11.04.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯು ದಾತ ಆಗಿದ್ದಾರೆ, ನೀವು ಮಕ್ಕಳು ತಂದೆಯಿಂದ ಏನನ್ನೂ ಬೇಡುವ ಅವಶ್ಯಕತೆಯಿಲ್ಲ, ಗಾದೆ ಮಾತಿದೆ-ಬೇಡುವುದಕ್ಕಿಂತ ಸಾಯುವುದು ಲೇಸು

ಪ್ರಶ್ನೆ:
ಸದಾ ಯಾವ ಸ್ಮೃತಿಯಿದ್ದಾಗ ಯಾವುದೇ ಮಾತಿನ ಚಿಂತೆ ಅಥವಾ ಚಿಂತನೆಯಿರುವುದಿಲ್ಲ?

ಉತ್ತರ:
ಏನು ಕಳೆದು ಹೋಯಿತು, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ, ಅದು ನಾಟಕದಲ್ಲಿತ್ತು. ಇಡೀ ಚಕ್ರವು ಮುಕ್ತಾಯವಾಗಿ ಪುನಃ ಪುನರಾವರ್ತನೆ ಆಗುವುದು. ಯಾರು ಎಂತಹ ಪುರುಷಾರ್ಥ ಮಾಡುತ್ತಾರೆಯೋ ಅಂತಹ ಪದವಿಯನ್ನು ಪಡೆಯುತ್ತಾರೆ. ಈ ಮಾತಿನ ಸ್ಮೃತಿಯಿದ್ದಾಗ ಯಾವುದೇ ಮಾತಿನ ಚಿಂತೆ ಅಥವಾ ಚಿಂತನೆಯಿರುವುದಿಲ್ಲ. ತಂದೆಯ ಆದೇಶವಾಗಿದೆ - ಮಕ್ಕಳೇ. ಕಳೆದು ಹೋಗಿರುವುದಕ್ಕೆ ಪಶ್ಚಾತ್ತಾಪ ಪಡಬೇಡಿ. ಯಾವುದೇ ಉಲ್ಟಾ-ಸುಲ್ಟಾ ಮಾತುಗಳನ್ನು ಕೇಳಲೂಬೇಡಿ, ಹೇಳಲೂಬೇಡಿ. ಕಳೆದು ಹೋದ ಮಾತನ್ನು ವಿಚಾರ ಮಾಡಬೇಡಿ ಮತ್ತು ಪುನರಾವರ್ತನೆ ಮಾಡಬೇಡಿ.

ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ತಂದೆಯು ಕುಳಿತು ತಿಳಿಸುತ್ತಾರೆ - ಆತ್ಮಿಕ ತಂದೆಗೆ ದಾತ ಎಂದು ಹೇಳಲಾಗುತ್ತದೆ. ತಮಗಾಗಿಯೇ ಎಲ್ಲವನ್ನು ಮಕ್ಕಳಿಗೆ ಕೊಡುತ್ತಾರೆ. ಅವರು ವಿಶ್ವದ ಮಾಲೀಕರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ. ಹೇಗೆ ಆಗಬೇಕು ಎಂಬುದೆಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾರೆ, ಆದೇಶ ನೀಡುತ್ತಿರುತ್ತಾರೆ ಏಕೆಂದರೆ ದಾತನಾಗಿದ್ದಾರಲ್ಲವೆ ಆದ್ದರಿಂದ ಎಲ್ಲವನ್ನೂ ತಾವೇ ಕೊಡುತ್ತಿರುತ್ತಾರೆ. ಬೇಡುವುದಕ್ಕಿಂತ ಸಾಯುವುದು ಲೇಸು. ಯಾವುದೇ ವಸ್ತುವನ್ನು ಬೇಡಬಾರದಾಗಿದೆ. ಕೆಲವು ಮಕ್ಕಳು ಶಕ್ತಿ, ಕೃಪೆ ಆಶೀರ್ವಾದವನ್ನು ಬೇಡುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ಬೇಡಿ-ಬೇಡಿ ತಲೆ ಬಾಗಿಸಿ ಏಣಿಯನ್ನು ಕೆಳಗಿಳಿಯುತ್ತಲೇ ಬಂದಿದ್ದೀರಿ. ಈಗ ಬೇಡುವ ಅವಶ್ಯಕತೆಯಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಆದೇಶದಂತೆ ನಡೆಯಿರಿ. ಒಂದಂತೂ ತಿಳಿಸುತ್ತಾರೆ - ಕಳೆದು ಹೋದದ್ದಕ್ಕೆ ಎಂದೂ ಚಿಂತಿಸಬೇಡಿ. ನಾಟಕದಲ್ಲಿ ಏನೆಲ್ಲವೂ ಆಯಿತೋ ಅದು ಕಳೆದು ಹೋಯಿತು. ಅದರೆ ವಿಚಾರವೂ ಮಾಡಬೇಡಿ. ಪುನರಾವರ್ತನೆಯೂ ಮಾಡಬೇಡಿ ತಂದೆಯಂತೂ ಕೇವಲ ಎರಡೇ ಶಬ್ದಗಳನ್ನು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ ತಂದೆಯೇ ಸೂಚನೆ ಅಥವಾ ಶ್ರೀಮತವನ್ನು ಕೊಡುತ್ತಾರೆ, ಅದರಂತೆ ನಡೆಯುವುದು ಮಕ್ಕಳ ಕರ್ತವ್ಯವಾಗಿದೆ. ಇದು ಎಲ್ಲದಕ್ಕಿಂತ ಶ್ರೇಷ್ಠ ಸೂಚನೆ ಆಗಿದೆ, ಯಾರಾದರು ಎಷ್ಟೇ ಪ್ರಶ್ನೋತ್ತರ ಮಾಡಲಿ ತಂದೆಯಂತು ಎರಡೇ ಶಬ್ದಗಳನ್ನು ತಿಳಿಸುತ್ತಾರೆ - ನಾನು ಪತಿತ ಪಾವನನಾಗಿದ್ದೇನೆ ನೀವು ನನ್ನನ್ನು ನೆನಪು ಮಾಡುತ್ತಾ ಇರಿ ಆಗ ನಿಮ್ಮ ಪಾಪಗಳು ಭಸ್ಮವಾಗಿ ಬಿಡುತ್ತವೆ, ನೆನಪಿಗಾಗಿ ಯಾವುದೇ ಸಲಹೆ ಕೊಡಲಾಗುತ್ತದೆಯೇ ತಂದೆಯನ್ನು ನೆನಪು ಮಾಡಬೇಕಾಗಿದೆ, ಕೂಗುವ ಕರೆಯುವ ಅವಶ್ಯಕತೆಯಿಲ್ಲ. ಆಂತರ್ಯದಲ್ಲಿ ಕೇವಲ ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು. ಇನ್ನೊಂದು ಯಾವ ಆದೇಶ ಕೊಡುತ್ತಾರೆ 84 ಜನ್ಮಗಳ ಚಕ್ರವನ್ನು ನೆನಪು ಮಾಡಿ ಏಕೆಂದರೆ ನೀವು ದೇವತೆಗಳಾಗಬೇಕಾಗಿದೆ, ನೀವು ಅರ್ಧ ಕಲ್ಪ ದೇವತೆಗಳ ಮಹಿಮೆ ಮಾಡಿದ್ದೀರಿ.

(ಮಕ್ಕಳು ಅಳುವ ಶಬ್ಧ ಕೇಳಿ ಬಂದಿತು) ಈಗ ಈ ಸೂಚನೆಯನ್ನು ಎಲ್ಲಾ ಸೇವಾಕೇಂದ್ರಗಳಿಗೆ ಕೊಡಲಾಗುತ್ತದೆ - ಯಾರೂ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರಬಾರದು, ಅವರಿಗಾಗಿ ಏನಾದರು ಪ್ರಬಂಧ ಮಾಡಬೇಕು, ಯಾರು ತಂದೆಯಿಂದ ಆಸ್ತಿಯನ್ನು ತೇಗೆದುಕೊಳ್ಳಬೇಕೋ ಅವರು ಪ್ರಬಂಧ ಮಾಡುತ್ತಾರೆ, ಇದು ಆತ್ಮೀಯ ತಂದೆಯ ವಿಶ್ವ ವಿದ್ಯಾಲಯವಾಗಿದೆ, ಇದರಲ್ಲಿ ಚಿಕ್ಕ ಮಕ್ಕಳ ಅವಶ್ಯಕತೆಯಿಲ್ಲ, ಬ್ರಾಹ್ಮಿಣಿಯ (ಟೀಚರ್) ಕರ್ತವ್ಯವಾಗಿದೆ - ಯಾವಾಗ ಯೋಗ್ಯ ಸೇವಾಧಾರಿಗಳಾಗುವರೋ ಆಗ ಅವರನ್ನು ರಿಫ್ರೆಷ್ ಮಾಡಲು ಕರೆದುಕೊಂಡು ಬರಬೇಕು, ಹಿರಿಯರಿರಬಹುದು ಕಿರಿಯರಿರಬಹುದು, ಇದು ವಿಶ್ವ ವಿದ್ಯಾಲಯವಾಗಿದೆ. ಯಾರು ಇಲ್ಲಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆಯೋ ಅವರು ಇದು ವಿಶ್ವ ವಿದ್ಯಾಲಯವಾಗಿದೆ ಎಂದು ತಿಳಿದುಕೊಳ್ಳುವುದಿಲ್ಲ. ಮುಖ್ಯವಾದ ಮಾತು ಇದು ವಿಶ್ವ ವಿದ್ಯಾಲಯವಾಗಿದೆ ಇದರಲ್ಲಿ ಓದುವವರು ಬಹಳ ಒಳ್ಳೆಯ ಬುದ್ಧಿವಂತರಿರಬೇಕು. ಯಾರು ಪರಿಪಕ್ವವಿರುವುದಿಲ್ಲವೋ ಅವರು ತೊಂದರೆ ಮಾಡುತ್ತಾರೆ, ಏಕೆಂದರೆ ತಂದೆಯ ನೆನಪಿನಲ್ಲಿ ಇರದಿದ್ದರೆ ಬುದ್ಧಿಯು ಅಲ್ಲಿ-ಇಲ್ಲಿ ಅಲೆಯುತ್ತಿರುತ್ತದೆ. ನಷ್ಟ ಮಾಡಿಕೊಳ್ಳುತ್ತಾರೆ ನೆನಪಿನಲ್ಲಿರುವುದಿಲ್ಲ. ಮಕ್ಕಳನ್ನು ಕರೆತರುತ್ತಾರೆಂದರೆ ಇದರಲ್ಲಿ ಮಕ್ಕಳಿಗೇ ನಷ್ಟವಾಗುತ್ತದೆ. ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಇಲ್ಲಿ ಮನುಷ್ಯರಿಂದ ದೇವತೆಗಳಾಗಬೇಕೆಂಬುದನ್ನು ಕೆಲವರು ತಿಳಿದುಕೊಂಡೇ ಇಲ್ಲ.

ತಂದೆಯು ತಿಳಿಸುತ್ತಾರೆ - ಭಲೆ ಗೃಹಸ್ಥ ವ್ಯವಹಾರದಲ್ಲಿ ಮಕ್ಕಳು - ಮರಿಗಳ ಜೊತೆಯಿರಿ. ಕೇವಲ ಒಂದು ವಾರವೇನು 3-4 ದಿನಗಳಾದರೂ ಸಾಕು, ಈ ಜ್ಞಾನವು ಸಹಜವಾಗಿದೆ ತಂದೆಯನ್ನು ಅರಿತುಕೊಳ್ಳಬೇಕಾಗಿದೆ. ಪಾರಲೌಕಿಕ ತಂದೆಯನ್ನು ಅರಿತುಕೊಳ್ಳುವುದರಿಂದ ಅಪರಿಮಿತ ಆಸ್ತಿಯೂ ಸಿಗುವುದು. ಯಾವ ಆಸ್ತಿ? ಬೇಹದ್ದಿನ ರಾಜ್ಯಭಾಗ್ಯ. ಪ್ರದರ್ಶನಿ ಹಾಗೂ ಸಂಗ್ರಹಾಲಯದಲ್ಲಿ ಸೇವೆಯಾಗುವುದಿಲ್ಲವೆಂದು ತಿಳಿಯಬೇಡಿ ಅನೇಕಾನೇಕರು ಪ್ರಜೆಗಳಾಗುತ್ತಾರೆ. ಬ್ರಾಹ್ಮಣ ಕುಲ ಸೂರ್ಯವಂಶಿ ಹಾಗೂ ಚಂದ್ರವಂಶಿ ಮೂರು ಇಲ್ಲಿ ಸ್ಥಾಪನೆಯಾಗುತ್ತದೆ. ಅಂದಾಗ ಇದು ಬಹಳ ದೊಡ್ಡ ವಿಶ್ವ ವಿದ್ಯಾಲವಾಗಿದೆ. ಇಲ್ಲಿ ಬೇಹದ್ದಿನ ತಂದೆಯು ಓದಿಸುತ್ತಾರೆ ಅಂದಮೇಲೆ ಒಮ್ಮೆಲೆ ಬುದ್ಧಿಯೇ ಸಂಪನ್ನ ಆಗಿ ಬಿಡಬೇಕು ಆದರೆ ತಂದೆಯು ಸಾಧಾರಣ ತನುವಿನಲ್ಲಿದ್ದಾರೆ. ಸಾಧಾರಣ ರೀತಿಯಲ್ಲಿ ಓದಿಸುತ್ತಾರೆ ಆದ್ದರಿಂದ ಮನುಷ್ಯರಿಗೆ ತಿಳಿಯುವುದೇ ಇಲ್ಲ. ಈಶ್ವರೀಯ ವಿಶ್ವ ವಿದ್ಯಾಲಯವು ಈ ರೀತಿಯಿರುವುದೇ ಎನ್ನುತ್ತಾರೆ. ತಂದೆಯು ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ. ಬಡವರಿಗೇ ಓದಿಸುತ್ತೇನೆ. ಸಾಹುಕಾರರಿಗೆ ಓದುವ ಶಕ್ತಿಯಿಲ್ಲ. ಅವರ ಬುದ್ಧಿಯಲ್ಲಂತು ಮಹಲ್-ಮಹಡಿಗಳೇ ಇರುತ್ತವೇ. ಬಡವರೇ ಸಾಹುಕಾರರಾಗುತ್ತಾರೆ. ಸಾಹುಕಾರರು ಬಡವರಾಗುತ್ತಾರೆ - ಇದು ನಿಯಮವಾಗಿದೆ. ದಾನವನ್ನು ಎಂದಾದರೂ ಸಾಹುಕಾರರಿಗೆ ಕೊಡಲಾಗುತ್ತದೆಯೇ? ಇದು ಅವಿನಾಶಿ ಜ್ಞಾನ ರತ್ನಗಳ ದಾನವಾಗಿದೆ. ಸಾಹುಕಾರರು ದಾನವನ್ನು ಪಡೆಯಲಾಗುವುದಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಅವರು ತಮ್ಮ ಮಿತವಾದ ರಚನೆ., ಹಣ, ಅಧಿಕಾರದಲ್ಲಿ ಸಿಲಿಕಿರುತ್ತಾರೆ, ಅವರಿಗಾಗಿ ಇಲ್ಲಿಯೇ ಸ್ವರ್ಗವಿದೆ, ನಮಗೆ ಇನ್ನೊಂದು ಸ್ವರ್ಗದ ಅವಶ್ಯಕತೆವಿಲ್ಲವೆಂದು ಹೇಳುತ್ತಾರೆ. ಯಾರಾದರು ಹಿರಿಯ ವ್ಯಕ್ತಿಗಳು ಸಾವನ್ನಪ್ಪಿದಾಗ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ಇವರು ಸ್ವರ್ಗಕ್ಕೆ ಹೋದರೆಂದು ತಾವೇ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಇದು ನರಕವಾಗಿತ್ತಲ್ಲವೇ ಆದರೆ ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ ನರಕವೇನೆಂಬುದನ್ನು ತಿಳಿದುಕೊಳ್ಳುವುದೇ ಇಲ್ಲ. ಇದಂತೂ ನಿಮ್ಮ ಬಹಳ ದೊಡ್ಡ ವಿಶ್ವ ವಿದ್ಯಾಲಯವಾಗಿದೆ. ತಂದೆಯು ತಿಳಿಸುತ್ತಾರೆ - ಯಾರ ಬುದ್ಧಿಗೆ ಬೀಗ ಹಾಕಲ್ಪಟ್ಟಿದೆಯೋ ಅವರಿಗೇ ಬಂದು ಓದಿಸುತ್ತೇನೆ. ತಂದೆಯು ಯಾವಾಗ ಬರುವರೋ ಆಗ ಬೀಗವನ್ನು ತೆರೆಯುತ್ತಾರೆ. ಸ್ವಯಂ ತಂದೆಯೇ ಸಲಹೆ ನೀಡುತ್ತಾರೆ, ನಿಮ್ಮ ಬುದ್ಧಿಯ ಬೀಗವು ಹೇಗೆ ತೆರೆಯುತ್ತದೆ? ತಂದೆಯಿಂದ ಏನನ್ನೂ ಬೇಡಬಾರದು, ಇದರಲ್ಲಿ ನಿಶ್ಚಯವಿರಬೇಕು, ಎಷ್ಟು ಪ್ರಿಯ ತಂದೆಯಾಗಿದ್ದಾರೆ. ಯಾರನ್ನು ಭಕ್ತಿಯಲ್ಲಿ ನೆನಪು ಮಾಡುತ್ತಿದ್ದಿರಿ. ಯಾರನ್ನು ನೆನಪು ಮಾಡಲಾಗುತ್ತದೆಯೋ ಅವರು ಅವಶ್ಯವಾಗಿ ಎಂದಾದರು ಬರಬೇಕಲ್ಲವೆ. ಮತ್ತೆ ಪುನರಾವರ್ತನೆಯಾಗುವುದಕ್ಕಾಗಿಯೇ ನೆನಪು ಮಾಡುತ್ತಾರೆ. ತಂದೆಯು ಬಂದು ಮಕ್ಕಳಿಗೇ ತಿಳಿಸುತ್ತಾರೆ. ಮಕ್ಕಳು ಹೋಗಿ ಹೊರಗೆ ತಿಳಿಸಬೇಕು - ತಂದೆಯು ಹೇಗೆ ಬಂದಿದ್ದಾರೆ ಏನು ಹೇಳುತ್ತಾರೆ? ಮಕ್ಕಳೇ ನೀವೆಲ್ಲರೂ ಪತಿತರಾಗಿದ್ದೀರಿ. ನಾನೇ ಬಂದು ಪಾವನರನ್ನಾಗಿ ಮಾಡುತ್ತೇನೆ, ಪತಿತರಾಗಿರುವ ನೀವಾತ್ಮಗಳು ಈಗ ಕೇವಲ ಪತಿತ-ಪಾವನ ತಂದೆಯಾದ ನನ್ನನ್ನು ನೆನಪು ಮಾಡಿ, ಪರಮಾತ್ಮನಾದ ನನ್ನನ್ನು ನೆನಪು ಮಾಡಿ, ಇದರಲ್ಲಿ ಏನನ್ನು ಬೇಡುವ ಅವಶ್ಯಕತೆಯಿಲ್ಲ. ನೀವು ಭಕ್ತಿಯಲ್ಲಿ ಅರ್ಧಕಲ್ಪ ಬಹಳಷ್ಟು ಬೇಡಿದ್ದೀರಿ ಆದರೆ ಏನೂ ಸಿಗಲಿಲ್ಲ. ಈಗ ಬೇಡುವುದನ್ನು ನಿಲ್ಲಿಸಿ ನಾನಾಗಿಯೇ ನಿಮಗೆ ಕೊಡಿತ್ತಿರುತ್ತೇನೆ ತಂದೆಗೆ ಮಕ್ಕಳಾಗುವುದರಿಂದ ಆಸ್ತಿಯಂತೂ ಅವಶ್ಯವಾಗಿ ಸಿಗುತ್ತದೆ. ಯಾರು ಪ್ರೌಢ ಮಕ್ಕಳಿರುತ್ತಾರೆ ಅವರು ತಂದೆಯನ್ನು ಬೇಗನೇ ತಿಳಿದುಕೊಳ್ಳುತ್ತಾರೆ. ತಂದೆಯ ಆಸ್ತಿಯು ಸ್ವರ್ಗದ 21 ಜನ್ಮಗಳ ರಾಜ್ಯ ಭಾಗ್ಯವಾಗಿದೆ. ಇದಂತೂ ನಿಮಗೆ ಗೊತ್ತಿದೆ - ಯಾವಾಗ ನರಕವಾಸಿಗಳಾಗಿರುತ್ತಾರೆಯೋ ಆಗ ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುವವರಿಗೆ ಅಲ್ಪಕಾಲಕ್ಕಾಗಿ ಸುಖ ಸಿಗುತ್ತದೆ. ಮನುಷ್ಯರು ದಾನದ ಹಣವನ್ನು ತೆಗೆಯುತ್ತಾರೆ. ಬಹಳಷ್ಟು ವ್ಯಾಪರಿಗಳು ಹೀಗೆ ತೆಗೆಯುತ್ತಾರೆ ಅಂದಾಗ ಯಾರು ವ್ಯಾಪಾರಿಗಳಿರುವರೋ ಅವರು ತಂದೆಯಿಂದ ವ್ಯಾಪರ ಮಾಡಲು ಬಂದ್ದಿದ್ದೇವೆ ಎಂದು ಹೇಳುತ್ತಾರೆ. ಮಕ್ಕಳು ತಂದೆಯೊಂದಿಗೆ ವ್ಯಾಪಾರ ಮಾಡುತ್ತಾರಲ್ಲವೇ? ತಂದೆಯ ಸಂಪತ್ತನ್ನು ತೆಗೆದುಕೊಂಡು ಮತ್ತೆ ಅದರಿಂದ ಶ್ರಾದ್ಧ, ಇತ್ಯಾದಿಯನ್ನು ಮಾಡುತ್ತಾರೆ. ದಾನ-ಪುಣ್ಯ ಮಾಡುತ್ತಾರೆ. ಧರ್ಮ ಶಾಲೆ ಮಂದಿರ ಮೊದಲಾದವುಗಳನ್ನು ಮಾಡಿಸಿ ಅದರ ಮೇಲೆ ತಮ್ಮ ತಂದೆಯ ಹೆಸರನ್ನಿಡುತ್ತಾರೆ. ಏಕೆಂದರೆ ಯಾರಿಂದ ಸಂಪತ್ತು ಸಿಕ್ಕಿತೋ ಅವರಿಗಾಗಿ ಅವಶ್ಯವಾಗಿ ಮಾಡಬೇಕು. ಅಂದಮೇಲೆ ಅದು ವ್ಯಾಪಾರವಾಯಿತು, ಅವೆಲ್ಲವೂ ದೈಹಿಕ ಮಾತುಗಳಾಗಿದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ ಕಳೆದು ಹೋಗಿದಕ್ಕೆ ಚಿಂತಿಸಬೇಡಿ, ಯಾವುದೇ ಉಲ್ಟಾ-ಸುಲ್ಟಾ ಮತುಗಳನ್ನು ಕೇಳಬೇಡಿ ಯಾರಾದರು ಉಲ್ಟಾ-ಸುಲ್ಟಾ ಪ್ರಶ್ನೆಗಳನ್ನು ಕೇಳಿದರೆ ಅವರಿಗೆ ತಿಳಿಸಿ - ಈ ಮಾತುಗಳಲ್ಲಿ ಹೋಗುವ ಅವಶ್ಯಕತೆಯಿಲ್ಲ. ನೀವು ಮೊದಲು ತಂದೆಯನ್ನು ನೆನಪು ಮಾಡಿ. ಭಾರತದ ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ. ಎಷ್ಟು ನೆನಪು ಮಾಡುವಿರೋ, ದೈವೀ ಗುಣಗಳನ್ನು ಧಾರಣೆ ಮಾಡುವಿರೋ ಅಷ್ಟೂ ಉನ್ನತ ಪದವಿಯನ್ನು ಪಡೆಯುತ್ತೀರಿ. ಇದು ವಿಶ್ವ ವಿದ್ಯಾಲಯವಾಗಿದೆ. ಗುರಿ -ದ್ಯೇಯ ಸ್ವಷ್ಟವಾಗಿದೆ ಪುರುಷಾರ್ಥ ಮಾಡಿ ಈ ರೀತಿಯಾಗಬೇಕು. ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಯಾರಿಗೂ ಯಾವುದೇ ಪ್ರಕಾರದ ದುಃಖವನ್ನು ಕೊಡಬಾರದಾಗಿದೆ, ಏಕೆಂದರೆ ದುಃಖಹರ್ತ-ಸುಖಕರ್ತ ತಂದೆಯ ಮಕ್ಕಳಾಗಿದ್ದೀರಲ್ಲವೆ ಅದು ಸೇವೆಯಿಂದ ತಿಳಿಯುತ್ತದೆ - ಅನೇಕರು ಹೊಸಬರು ಬರುತ್ತಾರೆ. 25-30 ವರ್ಷದವರಿಗಿಂತಲೂ 10-12 ದಿನಗಳವರು ತೀಕ್ಷ್ಣವಾಗಿ ಹೋಗುತ್ತಾರೆ. ನೀವು ಮಕ್ಕಳು ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲವೋ ಅಲ್ಲಿಯವರೆಗೆ ದೇವತೆಗಳಾಗಲು ಹೇಗೆ ಸಾಧ್ಯ! ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ಬ್ರಹ್ಮಾ ಆಗಿದ್ದಾರೆ. ಯಾರು ಬಂದು ಹೋಗುತ್ತಾರೆಯೋ ಅವರ ಗಾಯನ ಮಾಡುತ್ತಿರುತ್ತಾರೆ ಮತ್ತೆ ಅವಶ್ಯವಾಗಿ ಅವರು ಬರುತ್ತಾರೆ. ಯಾವುದೆಲ್ಲ ಹಬ್ಬ ಮೊದಲಾದುವುಗಳ ಗಾಯನವಿದೆಯೋ ಎಲ್ಲವೂ ಆಗಿ ಹೋಗಿದೆ ಪುನಃ ಆಗುತ್ತದೆ. ಈ ಸಮಯದಲ್ಲಿ ಎಲ್ಲ ಹಬ್ಬಗಳು ಆಗುತ್ತವೆ ರಕ್ಷಾಬಂಧನ ಇತ್ಯಾದಿ....... ಎಲ್ಲದರ ರಹಸ್ಯವನ್ನು ತಂದೆಯು ತಿಳಿಸುತ್ತಿರುತ್ತಾರೆ.

ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಾಗ ಪಾವನರು ಆಗಬೇಕಾಗಿದೆ. ಪತಿತ-ಪಾವನ ತಂದೆಯನ್ನು ಕರೆಯುವುದರಿಂದ ತಂದೆಯು ಮಾರ್ಗವನ್ನು ತಿಳಿಸುತ್ತಾರೆ. ಕಲ್ಪ-ಕಲ್ಪವೂ ಯಾರು ಆಸ್ತಿಯನ್ನು ಪಡೆದಿರುವರೋ ಅವರೇ ಕರಾರುವಕ್ಕಾಗಿ ನಡೆಯುತ್ತಿರುತ್ತಾರೆ. ನೀವು ಸಹ ಸಾಕ್ಷಿಯಾಗಿ ನೋಡುತ್ತೀರಿ. ಬಾಪ್ದಾದಾರವರು ಸಹ ಸಾಕ್ಷಿಯಾಗಿ ನೋಡುತ್ತಾರೆ - ಇವರು ಎಲ್ಲಿಯವರೆಗೆ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ? ಇವರ ನಡವಳಿಕೆ ಹೇಗಿದೆ ಶಿಕ್ಷಕರಿಗೆ ಎಲ್ಲವೂ ತಿಳಿದಿರುತ್ತದೆಯಲ್ಲವೇ ಎಷ್ಟು ಜನರನ್ನು ತಮ್ಮ ಸಮಾನ ಮಾಡುತ್ತಾರೆ. ಎಷ್ಟು ಸಮಯ ನೆನಪಿನಲ್ಲಿರುತ್ತಾರೆ ಮೊದಲು ಬುದ್ಧಿಯಲ್ಲಿ ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ ಎಂದು ನೆನಪಿರಬೇಕು. ಇದು ಜ್ಞಾನಕ್ಕಾಗಿ ವಿಶ್ವ ವಿದ್ಯಾಲವಾಗಿದೆ. ಅವೆಲ್ಲವೂ ಲೌಕಿಕದ ವಿಶ್ವ ವಿದ್ಯಾಲಯಗಳಾಗಿದೆ. ಇದು ಬೇಹದ್ದಿನದಾಗಿದೆ. ದುರ್ಗತಿಯಿಂದ ಸದ್ಗತಿ. ನರಕದಿಂದ ಸ್ವರ್ಗವನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ತಂದೆಯ ದೃಷ್ಠಿಯಂತೂ ಎಲ್ಲಾ ಆತ್ಮಗಳ ಕಡೆ ಹೋಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಹಿಂತಿರುಗಿ ಕರೆದುಕೊಂಡು ಹೊಗಬೇಕಾಗಿದೆ. ಕೇವಲ ನಿಮ್ಮನ್ನಷ್ಟೇ ಅಲ್ಲ ಇಡೀ ವಿಶ್ವದ ಆತ್ಮಗಳನ್ನು ನೆನಪು ಮಾಡುತ್ತಾರೆ. ಅದರಲ್ಲಿ ವಿಶೇಷವಾಗಿ ಮಕ್ಕಳಿಗೆ ಓದಿಸುತ್ತಾರೆ. ಇದು ಸಹ ತಿಳಿದಿದ್ದೀರಿ - ಹೇಗೆ ನಂಬರ್ವಾರ್ ಆಗಿ ಯಾರು ಬಂದಿದ್ದಾರೆಯೋ ಮತ್ತೆ ಹೋಗುವುದು ಹಾಗೆಯೇ. ಎಲ್ಲಾ ಆತ್ಮಗಳು ಬರುತ್ತಾರೆ ನೀವು ಸಹ ನಂಬರ್ರ್ವಾರಾಗಿಯೇ ಹೋಗುತ್ತೀರಿ ಅದೆಲ್ಲವನ್ನು ತಿಳಿಸಲಾಗುತ್ತದೆ. ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುವುದು. ಇದನ್ನು ಸಹ ನಿಮಗೆ ತಿಳಿಸಲಾಗುತ್ತದೆ - ನೀವು ಹೇಗೆ ಮತ್ತೆ ಹೊಸ ಪ್ರಪಂಚದಲ್ಲಿ ಬರಿತ್ತೀರಿ. ನಂಬರ್ವಾರ್ ಹೊಸ ಪ್ರಪಂಚದಲ್ಲಿ ಬರುತ್ತಾರೆಯೋ ಅವರಿಗೇ ತಿಳಿಸಲಾಗುತ್ತದೆ.

ನೀವು ಮಕ್ಕಳು ತಂದೆಯನ್ನು ಅರಿಯುವುದರಿಂದ ತಮ್ಮ ಧರ್ಮವನ್ನು ಮತ್ತು ಎಲ್ಲಾ ಧರ್ಮಗಳ ಪೂರ್ಣ ವೃಕ್ಷವನ್ನು ತಿಳಿದುಕೊಳ್ಳುತ್ತೀರಿ. ಇದರಲ್ಲಿ ಏನನ್ನು ಬೇಡುವ ಅವಶ್ಯಕತೆಯಿಲ್ಲ, ಆರ್ಶೀವಾದವನ್ನು ಸಹ ಬಾಬಾ ದಯೆ ತೋರಿಸಿ, ಕೃಪೆ ಮಾಡಿ ಎಂದು ಬರೆಯುತ್ತಾರೆ. ತಂದೆಯಂತೂ ಏನನ್ನೂ ಮಾಡುವುದಿಲ್ಲ. ತಂದೆಯಂತೂ ಮಾರ್ಗವನ್ನು ತಿಳಿಸುವುದಕ್ಕಾಗಿಯೇ ಬಂದಿದ್ದಾರೆ. ನಾಟಕದಲ್ಲಿ ಎಲ್ಲರನ್ನು ಪಾವನ ಮಾಡುವುದೇ ನನ್ನ ಪಾತ್ರವಾಗಿದೆ. ಹೇಗೆ ಕಲ್ಪ-ಕಲ್ಪವು ಅಭಿನಯಿಸಿದ್ದೇನೆಯೋ ಹಾಗೆಯೇ ಅಭಿನಯಿಸುತ್ತೇನೆ, ಯಾವುದು ಒಳ್ಳೆಯದು ಅಥವಾ ಕೆಟ್ಟದ್ದು ಕಳೆದು ಹೋಗಿತ್ತೋ ಅದು ನಾಟಕದಲ್ಲಿ ಇತ್ತು, ಯಾವುದೇ ಮಾತಿನ ಚಿಂತನೆ ಮಾಡಬಾರದು. ನಾವು ಮುಂದೆ ಹೋಗುತ್ತಾ ಇರುತ್ತೇವೆ. ಇದು ಬೇಹದ್ದಿನ ನಾಟಕವಲ್ಲವೇ. ಪೂರ್ಣ ಚಕ್ರವು ಮುಕ್ತಾಯವಾಗಿ ಮತ್ತೆ ಪುನರಾವರ್ತನೆ ಆಗುತ್ತದೆ. ಯಾರು ಹೇಗೆ ಪುರುಷಾರ್ಥ ಮಾಡುತ್ತಾರೆಯೋ ಹಾಗೆಯೇ ಪದವಿಯನ್ನು ಪಡೆಯುತ್ತಾರೆ. ಬೇಡುವ ಅವಶ್ಯಕತೆ ಇಲ್ಲ. ಭಕ್ತಿಮಾರ್ಗದಲ್ಲಿ ನೀವು ಬಹಳಷ್ಟು ಬೇಡಿದ್ದೀರಿ. ಎಲ್ಲಾ ಹಣವನ್ನು ಸಮಾಪ್ತಿ ಮಾಡಿದ್ದೀರಿ, ಇದೆಲ್ಲವೂ ನಾಟಕದಲ್ಲಿ ಮಾಡಲ್ಪಟ್ಟಿದೆ., ಅವರು ಕೇವಲ ತಿಳಿಸುತ್ತಾರೆ - ಅರ್ಧಕಲ್ಪ ಭಕ್ತಿ ಮಾಡುತ್ತಾ, ಶಾಸ್ತ್ರಗಳನ್ನು ಓದುತ್ತಾ ಎಷ್ಟೊಂದು ಖರ್ಚು ಆಗುತ್ತದೆ. ಈಗ ನೀವು ಏನನ್ನೂ ಖರ್ಚು ಮಾಡುವ ಅವಶ್ಯಕತೆ ಇಲ್ಲ. ತಂದೆಯು ದಾತನಾಗಿದ್ದಾರಲ್ಲವೇ. ದಾತನಿಗೆ ಅವಶ್ಯಕತೆಯಿಲ್ಲ, ಅವರು ಬಂದಿರುವುದೇ ಕೊಡಲು, ನಾವು ಶಿವಬಾಬಾನಿಗೆ ಕೊಟ್ಟಿದ್ದೇವೆಂದು ತಿಳಿಯಬೇಡಿ ಅರೇ! ಶಿವ ತಂದೆಯಿಂದಂತೂ ಬಹಳ-ಬಹಳ ಸಿಗುತ್ತದೆ. ನೀವು ಇಲ್ಲಿ ಪಡೆಯಲು ಬಂದಿದ್ದೀರಲ್ಲವೇ. ಶಿಕ್ಷಕರ ಬಳಿ ವಿದ್ಯಾರ್ಥಿಗಳು ಪಡೆಯುವುದಕ್ಕಾಗಿ ಬರುತ್ತಾರೆ, ಆ ಲೌಕಿಕ ತಂದೆ, ಶಿಕ್ಷಕ ಗುರುಗಳಿಂದಂತೂ ನೀವು ನಷ್ಟವನ್ನೇ ಹೊಂದಿದ್ದೀರಿ, ಈಗ ಮಕ್ಕಳು ಶ್ರೀಮತದಂತೆ ನಡೆಯಬೇಕು ಆಗಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಶಿವ ತಂದೆಯು ಡಬಲ್ ಶ್ರೀ-ಶ್ರೀ ಆಗಿದ್ದಾರೆ, ನೀವು ಸಿಂಗಲ್ ಶ್ರೀ ಆಗಿದ್ದೀರಿ, ಶ್ರೀ ಲಕ್ಷ್ಮಿ - ಶ್ರೀ ನಾರಾಯಣ ಎಂದು ಕರೆಯಲಾಗುತ್ತದೆ, ಶ್ರೀ ಲಕ್ಷ್ಮಿ - ಶ್ರೀ ನಾರಾಯಣ ಇಬ್ಬರು ಆಗಿ ಬಿಟ್ಟರು, ವಿಷ್ಣುಗೆ ಶ್ರೀ-ಶ್ರೀ ಎಂದು ಹೇಳುತ್ತಾರೆ ಏಕೆಂದರೆ ಇಬ್ಬರು ಒಟ್ಟಿಗೆ ಇದ್ದಾರೆ, ಇಬ್ಬರನ್ನು ಆ ರೀತಿ ಮಾಡುವವರು ಯಾರು? ಯಾರು ಒಬ್ಬ ಶ್ರೀ-ಶ್ರೀ ಇದ್ದಾರೆಯೋ ಅವರೇ ಮಾಡುತ್ತಾರೆ. ಉಳಿದಂತೆ ಡಬಲ್ ಶ್ರೀ ಯಾರೂ ಆಗುವುದಿಲ್ಲ. ಇತ್ತೀಚಿಗಂತೂ ಶ್ರೀ ಲಕ್ಷ್ಮೀ - ನಾರಾಯಣ, ಶ್ರೀ ಸೀತಾರಾಮ ಎಂದು ಹೆಸರನ್ನು ಇಟ್ಟುಕೊಳ್ಳುತ್ತಾರೆ ಅಂದಾಗ ಮಕ್ಕಳು ಇದೆಲ್ಲವನ್ನು ಧಾರಣೆ ಮಾಡಿ ಖುಷಿಯಲ್ಲಿ ಇರಬೇಕಾಗಿದೆ.

ಇತ್ತೀಚಿಗೆ ಆಧ್ಯಾತ್ಮಿಕ ಸಮ್ಮೇಳನಗಳು ಆಗುತ್ತಿರುತ್ತವೆ. ಸಮ್ಮೇಳನಗಳು ಆಗುತ್ತಿರುತ್ತವೆ ಆದರೆ ಆಧ್ಯಾತ್ಮಿಕದ ಅರ್ಥವನ್ನು ತಿಳಿದುಕೊಂಡಿಲ್ಲ. ಆತ್ಮಿಕ ಜ್ಞಾನವನ್ನು ಒಬ್ಬರ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಎಲ್ಲಾ ಆತ್ಮಗಳ ತಂದೆ ಆಗಿದ್ದಾರೆ. ಅವರಿಗೆ ಸ್ಪಿರಿಚ್ಯುಲ್, ಆಧ್ಯಾತ್ಮಿಕ ತಂದೆ ಎಂದು ಹೇಳುತ್ತಾರೆ. ತತ್ವ ಜ್ಞಾನಕ್ಕೂ ಸಹ ಆಧ್ಯಾತ್ಮಿಕತೆ ಎಂದು ಹೇಳಿ ಬಿಡುತ್ತಾರೆ, ಇದಂತೂ ನೀವು ತಿಳಿಯುತ್ತೀರಿ - ಇದು ಕಾಡಾಗಿದೆ, ಎಲ್ಲರೂ ಪರಸ್ಪರ ದುಃಖ ಕೊಡುತ್ತಿರುತ್ತಾರೆ. ನಿಮಗೆ ಗೊತ್ತಿದೆ - ಅಹಿಂಸಾ ಪರಮೋದೇವಿ ದೇವತೆಗಳೆಂದು ಗಾಯನವಿದೆ. ಅಲ್ಲಿ ಯಾವುದೇ ಹೊಡೆದಾಟಗಳಾಗುವುದಿಲ್ಲ, ಕೋಪಿಸಿಕೊಳ್ಳುವುದೂ ಹಿಂಸೆಯಾಗಿದೆ ಇದಕ್ಕೆ ಸೆಮಿ-ಹಿಂಸೆ ಎಂದಾದರೂ ಹೇಳಿ, ಏನಾದರೂ ಹೇಳಿ. ಇಲ್ಲಂತೂ ಸಂಪೂರ್ಣ ಅಹಿಂಸಕರಾಗಬೇಕಾಗಿದೆ. ಯಾವುದೇ ಮನಸಾ-ವಾಚಾ-ಕರ್ಮಣಾ ಕೆಟ್ಟ ಕರ್ಮ ಆಗಬಾರದು. ಯಾರಾದರೂ ಪೋಲಿಸ್ ಮೊದಲಾದ ಕರ್ತವ್ಯಗಳನ್ನು ಮಾಡುತ್ತಾರೆಂದರೆ ಅದರಲ್ಲಿ ಯುಕ್ತಿಯಿಂದ ಕೆಲಸವನ್ನು ತೆಗೆದುಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯಿಂದ ಕೆಲಸವನ್ನು ತೆಗೆದುಕೊಳ್ಳಬೇಕು. ಬಾಬಾರವರಿಗೆ ತಮ್ಮ ಅನುಭವವಿದೆ. ಪ್ರೀತಿಯಿಂದ ತಮ್ಮ ಕೆಲಸವನ್ನು ತೆಗೆದುಕೊಳ್ಳುತ್ತಾರೆ, ಇದರಲ್ಲಿ ಬಹಳ ಯುಕ್ತಿ ಬೇಕು. ಬಹಳ ಪ್ರೀತಿಯಿಂದ ಒಂದಕ್ಕೆ 100ರಷ್ಟು ಹೇಗೆ ಶಿಕ್ಷೆ ಸಿಗುತ್ತದೆ ಎಂಬುದನ್ನು ತಿಳಿಸಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ನಾವು ದುಃಖಹರ್ತ-ಸುಖಕರ್ತನ ತಂದೆಯ ಮಕ್ಕಳಾಗಿದ್ದೇವೆ, ಆದ್ದರಿಂದ ಯಾರಿಗೂ ದುಃಖವನ್ನು ಕೊಡಬಾರದು. ಗುರಿ-ಉದ್ದೇಶವನ್ನು ಸಮ್ಮುಖದಲ್ಲಿ ಇಟ್ಟುಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆಯನ್ನು ಮಾಡಬೇಕಾಗಿದೆ.

2. ನಾಟಕದಲ್ಲಿ ಪ್ರತಿಯೊಬ್ಬರ ಪಾತ್ರವನ್ನು ತಿಳಿದುಕೊಂಡು ಕಳೆದು ಹೋಗಿರುವ ಯಾವುದೇ ಮಾತಿನ ಚಿಂತನೆ ಮಾಡಬಾರದು. ಮನಸಾ-ವಾಚಾ-ಕರ್ಮಣಾ ಯಾವುದೇ ಕೆಟ್ಟ ಕರ್ಮ ಆಗಬಾರದು. ಇದನ್ನು ಗಮನದಲ್ಲಿ ಇಟ್ಟುಕೊಂಡು ಡಬಲ್ ಅಹಿಂಸಕರಾಗಬೇಕಾಗಿದೆ.


ವರದಾನ:
ನಾಲ್ಕೂ ಸಬ್ಜೆಕ್ಟ್ ಗಳಲ್ಲಿ ತಂದೆಯ ಮನಸ್ಸಿಗೆ ಇಷ್ಟವಾಗುವಂತಹ ಮಾಕ್ರ್ಸ್ ತೆಗೆದುಕೊಳ್ಳುವಂತಹ ಹೃದಯ ಸಿಂಹಾಸನಾಧಿಕಾರಿ ಭವ.

ಯಾವ ಮಕ್ಕಳು ನಾಲ್ಕೂ ಸಬ್ಜೆಕ್ಟ್ ಗಳಲ್ಲಿ ಒಳ್ಳೆಯ ಮಾಕ್ರ್ಸ್ ಪಡೆಯುತ್ತಾರೆ, ಆದಿಯಿಂದ ಅಂತ್ಯದವರೆಗೆ ಒಳ್ಳೆಯ ನಂಬರ್ಸ್ ನಿಂದ ಪಾಸ್ ಆಗುತ್ತಾರೆ ಅವರನ್ನೇ ಪಾಸ್ ವಿತ್ ಹಾನರ್ ಎಂದು ಕರೆಯಲಾಗುವುದು. ಮಧ್ಯ-ಮಧ್ಯದಲ್ಲಿ ಮಾಕ್ರ್ಸ್ ಕಡಿಮೆಯಾಯಿತು ಅದನ್ನು ಅಡ್ಜೆಸ್ಟ್ ಮಾಡಿದೆ, ಹೀಗಲ್ಲಾ, ಆದರೆ ಎಲ್ಲಾ ಸಬ್ಜೆಕ್ಟ್ ನಲ್ಲಿ ತಂದೆಯ ಮನಸ್ಸಿಗೆ ಒಪ್ಪುವಂತಿರುವವರೇ ಹೃದಯ ಸಿಂಹಾಸನಾಧಿಕಾರಿಗಳಾಗುತ್ತಾರೆ. ಜೊತೆ-ಜೊತೆಗೆ ಬ್ರಾಹ್ಮಣರ ಸಂಸಾರದಲ್ಲಿ ಸರ್ವರಿಗೂ ಪ್ರಿಯ, ಸರ್ವರ ಸಹಯೋಗಿ, ಸರ್ವರಿಂದ ಸಮ್ಮಾನ ಪ್ರಾಪ್ತಿ ಮಾಡಿಕೊಳ್ಳುವಂತಹ ಹೃದಯ-ಸಿಂಹಾಸನಾಧಿಕಾರಿಯಿಂದ ರಾಜ್ಯ ಸಿಂಹಾಸನಾಧಿಕಾರಿಗಳಾಗುತ್ತಾರೆ.

ಸ್ಲೋಗನ್:
ಪ್ರಿಯತಮೆಯರು ಅವರೇ ಆಗಿದ್ದಾರೆ ಯಾರ ಹೃದಯದಲ್ಲಿ ಸದಾ ಇದೇ ನಿರಂತರವಾಗಿ ಗೀತೆ ನುಡಿಯುತ್ತಿರುತ್ತೆ, ನಾನು ಬಾಬಾರವರ ಮಗು ಆಗಿದ್ದೇನೆ, ಬಾಬಾ ನಮ್ಮವರಾಗಿದ್ದಾರೆ.