11.07.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಸದಾ ಒಂದೇ ಚಿಂತೆಯಲ್ಲಿ ಇರಿ - ನಾವು ಚೆನ್ನಾಗಿ ಓದಿ ನಮಗೆ ರಾಜತಿಲಕವನ್ನು ಇಟ್ಟುಕೊಳ್ಳಬೇಕಾಗಿದೆ, ವಿದ್ಯೆಯಿಂದಲೇ ರಾಜ್ಯಭಾಗ್ಯ ಸಿಗುತ್ತದೆ.

ಪ್ರಶ್ನೆ:
ಮಕ್ಕಳು ಯಾವ ಉಲ್ಲಾಸದಲ್ಲಿ ಇರಬೇಕಾಗಿದೆ? ಹೃದಯವಿಧೀರ್ಣರಾಗಬಾರದು - ಏಕೆ?

ಉತ್ತರ:
ಸದಾ ಇದೇ ಉಲ್ಲಾಸವಿರಲಿ- ನಾವು ಲಕ್ಷ್ಮೀ-ನಾರಾಯಣರ ಸಮಾನರಾಗಬೇಕಾಗಿದೆ, ಇದಕ್ಕಾಗಿ ಪುರುಷಾರ್ಥ ಮಾಡಬೇಕು. ಎಂದೂ ಹೃದಯವಿಧೀರ್ಣರಾಗಬಾರದು ಏಕೆಂದರೆ ಈ ವಿದ್ಯೆಯು ಬಹಳ ಸಹಜವಾಗಿದೆ. ಮನೆಯಲ್ಲಿದ್ದರೂ ಓದಬಹುದು, ಇದಕ್ಕೆ ಯಾವುದೇ ಶುಲ್ಕವಿಲ್ಲ ಆದರೆ ಸಾಹಸವು ಅವಶ್ಯವಾಗಿ ಬೇಕು.

ಗೀತೆ:
ನೀವೇ ಮಾತಾಪಿತನಾಗಿದ್ದೀರಿ......

ಓಂ ಶಾಂತಿ.
ಮಕ್ಕಳು ತಮ್ಮ ತಂದೆಯ ಮಹಿಮೆಯನ್ನು ಕೇಳಿದಿರಿ. ಮಹಿಮೆಯು ಒಬ್ಬ ತಂದೆಯದೇ ಆಗಿದೆ, ಮತ್ತ್ಯಾರ ಮಹಿಮೆಯನ್ನೂ ಗಾಯನ ಮಾಡುವುದಿಲ್ಲ, ವಾಸ್ತವದಲ್ಲಿ ಬ್ರಹ್ಮಾ-ವಿಷ್ಣು-ಶಂಕರನಿಗೂ ಯಾವುದೇ ಮಹಿಮೆಯಿಲ್ಲ. ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ, ಶಂಕರನ ಮೂಲಕ ವಿನಾಶ ಮಾಡಿಸುತ್ತಾರೆ, ವಿಷ್ಣುವಿನ ಮೂಲಕ ಪಾಲನೆ ಮಾಡಿಸುತ್ತಾರೆ. ಲಕ್ಷ್ಮೀ-ನಾರಾಯಣರನ್ನು ಈ ರೀತಿ ಯೋಗ್ಯರನ್ನಾಗಿ ಶಿವ ತಂದೆಯೇ ಮಾಡುತ್ತಾರೆ, ಅವರಿಗೇ ಮಹಿಮೆಯಿದೆ, ಅವರ ವಿನಃ ಮತ್ತ್ಯಾರ ಮಹಿಮೆಯನ್ನು ಹಾಡುವುದು! ಇವರನ್ನೂ ಸಹ ಈ ರೀತಿ ಮಾಡುವಂತಹ ಶಿಕ್ಷಕರು ಇಲ್ಲದೇ ಹೋಗಿದ್ದರೆ ಇವರೂ ಹೇಗೆ ಶ್ರೇಷ್ಠರಾಗುತ್ತಿದ್ದರು? ನಂತರದ ಮಹಿಮೆಯು ಸೂರ್ಯವಂಶಿ ಮನೆತನದವರಾಗಿದೆ, ಅವರು ರಾಜ್ಯಭಾರ ಮಾಡುತ್ತಾರೆ. ತಂದೆಯು ಸಂಗಮದಲ್ಲಿ ಬರದಿದ್ದರೆ ಇವರಿಗೂ(ಲಕ್ಷ್ಮೀ-ನಾರಾಯಣ) ರಾಜ್ಯಭಾಗ್ಯ ಸಿಗುತ್ತಿರಲಿಲ್ಲ. ಮತ್ತ್ಯಾರದೂ ಮಹಿಮೆಯಿಲ್ಲ. ವಿದೇಶದವರೂ ಮೊದಲಾದವರಿಗೂ ಸಹ ಮಹಿಮೆ ಮಾಡುವ ಅವಶ್ಯಕತೆಯಿಲ್ಲ. ಮಹಿಮೆಯಿರುವುದೇ ಒಬ್ಬ ತಂದೆಗೆ, ಮತ್ತ್ಯಾರೂ ವಾಸ್ತವದಲ್ಲಿ ಮಹಿಮಾ ಯೋಗ್ಯರಲ್ಲ. ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯಾಗಿದ್ದಾರೆ, ಅವರಿಂದಲೇ ಶ್ರೇಷ್ಠ ಪದವಿ ಸಿಗುತ್ತದೆ. ಅಂದಮೇಲೆ ಅವರನ್ನು ಚೆನ್ನಾಗಿ ನೆನಪು ಮಾಡಬೇಕಲ್ಲವೆ. ತಮ್ಮನ್ನು ರಾಜರನ್ನಾಗಿ ಮಾಡಿಕೊಳ್ಳಲು ತಾವೇ ಓದಬೇಕಾಗಿದೆ. ಹೇಗೆ ಬ್ಯಾರಿಸ್ಟರಿ ಓದುತ್ತಾರೆಂದರೆ ತಮ್ಮನ್ನು ವಿದ್ಯೆಯಿಂದ ಬ್ಯಾರಿಸ್ಟರ್ನ್ನಾಗಿ ಮಾಡಿಕೊಳ್ಳುತ್ತಾರಲ್ಲವೆ. ಶಿವ ತಂದೆಯು ನಮಗೆ ಓದಿಸುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ, ಯಾರು ಚೆನ್ನಾಗಿ ಓದುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ಓದದೇ ಇರುವವರು ಪದವಿ ಪಡೆಯಲು ಸಾಧ್ಯವಿಲ್ಲ. ವಿದ್ಯೆಗಾಗಿಯೇ ಶ್ರೀಮತ ಸಿಗುತ್ತದೆ. ಮೂಲ ಮಾತಾಗಿದೆ - ಪಾವನರಾಗುವುದು. ಪಾವನರಾಗುವುದಕ್ಕಾಗಿಯೇ ಈ ವಿದ್ಯೆಯಿದೆ. ನಿಮಗೆ ತಿಳಿದಿದೆ - ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನ, ಪತಿತರಾಗಿದ್ದಾರೆ. ಒಳ್ಳೆಯ ಹಾಗೂ ಕೆಟ್ಟ ಮನುಷ್ಯರಂತೂ ಇದ್ದೇ ಇರುತ್ತಾರೆ, ಪವಿತ್ರರಾಗಿರುವವರಿಗೆ ಒಳ್ಳೆಯವರೆಂದು ಹೇಳಲಾಗುತ್ತದೆ. ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾದರೆ ಆಗ ಮಹಿಮೆಯಾಗುತ್ತದೆ ಆದರೆ ಈಗಂತೂ ಎಲ್ಲರೂ ಪತಿತರೇ ಆಗಿದ್ದಾರೆ. ಪತಿತರೇ ಪತಿತರಿಗೆ ಮಹಿಮೆ ಮಾಡುತ್ತಾರೆ. ಸತ್ಯಯುಗದಲ್ಲಿ ಪಾವನರಿರುತ್ತಾರೆ. ಅಲ್ಲಿ ಯಾರು ಯಾರಿಗೂ ಮಹಿಮೆ ಮಾಡುವುದಿಲ್ಲ, ಇಲ್ಲಿ ಪವಿತ್ರ ಸನ್ಯಾಸಿಗಳೂ ಇದ್ದಾರೆ, ಅಪವಿತ್ರ ಗೃಹಸ್ಥಿಗಳೂ ಇದ್ದಾರೆ ಆದ್ದರಿಂದ ಪವಿತ್ರರಿಗೆ ಮಹಿಮೆ ಮಾಡಲಾಗುತ್ತದೆ. ಅಲ್ಲಂತೂ ಯಥಾರಾಜ - ರಾಣಿ ತಥಾ ಪ್ರಜಾ ಆಗಿರುತ್ತಾರೆ. ಪವಿತ್ರರು, ಅಪವಿತ್ರರು ಎಂದು ಹೇಳಲು ಮತ್ತ್ಯಾವ ಧರ್ಮವೇ ಇರುವುದಿಲ್ಲ. ಇಲ್ಲಂತೂ ಕೆಲವರು ಗೃಹಸ್ಥಿಗಳಿಗೂ ಮಹಿಮೆ ಮಾಡುತ್ತಿರುತ್ತಾರೆ, ಹೋಗಿ ಮುಸಲ್ಮಾನರಿಗೂ ಶಿಷ್ಯರಾಗುತ್ತಾರೆ. ಅವರಿಗೆ ಅವರ ಗುರುವೇ ಅಲ್ಲಾ ಎಂಬಂತೆ ಅವರ ಶಿಷ್ಯರಾಗುತ್ತಾರೆ. ಆದರೆ ಅಲ್ಲಾನು ಪತಿತ-ಪಾವನ, ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳಲಾಗುತ್ತದೆ. ಮನುಷ್ಯರೆಲ್ಲರು ಅಲ್ಲಾ ಆಗಲು ಹೇಗೆ ಸಾಧ್ಯ! ಪ್ರಪಂಚದಲ್ಲಿ ಎಷ್ಟು ಘೋರ ಅಂಧಕಾರವಿದೆ, ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಮಕ್ಕಳಿಗೆ ನಾವು ಚೆನ್ನಾಗಿ ಓದಿ ನಮ್ಮನ್ನು ರಾಜರನ್ನಾಗಿ ಮಾಡಿಕೊಳ್ಳಬೇಕೆಂಬುದು ಚಿಂತೆಯಿರಬೇಕು. ಯಾರು ಚೆನ್ನಾಗಿ ಪುರುಷಾರ್ಥ ಮಾಡುವರೋ ಅವರೇ ರಾಜತಿಲಕವನ್ನು ಪಡೆಯುವರು. ನಾವೂ ಸಹ ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕೆಂದು ತಮ್ಮಲ್ಲಿ ಉಲ್ಲಾಸವಿರಬೇಕು, ಇದರಲ್ಲಿ ತಬ್ಬಿಬ್ಬಾಗುವ ಅವಶ್ಯಕತೆಯಿಲ್ಲ. ಪುರುಷಾರ್ಥ ಮಾಡಬೇಕು, ಹೃದಯ ವಿಧೀರ್ಣರಾಗಬಾರದು. ಈ ವಿದ್ಯೆಯೇ ಇಂತಹದ್ದಾಗಿದೆ, ಹಾಸಿಗೆಯ ಮೇಲೆ ಮಲಗಿದ್ದರೂ ಓದಬಹುದು, ವಿದೇಶದಲ್ಲಿದ್ದರೂ ಓದಬಹುದು, ಮನೆಯಲ್ಲಿದ್ದರೂ ಓದಬಹುದು - ಇಷ್ಟು ಸಹಜ ವಿದ್ಯೆಯಾಗಿದೆ. ಸ್ವಲ್ಪ ಶ್ರಮ ಪಟ್ಟು ತಮ್ಮ ಪಾಪಗಳನ್ನು ಕಳೆದುಕೊಳ್ಳಬೇಕು ಮತ್ತು ಅನ್ಯರಿಗೂ ತಿಳಿಸಬೇಕಾಗಿದೆ. ಅನ್ಯ ಧರ್ಮದವರಿಗೂ ಸಹ ನೀವು ತಿಳಿಸಬಲ್ಲಿರಿ, ಯಾರಿಗೇ ಆದರೂ ಈ ಮಾತನ್ನು ತಿಳಿಸಿರಿ - ನೀವಾತ್ಮರಾಗಿದ್ದೀರಿ, ಆತ್ಮನ ಸ್ವಧರ್ಮವು ಒಂದೇ ಆಗಿದೆ, ಇದರಲ್ಲಿ ಯಾವುದೇ ಅಂತರವಿಲ್ಲ, ಶರೀರದಿಂದಲೇ ಅನೇಕ ಧರ್ಮಗಳಾಗುತ್ತವೆ. ಆತ್ಮವು ಒಂದೇ ಆಗಿದೆ, ಎಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದಾರೆ. ಆತ್ಮರನ್ನು ತಂದೆಯು ದತ್ತು ಮಾಡಿಕೊಂಡಿರುವುದರಿಂದ ಬ್ರಹ್ಮಾಮುಖವಂಶಾವಳಿ ಎಂದು ಗಾಯನ ಮಾಡಲಾಗುತ್ತದೆ.

ಆತ್ಮದ ತಂದೆ ಯಾರೆಂಬುದನ್ನು ನೀವು ಯಾರಿಗಾದರೂ ತಿಳಿಸಬಲ್ಲಿರಿ. ತಾವು ಅವರಿಂದ ತುಂಬಿಸುವ ಫಾರಂನಲ್ಲಿ ಬಹಳ ಅರ್ಥವಿದೆ. ತಂದೆಯಂತೂ ಅವಶ್ಯವಾಗಿ ಇದ್ದಾರಲ್ಲವೆ. ಅವರನ್ನು ನೆನಪು ಮಾಡುತ್ತಾರೆ. ಆತ್ಮವು ತನ್ನ ತಂದೆಯನ್ನು ನೆನಪು ಮಾಡುತ್ತದೆ. ಈಗಂತೂ ಭಾರತದಲ್ಲಿ ಯಾರನ್ನು ಬೇಕಾದರೂ ತಂದೆಯೆಂದು ಹೇಳಿ ಬಿಡುತ್ತಾರೆ. ಮೇಯರ್ರವರಿಗೂ ಸಹ ಫಾದರ್ ಎಂದು ಹೇಳಿ ಬಿಡುತ್ತಾರೆ. ಆದರೆ ಆತ್ಮದ ತಂದೆಯು ಯಾರೆಂಬುದನ್ನು ತಿಳಿದುಕೊಂಡಿಲ್ಲ. ತಾವು ಮಾತಾಪಿತಾ ಎಂದು ಹಾಡುತ್ತಾರೆ, ಆದರೆ ಅವರು ಯಾರು? ಹೇಗಿದ್ದಾರೆ? ಎಂಬುದೇನೂ ತಿಳಿದಿಲ್ಲ. ಭಾರತದಲ್ಲಿಯೇ ತಾವು ಮಾತಾಪಿತಾ ಎಂದು ಕರೆಯುತ್ತಾರೆ. ತಂದೆಯೇ ಬಂದು ಇಲ್ಲಿ ಮುಖವಂಶಾವಳಿಯನ್ನು ರಚಿಸುತ್ತಾರೆ, ಭಾರತವನ್ನು ಮದರ್ಕಂಟ್ರಿ(ತಾಯ್ನಾಡು) ಎಂದು ಹೇಳಲಾಗುತ್ತದೆ- ಏಕೆ? ಇಲ್ಲಿಯೇ ಶಿವ ತಂದೆಯು ಮಾತಾಪಿತರ ರೂಪದಲ್ಲಿ ಬಂದು ಪಾತ್ರವನ್ನಭಿನಯಿಸುತ್ತಾರೆ ಮತ್ತು ಭಗವಂತನನ್ನೂ ಸಹ ಭಾರತದಲ್ಲಿಯೇ ಮಾತಾಪಿತನ ರೂಪದಲ್ಲಿ ನೆನಪು ಮಾಡುತ್ತಾರೆ. ವಿದೇಶಗಳಲ್ಲಿ ಕೇವಲ ಗಾಡ್ಫಾದರ್ ಎಂದು ಕರೆಯುತ್ತಾರೆ. ಆದರೆ ತಾಯಿಯೂ ಬೇಕಲ್ಲವೆ. ತಾಯಿಯಿಂದಲೇ ಮಕ್ಕಳನ್ನು ರಚಿಸುವರು. ಪುರುಷನೂ ಸಹ ಮೊದಲು ಸ್ತ್ರೀಯನ್ನು ದತ್ತು ಮಾಡಿಕೊಂಡು ಅವರಿಂದ ಮಕ್ಕಳಿಗೆ ಜನ್ಮ ಕೊಡುತ್ತಾರೆ, ರಚನೆಯನ್ನು ರಚಿಸಲಾಗುತ್ತದೆ. ಇಲ್ಲಿಯೂ ಸಹ ಪರಮಪಿತ ಪರಮಾತ್ಮ ತಂದೆಯು ಬ್ರಹ್ಮಾರವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಳ್ಳುತ್ತಾರೆ. ತಾವೆಲ್ಲಾ ಮಕ್ಕಳನ್ನು ರಚಿಸುತ್ತಾರೆ. ಆದ್ದರಿಂದ ಇವರನ್ನು ಮಾತಾಪಿತಾ ಎಂದು ಕರೆಯಲಾಗುವುದು. ಅವರು ಆತ್ಮರ ತಂದೆಯಾಗಿದ್ದಾರೆ, ಇಲ್ಲಿ ಬಂದು ಉತ್ಪತ್ತಿ ಮಾಡುತ್ತಾರೆ. ಇಲ್ಲಿ ನೀವು ಮಕ್ಕಳಾಗುತ್ತೀರಿ. ಆದ್ದರಿಂದ ತಂದೆ ಮತ್ತು ತಾಯಿಯೆಂದು ಹೇಳಲಾಗುತ್ತದೆ. ಅದಂತೂ ಮಧುರ ಮನೆಯಾಗಿದೆ, ಅಲ್ಲಿ ಎಲ್ಲಾ ಆತ್ಮರೇ ಇರುತ್ತಾರೆ. ಅಲ್ಲಿಯೂ ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಯಾರಾದರೂ ಸಿಗಲಿ ಅವರಿಗೆ ತಿಳಿಸಿ, ನೀವು ಮಧುರ ಮನೆಗೆ ಹೋಗಲು ಬಯಸುತ್ತೀರಾ? ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ಈಗ ನೀವು ಪತಿತರಾಗಿದ್ದೀರಿ, ಇದು ಕಲಿಯುಗೀ ತಮೋಪ್ರಧಾನ ಪ್ರಪಂಚವಾಗಿದೆ, ತಾವೀಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ತಮೋಪ್ರಧಾನ ಆತ್ಮರು ಹಿಂತಿರುಗಿ ಮನೆಗೆ ಹೋಗಲು ಸಾಧ್ಯವಿಲ್ಲ. ಆತ್ಮರು ಮಧುರ ಮನೆಯಲ್ಲಿ ಪವಿತ್ರರಾಗಿರುತ್ತಾರೆ. ಆದ್ದರಿಂದ ತಂದೆಯು ತಿಳಿಸುವುದೇನೆಂದರೆ ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ, ಯಾವುದೇ ದೇಹಧಾರಿಗಳನ್ನು ನೆನಪು ಮಾಡಬೇಡಿ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತೀರಿ ಹಾಗೂ ನಂಬರ್ವಾರ್ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ಕುರಿತು ಯಾರಿಗೆ ಬೇಕಾದರೂ ತಿಳಿಸಲು ಸಹಜವಾಗಿದೆ. ಭಾರತದಲ್ಲಿ ಇವರ ರಾಜ್ಯವಿತ್ತು, ಇವರು ರಾಜ್ಯಭಾರ ಮಾಡುತ್ತಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು, ವಿಶ್ವದಲ್ಲಿ ಶಾಂತಿಯನ್ನು ತಂದೆಯೇ ಸ್ಥಾಪನೆ ಮಾಡಬಲ್ಲರು ಮತ್ತ್ಯಾರಿಗೂ ಶಕ್ತಿಯಿಲ್ಲ. ಈಗ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಹೊಸ ಪ್ರಪಂಚಕ್ಕಾಗಿ ರಾಜರಿಗೂ ರಾಜ ಹೇಗೆ ಆಗಬಹುದೆಂಬುದನ್ನು ತಿಳಿಸುತ್ತಿದ್ದಾರೆ. ತಂದೆಯೇ ಜ್ಞಾನಸಾಗರನಾಗಿದ್ದಾರೆ ಆದರೆ ಅವರಲ್ಲಿ ಯಾವ ಜ್ಞಾನವಿದೆಯೆಂದು ಯಾರಿಗೂ ತಿಳಿದಿಲ್ಲ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಚರಿತ್ರೆ-ಭೂಗೋಳವನ್ನು ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ಮನುಷ್ಯರಂತೂ ಕೆಲವೊಮ್ಮೆ ಅವರನ್ನು ಸರ್ವವ್ಯಾಪಿಯೆಂದು ಹೇಳುತ್ತಾರೆ. ಇಲ್ಲವೆಂದರೆ ಎಲ್ಲರ ಆಂತರ್ಯವನ್ನು ತಿಳಿದಿದ್ದಾರೆಂದು ಹೇಳುತ್ತಾರೆ. ಅದೇರೀತಿ ತಮಗಾಗಿ ಹೇಳಿಕೊಳ್ಳುವುದಿಲ್ಲ. ಇದೆಲ್ಲಾ ಮಾತುಗಳನ್ನು ತಂದೆಯು ಕುಳಿತು ತಿಳಿಸುತ್ತಾರೆ. ಚೆನ್ನಾಗಿ ಧಾರಣೆ ಮಾಡಿಕೊಂಡು ಹರ್ಷಿತರಾಗಿರಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನೂ ಸಹ ಹರ್ಷಿತಮುಖಿಯನ್ನಾಗಿ ತೋರಿಸುತ್ತಾರೆ. ಶಾಲೆಯಲ್ಲಿ ಶ್ರೇಷ್ಠ ದರ್ಜೆಯಲ್ಲಿ ಓದುವವರು ಎಷ್ಟು ಹರ್ಷಿತವಾಗಿರುತ್ತಾರೆ! ಇವರಂತೂ ಬಹಳ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತಾರೆಂದು ಅನ್ಯರೂ ತಿಳಿಯುತ್ತಾರೆ. ಇದು ಬಹಳ ಶ್ರೇಷ್ಠ ವಿದ್ಯೆಯಾಗಿದೆ, ಯಾವುದೇ ಶುಲ್ಕದ ಮಾತಿಲ್ಲ. ಕೇವಲ ಸಾಹಸದ ಮಾತಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು, ಇದರಲ್ಲಿಯೇ ಮಾಯೆಯು ವಿಘ್ನ ಹಾಕುತ್ತದೆ. ತಂದೆಯು ಪವಿತ್ರರಾಗಿರಿ ಎಂದು ಹೇಳುತ್ತಾರೆ, ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ಮತ್ತೆ ಕಪ್ಪು ಮುಖ ಮಾಡಿಕೊಳ್ಳುತ್ತಾರೆ. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ಇದರಿಂದ ನಾಪಾಸಾಗಿ ಬಿಡುತ್ತಾರೆ. ನಂತರ ಅವರ ಹೆಸರಿನ ಗಾಯನವಾಗುವುದಿಲ್ಲ. ಕೆಲಕೆಲವರು ಆರಂಭದಿಂದಲೇ ಬಹಳ ಚೆನ್ನಾಗಿ ನಡೆಯುತ್ತಿದ್ದಾರೆ. ಅಂತಹವರಿಗೆ ಮಹಿಮೆ ಮಾಡಲಾಗುತ್ತದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ತಮಗಾಗಿ ತಾವೇ ಪುರುಷಾರ್ಥ ಮಾಡಿ ರಾಜಧಾನಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ವಿದ್ಯೆಯಿಂದ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಇದು ರಾಜಯೋಗವಾಗಿದೆ, ಪ್ರಜಾಯೋಗವಲ್ಲ ಆದರೆ ಈ ವಿದ್ಯೆಯಿಂದ ಪ್ರಜೆಗಳೂ ಆಗುತ್ತಾರಲ್ಲವೆ. ಚಹರೆ ಹಾಗೂ ಸೇವೆಯಿಂದ ಇವರು ಏನಾಗಲು ಯೋಗ್ಯರೆಂದು ಅರ್ಥವಾಗುತ್ತದೆ. ಮನೆಯಲ್ಲಿ ವಿದ್ಯಾರ್ಥಿಗಳ ಚಲನೆಯಿಂದಲೇ ಇವರು ಫಸ್ಟ್ ನಂಬರಿನಲ್ಲಿ, ಇವರು ಥರ್ಡ್ ನಂಬರಿನಲ್ಲಿ ಬರುವವರೆಂದು ಅರ್ಥವಾಗುತ್ತದೆ, ಇಲ್ಲಿಯೂ ಹಾಗೆಯೇ ಅಂತಿಮದಲ್ಲಿ ಪರೀಕ್ಷೆಯು ಮುಕ್ತಾಯವಾದಾಗ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾಗುವುದರಲ್ಲಿ ತಡವಾಗುವುದಿಲ್ಲ. ಆಗ ನಾವು ನಾಪಾಸಾಗಿಬಿಟ್ಟೆವೆಂದು ಸಂಕೋಚವಾಗುವುದು. ನಾಪಾಸಾಗುವವರನ್ನು ಯಾರು ಪ್ರೀತಿ ಮಾಡುವರು?

ಮನುಷ್ಯರು ಸಿನಿಮಾ ನೋಡುವುದರಲ್ಲಿ ಖುಷಿಯ ಅನುಭವ ಮಾಡುತ್ತಾರೆ. ಆದರೆ ತಂದೆಯು ಹೇಳುತ್ತಾರೆ - ನಂಬರ್ವನ್ ಕೊಳಕರನ್ನಾಗಿ ಮಾಡುವುದು ಸಿನಿಮಾ ಆಗಿದೆ. ಸಿನಿಮಾ ನೋಡಲು ಹೋಗುವವರು ಮೆಜಾರಿಟಿ ಬೀಳುತ್ತಾರೆ. ಕೆಲವರು ಸ್ತ್ರೀಯರೂ ಸಹ ಇಂತಹವರಿದ್ದಾರೆ, ಅವರಿಗೆ ಸಿನಿಮಾ ನೋಡದೇ ನಿದ್ರೆಯು ಬರುವುದಿಲ್ಲ. ಸಿನಿಮಾ ನೋಡುವವರು ಅಪವಿತ್ರರಾಗುವ ಪುರುಷಾರ್ಥ ಖಂಡಿತ ಮಾಡುತ್ತಾರೆ. ಇಲ್ಲಂತೂ ಏನೆಲ್ಲವೂ ಆಗುತ್ತಿದೆ, ಅದರಲ್ಲಿಯೇ ಖುಷಿಯೆಂದು ಮನುಷ್ಯರು ತಿಳಿಯುತ್ತಾರೆ ಆದರೆ ಅದೆಲ್ಲವೂ ದುಃಖಕ್ಕಾಗಿ. ಇದು ವಿನಾಶಿ ಖುಷಿಯಾಗಿದೆ, ಅವಿನಾಶಿ ಖುಷಿ, ಅವಿನಾಶಿ ತಂದೆಯಿಂದಲೇ ಸಿಗುತ್ತದೆ. ತಂದೆಯು ನಮ್ಮನ್ನು ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆಂದು ನೀವು ತಿಳಿದುಕೊಳ್ಳುತ್ತೀರಿ. ಮೊದಲು 21 ಜನ್ಮಗಳಿಗಾಗಿ ಎಂದು ಬರೆಯುತ್ತಿದ್ದಿರಿ, ಈಗ ತಂದೆಯು ಬರೆಯುತ್ತಾರೆ - 50-60 ಜನ್ಮಗಳವರೆಗೆ ಸುಖಿಯಾಗಿರುತ್ತೀರಿ. ಏಕೆಂದರೆ ದ್ವಾಪರದಲ್ಲಿಯೂ ಮೊದಲು ಬಹಳ ಧನವಂತ ಸುಖಿಯಾಗಿರುತ್ತೀರಲ್ಲವೆ. ಭಲೆ ಪತಿತರಾದಾಗಲೂ ಸಹ ಧನ ಬಹಳ ಇರುತ್ತದೆ ನಂತರ ಸಂಪೂರ್ಣ ತಮೋಪ್ರಧಾನರಾದಾಗ ದುಃಖ ಆರಂಭವಾಗುತ್ತದೆ. ಮೊದಲು ಸುಖಿಯಾಗಿರುತ್ತೀರಿ, ಬಹಳ ದುಃಖಿಯಾದಾಗ ತಂದೆಯು ಬರುತ್ತಾರೆ. ಮಹಾ ಅಜಾಮೀಳರಂತಹ ಪಾಪಿಗಳನ್ನೂ ಉದ್ಧಾರ ಮಾಡುತ್ತಾರೆ. ತಂದೆಯು ಹೇಳುತ್ತಾರೆ - ನಾನು ಎಲ್ಲರನ್ನೂ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುವೆನು, ಸತ್ಯಯುಗದ ರಾಜ್ಯಭಾಗ್ಯವನ್ನೂ ನಿಮಗೇ ಕೊಡುವೆನು, ಎಲ್ಲರ ಕಲ್ಯಾಣವಾಗುತ್ತದೆಯಲ್ಲವೆ. ಎಲ್ಲರನ್ನು ತಮ್ಮ ಸ್ಥಾನದಲ್ಲಿ ಅಂದರೆ ಶಾಂತಿಯಲ್ಲಿ ಅಥವಾ ಸುಖದಲ್ಲಿ ತಲುಪಿಸುತ್ತಾರೆ. ಸತ್ಯಯುಗದಲ್ಲಿ ಎಲ್ಲರಿಗೆ ಸುಖವಿರುತ್ತದೆ, ಶಾಂತಿಧಾಮದಲ್ಲಿಯೂ ಸುಖಿಯಾಗಿರುತ್ತಾರೆ. ವಿಶ್ವದಲ್ಲಿ ಶಾಂತಿಯಿರಲಿ ಎಂದು ಹೇಳುತ್ತಾರೆ ಆಗ ತಿಳಿಸಿರಿ - ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು, ದುಃಖವಾಗಲಿ ಅಶಾಂತಿಯಾಗಲಿ ಇರುವುದಿಲ್ಲ. ಇಲ್ಲಂತೂ ಮನೆ-ಮನೆಯಲ್ಲಿಯೂ ಅಶಾಂತಿ, ದೇಶ-ದೇಶದಲ್ಲಿ ಅಶಾಂತಿಯಿದೆ, ಇಡೀ ವಿಶ್ವದಲ್ಲಿಯೇ ಅಶಾಂತಿಯಿದೆ. ದೇಶವು ಎಷ್ಟು ತುಂಡು-ತುಂಡಾಗಿದೆ, ಎಷ್ಟು ಭಾಗಗಳಾಗಿವೆ! 100 ಮೈಲಿ ದೂರಕ್ಕೆ ಒಂದೊಂದು ಭಾಷೆಯಾಗಿದೆ. ಭಾರತದ ಪ್ರಾಚೀನ ಭಾಷೆಯು ಸಂಸ್ಕೃತವೆಂದು ಹೇಳುತ್ತಾರೆ. ಆದರೆ ಆದಿ ಸನಾತನ ಧರ್ಮದ ಬಗ್ಗೆಯೂ ಯಾರಿಗೂ ಗೊತ್ತಿಲ್ಲ ಅಂದಮೇಲೆ ಇದು ಪ್ರಾಚೀನ ಭಾಷೆಯೆಂದು ಹೇಗೆ ಹೇಳುತ್ತಾರೆ? ಆದಿ ಸನಾತನ ದೇವಿ-ದೇವತಾ ಧರ್ಮ ಯಾವಾಗ ಇತ್ತೆಂದು ನೀವು ತಿಳಿಸಿರಿ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರಂತೂ ಮಂಧ ಬುದ್ಧಿಯವರೂ ಇರುತ್ತಾರೆ, ಕಲ್ಲು ಬುದ್ಧಿಯವರಂತೆ ಕಾಣುತ್ತಾರೆ. ಅಜ್ಞಾನ ಕಾಲದಲ್ಲಿಯೂ ಹೇ ಭಗವಂತ, ಇವರ ಬುದ್ಧಿಯ ಬೀಗವನ್ನು ತೆರೆಸು ಎಂದು ಹೇಳುತ್ತಾರಲ್ಲವೆ.

ತಂದೆಯು ತಾವೆಲ್ಲಾ ಮಕ್ಕಳಿಗೆ ಜ್ಞಾನದ ಪ್ರಕಾಶವನ್ನು ಕೊಡುತ್ತಾರೆ, ಅದರಿಂದ ಬೀಗವು ತೆರೆಯಲ್ಪಡುತ್ತದೆ. ಆದರೂ ಕೆಲಕೆಲವರ ಬುದ್ಧಿಯು ತೆರೆಯುವುದೇ ಇಲ್ಲ. ಬಾಬಾ, ತಾವು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದೀರಿ. ನಮ್ಮ ಪತಿಯ ಬುದ್ಧಿಯ ಬೀಗವನ್ನು ತೆರೆಯಿರಿ ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ - ನಾನು ಇದಕ್ಕಾಗಿಯೇ ಬಂದಿದ್ದೇನೆಯೇ? ಒಬ್ಬೊಬ್ಬರ ಬುದ್ಧಿಯ ಬೀಗವನ್ನು ಕುಳಿತು ತೆರೆಯಲೇ? ಹಾಗೆ ಮಾಡಿದರೆ ಎಲ್ಲರ ಬುದ್ಧಿಯ ಬೀಗವು ತೆರೆದು ಬಿಡುವುದು. ಎಲ್ಲರೂ ಮಹಾರಾಜ ಮಹಾರಾಣಿಯಾಗಿ ಬಿಡುವರು. ಅಂದಮೇಲೆ ನಾನು ಹೇಗೆ ಎಲ್ಲರ ಬೀಗವನ್ನು ತೆರೆಯಲಿ! ಅವರು ಸತ್ಯಯುಗದಲ್ಲಿ ಬರುವ ಪಾತ್ರವೇ ಇಲ್ಲವೆಂದರೆ ನಾನು ಹೇಗೆ ತೆರೆಯಲಿ! ಡ್ರಾಮಾನುಸಾರ ಸಮಯದಲ್ಲಿಯೇ ಅವರ ಬುದ್ಧಿಯು ತೆರೆಯುವುದು. ನಾನು ಹೇಗೆ ತೆರೆಯಲಿ! ಎಲ್ಲವೂ ಡ್ರಾಮಾದ ಮೇಲಿದೆಯಲ್ಲವೆ. ಎಲ್ಲರೂ ಫುಲ್ಪಾಸ್ ಆಗುವುದಿಲ್ಲ. ಶಾಲೆಯಲ್ಲಿ ನಂಬರ್ವಾರ್ ಇರುತ್ತಾರೆ, ಇದು ವಿದ್ಯೆಯಾಗಿದೆ. ಪ್ರಜೆಗಳೂ ಸಹ ಆಗುವರು. ಎಲ್ಲರ ಬುದ್ಧಿಯ ಬೀಗವು ತೆರೆದು ಬಿಟ್ಟರೆ ಪ್ರಜೆಗಳೆಲ್ಲಿಂದ ಬರುವರು? ನೀವು ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ. ಪ್ರತಿಯೊಬ್ಬರ ಪುರುಷಾರ್ಥದಿಂದ ತಿಳಿದುಕೊಳ್ಳಬಹುದು, ಯಾರು ಚೆನ್ನಾಗಿ ಓದುವರೋ ಅವರನ್ನು ಎಲ್ಲೆಲ್ಲಿ ಸೇವೆಯಿರುವುದೋ ಅಲ್ಲಿ ಕರೆಸಲಾಗುತ್ತದೆ. ಯಾರು-ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಂದು ತಂದೆಗೆ ಗೊತ್ತಿದೆ, ಅಂದಾಗ ಮಕ್ಕಳು ಚೆನ್ನಾಗಿ ಓದಬೇಕು. ಚೆನ್ನಾಗಿ ಓದಿದರೆ ಮನೆಗೆ ಕರೆದುಕೊಂಡು ಹೋಗುವೆನು, ನಂತರ ಸ್ವರ್ಗದಲ್ಲಿ ಕಳುಹಿಸುವೆನು. ಇಲ್ಲದಿದ್ದರೆ ಶಿಕ್ಷೆಗಳು ಬಹಳ ಕಠಿಣವಾಗಿರುವುದು, ಪದವಿಯೂ ಭ್ರಷ್ಟವಾಗುವುದು. ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರತ್ಯಕ್ಷ ಮಾಡಬೇಕು. ಸತ್ಯಯುಗದಲ್ಲಿ ಪಾರಸಬುದ್ಧಿಯವರಾಗುತ್ತೀರಿ, ಈಗ ಕಲಿಯುಗವಾಗಿದೆ. ಅಂದಮೇಲೆ ಇಲ್ಲಿ ಪಾರಸಬುದ್ಧಿಯಾಗಿರಲು ಹೇಗೆ ಸಾಧ್ಯ? ಯಾವಾಗ ಒಂದು ರಾಜ್ಯ, ಒಂದೇ ಧರ್ಮವಿತ್ತೋ ಆಗ ವಿಶ್ವದಲ್ಲಿ ಶಾಂತಿಯಿತ್ತು, ಪತ್ರಿಕೆಗಳಲ್ಲಿಯೂ ನೀವು ಹಾಕಬಹುದು - ಭಾರತದಲ್ಲಿ ಇವರ ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು, ಕೊನೆಗೊಂದು ದಿನ ಅವಶ್ಯವಾಗಿ ತಿಳಿದುಕೊಳ್ಳುವರು. ನೀವು ಮಕ್ಕಳ ಹೆಸರು ಪ್ರಸಿದ್ಧವಾಗುವುದು. ಆ ವಿದ್ಯೆಯಲ್ಲಾದರೆ ಎಷ್ಟೊಂದು ಪುಸ್ತಕಗಳನ್ನು ಓದುತ್ತಾರೆ, ಇಲ್ಲಿ ಏನೇನೂ ಇಲ್ಲ. ವಿದ್ಯೆಯು ಬಹಳ ಸಹಜವಾಗಿದೆ. ನೆನಪಿನಲ್ಲಿ ಒಳ್ಳೊಳ್ಳೆಯ ಮಹಾರಥಿಗಳೂ ಅನುತ್ತೀರ್ಣರಾಗುತ್ತಾರೆ. ನೆನಪಿನ ಹರಿತವಿಲ್ಲವೆಂದರೆ ಜ್ಞಾನದ ಖಡ್ಗವು ಕೆಲಸ ಮಾಡುವುದಾದರೂ ಹೇಗೆ? ಬಹಳ ನೆನಪು ಮಾಡಿದಾಗಲೇ ಈ ಖಡ್ಗದಲ್ಲಿ ಹರಿತ ಬರುವುದು. ಭಲೆ ಬಂಧನದಲ್ಲಿದ್ದರೂ ಸಹ ನೆನಪು ಮಾಡುತ್ತಾ ಇದ್ದರೆ ಬಹಳ ಲಾಭವಿದೆ. ಕೆಲವರು ತಂದೆಯನ್ನು ಮಿಲನವೂ ಮಾಡಿಲ್ಲ ಆದರೂ ತಂದೆಯ ನೆನಪಿನಲ್ಲಿಯೇ ಪ್ರಾಣ ಬಿಡುತ್ತಾರೆ. ಅಂತಹವರದೂ ಸಹ ಒಳ್ಳೆಯ ಪದವಿಯಾಗುತ್ತದೆ. ಏಕೆಂದರೆ ಬಹಳ ನೆನಪು ಮಾಡುತ್ತಾರೆ. ತಂದೆಯ ನೆನಪಿನಲ್ಲಿ ಆನಂದ ಭಾಷ್ಪಗಳನ್ನು ಸುರಿಸುತ್ತಾರೆ. ಈ ಆನಂದ ಬಾಷ್ಪಗಳೇ ಮುತ್ತುಗಳಾಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಮಗಾಗಿ ಸ್ವಯಂ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ವಿದ್ಯೆಯಿಂದ ಸ್ವಯಂ ರಾಜ ತಿಲಕವನ್ನು ಕೊಟ್ಟುಕೊಳ್ಳಬೇಕಾಗಿದೆ. ಜ್ಞಾನವನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ಸದಾ ಹರ್ಷಿತರಾಗಿರಬೇಕಾಗಿದೆ.

2. ಜ್ಞಾನದ ಖಡ್ಗದಲ್ಲಿ ನೆನಪಿನ ಹರಿತವನ್ನು ತುಂಬಿಸಬೇಕು. ನೆನಪಿನಿಂದಲೇ ಬಂಧನಗಳನ್ನು ಕಳೆಯಬೇಕಾಗಿದೆ. ಎಂದೂ ಕೊಳಕು ಸಿನಿಮಾ ನೋಡಿ ತಮ್ಮ ಸಂಕಲ್ಪಗಳನ್ನು ಅಪವಿತ್ರ ಮಾಡಿಕೊಳ್ಳಬಾರದು.

ವರದಾನ:
ಸದಾ ಏಕಾಂತ ಮತ್ತು ಸ್ಮರಣೆಯಲ್ಲಿ ವ್ಯಸ್ತರಾಗಿರುವ ಬೇಹದ್ದಿನ ವಾನಪಸ್ಥಿ ಭವ.

ವರ್ತಮಾನ ಸಮಯ ಪ್ರಮಾಣ ತಾವೆಲ್ಲರೂ ವಾನಪ್ರಸ್ತ ಅವಸ್ಥೆಗೆ ಸಮೀಪರಿದ್ದೀರಿ. ವಾನಪ್ರಸ್ಥಿಗಳು ಎಂದು ಗೊಂಬೆಯಾಟ ಆಡುವುದಿಲ್ಲ. ಅವರು ಸದಾ ಏಕಾಂತ ಮತ್ತು ಸ್ಮರಣೆಯಲ್ಲಿರುತ್ತಾರೆ. ತಾವೆಲ್ಲರೂ ಬೇಹದ್ದಿನ ವಾನಪ್ರಸ್ಥಿಗಳು ಸದಾ ಒಬ್ಬರ ಅಂತ್ಯದಲ್ಲಿ ಅರ್ಥಾತ್ ಏಕಾಂತದಲ್ಲಿರಿ ಜೊತೆ-ಜೊತೆ ಒಬ್ಬರ ಸ್ಮರಣೆ ಮಾಡುತ್ತಾ ಸ್ಮತಿ ಸ್ವರೂಪರಾಗಿ. ಎಲ್ಲಾ ಮಕ್ಕಳ ಪ್ರತಿ ಬಾಪ್ದಾದಾರವರಿಗೆ ಇದೇ ಶುಭ ಆಸೆ ಇದೆ. ಈಗ ತಂದೆ ಮತ್ತು ಮಕ್ಕಳು ಸಮಾನರಾಗಿ ಬಿಡಲಿ ಎಂದು. ಸದಾ ನೆನಪಿನಲ್ಲಿ ಸಮಾವೇಶವಾಗಿರಿ. ಸಮಾನವಾಗುವುದೇ ಸಮಾವೇಶವಾಗುವುದು - ಇದೇ ವಾನಪ್ರಸ್ಥ ಸ್ಥಿತಿಯ ಗುರುತಾಗಿದೆ.

ಸ್ಲೋಗನ್:
ತಾವು ಸಾಹಸದ ಒಂದು ಹೆಜ್ಜೆ ಮುಂದೆ ಬನ್ನಿ ಆಗ ತಂದೆ ಸಹಯೋಗದ ಸಾವಿರ ಹೆಜ್ಜೆ ಮುಂದಿಡುತ್ತಾರೆ.