11.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಬ್ರಾಹ್ಮಣರಾಗಿ ತಂದೆಯ ಹೆಸರಿಗೆ ಕಳಂಕವಾಗುವ ಅಂತಹ ಯಾವುದೇ ಚಲನೆಯಲ್ಲಿ ನಡೆಯಬಾರದು, ಕಾರ್ಯ ವ್ಯವಹಾರವನ್ನು ಮಾಡುತ್ತಾ ಕೇವಲ ಶ್ರೀಮತದಂತೆ ನಡೆಯುತ್ತಾ ಇರಬೇಕು

ಪ್ರಶ್ನೆ:
ಈಶ್ವರೀಯ ವಿದ್ಯಾರ್ಥಿಯ ಬಾಯಿಂದ ಯಾವ ಒಂದು ಶಬ್ದವು ಬರಬಾರದು?

ಉತ್ತರ:
ನಮಗೆ ವಿದ್ಯೆಯನ್ನು ಓದಲು ಸಮಯವಿಲ್ಲ ಎನ್ನುವ ಶಬ್ದವು ನಿಮ್ಮ ಬಾಯಿಂದ ಬರಬಾರದು. ತಂದೆಯು ಮಕ್ಕಳ ಮೇಲೆ ಯಾವುದೇ ಹೊರೆ (ಸಮಸ್ಯೆ) ಹಾಕುವುದಿಲ್ಲ, ಕೇವಲ ಬೆಳಗ್ಗೆ-ಬೆಳಗ್ಗೆ ಎದ್ದು ಒಂದು ಗಳಿಗೆ, ಅರ್ಧ ಗಳಿಗೆ ನನ್ನನ್ನು ನೆನಪು ಮಾಡಿ ಮತ್ತು ವಿದ್ಯೆಯನ್ನು ಓದಿ ಎಂದು ಹೇಳುತ್ತಾರೆ.

ಪ್ರಶ್ನೆ:
ಮನುಷ್ಯರ ಯೋಜನೆ ಏನಾಗಿದೆ ಮತ್ತು ತಂದೆಯ ಯೋಜನೆ ಏನಾಗಿದೆ?

ಉತ್ತರ:
ಎಲ್ಲರೂ ಸೇರಿ ಒಂದಾಗಬೇಕು ಎನ್ನುವ ಯೋಜನೆಯು ಮನುಷ್ಯರದಾಗಿದೆ. ಮನುಷ್ಯರು ಒಂದು ರೀತಿ ಬಯಸಿದರೆ ಅದು..... ಮತ್ತು ಅಸತ್ಯ ಖಂಡವನ್ನು ಸತ್ಯ ಖಂಡವನ್ನಾಗಿ ಮಾಡುವ ಯೋಜನೆ ತಂದೆಯದಾಗಿದೆ. ಆದ್ದರಿಂದ ಸತ್ಯ ಖಂಡದಲ್ಲಿ ಹೋಗುವುದಕ್ಕಾಗಿ ಅವಶ್ಯವಾಗಿ ಸತ್ಯವಾಗಿರಬೇಕು.

ಗೀತೆ:
ಇಂದಿನ ಮಾನವನಿಗೆ....

ಓಂ ಶಾಂತಿ.
ಮಕ್ಕಳೂ ಓಂ ಶಾಂತಿ ಹೇಳುತ್ತಾರೆ. ಆತ್ಮಗಳು ಈ ಶರೀರದ ಮುಖಾಂತರ ಓಂ ಶಾಂತಿ ಎಂದು ಹೇಳುತ್ತಾರೆ ಅಂದರೆ ನಾನು ಆತ್ಮನ ಸ್ವಧರ್ಮ ಶಾಂತಿಯಾಗಿದೆ, ಇದನ್ನು ಮರೆಯಬಾರದು. ತಂದೆಯೂ ಸಹ ಬಂದು ಓಂ ಶಾಂತಿ ಎಂದು ಹೇಳುತ್ತಾರೆ. ಇಲ್ಲಿ ನೀವು ಮಕ್ಕಳೂ ಸಹ ಶಾಂತವಾಗಿರುತ್ತೀರಿ, ತಂದೆಯೂ ಸಹ ಅಲ್ಲಿಯೇ ಇರುತ್ತಾರೆ. ಅದು ಶಾಂತಿಧಾಮ ಹಾಗೂ ನಮ್ಮ ಮನೆಯಾಗಿದೆ. ಪ್ರಪಂಚದಲ್ಲಿ ಯಾವುದೇ ವಿದ್ವಾಂಸ, ಪಂಡಿತರು ಈ ಮಾತುಗಳನ್ನು ಅರಿತುಕೊಂಡಿಲ್ಲ. ಅವರು ಆತ್ಮನೇ ಪರಮಾತ್ಮ ಎಂದು ಹೇಳಿ ಬಿಡುತ್ತಾರೆ. ಆತ್ಮ ಎಂದರೇನು ಎನ್ನುವ ಜ್ಞಾನವು ಯಾರಲ್ಲಿಯೂ ಇಲ್ಲದಂತಾಗಿದೆ. ಇಷ್ಟು ಕೋಟ್ಯಾಂತರ ಆತ್ಮಗಳು ನಕ್ಷತ್ರಗಳಂತೆ ಇದ್ದಾರೆ. ಪ್ರತಿಯೊಂದು ಆತ್ಮನಲ್ಲಿ ತಮ್ಮ-ತಮ್ಮ ಅವಿನಾಶಿ ಪಾತ್ರವು ನೊಂದಣಿಯಾಗಿದೆ, ಅದು ಸಮಯದಲ್ಲಿ ಇಮರ್ಜ್ ಆಗುತ್ತದೆ. ಇದನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ತಂದೆಯೂ ಸಹ ಜೀವಾತ್ಮನಾಗದೆ ಜೀವಾತ್ಮರಿಗೆ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನನಗೂ ಸಹ ಅವಶ್ಯವಾಗಿ ಶರೀರ ಬೇಕಲ್ಲವೇ. ಯಾವಾಗ ರಚನೆಯನ್ನು ರಚಿಸಲಾಗುತ್ತದೆಯೋ ಆಗ ಶರೀರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಜಾಪಿತ ಬ್ರಹ್ಮಾರವರ ಮುಖಾಂತರ ರಚನೆಯನ್ನು ರಚಿಸುತ್ತಾರೆ, ರಚಯಿತನಂತೂ ನಿರಾಕಾರ ಶಿವನೇ ಆಗಿದ್ದಾರೆ. ಈಗ ಪ್ರಜಾಪಿತ ಬ್ರಹ್ಮಾರವರ ಮುಖಾಂತರ ಬ್ರಹ್ಮಾಕುಮಾರ-ಕುಮಾರಿಯರಿಗೇ ತಿಳಿಸುತ್ತಿದ್ದಾರೆ, ಶೂದ್ರರಿಗಲ್ಲ. ಈಗ ನಮ್ಮದು ಬ್ರಾಹ್ಮಣ ವರ್ಣವಾಗಿದೆ. ಮೊದಲು ನಾವು ಶೂದ್ರವರ್ಣದಲ್ಲಿ ಇದ್ದೆವು, ಅದಕ್ಕಿಂತ ಮೊದಲು ವೈಶ್ಯವರ್ಣದಲ್ಲಿದ್ದೆವು. ಪ್ರಪಂಚವು ಈ ಮಾತುಗಳನ್ನು ಅರಿತುಕೊಂಡಿಲ್ಲ. ಅವಶ್ಯವಾಗಿ ಬ್ರಾಹ್ಮಣರೇ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತಾರೆ........ ಬ್ರಾಹ್ಮಣರದು ಶಿಖೆಯಾಗಿದೆ. ಮೊದಲು ಬ್ರಾಹ್ಮಣರು ಹಸುವಿನ ಬಾಲದಷ್ಟು ಶಿಖೆ(ಜುಟ್ಟು)ಯನ್ನು ಇಟ್ಟುಕೊಳ್ಳುತ್ತಿದ್ದರು. ನೀವು ಬಾಜೋಲಿ ಆಟವನ್ನು ಆಡುತ್ತೀರಿ ಆದರೆ ನಾನು ಆಡುವುದಿಲ್ಲ. ನೀವೇ ಈ ವರ್ಣಗಳ ಚಕ್ರದಲ್ಲಿ ಬರುತ್ತೀರಿ. ಎಷ್ಟು ಸಹಜ ಮಾತುಗಳಾಗಿವೆ. ನಿಮ್ಮ ಹೆಸರು ಸ್ವದರ್ಶನ ಚಕ್ರಧಾರಿ ಎಂದಾಗಿದೆ. ಉಳಿದ ಶಾಸ್ತ್ರಗಳಲ್ಲಂತು ಏನೇನು ಮಾತುಗಳನ್ನು ಬರೆದು ಬಿಟ್ಟಿದ್ದಾರೆ! ನಾವು ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿ ಆಗುತ್ತೇವೆ ಎನ್ನುವುದು ನಿಮಗೆ ತಿಳಿದಿದೆ ಆದರೆ ಈ ನಾಲ್ಕು ಅಲಂಕಾರಗಳ ಚಿಹ್ನೆಗಳನ್ನು ದೇವತೆಗಳಿಗೆ ಕೊಟ್ಟಿದ್ದಾರೆ ಏಕೆಂದರೆ ಅವರು ಸಂಪೂರ್ಣರಾಗಿದ್ದಾರೆ ಆದ್ದರಿಂದ ಈ ಅಲಂಕಾರಗಳು ಅವರಿಗೇ ಶೋಭಿಸುತ್ತದೆ. ಈ ಜ್ಞಾನವನ್ನು ಧಾರಣೆ ಮಾಡುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಈಗ ಸಮ್ಮುಖದಲ್ಲಿ ಕುಳಿತಿದ್ದೀರಿ. ಇದು ರುದ್ರ ಜ್ಞಾನ ಯಜ್ಞವಾಗಿದೆ, ಈ ಯಜ್ಞದಲ್ಲಿ ಬ್ರಾಹ್ಮಣರು ಅವಶ್ಯವಾಗಿ ಇರಬೇಕಾಗಿದೆ. ಶೂದ್ರರು ಯಜ್ಞವನ್ನು ರಚಿಸುವುದಿಲ್ಲ. ರುದ್ರ ಶಿವ ತಂದೆಯು ಯಜ್ಞವನ್ನು ರಚಿಸಿರುವುದರಿಂದ ಇದರಲ್ಲಿ ಅವಶ್ಯವಾಗಿ ಬ್ರಾಹ್ಮಣರಿರಬೇಕಾಗಿದೆ. ನಾನು ಬ್ರಾಹ್ಮಣ ಮಕ್ಕಳೊಂದಿಗೇ ಮಾತನಾಡುತ್ತೇನೆಂದು ತಂದೆಯು ಹೇಳುತ್ತಾರೆ. ಎಷ್ಟು ದೊಡ್ಡ ಯಜ್ಞವಾಗಿದೆ, ಯಾವಾಗ ತಂದೆಯು ಬರುತ್ತಾರೆ, ಬರುತ್ತಿದ್ದಂತೆಯೇ ಯಜ್ಞವನ್ನು ರಚಿಸುತ್ತಾರೆ. ಇದಕ್ಕೆ ಅಶ್ವಮೇಧ ಅರ್ಥಾತ್ ಸ್ವರಾಜ್ಯ ಸ್ಥಾಪನೆ ಮಾಡುವಾರ್ಥವಾಗಿ ರಚಿಸುವ ಯಜ್ಞವೆಂದು ಹೇಳಲಾಗುತ್ತದೆ. ಎಲ್ಲಿ ರಚಿಸಲಾಗುತ್ತದೆ? ಭಾರತದಲ್ಲಿ. ಸತ್ಯಯುಗೀ ಸ್ವರಾಜ್ಯವನ್ನು ರಚಿಸುತ್ತಾರೆ, ಇದನ್ನು ಶಿವ ಜ್ಞಾನ ಯಜ್ಞ ಎಂದಾದರೂ ಹೇಳಿ ಅಥವಾ ರುದ್ರ ಜ್ಞಾನ ಯಜ್ಞವೆಂದಾದರೂ ಹೇಳಿ, ಸೋಮನಾಥ ಮಂದಿರವೂ ಸಹ ತಂದೆಯದಾಗಿದೆ. ಒಬ್ಬರದೇ ಅನೇಕ ಹೆಸರುಗಳಿವೆ. ಇದನ್ನು ಯಜ್ಞವೆಂದು ಹೇಳಲಾಗುತ್ತದೆ, ಪಾಠಶಾಲೆ ಎಂದು ಹೇಳುವುದಿಲ್ಲ. ತಂದೆಯು ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ. ಯಜ್ಞವನ್ನು ಪಾಠಶಾಲೆ ಎಂದು ಹೇಳುವುದಿಲ್ಲ. ಬ್ರಾಹ್ಮಣರ ಮೂಲಕ ಯಜ್ಞವು ರಚಿಸಲ್ಪಡುತ್ತದೆ. ಬ್ರಾಹ್ಮಣರಿಗೆ ದಕ್ಷಿಣೆ ಕೊಡುವ ದಾತಾ ಭೋಲಾನಾಥನಾಗಿದ್ದಾರೆ. ಅವರನ್ನು ಶಿವ ಭೋಲಾನಾಥ ಭಂಡಾರಿ ಎಂದೇ ಹೇಳುತ್ತಾರೆ. ಈಗ ನೀವು ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ. ಬಾಪ್ದಾದಾರವರು ಮಕ್ಕಳನ್ನು ದತ್ತು ಮಾಡಿಕೊಂಡಿದ್ದಾರೆ. ಇವರು (ಬ್ರಹ್ಮಾ) ದೊಡ್ಡ ಮಮ್ಮಾ ಆಗಿದ್ದಾರೆ. ಆದರೆ ಮಾತೆಯರ ಸಂಭಾಲನೆ ಮಾಡುವುದಕ್ಕಾಗಿ ಮಮ್ಮಾರವರನ್ನು ನಿಮಿತ್ತ ಮಾಡಲಾಗುತ್ತದೆ, ಇವರು ಎಲ್ಲರಿಗಿಂತ ತೀವ್ರವಾಗಿ ಹೋಗುತ್ತಾರೆ. ಇವರ ಪಾತ್ರವು ಮುಖ್ಯವಾಗಿದೆ. ಇವರು ಜ್ಞಾನ-ಜ್ಞಾನೇಶ್ವರಿ ಜಗದಂಬಾ ಆಗಿದ್ದಾರೆ. ಮಹಾಲಕ್ಷ್ಮಿಯನ್ನು ಜ್ಞಾನ-ಜ್ಞಾನೇಶ್ವರಿ ಎಂದು ಹೇಳುವುದಿಲ್ಲ. ಲಕ್ಷ್ಮಿ ಎಂದರೆ ಧನದೇವಿ ಆದ್ದರಿಂದಲೇ ಇವರ ಮನೆಯಲ್ಲಿ ಲಕ್ಷ್ಮಿ ಇದೆ ಅರ್ಥಾತ್ ತುಂಬಾ ಸಂಪತ್ತು ಇದೆ ಎಂದು ಹೇಳುತ್ತಾರೆ. ಲಕ್ಷ್ಮಿಯಿಂದ ಸಂಪತ್ತನ್ನೇ ಕೇಳುತ್ತಾರೆ. 12 ತಿಂಗಳು ಪೂರ್ಣವಾಯಿತೆಂದರೆ ಲಕ್ಷ್ಮಿಯನ್ನು ಆಹ್ವಾನ ಮಾಡುತ್ತಾರೆ. ಜಗದಂಬಾ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಜಗದಂಬಾ ಪ್ರಜಾಪಿತ ಬ್ರಹ್ಮಾರವರ ಮಗಳಾಗಿದ್ದಾರೆ, ಇವರ ಹೆಸರು ಸರಸ್ವತಿ. ಒಂದೇ ಹೆಸರು ಸಾಕು. ಮಮ್ಮಾ ಇದ್ದಾರೆಂದರೆ ಮಕ್ಕಳೂ ಇದ್ದಾರೆ. ನೀವು ಶಿವಬಾಬಾರವರ ಮುಖಾಂತರ ಜ್ಞಾನವನ್ನು ಕೇಳುತ್ತಿದ್ದೀರಿ. ಇವರನ್ನು (ಬ್ರಹ್ಮಾ) ತಂದೆಯು ಬಂದು ದತ್ತು ಮಾಡಿಕೊಂಡಿದ್ದಾರೆ, ಅವರಿಗೆ ಬ್ರಹ್ಮನೆಂದು ಹೆಸರು ಇಟ್ಟಿದ್ದಾರೆ. ತಂದೆಯು ನಾನು ಪತಿತ ಶರೀರದಲ್ಲಿ ಬರುತ್ತೇನೆಂದು ಹೇಳುತ್ತಾರೆ. ಶಾಸ್ತ್ರಗಳಲ್ಲಿಯೂ ಸಹ ಈ ಮಾತುಗಳಿಲ್ಲ. ಹೊಸ ಪ್ರಪಂಚಕ್ಕಾಗಿ ನಾವು ಪುರುಷಾರ್ಥ ಮಾಡುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆ. ಶೂದ್ರರಾಗಿದ್ದಾಗ ಮುಳ್ಳುಗಳಾಗಿದ್ದೆವು, ಈಗ ಬ್ರಾಹ್ಮಣರು ಹೂವಾಗುತ್ತಿದ್ದೇವೆ. ಬ್ರಾಹ್ಮಣರನ್ನು ಹೂಗಳನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ಅವರು ಭಗವಂತನಾಗಿದ್ದಾರೆ. ನೀವು ನಂಬರ್ವಾರ್ ಮಾಲಿಗಳಾಗಿದ್ದೀರಿ. ಯಾರು ಒಳ್ಳೊಳ್ಳೆಯ ಮಾಲಿಗಳಾಗಿದ್ದಾರೆ, ಅವರು ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ. ಸಸಿಯನ್ನು ನೆಡುತ್ತಾ ಇರುತ್ತಾರೆ. ನಂಬರ್ವಾರ್ ಇದ್ದಾರೆ, ಇದನ್ನೇ ಆಧ್ಯಾತ್ಮಿಕಜ್ಞಾನವೆಂದು ಹೇಳಲಾಗುತ್ತದೆ. ಈಶ್ವರನು ಜ್ಞಾನವನ್ನು ಕೊಡುವವರಾಗಿದ್ದಾರೆ. ಎಲ್ಲಾ ಶಾಸ್ತ್ರ ಮುಂತಾದವನ್ನಂತು ಮನುಷ್ಯರು ತಿಳಿಸುತ್ತಾರೆ ಆದರೆ ಈ ಆತ್ಮಿಕ ಜ್ಞಾನವನ್ನು ಪರಮಾತ್ಮನು ಆತ್ಮಗಳಿಗೆ ಕೊಡುತ್ತಾರೆ. ಮತ್ತ್ಯಾರಿಗೂ ರಚಯಿತ ಮತ್ತು ರಚನೆಯ ಜ್ಞಾನವು ಸಿಗುವುದೇ ಇಲ್ಲ. ಅಸತ್ಯವನ್ನೇ ಹೇಳುತ್ತಿರುತ್ತಾರೆ. ಇದು ಅಸತ್ಯ ಪ್ರಪಂಚವೇ ಆಗಿದೆ. ಎಲ್ಲಾ ಅಸತ್ಯವೇ ಅಸತ್ಯವಿದೆ. ಮೊದಲು ನಕಲಿ ರತ್ನಗಳೇ ಇರಲಿಲ್ಲ, ಈಗಂತು ಎಷ್ಟೊಂದು ನಕಲಿ ರತ್ನಗಳಾಗಿ ಬಿಟ್ಟಿವೆ. ಶುದ್ಧರತ್ನಗಳನ್ನು ಇಟ್ಟುಕೊಳ್ಳಲು ಬಿಡುವುದಿಲ್ಲ. ಈ ಅಸತ್ಯ ಖಂಡದಲ್ಲಿ ರಾವಣ ರಾಜ್ಯವಿದೆ, ಸತ್ಯ ಖಂಡದಲ್ಲಿ ಆತ್ಮ ರಾಮನು ಸ್ಥಾಪನೆ ಮಾಡಿರುವಂತಹ ರಾಜ್ಯವಿರುತ್ತದೆ. ಇದು ಶಿವಬಾಬಾರವರು ಸ್ಥಾಪನೆ ಮಾಡಿರುವಂತಹ ಯಜ್ಞವಾಗಿದೆ, ಪಾಠಶಾಲೆಯೂ ಆಗಿದೆ, ಯಜ್ಞವೂ ಆಗಿದೆ, ಮನೆಯೂ ಆಗಿದೆ. ಈಗ ಪಾರಲೌಕಿಕ ತಂದೆ ಮತ್ತು ಪ್ರಜಾಪಿತ ಬ್ರಹ್ಮಾರವರ ಸಮ್ಮುಖದಲ್ಲಿ ಕುಳಿತಿದ್ದೇವೆ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ಎಲ್ಲಿಯ ತನಕ ಬ್ರಾಹ್ಮಣರಾಗುವುದಿಲ್ಲವೋ ಅಲ್ಲಿಯ ತನಕ ಆಸ್ತಿಯು ಸಿಗಲು ಹೇಗೆ ಸಾಧ್ಯ! ಯಜ್ಞವನ್ನು ಸಂಭಾಲನೆ ಮಾಡುವವರು ಸತ್ಯ ಬ್ರಾಹ್ಮಣನಾಗಿರಬೇಕು. ವಿಕಾರಗಳಲ್ಲಿ ಹೋಗುವವರನ್ನು ಬ್ರಾಹ್ಮಣರೆಂದು ಹೇಳುವುದಿಲ್ಲ. ಒಂದು ಕಾಲು ರಾವಣನ ದೋಣಿಯಲ್ಲಿ, ಇನ್ನೊಂದು ಕಾಲು ರಾಮನ ದೋಣಿಯಲ್ಲಿದ್ದರೆ ಅವರ ಗತಿಯೇನಾಗುತ್ತದೆ? ಜಾರಿ ಹೋಗುತ್ತಾರೆ. ಇಂತಹ ನಡವಳಿಕೆಯಿಂದ ತಂದೆಯ ಹೆಸರಿಗೆ ಕಳಂಕ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮನ ಸಂತಾನರೆಂದು ಕರೆಸಿಕೊಳ್ಳುತ್ತಾರೆ ಆದರೆ ಅವರ ಕರ್ತವ್ಯವು ಶೂದ್ರರದಾಗಿರುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ವ್ಯಾಪಾರ-ವ್ಯವಹಾರವನ್ನು ಭಲೆ ಮಾಡಿ ಆದರೆ ಶ್ರೀಮತದನುಸಾರ ನಡೆಯುವುದರಿಂದ ಜವಾಬ್ದಾರಿ ತಂದೆಯ ಮೇಲಿರುತ್ತದೆ.

ನೀವು ಇಲ್ಲಿ ಈಶ್ವರೀಯ ಮತವನ್ನು ಪಡೆಯುವುದಕ್ಕಾಗಿಯೇ ಬಂದಿದ್ದೀರಿ. ಅದು ಆಸುರೀ ಮತವಾಗಿದೆ. ನೀವು ಶ್ರೇಷ್ಠರಾಗಲು ಶ್ರೀಮತವನ್ನು ತೆಗೆದುಕೊಳ್ಳುತ್ತೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಶ್ರೇಷ್ಠ ಮತವನ್ನೇ ಕೊಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಮನುಷ್ಯರಿಂದ ದೇವತೆಗಳಾಗುವಂತಹ ಶ್ರೇಷ್ಠ ಮತವು ನಮಗೆ ಸಿಗುತ್ತಿದೆ. ನಾವಂತು ಸೂರ್ಯವಂಶಿ ರಾಜರಾಗುತ್ತೇವೆ ಎಂತಲೂ ಹೇಳುತ್ತಾರೆ. ಇದು ರಾಜಸ್ವ, ಪ್ರಜಸ್ವವಲ್ಲ. ನೀವು ರಾಜಾ-ರಾಣಿಯಾಗುತ್ತೀರೆಂದರೆ ಅವಶ್ಯವಾಗಿ ಪ್ರಜೆಗಳೂ ತಯಾರಾಗಬೇಕಾಗಿದೆ. ಈ ಮಮ್ಮಾ-ಬಾಬಾ ಹೇಗೆ ಪುರುಷಾರ್ಥದಿಂದ ಆಗುತ್ತಾರೆಯೋ, ಹಾಗೆಯೇ ನೀವು ಮಕ್ಕಳೂ ಆಗಬೇಕಾಗಿದೆ. ನೀವು ಮಕ್ಕಳಿಗೂ ಸಹ ತುಂಬಾ ಖುಷಿ ಇರಬೇಕು ಏಕೆಂದರೆ ನಾವು ಬ್ರಹ್ಮಾಕುಮಾರ-ಕುಮಾರಿಯರು ಶಿವಬಾಬಾರವರ ಮೊಮ್ಮಕ್ಕಳಾಗಿದ್ದೇವೆ. ಶಿವನನ್ನು ಪ್ರಜಾಪಿತನೆಂದು ಹೇಳಲಾಗುವುದಿಲ್ಲ. ಏಕೆಂದರೆ ಅವರು ರಚಯಿತನಾಗಿದ್ದಾರೆ. ದೇವೀ-ದೇವತೆಗಳು ಸ್ವರ್ಗದಲ್ಲಿ ಇರುವವರಾಗಿದ್ದಾರೆ. ತಂದೆಯು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ ಎಂದಾಗ ನಿಮ್ಮ ಕಾರ್ಯವು ಕಲ್ಪ ವೃಕ್ಷದ ಸಮಾನವಾಗುತ್ತದೆ, ಪುನರಾವರ್ತನೆ ಆಗುತ್ತದೆ. ನಿಮ್ಮ ಆತ್ಮವು ಕಪ್ಪಾಗಿ ಬಿಟ್ಟಿದೆ, ಅದನ್ನು ತಂದೆ ಪವಿತ್ರ ಸುಂದರನನ್ನಾಗಿ ಮಾಡುತ್ತಾರೆ. ಯಾವಾಗ ನೀವು ಸಂಪೂರ್ಣ ಪವಿತ್ರರಾಗುತ್ತೀರೆಂದರೆ ನಿಮಗಾಗಿ ಶರೀರವೂ ಇರುವುದಿಲ್ಲ ಆದ್ದರಿಂದಲೇ ಈ ಬಿದುರಿನ ಕಾಡಿಗೆ ಬೆಂಕಿ ಬೀಳುವುದಿದೆ, ಅದರಲ್ಲಿ ಎಲ್ಲರ ವಿನಾಶವಾಗಿ ಬಿಡುತ್ತದೆ. ಇವು ಬೇಹದ್ದಿನ ಮಾತುಗಳಾಗಿವೆ. ಇದು ಬೇಹದ್ದಿನ ದ್ವೀಪವಾಗಿದೆ, ಅದು ಹದ್ದಿನದ್ದಾಗಿದೆ. ಎಷ್ಟು ಭಾಷೆಗಳಿದೆಯೋ, ಅಷ್ಟು ಹೆಸರುಗಳನ್ನು ಇಟ್ಟು ಬಿಟ್ಟಿದ್ದಾರೆ. ಅನೇಕ ದ್ವೀಪಗಳಿದೆ ಆದರೆ ಈ ಇಡೀ ಪ್ರಪಂಚವೇ ದ್ವೀಪವಾಗಿದೆ. ಪೂರ್ತಿಸೃಷ್ಟಿಯಲ್ಲಿ ರಾವಣ ರಾಜ್ಯವಿದೆ. ಗೀತೆಯಲ್ಲಿಯೂ ಸಹ ಕೇಳಿದಿರಿ ಇಂದಿನ ಪರಿಸ್ಥಿತಿಯು ಏನಾಗಿದೆ ಎನ್ನುವುದು. ಸತ್ಯಯುಗದಲ್ಲಿ ಒಬ್ಬರು ಇನ್ನೊಬ್ಬರನ್ನು ಸಾಯಿಸುವುದಿಲ್ಲ. ಅಲ್ಲಂತು ರಾಮ ರಾಜ, ರಾಮ ಪ್ರಜೆ......... ಎಂದು ಹೇಳುತ್ತಾರೆ, ಅಲ್ಲಿ ದುಃಖದ ಮಾತೇ ಇರುವುದಿಲ್ಲ. ಯಾರಿಗಾದರೂ ದುಃಖವನ್ನು ಕೊಡುವುದೂ ಪಾಪವಾಗಿದೆ ಅಂದಾಗ ಸತ್ಯಯುಗದಲ್ಲಿ ಈ ರಾವಣ ಹನುಮಂತ ಮುಂತಾದವರು ಎಲ್ಲಿಂದ ಬರುತ್ತಾರೆ? ನೀವು ಈ ಮೊದಲ ಮುಖ್ಯ ಮಾತನ್ನು ತಿಳಿಸಿಕೊಡಿ - ಪರಮಪಿತ ಪರಮಾತ್ಮನೆಂದು ಹೇಳುತ್ತೀರೆಂದರೆ ಅಂತಹ ತಂದೆಯು ಸರ್ವವ್ಯಾಪಿ ಆಗಲು ಹೇಗೆ ಸಾಧ್ಯ! ಒಂದುವೇಳೆ ಸರ್ವವ್ಯಾಪಿಯಾದರೆ ವಿಶ್ವ ಪಿತೃತವಾಗಿ ಬಿಡುತ್ತದೆ. ಎಲ್ಲರೂ ತಂದೆಯರಾಗಲು ಸಾಧ್ಯವಿಲ್ಲ.

ಈಗ ನೀವು ಮಕ್ಕಳಿಗೆ ಇದನ್ನು ತಿಳಿಸಲಾಗಿದೆ - ಅರ್ಧಕಲ್ಪ ನೀವು ಅಸತ್ಯ ಸಂಪಾದನೆಯನ್ನು ಮಾಡಿದ್ದೀರಿ. ಈಗ ಸತ್ಯಖಂಡಕ್ಕೋಸ್ಕರ ಸತ್ಯ ಸಂಪಾದನೆ ಮಾಡಬೇಕಾಗಿದೆ. ಮನುಷ್ಯರೂ ಸಹ ಶಾಸ್ತ್ರಗಳನ್ನು ತಿಳಿಸುವುದೇ ಸಂಪಾದನೆಗೋಸ್ಕರ. ಶಿವತಂದೆಯಂತೂ ಈ ಶಾಸ್ತ್ರ ಮುಂತಾದವುಗಳನ್ನು ಓದಿಲ್ಲ. ಅವರು ಜ್ಞಾನ ಪೂರ್ಣ, ಜ್ಞಾನಸಾಗರನಾಗಿದ್ದಾರೆ. ಅವರು ಸತ್ಯ, ಚೈತನ್ಯನಾಗಿದ್ದಾರೆ. ಈಗ ನೀವು ಮಕ್ಕಳು ಅರಿತುಕೊಂಡಿದ್ದೀರಿ - ತಂದೆಯಿಂದ ನಾವು ಸತ್ಯ ಖಂಡಕ್ಕೋಸ್ಕರ ಸತ್ಯ ಸಂಪಾದನೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಸುಳ್ಳು ಖಂಡವಂತೂ ವಿನಾಶವಾಗುತ್ತದೆ. ದೇಹ ಸಹಿತ ಇದೆಲ್ಲವೂ ವಿನಾಶವಾಗುವುದಿದೆ. ಹೇಗೆ ಯುದ್ಧವಾಗುತ್ತದೆ ಎನ್ನುವುದನ್ನು ನೀವು ನೋಡುತ್ತೀರಿ. ಮನುಷ್ಯರು ಎಲ್ಲರೂ ಸೇರಿ ಒಂದಾಗಬೇಕೆಂದು ತಿಳಿಯುತ್ತಾರೆ, ಆದರೆ ಒಡಕುಂಟಾಗುತ್ತಾ ಹೋಗುತ್ತದೆ. ಮನುಷ್ಯರು ಇಚ್ಛಿಸುವುದು ಒಂದಾದರೆ, ತಂದೆಯ ಉಪಾಯವು ಇನ್ನೊಂದಾಗಿದೆ. ತಂದೆಯ ಉಪಾಯವು ಎಲ್ಲದರ ವಿನಾಶಕ್ಕೋಸ್ಕರವಾಗಿದೆ ಎಂದಾಗ ಈಶ್ವರನ ಉಪಾಯವು ಏನಾಗಿದೆ? ಅದನ್ನು ನೀವು ಮಕ್ಕಳೇ ಈಗ ಅರಿತುಕೊಂಡಿದ್ದೀರಿ. ತಂದೆಯು ಬರುವುದೇ ಸುಳ್ಳು ಖಂಡವನ್ನು ಸತ್ಯ ಖಂಡವನ್ನಾಗಿ ಮಾಡಲು, ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಸತ್ಯ ತಂದೆಯ ಮುಖಾಂತರ ನೀವು ಸತ್ಯವಂತರಾಗುತ್ತೀರಿ ಮತ್ತು ರಾವಣನಿಂದ ಅಸತ್ಯವಂತರಾಗುತ್ತೀರಿ. ತಂದೆಯೇ ಸತ್ಯ ಜ್ಞಾನವನ್ನು ಕೊಡುತ್ತಾರೆ. ನೀವು ಬ್ರಾಹ್ಮಣರ ಕೈ ತುಂಬುತ್ತಾ ಹೋಗುತ್ತದೆ ಆದರೆ ಶೂದ್ರರ ಕೈ ಖಾಲಿಯಾಗಿರುತ್ತದೆ.

ನಾವೇ ದೇವೀ-ದೇವತೆಗಳಾಗುತ್ತೇವೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಈಗ ತಂದೆಯು ಕೇವಲ ಇಷ್ಟನ್ನೇ ಹೇಳುತ್ತಾರೆ - ಮಕ್ಕಳೇ ಗೃಹಸ್ಥ ವ್ಯವಹಾರದಲ್ಲಿ ಇದ್ದು ಕಮಲ ಪುಷ್ಪ ಸಮಾನರಾಗಿ ಮತ್ತು ನನ್ನನ್ನು ನೆನಪು ಮಾಡಿ. ನೆನಪು ಏಕೆ ಮರೆತು ಹೋಗಬೇಕು! ಯಾವ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಅವರನ್ನು ನೀವು ಮರೆತು ಬಿಡುತ್ತೀರಿ..... ಇದು ಹೊಸ ಮಾತಾಗಿದೆ, ಇದರಲ್ಲಿ ಆತ್ಮಾಭಿಮಾನಿಯಾಗಬೇಕಾಗುತ್ತದೆ. ಆತ್ಮನಂತು ಅವಿನಾಶಿಯಾಗಿದೆ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಈಗ ತಂದೆಯು ತಿಳಿಸುತ್ತಾರೆ, ಆತ್ಮಾಭಿಮಾನಿಗಳಾಗಿ ಏಕೆಂದರೆ ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ದೇಹದ ಬಾಣವನ್ನು ಬಿಡಿ. ಇದು 84 ಜನ್ಮಗಳ ಕೆಟ್ಟು ಹೋಗಿರುವ ಶರೀರವಾಗಿದೆ. ವಸ್ತ್ರವನ್ನು ಧರಿಸುತ್ತಾ-ಧರಿಸುತ್ತಾ ಹಳೆಯದಾಗುತ್ತದೆಯಲ್ಲವೇ ಹಾಗೆಯೇ ನೀವೂ ಸಹ ಈ ಹಳೆಯದಾಗಿರುವ ಶರೀರವನ್ನು ಬಿಡಬೇಕಾಗಿದೆ. ಈಗ ನೀವು ಕಾಮಚಿತೆಯಿಂದ ಇಳಿದು ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ. ಕೆಲವರು ವಿಕಾರಗಳನ್ನು ಬಿಟ್ಟು ಇರುವುದೇ ಇಲ್ಲ, ಇಂತಹವರೂ ಸಹ ಅನೇಕರಿದ್ದಾರೆ ಆದ್ದರಿಂದ ತಂದೆಯು ಹೇಳುತ್ತಾರೆ- ದ್ವಾಪರದಿಂದ ನೀವು ಈ ವಿಕಾರಗಳ ಕಾರಣವೇ ಮಹಾನ್ ರೋಗಿಗಳಾಗಿ ಬಿಟ್ಟಿದ್ದೀರಿ ಆದ್ದರಿಂದ ಈಗ ಈ ವಿಕಾರಗಳ ಮೇಲೆ ಜಯಿಸಿರಿ. ಕಾಮ ವಿಕಾರದಲ್ಲಿ ಹೋಗಬೇಡಿ. ಈ ಶರೀರವಂತು ಅಪವಿತ್ರ, ಪತಿತವಾಗಿದೆಯಲ್ಲವೇ! ಆದ್ದರಿಂದ ನೀವು ಪಾವನರಾಗಿ. ಇಲ್ಲಿ ಎಲ್ಲರೂ ವಿಕಾರದಿಂದ ಜನ್ಮವನ್ನು ಪಡೆಯುತ್ತಾರೆ. ಸತ್ಯಯುಗ-ತ್ರೇತಾದಲ್ಲಿ ಈ ವಿಕಾರವಿರುವುದೇ ಇಲ್ಲ. ಒಂದುವೇಳೆ ಅಲ್ಲಿಯೂ ಸಹ ಇದಿದ್ದರೆ ಅದನ್ನು ಸ್ವರ್ಗ, ಇದು ನರಕವೆಂದು ಏಕೆ ಹೇಳಬೇಕು! ತಂದೆಯು ಹೇಳುತ್ತಾರೆ- ಶಾಸ್ತ್ರಗಳಲ್ಲಿ ಯಾವುದೇ ಲಕ್ಷ್ಯವಿರುವುದಿಲ್ಲ, ಇಲ್ಲಿ ಲಕ್ಷ್ಯವಿದೆ. ನಾವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ ಆದ್ದರಿಂದ ನೀವು ಏನೆಲ್ಲಾ ಓದಿದ್ದೀರಿ ಅದನ್ನು ಮರೆತು ಬಿಡಬೇಕು. ಅದರಲ್ಲಿ ಯಾವುದೇ ಸಾರವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಏರುವ ಕಲೆಯು ಒಂದೇ ಬಾರಿ ಆಗುತ್ತದೆ ಮತ್ತೆ ಇಳಿಯುವ ಕಲೆಯಾಗುತ್ತದೆ. ಎಷ್ಟೇ ಯೋಚಿಸಬಹುದು, ಆದರೆ ಕೆಳಗೆ ಬರಲೇಬೇಕಾಗಿದೆ, ಪತಿತರಾಗಲೇಬೇಕಾಗಿದೆ. ಇದು ಛೀ-ಛೀ ಪ್ರಪಂಚವಾಗಿದೆ. ಇದೇ ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಮೊದಲು ಆದಿ ಸನಾತನ ಒಂದೇ ಧರ್ಮವಿತ್ತು, ಅದು ಈಗ ಇಲ್ಲ. ಪುನಃ ಆ ಧರ್ಮದ ಸ್ಥಾಪನೆಯಾಗುತ್ತದೆ. ತಂದೆಯು ಪುನಃ ಬ್ರಹ್ಮಾರವರ ಮುಖಾಂತರ ಬಂದು ಸ್ಥಾಪನೆ ಮಾಡುತ್ತಾರೆ. ನಾವು ಮತ್ತೆ ರಾಜ್ಯವನ್ನು ತೆಗೆದುಕೊಳ್ಳುತ್ತೇವೆ ಎಂದು ನೀವು ಹೇಳುತ್ತೀರಿ. ರಾಜ್ಯ ಪಡೆದ ನಂತರ ಈ ಜ್ಞಾನವು ಮರೆತು ಹೋಗುತ್ತದೆ. ಈ ಜ್ಞಾನವೂ ಪತಿತರಿಗೇ ಸಿಗುತ್ತದೆ- ಪಾವನರಾಗುವುದಕ್ಕಾಗಿ, ನಂತರ ಪಾವನಪ್ರಪಂಚದ ಜ್ಞಾನವು ಏತಕ್ಕಾಗಿ ಇರುತ್ತದೆ? ಯಾವಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಎಷ್ಟು ವರ್ಷಗಳಾಯಿತು ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಬಾಬಾ ನಾವು 5000 ವರ್ಷಗಳ ನಂತರ ಮತ್ತೆ ರಾಜ್ಯವನ್ನು ಪಡೆಯಲು ಬಂದಿದ್ದೇವೆ. ನಾವಾತ್ಮರು ತಂದೆಯ ಮಕ್ಕಳಾಗಿದ್ದೇವೆ. ಇದಕ್ಕೆ ಒಂದು ಉದಾಹರಣೆಯಿದೆ - ಒಬ್ಬ ಮನುಷ್ಯ ನಾನು ಕೋಣ ಆಗಿದ್ದೇನೆ ಎಂದು ಹೇಳಲು ತೊಡಗಿದ...... ಇದರಿಂದ ಇದೇ ನಿಶ್ಚಯವಾಗಿ ಬಿಟ್ಟಿತು. ನಾನು ಈ ಕಿಟಕಿಯಿಂದ ಹೇಗೆ ಹೊರಬರಲಿ..... ಎಂದು ಹೇಳತೊಡಗಿದ. ಇದು ನಿಮ್ಮ ಮಾತಾಗಿದೆ. ನಾವು ತಂದೆಯ ಮಕ್ಕಳಾಗಿದ್ದೇವೆ ಎನ್ನುವುದನ್ನು ನೀವು ನಿಶ್ಚಯ ಮಾಡುತ್ತೀರಿ. ನಾನು ಚತುರ್ಭುಜನಾಗಿದ್ದೇನೆ ಎಂದು ಹೇಳುವುದರಿಂದ ಆಗಲು ಸಾಧ್ಯವಿಲ್ಲ. ಆ ರೀತಿ ಮಾಡುವವರು ಅವಶ್ಯವಾಗಿ ಇರಬೇಕಾಗಿದೆ. ಇದು ನರನಿಂದ ನಾರಾಯಣರನ್ನಾಗಿ ಮಾಡುವ ಜ್ಞಾನವಾಗಿದೆ, ಯಾರು ಇದನ್ನು ಬಹಳ ಚೆನ್ನಾಗಿ ಧಾರಣೆ ಮಾಡುತ್ತಾರೆ ಮತ್ತು ಮಾಡಿಸುತ್ತಾರೆ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ನಮಗೆ ವಿದ್ಯೆಯನ್ನು ಓದಲು ಸಮಯವಿಲ್ಲವೆಂದು ಹೇಳುವುದಿಲ್ಲ. ಆಗದಿದ್ದರೆ ಮತ್ತೆ ಮನೆಗೆ ಹೋಗಿ ಕುಳಿತುಕೊಳ್ಳಿ. ವಿದ್ಯೆಯಿಲ್ಲದೆ ಆಸ್ತಿಯು ಸಿಗಲು ಸಾಧ್ಯವಿಲ್ಲ. ಈಶ್ವರೀಯ ವಿದ್ಯಾರ್ಥಿಗಳು ಸಮಯವಿಲ್ಲವೆಂದು ಹೇಳುತ್ತಾರೆ. ತಂದೆಯ ಮಕ್ಕಳಾಗಿ ಮತ್ತೆ ತಂದೆಗೆ ವಿಚ್ಚೇದನವನ್ನು ಕೊಡುತ್ತೀರೆಂದರೆ ನೀವು ಮಹಾಮೂರ್ಖರಾಗಿದ್ದೀರೆಂದು ತಂದೆಯು ತಿಳಿಸುತ್ತಾರೆ. ಒಂದು ಗಳಿಗೆ, ಅರ್ಧ ಗಳಿಗೆ ನೆನಪು ಮಾಡಿ... ನಿಮಗೆ ಸಮಯವಿಲ್ಲವೆ, ಒಳ್ಳೆಯದು- ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ. ತಂದೆಯು ಯಾವುದೇ ಹೊರೆಯನ್ನು ನಿಮ್ಮ ತಲೆಯ ಮೇಲೆ ಹೊರಿಸುವುದಿಲ್ಲ. ಕೇವಲ ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ ಮತ್ತೆ ಸ್ವದರ್ಶನಚಕ್ರವನ್ನು ತಿರುಗಿಸಿ. ಅನ್ಯರ ಕಲ್ಯಾಣ ಮಾಡದಿದ್ದರೆ ತಮ್ಮ ಕಲ್ಯಾಣ ಮಾಡಿಕೊಳ್ಳಿ. ದಯಾಹೃದಯಿಯಾಗಿ ಅನ್ಯರ ಕಲ್ಯಾಣ ಎಷ್ಟು ಮಾಡುತ್ತೀರಿ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಬಹಳ ಶ್ರೇಷ್ಠವಾದ ಸಂಪಾದನೆಯಾಗಿದೆ. ಯಾರಬಳಿ ತುಂಬಾ ಹಣವಿರುತ್ತದೆಯೋ ಅವರೇ ಓದಲು ಸಮಯವಿಲ್ಲವೆಂದು ಹೇಳುತ್ತಾರೆ. ಸಾಹುಕಾರರು ಸತ್ಯಯುಗದಲ್ಲಿ ಬಡವರಾಗಬೇಕಾಗಿದೆ ಮತ್ತು ಬಡವರು ಸಾಹುಕಾರರಾಗಬೇಕಾಗಿದೆ. ಎಲ್ಲರಗಿಂತ ಹೆಚ್ಚಿನದಾಗಿ ಮಾತೆಯರೇ ಅಳುತ್ತಾರೆ, ಅವರು ನಗಿಸುವವರಾಗಬೇಕು. ಈಗ ನೀವು ಜೀವಿಸಿದ್ದಂತೆಯೇ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಮಧುಬನದಲ್ಲಿ ಶಾಂತಿಯಿದೆಯೆಂದರೆ ಬಹಳ ಸಂಪಾದನೆ ಮಾಡಿಕೊಳ್ಳಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸತ್ಯ ಖಂಡಕ್ಕಾಗಿ ಸತ್ಯ ಸಂಪಾದನೆ ಮಾಡಿಕೊಳ್ಳಬೇಕಾಗಿದೆ, ಆತ್ಮಾಭಿಮಾನಿಯಾಗಿರಬೇಕಾಗಿದೆ. ಈ ಹಳೆಯದಾದ ಪಾದರಕ್ಷೆ (ಶರೀರ)ಯ ಅಭಿಮಾನವನ್ನು ಬಿಡಬೇಕಾಗಿದೆ.

2. ದಯಾಹೃದಯಿಯಾಗಿ ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡುತ್ತಾ, ಸ್ವದರ್ಶನಚಕ್ರವನ್ನು ತಿರುಗಿಸಬೇಕಾಗಿದೆ.

ವರದಾನ:
ಶುಭ ಭಾವನೆಯಿಂದ ವ್ಯರ್ಥವನ್ನು ಸಮರ್ಥದಲ್ಲಿ ಪರಿವರ್ತನೆ ಮಾಡುವಂತಹ ಪವಿತ್ರ ಹಂಸ ಭವ.

ಪವಿತ್ರ ಹಂಸವೆಂದು ಅವರಿಗೇ ಹೇಳಲಾಗುತ್ತದೆ - ಯಾರು ನಕಾರಾತ್ಮಕತೆಯನ್ನು ಬಿಟ್ಟು ಸಕಾರಾತ್ಮಕತೆಯನ್ನು ಧಾರಣೆ ಮಾಡುವರು. ನೋಡುತ್ತಿದ್ದರೂ ಕೇಳುತ್ತಿದ್ದರೂ, ನೋಡದಂತಿರುವುದು, ಕೇಳದಂತಿರುವುದು. ನಕಾರಾತ್ಮಕತೆ ಅಂದರೆ ವ್ಯರ್ಥ ಮಾತು, ವ್ಯರ್ಥ ಕರ್ಮವನ್ನು ಕೇಳಿಸಿಕೊಳ್ಳದೇ ಇರುವುದು, ಮಾಡದೇ ಇರುವುದು ಮತ್ತು ಅದರ ಬಗ್ಗೆ ಮಾತನಾಡದಿರುವುದು. ವ್ಯರ್ಥವನ್ನು ಸಮರ್ಥದಲ್ಲಿ ಪರಿವರ್ತನೆ ಮಾಡಿಬಿಡಬೇಕು, ಇದಕ್ಕಾಗಿ ಪ್ರತಿಯೊಬ್ಬ ಆತ್ಮನ ಬಗ್ಗೆ ಶುಭ ಭಾವನೆಯಿಡುವುದು. ಶುಭ ಭಾವನೆಯಿಂದ ಉಲ್ಟಾ ಮಾತುಗಳೂ ಸಹ ಸರಿಯಾಗಿ ಬಿಡುತ್ತದೆ. ಆದ್ದರಿಂದ ಯಾರೆಂತಹವರೇ ಆಗಿರಲಿ, ತಾವು ಶುಭ ಭಾವನೆಯನ್ನಿಡಿ. ಶುಭ ಭಾವನೆಯು ಕಲ್ಲನೂ ನೀರನ್ನಾಗಿಸಿ ಬಿಡುವುದು. ವ್ಯರ್ಥವು ಸಮರ್ಥದಲ್ಲಿ ಬದಲಾಗಿ ಬಿಡುವುದು.

ಸ್ಲೋಗನ್:
ಅತೀಂದ್ರಿಯ ಸುಖದ ಅನುಭೂತಿ ಮಾಡಬೇಕೆಂದರೆ ಶಾಂತ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗಿರಿ.