11.02.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಪ್ರಾಣೇಶ್ವರ ತಂದೆಯು ನೀವು ಮಕ್ಕಳಿಗೆ ಪ್ರಾಣ ದಾನ ನೀಡಲು ಬಂದಿದ್ದಾರೆ, ಪ್ರಾಣ ದಾನ ಸಿಗುವುದು ಎಂದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದು.

ಪ್ರಶ್ನೆ:
ಡ್ರಾಮಾದ ಪ್ರತಿಯೊಂದು ರಹಸ್ಯವನ್ನು ಅರಿತುಕೊಂಡಿರುವ ಕಾರಣ ಯಾವ ದೃಶ್ಯವು ನಿಮಗೆ ಹೊಸದಲ್ಲ?

ಉತ್ತರ:
ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಯಾವ ಹೊಡೆದಾಟಗಳಿವೆ, ವಿನಾಶ ಕಾಲೇ ವಿಪರೀತ ಬುದ್ಧಿಯವರಾಗಿ ತಮ್ಮದೇ ಕುಲದ ವಿನಾಶಕ್ಕಾಗಿ ಅನೇಕ ಸಾಧನಗಳನ್ನು ತಯಾರಿಸುತ್ತಾ ಹೋಗುತ್ತಾರೆ, ಇದೇನು ಹೊಸ ಮಾತಲ್ಲ ಏಕೆಂದರೆ ನಮಗೆ ತಿಳಿದಿದೆ - ಈ ಪ್ರಪಂಚವಂತೂ ಪರಿವರ್ತನೆಯಾಗಲೇಬೇಕಾಗಿದೆ. ಮಹಾಭಾರತ ಯುದ್ಧದ ನಂತರವೇ ನಮ್ಮ ಹೊಸ ಪ್ರಪಂಚ ಬರುವುದು.

ಗೀತೆ:
ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು.....

ಓಂ ಶಾಂತಿ.
ಬೆಳಗ್ಗೆ-ಬೆಳಗ್ಗೆ ಬಂದು ಮುರುಳಿಯನ್ನು ಯಾರು ನುಡಿಸುತ್ತಾರೆ? ಪ್ರಪಂಚವಂತೂ ಸಂಪೂರ್ಣ ಅಂಧಕಾರದಲ್ಲಿದೆ. ಜ್ಞಾನ ಸಾಗರ, ಪತಿತ-ಪಾವನ, ಪ್ರಾಣೇಶ್ವರ ತಂದೆಯಿಂದ ನೀವೀಗ ಮುರುಳಿಯನ್ನು ಕೇಳುತ್ತಿದ್ದೀರಿ. ಅವರು ಪ್ರಾಣವನ್ನು ರಕ್ಷಿಸುವ ಈಶ್ವರನಾಗಿದ್ದಾರೆ. ಹೇ ಈಶ್ವರ, ಈ ದುಃಖದಿಂದ ನಮ್ಮನ್ನು ರಕ್ಷಣೆ ಮಾಡು ಎಂದು ಹೇಳುತ್ತಾರಲ್ಲವೆ. ಅವರು ಅಲ್ಪಕಾಲದ ಸಹಯೋಗವನ್ನು ಬೇಡುತ್ತಾರೆ. ಈಗ ನೀವು ಮಕ್ಕಳಿಗೆ ಬೇಹದ್ದಿನ ಸಹಯೋಗ ಸಿಗುತ್ತದೆ ಏಕೆಂದರೆ ಇವರು ಬೇಹದ್ದಿನ ತಂದೆಯಲ್ಲವೆ. ನೀವು ತಿಳಿದುಕೊಂಡಿದ್ದೀರಿ - ಆತ್ಮವೂ ಗುಪ್ತವಾಗಿದೆ, ಮಕ್ಕಳ ಶರೀರವು ಪ್ರತ್ಯಕ್ಷವಾಗಿದೆ ಅಂದಾಗ ತಂದೆಯ ಶ್ರೀಮತವು ಮಕ್ಕಳ ಪ್ರತಿ ಇದೆ. ಸರ್ವ ಶಾಸ್ತ್ರಮಯೀ ಶಿರೋಮಣಿ ಗೀತೆಯು ಪ್ರಸಿದ್ಧವಾಗಿದೆ. ಕೇವಲ ಅದರಲ್ಲಿ ಶ್ರೀಕೃಷ್ಣನ ಹೆಸರನ್ನು ಹಾಕಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ಶ್ರೀಮತ್ಭಗವಾನುವಾಚವಾಗಿದೆ. ಇದೂ ಸಹ ಅರ್ಥವಾಗಿದೆ - ಭ್ರಷ್ಟಾಚಾರಿಗಳನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರೇ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಸತ್ಯ ನಾರಾಯಣನ ಕಥೆಯೂ ಇದೆ. ಅಮರ ಕಥೆಯೆಂದು ಗಾಯನವಿದೆ. ಅಮರ ಪುರಿಯ ಮಾಲೀಕರನ್ನಾಗಿ ಮಾಡುವ ಅಥವಾ ನರನಿಂದ ನಾರಾಯಣನನ್ನಾಗಿ ಮಾಡುವ ಕಥೆ - ಎರಡೂ ಒಂದೇ ಆಗಿದೆ. ಇದು ಮೃತ್ಯುಲೋಕವಾಗಿದೆ, ಭಾರತವೇ ಅಮರ ಪುರಿಯಾಗಿತ್ತು. ಇದು ಯಾರಿಗೂ ತಿಳಿದಿಲ್ಲ. ಇಲ್ಲಿಯೇ ಅಮರ ತಂದೆಯು ಪಾರ್ವತಿಯರಿಗೆ ತಿಳಿಸಿದ್ದಾರೆ. ಕೇವಲ ಒಬ್ಬ ಪಾರ್ವತಿ ಅಥವಾ ಒಬ್ಬ ದ್ರೌಪದಿಯಿರಲಿಲ್ಲ. ವಾಸ್ತವದಲ್ಲಿ ಅನೇಕ ಮಕ್ಕಳು ಕೇಳುತ್ತಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತೇನೆ.

ತಂದೆಯು ತಿಳಿಸಿದ್ದಾರೆ - ಮಕ್ಕಳೇ, ಅವಶ್ಯವಾಗಿ ಆತ್ಮಾಭಿಮಾನಿಗಳಾಗಬೇಕಾಗಿದೆ. ತಂದೆಯೇ ಈ ರೀತಿ ಮಾಡುತ್ತಾರೆ. ಪ್ರಪಂಚದಲ್ಲಿ ಆತ್ಮದ ಜ್ಞಾನವಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಆತ್ಮದ ಜ್ಞಾನವೇ ಇಲ್ಲವೆಂದಮೇಲೆ ಪರಮಾತ್ಮನ ಜ್ಞಾನವು ಹೇಗಿರುತ್ತದೆ! ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಇಡೀ ಪ್ರಪಂಚವು ಎಷ್ಟು ದೊಡ್ಡ ತಪ್ಪಿನಲ್ಲಿ ಸಿಲುಕಿದೆ! ಸಂಪೂರ್ಣ ಕಲ್ಲು ಬುದ್ಧಿಯವರಾಗುತ್ತಾರೆ. ವಿದೇಶದವರೂ ಸಹ ಕಲ್ಲು ಬುದ್ಧಿಯಲ್ಲಿ ಏನೂ ಕಡಿಮೆಯಿಲ್ಲ, ಏಕೆಂದರೆ ಅವರಿಗೆ ಇಷ್ಟಾದರೂ ಬುದ್ಧಿಯಲ್ಲಿ ಬರುವುದಿಲ್ಲ - ನಾವು ಈ ಅಣು ಬಾಂಬುಗಳನ್ನು ತಯಾರಿಸುತ್ತಿದ್ದೇವೆ. ಇವನ್ನು ನಮ್ಮದೇ ವಿನಾಶ ಅಥವಾ ಇಡೀ ಪ್ರಪಂಚದ ವಿನಾಶ ಮಾಡುವುದಕ್ಕಾಗಿ ತಯಾರಿಸುತ್ತಿದ್ದೇವೆ. ಅಂದಾಗ ಈ ಸಮಯದಲ್ಲಿ ಎಲ್ಲರ ಬುದ್ಧಿಯು ಏನೂ ಕೆಲಸಕ್ಕೆ ಬರುವುದಿಲ್ಲ. ತಮ್ಮದೇ ವಿನಾಶಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡುತ್ತಿದ್ದಾರೆ. ನೀವು ಮಕ್ಕಳಿಗಾಗಿ ಇದೇನೂ ಹೊಸ ಮಾತಲ್ಲ. ನಿಮಗೆ ತಿಳಿದಿದೆ - ಡ್ರಾಮಾನುಸಾರ ಅವರದೂ ಪಾತ್ರವಿದೆ. ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. ಕಲ್ಲು ಬುದ್ಧಿಯವರು ಆಗದೇ ಇದ್ದಿದ್ದರೆ ಇಂತಹ ಕೆಲಸ ಮಾಡುತ್ತಿದ್ದರೆ? ಇಡೀ ಕುಲದ ವಿನಾಶ ಮಾಡುತ್ತಿದ್ದಾರೆ. ಆಶ್ಚರ್ಯವಲ್ಲವೆ - ಏನು ಮಾಡುತ್ತಿದ್ದಾರೆ? ಕುಳಿತು-ಕುಳಿತಿದ್ದಂತೆಯೇ ಇಂದೇನೋ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ನಾಳೆ ಮಿಲಿಟರಿಯವರಿಗೆ ಕೋಪ ಬಂದರೆ ರಾಷ್ಟ್ರಪತಿಯನ್ನೂ ಸಹ ಕೊಂದು ಬಿಡುತ್ತಾರೆ. ಇಂತಿಂತಹ ಘಟನೆಗಳು ನಡೆಯುತ್ತಿರುತ್ತವೆ. ಯಾರಿಗೂ ಸಹನೆ ಮಾಡುವುದಿಲ್ಲ, ಶಕ್ತಿಶಾಲಿಗಳಲ್ಲವೆ. ಈಗಿನ ಪ್ರಪಂಚದಲ್ಲಿ ಬಹಳಷ್ಟು ಹೊಡೆದಾಟಗಳಿದೆ. ಬಹಳ ಕಲ್ಲು ಬುದ್ಧಿಯವರೂ ಇದ್ದಾರೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ ವಿನಾಶ ಕಾಲದಲ್ಲಿ ಯಾರು ತಂದೆಯೊಂದಿಗೆ ವಿಪರೀತ ಬುದ್ಧಿಯವರಾಗಿದ್ದಾರೆ ಅವರಿಗಾಗಿ ವಿನಃಶ್ಯಂತಿಯೆಂದು ಗಾಯನವಿದೆ. ಈಗ ಈ ಪ್ರಪಂಚವು ಬದಲಾಗಲಿದೆ. ಇದನ್ನೂ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಮಹಾಭಾರತ ಯುದ್ಧವು ಆಗಿತ್ತು. ತಂದೆಯೇ ರಾಜಯೋಗವನ್ನು ಕಲಿಸಿದ್ದರು. ಶಾಸ್ತ್ರಗಳಲ್ಲಂತು ಮಹಾವಿನಾಶವನ್ನು ತೋರಿಸಿ ಬಿಟ್ಟಿದ್ದಾರೆ ಆದರೆ ಮಹಾವಿನಾಶವಂತು ಆಗುವುದಿಲ್ಲ. ಆ ರೀತಿ ಆಗಿದ್ದೇ ಆದರೆ ಪ್ರಳಯವಾಗಿ ಬಿಡುವುದು. ಮನುಷ್ಯರು ಯಾರೊಬ್ಬರೂ ಇರುವುದಿಲ್ಲ, ಕೇವಲ ಪಂಚತತ್ವಗಳು ಉಳಿಯುವವು ಆದರೆ ಈ ರೀತಿಯಂತೂ ಆಗಲು ಸಾಧ್ಯವಿಲ್ಲ. ಪ್ರಳಯವಾಗಿ ಬಿಟ್ಟರೆ ಮತ್ತೆ ಮನುಷ್ಯರು ಎಲ್ಲಿಂದ ಬರುವರು? ಶ್ರೀಕೃಷ್ಣನು ಬೆರಳನ್ನು ಚೀಪುತ್ತಾ ಸಾಗರದ ಆಲದ ಎಲೆಯ ಮೇಲೆ ತೇಲಿ ಬಂದ ಎಂದು ತೋರಿಸುತ್ತಾರೆ. ಬಾಲಕನು ಈ ರೀತಿ ಹೇಗೆ ಬರಲು ಸಾಧ್ಯ? ಶಾಸ್ತ್ರಗಳಲ್ಲಿಯೂ ಇಂತಿಂತಹ ಮಾತುಗಳನ್ನು ಬರೆದು ಬಿಟ್ಟಿದ್ದಾರೆ, ಅದರ ಮಾತೇ ಕೇಳಬೇಡಿ. ಈಗ ನೀವು ಕುಮಾರಿಯರ ಮೂಲಕ ವಿದ್ವಾಂಸ, ಪಂಡಿತ, ಭೀಷ್ಮ ಪಿತಾಮಹ ಮೊದಲಾದವರಿಗೂ ಜ್ಞಾನ ಬಾಣಗಳು ನಾಟುತ್ತವೆ. ಮುಂದೆ ಒಂದು ದಿನ ಅವರು ಬಂದು ತಿಳಿದುಕೊಳ್ಳುತ್ತಾರೆ. ಎಷ್ಟೆಷ್ಟು ನೀವು ಸರ್ವೀಸಿನಲ್ಲಿ ಹೊಳಪು ತುಂಬುತ್ತೀರೋ, ತಂದೆಯ ಪರಿಚಯವನ್ನು ಎಲ್ಲರಿಗೆ ಕೊಡುತ್ತಾ ಇರುತ್ತೀರೋ ಅಷ್ಟು ನಿಮ್ಮ ಪ್ರಭಾವ ಹೆಚ್ಚುವುದು. ಹಾ! ವಿಘ್ನಗಳೂ ಬರುತ್ತವೆ, ಈ ಜ್ಞಾನ ಯಜ್ಞದಲ್ಲಿ ಆಸುರೀ ಸಂಪ್ರದಾಯದವರ ಬಹಳ ವಿಘ್ನಗಳು ಬರುತ್ತವೆ ಎಂಬುದೂ ಗಾಯನವಿದೆ. ಪಾಪ! ಈ ಕಲ್ಲು ಬುದ್ಧಿಯ ಮನುಷ್ಯರು ಇದೇನಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ. ಇವರ ಜ್ಞಾನವೇ ಭಿನ್ನವಾಗಿದೆ ಎಂದು ಹೇಳುತ್ತಾರೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ. ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಈ ರಾಜಯೋಗವನ್ನು ನಿಮಗೆ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಜ್ಞಾನ ಮತ್ತು ಯೋಗವನ್ನು ತಂದೆಯೇ ಕಲಿಸುತ್ತಿದ್ದಾರೆ. ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಅವರೇ ಪತಿತ-ಪಾವನನಾಗಿದ್ದಾರೆ ಅಂದಾಗ ಅವಶ್ಯವಾಗಿ ಪತಿತರಿಗೇ ಜ್ಞಾನ ಕೊಡುತ್ತಾರಲ್ಲವೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಪಾರಸ ಬುದ್ಧಿಯವರಾಗಿ ಪಾರಸನಾಥರಾಗುತ್ತೇವೆ. ಮನುಷ್ಯರು ಎಷ್ಟೊಂದು ಮಂದಿರಗಳನ್ನು ಕಟ್ಟಿಸಿದ್ದಾರೆ ಆದರೆ ಅವರು ಯಾರು? ಏನು ಮಾಡಿ ಹೋಗಿದ್ದಾರೆ? ಎಂದು ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಪಾರಸನಾಥನ ಮಂದಿರವೂ ಇದೆ ಆದರೆ ಅದು ಯಾರಿಗೂ ತಿಳಿದಿಲ್ಲ. ಭಾರತವು ಪಾರಸ ಪುರಿಯಾಗಿತ್ತು, ವಜ್ರ ವೈಡೂರ್ಯಗಳ ಮಹಲುಗಳಿತ್ತು. ಇದು ನೆನ್ನೆಯ ಮಾತಾಗಿದೆ. ಮನುಷ್ಯರಂತು ಕೇವಲ ಒಂದು ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ ಮತ್ತು ತಂದೆಯು ತಿಳಿಸುತ್ತಾರೆ - ಇಡೀ ನಾಟಕವೇ 5000 ವರ್ಷಗಳದಾಗಿದೆ ಆದ್ದರಿಂದ ಹೇಳಲಾಗುತ್ತದೆ - ಇಂದಿನ ಭಾರತವು ಏನಾಗಿದೆ! ನೆನ್ನೆಯ ಭಾರತವು ಏನಾಗಿತ್ತು! ಲಕ್ಷಾಂತರ ವರ್ಷಗಳ ಮಾತು ಯಾರಿಗೂ ಸ್ಮೃತಿಯಲ್ಲಿರಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಈಗ ಸ್ಮೃತಿ ಸಿಕ್ಕಿದೆ, ನಿಮಗೆ ಗೊತ್ತಿದೆ- ತಂದೆಯು ಪ್ರತೀ 5000 ವರ್ಷಗಳ ನಂತರ ಬಂದು ನಮಗೆ ಸ್ಮೃತಿ ತರಿಸುತ್ತಾರೆ. ನೀವು ಮಕ್ಕಳು ಸ್ವರ್ಗದ ಮಾಲೀಕರಾಗಿದ್ದಿರಿ, 5000 ವರ್ಷಗಳ ಮಾತಾಗಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತು? ಎಷ್ಟು ವರ್ಷಗಳಾಯಿತು ಎಂದು ಯಾರೊಂದಿಗಾದರೂ ಕೇಳಿದರೆ ಅವರು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ನೀವು ತಿಳಿಸಿ, ಇದಂತೂ 5000 ವರ್ಷಗಳ ಮಾತಾಗಿದೆ. ಕ್ರಿಸ್ತನಿಗೆ ಇಷ್ಟು ಸಮಯದ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಮಕ್ಕಳಿಗೆ ಇದನ್ನೂ ತಿಳಿಸಲಾಗಿದೆ - ತಂದೆಯ ಜಯಂತಿಯನ್ನಾಚರಿಸುತ್ತಾರೆ ಅಂದಮೇಲೆ ಅವರು ಏನನ್ನೋ ಮಾಡಲು ಬಂದಿರಬೇಕು! ಪತಿತ-ಪಾವನನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬಂದು ಪಾವನರನ್ನಾಗಿ ಮಾಡಿರಬೇಕು. ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಜ್ಞಾನವನ್ನು ಕೊಡುವರಲ್ಲವೆ. ಯೋಗದಲ್ಲಿ ಕುಳಿತುಕೊಳ್ಳಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ - ಇದು ಜ್ಞಾನವಾಯಿತಲ್ಲವೆ. ಅವರಂತೂ ಹಠಯೋಗಿಗಳಾಗಿದ್ದಾರೆ. ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಏನೇನು ಮಾಡುತ್ತಾರೆ! ನೀವು ಮಾತೆಯರಂತೂ ಈ ರೀತಿ ಮಾಡಲು ಸಾಧ್ಯವಿಲ್ಲ. ಹಾಗೆ ಕುಳಿತುಕೊಳ್ಳುವುದಕ್ಕೂ ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ಇದೇನನ್ನೂ ಮಾಡುವ ಅವಶ್ಯಕತೆಯಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳು ನಿಯಮಾನುಸಾರವಾಗಿ ಕುಳಿತುಕೊಳ್ಳುತ್ತಾರಲ್ಲವೆ. ತಂದೆಯಂತೂ ಆ ರೀತಿಯೂ ಹೇಳುವುದಿಲ್ಲ. ಹೇಗೆ ಬೇಕೋ ಹಾಗೆ ಕುಳಿತುಕೊಳ್ಳಿ ಎಂದು ಹೇಳುತ್ತಾರೆ. ಕುಳಿತು-ಕುಳಿತು ಸುಸ್ತಾದರೆ ಮಲಗಿ ಬಿಡಿ. ತಂದೆಯು ಯಾವ ಮಾತಿನಲ್ಲಿಯೂ ನಿರಾಕರಿಸುವುದಿಲ್ಲ. ಇದಂತೂ ಸಂಪೂರ್ಣ ಸಹಜವಾಗಿ ತಿಳಿದುಕೊಳ್ಳುವ ಮಾತಾಗಿದೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ಭಲೆ ಎಷ್ಟಾದರೂ ರೋಗಿಯಾಗಿರಲಿ ಆದರೆ ಕೇಳುತ್ತಾ-ಕೇಳುತ್ತಾ ಶಿವ ತಂದೆಯ ನೆನಪಿನಲ್ಲಿರುತ್ತಾ-ಇರುತ್ತಾ ಮತ್ತೆ ಪ್ರಾಣವು ತನುವಿನಿಂದ ಹೊರಟು ಹೋಗಲಿ. ಗಂಗಾ ನದಿಯ ತೀರದಲ್ಲಿರಲಿ, ಗಂಗಾ ಜಲವು ಬಾಯಲ್ಲಿರಲಿ ಆಗ ತನುವಿನಿಂದ ಪ್ರಾಣವು ಹೊರಟು ಹೋಗಲಿ ಎಂದೂ ಗಾಯನವಿದೆಯಲ್ಲವೆ. ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ವಾಸ್ತವದಲ್ಲಿ ಇದು ಜ್ಞಾನಾಮೃತದ ಮಾತಾಗಿದೆ. ಸತ್ಯವಾಗಿಯೂ ಇದೇ ರೀತಿ ಪ್ರಾಣವು ಹೋಗುವುದೆಂದು ನೀವು ತಿಳಿದುಕೊಂಡಿದ್ದೀರಿ, ನೀವು ಮಕ್ಕಳು ಪರಮಧಾಮದಿಂದ ಬರುತ್ತೀರಿ. ನನ್ನನ್ನು ಬಿಟ್ಟು ಬಂದು ಬಿಡುತ್ತೀರಿ. ಆದರೆ ನಾನಂತೂ ನೀವು ಮಕ್ಕಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುವೆನು. ನೀವು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿಯೇ ನಾನು ಬಂದಿದ್ದೇನೆ. ನಿಮಗೆ ತಮ್ಮ ಮನೆಯ ಪರಿಚಯವಾಗಲಿ, ಆತ್ಮದ ಪರಿಚಯವಾಗಲಿ ಇಲ್ಲ. ಮಾಯೆಯು ರೆಕ್ಕೆಗಳನ್ನು ಸಂಪೂರ್ಣವಾಗಿ ಕತ್ತರಿಸಿ ಬಿಟ್ಟಿದೆ. ಆದ್ದರಿಂದ ಆತ್ಮವು ಹಾರಲು ಸಾಧ್ಯವಿಲ್ಲ ಏಕೆಂದರೆ ತಮೋಪ್ರಧಾನವಾಗಿದೆ. ಎಲ್ಲಿಯವರೆಗೆ ಸತೋಪ್ರಧಾನವಾಗುವುದಿಲ್ಲವೋ ಅಲ್ಲಿಯವರೆಗೆ ಶಾಂತಿಧಾಮದಲ್ಲಿ ಹೋಗಲು ಹೇಗೆ ಸಾಧ್ಯ! ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಡ್ರಾಮಾ ಪ್ಲಾನನುಸಾರ ಎಲ್ಲರೂ ತಮೋಪ್ರಧಾನರಾಗಲೇಬೇಕಾಗಿದೆ. ಈ ಸಮಯದಲ್ಲಿ ಇಡೀ ವೃಕ್ಷವೇ ಸಂಪೂರ್ಣ ತಮೋಪ್ರಧಾನ, ಜಡಜಡೀಭೂತವಾಗಿ ಬಿಟ್ಟಿದೆ. ಮಕ್ಕಳಿಗೆ ತಿಳಿದಿದೆ - ಎಲ್ಲಾ ಆತ್ಮರು ತಮೋಪ್ರಧಾನರಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಸತೋಪ್ರಧಾನರಿರುತ್ತಾರೆ. ಇಲ್ಲಿ ಯಾರದೂ ಸತೋಪ್ರಧಾನ ಸ್ಥಿತಿಯಿರಲು ಸಾಧ್ಯವಿಲ್ಲ. ಇಲ್ಲಿ ಆತ್ಮವು ಸಂಪೂರ್ಣ ಪವಿತ್ರವಾಗಿ ಬಿಟ್ಟರೆ ಮತ್ತೆ ಒಂದು ಕ್ಷಣವೂ ಇಲ್ಲಿ ನಿಲ್ಲುವುದಿಲ್ಲ, ಒಮ್ಮೆಲೆ ಓಡಿ ಹೋಗುವುದು. ಎಲ್ಲರೂ ಮುಕ್ತಿಗಾಗಿ ಅಥವಾ ಶಾಂತಿಧಾಮದಲ್ಲಿ ಹೋಗುವುದಕ್ಕಾಗಿ ಭಕ್ತಿ ಮಾಡುತ್ತಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇದು ನಿಯಮವೇ ಇಲ್ಲ. ಧಾರಣೆ ಮಾಡುವುದಕ್ಕಾಗಿ ತಂದೆಯು ಇದೆಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ಆದರೂ ಸಹ ಮುಖ್ಯ ಮಾತಾಗಿದೆ - ತಂದೆಯನ್ನು ನೆನಪು ಮಾಡಬೇಕು, ಸ್ವದರ್ಶನ ಚಕ್ರಧಾರಿಗಳಾಗಬೇಕು, ಬೀಜವನ್ನು ನೆನಪು ಮಾಡುವುದರಿಂದ ಇಡೀ ವೃಕ್ಷವು ಬುದ್ಧಿಯಲ್ಲಿ ಬಂದು ಬಿಡುವುದು. ವೃಕ್ಷವು ಮೊದಲು ಚಿಕ್ಕದಿರುತ್ತದೆ ನಂತರ ದೊಡ್ಡದಾಗುತ್ತಾ ಹೋಗುತ್ತದೆ. ಅನೇಕ ಧರ್ಮಗಳಿವೆಯಲ್ಲವೆ. ನೀವು ಒಂದು ಸೆಕೆಂಡಿನಲ್ಲಿ ಅರಿತುಕೊಳ್ಳುತ್ತೀರಿ. ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಇಡೀ ಮನುಷ್ಯ ಸೃಷ್ಟಿಯ ಬೀಜರೂಪ ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ಸರ್ವವ್ಯಾಪಿಯಾಗಿರಲು ಸಾಧ್ಯವಿಲ್ಲ. ಸರ್ವವ್ಯಾಪಿಯೆಂಬುದು ಅತಿ ದೊಡ್ಡ ತಪ್ಪಾಗಿದೆ. ನೀವು ಇದನ್ನೂ ತಿಳಿಸುತ್ತೀರಿ - ಮನುಷ್ಯರಿಗೆಂದೂ ಭಗವಂತನೆಂದು ಹೇಳಲಾಗುವುದಿಲ್ಲ. ತಂದೆಯು ಮಕ್ಕಳಿಗೆ ಎಲ್ಲಾ ಮಾತುಗಳನ್ನು ಸಹಜ ಮಾಡಿ ತಿಳಿಸುತ್ತಾರೆ ಮತ್ತು ಯಾರ ಅದೃಷ್ಟದಲ್ಲಿದೆಯೋ, ನಿಶ್ಚಯವಿದೆಯೋ ಅವರು ಅವಶ್ಯವಾಗಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ನಿಶ್ಚಯವಿಲ್ಲವೆಂದರೆ ಅವರೆಂದೂ ತಿಳಿದುಕೊಳ್ಳುವುದಿಲ್ಲ. ಅದೃಷ್ಟವೇ ಇಲ್ಲವೆಂದರೆ ಪುರುಷಾರ್ಥವನ್ನೇನು ಮಾಡುತ್ತಾರೆ! ಅದೃಷ್ಟದಲ್ಲಿಲ್ಲದಿದ್ದರೆ ಅವರು ಈ ರೀತಿ ಕುಳಿತುಕೊಳ್ಳುತ್ತಾರೆ ಹೇಗೆ ಏನನ್ನೂ ತಿಳಿದುಕೊಳ್ಳುತ್ತಿಲ್ಲ ಎಂಬಂತೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ ಎಂಬುದೂ ನಿಶ್ಚಯವಿಲ್ಲ ಹೇಗೆ ಯಾರಾದರೂ ಹೊಸ ವ್ಯಕ್ತಿಯು ಮೆಡಿಕಲ್ ಕಾಲೇಜಿನಲ್ಲಿ ಹೋಗಿ ಕುಳಿತುಕೊಂಡರೆ ಏನು ಅರ್ಥವಾಗುತ್ತದೆ? ಏನೇನೂ ಇಲ್ಲ. ಇಲ್ಲಿಯೂ ಸಹ ಅದೇರೀತಿ ಬಂದು ಕುಳಿತುಕೊಳ್ಳುತ್ತಾರೆ. ಈ ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ. ಇದನ್ನೂ ಸಹ ತಂದೆಯು ತಿಳಿಸಿದ್ದಾರೆ ರಾಜಧಾನಿಯು ಸ್ಥಾಪನೆಯಾಗುತ್ತಿದೆಯಲ್ಲವೆ ಅಂದಮೇಲೆ ನೌಕರರು-ಚಾಕರರು, ಪ್ರಜೆಗಳು, ಪ್ರಜೆಗಳಿಗೂ ನೌಕರ-ಚಾಕರರು ಎಲ್ಲರೂ ಬೇಕಲ್ಲವೆ, ಅಂದಮೇಲೆ ಅಂತಹವರೂ ಬರುತ್ತಾರೆ. ಕೆಲವರಿಗಂತೂ ಬಹಳ ಚೆನ್ನಾಗಿ ಅರ್ಥವಾಗುತ್ತದೆ, ತಮ್ಮ ಅಭಿಪ್ರಾಯವನ್ನು ಬರೆಯುತ್ತಾರಲ್ಲವೆ. ಮುಂದೆ ಹೋದಂತೆ ಮೇಲೇರುವ ಪ್ರಯತ್ನ ಪಡುತ್ತಾರೆ. ಆದರೆ ಸಮಯವು ಹೊರಟು ಹೋಗುವುದು, ಏಕೆಂದರೆ ಆ ಸಮಯವಂತೂ ಬಹಳ ಏರುಪೇರುಗಳು ಆಗುತ್ತಿರುವುದು. ದಿನ-ಪ್ರತಿದಿನ ಬಿರುಗಾಳಿಗಳು ಹೆಚ್ಚುತ್ತಾ ಹೋಗುತ್ತವೆ. ಇಷ್ಟೊಂದು ಸೇವಾಕೇಂದ್ರಗಳಿವೆ, ಚೆನ್ನಾಗಿ ಅರಿತುಕೊಳ್ಳುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ ಎಂಬುದನ್ನೂ ಬರೆಯಲಾಗಿದೆ, ವಿನಾಶವನ್ನು ಸಮ್ಮುಖದಲ್ಲಿ ನೋಡುತ್ತಾರೆ. ವಿನಾಶವಂತೂ ಆಗಲೇಬೇಕಾಗಿದೆ. ಜನಸಂಖ್ಯೆಯು ಕಡಿಮೆಯಾಗಲಿ ಎಂದು ಸರ್ಕಾರವು ಹೇಳುತ್ತದೆ ಆದರೆ ಇದರಲ್ಲಿ ಏನು ಮಾಡಬಲ್ಲರು? ವೃಕ್ಷದ ವೃದ್ಧಿಯಂತೂ ಆಗಿಯೇ ಆಗುವುದು. ಎಲ್ಲಿಯವರೆಗೆ ತಂದೆಯಿರುವರೋ ಅಲ್ಲಿಯವರೆಗೆ ಎಲ್ಲಾ ಧರ್ಮಗಳ ಆತ್ಮಗಳು ಇಲ್ಲಿ ಇರಲೇಬೇಕಾಗಿದೆ. ಯಾವಾಗ ಹಿಂತಿರುಗಿ ಹೋಗುವ ಸಮಯ ಬರುವುದೋ ಆಗ ಆತ್ಮರ ಬರುವಿಕೆಯು ನಿಂತು ಹೋಗುವುದು. ಈಗಂತೂ ಪರಮಧಾಮದಿಂದ ಎಲ್ಲರೂ ಬರಲೇಬೇಕಾಗಿದೆ ಆದರೆ ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಇದು ರಾವಣ ರಾಜ್ಯವಾಗಿದೆ, ನಮಗೆ ರಾಮ ರಾಜ್ಯ ಬೇಕೆಂದು ಬಾಪೂಜಿ(ಗಾಂಧೀಜಿ)ಯೂ ಹೇಳುತ್ತಿದ್ದರು. ಇಂತಹವರು ಸ್ವರ್ಗಸ್ಥರಾದರು ಎಂದು ಹೇಳುತ್ತಾರೆ ಅಂದಮೇಲೆ ಇದು ನರಕವೆಂದಾಯಿತಲ್ಲವೆ. ಮನುಷ್ಯರು ಇಷ್ಟನ್ನೂ ತಿಳಿದುಕೊಳ್ಳುವುದಿಲ್ಲ, ಸ್ವರ್ಗವಾಸಿಗಳಾಗುವುದಂತೂ ಒಳ್ಳೆಯದಲ್ಲವೆ. ಅವಶ್ಯವಾಗಿ ನರಕವಾಸಿಯಾಗಿದ್ದರು. ತಂದೆಯು ತಿಳಿಸುತ್ತಾರೆ - ಮನುಷ್ಯರ ಚಹರೆಯು ಮಾತ್ರ ಮನುಷ್ಯನದಾಗಿದೆ, ಆದರೆ ಗುಣಗಳು ಕೋತಿಯದಾಗಿದೆ. ಪತಿತ-ಪಾವನ ಸೀತಾರಾಂ ಎಂದು ಎಲ್ಲರೂ ಹಾಡುತ್ತಿರುತ್ತಾರೆ. ನಾವು ಪತಿತರಾಗಿದ್ದೇವೆ, ಪಾವನ ಮಾಡುವವರು ತಂದೆಯಾಗಿದ್ದಾರೆ. ಅವರೆಲ್ಲರೂ ಭಕ್ತಿಮಾರ್ಗದ ಸೀತೆಯರಾಗಿದ್ದಾರೆ, ತಂದೆಯು ರಾಮನಾಗಿದ್ದಾರೆ, ಯಾರಿಗಾದರೂ ನೇರವಾಗಿ ಹೇಳಿದರೆ ಅವರು ಇದನ್ನು ಒಪ್ಪುವುದಿಲ್ಲ. ರಾಮನನ್ನು ಕರೆಯುತ್ತಾರೆ, ಈಗ ನೀವು ಮಕ್ಕಳಿಗೆ ತಂದೆಯು ಮೂರನೇ ನೇತ್ರವನ್ನು ಕೊಟ್ಟಿದ್ದಾರೆ. ನೀವು ಹೇಗೆ ಪ್ರಪಂಚದಿಂದ ಬೇರೆಯಾಗಿ ಬಿಟ್ಟಿದ್ದೀರಿ! ಹಳೆಯ ಪ್ರಪಂಚದಲ್ಲಿ ಏನೇನು ಮಾಡುತ್ತಿರುತ್ತಾರೆ! ಈಗ ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳು ಬುದ್ಧಿಹೀನರಿಂದ ಬುದ್ಧಿವಂತರಾಗುತ್ತೀರಿ. ರಾವಣನು ನಿಮ್ಮನ್ನು ಎಷ್ಟು ಬುದ್ಧಿಹೀನರನ್ನಾಗಿ ಮಾಡಿ ಬಿಟ್ಟಿದ್ದಾನೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಎಲ್ಲಾ ಮನುಷ್ಯರು ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಆದ್ದರಿಂದಲೇ ತಂದೆಯೇ ಬಂದು ಸತೋಪ್ರಧಾನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಭಲೆ ನೀವು ಮಕ್ಕಳು ತಮ್ಮ ಸೇವೆಯನ್ನೂ ಮಾಡುತ್ತಾ ಇರಿ. ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿ - ತಂದೆಯನ್ನು ನೆನಪು ಮಾಡಿ. ತಮೋಪ್ರಧಾನರಿಂದ ಸತೋಪ್ರಧಾನರಾಗುವ ಮಾರ್ಗವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಸರ್ವರ ಆತ್ಮಿಕ ಸರ್ಜನ್ ಒಬ್ಬರೇ ಆಗಿದ್ದಾರೆ. ಅವರೇ ಬಂದು ಆತ್ಮರಿಗೆ ಇಂಜೆಕ್ಷನ್ ಹಾಕುತ್ತಾರೆ ಏಕೆಂದರೆ ಆತ್ಮವೇ ತಮೋಪ್ರಧಾನವಾಗಿದೆ. ತಂದೆಗೆ ಅವಿನಾಶಿ ಸರ್ಜನ್ ಎಂದು ಹೇಳಲಾಗುತ್ತದೆ. ಈಗ ಆತ್ಮವು ಸತೋಪ್ರಧಾನದಿಂದ ತಮೋಪ್ರಧಾನವಾಗಿದೆ. ಇದಕ್ಕೆ ಇಂಜೆಕ್ಷನ್ ಬೇಕು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಮ್ಮ ತಂದೆಯನ್ನು ನೆನಪು ಮಾಡಿ. ಬುದ್ಧಿಯೋಗವನ್ನು ಮೇಲೆ ಜೋಡಿಸಿ. ಜೀವಿಸಿದ್ದಂತೆಯೇ ನೆನಪು ಎಂಬ ನೇಣು ಹಾಕಿಕೊಳ್ಳಿ ಅರ್ಥಾತ್ ಬುದ್ಧಿಯೋಗವನ್ನು ಮಧುರ ಮನೆಯ ಕಡೆ ಜೋಡಿಸಿ. ನಾವು ಮಧುರ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನಿರ್ವಾಣಧಾಮಕ್ಕೆ ಮಧುರ ಮನೆಯೆಂದು ಹೇಳಲಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ಪ್ರಪಂಚ ವಿನಾಶ ಆಗಿಯೇ ಬಿಟ್ಟಿದೆ, ಆದ್ದರಿಂದ ತಮ್ಮನ್ನು ತಾವು ಈ ಹಳೆಯ ಪ್ರಪಂಚದಿಂದ ಭಿನ್ನವೆಂದು ತಿಳಿದುಕೊಳ್ಳಬೇಕಾಗಿದೆ. ವೃಕ್ಷದ ವೃದ್ಧಿಯ ಜೊತೆ ಜೊತೆಗೆ ಯಾವ ವಿಘ್ನರೂಪಿ ಬಿರುಗಾಳಿಗಳು ಬರುತ್ತವೆಯೋ ಅವುಗಳಿಗೆ ಹೆದರಬಾರದು, ಪಾರಾಗಬೇಕಾಗಿದೆ.

2. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಲು ತಮಗೆ ಜ್ಞಾನ, ಯೋಗದ ಇಂಜೆಕ್ಷನ್ ಕೊಟ್ಟುಕೊಳ್ಳಬೇಕಾಗಿದೆ. ತಮ್ಮ ಬುದ್ಧಿಯೋಗವನ್ನು ಮಧುರ ಮನೆಯಲ್ಲಿ ಜೋಡಿಸಬೇಕಾಗಿದೆ.

ವರದಾನ:
ತಮ್ಮ ಭಾಗ್ಯ ಮತ್ತು ಭಾಗ್ಯ ವಿಧಾತನ ಸ್ಮತಿಯ ಮುಖಾಂತರ ಸರ್ವ ಸಮಸ್ಯೆಗಳಿಂದ ಮುಕ್ತರಾಗಿರುವ ಮಾಸ್ಟರ್ ರಚೈತ ಭವ.

ಸದಾ ವ್ಹಾ ನನ್ನ ಭಾಗ್ಯ ಮತ್ತು ವ್ಹಾ ಭಾಗ್ಯ ವಿಧಾತ! ಈ ಮನಸ್ಸಿನ ಸೂಕ್ಷ್ಮ ಮಾತನ್ನು ಕೇಳುತ್ತಿರಿ ಮತ್ತು ಖುಶಿಯಲ್ಲಿ ನಾಟ್ಯವಾಡುತ್ತಿರಿ. ತಿಳಿಯ ಬೇಕಿತ್ತು ಅದನ್ನು ತಿಳಿದುಕೊಂಡು ಬಿಟ್ಟೆನು, ಪಡೆಯ ಬೇಕಿದ್ದನ್ನು ಪಡೆದು ಬಿಟ್ಟೆನು - ಇದೇ ಅನುಭವಗಳಲ್ಲಿರಿ ಆಗ ಸರ್ವ ಸಮಸ್ಯೆಗಳಿಂದ ಮುಕ್ತರಾಗಿ ಬಿಡುವಿರಿ. ಈಗ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಂಡಿರುವ ಆತ್ಮಗಳನ್ನು ಬಿಡಿಸುವ ಸಮಯವಾಗಿದೆ. ಆದ್ದರಿಂದ ಮಾಸ್ಟರ್ ಸರ್ವಶಕ್ತಿವಾನ್ ಆಗಿರುವೆ, ಮಾಸ್ಟರ್ ರಚೈತ ಆಗಿರುವೆ - ಈ ಸ್ಮತಿಯಿಂದ ಬಾಲ್ಯತನದ ಸಣ್ಣ-ಪುಟ್ಟ ಮಾತುಗಳಲ್ಲಿ ಸಮಯ ಕಳೆಯಬೇಡಿ.

ಸ್ಲೋಗನ್:
ಕಮಲ ಆಸನಧಾರಿಯೇ ಮಾಯೆಯ ಆಕರ್ಷಣೆಯಿಂದ ನ್ಯಾರಾ (ಅತೀತ), ತಂದೆಯ ಸ್ನೇಹದಲ್ಲಿ ಪ್ಯಾರ (ಪ್ರಿಯ) ಶ್ರೇಷ್ಠ ಕರ್ಮಯೋಗಿ.