10.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಸದಾ ಇದೇ ನಶೆಯಲ್ಲಿರಿ ಜ್ಞಾನ ಸಾಗರ ತಂದೆಯ ಜ್ಞಾನದ ಮಳೆಯು ನಮ್ಮ ಮೇಲೆ ಬೀಳುತ್ತಿದೆ, ಇದರಿಂದ ನಾವು ಪಾವನರಾಗಿ ನಮ್ಮ ಮಹೋನ್ನತವಾದ ಮನೆಗೆ ಹೋಗುತ್ತೇವೆ

ಪ್ರಶ್ನೆ:
ಯಾವ ಆಧಾರದ ಮೇಲೆ ನೀವು ಮಕ್ಕಳ ನಿಶ್ಚಯವು ಬಹಳಷ್ಟು ಪಕ್ಕಾ ಆಗುತ್ತಿರುತ್ತದೆ?

ಉತ್ತರ:
ಪ್ರಪಂಚದಲ್ಲಿ ಎಷ್ಟು ಏರುಪೇರುಗಳು ಹೆಚ್ಚಾಗುತ್ತದೆ ಹಾಗೂ ನಿಮ್ಮ ದೈವೀ ವೃಕ್ಷವು ವೃದ್ಧಿಯಾಗುತ್ತದೆಯೋ ಅಷ್ಟು ಹಳೆಯ ಪ್ರಪಂಚದಿಂದ ನಿಮ್ಮ ಮನಸ್ಸು ದೂರವಾಗುತ್ತಾ ಹೋಗುತ್ತದೆ ಮತ್ತು ನಿಮ್ಮ ನಿಶ್ಚಯ ಪಕ್ಕಾ ಆಗುತ್ತಿರುತ್ತದೆ. ವಿಹಂಗ ಮಾರ್ಗದ ಸೇವೆಯಾಗುತ್ತಾ ಇರುತ್ತದೆ, ಧಾರಣೆಯ ಮೇಲೆ ಗಮನವನ್ನಿಡುತ್ತಾ ಹೋದಂತೆ ಬುದ್ಧಿಶಕ್ತಿ ಹೆಚ್ಚುತ್ತಿರುತ್ತದೆ. ಅಪಾರ ಖುಷಿಯಲ್ಲಿ ಇರುತ್ತೀರಿ.

ಓಂ ಶಾಂತಿ.
ಪ್ರತಿನಿತ್ಯ ಮಕ್ಕಳಿಗೆ ಶಿವಬಾಬಾರವರನ್ನು ನೆನಪು ಮಾಡಿ ಎಂದು ಹೇಳುವ ಆವಶ್ಯಕತೆಯಿಲ್ಲ ಏಕೆಂದರೆ ನಾವು ಶಿವಬಾಬಾರವರ ಸಂತಾನರಾಗಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ, ಹೇಳುವ ಆವಶ್ಯಕತೆಯಿರುವುದಿಲ್ಲ. ಶಿವ ತಂದೆಯು ನಮಗೆ ಇವರ(ಬ್ರಹ್ಮಾ) ಮುಖಾಂತರ ಓದಿಸುತ್ತಾರೆ, ಇದು ಜ್ಞಾನ ಸಾಗರನ ಜ್ಞಾನದ ಸುರಿಮಳೆಯಾಗಿದೆ. ಜ್ಞಾನ ಸಾಗರ ತಂದೆಯು ಜ್ಞಾನದ ಮಳೆಯನ್ನು ನಮ್ಮ ಮೇಲೆ ಸುರಿಸುತ್ತಿದ್ದಾರೆ ಎನ್ನುವುದು ಮಕ್ಕಳ ಬುದ್ಧಿಯಲ್ಲಿದೆ. ಯಾರು ಬಂದು ಬ್ರಾಹ್ಮಣರಾಗುತ್ತಾರೆ ಅವರ ಮೇಲೆಯೇ ಜ್ಞಾನದ ಮಳೆ ಸುರಿಸುತ್ತೇನೆ, ನಾನು ಮಕ್ಕಳ ಸಮ್ಮುಖದಲ್ಲಿ ಇರುತ್ತೇನೆ. ಈಗ ಮಕ್ಕಳೂ ಸಹ ಸಮ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ಗಳಿಗೆ-ಗಳಿಗೆಯೂ ಸಮ್ಮುಖದಲ್ಲಿರುವ ನಶೆಯನ್ನೇರಿಸುತ್ತಾರೆ ನಂತರ ಮಾಯೆಯು ನಶೆಯನ್ನು ಇಳಿಸಿ ಬಿಡುತ್ತದೆ. ಕೆಲವರ ನಶೆಯನ್ನು ಪೂರ್ತಿ ಇಳಿಸುತ್ತದೆ, ಇನ್ನೂ ಕೆಲವರದು ಕಡಿಮೆ. ಮಕ್ಕಳು ತಿಳಿದುಕೊಂಡಿದ್ದೇವೆ - ನಾವು ಸಾಗರನ ಹತ್ತಿರ ರಿಫ್ರೆಷ್ ಆಗಲು ಅರ್ಥಾತ್ ಮುರಳಿಯ ವಿಷಯವನ್ನು ಧಾರಣೆ ಮಾಡಿ ಸಲಹೆಯನ್ನು ತೆಗೆದುಕೊಳ್ಳಲು ಬಂದಿದ್ದೇವೆ. ನಾವು ಅವರ ಸಮ್ಮುಖದಲ್ಲಿ ಕುಳಿತಿದ್ದೇವೆ. ಈ ಜ್ಞಾನ ಸಾಗರನ ಮಳೆಯು ಒಂದೇಬಾರಿ ಬೀಳುತ್ತದೆ. ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ತಂದೆಯು ಬರುತ್ತಾರೆ. ಮಹಿಮೆಯನ್ನೂ ಸಹ ಈ ರೀತಿ ಹೇಳುತ್ತಾರೆ - ಹೇ! ಪತಿತ ಪಾವನ..... ಸತ್ಯಯುಗದಲ್ಲಂತೂ ಈ ರೀತಿ ಕರೆಯುವುದಿಲ್ಲ ಏಕೆಂದರೆ ಅಲ್ಲಂತೂ ಜ್ಞಾನ ಸಾಗರನ ಜ್ಞಾನದ ಮಳೆಯಿಂದ ಪಾವನರಾಗಿರುತ್ತಾರೆ. ಜ್ಞಾನದ ಜೊತೆಗೆ ಮತ್ತೆ ವೈರಾಗ್ಯವೂ ಇದೆ. ಯಾವ ವಸ್ತುವಿನ ವೈರಾಗ್ಯ? ಹಳೆಯ ಪತಿತ ಪ್ರಪಂಚದಿಂದ ಬುದ್ಧಿಯಲ್ಲಿ ವೈರಾಗ್ಯ ಬಂದು ಬಿಡುತ್ತದೆ. ಈಗ ನಾವು ಹೊಸ ಪ್ರಪಂಚದಲ್ಲಿ ಹೋಗುತ್ತೇವೆಂದು ನೀವು ಮಕ್ಕಳು ಬುದ್ಧಿಯಿಂದ ತಿಳಿದುಕೊಂಡಿದ್ದೀರಿ. ಹಳೆಯ ಪ್ರಪಂಚವನ್ನು ಬಿಡಬೇಕಾಗಿದೆ, ಇದಕ್ಕೆ ವೈರಾಗ್ಯ ಎಂಬ ಅಕ್ಷರವನ್ನು ಹೇಳಿ ಬಿಟ್ಟಿದ್ದಾರೆ. ಹೇಗೆ ತಂದೆಯು ಹೊಸ ಮನೆಯನ್ನು ಕಟ್ಟಿಸುತ್ತಾರೆಂದರೆ ಬುದ್ಧಿಯೋಗವು ಹಳೆಯದರಿಂದ ದೂರವಾಗಿ ಹೊಸ ಮನೆಯೊಂದಿಗೆ ಜೋಡಿಸಲ್ಪಡುತ್ತದೆ. ಹಳೆಯದು ಸಮಾಪ್ತಿಯಾದರೆ ನಾವು ಹೊಸದರಲ್ಲಿ ಹೋಗುತ್ತೇವೆ ಎಂದು ತಿಳಿಯುತ್ತಾರೆ. ನೀವು ಮಕ್ಕಳೂ ಸಹ ತಮ್ಮೊಳಗೆ ಹೇಳಿಕೊಳ್ಳುತ್ತೀರಿ - ಬೇಗ, ಬೇಗ ಸ್ವರ್ಗದ ಸ್ಥಾಪನೆ ಆಗಲಿ ಆಗ ನಾವು ನಮ್ಮ ಮನೆಗೆ ಹೋಗುತ್ತೇವೆ, ಸುಖಿಯಾಗಿ ಇರುತ್ತೇವೆ, ಮೊಟ್ಟ ಮೊದಲು ನಾವು ಪ್ರಿಯತಮನ ಜೊತೆ ಮನೆಗೆ ಹೋಗುತ್ತೇವೆ. ಇದು ಅತ್ತೆ ಮನೆಯಾಗಿದೆ, ಇದು ಚಿಕ್ಕದು, ಅದು ದೊಡ್ಡ ತಂದೆಯ ದೊಡ್ಡ ಮನೆಯಾಗಿದೆ. ಅದು ಸರ್ವ ಆತ್ಮಗಳ ಮನೆಯಾಗಿದೆ ಎನ್ನುವುದು ನೀವು ಮಕ್ಕಳ ಬುದ್ಧಿಯಲ್ಲಿದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಈ ಮೊದಲಂತು ಅಂಧಕಾರವಿತ್ತು, ಈಗ ಪ್ರಕಾಶತೆಯಿದೆ. ಎಲ್ಲರೂ ಜ್ಞಾನವನ್ನು ತಿಳಿದುಕೊಳ್ಳುವುದಿಲ್ಲ ಆದರೆ ಅವಶ್ಯವಾಗಿ ಎಲ್ಲರೂ ಮನೆಗೆ ಹೋಗುತ್ತಾರೆ ಎಂಬುದನ್ನೂ ಸಹ ತಿಳಿದುಕೊಂಡಿದ್ದೀರಿ. ಈಗ ನಾವು ನಮ್ಮ ಮನೆಗೆ ಹೋಗುತ್ತಿದ್ದೇವೆ ಎನ್ನುವುದು ನೀವು ಮಕ್ಕಳ ಬುದ್ಧಿಯಲ್ಲಿದೆ. ಶ್ರೀಮತದ ಆಧಾರದಿಂದ ಯೋಗ್ಯರಾಗಬೇಕು, ಸ್ವರ್ಗಕ್ಕೆ ಯೋಗ್ಯರಾಗಬೇಕಾಗಿದೆ. ಒಂದನೆಯದಾಗಿ ನನ್ನೊಬ್ಬನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗುತ್ತದೆ. ಎರಡನೆಯದು ಚಕ್ರವನ್ನು ತಿರುಗಿಸಿ. ಸೃಷ್ಟಿಚಕ್ರವು ಹೇಗೆ ತಿರುಗುತ್ತದೆ, ಇದರ ಆಯಸ್ಸು ಎಷ್ಟಿದೆ, ಯಾರು ಯಾವಾಗ ಬರುತ್ತಾರೆ, ಇದೆಲ್ಲವನ್ನೂ ಸಹ ತಂದೆಯು ಕುಳಿತು ತಿಳಿಸುತ್ತಾರೆ. ಮನುಷ್ಯರು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮನುಷ್ಯರು ಹೇಳುತ್ತಾರೆ ಅಂದರೆ ಎಲ್ಲರೂ ತೆಗೆದುಕೊಳ್ಳುತ್ತಾರೆಯೇ? ಈಗ ನೀವು ಅರಿತುಕೊಂಡಿದ್ದೀರಿ - 84 ಜನ್ಮಗಳಾಗುತ್ತದೆ, ಅದರ ಲೆಕ್ಕವೂ ಇದೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ ಅಲ್ಲವೆ. ಪ್ರಾರಂಭದಿಂದಲೂ ಪುನರ್ಜನ್ಮದಲ್ಲಿ ಬರುತ್ತಾ ಇರುತ್ತಾರೆ. ಅಂತ್ಯದಲ್ಲಿ ಕೆಲವರದು ಒಂದೆರಡು ಜನ್ಮಗಳೂ ಇರುತ್ತದೆ. ಮೊಟ್ಟ ಮೊದಲು ಯಾರು ಬರುತ್ತಾರೆಯೋ ಅವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ, ಮನುಷ್ಯರು ಭಲೆ ಇವರ ಮಂದಿರಗಳಿಗೆ ಹೋಗುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಕೇವಲ ಭಗವಾನ್-ಭಗವತಿಯ ದರ್ಶನ ಮಾಡಲು ಹೋಗುತ್ತೇವೆಂದು ಹೇಳುತ್ತಾರಷ್ಟೆ. ಇವರ ಈ ರಾಜಧಾನಿಯು ಹೇಗೆ ಸ್ಥಾಪನೆಯಾಯಿತು ಎನ್ನುವುದನ್ನು ತಿಳಿದುಕೊಂಡಿಲ್ಲ. ಯಾರ ಪೂಜೆಯನ್ನು ಮಾಡುತ್ತಾರೆಯೋ ಅವರ ಕರ್ತವ್ಯವನ್ನೇ ಅರಿತಿಲ್ಲವೆಂದರೆ ಆ ಪೂಜೆಯು ಯಾವ ಫಲಕ್ಕಾಗಿ ಮಾಡುತ್ತಿದ್ದಾರೆ! ಆದ್ದರಿಂದ ಇದಕ್ಕೆ ಅಂಧಶ್ರದ್ದೆ ಎಂದು ಹೇಳಲಾಗುತ್ತದೆ. ಜಪ-ತಪ, ತೀರ್ಥ ಮುಂತಾದವುಗಳನ್ನು ಮಾಡುತ್ತಾರೆ, ಇದರಿಂದ ಭಗವಂತನನ್ನು ಪಡೆಯುವ ಮಾರ್ಗವು ಸಿಗುತ್ತದೆ ಎಂದು ತಿಳಿಯುತ್ತಾರೆ ಆದರೆ ಇದರಿಂದ ಯಾರಿಗೂ ಭಗವಂತನು ಸಿಗಲು ಸಾಧ್ಯವಿಲ್ಲ. ತಿಳಿದುಕೊಳ್ಳಿ - ಇಲ್ಲಿಯೂ ಸಹ ಕೆಲ-ಕೆಲವರು ಬರುತ್ತಾರೆ, ಜಗದಂಬೆಯ ಮಂದಿರಗಳಲ್ಲಿಯೂ ಸಹ ದರ್ಶನ ಮಾಡಲು ಹೋಗುತ್ತಾರೆ ಎಂದಾಗ ಇವರ ಬುದ್ಧಿಯಲ್ಲಿ ಏನೂ ಕುಳಿತಿಲ್ಲವೆಂದು ತಂದೆಯು ತಿಳಿಯುತ್ತಾರೆ. ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣ ಆಗುತ್ತಿದೆಯಲ್ಲವೆ. ಜಗದಂಬೆಯ ಪಾತ್ರವು ಆಕ್ಯೂರೇಟ್ ಆಗಿ ನಡೆಯುತ್ತಿದೆ, ಅವರ ಪಾತ್ರವು ಅವಶ್ಯವಾಗಿ ಶ್ರೇಷ್ಠವಾಗಿದೆ. ಮೊದಲು ಲಕ್ಷ್ಮಿ ನಂತರ ನಂತರ ನಾರಾಯಣ. ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಲೆಕ್ಕಾಚಾರವು ಇಲ್ಲಿಂದಲೇ ಸಮಾಪ್ತಿಯಾಗುತ್ತದೆ. ಕರ್ಮಭೋಗವನ್ನು ಅನುಭವಿಸಿ ಮುಕ್ತರಾಗಬೇಕಾಗಿದೆ ಮತ್ತು ತಂದೆಯ ನೆನಪಿನಲ್ಲಿರಬೇಕಾಗಿದೆ. ವಾಸ್ತವದಲ್ಲಿ ಮಕ್ಕಳು ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ದೇಹಾಧಾರಿಗಳನ್ನು ನೆನಪು ಮಾಡುತ್ತೀರೆಂದರೆ ಸಮಯವು ವ್ಯರ್ಥವಾಗಿ ಬಿಡುತ್ತದೆ. ನಿರಂತರವಾಗಿ ನೆನಪು ಮಾಡಲು ಸಾಧ್ಯವಿಲ್ಲ. ನಿರಂತರ ನೆನಪು ಮಾಡುವಂತಹ ಯಾವುದೇ ವಸ್ತುವಿಲ್ಲ. ಸ್ತ್ರೀ ಪತಿಯನ್ನೂ ಸಹ ನಿರಂತರ ನೆನಪು ಮಾಡಲು ಸಾಧ್ಯವಿಲ್ಲ. ಅವಶ್ಯವಾಗಿ ಭೋಜನವನ್ನು ತಯಾರು ಮಾಡುತ್ತಾರೆ, ಮಕ್ಕಳ ಸಂಭಾಲನೆ ಮಾಡುತ್ತಾರೆಂದರೆ ಪತಿಯ ನೆನಪು ಬರುತ್ತದೆಯೇ! ಇಲ್ಲಂತೂ ನೀವು ನಿರಂತರ ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ ಅಂದರೆ ಅಂತ್ಯದಲ್ಲಿ ಒಬ್ಬ ತಂದೆಯ ನೆನಪೇ ಇರುವಂತಹ ಸ್ಥಿತಿಯಿರಬೇಕು, ಇದು ಅತಿ ದೊಡ್ಡ ಪರೀಕ್ಷೆಯಾಗಿದೆ. 8 ರತ್ನಗಳ ಮಹಿಮೆಯು ಬಹಳ ಇದೆ. ಯಾರಿಗಾದರೂ ಗ್ರಹಚಾರವು ಕುಳಿತುಕೊಂಡರೆ ಅಷ್ಟರತ್ನಗಳ ಉಂಗುರವನ್ನು ಹಾಕಿಕೊಳ್ಳುತ್ತಾರೆ. ಅಂತಿಮ ಸಮಯದಲ್ಲಿ ಒಬ್ಬ ತಂದೆಯ ನೆನಪೇ ಇರಲಿ, ಬುದ್ಧಿಯ ಲೈನ್ ಸಂಪೂರ್ಣ ಸ್ಪಷ್ಟವಾಗಿರಲಿ ಮತ್ತು ಯಾರ ನೆನಪೂ ಬರಬಾರದು ಆಗ ಮಾಲೆಯ ಮಣಿಯಾಗಬಹುದು. ನವರತ್ನಗಳ ಮಹಿಮೆಯೂ ಸಹ ಇದೆ ಆದ್ದರಿಂದ ಈಗ ನಿರಂತರ ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ಈಗಂತೂ ಕೆಲವರು ಎರಡು-ಮೂರು ಗಂಟೆಗಳು ಪರಿಶ್ರಮ ಪಟ್ಟು ನೆನಪು ಮಾಡುತ್ತಾರೆ. ಪ್ರಪಂಚದಲ್ಲಿ ಏರು-ಪೇರುಗಳು ಎಷ್ಟು ಹೆಚ್ಚಾಗುತ್ತಾ ಹೋಗುತ್ತದೆಯೋ ಅಷ್ಟು ನಿಮಗೆ ನಿಶ್ಚಯವಾಗುತ್ತಾ ಹೋಗುವುದು, ಹಳೆಯ ಪ್ರಪಂಚದಿಂದ ಮನಸ್ಸು ದೂರವಾಗುವುದು. ಸಾಯುವುದಂತೂ ಬಹಳಷ್ಟು ಮಂದಿ ಸಾಯುತ್ತಾರೆ. ಬುದ್ಧಿಯೂ ಸಹ ಹೇಳುತ್ತದೆ - ಮಾಯೆಯು ತುಂಬಾ ಹಳೆಯ ಶತ್ರುವಾಗಿದೆ. ಶತ್ರು(ಮಾಯೆ)ವಿಲ್ಲದಂತಹ ಸ್ಥಳವೇ ಇಲ್ಲ.

ನೀವು ಮಕ್ಕಳು ಈಗ ಮಲೇಚ್ಚರಿಂದ (ಕೊಳಕರು) ಸ್ವಚ್ಚ ಆಗುತ್ತಿದ್ದೀರಿ. ನಾವು ಮಲೇಚ್ಚರ ಕೈಯಿಂದ ಭೋಜನವನ್ನು ಸ್ವೀಕಾರ ಮಾಡಬಾರದು ಎನ್ನುವ ಜ್ಞಾನವು ನಿಮಗಿದೆ. ಗಾಯನವೂ ಮಾಡಲಾಗಿದೆ- ಅನ್ನದಂತೆ ಮನ ಎಂದು. ಯಾರು ಕೆಟ್ಟಪದಾರ್ಥವನ್ನು ಖರೀದಿ ಮಾಡುತ್ತಾರೆ, ಯಾರು ತಯಾರಿಸುತ್ತಾರೆ, ಯಾರು ತಿನ್ನುತ್ತಾರೋ ಅವರೆಲ್ಲರ ಮೇಲೆ ಪಾಪವಾಗುತ್ತದೆ. ತಂದೆಯು ಎಲ್ಲಾ ಮಾತುಗಳನ್ನು ಚೆನ್ನಾಗಿ ತಿಳಿಸುತ್ತಾರೆ. ನೀವು ಮಕ್ಕಳು ಇಲ್ಲಿಂದ ರಿಫ್ರೆಷ್ ಆಗಿಹೋಗುತ್ತೀರಿ. ಇಡೀ ದಿನ ಬುದ್ಧಿಯಲ್ಲಿ ಸೃಷ್ಟಿಚಕ್ರವು ತಿರುಗುತ್ತಿರಲಿ ಮತ್ತು ತಮ್ಮ ಮನೆಯ ನೆನಪಿರಲಿ. ಇಲ್ಲಿಂದ ನೀವು ತಮ್ಮ ಲೌಕಿಕ ಮನೆಗೆ ಹೋಗುತ್ತೀರೆಂದರೆ ಸ್ಥಿತಿಯ ವ್ಯತ್ಯಾಸವಾಗುತ್ತದೆ ಏಕೆಂದರೆ ಸಂಗವೇ ಅಂತಹದ್ದಿರುತ್ತದೆ. ಇಲ್ಲಿ ಕುಳಿತಿದ್ದರೂ ಸಹ ಕೆಲ-ಕೆಲವರು ಬುದ್ಧಿಯೋಗವು ಹೊರಗಡೆ ಹೋಗಿ ಬಿಡುತ್ತದೆ ಆದ್ದರಿಂದ ಸಂಪೂರ್ಣ ಧಾರಣೆ ಮಾಡಲಾಗುವುದಿಲ್ಲ. ನೀವು ಆತ್ಮಗಳಿಗೆ ಬೇಹದ್ದಿನ ತಂದೆಯು ಕುಳಿತು ತಿಳಿಸುತ್ತಾರೆ- ನೀವು ಆತ್ಮಗಳಾಗಿದ್ದೀರಿ, ಈ ಶರೀರದ ಮುಖಾಂತರ ಕಾರ್ಯ ಮಾಡುತ್ತಿದ್ದೀರಿ. ನಾವು ತಂದೆಯಿಂದ ಶ್ರೀಮತವನ್ನು ತೆಗೆದುಕೊಂಡು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ನೀವು ತಿಳಿದಿದ್ದೀರಿ ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಾಗಬೇಕು! ಗಾಯನವೂ ಇದೆ- ಅತೀಂದ್ರಿಯ ಸುಖವನ್ನು ಗೋಪಿವಲ್ಲಭನ ಮಕ್ಕಳೊಂದಿಗೆ ಕೇಳಿ. ನಿಮ್ಮ ಈ ಸ್ಥಿತಿಯು ಎಷ್ಟು ಹೆಚ್ಚಾಗುವುದೋ ಅಷ್ಟು ಖುಷಿಯ ನಶೆಯೂ ಸಹ ಏರುತ್ತಿರುತ್ತದೆ ಮತ್ತು ನಿಶ್ಚಯವೂ ಸಹ ಪಕ್ಕಾ ಆಗುತ್ತಾ ಹೋಗುವುದು. ಧಾರಣೆಯಲ್ಲಿ ಗಮನ ಕೊಡುತ್ತೀರೆಂದರೆ ನಿಮ್ಮ ಬುದ್ಧಿಶಕ್ತಿಯು ವೃದ್ಧಿಯಾಗುತ್ತದೆ. ಮುಂದೆ ಹೋದಂತೆ ನಿಮ್ಮ ವಿಹಂಗ ಮಾರ್ಗದ ಸೇವೆಯಾಗುತ್ತಾ ಹೋಗುವುದು. ಯುಕ್ತಿಗಳನ್ನು ರಚಿಸಲಾಗುತ್ತದೆ, ಇದರಿಂದ ಅನ್ಯರಿಗೆ ಒಳ್ಳೆಯ ರೀತಿಯಲ್ಲಿ ಬಾಣ ನಾಟಬೇಕಾಗಿದೆ. ಮುಖ್ಯವಾಗಿ ತಂದೆಯ ಪರಿಚಯವನ್ನು ಕೊಡುವುದಾಗಿದೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಅಸ್ತಿಯು ಸಿಗುತ್ತದೆ. ಅವರೇ ಜ್ಞಾನಸಾಗರನೂ ಆಗಿದ್ದಾರೆ. ಜ್ಞಾನದಿಂದ ಮನುಷ್ಯರು ಪಾವನರಾಗುತ್ತಾರೆ. ಅವರೇ ಪತಿತ-ಪಾವನ ತಂದೆಯಾಗಿದ್ದಾರೆ. ನೀವು ಒಂದೇ ವಿಷಯವನ್ನು ತೆಗೆದುಕೊಳ್ಳಿ- ಸರ್ವವ್ಯಾಪಿಯ ಮಾತಿನಿಂದ ಭಕ್ತಿಯೂ ಸಹ ನಡೆಯುವುದಿಲ್ಲ. ಈ ಮಾತನ್ನು ಒಳ್ಳೆಯ ರೀತಿಯಲ್ಲಿ ತಿಳಿಸಬೇಕಾಗಿದೆ. ಇವರ ಜ್ಞಾನದಿಂದ ವಿನಾಶವಾಗುತ್ತದೆ ಎಂದು ಅವರೇ ಹೇಳುತ್ತಾರೆ. ನೀವೂ ಸಹ ಹೇಳುತ್ತೀರಿ ಈ ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆ ಪ್ರಜ್ವಲಿಸುತ್ತದೆ. ಅವರೂ ಸತ್ಯವನ್ನೇ ಹೇಳುತ್ತಾರೆ. ಯಾರು ಈ ಮಾತನ್ನು ಒಪ್ಪಿಕೊಳ್ಳುವುದಿಲ್ಲವೆಂದರೆ ವಿನಾಶವೇ ಆಗುತ್ತದೆಯಲ್ಲವೆ! ಇವರಂತೂ ಕಲ್ಪದಮೊದಲೂ ಸಹ ವಿನಾಶವಾಗಿದ್ದರು. ಭಗವಾನುವಾಚ - ರುದ್ರ ಜ್ಞಾನ ಯಜ್ಞದಲ್ಲಿ ಎಲ್ಲವೂ ಸ್ವಾಹಾ ಆಗುತ್ತದೆ. ಇದಕ್ಕೆ ಅವರೆಲ್ಲರೂ ತಿಳಿಯುತ್ತಾರೆ- ಇವರ ಜ್ಞಾನವೇ ಈ ರೀತಿ ಇದೆ ಆದ್ದರಿಂದ ವಾದಿಸುತ್ತಾರೆ. ಬಹಳ ಭಕ್ತಿ ಮಾಡುವುದರಿಂದ ಭಗವಂತನು ಸಿಗುತ್ತಾರೆಂದು ತಿಳಿಯುತ್ತಾರೆ. ಮತ್ತು ತಾವು ಹೇಳುತ್ತೀರಿ- ಯಾರು ಬಹಳ ಭಕ್ತಿಯನ್ನು ಮಾಡಿದ್ದಾರೆ, ಅವರಿಗೆ ಭಗವಂತ ಸಿಕ್ಕಿದ್ದಾರೆ. ಆದರೆ ಈ ಮಾತುಗಳನ್ನು ಅರಿತುಕೊಳ್ಳಲು ಮನುಷ್ಯರಿಗೆ ಬಹಳ ಪರಿಶ್ರಮವೆನಿಸುತ್ತದೆ. ಕಲ್ಪದ ಮೊದಲೂ ನೀವು ಮಕ್ಕಳು ತಂದೆಯ ಸಹಯೋಗದಿಂದ ನರಕವನ್ನು ಸ್ವರ್ಗವನ್ನಾಗಿ ಮಾಡಿದ್ದಿರಿ. ಅಂದಮೇಲೆ ಅವಶ್ಯವಾಗಿ ನರಕದ ವಿನಾಶವೂ ಆಗಿರುತ್ತದೆ. ಯಾವಾಗ ನರಕದ ವಿನಾಶವಾಗುತ್ತದೆ, ಆಗಲೇ ಸ್ವರ್ಗದ ಸ್ಥಾಪನೆಯಾಗುವುದು. ಭಾರತವೂ ಅವಶ್ಯವಾಗಿ ಪಾವನವಾಗಿತ್ತು ಎನ್ನುವುದನ್ನೂ ನೀವು ತಿಳಿದುಕೊಳ್ಳುತ್ತೀರಿ. ಕೆಲವು ಧರ್ಮದವರು ಆವಶ್ಯವಾಗಿ ಸ್ವರ್ಗವಿತ್ತೆಂದು ಹೇಳುತ್ತಾರೆ. ಅವಶ್ಯವಾಗಿ ಪ್ರಾಚೀನ ಎಂದರೆ ಎಲ್ಲದಕ್ಕಿಂತ ಹಳೆಯದಾಗಿದೆ ಅಂದಮೇಲೆ ಸ್ವರ್ಗವೇ ಆಗುತ್ತದೆಯಲ್ಲವೆ. ಈಗ ಹಳೆಯದಾಗಿ ಬಿಟ್ಟಿದೆ, ಅದು ಮತ್ತೆ ಹೊಸದಾಗುತ್ತದೆ. ನೀವು ಮಕ್ಕಳ ಬುದ್ಧಿಯಲ್ಲಿದೆ- ಅವಶ್ಯವಾಗಿ ಈ ದೇವೀ-ದೇವತೆಗಳ ರಾಜ್ಯವಿತ್ತು, ಈಗಿಲ್ಲ. ಮತ್ತೆ ಆದಿ ಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಿದ್ದಾರೆ. ಯಾರ ಸಹಯೋಗದಿಂದ ಮಾಡಿಸುತ್ತಿದ್ದಾರೆ? ಯಾರು ಸರ್ವರ ನಿರಾಕಾರ ತಂದೆಯಾಗಿದ್ದಾರೆ, ಸರ್ವ ಆತ್ಮಗಳ ತಂದೆಯಾಗಿದ್ದಾರೆ ಅವರಿಂದಲೇ ಆಗುತ್ತಿದೆ. ಈ ಮಾತುಗಳನ್ನು ನೀವು ಅರಿತುಕೊಂಡಿದ್ದೀರಿ. ನೀವು ಎಷ್ಟೊಂದು ಸಾಧಾರಣವಾಗಿದ್ದೀರಿ. ತಂದೆಯೂ ಹೇಳುತ್ತಾರೆ- ಮಕ್ಕಳೇ, ನಾನೂ ಸಹ ಬಡವರಬಂಧು ಆಗಿದ್ದೇನೆ, ನೀವು ಬಡವರಾಗಿದ್ದೀರಲ್ಲವೇ. ನಿಮ್ಮ ಬಳಿ ಏನಿದೆ! ನೀವು ಎಲ್ಲವನ್ನು ಭಾರತಕ್ಕಾಗಿ ಸ್ವಾಹಾ ಮಾಡಿದ್ದೀರಿ, ನಿಮ್ಮ ಯುದ್ಧವು ಎಷ್ಟು ದೊಡ್ಡ ರಾವಣನ ಜೊತೆಯಿದೆ. ಶಕ್ತಿಸೇನೆಯಾಗಿದೆಯಲ್ಲವೇ. ವಂದೇಮಾತರಂ ಎಂದು ಗಾಯನ ಮಾಡಲಾಗುತ್ತದೆ. ಅಪವಿತ್ರರು ಪವಿತ್ರರಿಗೆ ವಂದನೆ ಮಾಡುತ್ತಾರೆ. ಯಾವ ಮಾತೆ? ಅವರು ಭೂಮಿತಾಯಿ ಎಂದು ತಿಳಿಯುತ್ತಾರೆ ಆದರೆ ಇದಂತು ಭೂಮಿಯ ಮೇಲಿರುವವರ ಮಾತಾಗಿದೆ. ಜಗದಂಬಾ ಇದ್ದಾರೆಂದರೆ ಮಕ್ಕಳೂ ಇದ್ದಾರೆ. ಈ ದಿಲ್ವಾಲ ಮಂದಿರವೂ ನೆನಪಾರ್ಥ ಮಾಡಲ್ಪಟ್ಟಿದೆ. ಕುಮಾರಿ, ಅದರ್ಕುಮಾರಿಯೂ ಇದ್ದಾರೆ, ಇವರನ್ನು ತಾಯಿ ಎಂದೂ ಹೇಳಿಬಿಡುತ್ತಾರೆ. ಆದರೆ ನೀವು ಹೇಳುತ್ತೀರಿ- ಬಾಬಾ ನಾವಂತೂ ಬ್ರಹ್ಮಾಕುಮಾರಿಯರಾಗಿದ್ದೇವೆ, ನಮ್ಮನ್ನು ತಾಯಿ ಎಂದು ಕರೆಯದೇ ಮಗು ಎಂದು ಹೇಳಿ, ನಾವು ಕುಮಾರಿಯಾಗಿದ್ದೇವೆ. ಎಷ್ಟೊಂದು ಗುಹ್ಯ ತಿಳಿದುಕೊಳ್ಳುವ ಮಾತುಗಳಾಗಿದೆ ಆದರೆ ಅದನ್ನು ಧಾರಣೆ ಮಾಡಿಕೊಳ್ಳಲಾಗುವುದಿಲ್ಲ. ಹಳೆಯ ಜನ್ಮ-ಜನ್ಮಾತರದ ದೇಹಭಾನವು ಕುಳಿತಿದೆ, ಅದು ತುಂಡಾಗುವುದೇ ಇಲ್ಲ. ನಿಮ್ಮ ಬುದ್ಧಿಯಲ್ಲಿದೆ- ತಂದೆಯು ನಮ್ಮ ಮುಂದೆ ಕುಳಿತಿದ್ದಾರೆ, ನಾವು ಆತ್ಮಗಳ ಜೊತೆ ಮಾತನಾಡುತ್ತಿದ್ದಾರೆ. ಇವರ ಶರೀರದಲ್ಲಿಯೇ ತಂದೆಯ ಪ್ರವೇಶತೆಯಾಗಿದೆ. ತಂದೆಯು ಬಂದು ಅಲೌಕಿಕ ದಿವ್ಯ ಕರ್ತವ್ಯವನ್ನು ಮಾಡುತ್ತಾರೆ. ಪತಿತರನ್ನು ಪಾವನ ಮಾಡಲು ಓದಿಸುತ್ತಾರೆ. ಸಂಪೂರ್ಣವಾದ ನೆನಪಿರಬೇಕು - ನಮಗೆ ಪತಿತ ಪಾವನ ಶಿವಬಾಬಾ ಓದಿಸುತ್ತಾರೆ. ಪತಿತ-ಪಾವನ ಎಲ್ಲರಿಗಿಂತ ಶ್ರೇಷ್ಠರಾದರು, ನಂತರ ತಂದೆಯು ಶಿಕ್ಷಕನೂ ಆಗಿದ್ದಾರೆ. ಮೊದಲು ಪತಿತ ಪಾವನ ಎನ್ನುವ ಅಕ್ಷರವೇ ಬರಬೇಕು. ಅವರನ್ನೇ ಓ ಪರಮಪಿತ ಬನ್ನಿ, ಬಂದು ನಮಗೆ ರಾಜಯೋಗವನ್ನು ಕಲಿಸಿ ಎಂದು ಅವರನ್ನು ನೆನಪು ಮಾಡುತ್ತಾರೆ. ತಂದೆಯು ಹೇಳುತ್ತಾರೆ- ನೀವು ಮಕ್ಕಳಿಗೆ ಪುನಃ ಸಹಜ ಜ್ಞಾನ, ಯೋಗವನ್ನು ಕಲಿಸುತ್ತಿದ್ದೇನೆ, ಇದಕ್ಕಾಗಿ ಪುಸ್ತಕ ಮುಂತಾದವುಗಳ ಮಾತಿಲ್ಲ ಆದರೆ ಮನುಷ್ಯರು ಹೆಸರನ್ನಿಟ್ಟಿದ್ದಾರೆ. ಈಗ ತಂದೆಯು ನಿಮಗೆ ಯೋಗ್ಯರನ್ನಾಗಿ ಮಾಡಲು ಶಿಕ್ಷಣವನ್ನು ಕೊಡುತ್ತಿದ್ದಾರೆ. ಪ್ರತಿನಿತ್ಯ ಹೊಸ ಜ್ಞಾನರತ್ನಗಳು ಸಿಗುತ್ತವೆ. ಮತ್ತೆಲ್ಲರೂ ಗೀತೆ-ಗ್ರಂಥ ಮುಂತಾದವುಗಳನ್ನು ತಯಾರು ಮಾಡುತ್ತಾರೆ. ಅದರಲ್ಲಿ ಯಾವುದೇ ಸೇರಿಸುವ ಅಥವಾ ತೆಗೆಯುವ ಕೆಲಸ ಮಾಡುವುದಿಲ್ಲ, ಏನಿದೆಯೋ ಅದನ್ನೇ ತಿಳಿಸುತ್ತಿರುತ್ತಾರೆ. ಇಲ್ಲಿ ಸೇರಿಸಲಾಗುತ್ತದೆ ಹಾಗೂ ತೆಗೆಯುವುದನ್ನೂ ಮಾಡಲಾಗುತ್ತದೆ. ಪ್ರತಿದಿನವು ಹೊಸ-ಹೊಸ ಜ್ಞಾನ ರತ್ನಗಳು ಸಿಗುತ್ತಿರುತ್ತವೆ. ಜ್ಞಾನವು ತುಂಬಾ ಅದ್ಭುತವಾಗಿದೆ. ಇದು ಮತ್ತ್ಯಾವುದೇ ಶಾಸ್ತ್ರಗಳಲ್ಲಿಲ್ಲ. ಕಾಮಮಹಾಶತ್ರುವಾಗಿದೆ, ಭಗವಾನುವಾಚ ದೇಹ ಸಹಿತ ಎಲ್ಲವನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ. ನಾನು ನೀವೆಲ್ಲಾ ಆತ್ಮಗಳನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ. ನಾನು ಅಕಾಲಮೂರ್ತಿ, ಕಾಲರ ಕಾಲನಾಗಿದ್ದೇನೆ. ನಾನು ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಅದ್ದರಿಂದ ನಿಮಗೆ ಖುಷಿಯಾಗಬೇಕಲ್ಲವೇ!

ಈಗ ನಾವು ಮನೆಗೆ ಹೋಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಬೇಗ ಬುದ್ಧಿವಂತರಾಗುತ್ತೀರೆಂದರೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಅಲ್ಲಿಯ ತನಕ ಯುದ್ಧವಾಗಲು ಸಾಧ್ಯವಿಲ್ಲ. ನಾನೇನಾದರೂ ಮಾಡುವುದಕ್ಕೆ ಸಾಧ್ಯವೇ ಎಂದು ತಂದೆಯು ಕೇಳುತ್ತಾರೆ. ಮೊದಲು ಪೂರ್ವಸಿದ್ಧತೆಯಾಗುತ್ತದೆ. ಈಗಂತೂ ರಾಜರುಗಳು ಮುಂತಾದವರೂ ಬಂದಿಲ್ಲ ಆದ್ದರಿಂದ ರಾಜಸ್ಥಾನದಲ್ಲಿಯೂ ತಿಳಿಸಿರಿ. ಅವರಿಗೆ ಹೇಳಿ, ನಿಮಗೆ ಇದು ಗೊತ್ತಿದೆಯೇ ರಾಜಸ್ಥಾನವೆಂಬ ಹೆಸರು ಏಕೆ ಬಂದಿದೆ? ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಪುನಃ ಆ ರಾಜಸ್ಥಾನವಾಗಬೇಕು. ಆದ್ದರಿಂದ ಈಗ ಪುನಃ ಸ್ಥಾಪನೆಯಾಗುತ್ತಿದೆ. ನಾವು ತಿಳಿದುಕೊಂಡಿದ್ದೇವೆ ಆದರೆ ಯಾವಾಗ ಇದು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆಯೋ ಆಗ ಖುಷಿಯ ನಶೆಯೇರುವುದು. ಭಕ್ತಿಮಾರ್ಗದಲ್ಲಿ ನಾವು ದೇವತೆಗಳ ಮಂದಿರವನ್ನು ಕಟ್ಟಿಸುತ್ತೇವೆ. ಭಾರತದಲ್ಲಿ ಎಷ್ಟೊಂದು ಧನವಿತ್ತು. ನಾವು ಪುನಃ ಇದನ್ನು ದೈವೀ ರಾಜಸ್ಥಾನವನ್ನಾಗಿ ಮಾಡುತ್ತೇವೆ. ಈ ಮಾತುಗಳನ್ನು ಬಂದು ತಿಳಿದುಕೊಳ್ಳಿ, ತಿಳಿಸುವುದಕ್ಕೂ ಸಹ ಅಭಿಮಾನವಿರಬೇಕು. ಇದೂ ಸಹ ಚರ್ಚಾಘೋಷ್ಟಿಯಾಗಿದೆಯಲ್ಲವೆ. ಹೇಗೆ ಸೇವೆ ಮಾಡಬೇಕು, ಇದನ್ನು ತಂದೆಯು ತಿಳಿಸಿದ್ದಾರೆ- ಮಾತೆಯರು, ಕುಮಾರಿಯರು, ಪಾಂಡವರು ಎಲ್ಲರೂ ಒಟ್ಟಿಗೆ ಕೇಳುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ಭಗವಂತನಾಗಿದ್ದಾರೆ, ಕೃಷ್ಣನಲ್ಲ ಆದ್ದರಿಂದ ರಾಜಸ್ಥಾನದ ಬಗ್ಗೆ ನೀವು ತಿಳಿಸಬಹುದು. ಅವಶ್ಯವಾಗಿ ರಾಜಸ್ಥಾನವಿತ್ತು. ಯಾರ ಮಂದಿರಗಳು ನಿರ್ಮಾಣವಾಗಿತ್ತು ಅದನ್ನು ಪುನಃ ನಾವು ಮಾಡುತ್ತಿದ್ದೇವೆ. ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ನೀವೂ ಸಹ ಅರ್ಧಕಲ್ಪಕ್ಕಾಗಿ ಪ್ರಯತ್ನ ಪಡುತ್ತೀರೆಂದರೆ ಆಗಿ ಬಿಡುತ್ತೀರಿ. ಯಾರಿಗೆ ಬಾಣವು ನಾಟುವುದು ಅವರು ತಿಳಿದುಕೊಳ್ಳಲು ಬಂದೇ ಬಿಡುವರು. ನಾವು ರಾಮನ (ತಂದೆ) ಶ್ರೀಮತದಿಂದ ರಾವಣನ ಮೇಲೆ ಜಯವನ್ನು ಪಡೆಯುತ್ತಿದ್ದೇವೆ. ಈ ಅಕ್ಷರವನ್ನು ಕೇಳಿದರೆ ಒಳಗೆ ಅದನ್ನು ಪರಿಶೀಲನೆ ಮಾಡುತ್ತಾರೆ. ಯಾರಿಗೆ ಬಾಣವು ನಾಟುತ್ತದೆ ಅವರು ತಿಳಿದುಕೊಳ್ಳಲು ಬಂದು ಬಿಡುತ್ತಾರೆ. ಈ ಬೇಹದ್ದಿನ ಮಿಲನವನ್ನು ತಂದೆಯು ಪ್ರತೀದಿನವೂ ಮಾಡುತ್ತಾರೆ. ಇದು ಪರಮಾತ್ಮನ ಜೊತೆ ಆತ್ಮಗಳ ಚರ್ಚಾಘೋಷ್ಟಿಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಕರ್ಮ ಭೋಗದಿಂದ ಮುಕ್ತರಾಗಲು ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ದೇಹಧಾರಿಗಳ ನೆನಪಿನಿಂದ ಸಮಯವನ್ನು ವ್ಯರ್ಥ ಮಾಡಬಾರದು. ಬುದ್ಧಿಯ ಲೈನ್ ಬಹಳ ಸ್ಪಷ್ಟವಾಗಿ ಇಟ್ಟುಕೊಳ್ಳಬೇಕಾಗಿದೆ.

2. ತುಂಬಾ ಶುದ್ಧ ಭೋಜನವನ್ನು ಸೇವಿಸಬೇಕಾಗಿದೆ. ಅನ್ನದಂತೆ ಮನ ಎಂಬ ಹೇಳಿಕೆಯಿದೆ ಆದ್ದರಿಂದ ಯಾವುದೇ ಪತಿತರ ಕೈಯಿಂದ ಭೋಜನವನ್ನು ಸ್ವೀಕರಿಸಬಾರದು. ಬುದ್ಧಿಯನ್ನು ಸ್ವಚ್ಚ ಮಾಡಬೇಕಾಗಿದೆ.

ವರದಾನ:
ಆತ್ಮಿಕ ಕರುಣೆಯ ಮೂಲಕ ಸರ್ವರನ್ನು ಸಂತುಷ್ಟಗೊಳಿಸುವಂತಹ ಸದಾ ಸಂಪದ್ಭರಿತ ಭವ.

ಇಂದು ವಿಶ್ವದಲ್ಲಿ ಸಂಪದ್ಭರಿತರಂತು ಬಹಳಷ್ಟಿದ್ದಾರೆ ಆದರೆ ಅತ್ಯಂತ ಅವಶ್ಯಕವಿರುವ ಸಂಪತ್ತೆಂದರೆ ಕರುಣೆ. ಭಲೆ ಬಡವರಿರಲಿ ಅಥವಾ ಸಿರಿವಂತರಿರಲಿ ಆದರೆ ಇಂದು ಕರುಣೆಯಿಲ್ಲ. ತಮ್ಮ ಬಳಿ ಕರುಣೆಯ ಸಂಪತ್ತಿದೆ ಆದ್ದರಿಂದ ಯಾರಿಗೇ ಆಗಲಿ ಮತ್ತೇನನ್ನೂ ಕೊಡದಿದ್ದರೂ, ಕರುಣೆಯಿಂದ ಎಲ್ಲರನ್ನೂ ಸಂತುಷ್ಟರನ್ನಂತು ಮಾಡಬಹುದು. ತಮ್ಮ ಕರುಣೆಯು ಈಶ್ವರೀಯ ಪರಿವಾರದ ಲೆಕ್ಕದಿಂದ ಇದೆ, ಈ ಆತ್ಮಿಕ ಕರುಣೆಯಿಂದ ತನು-ಮನ ಹಾಗೂ ಧನದಿಂದ ಪೂರ್ಣಗೊಳಿಸಬಹುದು.

ಸ್ಲೋಗನ್:
ಪ್ರತಿಯೊಂದು ಕಾರ್ಯದಲ್ಲಿ ಸಾಹಸವನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಅವಶ್ಯವಾಗಿ ಸಫಲತೆಯು ಸಿಗುವುದು.