12.01.21         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ವಿದ್ಯೆ ಹಾಗೂ ದೈವೀ ಚಲನೆಯ ರಿಜಿಸ್ಟರ್ನ್ನಿಡಿ, ಪ್ರತಿನಿತ್ಯವೂ ಪರಿಶೀಲನೆ ಮಾಡಿರಿ - ನಮ್ಮಿಂದ ಯಾವುದೇ ತಪ್ಪುಗಳಂತು ಆಗಲಿಲ್ಲವೆ"

ಪ್ರಶ್ನೆ:
ತಾವು ಮಕ್ಕಳು ಯಾವ ಪುರುಷಾರ್ಥದಿಂದ ತಿಲಕವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು?

ಉತ್ತರ:
1. ಸದಾ ಆಜ್ಞಾಕಾರಿಯಾಗಿರುವ ಪುರುಷಾರ್ಥವನ್ನು ಮಾಡಿರಿ. ಸಂಗಮದಲ್ಲಿ ಆದೇಶ ಪಾಲಕನೆಂಬ ತಿಲಕವನ್ನಿಟ್ಟುಕೊಳ್ಳುತ್ತೀರೆಂದರೆ ರಾಜ್ಯಭಾಗ್ಯದ ತಿಲಕವು ಸಿಕ್ಕಿ ಬಿಡುತ್ತದೆ. ಅವಿದೇಯ ಅರ್ಥಾತ್ ಆಜ್ಞೆಯನ್ನು ಪರಿಪಾಲನೆ ಮಾಡದಿರುವವರು ರಾಜ್ಯಭಾಗ್ಯದ ತಿಲಕವನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ.
2. ಯವುದೇ ಕಾಯಿಲೆಯನ್ನೂ ಸರ್ಜನ್ನಿಂದ ಮುಚ್ಚಿಡಬಾರದು. ಮುಚ್ಚಿಡುತ್ತೀರೆಂದರೆ ಪದವಿಯು ಕಡಿಮೆಯಾಗಿ ಬಿಡುತ್ತದೆ. ತಂದೆಯಂತೆಯೇ ಪ್ರೀತಿಯ ಸಾಗರನಾಗುತ್ತೀರೆಂದರೆ ರಾಜ್ಯಭಾಗ್ಯದ ತಿಲಕವು ಸಿಕ್ಕಿ ಬಿಡುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಿದ್ದಾರೆ - ವಿದ್ಯೆ ಎಂದರೆ ತಿಳುವಳಿಕೆಯಾಗಿದೆ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ಈ ವಿದ್ಯೆಯು ಬಹಳ ಸಹಜ ಮತ್ತು ಬಹಳ ಶ್ರೇಷ್ಠವಾದುದಾಗಿದೆ ಮತ್ತು ಬಹಳ ಶ್ರೇಷ್ಠವಾದ ಪದವಿಯನ್ನು ಕೊಡುವಂತಹದ್ದಾಗಿದೆ. ಈ ವಿದ್ಯೆಯನ್ನು ನಾವು ವಿಶ್ವದ ಮಾಲೀಕರಾಗುವುದಕ್ಕಾಗಿ ಓದುತ್ತಿದ್ದೇವೆಂದು ಕೇವಲ ನೀವು ಮಕ್ಕಳಷ್ಟೇ ತಿಳಿಯುತ್ತೀರಿ. ಅಂದಮೇಲೆ ಇದು ಎಷ್ಟೊಂದು ಶ್ರೇಷ್ಠವಾದ ವಿದ್ಯೆಯಾಗಿದೆ! ಎಂದು ಓದುವವರಿಗೆ ಬಹಳ ಖುಷಿಯಿರಬೇಕಾಗಿದೆ. ಇದು ಅದೇ ಗೀತಾ ಎಪಿಸೋಡ್ ಸಹ ಆಗಿದೆ, ಸಂಗಮಯುಗವೂ ಆಗಿದೆ. ನೀವು ಮಕ್ಕಳೀಗ ಜಾಗೃತವಾಗಿದ್ದೀರಿ, ಉಳಿದೆಲ್ಲರೂ ಮಲಗಿ ಬಿಟ್ಟಿದ್ದಾರೆ. ಗಾಯನವೂ ಇದೆ - ಮಾಯೆಯ ನಿದ್ರೆಯಲ್ಲಿ ಮಲಗಿದ್ದರು. ಬಾಬಾರವರು ಬಂದು ನಿಮ್ಮ ಜಾಗೃತಗೊಳಿಸಿದ್ದಾರೆ. ಕೇವಲ ಒಂದು ಮಾತಿನ ಬಗ್ಗೆ ತಿಳಿಸುತ್ತಾರೆ - ಮಧುರ ಮಕ್ಕಳೇ, ನೆನಪಿನ ಯಾತ್ರೆಯ ಬಲದಿಂದ ನೀವು ಇಡೀ ವಿಶ್ವದ ಮೇಲೆ ರಾಜ್ಯಾಡಳಿತವನ್ನು ಮಾಡಿರಿ. ಹೇಗೆಂದರೆ ಕಲ್ಪದ ಮೊದಲು ಮಾಡಿದ್ದಿರಿ - ಈ ಸ್ಮೃತಿಯನ್ನು ಬಾಬಾರವರು ತರಿಸುತ್ತಾರೆ. ಮಕ್ಕಳೇ ತಿಳಿಯುತ್ತಾರೆ - ಈ ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ ಮತ್ತು ಆನಂತರ ದೈವೀ ಗುಣವನ್ನೂ ಧಾರಣೆ ಮಾಡಿದ್ದೇವೆ ಎಂಬುದು ನಮಗೆ ಸ್ಮೃತಿಗೆ ಬಂದಿದೆ. ಯೋಗದ ಪ್ರತಿಯೇ ಸಂಪೂರ್ಣವಾಗಿ ಗಮನ ಕೊಡಬೇಕಾಗಿದೆ. ಈ ಯೋಗಬಲದಿಂದ ನೀವು ಮಕ್ಕಳಲ್ಲಿ ಸ್ವತಹವಾಗಿಯೇ ದೈವೀ ಗುಣಗಳೂ ಸಹ ಬಂದು ಬಿಡುತ್ತವೆ. ಅವಶ್ಯವಾಗಿ ಈ ಪರೀಕ್ಷೆಯೇ ಮನುಷ್ಯರಿಂದ ದೇವತೆಯನ್ನಾಗಿ ಮಾಡುವಂತದ್ದಾಗಿದೆ. ನೀವು ಯೋಗಬಲದಿಂದ, ಮನುಷ್ಯರಿಂದ ದೇವತೆಯಾಗಲು ಇಲ್ಲಿಗೆ ಬಂದಿದ್ದೀರಿ ಮತ್ತು ಇದನ್ನೂ ತಿಳಿದುಕೊಳ್ಳುತ್ತೀರಿ - ನಮ್ಮ ಯೋಗಬಲದಿಂದ ಇಡೀ ವಿಶ್ವವು ಪವಿತ್ರವಾಗಬೇಕಾಗಿದೆ. ಪವಿತ್ರವಾಗಿತ್ತು, ಈಗ ಇದು ಅಪವಿತ್ರವಾಗಿದೆ. ಇಡೀ ಚಕ್ರದ ರಹಸ್ಯವನ್ನು ನೀವು ಮಕ್ಕಳು ತಿಳಿದಿದ್ದೀರಿ ಮತ್ತು ಹೃದಯದಲ್ಲಿಯೂ ಇದೆ. ಭಲೆ ಇಲ್ಲಿ ಯಾರೇ ಹೊಸಬರಿದ್ದರೂ ಸಹ, ಈ ಮಾತುಗಳನ್ನು ತಿಳಿದುಕೊಳ್ಳಲು ಸಹಜವಾಗಿದೆ - ನೀವು ದೇವತೆಗಳು ಪೂಜ್ಯರಾಗಿದ್ದಿರಿ, ನಂತರ ಪೂಜಾರಿ ತಮೋಪ್ರಧಾನರಾದಿರಿ, ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ಸ್ಪಷ್ಟವಾಗಿ ತಿಳಿಸುತ್ತಾರೆ - ಅದು ಭಕ್ತಿಮಾರ್ಗವಾಗಿದೆ, ಇದು ಜ್ಞಾನ ಮಾರ್ಗವಾಗಿದೆ. ಭಕ್ತಿಯು ಹಿಂದೆ ಹೊರಟು ಹೋಯಿತು. ಹಿಂದಿನ ಮಾತುಗಳನ್ನು ಚಿತ್ತದಲ್ಲಿಯೂ ಇಟ್ಟುಕೊಳ್ಳಬಾರದು. ಅದಂತು ಬೀಳಿಸುವ ಮಾತಾಗಿದೆ. ತಂದೆಯೀಗ ಏರುವಂತಹ ಮಾತುಗಳನ್ನು ತಿಳಿಸುತ್ತಿದ್ದಾರೆ. ಮಕ್ಕಳೂ ಸಹ ತಿಳಿಯುತ್ತಾರೆ - ನಾವು ಖಂಡಿತವಾಗಿಯೂ ದೈವೀ ಗುಣಗಳ ಧಾರಣೆಯನ್ನು ಮಾಡಬೇಕಾಗಿದೆ. ಪ್ರತಿನಿತ್ಯವೂ ಚಾರ್ಟ್ನ್ನಿಡಬೇಕಾಗಿದೆ - ನಾವು ನೆನಪಿನಲ್ಲಿ ಎಷ್ಟು ಸಮಯ ಇರುತ್ತೇವೆ? ನಮ್ಮಿಂದ ಯಾವ-ಯಾವ ತಪ್ಪುಗಳಾದವು? ತಪ್ಪಾದರೆ ಬಹಳ ಹೊಡೆತವೂ ಬೀಳುತ್ತದೆ, ಆ ವಿದ್ಯೆಯಲ್ಲಿಯೂ ಸಹ ಚಲನೆಯನ್ನು ನೋಡಲಾಗುತ್ತದೆ, ಇದರಲ್ಲಿಯೂ ಚಲನೆಯನ್ನು ನೋಡಲಾಗುತ್ತದೆ. ತಂದೆಯಂತು ನಿಮ್ಮ ಕಲ್ಯಾಣಕ್ಕಾಗಿಯೇ ಹೇಳುತ್ತಿದ್ದಾರೆ. ಅದರಲ್ಲಿಯೀ ರಿಜಿಸ್ಟರ್ನ್ನಿಡುತ್ತಾರೆ - ಓದುವುದರಲ್ಲಿ ಹಾಗೂ ಚಲನೆಯ ರಿಜಿಸ್ಟರ್ನ್ನು ಇಡುತ್ತಾರೆ. ಮಕ್ಕಳು ಇಲ್ಲಿಯೂ ಸಹ ದೇವತಾ ಚಲನೆಯನ್ನು ಮಾಡಿಕೊಳ್ಳಬೇಕಾಗಿದೆ. ತಮ್ಮಿಂದ ತಪ್ಪುಗಳಾಗಂತೆ ಸಂಭಾಲನೆ ಮಾಡಬೇಕಾಗಿದೆ. ನನ್ನಿಂತ ಯಾವುದೇ ತಪ್ಪಂತು ಆಗಲಿಲ್ಲವೇ? ಇದಕ್ಕಾಗಿಯೇ ಕಛೇರಿಯನ್ನೂ ಮಾಡಬೇಕಾಗಿದೆ. ಮತ್ತೆಲ್ಲಿಯೋ ಶಾಲೆ ಇನ್ನೆಲ್ಲಿಯೋ ಕಛೇರಿಯಾಗುವುದಿಲ್ಲ, ಇದನ್ನು ಹೃದಯದಿಂದ ಕೇಳಿಕೊಳ್ಳಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಮಾಯೆಯ ಕಾರಣದಿಂದ ಒಂದಲ್ಲ ಒಂದು ಉಲ್ಲಂಘನೆಯಾಗುತ್ತಿರುತ್ತದೆ, ಪ್ರಾರಂಭದಲ್ಲಿಯೂ ಕಛೇರಿಯಾಗುತ್ತಿತ್ತು. ಮಕ್ಕಳು ಸತ್ಯವನ್ನು ಹೇಳುತ್ತಿದ್ದರು. ತಂದೆಯು ತಿಳಿಸುತ್ತಿರುತ್ತಾರೆ - ಒಂದುವೇಳೆ ಸತ್ಯವನ್ನು ತಿಳಿಸಲಿಲ್ಲವೆಂದರೆ ತಪ್ಪುಗಳ ವೃದ್ಧಿಯಾಗುತ್ತಿರುತ್ತವೆ. ಉಲ್ಟಾ ಮತ್ತು ತಪ್ಪುಗಳ ದಂಡವನ್ನು ಸಿಗುತ್ತದೆ. ತಪ್ಪುಗಳನ್ನು ಹೇಳದಿರುವುದರಿಂದ ಅವಿಧೇಯನೆಂಬ ತಿಲಕವನ್ನಿಟ್ಟುಕೊಳ್ಳುತ್ತೀರಿ. ನಂತರ ರಾಜ್ಯಭಾಗ್ಯದ ತಿಲಕವು ಸಿಗಲು ಸಾಧ್ಯವಿಲ್ಲ. ಆಜ್ಞೆಯನ್ನು ಪಾಲಿಸಲಿಲ್ಲ, ಅವಿಧೇಯನಾಗುತ್ತಾರೆಂದರೆ ರಾಜ್ಯಭಾಗ್ಯದ ತಿಲಕವು ಸಿಗಲು ಸಾಧ್ಯವಿಲ್ಲ. ಸರ್ಜನ್ ಭಿನ್ನ-ಭಿನ್ನ ಪ್ರಕಾರದಿಂದ ತಿಳಿಸುತ್ತಿರುತ್ತಾರೆ. ಒಂದುವೇಳೆ ಸರ್ಜನ್ನಿಂದಲೇ ಕಾಯಿಲೆಯನ್ನು ಮುಚ್ಚಿಡುತ್ತೀರೆಂದರೆ ಪದವಿಯೂ ಕಡಿಮೆಯಾಗಿ ಬಿಡುತ್ತದೆ. ಸರ್ಜನ್ಗೆ ತಿಳಿಸುವುದರಿಂದ ಯಾವುದೇ ಹೊಡೆತಗಳೂ ಬೀಳುವುದಿಲ್ಲ ಅಲ್ಲವೆ. ತಂದೆಯು ಕೇವಲ ಎಚ್ಚರಿಕೆ ಎಂದು ಹೇಳುತ್ತಾರೆ. ನಂತರವೂ ಒಂದುವೇಳೆ ಅಂತಹ ತಪ್ಪುಗಳನ್ನು ಮಾಡುತ್ತೀರೆಂದರೆ ನಷ್ಟವನ್ನನುಭವಿಸುತ್ತೀರಿ. ಪದವಿಯು ಬಹಳ ಕಡಿಮೆಯಾಗಿ ಬಿಡುತ್ತದೆ. ಅಲ್ಲಂತು ಸ್ವಾಭಾವಿಕವಾಗಿಯೇ ದೈವೀ ಚಲನೆಯಿರುತ್ತದೆ, ಆದರೆ ಇಲ್ಲಿ ಪುರುಷಾರ್ಥವನ್ನು ಮಾಡಬೇಕಾಗಿದೆ. ಗಳಿಗೆ-ಗಳಿಗೆಯೂ ಫೇಲ್ ಆಗಬಾರದು. ಅದಕ್ಕಾಗಿ ತಂದೆಯು ಹೇಳುತ್ತಾರೆ - ಮಕ್ಕಳೇ, ಜಾಸ್ತಿ ತಪ್ಪುಗಳನ್ನು ಮಾಡಬಾರದು. ತಂದೆಯು ಬಹಳ ಪ್ರೀತಿಯ ಸಾಗರ ಆಗಿದ್ದಾರೆ, ಅದೇ ರೀತಿ ಮಕ್ಕಳೂ ಸಹ ಆಗಬೇಕಾಗಿದೆ. ತಂದೆಯಂತೆ ಮಕ್ಕಳು. ರಾಜ-ರಾಣಿಯಂತೆ ಪ್ರಜೆಗಳು. ಬಾಬಾರವಂತು ರಾಜಾ ಆಗುವುದಿಲ್ಲ, ನೀವು ತಿಳಿದುಕೊಳ್ಳುತ್ತೀರಿ - ಬಾಬಾರವರು ನಮ್ಮನ್ನು ತನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ. ತಂದೆಯ ಮಹಿಮೆಯನ್ನೇನು ಮಾಡುತ್ತಾರೆ, ಅದು ನಿಮ್ಮದೂ ಆಗಬೇಕಾಗಿದೆ. ಅದಕ್ಕಾಗಿ ತಂದೆಯ ಸಮಾನರಾಗಬೇಕು. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ಅದು ನಿಮ್ಮನ್ನು ರಿಜಿಸ್ಟರ್ ಇಡಲು ಬಿಡುವುದಿಲ್ಲ. ಮಾಯೆಯ ಬಂಧನದಲ್ಲಿ ಸಂಪೂರ್ಣವಾಗಿ ಸಿಕ್ಕಿಕೊಂಡಿದ್ದೀರಿ. ಮಾಯೆಯ ಸೆರೆಮನೆಯಿಂದ ನೀವು ಬಿಡಿಸಿಕೊಳ್ಳಲೂ ಸಾಧ್ಯವಿಲ್ಲ. ಇದರಲ್ಲಿ ಸತ್ಯವನ್ನು ಹೇಳುವುದಿಲ್ಲವೆಂದರೆ ತಂದೆಯು ಹೇಳುತ್ತಾರೆ - ಅಕ್ಯುರೇಟ್ ನೆನಪಿನ ಚಾರ್ಟನ್ನಿಡಿ. ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿರಿ, ತಂದೆಯದೇ ಮಹಿಮೆಯನ್ನು ಮಾಡಿರಿ - ಬಾಬಾ, ತಾವಂತು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೀರಿ. ಆದ್ದರಿಂದ ನಾವು ತಮ್ಮ ಮಹಿಮೆಯನ್ನು ಮಾಡುತ್ತೇವೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಹಿಮೆಯನ್ನು ಹಾಡುತ್ತಾರೆ, ಆದರೆ ಅವರಿಗೇನೂ ಗೊತ್ತಿಲ್ಲ, ದೇವತೆಗಳ ಮಹಿಮೆಯೇ ಇಲ್ಲ. ಮಹಿಮೆಯು ನೀವು ಬ್ರಾಹ್ಮಣರದಾಗಿದೆ. ಎಲ್ಲರಿಗೂ ಸದ್ಗತಿಯನ್ನು ಕೊಡುವವರು ಒಬ್ಬ ತಂದೆಯಾಗಿದ್ದಾರೆ, ಅವರು ರಚೈತನೂ ಆಗಿದ್ದಾರೆ, ನಿರ್ದೇಶಕನೂ ಆಗಿದ್ದಾರೆ. ಸೇವೆಯನ್ನೂ ಮಾಡುತ್ತಾರೆ ಮತ್ತು ಮಕ್ಕಳಿಗೂ ತಿಳಿಸುತ್ತಾರೆ, ಇದನ್ನು ಪ್ರತ್ಯಕ್ಷದಲ್ಲಿಯೇ ಹೇಳುತ್ತಾರೆ. ಅವರಂತು ಶಾಸ್ತ್ರಗಳಿಂದ ಕೇವಲ ಭಗವಾನುವಾಚ ಎಂದು ಕೇಳುತ್ತಿರುತ್ತಾರೆ. ಗೀತೆಯನ್ನು ಓದುತ್ತಾ ಬಂದಿದ್ದಾರೆ, ಮತ್ತೆ ಅದರಿಂದೇನಾದರೂ ಸಿಗುತ್ತದೆಯೇ? ಎಷ್ಟೊಂದು ಪ್ರೀತಿಯಿಂದ ಕುಳಿತು ಓದುತ್ತಾರೆ, ಭಕ್ತಿ ಮಾಡುತ್ತಾರೆ, ಇದರಿಂದೇನಾಗುತ್ತದೆ ಎಂದು ಗೊತ್ತೇ ಆಗುವುದಿಲ್ಲ. ಇದನ್ನು ತಿಳಿದುಕೊಳ್ಳುವುದಿಲ್ಲ - ನಾವು ಏಣಿಯನ್ನಿಳಿಯುತ್ತಿದ್ದೇವೆ, ದಿನ ಕಳೆದಂತೆ ತಮೋಪ್ರಧಾನವಾಗಲೇಬೇಕಾಗಿದೆ. ಇದು ಡ್ರಾಮಾದಲ್ಲಿ ನೊಂದಣಿಯೇ ಹೀಗಿದೆ. ಈ ಏಣಿಯ ರಹಸ್ಯವನ್ನು ತಂದೆಯಲ್ಲದೆ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಶಿವ ತಂದೆಯೇ ಬ್ರಹ್ಮಾರವರ ಮೂಲಕ ತಿಳಿಸುತ್ತಿದ್ದಾರೆ. ಇವರೂ ಸಹ ಇವರಿಂದ ತಿಳಿದುಕೊಂಡು ನಿಮಗೆ ತಿಳಿಸುತ್ತಾರೆ. ಮೂಲವಾಗಿ ಮುಖ್ಯ ಶಿಕ್ಷಕ, ದೊಡ್ಡ ಸರ್ಜನ್ ತಂದೆಯೇ ಆಗಿದ್ದಾರೆ, ಅವರನ್ನೇ ನೆನಪು ಮಾಡಬೇಕಾಗಿದೆ. ಈ ರೀತಿ ಹೇಳುವುದಿಲ್ಲ - ಬ್ರಾಹ್ಮಣಿಯನ್ನು ನೆನಪು ಮಾಡಿರಿ. ಒಬ್ಬರನ್ನೇ ನೆನಪಿಡಬೇಕಾಗಿದೆ. ಎಂದಿಗೂ ಯಾರೊಂದಿಗೂ ಮೋಹವನ್ನಿಡಬಾರದು. ಇಡೀ ಪ್ರಪಂಚದೊಂದಿಗೆ ವೈರಾಗ್ಯವಿರಲಿ, ಹೇಗೆಂದರೆ ಇದಂತು ಸಮಾಪ್ತಿಯಾಗಿ ಬಿಟ್ಟಿದೆ ಎನ್ನುವಂತೆ. ಇದರಲ್ಲಿ ಪ್ರೀತಿ ಅಥವಾ ಆಸಕ್ತಿಯೂ ಇರಬಾರದು. ಎಷ್ಟೊಂದು ದೊಡ್ಡ-ದೊಡ್ಡ ಕಟ್ಟಡ ಮುಂತಾದವನ್ನು ಕಟ್ಟುತ್ತಿರುತ್ತಾರೆ. ಅವರಿಗೆ ಇದು ಗೊತ್ತೇ ಇಲ್ಲವಬ್ - ಈ ಹಳೆಯ ಪ್ರಪಂಚವಿನ್ನೆಷ್ಟು ಸಮಯವಿರುತ್ತದೆ. ನೀವು ಮಕ್ಕಳೀಗ ಜಾಗೃತವಾಗಿದ್ದೀರಿ, ಅನ್ಯರನ್ನೂ ಜಾಗೃತಗೊಳಿಸುತ್ತೀರಿ. ತಂದೆಯು ಆತ್ಮರನ್ನೇ ಜಾಗೃತಗೊಳಿಸುತ್ತಾರೆ, ಗಳಿಗೆ-ಗಳಿಗೆಗೂ ಹೇಳುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯಿರಿ, ಶರೀರವೆಂದು ತಿಳಿಯುತ್ತೀರೆಂದರೆ ಮಲಗಿರುವವರಾಗಿದ್ದೀರಿ. ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನೂ ನೆನಪು ಮಾಡಿರಿ. ಆತ್ಮವು ಪತಿತವಾಗಿದೆಯೆಂದರೆ ಶರೀರವೂ ಪತಿತವಾಗಿರುವುದೇ ಸಿಗುತ್ತದೆ. ಆತ್ಮವು ಪಾವನವಾದರೆ ಶರೀರವೂ ಪಾವನವಾಗಿರುವುದೇ ಸಿಗುತ್ತದೆ.

ತಂದೆಯು ತಿಳಿಸುತ್ತಾರೆ - ನೀವೇ ಈ ದೇವಿ ದೇವತಾ ಮನೆತನದವರಾಗಿದ್ದಿರಿ, ಪುನಃ ನೀವೇ ಆಗಿ ಬಿಡುತ್ತೀರಿ. ಎಷ್ಟೊಂದು ಸಹಜವಿದೆ, ಇಂತಹ ತಂದೆಯನ್ನೇಕೆ ನಾವು ನೆನಪು ಮಾಡುವುದಿಲ್ಲ. ಬೆಳಗ್ಗೆ ಏಳುತ್ತಿದ್ದಂತೆಯೂ ತಂದೆಯನ್ನು ನೆನಪು ಮಾಡಿರಿ - ಬಾಬಾ, ತಾವು ನಮ್ಮನ್ನೆಷ್ಟು ಶ್ರೇಷ್ಠವಾದ ದೇವಿ-ದೇವತೆಯನ್ನಾಗಿ ಮಾಡಿ, ನಂತರ ನಿರ್ವಾಣಧಾಮದಲ್ಲಿ ಹೋಗಿ ಕುಳಿತು ಬಿಡುತ್ತೀರಿ, ಎಷ್ಟೊಂದು ಚಮತ್ಕಾರವಾಗಿದೆ! ಇಷ್ಟೂ ಶ್ರೇಷ್ಠರನ್ನಾಗಿಯಂತು ಯಾರೂ ಸಹ ಮಾಡಲು ಸಾಧ್ಯವಿಲ್ಲ. ತಾವೆಷ್ಟು ಸಹಜ ಮಾಡಿ ತಿಳಿಸುತ್ತೀರಿ. ತಂದೆಯು ಹೇಳುತ್ತಾರೆ - ಎಷ್ಟು ಸಮಯವು ಸಿಗುತ್ತದೆಯೋ, ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ತಂದೆಯನ್ನು ನೆನಪು ಮಾಡಬಹುದು. ನಿಮ್ಮ ಜೀವನದ ದೋಣಿಯನ್ನು ನೆನಪು ಮಾಡುವುದರಿಂದಲೇ ಪಾರಾಗುತ್ತದೆ ಅರ್ಥಾತ್ ಕಲಿಯುಗದಿಂದ ಆ ಶಿವಾಲಯದಲ್ಲಿ ಕರೆದುಕೊಂಡು ಹೋಗುತ್ತದೆ. ಶಿವಾಲಯವನ್ನೂ ನೆನಪು ಮಾಡಬೇಕಾಗಿದೆ, ಶಿವ ತಂದೆಯಿಂದ ಸ್ಥಾಪನೆಯಾಗಿರುವ ಸ್ವರ್ಗ- ಎರಡರ ನೆನಪಂತು ಬರುತ್ತದೆ. ಶಿವ ತಂದೆಯನ್ನು ನೆನಪು ಮಾಡುವುದರಿಂದ ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಈ ವಿದ್ಯೆಯಿರುವುದೂ ಸಹ ಹೊಸ ಪ್ರಪಂಚಕ್ಕಾಗಿದೆ. ತಂದೆಯೂ ಸಹ ಹೊಸ ಪ್ರಪಂಚದ ಸ್ಥಾಪನೆ ಮಾಡುವುದಕ್ಕಾಗಿ ಬರುತ್ತಾರೆ. ಅಂದಾಗ ಅವಶ್ಯವಾಗಿ ಶಿವ ತಂದೆಯು ಬಂದು ಯಾವುದೋ ಕರ್ತವ್ಯವನ್ನು ಮಾಡಿರಬೇಕಲ್ಲವೆ. ನೀವು ನೋಡುತ್ತಿದ್ದೀರಿ - ನಾನು ಡ್ರಾಮಾದ ಯೋಜನೆಯನುಸಾರವಾಗಿ ಪಾತ್ರವನ್ನಭಿನಯಿಸುತ್ತಿದ್ದೇನೆ. ನೀವು ಮಕ್ಕಳಿಗೆ 5 ಸಾವಿರ ವರ್ಷದ ಮೊದಲಿನ ನೆನಪಿನ ಯಾತ್ರೆ ಮತ್ತು ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ. ನೀವು ತಿಳಿದುಕೊಂಡಿದ್ದೀರಿ - ಪ್ರತೀ 5 ಸಾವಿರ ವರ್ಷದ ನಂತರ ನಮ್ಮ ಸನ್ಮುಖದಲ್ಲಿ ಬರುತ್ತಾರೆ. ಆತ್ಮವೇ ಇದನ್ನು ಹೇಳುತ್ತದೆ, ಶರೀರವು ಹೇಳುವುದಿಲ್ಲ. ತಂದೆಯು ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಾರೆ - ಆತ್ಮವೇ ಪವಿತ್ರವಾಗಬೇಕಾಗಿದೆ, ಆತ್ಮವು ಒಂದು ಬಾರಿಯಷ್ಟೇ ಪವಿತ್ರವಾಗುತ್ತದೆ. ಬಾಬಾರವರು ಹೇಳುತ್ತಾರೆ - ನಾನು ಅನೇಕ ಬಾರಿ ನಿಮಗೆ ಓದಿಸಿದೆನು, ಆದರೂ ಓದಿಸುತ್ತೇನೆ. ಈ ರೀತಿಯಂತು ಸನ್ಯಾಸಿಗಳು ಹೇಳಲು ಸಾಧ್ಯವಿಲ್ಲ. ಬಾಬಾರವರೇ ಹೇಳುತ್ತಾರೆ - ಮಕ್ಕಳೇ, ನಾನು ಡ್ರಾಮಾದ ಯೋಜನೆಯನುಸಾರವಾಗಿ ಓದಿಸುವುದಕ್ಕಾಗಿ ಬಂದಿದ್ದೇನೆ. ಮತ್ತೆ 5 ಸಾವಿರ ವರ್ಷದ ನಂತರ ಇದೇ ರೀತಿ ಬಂದು ಓದಿಸುತ್ತೇನೆ. ಹೇಗೆ ಕಲ್ಪದ ಮೊದಲು ನಿಮಗೆ ಓದಿಸಿ, ರಾಜಧಾನಿಯನ್ನು ಸ್ಥಾಪನೆ ಮಾಡಿದ್ದೆನು, ಅನೇಕ ಬಾರಿ ನಿಮಗೆ ಓದಿಸಿ ರಾಜ್ಯದ ಸ್ಥಾಪನೆ ಮಾಡಿದ್ದೇನೆ. ಇದೆಷ್ಟು ಅದ್ಭುತವಾದ ಮಾತುಗಳನ್ನು ಬಾಬಾರವರು ತಿಳಿಸುತ್ತಾರೆ! ಶ್ರೀಮತವು ಎಷ್ಟೊಂದು ಶ್ರೇಷ್ಠವಾಗಿದೆ! ಶ್ರೀಮತದಿಂದಲೇ ನಾವು ವಿಶ್ವದ ಮಾಲೀಕರಾಗುತ್ತೇವೆ. ಬಹಳ-ಬಹಳ ಶ್ರೇಷ್ಠ ಪದವಿಯಾಗಿದೆ! ಯಾರಿಗೇ ದೊಡ್ಡ ಲಾಟರಿಯು ಸಿಗುತ್ತದೆಯೆಂದರೆ ತಲೆ ಕೆಟ್ಟು ಹೋಗುತ್ತದೆ. ಕೆಲವಂತು ನಡೆಯುತ್ತಾ-ನಡೆಯುತ್ತಾ ಭರವಸೆಯಿಲ್ಲದವರಾಗುತ್ತಾರೆ - ನಾವು ಓದುವುದಕ್ಕೆ ಸಾಧ್ಯವಿಲ್ಲ, ನಾವು ವಿಶ್ವದ ರಾಜ್ಯಭಾಗ್ಯವನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ! ಆದರೆ ನೀವು ಮಕ್ಕಳಿಗಂತು ಬಹಳ ಖುಷಿಯಾಗಬೇಕು. ಬಾಬಾ ಹೇಳುತ್ತಾರೆ - ಅತೀಂದ್ರಿಯ ಸುಖ ಹಾಗೂ ಖುಷಿಯ ಮಾತನ್ನು ಕೇಳಬೇಕೆಂದರೆ ನನ್ನ ಮಕ್ಕಳಿಂದ ಕೇಳಿರಿ. ನೀವು ಎಲ್ಲರಿಗೂ ಖುಷಿಯ ಮಾತುಗಳನ್ನು ಹೇಳುವುದಕ್ಕಾಗಿ ಹೋಗುತ್ತೀರಿ - ನೀವೇ ವಿಶ್ವದ ಮಾಲೀಕರಾಗಿದ್ದಿರಿ ಮತ್ತೆ 84 ಜನ್ಮಗಳನ್ನು ಭೋಗಿಸಿ ಗುಲಾಮರಾಗುತ್ತೀರಿ. ಗಾಯನವನ್ನೂ ಮಾಡುತ್ತಾರೆ - ನಾನು ನಿನ್ನ ಗುಲಾಮನಾಗಿದ್ದೇನೆ, ನಾನು ನಿನ್ನ ಗುಲಾಮನಾಗಿದ್ದೇನೆ. ಮತ್ತೆ ಸ್ವಯಂನ್ನು ನೀಚ ಎಂದು ಹೇಳುವುದು, ಚಿಕ್ಕವರಾಗಿ ನಡೆಯುವುದು ಒಳ್ಳೆಯದು ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ನೋಡಿ - ತಂದೆಯು ಯಾರಾಗಿದ್ದಾರೆ! ಅವರನ್ನು ಇನ್ನ್ಯಾರೂ ತಿಳಿದಿಲ್ಲ, ನೀವಷ್ಟೇ ತಿಳಿದುಕೊಂಡಿದ್ದೀರಿ. ಬಾಬಾರವರು ಯಾವ ರೀತಿ ಬಂದು ಎಲ್ಲರನ್ನೂ ಮಗು-ಮಗು ಎಂದು ಹೇಳುತ್ತಾ ತಿಳಿಸುತ್ತಾರೆ! ಇದು ಆತ್ಮ ಮತ್ತು ಪರಮಾತ್ಮನ ಮೇಳವಾಗಿದೆ. ಅವರಿಂದ ನಮಗೆ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಬಾಕಿ ಗಂಗಾ ಸ್ನಾನ ಮುಂತಾದವನ್ನು ಮಾಡುವುದರಿಂದ ಸ್ವರ್ಗದ ರಾಜ್ಯಭಾಗ್ಯವು ಯಾರಿಗೂ ಸಿಗುವುದಿಲ್ಲ. ಗಂಗಾ ಸ್ನಾನವನ್ನಂತು ಅನೇಕ ಬಾರಿ ಮಾಡಿದೆವು. ಆ ನೀರಂತು ಸಾಗರದಿಂದ ಬರುತ್ತದೆ ಆದರೆ ಈ ಮಳೆಯು ಹೇಗೆ ಬೀಳುತ್ತದೆ, ಇದನ್ನೂ ಸಹ ವಿಧಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ತಂದೆಯು ನಿಮಗೆ ಎಲ್ಲವನ್ನೂ ತಿಳಿಸುತ್ತಾರೆ. ಇದನ್ನೂ ಆತ್ಮವೇ ಧಾರಣೆಯನ್ನು ಮಾಡಿಕೊಳ್ಳುತ್ತದೆ, ಶರೀರವಲ್ಲ. ನೀವು ಅನುಭವ ಮಾಡುತ್ತೀರಿ - ಖಂಡಿತವಾಗಿಯೂ ಬಾಬಾರವರು ನಮ್ಮನ್ನು ಎಂತಹವರಿಂದ ಎಂತಹವರನ್ನಾಗಿ ಮಾಡಿ ಬಿಟ್ಟರು! ಈಗ ಬಾಬಾ ಹೇಳುತ್ತಾರೆ - ಮಕ್ಕಳೇ, ತಮ್ಮ ಮೇಲೆ ದಯೆ ತೋರಿಸಿಕೊಳ್ಳಿರಿ. ಯಾವುದೇ ಉಲ್ಲಂಘನೆಯೂ ಆಗಬಾರದು, ದೇಹದ ಅಭಿಮಾನಿಯಾಗಬಾರದು. ಇಲ್ಲವೆಂದರೆ ಪುಕ್ಕಟ್ಟೆಯಾಗಿ ತಾವು ಕಡಿಮೆ ಪದವಿಯನ್ನು ಮಾಡಿಕೊಳ್ಳುತ್ತೀರಿ - ಈ ರೀತಿ ಶಿಕ್ಷಕರಂತು ತಿಳಿಸುತ್ತಾರಲ್ಲವೆ. ನೀವು ತಿಳಿದಿದ್ದೀರಿ - ಬಾಬಾರವರು ಬೇಹದ್ದಿನ ಶಿಕ್ಷಕನಾಗಿದ್ದಾರೆ. ಪ್ರಪಂಚದಲ್ಲಂತು ಎಷ್ಟೊಂದು ಭಾಷೆಗಳಿವೆ. ಯಾವುದೇ ಮುದ್ರಣವಾಗುತ್ತದೆಯೆಂದರೆ, ಎಲ್ಲಾ ಭಾಷೆಗಳಲ್ಲಿಯೂ ಆಗಬೇಕು. ಯಾವುದೇ ಪುಸ್ತಕವನ್ನೇ ಮುದ್ರಿಸಲಾಗುತ್ತದೆಯೆಂದರೆ ಎಲ್ಲರಿಗೂ ಒಂದೊಂದು ಕಾಪಿಯನ್ನು ಕಳುಹಿಸಿರಿ. ಒಂದೊಂದು ಕಾಪಿಯನ್ನು ಲೈಬ್ರರಿಗೆ ಕಳುಹಿಸಬೇಕಾಗಿದೆ, ಇದರಲ್ಲಿ ಖರ್ಚಿನ ಮಾತಿಲ್ಲ. ಬಾಬಾರವರ ಭಂಡಾರವು ತುಂಬಿ ಬಿಡುತ್ತದೆ, ಹಣವನ್ನು ತಮ್ಮ ಬಳಿ ಇಟ್ಟುಕೊಂಡು ಏನು ಮಾಡುತ್ತೀರಿ. ಮನೆಗಂತು ತೆಗೆದುಕೊಂಡು ಹೋಗುವುದಿಲ್ಲ. ಒಂದುವೇಳೆ ಸ್ವಲ್ಪ ಮನೆಗೆ ತೆಗೆದುಕೊಂಡು ಹೋಗುತ್ತಾರೆಂದರೆ, ಪರಮಾತ್ಮನ ಯಜ್ಞದ ಕಳ್ಳರಾಗಿ ಬಿಡುತ್ತಾರೆ. ತೆಗೆದುಕೊಳ್ಳೋಣ-ತೆಗೆದುಕೊಳ್ಳೋಣ- ಇಂತಹ ಬುದ್ಧಿಯು ಯಾರಿಗೂ ಆಗದಿರಲಿ. ಪರಮಾತ್ಮನ ಯಜ್ಞದ ಕಳ್ಳತನ! ಅವರಂತಹ ಮಹಾ ಪಾಪಾತ್ಮನು ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಎಷ್ಟೊಂದು ಅದೋ ಗತಿಯಾಗಿ ಬಿಡುತ್ತದೆ. ಬಾಬಾರವರು ಹೇಳುತ್ತಾರೆ - ಇದೆಲ್ಲವೂ ಡ್ರಾಮಾದಲ್ಲಿ ಪಾತ್ರವಿದೆ. ನೀವು ರಾಜ್ಯಾಡಳಿತ ಮಾಡುತ್ತೀರಿ, ಅವರು ನಿಮ್ಮ ಸೇವಾಧಾರಿಯಾಗುತ್ತಾರೆ. ಸೇವಾಧಾರಿಗಳಿಲ್ಲದೆಯೇ ರಾಜ್ಯಾಡಳಿತರು ಹೇಗೆ ನಡೆಯುತ್ತದೆ! ಕಲ್ಪದ ಮೊದಲೂ ಸಹ ಹೀಗೆಯೇ ಸ್ಥಾಪನೆಯಾಗಿತ್ತು.

ಈಗ ಬಾಬಾರವರು ಹೇಳುತ್ತಾರೆ - ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಬೇಕೆಂದು ಬಯಸುತ್ತೀರೆಂದರೆ ಶ್ರೀಮತದಂತೆ ನಡೆಯಿರಿ. ದೈವೀ ಗುಣವನ್ನು ಧಾರಣೆ ಮಾಡಿರಿ. ಕ್ರೋಧ ಮಾಡಿಕೊಳ್ಳುವುದು ದೈವೀ ಗುಣವಲ್ಲ. ಅದು ಅಸುರಿ ಗುಣವಾಗಿ ಬಿಡುತ್ತದೆ. ಯಾರೇ ಕ್ರೋಧ ಮಾಡಲಿ ಆದರೆ ತಾವು ಶಾಂತವಾಗಿ ಬಿಡಬೇಕು. ಪ್ರತ್ಯುತ್ತರವನ್ನು ಕೊಡಬಾರದು. ಪ್ರತಿಯೊಬ್ಬರ ಚಲನೆಯಿಂದಲೇ ತಿಳಿದುಕೊಳ್ಳಬಹುದು, ಅವಗುಣವಂತು ಎಲ್ಲರಲ್ಲಿಯೂ ಇದೆ. ಯಾವಾಗ ಯಾರೇ ಕ್ರೋಧ ಮಾಡುತ್ತಾರೆಂದರೆ ಅವರ ಮುಖವು ತಾಮ್ರದಂತಾಗಿ ಬಿಡುತ್ತದೆ. ಮುಖದಿಂದ ಬಾಂಬುಗಳನ್ನಾಕುತ್ತಾರೆ. ತನ್ನದೇ ನಷ್ಟ ಮಾಡಿಕೊಂಡು ಬಿಡುತ್ತಾರೆ, ಪದವಿ ಭ್ರಷ್ಟವಾಗುತ್ತದೆ - ಇದನ್ನು ತಿಳಿದುಕೊಳ್ಳಬೇಕಾಗಿದೆ. ಬಾಬಾರವರು ಹೇಳುತ್ತಾರೆ - ಯಾವ ಪಾಪ ಕರ್ಮವನ್ನು ಮಾಡುತ್ತೀರಿ, ಅದನ್ನು ಬರೆದು ಬಿಡಿ. ಬಾಬಾರವರಿಗೆ ತಿಳಿಸುವುದರಿಂದ ಕ್ಷಮೆಯಾಗಿ ಬಿಡುತ್ತದೆ, ಹೊರೆಯು ಹಗುರವಾಗಿ ಬಿಡುತ್ತದೆ. ಜನ್ಮ-ಜನ್ಮಾಂತರದಿಂದ ನೀವು ವಿಕಾರದಲ್ಲಿಯೇ ಹೋಗಿದ್ದಿರಿ. ಈ ಸಮಯದಲ್ಲಿ ನೀವು ಯಾವುದೇ ಪಾಪ ಕರ್ಮವನ್ನು ಮಾಡುತ್ತೀರೆಂದರೆ ನೂರು ಪಟ್ಟು ಆಗಿ ಬಿಡುತ್ತದೆ. ಬಾಬಾರವರ ಮುಂದೆ ತಪ್ಪು ಮಾಡಿದಿರೆಂದರೆ ನೂರು ಪಟ್ಟು ಶಿಕ್ಷೆಯಾಗಿ ಬಿಡುತ್ತದೆ. ಮಾಡಿದಿರಿ ಮತ್ತು ತಿಳಿಸಲಿಲ್ಲವೆಂದರೆ ಇನ್ನೂ ವೃದ್ಧಿಯಾಗಿ ಬಿಡುತ್ತದೆ. ತಂದೆಯಂತು ತಿಳಿಸುತ್ತಾರೆ - ತಮ್ಮನ್ನು ನಷ್ಟದಲ್ಲಿ ತಲುಪಿಸಬೇಡಿ. ತಂದೆಯು ಮಕ್ಕಳ ಬುದ್ಧಿಯನ್ನು ಒಳ್ಳೆಯದನ್ನಾಗಿ ಮಾಡಲು ಬಂದಿದ್ದಾರೆ. ಇವರು ಎಂತಹ ಪದವಿಯನ್ನು ಪಡೆಯುತ್ತಾರೆನ್ನುವುದು ಗೊತ್ತಿದೆ. ಅದೂ ಸಹ 21 ಜನ್ಮದ ಮಾತಾಗಿದೆ. ಯಾರು ಸೇವಾಧಾರಿ ಮಕ್ಕಳಿದ್ದಾರೆ, ಅವರ ಸ್ವಭಾವವು ಮಧುರವಾಗಬೇಕು. ಕೆಲವರಂತು ತಕ್ಷಣವೇ ತಂದೆಗೆ ತಿಳಿಸುತ್ತಾರೆ - ಬಾಬಾ, ಈ ತಪ್ಪಾಯಿತು, ಇದರಿಂದ ಬಾಬಾರವರು ಖುಷಿಯಾಗುತ್ತಾರೆ. ಭಗವಂತನು ಖುಷಿಯಾದರೆಂದರೆ ಇನ್ನೇನು ಬೇಕು! ಇವರಂತು ತಂದೆ-ಶಿಕ್ಷಕ-ಗುರು ಮೂವರೂ ಆಗಿದ್ದಾರೆ. ಇಲ್ಲವೆಂದರೆ ಮೂವರೂ ಬೇಸರವಾಗಿ ಬಿಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ ನಡೆದು ತಮ್ಮ ಬುದ್ಧಿಯನ್ನು ಒಳ್ಳೆಯದನ್ನಾಗಿ ಮಾಡಿಕೊಳ್ಳಬೇಕಾಗಿದೆ. ಯಾವುದೇ ಉಲ್ಲಂಘನೆಯನ್ನು ಮಾಡಬಾರದು. ಕ್ರೋಧದಲ್ಲಿ ಬಂದು ಮುಖದಿಂದ ಬಾಂಬನ್ನು ಹೊರ ತೆಗೆಯಬಾರದು, ಶಾಂತವಾಗಿರಬೇಕಾಗಿದೆ.

2. ತಂದೆಯ ಮಹಿಮೆಯನ್ನು ಮನಸ್ಪೂರ್ತಿಯಾಗಿ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚದೊಂದಿಗೆ ಆಸಕ್ತಿ ಅಥವಾ ಪ್ರೀತಿಯನ್ನಿಡಬಾರದು. ಬೇಹದ್ದಿನ ವೈರಾಗಿ ಮತ್ತು ನಿರ್ಮೋಹಿಯಾಗಬೇಕಾಗಿದೆ.

ವರದಾನ:
ತಮ್ಮ ಅವ್ಯಕ್ತ ಶಾಂತ ಸ್ವರೂಪದ ಮುಖಾಂತರ ವಾತಾವರಣವನ್ನು ಅವ್ಯಕ್ತವಾಗಿ ಮಾಡುವಂತಹ ಸಾಕ್ಷಾತ್ಕಾರ ಮೂರ್ತಿ ಭವ.

ಹೇಗೆ ಸೇವೆಯ ಮತ್ತು ಅನ್ಯ ಕಾರ್ಯಕ್ರಮಗಳನ್ನು ಮಾಡುವಿರಿ ಹಾಗೆಯೇ ಬೆಳ್ಳಿಗ್ಗೆಯಿಂದ ರಾತ್ರಿಯವರೆಗೆ ನೆನಪಿನ ಯಾತ್ರೆಯಲ್ಲಿ ಹೇಗೆ ಮತ್ತು ಯಾವಾಗ ಇರುವಿರಿ ಇದನ್ನೂ ಸಹ ಕಾರ್ಯಕ್ರಮ ತಯಾರಿಸಿ ಮತ್ತು ಮಧ್ಯೆ-ಮಧ್ಯೆ ಎರಡು-ಮೂರು ನಿಮಿಷಕ್ಕಾಗಿ ಸಂಕಲ್ಪಗಳ ಸಂಚಾರವನ್ನು (ಟ್ರಾಫಿಕ್) ನಿಲ್ಲಿಸಿ. ಒಂದುವೇಳೆ ಯಾರಾದರೂ ವ್ಯಕ್ತ ಭಾವದಲ್ಲಿ ಹೆಚ್ಚು ಕಂಡು ಬಂದಲ್ಲಿ ಅವರಿಗೆ ಹೇಳದೆಯೇ ತಮ್ಮ ಅವ್ಯಕ್ತ ಶಾಂತ ರೂಪ ಈ ರೀತಿ ಧಾರಣೆ ಮಾಡಿ ಅವರೂ ಸಹ ಸೂಚನೆಯಿಂದಲೇ ತಿಳಿದುಕೊಂಡು ಬಿಡಬೇಕು, ಇದರಿಂದ ವಾತಾವರಣ ಅವ್ಯಕ್ತವಾಗಿರುವುದು. ವಿಭಿನ್ನತೆ ಕಂಡು ಬರುವುದು ಮತ್ತು ತಾವು ಸಾಕ್ಷಾತ್ಕಾರ ಮಾಡಿಸುವಂತಹ ಸಾಕ್ಷಾತ್ಕಾರ ಮೂರ್ತಿಗಳಾಗಿ ಬಿಡುವಿರಿ.

ಸ್ಲೋಗನ್:
ಸಂಪೂರ್ಣ ಸತ್ಯತೆಯೇ ಪವಿತ್ರತೆಗೆ ಆಧಾರವಾಗಿದೆ.


ಡಬ್ಬಲ್ ಲೈಟ್ ಸ್ಥಿತಿಯ ಅನುಭವ:-
ಹೇಗೆ ತಂದೆಯು ಅವತರಣೆಯಾಗಿದ್ದಾರೆ, ಹಾಗೆಯೇ ನಾನೂ ಶ್ರೇಷ್ಠ ಆತ್ಮನು ಸಂದೇಶವನ್ನು ಕೊಡುವುದಕ್ಕಾಗಿ ಮೇಲಿಂದ ಕೆಳಗೆ ಬಂದು ಅವತರಣೆಯಾಗಿದ್ದೇನೆ. ನನ್ನ ಸತ್ಯವಾದ ನಿವಾಸ ಸ್ಥಾನವು ಸೂಕ್ಷ್ಮವತನ ಅಥವಾ ಮೂಲವತನವಾಗಿದೆ. ಇಂತಹ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ಸ್ವಯಂನ್ನು ಸೂಕ್ಷ್ಮವತನವಾಸಿ ಎಂದು ತಿಳಿದು ಹಾರುವ ಕಲೆಯಲ್ಲಿ ಹಾರುತ್ತಾ ಇರಬೇಕು.