11.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮಗೆ ಗುಪ್ತ ಖುಷಿಯಿರಬೇಕಾಗಿದೆ - ನಾವು ಪರಮಾತ್ಮ ತಂದೆಯ ಯುನಿವರ್ಸಿಟಿಯ ಸ್ಟೂಡೆಂಟ್ (ವಿದ್ಯಾರ್ಥಿ) ಆಗಿದ್ದೇನೆ, ಭವಿಷ್ಯದ ಹೊಸ ಪ್ರಪಂಚದ ಆಸ್ತಿಯನ್ನು ಪಡೆಯುವುದಕ್ಕಾಗಿ ಓದುತ್ತಿದ್ದೇನೆ

ಪ್ರಶ್ನೆ:
ಸದಾ ಯಾವ ಸ್ಮೃತಿಯಲ್ಲಿದ್ದಾಗ ದೈವೀ ಗುಣಗಳು ಧಾರಣೆಯಾಗುತ್ತಿರುತ್ತವೆ?

ಉತ್ತರ:
ನಾವು ಆತ್ಮಗಳು ಶಿವ ತಂದೆಯ ಸಂತಾನರಾಗಿದ್ದೇವೆ, ತಂದೆಯು ನಮ್ಮನ್ನು ಮುಳ್ಳಿನಿಂದ ಹೂವನ್ನಾಗಿ ಮಾಡಲು ಬಂದಿದ್ದಾರೆ - ಸದಾ ಇದೇ ಸ್ಮೃತಿಯಿದ್ದಾಗ ದೈವೀ ಗುಣ ಧಾರಣೆಯಾಗುತ್ತಿರುತ್ತದೆ. ವಿದ್ಯೆ ಮತ್ತು ಯೋಗದ ಮೇಲೆ ಪೂರ್ಣ ಗಮನವನ್ನಿಡಿ, ವಿಕಾರಗಳನ್ನು ತಿರಸ್ಕಾರ ಮಾಡುತ್ತಾ ಇದ್ದಾಗ ದೈವೀ ಗುಣ ಧಾರಣೆಯಾಗುತ್ತಾ ಇರುತ್ತದೆ. ಯಾವ ಸಮಯದಲ್ಲಿ ಯಾವುದಾದರೂ ವಿಕಾರ ಯುದ್ಧ ಮಾಡುತ್ತದೆ ಎಂದರೆ ತಿಳಿದುಕೊಳ್ಳಬೇಕಾಗಿದೆ - ನಾನು ಮುಳ್ಳಾಗಿದ್ದೇನೆ, ನಾನೇ ಹೂವಾಗಬೇಕಾಗಿದೆ.

ಓಂ ಶಾಂತಿ.
ನಾವು ಆತ್ಮಿಕ ಯುನಿವರ್ಸಿಟಿಯಲ್ಲಿ ಕುಳಿತಿದ್ದೇವೆಂದು ಮಕ್ಕಳ ಬುದ್ಧಿಯಲ್ಲಿದೆ, ಈ ನಶೆಯಲ್ಲಿರಬೇಕಾಗಿದೆ. ಶಾಲೆಯಲ್ಲಿ ಹೇಗೆ ಸಾಮಾನ್ಯ ರೀತಿಯಲ್ಲಿ ಕುಳಿತುಕೊಳ್ಳುತ್ತಾರೆಯೋ ಹಾಗೆಯೇ ಇಲ್ಲಿ ಮಂಧ ಬುದ್ಧಿಯವರಾಗಿ ಕುಳಿತುಕೊಳ್ಳಬಾರದು. ಬಹಳ ಮಕ್ಕಳು ಹೀಗೆ ಮಂಧ ಬುದ್ಧಿಯವರಾಗಿ ಕುಳಿತುಕೊಳ್ಳುತ್ತಾರೆ. ಇದು ನೆನಪಿರಬೇಕು ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನ ವಿಶ್ವ ವಿದ್ಯಾಲಯವು ಇದಾಗಿದೆ. ನಾವು ಅವರ ವಿದ್ಯಾರ್ಥಿಗಳಾಗಿದ್ದೇವೆ ಅಂದಾಗ ನಿಮ್ಮಲ್ಲಿ ಎಷ್ಟೊಂದು ನಶೆಯಿರಬೇಕು. ಇದು ಗುಪ್ತ ಖುಷಿ, ಗುಪ್ತ ಜ್ಞಾನವಾಗಿದೆ. ಪ್ರತಿಯೊಂದು ಮಾತೂ ಗುಪ್ತವಾಗಿದೆ. ಕೆಲವರಿಗೆ ಇಲ್ಲಿ ಕುಳಿತಿದ್ದರೂ ಹೊರಗಿನ ಕೊಳಕು ವಿಚಾರಗಳು ಬರುತ್ತವೆ. ತಾವಿಲ್ಲಿ ಭವಿಷ್ಯ ಹೊಸ ಪ್ರಪಂಚದ ಆಸ್ತಿಯನ್ನು ಪಡೆಯಲು ಓದುತ್ತೀರಿ ಅಂದಮೇಲೆ ಎಷ್ಟು ಖುಷಿಯಿರಬೇಕು, ದೈವೀ ಗುಣಗಳೂ ಇರಬೇಕು. ಭಲೇ ಇಲ್ಲಿ ಬ್ರಾಹ್ಮಣರೇ ಬರುತ್ತಾರೆ ಹೊರಗಿನ ಕೊಳಕಿನಿಂದಂತೂ ಬಿಡಿಸಿಕೊಂಡು ನೀವು ಇಲ್ಲಿಗೆ ಹೊರ ಬರುತ್ತೀರಿ. ಅಂದಾಗ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ಇಡೀ ಪ್ರಪಂಚವು ಈ ಸಮಯದಲ್ಲಿ ಕೆಸರಿನಲ್ಲಿ ಬಿದ್ದಿದೆ. ಕಲಿಯುಗೀ ಕೆಸರೆಲ್ಲಿ! ಸತ್ಯಯುಗೀ ಹೂದೋಟವೆಲ್ಲಿ! ಕಲಿಯುಗದಲ್ಲಿ ಒಬ್ಬರು ಇನ್ನೊಬ್ಬರಿಗೆ ಮುಳ್ಳನ್ನೇ ಚುಚ್ಚುತ್ತಿರುತ್ತಾರೆ, ನೀವಂತೂ ಹೂಗಳಾಗಬೇಕಾಗಿದೆ. ಆದ್ದರಿಂದ ಎಷ್ಟೊಂದು ಖುಷಿಯಿರಬೇಕು - ಈಗ ನಾವು ಹೂವಾಗುತ್ತೇವೆ, ಇದು ಹೂದೋಟವಾಗಿದೆ. ತಂದೆಗೆ ಹೂದೋಟದ ಮಾಲಿಯೆಂದು ಕರೆಯಲಾಗುತ್ತದೆ, ಆ ಮಾಲಿಯೇ ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ ಅಂದಮೇಲೆ ನಾವು ಯಾವ ಪ್ರಕಾರದ ಹೂವಾಗುತ್ತಿದ್ದೇವೆಂದು ಮಕ್ಕಳಿಗೆ ತಿಳುವಳಿಕೆ ಬೇಕು. ಇಲ್ಲಿ ಹೂದೋಟವೂ ಇದೆ, ಮುರುಳಿಯನ್ನು ಕೇಳಿದ ನಂತರ ಹೂದೋಟದಲ್ಲಿ ಹೋಗಿ ನಾನು ಯಾವ ಹೂವಾಗಿದ್ದೇನೆ! ಮುಳ್ಳಂತೂ ಆಗಿಲ್ಲವೆ ಎಂದು ಹೂಗಳೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳಿ. ಯಾವ ಸಮಯದಲ್ಲಿ ಕ್ರೋಧ ಬರುತ್ತದೆಯೋ ಆಗ ನಾನು ಮುಳ್ಳಾಗಿದ್ದೇನೆ, ನನ್ನಲ್ಲಿ ಭೂತವಿದೆ ಎಂದು ತಿಳಿಯಬೇಕು ಅಂದರೆ ಇಷ್ಟೊಂದು ತಿರಸ್ಕಾರವು ಬರಬೇಕು. ಕ್ರೋಧವಂತೂ ಎಲ್ಲರ ನಡುವೆ ಬಂದು ಬಿಡುತ್ತದೆ. ಕ್ರೋಧ ಮಾಡಿದಾಗಲೂ ಸಹ ಅದರ ಪ್ರಭಾವವು ಸ್ವಲ್ಪ ದಿನಗಳವರೆಗೆ ನಡೆಯುತ್ತದೆ. ಕ್ರೋಧದ ನಶೆಯೂ ಇರುತ್ತದೆ, ಲೋಭದ ನಶೆಯೂ ಇರುತ್ತದೆ. ಆದ್ದರಿಂದ ತಮ್ಮೊಂದಿಗೆ ತಮಗೇ ತಿರಸ್ಕಾರ ಬರಬೇಕು. ನಮ್ಮನ್ನು ತಂದೆಯು ಹೂಗಳನ್ನಾಗಿ ಮಾಡುತ್ತಾರೆಂದು ನೀವು ತಿಳಿಯುತ್ತೀರಿ. ಈ ಕಾಮ ಮತ್ತು ಕ್ರೋಧವು ಬಹಳ ಕೊಳಕಾಗಿದೆ. ಇದು ಮನುಷ್ಯನ ಶೋಭೆಯನ್ನೇ ಕಳೆಯುತ್ತದೆ. ಇಲ್ಲಿ ಶೋಭೆಯನ್ನು ತೋರಿಸುವಿರಿ ಆದ್ದರಿಂದಲೇ ಅಲ್ಲಿಯೂ ಶೋಭೆಯನ್ನು ಪಡೆಯುತ್ತೀರಿ. ತಂದೆಯು ಪ್ರತೀ ದಿನ ಮಕ್ಕಳಿಗೆ ತಿಳಿಸುತ್ತಿರುತ್ತಾರೆ - ಮಕ್ಕಳೇ, ದೈವೀ ಗುಣಗಳನ್ನು ಧಾರಣೆ ಮಾಡಿ, ಸ್ವರ್ಗದಲ್ಲಿ ಹೋಗಬೇಕಲ್ಲವೆ. ಈ ಲಕ್ಷ್ಮೀ-ನಾರಾಯಣರು ಎಷ್ಟು ಗುಣವಂತರಾಗಿದ್ದಾರೆ. ಆದ್ದರಿಂದಲೇ ಇವರ ಮುಂದೆ ಹೋಗಿ ನಾವು ನೀಚ, ಪಾಪಿ, ಕಾಮಿಯಾಗಿದ್ದೇವೆ, ತಾವು ಸರ್ವಗುಣ ಸಂಪನ್ನರಾಗಿದ್ದೀರಿ ಎಂದು ಮಹಿಮೆ ಮಾಡುತ್ತಾರೆ. ನೀವೂ ಸಹ ಇದನ್ನು ತಿಳಿಸುತ್ತೀರಿ - ಸ್ವರ್ಗವು ಹೂದೋಟವಾಗಿದೆ, ನರಕವು ಮುಳ್ಳುಗಳ ಕಾಡಾಗಿದೆ. ಶಿವ ತಂದೆಯು ಸ್ವರ್ಗ ಸ್ಥಾಪನೆ ಮಾಡುತ್ತಾರೆ, ರಾವಣನು ನರಕವನ್ನಾಗಿ ಮಾಡುತ್ತಾನೆ. ವಿಚಾರ ಮಾಡಬೇಕು - ನಾವಾತ್ಮರು ತಂದೆಯ ಸಂತಾನರಾಗಿದ್ದೇವೆ ಅಂದಾಗ ನನ್ನಲ್ಲಿ ಕೊಳಕೆಲ್ಲಿಂದ ಬಂದಿತು? ಒಂದು ವೇಳೆ ಕೊಳಕಿದ್ದರೆ ತಂದೆಯ ಹೆಸರನ್ನೇ ಕೆಡಿಸುತ್ತೇವೆ. ಕ್ರೋಧದಲ್ಲಿ ಬರುತ್ತೀರೆಂದರೆ ಅರ್ಥ ತಂದೆಯ ನಿಂದನೆ ಮಾಡಿಸುತ್ತೀರಿ, ಕ್ರೋಧದ ಭೂತವು ಬಂದಿತು ಮತ್ತು ತಂದೆಯನ್ನು ಮರೆತು ಹೋಗುತ್ತೀರಿ. ತಂದೆಯ ನೆನಪಿದ್ದರೆ ಯಾವುದೇ ಭೂತವು ಬರುವುದೇ ಇಲ್ಲ. ಒಂದು ವೇಳೆ ಯಾರ ಮನಸ್ಸಿಗಾದರೂ ದುಃಖ ಕೊಡುತ್ತೀರೆಂದರೆ ಅದೂ ಸಹ ಪ್ರಭಾವ ಬೀರುತ್ತದೆ. ಒಂದು ಬಾರಿ ಕ್ರೋಧದಲ್ಲಿ ಬಂದರೆ ಆರು ತಿಂಗಳವರೆಗೆ ಎಲ್ಲರ ಬುದ್ಧಿಯಲ್ಲಿ ಇವರು ಕ್ರೋಧಿಯಾಗಿದ್ದಾರೆ ಎನ್ನುವುದೇ ಇರುತ್ತದೆ. ಮತ್ತೆ ಎಲ್ಲರ ಹೃದಯದಿಂದ ಅಂತಹವರು ಹೊರಟು ಹೋಗುತ್ತಾರೆ, ಬಾಪ್ದಾದಾರವರ ಹೃದಯದಿಂದಲೂ ಇಳಿಯುತ್ತಾರೆ. ಈ ದಾದಾರವರು ವಿಶ್ವದ ಮಾಲೀಕರಾಗುತ್ತಾರೆಂದರೆ ಇವರಲ್ಲಿ ಅವಶ್ಯವಾಗಿ ಅಂತಹ ವಿಶೇಷತೆಗಳಿವೆ. ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಪುರುಷಾರ್ಥವನ್ನು ಮಾಡುವುದಿಲ್ಲ. ಇದು ಎಷ್ಟೊಂದು ಸಹಜ ಪುರುಷಾರ್ಥವಾಗಿದೆ - ಕೇವಲ ತಂದೆಯನ್ನು ನೆನಪು ಮಾಡಿದರೆ ಸಾಕು, ಆತ್ಮವು ಸ್ವಚ್ಛವಾಗಿ ಬಿಡುತ್ತದೆ ಇದಕ್ಕಾಗಿ ಮತ್ತ್ಯಾವುದೇ ಉಪಾಯವಿಲ್ಲ. ಈ ಸಮಯದಲ್ಲಿ ರಾಜ ಋಷಿಗಳೂ ಯಾರೂ ಇಲ್ಲ. ರಾಜಯೋಗವನ್ನು ಕಲಿಸುವವರು ತಂದೆಯೊಬ್ಬರೇ ಆಗಿದ್ದಾರೆ. ಮನುಷ್ಯರು ಮನುಷ್ಯರನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲ. ತಂದೆಯೇ ಬಂದು ಎಲ್ಲರನ್ನು ಸುಧಾರಣೆ ಮಾಡುತ್ತಾರೆ. ಯಾರು ಬಹಳ ಚೆನ್ನಾಗಿ ಸುಧಾರಣೆಯಾಗುವರೋ ಅವರು ಸತ್ಯಯುಗದಲ್ಲಿ ಮೊಟ್ಟ ಮೊದಲು ಬರುತ್ತಾರೆ. ಆದ್ದರಿಂದ ಯಾವುದೇ ಕೆಟ್ಟ ಅಭ್ಯಾಸವಿದ್ದರೂ ಸಹ ಬಿಟ್ಟು ಬಿಡಬೇಕು. ವಿದ್ಯೆಯ ಮೇಲೆ, ಯೋಗದ ಬಗ್ಗೆ ಪೂರ್ಣ ಗಮನ ಕೊಡಬೇಕು. ಇದೂ ಸಹ ನಿಮಗೆ ಗೊತ್ತಿದೆ - ಎಲ್ಲರೂ ಒಂದೇ ರೀತಿಯಾಗಿ ಶ್ರೇಷ್ಠರಾಗುವುದಿಲ್ಲ. ಆದರೆ ತಂದೆಯಂತೂ ಪುರುಷಾರ್ಥ ಮಾಡಿಸುತ್ತಾರೆ - ಮಕ್ಕಳೇ, ಎಷ್ಟು ಸಾಧ್ಯವೋ ಅಷ್ಟು ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ. ಈಗಿಲ್ಲದಿದ್ದರೆ ಕಲ್ಪ-ಕಲ್ಪವೂ ಪಡೆಯಲು ಸಾಧ್ಯವಿಲ್ಲ. ತಂದೆಯು ಪದೇ-ಪದೇ ತಿಳಿಸುತ್ತಿರುತ್ತಾರೆ - ತಂದೆಯನ್ನು ನೆನಪು ಮಾಡಿದರೆ ಕೊಳಕೆಲ್ಲವೂ ಹೊರಟು ಹೋಗುತ್ತದೆ, ಆ ಸನ್ಯಾಸಿಗಳಂತೂ ಹಠಯೋಗವನ್ನು ಕಲಿಸುತ್ತಾರೆ. ಆ ಹಠಯೋಗದಿಂದ ಆರೋಗ್ಯವು ಸುಧಾರಣೆಯಾಗಿ ಬಿಡುತ್ತದೆ, ಎಂದೂ ರೋಗಿಯಾಗುವುದಿಲ್ಲವೆಂದು ತಿಳಿಯಬಾರದು ಅವರೂ ಸಹ ರೋಗಿಯಾಗುತ್ತಾರೆ. ಭಾರತದಲ್ಲಿ ಯಾವಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಆಗ ಎಲ್ಲರದು ಧೀರ್ಘಾಯಸ್ಸು ಇತ್ತು, ಆರೋಗ್ಯವಂತರು-ಐಶ್ವರ್ಯವಂತರಾಗಿದ್ದರು. ಆದರೆ ಈಗ ನೋಡಿ, ಬಹಳ ಕಡಿಮೆ ಆಯಸ್ಸಿನವರಾಗಿದ್ದಾರೆ. ಭಾರತವನ್ನು ಈ ರೀತಿ ಮಾಡಿದವರು ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ನೀವು ಎಷ್ಟೇ ತಿಳಿಸಿ ಆದರೆ ಅಂತಹವರಿಗೆ ತಿಳಿಸುವುದು ಬಹಳ ಕಷ್ಟವಿದೆ. ಹಾಗೆ ನೋಡಿದರೆ ಬಡವರು ಸಾಧಾರಣ ರೀತಿಯಲ್ಲಿಯೇ ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾರೆ. ಇಲ್ಲಿ ಯಾರಾದರೂ ಲಕ್ಷಾಧೀಶ್ವರರಿದ್ದಾರೆಯೇ! ಇದ್ದರೂ ಸಹ ಇಂದಿನ ಲಕ್ಷ ರೂಪಾಯಿಗಳು ದೊಡ್ಡ ಮಾತೇನಲ್ಲ. ಇಂದು ಲಕ್ಷಾಧೀಶ್ವರರು ಬಹಳಷ್ಟು ಮಂದಿಯಿದ್ದಾರೆ, ಅಂತಹವರಿಗೂ ತಂದೆಯು ಸಾಧಾರಣೆರೆಂದು ಹೇಳುತ್ತಾರೆ. ಏಕೆಂದರೆ ಇಂದು ಕೋಟ್ಯಾಧೀಶ್ವರರ ಮಾತಿದೆ. ಮದುವೆ-ಮುಂಜಿಗಳಿಗೆ ಎಷ್ಟೊಂದು ಖರ್ಚು ಮಾಡುತ್ತಾರೆ, ಇದಕ್ಕಾಗಿ ನೀವು ಮಕ್ಕಳು ಬಹಳ ಯುಕ್ತಿಯಿಂದ ತಿಳಿಸಬೇಕು, ಅದರಿಂದ ಬಾಣವು ನಾಟಿ ಬಿಡಬೇಕು. ದೊಡ್ಡ-ದೊಡ್ಡ ವ್ಯಕ್ತಿಗಳು ಎಂ.ಪಿ. ಮೊದಲಾದವರು ಬರುತ್ತಾರೆಂದರೆ ಬಹಳ ಖುಷಿ ಪಡುತ್ತಾರೆ. ಆದರೆ ಇದನ್ನು ಹೊರಗೆ ಹೋಗಿ ಹೇಳುವಷ್ಟು ಶಕ್ತಿಯು ಅವರಲ್ಲಿಲ್ಲ. ನೀವು ತಿಳಿಸಿ ಕೊಡುತ್ತೀರಿ ಆದರೆ ಯಥಾರ್ಥವಾಗಿ ಪೂರ್ಣ ತಿಳಿದುಕೊಂಡು ಹೋಗುವುದಿಲ್ಲ. ಶ್ರೇಷ್ಠಾತಿ ಶ್ರೇಷ್ಠ ಭಗವಂತ ಮತ್ತು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯಾಗಿದೆ. ಲಕ್ಷ್ಮೀ-ನಾರಾಯಣರಿಗೆ ಯಾರು ಈ ಸ್ವರ್ಗದ ಆಸ್ತಿಯನ್ನು ಕೊಟ್ಟರು? ಇವರು ಎಲ್ಲಿಯ ನಿವಾಸಿಗಳು? ಇದು ಅನೇಕರಿಗೆ ಗೊತ್ತೇ ಆಗುವುದಿಲ್ಲ. ಸಂಗ್ರಹಾಲಯಕ್ಕೆ ತಿಳಿದುಕೊಳ್ಳಲು ಅನೇಕರು ಬರುತ್ತಾರೆ, ಸೇವೆಯ ಅವಕಾಶವು ಚೆನ್ನಾಗಿದೆ ಆದರೆ ಯೋಗವಿಲ್ಲ. ತಂದೆಯನ್ನು ನೆನಪು ಮಾಡಿದರೆ ಪ್ರಫುಲ್ಲತೆಯು ಬರುತ್ತದೆ. ನಾವು ಯಾರ ಸಂತಾನರಾಗಿದ್ದೇವೆ! ಬಹಳ ಮಕ್ಕಳು ನಿಯಮದನುಸಾರ ಓದುವುದೇ ಇಲ್ಲ, ತಂದೆಯೊಂದಿಗೆ ಯೋಗವಿಲ್ಲ. ಯಾರೂ ಸಂಪೂರ್ಣರಾಗಿಲ್ಲ ನಂಬರ್ವಾರ್ ಆಗಿದ್ದಾರೆ. ಮಕ್ಕಳು ಏಕಾಂತದಲ್ಲಿ ಕುಳಿತು ತಂದೆಯನ್ನು ನೆನಪು ಮಾಡಬೇಕು. ಇಂತಹ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇವೆ, ಈ ಪ್ರಪಂಚದಲ್ಲಿ ನಾವೇ ಎಲ್ಲರಿಗಿಂತ ಪತಿತರಾಗಿದ್ದೇವೆ, ನಂತರ ನಾವೇ ಪಾವನರಾಗುತ್ತೇವೆ. ಇದನ್ನು ಚೆನ್ನಾಗಿ ನೆನಪು ಮಾಡಬೇಕಾಗಿದೆ. ತಂದೆಯು ಪ್ರತಿಯೊಂದು ಪ್ರಕಾರದಲ್ಲಿಯೂ ಸಲಹೆಯನ್ನು ಕೊಡುತ್ತಾರೆ - ಈ ರೀತಿ, ಈ ರೀತಿ ಮಾಡಿ. ಹೇಗೆ ವಿಕ್ಟೋರಿಯಾ ರಾಣಿಯ ಮಂತ್ರಿಯು ಬಡವನಾಗಿದ್ದನು, ರಸ್ತೆಯ ಲೈಟ್ನ ಬೆಳಕಿನಲ್ಲಿ ಓದಿ-ಓದಿ ಶ್ರೇಷ್ಠ ಪದವಿಯನ್ನು ಪಡೆದನು ಅಂದರೆ ಗಮನವಿತ್ತು. ಈ ವಿದ್ಯೆಯೂ ಸಹ ಬಡವರಿಗಾಗಿಯೇ ಇದೆ. ತಂದೆಯು ಬಡವರ ಬಂಧುವಾಗಿದ್ದಾರೆ. ಸಾಹುಕಾರರು ಭಗವಂತನನ್ನು ನೆನಪು ಮಾಡುತ್ತಾರೇನು! ಅವರು ನಮಗಂತೂ ಇಲ್ಲಿಯೇ ಸ್ವರ್ಗವಿದೆ ಎಂದು ಹೇಳುತ್ತಾರೆ. ಅರೆ! ತಂದೆಯು ಸ್ವರ್ಗದ ಸ್ಥಾಪನೆ ಮಾಡಿಲ್ಲ, ಈಗ ಮಾಡುತ್ತಿದ್ದಾರೆ. ತಂದೆಯನ್ನು ನೆನಪು ಮಾಡಿ, ಪಾವನರಂತೂ ಅವಶ್ಯವಾಗಿ ಆಗಬೇಕಾಗಿದೆ. ಭಾರತದ ಪ್ರಾಚೀನ ಯೋಗವನ್ನು ಪರಮಪಿತ ಪರಮಾತ್ಮನ ಹೊರತು ಯಾರೂ ಕಲಿಸಲು ಸಾಧ್ಯವಿಲ್ಲ ಎಂಬುದನ್ನು ಯಾರಿಗೆ ಹೇಗೆ ತಿಳಿಸುವುದೆಂದು ಮಕ್ಕಳು ಯುಕ್ತಿ ರಚಿಸಬೇಕಾಗಿದೆ. ಹಠಯೋಗವು ನಿವೃತ್ತಿ ಮಾರ್ಗದವರಿಗಾಗಿಯೇ ಇದೆ. ತಂದೆಯು ತಿಳಿಸುತ್ತಿರುತ್ತಾರೆ - ಯಾವಾಗ ಯಾರ ಕಲ್ಯಾಣವಾಗುತ್ತದೆಯೋ ಆಗ ಹಾಗೆಯೇ ಬರೆಯುತ್ತೀರಿ. ಈಗ ಇನ್ನೂ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಿಮ್ಮದು ಈಶ್ವರೀಯ ಮಿಷನ್ ಆಗಿದೆ, ನೀವು ಮನುಷ್ಯರು ದೇವತೆಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಪ್ರಪಂಚದಲ್ಲಂತೂ ಅನೇಕ ಪ್ರಕಾರದ ಮತಗಳು ಬರುತ್ತಿರುತ್ತವೆ. ಅವರದು ಎಷ್ಟೊಂದು ಆಡಂಬರವಿರುತ್ತದೆ, ಎಷ್ಟೊಂದು ಅಂಧಶ್ರದ್ಧೆಯಿದೆ, ಅದಕ್ಕೂ ನಿಮಗೂ ರಾತ್ರಿ-ಹಗಲಿನ ಅಂತರವಿದೆ. ನೀವು ಬ್ರಾಹ್ಮಣರಲ್ಲಿಯೂ ಸಹ ರಾತ್ರಿ-ಹಗಲಿನ ಅಂತರವಿದೆ. ಕೆಲವರಂತೂ ಏನೂ ತಿಳಿದುಕೊಂಡಿಲ್ಲ. ಇದು ಬಹಳ ಸಹಜವಾಗಿದೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಪಾಪಗಳು ಪರಿಹಾರವಾಗುತ್ತವೆ. ದೈವೀ ಗುಣಗಳನ್ನು ಧಾರಣೆ ಮಾಡಿದರೆ ಈ ರೀತಿಯಾಗುತ್ತೀರಿ ಎಂದು ಡಂಗುರವನ್ನು ಸಾರುತ್ತಾ ಇರಿ. ದೇಹಾಭಿಮಾನವಿಲ್ಲದಿದ್ದರೆ ಡೋಲನ್ನು ಕೊರಳಿಗೆ ಹಾಕಿಕೊಂಡು ಎಲ್ಲರಿಗೆ ಇದನ್ನೇ ತಿಳಿಸುತ್ತಾ ಹೋಗಿ - ತಂದೆಯು ಬಂದಿದ್ದಾರೆ, ನನ್ನನ್ನು ನೆನಪು ಮಾಡಿದರೆ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ ಎಂದು ತಂದೆಯು ತಿಳಿಸುತ್ತಾರೆ ಎಂದು ಹೇಳುತ್ತಾ ನಡೆಯುತ್ತಾ ಇರಿ. ಅಂದರೆ ಮನೆ-ಮನೆಗೆ ಸಂದೇಶವನ್ನು ಕೊಡಬೇಕು. ಏಕೆಂದರೆ ಎಲ್ಲರ ಆತ್ಮದಲ್ಲಿ ತುಕ್ಕು ಹಿಡಿದಿದೆ, ತಮೋಪ್ರಧಾನ ಪ್ರಪಂಚವಾಗಿದೆ. ಆದ್ದರಿಂದ ಎಲ್ಲರಿಗೆ ತಂದೆಯ ಸಂದೇಶವನ್ನು ಅವಶ್ಯವಾಗಿ ತಲುಪಿಸಬೇಕಾಗಿದೆ. ಅಂತ್ಯದಲ್ಲಿ ನಿಮ್ಮದು ವಾಹ್! ವಾಹ್! ಆಗುತ್ತದೆ. ಇವರದು ಎಷ್ಟು ಕಮಾಲ್ ಆಗಿದೆ. ಇಷ್ಟೊಂದು ತಿಳಿಸಿದರೂ ನಾವು ಎದ್ದೇಳಲಿಲ್ಲ ಎಂದು ತಿಳಿಯುತ್ತಾರೆ. ಯಾರು ಜಾಗೃತರಾದರೋ ಅವರು ಪಡೆದರು, ಯಾರು ಮಲಗಿದ್ದರೋ ಅವರು ಕಳೆದುಕೊಂಡರು. ತಂದೆಯು ರಾಜ್ಯಭಾಗ್ಯವನ್ನು ಕೊಡಲು ಬರುತ್ತಾರೆ. ಆದರೂ ಸಹ ಅದನ್ನು ಕಳೆದುಕೊಳ್ಳುತ್ತಾರೆ. ಈಗ ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು - ತಂದೆಯು ಬಂದಿದ್ದಾರೆ ಮತ್ತು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಅಂದಮೇಲೆ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ನೆನಪೇ ಮಾಡದಿದ್ದರೆ ಪಾಪಗಳು ತುಂಡಾಗುವುದಿಲ್ಲ. ಆತ್ಮದಲ್ಲಿ ಯಾವುದೇ ತುಕ್ಕು ಇರಬಾರದು. ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇಲ್ಲವೆಂದರೆ ಪದವಿಯೂ ಕಡಿಮೆ, ಶಿಕ್ಷೆಯನ್ನೂ ಅನುಭವಿಸುತ್ತೀರಿ. ಈಗ ಸೇವೆಯ ಒಳ್ಳೆಯ ಅವಕಾಶವಿದೆ. ಜೊತೆಯಲ್ಲಿ ಚಿತ್ರವನ್ನು ತೆಗೆದುಕೊಂಡು ಹೋದರೆ ನೀವು ಸರ್ವೀಸ್ ಮಾಡಬಹುದು. ಇದಕ್ಕಾಗಿ ಚಿತ್ರಗಳನ್ನೂ ಬಹಳ ಚೆನ್ನಾಗಿ ಮಾಡಿಸಬೇಕು. ಈ ಚಿತ್ರಗಳು ಬಹಳ ಒಳ್ಳೆಯ ವಸ್ತುಗಳಾಗಿವೆ. ದೊಡ್ಡ-ದೊಡ್ಡ ವ್ಯಕ್ತಿಗಳ ಬಳಿ ದೊಡ್ಡ-ದೊಡ್ಡ ಚಿತ್ರಗಳಿರುತ್ತವೆ, ಸಾವಿರಾರು ವರ್ಷಗಳವರೆವಿಗೂ ಸಹ ಇರುತ್ತವೆ. ನಿಮಗೆ ಈ ಆರು ಚಿತ್ರಗಳೇ ಸಾಕು. ಇದರ ಬಗ್ಗೆ ತಿಳಿಸಿ - ಈ ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಈ ಚಕ್ರವನ್ನು ನೆನಪು ಮಾಡಿದರೆ ನೀವು ಚಕ್ರವರ್ತಿ ರಾಜರಾಗುತ್ತೀರಿ, ಈ ಬ್ಯಾಡ್ಜ್ ಒಳ್ಳೆಯ ಸಾಧನವಾಗಿದೆ. ಆದರೆ ಮಕ್ಕಳಿಗೆ ಇದರ ಮಹತ್ವಿಕೆಯಿಲ್ಲ. ಇದರ ಬಗ್ಗೆ ನೀವು ತಿಳಿಸುತ್ತಿದ್ದರೂ ಸಹ ನಿಮಗೆ ಬಹಳ ಸಂಪಾದನೆಯಾಗುವುದು. ಈ ಬ್ಯಾಡ್ಜ್ ಸದಾ ತಮ್ಮ ಹೃದಯದ ಮೇಲಿರಲಿ. ತಂದೆಯು ಬ್ರಹ್ಮಾರವರ ಮೂಲಕ ಈ ಆಸ್ತಿಯನ್ನು ಕೊಡುತ್ತಾರೆ. ರೈಲಿನಲ್ಲಿಯೂ ಸಹ ಸುತ್ತಾಡುತ್ತಾ ಇದನ್ನು ತಿಳಿಸುತ್ತಾ ಇರಿ. ಚಿಕ್ಕ ಮಕ್ಕಳೂ ಸಹ ಸರ್ವೀಸ್ ಮಾಡಬಹುದು. ನಿಮ್ಮನ್ನು ಯಾರೂ ತಡೆಯುವುದಿಲ್ಲ. ಈ ಬ್ಯಾಡ್ಜ್ ಇಂತಹ ವಸ್ತುವಾಗಿದೆ, ಇದರ ಮುಂದೆ ವಜ್ರ-ವೈಡೂರ್ಯಗಳು, ಹೂ-ಹಣ್ಣುಗಳು, ಮಹಲುಗಳು ಎಲ್ಲವೂ ಇದರಲ್ಲಿ ಸೇರಿದೆ. ಇದರ ಮುಂದೆ ಅದು ಏನೇನೂ ಇಲ್ಲ. ಆದರೆ ಇದು ಮಕ್ಕಳ ಬುದ್ಧಿಯಲ್ಲಿ ಬರುವುದಿಲ್ಲ. ತಂದೆಯು ಅನೇಕ ಬಾರಿ ತಿಳಿಸಿದ್ದಾರೆ - ಮಕ್ಕಳೇ, ಚಿತ್ರವು ಜೊತೆಯಲ್ಲಿರಲಿ. ನಿಮಗೆ ಅನೇಕರು ಉಲ್ಟಾ-ಸುಲ್ಟಾ ಮಾತನಾಡಿ ಬಿಡುತ್ತಾರೆ. ಇದಕ್ಕೆ ಹೆದರಬಾರದು. ಕೃಷ್ಣನಿಗೂ ಸಹ ಗೋಪಿಕೆಯರನ್ನು ಓಡಿಸಿಕೊಂಡು ಹೋಗುತ್ತಿದ್ದನು, ಹೀಗೆ ಮಾಡುತ್ತಿದ್ದನು, ಹಾಗೆ ಮಾಡುತ್ತಿದ್ದನು ಎಂದು ನಿಂದನೆಯಾಯಿತು. ಆದರೆ ವಿಶ್ವದ ಮಾಲೀಕರಾಗಿ ಇಂತಹ ಕೆಲಸ ಮಾಡುತ್ತಾರೆಯೇ! ಈ ಜ್ಞಾನದಲ್ಲಿ ಬಹಳ ನಶೆಯಿರಬೇಕು. ಬೇಗ ವಿನಾಶವಾಗಲೆಂದು ನಾವು ಬಯಸುತ್ತೇವೆ ಮತ್ತೆ ಇದನ್ನೂ ಹೇಳುತ್ತೇವೆ - ಈಗಂತೂ ತಂದೆಯು ಜೊತೆಯಿದ್ದಾರೆ, ತಂದೆಯನ್ನು ಬಿಟ್ಟು ಬಿಟ್ಟರೆ ಮತ್ತೆ 5000 ವರ್ಷಗಳ ನಂತರವೇ ಸಿಗುತ್ತಾರೆ. ಇಂತಹ ತಂದೆಯನ್ನು ನಾವು ಹೇಗೆ ಬಿಡುವುದು! ತಂದೆಯಿಂದಂತೂ ನಾವು ಓದುತ್ತಾ ಇರಬೇಕು. ಇದು ಬ್ರಾಹ್ಮಣರ ಸರ್ವ ಶ್ರೇಷ್ಠ ಜನ್ಮವಾಗಿದೆ, ಯಾವ ತಂದೆಯು ನಮಗೆ ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆ ಅಂತಹ ತಂದೆಯೊಂದಿಗೆ ನಾವು ಮತ್ತೆ ಮಿಲನ ಮಾಡುವುದೇ ಇಲ್ಲ. ಆದರೆ ಗಂಗಾ ನದಿ ತೀರದಲ್ಲಿರುವವರಿಗೆ ಅದರ ಬಗ್ಗೆ ಅಷ್ಟು ಮಹತ್ವಿಕೆಯಿರುವುದಿಲ್ಲ, ಹೊರಗಿನವರು ಎಷ್ಟೊಂದು ಮಹತ್ವಿಕೆಯನ್ನಿಡುತ್ತಾರೆ. ಹಾಗೆಯೇ ಇಲ್ಲಿಯೂ ಸಹ ಹೊರಗಿನವರು ಬಲಿಹಾರಿಯಾಗುತ್ತಾರೆ. ಒಂದು ವೇಳೆ ಯೋಗಬಲವಿಲ್ಲದಿದ್ದರೆ ಯಾರಿಗೆ ತಿಳಿಸಿದರೂ ಸಹ ಅದರ ಪ್ರಭಾವ ಬೀರುವುದಿಲ್ಲ. ಏನೂ ತಿಳಿದುಕೊಳ್ಳುವುದಿಲ್ಲ ಅನೇಕರು ಬರುತ್ತಾರೆ. ಬಾಬಾ, ಹೀಗೀಗೆ ತಿಳಿಸಿದೆವು ಎಂದು ಬರೆಯುತ್ತಾರೆ. ಆದರೆ ತಂದೆಯು ತಿಳಿಯುತ್ತಾರೆ - ಕೇಳಿದರೂ ಆದರೆ ಏನೂ ಕೇಳಿಯೇ ಇಲ್ಲವೇನೂ ಎನ್ನುವ ಹಾಗೆ, ತಂದೆಯನ್ನು ತಿಳಿದುಕೊಳ್ಳಲಿಲ್ಲ. ಒಂದು ವೇಳೆ ತಿಳಿದುಕೊಂಡಿದ್ದರೆ ಇಂತಹ ತಂದೆಯೊಂದಿಗೆ ಸಂಬಂಧವನ್ನಿಡುತ್ತಿದ್ದರು, ಪತ್ರವನ್ನಾದರೂ ಬರೆಯುತ್ತಿದ್ದರು. ನೀವು ಇಂತಹ ತಂದೆಗೆ ಹೇಗೆ ಪತ್ರವನ್ನು ಬರೆಯುತ್ತೀರಿ ತಿಳಿಸಿ ಎಂದು ಕೇಳುತ್ತಿದ್ದರು. ಶಿವಬಾಬಾ C/೦ ಬ್ರಹ್ಮಾ ಎಂಬುದು ತಿಳಿಯುತ್ತಿದ್ದಂತೆಯೇ ಬರೆಯಲು ಪ್ರಾರಂಭಿಸಿ ಬಿಡುತ್ತಿದ್ದರು. ಇವರಂತೂ ರಥವಾಗಿದ್ದಾರೆ ಆದರೆ ಯಾರು ಇವರಲ್ಲಿ ಪ್ರವೇಶ ಮಾಡುತ್ತಾರೆಯೋ ಅವರಿಗೆ ಹೆಚ್ಚು ಬೆಲೆಯಿದೆ. ಸರ್ವೀಸ್ ಮಾಡುತ್ತಾ-ಮಾಡುತ್ತಾ ಬಹಳ ಮಕ್ಕಳ ಗಂಟಲು ಕಟ್ಟಿ ಬಿಡುತ್ತದೆ. ಆದರೆ ಯೋಗವಿಲ್ಲವೆಂದರೆ ಬಾಣವು ನಾಟುವುದಿಲ್ಲ. ಇದಕ್ಕೂ ನಾಟಕವೆಂದು ಹೇಳಬಹುದು. ತಂದೆಯನ್ನು ಅರಿತುಕೊಂಡರೆ ಮತ್ತೆ ತಂದೆಯನ್ನು ಮಿಲನ ಮಾಡದ ಹೊರತು ಇರುವುದಕ್ಕೆ ಸಾಧ್ಯವೇ ಇಲ್ಲ. ರೈಲಿನಲ್ಲಿಯೂ ಸಹ ನಾವು ತಂದೆಯ ಬಳಿ ಹೋಗುತ್ತೇವೆಂದು ಯೋಗಯುಕ್ತರಾಗಿ ಬರಬೇಕು. ಹೇಗೆ ವಿದೇಶದಿಂದ ಯಾರಾದರೂ ಬರುತ್ತಾರೆಂದರೆ ಅವರಿಗೆ ತಮ್ಮ ಸ್ತ್ರೀ-ಮಕ್ಕಳು ಎಲ್ಲರೂ ನೆನಪಿಗೆ ಬರುತ್ತಾರೆ. ಆದರೆ ನಾವಿಲ್ಲಿ ಯಾರ ಬಳಿ ಹೋಗುತ್ತೇವೆ! ಅಂದಮೇಲೆ ಮಾರ್ಗದಲ್ಲಿಯೇ ಎಷ್ಟೊಂದು ಖುಷಿಯಿರಬೇಕು. ಸರ್ವೀಸ್ ಮಾಡುತ್ತಾ-ಮಾಡುತ್ತಾ ಬರಬೇಕು. ತಂದೆಯು ಸಾಗರನಾಗಿದ್ದಾರೆ, ಮಕ್ಕಳು ಅನುಸರಿಸುತ್ತಿದ್ದಾರೆಯೇ ಅಥವಾ ಇಲ್ಲವೇ! ಎಂದು ನೋಡುತ್ತಾರೆ. ಜ್ಞಾನದ ಅಲೆಗಳು ಏಳುತ್ತಿದ್ದರೂ ಅದನ್ನು ನೋಡಿ ಇವರು ನನ್ನ ಸುಪುತ್ರ ಮಗು ಎಂದು ಖುಷಿಯಾಗುತ್ತಾರೆ. ಮುಂಜಾನೆಯ ಸಮಯದಲ್ಲಿ ನೆನಪಿನ ಯಾತ್ರೆಯಲ್ಲಿ ಬಹಳ ಲಾಭವಿದೆ. ಕೇವಲ ಮುಂಜಾನೆಯಷ್ಟೆ ನೆನಪು ಮಾಡಬೇಕೆಂದಲ್ಲಿ ಏಳುತ್ತಾ, ಕೂರುತ್ತಾ, ತಿನ್ನುತ್ತಾ, ಕುಡಿಯುತ್ತಾ ನೆನಪು ಮಾಡಿದರೆ, ಸೇವೆ ಮಾಡಿದರೆ ನೀವು ಯಾತ್ರೆಯಲ್ಲಿದ್ದೀರಿ ಎಂದಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಯಾರ ಮನಸ್ಸನ್ನೂ ದುಃಖಿಯನ್ನಾಗಿ ಮಾಡಬಾರದು. ಒಳಗೆ ಯಾವುದೇ ಭೂತವಿದ್ದರೆ ಅದನ್ನು ಪರಿಶೀಲಿಸಿ ತೆಗೆದು ಹಾಕಬೇಕು. ಹೂಗಳಾಗಿ ಎಲ್ಲರಿಗೂ ಸುಖ ಕೊಡಬೇಕಾಗಿದೆ.

2. ನಾವು ಜ್ಞಾನ ಸಾಗರನ ಮಕ್ಕಳಾಗಿದ್ದೇವೆ ಅಂದಾಗ ಜ್ಞಾನದ ಅಲೆಗಳು ಸದಾ ಏಳುತ್ತಿರಬೇಕು. ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು, ರೈಲಿನಲ್ಲಿಯೂ ಸರ್ವೀಸ್ ಮಾಡಬೇಕು. ಜೊತೆ-ಜೊತೆಗೆ ಪಾವನರಾಗಲು ನೆನಪಿನ ಯಾತ್ರೆಯಲ್ಲಿಯೂ ಇರಬೇಕು.


ವರದಾನ:
ಯೋಗಬಲದ ಮೂಲಕ ಮಾಯೆಯ ಶಕ್ತಿಯ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ವಿಜಯಿ ಭವ.

ಜ್ಞಾನ ಬಲ ಮತ್ತು ಯೋಗ ಬಲ ಎಲ್ಲಕ್ಕಿಂತ ಶ್ರೇಷ್ಠ ಬಲವಾಗಿದೆ. ಹೇಗೆ ವಿಜ್ಞಾನದ ಬಲ ಅಂಧಕಾರದ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಂಡು ಬೆಳಕನ್ನು ಮಾಡುತ್ತದೆ. ಅದೇ ರೀತಿ ಯೋಗಬಲ ಸದಾಕಾಲಕ್ಕಾಗಿ ಮಾಯೆಯ ಮೇಲೆ ಜಯ ಪ್ರಾಪ್ತಿ ಮಾಡಿಕೊಂಡು ವಿಜಯಿಗಳನ್ನಾಗಿ ಮಾಡುವುದು. ಯೋಗಬಲ ಇಷ್ಟು ಶ್ರೇಷ್ಠ ಬಲವಾಗಿದೆ ಯಾವುದರ ಮುಂದೆ ಮಾಯೆಯ ಶಕ್ತಿ ಏನೂ ಇರುವುದಿಲ್ಲ. ಯೋಗ ಬಲವುಳ್ಳಂತ ಆತ್ಮಗಳು ಸ್ವಪ್ನದಲ್ಲಿಯೂ ಸಹಾ ಮಾಯೆಯಿಂದ ಸೋಲನ್ನು ಅನುಭವಿಸಲು ಸಾಧ್ಯವಿಲ್ಲ. ಸ್ವಪ್ನದಲ್ಲಿಯೂ ಸಹಾ ಯಾವುದೇ ಬಲಹೀನತೆ ಬರಲು ಸಾಧ್ಯವಿಲ್ಲ. ಈ ರೀತಿ ವಿಜಯದ ತಿಲಕ ನಿಮ್ಮ ಮಸ್ತಕದಲ್ಲಿ ಇಡಲ್ಪಟ್ಟಿದೆ.

ಸ್ಲೋಗನ್:
ನಂಬರ್ ಒನ್ನಲ್ಲಿ ಬರಬೇಕಾದರೆ ವ್ಯರ್ಥವನ್ನು ಸಮರ್ಥದಲ್ಲಿ ಪರಿವರ್ತನೆ ಮಾಡಿಕೊಳ್ಳಿ.