10.11.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯ ಸಮಾನ ಅವಶ್ಯವಾಗಿ ಮುರುಳೀಧರರಾಗಬೇಕಾಗಿದೆ, ಮುರುಳೀಧರ ಮಕ್ಕಳೇ ತಂದೆಗೆ
ಸಹಯೋಗಿಗಳಾಗಿದ್ದಾರೆ, ತಂದೆಯು ಅವರ ಮೇಲೆಯೇ ಪ್ರಸನ್ನರಾಗುತ್ತಾರೆ”
ಪ್ರಶ್ನೆ:
ಯಾವ ಮಕ್ಕಳ
ಬುದ್ಧಿಯು ತುಂಬಾ ನಿರ್ಮಾಣವಾಗಿರುತ್ತದೆ?
ಉತ್ತರ:
ಯಾರು ಅವಿನಾಶಿ
ಜ್ಞಾನರತ್ನಗಳನ್ನು ದಾನ ಮಾಡಿ ಸತ್ಯ ದಾನಿಗಳಾಗುತ್ತಾರೆ, ಬುದ್ಧಿವಂತ ಮಾರಾಟಗಾರರಾಗಿರುತ್ತಾರೆ,
ಅವರ ಬುದ್ಧಿಯು ತುಂಬಾ ನಿರ್ಮಾಣವಾಗಿರುತ್ತದೆ. ಸರ್ವೀಸ್ ಮಾಡುತ್ತಾ-ಮಾಡುತ್ತಾ ಬುದ್ಧಿಯು
ಪರಿಶುದ್ಧವಾಗುತ್ತದೆ. ದಾನ ಮಾಡುವುದರಲ್ಲಿ ಎಂದೂ ಸಹ ಅಭಿಮಾನ ಬರಬಾರದು. ಶಿವತಂದೆ
ಕೊಟ್ಟಿರುವುದನ್ನು ನೀಡುತ್ತಿದ್ದೇನೆ ಎಂಬುದು ಬುದ್ಧಿಯಲ್ಲಿ ಯಾವಾಗಲೂ ಇರಲಿ. ಶಿವ ಬಾಬಾನ ನೆನಪು
ಇರುವುದರಿಂದ ಕಲ್ಯಾಣ ವಾಗುತ್ತದೆ.
ಗೀತೆ:
ನೀವೇ ಮಾತಾ-ಪಿತ.....
ಓಂ ಶಾಂತಿ.
ಕೇವಲ ಮಾತಾಪಿತರವರ ಗೀತೆಯನ್ನು ಕೇಳುವುದರಿಂದ ಹೆಸರು ಸಿದ್ಧವಾಗುವುದಿಲ್ಲ. ಮೊದಲು ಶಿವಾಯ ನಮಃ, ಈ
ಗೀತೆಯನ್ನು ಕೇಳಿ ನಂತರ ಮಾತಾಪಿತರ ಗೀತೆಯನ್ನು ಕೇಳುವುದರಿಂದ ಜ್ಞಾನದ ಅರಿವಾಗುತ್ತದೆ.
ಮನುಷ್ಯರಂತೂ ಮಂದಿರಗಳಿಗೆ ಹೋಗುತ್ತಾರೆ, ಲಕ್ಷ್ಮಿ-ನಾರಾಯಣನ ಮಂದಿರಕ್ಕೆ ಹೋಗುತ್ತಾರೆ, ಕೃಷ್ಣನ
ಮಂದಿರಕ್ಕೆ ಹೋಗುತ್ತಾರೆ ಎಲ್ಲರ ಮುಂದೆ ನೀವೇ ಮಾತಾಪಿತ..... ಎಂದು ಅರ್ಥವಿಲ್ಲದೆ ಹೇಳುತ್ತಾರೆ.
ಮೊದಲು ಶಿವಾಯ ನಮಃ ಹಾಡನ್ನು ಕೇಳಿಸಿ ನಂತರ ಮಾತಾಪಿತರ ಹಾಡನ್ನು ಕೇಳಿಸುವುದರಿಂದ ಮಹಿಮೆಯ
ಅರಿವಾಗುತ್ತದೆ. ಹೊಸಬರು ಯಾರಾದರೂ ಬಂದರೆ ಈ ಹಾಡು ಚೆನ್ನಾಗಿರುತ್ತದೆ, ತಿಳಿಸಲೂ ಸಹಜವಾಗುತ್ತದೆ.
ತಂದೆಯ ಹೆಸರೆ ಶಿವ ಆಗಿದೆ. ಶಿವ ಸರ್ವವ್ಯಾಪಿಯೆಂದು ಹೇಳುವುದಿಲ್ಲ. ಹಾಗಾದರೆ ಎಲ್ಲರ ಮಹಿಮೆಯೂ
ಒಂದೇ ಆಗಿಬಿಡುತ್ತದೆ. ಇವರ ಹೆಸರೇ ಆಗಿದೆ ಶಿವ. ಬೇರೆ ಯಾರೂ ತನ್ನ ಮೇಲೆ ಶಿವಾಯನಮಃ ಎಂದು
ಹೆಸರನ್ನಿಟ್ಟುಕೊಳ್ಳಲು ಸಾಧ್ಯವಿಲ್ಲ. ಅವರ ಮತ ಮತ್ತು ಗತಿ (ಸ್ಥಿತಿ) ಎಲ್ಲಾ ಮನುಷ್ಯರಿಗಿಂತಲೂ
ಭಿನ್ನವಾದದ್ದಾಗಿದೆ, ದೇವತೆಗಳಗಿಂತಲೂ ಭಿನ್ನವಾಗಿದೆ. ಈ ಜ್ಞಾನವನ್ನು ಕಲಿಸುವಂತಹವರು
ಮಾತಾಪಿತರಾಗಿದ್ದಾರೆ. ಸನ್ಯಾಸಿಗಳಲ್ಲಿ ಮಾತೆಯರಿರುವುದಿಲ್ಲ ಆದ್ದರಿಂದ ಕಲಿಸಲು ಸಾಧ್ಯವಿಲ್ಲ.
ಶಿವಾಯನಮಃ ಎಂದು ಯಾರಿಗೂ ಸಹ ಹೇಳಲು ಸಾಧ್ಯವಿಲ್ಲ. ಎಲ್ಲರೂ ಶಿವನಾಗಲು ಹೇಗೆ ಸಾಧ್ಯವಿದೆ ಎಂದು
ತಿಳಿಸಿಕೊಡಬೇಕು ದೇಹಧಾರಿಗೆ ಶಿವಾಯನಮಃ ಎಂದು ಹೇಳುತ್ತಾರೇನು? ಇದು ತಿಳಿಸಬೇಕಾಗಿದೆ. ಆದರೆ ನೀವು
ಮಕ್ಕಳಲ್ಲಿಯೂ ಸಹ ನಂಬರ್ವಾರ್ ಇದ್ದೀರಿ. ಒಳ್ಳೊಳ್ಳೆಯ ಮಕ್ಕಳೂ ಸಹ ಮುಖ್ಯವಾದ ವಿಷಯಗಳನ್ನು
ಬಿಟ್ಟುಬಿಡುತ್ತಾರೆ. ತನಗೆ ಎಲ್ಲವೂ ತಿಳಿದಿದೆ ಎಂದು ತನ್ನನ್ನು ತಿಳಿದುಕೊಳ್ಳುತ್ತಾರೆ. ಇದರಲ್ಲಿ
ಹೃದಯದ ಸ್ವಚ್ಛತೆ ಬೇಕು. ಪ್ರತಿಯೊಂದು ಮಾತಿನಲ್ಲಿ ಸತ್ಯವನ್ನು ಹೇಳುವುದು, ಸತ್ಯವಾಗಿರುವುದು -
ಇದರಲ್ಲಿ ಸಮಯ ಹಿಡಿಸುತ್ತದೆ. ದೇಹಾಭಿಮಾನದಲ್ಲಿ ಬರುವುದರಿಂದ ಆಕರ್ಷಣೆ ಮುಂತಾದ ಮಾತುಗಳು
ಬರುತ್ತವೆ. ನಾನೀಗ ಆತ್ಮಾಭಿಮಾನಿಯಾಗಿದ್ದೇನೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗಾದರೆ
ಕರ್ಮಾತೀತ ಅವಸ್ಥೆಗೆ ತಲುಪಿಬಿಡುತ್ತಾರೆ. ಆದರೆ ನಂಬರ್ವಾರ್ ಇದ್ದಾರೆ. ಕೆಲವರಂತೂ ಕುಪುತ್ರ
ಮಕ್ಕಳಿದ್ದಾರೆ. ಯಾರು ತಂದೆಯ ಸೇವೆಯನ್ನು ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ. ಶಿವತಂದೆಯ
ಹೃದಯವನ್ನೇರಿದಾಗ ರುದ್ರಮಾಲೆಯಲ್ಲಿ ಸಮೀಪ ಬರುತ್ತಾರೆ ಮತ್ತು ಸಿಂಹಾಸನಕ್ಕೆ ಯೋಗ್ಯರಾಗುತ್ತಾರೆ.
ಸುಪುತ್ರ ಮಕ್ಕಳೇ ಲೌಕಿಕ ತಂದೆಯ ಹೃದಯವನ್ನೇರುತ್ತಾರೆ, ಯಾರು ತಂದೆಯ ಜೊತೆ ಸಹಯೋಗಿಗಳಾಗುತ್ತಾರೆ.
ಇದೂ ಸಹ ಬೇಹದ್ದಿನ ತಂದೆಯ ಅವಿನಾಶಿ ಜ್ಞಾನರತ್ನಗಳ ವ್ಯಾಪಾರವಾಗಿದೆ ಅಂದಾಗ ವ್ಯಾಪಾರದಲ್ಲಿ ಸಹಾಯ
ಮಾಡುವವರ ಮೇಲೆಯೇ ತಂದೆಯು ಪ್ರಸನ್ನರಾಗುತ್ತಾರೆ. ಅವಿನಾಶಿ ಜ್ಞಾನರತ್ನಗಳ ದಾನ ಮಾಡಿ ಹಾಗೂ
ಮಾಡಿಸಬೇಕು. ಕೆಲವರು ನಾನು ವಿಮೆ ಮಾಡಿದ್ದೇನೆ ಎಂದು ತಿಳಿದುಕೊಳ್ಳುತ್ತಾರೆ, ಅದರ ಪ್ರತಿಯಾಗಿ
ತಮಗೆ ಸಿಗುತ್ತದೆ. ಇಲ್ಲಿ ಅನೇಕರಿಗೆ ದಾನ ಮಾಡಬೇಕು. ತಂದೆಯ ಸಮಾನ ಅವಿನಾಶಿ ಜ್ಞಾನರತ್ನಗಳ
ಉದಾರದಾನಿಗಳಾಗಬೇಕು. ತಂದೆಯು ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬುವುದಕ್ಕೇ ಬರುತ್ತಾರೆ,
ಸ್ಥೂಲಧನದ ಮಾತಿಲ್ಲ. ತಂದೆಗೆ ಸುಪುತ್ರ ಮಕ್ಕಳೇ ಪ್ರಿಯರಾಗುತ್ತಾರೆ. ಮಾರಾಟ ಮಾಡಲು
ಬರುವುದಿಲ್ಲವೆಂದರೆ ಅವರು ಮುರುಳೀಧರ, ವ್ಯಾಪಾರಿಯ ಮಕ್ಕಳು ಎಂದೂ ಹೇಗೆ ಕರೆಸಿಕೊಳ್ಳಲು ಸಾಧ್ಯ?
ನಾಚಿಕೆಯಾಗಬೇಕು. ನಾನಂತೂ ವ್ಯಾಪಾರ ಮಾಡುವುದಿಲ್ಲ, ಮಾರಾಟಗಾರರು ಯಾವಾಗ
ಬುದ್ಧಿವಂತರಾಗಿರುವುದನ್ನು ನೋಡಿ ನಂತರ ಅವರನ್ನು ಭಾಗೀಧಾರರನ್ನಾಗಿ ಮಾಡಿಕೊಳ್ಳುತ್ತಾರೆ. ಹಾಗೆಯೇ
ಭಾಗೀಧಾರರನ್ನಾಗಿ ಹೇಗೆ ಮಾಡಿಕೊಳ್ಳಲು ಸಾಧ್ಯ. ಈ ವ್ಯಾಪಾರದಲ್ಲಿ ತೊಡಗುವುದರಿಂದ ಬಹಳ ನಿರ್ಮಾಣ
ಬುದ್ಧಿಯುಳ್ಳವರಾಗುತ್ತಾರೆ. ಸೇವೆಯನ್ನು ಮಾಡುತ್ತಾ-ಮಾಡುತ್ತಾ ಬುದ್ಧಿಯು ಪರಿಶುದ್ಧವಾಗುತ್ತದೆ.
ಬಾಬಾ-ಮಮ್ಮಾ ತಮ್ಮ ಅನುಭವವನ್ನು ತಿಳಿಸುತ್ತಾರೆ. ತಂದೆಯು ಕಲಿಸುವಂತಹವರಾಗಿದ್ದಾರೆ, ಇದಂತೂ
ತಿಳಿದೇ ಇದೆ, ಬಾಬಾ ಚೆನ್ನಾಗಿ ಧಾರಣೆ ಮಾಡಿ ಬಹಳ ಚೆನ್ನಾಗಿ ಮುರುಳಿಯನ್ನು ನುಡಿಸುತ್ತಾರೆ.
ಒಳ್ಳೆಯದು, ಇವರಲ್ಲಿ ಶಿವತಂದೆಯಿದ್ದಾರೆ ಎಂದು ತಿಳಿದುಕೊಳ್ಳಿ, ಅವರಂತೂ ಮುರುಳೀಧರರಾಗಿಯೇ
ಇದ್ದಾರೆ ಆದರೂ ತಂದೆಯೂ ಸಹ ತಿಳಿದಿದ್ದಾರಲ್ಲವೆ. ಇಲ್ಲವೆಂದರೆ ಇಂತಹ ಪದವಿಯನ್ನು ಹೇಗೆ ಪಡೆಯಲು
ಸಾಧ್ಯ? ತಂದೆಯು ತಿಳಿಸುತ್ತಾರೆ - ಸದಾ ಶಿವತಂದೆಯೆ ತಿಳಿಸುತ್ತಾರೆ ಎಂದು ತಿಳಿದುಕೊಳ್ಳಿ.
ಶಿವತಂದೆಯ ನೆನಪಿನಲ್ಲಿರುವುದರಿಂದ ನಿಮ್ಮ ಕಲ್ಯಾಣವಾಗುತ್ತದೆ. ಇವರಲ್ಲಿ (ಬ್ರಹ್ಮಾ) ಶಿವತಂದೆಯು
ಬರುತ್ತಾರೆ. ಮಮ್ಮಾ ಅವರ ದಾಟಿಯಲ್ಲಿಯೇ ತಿಳಿಸುತ್ತಾರೆ ಏಕೆಂದರೆ ಮಾತೆಯರನ್ನು ಪ್ರಾಮುಖ್ಯತೆ
ಕೊಡಲಾಗುತ್ತದೆ ಆದ್ದರಿಂದ ಮಮ್ಮಾರವರ ಹೆಸರು ಪ್ರಸಿದ್ಧವಾಗಬೇಕಾಗಿದೆ. ಹೇಳಲಾಗುತ್ತದೆಯಲ್ಲವೆ -
ಹೇಗಿದ್ದಿರೋ ಹಾಗೆಯೇ ನನ್ನವರಾಗಿದ್ದೀರಿ ಅಂದಾಗ ಸಂಭಾಲನೆಯನ್ನೂ ಮಾಡಲೇಬೇಕಾಗುತ್ತದೆ. ಪುರುಷರೇ ಈ
ರೀತಿ ಹೇಳುತ್ತಾರೆ. ಸ್ತ್ರೀಯರು ಈ ರೀತಿ ಹೇಳುವುದಿಲ್ಲ - ಹೇಗಿದ್ದೇವೋ ಹಾಗೆಯೆ ಇದ್ದೇವೆ.....
ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳು ಹೇಗಿದ್ದೀರೋ, ಹಾಗೆಯೇ ಸಂಭಾಲನೆ ಮಾಡಬೇಕಾಗುತ್ತದೆ. ಆಗ
ತಂದೆಯ ಹೆಸರು ಪ್ರಸಿದ್ಧವಾಗುತ್ತದೆ. ಇಲ್ಲಂತೂ ತಂದೆಯ ಹೆಸರು ಪ್ರಸಿದ್ಧವಾಗಿದೆ, ನಂತರ ಶಕ್ತಿಯರ
ಹೆಸರು ಪ್ರಸಿದ್ಧವಾಗುತ್ತದೆ. ಅವರಿಗಂತೂ ಸೇವೆಯಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ದಿನ ಕಳದಂತೆ
ಸೇವೆಯಲ್ಲಿ ಬಹಳ ಸಹಜವಾಗುತ್ತದೆ. ಜ್ಞಾನ-ಭಕ್ತಿ, ಹಗಲು-ರಾತ್ರಿ, ಸತ್ಯಯುಗ-ತ್ರೇತಾಯುಗ ದಿನ ಅಥವ
ಹಗಲಾಗಿದೆ, ಅಲ್ಲಿ ಸುಖವಿರುತ್ತದೆ. ದ್ವಾಪರ-ಕಲಿಯುಗ ರಾತ್ರಿಯಾಗಿದೆ, ಅಲ್ಲಿ ದುಃಖವಿರುತ್ತದೆ.
ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ, ಈ ರೀತಿ ತಿಳಿಸಿಕೊಡುವುದು ಸಹಜವಾಗಿದೆ. ಆದರೆ
ಅದೃಷ್ಟದಲ್ಲಿಲ್ಲವೆಂದರೆ ಧಾರಣೆ ಮಾಡಲು ಸಾಧ್ಯವಿಲ್ಲ. ಜ್ಞಾನದ ಪಾಯಿಂಟ್ಗಳು ಬಹಳ ಸಹಜವಾಗಿ
ಸಿಗುತ್ತವೆ. ಮಿತ್ರ-ಸಂಬಂಧಿಗಳ ಬಳಿ ಹೋಗಿ ತಿಳಿಸಿಕೊಡಿ, ನಿಮ್ಮ ಮನೆಯಲ್ಲಿ ಇರುವವರನ್ನೂ
ಮೇಲೆತ್ತಿರಿ. ನೀವಂತೂ ಗೃಹಸ್ಥ ವ್ಯವಹಾರದಲ್ಲಿ ಇರುವಂತಹವರು ಅಂದಾಗ ಬಹಳ ಸಹಜವಾಗಿ ಯಾರಿಗೆ
ಬೇಕಾದರೂ ತಿಳಿಸಲು ಸಾಧ್ಯವಿದೆ. ಸದ್ಗತಿದಾತನಂತೂ ಒಬ್ಬರೆ ಪಾರಲೌಕಿಕ ತಂದೆಯಾಗಿದ್ದಾರೆ. ಅವರೇ
ಶಿಕ್ಷಕರೂ ಆಗಿದ್ದಾರೆ, ಸದ್ಗುರುವೂ ಸಹ ಆಗಿದ್ದಾರೆ. ದ್ವಾಪರದಿಂದ ಹಿಡಿದು ಉಳಿದವರೆಲ್ಲರೂ
ದುರ್ಗತಿಯಲ್ಲಿಯೇ ಕರೆತಂದಿದ್ದಾರೆ. ಭ್ರಷ್ಟಾಚಾರಿ, ಪಾಪಾತ್ಮರು ಕಲಿಯುಗದಲ್ಲಿದ್ದಾರೆ.
ಸತ್ಯಯುಗದಲ್ಲಿ ಪಾಪಾತ್ಮರ ಹೆಸರು ಇರುವುದಿಲ್ಲ. ಇಲ್ಲಿಯೇ ಅಜಾಮೀಳರು, ಗಣಿಕೆಯರು, ಅಹಲ್ಯೆಯರು,
ಇಂತಹ ಪಾಪಾತ್ಮರಿದ್ದಾರೆ. ಅರ್ಧಕಲ್ಪವನ್ನು ಸ್ವರ್ಗವೆಂದು ಕರೆಯಲಾಗುತ್ತದೆ, ನಂತರ ಭಕ್ತಿಯು
ಪ್ರಾರಂಭವಾದಾಗ ಅವಶ್ಯವಾಗಿ ಕೆಳಗೆ ಬೀಳಲೇಬೇಕಾಗಿದೆ. ಸೂರ್ಯವಂಶದವರು ಇಳಿದು
ಚಂದ್ರವಂಶದವರಾಗುತ್ತಾರೆ. ನಂತರ ಇಳಿಯುತ್ತಲೇ ಬರುತ್ತಾರೆ. ಎಲ್ಲರೂ ಇಳಿಸುವವರೇ ಸಿಗುತ್ತಾ
ಬರುತ್ತಾರೆ. ಇದನ್ನು ನೀವು ಈಗ ತಿಳಿದಿದ್ದೀರಿ. ದಿನ-ಪ್ರತಿದಿನ ನಿಮ್ಮಲ್ಲಿಯೂ ಸಹ ಶಕ್ತಿಯು
ಬರುತ್ತಾಹೋಗುತ್ತದೆ. ಸಾಧುಗಳು ಮುಂತಾದವರಿಗೆ ತಿಳಿಸಲು ಯುಕ್ತಿಯನ್ನು ರಚಿಸಬೇಕು. ಪರಮಪಿತ
ಪರಮಾತ್ಮ ಸರ್ವವ್ಯಾಪಿಯಾಗಲು ಹೇಗೆ ಸಾಧ್ಯವೆಂದು ಕೊನೆಗಂತೂ ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ.
ಆದರೆ ಇದನ್ನು ತಿಳಿಸಿಕೊಡಲು ಬಹಳಷ್ಟು ಜ್ಞಾನಬಿಂದುಗಳಿವೆ. ಭಕ್ತರು ಅವ್ಯಭಿಚಾರಿಗಳಿಂದ
ವ್ಯಭಿಚಾರಿಗಳಾಗುತ್ತಾರೆ, ಕಲೆಗಳು ಕಡಿಮೆಯಾಗುತ್ತವೆ. ಈಗ ಯಾವುದೇ ಕಲೆ ಉಳಿದಿಲ್ಲ. ವೃಕ್ಷ ಅಥವಾ
ಚಕ್ರದಲ್ಲಿಯೂ ಸಹ ಕಲೆಗಳು ಹೇಗೆ ಕಡಿಮೆಯಾಗುತ್ತವೆ? ಎಂದು ತೋರಿಸಲಾಗಿದೆ. ತಿಳಿಸಿಕೊಡಲು ಬಹಳ
ಸಹಜವಾಗಿದೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ತಿಳಿಸಿಕೊಡಲು ಸಾಧ್ಯವಿಲ್ಲ, ಆತ್ಮಾಭಿಮಾನಿಗಳಾಗುವುದೇ
ಇಲ್ಲ. ಹಳೆಯ ಶರೀರದಲ್ಲಿ ಸಿಲುಕಿಹಾಕಿಕೊಂಡಿರುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಹಳೆಯ
ದೇಹದಿಂದ ಮಮತ್ವವನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಿರಿ. ಆತ್ಮಾಭಿಮಾನಿಗಳು
ಆಗಲಿಲ್ಲವೆಂದರೆ ಶ್ರೇಷ್ಠ ಪದವಿಯನ್ನೂ ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕೊನೆಯವರೆಗೂ
ಕುಳಿತುಕೊಳ್ಳಲು ಬಯಸುತ್ತಾರೇನು? ಇವರಿಗೆ ವಿದ್ಯೆಯಲ್ಲಿ ಗಮನವಿಲ್ಲವೆಂದು ಮಿತ್ರ-ಸಂಬಂಧಿ,
ಶಿಕ್ಷಕರು, ವಿದ್ಯಾರ್ಥಿಗಳು ಮುಂತಾದವರೆಲ್ಲರಿಗೂ ತಿಳಿಯುತ್ತದೆ. ಇಲ್ಲಿಯೂ ಸಹ ಶ್ರೀಮತದಂತೆ
ನಡೆಯಲಿಲ್ಲವೆಂದರೆ ಇದೇ ಗತಿ (ಸ್ಥಿತಿ) ಯಾಗುತ್ತದೆ. ಯಾರು ಪ್ರಜೆಗಳಾಗುತ್ತಾರೆ, ಯಾರು
ದಾಸ-ದಾಸಿಗಳಾಗುತ್ತಾರೆ ಎಲ್ಲವೂ ತಿಳಿದುಬರುತ್ತದೆ. ತಮ್ಮ ಮಿತ್ರ-ಸಂಬಂಧಿಗಳ ಕಲ್ಯಾಣ ಮಾಡಿರಿ ಎಂದು
ತಂದೆಯು ತಿಳಿಸುತ್ತಾರೆ. ಇದು ಕಾಯಿದೆ ಯಾಗಿದೆ ಮನೆಯಲ್ಲಿ ಹಿರಿಯ ಅಣ್ಣ ಇರುತ್ತಾರೆಂದರೆ ಚಿಕ್ಕ
ಸಹೋದರರಿಗೆ ಸಹಾಯ ಮಾಡುವುದು ಅವರ ಕರ್ತವ್ಯವಾಗಿರುತ್ತದೆ-ಇದಕ್ಕೆ ದಾನವು ಮನೆಯಿಂದಲೇ
ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ-ಹಣವನ್ನು ನೀಡಿದರೆ ಅದು ಎಂದೂ
ಸಹ ಖಾಲಿಯಾಗುವುದಿಲ್ಲ...... ಹಣವನ್ನು ನೀಡದೇ ಇದ್ದರೆ ಅದು ದೊರೆಯುವುದೂ ಇಲ್ಲ ಮತ್ತು ಪದವಿಯನ್ನೂ
ಪಡೆಯಲು ಸಾಧ್ಯವಿಲ್ಲ. ಸೇವೆ ಮಾಡಲು ಬಹಳ ಒಳ್ಳೆಯ ಅವಕಾಶ ಸಿಗುತ್ತದೆ, ದಯಾಹೃದಯಿಗಳಾಗಬೇಕು. ನೀವು
ಸನ್ಯಾಸಿಗಳು, ಸಾಧುಗಳ ಮೇಲೂ ಸಹ ದಯಾಹೃದಯಿಗಳಾಗುತ್ತೀರಿ. ನೀವು ಬಂದು ತಿಳಿದುಕೊಳ್ಳಿ ಎಂದು
ಹೇಳುತ್ತೀರಿ. ನೀವು ಪಾರಲೌಕಿಕ ತಂದೆಯನ್ನು ತಿಳಿದುಕೊಂಡಿಲ್ಲ, ಅವರು ಭಾರತಕ್ಕೆ ಪ್ರತೀ ಕಲ್ಪ
ಸುಖದ ಆಸ್ತಿಯನ್ನು ನೀಡುತ್ತಾರೆ ಅಂದಾಗ ಅವರನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಅಧಿಕಾರಿಗಳೂ ಸಹ
ಭ್ರಷ್ಟಾಚಾರಿಗಳಾಗಿದ್ದಾರೆ. ಶ್ರೇಷ್ಠಾಚಾರಿಯನ್ನಾಗಿ ಯಾರು ಮಾಡುತ್ತಾರೆ?
ಇತ್ತೀಚೆಗೆ ಸಾಧುಗಳಿಗೆ
ಬಹಳಷ್ಟು ಗೌರವವಿದೆ. ತಂದೆಯು ಇವರೆಲ್ಲರ ಮೇಲೆಯೂ ದಯೆ ತೋರುತ್ತಾರೆ ಎಂದು ನೀವು ಬರೆಯುತ್ತೀರಿ.
ಇದನ್ನು ಕೇಳಿ ಅವರು ಆಶ್ಚರ್ಯಪಡುತ್ತಾರೆ. ಮುಂದೆ ಹೋದಂತೆ ನಿಮ್ಮ ಹೆಸರು ಪ್ರಸಿದ್ಧವಾಗುತ್ತದೆ.
ನಿಮ್ಮ ಬಳಿ ಅನೇಕರು ಬರುತ್ತಾರೆ. ಪ್ರದರ್ಶನಗಳೂ ಸಹ ನಡೆಯುತ್ತವೆ. ಕೊನೆಗಂತೂ ಅವಶ್ಯವಾಗಿ
ಜಾಗೃತಗೊಳ್ಳುತ್ತಾರೆ. ಸನ್ಯಾಸಿಗಳೂ ಸಹ ಜಾಗೃತ ಆಗುತ್ತಾರೆ. ಒಂದೇ ಅಂಗಡಿ ಇದೆ ಅಂದಾಗ ಇದನ್ನು
ಬಿಟ್ಟು ಎಲ್ಲಿಗೆ ಹೋಗಲು ಸಾಧ್ಯವಿದೆ. ಬಹಳ ವೃದ್ಧಿಯಾಗುತ್ತಾ ಹೋಗುತ್ತದೆ. ತಿಳಿಸಿಕೊಡಲು
ಒಳ್ಳೊಳ್ಳೆಯ ಚಿತ್ರಗಳನ್ನು ತಯಾರಾಗುತ್ತದೆ. ಯಾರು ಬೇಕಾದರೂ ಓದಿ ತಿಳಿದುಕೊಳ್ಳಬಹುದು. ಯಾವಾಗ ಈ
ಬಿದಿರಿನ ಕಾಡಿಗೆ ಬೆಂಕಿ ಬೀಳುತ್ತದೆಯೋ ಆಗ ಮನುಷ್ಯರು ಎಚ್ಚರಗೊಳ್ಳುತ್ತಾರೆ ಆದರೆ ಸಮಯ ಮಿಂಚಿ
ಹೋಗಿರುತ್ತದೆ. ಮಕ್ಕಳಿಗೂ ಸಹ ಇದೇ ರೀತಿಯಾಗುತ್ತದೆ. ಕೊನೆಯಲ್ಲಿ ಎಷ್ಟು ಓಡಲು ಸಾಧ್ಯವಿದೆ.
ಓಟದಲ್ಲಿಯೂ ಸಹ ಕೆಲವರು ಮೊದಲು ನಿಧನಿಧಾನವಾಗಿ ಓಡುತ್ತಾರೆ. ವಿಜಯದ ಬಹುಮಾನ ಕೆಲವರಿಗಷ್ಟೆ
ಸಿಗುತ್ತದೆ. ನಿಮ್ಮದೂ ಸಹ ಒಳ್ಳೆಯ ಓಟವಾಗಿದೆ. ಆತ್ಮೀಯ ಯಾತ್ರೆಯ ಓಟವನ್ನು ಓಡಲು ಜ್ಞಾನಿ
ಆತ್ಮಗಳುಬೇಕು ಅಂದಾಗ ತಂದೆಯನ್ನು ನೆನಪು ಮಾಡಿ, ಇದೂ ಸಹ ಜ್ಞಾನವಾಗಿದೆ. ಈ ಜ್ಞಾನವು ಮತ್ತ್ಯಾರಿಗೂ
ಇಲ್ಲ. ಜ್ಞಾನದಿಂದ ಮನುಷ್ಯರು ವಜ್ರಸಮಾನರಾಗುತ್ತಾರೆ, ಅಜ್ಞಾನದಿಂದ ಕವಡೆಯ ಸಮಾನರಾಗುತ್ತಾರೆ.
ತಂದೆಯು ಬಂದು ಸತೋಪ್ರಧಾನ ಪ್ರಾಲಬ್ಧವನ್ನು ರೂಪಿಸುತ್ತಾರೆ. ನಂತರ ಇದು ಸ್ವಲ್ಪ-ಸ್ವಲ್ಪವಾಗಿ
ಕಡಿಮೆಯಾಗುತ್ತಾ ಹೋಗುತ್ತದೆ. ಈ ಎಲ್ಲಾ ಜ್ಞಾನಬಿಂದುಗಳನ್ನು ಧಾರಣೆ ಮಾಡಿ ಕಾರ್ಯದಲ್ಲಿ
ತರಬೇಕಾಗಿದೆ. ನೀವು ಮಕ್ಕಳು ಮಹಾದಾನಿಗಳಾಗಬೇಕು. ಭಾರತವನ್ನು ಮಹಾದಾನಿ ಎಂದು ಹೇಳಲಾಗುತ್ತದೆ
ಏಕೆಂದರೆ ಇಲ್ಲಿಯೇ ನೀವು ತಂದೆಯ ಮುಂದೆ ತನು-ಮನ-ಧನ ಎಲ್ಲವನ್ನೂ ಅರ್ಪಣೆ ಮಾಡುತ್ತೀರಿ. ನಂತರ
ತಂದೆಯೂ ಸಹ ಎಲ್ಲವನ್ನೂ ಅರ್ಪಣೆ ಮಾಡುತ್ತಾರೆ. ಭಾರತದಲ್ಲಿಯೇ ಬಹಳಷ್ಟು ಮಹಾದಾನಿಗಳಿದ್ದಾರೆ.
ಉಳಿದ ಮನುಷ್ಯರೆಲ್ಲರೂ ಅಂಧಶ್ರದ್ಧೆಯಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಂತೂ ನೀವು ಈಶ್ವರನ
ಶರಣದಲ್ಲಿ ಬಂದಿದ್ದೀರಿ. ರಾವಣನಿಂದ ದುಃಖಿಯಾಗಿ ರಾಮನಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದೀರಿ.
ನೀವೆಲ್ಲರೂ ಶೋಕವನದಲ್ಲಿದ್ದಿರಿ. ಈಗ ಮತ್ತೆ ಅಶೋಕವನದಲ್ಲಿ ಅರ್ಥಾತ್ ಸ್ವರ್ಗದಲ್ಲಿ ಹೋಗಬೇಕು.
ಸ್ವರ್ಗವನ್ನು ಸ್ಥಾಪನೆ ಮಾಡುವಂತಹ ತಂದೆಯ ಆಶ್ರಯವನ್ನು ಪಡೆದಿದ್ದೀರಿ, ಕೆಲವರಂತೂ
ಚಿಕ್ಕವಯಸ್ಸಿನಲ್ಲಿಯೇ ಬಲವಂತದಿಂದ ಬಂದುಬಿಟ್ಟಿದ್ದಾರೆ, ಅಂತಹವರಿಗೆ ಶರಣದಲ್ಲಿ
ಸುಖವೆನಿಸುವುದಿಲ್ಲ. ಅದೃಷ್ಟದಲ್ಲಿಲ್ಲವೆಂದರೆ ಅವರಿಗೆ ಮಾಯಾರಾವಣನ ಆಶ್ರಯ ಬೇಕೆನಿಸುತ್ತದೆ.
ಈಶ್ವರನ ಆಶ್ರಯದಿಂದ ಹೊರಬಂದು ಮಾಯೆಯ ಆಶ್ರಯದಲ್ಲಿ ಹೋಗಲು ಬಯಸುತ್ತಾರೆ. ಆಶ್ಚರ್ಯದ ಮಾತಲ್ಲವೆ.
ಈ ಶಿವಾಯ ನಮಃ: ಗೀತೆಯು
ಬಹಳ ಚೆನ್ನಾಗಿದೆ. ನೀವು ಈ ಹಾಡನ್ನು ಹಾಕಬಹುದು. ಮನುಷ್ಯರಂತೂ ಇದರ ಅರ್ಥವನ್ನು
ತಿಳಿದುಕೊಳ್ಳುವುದಿಲ್ಲ. ನೀವು ಹೇಳುತ್ತೀರಿ ನಾವು ಶ್ರೀಮತದಂತೆ ಯಥಾರ್ಥ ಅರ್ಥವನ್ನು ತಿಳಿಸಿಕೊಡಲು
ಸಾಧ್ಯವಿದೆ. ಅವರಂತೂ ಗೊಂಬೆಗಳ ಆಟವನ್ನು ಆಡುತ್ತಾರೆ. ಡ್ರಾಮಾನುಸಾರ ಈ ಹಾಡುಗಳಿಂದಲೂ ಸಹ ಸಹಾಯ
ಸಿಗುತ್ತದೆ. ತಂದೆಯ ಮಕ್ಕಳಾಗಿ ಮತ್ತೆ ಸೇವಾಧಾರಿ ಆಗಲಿಲ್ಲವೆಂದರೆ ತಂದೆಯ ಹೃದಯವನ್ನು ಏರಲು ಹೇಗೆ
ಸಾಧ್ಯ. ಕೆಲವು ಮಕ್ಕಳು ಕುಪುತ್ರರಾಗಿಬಿಡುತ್ತಾರೆ. ಅಂದಾಗ ಎಷ್ಟೊಂದು ದುಃಖವನ್ನು ಕೊಡುತ್ತಾರೆ.
ಇಲ್ಲಿಯಾದರೂ ಅಮ್ಮ ಸತ್ತರೂ ಸಹ ಹಲ್ವ ತಿನ್ನಿ, ಹೆಂಡತಿ ಸತ್ತರೂ ಸಹ ಹಲ್ವ ತಿನ್ನಿ ಆದರೆ ಅಳಬಾರದು.
ಡ್ರಾಮಾದ ಮೇಲೆ ಬಲವಾಗಿರಬೇಕು. ಮಮ್ಮಾ-ಬಾಬಾರವರೂ ಸಹ ಹೋಗುತ್ತಾರೆ, ಅನನ್ಯ ಮಕ್ಕಳೂ ಸಹ ಅಡ್ವಾನ್ಸ್
ಪಾರ್ಟಿಯಲ್ಲಿ ಹೋಗುತ್ತಾರೆ. ಪಾತ್ರವನ್ನಂತೂ ಮಾಡಲೇಬೇಕಾಗಿದೆ. ಇದರಲ್ಲಿ ಚಿಂತೆಯ ಮಾತೇನಿದೆ?
ಸಾಕ್ಷಿಯಾಗಿ ನಾವು ಆಟವನ್ನು ನೋಡುತ್ತೇವೆ. ಸ್ಥಿತಿ ಸದಾ ಹರ್ಷಿತವಾಗಿರಬೇಕು. ತಂದೆಗೂ ಸಹ ವಿಚಾರ
ಬರುತ್ತದೆ, ಆದರೆ ಬಂದೇ ಬರುತ್ತದೆ ಎಂದು ಕಾನೂನು ಹೇಳುತ್ತದೆ. ಈ ರೀತಿಯಲ್ಲ ಮಮ್ಮಾ-ಬಾಬಾ
ಪರಿಪೂರ್ಣರಾಗಿದ್ದಾರೆ ಎಂದೇನೂ ಇಲ್ಲ. ಪರಿಪೂರ್ಣರಂತೂ ಕೊನೆಯಲ್ಲಿ ಆಗುತ್ತಾರೆ. ಈ ಸಮಯದಲ್ಲಿ ಯಾರೂ
ಸಹ ತನ್ನನ್ನು ಪರಿಪೂರ್ಣರೆಂದು ಹೇಳಲು ಸಾಧ್ಯವಿಲ್ಲ. ಯಾವುದೇ ನಷ್ಟವಾಯಿತು, ಯಾವುದೇ ಏರುಪೇರಾಯಿತು,
ದಿನಪತ್ರಿಕೆಗಳಲ್ಲಿ ಬಿ.ಕೆ.ಗಳಿಗೆ ಕಿರಿ-ಕಿರಿ ಆಯಿತು ಎಂದು ಬರುತ್ತದೆ. ಇದೂ ಸಹ ಕಲ್ಪದ ಹಿಂದೆ
ಆಗಿತ್ತು. ಇದರಲ್ಲಿ ಚಿಂತೆಯ ಮಾತೇನಿದೆ. 100% ಸ್ಥಿತಿಯು ಅಂತ್ಯದಲ್ಲಿ ಆಗಲಿದೆ. ತಂದೆಯ
ಹೃದಯವನ್ನು ಯಾವಾಗ ಏರುತ್ತೀರೆಂದರೆ ದಯಾಹೃದಯಿಗಳಾಗಿ ಅನ್ಯರನ್ನು ತಮ್ಮ ಸಮಾನ ಮಾಡಿಕೊಂಡಾಗ. ವಿಮೆ
ಮಾಡಿಕೊಂಡಿರಿ, ಅದು ಬೇರೆ ಮಾತಾಗಿದೆ. ಅದನ್ನಂತೂ ತಮಗೋಸ್ಕರ ಮಾಡುತ್ತೀರಿ. ಜ್ಞಾನರತ್ನಗಳ
ದಾನವನ್ನು ಅನ್ಯರಿಗೆ ನೀಡಬೇಕಾಗಿದೆ. ತಂದೆಯನ್ನು ಪೂರ್ಣ ನೆನಪು ಮಾಡಲಿಲ್ಲವೆಂದರೆ ತಲೆಯ ಮೇಲೆ
ವಿಕರ್ಮದ ಹೊರೆಯು ತೆರೆಯಲ್ಪಡುತ್ತದೆ. ಪ್ರದರ್ಶನದಲ್ಲಿಯೂ ಸಹ ತಿಳಿಸುವಂತಹವರು ಯೋಗ್ಯರಿರಬೇಕು,
ಬುದ್ಧಿವಂತರಾಗಬೇಕು. ರಾತ್ರಿಯಲ್ಲಿ ನೆನಪು ಮಾಡುವುದರಿಂದ ಸಂತೋಷವಾಗುತ್ತದೆ. ಈ ಆತ್ಮೀಯ
ಪ್ರಿಯತಮನನ್ನು ಮುಂಜಾನೆಯಲ್ಲಿ ನೆನಪು ಮಾಡಬೇಕು - ತಂದೆಯೇ, ನೀವು ಎಷ್ಟು ಮಧುರರಾಗಿದ್ದೀರಿ,
ಎಂತಹವರಿಂದ ಎಂತಹವರನ್ನಾಗಿ ಮಾಡುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮನಸ್ಸಿನಿಂದ
ಸದಾ ಸತ್ಯವಾಗಿರಬೇಕು. ಸತ್ಯವನ್ನೇ ಹೇಳಬೇಕು, ಸತ್ಯವಂತರಾಗಿ ನಡೆಯಬೇಕು. ದೇಹಾಭಿಮಾನಕ್ಕೆ ವಶವಾಗಿ
ಎಲ್ಲವೂ ತಿಳಿದಿದ್ದೇನೆ ಎಂದು ತಿಳಿದುಕೊಳ್ಳಬಾರದು. ಅಹಂಕಾರದಲ್ಲಿ ಬರಬಾರದು.
2. ಸಾಕ್ಷಿಯಾಗಿದ್ದು
ಆಟವನ್ನು ನೋಡಬೇಕು. ಡ್ರಾಮಾದ ಮೇಲೆ ಶಕ್ತಿಶಾಲಿಯಾಗಿರಬೇಕು. ಯಾವುದೇ ಮಾತಿನ ಚಿಂತೆ ಮಾಡಬಾರದು
ಸ್ಥಿತಿ ಸದಾ ಹರ್ಷಿತವಾಗಿಡಬೇಕು.
ವರದಾನ:
ಸ್ವರಾಜ್ಯದ
ಅಧಿಕಾರದ ಮುಖಾಂತರ ವಿಶ್ವರಾಜ್ಯದ ಅಧಿಕಾರ ಪ್ರಾಪ್ತಿ ಮಾಡಿಕೊಳ್ಳುವಂತಹ ಮಾಸ್ಟರ್ ಸರ್ವಶಕ್ತಿವಾನ್
ಭವ
ಯಾರು ಈ ಸಮಯ ಸ್ವರಾಜ್ಯ
ಅಧಿಕಾರಿ ಅರ್ಥಾತ್ ಕರ್ಮೇಂದ್ರಿಯಾ-ಜೀತ್ ಆಗಿದ್ದಾರೆ ಅವರೇ ವಿಶ್ವದರಾಜ್ಯ ಅಧಿಕಾರ ಪ್ರಾಪ್ತಿ
ಮಾಡಿಕೊಳ್ಳುತ್ತಾರೆ. ಸ್ವರಾಜ್ಯ ಅಧಿಕಾರಿಯೇ ವಿಶ್ವರಾಜ್ಯ ಅಧಿಕಾರಿಗಳಾಗುತ್ತಾರೆ. ಆದ್ದರಿಂದ ಚೆಕ್
ಮಾಡಿಕೊಳ್ಳಿ ಮನಸ್ಸು-ಬುದ್ಧಿ ಮತ್ತು ಸಂಸ್ಕಾರ ಆತ್ಮದ ಶಕ್ತಿಗಳಾಗಿವೆ, ಆತ್ಮ ಈ ಮೂರರ ಮಾಲೀಕ
ಆಗಿದೆಯೆ? ಮನಸ್ಸು ನಿಮ್ಮನ್ನು ನಡೆಸುತ್ತದೆಯೊ ಅಥವಾ ನೀವು ಮನಸ್ಸನ್ನು ನಡೆಸುವಿರೊ? ಕೆಲವೊಮ್ಮೆ
ಸಂಸ್ಕಾರ ತನ್ನ ಕಡೆ ಸೆಳೆಯುತ್ತಿಲ್ಲಾ ತಾನೆ? ಸ್ವರಾಜ್ಯ ಅಧಿಕಾರಿಯ ಸ್ಥಿತಿ ಸದಾ ಮಾಸ್ಟರ್
ಸರ್ವಶಕ್ತಿವಾನ್ ಆಗಿದ್ದಾರೆ, ಅವರಲ್ಲಿ ಯಾವ ಶಕ್ತಿಯೂ ಕಡಿಮೆ ಇಲ್ಲಾ.
ಸ್ಲೋಗನ್:
ಸರ್ವ ಖಜಾನೆಗಳ
ಕೀಲಿಕೈ- “ನನ್ನ ಬಾಬಾ” ಜೊತೆಯಲ್ಲಿದ್ದಾಗ ಯಾವುದೇ ಆಕರ್ಷಣೆ ಆಕರ್ಷಿತ ಮಾಡಲು ಸಾಧ್ಯವಿಲ್ಲ.