11.01.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಅತೀ ಪ್ರಿಯ ಶಿವ ತಂದೆಯು ಬಂದಿದ್ದಾರೆ, ನೀವು ಅವರ ಶ್ರೀಮತದಂತೆ ನಡೆಯಿರಿ

ಪ್ರಶ್ನೆ:
ಮನುಷ್ಯರು ಪರಮಾತ್ಮನ ಬಗ್ಗೆ ಯಾವ ಎರಡು ಮಾತುಗಳನ್ನು ಒಂದು ಇನ್ನೊಂದಕ್ಕಿಂತ ಭಿನ್ನವಾಗಿ ಹೇಳುತ್ತಾರೆ?

ಉತ್ತರ:
ಒಂದು ಕಡೆ ಹೇಳುತ್ತಾರೆ - ಪರಮಾತ್ಮನು ಅಖಂಡ ಜ್ಯೋತಿಯಾಗಿದ್ದಾರೆ ಮತ್ತು ಇನ್ನೊಂದು ಕಡೆ ಹೇಳುತ್ತಾರೆ - ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆ ಎಂದು - ಇವೆರಡೂ ಮಾತುಗಳು ಒಂದು ಇನ್ನೊಂದಕ್ಕಿಂತ ಭಿನ್ನವಾಗಿ ಬಿಡುತ್ತವೆ. ಯಥಾರ್ಥ ರೂಪದಿಂದ ಅರಿತುಕೊಳ್ಳದಿರುವ ಕಾರಣವೇ ಪತಿತರಾಗುತ್ತಾ ಹೋಗುತ್ತಾರೆ. ಯಾವಾಗ ತಂದೆಯು ಬರುವರೋ ಆಗ ತಮ್ಮ ಸತ್ಯ ಪರಿಚಯವನ್ನು ಕೊಡುತ್ತಾರೆ.

ಗೀತೆ:
ಸತ್ತರೂ ನಿನ್ನ ಮಡಿಲಲ್ಲಿಯೇ..............

ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರಾದರೂ ಮರಣ ಹೊಂದಿದಾಗ ತಂದೆಯ ಬಳಿ ಜನ್ಮ ತೆಗೆದುಕೊಳ್ಳುತ್ತಾರೆ. ತಂದೆಯ ಬಳಿ ಜನ್ಮ ತೆಗೆದುಕೊಂಡರು ಎಂದೇ ಹೇಳುತ್ತಾರೆ. ತಾಯಿಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ತಂದೆಗೆ ಶುಭಾಷಯಗಳನ್ನು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವಾತ್ಮರಾಗಿದ್ದೇವೆ, ಅದಂತೂ ಶರೀರದ ಮಾತಾಯಿತು. ಒಂದು ಶರೀರವನ್ನು ಬಿಟ್ಟು ಮತ್ತೆ ಇನ್ನೊಬ್ಬ ತಂದೆಯ ಬಳಿ ಹೋಗುತ್ತಾರೆ. ನೀವು 84 ಜನ್ಮಗಳಲ್ಲಿ 84 ಮಂದಿ ಸಾಕಾರ ತಂದೆಯರನ್ನು ಮಾಡಿಕೊಂಡಿದ್ದೀರಿ. ವಾಸ್ತವದಲ್ಲಿ ನೀವು ನಿರಾಕಾರ ತಂದೆಯ ಮಕ್ಕಳಾಗಿದ್ದೀರಿ. ನೀವಾತ್ಮರು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಿ. ಅಲ್ಲಿನ ನಿವಾಸಿಗಳಾಗಿದ್ದೀರಿ, ಯಾವುದಕ್ಕೆ ನಿರ್ವಾಣಧಾಮ ಅಥವಾ ಶಾಂತಿಧಾಮವೆಂದು ಹೇಳುತ್ತಾರೆ. ಮೂಲತಃ ನೀವು ಅಲ್ಲಿನ ನಿವಾಸಿಗಳಾಗಿದ್ದೀರಿ. ತಂದೆಯೂ ಸಹ ಅಲ್ಲಿಯೇ ಇರುತ್ತಾರೆ. ಇಲ್ಲಿ ಬಂದು ನೀವು ಲೌಕಿಕ ತಂದೆಯ ಮಕ್ಕಳಾಗುತ್ತೀರಿ ಅನಂತರ ಆ ತಂದೆಯನ್ನೇ ಮರೆತು ಹೋಗುತ್ತೀರಿ. ಸತ್ಯಯುಗದಲ್ಲಿಯೂ ಸಹ ನೀವು ಸುಖಿಯಾಗಿ ಬಿಡುತ್ತೀರಿ. ಆದ್ದರಿಂದ ಆ ಪಾರಲೌಕಿಕ ತಂದೆಯನ್ನು ಮರೆತು ಹೋಗುತ್ತೀರಿ. ಸುಖದಲ್ಲಿ ಆ ತಂದೆಯನ್ನು ಯಾರೂ ಸ್ಮರಣೆ ಮಾಡುವುದಿಲ್ಲ. ದುಃಖದಲ್ಲಿ ಸ್ಮರಣೆ ಮಾಡುತ್ತಾರೆ ಮತ್ತು ಆತ್ಮವೇ ನೆನಪು ಮಾಡುತ್ತದೆ. ಲೌಕಿಕ ತಂದೆಯನ್ನು ನೆನಪು ಮಾಡಿದಾಗ ಬುದ್ಧಿಯು ಶರೀರದ ಕಡೆ ಇರುತ್ತದೆ. ಈ ತಂದೆಯು (ಬ್ರಹ್ಮಾ) ಅವರನ್ನು ನೆನಪು ಮಾಡಿದಾಗ ಓ ಬಾಬಾ ಎಂದು ಹೇಳುತ್ತಾರೆ ಇಬ್ಬರು ತಂದೆಯರೇ ಆಗಿದ್ದಾರೆ. ಸರಿಯಾದ ಶಬ್ಧವು ಬಾಬಾ ಎಂದಾಗಿದೆ. ಅವರೂ ಸಹ ತಂದೆ, ಇವರೂ ತಂದೆಯಾಗಿದ್ದಾರೆ. ಆತ್ಮವೇ ಆ ಆತ್ಮಿಕ ತಂದೆಯನ್ನು ನೆನಪು ಮಾಡುತ್ತದೆ ಆಗ ಬುದ್ಧಿಯು ಅಲ್ಲಿಗೆ ಹೊರಟು ಹೋಗುತ್ತದೆ. ಇದನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ಈಗ ನೀವು ಇದನ್ನು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ ನಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ, ಮೊಟ್ಟ ಮೊದಲು ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದೆನು, ನೀವು ಬಹಳ-ಬಹಳ ಸಾಹುಕಾರರಾಗಿದ್ದಿರಿ, ನಂತರ ಡ್ರಾಮಾನುಸಾರ 84 ಜನ್ಮಗಳನ್ನು ತೆಗೆದುಕೊಂಡು ನೀವೀಗ ದುಃಖಿಯಾಗಿದ್ದೀರಿ. ಈಗ ಡ್ರಾಮಾನುಸಾರ ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕಾಗಿದೆ. ನೀವಾತ್ಮ ಮತ್ತು ಶರೀರರೂಪಿ ವಸ್ತ್ರವು ಸತೋಪ್ರಧಾನವಾಗಿತ್ತು ನಂತರ ಆತ್ಮವು ಸತ್ಯಯುಗದಿಂದ ತ್ರೇತಾಯುಗಕ್ಕೆ ಬಂದಾಗ ಶರೀರವೂ ಸಹ ಬೆಳ್ಳಿಯ ಸಮಾನವಾಯಿತು ನಂತರ ದ್ವಾಪರದಲ್ಲಿ ತಾಮ್ರದಂತಾಯಿತು. ಈಗಂತೂ ನೀವಾತ್ಮರು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ, ಆದ್ದರಿಂದ ಶರೀರವೂ ಪತಿತವಾಗಿದೆ. ಹೇಗೆ 14 ಕ್ಯಾರೇಟ್ನ ಚಿನ್ನವನ್ನು ಯಾರೂ ಇಷ್ಟ ಪಡುವುದಿಲ್ಲ, ಕಪ್ಪಾಗಿ ಬಿಡುತ್ತದೆ. ನೀವೂ ಸಹ ಈಗ ಕಪ್ಪು ಕಬ್ಬಿಣದ ಸಮಾನರಾಗಿ ಬಿಟ್ಟಿದ್ದೀರಿ. ಈಗ ಯಾವ ಆತ್ಮ ಮತ್ತು ಶರೀರ ಇಷ್ಟು ಕಪ್ಪಾಗಿದೆಯೋ ಅದು ಮತ್ತೆ ಹೇಗೆ ಸ್ವಚ್ಛವಾಗುವುದು! ಆತ್ಮವು ಪವಿತ್ರವಾದಾಗ ಶರೀರವೂ ಪವಿತ್ರವಾದದ್ದೇ ಸಿಗುವುದು ಅಂದಮೇಲೆ ಅದು ಪವಿತ್ರ ಹೇಗಾಗುವುದು? ಗಂಗಾ ಸ್ನಾನ ಮಾಡುವುದರಿಂದ ಆಗುವುದೇ? ಇಲ್ಲ. ಹೇ ಪತಿತ-ಪಾವನ.... ಎಂದು ಕರೆಯುತ್ತಾರೆ. ಆತ್ಮವು ಈ ರೀತಿ ಹೇಳುತ್ತದೆ. ಹೇ ಬಾಬಾ ಎಂದು ಹೇಳಿದಾಗ ಬುದ್ಧಿಯು ಪಾರಲೌಕಿಕ ತಂದೆಯ ಕಡೆ ಹೊರಟು ಹೋಗುತ್ತದೆ. ನೋಡಿ, ಬಾಬಾ ಶಬ್ಧವೇ ಎಷ್ಟು ಮಧುರವಾಗಿದೆ! ಭಾರತದಲ್ಲಿಯೇ ಬಾಬಾ, ಬಾಬಾ ಎಂದು ಹೇಳುತ್ತಾರೆ. ನೀವೀಗ ಆತ್ಮಾಭಿಮಾನಿಯಾಗಿ. ತಂದೆಯ ಮಕ್ಕಳಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಹೊಸ ಶರೀರವನ್ನು ಧಾರಣೆ ಮಾಡಿದ್ದಿರಿ, ಮತ್ತೆ ನೀವೀಗ ಏನಾಗಿ ಬಿಟ್ಟಿದ್ದೀರಿ! ಈ ಮಾತುಗಳು ಯಾವಾಗಲೂ ಆಂತರ್ಯದಲ್ಲಿ ಸ್ಮರಣೆ ಮಾಡುತ್ತಿರಬೇಕು, ತಂದೆಯನ್ನೂ ನೆನಪು ಮಾಡಬೇಕು. ಹೇ ತಂದೆಯೇ ನಾವಾತ್ಮರು ಪತಿತರಾಗಿ ಬಿಟ್ಟಿದ್ದೇವೆ. ಈಗ ತಾವು ಬಂದು ಪಾವನ ಮಾಡಿ ಎಂದು ನೆನಪು ಮಾಡುತ್ತಾರಲ್ಲವೆ. ಡ್ರಾಮಾದಲ್ಲಿಯೂ ಈ ಪಾತ್ರವಿದೆ ಆದ್ದರಿಂದ ಕರೆಯುತ್ತಾರೆ. ಡ್ರಾಮಾ ಪ್ಲಾನನುಸಾರ ಹಳೆಯ ಪ್ರಪಂಚದಿಂದ ಯಾವಾಗ ಹೊಸ ಪ್ರಪಂಚವಾಗಬೇಕೋ ಆಗಲೇ ನಾನು ಬರುತ್ತೇನೆ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರಲ್ಲವೆ.

ನೀವು ಮಕ್ಕಳಿಗೆ ನಿಶ್ಚಯವಿದೆ ಅತೀ ಪ್ರಿಯ ತಂದೆಯಾಗಿದ್ದಾರೆ. ಮಧುರ, ಅತಿ ಮಧುರ, ಮಧುರಾತಿ ಮಧುರ ಎಂದು ಹೇಳುತ್ತಾರೆ. ಅಂದಮೇಲೆ ಈಗ ಮಧುರ ಯಾರು? ಲೌಕಿಕ ಸಂಬಂಧದಲ್ಲಿ ಮೊದಲು ತಂದೆಯಾಗಿದ್ದಾರೆ, ಯಾರು ಜನ್ಮ ಕೊಡುತ್ತಾರೆ. ನಂತರ ಶಿಕ್ಷಕರು, ಅವರೂ ಒಳ್ಳೆಯವರಿರುತ್ತಾರೆ. ಅವರಿಂದ ಓದಿ ಪದವಿಯನ್ನು ಪಡೆಯುತ್ತೀರಿ. ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ. ಜ್ಞಾನವು ತಿಳುವಳಿಕೆಯಾಗಿದೆ, ಯೋಗವು ನೆನಪಾಗಿದೆ. ಅಂದಾಗ ಬೇಹದ್ದಿನ ತಂದೆಯು ಯಾರು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದರೋ ಅವರನ್ನು ನೀವೀಗ ಮರೆತು ಬಿಟ್ಟಿದ್ದೀರಿ. ಶಿವ ತಂದೆಯು ಹೇಗೆ ಬಂದರು ಎಂಬುದು ಯಾರಿಗೂ ತಿಳಿದಿಲ್ಲ. ಚಿತ್ರಗಳಲ್ಲಿಯೂ ಸ್ಪಷ್ಟವಾಗಿ ತೋರಿಸಲಾಗಿದೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ. ರಾಜಯೋಗವನ್ನು ಕೃಷ್ಣನು ಹೇಗೆ ಕಲಿಸುವನು? ರಾಜಯೋಗವನ್ನು ಕಲಿಸುವುದೇ ಸತ್ಯಯುಗಕ್ಕಾಗಿ ಅಂದಮೇಲೆ ಅವಶ್ಯವಾಗಿ ಸಂಗಮಯುಗದಲ್ಲಿ ತಂದೆಯೇ ಕಲಿಸಿರಬೇಕು. ಸತ್ಯಯುಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಶಿವ ತಂದೆಯು ಇವರ ಮೂಲಕ ಮಾಡಿಸುತ್ತಾರೆ, ಮಾಡಿ-ಮಾಡಿಸುವವರಲ್ಲವೆ. ಮನುಷ್ಯರಂತೂ ತ್ರಿಮೂರ್ತಿ ಬ್ರಹ್ಮನೆಂದು ಹೇಳಿ ಬಿಡುತ್ತಾರೆ ಆದರೆ ಶ್ರೇಷ್ಠಾತಿ ಶ್ರೇಷ್ಠನು ಶಿವನಲ್ಲವೆ. ಬ್ರಹ್ಮನು ಸಾಕಾರಿ, ಇವರು ನಿರಾಕಾರಿಯಾಗಿದ್ದಾರೆ. ಸೃಷ್ಟಿಯು ಇಲ್ಲಿಯೇ ಇದೆ. ಈ ಸೃಷ್ಟಿಯದೇ ಚಕ್ರವಾಗಿದೆ, ಅದು ಸುತ್ತುತ್ತಿರುತ್ತದೆ, ಪುನರಾವರ್ತನೆಯಾಗುತ್ತಿರುತ್ತದೆ. ಸೂಕ್ಷ್ಮವತನದ ಚಕ್ರವೆಂದು ಗಾಯನವಿಲ್ಲ, ಮನುಷ್ಯ ಸೃಷ್ಟಿಯ ಚರಿತ್ರೆ-ಭೂಗೋಳವೇ ಪುನರಾವರ್ತನೆಯಾಗುತ್ತದೆ. ಸೂಕ್ಷ್ಮವತನದಲ್ಲಿ ಯಾವುದೇ ಚಕ್ರ ಇತ್ಯಾದಿಗಳಿರುವುದಿಲ್ಲ. ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯೆಂದು ಗಾಯನವಿದೆ, ಅದು ಇಲ್ಲಿಯ ಮಾತಾಗಿದೆ. ಸತ್ಯ-ತ್ರೇತಾಯುಗ..... ಮಧ್ಯದಲ್ಲಿ ಅವಶ್ಯವಾಗಿ ಸಂಗಮಯುಗ ಬೇಕಾಗಿದೆ. ಇಲ್ಲವಾದರೆ ಕಲಿಯುಗವನ್ನು ಸತ್ಯಯುಗವನ್ನಾಗಿ ಯಾರು ಮಾಡುವರು! ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಸಂಗಮದಲ್ಲಿ ಬರುತ್ತಾರೆ. ಇದಂತೂ ಸರ್ವಶಕ್ತಿವಂತ ತಂದೆಯ ಸರ್ಕಾರವಾಗಿದೆ. ಜೊತೆಯಲ್ಲಿ ಧರ್ಮರಾಜನೂ ಇದ್ದಾರೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಆತ್ಮವು ಹೇಳುತ್ತದೆ, ಯಾವುದೇ ದೇವತೆಯ ಮುಂದೆ ಹೋಗುತ್ತಾರೆಂದರೆ ಅವರ ಮುಂದೆ ಹೀಗೆ ಹೇಳುತ್ತಾರೆ, ವಾಸ್ತವದಲ್ಲಿ ಈ ರೀತಿ ತಂದೆಗೆ ಹೇಳಬೇಕು. ತಂದೆಯನ್ನು ಬಿಟ್ಟು ಬಂದು ಸಹೋದರರನ್ನು (ದೇವತೆಗಳನ್ನು) ಹಿಡಿದುಕೊಂಡಿದ್ದಾರೆ. ಈ ದೇವತೆಗಳು ಸಹೋದರರಾದರಲ್ಲವೆ. ಸಹೋದರರಿಂದ ಏನೂ ಸಿಗುವುದಿಲ್ಲ. ಸಹೋದರರ ಪೂಜೆ ಮಾಡುತ್ತಾ-ಮಾಡುತ್ತಾ ಕೆಳಗಿಳಿಯುತ್ತಾ ಬಂದಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ಅವರಿಂದ ನಮಗೆ ಆಸ್ತಿಯು ಸಿಗುತ್ತದೆ. ಮನುಷ್ಯರು ತಂದೆಯನ್ನೇ ಅರಿತುಕೊಂಡಿಲ್ಲ, ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಇನ್ನೂ ಕೆಲವರು ತಂದೆಯು ಅಖಂಡ ಜ್ಯೋತಿ ತತ್ವ ಎಂದು ಹೇಳುತ್ತಾರೆ. ತಂದೆಯು ನಾಮ-ರೂಪದಿಂದ ಭಿನ್ನವೆಂದು ಕೆಲವರು ಹೇಳುತ್ತಾರೆ. ಯಾವಾಗ ಅಖಂಡ ಜ್ಯೋತಿ ಸ್ವರೂಪನಾಗಿದ್ದಾರೆ ಅಂದಮೇಲೆ ಮತ್ತೆ ಅವರು ನಾಮ-ರೂಪದಿಂದ ಭಿನ್ನವೆಂದು ಹೇಗೆ ಹೇಳುತ್ತೀರಿ! ತಂದೆಯನ್ನು ಅರಿತುಕೊಳ್ಳದಿರುವ ಕಾರಣದಿಂದಲೇ ಪತಿತರಾಗಿ ಬಿಟ್ಟಿದ್ದಾರೆ. ತಮೋಪ್ರಧಾನರೂ ಆಗಲೇಬೇಕಾಗಿದೆ. ಮತ್ತೆ ಯಾವಾಗ ತಂದೆಯು ಬರುತ್ತಾರೆಯೋ ಆಗ ಎಲ್ಲರನ್ನೂ ಸತೋಪ್ರಧಾನರನ್ನಾಗಿ ಮಾಡುತ್ತಾರೆ. ಆತ್ಮಗಳು ನಿರಾಕಾರಿ ಪ್ರಪಂಚದಲ್ಲಿ ತಂದೆಯ ಜೊತೆಯಿರುತ್ತಾರೆ ನಂತರ ಇಲ್ಲಿ ಸತೋ, ರಜೋ, ತಮೋದಲ್ಲಿ ಬಂದು ಪಾತ್ರವನ್ನಭಿನಯಿಸುತ್ತಾರೆ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ತಂದೆಯೂ ಬರುತ್ತಾರೆ, ನಾನು ಬ್ರಹ್ಮನ ತನುವಿನ ಆಧಾರ ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ. ಇದು ಭಾಗ್ಯಶಾಲಿ ರಥವಾಗಿದೆ. ಆತ್ಮವು ರಥವಿಲ್ಲದೆ ಇರುವುದಿಲ್ಲ. ಈಗ ನೀವು ಮಕ್ಕಳಿಗೆ ತಿಳಿಸಲಾಗಿದೆ, ಇದು ಜ್ಞಾನದ ಮಳೆಯಾಗಿದೆ, ತಿಳುವಳಿಕೆಯಾಗಿದೆ. ಇದರಿಂದೇನು ಆಗುತ್ತದೆ? ಪತಿತ ಪ್ರಪಂಚದಿಂದ ಪಾವನ ಪ್ರಪಂಚವಾಗುತ್ತದೆ. ಈ ಗಂಗಾ, ಜಮುನಾ ಸತ್ಯಯುಗದಲ್ಲಿಯೂ ಇರುತ್ತದೆ. ಕೃಷ್ಣನು ಜಮುನಾ ನದಿಯ ತೀರದಲ್ಲಿ ಆಟವಾಡುತ್ತಾನೆಂದು ಹೇಳುತ್ತಾರೆ ಆದರೆ ಈ ರೀತಿಯ ಮಾತೇನೂ ಇಲ್ಲ. ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದಾನೆ, ಅವನನ್ನು ಬಹಳ ಚೆನ್ನಾಗಿ ಸಂಭಾಲನೆ ಮಾಡಲಾಗುತ್ತದೆ ಏಕೆಂದರೆ ಹೂವಲ್ಲವೆ. ಹೂ ಎಷ್ಟೊಂದು ಸುಂದರವಾಗಿರುತ್ತದೆ. ಎಲ್ಲರೂ ಹೂವಿನಿಂದ ಸುಗಂಧವನ್ನು ತೆಗೆದುಕೊಳ್ಳುತ್ತಾರೆ, ಮುಳ್ಳುಗಳಿಂದ ತೆಗೆದುಕೊಳ್ಳುವುದಿಲ್ಲ. ಈಗಂತೂ ಇದು ಮುಳ್ಳುಗಳ ಪ್ರಪಂಚವಾಗಿದೆ. ಮುಳ್ಳಿನ ಕಾಡನ್ನು ತಂದೆಯು ಬಂದು ಹೂದೋಟವನ್ನಾಗಿ ಮಾಡುತ್ತಾರೆ. ಆದ್ದರಿಂದ ಅವರಿಗೆ ಬಬುಲ್ನಾಥನೆಂದು ಹೆಸರಿಟ್ಟಿದ್ದಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಆದ್ದರಿಂದ ಮುಳ್ಳುಗಳನ್ನು ಹೂವನ್ನಾಗಿ ಮಾಡುವ ತಂದೆಯೆಂದು ಅವರನ್ನು ಮಹಿಮೆ ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ತಂದೆಯ ಜೊತೆ ಎಷ್ಟೊಂದು ಪ್ರೀತಿಯಿರಬೇಕು! ಆ ಲೌಕಿಕ ತಂದೆಯಂತೂ ನಿಮ್ಮನ್ನು ಕೆಸರಿನಲ್ಲಿ ಹಾಕುತ್ತಾರೆ. ಈ ತಂದೆಯು 21 ಜನ್ಮಗಳಿಗಾಗಿ ನಿಮ್ಮನ್ನು ಕೆಸರಿನಿಂದ ಹೊರ ತೆಗೆದು ಪಾವನರನ್ನಾಗಿ ಮಾಡುತ್ತಾರೆ. ಅವರು ನಿಮ್ಮನ್ನು ಪತಿತರನ್ನಾಗಿ ಮಾಡುತ್ತಾರೆ. ಆದ್ದರಿಂದ ಲೌಕಿಕ ತಂದೆ ಇದ್ದರೂ ಕೂಡ ಆತ್ಮವು ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ತಂದೆಯನ್ನು ನೆನಪು ಮಾಡಿದ್ದೀರಿ. ತಂದೆಯು ಅವಶ್ಯವಾಗಿ ಬರುತ್ತಾರೆ. ಶಿವ ಜಯಂತಿಯನ್ನು ಆಚರಿಸುತ್ತಾರಲ್ಲವೆ. ನೀವು ತಿಳಿದುಕೊಂಡಿದ್ದೀರಿ - ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ಈಗ ನಮ್ಮ ಸಂಬಂಧವು ಅವರೊಂದಿಗೂ ಇದೆ ಮತ್ತು ಲೌಕಿಕದೊಂದಿಗೂ ಇದೆ. ಪಾರಲೌಕಿಕ ತಂದೆಯನ್ನು ನೆನಪು ಮಾಡುವುದರಿಂದ ನೀವು ಪಾವನರಾಗುತ್ತೀರಿ. ಆತ್ಮಕ್ಕೆ ಗೊತ್ತಿದೆ, ಅವರು ನಮ್ಮ ಲೌಕಿಕ ತಂದೆ, ಇವರು ಪಾರಲೌಕಿಕ ತಂದೆಯಾಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ಇದು ಆತ್ಮಕ್ಕೆ ತಿಳಿದಿರುತ್ತದೆ. ಆದ್ದರಿಂದಲೇ ಹೇ ಭಗವಂತ, ಓ ಗಾಡ್ಫಾದರ್ ಎಂದು ಹೇಳುತ್ತಾರೆ. ಅವಿನಾಶಿ ತಂದೆಯನ್ನು ನೆನಪು ಮಾಡುತ್ತಾರೆ. ಆ ತಂದೆಯು ಬಂದು ಸ್ವರ್ಗ ಸ್ಥಾಪನೆ ಮಾಡುತ್ತಾರೆ. ಇದು ಯಾರಿಗೂ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಯುಗಗಳಿಗೂ ಸಹ ಬಹಳ ಸುದೀರ್ಘವಾದ ಆಯಸ್ಸನ್ನು ಹೇಳಿ ಬಿಟ್ಟಿದ್ದಾರೆ. ತಂದೆಯು ಪತಿತರನ್ನು ಪಾವನ ಮಾಡಲು ಬರುತ್ತಾರೆಂದರೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಮನುಷ್ಯರನ್ನು ಪೂರ್ಣ ಘೋರ ಅಂಧಕಾರದಲ್ಲಿ ಹಾಕಿ ಬಿಟ್ಟಿದ್ದಾರೆ. ತಂದೆಯನ್ನು ಪಡೆಯುವುದಕ್ಕಾಗಿ ಅಲೆದಾಡುತ್ತಿರುತ್ತಾರೆ. ಯಾರು ಬಹಳ ಭಕ್ತಿ ಮಾಡುವರೋ ಅವರಿಗೆ ಭಗವಂತ ಸಿಗುವರೆಂದು ಹೇಳುತ್ತಾರೆ. ಎಲ್ಲರಿಗಿಂತ ಹೆಚ್ಚು ಭಕ್ತಿ ಮಾಡುವವರಿಗೆ ಅವಶ್ಯವಾಗಿ ಮೊದಲು ಸಿಗಬೇಕು. ತಂದೆಯು ಲೆಕ್ಕವನ್ನೂ ಸಹ ತಿಳಿಸಿದ್ದಾರೆ. ಎಲ್ಲರಿಗಿಂತ ಮೊದಲು ನೀವೇ ಭಕ್ತಿ ಮಾಡುತ್ತೀರಿ ಅಂದಮೇಲೆ ನಿಮಗೇ ಮೊಟ್ಟ ಮೊದಲು ಭಗವಂತನ ಮೂಲಕ ಜ್ಞಾನ ಸಿಗಬೇಕು. ಇದರಿಂದ ನೀವೇ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುವಿರಿ. ಬೇಹದ್ದಿನ ತಂದೆಯು ನೀವು ಮಕ್ಕಳಿಗೆ ಜ್ಞಾನ ಕೊಡುತ್ತಿದ್ದಾರೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಅರ್ಧಕಲ್ಪ ನೆನಪು ಮಾಡಿದ್ದೀರಿ. ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಅಂತಿಮದಲ್ಲಿ ಯಾವಾಗ ದುಃಖಿಯಾಗಿ ಬಿಡುವಿರೋ ಆಗ ನಾನು ಬಂದು ಸುಖಿಯನ್ನಾಗಿ ಮಾಡುತ್ತೇನೆ. ನೀವೀಗ ಬಹಳ ದೊಡ್ಡ ವ್ಯಕ್ತಿಯಾಗುತ್ತೀರಿ. ನೋಡಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮೊದಲಾದವರ ಬಂಗಲೆಗಳು ಎಷ್ಟು ಸುಂದರವಾಗಿರುತ್ತವೆ. ಅಲ್ಲಿನ ಹಸುಗಳು, ಪೀಠೋಪಕರಣಗಳು ಎಲ್ಲವೂ ಸುಂದರವಾಗಿರುತ್ತವೆ ಆದರೆ ನೀವು ಇದಕ್ಕಿಂತಲೂ ಎಷ್ಟು ದೊಡ್ಡ ವ್ಯಕ್ತಿ (ದೇವತೆ) ಗಳಾಗುತ್ತೀರಿ! ದೈವೀ ಗುಣವುಳ್ಳ ದೇವತೆಗಳು, ಸ್ವರ್ಗದ ಮಾಲೀಕರಾಗುತ್ತೀರಿ. ಅಲ್ಲಿ ನಿಮಗಾಗಿ ವಜ್ರ ವೈಢೂರ್ಯಗಳ ಮಹಲುಗಳಿರುತ್ತವೆ. ಅಲ್ಲಿ ನಿಮ್ಮ ಪೀಠೋಪಕರಣಗಳು ಚಿನ್ನದಿಂದ ಮಾಡಲ್ಪಟ್ಟ ಬಹಳ ಸುಂದರವಾಗಿರುತ್ತವೆ. ಇಲ್ಲಂತೂ ಉಯ್ಯಾಲೆ ಇತ್ಯಾದಿಗಳೆಲ್ಲವೂ ಬಹಳ ಕನಿಷ್ಠ ಮಟ್ಟದ್ದಾಗಿದೆ. ಸತ್ಯಯುಗದಲ್ಲಿ ಎಲ್ಲವೂ ವಜ್ರ ವೈಡೂರ್ಯಗಳಿಂದ ಮಾಡಲ್ಪಟ್ಟ ವಸ್ತುಗಳಾಗಿರುತ್ತವೆ. ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವನಿಗೆ ರುದ್ರನೆಂದೂ ಹೇಳುತ್ತಾರೆ. ಯಾವಾಗ ಭಕ್ತಿ ಪೂರ್ಣವಾಗುವುದೋ ಅನಂತರ ಭಗವಂತನು ರುದ್ರ ಯಜ್ಞವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಯಜ್ಞ ಅಥವಾ ಭಕ್ತಿಯ ಮಾತೇ ಇರುವುದಿಲ್ಲ. ಈ ಸಮಯದಲ್ಲಿಯೇ ತಂದೆಯು ಈ ಅವಿನಾಶಿ ರುದ್ರ ಜ್ಞಾನ ಯಜ್ಞವನ್ನು ರಚಿಸುತ್ತಾರೆ ನಂತರದಲ್ಲಿ ಇದರ ಗಾಯನವೂ ನಡೆಯುತ್ತದೆ. ಭಕ್ತಿಯಂತೂ ಸದಾ ನಡೆಯುವುದಿಲ್ಲ, ಭಕ್ತಿ ಮತ್ತು ಜ್ಞಾನ. ಭಕ್ತಿಯು ರಾತ್ರಿ, ಜ್ಞಾನವು ದಿನವಾಗಿದೆ. ತಂದೆಯು ಬಂದು ದಿನವನ್ನಾಗಿ ಮಾಡುತ್ತಾರೆ ಅಂದಮೇಲೆ ತಂದೆಯ ಜೊತೆ ಮಕ್ಕಳಿಗೆ ಎಷ್ಟೊಂದು ಪ್ರೀತಿಯಿರಬೇಕು. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅತೀಪ್ರಿಯ ತಂದೆಯಾಗಿದ್ದಾರೆ. ಅವರಿಗಿಂತ ಹೆಚ್ಚು ಪ್ರಿಯವಾದ ವಸ್ತು ಬೇರೆ ಯಾವುದೂ ಇಲ್ಲ. ಅರ್ಧ ಕಲ್ಪದಿಂದ ನೆನಪು ಮಾಡುತ್ತಾ ಬಂದಿದ್ದೀರಿ. ಬಾಬಾ, ಬಂದು ನಮ್ಮ ದುಃಖವನ್ನು ದೂರ ಮಾಡಿ ಎಂದು ಕರೆದುದರಿಂದ ಈಗ ತಂದೆಯು ಬಂದಿದ್ದಾರೆ. ತಿಳಿಸುತ್ತಾರೆ, ಮಕ್ಕಳೇ ನೀವು ತಮ್ಮ ಗೃಹಸ್ಥ ವ್ಯವಹಾರದಲ್ಲಂತೂ ಇರಲೇಬೇಕಾಗಿದೆ. ಇಲ್ಲಿ ತಂದೆಯ ಬಳಿ ಎಷ್ಟು ಮಂದಿ ಬಂದು ಕುಳಿತುಕೊಳ್ಳುತ್ತೀರಿ, ತಂದೆಯ ಜೊತೆಯಲ್ಲಂತೂ ಪರಮಧಾಮದಲ್ಲಿಯೇ ಇರಲು ಸಾಧ್ಯ. ಇಲ್ಲಂತೂ ಇಷ್ಟೆಲ್ಲಾ ಮಕ್ಕಳು ಇರಲು ಸಾಧ್ಯವಿಲ್ಲ. ಶಿಕ್ಷಕರು ಹೇಗೆ ಪ್ರಶ್ನೆ ಕೇಳುತ್ತಾರೆ. ಧ್ವನಿವರ್ಧಕದಲ್ಲಿ ಎಲ್ಲರಿಗೆ ಹೇಗೆ ಪ್ರತ್ಯುತ್ತರ ಕೊಡಲು ಸಾಧ್ಯ. ಆದ್ದರಿಂದ ಕೆಲಕೆಲವರೇ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಓದಿಸುತ್ತಾರೆ. ಕಾಲೇಜುಗಳಂತೂ ಬಹಳಷ್ಟಿರುತ್ತವೆ. ಮತ್ತೆ ಎಲ್ಲರ ಪರೀಕ್ಷೆಗಳಾಗುತ್ತವೆ, ಪಟ್ಟಿ ಮಾಡುತ್ತಾರೆ. ಇಲ್ಲಂತೂ ಒಬ್ಬ ತಂದೆಯೇ ಓದಿಸುತ್ತಾರೆ. ಇದನ್ನೂ ಸಹ ತಿಳಿಸಬೇಕು - ದುಃಖದಲ್ಲಿ ಎಲ್ಲರೂ ಆ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಈಗ ಆ ತಂದೆಯು ಬಂದಿದ್ದಾರೆ. ಮಹಾಭಾರಿ ಮಹಾಭಾರತ ಯುದ್ಧವು ಸನ್ಮುಖದಲ್ಲಿ ನಿಂತಿದೆ. ಮಹಾಭಾರತ ಯುದ್ಧದಲ್ಲಿ ಕೃಷ್ಣನು ಬಂದನೆಂದು ಅವರು ತಿಳಿಯುತ್ತಾರೆ. ಇದಂತೂ ಸಾಧ್ಯವಿಲ್ಲ. ಪಾಪ! ಮನುಷ್ಯರು ತಬ್ಬಿಬ್ಬಾಗಿದ್ದಾರೆ ಆದರೂ ಸಹ ಕೃಷ್ಣ, ಕೃಷ್ಣ ಎಂದು ನೆನಪು ಮಾಡುತ್ತಿರುತ್ತಾರೆ. ಈಗ ಅತೀಪ್ರಿಯನು ಶಿವನೂ ಆಗಿದ್ದಾರೆ ಮತ್ತು ಕೃಷ್ಣನೂ ಆಗಿದ್ದಾನೆ ಆದರೆ ಅವರು ನಿರಾಕಾರ, ಕೃಷ್ಣನು ಸಾಕಾರಿಯಾಗಿದ್ದಾನೆ. ನಿರಾಕಾರ ತಂದೆಯು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ವಾಸ್ತವದಲ್ಲಿ ಇಬ್ಬರೂ ಅತೀ ಪ್ರಿಯರಾಗಿದ್ದಾರೆ. ಕೃಷ್ಣನೂ ಸಹ ವಿಶ್ವದ ಮಾಲೀಕನಲ್ಲವೆ. ನೀವೀಗ ನಿರ್ಣಯ ಮಾಡಿ - ಹೆಚ್ಚು ಪ್ರಿಯರು ಯಾರು? ಶಿವ ತಂದೆಯೇ ಆ ರೀತಿ ಯೋಗ್ಯರನ್ನಾಗಿ ಮಾಡುತ್ತಾರಲ್ಲವೆ! ಕೃಷ್ಣನೇನು ಮಾಡುತ್ತಾನೆ? ತಂದೆಯೇ ಅವರನ್ನು ಈ ರೀತಿ ಮಾಡುತ್ತಾರೆ ಅಂದಮೇಲೆ ಹೆಚ್ಚು ಗಾಯನವೂ ಸಹ ಆ ತಂದೆಗೇ ಇರಬೇಕು. ಶಂಕರನ ನೃತ್ಯವನ್ನು ತೋರಿಸುತ್ತಾರೆ. ವಾಸ್ತವದಲ್ಲಿ ನೃತ್ಯ ಮೊದಲಾದ ಮಾತಿಲ್ಲ. ತಂದೆಯು ತಿಳಿಸಿದ್ದಾರೆ - ನೀವೆಲ್ಲರೂ ಪಾರ್ವತಿಯರಾಗಿದ್ದೀರಿ. ಈ ಅಮರನಾಥ ಶಿವನು ನಿಮಗೆ ಕಥೆಯನ್ನು ತಿಳಿಸುತ್ತಿದ್ದಾರೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ, ವಿಕಾರದ ಮಾತಿಲ್ಲ. ತಂದೆಯು ವಿಕಾರಿ ಪ್ರಪಂಚವನ್ನು ರಚಿಸುವರೇ! ವಿಕಾರದಲ್ಲಿಯೇ ದುಃಖವಿದೆ. ಮನುಷ್ಯರು ಹಠಯೋಗ ಇತ್ಯಾದಿಗಳನ್ನು ಬಹಳಷ್ಟು ಕಲಿಯುತ್ತಾರೆ. ಗುಹೆಗಳಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ, ಬೆಂಕಿಯಲ್ಲಿಯೂ ನಡೆದು ಹೋಗುತ್ತಾರೆ. ರಿದ್ಧಿ ಸಿದ್ಧಿಯು ಬಹಳಷ್ಟಿದೆ. ಜಾದುಗಾರಿಯಿಂದ ಬಹಳಷ್ಟು ವಸ್ತುಗಳನ್ನು ಹೊರ ತೆಗೆಯುತ್ತಾರೆ. ವಾಸ್ತವದಲ್ಲಿ ಭಗವಂತನನ್ನೂ ಸಹ ಜಾದೂಗಾರ, ರತ್ನಾಗಾರ, ಸೌಧಾಗಾರನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಚೈತನ್ಯವಾಗಿದ್ದಾರಲ್ಲವೆ. ನಾನು ಬರುತ್ತೇನೆಂದು ತಂದೆಯು ಹೇಳುತ್ತಾರೆ ಅಂದಮೇಲೆ ಜಾದೂಗಾರನಲ್ಲವೆ. ಮನುಷ್ಯನನ್ನು ದೇವತೆ, ಭಿಕಾರಿಯಿಂದ ರಾಜಕುಮಾರರನ್ನಾಗಿ ಮಾಡುತ್ತಾರೆ. ಇಂತಹ ಜಾದುವನ್ನು ಎಂದಾದರೂ ನೋಡಿದ್ದೀರಾ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೂದೋಟದಲ್ಲಿ ಹೋಗಬೇಕಾಗಿದೆ, ಆದ್ದರಿಂದ ಸುಗಂಧ ಭರಿತ ಹೂಗಳಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು. ಒಬ್ಬ ಪಾರಲೌಕಿಕ ತಂದೆಯೊಂದಿಗೆ ಸರ್ವ ಸಂಬಂಧಗಳನ್ನು ಜೋಡಿಸಬೇಕಾಗಿದೆ.

2. ಶಿವ ತಂದೆಯು ಪ್ರಿಯಾತಿ ಪ್ರಿಯನಾಗಿದ್ದಾರೆ, ಅವರೊಬ್ಬರನ್ನೇ ಪ್ರೀತಿ ಮಾಡಬೇಕಾಗಿದೆ. ಸುಖದಾತ ತಂದೆಯನ್ನು ನೆನಪು ಮಾಡಬೇಕಾಗಿದೆ.

ವರದಾನ:
ಈ ಲೋಕದ ಸೆಳೆತದಿಂದ ಮುಕ್ತರಾಗಿ ಅವ್ಯಕ್ತ ವತನದಲ್ಲಿ ಸಂಚರಿಸುವಂತಹ ಹಾರುವ ಪಕ್ಷಿ ಭವ.

ಬುದ್ಧಿರೂಪಿ ವಿಮಾನದಿಂದ ಅವ್ಯಕ್ತ ವತನ ಹಾಗೂ ಮೂಲವತನದ ಸಂಚಾರ ಮಾಡುವುದಕ್ಕಾಗಿ ಹಾರುವ ಪಕ್ಷಿಯಾಗಿ. ಬುದ್ಧಿಯ ಮುಖಾಂತರ ಯಾವಾಗ ಬೇಕೊ, ಎಲ್ಲಿ ಬೇಕೊ ತಲುಪಿ ಬಿಡಿ. ಇದು ಯಾವಾಗ ಆಗುವುದೆಂದರೆ ಯಾವಾಗ ಪೂರ್ತಿ ಈ ಲೋಕದ ಸೆಳೆತದಿಂದ ದೂರ ಇರುವಿರಿ ಆಗ. ಇದು ಸಾರವಿಲ್ಲದ ಸಂಸಾರವಾಗಿದೆ, ಈ ಸಾರವಿಲ್ಲದ ಸಂಸಾರದಿಂದ ಯಾವಾಗ ಯಾವುದೇ ಕೆಲಸ ಇಲ್ಲ, ಯಾವುದೇ ಪ್ರಾಪ್ತಿ ಇಲ್ಲ ಎಂದಾಗ ಬುದ್ಧಿಯ ಮುಖಾಂತರ ಸಹ ಹೋಗುವುದನ್ನು ಸಮಾಪ್ತಿ ಮಾಡಿ. ಇದು ರೌರವ ನರಕವಾಗಿದೆ ಇದರಲ್ಲಿ ಹೋಗುವ ಸಂಕಲ್ಪ ಮತ್ತು ಸ್ವಪ್ನ ಸಹ ಬರಬಾರದು.

ಸ್ಲೋಗನ್:
ತಮ್ಮ ಮುಖ ಮತ್ತು ಚಲನೆಯಿಂದ ಸತ್ಯತೆಯ ಸಭ್ಯತೆಯ ಅನುಭವ ಮಾಡಿಸುವುದೇ ಶ್ರೇಷ್ಠತೆಯಾಗಿದೆ.


ಬ್ರಹ್ಮಾ ತಂದೆಯ ಸಮಾನ ಸಂಪನ್ನ ಸ್ಥಿತಿಯ ಅನುಭವ ಮಾಡಿರಿ:-
ಹೇಗೆ ಬ್ರಹ್ಮಾ ತಂದೆಯ ಮುಂದು ತನ್ನ ಭವಿಷ್ಯ ಪದವಿಯ ಸ್ಪಷ್ಟತೆಯಿದ್ದರೂ, ಪುರುಷಾರ್ಥದಲ್ಲಿ ಸದಾ ಅಲರ್ಟ್ ಆಗಿದ್ದರು. ತನ್ನ ತೀವ್ರ ಪುರುಷಾರ್ಥದ ಅಥವಾ ಅವಿಶ್ರಾಂತಿಯ ವಿಶೇಷತೆಯಿಂದ ನಂಬರ್ವನ್ ಆದರು. ಇದೇ ರೀತಿ ಪ್ರತಿಯೊಂದು ಕಾರ್ಯವನ್ನು ಮಾಡುವುದರಲ್ಲಿ ತಂದೆಯ ಸಮಾನ ಆಕ್ಯುರೇಟ್ ಮತ್ತು ಅಲರ್ಟ್ ಆಗಿದ್ದಾಗ, ಸಂಪನ್ನರಾಗಿ ಸಂಪೂರ್ಣ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.