11.02.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮಗೆ ಅಪಾರ ಖುಷಿಯಿರಬೇಕು, ನಾವೀಗ ಹಳೆಯ ವಸ್ತ್ರವನ್ನು ಬಿಟ್ಟು ಮನೆಗೆ ಹೋಗುತ್ತೇವೆ, ಮತ್ತೆ ಹೊಸ ವಸ್ತ್ರವನ್ನು ಹೊಸ ಪ್ರಪಂಚದಲ್ಲಿ ತೆಗೆದುಕೊಳ್ಳುತ್ತೇವೆ

ಪ್ರಶ್ನೆ:
ನಾಟಕದ ಯಾವ ರಹಸ್ಯವು ಅತೀ ಸೂಕ್ಷ್ಮ ತಿಳಿದುಕೊಳ್ಳುವಂತಹದ್ದಾಗಿದೆ?

ಉತ್ತರ:
ಈ ನಾಟಕವು ನಿಧಾನವಾಗಿ ನಡೆಯುತ್ತಿರುತ್ತದೆ. ಕ್ಷಣ-ಪ್ರತಿಕ್ಷಣ ಕಳೆಯುತ್ತಿರುತ್ತದೆ. ಯಾರದು ಯಾವ ಪಾತ್ರ ನಡೆಯಿತೋ ಅದು ಮತ್ತೆ 5000 ವರ್ಷಗಳ ನಂತರ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಈ ರಹಸ್ಯವು ಬಹಳ ಸೂಕ್ಷ್ಮ ತಿಳಿದುಕೊಳ್ಳುವಂತಹದ್ದಾಗಿದೆ. ಯಾವ ಮಕ್ಕಳು ಈ ರಹಸ್ಯವನ್ನು ಯಥಾರ್ಥವಾಗಿ ತಿಳಿದುಕೊಳ್ಳುವುದಿಲ್ಲವೋ ಅವರು ನಾಟಕದಲ್ಲಿದ್ದರೆ ಪುರುಷಾರ್ಥ ಮಾಡುತ್ತೇವೆಂದು ಹೇಳುತ್ತಾರೆ. ಅವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ.

ಓಂ ಶಾಂತಿ.
ಮಕ್ಕಳಿಗೆ ತಂದೆಯ ಪರಿಚಯ ಸಿಕ್ಕಿತು ಅಂದಮೇಲೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು ಮತ್ತು ಪಾವನರಾಗಬೇಕಾಗಿದೆ. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಏಕೆಂದರೆ ನಾವು ಪತಿತ ಬುದ್ಧಿಯವರಾಗಿದ್ದೇವೆಂದು ತಿಳಿಯುತ್ತಾರೆ. ಇದು ಪತಿತ, ಕಬ್ಬಿಣದ ಪ್ರಪಂಚವಾಗಿದೆ ಎಂದು ಬುದ್ಧಿಯೂ ಹೇಳುತ್ತದೆ. ಹೊಸ ಪ್ರಪಂಚಕ್ಕೆ ಸತೋಪ್ರಧಾನ, ಹಳೆಯ ಪ್ರಪಂಚಕ್ಕೆ ತಮೋಪ್ರಧಾನವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ಈಗ ತಂದೆಯು ಸಿಕ್ಕಿದ್ದಾರೆ. ಭಕ್ತರಿಗೆ ಭಗವಂತನು ಸಿಕ್ಕಿದ್ದಾರೆ. ಭಕ್ತಿಯ ನಂತರ ಭಗವಂತನು ಬಂದು ಭಕ್ತಿಯ ಫಲವನ್ನು ಕೊಡುತ್ತಾರೆಂದು ಹೇಳುತ್ತಾರೆ. ಏಕೆಂದರೆ ಪರಿಶ್ರಮ ಪಡುವುದರಿಂದ ಫಲವನ್ನೂ ಬೇಡುತ್ತಾರೆ. ಭಕ್ತರು ಯಾವ ಪರಿಶ್ರಮ ಪಡುತ್ತಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಅರ್ಧಕಲ್ಪ ಭಕ್ತಿಮಾರ್ಗದಲ್ಲಿ ಪೆಟ್ಟನ್ನು ತಿಂದು ಸುಸ್ತಾಗಿದ್ದೀರಿ. ಭಕ್ತಿಯಲ್ಲಿ ಬಹಳ ಪರಿಶ್ರಮ ಪಟ್ಟಿದ್ದೀರಿ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಸಂಪಾದನೆಗಾಗಿ ಪರಿಶ್ರಮ ಪಡಲಾಗುತ್ತದೆ. ಭಗವಂತನು ಬಂದು ಭಕ್ತಿಯ ಫಲವನ್ನು ಕೊಡುವರೆಂದು ತಿಳಿಯುತ್ತಾರೆ ಅಂದಮೇಲೆ ಫಲ ನೀಡುವವರು ಭಗವಂತನೇ ಆದರು. ಭಕ್ತರು ಭಗವಂತನನ್ನು ನೆನಪು ಮಾಡುತ್ತಾರೆ, ಏಕೆಂದರೆ ಭಕ್ತಿಯಲ್ಲಿ ದುಃಖವಿದೆ. ಆದ್ದರಿಂದ ಬಂದು ನಮ್ಮ ದುಃಖವನ್ನು ದೂರ ಮಾಡಿ, ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ.

ಈಗ ರಾವಣ ರಾಜ್ಯವಾಗಿದೆ, ರಾವಣನೇ ಪತಿತರನ್ನಾಗಿ ಮಾಡಿದ್ದಾನೆಂದು ಯಾರೂ ತಿಳಿದುಕೊಂಡಿಲ್ಲ. ರಾಮ ರಾಜ್ಯವು ಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅದು ಯಾವಾಗ ಹೇಗೆ ಆಗುವುದೆಂದು ಯಾರೂ ತಿಳಿದುಕೊಂಡಿಲ್ಲ. ಈಗ ರಾವಣ ರಾಜ್ಯವಾಗಿದೆ ಎಂದು ಆತ್ಮವು ಆಂತರ್ಯದಲ್ಲಿ ತಿಳಿದುಕೊಳ್ಳುತ್ತದೆ. ಇದು ಭಕ್ತಿಮಾರ್ಗವಾಗಿದೆ. ಭಕ್ತರು ಬಹಳ ಭಜನೆ ಮಾಡುತ್ತಾರೆ, ಕುಣಿಯುತ್ತಾರೆ, ನಲಿಯುತ್ತಾರೆ, ಖುಷಿಯೂ ಆಗುತ್ತದೆ ಮತ್ತು ಪುನಃ ಅಳುತ್ತಾರೆ. ಭಗವಂತನ ಪ್ರೀತಿಯಲ್ಲಿ ಆನಂದ ಭಾಷ್ಫಗಳು ಬಂದು ಬಿಡುತ್ತವೆ ಆದರೆ ಅವರನ್ನು ಅರಿತುಕೊಂಡಿಲ್ಲ. ಯಾರ ಪ್ರೀತಿಯಲ್ಲಿ ಆನಂದ ಭಾಷ್ಫಗಳು ಬರುವುದೋ ಅವರನ್ನು ಅರಿತುಕೊಳ್ಳಬೇಕಲ್ಲವೆ! ಚಿತ್ರಗಳಿಂದ ಏನೂ ಸಿಗುವುದಿಲ್ಲ. ಹಾ! ಬಹಳ ಭಕ್ತಿಮಾಡಿದಾಗ ಸಾಕ್ಷಾತ್ಕಾರಗಳಾಗುತ್ತವೆ. ಅದೇ ಅವರಿಗಾಗಿ ಖುಷಿಯ ಮಾತಾಗಿದೆ. ಸ್ವಯಂ ಭಗವಂತನೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆ ಎಂಬುದನ್ನು ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ಬಾಬಾ ಎಂದು ಹೇಳುವವರು ಕೆಲವರು ಪಕ್ಕಾ ಇದ್ದಾರೆ, ಇನ್ನೂ ಕೆಲವರು ಅಲ್ಪ ನಿಶ್ಚಯಬುದ್ಧಿಯವರೂ ಇದ್ದಾರೆ. ದೇಹದ ಅಭಿಮಾನವನ್ನು ಕಳೆಯುವುದರಲ್ಲಿ ಪರಿಶ್ರಮವಾಗುತ್ತದೆ. ದೇಹೀ-ಅಭಿಮಾನಿಗಳಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಆತ್ಮಗಳಾಗಿದ್ದೀರಿ, 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನರಾಗಿದ್ದೀರಿ. ಈಗ ಆತ್ಮಕ್ಕೆ ಮೂರನೆಯ ನೇತ್ರವು ಸಿಕ್ಕಿದೆ. ಆತ್ಮವು ಅರಿತುಕೊಳ್ಳುತ್ತಿದೆ. ಈಗ ನೀವು ಮಕ್ಕಳಿಗೆ ತಂದೆಯು ಇಡೀ ಸೃಷ್ಟಿಯ ಜ್ಞಾನವನ್ನು ಕೊಡುತ್ತಾರೆ. ತಂದೆಯು ಜ್ಞಾನಪೂರ್ಣನಾಗಿರುವುದರಿಂದ ಮಕ್ಕಳಿಗೂ ಕೊಡುತ್ತಾರೆ. ಕೇವಲ 84 ಜನ್ಮಗಳನ್ನು ನೀವೇ ತೆಗೆದುಕೊಳ್ಳುವಿರಾ ಎಂದು ಯಾರಾದರು ಪ್ರಶ್ನಿಸಿದರೆ ಅವರಿಗೆ ತಿಳಿಸಿ - ಹೌದು, ನಮ್ಮಲ್ಲಿ ಕೆಲವರು 84, ಕೆಲವರು 82 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಬಹುತೇಕವಾಗಿ 84 ಜನ್ಮಗಳನ್ನೇ ತೆಗೆದುಕೊಳ್ಳುತ್ತಾರೆ. ಯಾರು ಆರಂಭದಿಂದಲೂ ಬರುತ್ತಾರೆಯೋ ಅವರದೇ 84 ಜನ್ಮಗಳಿದೆ. ಯಾರು ಬಹಳ ಚೆನ್ನಾಗಿ ಓದಿ ಶ್ರೇಷ್ಠ ಪದವಿಯನ್ನು ಪಡೆಯುವರೋ ಅವರು ಬೇಗನೆ ಬರುತ್ತಾರೆ. ಮಾಲೆಯಲ್ಲಿ ಬಹಳ ಸಮೀಪದಲ್ಲಿ ಪೊಣಿಸಲ್ಪಡುತ್ತಾರೆ. ಹೇಗೆ ಹೊಸ ಮನೆಯು ನಿರ್ಮಿತವಾಗುತ್ತಿದ್ದರೆ ಇದು ಬೇಗನೆ ತಯಾರಾಗಿ ಬಿಟ್ಟರೆ ನಾವು ಹೋಗಿ ಅದರಲ್ಲಿ ಇರುವೆವೆಂದು ಮನಸ್ಸಿನಲ್ಲಿ ಕಾತುರವಿರುತ್ತದೆ. ಈಗ ನಾವು ಈ ಹಳೆಯ ವಸ್ತ್ರಗಳನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತೇವೆಂದು ನೀವು ಮಕ್ಕಳಿಗೂ ಸಹ ಖುಷಿಯಿರಬೇಕು. ನಾಟಕದಲ್ಲಿ ಪಾತ್ರಧಾರಿಗಳು ಅರ್ಧ ಗಂಟೆ ಮುಂಚೆಯೇ ಗಡಿಯಾರವನ್ನು ನೋಡುತ್ತಿರುತ್ತಾರೆ. ಸಮಯವು ಮುಗಿದರೆ ಮನೆಗೆ ಹೋಗಬಹುದೆಂದು ತಿಳಿಯುತ್ತಾರೆ. ಆ ಸಮಯವು ಬಂದು ಬಿಡುತ್ತದೆ. ನೀವು ಮಕ್ಕಳಿಗಾಗಿ ಬೇಹದ್ದಿನ ಗಡಿಯಾರವಿದೆ. ನಿಮಗೆ ತಿಳಿದಿದೆ - ಯಾವಾಗ ಕರ್ಮಾತೀತ ಸ್ಥಿತಿಯನ್ನು ಹೊಂದುವಿರೋ ಆಗ ಮತ್ತೆ ಇಲ್ಲಿರುವುದಿಲ್ಲ. ಕರ್ಮಾತೀತರಾಗುವುದಕ್ಕಾಗಿಯೂ ನೆನಪಿನಲ್ಲಿರಬೇಕು. ಇದರಲ್ಲಿ ಬಹಳ ಪರಿಶ್ರಮವಿದೆ. ಹೊಸ ಪ್ರಪಂಚದಲ್ಲಿ ನೀವು ಹೋಗುತ್ತೀರಿ ನಂತರ ಒಂದೊಂದು ಜನ್ಮದಲ್ಲಿಯೂ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೊಸ ಮನೆಯಲ್ಲಿ 6 ತಿಂಗಳು ನಿವಾಸ ಮಾಡುತ್ತೀರೆಂದರೆ ಯಾವುದಾದರೊಂದು ಕಲೆಯುಂಟಾಗುತ್ತದೆಯಲ್ಲವೆ. ಸ್ವಲ್ಪ ಅಂತರವಿರುತ್ತದೆ. ಹಾಗೆಯೇ ಹೊಸ ಪ್ರಪಂಚದಲ್ಲಿಯೂ ಕೆಲವರು ಮೊದಲೇ ಬರುತ್ತಾರೆ, ಇನ್ನೂ ಕೆಲವರು ಸ್ವಲ್ಪ ತಡವಾಗಿ ಬರುತ್ತಾರೆ. ಯಾರು ಮೊದಲು ಬರುವರೋ ಅವರಿಗೆ ಸತೋಪ್ರಧಾನರೆಂದು ಹೇಳಲಾಗುವುದು ನಂತರ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುವುದು. ಈ ನಾಟಕದ ಚಕ್ರವು ನಿಧಾನವಾಗಿ ನಡೆಯುತ್ತದೆ. ಕ್ಷಣ-ಪ್ರತಿಕ್ಷಣ ಟಿಕ್-ಟಿಕ್ ಎಂದು ಕಳೆಯುತ್ತಿರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇಡೀ ಪ್ರಪಂಚದಲ್ಲಿ ಯಾರದು ಯಾವುದೆಲ್ಲಾ ಪಾತ್ರವು ನಡೆಯುತ್ತದೆಯೋ ಈ ಚಕ್ರವು ಸುತ್ತುತ್ತಾ ಇರುತ್ತದೆ. ಇವು ತಿಳಿದುಕೊಳ್ಳುವ ಸೂಕ್ಷ್ಮ ಮಾತುಗಳಾಗಿವೆ. ತಂದೆಯು ಅನುಭವದಿಂದ ತಿಳಿಸುತ್ತಾರೆ.

ನೀವು ತಿಳಿದುಕೊಂಡಿದ್ದೀರಿ - ಈ ವಿದ್ಯೆಯು ಮತ್ತೆ 5000 ವರ್ಷಗಳ ನಂತರ ಪುನರಾವರ್ತನೆಯಾಗುವುದು. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಈ ಚಕ್ರದ ಬಗ್ಗೆ ಯಾರಿಗೂ ತಿಳಿದಿಲ್ಲ. ಇದರ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿ ಯಾರೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ತಿಳಿದಿದೆ - ನಾವು 84 ಜನ್ಮಗಳನ್ನು ಭೋಗಿಸಿ ಈಗ ಹಿಂತಿರುಗಿ ಹೋಗುತ್ತೇವೆ. ನಾವಾತ್ಮಗಳಾಗಿದ್ದೇವೆ. ದೇಹೀ-ಅಭಿಮಾನಿಯಾದಾಗಲೇ ಖುಷಿಯ ನಶೆಯೇರುವುದು. ಅದೂ ಅತಿ ಚಿಕ್ಕದಾದ ನಾಟಕವಾಗಿರುತ್ತದೆ, ಇದು ಬೇಹದ್ದಿನ ನಾಟಕವಾಗಿದೆ. ತಂದೆಯು ನಾವಾತ್ಮಗಳಿಗೆ ಓದಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಇದಾಗುವುದೆಂದು ತಂದೆಯು ತಿಳಿಸುವುದಿಲ್ಲ. ಯಾವುದೇ ಮಾತನ್ನು ಕೇಳಿದರೆ ತಂದೆಯು ಹೇಳುತ್ತಾರೆ - ನಾಟಕದಲ್ಲಿ ಏನೆಲ್ಲಾ ತಿಳಿಸುವುದಿದೆಯೋ ಅದನ್ನು ತಿಳಿಸುತ್ತೇನೆ, ನಾಟಕದನುಸಾರ ಯಾವ ಉತ್ತರ ಸಿಗಬೇಕಿತ್ತೋ ಅದು ಸಿಕ್ಕಿ ಬಿಟ್ಟಿತು, ಕೇವಲ ಅದರಂತೆ ನಡೆಯಬೇಕಾಗಿದೆ. ನಾಟಕವಿಲ್ಲದೆ ತಂದೆಯು ಏನನ್ನೂ ಮಾಡಲು ಸಾಧ್ಯವಿಲ್ಲ. ಕೆಲವು ಮಕ್ಕಳು ನಾಟಕದಲ್ಲಿದ್ದರೆ ಪುರುಷಾರ್ಥ ಮಾಡುತ್ತೇವೆಂದು ಹೇಳುತ್ತಾರೆ. ಅವರೆಂದೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಪುರುಷಾರ್ಥ ಮಾಡಬೇಕಾಗಿದೆ. ನಾಟಕವು ಕಲ್ಪದ ಹಿಂದಿನ ತರಹ ನಿಮ್ಮಿಂದ ಪುರುಷಾರ್ಥ ಮಾಡಿಸುತ್ತದೆ. ಕೆಲವರು ನಾಟಕವೆಂದು ಹೇಳಿ ನಿಂತು ಬಿಡುತ್ತಾರೆ. ಆಗ ಇವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ. ಈಗ ನಿಮಗೆ ಸ್ಮೃತಿಯು ಬಂದಿದೆ - ನಾವಾತ್ಮಗಳಾಗಿದ್ದೇವೆ. ನಾವು ಈ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಆತ್ಮವು ಅವಿನಾಶಿಯಾಗಿದೆ, ಪಾತ್ರವೂ ಅವಿನಾಶಿಯಾಗಿದೆ. 84 ಜನ್ಮಗಳ ಪಾತ್ರವು ಆತ್ಮದಲ್ಲಿ ನಿಗಧಿಯಾಗಿದೆ. ಮತ್ತೆ ಅದೇ ಪಾತ್ರವನ್ನಭಿನಯಿಸುತ್ತೀರಿ. ಇದಕ್ಕೆ ಸೃಷ್ಟಿಯೆಂದು ಹೇಳಲಾಗುತ್ತದೆ. ಈ ಸೃಷ್ಟಿಯ ಮತ್ತೇನು ವಿಸ್ತಾರ ಮಾಡುತ್ತೀರಿ! ಈಗ ಮುಖ್ಯ ಮಾತಾಗಿದೆ - ಅವಶ್ಯವಾಗಿ ಪಾವನರಾಗಬೇಕು. ಇದೇ ಚಿಂತೆಯಿರಬೇಕಾಗಿದೆ. ಕರ್ಮ ಮಾಡುತ್ತಲೂ ತಂದೆಯ ನೆನಪಿನಲ್ಲಿರಬೇಕಾಗಿದೆ. ನೀವು ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಆ ಒಬ್ಬ ಪ್ರಿಯತಮನನ್ನು ಎಲ್ಲಾ ಪ್ರಿಯತಮೆಯರು ನೆನಪು ಮಾಡುತ್ತಾರೆ. ಆ ಪ್ರಿಯತಮ ತಿಳಿಸುತ್ತಾರೆ - ಈಗ ನನ್ನನ್ನು ನೆನಪು ಮಾಡಿ, ನಾನು ನಿಮ್ಮನ್ನು ಪಾವನ ಮಾಡಲು ಬಂದಿದ್ದೇನೆ. ನನ್ನನ್ನೇ ಪತಿತ-ಪಾವನನೆಂದು ಹೇಳುತ್ತೀರಿ ನಂತರ ನನ್ನನ್ನು ಮರೆತು ಗಂಗೆಯನ್ನು ಏಕೆ ಪತಿತ-ಪಾವನಿ ಎಂದು ಹೇಳುತ್ತೀರಿ? ಈಗ ನಿಮಗೆ ತಿಳಿದಿದೆ ಆದ್ದರಿಂದ ಎಲ್ಲವನ್ನೂ ಬಿಟ್ಟು ಬಿಟ್ಟಿದ್ದೀರಿ. ತಂದೆಯೇ ಪತಿತ-ಪಾವನನೆಂದು ತಿಳಿದುಕೊಂಡಿದ್ದೀರಿ. ಈಗ ಕೃಷ್ಣನನ್ನು ಪತಿತ-ಪಾವನನೆಂದು ತಿಳಿದು ಎಂದೂ ನೆನಪು ಮಾಡುವುದಿಲ್ಲ. ಆದರೆ ಭಗವಂತನು ಹೇಗೆ ಬರುತ್ತಾರೆಂದು ಯಾರೂ ತಿಳಿದುಕೊಂಡಿಲ್ಲ. ಕೃಷ್ಣನ ಆತ್ಮವು ಯಾವುದು ಸತ್ಯಯುಗದಲ್ಲಿತ್ತು ಅದು ಅನೇಕ ಜನ್ಮಗಳನ್ನು ಧಾರಣೆ ಮಾಡುತ್ತಾ-ಮಾಡುತ್ತಾ ಈಗ ತಮೋಪ್ರಧಾನವಾಗಿದೆ, ಈಗ ಮತ್ತೆ ಸತೋಪ್ರಧಾನವಾಗುತ್ತದೆ. ಶಾಸ್ತ್ರಗಳಲ್ಲಿ ಈಗ ತಪ್ಪು ಮಾಡಿಬಿಟ್ಟಿದ್ದಾರೆ. ಯಾವಾಗ ಈ ತಪ್ಪಾಗುವುದೋ ಆಗಲೇ ನಾನು ಬಂದು ನಿಮ್ಮನ್ನು ಸರಿಪಡಿಸುತ್ತೇನಲ್ಲವೆ. ಈ ತಪ್ಪುಗಳು ನಾಟಕದಲ್ಲಿ ನಿಗಧಿಯಾಗಿದೆ. ಕಲ್ಪದ ನಂತರ ಪುನಃ ಆಗುತ್ತದೆ. ಈಗ ನಿಮಗೆ ತಿಳಿಸಿದ್ದಾರೆ ಶಿವ ಭಗವಾನುವಾಚ, ಭಗವಂತನೆಂದು ಶಿವನಿಗೆ ಹೇಳುತ್ತಾರೆ. ಭಗವಂತನೆಂದರೆ ಒಬ್ಬರೇ ಇರುವರು. ಎಲ್ಲಾ ಭಕ್ತರಿಗೆ ಫಲವನ್ನು ನೀಡುವವರು ಒಬ್ಬರೇ ಭಗವಂತನಾಗಿದ್ದಾರೆ. ಅವರನ್ನು ಯಾರೂ ತಿಳಿದುಕೊಂಡಿಲ್ಲ. ಓ ಗಾಡ್ ಫಾದರ್ ಎಂದು ಎಲ್ಲರೂ ಹೇಳುತ್ತಾರೆ. ಲೌಕಿಕ ತಂದೆಯಂತೂ ಇಲ್ಲಿಯೇ ಇದ್ದಾರೆ ಆದರೂ ಸಹ ಪಾರಲೌಕಿಕ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆಂದರೆ ಆತ್ಮಕ್ಕೆ ಇಬ್ಬರು ತಂದೆಯರಾದರು. ಭಕ್ತಿಮಾರ್ಗದಲ್ಲಿ ಆ ತಂದೆಯನ್ನು ನೆನಪು ಮಾಡುತ್ತಿರುತ್ತಾರೆ. ಆತ್ಮವಂತೂ ಇದ್ದೇ ಇದೆ, ಇಷ್ಟೆಲ್ಲಾ ಆತ್ಮಗಳಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಪಾತ್ರವನ್ನಭಿಯನಯಿಸಲಾಗುತ್ತದೆ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ನಾವಿಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೇವೆಂದು ಹೇಳುತ್ತಾರೆ, ಇದೊಂದು ರಂಗಮಂಟಪವಾಗಿದೆ ಅದರಲ್ಲಿ ಈ ಚಂದ್ರ-ನಕ್ಷತ್ರಗಳೆಲ್ಲವೂ ದೀಪಗಳಾಗಿವೆ. ಈ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಮನುಷ್ಯರು ದೇವತೆಗಳೆಂದು ಹೇಳಿಬಿಡುತ್ತಾರೆ ಏಕೆಂದರೆ ಇವು ಬಹಳ ಒಳ್ಳೆಯ ಕೆಲಸ ಮಾಡುತ್ತದೆ ಅಂದರೆ ಮಿನುಗುತ್ತವೆ, ಯಾರಿಗೂ ತೊಂದರೆ ಕೊಡುವುದಿಲ್ಲ, ಎಲ್ಲರಿಗೆ ಸುಖವನ್ನೇ ಕೊಡುತ್ತವೆ, ಬಹಳ ಕೆಲಸ ಮಾಡುತ್ತವೆ ಆದ್ದರಿಂದ ಇವಕ್ಕೆ ದೇವತೆಗಳೆಂದು ಹೇಳುತ್ತಾರೆ. ಒಳ್ಳೆಯ ಕಾರ್ಯವನ್ನು ಮಾಡುವವರಿಗೆ ಇವರು ದೇವತೆಯ ಸಮಾನರೆಂದು ಹೇಳುತ್ತಾರಲ್ಲವೆ. ವಾಸ್ತವದಲ್ಲಿ ದೇವತೆಗಳಂತೂ ಸತ್ಯಯುಗದಲ್ಲಿದ್ದರು, ಎಲ್ಲರೂ ಸುಖ ಕೊಡುವವರಾಗಿದ್ದರು. ಎಲ್ಲರ ಪ್ರತಿ ಪ್ರೀತಿಯಿರುತ್ತಿತ್ತು ಆದ್ದರಿಂದ ದೇವತೆಗಳೊಂದಿಗೆ ಒಳ್ಳೆಯ ಮನುಷ್ಯರ ಹೋಲಿಕೆ ಮಾಡಿದ್ದಾರೆ. ದೇವತೆಗಳ ಗುಣಗಳನ್ನು ಗಾಯನ ಮಾಡಲಾಗುತ್ತದೆ. ಅವರ ಮುಂದೆ ಹೋಗಿ ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲ, ತಾವೇ ದಯೆ ತೋರಿಸಿ ಎಂದು ಹಾಡುತ್ತಾರೆ. ತಮಗೆ ದಯೆ ಬರುತ್ತಿರಬಹುದು. ತಂದೆಯು ತಿಳಿಸುತ್ತಾರೆ - ನನಗೂ ಸಹ ದಯೆ ಉಂಟಾದ ಕಾರಣವೇ ಪುನಃ ನಿಮ್ಮನ್ನು ಗುಣವಂತರನ್ನಾಗಿ ಮಾಡಲು ಬಂದಿದ್ದೇನೆ. ನೀವು ಪೂಜ್ಯರಾಗಿದ್ದಿರಿ, ಈಗ ಪೂಜಾರಿಗಳಾಗಿದ್ದೀರಿ. ಪುನಃ ಪೂಜ್ಯರಾಗಿ ಹಮ್ ಸೋನ ಅರ್ಥವನ್ನು ನಿಮಗೆ ತಿಳಿಸಲಾಗಿದೆ. ಇದರ ಅರ್ಥವು ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಮನುಷ್ಯರು ಹೇಳುತ್ತಾರೆ ಆದರೆ ಇದು ತಪ್ಪಾಗಿದೆ ಎಂದು ತಂದೆಯು ಹೇಳುತ್ತಾರೆ. ನೀವಾತ್ಮಗಳು ನಿರಾಕಾರಿಯಾಗಿದ್ದಿರಿ ನಂತರ ನೀವೇ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾದಿರಿ, ಈಗ ಬ್ರಾಹ್ಮಣ ವರ್ಣದಲ್ಲಿ ಬಂದಿದ್ದೀರಿ. ಆತ್ಮವು ಮೊದಲು ಸತೋಪ್ರಧಾನವಿದ್ದದ್ದು ಸತೋ, ರಜೋ, ತಮೋದಲ್ಲಿ ಬರುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಈ ಜ್ಞಾನವನ್ನು ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬಂದು ನಮಗೆ ತಿಳಿಸುತ್ತಾರೆ. ಅವಶ್ಯವಾಗಿ ಭಾರತವು ಸ್ವರ್ಗವಾಗಿತ್ತು, ಅಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ. ಈಗ ಕಲಿಯುಗವಾಗಿದೆ, ಎಲ್ಲಾ ಧರ್ಮದವರು ಬಂದು ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಒಂದು ಧರ್ಮದ ವಿನಃ ಮತ್ತ್ಯಾವ ಧರ್ಮವೂ ಇರುವುದಿಲ್ಲ. ಅಲ್ಲಿ ಒಂದೇ ಧರ್ಮವಿರುತ್ತದೆ. ಉಳಿದೆಲ್ಲಾ ಧರ್ಮದ ಆತ್ಮಗಳೂ ಮುಕ್ತಿಯಲ್ಲಿ ಹೊರಟು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಈಗ ಈ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. ಯಾರಾದರೂ ಬಂದಾಗ ಅವರಿಗೆ ತಿಳಿಸಿ, ಇದು ಬೇಹದ್ದಿನ ಗಡಿಯಾರವಾಗಿದೆ. ತಂದೆಯು ದಿವ್ಯ ದೃಷ್ಟಿಯಿಂದ ಈ ಗಡಿಯಾರವನ್ನು ಮಾಡಿಸಿದ್ದಾರೆ. ಹೇಗೆ ಆ ಗಡಿಯಾರವನ್ನು ನೀವು ಪದೇ-ಪದೇ ನೋಡುತ್ತೀರಿ ಹಾಗೆಯೇ ಈ ಬೇಹದ್ದಿನ ಗಡಿಯಾರವು ಈಗ ನೆನಪಿಗೆ ಬರುತ್ತದೆ. ತಂದೆಯು ಬ್ರಹ್ಮಾರವರ ಮೂಲಕ ಒಂದು ಧರ್ಮದ ಸ್ಥಾಪನೆ, ಶಂಕರನ ಮೂಲಕ ಆಸುರೀ ಪ್ರಪಂಚದ ವಿನಾಶ ಮಾಡಿಸುತ್ತಾರೆ. ಚಕ್ರವು ಅವಶ್ಯವಾಗಿ ಸುತ್ತುವುದು. ಕಲಿಯುಗದ ನಂತರ ಸತ್ಯಯುಗ ಬರುತ್ತದೆಯೆಂದು ವಿವೇಕವು ಹೇಳುತ್ತದೆ. ಈಗ ಮನುಷ್ಯರ ಜನಸಂಖ್ಯೆಯು ಹೆಚ್ಚಾಗಿದೆ, ಬಹಳಷ್ಟು ಉಪದ್ರವಗಳಾಗುತ್ತಲೂ ಇರುತ್ತದೆ, ಅದೇ ಅಣ್ವಸ್ತ್ರಗಳೂ ಇವೆ. ಶಾಸ್ತ್ರಗಳಲ್ಲಿ ಎಷ್ಟೊಂದು ಕಥೆಗಳನ್ನು ಮಾಡಿದ್ದಾರೆ, ತಂದೆಯು ಬಂದು ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಮುಖ್ಯವಾಗಿ 4 ಧರ್ಮಗಳಿವೆ. ಈ ಬ್ರಾಹ್ಮಣ ಧರ್ಮವು 5ನೆಯದಾಗಿದೆ. ಎಲ್ಲದಕ್ಕಿಂತ ಸರ್ವಶ್ರೇಷ್ಠವಾದುದು ಈ ಚಿಕ್ಕದಾದ ಧರ್ಮವಾಗಿದೆ. ಯಜ್ಞದ ಸಂಭಾಲನೆ ಮಾಡುವವರು ಈ ಬ್ರಾಹ್ಮಣರಾಗಿದ್ದಾರೆ. ಇದು ಜ್ಞಾನ ಯಜ್ಞವಾಗಿದೆ, ಉಪದ್ರವಗಳನ್ನು ಕಳೆಯಲು ಯಜ್ಞ ರಚಿಸುತ್ತಾರೆ. ಇದರಿಂದ ಯುದ್ಧವಾಗದಿರಲೆಂದು ತಿಳಿಯುತ್ತಾರೆ. ಅರೆ! ಯುದ್ಧವು ನಡೆಯದಿದ್ದರೆ ಸತ್ಯಯುಗವು ಹೇಗೆ ಬರುವುದು, ಇಷ್ಟೆಲ್ಲಾ ಮನುಷ್ಯರು ಎಲ್ಲಿಗೆ ಹೋಗುವರು! ನಾನು ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗುತ್ತೇನೆಂದರೆ ಅವಶ್ಯವಾಗಿ ಶರೀರಗಳನ್ನು ಇಲ್ಲಿಯೇ ಬಿಡಬೇಕಾಗುತ್ತದೆ. ಹೇ ತಂದೆಯೇ, ಇಲ್ಲಿಗೆ ಬಂದು ಪತಿತರಿಂದ ಪಾವನ ಮಾಡಿ ಎಂದು ನೀವೇ ಕರೆಯುತ್ತೀರಿ.

ತಂದೆಯು ತಿಳಿಸುತ್ತಾರೆ - ನಾನು ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶ ಮಾಡಿಸಬೇಕಾಗುತ್ತದೆ. ಪಾವನ ಪ್ರಪಂಚವು ಸತೋಪ್ರಧಾನವಾಗಿದೆ, ಎಲ್ಲರನ್ನೂ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಎಲ್ಲರೂ ಕಾಲನನ್ನು ಕರೆಯುತ್ತಾರಲ್ಲವೆ. ನಾವು ಕಾಲರ ಕಾಲ ಮಹಾಕಾಲನನ್ನು ಕರೆಯುತ್ತಿದ್ದೇವೆಂಬುದನ್ನು ಮನುಷ್ಯರು ತಿಳಿದುಕೊಳ್ಳುವುದೇ ಇಲ್ಲ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಆತ್ಮಗಳನ್ನು ಛೀ ಛೀ ಪ್ರಪಂಚದಿಂದ ಬಿಡಿಸಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಇದು ಒಳ್ಳೆಯ ಮಾತಲ್ಲವೆ. ನೀವು ಮುಕ್ತಿಯಲ್ಲಿ ಹೋಗಿ ಮತ್ತೆ ಜೀವನ್ಮುಕ್ತಿಯಲ್ಲಿ ಬರಬೇಕಾಗಿದೆ ನಂತರ ಜೀವನ ಬಂಧನದಲ್ಲಿ ಬರುತ್ತೀರಿ. ಇಷ್ಟೊಂದು ಜನಸಂಖ್ಯೆಯು ಸತ್ಯಯುಗದಲ್ಲಿ ಬರುವುದಿಲ್ಲ. ಕಳೆದಂತೆ ನಂಬರ್ವಾರ್ ಆಗಿ ಬರುತ್ತಾರೆ. ಆದ್ದರಿಂದ ಇಲ್ಲಿ ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಿರಿ. ಕೊನೆಯಲ್ಲಿ ಯಾರು ಬರುವರೋ ಅವರ ಪಾತ್ರವೇ ಸ್ವಲ್ಪವಿರುತ್ತದೆ. ಮೊದಲು ಅವಶ್ಯವಾಗಿ ಅವರು ಸುಖವನ್ನೇ ಪಡೆಯುತ್ತಾರೆ. ನಿಮ್ಮ ಪಾತ್ರವು ಎಲ್ಲರಿಗಿಂತ ಶ್ರೇಷ್ಠವಾಗಿದೆ, ನೀವು ಬಹಳ ಸುಖ ಪಡೆಯುತ್ತೀರಿ. ಧರ್ಮ ಸ್ಥಾಪಕರಂತೂ ಕೇವಲ ಧರ್ಮ ಸ್ಥಾಪನೆ ಮಾಡುತ್ತಾರೆ, ಯಾರನ್ನೂ ಮುಕ್ತ ಮಾಡುವುದಿಲ್ಲ. ತಂದೆಯು ಭಾರತದಲ್ಲಿ ಬಂದು ಎಲ್ಲರಿಗೆ ಜ್ಞಾನವನ್ನು ತಿಳಿಸುತ್ತಾರೆ, ಅವರೇ ಎಲ್ಲರ ಪತಿತ-ಪಾವನನಾಗಿದ್ದಾರೆ. ಎಲ್ಲರನ್ನೂ ಮುಕ್ತ ಮಾಡುತ್ತಾರೆ, ಅನ್ಯ ಧರ್ಮ ಸ್ಥಾಪಕರು ಯಾರೂ ಸದ್ಗತಿ ಮಾಡಲು ಬರುವುದಿಲ್ಲ, ಅವರು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಅವರು ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುವುದಿಲ್ಲ, ಎಲ್ಲರನ್ನೂ ತಂದೆಯೇ ಶಾಂತಿಧಾಮ, ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಯಾರು ದುಃಖದಿಂದ ಬಿಡಿಸಿ ಸುಖವನ್ನು ಕೊಡುವರೋ ಅವರದೇ ತೀರ್ಥ ಸ್ಥಾನಗಳಾಗುವುದು. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಒಬ್ಬ ತಂದೆಯದೇ ಸತ್ಯ ತೀರ್ಥ ಸ್ಥಾನವಾಗಿದೆ. ಮಹಿಮೆಯೂ ಅವರೊಬ್ಬರದೇ ಆಗಿದೆ. ಹೇ ಮುಕ್ತಿದಾತ ಬನ್ನಿ ಎಂದು ಎಲ್ಲರೂ ಅವರನ್ನು ಕರೆಯುತ್ತಾರೆ ಅಂದಾಗ ಭಾರತವೇ ಸತ್ಯವಾದ ತೀರ್ಥ ಸ್ಥಾನವಾಗಿದೆ. ಇಲ್ಲಿ ತಂದೆಯು ಬಂದು ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ ಅದರಿಂದ ನೀವು ಭಕ್ತಿಮಾರ್ಗದಲ್ಲಿ ಅವರ ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟುತ್ತೀರಿ. ವಜ್ರ ವೈಡೂರ್ಯಗಳ ಮಂದಿರಗಳನ್ನು ಕಟ್ಟಿಸುತ್ತೀರಿ. ಸೋಮನಾಥ (ಶಿವ) ಮಂದಿರವನ್ನು ಎಷ್ಟು ಸುಂದರವಾಗಿ ಮಾಡಿಸುತ್ತಾರೆ ಮತ್ತು ನೋಡಿ, ಅದೇ ತಂದೆಯು ಈಗ ಎಲ್ಲಿ ಕುಳಿತಿದ್ದಾರೆ! ಪತಿತ ಶರೀರದಲ್ಲಿ, ಪತಿತ ಪ್ರಪಂಚದಲ್ಲಿ ಬಂದಿದ್ದಾರೆ. ಅದನ್ನು ನೀವೇ ಅರ್ಥ ಮಾಡಿಕೊಳ್ಳುತ್ತೀರಿ ಮತ್ತು ತಂದೆಗೆ ಸಹಯೋಗಿಗಳಾಗುತ್ತೀರಿ. ಅನ್ಯರಿಗೆ ಮಾರ್ಗವನ್ನು ತಿಳಿಸಲು ಯಾರು ಸಹಯೋಗ ನೀಡುವರೋ ಅವರಿಗೆ ಶ್ರೇಷ್ಠ ಪದವಿಯು ಸಿಗುವುದು, ಇದು ನಿಯಮವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪರಿಶ್ರಮ ಪಡಿ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಅನೇಕರಿಗೆ ಮಾರ್ಗವನ್ನು ತೋರಿಸಿ, 84 ಜನ್ಮಗಳ ಚಕ್ರವು ಸನ್ಮುಖದಲ್ಲಿದೆ. ಇದು ಒಂದು ರೀತಿ ಕುರುಡರ ಮುಂದೆ ಕನ್ನಡಿ ಹಿಡಿದ ಹಾಗಿದೆ. ಈ ನಾಟಕವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ಆದರೂ ಸಹ ನನ್ನನ್ನು ಯಾರೂ ತಿಳಿದುಕೊಳ್ಳುತ್ತಿಲ್ಲ. ನನ್ನ ಮಂದಿರವನ್ನು ಲೂಟಿ ಮಾಡಿದಾಗ ನಾನು ಏನಾದರೂ ಮಾಡುತ್ತೇನೆಂದಲ್ಲ. ನಾಟಕದಲ್ಲಿ ಲೂಟಿ ಮಾಡುವುದೂ ಸಹ ನಿಗಧಿಯಾಗಿದೆ. ಕಲ್ಪದ ನಂತರವೂ ಲೂಟಿ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ನನ್ನನ್ನು ಕರೆಯುತ್ತಾರೆ. ಆದ್ದರಿಂದ ನಾನು ಬಂದು ನೀವು ಮಕ್ಕಳಿಗೆ ಓದಿಸುತ್ತೇನೆ. ನಾಟಕದಲ್ಲಿ ವಿನಾಶವಾಗುವುದೂ ನಿಶ್ಚಿತವಾಗಿದೆ, ಅದು ಪುನಃ ಆಗುವುದು. ವಿನಾಶವಾಗಲೆಂದು ನಾನೇನೂ ಛೂ ಮಂತ್ರವನ್ನು ಹಾಕುವುದಿಲ್ಲ. ಈ ಅಣ್ವಸ್ತ್ರಗಳೆಲ್ಲವೂ ತಯಾರಾಗಿವೆ. ಇವು ತಯಾರಾಗುವುದೂ ನಾಟಕದಲ್ಲಿ ನಿಗಧಿಯಾಗಿದೆ. ನಾನೂ ಸಹ ನಾಟಕದ ಬಂಧನದಲ್ಲಿ ಬಂಧಿತನಾಗಿದ್ದೇನೆ. ನನ್ನ ಪಾತ್ರವು ಎಲ್ಲರಿಗಿಂತ ದೊಡ್ಡದಾಗಿದೆ - ಸೃಷ್ಟಿಯನ್ನು ಪರಿವರ್ತನೆ ಮಾಡುವುದು, ಪತಿತರಿಂದ ಪಾವನರನ್ನಾಗಿ ಮಾಡುವುದು. ಈಗ ಸಮರ್ಥರು ಯಾರು? ನಾನೋ ಅಥವಾ ನಾಟಕವೋ? ರಾವಣನೂ ಸಹ ನಾಟಕದನುಸಾರ ಬರಲೇಬೇಕಾಗಿದೆ. ನನ್ನಲ್ಲಿ ಯಾವ ಜ್ಞಾನವಿದೆಯೋ ಅದನ್ನು ಬಂದು ತಿಳಿಸುತ್ತೇನೆ. ನೀವು ಶಿವ ತಂದೆಯ ಸೈನ್ಯವಾಗಿದ್ದೀರಿ. ರಾವಣನ ಮೇಲೆ ಜಯ ಗಳಿಸುತ್ತೀರಿ. ತಂದೆಯು ತಿಳಿಸುತ್ತಾರೆ - ಸೇವಾಕೇಂದ್ರಗಳನ್ನು ತೆರೆಯುತ್ತಾ ಹೋಗಿ. ನಾನು ಓದಿಸುವುದಕ್ಕಾಗಿ ಬರುತ್ತೇನೆ. ನಾನು ಏನನ್ನೂ ಪಡೆಯುವುದಿಲ್ಲ. ಹಣ ಏನೆಲ್ಲವೂ ಇದೆಯೋ ಅದನ್ನು ಇದರಲ್ಲಿ ಸಫಲ ಮಾಡಿಕೊಳ್ಳಿ. ಎಲ್ಲವನ್ನು ಮುಗಿಸಿ ಹಸಿವಿನಿಂದ ಬಳಲಿ ಎಂದು ಹೇಳುತ್ತಿಲ್ಲ. ಹಸಿವಿನಿಂದ ಯಾರೂ ಬಳಲುವುದಿಲ್ಲ. ತಂದೆಯು ಎಲ್ಲವನ್ನೂ ಕೊಟ್ಟರು ಅಂದಮೇಲೆ ಹಸಿವಿನಿಂದಿರಿಸಲು ಸಾಧ್ಯವೆ? ನೀವೀಗ ಹಸಿವಿನಿಂದ ಬಳಲುತ್ತಿದ್ದೀರೋ? ಶಿವ ತಂದೆಯ ಭಂಡಾರವಾಗಿದೆ. ಇತ್ತೀಚೆಗಂತೂ ಪ್ರಪಂಚದಲ್ಲಿ ಎಷ್ಟೊಂದು ಮಂದಿ ಹಸಿವಿನಿಂದ ಸಾಯುತ್ತಿರುತ್ತಾರೆ. ಈಗ ನೀವು ಮಕ್ಕಳಂತೂ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಂಡು ಪುರುಷಾರ್ಥ ಮಾಡಬೇಕಾಗಿದೆ. ಇದು ಆತ್ಮೀಯ ಪ್ರಾಕೃತಿಕ ಚಿಕಿತ್ಸೆಯಾಗಿದೆ. ಬಹಳ ಸರಳವಾದ ಮಾತನ್ನು ಮುಖದಿಂದ ತಿಳಿಸುತ್ತಾರೆ - ಮನ್ಮನಾಭವ. ಆತ್ಮಕ್ಕೆ ಚಿಕಿತ್ಸೆ ನೀಡುತ್ತಾರೆ ಆದ್ದರಿಂದ ತಂದೆಗೆ ಅವಿನಾಶಿ ವೈದ್ಯರೆಂದೂ ಹೇಳುತ್ತಾರೆ. ಇಂತಹ ಒಳ್ಳೆಯ ಆಪರೇಷನನ್ನು ಕಲಿಸುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಎಲ್ಲಾ ದುಃಖಗಳು ದೂರವಾಗಿ ಬಿಡುತ್ತವೆ, ಚಕ್ರವರ್ತಿ ರಾಜರಾಗಿ ಬಿಡುತ್ತೀರಿ. ಈ ಮುಳ್ಳುಗಳ ಕಾಡಿನಲ್ಲಿರುತ್ತಾ ತಮ್ಮನ್ನು ಈ ರೀತಿ ತಿಳಿದುಕೊಳ್ಳಿ - ನಾವು ಹೂವಿನ ಉದ್ಯಾನವನದಲ್ಲಿ ಹೋಗುತ್ತಿದ್ದೇವೆ, ಮನೆಗೆ ಹೋಗುತ್ತಿದ್ದೇವೆ. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ನೆನಪನ್ನು ತರಿಸುತ್ತಾ ಇರಿ. ಅಲ್ಲಾನನ್ನು ನೆನಪು ಮಾಡುವುದರಿಂದ ಬಾದಶಾಹಿಯು ಸಿಕ್ಕಿ ಬಿಡುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೇಷ್ಠ ಪದವಿಯನ್ನು ಪಡೆಯಲು ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ. ಕುರುಡರಿಗೆ ಮಾರ್ಗವನ್ನು ತೋರಿಸಬೇಕಾಗಿದೆ. ಬೇಹದ್ದಿನ ಗಡಿಯಾರವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

2. ಯಜ್ಞದ ಸಂಭಾಲನೆ ಮಾಡಲು ಸತ್ಯ-ಸತ್ಯ ಬ್ರಾಹ್ಮಣರಾಗಬೇಕಾಗಿದೆ. ಹಣ ಇತ್ಯಾದಿ ಏನೆಲ್ಲವೂ ಇದೆಯೋ ಅದನ್ನು ಸಫಲ ಮಾಡಿ ತಂದೆಯಿಂದ ಸಂಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ.

ವರದಾನ:
ಸ್ವ-ಉನ್ನತಿಯ ಮೂಲಕ ಸೇವೆಯಲ್ಲಿ ಉನ್ನತಿಯನ್ನು ಹೊಂದುವಂತಹ ಸತ್ಯ ಸೇವಾಧಾರಿ ಭವ.

ಸ್ವ-ಉನ್ನತಿ ಸೇವೆಯ ಉನ್ನತಿಯ ವಿಶೇಷ ಆಧಾರವಾಗಿದೆ. ಸ್ವ-ಉನ್ನತಿ ಕಡಿಮೆ ಇದೆ ಎಂದರೆ ಸೇವೆಯಲ್ಲಿಯೂ ಸಹ ಕಡಿಮೆ. ಯಾರಿಗೊ ಕೇವಲ ಮುಖದಿಂದ ಪರಿಚಯ ಕೊಡುವುದಷ್ಟೆ ಸೇವೆಯಲ್ಲ ಆದರೆ ಪ್ರತಿ ಕರ್ಮದ ಮೂಲಕ ಶ್ರೇಷ್ಠ ಕರ್ಮದ ಪ್ರೇರಣೆ ಕೊಡುವುದು ಇದೂ ಸಹಾ ಸೇವೆಯಾಗಿದೆ. ಯಾರು ಮನಸಾ-ವಾಚಾ-ಕರ್ಮಣ ಸದಾ ಸೇವೆಯಲ್ಲಿ ತತ್ಪರರಾಗಿರುತ್ತಾರೆ ಅವರಿಗೆ ಸೇವೆಯ ಮೂಲಕ ಶ್ರೇಷ್ಠ ಭಾಗ್ಯದ ಅನುಭವವಾಗುವುದು. ಎಷ್ಟು ಸೇವೆ ಮಾಡುತ್ತರೆ ಅಷ್ಟೂ ಸ್ವಯಂ ಸಹಾ ಮುಂದುವರೆಯುತ್ತಾರೆ. ತಮ್ಮ ಶ್ರೇಷ್ಠ ಕರ್ಮದ ಮೂಲಕ ಸೇವೆ ಮಾಡುವಂತಹ ಸದಾ ಪ್ರತ್ಯಕ್ಷ ಫಲ ಪ್ರಾಪ್ತಿ ಮಡಿಕೊಳ್ಳುತ್ತಿರುತ್ತಾರೆ.

ಸ್ಲೋಗನ್:
ಸಮೀಪ ಬರುವುದಕ್ಕಾಗಿ ಯೋಚಿಸುವುದು - ಹೇಳುವುದು ಮತ್ತು ಮಾಡುವುದನ್ನು ಸಮಾನ ಮಾಡಿಕೊಳ್ಳಿ.