11.09.21         Morning Kannada Murli       Om Shanti           BapDada Madhuban


``ಮಧುರ ಮಕ್ಕಳೇ ಸತ್ಯ ತಂದೆಯು ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ, ನೀವು ತಂದೆಯ ಬಳಿ ನರನಿಂದ ನಾರಾಯಣನಾಗುವ ಸತ್ಯ-ಸತ್ಯ ಜ್ಞಾನವನ್ನು ಕೇಳಲು ಬಂದಿದ್ದೀರಿ

ಪ್ರಶ್ನೆ:
ನೀವು ಮಕ್ಕಳು ತಮ್ಮ ಗೃಹಸ್ಥ ವ್ಯವಹಾರದಲ್ಲಿ ಬಹಳ-ಬಹಳ ಸಂಭಾಲನೆ ಮಾಡಿ ನಡೆಯಬೇಕಾಗಿದೆ - ಏಕೆ?

ಉತ್ತರ:
ಏಕೆಂದರೆ ನಿಮ್ಮ ಗತಿ ಮತವು ಎಲ್ಲದಕ್ಕಿಂತ ಭಿನ್ನವಾಗಿದೆ. ನಿಮ್ಮದು ಗುಪ್ತ ಜ್ಞಾನವಾಗಿದೆ ಆದ್ದರಿಂದ ವಿಶಾಲ ಬುದ್ಧಿಯವರಾಗಿ ಎಲ್ಲರ ಜೊತೆ ಸಂಬಂಧವನ್ನು ನಿಭಾಯಿಸಬೇಕಾಗಿದೆ. ಆಂತರ್ಯದಲ್ಲಿ ತಿಳಿದುಕೊಳ್ಳಬೇಕು - ನಾವೆಲ್ಲರೂ ಸಹೋದರ-ಸಹೋದರ ಹಾಗೂ ಸಹೋದರ-ಸಹೋದರಿಯಾಗಿದ್ದೇವೆ. ಆದರೆ ಸ್ತ್ರೀಯು ತನ್ನ ಪತಿಯನ್ನು ನೀವು ನನ್ನ ಸಹೋದರನಾಗಿದ್ದೀರಿ ಎಂದು ಹೇಳುವುದಲ್ಲ. ಇದರಿಂದ ಕೇಳುವವರು ಇವರಿಗೇನಾಯಿತು ಎಂದು ಹೇಳುತ್ತಾರೆ ಆದ್ದರಿಂದ ಯುಕ್ತಿಯಿಂದ ನಡೆದುಕೊಳ್ಳಬೇಕಾಗಿದೆ.

ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಆತ್ಮಿಕ ಶಬ್ಧವನ್ನು ಹೇಳದೇ ಕೇವಲ ತಂದೆಯೆಂದು ಹೇಳಿದರೂ ಇವರು ಆತ್ಮಿಕತಂದೆ ಎಂಬುದು ಸಿದ್ಧವಾಗುತ್ತದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಎಲ್ಲರೂ ತಮ್ಮನ್ನು ಸಹೋದರ-ಸಹೋದರನೆಂದು ಹೇಳಿಕೊಳ್ಳುತ್ತೀರಿ ಅಂದಮೇಲೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಎಲ್ಲರಿಗೂ ತಿಳಿಸುವುದಿಲ್ಲ. ಗೀತೆಯಲ್ಲಿಯೂ ಭಗವಾನುವಾಚ ಎಂದು ಬರೆಯಲ್ಪಟ್ಟಿದೆ - ಅದು ಯಾರ ಪ್ರತಿ? ಭಗವಂತನಿಗೆ ಎಲ್ಲರೂ ಮಕ್ಕಳಾಗಿದ್ದಾರೆ, ಆ ಭಗವಂತನು ತಂದೆಯಾಗಿದ್ದಾರೆ ಅಂದಮೇಲೆ ಭಗವಂತನ ಮಕ್ಕಳೆಲ್ಲರೂ ಸಹೋದರರಾಗಿದ್ದೀರಿ. ಭಗವಂತನೇ ತಿಳಿಸಿರುವರು, ರಾಜಯೋಗವನ್ನು ಕಲಿಸಿರುವರು. ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ನಿಮ್ಮ ವಿನಃ ಮತ್ತ್ಯಾರಿಗೂ ಇಂತಹ ವಿಚಾರಗಳು ನಡೆಯಲು ಸಾಧ್ಯವಿಲ್ಲ. ಯಾರು-ಯಾರಿಗೆ ಸಂದೇಶ ಸಿಗುತ್ತಾ ಹೋಗುವುದೋ ಅವರು ಶಾಲೆಗೆ ಬರತೊಡಗುತ್ತಾರೆ, ಓದುತ್ತಾ ಹೋಗುತ್ತಾರೆ. ಪ್ರದರ್ಶನಿಯನ್ನಂತೂ ನೋಡಿದೆವು, ಈಗ ಹೋಗಿ ಇನ್ನೂ ಹೆಚ್ಚಿನದಾಗಿ ಕೇಳೋಣವೆಂದು ತಿಳಿದುಕೊಳ್ಳುತ್ತಾರೆ. ಮೊಟ್ಟ ಮೊದಲ ಮುಖ್ಯ ಮಾತಾಗಿದೆ- ಜ್ಞಾನ ಸಾಗರ ಪತಿತ-ಪಾವನ ಗೀತಾ ಜ್ಞಾನದಾತ ಶಿವ ಭಗವಾನುವಾಚ. ಇವರಿಗೆ ಕಲಿಸುವವರು, ತಿಳಿಸಿಕೊಡುವವರು ಯಾರೆಂಬುದು ಅವರಿಗೆ ಅರ್ಥವಾಗಲಿ. ಅವರೇ ಪರಮ ಆತ್ಮ, ಜ್ಞಾನ ಸಾಗರ, ನಿರಾಕಾರನಾಗಿದ್ದಾರೆ. ಅವರೇ ಸತ್ಯವಾಗಿದ್ದಾರೆ. ಅವರು ಸತ್ಯವನ್ನೇ ತಿಳಿಸುತ್ತಾರೆ. ಅದರಲ್ಲಿ ಮತ್ತ್ಯಾವುದೇ ಪ್ರಶ್ನೆಯು ಬರಲು ಸಾಧ್ಯವಿಲ್ಲ. ನೀವು ಸತ್ಯದ ಮೇಲೆ ಎಲ್ಲವನ್ನೂ ಬಿಟ್ಟು ಬಿಟ್ಟಿರಿ ಅಂದಮೇಲೆ ಮೊಟ್ಟ ಮೊದಲಿಗೆ ಇದರ ಮೇಲೆ ತಿಳಿಸಬೇಕಾಗಿದೆ, ನಮಗೆ ಪರಮಪಿತ ಪರಮಾತ್ಮನೇ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಾರೆ, ಇದು ರಾಜ್ಯ ಪದವಿಯಾಗಿದೆ. ಯಾರು ಎಲ್ಲರ ತಂದೆಯಾಗಿದ್ದಾರೆಯೋ ಆ ಪಾರಲೌಕಿಕ ತಂದೆಯೇ ಕುಳಿತು ತಿಳಿಸುತ್ತಾರೆ, ಅವರೇ ಎಲ್ಲರಿಗಿಂತ ದೊಡ್ಡ ಅಥಾರಿಟಿಯಾಗಿದ್ದಾರೆ ಎಂದು ಯಾರಿಗೆ ನಿಶ್ಚಯವಾಗಿ ಬಿಡುವುದೋ ಅವರಿಗೆ ಮತ್ತ್ಯಾವುದೇ ಪ್ರಶ್ನೆಯು ಬರುವುದಕ್ಕೇ ಸಾಧ್ಯವಿಲ್ಲ. ಅವರು ಪತಿತ-ಪಾವನನಾಗಿದ್ದಾರೆ. ಅವರು ಇಲ್ಲಿಗೆ ಬರುತ್ತಾರೆಂದರೆ ಅವಶ್ಯವಾಗಿ ತಮ್ಮ ಸಮಯದಲ್ಲಿಯೇ ಬರುವರು. ನೀವು ನೋಡುತ್ತೀರಿ, ಇದು ಅದೇ ಮಹಾಭಾರತ ಯುದ್ಧವಾಗಿದೆ, ವಿನಾಶದ ನಂತರ ನಿರ್ವಿಕಾರಿ ಪ್ರಪಂಚವು ಬರಲಿದೆ. ಭಾರತವೇ ನಿರ್ವಿಕಾರಿಯಾಗಿತ್ತು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಬುದ್ಧಿಯು ಓಡುವುದೇ ಇಲ್ಲ, ಗಾಡ್ರೇಜ್ನ ಬೀಗವನ್ನು ಹಾಕಲ್ಪಟ್ಟಿದೆ, ಅದರ ಕೀಲಿಯು ಒಬ್ಬ ತಂದೆಯ ಬಳಿಯೇ ಇದೆ ಆದ್ದರಿಂದ ನಿಮಗೆ ಓದಿಸುವವರು ಯಾರೆಂಬುದು ಯಾರಿಗೂ ಗೊತ್ತಿಲ್ಲ. ಈ ದಾದಾರವರೇ ಓದಿಸುತ್ತಾರೆಂದು ತಿಳಿದುಕೊಳ್ಳುವ ಕಾರಣ ಟೀಕೆ ಮಾಡುತ್ತಾರೆ, ಹಾಗೆ ಹೀಗೆ ಮಾತನಾಡುತ್ತಾರೆ ಆದ್ದರಿಂದ ಮೊಟ್ಟ ಮೊದಲಿಗೆ ಇದನ್ನು ತಿಳಿಸಿರಿ - ಇದರಲ್ಲಿ ಶಿವ ಭಗವಾನುವಾಚ ಎಂದು ಬರೆಯಲಾಗಿದೆ, ಅವರು ಸತ್ಯವಾಗಿದ್ದಾರೆ, ಜ್ಞಾನ ಸಾಗರ ಆಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಈ ಶಿಕ್ಷಣವು ಈಗ ನಿಮಗೆ ಆ ಬೇಹದ್ದಿನ ತಂದೆಯಿಂದ ಸಿಗುತ್ತದೆ. ಅವರೇ ಸೃಷ್ಟಿಯ ರಚಯಿತ, ಪತಿತ ಸೃಷ್ಟಿಯನ್ನು ಪಾವನ ಮಾಡುವವರಾಗಿದ್ದಾರೆ ಅಂದಮೇಲೆ ಮೊಟ್ಟ ಮೊದಲು ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ. ಆ ಪರಮಪಿತ ಪರಮಾತ್ಮನೊಂದಿಗೆ ತಮ್ಮ ಸಂಬಂಧವೇನಾಗಿದೆ? ಅವರು ನರನಿಂದ ನಾರಾಯಣನಾಗುವ ಸತ್ಯ ಜ್ಞಾನವನ್ನು ಕೊಡುತ್ತಾರೆ. ಮಕ್ಕಳಿಗೆ ತಿಳಿದಿದೆ, ತಂದೆಯು ಸತ್ಯವಾಗಿದ್ದಾರೆ. ಆ ತಂದೆಯೇ ಸತ್ಯ ಖಂಡವನ್ನಾಗಿ ಮಾಡುತ್ತಾರೆ. ಇಲ್ಲಿಯೇ ನೀವು ನರನಿಂದ ನಾರಾಯಣನಾಗುವುದಕ್ಕಾಗಿಯೇ ಬಂದಿದ್ದೀರಿ. ಹೇಗೆ ವಕೀಲರ ಬಳಿ ಹೋದರೆ ನಾವು ವಕೀಲರಾಗಲು ಬಂದಿದ್ದೇವೆಂದು ತಿಳಿದುಕೊಳ್ಳುತ್ತಾರೆ, ಈಗ ನಿಮಗೆ ನಿಶ್ಚಯವಿದೆ - ನಮಗೆ ಭಗವಂತನು ಓದಿಸುತ್ತಾರೆ. ಕೆಲವರು ನಿಶ್ಚಯವನ್ನೂ ಇಡುತ್ತಾರೆ, ಮತ್ತೆ ಸಂಶಯಬುದ್ಧಿಯವರು ಆಗಿ ಬಿಡುತ್ತಾರೆ. ಆಗ ಎಲ್ಲರೂ ಅವರಿಗೆ ಹೇಳತೊಡಗುತ್ತಾರೆ - ನಮಗೆ ಭಗವಂತನು ಓದಿಸುತ್ತಾರೆಂದು ನೀವು ಹೇಳುತ್ತಿದ್ದಿರಿ, ಅಂದಮೇಲೆ ಭಗವಂತನನ್ನು ಏಕೆ ಬಿಟ್ಟು ಬಂದಿದ್ದೀರಿ? ಸಂಶಯ ಬರುವುದರಿಂದಲೇ ಬಿಟ್ಟು ಹೋಗುತ್ತಾರೆ. ಯಾವುದಾದರೊಂದು ವಿಕರ್ಮ ಮಾಡುತ್ತಾರೆ. ಭಗವಾನುವಾ ಚ- ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸುವುದರಿಂದಲೇ ಜಗಜ್ಜೀತರಾಗುವಿರಿ. ಯಾರು ಪಾವನವಾಗುವರೋ ಅವರೇ ಪಾವನ ಪ್ರಪಂಚದಲ್ಲಿ ಹೋಗುತ್ತಾರೆ, ಇಲ್ಲಿ ರಾಜಯೋಗದ ಮಾತಾಗಿದೆ. ನೀವು ಹೋಗಿ ರಾಜ್ಯಭಾರ ಮಾಡುತ್ತೀರಿ. ಉಳಿದ ಆತ್ಮರು ತಮ್ಮ ಲೆಕ್ಕಾಚಾರಗಳನ್ನು ಮುಗಿಸಿ ಹಿಂತಿರುಗಿ ಹೋಗುವರು. ಇದು ಅಂತಿಮ ಸಮಯವಾಗಿದೆ. ಬುದ್ಧಿಯು ಹೇಳುತ್ತದೆ - ಸತ್ಯಯುಗವು ಅವಶ್ಯವಾಗಿ ಸ್ಥಾಪನೆಯಾಗಲಿದೆ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಉಳಿದೆಲ್ಲರೂ ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ ನಂತರ ಅವರು ತಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗುವುದು. ನೀವೂ ಸಹ ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗುವುದಕ್ಕಾಗಿ ತಮ್ಮ ಪುರುಷಾರ್ಥ ಮಾಡುತ್ತಾ ಇರುತ್ತೀರಿ. ತಮ್ಮನ್ನು ಮಾಲೀಕರೆಂದು ತಿಳಿದುಕೊಳ್ಳುವರಲ್ಲವೆ. ಪ್ರಜೆಗಳೂ ಮಾಲೀಕರಾಗಿರುತ್ತಾರೆ. ಈಗಲೂ ಪ್ರಜೆಗಳು ನಮ್ಮ ಭಾರತವೆಂದು ಹೇಳುತ್ತಾರಲ್ಲವೆ. ನೀವು ತಿಳಿದುಕೊಂಡಿದ್ದೀರಿ- ಎಲ್ಲರೂ ಈಗ ನರಕವಾಸಿಗಳಾಗಿದ್ದಾರೆ. ನಾವೀಗ ಸ್ವರ್ಗವಾಸಿಗಳಾಗುವುದಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೇವೆ. ಎಲ್ಲರೂ ಸ್ವರ್ಗವಾಸಿಗಳಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಯಾವಾಗ ಭಕ್ತಿಮಾರ್ಗವು ಮುಕ್ತಾಯವಾಗುವುದೋ ಆಗಲೇ ನಾನು ಬರುತ್ತೇನೆ, ನಾನೇ ಬಂದು ಎಲ್ಲಾ ಭಕ್ತರಿಗೆ ಭಕ್ತಿಯ ಫಲವನ್ನು ಕೊಡಬೇಕಾಗಿದೆ. ಬಹುತೇಕ ಸಂಖ್ಯೆಯು ಭಕ್ತರದಾಗಿದೆಯಲ್ಲವೆ. ಎಲ್ಲರೂ ಸಹ ಓ ಗಾಡ್ಫಾದರ್ ಎಂದು ಕರೆಯುತ್ತಿರುತ್ತಾರೆ. ಭಕ್ತರ ಬಾಯಿಂದ ಓ ಗಾಡ್ಫಾದರ್, ಹೇ ಭಗವಂತ ಎಂದು ಅವಶ್ಯವಾಗಿ ಹೊರ ಬರುತ್ತದೆ. ಈಗ ಭಕ್ತಿ ಮತ್ತು ಜ್ಞಾನದಲ್ಲಿ ಅಂತರವಿದೆ. ನಿಮ್ಮ ಬಾಯಿಂದ ಎಂದೂ ಸಹ ಹೇ ಈಶ್ವರ, ಹೇ ಭಗವಂತ ಎಂಬುದು ಬರುವುದಿಲ್ಲ. ಮನುಷ್ಯರಿಗಂತೂ ಇದು ಅರ್ಧಕಲ್ಪದಿಂದ ಹವ್ಯಾಸವಾಗಿ ಬಿಟ್ಟಿದೆ. ನೀವು ತಿಳಿದುಕೊಂಡಿದ್ದೀರಿ, ಅವರು ನಮ್ಮ ತಂದೆಯಾಗಿದ್ದಾರೆ ಅಂದಮೇಲೆ ಹೇ ತಂದೆಯೇ ಎಂದು ಹೇಳುವಂತಿಲ್ಲ. ತಂದೆಯಿಂದ ನೀವು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಮೊದಲು ಈ ನಿಶ್ಚಯವಿರಲಿ - ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯು ಮಕ್ಕಳನ್ನು ಆಸ್ತಿ ತೆಗೆದುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡುತ್ತಾರೆ. ಇವರು ಸತ್ಯ ತಂದೆಯಲ್ಲವೆ. ತಂದೆಗೆ ಗೊತ್ತಿದೆ, ನಾನು ಯಾವ ಮಕ್ಕಳಿಗೆ ಜ್ಞಾನಾಮೃತವನ್ನು ಕುಡಿಸಿ ಜ್ಞಾನ ಚಿತೆಯ ಮೇಲೆ ಕುಳ್ಳರಿಸಿ ವಿಶ್ವದ ಮಾಲೀಕರು ದೇವತೆಗಳನ್ನಾಗಿ ಮಾಡಿದ್ದೆನು, ಅವರೇ ಕಾಮ ಚಿತೆಯ ಮೇಲೆ ಕುಳಿತು ಭಸ್ಮೀಭೂತರಾಗಿ ಬಿಟ್ಟಿದ್ದಾರೆ. ನಾನೀಗ ಪುನಃ ಜ್ಞಾನ ಚಿತೆಯ ಮೇಲೆ ಕುಳ್ಳರಿಸಿ ಘೋರ ನಿದ್ರೆಯಿಂದ ಎಬ್ಬಿಸಿ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ.

ತಂದೆಯು ತಿಳಿಸಿದ್ದಾರೆ - ನೀವಾತ್ಮರು ಅಲ್ಲಿ ಶಾಂತಿಧಾಮ ಮತ್ತು ಸುಖಧಾಮದಲ್ಲಿ ಇರುತ್ತೀರಿ, ಸುಖಧಾಮಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿ ದೇವತೆಗಳಿರುತ್ತಾರೆ. ಪರಮಧಾಮವು ಆತ್ಮಗಳ ಮಧುರ ಮನೆ ಆಗಿದೆ, ಎಲ್ಲಾ ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸಲು ಆ ಶಾಂತಿಧಾಮದಿಂದ ಬರುತ್ತಾರೆ. ನಾವಾತ್ಮರು ಇಲ್ಲಿನ ನಿವಾಸಿಗಳಲ್ಲ, ಆ ನಾಟಕದ ಪಾತ್ರಧಾರಿಗಳು ಇಲ್ಲಿನ ನಿವಾಸಿಗಳಾಗಿರುತ್ತಾರೆ, ಕೇವಲ ಮನೆಯಿಂದ ಬಂದು ಉಡುಪುಗಳನ್ನು ಬದಲಾಯಿಸಿ ಪಾತ್ರವನ್ನು ಅಭಿನಯಿಸುತ್ತಾರೆ. ನೀವಂತೂ ತಿಳಿದುಕೊಂಡಿದ್ದೀರಿ - ನಮ್ಮ ಮನೆಯು ಶಾಂತಿಧಾಮವಾಗಿದೆ, ಎಲ್ಲಿಗೆ ನಾವು ಮತ್ತೆ ಮರಳಿ ಹೋಗುತ್ತೇವೆ. ಯಾವಾಗ ಎಲ್ಲಾ ಪಾತ್ರಧಾರಿಗಳೂ ಸ್ಟೇಜಿನ ಮೇಲೆ ಬಂದು ಬಿಡುವರೋ ಆಗ ತಂದೆಯು ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಅವರಿಗೆ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುತ್ತಾರೆ. ದುಃಖಹರ್ತ-ಸುಖಕರ್ತನಾಗಿದ್ದಾರೆ ಅಂದಮೇಲೆ ಇಷ್ಟೆಲ್ಲಾ ಮನುಷ್ಯರು ಎಲ್ಲಿಗೆ ಹೋಗುವರು, ವಿಚಾರ ಮಾಡಿ - ಪತಿತ-ಪಾವನನನ್ನು ಏತಕ್ಕಾಗಿ ಕರೆಯುತ್ತಾರೆ? ತಮ್ಮ ಮೃತ್ಯುವಿಗಾಗಿ. ದುಃಖದ ಪ್ರಪಂಚದಲ್ಲಿರಲು ಇಷ್ಟವಿಲ್ಲ, ಆದ್ದರಿಂದ ಮನೆಗೆ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಇವರೆಲ್ಲರೂ ಮುಕ್ತಿಯನ್ನೇ ಒಪ್ಪುವವರಾಗಿದ್ದಾರೆ, ಭಾರತದ ಪ್ರಾಚೀನ ಯೋಗವು ಎಷ್ಟು ಪ್ರಸಿದ್ಧವಾಗಿದೆ! ಪ್ರಾಚೀನ ರಾಜಯೋಗವನ್ನು ಕಲಿಸಲು ವಿದೇಶಕ್ಕೂ ಹೋಗುತ್ತಾರೆ. ಕ್ರಿಶ್ಚಿಯನ್ನರಲ್ಲಿ ಅನೇಕರು ಸನ್ಯಾಸಿಗಳಿಗೆ ಗೌರವ ಕೊಡುತ್ತಾರೆ. ಕಾವೀ ಬಟ್ಟೆಯ ಯಾವ ಉಡುಪು ಇದೆಯೋ ಅದು ಹಠಯೋಗದ್ದಾಗಿದೆ. ನೀವಂತೂ ಮನೆ ಮಠವನ್ನು ಬಿಡಬೇಕಾಗಿಲ್ಲ. ಯಾವುದೇ ಶ್ವೇತ ವಸ್ತ್ರಗಳನ್ನೇ ಧರಿಸಬೇಕೆಂಬ ಬಂಧನವಿಲ್ಲ ಆದರೆ ಬಿಳಿಯ ಬಣ್ಣವು ಬಹಳ ಚೆನ್ನಾಗಿದೆ. ನೀವು ಭಟ್ಟಿಯಲ್ಲಿ ಇದ್ದಿರಿ ಆದ್ದರಿಂದ ಉಡುಪುಗಳೂ ಸಹ ಇವೇ ಆಗಿ ಬಿಟ್ಟಿದೆ. ಇತ್ತೀಚೆಗೆ ಬಿಳಿಯ ಬಣ್ಣವನ್ನು ಇಷ್ಟ ಪಡುತ್ತಾರೆ. ಮನುಷ್ಯರು ಮರಣ ಹೊಂದಿದಾಗ ಬಿಳಿಯ ಹೊದಿಕೆಯನ್ನು ಹೊದಿಸುತ್ತಾರೆ ಅಂದಾಗ ಮೊದಲು ಯಾರಿಗಾದರೂ ತಂದೆಯ ಪರಿಚಯ ಕೊಡಬೇಕಾಗಿದೆ. ಇಬ್ಬರು ತಂದೆಯರಿದ್ದಾರೆ, ಈ ಮಾತುಗಳನ್ನು ತಿಳಿದುಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಪ್ರದರ್ಶನಿಯಲ್ಲಿ ಇಷ್ಟೊಂದು ತಿಳಿಸುವುದಕ್ಕೆ ಆಗುವುದಿಲ್ಲ. ಸತ್ಯಯುಗದಲ್ಲಿ ಒಬ್ಬರು ತಂದೆಯಿರುತ್ತಾರೆ, ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ ಏಕೆಂದರೆ ಭಗವಂತನು ಪ್ರಜಾಪಿತ ಬ್ರಹ್ಮನ ತನುವಿನಲ್ಲಿ ಬರುತ್ತಾರೆ ಆದ್ದರಿಂದ ಬ್ರಹ್ಮನೂ ಸಹ ಎಲ್ಲರ ತಂದೆಯಾದರು, ಈಗ ಮೂವರು ತಂದೆಯರಲ್ಲಿ ಶ್ರೇಷ್ಠ ಆಸ್ತಿಯು ಯಾರದು? ನಿರಾಕಾರ ತಂದೆಯು ಆಸ್ತಿಯನ್ನು ಹೇಗೆ ಕೊಡುವರು? ಅವರು ಬ್ರಹ್ಮಾರವರ ಮೂಲಕ ಕೊಡುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ ಮತ್ತು ಬ್ರಹ್ಮನ ಮೂಲಕವೇ ಆಸ್ತಿಯನ್ನು ಕೊಡುತ್ತಾರೆ. ಈ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು, ಶಿವನು ತಂದೆಯಾಗಿದ್ದಾರೆ ಮತ್ತು ಈ ಪ್ರಜಾಪಿತ ಬ್ರಹ್ಮನು ಆದಿ ದೇವ ಮತ್ತು ಇವರು ಆದಿ ದೇವಿಯಾಗಿದ್ದಾರೆ. ಇವರು ಮನುಕುಲದ ಮೂಲಪಿತನಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನು ಶಿವನಿಗೆ ಮನುಕುಲದ ಪಿತಾಮಹನೆಂದು ಹೇಳುವುದಿಲ್ಲ. ನಾನು ಎಲ್ಲರ ತಂದೆಯಾಗಿದ್ದೇನೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ನೀವು ಸಹೋದರ-ಸಹೋದರಿಯರಾದಿರಿ, ಪರಸ್ಪರ ಕುದೃಷ್ಟಿಯನ್ನು ಇಡಲು ಸಾಧ್ಯವಿಲ್ಲ. ಒಂದುವೇಳೆ ಪರಸ್ಪರ ವಿಕಾರ ದೃಷ್ಟಿಯು ಸೆಳೆಯುತ್ತದೆ ಎಂದರೆ ಅಂತಹವರು ಕೆಳಗೆ ಬೀಳುತ್ತಾರೆ, ತಂದೆಯನ್ನೇ ಮರೆತು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ, ನೀವು ನನ್ನ ಮಕ್ಕಳಾಗಿ ಮುಖ ಕಪ್ಪು ಮಾಡಿಕೊಳ್ಳುತ್ತೀರಿ, ಬೇಹದ್ದಿನ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ನಿಮಗೆ ಈ ನಶೆಯೇರಿದೆ. ತಿಳಿದುಕೊಂಡಿದ್ದೀರಿ, ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಭೌತಿಕ ಸಂಬಂಧಗಳನ್ನೂ ನೋಡಿಕೊಳ್ಳಬೇಕಾಗಿದೆ. ಲೌಕಿಕ ತಂದೆಯನ್ನು ನೀವು ತಂದೆಯೆಂದೇ ಹೇಳುತ್ತೀರಲ್ಲವೆ. ಅವರನ್ನು ನೀವು ಸಹೋದರನೆಂದು ಹೇಳುವಂತಿಲ್ಲ. ಸಾಮಾನ್ಯ ರೀತಿಯಲ್ಲಿ ತಂದೆಯನ್ನು ತಂದೆಯೆಂತಲೂ ಹೇಳಬೇಕಾಗುತ್ತದೆ ಆದರೆ ಬುದ್ಧಿಯಲ್ಲಿದೆ, ಇವರು ಅಲೌಕಿಕ ತಂದೆಯಾಗಿದ್ದಾರೆ ಎಂದು. ಜ್ಞಾನವಂತೂ ಇದೆಯಲ್ಲವೆ, ಈ ಜ್ಞಾನವು ಬಹಳ ವಿಚಿತ್ರವಾಗಿದೆ. ಇತ್ತೀಚೆಗೆ ಹೆಸರನ್ನೂ ತೆಗೆದುಕೊಳ್ಳುತ್ತಾರೆ ಆದರೆ ಯಾರಾದರೂ ಹೊರಗಿನ ವ್ಯಕ್ತಿಗಳ ಮುಂದೆ ಸಹೋದರನೆಂದು ಹೇಳಿದ್ದೇ ಆದರೆ ಇವರ ತಲೆಯು ಕೆಟ್ಟು ಹೋಗಿದೆ ಎಂದು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಬಹಳ ಯುಕ್ತಿ ಬೇಕಾಗಿದೆ. ನಿಮ್ಮದು ಗುಪ್ತ ಜ್ಞಾನ, ಗುಪ್ತ ಸಂಬಂಧವಾಗಿದೆ. ಬಹಳ ಮಟ್ಟಿಗೆ ಸ್ತ್ರೀ ತನ್ನ ಪತಿಯನ್ನು ಹೆಸರಿಂದ ಕರೆಯುವುದಿಲ್ಲ. ಪತಿಯು ಸ್ತ್ರೀ ಹೆಸರನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಬಹಳ ಯುಕ್ತಿಯಿಂದ ನಡೆಯಬೇಕಾಗಿದೆ. ಲೌಕಿಕದೊಂದಿಗೂ ಸಂಬಂಧವನ್ನು ನಿಭಾಯಿಸಬೇಕಾಗಿದೆ ಆದರೆ ಬುದ್ಧಿಯು ಮಾತ್ರ ಮೇಲಿರಲಿ, ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಬಾಕಿ ಚಿಕ್ಕಪ್ಪನನ್ನು ಚಿಕ್ಕಪ್ಪ, ತಂದೆಯನ್ನು ತಂದೆಯೆಂತಲೂ ಹೇಳಬೇಕಾಗುತ್ತದೆ. ಯಾರು ಬ್ರಹ್ಮಾಕುಮಾರ ಕುಮಾರಿಯರಾಗಿಲ್ಲವೋ ಅವರು ಸಹೋದರ-ಸಹೋದರಿಯೆಂದು ತಿಳಿದುಕೊಳ್ಳುವುದಿಲ್ಲ. ಯಾರು ಬಿ.ಕೆ.ಗಳಾಗಿರುವರೋ ಅವರು ಈ ಮಾತುಗಳನ್ನು ತಿಳಿದುಕೊಳ್ಳುವರು. ಹೊರಗಿನವರಂತೂ ಮೊದಲೇ ಎದುರಾಗುತ್ತಾರೆ. ಇದರಲ್ಲಿ ತಿಳಿದುಕೊಳ್ಳುವ ಬುದ್ಧಿಯು ಚೆನ್ನಾಗಿರಬೇಕು. ತಂದೆಯು ಮಕ್ಕಳನ್ನು ವಿಶಾಲ ಬುದ್ಧಿಯವರಾನ್ನಾಗಿ ಮಾಡುತ್ತಾರೆ, ನೀವು ಮೊದಲು ಮಿತವಾದ ಬುದ್ಧಿಯವರಾಗಿದ್ದಿರಿ, ಈಗ ಬುದ್ಧಿಯು ಬೇಹದ್ದಿನಲ್ಲಿ ಹೋಗುತ್ತದೆ, ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ, ಇವರೆಲ್ಲರೂ ನಮ್ಮ ಸಹೋದರ-ಸಹೋದರಿಯರಾಗಿದ್ದಾರೆ. ಆದರೆ ಮನೆಯಲ್ಲಿ ಅತ್ತೆಯನ್ನು ಅತ್ತೆಯೆಂದೇ ಹೇಳುತ್ತಾರೆ, ಸಹೋದರಿಯೆಂದು ಹೇಳುವರೇ! ಮನೆಯಲ್ಲಿರುತ್ತಾ ಬಹಳ ಯುಕ್ತಿಯಿಂದ ನಡೆದುಕೊಳ್ಳಬೇಕು, ಇಲ್ಲವಾದರೆ ಇವರು ಪತಿಗೆ ಸಹೋದರ, ಅತ್ತೆಗೆ ಸಹೋದರಿಯೆಂದು ಹೇಳುತ್ತಾರೆ. ಇವರಿಗೇನಾಗಿದೆ? ಈ ಜ್ಞಾನದ ಮಾತುಗಳು ನಿಮಗೇ ಗೊತ್ತಿದೆ, ಮತ್ತ್ಯಾರಿಗೂ ಗೊತ್ತಿಲ್ಲ. ಪ್ರಭು ನಿನ್ನ ಗತಿಮತವು ನಿಮಗೇ ಗೊತ್ತು ಎಂದು ಹೇಳುತ್ತಾರಲ್ಲವೆ. ನೀವೀಗ ಅವರ ಮಕ್ಕಳಾಗುತ್ತೀರಿ ಅಂದಮೇಲೆ ನಿಮ್ಮ ಗತಿಮತವು ನಿಮಗೇ ತಿಳಿದಿದೆ. ಬಹಳ ಸಂಭಾಲನೆಯಿಂದ ನಡೆಯಬೇಕಾಗುತ್ತದೆ. ಎಲ್ಲಿಯೂ ಯಾರು ತಬ್ಬಿಬ್ಬಾಗಬಾರದು ಆದ್ದರಿಂದ ಪ್ರದರ್ಶನಿಯಲ್ಲಿ ನೀವು ಮಕ್ಕಳು ಮೊಟ್ಟ ಮೊದಲು ತಿಳಿಸಬೇಕಾಗಿದೆ - ನಮಗೆ ಓದಿಸುವವರು ಭಗವಂತನಾಗಿದ್ದಾರೆ. ಈಗ ತಿಳಿಸಿ - ಭಗವಂತನು ಯಾರು? ನಿರಾಕಾರ ಶಿವನೋ ಅಥವಾ ದೇಹಧಾರಿ ಶ್ರೀಕೃಷ್ಣನೋ! ಗೀತೆಯಲ್ಲಿ ಯಾವ ಭಗವಾನುವಾಚ ಇದೆಯೋ ಅದನ್ನು ಶಿವ ಪರಮಾತ್ಮನು ಮಹಾವಾಕ್ಯಗಳನ್ನು ಉಚ್ಛರಿಸಿದ್ದಾರೆಯೋ ಅಥವಾ ಶ್ರೀಕೃಷ್ಣನೋ? ಕೃಷ್ಣನಂತೂ ಸ್ವರ್ಗದ ಮೊದಲ ರಾಜಕುಮಾರನಾಗಿದ್ದಾನೆ. ಎಂದೂ ಸಹ ಕೃಷ್ಣ ಜಯಂತಿಯೇ ಶಿವ ಜಯಂತಿಯೆಂದು ಹೇಳಲು ಸಾಧ್ಯವಿಲ್ಲ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿ ಆಗುತ್ತದೆ, ಶಿವ ಜಯಂತಿಯಿಂದ ಶ್ರೀಕೃಷ್ಣನು ಸ್ವರ್ಗದ ರಾಜಕುಮಾರನು ಹೇಗಾದನು ಎಂಬುದನ್ನು ತಿಳಿದುಕೊಳ್ಳುವ ಮಾತಾಗಿದೆ. ಶಿವ ಜಯಂತಿಯ ನಂತರ ಗೀತಾ ಜಯಂತಿ, ಅನಂತರ ಕೃಷ್ಣ ಜಯಂತಿ ಆಗುತ್ತದೆ ಏಕೆಂದರೆ ತಂದೆಯು ರಾಜಯೋಗವನ್ನು ಕಲಿಸುತ್ತಾರಲ್ಲವೆ. ಮಕ್ಕಳ ಬುದ್ಧಿಯಲ್ಲಿ ಬಂದಿದೆಯಲ್ಲವೆ. ಎಲ್ಲಿಯವರೆಗೆ ಶಿವ ಪರಮಾತ್ಮನು ಬರುವುದಿಲ್ಲವೋ ಅಲ್ಲಿಯವರೆಗೆ ಶಿವ ಜಯಂತಿಯನ್ನು ಆಚರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಶಿವನು ಬಂದು ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಕೃಷ್ಣ ಜಯಂತಿಯನ್ನು ಹೇಗೆ ಆಚರಿಸಲಾಗುವುದು! ಕೃಷ್ಣನ ಜನ್ಮವನ್ನಂತೂ ಆಚರಿಸುತ್ತಾರೆ, ಆದರೆ ತಿಳಿದುಕೊಳ್ಳುವುದಿಲ್ಲ. ಕೃಷ್ಣನು ರಾಜಕುಮಾರನಾಗಿದ್ದನು ಅಂದಮೇಲೆ ಅವಶ್ಯವಾಗಿ ಸತ್ಯಯುಗದಲ್ಲಿಯೇ ಇರುವನಲ್ಲವೆ. ಅವಶ್ಯವಾಗಿ ದೇವಿ-ದೇವತೆಗಳ ರಾಜಧಾನಿಯಿರುವುದು, ಕೇವಲ ಒಬ್ಬ ಕೃಷ್ಣನಿಗೇ ಮಾತ್ರವೇ ರಾಜಧಾನಿಯು ಸಿಗಲಿಲ್ಲ. ಅವಶ್ಯವಾಗಿ ಕೃಷ್ಣ ಪುರಿಯೂ ಇರಬೇಕಲ್ಲವೆ, ಕೃಷ್ಣ ಪುರಿಯೆಂದು ಹೇಳುತ್ತಾರೆ ಆದರೆ ಇದು ಕಂಸ ಪುರಿಯಾಗಿದೆ. ಹೊಸ ಪ್ರಪಂಚವು ಕೃಷ್ಣ ಪುರಿ, ಹಳೆಯ ಪ್ರಪಂಚವು ಕಂಸ ಪುರಿಯಾಗಿದೆ. ದೇವತೆಗಳು ಮತ್ತು ಅಸುರರ ಯುದ್ಧವಾಯಿತು, ದೇವತೆಗಳ ವಿಜಯವಾಯಿತೆಂದು ಹೇಳುತ್ತಾರೆ ಆದರೆ ಈ ರೀತಿ ಆಗಲಿಲ್ಲ. ಕಂಸಪುರಿ ಸಮಾಪ್ತಿಯಾಯಿತು ನಂತರ ಕೃಷ್ಣ ಪುರಿಯು ಸ್ಥಾಪನೆಯಾಯಿತಲ್ಲವೆ. ಕಂಸ ಪುರಿಯು ಹಳೆಯ ಪ್ರಪಂಚದಲ್ಲಿಯೇ ಇರುವುದು, ಹೊಸ ಪ್ರಪಂಚದಲ್ಲಿ ಈ ಕಂಸ ಮೊದಲಾದ ದೈತ್ಯರಿರುವರೇ? ಇಲ್ಲಿ ನೋಡಿ, ಎಷ್ಟೊಂದು ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಬಹಳ ಕಡಿಮೆಯಿರುತ್ತಾರೆ. ಇದನ್ನು ನೀವು ತಿಳಿದುಕೊಳ್ಳುತ್ತೀರಿ, ಈಗ ನಿಮ್ಮ ಬುದ್ಧಿಯು ಕೆಲಸ ಮಾಡುತ್ತದೆ, ದೇವತೆಗಳು ಯಾವುದೇ ಯುದ್ಧ ಮಾಡಲಿಲ್ಲ. ದೈವೀ ಸಂಪ್ರದಾಯದವರು ಸತ್ಯಯುಗದಲ್ಲಿಯೇ ಇರುತ್ತಾರೆ, ಇಲ್ಲಿ ಆಸುರೀ ಸಂಪ್ರದಾಯದವರು ಇದ್ದಾರೆ. ಬಾಕಿ ದೇವತೆಗಳು ಮತ್ತು ಅಸುರರ ಯುದ್ಧವಾಗಲಿ, ಕೌರವರು-ಪಾಂಡವರ ಯುದ್ಧವಾಗಲಿ ಆಗಲಿಲ್ಲ. ನೀವು ರಾವಣನ ಮೇಲೆ ಜಯ ಗಳಿಸುತ್ತೀರಿ. ತಂದೆಯು ತಿಳಿಸುತ್ತಾರೆ - ಈ ವಿಕಾರಗಳ ಮೇಲೆ ಜಯ ಗಳಿಸಿದರೆ ಜಗಜ್ಜೀತರಾಗುವಿರಿ. ಇದರಲ್ಲಿ ಯಾವುದೇ ಹೊಡೆದಾಡುವುದಿಲ್ಲ, ಯುದ್ಧದ ಹೆಸರನ್ನು ತೆಗೆದುಕೊಂಡರೆ ಹಿಂಸಕರು ಎಂದು ಆಗಿ ಬಿಡುವುದು. ರಾವಣನ ಮೇಲೆ ಜಯ ಗಳಿಸಬೇಕಾಗಿದೆ ಆದರೆ ಅಹಿಂಸೆಯಿಂದ. ಕೇವಲ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದು. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ತಂದೆಯು ತಿಳಿಸುತ್ತಾರೆ ನನ್ನ ಜೊತೆ ಬುದ್ಧಿಯೋಗವನ್ನಿಡಿ ಆಗ ನಿಮ್ಮ ಪಾಪಗಳು ಭಸ್ಮವಾಗುವುದು. ತಂದೆಯು ಪತಿತ-ಪಾವನನಾಗಿದ್ದಾರೆ ಅಂದಮೇಲೆ ಬುದ್ಧಿಯೋಗವನ್ನು ಆ ತಂದೆಯೊಂದಿಗೆ ಜೋಡಿಸಬೇಕಾಗಿದೆ ಆಗಲೇ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ. ನೀವೀಗ ಪ್ರತ್ಯಕ್ಷದಲ್ಲಿ ಅವರೊಂದಿಗೆ ಯೋಗವನ್ನು ಇಡುತ್ತೀರಿ, ಇದರಲ್ಲಿ ಯಾವುದೇ ಯುದ್ಧದ ಮಾತಿಲ್ಲ. ಯಾರು ಚೆನ್ನಾಗಿ ಓದುವರೋ, ತಂದೆಯ ಜೊತೆ ಯೋಗವನ್ನು ಇಡುವರೋ ಅವರೇ ಕಲ್ಪದ ಮೊದಲಿನ ತರಹ ತಂದೆಯಿಂದ ಆಸ್ತಿಯನ್ನು ಪಡೆಯುವರು. ಈ ಹಳೆಯ ಪ್ರಪಂಚದ ವಿನಾಶವೂ ಆಗುವುದು, ಎಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೋಗುತ್ತಾರೆ ಮತ್ತೆ ತರಗತಿಯೂ ವರ್ಗಾವಣೆಯಾಗಿ ನಂಬರ್ವಾರ್ ಹೋಗಿ ಕುಳಿತುಕೊಳ್ಳುತ್ತಾರಲ್ಲವೆ. ನೀವೂ ಸಹ ನಂಬರ್ವಾರ್ ಹೋಗಿ ಅಲ್ಲಿ ರಾಜ್ಯಭಾರ ಮಾಡುತ್ತೀರಿ, ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಅಂತಿಮ ಸಮಯದಲ್ಲಿ ಸತ್ಯಯುಗದ ಸ್ಥಾಪನೆಯಾಗುತ್ತಿದೆ ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ತಂದೆ ಮತ್ತು ತಂದೆಯ ಕಾರ್ಯದಲ್ಲಿ ಎಂದೂ ಸಂಶಯ ಬರಬಾರದು.

2. ಜ್ಞಾನ ಮತ್ತು ಸಂಬಂಧವು ಗುಪ್ತವಾಗಿದೆ ಆದ್ದರಿಂದ ಲೌಕಿಕದಲ್ಲಿ ಬಹಳ ಯುಕ್ತಿಯಿಂದ ವಿಶಾಲ ಬುದ್ಧಿಯವರಾಗಿ ನಡೆಯಬೇಕಾಗಿದೆ. ಕೇಳುವವರು ತಬ್ಬಿಬ್ಬಾಗುವಂತಹ ಶಬ್ಧಗಳನ್ನು ಮಾತನಾಡಬಾರದು.

ವರದಾನ:
ಮನಮತ, ಪರಮತವನ್ನು ಸಮಾಪ್ತಿಗೊಳಿಸಿ ಶ್ರೀಮತದಂತೆ ಪದಮದಷ್ಟು ಸಂಪಾದನೆಯ ಜಮಾ ಮಾಡುವಂತಹ ಪದಮಾಪದಮ ಭಾಗ್ಯಶಾಲಿ ಭವ.

ಶ್ರೀಮತದಂತೆ ನಡೆಯುವವರು ಒಂದು ಸಂಕಲ್ಪವನ್ನೂ ಮನಮತ ಅಥವಾ ಪರಮತದಂತೆ ಮಾಡಲು ಸಾಧ್ಯವಿಲ್ಲ. ಸ್ಥಿತಿಯ ವೇಗವೇನಾದರೂ ತೀವ್ರವಾಗಿಲ್ಲದಿದ್ದರೆ, ಅವಶ್ಯವಾಗಿ ಎಲ್ಲಿಯೋ ಒಂದುಕಡೆ ಶ್ರೀಮತದಲ್ಲಿ ಮನಮತ ಅಥವಾ ಪರಮತದ ಸೇರ್ಪಡೆಯಿದೆ.ಮನಮತ ಅರ್ಥಾತ್ ಯಾವ ಸಂಕಲ್ಪವು ಅಲ್ಪಜ್ಞ ಆತ್ಮನ ಸಂಸ್ಕಾರದನುಸಾರ ಉತ್ಪನ್ನವಾಗುತ್ತದೆ, ಅದು ಸ್ಥಿತಿಯನ್ನು ಏರುಪೇರು ಮಾಡುತ್ತದೆ. ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿರಿ ಹಾಗೂ ಅನ್ಯರಿಗೂ ಮಾಡಿಸಿರಿ, ಒಂದು ಹೆಜ್ಜೆಯೂ ಸಹ ಶ್ರೀಮತದ ಹೊರತು ಆಗಬಾರದು. ಹೀಗಿದ್ದಾಗ ಪದುಮಗಳ ಸಂಪಾದನೆಯನ್ನು ಜಮಾ ಮಾಡಿಕೊಂಡು ಪದಮಾಪದಮ ಭಾಗ್ಯಶಾಲಿಗಳಾಗಲು ಸಾಧ್ಯವಾಗುವುದು.

ಸ್ಲೋಗನ್:
ಮನಸ್ಸಿನಲ್ಲಿ ಸರ್ವರ ಕಲ್ಯಾಣದ ಭಾವನೆಯಿರಲಿ - ಇದೇ ವಿಶ್ವ ಕಲ್ಯಾಣಕಾರಿ ಆತ್ಮನ ಕರ್ತವ್ಯವಾಗಿದೆ.