11.10.20    Avyakt Bapdada     Kannada Murli     31.03.86     Om Shanti     Madhuban


"ಸರ್ವಶಕ್ತಿ-ಸಂಪನ್ನರಾಗುವ ಹಾಗೂ ವರದಾನವನ್ನು ಪಡೆದುಕೊಳ್ಳುವ ವರ್ಷ"


ಇಂದು ಸರ್ವ ಖಜಾನೆಗಳ ಮಾಲೀಕನು ತನ್ನ ಮಾಸ್ಟರ್ ಮಕ್ಕಳನ್ನು ನೋಡುತ್ತಿದ್ದಾರೆ. ಬಾಲಕನಿಂದ ಮಾಲೀಕರು ಎಲ್ಲಿಯವರೆಗೆ ಆಗಿದ್ದಾರೆ ಎಂಬುದನ್ನು ನೋಡುತ್ತಿದ್ದಾರೆ. ಈ ಸಮಯದಲ್ಲಿ ಯಾರು ಶ್ರೇಷ್ಠ ಆತ್ಮರು, ಸರ್ವ ಶಕ್ತಿವಂತಗಳ ಸರ್ವ ಖಜಾನೆಗಳ ಮಾಲೀಕರು ಆಗಿದ್ದಾರೆಯೋ, ಮಾಲೀಕತ್ವದ ಆ ಸಂಸ್ಕಾರವು ಭವಿಷ್ಯದಲ್ಲಿಯೂ ವಿಶ್ವದ ಮಾಲೀಕರನ್ನಾಗಿ ಮಾಡುತ್ತದೆ. ಅಂದಾಗ ಏನು ನೋಡಿದರು? ಬಾಲಕರಂತು ಎಲ್ಲರೂ ಆಗಿದ್ದಾರೆ, ಬಾಬಾ ಮತ್ತು ನಾನು ಎನ್ನುವ ಲಗನ್ ಅವಶ್ಯವಾಗಿಯೇ ಎಲ್ಲಾ ಮಕ್ಕಳಲ್ಲಿ ಬಹಳ ಚೆನ್ನಾಗಿಯೂ ಇದೆ. ಬಾಲಕನೆನ್ನುವ ನಶೆಯಂತು ಎಲ್ಲರಲ್ಲಿಯೂ ಇದೆ. ಆದರೆ ಬಾಲಕನಿಂದ ಮಾಲೀಕ ಅಂದರೆ ತಂದೆಯ ಸಂಪನ್ನರು. ಆ ಸಮಯದಲ್ಲಿ ಬಾಲಕನ ಸ್ಥಿತಿ ಮತ್ತು ಮಾಲೀಕತ್ವದ ಸ್ಥಿತಿಯಲ್ಲಿ ಅಂತರವನ್ನು ನೋಡಿದರು. ಮಾಲೀಕತ್ವ ಅಂದರೆ ಪ್ರತೀ ಹೆಜ್ಜೆಯಲ್ಲಿ ಸ್ವತಹವಾಗಿ ಸ್ವಯಂ ಸಂಪನ್ನ ಸ್ಥಿತಿಯಲ್ಲಿ ಇರುತ್ತಾರೆ ಮತ್ತು ಸರ್ವರ ಬಗ್ಗೆಯೂ ಸಂಪನ್ನ ಸ್ಥಿತಿಯಲ್ಲಿರುತ್ತಾರೆ. ಇಂತಹವರಿಗೆ ಮಾಸ್ಟರ್ ಅಂದರೆ ಬಾಲಕನಿಂದ ಮಾಲೀಕನೆಂದು ಹೇಳಲಾಗುತ್ತದೆ. ಮಾಲೀಕತ್ವದ ವಿಶೇಷತೆಯಾಗಿದೆ - ಮಾಲೀಕತ್ವದ ನಶೆಯು ಎಷ್ಟಿದೆಯೋ ಅಷ್ಟೇ ಸದಾ ವಿಶ್ವ ಸೇವಾಧಾರಿಯ ಸಂಸ್ಕಾರವು ಇಮರ್ಜ್ ರೂಪದಲ್ಲಿರುತ್ತದೆ. ಮಾಲೀಕತ್ವದ ನಶೆಯು ಎಷ್ಟಿರುತ್ತದೆಯೋ ಅಷ್ಟು ವಿಶ್ವ ಸೇವಾಧಾರಿಯ ನಶೆಯೂ ಸಹ ಜೊತೆ ಜೊತೆಯಲ್ಲಿಯೇ ಇರುತ್ತದೆ. ಎರಡೂ ಸಮಾನತೆಯಿರುವುದು - ತಂದೆಯ ಸಮಾನ ಮಾಲೀಕನಾಗುವುದು ಎಂದು. ಬಾಪ್ದಾದಾರವರು ಇದರ ಫಲಿತಾಂಶವನ್ನು ನೋಡುತ್ತಿದ್ದರು - ಮಕ್ಕಳು ಬಾಲಕ ಮತ್ತು ಮಾಲೀಕ - ಇವೆರಡೂ ಸ್ವರೂಪದಲ್ಲಿ ಸದಾಕಾಲವೂ ಪ್ರತ್ಯಕ್ಷ ಕರ್ಮದಲ್ಲಿ ಬರುತ್ತಾರೆಯೋ ಅಥವಾ ಕೇವಲ ತಿಳಿದುಕೊಳ್ಳುವವರೆಗಷ್ಟೇ ಇದ್ದಾರೆಯೇ! ಎನ್ನುವುದನ್ನು ನೋಡುತ್ತಿದ್ದರು. ಆದರೆ ತಿಳುವಳಿಕೆ ಮತ್ತು ಪ್ರತ್ಯಕ್ಷ ಕರ್ಮದಲ್ಲಿ ಅಂತರವಿತ್ತು. ಕೆಲವು ಮಕ್ಕಳು ಈ ಸಮಾನತೆಯಲ್ಲಿ ತಂದೆಯ ಸಮಾನ ಪ್ರತ್ಯಕ್ಷ ಕರ್ಮದ ರೂಪದಲ್ಲಿರುವುದನ್ನು ಬಹಳ ಚೆನ್ನಾಗಿ ನೋಡಿದರು. ಕೆಲವು ಮಕ್ಕಳಂತು ಈಗಲೂ ಬಾಲಕನಾಗಿಯೇ ಇದ್ದಾರೆ ಆದರೆ ಮಾಲೀಕತ್ವದ ಆ ಆತ್ಮಿಕ ನಶೆಯಲ್ಲಿ ತಂದೆಯ ಸಮಾನನಾಗುವ ಶಕ್ತಿಶಾಲಿ ಸ್ಥಿತಿಯಲ್ಲಿ, ಕೆಲವೊಮ್ಮೆ ಸ್ಥಿತರಾಗುತ್ತಾರೆ ಮತ್ತೆ ಕೆಲವೊಮ್ಮೆ ಸ್ಥಿತನಾಗುವ ಪ್ರಯತ್ನದಲ್ಲಿಯೇ ಸಮಯವು ವ್ಯರ್ಥವಾಗುತ್ತದೆ.

ಲಕ್ಷ್ಯವಂತು ಎಲ್ಲಾ ಮಕ್ಕಳಲ್ಲಿ ತಂದೆಯ ಸಮಾನ ಆಗಲೇಬೇಕೆಂಬ ಶ್ರೇಷ್ಠ ಲಕ್ಷ್ಯವಿದೆ. ಲಕ್ಷ್ಯವು ಶಕ್ತಿಶಾಲಿಯಾಗಿದೆ, ಈಗ ಆ ಲಕ್ಷ್ಯವನ್ನು ಸಂಕಲ್ಪ, ಮಾತು, ಕರ್ಮ, ಸಂಬಂಧ-ಸಂಪರ್ಕದಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿಯೇ ಅಂತರವಾಗಿ ಬಿಡುತ್ತದೆ. ಕೆಲವು ಮಕ್ಕಳು ಸಂಕಲ್ಪದವರೆಗಷ್ಟೇ ತಂದೆಯ ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾರೆ. ಕೆಲವರು ಸಂಕಲ್ಪದ ಜೊತೆಗೆ ವಾಣಿಯವರೆಗೂ ಬಂದು ಬಿಡುತ್ತಾರೆ. ಕೆಲವೊಮ್ಮೆ ಕರ್ಮದಲ್ಲಿಯೂ ಆ ಲಕ್ಷ್ಯದಲ್ಲಿ ಬಂದು ಬಿಡುತ್ತಾರೆ. ಆದರೆ ಯಾವಾಗ ಸಂಬಂಧ, ಸಂಪರ್ಕದಲ್ಲಿ ಬರುತ್ತಾರೆ, ಸೇವೆಯ ಸಂಬಂಧದಲ್ಲಿ ಬರುತ್ತಾರೆ, ಭಲೆ ಅವರು ಪರಿವಾರದ ಸಂಬಂಧದಲ್ಲಿಯೇ ಬರಬಹುದು, ಈ ಸಂಬಂಧ-ಸಂಪರ್ಕದಲ್ಲಿ ಬರುವುದರಲ್ಲಿ ಕೆಲವೊಮ್ಮೆ ಪರ್ಸೆಂಟೇಜ್ ಕಡಿಮೆಯಾಗಿ ಬಿಡುತ್ತದೆ. ತಂದೆಯ ಸಮಾನರಾಗುವುದು ಅಂದರೆ ಒಂದೇ ಸಮಯದಲ್ಲಿ ಸಂಕಲ್ಪ, ಮಾತು, ಕರ್ಮ, ಸಂಬಂಧ ಎಲ್ಲದರಲ್ಲಿಯೂ ತಂದೆಯ ಸಮಾನ ಸ್ಥಿತಿಯಲ್ಲಿರುವುದು. ಕೆಲವರು ಎರಡರಲ್ಲಷ್ಟೇ ಇರುತ್ತಾರೆ, ಕೆಲವರು ಮೂರರಲ್ಲಿಯೂ ಇರುತ್ತಾರೆ. ಆದರೆ ಯಾವ ನಾಲ್ಕೂ ಸ್ಥಿತಿಗಳನ್ನು ತಿಳಿಸಿದೆವು, ಅದರಲ್ಲಿ ಕೆಲವೊಮ್ಮೆ ಒಂದು ರೀತಿ, ಇನ್ನು ಕೆಲವೊಮ್ಮೆ ಇನ್ನೊಂದು ರೀತಿ ಆಗಿ ಬಿಡುತ್ತಾರೆ. ಬಾಪ್ದಾದಾರವರು ಮಕ್ಕಳ ಪ್ರತಿ ಅತಿ ಸ್ನೇಹಿಯೂ ಆಗಿದ್ದಾರೆ. ಸ್ನೇಹದ ಸ್ವರೂಪವು ಕೇವಲ ಅವ್ಯಕ್ತ ರೂಪದಲ್ಲಿ ಸಿಗುವುದಿಲ್ಲ ಆದರೆ ಸ್ನೇಹ ಸ್ವರೂಪವೆಂದರೆ ಸಮಾನರಾಗುವುದಾಗಿದೆ. ಕೆಲವು ಮಕ್ಕಳು ಹೀಗೂ ಯೋಚಿಸುತ್ತಾರೆ - ಬಾಪ್ದಾದಾ ನಿರ್ಮೋಹಿ ಆಗುತ್ತಿದ್ದಾರೆ. ಆದರೆ ಇದು ನಿರ್ಮೋಹಿ ಆಗುವುದಲ್ಲ, ಇದು ವಿಶೇಷ ಸ್ನೇಹ ಸ್ವರೂಪವಾಗಿದೆ.

ಬಾಪ್ದಾದಾರವರು ಮುಂಚಿತವಾಗಿಯೇ ತಿಳಿಸುತ್ತಿದ್ದಾರೆ ಬಹಳ ಕಾಲದ ಪ್ರಾಪ್ತಿಯ ಲೆಕ್ಕದ ಸಮಯವೀಗ ಬಹಳ ಕಡಿಮೆಯಿದೆ. ಆದ್ದರಿಂದ ಬಾಪ್ದಾದಾರವರು ಮಕ್ಕಳಿಗೆ ಸಮಯವನ್ನು ಕೊಡುತ್ತಿದ್ದಾರೆ - ಸದಾ ಬಹಳ ಕಾಲಕ್ಕಾಗಿ ವಿಶೇಷ ಧೃಡತೆಯ ತಪಸ್ಸಿನ ಮೂಲಕ ಸ್ವಯಂನ್ನು ಸುಡುವುದು ಅಂದರೆ ಶಕ್ತಿಶಾಲಿ ಮಾಡುವುದಕ್ಕಾಗಿ, ಪರಿಪಕ್ವ ಮಾಡುವುದಕ್ಕಾಗಿಯೇ ವಿಶೇಷ ಸಮಯವನ್ನು ಕೊಡುತ್ತಿದ್ದಾರೆ. ಹಾಗೆ ನೋಡಿದರೆ ಗೋಲ್ಡನ್ ಜೂಬಿಲಿಯಲ್ಲಿಯೂ ಸಹ ಎಲ್ಲರೂ ಸಂಕಲ್ಪ ಮಾಡಿದಿರಿ - ಸಮಾನರಾಗುತ್ತೇವೆ, ವಿಘ್ನ ವಿನಾಶಕರು ಆಗುತ್ತೇವೆ, ಸಮಾಧಾನ ಸ್ವರೂಪರು ಆಗುತ್ತೇವೆ ಎಂದು. ಇವೆಲ್ಲಾ ಪ್ರತಿಜ್ಞೆಗಳು ತಂದೆಯ ಬಳಿ ಚಿತ್ರ ಗುಪ್ತನ ರೂಪದಲ್ಲಿ, ಲೆಕ್ಕ ಪುಸ್ತಕದ ಖಾತೆಯಲ್ಲಿ ನೊಂದಣಿಯಾಗಿ ಬಿಟ್ಟಿದೆ. ಇಂದು ಕೆಲವು ಮಕ್ಕಳು ಧೃಡ ಸಂಕಲ್ಪವನ್ನು ಮಾಡಿದರು. ಸಮರ್ಪಣೆಯಾಗುವುದು ಅಂದರೆ ಸ್ವಯಂನ್ನು ಸರ್ವ ಪ್ರಾಪ್ತಿಗಳಲ್ಲಿ ಪರಿಪಕ್ವವನ್ನಾಗಿ ಮಾಡಿಕೊಳ್ಳುವುದಾಗಿದೆ. ಸಮರ್ಪಣತೆಯ ಅರ್ಥವೇ ಇದಾಗಿದೆ - ಸಂಕಲ್ಪ, ಮಾತು, ಕರ್ಮ ಮತ್ತು ಸಂಬಂಧ - ಈ ನಾಲ್ಕರಲ್ಲಿಯೂ ತಂದೆಯ ಸಮಾನರಾಗುವುದು. ಪತ್ರವನ್ನೇನೋ ಬರೆದುಕೊಟ್ಟಿದ್ದೀರಿ, ಆ ಪತ್ರ ಅಥವಾ ಸಂಕಲ್ಪವು ಸೂಕ್ಷ್ಮವತನದಲ್ಲಿ ಬಾಪ್ದಾದಾರವರ ಬಳಿ ಸದಾ ರೆಕಾರ್ಡ್ನಲ್ಲಿ ಉಳಿದುಕೊಂಡು ಬಿಟ್ಟಿದೆ. ಪ್ರತಿಯೊಬ್ಬರ ಈ ಸಂಕಲ್ಪವು ಅವಿನಾಶಿಯಾಗಿ ಬಿಟ್ಟಿದೆ, ಎಲ್ಲರ ಫೈಲುಗಳೂ ಸಹ ಅಲ್ಲಿ ವತನದಲ್ಲಿವೆ.

ಈ ವರ್ಷದಲ್ಲಿ ಮಕ್ಕಳು - ಧೃಡತೆಯ ತಪಸ್ಸಿನಿಂದ ಅಮರ, ಅವಿನಾಶಿಯನ್ನಾಗಿ ಮಾಡಿಕೊಳ್ಳುವುದಕ್ಕಾಗಿ, ಸ್ವಯಂನಿಂದ ಪದೇ-ಪದೇ ಧೃಡತೆಯ ಅಭ್ಯಾಸದಿಂದ ಆತ್ಮಿಕ ವಾರ್ತಾಲಾಪ ಮಾಡುವುದಕ್ಕಾಗಿ, ಅದರ ಅನುಭೂತಿ ಮಾಡುವುದಕ್ಕಾಗಿ ಮತ್ತು ಪುನರವತಾರ ಸ್ವರೂಪದವರಾಗಿದ್ದು, ನಂತರ ಕರ್ಮದಲ್ಲಿ ಬರುವುದಕ್ಕಾಗಿ, ಈ ಸ್ಥಿತಿಯನ್ನು ಸದಾಕಾಲಕ್ಕಾಗಿ ಹಾಗೂ ಶಕ್ತಿಶಾಲಿ ಮಾಡುವುದಕ್ಕಾಗಿಯೇ ಬಾಪ್ದಾದಾರವರು ಸಮಯವನ್ನು ಕೊಡುತ್ತಿದ್ದಾರೆ. ಜೊತೆ ಜೊತೆಗೆ ಈಗ ವರ್ತಮಾನದಲ್ಲಿ ವಿಶೇಷ ರೂಪದಲ್ಲಿ ಶುದ್ಧ ಸಂಕಲ್ಪದ ಶಕ್ತಿಯಿಂದ ಜಮಾದ ಖಾತೆಯನ್ನು ಇನ್ನೂ ಹೆಚ್ಚಿಸಬೇಕಾಗಿದೆ. ಶುದ್ಧ ಸಂಕಲ್ಪದ ಶಕ್ತಿಯ ವಿಶೇಷ ಅನುಭವವನ್ನೀಗ ಅಂತರ್ಮುಖಿಯಾಗಿದ್ದು ಮಾಡುವ ಅವಶ್ಯಕತೆಯಿದೆ. ಶುದ್ಧ ಸಂಕಲ್ಪಗಳ ಶಕ್ತಿಯು ಸಹಜವಾಗಿಯೇ ವ್ಯರ್ಥ ಸಂಕಲ್ಪಗಳನ್ನು ಸಮಾಪ್ತಿ ಮಾಡಿ, ಅನ್ಯರ ಬಗ್ಗೆಯೂ ಶುಭ ಭಾವನೆ, ಶುಭ ಕಾಮನೆಯ ಸ್ವರೂಪದಿಂದ ಪರಿವರ್ತನೆ ಮಾಡಬಹುದು. ಈಗ ಈ ಶುದ್ಧ ಸಂಕಲ್ಪದ ಶಕ್ತಿಯ ವಿಶೇಷ ಅನುಭವವು ಸಹಜವಾಗಿಯೇ ವ್ಯರ್ಥ ಸಂಕಲ್ಪಗಳನ್ನು ಸಮಾಪ್ತಿಗೊಳಿಸುತ್ತದೆ. ಕೇವಲ ತಮ್ಮ ವ್ಯರ್ಥ ಸಂಕಲ್ಪವನ್ನೇ ಅಲ್ಲ ಆದರೆ ತಮ್ಮ ಶುದ್ಧ ಸಂಕಲ್ಪದ ಶುಭ ಭಾವನೆ, ಶುಭ ಕಾಮನೆಯ ಸ್ವರೂಪದಿಂದ ಅನ್ಯರನ್ನೂ ಪರಿವರ್ತನೆ ಮಾಡಬಹುದು. ಈಗ ಈ ಶುದ್ಧ ಸಂಕಲ್ಪಗಳ ಶಕ್ತಿಯ ಸ್ಟಾಕ್ನ್ನು ಸ್ವಯಂಗಾಗಿಯೂ ಜಮಾ ಮಾಡಿಕೊಳ್ಳುವ ಅವಶ್ಯಕತೆಯು ಬಹಳ ಇದೆ. ಮುರುಳಿ ಕೇಳುವ ಲಗನ್ನಂತು ಬಹಳ ಚೆನ್ನಾಗಿಯೇ ಇದೆ. ಮುರುಳಿ ಅಂದರೆ ಖಜಾನೆಯೆಂದರ್ಥ. ಮುರುಳಿಯ ಪ್ರತೀ ಪಾಯಿಂಟ್ನ್ನು ಶಕ್ತಿಯ ರೂಪದಲ್ಲಿ ಜಮಾ ಮಾಡಿಕೊಳ್ಳಬೇಕು - ಇದು ಶುದ್ಧ ಸಂಕಲ್ಪಗಳ ಶಕ್ತಿಯನ್ನು ಹೆಚ್ಚಿಸುವುದು ಎಂದರ್ಥವಾಗಿದೆ. ಶಕ್ತಿಯ ರೂಪದಲ್ಲಿ ಪ್ರತೀ ಸಮಯವೂ ಕಾರ್ಯದಲ್ಲಿ ಉಪಯೋಗಿಸಿರಿ - ಈಗ ಈ ವಿಶೇಷತೆಯಲ್ಲಿ ವಿಶೇಷ ಗಮನವನ್ನಿಡಬೇಕು. ಈಗ ಶುದ್ಧ ಸಂಕಲ್ಪಗಳ ಶಕ್ತಿಯ ಮಹತ್ವಿಕೆಯನ್ನೆಷ್ಟು ಅನುಭವ ಮಾಡುತ್ತಾ ಇರುತ್ತೀರಿ, ಮನಸ್ಸಾ ಸೇವೆಯಲ್ಲಿಯೂ ಅಷ್ಟೇ ಸಹಜವಾಗಿ ಅನುಭವಿಯಾಗುತ್ತೀರಿ. ಮೊಟ್ಟ ಮೊದಲು ಸ್ವಯಂ ಪ್ರತಿ ಶುದ್ಧ ಸಂಕಲ್ಪಗಳ ಶಕ್ತಿಯ ಜಮಾ ಮಾಡಿಕೊಂಡಿರಬೇಕು, ಮತ್ತೆ ಜೊತೆ ಜೊತೆಗೆ ತಾವೆಲ್ಲರೂ ತಂದೆಯ ಜೊತೆಯಲ್ಲಿ ವಿಶ್ವ ಕಲ್ಯಾಣಕಾರಿ ಆತ್ಮರು, ವಿಶ್ವ ಪರಿವರ್ತಕ ಆತ್ಮರೂ ಆಗಿದ್ದೀರಿ. ಅಂದಮೇಲೆ ವಿಶ್ವದ ಪ್ರತಿಯೂ ಈ ಶುದ್ಧ ಸಂಕಲ್ಪಗಳ ಶಕ್ತಿಯ ಮೂಲಕ ಪರಿವರ್ತನೆ ಮಾಡುವ ಕಾರ್ಯವೀಗ ಬಹಳಷ್ಟು ಉಳಿದುಕೊಂಡಿದೆ. ಹೇಗೆ ವರ್ತಮಾನ ಸಮಯದಲ್ಲಿ ತಮ್ಮೆಲ್ಲರ ಪಾಲನೆಯನ್ನು ಬ್ರಹ್ಮಾ ತಂದೆಯು ಅವ್ಯಕ್ತ ರೂಪವುಳ್ಳವರಾಗಿದ್ದು ಶುದ್ಧ ಸಂಕಲ್ಪದ ಶಕ್ತಿಯಿಂದ ಮಾಡುತ್ತಿದ್ದಾರೆ, ಸೇವೆಯ ವೃದ್ಧಿಯ ಸಹಯೋಗಿಯಾಗಿದ್ದು ಮುಂದುವರೆಸುತ್ತಿದ್ದಾರೆ - ಈ ವಿಶೇಷ ಸೇವೆಯು ಶುದ್ಧ ಸಂಕಲ್ಪದ ಶಕ್ತಿಯಿಂದಲೇ ನಡೆಯುತ್ತಿದೆ. ಅದಕ್ಕಾಗಿಯೇ ಈಗ ಬ್ರಹ್ಮಾ ತಂದೆಯ ಸಮಾನರಾಗಿ ತಮ್ಮಲ್ಲಿ ಈ ವಿಶೇಷತೆಯನ್ನು ವೃದ್ಧಿ ಮಾಡಿಕೊಳ್ಳುವ ತಪಸ್ಸಿನ ರೂಪದಲ್ಲಿ ಅಭ್ಯಾಸ ಮಾಡಬೇಕಾಗಿದೆ. ತಪಸ್ಸು ಎಂದರೆ ಧೃಡತಾ ಸಂಪನ್ನ ಅಭ್ಯಾಸ ಮಾಡುವುದಾಗಿದೆ. ಸಾಧಾರಣವಾಗಿ ಮಾಡುವುದನ್ನು ತಪಸ್ಸೆಂದು ಹೇಳುವುದಿಲ್ಲ, ಆದ್ದರಿಂದಲೇ ಈಗ ತಪಸ್ಸಿಗಾಗಿ ಸಮಯವನ್ನು ಕೊಡುತ್ತಿದ್ದೇವೆ. ಸಮಯವನ್ನು ಈಗಲೇ ಮಾಡಬೇಕೆಂದು ಏಕೆ ಕೊಡುತ್ತಿದ್ದಾರೆ? ಏಕೆಂದರೆ ಈ ಸಮಯವು ತಮ್ಮ ಬಹಳ ಕಾಲದಲ್ಲಿ ಜಮಾ ಆಗಿ ಬಿಡುತ್ತದೆ. ಬಾಪ್ದಾದಾರವರು ಎಲ್ಲರಿಗೂ ಬಹಳ ಕಾಲದ ಪ್ರಾಪ್ತಿಯನ್ನು ಮಾಡಿಸುವುದಕ್ಕಾಗಿ ನಿಮಿತ್ತರಾಗಿದ್ದಾರೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೆ ಬಹಳ ಕಾಲದ ರಾಜ್ಯಭಾಗ್ಯದ ಅಧಿಕಾರಿಯನ್ನಾಗಿ ಮಾಡಲು ಬಯಸುತ್ತಾರೆ. ಈಗ ಆ ಬಹಳ ಕಾಲದ ಸಮಯವು ಬಹಳ ಸ್ವಲ್ಪವೇ ಇದೆ. ಆದ್ದರಿಂದ ಈ ಸಮಯದಲ್ಲಿಯೇ ಪ್ರತೀ ಮಾತಿನ ಅಭ್ಯಾಸವನ್ನು ತಪಸ್ಸಿನ ರೂಪದಲ್ಲಿ ಮಾಡುವುದಕ್ಕಾಗಿ ಕೊಡುತ್ತಿದ್ದಾರೆ. ಏಕೆಂದರೆ ಅಂತಹ ಸಮಯವೂ ಬರುತ್ತದೆ, ಯಾವುದರಲ್ಲಿ ತಾವು ಎಲ್ಲರಿಗೂ ದಾತ ಮತ್ತು ವರದಾತ ಆಗಿದ್ದು, ಸ್ವಲ್ಪವೇ ಸಮಯದಲ್ಲಿ ಅನೇಕರಿಗೆ ಕೊಡಬೇಕಾಗುತ್ತದೆ. ಅದಕ್ಕಾಗಿ ಸರ್ವ ಖಜಾನೆಗಳ ಜಮಾದ ಖಾತೆಯ ಸಂಪನ್ನರನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಸಮಯವನ್ನು ಕೊಡುತ್ತಿದ್ದೇವೆ.

ಇನ್ನೊಂದು ಮಾತು - ವಿಘ್ನ-ವಿನಾಶಕ ಅಥವಾ ಸಮಾಧಾನ ಸ್ವರೂಪರಾಗುತ್ತೇವೆಂಬ ಪ್ರತಿಜ್ಞೆಯನ್ನೇನು ಮಾಡಿದ್ದೀರಿ, ಆ ವಿಘ್ನ ವಿನಾಶಕ ಸ್ವಯಂ ಪ್ರತಿಯೂ ಹಾಗೂ ಸರ್ವರ ಪ್ರತಿಯೂ ಆಗುವ ವಿಶೇಷ ಧೃಡ ಸಂಕಲ್ಪ ಮತ್ತು ಧೃಡ ಸ್ವರೂಪ - ಎರಡೂ ಇರಲಿ. ಕೇವಲ ಸಂಕಲ್ಪವನ್ನು ಮಾಡುವುದಲ್ಲ ಆದರೆ ಸ್ವರೂಪರೂ ಆಗಬೇಕು. ಆದ್ದರಿಂದ ಬಾಪ್ದಾದಾರವರು ಈ ವರ್ಷದಲ್ಲಿ ಹೆಚ್ಚಿನ ಸಮಯವನ್ನು ಕೊಡುತ್ತಿದ್ದಾರೆ. ಯಾರೇ ಆಗಲಿ, ಈ ವಿಘ್ನ ವಿನಾಶಕನಾಗುವ ವಿಶೇಷ ಭಾಗ್ಯವನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತೀರೆಂದರೆ ಈ ವರ್ಷದಲ್ಲಿ ತೆಗೆದುಕೊಳ್ಳಬಹುದು. ಈ ವರ್ಷಕ್ಕೆ ವಿಶೇಷ ವರದಾನವಿದೆ. ಆದರೆ ಈ ವರದಾನವನ್ನು ತೆಗೆದುಕೊಳ್ಳುವುದಕ್ಕಾಗಿ ವಿಶೇಷ ಎರಡು ಅಟೆನ್ಶನ್ ಕೊಡಬೇಕಾಗುತ್ತದೆ. ಒಂದಂತು - ಸದಾ ತಂದೆಯ ಸಮಾನ ಕೊಡುವವರಾಗಬೇಕು, ತೆಗೆದುಕೊಳ್ಳುವ ಭಾವನೆಯನ್ನೇ ಇಟ್ಟುಕೊಳ್ಳಬಾರದು. ಸ್ನೇಹವು ಸಿಕ್ಕಿದಾಗ ಸ್ನೇಹಿಯಾಗುವುದು ಅಥವಾ ಗೌರವ ಸಿಕ್ಕಿದಾಗ ಗೌರವ ಕೊಡುವುದಲ್ಲ. ದಾತಾನ ಮಗುವಾಗಿ ನಾನು ಕೊಡಬೇಕು, ತೆಗೆದುಕೊಳ್ಳುವ ಭಾವನೆಯನ್ನು ಇಟ್ಟುಕೊಳ್ಳಬಾರದು ಎನ್ನುವುದಿರಲಿ. ಒಂದು ಕಡೆ ಶ್ರೇಷ್ಠ ಕರ್ಮವನ್ನು ಮಾಡುತ್ತಾ, ಇನ್ನೊಂದು ಕಡೆಯಿಂದ ಸಿಗಬೇಕೆನ್ನುವ ಭಾವನೆಯನ್ನು ಇಟ್ಟುಕೊಳ್ಳಬಾರದು. ಶ್ರೇಷ್ಠ ಕರ್ಮದ ಫಲವು ಶ್ರೇಷ್ಠವಾಗಿಯೇ ಇರುತ್ತದೆ - ಈ ಜ್ಞಾನವು ನಿಮಗೆ ಗೊತ್ತಿದೆ. ಆದರೆ ಮಾಡುವ ಸಮಯದಲ್ಲಿ ಈ ಸಂಕಲ್ಪವನ್ನು ಇಟ್ಟುಕೊಳ್ಳಬಾರದು. ಒಂದಂತು - ವರದಾನವನ್ನು ತೆಗೆದುಕೊಳ್ಳಲು ಪಾತ್ರರಾಗುವುದಕ್ಕಾಗಿ - ಸದಾ ದಾತರಾಗಿದ್ದು ಮಾಡುತ್ತಿರುವುದು, ಮತ್ತೊಂದು ವಿಘ್ನ ವಿನಾಶಕನಾಗುವುದು. ಅದಕ್ಕಾಗಿ ಧೈರ್ಯ ಶಕ್ತಿಯನ್ನು ಸದಾ ವಿಶೇಷ ರೂಪದಲ್ಲಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಸ್ವಯಂಗಾಗಿಯೂ ಧೈರ್ಯ ಶಕ್ತಿಯ ಅವಶ್ಯಕತೆಯಿದೆ. ಸಾಗರನ ಮಕ್ಕಳಾಗಿದ್ದೀರಿ, ಸಾಗರದ ವಿಶೇಷತೆಯೇ ಆಗಿದೆ - ಸಮಾವೇಶ ಮಾಡಿಕೊಳ್ಳುವುದು. ಯಾರಲ್ಲಿ ಸಮಾವೇಶ ಮಾಡಿಕೊಳ್ಳುವ ಶಕ್ತಿಯಿರುತ್ತದೆಯೋ, ಅವರೇ ಶುಭ ಭಾವನೆ, ಕಲ್ಯಾಣದ ಕಾಮನೆಯನ್ನಿಡಲು ಸಾಧ್ಯ. ಅದಕ್ಕಾಗಿ ದಾತರಾಗಿದ್ದು ಸಮಾವೇಶ ಮಾಡಿಕೊಳ್ಳುವ ಶಕ್ತಿ ಸ್ವರೂಪ ಸಾಗರನಾಗಬೇಕು - ಇವೆರಡು ವಿಶೇಷತೆಗಳನ್ನು ಸದಾ ಕರ್ಮದವರೆಗೂ ಧಾರಣೆಯಲ್ಲಿ ತರಬೇಕಾಗಿದೆ. ಕೆಲವೊಮ್ಮೆ ಕೆಲವು ಮಕ್ಕಳು ಹೇಳುತ್ತಾರೆ - ಇದನ್ನೇ ಮಾಡಬೇಕೆಂಬ ವಿಚಾರವೇನೋ ಇತ್ತು ಆದರೆ ಮಾಡಬೇಕಾಗಿ ಬದಲಾಗಿ ಬಿಟ್ಟಿತು. ಹಾಗಾದರೆ ಈ ವರ್ಷದಲ್ಲಿ ನಾಲ್ಕೂ ಮಾತುಗಳಲ್ಲಿ, ಒಂದೇ ಸಮಯದಲ್ಲಿ ಸಮಾನತೆಯ ವಿಶೇಷ ಅಭ್ಯಾಸವನ್ನು ಮಾಡಿರಿ. ತಿಳಿಯಿತೆ! ಒಂದು ಮಾತು - ಖಜಾನೆಗಳನ್ನು ಜಮಾ ಮಾಡಿಕೊಳ್ಳುವ ಹಾಗೂ ದಾತನಾಗಿ ಕೊಡುವ ಸಂಸ್ಕಾರವು ಸ್ವಾಭಾವಿಕವಾಗಿಯೇ ಧಾರಣೆಯಾಗಿ ಬಿಡಬೇಕು - ಇದಕ್ಕಾಗಿ ಸಮಯವನ್ನು ಕೊಡುತ್ತಿದ್ದೇವೆ. ಮತ್ತು ವಿಘ್ನ ವಿನಾಶಕನಾಗಿ ಮತ್ತು ಅನ್ಯರನ್ನೂ ಮಾಡುವುದರಲ್ಲಿ - ಸದಾ ತಮ್ಮ ನಂಬರನ್ನು ನಿಶ್ಚಿತ ಮಾಡಿಕೊಳ್ಳುವ ಅವಕಾಶವನ್ನು ಕೊಡುತ್ತಿದ್ದೇವೆ. ಏನೇ ಆಗಲಿ, ಸ್ವಯಂ ತಾವು ತಪಸ್ಸು ಮಾಡಿರಿ ಮತ್ತು ಯಾರದೇ ವಿಘ್ನವನ್ನು ಸಮಾಪ್ತಿ ಮಾಡುವುದರಲ್ಲಿ ಸಹಯೋಗಿಯಾಗಿರಿ. ತಾವೆಷ್ಟಾದರೂ ಬಾಗಬೇಕಾಗುತ್ತದೆ ಆದರೆ ಹೀಗೆ ಬಾಗುವುದು ಸದಾಕಾಲಕ್ಕಾಗಿ ಉಯ್ಯಾಲೆಯಲ್ಲಿ ತೂಗುವುದಾಗಿದೆ. ಹೇಗೆ ಶ್ರೀಕೃಷ್ಣನನ್ನು ಎಷ್ಟು ಪ್ರೀತಿಯಿಂದ ತೂಗುತ್ತಿರುತ್ತಾರೆ. ಹಾಗೆಯೇ ಈಗ ತಂದೆಯು ತಾವು ಮಕ್ಕಳನ್ನು ತನ್ನ ಮಡಿಲಿನ ಉಯ್ಯಾಲೆಯಲ್ಲಿ ತೂಗುತ್ತಾರೆ ಮತ್ತು ಭವಿಷ್ಯದಲ್ಲಿಯೂ ರತ್ನಗಳಿಂದ ಕೂಡಿದ ಉಯ್ಯಾಲೆಯಲ್ಲಿ ತೂಗುತ್ತಾರೆ ಮತ್ತು ಭಕ್ತಿಯಲ್ಲಿ ಪೂಜ್ಯರಾಗಿ ಉಯ್ಯಾಲೆಯಲ್ಲಿ ತೂಗುತ್ತಾರೆ. ಹಾಗಾದರೆ ಬಾಗುವುದು, ಸಹನೆ ಮಾಡುವುದು ಮಹಾನತೆಯಾಯಿತು. ನಾನೇಕೆ ಬಾಗಲಿ, ಇವರು ಬಾಗಲಿ - ಇದರಲ್ಲಿ ತಮ್ಮನ್ನು ಚಿಕ್ಕವರೆಂದು ತಿಳಿಯಬಾರದು. ಹೀಗೆ ಬಾಗುವುದು ಮಹಾನತೆಯಾಗಿದೆ. ಹೀಗೆ ಸಾಯುವುದು (ಸಹನೆ ಮಾಡುವುದು) ಸಾಯುವುದಲ್ಲ, ಅವಿನಾಶಿ ಪ್ರಾಪ್ತಿಗಳಲ್ಲಿ ಜೀವಿಸುವುದಾಗಿದೆ. ಆದ್ದರಿಂದ ಸದಾ ವಿಘ್ನ ವಿನಾಶಕರು ಆಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ - ಇದರಲ್ಲಿ ಯಾರು ಫಸ್ಟ್ ಡಿವಿಸನ್ನಲ್ಲಿ ಬರಲು ಬಯಸುತ್ತೀರಿ, ಅವರು ಬರಬಹುದು. ವಿಶೇಷ ಅವಕಾಶವನ್ನು ತೆಗೆದುಕೊಳ್ಳುವ ಸಮಯದ ಈ ಮಹತ್ವಿಕೆಯನ್ನು ಬಾಪ್ದಾದಾರವರು ತಿಳಿಸುತ್ತಿದ್ದಾರೆ. ಅಂದಾಗ ಸಮಯದ ಮಹತ್ವಿಕೆಯನ್ನು ಅರಿತುಕೊಂಡು ತಪಸ್ಸು ಮಾಡಿರಿ.

ಮೂರನೇ ಮಾತು - ಸಮಯದನುಸಾರ ವಾಯುಮಂಡಲದಲ್ಲಿ ಅಶಾಂತಿ ಮತ್ತು ಏರುಪೇರುಗಳು ಎಷ್ಟು ಹೆಚ್ಚಾಗುತ್ತಾ ಇರುತ್ತದೆಯೋ, ಅದರನುಸಾರ ಬುದ್ಧಿಯ ಲೈನ್ ಬಹಳ ಕ್ಲಿಯರ್ ಆಗಿರಬೇಕು ಏಕೆಂದರೆ ಸಮಯದನುಸಾರ ಟಚಿಂಗ್ ಮತ್ತು ಕ್ಯಾಚಿಂಗ್ - ಇವೆರಡು ಶಕ್ತಿಗಳ ಅವಶ್ಯಕತೆಯಿದೆ. ಒಂದಂತು - ಬಾಪ್ದಾದಾರವರ ನಿರ್ದೇಶನವನ್ನು ಬುದ್ಧಿಯ ಮೂಲಕ ಕ್ಯಾಚ್ ಮಾಡಲು ಸಾಧ್ಯವಾಗಲಿ. ಒಂದುವೇಳೆ ಲೈನ್ ಕ್ಲಿಯರ್ ಇಲ್ಲದಿದ್ದರೆ ತಂದೆಯ ನಿರ್ದೇಶನದ ಜೊತೆಗೆ ಮನಮತವೂ ಸೇರ್ಪಡೆಯಾಗಿ ಬಿಡುತ್ತದೆ. ಸೇರ್ಪಡೆಯಾಗುವ ಕಾರಣ ಸಮಯದಲ್ಲಿ ಮೋಸವನ್ನೂ ಅನುಭವಿಸಬಹುದು. ಬುದ್ಧಿಯು ಎಷ್ಟು ಸ್ಪಷ್ಟವಾಗಿ ಇರುತ್ತದೆಯೋ, ಅಷ್ಟೇ ತಂದೆಯ ನಿರ್ದೇಶನವನ್ನೂ ಸ್ಪಷ್ಟವಾಗಿ ಕ್ಯಾಚ್ ಮಾಡಬಲ್ಲಿರಿ. ಮತ್ತು ಬುದ್ಧಿಯ ಲೈನ್ ಎಷ್ಟು ಸ್ಪಷ್ಟವಾಗಿರುತ್ತದೆಯೋ, ಅಷ್ಟು ಸ್ವಯಂನ ಉನ್ನತಿಯ ಬಗ್ಗೆ ಹಾಗೂ ಸೇವೆಯ ವೃದ್ಧಿಯ ಬಗ್ಗೆ ಹಾಗೂ ಸರ್ವಾತ್ಮರ ದಾತ ಆಗಿದ್ದು ಕೊಡಬೇಕಾಗಿರುವ ಶಕ್ತಿಗಳೆಲ್ಲವೂ ಸಹಜವಾಗಿಯೇ ವೃದ್ಧಿಯಾಗುತ್ತದೆ ಮತ್ತು ಟಚಿಂಗ್ ಆಗುತ್ತದೆ - ಈ ಸಮಯದಲ್ಲಿ ಈ ಆತ್ಮನ ಪ್ರತಿ ಕೊಡಬೇಕು. ಯಥಾರ್ಥ ಸಹಜ ಸೇವೆಯ ಸಾಧನ ಅಥವಾ ಸ್ವ-ಉನ್ನತಿಯ ಸಾಧನವು ಇದೇ ಆಗಿದೆ. ಅಂದಾಗ ವರ್ತಮಾನ ಸಮಯದಲ್ಲಿ ಇವೆರಡು ಶಕ್ತಿಗಳ ಅವಶ್ಯಕತೆಯು ಬಹಳ ಇದೆ. ಇದನ್ನು ಹೆಚ್ಚಿಸಿಕೊಳ್ಳಲು - ಏಕ್ನಾಮಿ ಮತ್ತು ಎಕಾನಮಿಯುಳ್ಳವರು (ಒಬ್ಬ ತಂದೆಯ ನೆನಪು ಮತ್ತು ಅವರ ಸೇವೆಗಾಗಿ ಉಳಿತಾಯ) ಆಗಬೇಕಾಗಿದೆ. ಅಂದರೆ ಒಬ್ಬ ತಂದೆಯ ಹೊರತು ಮಾತ್ಯಾರೂ ಇಲ್ಲ. ಅನ್ಯರ ಆಕರ್ಷಣೆ ಅಥವಾ ಸೆಳೆತವು ಬೇರೆ ಮಾತಾಗಿದೆ. ಸೆಳೆತವಂತು ಅವಶ್ಯವಾಗಿ ಕೆಟ್ಟದಾಗಿದೆ ಆದರೆ ತಮ್ಮ ಸ್ಥಿತಿಯನ್ನು ಅನ್ಯರ ಸ್ವಭಾವದ ಪ್ರಭಾವವು ಏರುಪೇರಿನಲ್ಲಿ ತರುತ್ತದೆ. ಅನ್ಯರ ಸಂಸ್ಕಾರವು ಬುದ್ಧಿಯನ್ನು ಘರ್ಷಣೆಯಲ್ಲಿ ತೆಗೆದುಕೊಂಡು ಬರುತ್ತದೆ. ಆ ಸಮಯದಲ್ಲಿ ಬುದ್ಧಿಯಲ್ಲಿ ಬಾಬಾ ಇರುತ್ತದೆಯೇ ಅಥವಾ ಸಂಸ್ಕಾರವಿದೆಯೇ? ಭಲೆ ಬುದ್ಧಿಯನ್ನು ಸೆಳೆತದ ರೂಪದಲ್ಲಿಯೇ ಪ್ರಭಾವಿತಗೊಳಿಸಲಿ ಅಥವಾ ಘರ್ಷಣೆಯ ರೂಪದಲ್ಲಿಯೇ ಪ್ರಭಾವಿತಗೊಳಿಸಲಿ ಆದರೆ ಬುದ್ಧಿಯ ಲೈನ್ ಸದಾ ಕ್ಲಿಯರ್ ಆಗಿರಲಿ. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ - ಏಕ್ನಾಮಿ ಮತ್ತು ಎಕಾನಮಿ ಎಂದರೆ ಏನು? ಎಂದು ಇದಕ್ಕೆ ಹೇಳಲಾಗುತ್ತದೆ. ಕೇವಲ ಸ್ಥೂಲ ಧನದ ಉಳಿತಾಯ ಮಾಡುವುದಕ್ಕೆ ಎಕಾನಮಿ ಎಂದು ಹೇಳುವುದಿಲ್ಲ. ಅದಂತು ಅವಶ್ಯಕವಾಗಿ ಮಾಡಬೇಕು ಆದರೆ ಸಮಯವೂ ಸಹ ಧನವಾಗಿದೆ, ಸಂಕಲ್ಪವೂ ಸಹ ಧನ/ಹಣವಾಗಿದೆ, ಶಕ್ತಿಗಳೂ ಧನವಾಗಿದೆ, ಇವೆಲ್ಲವು ಉಳಿತಾಯ/ಎಕಾನಮಿ ಮಾಡಬೇಕು, ವ್ಯರ್ಥವಾಗಿ ಖರ್ಚು ಮಾಡಬಾರದು. ಎಕಾನಮಿ ಮಾಡುವುದು ಅಂದರೆ ಜಮಾದ ಖಾತೆಯನ್ನು ಹೆಚ್ಚಿಸುವುದು. ಏಕ್ನಾಮಿ ಮತ್ತು ಎಕಾನಮಿಯ ಸಂಸ್ಕಾರವುಳ್ಳವರು ಇವೆರಡೂ ಶಕ್ತಿಗಳ (ಟಚಿಂಗ್ ಮತ್ತು ಕ್ಯಾಚಿಂಗ್) ಅನುಭವವನ್ನು ಮಾಡಬಲ್ಲರು. ಮತ್ತು ಈ ಅನುಭವವನ್ನು ವಿನಾಶದ ಸಮಯದಲ್ಲಿ ಮಾಡುವುದಕ್ಕೆ ಆಗುವುದಿಲ್ಲ, ಇದು ಈಗಿನಿಂದಲೇ ಅಭ್ಯಾಸವಾಗಬೇಕು. ಆಗಲೇ ಈ ಅಭ್ಯಾಸದ ಕಾರಣ ಅಂತ್ಯದ ಸಮಯದಲ್ಲಿ ಶ್ರೇಷ್ಠ ಮತ ಮತ್ತು ಗತಿಯನ್ನು ಪಡೆಯಲು ಸಾಧ್ಯವಾಗುವುದು. ತಾವು ತಿಳಿದುಕೊಳ್ಳಿ - ಈಗ ವಿನಾಶದ ಸಮಯವು ಸ್ವಲ್ಪವಾದರೂ ಇದೆ. ಭಲೆ ಅದು 10 ವರ್ಷಗಳೇ ಆಗಿರಲಿ. ಆದರೆ 10 ವರ್ಷಗಳ ನಂತರ ಈ ಪುರುಷಾರ್ಥವನ್ನು ಮಾಡಲು ಸಾಧ್ಯವಾಗುವುದಿಲ್ಲ. ಎಷ್ಟೇ ಪರಿಶ್ರಮ ಪಟ್ಟರೂ ಪುರುಷಾರ್ಥ ಮಾಡುವುದಕ್ಕೆ ಆಗುವುದಿಲ್ಲ. ಬಲಹೀನರು ಆಗಿ ಬಿಡುತ್ತೀರಿ, ಮತ್ತೆ ಅಂತ್ಯವು ಯುದ್ಧದಲ್ಲಿಯೇ ಹೋಗುತ್ತದೆ, ಸಫಲತೆಯಲ್ಲಲ್ಲ. ತ್ರೇತಾಯುಗಿಗಳಂತು ಆಗಬಾರದಲ್ಲವೆ. ಪರಿಶ್ರಮ ಅಂದರೆ ಬಿಲ್ಲು ಬಾಣ ಎಂದರ್ಥ. ಮತ್ತು ಸದಾ ಪ್ರೀತಿಯಲ್ಲಿರಿ, ಖುಷಿಯಲ್ಲಿರಿ ಅಂದರೆ ಮುರುಳೀಧರರು ಆಗಬೇಕು, ಸೂರ್ಯವಂಶಿ ಆಗಬೇಕಾಗಿದೆ. ಮುರುಳಿಯು ನರ್ತನ ಮಾಡಿಸುತ್ತದೆ ಮತ್ತು ಬಿಲ್ಲು-ಬಾಣವು ಗುರಿ ಸಾಧಿಸಲು ಪರಿಶ್ರಮ ಪಡುವಂತೆ ಮಾಡಿಸುತ್ತದೆ. ಹಾಗಾದರೆ ಬಿಲ್ಲುಗಾರರು ಆಗಬಾರದು, ಮುರುಳಿ ನುಡಿಸುವವರು ಆಗಬೇಕಾಗಿದೆ. ಆದ್ದರಿಂದ ಅಂತ್ಯದಲ್ಲಿ ಮತ್ತೆ ಸ್ವಲ್ಪ ಸಮಯವನ್ನು ಕೊಡಿ, ಅವಕಾಶ ಕೊಡಿ ಅಥವಾ ಕರುಣೆ ತೋರಿಸಿರಿ ಎಂದು ಯಾವುದೇ ದೂರನ್ನು ಕೊಡಬೇಡಿ. ಹೀಗೆ ಹೇಳುವುದೇನೂ ನಡೆಯುವುದಿಲ್ಲ ಆದ್ದರಿಂದ ಮುಂಚೆಯೇ ತಿಳಿಸುತ್ತಿದ್ದೇವೆ. ಭಲೆ ಅಂತ್ಯದಲ್ಲಿಯೇ ಬಂದಿರಬಹುದು ಅಥವಾ ಮುಂಚೆಯೇ ಬಂದಿರಬಹುದು ಆದರೆ ಸಮಯದನುಸಾರವಾಗಿ ಎಲ್ಲರಿಗೂ ಅಂತಿಮ ಸ್ಥಿತಿಯವರೆಗೆ ತಲುಪುವ ಸಮಯವಿದೆ. ಅದೇ ರೀತಿ ತೀವ್ರ ಗತಿಯಿಂದ ಈಗ ನಡೆಯಬೇಕಾಗುತ್ತದೆ. ತಿಳಿಯಿತೆ! ಒಳ್ಳೆಯದು.

ನಾಲ್ಕೂ ಕಡೆಯಲ್ಲಿರುವ ಸರ್ವ ಸ್ನೇಹಿ ಮಕ್ಕಳಿಗೆ, ಸದಾ ಹೃದಯ ಸಿಂಹಾಸನ ಅಧಿಕಾರಿ ಮಕ್ಕಳಿಗೆ, ಸದಾ ಸಂತುಷ್ಟತೆಯ ಹೊಳಪನ್ನು ತೋರಿಸುವಂತಹ ಮಕ್ಕಳಿಗೆ, ಸದಾ ಪ್ರಸನ್ನತೆಯ ವ್ಯಕ್ತಿತ್ವದಲ್ಲಿರುವ ಮಕ್ಕಳಿಗೆ, ಸದಾ ಬೇಹದ್ದಿನ ವಿಶಾಲ ಹೃದಯಿ, ಬೇಹದ್ದಿನ ವಿಶಾಲ ಬುದ್ಧಿಯನ್ನು ಧಾರಣೆ ಮಾಡಿಕೊಳ್ಳುವ, ವಿಶಾಲ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:  
ವರದಾನ: 5 ವಿಕಾರಗಳೆಂಬ ಶತ್ರುಗಳನ್ನು ಪರಿವರ್ತನೆ ಮಾಡಿ ಸಹಯೋಗಿಯನ್ನಾಗಿ ಮಾಡುವಂತಹ ಮಾಯಾಜೀತ ಜಗತ್ಜೀತ ಭವ.

ವಿಜಯಿಯು ಶತ್ರುವಿನ ರೂಪವನ್ನು ಅವಶ್ಯವಾಗಿ ಪರಿವರ್ತನೆ ಮಾಡುತ್ತಾನೆ. ಅಂದಮೇಲೆ ತಾವು ವಿಕಾರಗಳೆಂಬ ಶತ್ರುಗಳನ್ನು ಪರಿವರ್ತನೆಗೊಳಿಸಿ ಸಹಯೋಗಿ ಸ್ವರೂಪರನ್ನಾಗಿ ಮಾಡಿ ಬಿಡಿ, ಅದರಿಂದ ಅವರು ಸದಾ ತಮಗೆ ನಮಸ್ಕಾರ ಮಾಡುತ್ತಿರುತ್ತಾರೆ. ಕಾಮ ವಿಕಾರವನ್ನು ಶುಭ ಕಾಮನೆಯ ರೂಪದಲ್ಲಿ, ಕ್ರೋಧವನ್ನು ಆತ್ಮಿಕ ನಶೆಯ ರೂಪದಲ್ಲಿ, ಲೋಭವನ್ನು ಅನಾಸಕ್ತ ವೃತ್ತಿಯ ರೂಪದಲ್ಲಿ, ಮೋಹವನ್ನು ಸ್ನೇಹದ ರೂಪದಲ್ಲಿ ಮತ್ತು ದೇಹಾಭಿಮಾನವನ್ನು ಸ್ವಾಭಿಮಾನದ ರೂಪದಲ್ಲಿ ಪರಿವರ್ತನೆ ಮಾಡುತ್ತೀರೆಂದರೆ ಮಾಯಾಜೀತ, ಜಗತ್ಜೀತರು ಆಗಿ ಬಿಡುತ್ತೀರಿ.

ಸ್ಲೋಗನ್:
ರಿಯಲ್ಗೋಲ್ಡ್(ಅಪ್ಪಟ ಚಿನ್ನ)ನಲ್ಲಿ ನನ್ನತನವೇ(ದೇಹಾಭಿಮಾನ) ಅಲಾಯಿ ಆಗಿದೆ, ಅದು ಮೌಲ್ಯವನ್ನು ಕಡಿಮೆ ಮಾಡಿ ಬಿಡುತ್ತದೆ ಆದ್ದರಿಂದ ನನ್ನತನವನ್ನು ಸಮಾಪ್ತಿ ಮಾಡಿ ಬಿಡಿ.


ಮುರಳಿ ಪ್ರಶ್ನೆಗಳು -

1. ಬಾಲಕರಿಂದ ಮಾಲೀಕರಾಗುವುದು ಎಂದರೇನು?

2. ಮಾಲೀಕತನದ ವಿಶೇಷತೆಗಳೇನು?

3. ಈ ವರ್ಷ ಬಾಪ್ದಾದಾರವರು ಯಾವುದಕ್ಕೆ ಸಮಯವನ್ನು ಕೊಡುತ್ತಿದ್ದಾರೆ?

4. ತಮ್ಮ ಶುದ್ಧ ಸಂಕಲ್ಪದಿಂದ ವ್ಯರ್ಥವನ್ನು ಸಮಾಪ್ತಿ ಮಾಡಿ ಏನು ಮಾಡಬೇಕು?

5. ಮುರುಳಿ ಎಂದರೇನು ಮತ್ತು ಏನು ಮಾಡಬೇಕು?

6. ತಂದೆ ಸಮಾನರಾಗುವುದು ಎಂದರೇನು?

7. ಸಮರ್ಪನೆಯಾಗುವುದು ಎಂದರೇನು?

8. ತಪಸ್ಸು ಎಂದರೆ ಯಾವ ಅಭ್ಯಾಸ?

9. ವರದಾನ ತೆಗೆದುಕೊಳ್ಳಬೇಕೆಂದರೆ ಯಾವ ಎರಡು ಮಾತಿನ ಗಮನವಿರಬೇಕು?

10. ಯಾವ ಶತ್ರುವನ್ನು ಪರಿವರ್ತನೆ ಮಾಡಿ ಮಾಯಾಜೀತ್ರಾಗಬೇಕು?