11.11.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವೀಗ ವಿಶ್ವ ಸೇವಕರಾಗಿದ್ದೀರಿ, ನಿಮಗೆ ಯಾವುದೇ ಮಾತಿನಲ್ಲಿ ದೇಹಾಭಿಮಾನ ಬರಬಾರದು

ಪ್ರಶ್ನೆ:
ಯಾವ ಒಂದು ಹವ್ಯಾಸವು ಈಶ್ವರೀಯ ಕಾಯಿದೆಗೆ ವಿರುದ್ಧವಾಗಿದೆ, ಅದರಿಂದ ಬಹಳ ನಷ್ಟವಾಗುತ್ತದೆ?

ಉತ್ತರ:
ಯಾವುದೇ ಚಿತ್ರ ಕಥೆಗಳನ್ನು ಕೇಳುವುದು ಹಾಗೂ ಓದುವುದು, ಕಾದಂಬರಿಗಳನ್ನು ಓದುವುದು..... ಈ ಹವ್ಯಾಸಗಳು ಕಾಯಿದೆಗೆ ವಿರುದ್ಧವಾಗಿದೆ, ಇದರಿಂದ ಬಹಳ ನಷ್ಟವಾಗುತ್ತದೆ. ತಂದೆಯು ನಿಷೇಧಿಸಿದ್ದಾರೆ - ಮಕ್ಕಳೇ, ನೀವು ಇಂತಹ ಯಾವುದೇ ಪುಸ್ತಕಗಳನ್ನು ಓದುವಂತಿಲ್ಲ. ಒಂದುವೇಳೆ ಯಾವುದೇ ಬಿ.ಕೆ. ಈ ರೀತಿಯ ಪುಸ್ತಕಗಳನ್ನು ಓದುತ್ತಾರೆಂದರೆ ನೀವು ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡಿ.

ಗೀತೆ:
ಮುಖ ನೋಡಿಕೋ ಪ್ರಾಣಿ.........

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ - ನಾವು ನೆನಪಿನ ಯಾತ್ರೆಯಿಂದ ತಮೋಪ್ರಧಾನರಿಂದ ಸತೋಪ್ರಧಾನತೆಯ ಕಡೆ ಎಷ್ಟು ಮುಂದುವರೆಯುತ್ತಿದ್ದೇವೆಂದು ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಎಷ್ಟೆಷ್ಟು ನೆನಪು ಮಾಡುತ್ತೀರೋ ಅಷ್ಟು ಪಾಪಗಳು ಕಳೆಯುತ್ತಾ ಹೋಗುತ್ತವೆ. ಈ ಶಬ್ಧವನ್ನು ಎಲ್ಲಿ ಯಾವುದೇ ಶಾಸ್ತ್ರ ಇತ್ಯಾದಿಗಳಲ್ಲಿ ಬರೆದಿದ್ದಾರೆಯೇ? ಏಕೆಂದರೆ ಯಾರ್ಯಾರು ಧರ್ಮ ಸ್ಥಾಪನೆ ಮಾಡಿದರೋ, ಏನನ್ನು ತಿಳಿಸಿ ಹೋದರೋ ಅವರ ಶಾಸ್ತ್ರಗಳು ರಚಿಸಲ್ಪಟ್ಟಿವೆ ಮತ್ತೆ ಅದನ್ನು ಕುಳಿತು ಓದುತ್ತಾರೆ. ಆ ಗ್ರಂಥಗಳ ಪೂಜೆ ಮಾಡುತ್ತಾರೆ ಅಂದಮೇಲೆ ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ದೇಹ ಸಹಿತ ದೇಹದ ಸರ್ವ ಸಂಬಂಧಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಿರಿ ಎಂದೂ ಸಹ ಬರೆಯಲ್ಪಟ್ಟಿದೆ. ತಂದೆಯು ನೆನಪು ತರಿಸುತ್ತಾರೆ - ಮಕ್ಕಳೇ, ನೀವು ಮೊಟ್ಟ ಮೊದಲು ಅಶರೀರಿಯಾಗಿ ಬಂದಿದ್ದಿರಿ, ಅಲ್ಲಂತೂ ಪವಿತ್ರ ಆತ್ಮಗಳೇ ಇರುತ್ತಾರೆ. ಮುಕ್ತಿ-ಜೀವನ್ಮುಕ್ತಿಯಲ್ಲಿ ಯಾವುದೇ ಪತಿತ ಆತ್ಮನೂ ಹೋಗಲು ಸಾಧ್ಯವಿಲ್ಲ. ಅದು ನಿರಾಕಾರಿ, ನಿರ್ವಿಕಾರಿ ಪ್ರಪಂಚವಾಗಿದೆ. ಇದಕ್ಕೆ ಸಾಕಾರಿ, ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ ಮತ್ತೆ ಇದೇ ಪ್ರಪಂಚವು ಸತ್ಯಯುಗದಲ್ಲಿ ನಿರ್ವಿಕಾರಿ ಪ್ರಪಂಚವಾಗುತ್ತದೆ. ಸತ್ಯಯುಗದಲ್ಲಿರುವ ದೇವತೆಗಳಿಗೆ ಬಹಳ ಮಹಿಮೆಯಿದೆ, ಈಗ ಮಕ್ಕಳಿಗೆ ತಿಳಿಸಲಾಗುತ್ತದೆ - ಇದನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ಮತ್ತೆ ಅನ್ಯರಿಗೂ ತಿಳಿಸಿ. ನೀವಾತ್ಮಗಳು ಎಲ್ಲಿಂದ ಬಂದಿದ್ದೀರೋ, ಪವಿತ್ರರಾಗಿಯೇ ಬಂದಿದ್ದೀರಿ. ಇಲ್ಲಿ ಬಂದು ಅಪವಿತ್ರರಾಗಿದ್ದೀರಿ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚ, ಕಲಿಯುಗಕ್ಕೆ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಮ್ಮನ್ನು ಪಾವನ, ನಿರ್ವಿಕಾರಿಗಳನ್ನಾಗಿ ಮಾಡಲು ತಾವು ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬನ್ನಿ ಎಂದು ನೀವು ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತೀರಿ. ಸ್ವಯಂ ತಂದೆಯೇ ಕುಳಿತು ತಿಳಿಸುತ್ತಾರೆ - ಬ್ರಹ್ಮಾರವರ ಚಿತ್ರದಲ್ಲಿಯೇ ಈ ದಾದಾರವರನ್ನು ಏಕೆ ಇಲ್ಲಿ ಕೂರಿಸಿದ್ದಾರೆಂದು ಹೇಳಿ ತಬ್ಬಿಬ್ಬಾಗುತ್ತಾರೆ. ಆದ್ದರಿಂದ ತಿಳಿಸಿ - ಇವರು ಭಗೀರಥನಾಗಿದ್ದಾರೆ, ಶಿವ ಭಗವಾನುವಾಚವಿದೆ - ನಾನು ಈ ರಥವನ್ನು ಆಧಾರವಾಗಿ ತೆಗೆದುಕೊಂಡಿದ್ದೇನೆ ಏಕೆಂದರೆ ನನಗೆ ಪ್ರಕೃತಿಯ ಆಧಾರವು ಅವಶ್ಯವಾಗಿ ಬೇಕಾಗಿದೆ, ಇಲ್ಲವಾದರೆ ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಹೇಗೆ ಮಾಡಲಿ? ಪ್ರತಿನಿತ್ಯವೂ ಅವಶ್ಯವಾಗಿ ಓದಿಸಲೂಬೇಕಾಗಿದೆ. ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತನ್ನನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ. ಎಲ್ಲಾ ಆತ್ಮಗಳು ತಮ್ಮ ತಂದೆಯನ್ನು ನೆನಪು ಮಾಡಬೇಕಾಗಿದೆ. ಕೃಷ್ಣನಿಗೆ ಎಲ್ಲಾ ಆತ್ಮಗಳ ತಂದೆಯೆಂದು ಹೇಳುವುದಿಲ್ಲ. ಕೃಷ್ಣನಿಗಂತೂ ತನ್ನ ಶರೀರವಿದೆ ಅಂದಾಗ ಈ ಮಾತನ್ನು ತಂದೆಯು ಬಹಳ ಸಹಜ ಮಾಡಿ ತಿಳಿಸುತ್ತಾರೆ - ಯಾರಿಗೇ ತಿಳಿಸುವಾಗ ಇದನ್ನು ಹೇಳಿ, ತಂದೆಯು ತಿಳಿಸುತ್ತಾರೆ - ನೀವು ಅಶರೀರಿಯಾಗಿ ಬಂದಿರಿ, ಈಗ ಅಶರೀರಿಯಾಗಿ ಹೋಗಬೇಕಾಗಿದೆ. ಅಲ್ಲಿಂದ ಪವಿತ್ರ ಆತ್ಮರೇ ಬರುತ್ತೀರಿ. ಭಲೆ ನಾಳೆಯ ದಿನ ಯಾವುದೇ ಆತ್ಮನು ಮೇಲಿಂದ ಬಂದರೂ ಸಹ ಅವರು ಪವಿತ್ರವಾಗಿರುತ್ತಾರೆ ಆದ ಕಾರಣ ಅವಶ್ಯವಾಗಿ ಅವರ ಮಹಿಮೆಯಾಗುತ್ತದೆ. ಸಾಧು-ಸನ್ಯಾಸಿ, ಗೃಹಸ್ಥಿ ಯಾರದೇ ಹೆಸರು ಪ್ರಸಿದ್ಧವಾಗುತ್ತದೆಯೆಂದರೆ ಅವಶ್ಯವಾಗಿ ಅವರದು ಇದು ಮೊದಲ ಜನ್ಮವಲ್ಲವೆ. ಧರ್ಮ ಸ್ಥಾಪನೆ ಮಾಡುವುದಕ್ಕಾಗಿಯೇ ಅವರು ಬರಬೇಕಾಗಿದೆ. ಹೇಗೆ ತಂದೆಯು ಗುರುನಾನಕರ ಪ್ರತಿ ತಿಳಿಸುತ್ತಾರೆ. ಹೇಳುವಾಗ ಗುರು ಎಂಬ ಶಬ್ಧವನ್ನು ಹೇಳಲೇಬೇಕಾಗುತ್ತದೆ ಏಕೆಂದರೆ ನಾನಕ್ ಎಂಬ ಹೆಸರುಗಳು ಅನೇಕರಿಗೆ ಇದೆ. ಯಾರದೇ ಮಹಿಮೆ ಮಾಡಿದಾಗ ಆ ಅರ್ಥದಿಂದ ಹೇಳಲಾಗುತ್ತದೆ. ಹೇಳದಿದ್ದರೆ ಚೆನ್ನಾಗಿರುವುದಿಲ್ಲ. ವಾಸ್ತವದಲ್ಲಿ ನಿಮಗೆ ತಿಳಿಸಲಾಗಿದೆ - ಒಬ್ಬ ತಂದೆಯ ವಿನಃ ಮತ್ತ್ಯಾರೂ ಗುರುಗಳಿಲ್ಲ. ಅವರಿಗಾಗಿಯೇ ಸದ್ಗುರು ಅಕಾಲ್ ಎಂದು ಹಾಡುತ್ತಾರೆ ಅಂದರೆ ತಂದೆಯು ಅಕಾಲಮೂರ್ತಿಯಾಗಿದ್ದಾರೆ ಅರ್ಥಾತ್ ಅವರನ್ನು ಕಾಲವು ಕಬಳಿಸುವುದಿಲ್ಲ. ಅವರು ಆತ್ಮನಾಗಿದ್ದಾರೆ, ಆದ್ದರಿಂದ ಇವೆಲ್ಲಾ ಕಥೆಗಳನ್ನು ಕುರಿತು ಮನುಷ್ಯರು ರಚಿಸಿದ್ದಾರೆ. ಚಿತ್ರ ಕಥೆಗಳ ಪುಸ್ತಕ, ಕಾದಂಬರಿ ಇತ್ಯಾದಿಗಳನ್ನು ಅನೇಕರು ಓದುತ್ತಾರೆ. ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ - ಮಕ್ಕಳೇ, ಎಂದೂ ಯಾವುದೇ ಕಾದಂಬರಿ ಇತ್ಯಾದಿಗಳನ್ನು ಓದುವಂತಿಲ್ಲ. ಕೆಲಕೆಲವರಿಗೆ ಈ ಹವ್ಯಾಸವಿರುತ್ತದೆ. ಇಲ್ಲಂತೂ ನೀವು ಸೌಭಾಗ್ಯಶಾಲಿಗಳಾಗುತ್ತೀರಿ, ಕೆಲವರು ಬಿ.ಕೆ.ಗಳೂ ಸಹ ಕಾದಂಬರಿಗಳನ್ನು ಓದುತ್ತಾರೆ. ಆದ್ದರಿಂದ ತಂದೆಯು ಎಲ್ಲಾ ಮಕ್ಕಳಿಗೆ ಹೇಳುತ್ತಾರೆ - ಎಂದಾದರೂ ಯಾರಾದರೂ ಕಾದಂಬರಿ ಓದುತ್ತಿರುವುದನ್ನು ನೋಡಿದರೆ ಅದನ್ನು ಕೂಡಲೇ ತೆಗೆದು ಎಸೆಯಿರಿ, ಇದರಲ್ಲಿ ಹೆದರಬೇಡಿ. ನಮಗೆ ಯಾರಾದರೂ ಶಾಪ ಕೊಡುವರೇನೋ, ಕೋಪಿಸಿಕೊಳ್ಳುವರೇನೋ ಎಂಬ ಮಾತಿಲ್ಲ. ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡುವುದು ನಿಮ್ಮ ಕರ್ತವ್ಯವಾಗಿದೆ. ಚಿತ್ರಕಥೆಗಳನ್ನು ಕೇಳುವುದು ಅಥವಾ ಓದುವುದು, ಇದು ನಿಯಮಕ್ಕೆ ವಿರುದ್ಧವಾಗಿದೆ. ನಿಯಮಕ್ಕೆ ವಿರುದ್ಧವಾದ ಚಲನೆಯಿದ್ದರೆ ಕೂಡಲೇ ದೂರು ಕೊಡಬೇಕು ಇಲ್ಲವೆಂದರೆ ಸುಧಾರಣೆಯಾಗುವುದು ಹೇಗೆ? ತಮಗೇ ನಷ್ಟ ಮಾಡಿಕೊಳ್ಳುತ್ತಿರುತ್ತಾರೆ. ತನ್ನಲ್ಲಿಯೇ ಯೋಗಬಲವಿಲ್ಲವೆಂದರೆ ಅನ್ಯರಿಗೇನು ಕಲಿಸುವರು? ಆದ್ದರಿಂದ ತಂದೆಯು ಇದನ್ನು ನಿಷೇಧಿಸಿದ್ದಾರೆ. ಒಂದುವೇಳೆ ಮತ್ತೆ ಇಂತಹ ಕೆಲಸ ಮಾಡಿದರೆ ಅವಶ್ಯವಾಗಿ ಮನಸ್ಸು ತಿನ್ನುತ್ತಿರುವುದು, ತಮ್ಮದೇ ನಷ್ಟವಾಗುತ್ತಿರುವುದು. ಆದ್ದರಿಂದ ಯಾರಲ್ಲಿ ಯಾವುದೇ ಅವಗುಣವನ್ನು ನೋಡುತ್ತೀರೆಂದರೆ ದೂರು ಕೊಡಿ. ಯಾವುದೇ ನಿಯಮಕ್ಕೆ ವಿರುದ್ಧವಾದ ಚಲನೆಯಲ್ಲಿ ನಡೆಯುತ್ತಿಲ್ಲವೆ? ಏಕೆಂದರೆ ಬ್ರಾಹ್ಮಣರು ಈ ಸಮಯದಲ್ಲಿ ಸೇವಕರಲ್ಲವೆ. ಮಕ್ಕಳೇ, ನಮಸ್ತೆ ಎಂದು ತಂದೆಯೂ ಹೇಳುತ್ತಾರೆ, ಅರ್ಥ ಸಹಿತವಾಗಿ ತಿಳಿಸುತ್ತಾರೆ. ಓದಿಸುವಂತಹ ಬ್ರಾಹ್ಮಣಿಯರಿಗೂ ಸಹ ದೇಹಾಭಿಮಾನ ಬರಬಾರದು. ಹೇಗೆ ಶಿಕ್ಷಕರು ವಿದ್ಯಾರ್ಥಿಗಳ ಸೇವಕರಾಗಿರುತ್ತಾರಲ್ಲವೆ. ರಾಜ್ಯಪಾಲರು ಮೊದಲಾದವರೂ ಸಹ ಪತ್ರ ಬರೆಯುವಾಗ ಕೊನೆಯಲ್ಲಿ ನಾನು ನಿಮ್ಮ ವಿಧೇಯ ಸೇವಕನೆಂದು ಸಹಿ ಮಾಡುತ್ತಾರೆ. ಬಾಕಿ ಕಾರ್ಯದರ್ಶಿಗಳು ತಮ್ಮ ಕೈಯಿಂದ ಬರೆಯುತ್ತಾರೆ. ಎಂದೂ ತಮ್ಮ ಹೆಗ್ಗಳಿಕೆಯನ್ನು ತೋರಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಗುರುಗಳಂತು ತಮಗೆ ತಾವು ಶ್ರೀ ಶ್ರೀ ಎಂದು ಬರೆದುಕೊಡುತ್ತಾರೆ. ಇಲ್ಲಿಯೂ ಸಹ ಕೆಲವರು ಶ್ರೀ ಎಂದು ಬರೆಯುತ್ತಾರೆ. ವಾಸ್ತವದಲ್ಲಿ ಹೀಗೆ ಬರೆಯುವಂತಿಲ್ಲ. ಸ್ತ್ರೀಯರೂ ಸಹ ಶ್ರೀಮತಿ ಎಂದು ಬರೆಯುವಂತಿಲ್ಲ. ಯಾವಾಗ ಶ್ರೀ ಶ್ರೀ ತಂದೆಯು ಸ್ವಯಂ ಬಂದು ಮತವನ್ನು ಕೊಡುವರೋ ಆಗಲೇ ಶ್ರೀಮತವು ಸಿಗುವುದು. ನೀವು ಇದನ್ನು ತಿಳಿಸಿ, ಅವಶ್ಯವಾಗಿ ಯಾರದೋ ಮತದಿಂದ ಇವರು ದೇವತೆಗಳಾಗಿದ್ದಾರಲ್ಲವೆ. ಭಾರತದಲ್ಲಿ ಇವರು ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರು ಹೇಗಾದರೆಂದು ಯಾರಿಗೂ ತಿಳಿದಿಲ್ಲ. ನಿಮಗಂತೂ ಇದೇ ನಶೆಯಿರಬೇಕು. ಈ ಗುರಿ-ಧ್ಯೇಯದ ಚಿತ್ರವು ಸದಾ ಗೋಡೆಗೆ ಹಾಕಲ್ಪಟ್ಟಿರಲಿ. ಎಲ್ಲರಿಗೂ ತಿಳಿಸಿ - ನಮಗೆ ಭಗವಂತನೇ ಓದಿಸುತ್ತಾರೆ, ಇದರಿಂದ ನಾವು ವಿಶ್ವದ ಮಹಾರಾಜರಾಗುತ್ತೇವೆ. ತಂದೆಯು ಇಂತಹ ರಾಜ್ಯದ ಸ್ಥಾಪನೆ ಮಾಡಲು ಬಂದಿದ್ದಾರೆ. ಈ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ಚಿಕ್ಕ-ಚಿಕ್ಕ ಕನ್ಯೆಯರು ಗಿಳಿಯ ಭಾಷೆಯಲ್ಲಿ ಯಾರಿಗೆ ಬೇಕಾದರೂ ತಿಳಿಸಬಹುದು. ದೊಡ್ಡ-ದೊಡ್ಡ ಸಮ್ಮೇಳನಗಳಾಗುತ್ತವೆ, ಅದರಲ್ಲಿ ನಿಮಗೆ ನಿಮಂತ್ರಣ ಕೊಡುತ್ತಾರೆ ಆಗ ಈ ಚಿತ್ರಗಳನ್ನು ತೆಗೆದುಕೊಂಡು ಹೋಗಿ ನೀವು ತಿಳಿಸಿಕೊಡಬಹುದು - ಭಾರತದಲ್ಲಿ ಪುನಃ ಇವರ ರಾಜ್ಯವು ಸ್ಥಾಪನೆಯಾಗುತ್ತಿದೆ. ಎಲ್ಲಿಯೇ ದೊಡ್ಡ-ದೊಡ್ಡ ಸಭೆಗಳಲ್ಲಿ ನೀವು ತಿಳಿಸಬಹುದು. ಇಡೀ ದಿನ ಸರ್ವೀಸಿನದೇ ನಶೆಯಿರಲಿ. ಭಾರತದಲ್ಲಿ ಇವರ ರಾಜ್ಯವು ಸ್ಥಾಪನೆಯಾಗುತ್ತಿದೆ, ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ, ಶಿವ ಭಗವಾನುವಾಚ - ಹೇ ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿದರೆ 21 ಜನ್ಮಗಳಿಗಾಗಿ ನೀವು ಇಂತಹ ಶ್ರೇಷ್ಠರಾಗುವಿರಿ. ಜೊತೆಗೆ ದೈವೀ ಗುಣಗಳನ್ನೂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಈಗಂತೂ ಎಲ್ಲರದೂ ಆಸುರೀ ಗುಣಗಳಾಗಿವೆ. ಶ್ರೇಷ್ಠರನ್ನಾಗಿ ಮಾಡುವವರು ಒಬ್ಬರು ಶ್ರೀ ಶ್ರೀ ಶಿವ ತಂದೆಯಾಗಿದ್ದಾರೆ. ಆ ಶ್ರೇಷ್ಠಾತಿ ಶ್ರೇಷ್ಠ ತಂದೆಯೇ ನಮಗೆ ಓದಿಸುತ್ತಾರೆ. ಶಿವ ಭಗವಾನುವಾಚ, ಮನ್ಮನಾಭವ. ಭಗೀರಥನು ಪ್ರಸಿದ್ಧನಾಗಿದ್ದಾರೆ, ಭಗೀರಥನಿಗೆ ಬ್ರಹ್ಮನೆಂದು ಹೇಳಲಾಗುತ್ತದೆ, ಇವರಿಗೆ ಮಹಾವೀರನೆಂತಲೂ ಹೇಳುತ್ತಾರೆ. ದಿಲ್ವಾಡಾ ಮಂದಿರದಲ್ಲಿ ಕುಳಿತಿದ್ದಾರಲ್ಲವೆ ಆದರೆ ಜೈನರು ಯಾರು ಮಂದಿರವನ್ನು ಕಟ್ಟಿಸಿದರೋ ಅವರಿಗೆ ಇದು ತಿಳಿದಿಲ್ಲ. ನೀವು ಚಿಕ್ಕ-ಚಿಕ್ಕ ಮಕ್ಕಳು ಯಾರಿಂದ ಬೇಕಾದರೂ ನಿಮಂತ್ರಣವನ್ನು ತೆಗೆದುಕೊಳ್ಳಬಹುದು. ನೀವೀಗ ಶ್ರೇಷ್ಠರಾಗುತ್ತಿದ್ದೀರಿ, ಇದು ಭಾರತದ ಗುರಿ-ಧ್ಯೇಯವಲ್ಲವೆ ಅಂದಮೇಲೆ ಎಷ್ಟೊಂದು ನಶೆಯಿರಬೇಕು! ಇಲ್ಲಿ ತಂದೆಯು ಬಹಳ ಚೆನ್ನಾಗಿ ನಶೆ ತರಿಸುತ್ತಾರೆ. ಬಾಬಾ, ನಾವಂತೂ ಲಕ್ಷ್ಮೀ-ನಾರಾಯಣರೇ ಆಗುತ್ತೇವೆಂದು ಹೇಳುತ್ತಾರೆ, ರಾಮ-ಸೀತೆಯಾಗಲು ಯಾರೂ ಕೈಯೆತ್ತುವುದಿಲ್ಲ. ನೀವೀಗ ಅಹಿಂಸಕರು ಕ್ಷತ್ರಿಯರಾಗಿದ್ದೀರಿ. ನೀವು ಅಹಿಂಸಕ ಕ್ಷತ್ರಿಯರನ್ನು ಯಾರೂ ತಿಳಿದುಕೊಂಡಿಲ್ಲ. ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಗೀತೆಯಲ್ಲಿಯೂ ಮನ್ಮನಾಭವ ಶಬ್ಧವಿದೆ, ತನ್ನನ್ನು ಆತ್ಮನೆಂದು ತಿಳಿಯಿರಿ. ಇದು ತಿಳಿದುಕೊಳ್ಳುವ ಮಾತಲ್ಲವೆ ಆದರೆ ಇದನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯೇ ಕುಳಿತು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ. ಮಕ್ಕಳೇ, ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ, ಈ ಆತ್ಮಾಭಿಮಾನಿಯಾಗುವ ಅಭ್ಯಾಸವು 21 ಜನ್ಮಗಳವರೆಗೆ ನಡೆಯುತ್ತದೆ. ನಿಮಗೆ 21 ಜನ್ಮಗಳಿಗಾಗಿ ಶಿಕ್ಷಣ ಸಿಗುತ್ತಿದೆ.

ತಂದೆಯು ಮತ್ತೆ-ಮತ್ತೆ ಮೂಲ ಮಾತನ್ನು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ಕುಳಿತುಕೊಳ್ಳಿ, ಪರಮಾತ್ಮ ತಂದೆಯು ನಾವಾತ್ಮಗಳಿಗೆ ತಿಳಿಸುತ್ತಾರೆ. ನೀವು ಪದೇ-ಪದೇ ದೇಹಾಭಿಮಾನದಲ್ಲಿ ಬಂದು ಬಿಡುತ್ತೀರಿ ಆಗ ಮನೆ-ಮಠವೆಲ್ಲವೂ ನೆನಪಿಗೆ ಬಂದು ಬಿಡುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ಭಕ್ತಿ ಮಾಡುತ್ತಾ-ಮಾಡುತ್ತಾ ಬುದ್ಧಿಯು ಬೇರೆ ಕಡೆ ಹೊರಟು ಹೋಗುತ್ತದೆ. ಕೇವಲ ನೌಧಾಭಕ್ತಿ ಮಾಡುವವರೇ ಸ್ಥಿರವಾಗಿ ಕುಳಿತುಕೊಳ್ಳುವರು. ಅದಕ್ಕೆ ತೀವ್ರ ಭಕ್ತಿಯೆಂದು ಹೇಳಲಾಗುತ್ತದೆ. ಸಂಪೂರ್ಣ ಲವಲೀನರಾಗಿ ಬಿಡುತ್ತಾರೆ. ಹೇಗೆ ನೀವೂ ಸಹ ನೆನಪಿನಲ್ಲಿ ಕುಳಿತುಕೊಂಡಾಗ ಕೆಲವೊಂದು ಸಮಯದಲ್ಲಿ ಸಂಪೂರ್ಣ ಅಶರೀರಿಯಾಗಿ ಬಿಡುತ್ತೀರಿ. ಒಳ್ಳೆಯ ಮಕ್ಕಳೇ ಈ ಸ್ಥಿತಿಯಲ್ಲಿ ಕುಳಿತುಕೊಳ್ಳುವರು. ಇದರಿಂದ ದೇಹಭಾನವು ಕಳೆಯುವುದು. ಅಶರೀರಿಯಾಗಿ ಆ ನಶೆಯಲ್ಲಿ ಕುಳಿತಿರುತ್ತಾರೆ, ಇದೇ ಹವ್ಯಾಸವಾಗುತ್ತಾ ಹೋಗುತ್ತದೆ. ಸನ್ಯಾಸಿಗಳು ತತ್ವಜ್ಞಾನಿ ಅಥವಾ ಬ್ರಹ್ಮ ಜ್ಞಾನಿಗಳಾಗಿದ್ದಾರೆ. ನಾವು ಲೀನವಾಗಿ ಬಿಡುತ್ತೇವೆ, ಈ ಹಳೆಯ ಶರೀರವನ್ನು ಬಿಟ್ಟು ಬ್ರಹ್ಮ ತತ್ವದಲ್ಲಿ ಲೀನವಾಗುತ್ತೇವೆಂದು ಹೇಳುತ್ತಾರೆ. ಎಲ್ಲರದೂ ತಮ್ಮ-ತಮ್ಮ ಧರ್ಮವಿದೆಯಲ್ಲವೆ. ಯಾರೂ ಅನ್ಯ ಧರ್ಮವನ್ನು ಒಪ್ಪುವುದಿಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮದವರೂ ಸಹ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಗೀತೆಯ ಭಗವಂತನು ಯಾವಾಗ ಬಂದಿದ್ದರು? ಯಾವಾಗ ಗೀತಾಯುಗವಿತ್ತು? ಯಾರೂ ತಿಳಿದುಕೊಂಡಿಲ್ಲ. ನಿಮಗೆ ತಿಳಿದಿದೆ, ಈ ಸಂಗಮಯುಗದಲ್ಲಿಯೇ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ, ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತಾರೆ. ಇದು ಭಾರತದ್ದೇ ಮಾತಾಗಿದೆ. ಅವಶ್ಯವಾಗಿ ಅನೇಕ ಧರ್ಮಗಳು ಇದ್ದವು, ಒಂದು ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶವೆಂದು ಗಾಯನವಿದೆ. ಸತ್ಯಯುಗದಲ್ಲಿ ಒಂದು ಧರ್ಮವಿತ್ತು, ಈಗ ಕಲಿಯುಗದಲ್ಲಿ ಅನೇಕ ಧರ್ಮಗಳಾಗಿವೆ. ಪುನಃ ಒಂದು ಧರ್ಮದ ಸ್ಥಾಪನೆಯಾಗುತ್ತದೆ. ಆ ಒಂದು ಧರ್ಮವು ಈಗ ಇಲ್ಲ, ಉಳಿದೆಲ್ಲವೂ ನಿಂತಿದೆ. ಆದ್ದರಿಂದ ಆಲದ ಮರದ ಉದಾಹರಣೆಯು ಬಹಳ ಚೆನ್ನಾಗಿದೆ. ಅದರ ಬುಡವೇ ಇಲ್ಲ, ಇಡೀ ವೃಕ್ಷವು ನಿಂತಿರುತ್ತದೆ. ಅದೇ ರೀತಿ ಈ ಮಾನವ ವಂಶ ವೃಕ್ಷದಲ್ಲಿಯೂ ದೇವಿ-ದೇವತಾ ಧರ್ಮವೇ ಇಲ್ಲ. ಯಾವ ಆದಿ ಸನಾತನ ದೇವಿ-ದೇವತಾ ಧರ್ಮವು ಬುಡ (ಬುನಾದಿ) ವಾಗಿತ್ತೊ ಅದು ಈಗ ಪ್ರಾಯಲೋಪವಾಗಿ ಬಿಟ್ಟಿದೆ. ಪುನಃ ತಂದೆಯು ಸ್ಥಾಪನೆ ಮಾಡುತ್ತಾರೆ. ಉಳಿದ ಇಷ್ಟೆಲ್ಲಾ ಧರ್ಮಗಳು ಕೊನೆಯಲ್ಲಿ ಬಂದಿವೆ. ಪುನಃ ಈ ಚಕ್ರವು ಪುನರಾವರ್ತನೆಯಾಗುತ್ತದೆ ಅರ್ಥಾತ್ ಹಳೆಯ ಪ್ರಪಂಚದಿಂದ ಹೊಸದಾಗುತ್ತದೆ. ಹೊಸ ಪ್ರಪಂಚದಲ್ಲಿ ಇವರ ರಾಜ್ಯವಿತ್ತು, ನಿಮ್ಮ ಬಳಿ ದೊಡ್ಡ ಚಿತ್ರಗಳೂ ಇವೆ, ಸಣ್ಣ ಚಿತ್ರಗಳೂ ಇವೆ. ಯಾವುದೇ ಚಿತ್ರವು ದೊಡ್ಡದಾಗಿದ್ದಾಗ ಅದನ್ನು ನೋಡಿ ಇದೇನು ಎಂದು ಕೇಳುತ್ತಾರೆ ಆಗ ತಿಳಿಸಿ, ನಾವು ಇಂತಹ ಚಿತ್ರವನ್ನು ಹಿಡಿದುಕೊಂಡಿದ್ದೇವೆ, ಇದರಿಂದ ಮನುಷ್ಯರು ಭಿಕಾರಿಗಳಿಂದ ರಾಜಕುಮಾರರಾಗಿ ಬಿಡುವರು. ಮನಸ್ಸಿನಲ್ಲಿ ಬಹಳ ಉಮ್ಮಂಗ, ಬಹಳ ಖುಷಿಯಿರಬೇಕು. ನಾವಾತ್ಮರು ಭಗವಂತನ ಮಕ್ಕಳಾಗಿದ್ದೇವೆ. ಭಗವಂತನು ಆತ್ಮಗಳಿಗೆ ಓದಿಸುತ್ತಾರೆ. ತಂದೆಯು ನಮ್ಮನ್ನು ತಮ್ಮ ನಯನಗಳ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಾರೆ. ಈ ಛೀ ಛೀ ಪ್ರಪಂಚವು ನಾವು ಇರಲು ಯೋಗ್ಯವಾಗಿಲ್ಲ. ಮುಂದೆ ಹೋದಂತೆ ದುಃಖದಲ್ಲಿ ಬಹಳ ತ್ರಾಹಿ ತ್ರಾಹಿ ಎನ್ನುತ್ತಾರೆ, ಮಾತೇ ಕೇಳಬೇಡಿ. ಕೋಟ್ಯಾಂತರ ಮಂದಿ ಮನುಷ್ಯರು ಮರಣ ಹೊಂದುತ್ತಾರೆ. ಇದಂತೂ ನೀವು ಮಕ್ಕಳ ಬುದ್ಧಿಯಲ್ಲಿದೆ. ನಾವು ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತಿದ್ದೇವೆಯೋ ಇದೇನೂ ಉಳಿಯುವುದಿಲ್ಲ. ಇಲ್ಲಂತೂ ಮನುಷ್ಯರು ಮುಳ್ಳುಗಳಂತಿದ್ದಾರೆ, ಸತ್ಯಯುಗವು ಹೂದೋಟವಾಗಿದೆ. ಸತ್ಯಯುಗದಲ್ಲಿ ನಮ್ಮ ನಯನಗಳು ಶೀತಲವಾಗಿ ಬಿಡುತ್ತವೆ. ಹೇಗೆ ಹೂದೋಟದಲ್ಲಿ ಹೋದಾಗ ಕಣ್ಣುಗಳು ಬಹಳ ಶೀತಲವಾಗುತ್ತದೆಯಲ್ಲವೆ ಅಂದಾಗ ನೀವು ಪದಮಾಪದಮ ಭಾಗ್ಯಶಾಲಿಗಳಾಗುತ್ತಿದ್ದೀರಿ. ಯಾರು ಬ್ರಾಹ್ಮಣರಾಗುವರೋ ಅವರ ಪಾದಗಳಲ್ಲಿ ಪದುಮಗಳಿವೆ. ನಾವು ಇಂತಹ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ಮಕ್ಕಳು ತಿಳಿಸಿಕೊಡಬೇಕು, ಆದ್ದರಿಂದಲೇ ತಂದೆಯು ಈ ಬ್ಯಾಡ್ಜನ್ನು ಮಾಡಿಸಿದ್ದಾರೆ. ಬಿಳಿಯ ಸೀರೆಯನ್ನುಟ್ಟು ಬ್ಯಾಡ್ಜನ್ನು ಧರಿಸಿದ್ದರೆ ಇದರಿಂದ ಸ್ವತಹ ಸೇವೆಯಾಗುತ್ತಿರುವುದು. ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿ ಹೋಗಿದ್ದರು ಎಂದು ಮನುಷ್ಯರು ಹಾಡುತ್ತಾರೆ. ಆದರೆ ಬಹಳ ಕಾಲದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನಿಮಗೆ ತಂದೆಯು ತಿಳಿಸಿದ್ದರು ಬಹಳ ಕಾಲ ಎಂದರೆ 5000 ವರ್ಷಗಳ ನಂತರ ನೀವು ಮಕ್ಕಳು ತಂದೆಯೊಂದಿಗೆ ಮಿಲನ ಮಾಡುತ್ತೀರಿ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ - ಈ ಸೃಷ್ಟಿಯಲ್ಲಿ ಎಲ್ಲರಿಗಿಂತ ಪ್ರಸಿದ್ಧರಾದವರು ಈ ರಾಧೆ-ಕೃಷ್ಣನಾಗಿದ್ದಾರೆ. ಇವರು ಸತ್ಯಯುಗದ ಮೊದಲನೇ ರಾಜಕುಮಾರ, ರಾಜಕುಮಾರಿಯಾಗಿದ್ದಾರೆ. ಇವರು ಎಲ್ಲಿಂದ ಬಂದರು ಎಂಬ ಸಂಕಲ್ಪವು ಎಂದೂ ಯಾರಿಗೂ ಬರುವುದಿಲ್ಲ. ಸತ್ಯಯುಗಕ್ಕೆ ಮೊದಲು ಅವಶ್ಯವಾಗಿ ಕಲಿಯುಗವಿರಬೇಕು. ಅವರು ಅಂತಹ ಯಾವುದೋ ಕರ್ಮವನ್ನು ಮಾಡಿದ ಕಾರಣ ವಿಶ್ವದ ಮಾಲೀಕರಾದರು! ಭಾರತವಾಸಿಗಳು ಇವರನ್ನು ವಿಶ್ವದ ಮಾಲೀಕರೆಂದು ತಿಳಿದುಕೊಳ್ಳುವುದಿಲ್ಲ, ಇವರ ರಾಜ್ಯವಿದ್ದಾಗ ಭಾರತದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ, ನಮ್ಮ ಗುರಿ-ಧ್ಯೇಯವೇ ಇದಾಗಿದೆ. ಭಲೆ ಮಂದಿರಗಳಲ್ಲಿ ಅವರ ಚಿತ್ರಗಳಿವೆ ಆದರೆ ಇದು ಈ ಸಮಯದಲ್ಲಿ ಸ್ಥಾಪನೆಯಾಗುತ್ತಿದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಳ್ಳುತ್ತಾರೆ. ಕೆಲವರು ಬಹಳ ಬೇಗನೆ ಮರೆತು ಬಿಡುತ್ತಾರೆ, ಚಲನೆಯು ಮೊದಲಿನಂತೆ ಆಗಿ ಬಿಡುತ್ತದೆ. ಇಲ್ಲಿದ್ದಾಗ ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಹೊರಗೆ ಹೋದ ಕೂಡಲೇ ಎಲ್ಲವೂ ಸಮಾಪ್ತಿ. ಮಕ್ಕಳಿಗೆ ಸರ್ವೀಸಿನ ಉಮ್ಮಂಗವಿರಬೇಕು, ಎಲ್ಲರಿಗೆ ಈ ಸಂದೇಶ ಕೊಡುವ ಯುಕ್ತಿಯನ್ನು ರಚಿಸಿ, ಪರಿಶ್ರಮ ಪಡಬೇಕಾಗಿದೆ. ನಶೆಯಿಂದ ತಿಳಿಸಿ ಶಿವ ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ಪಾಪಗಳು ಕಳೆಯುತ್ತವೆ. ನಾವು ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗುರಿ-ಧ್ಯೇಯದ ಚಿತ್ರವನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಬೇಕಾಗಿದೆ. ನಶೆಯಿರಲಿ - ನಾವೀಗ ಶ್ರೀಮತದಂತೆ ವಿಶ್ವದ ಮಾಲೀಕರಾಗುತ್ತಿದ್ದೇವೆ. ನಾವು ಇಂತಹ ಹೂದೋಟದಲ್ಲಿ ಹೋಗುತ್ತೇವೆ - ಎಲ್ಲಿ ನಮ್ಮ ನಯನಗಳು ಶೀತಲವಾಗಿ ಬಿಡುತ್ತವೆ.

2. ಸರ್ವೀಸಿನ ಬಹಳ-ಬಹಳ ಉಮ್ಮಂಗವಿರಬೇಕು. ವಿಶಾಲ ಹೃದಯ ಹಾಗೂ ಉಮ್ಮಂಗದಿಂದ ದೊಡ್ಡ-ದೊಡ್ಡ ಚಿತ್ರಗಳಲ್ಲಿ ಸರ್ವೀಸ್ ಮಾಡಬೇಕಾಗಿದೆ. ಭಿಕಾರಿಗಳಿಂದ ರಾಜಕುಮಾರರನ್ನಾಗಿ ಮಾಡಬೇಕಾಗಿದೆ.

ವರದಾನ:
ಯಜ್ಞ ಸೇವೆಯ ಮುಖಾಂತರ ಸರ್ವ ಪ್ರಾಪ್ತಿಗಳ ಪ್ರಸಾದ ಪ್ರಾಪ್ತಿ ಮಾಡಿಕೊಳ್ಳುವಂತಹ ಆಲ್ರೌಂಡ್ ಸೇವಾಧಾರಿ ಭವ.

ಸಂಗಮಯುಗದಲ್ಲಿ ಆಲ್ರೌಂಡ್ ಸೇವೆಯ ಅವಕಾಶ ಸಿಗುವುದೂ ಸಹ ಡ್ರಾಮದಲ್ಲಿ ಒಂದು ಲಿಫ್ಟ್ ಆಗಿದೆ, ಯಾರು ಪ್ರೀತಿಯಿಂದ ಯಜ್ಞದ ಆಲ್ರೌಂಡ್ ಸೇವೆ ಮಾಡುತ್ತಾರೆ, ಅವರಿಗೆ ಸರ್ವ ಪ್ರಾಪ್ತಿಗಳ ಪ್ರಸಾದ ಸ್ವತಃ ಪ್ರಾಪ್ತಿಯಾಗಿ ಬಿಡುವುದು. ಅವರು ನಿರ್ವಿಘ್ನರಾಗಿರುತ್ತಾರೆ. ಒಂದು ಬಾರಿ ಸೇವೆ ಮಾಡಿದರೆ ಸಾವಿರ ಬಾರಿ ಸೇವೆಯ ಫಲ ಪ್ರಾಪ್ತಿಯಾಯಿತು. ಸದಾ ಸ್ಥೂಲ ಸೂಕ್ಷ್ಮ ಲಂಗರ್ ಹಾಕಿರಬೇಕು. ಯಾರನ್ನೇ ಸಂತುಷ್ಠ ಮಾಡುವುದು ಎಲ್ಲಕ್ಕಿಂತಲೂ ದೊಡ್ಡ ಸೇವೆಯಾಗಿದೆ. ಅತಿಥಿಗಳ ಆಥಿತ್ಯ ಮಾಡುವುದು, ಇದು ಎಲ್ಲದಕ್ಕಿಂತಲೂ ದೊಡ್ಡ ಭಾಗ್ಯವಾಗಿದೆ.

ಸ್ಲೋಗನ್:
ಸ್ವಮಾನದಲ್ಲಿ ಸ್ಥಿತರಾಗಿದ್ದಾಗ ಅನೇಕ ಪ್ರಕಾರದ ಅಭಿಮಾನ ಸ್ವತಃ ಸಮಾಪ್ತಿಯಾಗಿ ಬಿಡುವುದು.