12.02.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಶಿಕ್ಷಕರು ವಿದೇಹಿಯಾಗಿದ್ದಾರೆ, ಆದ್ದರಿಂದ ನೆನಪಿನ ಪರಿಶ್ರಮ ಪಡಬೇಕಾಗಿದೆ, ನೆನಪು ಮಾಡುತ್ತಾ-ಮಾಡುತ್ತಾ ಯಾವಾಗ ಪರೀಕ್ಷೆಯು ಮುಕ್ತಾಯವಾಗುವುದೋ ಆಗ ಮನೆಗೆ ಹೊರಟು ಹೋಗುತ್ತೀರಿ.

ಪ್ರಶ್ನೆ:
ಮಕ್ಕಳು ನೆನಪಿನಲ್ಲಿರುವ ಶ್ರಮ ಮಾಡಬೇಕು, ಯಾವ ಮೋಸದಲ್ಲಿ ಎಂದೂ ಸಹ ಹೋಗಬಾರದು?

ಉತ್ತರ:
ಆತ್ಮದ ಸಾಕ್ಷಾತ್ಕಾರವಾಯಿತು, ಪ್ರಕಾಶವನ್ನು ನೋಡಿ ಬಿಟ್ಟಿರಿ, ಎಂದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಸಾಕ್ಷಾತ್ಕಾರದಿಂದ ಅಥವಾ ಕೇವಲ ತಂದೆಯ ದೃಷ್ಟಿ ಬೀಳುವುದರಿಂದ ಯಾವುದೇ ಪಾಪಗಳು ಪರಿಹಾರವಾಗುವುದಿಲ್ಲ ಅಥವಾ ಮುಕ್ತಿ ಸಿಕ್ಕಿ ಬಿಡುವುದಿಲ್ಲ. ಇದರಿಂದ ಇನ್ನೂ ಮೋಸದಲ್ಲಿಯೇ ಉಳಿದುಕೊಳ್ಳುತ್ತೀರಿ, ನೆನಪಿನ ಶ್ರಮ ಪಡಿ. ಪರಿಶ್ರಮದಿಂದಲೇ ಕರ್ಮಾತೀತ ಸ್ಥಿತಿಯಾಗುವುದು. ತಂದೆಯು ದೃಷ್ಟಿ ಕೊಟ್ಟರೆ ನೀವು ಪಾವನರಾಗುತ್ತೀರಿ ಎಂದಲ್ಲ ಪರಿಶ್ರಮ ಪಡಬೇಕಾಗಿದೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ, ಓದಿಸುತ್ತಾರೆ, ಯೋಗವನ್ನು ಕಲಿಸುತ್ತಾರೆ. ಯೋಗ ಎಂಬುದು ಯಾವುದೇ ದೊಡ್ಡ ಮಾತಲ್ಲ. ಹೇಗೆ ಮಕ್ಕಳು ಓದುತ್ತಾರೆಂದರೆ ನಮ್ಮನ್ನು ತನ್ನ ಸಮಾನ ಮಾಡಿಕೊಳ್ಳಲು ಇಂತಹ ಶಿಕ್ಷಕರು ಓದಿಸುತ್ತಾರೆಂದು ಅವರೊಂದಿಗೆ ಅವಶ್ಯವಾಗಿ ಬುದ್ಧಿಯೋಗವಿರುತ್ತದೆ. ಗುರಿ, ಧ್ಯೇಯವಂತೂ ಇರುತ್ತದೆ, ನಾವು ಇಂತಹ ದರ್ಜೆಯಲ್ಲಿ ಓದುತ್ತಿದ್ದೇವೆ ಎಂದು ತಿಳಿಯುತ್ತಾರೆ. ಅದರಲ್ಲಿ ನನ್ನೊಂದಿಗೆ ನೀವು ಯೋಗವನ್ನು ಇಡಿ ಎಂದು ಶಿಕ್ಷಕರು ಹೇಳಬೇಕಾಗಿಲ್ಲ. ಇಡೀ ದಿನದಲ್ಲಂತೂ ಓದಿಸುವುದಿಲ್ಲ. ಅದಂತೂ ಜನ್ಮ-ಜನ್ಮಾಂತರದಿಂದಲೂ ಓದುತ್ತಾ ಬಂದಿದ್ದಾರೆ ಅಭ್ಯಾಸವಾಗಿ ಬಿಡುತ್ತದೆ. ಇಲ್ಲಿ ನಿಮ್ಮದು ಪೂರ್ಣ ಹೊಸದಾದಂತಹ ಅಭ್ಯಾಸವಾಗಿದೆ. ಇವರು ದೇಹಧಾರಿ ಶಿಕ್ಷಕರಲ್ಲ, ಪ್ರತಿ 5000 ವರ್ಷದ ನಂತರ ನಿಮಗೆ ಸಿಗುತ್ತಾರೆ. ನಾನು ನಿಮ್ಮ ದೇಹಧಾರಿ ಶಿಕ್ಷಕನಲ್ಲ, ಆದ್ದರಿಂದ ಈ ನೆನಪು ನಿಲ್ಲುವುದಿಲ್ಲವೆಂದು ತಾವೇ ಹೇಳುತ್ತಾರೆ. ನಮಗೆ ಪರಮಪಿತ ಪರಮಾತ್ಮ ಶಿಕ್ಷಕನಾಗಿ ಓದಿಸುತ್ತಿದ್ದಾರೆಂದರೆ ತಮ್ಮನ್ನು ಆತ್ಮ ಎಂದು ತಿಳಿಯಬೇಕಾಗುತ್ತದೆ. ಶಿಕ್ಷಕರನ್ನು ಅವಶ್ಯವಾಗಿ ನೆನಪು ಮಾಡಬೇಕು. ನೆನಪು ಮಾಡುತ್ತಾ-ಮಾಡುತ್ತಾ ಯಾವಾಗ ಪರೀಕ್ಷೆಯು ಪಾಸ್ ಆಗುವುದೋ ಆಗ ಮನೆಗೆ ಹೊರಟು ಹೋಗುತ್ತೀರಿ. ಪರೀಕ್ಷೆಯು ಮುಕ್ತಾಯವಾಗುತ್ತಿದ್ದಂತೆಯೇ ನಾಟಕವೂ ಮುಕ್ತಾಯವಾಗಿ ಬಿಡುತ್ತದೆ ಮತ್ತು ನೀವು ಮಕ್ಕಳಿಗೆ ಗೊತ್ತಿದೆ - ನಾವು ಆತ್ಮಗಳಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ. ಅದನ್ನು ನಾವು ಅಭಿನಯಿಸಲೇಬೇಕಾಗಿದೆ. ಇದೂ ಸಹ ಈಗಷ್ಟೇ ಗೊತ್ತಿದೆ. ಈ ನೆನಪು ಅಲ್ಲಿ ಇರುವುದಿಲ್ಲ. ಈಗ ನಿಮಗೆ ಪೂರ್ಣ ಜ್ಞಾನವು ಸಿಗುತ್ತದೆ. ಶಿಕ್ಷಕರೇ ಕುಳಿತು ಪೂರ್ಣ ಜ್ಞಾನವನ್ನು ಮಕ್ಕಳಿಗೆ ತಿಳಿಸುತ್ತಾರೆ. ಅಂದಮೇಲೆ ಅದನ್ನು ತಿಳಿದುಕೊಳ್ಳುತ್ತಿರಬೇಕು ಮತ್ತು ಅವಶ್ಯವಾಗಿ ನೆನಪಿನಲ್ಲಿಯೂ ಇರಬೇಕಾಗಿದೆ. ಪದೇ-ಪದೇ ತಂದೆಯು ತಿಳಿಸುತ್ತಿರುತ್ತಾರೆ - ಮನ್ಮನಾಭವ. ಮನ್ಮನಾಭವದ ಅರ್ಥವೂ ಇದೆ. ಈ ಶಬ್ದವು ಸರಿಯಾಗಿದೆ ಎಂದು ಮಕ್ಕಳು ತಿಳಿಯುತ್ತೀರಿ. ಸ್ವಯಂ ತಂದೆ ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶ ಆಗುತ್ತದೆ. ಇದರಲ್ಲಿ ಸಮಯವಂತೂ ಹಿಡಿಸುತ್ತದೆ ಮತ್ತು ತಮ್ಮ ಪರಿಶೀಲನೆಯನ್ನು ಮಾಡಿಕೊಳ್ಳಬೇಕು. ಹೇಗೆ ಆ ವಿದ್ಯೆಯಲ್ಲಿ ಇತಿಹಾಸ, ಭೂಗೋಳ, ವಿಜ್ಞಾನ, ಗಣಿತ ಮೊದಲಾದ ಬೇರೆ ಬೇರೆ ಸಬ್ಜೆಕ್ಟ್ಗಳು ಇರುತ್ತವೆ, ನಾವು ಎಲ್ಲಿಯ ತನಕ ಉತ್ತೀರ್ಣರಾಗುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. ನಾವು ಎಷ್ಟೆಷ್ಟು ಅಂಕಗಳಿಂದ ಉತ್ತೀರ್ಣರಾಗುತ್ತೇವೆ ಎಂದು ತಾವು ಮಕ್ಕಳ ಬುದ್ಧಿಯಲ್ಲಿಯೂ ಇದೆ. ನಾವು ತಂದೆಯನ್ನು ಮರೆತು ಹೋಗುವುದಿಲ್ಲವೇ ಎಂದು ತಮ್ಮನ್ನು ತಾವು ನೋಡಿಕೊಳ್ಳಬೇಕು. ಬಾಬಾ, ಮಾಯೆಯು ಪದೇ-ಪದೇ ಮರೆಸಿ ಬಿಡುತ್ತದೆ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ವಿಕಲ್ಪಗಳು ಬಹಳ ಬರುತ್ತವೆ ಎಂದು ಮಕ್ಕಳು ಬರೆಯುತ್ತಾರೆ. ತಿಳಿದುಕೊಳ್ಳದಿರುವ ಕಾರಣ ಬಾಬಾ, ಇದರಲ್ಲಿ ಪಾಪವಂತೂ ಆಗುವುದಿಲ್ಲವೇ? ಎಂದು ಬರೆಯುತ್ತಾರೆ. ಇಂತಿಂತಹ ಸಂಕಲ್ಪ-ವಿಕಲ್ಪಗಳು ಬರುತ್ತವೆ - ನೋಡಿದರೆ ಇದನ್ನು ಮಾಡುವುದೇ? ಎಂದು ವಿಚಾರ ಬರುತ್ತದೆ ಅಂದಾಗ ಇದರಲ್ಲಿ ಪಾಪವಂತೂ ಆಗುವುದಿಲ್ಲವೇ? ಇದಕ್ಕೆ ತಂದೆಯು ತಿಳಿಸುತ್ತಾರೆ ಇಲ್ಲಿ ಕರ್ಮೇಂದ್ರಿಯಗಳಿಂದ ವಿಕರ್ಮ ಮಾಡಿದಾಗ ಪಾಪವಾಗುತ್ತದೆ.

ತಂದೆಯು ಪದೇ-ಪದೇ ತಿಳಿಸುತ್ತಿರುತ್ತಾರೆ - ಮಕ್ಕಳಿಗೆ ಜ್ಞಾನವಂತೂ ಇದೆ, ವಿಷ್ಣು ಮತ್ತು ಕೃಷ್ಣನಿಗೆ ಏಕೆ ಸ್ವದರ್ಶನ ಚಕ್ರವನ್ನು ತೋರಿಸಿದ್ದಾರೆ ಎಂಬುದೂ ಸಹ ಗೊತ್ತಿದೆ. ಅಕಾಸುರ, ಬಕಾಸುರರನ್ನು ಕೊಂದರು ಎಂದು ತೋರಿಸುತ್ತಾರೆ. ಆದರೆ ಸಾಯಿಸುವ ಮಾತೇ ಇಲ್ಲ. ಇದು ತಮ್ಮ ಪಾಪವನ್ನು ಕತ್ತರಿಸುವ ಮಾತಾಗಿದೆ. ಶಿವ ತಂದೆಗೂ ಸಹ ಸ್ವದರ್ಶನ ಚಕ್ರಧಾರಿ ಎಂದು ಹೇಳುತ್ತಾರಲ್ಲವೇ ಅವರಿಗೆ ಪೂರ್ಣ ಚಕ್ರದ ಜ್ಞಾನವಿದೆ. ಆತ್ಮಕ್ಕೆ ತಂದೆಯಿಂದ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು ಜ್ಞಾನದ ಅರಿವು ಆಗಿದೆ. ಸ್ವದರ್ಶನ ಚಕ್ರವನ್ನು ಧಾರಣೆ ಮಾಡಿ ತಮ್ಮ ಪಾಪಗಳನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. ಜ್ಞಾನವನ್ನು ಧಾರಣೆ ಮಾಡಿ ತಂದೆಯನ್ನು ನೆನಪು ಮಾಡಿ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮದ ವಿನಾಶವಾಗುತ್ತವೆ. ಪ್ರತಿಯೊಬ್ಬರು ತನಗಾಗಿ ಶ್ರಮ ಪಡಬೇಕು, ಆದರೆ ತಂದೆಯು ದೃಷ್ಟಿಯನ್ನು ಕೊಟ್ಟರು ಪಾಪಗಳು ಪರಿಹಾರ ಆಗಿ ಬಿಡುತ್ತವೆ ಎಂದಲ್ಲ. ತಂದೆಯು ಕುಳಿತು ಈ ವ್ಯಾಪಾರವೇನೂ ಮಾಡುವುದಿಲ್ಲ. ತಂದೆಯು ಎಲ್ಲರನ್ನು ನೋಡುತ್ತಾರೆ ಆದರೆ ನೋಡುವುದರಿಂದ ಅಥವಾ ಜ್ಞಾನವನ್ನು ಕೊಡುವುದರಿಂದ ವಿಕರ್ಮಗಳು ವಿನಾಶ ಆಗುವುದಿಲ್ಲ. ತಂದೆಯಂತೂ ಹೀಗೆ ಮಾಡಿದರೆ ವಿಕರ್ಮಗಳು ವಿನಾಶ ಆಗುತ್ತವೆ ಎಂದು ಮಾರ್ಗವನ್ನು ತೋರಿಸುತ್ತಾರೆ, ಶ್ರೀಮತವನ್ನು ಕೊಡುತ್ತಾರೆ. ತಿಳಿದುಕೊಳ್ಳಿ, ತಂದೆಯು ಬರುತ್ತಾರೆ, ಆತ್ಮನೆಂದು ತಿಳಿದು ನೋಡುತ್ತಾರೆ. ಆದರೆ ಇದರಿಂದ ನಮ್ಮ ಪಾಪಗಳು ಸಮಾಪ್ತಿ ಆಗುತ್ತವೆ ಎಂದಲ್ಲ. ತಮ್ಮ ಪರಿಶ್ರಮದಿಂದಲೇ ಪಾಪಗಳು ಪರಿಹಾರ ಆಗುತ್ತವೆ. ಈಗ ಕೇವಲ ದೃಷ್ಟಿಯಿಂದಲೇ ಪಾಪ ಪರಿಹಾರ ಆಗಿ ಬಿಟ್ಟರೆ ಇದು ಒಂದು ವ್ಯಾಪಾರ ಆಗಿ ಬಿಡುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ರೀತಿ ತಾವು ತಮ್ಮ ತಂದೆಯನ್ನು ನೆನಪು ಮಾಡಿ ತಂದೆಯು ಶ್ರೀಮತವನ್ನು ಕೊಡುವವರಾಗಿದ್ದಾರೆ ಅಂದಮೇಲೆ ಪ್ರತಿಯೊಬ್ಬರು ಪರಿಶ್ರಮ ಪಡಬೇಕು. ಇಂತಹ ಸಾಧು-ಸನ್ಯಾಸಿಗಳ ದೃಷ್ಟಿಯೇ ಸಾಕು ಎಂದು ಅನೇಕರು ತಿಳಿಯುತ್ತಾರೆ. ಆದರೆ ಕೃಪೆ-ಆಶೀರ್ವಾದವನ್ನು ಪಡೆಯುತ್ತಾ-ಪಡೆಯುತ್ತಾ ಬೀಳುತ್ತಲೇ ಇರುತ್ತಾರೆ. ಅವರು ಏನು ಕೃಪೆ ತೋರಿಸುತ್ತಾರೆ! ಅವರು ಬ್ರಹ್ಮತತ್ವವನ್ನೇ ನೆನಪು ಮಾಡುತ್ತಾರೆ. ಈ ರೀತಿ ಮಾಡಿ ಎಂದು ತಂದೆಯಂತೂ ಸ್ಪಷ್ಟವಾದ ಮಾತನ್ನು ತಿಳಿಸುತ್ತಾರೆ.

ಅಶರೀರಿಯಾಗಿ ಹೋಗಬೇಕೆಂದು ಹಾಡುತ್ತಾರೆ - ಈ ಗಾಯನವೂ ಸಹ ಈ ಸಮಯದ್ದಾಗಿದೆ. ತಂದೆಯ ಮಹಾವಾಕ್ಯಗಳು ಭಕ್ತಿಯಲ್ಲಿ ಕೆಲಸಕ್ಕೆ ಬರುತ್ತವೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶ ಆಗುತ್ತದೆ. ತಂದೆಯು ಶ್ರೀಮತ ಕೊಡುತ್ತಾರೆ. ಇದೂ ಸಹ ನಾಟಕದಲ್ಲಿ ಅವರ ಪಾತ್ರವಿದೆ. ಅದನ್ನೇ ಸಹಯೋಗವೆಂದು ಹೇಳಿ, ನಾಟಕದನುಸಾರ ಶ್ರೀಮತ ಗಾಯನ ಮಾಡಲ್ಪಟ್ಟಿದೆ. ತಂದೆಯು ಮತ ನೀಡಬೇಕಾಗಿದೆ, ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ತಂದೆಯು ತಿಳಿಸುತ್ತಾರೆ. ಕೇವಲ ಸಹಾಯ ಮಾಡಿದರೆ ಕರ್ಮಾತೀತ ಸ್ಥಿತಿಯಲ್ಲಿ ಹೊರಟು ಹೋಗಿ ಬಿಡುತ್ತೀರೆಂದಲ್ಲ. ಇದರಲ್ಲಿ ಸಮಯ ಹಿಡಿಸುತ್ತದೆ ಬಹಳ ಶ್ರಮ ಪಡಬೇಕಾಗುತ್ತದೆ. ತಮ್ಮನ್ನು ಆತ್ಮನೆಂದು ತಿಳಿಯುವ ಬಹಳ ಅಭ್ಯಾಸ ಮಾಡಬೇಕಾಗಿದೆ. ವಾಸ್ತವದಲ್ಲಿ ಮಾತೆಯರಿಗೆ ಬಹಳ ಸಮಯ ಸಿಗುತ್ತದೆ ಪುರುಷರಿಗಂತೂ ತಮ್ಮ ಉದ್ಯೋಗ-ವ್ಯವಹಾರದ ಚಿಂತೆಯಿರುತ್ತದೆ. ತಾವು ಮಕ್ಕಳು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಲಾಟರಿಯನ್ನು ತೆಗೆದುಕೊಳ್ಳಬೇಕು ಅಂದರೆ ನೆನಪಿನಿಂದ ಪೂರ್ಣ ತುಕ್ಕು ಬಿಟ್ಟು ಹೋಗಬೇಕು. ಇಂತಹವರು ಒಳ್ಳೆಯ ಪುರುಷಾರ್ಥಿಯಾಗಿದ್ದಾರೆ, ಚಾರ್ಟ್ ಇಡುತ್ತಾರೆಂದು ಭಾಸವಾಗುತ್ತದೆ. ಹೇಗೆ ಭಕ್ತಿಯಲ್ಲಿ 2-3 ಗಂಟೆಗಳ ಕಾಲವೂ ಕುಳಿತು ಬಿಡುತ್ತಾರೆ. ವಾನಪ್ರಸ್ಥಿಗಳು, ಗುರುಗಳು ಮೊದಲಾದವರನ್ನು ಮಾಡಿಕೊಳ್ಳುತ್ತಾರೆ ಆದರೆ ಅವರನ್ನೂ ಸಹ ಎಷ್ಟು ದೇವತೆಗಳನ್ನು ನೆನಪು ಮಾಡುತ್ತಾರೋ ಅಷ್ಟು ನೆನಪು ಮಾಡುವುದಿಲ್ಲ, ವಾಸ್ತವದಲ್ಲಿ ದೇವತೆಗಳನ್ನು ನೆನಪು ಮಾಡಬೇಕಾಗಿಲ್ಲ ಏಕೆಂದರೆ ದೇವತೆಗಳು ಎಂದೂ ಕಲಿಸಿ ಕೊಡುವುದಿಲ್ಲ.

ನೀವು ಮಕ್ಕಳಿಗಾಗಿ ಹೊಸ ಮಾತು ಯಾವುದೂ ಇಲ್ಲ ಅಥವಾ ಲಕ್ಷಾಂತರ ವರ್ಷಗಳ ಮಾತೂ ಸಹ ಇಲ್ಲ. ಯಾವಾಗ ಸ್ಥಾಪನೆ ಮತ್ತು ವಿನಾಶದ ಕಾರ್ಯವಿರುತ್ತದೆಯೋ ಆಗಲೇ ತಂದೆಯು ಬರುತ್ತಾರೆ. ಈ ವಿನಾಶವು ಕಲ್ಪದ ಹಿಂದೆಯೂ ಆಗಿತ್ತು ಮತ್ತು ಕಲ್ಪ-ಕಲ್ಪವೂ ಆಗುತ್ತದೆಯೆಂದು ಮಕ್ಕಳೂ ತಿಳಿದುಕೊಂಡಿದ್ದೀರಿ ಹಾಗೂ ಬರೆಯುತ್ತಲೂ ಇರುತ್ತೀರಿ - ಇದು 5000 ವರ್ಷಗಳ ಹಿಂದೆಯೂ ಆಗಿತ್ತು. ತಂದೆಯು ತಮ್ಮೊಂದಿಗೆ ಮಿಲನ ಮಾಡುವ ಯಾವ ಮಾರ್ಗವನ್ನು ತಿಳಿಸುತ್ತಾರೆಯೋ ಇದು ಹೊಸ ಮಾತೇನಲ್ಲ. ನಾನು ಕಲ್ಪ-ಕಲ್ಪವು ಬಂದು ಮಾರ್ಗವನ್ನು ತಿಳಿಸುತ್ತೇನೆ ಎಂದು ತಂದೆಯು ಹೇಳುತ್ತಾರೆ. ನಮ್ಮ ರಾಜ್ಯದ ಸ್ಥಾಪನೆ ಆಗುತ್ತಿದೆ ಎಂದು ತಾವು ಮಕ್ಕಳಿಗೂ ಸಹ ತಿಳಿದಿದೆ. ಯಾವ ದೇವತೆಗಳ ಪೂಜೆ ಮಾಡುವರೋ ಅವರ ರಾಜ್ಯ ಮತ್ತೆ ಸ್ಥಾಪನೆ ಆಗುತ್ತಿದೆ. ಇದು 5000 ವರ್ಷಗಳ ಚಕ್ರವಾಗಿದೆ. ಸುತ್ತುತ್ತಲೇ ಇರುತ್ತದೆ. ಮನುಷ್ಯರು ದುಃಖಿಗಳಾಗಿ ಬಿಡುತ್ತಾರೆ. ಎಲ್ಲರೂ ಮಾಯೆಯ ಮತದಂತೆ ನಡೆಯುತ್ತಿದ್ದಾರೆ. ರಾವಣನನ್ನು ಏಕೆ ಸುಡುತ್ತಾರೆ ಎಂಬ ಅರ್ಥವನ್ನು ತಿಳಿದುಕೊಂಡಿಲ್ಲ. ನಿಮ್ಮ ಹೆಸರೇ ಸ್ವದರ್ಶನ ಚಕ್ರಧಾರಿಗಳು ಆಗಿದೆ. ಗುರಿ-ಧ್ಯೇಯವೂ ಇದೆ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದನ್ನು ಆತ್ಮಕ್ಕೆ ನೀಡಿದ್ದಾರೆ. ನಾಟಕದ ಚಕ್ರವು ಪೂರ್ಣ ಆದಾಗಲೇ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ತಂದೆಯು ಬಂದು ಈ ಕರ್ಮವನ್ನು ಕಲಿಸುತ್ತಾರೆ ನಂತರ ವಾಮ ಮಾರ್ಗದಲ್ಲಿ ಹೋಗುವುದರಿಂದಲೇ ರಾತ್ರಿಯು ಪ್ರಾರಂಭವಾಗುತ್ತದೆ. ಮತ್ತೆ ನಾವು ಕೆಳಗೆ ಇಳಿಯುತ್ತಲೇ ಬರುತ್ತೇವೆ. ಸುಖವು ಕಡಿಮೆ ಆಗುತ್ತಾ ಹೋಗುತ್ತದೆ. ಹೇಗೆ ಇಡೀ ಚಕ್ರವು ತಂದೆಯ ಬುದ್ಧಿಯಲ್ಲಿ ಇದೆಯೋ ಅದೇ ರೀತಿ ನಿಮ್ಮ ಬುದ್ಧಿಯಲ್ಲಿ ಇದೆ. ಆದರೆ ತಾವು ಪಾವನರಾಗಲು ಪರಿಶ್ರಮ ಪಡಬೇಕಾಗುತ್ತದೆ. ಬಾಬಾ ನಾವು ಪತಿತರನ್ನು ಬಂದು ಪಾವನ ಮಾಡಿ ಎಂದು ಕರೆಯುತ್ತೀರಿ ಮತ್ತೆ ಜ್ಞಾನವೂ ಸಹ ಬೇಕು ಮನುಷ್ಯರಿಂದ ದೇವತೆಗಳಾಗಬೇಕು. ತಂದೆಯು ಮಕ್ಕಳಿಗೆ ರಾಜಯೋಗವನ್ನು ಕಲಿಸಲು ಬರುತ್ತಾರೆ. ಬೇರೆ ಯಾರಿಗೂ ಸಹ ಕಲಿಸಲು ಬರುವುದಿಲ್ಲ. ಬಾಬಾ ನಮ್ಮನ್ನು ಪಾವನ ಮಾಡಿ ಎಂದು ಪತಿತ ಪಾವನ ತಂದೆಯನ್ನು ಕರೆಯುತ್ತಾರೆ. ಈಗ ತಾವು ಪುಣ್ಯಾತ್ಮರಾಗುತ್ತಿದ್ದೀರಿ. ವಿಶ್ವದ ಇತಿಹಾಸ, ಭೂಗೋಳವು ಮತ್ತೆ ಪುನರಾವರ್ತನೆ ಆಗುತ್ತಿದೆ. ಎಷ್ಟು ಗುಹ್ಯ ಮಾತುಗಳಾಗಿವೆ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ. ಆತ್ಮ ಏನಾಗಿದೆ, ಹೇಗಿದೆ ಅದರ ಪಾತ್ರವು ಹೇಗಿದೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಆಶ್ಚರ್ಯವೇನೆಂದರೆ ಇಷ್ಟು ಸೂಕ್ಷ್ಮ ಆತ್ಮನಲ್ಲಿ ಎಂತೆಂತಹ ಪಾತ್ರ ತುಂಬಲ್ಪಟ್ಟಿದೆ. ಇದನ್ನು ಕೇಳುತ್ತಿದ್ದಂತೆಯೇ ರೋಮಾಂಚನವಾಗಿ ನಿಂತು ಬಿಡುತ್ತಾರೆ. ಕೆಲವರಿಗೆ ಆತ್ಮದ ಸಾಕ್ಷಾತ್ಕಾರವೂ ಆಗುತ್ತದೆ. ಆತ್ಮದ ಪ್ರಕಾಶದ ರೂಪವು ಕಾಣಿಸುತ್ತದೆ. ಅದರಿಂದ ಆಗುವ ಲಾಭವಾದರೂ ಏನು? ಇಲ್ಲಂತೂ ಸಾಕ್ಷಾತ್ಕಾರವಾಯಿತು, ಮುಕ್ತಿಯನ್ನು ಪಡೆದೆವು, ಪಾಪಗಳು ಭಸ್ಮವಾಯಿತು ಎಂದು ಮನುಷ್ಯರು ತಿಳಿಯುತ್ತಾರೆ. ಆದರೆ ಈ ರೀತಿ ತಿಳಿಯುವುದು ಎಂದರೆ ಇನ್ನೂ ಮೋಸದಲ್ಲಿ ಉಳಿದುಕೊಳ್ಳುತ್ತಾರೆ ಎಂದರ್ಥ. ತಂದೆಯಂತೂ ಪ್ರತಿಯೊಂದು ಮಾತನ್ನು ತಿಳಿಸುತ್ತಿರುತ್ತಾರೆ. ನಿಮಗೆ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ನಿಮ್ಮ ಬುದ್ಧಿಯಲ್ಲಿ ಪೂರ್ಣ ಚಕ್ರದ ಜ್ಞಾನವಿದೆ. ತಂದೆಯನ್ನು, ಚಕ್ರವನ್ನು ನೆನಪು ಮಾಡಿದರೆ ಸಾಕು ಎಂದು ಹೇಳುತ್ತಾರೆ. ಶಿಕ್ಷಕರನ್ನು ನೆನಪು ಮಾಡಬೇಕು, ಜ್ಞಾನವನ್ನೂ ನೆನಪು ಮಾಡಬೇಕು, ನೆನಪು ಮಾಡುತ್ತಾ-ಮಾಡುತ್ತಾ ಡ್ರಾಮಾನುಸಾರ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೀರಿ. ಹೇಗೆ ಅಶರೀರಿ ಆಗಿ ಬಂದಿದ್ದೀರೋ ಹಾಗೆಯೇ ಅಶರೀರಿ ಆಗಿ ಹೋಗಬೇಕಾಗಿದೆ. ನೀವು ದೈವೀ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ. ಅಲ್ಲಿ ಯಾವುದೇ ಜ್ಞಾನ ಇರುವುದಿಲ್ಲ. ಇದಕ್ಕೆ ಸಹಜವಾದ ನೆನಪು ಎಂದು ಹೇಳಲಾಗುತ್ತದೆ. ಯೋಗ ಶಬ್ದದಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಅವರು ಹಠಯೋಗಿಗಳಾಗಿದ್ದಾರೆ. ಸಹಜಯೋಗವನ್ನಂತೂ ತಂದೆಯೇ ಕಲಿಸುತ್ತಾರೆ. ಗೀತೆಯ ಭಗವಂತನು ಸಹಜಯೋಗವನ್ನು ಕಲಿಸಿದ್ದರು ಎಂದು ಮೊದಲು ಕೇಳುತ್ತಿದ್ದೆವು ಆದರೆ ಅವರನ್ನು ತಿಳಿದುಕೊಂಡಿರಲಿಲ್ಲ. 100% ತಪ್ಪು ತಿಳುವಳಿಕೆ ಮಾಡಿ ಬಿಟ್ಟಿದ್ದಾರೆ, ಇದರಿಂದ ಮನುಷ್ಯರು ಪತಿತರಾಗಿ ಬಿಟ್ಟಿದ್ದಾರೆ. ಅನೇಕ ಮತಗಳಿವೆ. ಯಾರು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾರೋ ಅವರಿಗಾಗಿಯೇ ಗೀತಾ ಶಾಸ್ತ್ರವಿದೆ, ತಾವು ಪ್ರವೃತ್ತಿ ಮಾರ್ಗದವರಾಗಿದ್ದೀರಿ, ಮೊದಲು ತಮ್ಮದು ಪವಿತ್ರ ಪ್ರವೃತ್ತಿ ಮಾರ್ಗವಾಗಿತ್ತು. ಈಗ ಅಪವಿತ್ರವಾಗಿ ಬಿಟ್ಟಿದೆ. ಈಗ ಮತ್ತೆ ಪವಿತ್ರವಾಗಬೇಕಾಗಿದೆ. ತಂದೆಯಂತೂ ಸದಾ ಪಾವನರಾಗಿದ್ದಾರೆ. ಅವರು ಶ್ರೀಮತವನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಮೊದಲು ಸತೋಪ್ರಧಾನರಾಗಿದ್ದರು. ಹೇಗೆ ನಾವೂ ಸಹ ಮೊದಲು ಸತೋಪ್ರಧಾನರಾಗಿದ್ದೆವೋ ನಂತರ ತಮೋಪ್ರಧಾನರಾದೆವು. ಯಾರೆಲ್ಲಾ ಪೋಪ್ ಫಾದರಿ ಮೊದಲಾದವರು ಬರುತ್ತಾರೆಯೋ ಅವರು ಮೊದಲು ಸತೋಪ್ರಧಾನರಿರುತ್ತಾರೆ ನಂತರ ಇದು ವೃದ್ಧಿ ಆಗುತ್ತಾ ಇಡೀ ವೃಕ್ಷವೇ ತಮೋಪ್ರಧಾನವಾಗಿ ಬಿಡುತ್ತದೆ. ಈಗಂತೂ ಜಡಜಡೀಭೂತ ಅವಸ್ಥೆಯಲ್ಲಿದೆ. ನೀವು ಮಕ್ಕಳು ತಿಳಿಯುತ್ತೀರಿ ನಾವೇ ಸತೋಪ್ರಧಾನರಾಗಿದ್ದೆವು ನಂತರ ನಾವೇ ತಮೋಪ್ರಧಾನರಾಗುತ್ತೇವೆ ಮತ್ತೆ ಸತೋಪ್ರಧಾನರಾಗಬೇಕಾಗುತ್ತದೆ. ನಂಬರ್ವಾರ್ ಆಗುತ್ತಾ ಹೋಗುತ್ತಾರೆ. ಡ್ರಾಮಾನುಸಾರ ವಿಸ್ತಾರವಂತೂ ಬಹಳ ಇದೆ. ಹೇಗೆ ಬೀಜವಿರುತ್ತದೆಯೋ ಎಂತಹ ವೃಕ್ಷ ಬರುತ್ತದೆ ಎಂದು ಅದಕ್ಕೆ ಗೊತ್ತಿರುತ್ತದೆ. ಈ ಮನುಷ್ಯ ಸೃಷ್ಟಿಯ ರಹಸ್ಯವನ್ನೂ ಸಹ ತಂದೆಯೇ ತಿಳಿಸುತ್ತಾರೆ, ಮಾಲಿಯೂ ಅವರೇ ಆಗಿದ್ದರೆ, ಅವರಿಗೆ ನಮ್ಮ ತೋಟವೂ ಎಷ್ಟು ಸುಂದರವಾಗಿತ್ತು ಎಂದು ಗೊತ್ತಿತ್ತು. ತಂದೆಗಂತೂ ಇದರ ಜ್ಞಾನವಿದೆಯಲ್ಲವೇ. ಎಷ್ಟು ಸುಂದರವಾದ ಈಶ್ವರನ ಹೂದೋಟವಾಗಿತ್ತು, ಈಗಂತೂ ಸೈತಾನನ ತೋಟವಾಗಿ ಬಿಟ್ಟಿದೆ. ಸೈತಾನ ಎಂದು ರಾವಣ ರಾಜ್ಯಕ್ಕೆ ಹೇಳಲಾಗುತ್ತದೆ. ಎಲ್ಲಿ ನೋಡಿದರಲ್ಲಿ ಹೊಡೆದಾಟಗಳೇ ಇದೆ, ಈಗ ಬಾಕಿ ಈ ಆಟಾಮಿಕ್ ಬಾಂಬುಗಳು ಉಳಿದಿದೆ ಅದನ್ನೂ ಸಹ ತಯಾರು ಮಾಡಿ ಇಟ್ಟುಕೊಂಡಿದ್ದಾರೆ. ಇದನ್ನು ಸುಮ್ಮನೆ ಇಡಲು ಮಾಡಿಲ್ಲ. ಇದರಿಂದ ಅವಶ್ಯವಾಗಿ ವಿನಾಶ ಆಗಲಿದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದುವೇಳೆ ವಿನಾಶ ಆಗದಿದ್ದರೆ ಸತ್ಯಯುಗವು ಹೇಗೆ ಬರುತ್ತದೆ? ಇದಂತೂ ಸಂಪೂರ್ಣ ಸ್ಪಷ್ಟವಾಗಿದೆ. ಮಹಾಭಾರಿ ಮಹಾಭಾರತ ಯುದ್ಧವಾಯಿತು. 5 ಜನ ಪಾಂಡವರು ಉಳಿದುಕೊಂಡರು ಅವರೂ ಸಹ ಕರಗಿ ಹೋದರೆಂದು ಭಲೆ ತೋರಿಸುತ್ತಾರೆ. ಆದರೆ ಅದರ ಫಲಿತಾಂಶ ಏನೂ ಇಲ್ಲ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ತಂದೆಯು ಕುಳಿತು ತಿಳಿಸುತ್ತಾರೆ - ಭಾರತವನ್ನೇ ಲೂಟಿ ಮಾಡಿದರು ಈಗ ಮತ್ತೆ ಅದನ್ನು ಹಿಂತಿರುಗಿಸಿ ಕೊಡುತ್ತಿದ್ದಾರೆ. ಅಂತ್ಯದವರೆಗೆ ಕೊಡುತ್ತಲೇ ಇರುತ್ತಾರೆ. ಇದೂ ಸಹ ನಿಮಗೆ ಗೊತ್ತಿದೆ. ವಿನಾಶದಲ್ಲಿ ಎಲ್ಲವೂ ಸಮಾಪ್ತಿ ಆಗಿ ಬಿಡುತ್ತದೆ. ಯಾವಾಗ ನಮ್ಮ ರಾಜ್ಯವಿತ್ತೋ ಆಗ ಬೇರೆ ಯಾರದೇ ರಾಜ್ಯವಿರಲಿಲ್ಲ. ಇತಿಹಾಸವು ಮತ್ತೆ ಪುನರಾವರ್ತನೆ ಆಗುತ್ತದೆ. ಭಾರತವು ಮತ್ತೆ ಸ್ವರ್ಗವಾಗುತ್ತದೆ, ಲಕ್ಷ್ಮೀ-ನಾರಾಯಣರ ರಾಜ್ಯವಾಗುತ್ತದೆ. ಮತ್ತ್ಯಾವುದೇ ಖಂಡದ ಹೆಸರು ಅಲ್ಲಿ ಇರುವುದಿಲ್ಲ. ಈಗ ಕಲಿಯುಗದ ಅಂತ್ಯವಾಗಿದೆ. ಮತ್ತೆ ಈ ಲಕ್ಷ್ಮೀ-ನಾರಾಯಣರ ರಾಜ್ಯ ಬರುವುದು, ಮತ್ತೆ ನಾವು ಆ ರೀತಿ ಆಗುತ್ತೇವೆ. ನಾನು ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ಕಲ್ಪ-ಕಲ್ಪ ನೀವು ಅನೇಕ ಬಾರಿ ಮಾಲೀಕರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇವರದು ಇಡೀ ವಿಶ್ವದಲ್ಲಿ ರಾಜಧಾನಿ ಇತ್ತು. ಬಹಳ ಬುದ್ಧಿವಂತರಾಗಿದ್ದರು. ಅಲ್ಲಿ ಮಂತ್ರಿ ಮುಂತಾದವರಿಂದ ಸಲಹೆಯನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ಮತ್ತೆ ಪುನರಾವರ್ತನೆ ಆಗುತ್ತದೆ. ಕೃಷ್ಣನ ಮಂದಿರಕ್ಕೆ ಸುಖಧಾಮವೆಂದು ಹೇಳುತ್ತಾರೆ, ಶಿವ ತಂದೆಯೇ ಬಂದು ಸುಖಧಾಮದ ಸ್ಥಾಪನೆ ಮಾಡುತ್ತಾರೆ. ಕ್ರೈಸ್ತನಿಗೆ 3000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು ಎಂದು ಅವರು ಸ್ವತಃ ಹೇಳುತ್ತಾರೆ. ಮೊದಲು ಒಂದು ಧರ್ಮವಿತ್ತು ನಂತರ ಬೇರೆ ಧರ್ಮಗಳು ಬಂದವು ಅಂದಮೇಲೆ ನಮಗೆ ತಂದೆಯು ಹೇಗೆ ರಾಜ್ಯಭಾಗ್ಯವನ್ನು ಕೊಡುತ್ತಾರೆ ಎಂದು ಮಕ್ಕಳಿಗೆ ಆಶ್ಚರ್ಯವಾಗಬೇಕು. ತಂದೆಯು ಬಂದು ಭಕ್ತಿಯ ಫಲವನ್ನು ನೀಡುತ್ತಾರೆ. ಇದು ಎಷ್ಟು ಸಹಜವಾಗಿದೆ ಆದರೆ ಇದನ್ನು ತಿಳಿಯುವುದೂ ಸಹ ಯಾರು ಕಲ್ಪದ ಹಿಂದೆ ತಿಳಿದಿದ್ದಾರೋ ಅವರೇ ತಿಳಿಯುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರವಾಗಿ ತಿಳಿಯುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸ್ವದರ್ಶನ ಚಕ್ರವನ್ನು ಧಾರಣೆ ಮಾಡಿ ತಮ್ಮ ಪಾಪಗಳನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. ಕರ್ಮೇಂದ್ರಿಯಗಳಿಂದ ಯಾವುದೇ ಪಾಪ ಕರ್ಮಗಳು ಆಗದಂತೆ ಸಂಭಾಲನೆ ಮಾಡಿಕೊಳ್ಳಿ. ಸ್ವಯಂ ಕರ್ಮಾತೀತರಾಗುವ ಪರಿಶ್ರಮ ಪಡಿ.

2. ಸಾಕ್ಷಾತ್ಕಾರದ ಆಸೆಯನ್ನು ಇಟ್ಟುಕೊಳ್ಳಬಾರದು, ಸಾಕ್ಷಾತ್ಕಾರವನ್ನು ನೋಡುವುದರಿಂದ ಮುಕ್ತಿಯು ಸಿಗುವುದಿಲ್ಲ, ಪಾಪ ಪರಿಹಾರ ಆಗುವುದಿಲ್ಲ, ಸಾಕ್ಷಾತ್ಕಾರದಿಂದ ಯಾವುದೇ ಲಾಭವಿಲ್ಲ. ತಂದೆ ಮತ್ತು ಜ್ಞಾನವನ್ನು ನೆನಪು ಮಾಡುವುದರಿಂದ ತುಕ್ಕು ಬಿಡುತ್ತದೆ.
 

ವರದಾನ:
ಸ್ವಯಂನ್ನು ನಿಮಿತ್ತ ಎಂದು ತಿಳಿದು ವ್ಯರ್ಥ ಸಂಕಲ್ಪ ಹಾಗೂ ವ್ಯರ್ಥ ವೃತ್ತಿಯಿಂದ ಮುಕ್ತವಾಗಿರುವಂತಹ ವಿಶ್ವ ಕಲ್ಯಾಣಕಾರಿ ಭವ.

ನಾನು ವಿಶ್ವ ಕಲ್ಯಾಣ ಕಾರ್ಯಾರ್ಥವಾಗಿ ನಿಮಿತ್ತನಾಗಿದ್ದೇನೆ - ಈ ಜವಾಬ್ದಾರಿಯ ಸ್ಮತಿಯಲ್ಲಿದ್ದಾಗ ಎಂದೂ ಯಾರ ಪ್ರತಿಯೂ ಸಹಾ ವ್ಯರ್ಥ ಸಂಕಲ್ಪ ಅಥವಾ ವ್ಯರ್ಥ ವೃತ್ತಿ ಬರಲು ಸಾಧ್ಯವಿಲ್ಲ. ಜವಾಬ್ದಾರಿಯುಳ್ಳ ಆತ್ಮರು ಒಂದೂ ಸಹಾ ಅಕಲ್ಯಾಣಕಾರಿ ಸಂಕಲ್ಪ ಮಾಡಲು ಸಾಧ್ಯವಿಲ್ಲ. ಒಂದು ಸೆಕೆಂಡ್ ಸಹ ವ್ಯರ್ಥ ವೃತ್ತಿ ವೃತ್ತಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರ ವೃತ್ತಿಯಿಂದ ವಾಯುಮಂಡಲದ ಪರಿವರ್ತನೆ ಆಗಬೇಕು. ಆದ್ದರಿಂದ ಸರ್ವರ ಪ್ರತಿ ಅವರ ಶುಭಭಾವನೆ, ಶುಭಕಾಮನೆ ಸ್ವತಃವಾಗಿ ಇರುವುದು.

ಸ್ಲೋಗನ್:
ಅಜ್ಞಾನದ ಶಕ್ತಿ ಕ್ರೋಧವಾಗಿದೆ ಮತ್ತು ಜ್ಞಾನದ ಶಕ್ತಿ ಶಾಂತಿಯಾಗಿದೆ.