10.11.19    Avyakt Bapdada     Kannada Murli     06.03.85     Om Shanti     Madhuban


"ಸಂಗಮಯುಗವು ಉತ್ಸವದ ಯುಗವಾಗಿದೆ, ಬ್ರಾಹ್ಮಣ ಜೀವನವು ಉತ್ಸಾಹದ ಜೀವನವಾಗಿದೆ"


ಇಂದು ಹೋಲಿಯೆಸ್ಟ್, ಹೈಯೆಸ್ಟ್ ತಂದೆಯು ತನ್ನ ಹೋಲಿ ಮತ್ತು ಹ್ಯಾಪಿ ಹಂಸಗಳೊಂದಿಗೆ ಹೋಲಿಯನ್ನಾಚರಿಸುವುದಕ್ಕಾಗಿ ಬಂದಿದ್ದಾರೆ. ತ್ರಿಮೂರ್ತಿ ತಂದೆಯು ಮೂರು ಪ್ರಕಾರದ ಹೋಲಿಯ ದಿವ್ಯ ರಹಸ್ಯವನ್ನು ತಿಳಿಸಲು ಬಂದಿದ್ದಾರೆ. ಹಾಗೆ ನೋಡಿದರೆ ಸಂಗಮಯುಗವು ಹೋಲಿಯುಗವಾಗಿದೆ. ಸಂಗಮಯುಗವು ಉತ್ಸವದ ಯುಗವಾಗಿದೆ. ತಾವು ಶ್ರೇಷ್ಠಾತ್ಮರ ಪ್ರತೀ ದಿನ, ಪ್ರತೀ ಸಮಯವು ಉತ್ಸಾಹ ತುಂಬಿದ ಉತ್ಸವವಾಗಿದೆ. ಅಜ್ಞಾನಿ ಆತ್ಮರು ಸ್ವಯಂನ್ನು ಉತ್ಸಾಹದಲ್ಲಿ ತರುವುದಕ್ಕಾಗಿ ಉತ್ಸವವನ್ನಾಚರಿಸುತ್ತಾರೆ. ಆದರೆ ತಾವು ಶ್ರೇಷ್ಠಾತ್ಮರಿಗಾಗಿ ಈ ಬ್ರಾಹ್ಮಣ ಜೀವನವು ಉತ್ಸಾಹದ ಜೀವನವಾಗಿದೆ. ಉಮ್ಮಂಗ, ಖುಷಿಯಿಂದ ತುಂಬಿರುವ ಜೀವನವಾಗಿದೆ, ಆದ್ದರಿಂದ ಸಂಗಮಯುಗವೇ ಉತ್ಸವದ ಯುಗವಾಗಿದೆ. ಈಶ್ವರೀಯ ಜೀವನವು ಸದಾ ಉಮ್ಮಂಗ-ಉತ್ಸಾಹವಿರುವ ಜೀವನವಾಗಿದೆ. ಸದಾಕಾಲವೂ ಖುಷಿಗಳಲ್ಲಿ ನರ್ತಿಸುತ್ತಾ, ಜ್ಞಾನದ ಶಕ್ತಿಶಾಲಿ ಅಮೃತವನ್ನು ಕುಡಿಯುತ್ತಾ, ಸುಖದ ಗೀತೆಯನ್ನಾಡುತ್ತಾ, ಹೃದಯದ ಸ್ನೇಹದ ಹಾಡನ್ನಾಡುತ್ತಾ, ತಮ್ಮ ಶ್ರೇಷ್ಠ ಜೀವನವನ್ನು ಕಳೆಯುತ್ತಿದ್ದೀರಿ. ಅಜ್ಞಾನಿ ಆತ್ಮರು ಒಂದು ದಿನ ಆಚರಿಸುತ್ತಾ, ಅಲ್ಪಕಾಲದ ಉತ್ಸಾಹದಲ್ಲಿ ಬರುತ್ತಾರೆ, ಆದರೂ ಮತ್ತೆ ಹೇಗಿದ್ದವರು ಆಗಿ ಬಿಡುತ್ತಾರೆ. ತಾವು ಉತ್ಸವವನ್ನಾಚರಿಸುತ್ತಾ ಹೋಲಿಯಾಗಿ ಬಿಡುತ್ತೀರಿ ಮತ್ತು ಅನ್ಯರನ್ನೂ ಹೋಲಿಯನ್ನಾಗಿ ಮಾಡುತ್ತಿರುತ್ತೀರಿ. ಅವರು ಕೇವಲ ಆಚರಿಸುತ್ತಾರೆ, ತಾವು ಆಚರಿಸುತ್ತಾ ಆಗಿ ಬಿಡುತ್ತೀರಿ. ಜನರು ಮೂರು ಪ್ರಕಾರದ ಹೋಲಿಯನ್ನಾಚರಿಸುತ್ತಾ- ಒಂದು ಸುಡುವ ಹೋಲಿ. ಇನ್ನೊಂದು ಬಣ್ಣನ್ನಾಕುವ ಹೋಲಿ. ಮೂರನೆಯದು - ಮಂಗಳ ಮಿಲನವನ್ನಾಚರಿಸುವ ಹೋಲಿ. ಈ ಮೂರು ಹೋಲಿಗಳಿರುವುದು ಆತ್ಮಿಕ ರಹಸ್ಯದಿಂದ. ಆದರೆ ಅವರು ಸ್ಥೂಲ ರೂಪದಲ್ಲಿ ಆಚರಿಸುತ್ತಿರುತ್ತಾರೆ. ಈ ಸಂಗಮಯುಗದಲ್ಲಿ ತಾವು ಮಹಾನ್ ಆತ್ಮರು ಯಾವಾಗ ತಂದೆಯವರಾಗುತ್ತೀರಿ ಅರ್ಥಾತ್ ಹೋಲಿಯಾಗುತ್ತೀರಿ, ಆಗ ಮೊದಲು ಏನು ಮಾಡುತ್ತೀರಿ? ಮೊದಲು ಎಲ್ಲರೂ ಹಳೆಯ ಸ್ವಭಾವ ಸಂಸ್ಕಾರಗಳ ಯೋಗಾಗ್ನಿಯಿಂದ ಭಸ್ಮ ಮಾಡುತ್ತೀರಿ ಅರ್ಥಾತ್ ಸುಡುತ್ತೀರಿ. ಅದರ ನಂತರವೇ ನೆನಪಿನ ಮೂಲಕ ತಂದೆಯ ಸಂಗದ ರಂಗೇರಿ ಬಿಡುತ್ತದೆ. ತಾವೂ ಸಹ ಮೊದಲು ಸುಡುವಂತಹ ಹೋಲಿಯನ್ನಾಚರಿಸುತ್ತೀರಿ ನಂತರ ಪ್ರಭುವಿನ ಸಂಗದ ರಂಗಿನಲ್ಲಿ ರಂಗಿತರಾಗಿ ಬಿಡುತ್ತೀರಿ ಅರ್ಥಾತ್ ತಂದೆಯ ಸಮಾನರಾಗಿ ಬಿಡುತ್ತೀರಿ. ತಂದೆಯು ಜ್ಞಾನ ಸಾಗರನೆಂದಾಗ ಮಕ್ಕಳೂ ಸಹ ಸಂಗದ ರಂಗಿನಲ್ಲಿ ಜ್ಞಾನ ಸ್ವರೂಪರಾಗಿ ಬಿಡುತ್ತಾರೆ. ತಂದೆಯ ಗುಣವೇನಿದೆಯೋ ಅದು ತಮ್ಮ ಗುಣವಾಗಿ ಬಿಡುತ್ತದೆ, ಜನ್ಮ-ಜನ್ಮಾಂತರಕ್ಕಾಗಿ ಈ ರಂಗು ಅವಿನಾಶಿಯಾಗಿ ಬಿಡುತ್ತದೆ. ತಮ್ಮ ಆಸ್ತಿಯಾಗಿ ಬಿಡುತ್ತದೆ. ಅಂದಮೇಲೆ ಸಂಗದ ರಂಗು ಹೀಗೆ ಅವಿನಾಶಿಯಾಗಿ ರಂಗೇರಿ ಬಿಡುತ್ತದೆ, ಅದು ಜನ್ಮ-ಜನ್ಮಾಂತರಕ್ಕಾಗಿ ಅವಿನಾಶಿಯಾಗಿ ಬಿಡುತ್ತದೆ. ಮತ್ತು ಯಾವಾಗ ಸಂಗದ ರಂಗೇರಿ ಬಿಡುತ್ತದೆ, ಈ ಆತ್ಮಿಕ ರಂಗಿನ ಹೋಲಿಯನ್ನಾಚರಿಸುತ್ತೀರೆಂದರೆ, ಆತ್ಮ ಮತ್ತು ಪರಮಾತ್ಮನ, ತಂದೆ ಮತ್ತು ಮಕ್ಕಳ ಶ್ರೇಷ್ಠ ಮಿಲನದ ಮೇಳವು ಸದಾಕಾಲವೂ ಆಗುತ್ತಿರುತ್ತದೆ. ಅಜ್ಞಾನಿ ಆತ್ಮರು ಭಿನ್ನ-ಭಿನ್ನ ರೂಪದಲ್ಲಿ ನೆನಪಾರ್ಥವನ್ನು ಆಚರಿಸುತ್ತಾ ಅಲ್ಪಕಾಲಕ್ಕಾಗಿ ಖುಷಿಯಾಗಿ ಬಿಡುತ್ತಾರೆ. ಪ್ರತೀ ಹೆಜ್ಜೆಯಲ್ಲಿ, ತಮ್ಮ ಶ್ರೇಷ್ಠ ಜೀವನದಲ್ಲಿ ವಿಶೇಷತೆಗಳೇನು ಪ್ರಾಪ್ತಿಯಾಗಿದೆ, ಅವರು ಅದನ್ನು ನೆನಪು ಮಾಡಿಕೊಂಡು, ಸ್ವಲ್ಪ ಸಮಯಕ್ಕಾಗಿ ಮೋಜನ್ನಾಚರಿಸುತ್ತಿರುತ್ತಾರೆ. ಈ ನೆನಪಾರ್ಥವನ್ನು ನೋಡಿ ಅಥವಾ ಕೇಳಿ ಹರ್ಷಿತವಾಗುತ್ತೀರಲ್ಲವೆ - ನಮ್ಮ ವಿಶೇಷಗಳ ನೆನಪಾರ್ಥವಾಗಿದೆ ಎಂದು! ತಾವು ಮಾಯೆಯನ್ನು ಸುಟ್ಟಿರಿ ಮತ್ತು ಅವರು ಹೋಲಿಕಾ ಮಾಡಿ ಸುಟ್ಟು ಬಿಡುತ್ತಾರೆ. ಇಷ್ಟು ರಮಣೀಕವಾದ ಕಥೆಗಳನ್ನು ಮಾಡಿದ್ದಾರೆ, ಅದನ್ನು ಕೇಳಿ ತಮಗೆ ನಗು ಬರುತ್ತದೆ - ಏನೆಂದರೆ, ನಮ್ಮ ಮಾತುಗಳನ್ನು ಹೇಗೆ ಮಾಡಿ ಬಿಟ್ಟಿದ್ದಾರೆ! ಹೋಲಿಯ ಉತ್ಸವವು ತಮ್ಮ ಭಿನ್ನ-ಭಿನ್ನ ಪ್ರಾಪ್ತಿಗಳ ನೆನಪಿನ ರೂಪದಲ್ಲಿ ಆಚರಿಸುತ್ತಾರೆ. ಈಗ ತಾವು ಸದಾ ಖುಷಿಯಾಗಿರುತ್ತೀರಿ. ಖುಷಿಯ ಪ್ರಾಪ್ತಿಯ ನೆನಪಾರ್ಥವನ್ನು ಬಹಳ ಖುಷಿಯಾಗಿ ಹೋಲಿಯನ್ನಾಚರಿಸುತ್ತಾರೆ. ಆ ಸಮಯದಲ್ಲಿ ಎಲ್ಲಾ ದುಃಖಗಳು ಮರೆತು ಹೋಗುತ್ತದೆ ಮತ್ತು ತಾವು ಸದಾಕಾಲಕ್ಕಾಗಿ ದುಃಖವನ್ನು ಮರೆತು ಬಿಡುತ್ತೀರಿ. ತಮ್ಮ ಖುಷಿಯ ಪ್ರಾಪ್ತಿಯ ನೆನಪಾರ್ಥವನ್ನು ಆಚರಿಸುತ್ತಾರೆ.

ಅನ್ಯ ಮಾತುಗಳನ್ನು ಆಚರಿಸುವ ಸಮಯದಲ್ಲಿ ಹಿರಿಯ-ಕಿರಿಯರೆಲ್ಲರೂ ಬಹಳಷ್ಟೇ ಹಗುರವಾಗಿ, ಹಗುರ ರೂಪದಲ್ಲಿ ಆಚರಿಸುತ್ತಾರೆ. ಆ ದಿನಕ್ಕಾಗಿ ಎಲ್ಲರ ಮೂಡ್ ಸಹ ಹಗುರವಾಗಿರುತ್ತದೆ. ಅಂದಮೇಲೆ ಇದು ತಮ್ಮ ಡಬಲ್ಲೈಟ್ ಆಗುವ ನೆನಪಾರ್ಥವಾಗಿದೆ. ಯಾವಾಗ ಪ್ರಭು ಸಂಗದ ರಂಗಿನಲ್ಲಿ ರಂಗಿತರಾಗುತ್ತೀರಿ, ಆಗ ಡಬಲ್ಲೈಟ್ ಆಗಿ ಬಿಡುತ್ತೀರಲ್ಲವೆ. ಅಂದಮೇಲೆ ಇದು ವಿಶೇಷತೆಯ ನೆನಪಾರ್ಥವಾಗಿದೆ. ಮತ್ತು ಈ ದಿನದಂದು ಹಿರಿಯರು-ಕಿರಿಯರು, ಯಾವುದೇ ಸಂಬಂಧದವರು ಸಮಾನ ಸ್ವಭಾವದಲ್ಲಿರುತ್ತಾರೆ. ಭಲೆ ಕಿರಿಯನಾದ ಮೊಮ್ಮಗನೇ ಆಗಿರಲಿ, ಆದರೂ ಅಜ್ಜನಿಗೆ ರಂಗನ್ನಾಕುವರು. ಎಲ್ಲಾ ಸಂಬಂಧದ, ಆಯಸ್ಸಿನ ಭಾನವೇ ಮರೆತು ಹೋಗುತ್ತಾರೆ. ಸಮಾನ ಭಾವದಲ್ಲಿ ಬಂದು ಬಿಡುತ್ತಾರೆ. ಇದೂ ಸಹ ತಮ್ಮ ವಿಶೇಷ ಸಮಾನಭಾವ ಅರ್ಥಾತ್ ಸಹೋದರ-ಸಹೋದರ ಸ್ಥಿತಿ, ಮತ್ತ್ಯಾವುದೇ ದೇಹದ ಸಂಬಂಧದ ದೃಷ್ಟಿಯಿಲ್ಲ, ಇದು ಸಹೋದರ-ಸಹೋದರನ ಸಮಾನ ಸ್ಥಿತಿಯ ನೆನಪಾರ್ಥವಾಗಿದೆ. ಇನ್ನೊಂದು ಮಾತು- ಈ ದಿನದಂದು ಭಿನ್ನ-ಭಿನ್ನ ರಂಗುಗಳಿಂದ ಬಹಳಷ್ಟು ಪಿಚಕಾರಿಗಳನ್ನು ತುಂಬಿ ಒಬ್ಬರಿನ್ನೊಬ್ಬರಿಗೆ ರಂಗಿತರನ್ನಾಗಿಸುತ್ತಾರೆ. ಇದೂ ಸಹ ಈ ಸಮಯದ ತಮ್ಮ ಸೇವೆಯ ನೆನಪಾರ್ಥವಾಗಿದೆ. ಯಾವುದೇ ಆತ್ಮನಿಗೂ ತಾವು ದೃಷ್ಟಿಯ ಪಿಚಕಾರಿಯ ಮೂಲಕ ಪ್ರೇಮ ಸ್ವರೂಪನನ್ನಾಗಿಸುವ ರಂಗು, ಆನಂದ ಸ್ವರೂಪವನ್ನಾಗಿಸುವ ರಂಗು, ಸುಖದ, ಶಾಂತಿಯ, ಶಕ್ತಿಗಳ ಎಷ್ಟೊಂದು ರಂಗನ್ನಾಕುತ್ತೀರಿ? ಇಂತಹ ರಂಗಾಕುತ್ತೀರಿ, ಅದು ಸದಾಕಾಲವು ಇರುವಂತದ್ದಾಗಿದೆ. ನಶಿಸುವುದಕ್ಕಾಗುವುದಿಲ್ಲ. ಪರಿಶ್ರಮ ಪಡಬೇಕಾಗಿರುವುದಿಲ್ಲ. ಮತ್ತೆ ಪ್ರತಿಯೊಂದು ಆತ್ಮವು ಇದನ್ನೇ ಬಯಸುತ್ತದೆ - ಸದಾ ಈ ರಂಗುಗಳಲ್ಲಿ ರಂಗಿತರಾಗಿರೋಣ. ಅಂದಮೇಲೆ ಎಲ್ಲರ ಬಳಿ ಆತ್ಮಿಕ ರಂಗುಗಳ ಆತ್ಮಿಕ ದೃಷ್ಟಿಯ ಪಿಚಕಾರಿಯಾಗಿದೆಯಲ್ಲವೆ! ಹೋಲಿಯನ್ನಾಡುತ್ತೀರಲ್ಲವೆ! ಈ ಆತ್ಮಿಕ ಹೋಲಿಯು ತಮ್ಮೆಲ್ಲರ ಜೀವನದ ನೆನಪಾರ್ಥವಾಗಿದೆ. ಹೀಗೆ ಬಾಪ್ದಾದಾರವರೊಂದಿಗೆ ಮಂಗಳ ಮಿಲನವನ್ನಾಚರಿಸಿದಿರಿ, ಆ ಮಿಲನವನ್ನಾಚರಿಸುತ್ತಾ ತಂದೆಯ ಸಮಾನರಾಗಿ ಬಿಟ್ಟಿರಿ. ಇಂತಹ ಮಂಗಳ ಮಿಲನವನ್ನಾಚರಿಸಿದಿರಿ, ಅದರಿಂದ ಕಂಬೈಂಡ್ ಆಗಿ ಬಿಟ್ಟಿರಿ. ಯಾರೂ ಸಹ ಬೇರೆ ಮಾಡಲು ಸಾಧ್ಯವಿಲ್ಲ.

ಇನ್ನೊಂದು ಮಾತು - ಈ ದಿನದಲ್ಲಿ ಕಳೆದು ಹೋದ ಎಲ್ಲಾ ಮಾತುಗಳನ್ನು ಮರೆಯುವ ದಿನವಾಗಿದೆ. 63 ಜನ್ಮಗಳಲ್ಲಿ ಕಳೆದುದನ್ನು ಮರೆತು ಬಿಡುತ್ತೀರಲ್ಲವೆ. ಕಳೆದುದಕ್ಕೆ ಬಿಂದುವನ್ನಿಟ್ಟು ಬಿಡುತ್ತೀರಿ. ಆದ್ದರಿಂದ ಹೋಲಿ ಎಂದರೆ ಕಳೆದು ಹೋದದನ್ನು ಕಳೆಯಿರಿ ಎಂದು ಅರ್ಥವನ್ನೂ ಹೇಳುತ್ತೀರಿ. ಎಂತಹ ಕಠಿಣ ಶತ್ರುವನ್ನಾದರೂ ಮರೆತು ಮಿಲನವನ್ನಾಚರಿಸುವ ದಿನವೆಂದು ಮಾನ್ಯತೆಯಿದೆ. ತಾವೂ ಸಹ ಆತ್ಮನ ಶತ್ರುವಾದ ಆಸುರಿ ಸಂಸ್ಕಾರ, ಆಸುರಿ ಸ್ವಭಾವವನ್ನು ಮರೆತು ಪ್ರಭುಮಿಲನವನ್ನಾಚರಿಸುತ್ತೀರಲ್ಲವೆ! ಸಂಕಲ್ಪದಲ್ಲಿಯೂ ಸಹ ಹಳೆಯ ಸಂಸ್ಕಾರಗಳು ಸ್ಮೃತಿಯಲ್ಲಿ ಬರಬಾರದು. ಇದೂ ಸಹ ತಾವು ಈ ಮರೆಯುವ ವಿಶೇಷತೆಯ ನೆನಪಾರ್ಥವನ್ನಾಚರಿಸುತ್ತಿದ್ದಾರೆ. ಅಂದಮೇಲೆ ಕೇಳಿದಿರಾ - ತಮ್ಮ ವಿಶೇಷತೆಗಳೆಷ್ಟಿದೆ? ತಮ್ಮ ಪ್ರತೀ ಗುಣದ, ಪ್ರತೀ ವಿಶೇಷತೆಯ, ಕರ್ಮದ ಭಿನ್ನ-ಭಿನ್ನ ನೆನಪಾರ್ಥಗಳನ್ನು ಮಾಡಿ ಬಿಟ್ಟಿದ್ದಾರೆ. ಯಾರ ಪ್ರತೀ ಕರ್ಮದ ನೆನಪಾರ್ಥವಾಗಿ ಬಿಡುತ್ತದೆ, ಅದನ್ನು ನೆನಪು ಮಾಡಿ ಖುಷಿಯಲ್ಲಿ ಬಂದು ಬಿಡುತ್ತಾರೆ, ಅವರು ಸ್ವಯಂ ಎಷ್ಟೊಂದು ಮಹಾನ್ ಆಗಿದ್ದಾರೆ? ತಿಳಿಯಿತೆ - ತಾವು ಯಾರು? ತಮ್ಮನ್ನು ತಿಳಿದಿರಾ. ಹೋಲಿಯಂತು ಆಗಿದ್ದೀರಿ ಆದರೆ ಎಷ್ಟೊಂದು ವಿಶೇಷವಾಗಿದ್ದೀರಿ!

ಡಬಲ್ ವಿದೇಶಿಗಳು ಭಲೆ ಈ ತಮ್ಮ ಶ್ರೇಷ್ಠತೆಯ ನೆನಪಾರ್ಥವನ್ನೂ ತಿಳಿದಿಲ್ಲ, ಆದರೆ ತಮ್ಮ ನೆನಪಿನ ಮಹತ್ವವನ್ನು ಪ್ರಪಂಚದವರು ನೆನಪು ಮಾಡುತ್ತಾ ನೆನಪಾರ್ಥವನ್ನಾಚರಿಸುತ್ತಿದ್ದಾರೆ. ಹೋಲಿಯೇನಾಗುತ್ತದೆ? ಎಂದು ತಿಳಿಯಿತೆ. ತಾವೆಲ್ಲರೂ ರಂಗಿನಲ್ಲಿ ರಂಗಿತರಾಗಿದ್ದೀರಿ. ಇಂತಹ ಪ್ರೇಮದ ರಂಗಿನಲ್ಲಿ ರಂಗಿತರಾಗಿ ಬಿಟ್ಟಿರಿ, ಅದರಿಂದ ತಂದೆಯಲ್ಲದೆ ಮತ್ತ್ಯಾರೂ ಕಾಣಿಸುವುದಿಲ್ಲ. ಸ್ನೇಹದಲ್ಲಿಯೇ ತಿನ್ನುತ್ತಾ-ಕುಡಿಯುತ್ತಾ, ನಡೆಯುತ್ತಾ, ಹಾಡುತ್ತಾ, ನರ್ತಿಸುತ್ತಿರುತ್ತೀರಿ. ಪರಿಪಕ್ವವಾದ ರಂಗೇರಿ ಬಿಟ್ಟಿದೆಯಲ್ಲವೆ ಅಥವಾ ಕಚ್ಚಾ ಇದೆಯೇ? ಯಾವ ರಂಗೇರಿದೆ, ಅದು ಕಚ್ಚಾ ಅಥವಾ ಪಕ್ಕಾ? ಕಳೆದುದನ್ನು ಕಳೆದು ಬಿಟ್ಟಿರಾ? ಮರೆತೂ ಸಹ ಹಳೆಯ ಮಾತುಗಳು ನೆನಪಿಗೆ ಬರಬಾರದು. ಹೇಳುತ್ತಾರಲ್ಲವೆ - ಏನು ಮಾಡಲಿ ಬಂದು ಬಿಡುತ್ತದೆ. ಇದು ಮರೆತು ನೆನಪಿಗೆ ಬಂದು ಬಿಡುತ್ತದೆ. ಹೊಸ ಜನ್ಮ, ಹೊಸ ಮಾತು, ಹೊಸ ಸಂಸ್ಕಾರ, ಹೊಸ ಪ್ರಪಂಚ - ಇದು ಬ್ರಾಹ್ಮಣರ ಸಂಸಾರವೇ ಹೊಸ ಸಂಸಾರವಾಗಿದೆ. ಬ್ರಾಹ್ಮಣ ಭಾಷೆಯೂ ಸಹ ಹೊಸದಾಗಿದೆ! ಆತ್ಮದ ಭಾಷೆಯು ಹೊಸದಾಗಿದೆಯಲ್ಲವೆ! ಅವರೇನು ಹೇಳುತ್ತಾರೆ ಮತ್ತು ತಾವೇನು ಹೇಳುತ್ತೀರಿ! ಪರಮಾತ್ಮನ ಬಗ್ಗೆಯೂ ಹೊಸ ಮಾತಿದೆ. ಅಂದಮೇಲೆ ಭಾಷೆಯೂ ಹೊಸದು, ರೀತಿ ಪದ್ಧತಿಯೂ ಹೊಸದು, ಸಂಬಂಧ-ಸಂಪರ್ಕವೂ ಹೊಸದು, ಎಲ್ಲವೂ ಹೊಸದಾಗಿ ಬಿಟ್ಟಿತು. ಹಳೆಯದು ಸಮಾಪ್ತಿಯಾಗಿ ಬಿಟ್ಟಿತು. ಹೊಸದು ಪ್ರಾರಂಭವಾಯಿತು, ಹೊಸ ಗೀತೆಯನ್ನು ಹಾಡುತ್ತೀರಿ, ಹಳೆಯದಲ್ಲ. ಏನು, ಏಕೆ ಎನ್ನುವುದು ಹಳೆಯ ಹಾಡು. ಆಹಾ, ವಾಹ್, ಓಹೋ! ಇದು ಹೊಸ ಹಾಡಾಗಿದೆ. ಅಂದಮೇಲೆ ಯಾವ ಹಾಡನ್ನಾಡುತ್ತೀರಿ? ಅಯ್ಯೊ, ಅಯ್ಯೊ ಎನ್ನುವ ಹಾಡನ್ನಂತು ಹಾಡುವುದಿಲ್ಲವೆ! ಅಯ್ಯೊ, ಅಯ್ಯೊ ಎನ್ನುವವರು ಪ್ರಪಂಚದಲ್ಲಿ ಬಹಳಷ್ಟಿದ್ದಾರೆ, ತಾವಲ್ಲ. ಅಂದಮೇಲೆ ಅವಿನಾಶಿ ಹೋಲಿಯನ್ನಾಚರಿಸಿರಿ ಅರ್ಥಾತ್ ಕಳೆದುದನ್ನು ಕಳೆದು ಸಂಪೂರ್ಣ ಪವಿತ್ರರಾಗಿ ಬಿಟ್ಟಿರಿ. ತಂದೆಯ ಸಂಗದ ರಂಗಿನಲ್ಲಿ ರಂಗಿತರಾಗಿ ಬಿಟ್ಟಿರಿ. ಅಂದಮೇಲೆ ಹೋಲಿಯನ್ನಾಚರಿಸಿದಿರಲ್ಲವೆ!

ಸದಾ ತಂದೆ ಹಾಗೂ ನಾನು, ಜೊತೆ ಜೊತೆಯಿದ್ದೇವೆ ಮತ್ತು ಸಂಗಮಯುಗದಲ್ಲಿ ಸದಾ ಜೊತೆಯಿರುತ್ತೇವೆ. ಬೇರೆಯಾಗಲು ಸಾಧ್ಯವಿಲ್ಲ. ಇಂತಹ ಉಮ್ಮಂಗ-ಉತ್ಸಾಹವು ಹೃದಯದಲ್ಲಿದೆಯಲ್ಲವೆ - ನಾನು ಮತ್ತು ನನ್ನ ಬಾಬಾ! ಅಥವಾ ಪರದೆಯ ಹಿಂದೆ ಮೂರನೆಯವರೇನಾದರೂ ಇದ್ದಾರೆಯೇ? ಕೆಲವೊಮ್ಮ ಇಲಿ, ಕೆಲವೊಮ್ಮ ಬೆಕ್ಕು ಬಂದು ಬಿಡುತ್ತದೆ, ಹೀಗಂತು ಇಲ್ಲವೇ? ಎಲ್ಲವೂ ಸಮಾಪ್ತಿಯಾಗಿ ಬಿಟ್ಟಿದೆಯಲ್ಲವೆ! ಯಾವಾಗ ತಂದೆಯ ಸಿಕ್ಕಿದರೆಂದಮೇಲೆ ಎಲ್ಲವೂ ಸಿಕ್ಕಿತು. ಮತ್ತೇನೂ ಇರುವುದಿಲ್ಲ. ಸಂಬಂಧಿಗಳೂ ಉಳಿದುಕೊಳ್ಳುವುದಿಲ್ಲ, ಖಜಾನೆಯೂ ಉಳಿದುಕೊಳ್ಳುವುದಿಲ್ಲ, ಶಕ್ತಿಯೂ ಉಳಿದುಕೊಳ್ಳುವುದಿಲ್ಲ, ಗುಣಗಳೂ ಉಳಿಯುವುದಿಲ್ಲ, ಜ್ಞಾನ, ಯಾವುದೇ ಪ್ರಾಪ್ತಿಗಳು ಉಳಿದುಕೊಳ್ಳುವುದಿಲ್ಲ. ಮತ್ತೆ ಇನ್ನೇನು ಬೇಕು, ಇದಕ್ಕೆ ಹೇಳಲಾಗುತ್ತದೆ - ಹೋಲಿಯನ್ನಾಚರಿಸುವುದು. ತಿಳಿಯಿತೆ!

ತಾವುಗಳು ಎಷ್ಟೊಂದು ಮೋಜಿನಲ್ಲಿರುತ್ತೀರಿ. ನಿಶ್ಚಿಂತ ಚಕ್ರವರ್ತಿ, ಕವಡೆಯಿಲ್ಲದೆಯೂ ಚಕ್ರವರ್ತಿ, ನಿಶ್ಚಿಂತ ಪುರಿಯ ಚಕ್ರವರ್ತಿ. ಇಂತಹ ಮೋಜಿನಲ್ಲಿ ಯಾರೂ ಸಹ ಇರಲು ಸಾಧ್ಯವಿಲ್ಲ. ಪ್ರಪಂಚದ ಸಾಹುಕಾರರಿಗಿಂತ ಸಾಹುಕಾರರಿರಲಿ ಅಥವಾ ಪ್ರಪಂಚದಲ್ಲಿ ಹೆಸರುವಾಸಿಯಾದ ಯಾವುದೇ ವ್ಯಕ್ತಿಯಿರಲಿ, ಬಹಳಷ್ಟೇ ಶಾಸ್ತ್ರವಾದಿಯಾಗಿರಲಿ, ವೇದಗಳನ್ನು ಪಠಿಸುವವರಾಗಿರಲಿ, ನೌಧಾಭಕ್ತನಾಗಿರಲಿ, ನಂಬರ್ವನ್ ವಿಜ್ಞಾನಿಯಾಗಿರಲಿ, ಯಾವುದೇ ಕರ್ತವ್ಯದವರಾಗಿರಲಿ ಆದರೆ ಇಂತಹ ಮೋಜಿನ ಜೀವನವಾಗಲು ಸಾಧ್ಯವಿಲ್ಲ. ಯಾವುದರಲ್ಲಿ ಪರಿಶ್ರಮವೇ ಇಲ್ಲ, ಪ್ರೀತಿಯೇ ಪ್ರೀತಿಯಿದೆ, ಚಿಂತೆಯಿಲ್ಲ ಆದರೆ ಶುಭ ಚಿಂತಕನಿದ್ದಾರೆ, ಶುಭ ಚಿಂತನೆಯಿದೆ, ಇಂತಹ ಮೋಜಿನ ಜೀವನವನ್ನು ಇಡೀ ವಿಶ್ವದಲ್ಲಿ ಪರಿಕ್ರಮಣ ಹಾಕಿ ಬನ್ನಿರಿ, ಒಂದುವೇಳೆ ಯಾರಾದರೂ ಸಿಕ್ಕಿದರೆ ಕರೆದುಕೊಂಡು ಬನ್ನಿರಿ. ಆದ್ದರಿಂದ ಹಾಡನ್ನಾಡುತ್ತಾರಲ್ಲವೆ - ಮಧುಬನದಲ್ಲಿ, ತಂದೆಯ ಸಂಸಾರದಲ್ಲಿ ಮೋಜೇ ಮೋಜಿದೆ. ತಿನ್ನುತ್ತಿರುವಾಗಲೂ ಮೋಜು, ಮಲಗುವಾಗಲೂ ಮೋಜು, ಗುಳಿಗೆಯನ್ನು ನುಂಗಿ ಮಲಗಬೇಕಾಗಿರುವುದಿಲ್ಲ. ತಂದೆಯು ಜೊತೆಯಿರಲಿ, ಬಾಬಾ ತಮ್ಮ ಜೊತೆ ಮಲಗುತ್ತಿದ್ದೇನೆ - ಇದು ಗುಳಿಗೆಯಾಗಿದೆ. ಮತ್ತೆ ಇಂತಹ ಸಮಯವೂ ಬರುತ್ತದೆ, ಹೇಗೆ ಆದಿಯಲ್ಲಿ ಔಷಧಿಗಳೇ ಉಪಯೋಗಿಸುತ್ತಿರಲಿಲ್ಲ. ನೆನಪಿದೆಯಲ್ಲವೆ. ಪ್ರಾರಂಭದಲ್ಲಿ ಎಷ್ಟು ಸಮಯ ಔಷಧಿಗಳಿರಲಿಲ್ಲ, ಹಾ, ಸ್ವಲ್ಪ ಕೆನೆ-ಬೆಣ್ಣೆಯನ್ನು ತಿಂದಿರಿ. ಔಷಧಿಯನ್ನು ತಿನ್ನುತ್ತಿರಲಿಲ್ಲ. ಅಂದಮೇಲೆ ಹೇಗೆ ಆದಿಯಲ್ಲಿ ಅಭ್ಯಾಸ ಮಾಡಿಸಲಾಯಿತಲ್ಲವೆ. ಇದ್ದಿದ್ದಂತು ಹಳೆಯ ಶರೀರ. ಅಂತ್ಯದಲ್ಲಿ ಮತ್ತೆ ಆ ಆದಿಯ ದಿನಗಳು ರಿಪೀಟ್ ಆಗುತ್ತದೆ. ಸಾಕ್ಷಾತ್ಕಾರವೂ ಸಹ ಎಲ್ಲರೂ ಬಹಳ ವಿಚಿತ್ರವಾಗಿ ಮಾಡುತ್ತಿರುತ್ತೀರಿ. ಅನೇಕರಿಗೆ ಇಚ್ಛೆಯಿದೆಯಲ್ಲವೆ - ಒಂದು ಸಾರಿ ಸಾಕ್ಷಾತ್ಕಾರವಾಗಿ ಬಿಡಲಿ ಎಂದು. ಅಂತ್ಯದವರೆಗೆ ಯಾರು ಪರಿಪಕ್ವವಾಗುತ್ತಾರೆ, ಅವರಿಗೆ ಸಾಕ್ಷಾತ್ಕಾರವಾಗುತ್ತದೆ. ನಂತರ ಅದೇ ಸಂಘಟನೆಯ ಭಟ್ಟಿಯಾಗುತ್ತದೆ. ಸೇವೆಯೂ ಪೂರ್ಣವಾಗಿ ಬಿಡುತ್ತದೆ. ಈಗ ಸೇವೆಯ ಕಾರಣದಿಂದ ಎಲ್ಲೆಂದರಲ್ಲಿ ಚದುರಿ ಬಿಟ್ಟಿದ್ದೀರಿ! ನಂತರ ನದಿಗಳೆಲ್ಲವೂ ಸಾಗರದಲ್ಲಿ ಸಮಾವೇಶವಾಗಿ ಬಿಡುತ್ತದೆ. ಆದರೆ ಸಮಯವು ನಾಜೂಕಾಗುತ್ತದೆ. ಸಾಧನಗಳಿದ್ದರೂ ಸಹ ಕೆಲಸ ಮಾಡುವುದಿಲ್ಲ ಆದ್ದರಿಂದ ಬುದ್ಧಿಯ ಲೈನ್ ಬಹಳ ಕ್ಲಿಯರ್ ಆಗಿರಬೇಕು. ಈಗ ಏನು ಮಾಡಬೇಕು ಎನ್ನುವುದು ಟಚ್ ಆಗಿ ಬಿಡಬೇಕು. ಒಂದು ಸೆಕೆಂಡ್ ಸಹ ನಿಧಾನ ಮಾಡಿದಿರೆಂದರೆ, ಹೋಯಿತು. ಹೇಗೆ ಅವರೂ ಸಹ ಒಂದುವೇಳೆ ಬಟನ್ ಒತ್ತುವುದರಲ್ಲಿ ಒಂದು ಸೆಕೆಂಡ್ ನಿಧಾನ ಮಾಡಿದರೆ ಫಲಿತಾಂಶವೇನಾಗುತ್ತದೆ? ಇದೂ ಸಹ ಒಂದುವೇಳೆ ಒಂದು ಸೆಕೆಂಡ್ ಟಚಿಂಗ್ ಆಗುವುದರಲ್ಲಿ ತಡವಾಯಿತೆಂದರೆ, ಮತ್ತೆ ತಲುಪುವುದು ಕಷ್ಟವಾಗುತ್ತದೆ. ಅವರುಗಳೂ ಸಹ ಎಷ್ಟೊಂದು ಗಮನದಿಂದ ಕುಳಿತಿರುತ್ತಾರೆ. ಅಂದಮೇಲೆ ಇದು ಬುದ್ಧಿಯ ಟಚಿಂಗ್ ಆಗಿದೆ. ಹೇಗೆ ಪ್ರಾರಂಭದಲ್ಲಿ ಮನೆಯಲ್ಲಿ ಕುಳಿತಿರುವಾಗಲೇ ಧ್ವನಿ ಬಂದಿತು, ಕರೆ ಬಂದಿತು - ಬನ್ನಿ, ತಲುಪಿ, ಈಗ ಹೊರಡಿ. ಮತ್ತೆ ತಕ್ಷಣವೇ ಹೊರಟಿರಿ. ಹಾಗೆಯೇ ಅಂತ್ಯದಲ್ಲಿಯೂ ತಂದೆಯ ಧ್ವನಿ ತಲುಪುತ್ತದೆ. ಹೇಗೆ ಸಾಕಾರದಲ್ಲಿ ಎಲ್ಲಾ ಮಕ್ಕಳನ್ನು ಕರೆದರು. ಹಾಗೆಯೇ ಆಕಾರ ರೂಪದಲ್ಲಿಯೂ ಎಲ್ಲಾ ಮಕ್ಕಳನ್ನು ಬನ್ನಿರಿ, ಬನ್ನಿರಿ ಎಂದು ಆಹ್ವಾನ ಮಾಡುತ್ತಾರೆ. ಇಷ್ಟೇ, ಬರುವುದು ಮತ್ತು ಜೊತೆ ಹೋಗುವುದು. ಹೀಗೆ ಬುದ್ಧಿಯು ಸದಾ ಕ್ಲಿಯರ್ ಆಗಿರಲಿ ಮತ್ತು ಎಲ್ಲಿಯೇ ಗಮನ ಹೋಯಿತೆಂದರೆ ತಂದೆಯ ಧ್ವನಿ, ತಂದೆಯ ಆಹ್ವಾನವು ಮಿಸ್ ಆಗಿ ಬಿಡುತ್ತದೆ. ಇದೆಲ್ಲವೂ ಆಗಲೇಬೇಕು.

ಟೀಚರ್ಸಂತು ಯೋಚಿಸುತ್ತಿದ್ದಾರೆ - ನಾವಂತು ತಲುಪಿ ಬಿಟ್ಟಿದ್ದೇವೆ ಎಂದು. ತಮಗೆ ಅಲ್ಲಿಯೇ ತಂದೆಯು ಡೈರೆಕ್ಷನ್ ಕೊಡುವಂತೆಯೂ ಆಗಬಹುದು. ಅಲ್ಲಿ ಯಾವುದೇ ವಿಶೇಷವಾದ ಕಾರ್ಯವಿರಬಹುದು, ಅಲ್ಲಿ ಇನ್ನ್ಯಾರಿಗಾದರೂ ಶಕ್ತಿಯನ್ನು ಕೊಡುವುದಿರಬಹುದು, ಜೊತೆಗೆ ಕರೆದುಕೊಂಡು ಹೋಗುವುದಿರಬಹುದು. ಇದೂ ಸಹ ಇರಬಹುದು ಆದರೆ ತಂದೆಯ ಡೈರೆಕ್ಷನ್ ಅನುಸಾರವಾಗಿರಲಿ, ಮನಮತದಂತಲ್ಲ. ಸೆಳೆತದಿಂದಲ್ಲ. ಅಯ್ಯೊ ನನ್ನ ಸೆಂಟರ್, ಇದು ನೆನಪು ಬರಬಾರದು. ಇಂತಹ ಜಿಜ್ಞಾಸುವನ್ನು ಸಹ ಜೊತೆಗೆ ಕರೆದುಕೊಂಡು ಹೋಗೋಣ, ಇವರು ಅನನ್ಯ ಮಗು, ಸಹಯೋಗಿಯಿದ್ದಾರೆ, ಹೀಗೂ ಇಲ್ಲ. ಯಾರಿಗಾದರೂ ಒಂದುವೇಳೆ ನಿಂತಿರೆಂದರೆ ಉಳಿದುಕೊಂಡು ಬಿಡುತ್ತೀರಿ. ಈ ರೀತಿ ತಯಾರಾಗಿದ್ದೀರಲ್ಲವೆ. ಇದಕ್ಕೆ ಹೇಳಲಾಗುತ್ತದೆ ಎವರೆಡಿ ಇರುವುದು. ಸದಾಕಾಲವೂ ಎಲ್ಲವೂ ಸಿದ್ಧವಾಗಿರಲಿ. ಆ ಸಮಯದಲ್ಲಿ ಸಿದ್ಧವಾಗುವ ಸಂಕಲ್ಪವೂ ಬರಬಾರದು, ಇದನ್ನು ಮಾಡಿ ಬಿಡೋಣ, ಇದನ್ನು ಮಾಡಿ ಬಿಡೋಣ. ಸಾಕಾರದಲ್ಲಿ ನೆನಪಿದೆಯಲ್ಲವೆ - ಯಾರು ಸೇವಾಧಾರಿ ಮಕ್ಕಳಿದ್ದರು, ಅವರ ಸ್ಥೂಲ ಬ್ಯಾಗ್-ಬ್ಯಾಗೇಜ್ ಸದಾ ತಯಾರಾಗಿರುತ್ತಿತ್ತು. ಟ್ರೈನ್ ತಲುಪುವುದಕ್ಕೆ 5 ನಿಮಿಷಗಳಿರುತ್ತಿತ್ತು ಮತ್ತು ಡೈರೆಕ್ಷನ್ ಸಿಗುತ್ತಿತ್ತು - ಮಗು ಹೋಗಿ ಎಂದು. ಆಗ ಬ್ಯಾಗ್-ಬ್ಯಾಗೇಜ್ ತಯಾರಾಗಿರುತ್ತಿತ್ತು. ಒಂದು ಸ್ಟೇಷನ್ಗೆ ಮುಂಚೆಯೇ ಟ್ರೈನ್ ತಲುಪಿ ಬಿಡುತ್ತಿತ್ತು - ಮತ್ತು ಅವರು ಹೋಗುತ್ತಿದ್ದರು. ಇಂತಹ ಅನುಭವವನ್ನೂ ಮಾಡಿದಿರಲ್ಲವೆ. ಇದೂ ಸಹ ಮನಸ್ಸಿನ ಸ್ಥಿತಿಯಲ್ಲಿ ಬ್ಯಾಗ್-ಬ್ಯಾಗೇಜ್ ತಯಾರಿರಲಿ. ತಂದೆಯು ಕರೆದರು ಮತ್ತು ಮಕ್ಕಳು ಆಯಿತು ಹಾಜಿರ್ ಆಗಿ ಬಿಡಬೇಕು. ಇದಕ್ಕೆ ಎವರೆಡಿ ಎಂದು ಹೇಳಲಾಗುತ್ತದೆ. ಒಳ್ಳೆಯದು.

ಹೀಗೆ ಸದಾ ಸಂಗದ ರಂಗಿನಲ್ಲಿ ರಂಗಿತರಾಗಿರುವ, ಸದಾ ಕಳೆದು ಹೋದದ್ದನ್ನು ಕಳೆದು ವರ್ತಮಾನ ಮತ್ತು ಭವಿಷ್ಯವನ್ನು ಶ್ರೇಷ್ಠವನ್ನಾಗಿಸಿಕೊಳ್ಳುವ, ಸದಾ ಪರಮಾತ್ಮನ ಮಿಲನವನ್ನಾಚರಿಸುವ, ಸದಾ ಪ್ರತೀ ಕಾರ್ಯದಲ್ಲಿ ನೆನಪಿನಲ್ಲಿದ್ದು ಮಾಡುವಂತಹ ಅರ್ಥಾತ್ ಪ್ರತೀ ಕರ್ಮದ ನೆನಪಾರ್ಥವನ್ನು ಮಾಡುವಂತಹ, ಸದಾ ಖುಷಿಯಲ್ಲಿ ನರ್ತಿಸುತ್ತಾ ಹಾಡುತ್ತಾ ಸಂಗಮಯುಗದ ಮೋಜನ್ನಾಚರಿಸುವ, ಹೀಗೆ ತಂದೆಯ ಸಮಾನ ಪ್ರತೀ ಸಂಕಲ್ಪವನ್ನು ಕ್ಯಾಚ್ ಮಾಡುವಂತಹ, ಸದಾ ಬುದ್ಧಿ ಶ್ರೇಷ್ಠ ಮತ್ತು ಸ್ಪಷ್ಟವಾಗಿಟ್ಟುಕೊಳ್ಳುವ, ಇಂತಹ ಹೋಲಿ ಹಂಸಗಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಬಾಪ್ದಾದಾರವರು ಎಲ್ಲಾ ಮಕ್ಕಳ ಪತ್ರಗಳ ಉತ್ತರವನ್ನು ಕೊಡುತ್ತಾ ಹೋಲಿಯ ಶುಭಾಷಯಗಳನ್ನು ಕೊಟ್ಟರು.
ನಾಲ್ಕೂ ಕಡೆಯಲ್ಲಿರುವ ದೇಶ-ವಿದೇಶ ಸರ್ವ ಮಕ್ಕಳಿಗೆ ಸ್ನೇಹ ತುಂಬಿದ, ಉಮ್ಮಂಗ-ಉತ್ಸಾಹ ತುಂಬಿದ ಹಾಗೂ ಎಲ್ಲೆಲ್ಲಿ ತಮ್ಮ ಪುರುಷಾರ್ಥದ ಪ್ರತಿಜ್ಞೆ ತುಂಬಿರುವ ಎಲ್ಲಾ ಪತ್ರಗಳು ಮತ್ತು ಸಂದೇಶಗಳು ಬಾಪ್ದಾದಾರವರಿಗೆ ಪ್ರಾಪ್ತಿಯಾಯಿತು. ಬಾಪ್ದಾದಾರವರು ಎಲ್ಲಾ ಹೋಲಿ ಹಂಸಗಳಿಗೆ ಸದಾ "ಹೇಗೆ ತಂದೆಯೋ ಹಾಗೆ ನಾನು" ಈ ಸ್ಮೃತಿಯ ವಿಶೇಷ ಸ್ಲೋಗನ್ನ್ನು ವರದಾನದ ರೂಪದಲ್ಲಿ ನೆನಪು ತರಿಸುತ್ತಿದ್ದಾರೆ. ಯಾವುದೇ ಕರ್ಮವನ್ನು ಮಾಡುತ್ತಿದ್ದರೂ ಸಂಕಲ್ಪ ಮಾಡುವ ಮೊದಲು ಪರಿಶೀಲಿಸಿರಿ - ತಂದೆಯ ಸಂಕಲ್ಪವೇನಿದೆಯೋ ಅದು ಈ ಸಂಕಲ್ಪವಿದೆಯೇ! ತಂದೆಯ ಕರ್ಮವೇನಿದೆಯೋ ಅದೇ ನನ್ನ ಕರ್ಮವಾಗಿದೆಯೇ. ಸೆಕೆಂಡಿನಲ್ಲಿ ಪರಿಶೀಲಿಸಿ ಮತ್ತೆ ನಂತರ ಸಾಕಾರದಲ್ಲಿ ತನ್ನಿರಿ. ಅದರಿಂದ ಸದಾ ತಂದೆಯ ಸಮಾನ ಶಕ್ತಿಶಾಲಿ ಆತ್ಮರಾಗಿದ್ದು ಸಫಲತೆಯ ಅನುಭವ ಮಾಡುವಿರಿ. ಸಫಲತೆಯು ಜನ್ಮ ಸಿದ್ಧ ಅಧಿಕಾರವಾಗಿದೆ - ಹೀಗೆ ಸಹಜ ಪ್ರಾಪ್ತಿಯ ಅನುಭವ ಮಾಡುವಿರಿ. ಸಫಲತೆಯ ನಕ್ಷತ್ರವು ಸ್ವಯಂ ನಾನಿದ್ದೇನೆ ಅಂದಮೇಲೆ ಸಫಲತೆಯು ನನ್ನಿಂದ ಬೇರೆಯಾಗಲು ಸಾಧ್ಯವಿಲ್ಲ. ಸಫಲತೆಯ ಮಾಲೆಯು ಸದಾ ಕೊರಳಿನಲ್ಲಿ ಇರುತ್ತದೆ ಅರ್ಥಾತ್ ಪ್ರತೀ ಕರ್ಮದಲ್ಲಿ ಅನುಭವ ಮಾಡುತ್ತಿರುತ್ತೀರಿ. ಬಾಪ್ದಾದಾರವರು ಇಂದಿನ ಈ ಹೋಲಿಯ ಸಂಘಟನೆಯಲ್ಲಿ ತಾವೆಲ್ಲಾ ಹೋಲಿ ಹಂಸಗಳನ್ನು ಸನ್ಮುಖದಲ್ಲಿ ನೋಡುತ್ತಿದ್ದಾರೆ, ಆಚರಿಸುತ್ತಿದ್ದಾರೆ. ಸ್ನೇಹದಿಂದ ಎಲ್ಲರನ್ನೂ ನೋಡುತ್ತಿದ್ದಾರೆ - ಎಲ್ಲರ ವಿಶೇಷತೆಯ ವೆರೈಟಿ ಸುಗಂಧವನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರ ವಿಶೇಷತೆಯ ಎಷ್ಟೊಂದು ಮಧುರವಾದ ಸುಗಂಧವಿದೆ! ತಂದೆಯು ಪ್ರತಿಯೊಂದು ವಿಶೇಷ ಆತ್ಮನನ್ನು ವಿಶೇಷತೆಯಿಂದ ನೋಡುತ್ತಾ ಇದೇ ಹಾಡನ್ನು ಹಾಡುತ್ತಾರೆ - ವಾಹ್ ನನ್ನ ಸಹಜಯೋಗಿ ಮಗು! ವಾಹ್ ನನ್ನ ಪದಮಾಪದಮ ಭಾಗ್ಯಶಾಲಿ ಮಗು! ಅಂದಮೇಲೆ ಎಲ್ಲರೂ ತಮ್ಮ-ತಮ್ಮ ವಿಶೇಷತೆ ಮತ್ತು ಹೆಸರಿನ ಸಹಿತವಾಗಿ ಸನ್ಮುಖದಲ್ಲಿ ತಮ್ಮನ್ನು ಅನುಭವ ಮಾಡುತ್ತಾ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡುವುದು ಮತ್ತು ಸದಾ ತಂದೆಯ ಛತ್ರಛಾಯೆಯಲ್ಲಿದ್ದು ಮಾಯೆಯಿಂದ ಗಾಬರಿಯಾಗಬಾರದು. ಚಿಕ್ಕ ಮಾತಾಗಿದೆ, ದೊಡ್ಡ ಮಾತೇನಿಲ್ಲ. ಚಿಕ್ಕದನ್ನು ದೊಡ್ಡದನ್ನಾಗಿ ಮಾಡಬಾರದು. ದೊಡ್ಡದನ್ನು ಚಿಕ್ಕದನ್ನಾಗಿ ಮಾಡಬೇಕು. ಶ್ರೇಷ್ಠವಾಗಿರುತ್ತೀರೆಂದರೆ ದೊಡ್ಡದು ಚಿಕ್ಕದಾಗಿ ಬಿಡುತ್ತದೆ. ಕೆಳಗಿರುತ್ತೀರೆಂದರೆ ಚಿಕ್ಕದೂ ಸಹ ದೊಡ್ಡದಾಗಿ ಬಿಡುತ್ತದೆ. ಆದ್ದರಿಂದ ಬಾಪ್ದಾದಾರವರು ಜೊತೆಯಿದ್ದಾರೆ, ಅವರ ಹಸ್ತ (ಶ್ರೀಮತ)ವಿದೆಯೆಂದಾಗ ಗಾಬರಿಯಲ್ಲ, ಚೆನ್ನಾಗಿ ಹಾರಿರಿ. ಹಾರುವ ಕಲೆಯಿಂದ ಸೆಕೆಂಡಿನಲ್ಲಿ ಎಲ್ಲರನ್ನೂ ಪಾರು ಮಾಡಿರಿ. ತಂದೆಯ ಜೊತೆಯು ಸದಾ ಸುರಕ್ಷಿತವಾಡುತ್ತದೆ ಮತ್ತು ಇಡುತ್ತಾರೆ. ಒಳ್ಳೆಯದು. ಎಲ್ಲರಿಗೂ ಅಗಲಿ ಮರಳಿ ಸಿಕ್ಕಿರುವ, ಮುದ್ದಾದವರೆಂದು ಹೇಳುತ್ತಾ ಬಾಪ್ದಾದಾರವರು ಹೋಲಿಯ ಶುಭಾಷಯಗಳನ್ನು ಕೊಡುತ್ತಿದ್ದಾರೆ. (ನಂತರದಲ್ಲಂತು ಬಾಪ್ದಾದಾರವರೊಂದಿಗೆ ಎಲ್ಲಾ ಮಕ್ಕಳು ಹೋಲಿಯನ್ನಾಚರಿಸಿದರು ಹಾಗೂ ಪಿಕ್ನಿಕ್ ಮಾಡಿದರು)

ವರದಾನ:  
ಶ್ರೇಷ್ಠ ತಂದೆ, ಶ್ರೇಷ್ಠ ನಾವು ಮತ್ತು ಶ್ರೇಷ್ಠ ಕಾರ್ಯ - ಈ ಸ್ಮೃತಿಯಿಂದ ಶಕ್ತಿಶಾಲಿಯಾಗುವಂತಹ ತಂದೆಯ ಸಮಾನ ಭವ.

ಹೇಗೆ ವರ್ತಮಾನದ ಪ್ರಪಂಚದಲ್ಲಿ ಯಾರೇ ವಿ.ಐ.ಪಿ.,ಯ ಮಗನಾಗಿರುತ್ತಾನೆಂದರೆ, ಅವರು ತನ್ನನ್ನೂ ಸಹ ವಿ.ಐ.ಪಿ.,ಯೆಂದೇ ತಿಳಿಯುತ್ತಾರೆ. ಆದರೆ ತಂದೆಗಿಂತ ಶ್ರೇಷ್ಠರಂತು ಯಾರೂ ಇಲ್ಲ. ನಾವೂ ಸಹ ಹಾಗೆಯೇ ಸರ್ವ ಶ್ರೇಷ್ಠ ತಂದೆಯ ಸಂತಾನ, ಶ್ರೇಷ್ಠ ಆತ್ಮರಿದ್ದೇವೆ - ಈ ಸ್ಮೃತಿಯು ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಶ್ರೇಷ್ಠ ತಂದೆ, ಶ್ರೇಷ್ಠವಾಗಿರುವ ನಾವು ಮತ್ತು ಶ್ರೇಷ್ಠ ಕಾರ್ಯ - ಇಂತಹ ಸ್ಮೃತಿಯಲ್ಲಿರುವವರು ಸದಾ ತಂದೆಯ ಸಮಾನರಾಗಿ ಬಿಡುತ್ತಾರೆ. ಇಡೀ ವಿಶ್ವದ ಮುಂದೆ ಶ್ರೇಷ್ಠ ಮತ್ತು ಶ್ರೇಷ್ಠ ಆತ್ಮರು ತಾವಲ್ಲದೆ ಮತ್ತ್ಯಾರೂ ಇಲ್ಲ, ಆದ್ದರಿಂದ ತಮ್ಮದೇ ಗಾಯನ ಮತ್ತು ಪೂಜೆಯಾಗುತ್ತದೆ.

ಸ್ಲೋಗನ್:
ಸಂಪೂರ್ಣತೆಯ ದರ್ಪಣದಲ್ಲಿ ಸೂಕ್ಷ್ಮ ಸೆಳೆತಗಳನ್ನು ಪರಿಶೀಲಿಸಿರಿ ಮತ್ತು ಮುಕ್ತರಾಗಿರಿ.