11.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ನಿಮ್ಮ ಬುದ್ಧಿಯ ಬೀಗವು ತೆರೆಯುತ್ತದೆ, ಯಾರಿಗೆ ಪದೇ-ಪದೇ ತಂದೆಯ ನೆನಪು ಮರೆತು ಹೋಗುತ್ತದೆಯೋ ಅವರೇ ದುರಾದೃಷ್ಟ ಮಕ್ಕಳು”

ಪ್ರಶ್ನೆ:
ಖಾತೆಯನ್ನು ಜಮಾ ಮಾಡಿಕೊಳ್ಳುವ ಆಧಾರವೇನು? ಎಲ್ಲದಕ್ಕಿಂತ ದೊಡ್ಡ ಸಂಪಾದನೆಯು ಯಾವುದರಲ್ಲಿದೆ?

ಉತ್ತರ:
ದಾನ ಮಾಡುವುದರಿಂದ ಖಾತೆಯು ಜಮಾ ಆಗುತ್ತದೆ. ಎಷ್ಟು ನೀವು ಅನ್ಯರಿಗೆ ತಂದೆಯ ಪರಿಚಯವನ್ನು ಕೊಡುತ್ತೀರೋ ಅಷ್ಟು ಸಂಪಾದನೆಯು ವೃದ್ಧಿ ಹೊಂದುತ್ತಾ ಹೋಗುವುದು. ಮುರುಳಿಯಿಂದ ನಿಮಗೆ ಬಹಳಷ್ಟು ಸಂಪಾದನೆಯಾಗುತ್ತದೆ. ಈ ಮುರುಳಿಯೇ ಪತಿತರಿಂದ ಪಾವನರು ಅರ್ಥಾತ್ ಸುಂದರರನ್ನಾಗಿ ಮಾಡುವಂತಹದಾಗಿದೆ. ಮುರುಳಿಯಲ್ಲಿಯೇ ಈಶ್ವರೀಯ ಚಮತ್ಕಾರವಿದೆ, ಇದರಿಂದಲೇ ನೀವು ಸಂಪನ್ನರಾಗುತ್ತೀರಿ.

ಗೀತೆ:
ನಾವು ಆ ಮಾರ್ಗದಂತೆ ನಡೆಯಬೇಕು.....

ಓಂ ಶಾಂತಿ.
ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ - ಮಕ್ಕಳೇ, ಇದು ಬೀಳುವುದು ಮತ್ತು ಸಂಭಾಲನೆ ಮಾಡಿಕೊಳ್ಳುವ ಮಾರ್ಗವಾಗಿದೆ. ಘಳಿಗೆ-ಘಳಿಗೆಯೂ ತಂದೆಯನ್ನು ಮರೆಯುತ್ತೀರೆಂದರೆ ಬೀಳುತ್ತಿರಿ ಎಂದರ್ಥ ಹಾಗೂ ನೆನಪು ಮಾಡಿದರೆ ಸಂಭಾಲನೆ ಮಾಡಿಕೊಳ್ಳುತ್ತೀರಿ. ಮಾಯೆಯು ತಂದೆಯ ನೆನಪನ್ನು ಮರೆಸಿಬಿಡುತ್ತದೆ ಏಕೆಂದರೆ ಇದು ಹೊಸ ಮಾತಾಗಿದೆಯಲ್ಲವೆ. ಹಾಗೆ ನೋಡಿದರೆ ತಂದೆಯನ್ನು ಯಾರೂ ಎಂದೂ ಮರೆಯುವುದಿಲ್ಲ. ಸ್ತ್ರೀ ತನ್ನ ಪತಿಯನ್ನು ಎಂದೂ ಮರೆಯುವುದಿಲ್ಲ. ನಿಶ್ಚಿತಾರ್ಥವಾಯಿತೆಂದರೆ ಬುದ್ಧಿಯೋಗವು ಅವರ ಕಡೆ ಜೋಡಿಸಿಬಿಡುತ್ತದೆ, ಮರೆಯುವ ಮಾತೇ ಇರುವುದಿಲ್ಲ. ಪತಿ ಪತಿಯೇ, ತಂದೆಯು ತಂದೆಯೇ ಆಗಿರುತ್ತಾರೆ. ಆದರೆ ಇಲ್ಲಂತೂ ನಿರಾಕಾರ ತಂದೆಯೂ ಆಗಿದ್ದಾರೆ, ಇವರನ್ನು ಪ್ರಿಯತಮನೆಂತಲೂ ಹೇಳುತ್ತಾರೆ. ಪ್ರಿಯತಮೆಯರೆಂದು ಭಕ್ತರಿಗೆ ಹೇಳಲಾಗುತ್ತದೆ. ಈ ಸಮಯದಲ್ಲಿ ಎಲ್ಲರೂ ಭಕ್ತರಾಗಿದ್ದಾರೆ, ಭಗವಂತನು ಒಬ್ಬರೇ ಆಗಿದ್ದಾರೆ. ಭಕ್ತರಿಗೆ ಪ್ರಿಯತಮೆಯರು, ಭಗವಂತನಿಗೆ ಪ್ರಿಯತಮ ಅಥವಾ ಭಕ್ತರನ್ನು ಬಾಲಕ, ಭಗವಂತನನ್ನು ತಂದೆಯೆಂದು ಕರೆಯಲಾಗುತ್ತದೆ. ಈಗ ಪತಿಯರ ಪತಿ ಅಥವಾ ತಂದೆಯರ ತಂದೆ ಅವರೊಬ್ಬರೆ ಆಗಿದ್ದಾರೆ. ಪ್ರತಿಯೊಂದು ಆತ್ಮನ ತಂದೆ ಆ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಆ ಲೌಕಿಕ ತಂದೆಯು ಪ್ರತಿಯೊಬ್ಬರಿಗೆ ಬೇರೆ-ಬೇರೆ ಇರುತ್ತಾರೆ ಆದರೆ ಈ ಪಾರಲೌಕಿಕ ಪರಮಪಿತ ಎಲ್ಲಾ ಆತ್ಮಗಳ ತಂದೆಯು ಒಬ್ಬರೆ ಪರಮಾತ್ಮನಾಗಿದ್ದಾರೆ, ಅವರ ಹೆಸರು ಶಿವ ಆಗಿದೆ. ಕೇವಲ ಗಾಡ್ಫಾದರ್, ಅಬುಪರ್ವತ ಎಂದು ಬರೆಯುವುದರಿಂದ ಪತ್ರವು ತಲುಪುತ್ತದೆಯೇ? ಹೆಸರಂತೂ ಬರೆಯ ಬೇಕಾಗುತ್ತದೆಯಲ್ಲವೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ. ಅವರ ಹೆಸರಾಗಿದೆ ಶಿವ. ಹೇಗೆ ಶಿವಕಾಶಿ ಎಂದು ಹೇಳುತ್ತಾರೆ ಅಲ್ಲಿ ಶಿವನ ಮಂದಿರವೂ ಇದೆ. ಅವಶ್ಯವಾಗಿ ಅಲ್ಲಿಗೂ ಹೋಗಿರಬೇಕಲ್ಲವೆ ಅದಕ್ಕೋಸ್ಕರವೇ ತೋರಿಸುತ್ತಾರೆ - ರಾಮನು ಅಲ್ಲಿ ಹೋದರು, ಇಲ್ಲಿ ಹೋದರು, ಗಾಂಧೀಜಿಯು ಇಲ್ಲಿ ಹೋಗಿದ್ದರು....... ಅಂದಾಗ ಅವಶ್ಯವಾಗಿ ಶಿವತಂದೆಯ ಚಿತ್ರವೂ ಇದೆ. ಅಂದಮೇಲೆ ಅವರು ಬಂದಿರುವ ಕಾರಣವೇ ಇದೆಯಲ್ಲವೆ ಆದರೆ ಅವರು ನಿರಾಕಾರನಾಗಿದ್ದಾರೆ ಆದ್ದರಿಂದ ಅವರನ್ನು ತಂದೆಯೆಂದು ಹೇಳಲಾಗುತ್ತದೆ ಮತ್ತ್ಯಾರನ್ನೂ ಎಲ್ಲರ ತಂದೆಯೆಂದು ಹೇಳಲು ಸಾಧ್ಯವಿಲ್ಲ. ಬ್ರಹ್ಮಾ, ವಿಷ್ಣು, ಶಂಕರನಿಗೂ ಅವರು ತಂದೆಯಾಗಿದ್ದಾರೆ ಆದ್ದರಿಂದಲೇ ಅವರ ಹೆಸರು ಶಿವ ಆಗಿದೆ. ಕಾಶಿಯಲ್ಲಿಯೂ ಮಂದಿರವಿದೆ, ಉಜ್ಜಯನಿಯಲ್ಲಿಯೂ ಸೋಮನಾಥನ ಮಂದಿರವಿದೆ. ಇಷ್ಟೊಂದು ಮಂದಿರಗಳು ಏಕೆ ಆಗಿವೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಹೇಗೆ ಲಕ್ಷ್ಮಿ-ನಾರಾಯಣರ ಪೂಜೆ ಮಾಡುತ್ತಾರೆ, ಇವರು ಸ್ವರ್ಗದ ಮಾಲೀಕರಾಗಿದ್ದರು ಎಂದು ಹೇಳುತ್ತಾರೆ ಆದರೆ ಯಾವಾಗ ಆ ಸ್ವರ್ಗವಿತ್ತು, ಅವರು ಹೇಗೆ ಮಾಲೀಕರಾದರು? ಎಂಬುದೇನೂ ಗೊತ್ತಿಲ್ಲ. ಪೂಜಾರಿಯು ಯಾರ ಪೂಜೆಯನ್ನು ಮಾಡುತ್ತಾರೆಂದು ಅವರ ಕರ್ತವ್ಯವೇ ಗೊತ್ತಿಲ್ಲವೆಂದರೆ ಇದಕ್ಕೆ ಅಂಧಶ್ರದ್ಧೆಯೆಂದೇ ಹೇಳಲಾಗುತ್ತದೆ. ಇಲ್ಲಿಯೂ ಸಹ ತಂದೆಯೆಂದು ಹೇಳುತ್ತಾರೆ ಆದರೆ ಪೂರ್ಣ ಪರಿಚಯವಿಲ್ಲ. ಮಾತಾಪಿತರನ್ನು ಅರಿತುಕೊಂಡಿಲ್ಲ. ಲಕ್ಷ್ಮಿ-ನಾರಾಯಣರ ಪೂಜಾರಿಗಳು ಪೂಜೆ ಮಾಡುತ್ತಾರೆ. ಶಿವನ ಮಂದಿರದಲ್ಲಿ ಹೋಗಿ ಮಹಿಮೆ ಮಾಡುತ್ತಾರೆ. ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹಾಡುತ್ತಾರೆ ಆದರೆ ಅವರು ನಮಗೆ ಹೇಗೆ ಮಾತಾಪಿತರಾಗಿದ್ದಾರೆ, ಯಾವಾಗ ಆಗಿದ್ದರು ಎಂದು ತಿಳಿದುಕೊಂಡಿಲ್ಲ. ಕ್ರಿಶ್ಚಿಯನ್, ಬೌದ್ಧ ಧರ್ಮದವರು, ಅವರವರ ಧರ್ಮಸ್ಥಾಪಕರನ್ನು ನೆನಪು ಮಾಡುತ್ತಾರೆ. ಕೇಳಿದ ತಕ್ಷಣ ಕ್ರೈಸ್ಟ್ ಇಂತಹ ಸಮಯದಲ್ಲಿ ಕ್ರೈಸ್ತ ಧರ್ಮದ ಸ್ಥಾಪನೆ ಮಾಡಲು ಬಂದಿದ್ದರು ಎಂದು ಅವರ ಇತಿಹಾಸವನ್ನೇ ತಿಳಿಸುತ್ತಾರೆ ಆದರೆ ಭಾರತವಾಸಿಗಳು ಯಾರನ್ನು ಪೂಜಿಸುತ್ತಾರೆಯೋ ಅವರು ಯಾರೆಂದು ತಿಳಿದುಕೊಂಡೇ ಇಲ್ಲ. ಶಿವನನ್ನಾಗಲಿ, ಬ್ರಹ್ಮಾ-ವಿಷ್ಣು-ಶಂಕರರನ್ನಾಗಲಿ, ಜಗದಂಬಾ-ಜಗತ್ಪಿತನನ್ನಾಗಲಿ, ಲಕ್ಷ್ಮಿ-ನಾರಾಯಣನನ್ನಾಗಲಿ ಅರಿತುಕೊಂಡಿಲ್ಲ. ಕೇವಲ ಪೂಜೆ ಮಾಡುತ್ತಿರುತ್ತಾರೆ. ಅವರ ಚರಿತ್ರೆ ಏನೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ತಂದೆಯು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ - ಮಕ್ಕಳೇ, ಯಾವಾಗ ನೀವು ಸ್ವರ್ಗದಲ್ಲಿದ್ದಿರಿ ಆಗ ನಿಮ್ಮ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿತ್ತು, ನೀವು ರಾಜ್ಯ ಮಾಡುತ್ತಿದ್ದಿರಿ. ಅವಶ್ಯವಾಗಿ ನಿಮಗೆ ಗೊತ್ತಿದೆ, ನಾವೇ ರಾಜ್ಯ ಮಾಡುತ್ತಿದ್ದೆವು ಪುನರ್ಜನ್ಮಗಳನ್ನು ಪಡೆದೆವು. 84 ಜನ್ಮಗಳನ್ನು ಪಡೆಯುತ್ತಾ-ಪಡೆಯುತ್ತಾ ರಾಜ್ಯಭಾಗ್ಯವನ್ನು ಕಳೆದುಕೊಂಡೆವು. ಸುಂದರರಿಂದ ಕಪ್ಪಾಗಿಬಿಟ್ಟೆವು, ಸುಂದರರಾಗಿದ್ದೆವು ಆದರೆ ಈಗ ಶ್ಯಾಮರಾಗಿಬಿಟ್ಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಾರಾಯಣನನ್ನು ಕಪ್ಪಾಗಿ ತೋರಿಸುತ್ತಾರೆ ಅಂದಮೇಲೆ ಅದೇ ಕೃಷ್ಣನು ನಾರಾಯಣನಾಗಿದ್ದರೆಂದು ಸಿದ್ಧವಾಗುತ್ತದೆ ಆದರೆ ಈ ಮಾತುಗಳನ್ನು ತಿಳಿದುಕೊಂಡಿಲ್ಲ.

ಯಾದವರು ಅಣ್ವಸ್ತ್ರಗಳನ್ನು ತಯಾರಿಸುವವರಾಗಿದ್ದಾರೆ ಮತ್ತು ಕೌರವರು, ಪಾಂಡವರು ಸಹೋದರ-ಸಹೋದರರಾಗಿದ್ದರು. ಅವರು ಅಸುರೀ ಸಹೋದರರು ಮತ್ತು ಇವರು ದೈವೀ ಸಹೋದರರಾಗಿದ್ದರು. ಇವರೂ (ಪಾಂಡವರು) ಸಹ ಅಸುರರಾಗಿದ್ದರು ತಂದೆಯು ಬಂದು ಶ್ರೇಷ್ಠರನ್ನಾಗಿ ಮಾಡಿ ದೈವೀ ಸಹೋದರರನ್ನಾಗಿ ಮಾಡಿದ್ದಾರೆ. ಇಬ್ಬರೂ ಸಹೋದರರು ಏನಾದರು? ಅವಶ್ಯವಾಗಿ ಪಾಂಡವರ ವಿಜಯವಾಯಿತು, ಕೌರವರ ವಿನಾಶವಾಯಿತೆಂದು ತೋರಿಸುತ್ತಾರೆ. ಭಲೆ ಇಲ್ಲಿ ಕುಳಿತಿದ್ದರೂ ಸಹ ಕೇವಲ ಮಮ್ಮಾ-ಬಾಬಾ ಎಂದು ಹೇಳುತ್ತಿರುತ್ತಾರೆ ಆದರೆ ಅರಿತುಕೊಂಡೇ ಇಲ್ಲ. ತಂದೆಯ ಶ್ರೀಮತದಂತೆ ನಡೆಯುವುದಿಲ್ಲ. ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂಬುದನ್ನೇ ತಿಳಿದುಕೊಂಡೇ ಇಲ್ಲ, ಈ ನಿಶ್ಚಯವಿಲ್ಲ. ದೇಹಾಭಿಮಾನಿಗಳಾಗಿರುವ ಕಾರಣ ದೇಹದ ಮಿತ್ರಸಂಬಂಧಿಗಳು ಮುಂತಾದವರನ್ನು ನೆನಪು ಮಾಡುತ್ತಾರೆ. ಇಲ್ಲಂತೂ ದೇಹೀ ತಂದೆಯನ್ನು ನೆನಪು ಮಾಡಬೇಕಾಗಿದೆ ಅಂದಮೇಲೆ ಇದು ಹೊಸ ಮಾತಾಯಿತಲ್ಲವೆ. ಇದನ್ನು ಯಾವುದೇ ಮನುಷ್ಯರು ತಿಳಿಸಲು ಸಾಧ್ಯವಿಲ್ಲ. ಇಲ್ಲಿ ಮಾತಾಪಿತರ ಸಮ್ಮುಖದಲ್ಲಿ ಕುಳಿತಿದ್ದರೂ ಸಹ ಅರಿತುಕೊಂಡಿಲ್ಲ ಅಂದಮೇಲೆ ಇದು ಆಶ್ಚರ್ಯವಲ್ಲವೆ. ಜನ್ಮವೇ ಇಲ್ಲಾಯಿತು ಆದರೂ ಸಹ ಅರಿತುಕೊಂಡಿಲ್ಲ ಏಕೆಂದರೆ ನಮ್ಮ ತಂದೆಯು ನಿರಾಕಾರನಾಗಿದ್ದಾರೆ ಅವರನ್ನು ಯಥಾರ್ಥ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದಿಲ್ಲ, ಅವರ ಮತದಂತೆ ನಡೆಯದಿದ್ದರೆ ಅಂತಹವರು ಆಶ್ಚರ್ಯವಾಗಿ ಓಡಿಹೋಗುತ್ತಾರೆ. ಯಾರಿಂದ ಸ್ವರ್ಗದ 21 ಜನ್ಮಗಳ ಆಸ್ತಿಯು ಸಿಗುತ್ತದೆಯೋ ಅವರನ್ನೇ ಅರಿತುಕೊಳ್ಳುವುದಿಲ್ಲ ಆದ್ದರಿಂದ ಓಡಿಹೋಗುತ್ತಾರೆ. ಯಾರು ತಂದೆಯನ್ನು ಅರಿತುಕೊಳ್ಳುತ್ತಾರೆಯೋ ಅವರನ್ನು ಅದೃಷ್ಟವಂತರೆಂದು ಹೇಳಲಾಗುತ್ತದೆ. ದುಃಖದಿಂದ ಬಿಡುಗಡೆ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಪ್ರಪಂಚದಲ್ಲಿ ದುಃಖವಂತೂ ಬಹಳ ಇದೆಯಲ್ಲವೆ. ಇದಂತೂ ಭ್ರಷ್ಟಾಚಾರಿ ರಾಜ್ಯವಾಗಿದೆ. ಡ್ರಾಮಾನುಸಾರ 5000 ವರ್ಷಗಳ ನಂತರವೂ ಸಹ ಹೀಗೆಯೇ ಭ್ರಷ್ಟಾಚಾರಿ ಸೃಷ್ಟಿಯಾಗಿತ್ತು ಅನಂತರ ತಂದೆಯು ಬಂದು ಶ್ರೇಷ್ಠಾಚಾರಿ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ನೀವು ಮನುಷ್ಯರಿಂದ ದೇವತೆಗಳಾಗಲು ಬಂದಿದ್ದೀರಿ. ಇದು ಮನುಷ್ಯರ ಪ್ರಪಂಚವಾಗಿದೆ. ದೇವತೆಗಳ ಪ್ರಪಂಚವು ಸತ್ಯಯುಗದಲ್ಲಿರುತ್ತದೆ. ಇಲ್ಲಿ ಪತಿತ ಮನುಷ್ಯರಿದ್ದಾರೆ ಸತ್ಯಯುಗದಲ್ಲಿ ಪಾವನ ದೇವತೆಗಳಿರುತ್ತಾರೆ. ಈ ಮಾತು ಯಾರು ಬ್ರಾಹ್ಮಣರಾಗಿದ್ದೀರೋ ಅವರಿಗೆ ತಿಳಿಸಲಾಗುತ್ತದೆ. ಯಾರು ಬ್ರಾಹ್ಮಣರಾಗುತ್ತಾ ಹೋಗುತ್ತಾರೆಯೋ ಅವರಿಗೆ ತಿಳಿಸುತ್ತಾ ಹೋಗುತ್ತೇನೆ. ಎಲ್ಲರೂ ಬ್ರಾಹ್ಮಣರಾಗುವುದಿಲ್ಲ. ಯಾರು ಬ್ರಾಹ್ಮಣರಾಗುತ್ತಾರೆಯೋ ಅವರೇ ನಂತರ ದೇವತೆಗಳಾಗುತ್ತಾರೆ. ಬ್ರಾಹ್ಮಣರಾಗದೇ ಇದ್ದರೆ ದೇವತೆಗಳಾಗಲು ಸಾಧ್ಯವಿಲ್ಲ. ಮಮ್ಮಾ-ಬಾಬಾ ಎಂದು ಹೇಳಿದರೆ ಬ್ರಾಹ್ಮಣಕುಲದಲ್ಲಂತೂ ಬಂದುಬಿಟ್ಟರು ಆದರೆ ಎಲ್ಲವು ವಿದ್ಯೆಯ ಪುರುಷಾರ್ಥದ ಮೇಲೆ ಆಧಾರವಾಗಿದೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ. ಇಬ್ರಾಹಿಂ, ಬುದ್ಧ ಮುಂತಾದವರ್ಯಾರೂ ರಾಜಧಾನಿಯನ್ನು ಮಾಡುವುದಿಲ್ಲ. ಕ್ರಿಸ್ತನು ಒಂಟಿಯಾಗಿ ಬಂದರು, ಯಾರಲ್ಲಿಯೋ ಬಂದು ಕ್ರಿಶ್ಚಿಯನ್ ಧರ್ಮದ ಸ್ಥಾಪನೆ ಮಾಡಿದರು ನಂತರ ಕ್ರಿಶ್ಚಿಯನ್ ಧರ್ಮದ ಯಾವ ಆತ್ಮಗಳು ಮೇಲಿದ್ದಾರೋ ಅವರು ಬರುತ್ತಾ ಇರುತ್ತಾರೆ. ಈಗ ಕ್ರೈಸ್ತ ಧರ್ಮದ ಎಲ್ಲಾ ಆತ್ಮಗಳು ಇಲ್ಲಿಯೇ ಇದ್ದಾರೆ. ಈಗ ಅಂತ್ಯದಲ್ಲಿ ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ಎಲ್ಲರ ಮಾರ್ಗದರ್ಶಕನಾಗಿ ಎಲ್ಲರನ್ನು ದುಃಖದಿಂದ ಬಿಡುಗಡೆ ಮಾಡುತ್ತಾರೆ. ಇಡೀ ಮನುಷ್ಯ ಸೃಷ್ಟಿಯು ಮುಕ್ತಿಧಾಮ ಮತ್ತು ಮಾರ್ಗದರ್ಶಕ ತಂದೆಯೇ ಆಗಿದ್ದಾರೆ. ಎಲ್ಲಾ ಆತ್ಮಗಳನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಆತ್ಮವು ಪತಿತವಾಗುವ ಕಾರಣ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನಿರಾಕಾರಿ ಪ್ರಪಂಚವಂತೂ ಪಾವನವಾಗಿದೆಯಲ್ಲವೆ. ಈ ಸಾಕಾರಿ ಸೃಷ್ಟಿಯು ಪತಿತವಾಗಿದೆ ಅಂದಮೇಲೆ ಇವರು ನಿರಾಕಾರಿ ಲೋಕದಲ್ಲಿ ಹೋಗಲು ಇವರನ್ನು ಪಾವನರನ್ನಾಗಿ ಯಾರು ಮಾಡಬೇಕು? ಆದ್ದರಿಂದ ಹೇ ಪರಮಪಿತ ಪರಮಾತ್ಮನೇ ಬನ್ನಿ ಎಂದು ಕರೆಯುತ್ತಾರೆ. ಪರಮಾತ್ಮನು ಬಂದು ತಿಳಿಸುತ್ತಾರೆ - ಮಕ್ಕಳೇ, ನಾನು ಒಂದೇ ಬಾರಿ ಬರುತ್ತೇನೆ, ಯಾವಾಗ ಇಡೀ ಸೃಷ್ಟಿಯು ಭ್ರಷ್ಟಾಚಾರಿ ಆಗಿಬಿಡುತ್ತದೆ, ಒಬ್ಬರು ಇನ್ನೊಬ್ಬರನ್ನು ಸಾಯಿಸುವುದಕ್ಕೋಸ್ಕರ ಎಷ್ಟೊಂದು ಅಣ್ವಸ್ತ್ರಗಳು, ಗುಂಡು, ಸಿಡಿಮದ್ದು ಇತ್ಯಾದಿಗಳನ್ನು ತಯಾರಿಸುತ್ತಿರುತ್ತಾರೆ. ಮೊದಲನೆಯದಾಗಿ ಅಣುಬಾಂಬುಗಳನ್ನು ತಯಾರಿಸುತ್ತಿದ್ದಾರೆ, ಎರಡನೆಯದಾಗಿ ಪ್ರಾಕೃತಿಕ ಆಪತ್ತುಗಳು, ಚಂಡಮಾರುತಗಳು, ಭೂಕಂಪಗಳು ಮುಂತಾದವುಗಳಾಗುತ್ತವೆ. ವಿದ್ಯುತ್ ಒಂದೇ ಬಾರಿ ಎಲ್ಲವನ್ನೂ ಸುಟ್ಟುಹಾಕುತ್ತದೆ, ಅನೇಕರು ರೋಗಿಗಳು ಆಗಿಬಿಡುತ್ತಾರೆ ಏಕೆಂದರೆ ಭೂಮಿಗೆ ಗೊಬ್ಬರವಂತೂ ಬೇಕಲ್ಲವೆ. ಯಾವ ಕೊಳಕು ವಸ್ತುಗಳಿರುತ್ತದೆಯೋ ಅವುಗಳದೆ ಗೊಬ್ಬರವಾಗುತ್ತದೆಯಲ್ಲವೆ. ಇಡೀ ಸೃಷ್ಟಿಗೆ ಪುನಃ ಬಹಳ ಸುಂದರವಾದ ಭೂಮಿ ಫಲವಂತ ಆಗಲು ಗೊಬ್ಬರವಂತೂ ಬೇಕು. ಸತ್ಯಯುಗದಲ್ಲಿ ಕೇವಲ ಭಾರತವೇ ಇತ್ತು ಈಗ ಎಲ್ಲದರ ವಿನಾಶವಾಗಲಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಬಂದು ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇನೆ. ಎಲ್ಲರೂ ಸಮಾಪ್ತಿ ಆಗಿಬಿಡುತ್ತಾರೆ. ಬಾಕಿ ನೀವು ಸ್ವರ್ಗದಲ್ಲಿ ಹೋಗುತ್ತೀರಿ. ಸ್ವರ್ಗವನ್ನಂತೂ ಎಲ್ಲರೂ ನೆನಪು ಮಾಡುತ್ತಾರಲ್ಲವೆ ಆದರೆ ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆಯೆಂದು ಯಾರಿಗೂ ಗೊತ್ತಿಲ್ಲ. ಯಾರೇ ಸಾವನ್ನಪ್ಪಿದರೆಂದರೂ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಕಲಿಯುಗದಲ್ಲಿ ಯಾರೇ ಶರೀರ ಬಿಟ್ಟರೆ ಪುನರ್ಜನ್ಮವನ್ನೂ ಕಲಿಯುಗದಲ್ಲಿಯೇ ಪಡೆಯುತ್ತಾರಲ್ಲವೆ. ಮನುಷ್ಯರಲ್ಲಿ ಇಷ್ಟಾದರೂ ಬುದ್ಧಿಯಿಲ್ಲ. ಡಾಕ್ಟರ್ ಆಫ್ ಫಿಲಾಸಫಿ ಮುಂತಾದ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಮನುಷ್ಯರು ಮಂದಿರದಲ್ಲಿರುವ ದೇವತೆಗಳಾಗಿದ್ದರು. ಸತ್ಯಯುಗವು ಕ್ಷೀರಸಾಗರವಾಗಿದೆ, ಕಲಿಯುಗವು ವಿಷಯಸಾಗರವಾಗಿದೆ. ಈ ಎಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ತಂದೆಯು ಮನುಷ್ಯರಿಗೆ ಓದಿಸುತ್ತಾರೆಯೇ ಹೊರತು ಪ್ರಾಣಿಗಳಿಗಲ್ಲ.

ತಂದೆಯು ತಿಳಿಸುತ್ತಾರೆ - ಇದು ಮಾಡಲ್ಪಟ್ಟಿರುವ ನಾಟಕವಾಗಿದೆ. ಎಂತಹ ಸಾಹುಕಾರ ಮನುಷ್ಯರೋ ಅಂತಹ ಉಪಕರಣಗಳೇ ಇರುವುದು. ಬಡವರ ಬಳಿ ಕಲ್ಲು ಗೊಬ್ಬರವಿರುತ್ತದೆ, ಸಾಹುಕಾರರ ಬಳಿಯಂತೂ ಬಹಳ ವೈಭವವಿರುತ್ತದೆ. ನೀವು ಸತ್ಯಯುಗದಲ್ಲಿ ಸಾಹುಕಾರರು ಆಗುತ್ತೀರೆಂದರೆ ನಿಮ್ಮ ವಜ್ರರತ್ನಗಳ ಮಹಲುಗಳಿರುತ್ತವೆ ಅಲ್ಲಿ ಯಾವುದೇ ಕೊಳಕಿರುವುದಿಲ್ಲ, ದುರ್ನಾಥವಿರುವುದಿಲ್ಲ. ಇಲ್ಲಂತೂ ದುರ್ನಾಥವಿರುವ ಕಾರಣ ಅಗರಬತ್ತಿ ಇತ್ಯಾದಿಗಳನ್ನು ಹಚ್ಚಿಡಲಾಗುತ್ತದೆ. ಅಲ್ಲಂತೂ ಹೂಗಳಲ್ಲಿ ಸ್ವಾಭಾವಿಕ ಪರಿಮಳವಿರುತ್ತದೆ. ಅಗರಬತ್ತಿಯನ್ನು ಇಡುವ ಅವಶ್ಯಕತೆಯೇ ಇರುವುದಿಲ್ಲ ಅದಕ್ಕೆ ಸ್ವರ್ಗವೆಂದು ಹೇಳಲಾಗುವುದು. ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುವುದಕ್ಕೋಸ್ಕರ ಓದಿಸುತ್ತಾರೆ ನೋಡಿ, ಎಷ್ಟು ಸಾಧಾರಣರಾಗಿದ್ದಾರೆ. ಇಂತಹ ತಂದೆಯನ್ನು ನೆನಪು ಮಾಡುವುದನ್ನೇ ಮರೆತುಬಿಡುತ್ತಾರೆ. ಪೂರ್ಣ ನಿಶ್ಚಯವಿಲ್ಲದಿರುವ ಕಾರಣ ಮರೆಯುತ್ತಾರೆ. ಯಾರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆಯೋ ಅಂತಹ ಮಾತಾಪಿತರನ್ನು ಮರೆತುಹೋಗುವುದು ಎಂತಹ ದುರಾದೃಷ್ಟವಾಗಿದೆ. ತಂದೆಯು ಬಂದು ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆ. ಇಂತಹ ಮಾತಾಪಿತರ ಮತದಂತೆ ನಡೆಯದಿದ್ದರೆ ಅಂತಹವರನ್ನು ದುರಾದೃಷ್ಠರೆಂದೇ ಹೇಳಲಾಗುತ್ತದೆ. ನಂಬರ್ವಾರಂತೂ ಇರುತ್ತಾರಲ್ಲವೆ. ಎಲ್ಲಿ ವಿದ್ಯೆಯಿಂದ ವಿಶ್ವದ ಮಾಲೀಕರಾಗುವುದು, ನೌಕರ-ಚಾಕರರಾಗುವುದು ಎಲ್ಲಿ? ನಾವು ಎಲ್ಲಿಯವರೆಗೆ ಓದುತ್ತೇವೆಂದು ನೀವು ತಿಳಿದುಕೊಳ್ಳಬಹುದು. ಅಲ್ಲಿ ಕೇವಲ ಧರ್ಮಪಿತರು ಧರ್ಮಸ್ಥಾಪನೆ ಮಾಡಲು ಬರುತ್ತಾರೆ ಆದರೆ ಇಲ್ಲಿ ನಮಗೆ ಮಾತಾಪಿತರು ಬಂದಿದ್ದಾರೆ ಏಕೆಂದರೆ ಇದು ಪ್ರವೃತ್ತಿ ಮಾರ್ಗವಾಗಿದೆಯಲ್ಲವೆ. ಪವಿತ್ರ ಪ್ರವೃತ್ತಿ ಮಾರ್ಗವಿತ್ತು ಈಗ ಅಪವಿತ್ರ ಪ್ರವೃತ್ತಿ ಮಾರ್ಗವಾಗಿದೆ. ಲಕ್ಷ್ಮಿ-ನಾರಾಯಣರು ಪವಿತ್ರರಾಗಿದ್ದರೋ ಆಗ ಅವರ ಸಂತಾನರೂ ಪವಿತ್ರರಾಗಿದ್ದರು. ನಾವು ಏನಾಗಬಹುದೆಂದು ನಿಮಗೆ ಗೊತ್ತಿದೆ. ಮಾತಾಪಿತರು ಎಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತಾರೆಂದಮೇಲೆ ಅನುಕರಣೆ ಮಾಡಬೇಕಲ್ಲವೆ. ಭಾರತವನ್ನೆ ಮಾತಾಪಿತರ ಜನ್ಮಸ್ಥಾನವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರರಾಗಿರುತ್ತಾರೆ, ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಎಷ್ಟು ಚೆನ್ನಾಗಿ ತಿಳಿಸಲಾಗುತ್ತದೆ ಆದರೆ ತಂದೆಯನ್ನು ನೆನಪು ಮಾಡದಿದ್ದರೆ ಬುದ್ಧಿಯ ಬೀಗವು ಬಂಧ್ ಆಗಿಬಿಡುತ್ತದೆ. ಕೇಳುತ್ತಾ-ಕೇಳುತ್ತಾ ವಿದ್ಯೆಯನ್ನು ಬಿಟ್ಟುಬಿಡುತ್ತಾರೆಂದರೆ ಬೀಗವು ಸಂಪೂರ್ಣ ಬಂಧ್ ಆಗಿಬಿಡುತ್ತದೆ. ಶಾಲೆಯಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ. ಕಲ್ಲು ಬುದ್ಧಿಯವರು ಹಾಗೂ ಪಾರಸ ಬುದ್ಧಿಯವರೆಂದು ಹೇಳಲಾಗುತ್ತದೆ. ಕಲ್ಲು ಬುದ್ಧಿಯವರು ಏನನ್ನೂ ಅರಿತುಕೊಳ್ಳುವುದಿಲ್ಲ, ಇಡೀ ದಿನದಲ್ಲಿ 5 ನಿಮಿಷಗಳೂ ತಂದೆಯನ್ನು ನೆನಪು ಮಾಡುವುದಿಲ್ಲ. ಐದು ನಿಮಿಷಗಳು ನೆನಪು ಮಾಡಿದರೆ ಅಷ್ಟೇ ಬೀಗವು ತೆರೆಯುತ್ತದೆ. ಹೆಚ್ಚಿಗೆ ನೆನಪು ಮಾಡುತ್ತೀರೆಂದರೆ ಬುದ್ಧಿಯ ಬೀಗವೂ ಸಹ ಅಷ್ಟೇ ಚೆನ್ನಾಗಿ ತೆರೆಯುತ್ತದೆ. ಎಲ್ಲದರ ಆಧಾರವು ನೆನಪಿನ ಮೇಲಿದೆ. ಕೆಲಕೆಲವು ಮಕ್ಕಳು ತಂದೆಗೆ ಪತ್ರ ಬರೆಯುತ್ತಾರೆ - ಪ್ರಿಯ ಬಾಬಾ ಅಥವಾ ಪ್ರಿಯ ದಾದಾ ಎಂದು. ಈಗ ಕೇವಲ ಪ್ರಿಯದಾದಾ ಎಂದು ಅಂಚೆ ಪೆಟ್ಟಿಗೆಯಲ್ಲಿ ಹಾಕಿದರೆ ಪತ್ರವು ತಲುಪುತ್ತದೆಯೇ? ಹೆಸರಂತೂ ಬೇಕಲ್ಲವೆ. ದಾದಾ-ದಾದಿಯರಂತೂ ಪ್ರಪಂಚದಲ್ಲಿ ಅನೇಕರಿದ್ದಾರೆ. ಒಳ್ಳೆಯದು!

ಈಗ ದೀಪಾವಳಿಯು ಬರುತ್ತಿದೆ. ದೀಪಾವಳಿಯಲ್ಲಿ ಹೊಸ ಖಾತೆಯನ್ನಿಡುತ್ತಾರೆ. ನೀವು ಬ್ರಾಹ್ಮಣರಾಗಿದ್ದೀರಿ, ಆ ಬ್ರಾಹ್ಮಣರು ವ್ಯಾಪಾರಿಗಳೊಂದಿಗೆ ಹೊಸ ಖಾತೆಯನ್ನಿಡಿಸುತ್ತಾರೆ. ಈಗ ನೀವೂ ಸಹ ಹೊಸ ಖಾತೆಯನ್ನು ಇಡಬೇಕಾಗಿದೆ ಆದರೆ ಇದು ಹೊಸ ಪ್ರಪಂಚಕ್ಕೋಸ್ಕರವಾಗಿದೆ. ಭಕ್ತಿಮಾರ್ಗದ ಖಾತೆಯು ಬಹಳ ನಷ್ಟದ್ದಾಗಿದೆ. ನೀವು ಬೇಹದ್ದಿನ ಆಸ್ತಿಯನ್ನು ಪಡೆಯುತ್ತೀರಿ, ಬೇಹದ್ದಿನ ಸುಖ-ಶಾಂತಿಯನ್ನು ಪಡೆಯುತ್ತೀರಿ. ಈ ಬೇಹದ್ದಿನ ಖಾತೆಯನ್ನು ಬೇಹದ್ದಿನ ತಂದೆಯು ಕುಳಿತು ತಿಳಿಸುತ್ತಾರೆ ಮತ್ತು ಬೇಹದ್ದಿನ ಸುಖವನ್ನು ಪಡೆಯುವ ಮಕ್ಕಳು ಇದೆಲ್ಲವನ್ನೂ ತಿಳಿದುಕೊಳ್ಳುತ್ತಾರೆ. ತಂದೆಯ ಬಳಿ ಕೋಟಿಯಲ್ಲಿ ಕೆಲವರೇ ಬರುತ್ತಾರೆ. ನಡೆಯುತ್ತಾ - ನಡೆಯುತ್ತಾ ಸಂಪಾದನೆಯಲ್ಲಿ ನಷ್ಟವಾಗುತ್ತದೆ ಎಂದರೆ ಏನು ಜಮಾ ಮಾಡಿಕೊಂಡಿದ್ದೀರೋ ಅದೂ ಸಹ ಇಲ್ಲದಂತೆ ಆಗಿಬಿಡುತ್ತದೆ. ನಿಮ್ಮ ಖಾತೆಯು ಯಾವಾಗ ನೀವು ದಾನ ಮಾಡುತ್ತೀರೋ ಆಗ ವೃದ್ಧಿಯಾಗುತ್ತದೆ. ದಾನ ಮಾಡದಿದ್ದರೆ ಸಂಪಾದನೆಯು ವೃದ್ಧಿ ಹೊಂದುವುದಿಲ್ಲ. ಸಂಪಾದನೆಯ ವೃದ್ಧಿಯಾಗಲೆಂದು ನೀವು ಪುರುಷಾರ್ಥ ಮಾಡುತ್ತೀರಿ, ಯಾವಾಗ ನೀವು ಅನ್ಯರಿಗೆ ದಾನ ಮಾಡುತ್ತೀರಿ, ಲಾಭವನ್ನು ಪಡೆಯುತ್ತೀರಿ ಆಗಲೇ ವೃದ್ಧಿಯಾಗುವುದು. ಯಾರಿಗಾದರೂ ತಂದೆಯ ಪರಿಚಯವನ್ನು ಕೊಡುತ್ತೀರೆಂದರೆ ಅದು ಜಮಾ ಆಗಿದೆ ಎಂದರ್ಥ. ಪರಿಚಯವನ್ನು ಕೊಡುವುದಿಲ್ಲವೆಂದರೆ ಜಮಾ ಆಗುವುದೂ ಇಲ್ಲ. ನಿಮ್ಮ ಸಂಪಾದನೆಯು ಬಹಳ ಬಹಳ ದೊಡ್ಡದಾಗಿದೆ. ಮುರುಳಿಯಿಂದ ನಿಮ್ಮ ಸತ್ಯ ಸಂಪಾದನೆಯಾಗುತ್ತದೆ. ಕೇವಲ ಮುರುಳಿಯು ಯಾರದೆಂದು ಗೊತ್ತಾದರೆ ಸಾಕು. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ - ಯಾರು ಕಪ್ಪಾಗಿದ್ದಾರೆಯೋ (ಪತಿತ) ಅವರೇ ಸುಂದರರಾಗುವುದಕ್ಕೋಸ್ಕರ ಮುರುಳಿಯನ್ನು ಕೇಳಬೇಕು. ಮುರುಳಿಯಲ್ಲಿ ಈಶ್ವರೀಯ ಚಮತ್ಕಾರವಿದೆ. ಇದನ್ನೇ ಖುದಾಯಿ ಜಾದು ಎಂದು ಹೇಳಲಾಗುತ್ತದೆ ಅಂದಮೇಲೆ ಈ ಮುರುಳಿಯಲ್ಲಿ ಈಶ್ವರೀಯ ಚಮತ್ಕಾರವಿದೆ. ಈ ಜ್ಞಾನವೂ ಸಹ ನಿಮಗೆ ಈಗಿದೆ. ದೇವತೆಗಳಲ್ಲಿ ಈ ಜ್ಞಾನವಿರಲಿಲ್ಲ. ಯಾವಾಗ ಅವರಲ್ಲಿಯೇ ಜ್ಞಾನವಿರಲಿಲ್ಲವೆಂದರೆ ಅಂತ್ಯದಲ್ಲಿ ಜ್ಞಾನವಿರಲು ಹೇಗೆ ಸಾಧ್ಯ? ಶಾಸ್ತ್ರ ಮುಂತಾದುವುಗಳು ನಂತರದಲ್ಲಿ ರಚನೆಯಾಗುತ್ತದೆಯೋ ಅವೆಲ್ಲವೂ ಸಮಾಪ್ತಿಯಾಗುತ್ತವೆ. ನಿಮ್ಮ ಈ ಸತ್ಯಗೀತೆಯಂತೂ ಬಹಳ ಕೆಲವಷ್ಟೇ ಇದೆ. ಪ್ರಪಂಚದಲ್ಲಂತೂ ಆ ಗೀತೆಗಳು ಅಂದಾಜು ಲಕ್ಷಾಂತರದಲ್ಲಿ ರಚಿಸಲ್ಪಟ್ಟಿದೆ. ವಾಸ್ತವದಲ್ಲಿ ಈ ಗೀತೆಯೇ ಸತ್ಯವಾಗಿದೆ. ಈ ಚಿತ್ರಗಳಿಂದ ಎಷ್ಟು ಅರ್ಥ ಮಾಡಿಕೊಳ್ಳುತ್ತಾರೆಯೋ ಅಷ್ಟು ಆ ಗೀತೆಯಿಂದ ಅರಿತುಕೊಳ್ಳಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆಯನ್ನು ಚೆನ್ನಾಗಿ ಓದಿ ಸ್ವಯಂನ್ನು ಅದೃಷ್ಟವಂತರನ್ನಾಗಿ ಮಾಡಿಕೊಳ್ಳಬೇಕಾಗಿದೆ. ದೇವತೆಗಳಾಗುವುದಕ್ಕೋಸ್ಕರ ಪಕ್ಕಾ ಬ್ರಾಹ್ಮಣರಾಗಬೇಕಾಗಿದೆ.

2. ದೇಹಿ ತಂದೆಯನ್ನು ನೆನಪು ಮಾಡಲು ದೇಹಿ ಅಭಿಮಾನಿಗಳಾಗಬೇಕಾಗಿದೆ. ದೇಹವನ್ನೂ ಸಹ ಮರೆಯುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ಸದಾ ತಮ್ಮನ್ನು ಸಾರಥಿ ಮತ್ತು ಸಾಕ್ಷಿ ಎಂದು ತಿಳಿದು ದೇಹ-ಭಾನದಿಂದ ನ್ಯಾರಾ ಆಗಿರುವಂತಹ ಯೋಗಯುಕ್ತ ಭವ

ಯೋಗಯುಕ್ತರಾಗಿರಲು ಸಹಜ ವಿಧಿಯಾಗಿದೆ- ಸದಾ ತಮ್ಮನ್ನು ಸಾರಥಿ ಮತ್ತು ಸಾಕ್ಷಿ ಎಂದು ತಿಳಿದು ನಡೆಯಿರಿ. ಈ ರಥವನ್ನು ನಡೆಸುವಂತಹವನು ನಾನು ಆತ್ಮ ಸಾರಥಿಯಾಗಿದ್ದೇನೆ, ಈ ಸ್ಮೃತಿ ಸ್ವತಃ ಈ ರಥ ಅಥವಾ ದೇಹದಿಂದ ಅಥವಾ ಯಾವುದೇ ಪ್ರಕಾರದ ದೇಹ-ಭಾನದಿಂದ ನ್ಯಾರಾ(ಸಾಕ್ಷಿ) ಮಾಡಿಬಿಡುವುದು. ದೇಹ-ಭಾನ ಇಲ್ಲದೇ ಹೋದರೆ ಸಹಜವಾಗಿ ಯೋಗಯುಕ್ತ ಆಗಿಬಿಡುವುದು ಮತ್ತು ಕರ್ಮ ಸಹ ಯೋಗಯುಕ್ತವಾಗಿರುವುದು. ಸ್ವಯಂ ಅನ್ನು ಸಾರಥಿ ಎಂದು ತಿಳಿಯುವುದರಿಂದ ಸರ್ವ ಕರ್ಮೇಂದ್ರಿಯ ತನ್ನ ನಿಯಂತ್ರಣದಲ್ಲಿ ಬರುವುದು. ಅವರು ಯಾವುದೇ ಕರ್ಮೇಂದ್ರಿಯಕ್ಕೆ ವಶ ಆಗಲು ಸಾಧ್ಯವಿಲ್ಲ.

ಸ್ಲೋಗನ್:
ವಿಜಯಿ ಆತ್ಮ ಆಗಬೇಕಾದರೆ ಗಮನ (ಅಟೆನ್ಷನ್) ಮತ್ತು ಅಭ್ಯಾಸ-ಇದನ್ನು ಮೂಲ ಸಂಸ್ಕಾರ ಮಾಡಿಕೊಂಡುಬಿಡಿ.