11.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಜ್ಞಾನದ ಖಡ್ಗದಲ್ಲಿ ಯೋಗದ ಹರಿತವಿರಬೇಕಾಗಿದೆ ಆಗಲೇ ವಿಜಯವಾಗುವುದು, ಜ್ಞಾನದಲ್ಲಿ ಯೋಗದ ಹರಿತವಿದ್ದರೆ ಅವಶ್ಯವಾಗಿ ಅದರ ಪ್ರಭಾವ ಬೀರುವುದು.

ಪ್ರಶ್ನೆ:
ನೀವು ಖುದಾನ (ಭಗವಂತ) ಸಂದೇಶಕರಾಗಿದ್ದೀರಿ, ನೀವು ಇಡೀ ಪ್ರಪಂಚಕ್ಕೆ ಯಾವ ಸಂದೇಶವನ್ನು ಕೊಡಬೇಕಾಗುತ್ತದೆ?

ಉತ್ತರ:
ಇಡೀ ಪ್ರಪಂಚಕ್ಕೆ ಸಂದೇಶವನ್ನು ಕೊಡಿ - ಖುದಾ ತಿಳಿಸಿದ್ದಾರೆ, ನೀವೆಲ್ಲರೂ ತಮ್ಮನ್ನು ಆತ್ಮವೆಂದು ತಿಳಿಯಿರಿ, ದೇಹಾಭಿಮಾನವನ್ನು ಬಿಡಿ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ. ಆಗ ನಿಮ್ಮ ತಲೆಯ ಮೇಲಿರುವ ಪಾಪದ ಹೊರೆಯು ಇಳಿಯುತ್ತದೆ. ಒಬ್ಬ ತಂದೆಯ ನೆನಪಿನಿಂದ ನೀವು ಪಾವನರಾಗಿ ಬಿಡುತ್ತೀರಿ. ಅಂತರ್ಮುಖಿ ಮಕ್ಕಳೇ ಎಲ್ಲರಿಗೆ ಈ ಸಂದೇಶವನ್ನು ಕೊಡುತ್ತಾರೆ.

ಓಂ ಶಾಂತಿ.
ತಂದೆಯು ತಿಳಿಸಿದ್ದಾರೆ - ಯಾವುದೇ ಮನುಷ್ಯ ಮಾತ್ರರೂ ಅಂದರೆ ದೈವೀ ಗುಣವಂತರಾದರೂ ಆಗಿರಬಹುದು, ಆಸುರೀ ಗುಣದವರೇ ಆಗಿರಬಹುದು. ಆದರೆ ಅವರನ್ನು ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಇದನ್ನಂತೂ ಮಕ್ಕಳು ತಿಳಿದಿದ್ದೀರಿ - ದೈವೀ ಗುಣವಂತರು ಸತ್ಯಯುಗದಲ್ಲಿರುತ್ತಾರೆ, ಆಸುರೀ ಗುಣವುಳ್ಳವರು ಕಲಿಯುಗದಲ್ಲಿದ್ದಾರೆ. ಆದ್ದರಿಂದಲೇ ತಂದೆಯು ಈ ಬರವಣಿಗೆಯನ್ನು ಬರೆಸಿದ್ದಾರೆ - ದೈವೀಗುಣವಂತರಾಗಿದ್ದೀರಾ ಅಥವಾ ಆಸುರೀ ಗುಣವಂತರಾಗಿದ್ದೀರಾ? ಸತ್ಯಯುಗೀಗಳಾಗಿದ್ದೀರಾ ಅಥವಾ ಕಲಿಯುಗಿಗಳೋ? ಈ ಮಾತುಗಳನ್ನು ಬಹಳ ವಿರಳ ಮನುಷ್ಯರೇ ಅರಿತುಕೊಳ್ಳುತ್ತಾರೆ. ನೀವು ಏಣಿಯ ಚಿತ್ರದ ಬಗ್ಗೆ ಬಹಳ ಚೆನ್ನಾಗಿ ತಿಳಿಸಬಹುದು. ನಿಮ್ಮ ಜ್ಞಾನದ ಬಾಣಗಳು ಬಹಳ ಚೆನ್ನಾಗಿವೆ ಆದರೆ ಅದರಲ್ಲಿ ಹರಿತವಿರಬೇಕು. ಹೇಗೆ ಖಡ್ಗದಲ್ಲಿ ಹರಿತವಿರುತ್ತದೆ. ಕೆಲವರು ಬಹಳ ತೀಕ್ಷ್ಣ ಹರಿತವುಳ್ಳ ಖಡ್ಗಗಳನ್ನು ಹೊಂದಿರುತ್ತಾರೆ. ಹೇಗೆ ಗುರು ಗೋವಿಂದ ಸಿಂಹನ ಖಡ್ಗವು ವಿದೇಶಕ್ಕೆ ಹೋಯಿತು. ಆ ಖಡ್ಗವನ್ನು ಹಿಡಿದು ಪರಿಕ್ರಮಣ ಮಾಡುತ್ತಾರೆ ಬಹಳ ಸ್ವಚ್ಛವಾಗಿಡುತ್ತಾರೆ. ಕೆಲವೊಂದು ಎರಡು ಪೈಸೆಗಳ ಖಡ್ಗಗಳೂ ಇರುತ್ತವೆ, ಯಾವುದರಲ್ಲಿ ಹರಿತವಿರುತ್ತದೆ ಅಂದರೆ ಅದು ಬಹಳ ತೀಕ್ಷ್ಣವಾಗಿರುತ್ತದೆ. ಅದರ ಬೆಲೆಯು ಹೆಚ್ಚಾಗಿರುತ್ತದೆ. ಮಕ್ಕಳಲ್ಲಿಯೂ ಹಾಗೆಯೇ, ಕೆಲವರಲ್ಲಿ ಬಹಳ ಜ್ಞಾನವಿದೆ. ಆದರೆ ಯೋಗದ ಹರಿತವು ಕಡಿಮೆಯಿದೆ. ಯಾರು ಬಂಧನದಲ್ಲಿದ್ದಾರೆಯೋ, ಬಡವರಿದ್ದಾರೆಯೋ ಅವರು ತಂದೆಯನ್ನು ಬಹಳ ನೆನಪು ಮಾಡುತ್ತಾರೆ. ಭಲೆ ಅವರಲ್ಲಿ ಜ್ಞಾನವು ಕಡಿಮೆಯಿದೆ ಆದರೆ ಯೋಗದ ಹರಿತವು ಬಹಳ ಇದೆ. ಅವರು ತಮೋಪ್ರಧಾನದಿಂದ ಸತೋಪ್ರಧಾನವಾಗುತ್ತಿದ್ದಾರೆ. ಹೇಗೆ ಅರ್ಜುನ-ಬೇಡನ (ಏಕಲವ್ಯ) ಉದಾಹರಣೆಯನ್ನು ತೋರಿಸುತ್ತಾರೆ. ಬೇಡನು ಬಾಣ ಹೊಡೆಯುವುದರಲ್ಲಿ ಅರ್ಜುನನಿಗಿಂತಲೂ ಮುಂದೆ ಹೋದನು. ಇಲ್ಲಿ ಅರ್ಜುನನೆಂದರೆ ಯಾರು ಮನೆಯಲ್ಲಿರುತ್ತಾರೆ, ಯಾರು ನಿತ್ಯವೂ ಜ್ಞಾನವನ್ನು ಕೇಳುತ್ತಾರೆಯೋ ಅವರು. ಅವರಿಗಿಂತಲೂ ಹೊರಗೆ ಇರುವವರು ಮುಂದೆ ಹೋಗಿ ಬಿಡುತ್ತಾರೆ. ಯಾರಲ್ಲಿ ಜ್ಞಾನದ ಹರಿತವಿದೆಯೋ ಅವರ ಮುಂದೆ ಇವರು ತಲೆಬಾಗಬೇಕಾಗುತ್ತದೆ. ಇದನ್ನು ನಾಟಕದ ಪೂರ್ವ ನಿಶ್ಚಿತವೆಂದು ಹೇಳಲಾಗುತ್ತದೆ. ಯಾರಾದರೂ ಅನುತ್ತೀರ್ಣರಾದರೆ, ದಿವಾಳಿಯಾದರೆ ಹಣೆಯ ಮೇಲೆ ಕೈಯನ್ನಿಡುತ್ತಾರೆ. ಜ್ಞಾನದ ಜೊತೆಗೆ ಯೋಗದ ಹರಿತವೂ ಅವಶ್ಯವಾಗಿ ಬೇಕು, ಆ ಹರಿತವಿಲ್ಲವೆಂದರೆ ಅವರು ಅರ್ಧ ಜ್ಞಾನಿಗಳೆಂದರ್ಥ. ಮಕ್ಕಳೂ ಅನುಭವ ಮಾಡುತ್ತೀರಿ - ಕೆಲವರಿಗೆ ಪತಿಯಲ್ಲಿ, ಕೆಲವರಿಗೆ ಕೆಲವರಲ್ಲಿ ಪ್ರೀತಿಯಿರುತ್ತದೆ. ಜ್ಞಾನದಲ್ಲಿ ಬಹಳ ಮುಂದಿರುತ್ತಾರೆ ಆದರೆ ಒಳಗೆ ಜಂಜಾಟವಿರುತ್ತದೆ. ಇಲ್ಲಂತೂ ಬಹಳ ಸಾಧಾರಣವಾಗಿರಬೇಕು.

ಎಲ್ಲರನ್ನು ನೋಡುತ್ತಿದ್ದರೂ ಸಹ ನೋಡದಂತೆ ಇರಬೇಕು. ಒಬ್ಬ ತಂದೆಯೊಂದಿಗೆ ಪ್ರೀತಿಯಿರಬೇಕು ಆದ್ದರಿಂದಲೇ ಗಾಯನವಿದೆ - ಕೈ ಕೆಲಸ ಮಾಡಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ..... ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಬುದ್ಧಿಯಲ್ಲಿ ನೆನಪಿರಲಿ - ನಾನಾತ್ಮನಾಗಿದ್ದೇನೆ. ತಂದೆಯು ಆದೇಶ ನೀಡಿದ್ದಾರೆ - ನನ್ನನ್ನು ನೆನಪು ಮಾಡುತ್ತಾ ಇರಿ. ಭಕ್ತಿಮಾರ್ಗದಲ್ಲಿಯೂ ಸಹ ಕೆಲಸ ಕಾರ್ಯಗಳನ್ನು ಮಾಡುತ್ತಾ ಯಾವುದಾದರೂ ಇಷ್ಟ ದೇವತೆಯನ್ನು ನೆನಪು ಮಾಡುತ್ತಿರುತ್ತಾರೆ. ಅದಂತೂ ಕೇವಲ ಕಲ್ಲಿನ ಪ್ರತಿಮೆಯಾಗಿದೆ, ಅದರಲ್ಲಿ ಆತ್ಮವಂತೂ ಇಲ್ಲವಲ್ಲವೆ. ಲಕ್ಷ್ಮೀ-ನಾರಾಯಣರನ್ನು ಪೂಜಿಸಲಾಗುತ್ತದೆ ಆದರೆ ಅದೂ ಸಹ ಕಲ್ಲಿನ ಮೂರ್ತಿಯಾಗಿದೆ. ಹೇಳಿ - ಇವರ ಆತ್ಮವು ಎಲ್ಲಿದೆ? ಈಗ ನೀವು ತಿಳಿಯುತ್ತೀರಿ ಅವಶ್ಯವಾಗಿ ಯಾವುದಾದರೊಂದು ನಾಮ-ರೂಪದಲ್ಲಿದ್ದಾರೆ. ಈಗ ನೀವು ಮತ್ತೆ ಯೋಗಬಲದಿಂದ ಪಾವನ ದೇವಿ-ದೇವತೆಗಳಾಗುತ್ತಿದ್ದೀರಿ. ಗುರಿ-ಉದ್ದೇಶವಿದೆಯಲ್ಲವೆ. ಎರಡನೆಯ ಮಾತನ್ನು ತಂದೆಯು ತಿಳಿಸುತ್ತಾರೆ - ಜ್ಞಾನ ಸಾಗರ ಮತ್ತು ಜ್ಞಾನ ಗಂಗೆಯರು ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಇರುತ್ತಾರೆ. ಕೇವಲ ಇದೊಂದೇ ಸಮಯದಲ್ಲಿರುತ್ತಾರೆ. ಜ್ಞಾನ ಸಾಗರನು ಕಲ್ಪದ ಈ ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತಾರೆ. ಜ್ಞಾನ ಸಾಗರ ನಿರಾಕಾರ ಪರಮಪಿತ ಪರಮಾತ್ಮ ಶಿವನೇ ಆಗಿದ್ದಾರೆ. ಅವರಿಗೆ ಮಾತನಾಡಲು ಶರೀರವು ಅವಶ್ಯವಾಗಿ ಬೇಕು. ಇಲ್ಲಿ ನೀರಿನ ಯಾವುದೇ ಮಾತಿಲ್ಲ. ಈಗ ನಿಮಗೆ ಜ್ಞಾನ ಸಿಗುವುದೇ ಸಂಗಮಯುಗದಲ್ಲಿ. ಉಳಿದೆಲ್ಲರ ಬಳಿ ಭಕ್ತಿಯಿದೆ. ಭಕ್ತಿಮಾರ್ಗದವರು ನೀರನ್ನೂ ಸಹ ಪೂಜಿಸುತ್ತಾರೆ. ಪತಿತ-ಪಾವನ ಒಬ್ಬರೇ ತಂದೆಯಾಗಿದ್ದಾರೆ ಅವರು ಬರುವುದೂ ಒಂದೇ ಬಾರಿ, ಯಾವಾಗ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಬೇಕಾಗುತ್ತದೆ. ಈಗ ಇದನ್ನು ಅನ್ಯರಿಗೆ ತಿಳಿಸಬೇಕಾಗಿದೆ ಯುಕ್ತಿ ಬೇಕಾಗಿದೆ. ಏಕಾಂತದಲ್ಲಿ ವಿಚಾರಸಾಗರ ಮಂಥನ ಮಾಡಬೇಕಾಗಿದೆ. ಈ ರೀತಿ ಮಾತುಗಳನ್ನು ಬರೆಯಬೇಕು, ಅದರಿಂದ ಮನುಷ್ಯರು ಜ್ಞಾನ ಸಾಗರ ಪರಮಪಿತ ಪರಮಾತ್ಮ ಶಿವನೊಬ್ಬರೇ ಆಗಿದ್ದಾರೆಂದು ತಿಳಿಯಬೇಕು. ಅವರು ಯಾವಾಗ ಬರುತ್ತಾರೆಯೋ ಆಗ ಅವರ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗುತ್ತಾರೆ, ಅವರೇ ಜ್ಞಾನದ ಧಾರಣೆ ಮಾಡುವ ಜ್ಞಾನ ಗಂಗೆಯರಾಗುತ್ತಾರೆ, ಅನೇಕ ಜ್ಞಾನ ಗಂಗೆಯರಿದ್ದಾರೆ, ಜ್ಞಾನವನ್ನು ತಿಳಿಸುತ್ತಲೇ ಇರುತ್ತಾರೆ, ಅವರೇ ಸದ್ಗತಿ ಕೊಡಲು ಸಾಧ್ಯ. ನೀರಿನಲ್ಲಿ ಸ್ನಾನ ಮಾಡುವುದರಿಂದ ಪಾವನರಾಗಲು ಸಾಧ್ಯವಿಲ್ಲ. ಜ್ಞಾನವಿರುವುದು ಸಂಗಮಯುಗದಲ್ಲಿ, ಇದನ್ನು ತಿಳಿಸಲು ಯುಕ್ತಿ ಬೇಕು. ಬಹಳ ಅಂತರ್ಮುಖತೆಯೂ ಬೇಕು. ಶರೀರದ ಪರಿವೆಯನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಬೇಕು. ನಾವು ಪುರುಷಾರ್ಥಿಗಳಾಗಿದ್ದೇವೆಂದು ಹೇಳುತ್ತೀರಿ, ನೆನಪು ಮಾಡುತ್ತಾ-ಮಾಡುತ್ತಾ ಯಾವಾಗ ಪಾಪಗಳು ಭಸ್ಮವಾಗಿ ಬಿಡುತ್ತವೆಯೋ ಆಗ ಯುದ್ಧವು ಪ್ರಾರಂಭವಾಗಿ ಬಿಡುವುದು. ಅಷ್ಟು ಹೊತ್ತಿಗೆ ಎಲ್ಲರಿಗೆ ಸಂದೇಶ ಸಿಕ್ಕಿ ಬಿಡಬೇಕು. ಸಂದೇಶ ಅಥವಾ ಮೆಸೇಜ್ ಶಿವ ತಂದೆಯೇ ಕೊಡುತ್ತಾರೆ. ಖುದಾನಿಗೆ ಸಂದೇಶಕನೆಂತಲೂ ಹೇಳುತ್ತಾರೆ. ತಾವು ಎಲ್ಲರಿಗೆ ಈ ಸಂದೇಶವನ್ನು ತಲುಪಿಸುತ್ತೀರಿ. ತಮ್ಮನ್ನು ಆತ್ಮನೆಂದು ತಿಳಿದು ಪರಮಪಿತ ಪರಮಾತ್ಮನ ಜೊತೆ ಯೋಗವನ್ನಿಡಿ. ಆಗ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗಿ ಬಿಡುತ್ತವೆ ಎಂದು ತಂದೆಯು ಹೇಳುತ್ತಾರೆ. ಇದನ್ನು ತಂದೆಯು ಬ್ರಹ್ಮಾರವರ ಮುಖದಿಂದ ತಿಳಿಸುತ್ತಾರೆ. ಆದರೆ ನೀರಿನ ಗಂಗೆಯೇನು ತಿಳಿಸುತ್ತದೆ! ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ - ನೀವು ಸತ್ಯಯುಗದಲ್ಲಿ ಎಷ್ಟೊಂದು ಸುಖಿ, ಸಂಪತ್ತಿವಂತರಾಗಿದ್ದಿರಿ, ಈಗ ದುಃಖಿ-ಕಂಗಾಲಾಗಿ ಬಿಟ್ಟಿದ್ದೀರಿ. ಇದು ಬೇಹದ್ದಿನ ಮಾತಾಗಿದೆ. ಬಾಕಿ ಈ ಚಿತ್ರ ಮೊದಲಾದವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಈ ಭಕ್ತಿಮಾರ್ಗದ ಸಾಮಗ್ರಿಗಳೂ ಸಹ ತಯಾರಾಗಲೇಬೇಕಾಗಿದೆ. ಶಾಸ್ತ್ರಗಳನ್ನು ಓದುವುದು, ಪೂಜೆ ಮಾಡುವುದು ಭಕ್ತಿಮಾರ್ಗವಾಗಿದೆಯಲ್ಲವೆ. ನಾನು ಶಾಸ್ತ್ರ ಮೊದಲಾದವುಗಳನ್ನು ಓದಿಸುತ್ತೇನೆಯೇ! ನಾನಂತೂ ನೀವು ಪತಿತರನ್ನು ಪಾವನರನ್ನಾಗಿ ಮಾಡಲು ಜ್ಞಾನವನ್ನು ತಿಳಿಸುತ್ತೇನೆ. ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ಆತ್ಮ ಮತ್ತು ಶರೀರವೆರಡೂ ಪತಿತವಾಗಿದೆ. ಈಗ ತಂದೆಯನ್ನು ನೆನಪು ಮಾಡಿದರೆ ಈ ದೇವತೆಗಳಾಗಿ ಬಿಡುತ್ತೀರಿ. ದೇಹದ ಎಲ್ಲಾ ಸಂಬಂಧಗಳಿಂದ ಮಮತ್ವವನ್ನು ತೆಗೆಯಿರಿ. ಹೇಗೆ ಹಾಡುತ್ತಲೂ ಬಂದಿದ್ದೀರಿ - ತಾವು ಬಂದರೆ ನಾವು ಮತ್ತ್ಯಾರದನ್ನೂ ಕೇಳುವುದಿಲ್ಲ, ತಮ್ಮೊಂದಿಗೆ ಮಾತ್ರ ಸಂಬಂಧವನ್ನು ಜೋಡಿಸುತ್ತೇವೆ ಮತ್ತೆಲ್ಲಾ ದೇಹಧಾರಿಗಳನ್ನು ಮರೆಯುತ್ತೇವೆ. ಈಗ ತಂದೆಯು ತಮ್ಮ ಪ್ರತಿಜ್ಞೆಯನ್ನು ನೆನಪು ಮಾಡಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಯೋಗವನ್ನಿಡುವುದರಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವು ಹೊಸ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಇದು ನಿಮ್ಮ ಗುರಿ-ಉದ್ದೇಶವಾಗಿದೆ, ರಾಜರ ಜೊತೆ ಅವಶ್ಯವಾಗಿ ಪ್ರಜೆಗಳೂ ಆಗಬೇಕು ಮತ್ತು ರಾಜರಿಗೆ ದಾಸ-ದಾಸಿಯರೂ ಬೇಕು. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಿರುತ್ತಾರೆ, ಯೋಗದಲ್ಲಿರುವುದಿಲ್ಲ, ದೈವೀ ಗುಣಗಳನ್ನು ಧಾರಣೆ ಮಾಡುವುದಿಲ್ಲವೆಂದರೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುತ್ತೀರಿ? ಮನೆಯಲ್ಲಿ ಯಾವುದಾದರೊಂದು ಮಾತಿನ ಮೇಲೆ ಜಗಳ-ಕಲಹವಾಗುತ್ತಿರುತ್ತದೆ. ಆದ್ದರಿಂದ ತಂದೆಯು ಬರೆಯುತ್ತಾರೆ - ನಿಮ್ಮ ಮನೆಯಲ್ಲಿ ಕಲಹವಿದೆ ಆದ್ದರಿಂದಲೇ ಜ್ಞಾನವು ನಿಲ್ಲುತ್ತಿಲ್ಲ. ತಂದೆಯು ಕೇಳುತ್ತಾರೆ - ಸ್ತ್ರೀ-ಪುರುಷ ಇಬ್ಬರೂ ಸರಿಯಾಗಿ ನಡೆಯುತ್ತೀರಾ? ನಡುವಳಿಕೆಯು ಬಹಳ ಚೆನ್ನಾಗಿರಬೇಕು. ಕ್ರೋಧದ ಅಂಶವೂ ಇರಬಾರದು. ಈಗಂತೂ ಪ್ರಪಂಚದಲ್ಲಿ ಎಷ್ಟೊಂದು ಏರುಪೇರು ಮತ್ತು ಅಶಾಂತಿಯಿದೆ. ನಿಮ್ಮಲ್ಲಿ ಅನೇಕರು ಜ್ಞಾನ-ಯೋಗದಲ್ಲಿ ಮುಂದೆ ಹೋಗಿ ಬಿಡುತ್ತಾರೆ ಮತ್ತು ಇನ್ನೂ ಹೆಚ್ಚಿನ ನೆನಪು ಮಾಡಲು ತೊಡಗುತ್ತಾರೆ. ನಿಮ್ಮ ಅಭ್ಯಾಸವೂ ಸಹ ಚೆನ್ನಾಗಿ ಆಗುವುದು ಮತ್ತು ಬುದ್ಧಿಯು ವಿಶಾಲವಾಗಿ ಬಿಡುವುದು.

ತಂದೆಗೆ ಈ ಚಿಕ್ಕ ಚಿತ್ರಗಳು ಅಷ್ಟೊಂದು ಇಷ್ಟವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೊಡ್ಡ-ದೊಡ್ಡ ಚಿತ್ರಗಳಿರಲಿ ಹೊರಗೆ ಮುಖ್ಯ ಸ್ಥಾನಗಳಲ್ಲಿ ಚಿತ್ರಗಳನ್ನಿಡಿ. ಹೇಗೆ ನಾಟಕದ ದೊಡ್ಡ-ದೊಡ್ಡ ಚಿತ್ರಗಳನ್ನಿಡುತ್ತಾರಲ್ಲವೆ. ಒಳ್ಳೊಳ್ಳೆಯ ಚಿತ್ರಗಳನ್ನು ಮಾಡಿಸಿ, ಹೇಗೆಂದರೆ ಹಾಗೆಯೇ ಇರಬಾರದು. ಏಣಿಯ ಚಿತ್ರವೂ ಸಹ ದೊಡ್ಡ-ದೊಡ್ಡದಾಗಿ ಮಾಡಿಸಿ ಇಂತಹ ಸ್ಥಾನಗಳಲ್ಲಿಡಿ ಅಲ್ಲಿಗೆ ಎಲ್ಲರ ದೃಷ್ಟಿಯು ಹೋಗುವಂತಿರಬೇಕು. ಸೀಟಿನ ಮೇಲೂ ಸಹ ಬಣ್ಣವು ಇಷ್ಟು ಒಳ್ಳೆಯದಾಗಿರಬೇಕು ಅದು ನೀರು ಅಥವಾ ಹೊಗೆಯಲ್ಲಿ ಹಾಳಾಗಬಾರದು. ಮುಖ್ಯ ಸ್ಥಾನಗಳಲ್ಲಿ ಇಂತಹ ಚಿತ್ರಗಳನ್ನಿಡಿ ಇಲ್ಲವೆ ಎಲ್ಲಿಯಾದರೂ ಪ್ರದರ್ಶನಿ ಇರುತ್ತದೆಯೆಂದರೆ ಮುಖ್ಯವಾಗಿ ದೊಡ್ಡದಾದ 2-3 ಚಿತ್ರಗಳೇ ಸಾಕು. ಈ ಗೋಲದ ಚಿತ್ರವೂ ಸಹ ವಾಸ್ತವದಲ್ಲಿ ಗೋಡೆಯಷ್ಟಿರಬೇಕು. ಭಲೆ ಅದನ್ನು 8-10 ವ್ಯಕ್ತಿಗಳು ಎತ್ತುವಂತಿದ್ದರೂ ಪರವಾಗಿಲ್ಲ. ಯಾರೇ ದೂರದಿಂದ ನೋಡಿದರೆ ಒಮ್ಮೆಯೇ ಸ್ಪಷ್ಟವಾಗಿ ಗೊತ್ತಾಗಿ ಬಿಡಬೇಕು. ಸತ್ಯಯುಗದಲ್ಲಂತೂ ಇಷ್ಟೆಲ್ಲಾ ಧರ್ಮಗಳಿರುವುದಿಲ್ಲ ಎಲ್ಲರೂ ಬರುವುದೇ ನಂತರದಲ್ಲಿ ಸ್ವರ್ಗದಲ್ಲಂತೂ ಮೊದಲು ಕೆಲವರೇ ಮನುಷ್ಯರಿರುತ್ತಾರೆ. ಈಗ ಸ್ವರ್ಗವಾಗಿದೆಯೇ ಅಥವಾ ನರಕವೇ ಎಂದು ಇದರ ಬಗ್ಗೆ ಬಹಳ ಚೆನ್ನಾಗಿ ತಿಳಿಸಬಹುದು. ಯಾರೇ ಬರಲಿ ಅವರಿಗೆ ತಿಳಿಸಿ. ದೊಡ್ಡ-ದೊಡ್ಡ ಚಿತ್ರಗಳಿರಲಿ ಹೇಗೆ ಪಾಂಡವರ ದೊಡ್ಡ-ದೊಡ್ಡ ಪ್ರತಿಮೆಗಳನ್ನು ಮಾಡಿಸುತ್ತಾರೆ. ನೀವೂ ಪಾಂಡವರಲ್ಲವೆ.

ಶಿವ ತಂದೆಯು ಸಂಗಮದಲ್ಲಿಯೇ ಓದಿಸುತ್ತಾರೆ. ಶ್ರೀಕೃಷ್ಣನು ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ. ನೀವು ತಿಳಿಸುತ್ತಾ-ತಿಳಿಸುತ್ತಾ ರಾಜಧಾನಿಯನ್ನು ಸ್ಥಾಪನೆ ಮಾಡಿ ಬಿಡುತ್ತೀರಿ. ಕೆಲವರು ಓದುತ್ತಾ-ಓದುತ್ತಾ ಬಿಟ್ಟು ಬಿಡುತ್ತಾರೆ. ಶಾಲೆಯಲ್ಲಿಯೂ ಸಹ ಕೆಲವರು ಸರಿಯಾಗಿ ಓದುವುದಿಲ್ಲವೆಂದರೆ ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ. ಹಾಗೆಯೇ ಇಲ್ಲಿಯೂ ಸಹ ಅನೇಕರಿದ್ದಾರೆ ಅವರು ವಿದ್ಯೆಯನ್ನು ಬಿಟ್ಟು ಬಿಟ್ಟಿದ್ದಾರೆ. ಅಂದಮೇಲೆ ಅವರು ಸ್ವರ್ಗದಲ್ಲಿ ಬರುತ್ತಾರೆಯೇ? ನಾನು ವಿಶ್ವದ ಮಾಲೀಕ, ನನ್ನಿಂದ ಯಾವುದೇ ಎರಡು ಶಬ್ಧಗಳನ್ನು ಕೇಳಿದರೂ ಸಹ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ. ಮುಂದೆ ಹೋದಂತೆ ಅನೇಕರು ಬಂದು ಕೇಳುತ್ತಾರೆ. ಪೂರ್ಣ ರಾಜ್ಯವು ಸ್ಥಾಪನೆಯಾಗುತ್ತದೆ, ಕಲ್ಪದ ಹಿಂದಿನಂತೆ. ಮಕ್ಕಳು ತಿಳಿಯುತ್ತೀರಿ - ನಾವು ಅನೇಕ ಬಾರಿ ರಾಜ್ಯವನ್ನು ಪಡೆದಿದ್ದೇವೆ ಮತ್ತು ಕಳೆದುಕೊಂಡಿದ್ದೇವೆ. ವಜ್ರ ಸಮಾನರಾಗಿದ್ದಿರಿ, ಮತ್ತೆ ಕವಡೆಯ ಸಮಾನರಾಗಿ ಬಿಟ್ಟಿದ್ದೀರಿ. ಭಾರತವು ವಜ್ರ ಸಮಾನವಾಗಿತ್ತು ಮತ್ತೆ ಈಗ ಏನಾಗಿದೆ. ಭಾರತವಂತೂ ಅದೇ ಆಗಿರಬೇಕಲ್ಲವೆ. ಈ ಯುಗಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ಉತ್ತಮರಿಗಿಂತ ಉತ್ತಮ ಪುರುಷರೂ ಇದ್ದಾರೆ. ಉಳಿದವರು ಕನಿಷ್ಟರಾಗಿದ್ದಾರೆ. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾಗಿದ್ದಾರೆ, 84 ಜನ್ಮಗಳನ್ನು ಪಡೆಯುತ್ತಾರೆ. ಆ ಶರೀರ ಸಮಾಪ್ತಿಯಾಯಿತು, ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ. ಯಾವಾಗ ಸತೋಪ್ರಧಾನರಾದಿರಿ ಆಗ ಪೂಜಿಸುತ್ತಿರಲಿಲ್ಲ ಚೈತನ್ಯದಲ್ಲಿದ್ದಿರಿ. ಈಗ ಶಿವ ತಂದೆಯನ್ನು ಚೈತನ್ಯದಲ್ಲಿ ನೆನಪು ಮಾಡುತ್ತೀರಿ ನಂತರ ಪೂಜಾರಿಯಾಗುತ್ತೀರೆಂದರೆ ಕಲ್ಲನ್ನು ಪೂಜಿಸುತ್ತೀರಿ. ಈಗ ತಂದೆಯು ಚೈತನ್ಯವಾಗಿದ್ದಾರಲ್ಲವೆ. ಮತ್ತೆ ಇವರದೇ ಕಲ್ಲಿನ ಮೂರ್ತಿಯನ್ನಾಗಿ ಮಾಡಿ ಪೂಜಿಸುತ್ತಾರೆ. ರಾವಣ ರಾಜ್ಯದಲ್ಲಿ ಭಕ್ತಿಯು ಪ್ರಾರಂಭವಾಗುತ್ತದೆ. ಆತ್ಮಗಳಂತೂ ಅವರೇ ಆದರೆ ಭಿನ್ನ-ಭಿನ್ನ ಶರೀರ ಧಾರಣೆ ಮಾಡುತ್ತಾ ಬಂದಿದ್ದೀರಿ. ಕೆಳಗಿಳಿಯುವುದರಿಂದಲೇ ಭಕ್ತಿಯು ಪ್ರಾರಂಭವಾಗುತ್ತದೆ. ತಂದೆಯು ಬಂದು ಜ್ಞಾನವನ್ನು ಕೊಡುವುದರಿಂದ ದಿನವಾಗುತ್ತದೆ. ಬ್ರಾಹ್ಮಣರಿಂದ ದೇವತೆಗಳಾಗಿ ಬಿಡುತ್ತೀರಿ ಈಗಂತೂ ನಿಮ್ಮನ್ನು ದೇವತೆಗಳೆಂದು ಹೇಳುವುದಿಲ್ಲ. ಬ್ರಹ್ಮಾರವರು ಸತ್ಯಯುಗದಲ್ಲಿರುವುದಿಲ್ಲ ಆದರೆ ಇಲ್ಲಿ ತಪಸ್ಸು ಮಾಡುತ್ತಿದ್ದಾರೆ ಮನುಷ್ಯನಾಗಿದ್ದಾರಲ್ಲವೆ. ಶಿವನಿಗೆ ಶಿವನೆಂದೇ ಹೇಳುತ್ತಾರೆ. ಈ ಬ್ರಹ್ಮಾರವರಲ್ಲಿದ್ದಾರೆ ಆದರೂ ಸಹ ಶಿವ ತಂದೆಯೆಂದೇ ಹೇಳಲಾಗುತ್ತದೆ. ಬೇರೆ ಯಾವುದೇ ಹೆಸರನ್ನಿಡಲಾಗುವುದಿಲ್ಲ. ಇವರಲ್ಲಿ ಶಿವ ತಂದೆಯು ಬರುತ್ತಾರೆ, ಅವರು ಜ್ಞಾನ ಸಾಗರನಾಗಿದ್ದಾರೆ. ಈ ಬ್ರಹ್ಮಾರವರ ಶರೀರದ ಮೂಲಕ ಜ್ಞಾನವನ್ನು ಕೊಡುತ್ತಾರೆ ಅಂದಮೇಲೆ ಚಿತ್ರ ಮೊದಲಾದವುಗಳನ್ನೂ ಸಹ ಬಹಳ ತಿಳುವಳಿಕೆಯಿಂದ ಮಾಡಿಸಬೇಕು. ಇದರಲ್ಲಿ ಬರವಣಿಗೆಯೇ ಕೆಲಸಕ್ಕೆ ಬರುತ್ತದೆ. ಪತಿತ-ಪಾವನ ನೀರಿನ ಸಾಗರ, ನೀರಿನ ನದಿಗಳಾಗಿದೆಯೇ? ಅಥವಾ ಜ್ಞಾನ ಸಾಗರ ಮತ್ತು ಅವರಿಂದ ಹೊರಟಿರುವ ಜ್ಞಾನ ಗಂಗೆಯರಾದ ಬ್ರಹ್ಮಾಕುಮಾರ-ಕುಮಾರಿಯರೇ? ಅವರಿಗೆ ತಂದೆಯು ಜ್ಞಾನವನ್ನು ಕೊಡುತ್ತಾರೆ. ಬ್ರಹ್ಮಾರವರ ಮೂಲಕ ಯಾರು ಬ್ರಾಹ್ಮಣರಾಗುತ್ತಾರೆಯೋ ಅವರೇ ದೇವತೆಗಳಾಗುತ್ತಾರೆ. ವಿರಾಟರೂಪದ ಚಿತ್ರವನ್ನೂ ಸಹ ಬಹಳ ದೊಡ್ಡದಾಗಿ ತೋರಿಸಬೇಕು. ಇದು ಮುಖ್ಯ ಚಿತ್ರವಾಗಿದೆ.

ತಂದೆಯು ತಿಳಿಸುತ್ತಿದ್ದಾರೆ - ಮಧುರ ಮಕ್ಕಳೇ, ಈಗ ತಮ್ಮ ಬುದ್ಧಿಯನ್ನು ಶ್ರೇಷ್ಠ ಮಾಡಿಕೊಳ್ಳಬೇಕು. ತಂದೆಯು ಯಾವಾಗ ಇವರದು ಕುದೃಷ್ಟಿಯಿದೆ ಎಂದು ನೋಡುತ್ತಾರೆಯೋ ಆಗ ಇವರಿಂದ ನಡೆಯಲು ಸಾಧ್ಯವಿಲ್ಲವೆಂದು ತಿಳಿಯುತ್ತಾರೆ. ನಿಮ್ಮ ಆತ್ಮವು ಈಗ ತ್ರಿಕಾಲದರ್ಶಿಯಾಗುತ್ತದೆ, ಇದನ್ನು ಕೆಲವರೇ ವಿರಳ ತೆಗೆದುಕೊಳ್ಳುತ್ತಾರೆ. ಬಹಳ ಮಂಧ ಬುದ್ಧಿಯವರಾಗಿದ್ದಾರೆ. ಅವರು ತಂದೆಗೆ ವಿಚ್ಛೇಧನವನ್ನು ಕೊಟ್ಟು ಬಿಡುತ್ತಾರೆ. ಇದಂತೂ ಮಕ್ಕಳು ತಿಳಿಯುತ್ತೀರಿ - ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅದರಲ್ಲಿ ಎಲ್ಲರೂ ಬೇಕು ಅಂತ್ಯದಲ್ಲಿ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಫಸ್ಟ್ ಕ್ಲಾಸ್ ದಾಸ-ದಾಸಿಯರೂ ಆಗುತ್ತಾರೆ. ಫಸ್ಟ್ ಕ್ಲಾಸ್ ದಾಸಿಯರು ಕೃಷ್ಣನ ಪಾಲನೆ ಮಾಡುತ್ತಾರೆ, ಪಾತ್ರೆ ತೊಳೆಯವವರು, ಸ್ವಚ್ಛಗೊಳಿಸುವವರು ಎಲ್ಲರೂ ಇರುವರು ಅಂದರೆ ಇಲ್ಲಿಂದಲೇ ಎಲ್ಲರೂ ತಯಾರಾಗುತ್ತಾರೆ. ಮೊದಲನೆ ನಂಬರಿನವರು ಅವಶ್ಯವಾಗಿ ಒಳ್ಳೆಯ ನಂಬರನ್ನು ಪಡೆಯುತ್ತಾರೆ. ಇದು ಎಲ್ಲರಿಗೂ ಅನುಭವವಾಗುತ್ತದೆ. ತಂದೆಗೆ ಮಕ್ಕಳಿಂದ ತಿಳಿಯುತ್ತದೆ - ಇವರು ಮುರುಳಿಯನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಯೋಗವು ಬಹಳ ಕಡಿಮೆಯಿದೆ. ಕೆಲವು ಸ್ತ್ರೀಯರು ಪುರುಷರಿಗಿಂತಲೂ ಮುಂದೆ ಹೋಗುತ್ತಾರೆ. ಒಬ್ಬರು ಜ್ಞಾನದಲ್ಲಿದ್ದರೆ ಬಾಬಾ, ಇನ್ನೊಂದು ಚಕ್ರವು ಸರಿಯಿಲ್ಲವೆಂದು ಹೇಳುತ್ತಾರೆ. ಒಬ್ಬರು ಇನ್ನೊಬ್ಬರನ್ನು ಎಚ್ಚರಿಸಬೇಕು. ಪ್ರವೃತ್ತಿ ಮಾರ್ಗವಾಗಿದೆಯಲ್ಲವೆ. ಎರಡು ಚಕ್ರಗಳು ಸಮಾನವಾಗಿರಬೇಕು, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಬೇಕು. ಅಂತ್ಯದಲ್ಲಿ ನೀವು ಪ್ರಪಂಚವನ್ನೇ ಮರೆತು ಹೋಗುತ್ತೀರಿ. ತಿಳಿಯುತ್ತೀರಲ್ಲವೆ, ನಾವು ಹಂಸಗಳಾಗಿದ್ದೇವೆ, ಇವರು ಕೊಕ್ಕರೆಗಳಾಗಿದ್ದಾರೆ. ಕೆಲಕೆಲವರಲ್ಲಿ ಕೆಲ ಕೆಲವು ಅವಗುಣಗಳಿರುತ್ತವೆ. ಪರಿಶ್ರಮವು ಬಹಳ ಇದೆ ಆದರೂ ಸಹಜವಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ, ಕವಡೆಯೂ ಖರ್ಚಿಲ್ಲದೆ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಯಾರು ಬಡವರಿದ್ದಾರೆಯೋ ಅವರು ಒಳ್ಳೆಯ ಸರ್ವೀಸ್ ಮಾಡುತ್ತಿರುತ್ತಾರೆ. ಇದಂತೂ ತಿಳಿದಿದೆಯಲ್ಲವೆ - ಯಾರು ಯಾರು ಹೇಗೇಗೆ ಬಂದಿದ್ದಾರೆ, ಬಹಳಷ್ಟು ತಂದಿರುವವರು ಇಂದು ಇಲ್ಲವೇ ಇಲ್ಲ ಮತ್ತು ಬಡವರು ಬಹಳ ಶ್ರೇಷ್ಠ ಪದವಿಯನ್ನು ಪಡೆಯುತ್ತಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಜ್ಞಾನದ ಖಡ್ಗದಲ್ಲಿ ನೆನಪಿನ ಹರಿತವನ್ನು ತುಂಬಲು ಕರ್ಮ ಮಾಡುತ್ತಾ ಅಂತರ್ಮುಖಿಯಾಗಿ ಅಭ್ಯಾಸ ಮಾಡಬೇಕು - ನಾನು ಆತ್ಮನಾಗಿದ್ದೇನೆ, ನಾನಾತ್ಮನಿಗೆ ತಂದೆಯ ಆದೇಶವಿದೆ - ನಿರಂತರ ನನ್ನನ್ನು ನೆನಪು ಮಾಡಿ, ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನಿಡಿ, ದೇಹ ಮತ್ತು ದೇಹದ ಸಂಬಂಧಿಗಳಿಂದ ಮಮತ್ವವನ್ನು ತೆಗೆದು ಬಿಡಿ.

2. ಪ್ರವೃತ್ತಿಯಲ್ಲಿರುತ್ತಾ ಒಬ್ಬರು ಇನ್ನೊಬ್ಬರನ್ನು ಎಚ್ಚರಿಸಿ ಹಂಸಗಳಾಗಿ ಉತ್ತಮ ಪದವಿಯನ್ನು ಪಡೆಯಬೇಕು. ಕ್ರೋಧದ ಅಂಶವನ್ನೂ ಸಹ ತೆಗೆಯಬೇಕು, ತಮ್ಮ ಬುದ್ಧಿಯನ್ನು ಶ್ರೇಷ್ಠ ಮಾಡಿಕೊಳ್ಳಬೇಕು.
 

ವರದಾನ:
ತೀವ್ರ ಪುರುಷಾರ್ಥದಿಂದ ಎಲ್ಲಾ ಬಂಧನಗಳನ್ನು ಪಾರು ಮಾಡಿಕೊಂಡು ಮನೋರಂಜನೆಯ ಅನುಭವ ಮಾಡುವಂತಹ ಡಬ್ಬಲ್ ಲೈಟ್ ಭವ.

ಕೆಲವು ಮಕ್ಕಳು ಹೇಳುತ್ತಾರೆ ಹಾಗೆ ನೋಡಿದರೆ ನಾನು ಸರಿಯಾಗಿದ್ದೇನೆ. ಆದರೆ ಈ ಕಾರಣ ಇದೆಯಲ್ಲಾ - ಸಂಸ್ಕಾರಗಳ, ವ್ಯಕ್ತಿಗಳ, ವಾಯುಮಂಡಲದ ಬಂಧನವಿದೆ..... ಆದರೆ ಎಂತಹದೇ ಕಾರಣವಿರಲಿ, ಏನೇ ಆಗಲಿ ತೀವ್ರ ಪುರುಷಾರ್ಥಿ ಎಲ್ಲಾ ಮಾತುಗಳನ್ನು ಹೀಗೆ ಪಾರು ಮಾಡುತ್ತಾರೆ. ಹೇಗೆ ಏನೂ ಆಗೇ ಇಲ್ಲದ ರೀತಿ. ಅವರು ಸದಾ ಮನೋರಂಜನೆಯ ಅನುಭವ ಮಾಡುತ್ತಾರೆ. ಇಂತಹ ಸ್ಥಿತಿಗೆ ಹೇಳಲಾಗುವುದು ಹಾರುವ ಕಲೆ ಮತ್ತು ಹಾರುವ ಕಲೆಯ ನಿಶಾನಿಯಾಗಿದೆ ಡಬ್ಬಲ್ ಲೈಟ್. ಅವರಿಗೆ ಯಾವುದೇ ಪ್ರಕಾರದ ಹೊರೆ ಹಲ್-ಚಲ್ನಲ್ಲಿ ತರಲು ಸಾಧ್ಯವಿಲ್ಲ.

ಸ್ಲೋಗನ್:
ಪ್ರತಿ ಗುಣ ಮತ್ತು ಜ್ಞಾನದ ಮಾತುಗಳನ್ನು ನಿಮ್ಮ ಮೂಲ ಸಂಸ್ಕಾರವನ್ನಾಗಿ ಮಾಡಿಕೊಳ್ಳಿ.