವೆ - ಇದು ಗುರಿ ಸಾಧಿಸುವ ಅಂದಾಜಿರುತ್ತದೆ, ಅಂತಹವರಿಗೆ ಕ್ಷತ್ರೀಯ ಆತ್ಮರೆಂದು ಹೇಳಲಾಗುತ್ತದೆ. ಬ್ರಾಹ್ಮಣ ಆತ್ಮರು ಗುರಿಯನ್ನು ಸಾಧಿಸುವ ಅಂದಾಜನ್ನಿಡುವುದಿಲ್ಲ. ಸದಾ ಗುರಿಯಲ್ಲಿಯೇ ಸ್ಥಿತರಾಗಿರುತ್ತಾರೆ. ಸಂಪೂರ್ಣವಾದ ಗುರಿಯಂತು ಬುದ್ಧಿಯಲ್ಲಿದ್ದೇ ಇರುತ್ತದೆ. ಸೆಕೆಂಡಿನ ಸಂಕಲ್ಪದಲ್ಲಿ ವಿಜಯಿಯಾಗಿ ಬಿಡುತ್ತಾರೆ. ಬಾಪ್ದಾದಾ - ಬ್ರಾಹ್ಮಣ ಮಕ್ಕಳು ಮತ್ತು ಕ್ಷತ್ರೀಯ ಮಕ್ಕಳಿಬ್ಬರ ಆಟವನ್ನು ನೋಡುತ್ತಿರುತ್ತಾರೆ. ಬ್ರಾಹ್ಮಣರ ವಿಜಯದ ಆಟ ಮತ್ತು ಕ್ಷತ್ರೀಯರಿಗೆ ಸದಾ ಬಿಲ್ಲು-ಬಾಣವದ ಹೊರೆಯನ್ನು ಹೊತ್ತುಕೊಳ್ಳುವ ಆಟ. ಪ್ರತೀ ಸಮಯದಲ್ಲಿ ಪುರುಷಾರ್ಥದ ಪರಿಶ್ರಮದ ಬಾಣವಿದ್ದೇ ಇರುತ್ತದೆ. ಒಂದು ಸಮಸ್ಯೆಯ ಸಮಾಧಾನವನ್ನು ಮಾಡಿಯೇ ಮಾಡುತ್ತಾರೆ, ಮತ್ತೊಂದು ಸಮಸ್ಯೆಯು ನಿಂತು ಬಿಡುತ್ತದೆ. ಬ್ರಾಹ್ಮಣರು ಸಮಾಧಾನ ಸ್ವರೂಪನಾಗಿದ್ದಾರೆ. ಕ್ಷತ್ರೀಯರು ಏನು ಮಾಡಿ ಹೋದರು. ಇವರ ಕಥೆಯಿದೆಯಲ್ಲವೆ - ಇಲಿಯು ಹೋಗುತ್ತದೆಯೆಂದರೆ ಬೆಕ್ಕು ಬಂದು ಬಿಡುತ್ತದೆ. ಇಂದು ಧನದ ಸಮಸ್ಯೆ, ನಾಳೆ ಮನಸ್ಸಿನದು, ನಾಡಿದ್ದು ತನುವಿನ ಸಮಸ್ಯೆ ಹಾಗೂ ಸಂಬಂಧ ಸಂಪರ್ಕದವರ ಸಮಸ್ಯೆ. ಪರಿಶ್ರಮದಲ್ಲಿಯೇ ತೊಡಗಿರುತ್ತಾರೆ. ಸದಾ ಒಂದಲ್ಲ ಒಂದು ದೂರುಗಳು ಖಂಡಿತವಾಗಿಯೂ ಇರುತ್ತದೆ. ಭಲೇ ತನ್ನದಿರಬಹುದು, ಭಲೇ ಅನ್ಯರದಿರಬಹುದು, ಇದ್ದೇ ಇರುತ್ತದೆ. ಬಾಪ್ದಾದಾರವರು ಸಮಯ-ಪ್ರತೀ ಸಮಯದಲ್ಲಿ ಇಂತಹ ಒಂದಲ್ಲ ಒಂದು ಪರಿಶ್ರಮದಲ್ಲಿ ತೊಡಗಿರುವ ಮಕ್ಕಳನ್ನು ನೋಡುತ್ತಾ, ದಯಾಳು-ಕೃಪಾಳು ರೂಪದಿಂದ ನೋಡುತ್ತಾ ದಯೆಯನ್ನೂ ತೋರಿಸುತ್ತಾರೆ. ಸಂಗಮಯುಗ, ಬ್ರಾಹ್ಮಣ ಜೀವನ, ಹೃದಯ ರಾಮನ ಹೃದಯದಲ್ಲಿ ಆರಾಮ ಮಾಡುವ ಸಮಯವಾಗಿದೆ. ಹೃದಯದಲ್ಲಿ ಆರಾಮದಿಂದಿರಿ. ಬ್ರಹ್ಮಾ ಭೋಜನವನ್ನು ಸೇವಿಸಿರಿ. ಜ್ಞಾನಾಮೃತವನ್ನು ಕುಡಿಯಿರಿ. ಶಕ್ತಿಶಾಲಿ ಸೇವೆಯನ್ನು ಮಾಡಿರಿ ಮತ್ತು ಆರಾಮ ಮೋಜಿನಿಂದ ಹೃದಯ ಸಿಂಹಾಸನದಲ್ಲಿರಿ. ಬೇಸರವೇಕೆ ಆಗುತ್ತೀರಿ. ಹೇ ರಾಮ ಎಂದು ಹೇಳುವುದಿಲ್ಲ, ಹೇ ಬಾಬಾ ಅಥವಾ ಹೇ ದಾದಿ-ದೀದಿಯೆಂದು ಹೇಳುತ್ತೀರಲ್ಲವೆ. ಹೇ ಬಾಬಾ, ಹೇ ದಾದಿ-ದೀದಿ ಏನಾದರೂ ಹೇಳಿರಿ, ಏನಾದರೂ ಮಾಡಿರಿ..... ಇದು ಬೇಸರವಾಗುವುದಾಗಿದೆ. ಆರಾಮದಿಂದ ಇರುವ ಯುಗವಾಗಿದೆ. ಆತ್ಮಿಕ ಮೋಜು ಮಾಡಿರಿ. ಆತ್ಮಿಕ ಮೋಜಿನಲ್ಲಿ ಈ ಸೌಭಾಗ್ಯದ ದಿನಗಳನ್ನು ಕಳೆಯಿರಿ. ವಿನಾಶಿ ಮೋಜು ಮಾಡದಿರಿ. ಹಾಡಿರಿ, ನಲಿಯಿರಿ, ತಬ್ಬಿಬ್ಬಾಗಬೇಡಿ. ಪರಮಾತ್ಮ ಮೋಜಿನ ಸಮಯವನ್ನು ಈಗ ಉಪಯೋಗಿಸಲಿಲ್ಲವೆಂದರೆ ಯಾವಾಗ ಮೋಜನ್ನಾಚರಿಸುತ್ತೀರಿ! ಆತ್ಮಿಕ ಗೌರವದಲ್ಲಿ ಕುಳಿತುಕೊಳ್ಳಿರಿ. ಬೇಸರವೇಕೆ ಆಗುವಿರಿ? ತಂದೆಯವರಿಗೆ ಆಶ್ಚರ್ಯವೆನಿಸುತ್ತದೆ ಚಿಕ್ಕದಾದ ಇರುವೆಯು ಬುದ್ಧಿಯವರೆಗೂ ಹೊರಟು ಹೋಗುತ್ತದೆ. ಬುದ್ಧಿಯೋಗವನ್ನು ವಿಚಲಿತಗೊಳಿಸುತ್ತದೆ. ಹೇಗೆ ಸ್ಥೂಲ ಶರೀರದಲ್ಲಿಯೂ ಇರುವೆಯು ಕಚ್ಚುತ್ತದೆಯೆಂದರೆ ಶರೀರವು ಅಲುಗಾಡುತ್ತದೆ, ವಿಚಲಿತವಾಗುತ್ತದೆಯಲ್ಲವೆ. ಹಾಗೆಯೇ ಬುದ್ಧಿಯನ್ನು ವಿಚಲಿತಗೊಳಿಸಿ ಬಿಡುತ್ತದೆ. ಇರುವೆಯೇನಾದರೂ ಆನೆಯ ಕಿವಿಯಲ್ಲಿ ಹೋಗುತ್ತದೆಯೆಂದರೆ ಮೂರ್ಛಿತಗೊಳಿಸಿ ಬಿಡುತ್ತದೆ ಅಲ್ಲವೆ! ಹಾಗೆಯೇ ಬ್ರಾಹ್ಮಣ ಆತ್ಮನು ಮೂರ್ಛಿತವಾಗಿ ಕ್ಷತ್ರಿಯನಾಗಿ ಬಿಡುತ್ತಾನೆ. ಯಾವ ಆಟವನ್ನು ಆಡುವಿರೆಂದು ತಿಳಿಯಿತೆ! ಕ್ಷತ್ರಿಯರಾಗಬಾರದು. ನಂತರ ರಾಜಧಾನಿಯೂ ತ್ರೇತಾಯುಗಿಯದು ಸಿಗುತ್ತದೆ. ಸತ್ಯಯುಗಿ ದೇವತೆಗಳು ತಿಂದು-ಕುಡಿದ ನಂತರ ಏನು ಉಳಿದಿರುತ್ತದೆ, ಅದು ಕ್ಷತ್ರಿಯರಿಗೆ ತ್ರೇತಾದಲ್ಲಿ ಸಿಗುತ್ತದೆ. ಕರ್ಮದ ಹೊಲದ ಮೊದಲ ಹಕ್ಕು ಬ್ರಾಹ್ಮಣರಿಂದ ದೇವತೆಗಳಾಗುವವರಿಗೆ ಸಿಗುತ್ತದೆ. ಮತ್ತು ಇನ್ನೊಂದು ಭಾಗ ಕ್ಷತ್ರಿಯರಿಗೆ ಸಿಗುತ್ತದೆ. ಫಲದ ಮೊದಲ ಭಾಗದ ರುಚಿ ಮತ್ತು ಇನ್ನೊಂದು ಭಾಗದಲ್ಲಿ ರುಚಿಯೇನಾಗಿ ಬಿಡುತ್ತದೆ - ಇದಂತು ಗೊತ್ತಿದೆಯಲ್ಲವೆ! ಒಳ್ಳೆಯದು ಮಹಾರಾಷ್ಟ್ರ ಮತ್ತು ಯು.ಪಿ. ಜೋನಿನವರಿದ್ದಾರೆ. ಮಹಾರಾಷ್ಟ್ರದ ವಿಶೇಷತೆಯಿದೆ. ಹೇಗೆ ಮಹಾರಾಷ್ಟ್ರ ಹೆಸರಿದೆ ಹಾಗೆಯೇ ಮಹಾನ್ ಆತ್ಮರ ಸುಂದರವಾದ ಹೂಗುಚ್ಛವನ್ನು ಬಾಪ್ದಾದಾರವರಿಗೆ ಸಲ್ಲಿಸುವರು. ಮಹಾರಾಷ್ಟ್ರದ ರಾಜಧಾನಿ ಸುಂದರ ಮತ್ತು ಸಂಪನ್ನವಾಗಿದೆ. ಅಂದಮೇಲೆ ಮಹಾರಾಷ್ಟ್ರದವರು ಇಂತಹ ಸಂಪನ್ನ ಹೆಸರುವಾಸಿಯಾಗಿರುವ ಆತ್ಮರನ್ನು ಸಂಪರ್ಕದಲ್ಲಿ ಕರೆ ತರಬೇಕಾಗಿದೆ. ಆದ್ದರಿಂದ ಹೇಳಿದೆವು ಮಹಾನ್ ಆತ್ಮರನ್ನು ತಯಾರು ಮಾಡಿ ಸುಂದರವಾದ ಹೂಗುಚ್ಛವನ್ನು ತಂದೆಯವರ ಸನ್ಮುಖದಲ್ಲಿ ತರಬೇಕಾಗಿದೆ. ಈಗ ಅಂತ್ಯದ ಸಮಯದಲ್ಲಿ ಈ ಸಂಪತ್ತಿರುವವರ ಪಾತ್ರವೂ ಇದೆ. ಸಂಬಂಧದಲ್ಲಿಲ್ಲ ಆದರೆ ಸಂಪರ್ಕದವರ ಪಾತ್ರವಿದೆ. ತಿಳಿಯಿತೆ! ಯು.ಪಿ.ಯಲ್ಲಿ ದೇಶ-ವಿದೇಶದಲ್ಲಿ ಪ್ರಸಿದ್ಧವಾದ ಜಗತ್ತಿನ ಅದ್ಭುತವಾದ ``ತಾಜ್ಮಹಲ್'' ಇದೆಯಲ್ಲವೆ! ಹೇಗೆ ಯು.ಪಿ.ಯಲ್ಲಿ ಜಗತ್ತಿನ ಅದ್ಭುತವಾದ ವಸ್ತುವಿದೆ, ಹಾಗೆಯೇ ಯು.ಪಿ.ಯವರು ಸೇವೆಯಲ್ಲಿ ಅದ್ಭುತವಾದ ಪ್ರತ್ಯಕ್ಷ ಫಲವನ್ನು ತೋರಿಸುವವರಾಗಿದ್ದಾರೆ. ಯಾರು ದೇಶ-ವಿದೇಶದಲ್ಲಿ, ಬ್ರಾಹ್ಮಣ ಜಗತ್ತಿನಲ್ಲಿ ಪ್ರಸಿದ್ಧವಾಗಿದ್ದೀರಿ - ಇದನ್ನಂತು ಬಹಳ ಅದ್ಭುತವಾದ ಕಾರ್ಯವನ್ನು ಮಾಡಿದಿರಿ, ಜಗತ್ತಿನ ಅದ್ಭುತವಾಗಿದ್ದೀರಿ. ಅಂತಹದ್ದೇ ಅದ್ಭುತವಾದ ಕಾರ್ಯವನ್ನು ಮಾಡಬೇಕಾಗಿದೆ. ಗೀತಾ ಪಾಠ ಶಾಲೆಗಳಿವೆ, ಸೇವಾ ಕೇಂದ್ರಗಳಿವೆ, ಇದು ಅದ್ಭುತವಲ್ಲ. ಯಾವುದನ್ನು ಈಗಿನವರೆಗೂ ಯಾರೂ ಮಾಡಿಲ್ಲವೋ, ಅದನ್ನು ಮಾಡಿ ತೋರಿಸಿರಿ, ಆಗ ಹೇಳುತ್ತೇವೆ- ಅದ್ಭುತ. ತಿಳಿಯಿತೆ - ವಿದೇಶಿಗಳೂ ಸಹ ಈಗ ಪ್ರತೀ ಸೀಜನ್ನಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ವಿದೇಶದವರು ವಿದೇಶದ ಸಾಧನಗಳ ಮೂಲಕ ವಿಶ್ವದಲ್ಲಿ ಇಬ್ಬರೂ ತಂದೆಯರನ್ನು ಪ್ರತ್ಯಕ್ಷ ಮಾಡುವರು. ನಾಜಿರ್ ಎಂದರೆ ಈ ದೃಷ್ಟಿಯಿಂದ ನೋಡಲು ಸಾಧ್ಯ. ಅಂದಮೇಲೆ ಇಂತಹ ತಂದೆಯನ್ನು ವಿಶ್ವದ ಮುಂದೆ ಪ್ರತ್ಯಕ್ಷ ಮಾಡುವರು. ವಿದೇಶಿಗಳು ಏನು ಮಾಡಬೇಕೆಂದು ತಿಳಿಯಿತೆ ಒಳ್ಳೆಯದು. ನಾಳೆಯಂತು ದಿಬ್ಬಣವೇ ಹೋಗುವುದಿದೆ. ಕೊನೆಗೆ ಆ ದಿನವೂ ಬರುತ್ತದೆ, ಆಗ ಹೆಲಿಕ್ಯಾಫ್ಟರ್ ಸಹ ಇಳಿಯುತ್ತದೆ. ಎಲ್ಲಾ ಸಾಧನಗಳನ್ನಂತು ತಮಗಾಗಿಯೇ ಆಗುತ್ತಿದೆ. ಹೇಗೆ ಸತ್ಯಯುಗದಲ್ಲಿ ವಿಮಾನಗಳು ಸಾಲಾಗಿ ನಿಂತಿರುತ್ತದೆ. ಈಗ ಇಲ್ಲಿ ಜೀಪ್ ಮತ್ತು ಬಸ್ಸುಗಳ ಸಾಲು ನಿಂತಿರುತ್ತದೆ. ಕೊನೆಗೆ ವಿಮಾನಗಳು ಸಾಲಾಗಿ ನಿಂತಿರುತ್ತದೆ. ಎಲ್ಲರೂ ಭಯ ಪಟ್ಟು ಓಡುತ್ತಾರೆ ಮತ್ತು ಎಲ್ಲವನ್ನೂ ತಮಗೆ ಕೊಟ್ಟು ಹೋಗುತ್ತಾರೆ. ಅವರು ಭಯ ಪಡುತ್ತಾರೆ ಮತ್ತು ತಾವು ಹಾರುತ್ತೀರಿ. ತಮಗೆ ಸಾಯುವ ಭಯವಂತು ಇಲ್ಲ. ಮುಂಚೆಯೇ ಸತ್ತು ಹೋಗಿದ್ದೀರಿ. ಪಾಕಿಸ್ತಾನದಲ್ಲಿ ಉದಾಹರಣೆಯನ್ನು ನೋಡಿದ್ದೀರಲ್ಲವೆ ಎಲ್ಲರೂ ಬೀಗದ ಕೈ ಕೊಟ್ಟು ಹೊರಟು ಹೋದರು. ಅಂದಮೇಲೆ ಎಲ್ಲಾ ಬೀಗದ ಕೈ ತಮಗೆ ಸಿಗುತ್ತದೆ. ಕೇವಲ ಸಂಭಾಲನೆ ಮಾಡಬೇಕು. ಒಳ್ಳೆಯದು.

ಸದಾ ಬ್ರಾಹ್ಮಣಜೀವನದ ಸರ್ವವಿಶೇಷತೆಗಳನ್ನು ಜೀವನದಲ್ಲಿ ತರುವ, ಸದಾ ಹೃದಯರಾಮ ತಂದೆಯ ಹೃದಯಸಿಂಹಾಸನದಲ್ಲಿ ಆತ್ಮಿಕಮೋಜು, ಆತ್ಮಿಕವಿಶ್ರಾಂತಿ ಮಾಡುವ, ಸ್ಥೂಲ ಆರಾಮವನ್ನು ಮಾಡಬಾರದು, ಸದಾ ಸಂಗಮಯುಗದ ಶ್ರೇಷ್ಠಗೌರವದಲ್ಲಿ ಇರುವಂತಹ, ಪರಿಶ್ರಮದಿಂದ ಪ್ರೀತಿಯ ಜೀವನದಲ್ಲಿ ಲವಲೀನರಾಗಿರುವ, ಶ್ರೇಷ್ಠ ಬ್ರಾಹ್ಮಣಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:
ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ವ್ಯರ್ಥವನ್ನು ಸಮಾಪ್ತಿಗೊಳಿಸುವಂತಹ ಪವಿತ್ರ ಹಂಸ ಭವ.

ಪವಿತ್ರ ಹಂಸಗಳ ಎರಡು ವಿಶೇಷತೆಗಳಿವೆ - ಒಂದು ಜ್ಞಾನ ರತ್ನಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಇನ್ನೊಂದು - ನಿರ್ಣಯ ಶಕ್ತಿಯ ಮೂಲಕ ಹಾಲು ಮತ್ತು ನೀರನ್ನು ಬೇರೆ ಮಾಡುವುದು. ಹಾಲು ಮತ್ತು ನೀರಿನ ಅರ್ಥವಿದೆ - ಸಮರ್ಥ ಮತ್ತು ವ್ಯರ್ಥದ ನಿರ್ಣಯ. ವ್ಯರ್ಥವನ್ನು ನೀರಿನ ಸಮಾನ ಎಂದು ಹೇಳಲಾಗುತ್ತದೆ ಮತ್ತು ಸಮರ್ಥವನ್ನು ಹಾಲಿನ ಸಮಾನ. ಅಂದಮೇಲೆ ವ್ಯರ್ಥವನ್ನು ಸಮಾಪ್ತಿ ಮಾಡುವುದು ಅರ್ಥಾತ್ ಪವಿತ್ರ ಹಂಸ ಆಗುವುದು. ಪ್ರತೀ ಸಮಯದಲ್ಲಿ ಬುದ್ಧಿಯಲ್ಲಿ ಜ್ಞಾನ ರತ್ನಗಳ ವಿಚಾರವೇ ನಡೆಯುತ್ತಿರಲಿ, ಮನನ ನಡೆಯುತ್ತಿರಲಿ, ಆಗಲೇ ರತ್ನಗಳಿಂದ ಸಂಪನ್ನರಾಗಿ ಬಿಡುತ್ತೀರಿ.

ಸ್ಲೋಗನ್:
ಸದಾ ತಮ್ಮ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾಗಿದ್ದು ವಿರೋಧವನ್ನು ಸಮಾಪ್ತಿ ಮಾಡುವವರೇ ವಿಜಯಿ ಆತ್ಮರಾಗಿದ್ದಾರೆ.