12.06.21    Avyakt Bapdada     Kannada Murli    03.04.91     Om Shanti     Madhuban


ಸರ್ವ ಹದ್ದುಗಳಿಂದ ಹೊರ ಬಂದು ಬೇಹದ್ದಿನ ವೈರಾಗಿ ಆಗಿ


ಇಂದು ಕಲ್ಪದ ನಂತರ ಮತ್ತೆ ಮಿಲನ ಮಾಡಲು ಎಲ್ಲಾ ಮಕ್ಕಳು ತಮ್ಮ ಮಧುರ ಮನೆ ಮಧುಬನಕ್ಕೆ ಬಂದು ತಲುಪಿದ್ದೀರಿ. ಸಾಕಾರಿ ವತನದ ಮಧುರ ಮನೆ ಮಧುಬನವೇಯಾಗಿದೆ ಎಲ್ಲಿ ತಂದೆ ಮತ್ತು ಮಕ್ಕಳು ಅತ್ಮಿಕ ಮಿಲನ ಮಾಡುತ್ತಾರೆ. ಮಿಲನದ ಮೇಳವಾಗುತ್ತದೆ. ಅಂದಾಗ ಎಲ್ಲಾ ಮಕ್ಕಳು ಮಿಲನದ ಮೇಳೆಯಲ್ಲಿ ಬಂದಿದ್ದೀರಿ. ಇದು ತಂದೆ ಮತ್ತು ಮಕ್ಕಳ ಮಿಲನದ ಮೇಳೆ ಕೇವಲ ಸಂಗಮಯುಗದಲ್ಲಿ ಮತ್ತೆ ಮಧುಬನದಲ್ಲಿಯೇ ಆಗುತ್ತದೆ. ಆದ್ದರಿಂದ ಎಲ್ಲರು ಓಡಿ ಮಧುಬನಕ್ಕೆ ತಲುಪಿದ್ದೀರಿ. ಮಧುಬನದಲ್ಲಿ ಬಾಪ್ದಾದಾರವರು ಸಾಕಾರ ರೂಪದಲ್ಲಿ ಮಿಲನ ಮಾಡಿಸುತ್ತಾರೆ ಮತ್ತೆ ಜೊತೆ-ಜೊತೆ ಸಹ ನೆನಪಿನ ಮುಖಾಂತರ ಅವ್ಯಕ್ತ ಮಿಲನವೂ ಮಾಡಿಸುತ್ತಾರೆ ಏಕೆಂದರೆ ಮಧುಬನದ ಧರಣಿ ಆತ್ಮಿಕ ಮಿಲನ ಮಾಡುವಂತಹದ್ದು, ಸಾಕಾರ ರೂಪದಲ್ಲಿ ಮಿಲನದ ಅನುಭೂತಿ ಮಾಡುವಂತಹ ವರದಾನ ಸಿಕ್ಕಿದೆ. ವರದಾನಿ ಭೂಮಿ ಆಗಿರುವ ಕಾರಣ ಸಹಜವಾಗಿ ಮಿಲನದ ಅನುಭವವನ್ನು ಮಾಡುತ್ತೀರಿ. ಮತ್ತೆ ಯಾವುದೇ ಸ್ಥಾನದಲ್ಲಿ ಜ್ಞಾನಸಾಗರ ಮತ್ತು ಜ್ಞಾನನದಿಗಳ ಮಿಲನದ ಮೇಳ ಆಗುವುದಿಲ್ಲ. ಸಾಗರ ಮತ್ತು ನದಿಗಳ ಮಿಲನದ ಮೇಳ ಈ ಒಂದೇ ಸ್ಥಾನದಲ್ಲಿ ಆಗುತ್ತದೆ. ಅಂತಹ ಮಹಾನ್ ವರದಾನಿ ಧರಣಿಗೆ ಬಂದಿದ್ದೀರೆಂದು ತಿಳಿದಿದ್ದೀರಾ?

ತಪಸ್ಯಾ ವರ್ಷದಲ್ಲಿ ವಿಶೇಷವಾಗಿ ಈ ಕಲ್ಪದಲ್ಲಿ ಮೊದಲನೇ ಬಾರಿ ಮಿಲನ ಮಾಡುವ ಮಕ್ಕಳಿಗೆ ಗೋಲ್ಡೆನ್ ಚಾನ್ಸ್ (ಸ್ವರ್ಣಿಮ ಅವಕಾಶ) ಸಿಕ್ಕಿದೆ. ಎಷ್ಟು ಅದೃಷ್ಟವಂತರು? ತಪಸ್ಸಿನ ಆದಿಯಲ್ಲೇ ಹೊಸ ಮಕ್ಕಳಿಗೆ ಅಧಿಕ ಬಲ ಸಿಕ್ಕಿದೆ. ಅಂದಾಗ ಆದಿಯಲ್ಲೇ ಈ ಅಧಿಕ ಬಲ ಮುಂದೆ ಭವಿಷ್ಯದಲ್ಲಿ ಮುಂದೆವರೆಯಲು ಸಹಯೋಗಿ ಆಗುತ್ತದೆ. ಆದ್ದರಿಂದ ಹೊಸ ಮಕ್ಕಳಿಗೆ ಡ್ರಾಮಾನೂ ಸಹ ಮುಂದೆವರೆಯಲು ಸಹಯೋಗ ಕೊಟ್ಟಿದೆ. ಅದ್ದರಿಂದ ನಾವು ಹಿಂದೆ ಬಂದಿದ್ದೇವೆ ಎಂದು ದೂರು ಹೇಳಲು ಸಾಧ್ಯವಿಲ್ಲ, ತಪಸ್ಯಾ ವರ್ಷದ ವರದಾನವೂ ಸಹ ಸಿಕ್ಕಿದೆ. ತಪಸ್ಯಾ ವರ್ಷದಲ್ಲಿ ವರದಾನಿ ಭೂಮಿಗೆ ಬರುವಂತಹ ಅಧಿಕಾರ, ಅವಕಾಶ ಸಿಕ್ಕಿದೆ. ಈ ಅಧಿಕ ಭಾಗ್ಯ ಕಡಿಮೆ ಅಲ್ಲ. ಈ ವರ್ಷದ, ಮಧುಬನದ ಮತ್ತೆ ಸ್ವಯಂ ಪುರುಷಾರ್ಥದ ಮೂರೂ ವರದಾನಗಳು ವಿಶೇಷವಾಗಿ ಹೊಸ ಮಕ್ಕಳಿಗೆ ಸಿಕ್ಕಿದೆ. ಅಂದಾಗ ಎಷ್ಟು ಅದೃಷ್ಟವಂತರಾಗಿದ್ದೀರಿ. ಇಷ್ಟು ಅವಿನಾಶಿ ಭಾಗ್ಯದ ನಶೆ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಕೇವಲ ಇಲ್ಲಿಯವರೆಗೆ ನಶೆ ಇರುವುದಲ್ಲ, ಆದರೆ ತಂದೆ ಅವಿನಾಶಿ ಆಗಿದ್ದಾರೆ, ತಾವು ಅವಿನಾಶಿ ಶ್ರೇಷ್ಠ ಆತ್ಮರಾಗಿದ್ದೀರಿ ಅಂದಾಗ ಭಾಗ್ಯವೂ ಅವಿನಾಶಿಯಾಗಿದೆ. ಅವಿನಾಶಿ ಭಾಗ್ಯವನ್ನು ಅವಿನಾಶಿಯಾಗಿ ಇಟ್ಟುಕೊಳ್ಳಬೇಕು. ಇದು ಕೇವಲ ಸಹಜ ಕೊಡುವಂತಹ ಮಾತಾಗಿದೆ. ಟೆನ್ಷನ್ ಇರುವವರಿಗೆ ಅಟೆನ್ಷನ್ (ಗಮನ) ಇರುವುದಿಲ್ಲ. ಅಟೆನ್ಷನ್ (ಗಮನ) ಸಹಜವಾಗಿರಬೇಕು, ಕಷ್ಟ ಆಗುತ್ತದೇನು? ನನ್ನಬಾಬಾ ಎಂದು ತಿಳಿದುಕೊಂಡಿದ್ದೇವೆ, ಒಪ್ಪಿಕೊಂಡಿದ್ದೇವೆ. ಅಂದಾಗ ಯಾವುದನ್ನು ತಿಳಿದುಕೊಂಡಿದ್ದೇವೆ, ಒಪ್ಪಿಕೊಂಡಿದ್ದೇವೆ, ಅನುಭವ ಮಾಡಿದ್ದೇವೆ, ಅಧಿಕಾರವನ್ನು ಪ್ರಾಪ್ತಿ ಮಾಡಿಕೊಂಡಿದ್ದೇವೆ ಅಂದಾಗ ಕಷ್ಟ ಏನಿದೆ? ಕೇವಲ ನನ್ನ ಬಾಬಾ ಎನ್ನುವುದು ಒಂದೇ ಅನುಭವ ಮಾಡುತ್ತಾ ಇರಬೇಕು. ಇದೇ ಪೂರ್ತಿ ಜ್ಞಾನವಾಗಿದೆ.

ಒಂದು ಬಾಬಾ ಶಬ್ದದಲ್ಲಿ ಪೂರ್ತಿ ಆದಿ-ಮಧ್ಯ-ಅಂತ್ಯದ ಜ್ಞಾನ ಸಮಾವೇಶವಾಗಿದೆ ಏಕೆಂದರೆ ಬೀಜ ಆಗಿದ್ದಾರಲ್ಲವೇ. ಸದಾ ಸಹಜವಾಗಿಯಲ್ಲವೇ. ಕೆಲವೊಮ್ಮೆ ಸಹಜ, ಕೆಲವೊಮ್ಮೆ ಕಷ್ಟವಾಗಿರಬಾರದು. ಸದಾ ಬಾಬಾ ನನ್ನವರಾಗಿದ್ದಾರೆಯೋ ಅಥವಾ ಕೆಲವೊಮ್ಮೆ ಆಗಿದ್ದಾರೆಯೇ? ಯಾವಾಗ ಸದಾ ಬಾಬಾ ನನ್ನವರು ಅಂದಮೇಲೆ ನೆನಪೂ ಸಹ ಸದಾ ಸಹಜವಾಗಿರಬೇಕು. ಯಾವುದೇ ಕಷ್ಟದ ಮಾತಿಲ್ಲ. ಭಗವಂತ ನನ್ನವರು ಎಂದು ಹೇಳಿದ್ದಾರೆ ಮತ್ತೆ ತಾವು ನನ್ನವರು ಎಂದು ಹೇಳಿದ್ದೀರಿ. ಮತ್ತೆ ಏನು ಕಷ್ಟವಿದೆ? ಆದ್ದರಿಂದ ವಿಶೇಷವಾಗಿ ಹೊಸ ಮಕ್ಕಳು ಇನ್ನೂ ಮುಂದೆವರೆಯಬೇಕು. ಈಗಲೂ ಸಹ ಮುಂದೆ ಹೋಗಲು ಅವಕಾಶವಿದೆ. ಈಗ ಅಂತ್ಯದ ಸಮಾಪ್ತಿಯ ಗಂಟೆ ಬಾರಿಸಲಿಲ್ಲ. ಆದ್ದರಿಂದ ಹಾರುತ್ತಾ ಇರಿ ಮತ್ತೆ ಅನ್ಯರನ್ನು ಹಾರಿಸುತ್ತಾ ಇರಿ. ಇದಕ್ಕೆ ವಿಧಿಯಾಗಿದೆ - ವ್ಯರ್ಥವನ್ನು ಸಮಾಪ್ತಿ ಮಾಡುವುದು. ಜಮಾದ ಖಾತೆ ಹೆಚ್ಚಿಸಿಕೊಳ್ಳುತ್ತಾ ಹೋಗಿ ಏಕೆಂದರೆ 63 ಜನ್ಮಗಳಿಂದ ಉಳಿತಾಯ ಮಾಡಿರಲಿಲ್ಲ ಆದರೆ ಕಳೆದುಕೊಂಡಿದ್ದೇವೆ. ಎಲ್ಲಾ ಖಾತೆಗಳನ್ನು ವ್ಯರ್ಥವಾಗಿ ಕಳೆದುಕೊಂಡು ಸಮಾಪ್ತಿ ಮಾಡಿಬಿಟ್ಟಿದ್ದೇವೆ. ಶ್ವಾಸದ ಖಜಾನೆ, ಸಂಕಲ್ಪದ ಖಜಾನೆ, ಸಮಯದ ಖಜಾನೆ, ಗುಣಗಳ ಖಜಾನೆ, ಶಕ್ತಿಗಳ ಖಜಾನೆ, ಜ್ಞಾನದ ಖಜಾನೆಯನ್ನೂ ಸಹ ಕಳೆದುಕೊಂಡಿದ್ದೇವೆ. ಎಷ್ಟು ಖಾತೆ ಖಾಲಿಯಾಗಿದೆ. ಈಗ ಈ ಎಲ್ಲಾ ಖಾತೆಗಳನ್ನು ಜಮಾ ಮಾಡಿಕೊಳ್ಳಬೇಕು. ಜಮಾ ಮಾಡಿಕೊಳ್ಳುವಂತಹ ಸಮಯವೂ ಇದೇಯಾಗಿದೆ, ವಿಧಿಯೂ ಸಹ ತಂದೆಯ ಮುಖಾಂತರ ಸಹಜವಾಗಿ ಸಿಗುತ್ತಾಯಿದೆ. ವಿನಾಶಿ ಖಜಾನೆಗಳು ಖರ್ಚು ಮಾಡುವುದರಿಂದ ಕಡಿಮೆಯಾಗುತ್ತದೆ, ಮತ್ತೆ ಈ ಎಲ್ಲಾ ಖಜಾನೆಗಳು ಎಷ್ಟು ಸ್ವಯಂ ಪ್ರತಿ ಮತ್ತೆ ಅನ್ಯರ ಪ್ರತಿ ಶುಭವೃತ್ತಿಯಿಂದ ಕಾರ್ಯದಲ್ಲಿ ಉಪಯೋಗ ಮಾಡುವುದು, ಇದು ಜಮಾ ಮಾಡಿಕೊಳ್ಳುವಂತಹ ವಿಧಿಯಾಗಿದೆ. ಅಲ್ಲಿ ಇಟ್ಟುಕೊಳ್ಳುವುದು ಜಮಾ ಮಾಡಿಕೊಳ್ಳುವ ವಿಧಿಯಾಗಿದೆ, ಇಲ್ಲಿ ಉಪಯೋಗಿಸುವುದು ಜಮಾ ಮಾಡಿಕೊಳ್ಳುವ ವಿಧಿಯಾಗಿದೆ. ವ್ಯತ್ಯಾಸವಿದೆ. ಸಮಯವನ್ನು ಸ್ವಯಂ ಪ್ರತಿ ಮತ್ತೆ ಅನ್ಯರ ಪ್ರತಿ ಶುಭಕಾರ್ಯದಲ್ಲಿ ತೊಡಗಿಸುತ್ತಾ ಹೋಗಿ. ಜ್ಞಾನವನ್ನು ಕಾರ್ಯದಲ್ಲಿ ಉಪಯೋಗಿಸಿ. ಈ ರೀತಿ ಗುಣಗಳನ್ನು, ಶಕ್ತಿಗಳನ್ನು ಎಷ್ಟು ಕಾರ್ಯದಲ್ಲಿ ಉಪಯೋಗಿಸುತ್ತೀರೋ ಅಷ್ಟು ವೃದ್ಧಿಯಾಗುತ್ತದೆ. ಹೇಗೆ ಅವರು ಲಾಕರಲ್ಲಿ ಕೂಡಿಟ್ಟುಕೊಳ್ಳುತ್ತಾರೆ ಮತ್ತೆ ಬಹಳ ಜಮಾ ಆಗಿದೆ ಎಂದು ತಿಳಿದುಕೊಳ್ಳುತ್ತಾರೆ, ಅದೇ ರೀತಿ ನಾವು ನನ್ನ ಬುದ್ಧಿಯಲ್ಲಿ ಬಹಳ ಜ್ಞಾನವಿದೆ, ಗುಣಗಳು, ಶಕ್ತಿಗಳೂ ಸಹ ಬಹಳ ಇದೆ ಎಂದು ಯೋಚನೆ ಮಾಡಬಾರದು. ಬೀಗವನ್ನು ಹಾಕಿಡಬೇಡಿ, ಉಪಯೋಗ ಮಾಡಿ. ತಿಳಿದಿದೆಯೇ? ಜಮಾ ಮಾಡಿಕೊಳ್ಳುವ ವಿಧಿ ಯಾವುದು? ಕಾರ್ಯದಲ್ಲಿ ತೊಡಗುವುದು. ಸ್ವಯಂ ಪ್ರತಿ ಉಪಯೋಗ ಮಾಡಿ ಇಲ್ಲವೆಂದರೆ ಕಳೆದುಹೋಗುತ್ತದೆ. ಕೆಲವು ಮಕ್ಕಳು ನನ್ನಲ್ಲಿ ಎಲ್ಲಾ ಖಜಾನೆಗಳು ಸಮಾವೇಶವಾಗಿದೆ ಎಂದು ಹೇಳುತ್ತಾರೆ. ಆದರೆ ಸಮಾವೇಶವಾಗಿರುವ ಚಿನ್ಹೆ ಏನು? ಸಮಾವೇಶವಾಗಿದೆ ಅರ್ಥಾತ್ ಜಮಾ ಆಗಿದೆ ಎಂದರ್ಥ. ಆದ್ದರಿಂದ ಅದರ ಚಿನ್ಹೆ ಸ್ವಯಂ ಪ್ರತಿ ಮತ್ತೆ ಅನ್ಯರ ಪ್ರತಿ ಸಮಯದಲ್ಲಿ ಕೆಲಸಕ್ಕೆ ಬರಬೇಕು. ಕೆಸಕ್ಕೆ ಬರಲ್ಲ ಆದರೆ ಬಹಳ ಜಮಾ ಆಗಿದೆ ಎಂದರೆ ಯಾಥಾರ್ಥ ಜಮಾದ ವಿಧಿ ಎಂದು ಕರೆಯುವುದಿಲ್ಲ. ಆದ್ದರಿಂದ ಒಂದುವೇಳೆ ಯಥಾರ್ಥ ವಿಧಿ ಇಲ್ಲವೆಂದರೆ ಸಮಯದಲ್ಲಿ ಸಂಪೂರ್ಣತೆಯ ಸಿದ್ಧಿ ಸಿಗುವುದಿಲ್ಲ. ಮೋಸವಾಗಿಬಿಡುತ್ತದೆ, ಸಿದ್ಧಿ ಸಿಗುವುದಿಲ್ಲ.

ಗುಣಗಳನ್ನು, ಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸಿದರೆ ವೃದ್ಧಿ ಆಗುತ್ತಾ ಇರುತ್ತದೆ. ಅಂದಾಗ ಜಮಾ ಮಾಡುವ ವಿಧಿ ತಮ್ಮದನ್ನಾಗಿ ಮಾಡಿಕೊಳ್ಳಿ. ಮತ್ತೆ ವ್ಯರ್ಥದ ಖಾತೆ ಸ್ವತಹವಾಗಿಯೇ ಪರಿವರ್ತನೆಯಾಗಿ ಸಫಲ ಆಗಿಬಿಡುತ್ತದೆ. ಹೇಗೆ ಭಕ್ತಿಮಾರ್ಗದಲ್ಲಿ ನಿಯಮವಿರುತ್ತದೆ ಎಷ್ಟು ತಮ್ಮ ಹತ್ತಿರ ಸ್ಥೂಲ ಧನವಿರುತ್ತದೆ, ಅದನ್ನು ದಾನ ಮಾಡಿ, ಸಫಲ ಮಾಡಿದ್ದೇ ಆದರೆ ವೃದ್ಧಿಯಾಗುತ್ತದೆಂದು ಹೇಳುತ್ತಾರೆ. ಭಕ್ತಿಯಲ್ಲೂ ಸಹ ಸಫಲ ಮಾಡಿಕೊಳ್ಳಲು ಎಷ್ಟು ಉಮ್ಮಂಗ-ಉತ್ಸಾಹವನ್ನು ಕೊಡುತ್ತಾರೆ. ಅಂದಾಗ ತಾವೂ ಸಹ ಈ ತಪಸ್ಯಾವರ್ಷದಲ್ಲಿ ಕೇವಲ ಎಷ್ಟು ವ್ಯರ್ಥವಾಗಿ ಹೋಗಿದೆ? ಎಂದು ಪರಿಶೀಲನೆ ಮಾಡಿಕೊಳ್ಳುವುದಲ್ಲ. ವ್ಯರ್ಥವಾಗಿ ಹೋದರೆ ಅದು ಬೇರೆ ಮಾತಾಗಿದೆ ಆದರೆ ಎಷ್ಟು ಸಫಲ ಮಾಡಿಕೊಂಡಿದ್ದೇವೆಂದು ಚೆಕ್ (ಪರಿಶೀಲನೆ) ಮಾಡಿಕೊಳ್ಳಬೇಕು. ಏನೆಲ್ಲಾ ಖಜಾನೆಗಳನ್ನು ಮುಂಚೆ ತಿಳಿಸಿದ್ದಾರೆಯೋ ಅವೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು. ಗುಣಗಳೂ ಸಹ ಪ್ರಭುವಿನ ಊಡುಗೊರೆಯಾಗಿದೆ. ಇದು ನನ್ನ ಗುಣ, ನನ್ನ ಶಕ್ತಿಯಾಗಿದೆ ಎನ್ನುವುದು ಸ್ವಪ್ನದಲ್ಲೂ ಯೋಚನೆ ಮಾಡಬಾರದು. ಯಾವುದು ತಂದೆಯ, ಪ್ರಭುವಿನ, ಪರಮಾತ್ಮನ ಊಡುಗೊರೆಯಾಗಿದೆ ಅದು ನನ್ನದು ಎಂದು ತಿಳಿದುಕೊಳ್ಳುವುದು ಮಹಾಪಾಪವಾಗಿದೆ. ಕೆಲವೊಮ್ಮೆ ಕೆಲವು ಮಕ್ಕಳು ಸಾಧಾರಣ ಭಾಷೆಯಲ್ಲಿ ನನ್ನ ಗುಣವನ್ನು ಉಪಯೋಗಿಸುವುದಿಲ್ಲ, ನನ್ನ ಈ ಶಕ್ತಿಯಿದೆ, ನನ್ನ ಬುದ್ಧಿ ಬಹಳ ಚೆನ್ನಾಗಿದೆ, ಇದನ್ನು ಉಪಯೋಗಿಸುವುದಿಲ್ಲ ಎಂದು ಹೇಳುತ್ತಾರೆ. ನನ್ನದು ಎನ್ನುವುದು ಎಲ್ಲಿಂದ ಬಂದಿದೆ? ನನ್ನದು ಎಂದು ಹೇಳಿದಾಗ ಮೈಲವಾಗಿಬಿಡುತ್ತದೆ. ಭಕ್ತಿಯಲ್ಲೂ ಸಹ 63 ಜನ್ಮಗಳಿಂದ ನನ್ನದು ಎಂದು ತಿಳಿಯಬೇಡಿ, ನಿಮ್ಮದು ಎಂದು ತಿಳಿಯಬೇಕೆಂದು ಶಿಕ್ಷಣ ಕೊಡುತ್ತಿದ್ದರು. ಆದರೂ ಒಪ್ಪಿಕೊಂಡಿಲ್ಲ. ಅಂದಾಗ ಜ್ಞಾನಮಾರ್ಗದಲ್ಲಿ ನಿಮ್ಮದು ಎಂದು ಹೇಳಿ ನನ್ನದು ಎಂದು ತಿಳಿದುಕೊಳ್ಳುವುದು ಮೋಸವಾಗಿದೆ, ಇದು ಇಲ್ಲಿ ನಡೆಯುವುದಿಲ್ಲ. ಆದ್ದರಿಂದ ಪ್ರಭು ಪ್ರಸಾದವನ್ನು ನನ್ನದು ಎಂದು ತಿಳಿದುಕೊಳ್ಳುವುದು ಅಭಿಮಾನ ಮತ್ತು ಅಪಮಾನವಾಗಿದೆ. ಬಾಬಾ-ಬಾಬಾ ಎನ್ನುವ ಶಬ್ದವನ್ನು ಎಂದೂ ಮರೆಯಬಾರದು. ಬಾಬಾನೇ ಶಕ್ತಿ ಕೊಟ್ಟಿದ್ದಾರೆ, ಬುದ್ಧಿ ಕೊಟ್ಟಿದ್ದಾರೆ, ತಂದೆಯ ಕಾರ್ಯವಾಗಿದೆ, ಬಾಬನ ಸೆಂಟರ್, ಎಲ್ಲಾ ಬಾನ ವಸ್ತುಗಳಾಗಿವೆ. ನನ್ನ ಸೆಂಟರ್, ನಾನು ಮಾಡಿದ್ದು, ನನ್ನಗೆ ಅಧಿಕಾರವಿದೆ ಎಂದು ತಿಳಿಯಬಾರದು. ನನ್ನದು ಎನ್ನುವ ಶಬ್ದ ಎಲ್ಲಿಂದ ಬಂದಿದೆ? ನಿಮ್ಮದೇನು? ಕೆಲವು ಮಕ್ಕಳು ನಾವು ಸೆಂಟರ್ ಮಾಡಲು ಮನೆಯನ್ನು ಮಾಡಿದ್ದೇವೆ, ಅಂದಾಗ ನಮಗೆ ಅಧಿಕಾರವಿದೆ ಎಂದು ನಶೆಯಲ್ಲಿ ಇರುತ್ತಾರೆ. ಆದರೆ ಯಾರ ಸೆಂಟರ್ ಮಾಡಿದ್ದೀರಿ? ಬಾಬನ ಸೆಂಟರ್ ಆಗಿದೆಯಲ್ಲವೇ. ಅಂದಾಗ ಯಾವಾಗ ತಂದೆಗೆ ಅರ್ಪಣೆ ಮಾಡಿದಾಗ ಮತ್ತೆ ನಿಮ್ಮದು ಎಲ್ಲಿಂದ ಬಂದಿದೆ? ನನ್ನದು ಎನ್ನುವುದು ಎಲ್ಲಿಂದ ಬಂದಿದೆ? ಯಾವಾಗ ಬುದ್ಧಿ ಬದಲಾವಣೆಯಾಗುತ್ತದೋ ಆಗ ನನ್ನದು ಎನ್ನುತ್ತೀರಿ. ನನ್ನದು-ನನ್ನದು ಎನ್ನುವುದೇ ಮೈಲಿಗೆ ಮಾಡಿಬಿಟ್ಟಿದೆ ಮತ್ತೆ ಮಲಿಗೆ ಆಗಬೇಕೇನು? ಯಾವಾಗ ಬ್ರಾಹ್ಮಣರಾಗಿದ್ದೀರೋ ಬ್ರಾಹ್ಮಣಜೀವನದಲ್ಲಿ ತಂದೆಗೆ ಮೊದಲು ಯಾವ ಪ್ರತಿಜ್ಞೆಯನ್ನು ಮಾಡಿದ್ದೀರಿ? ಹೊಸಬರು ಪ್ರತಿಜ್ಞೆ ಮಾಡಿದಿರಾ ಅಥವಾ ಹಳಬರು ಪ್ರತಿಜ್ಞೆಯನ್ನು ಮಾಡಿದಿರಾ? ಹೊಸಬರೂ ಸಹ ಈಗ ಹಳಬರು ಆಗಿ ಬಂದಿದ್ದೀರಲ್ಲವೇ? ನಿಶ್ಚಯಬುದ್ಧಿಯ ಫಾರಂ ತುಂಬಿಸಿ ಬಂದಿದ್ದೀರಲ್ಲವೇ? ಅಂದಾಗ ತನು-ಮನ-ಧನ ಮತ್ತು ಬುದ್ಧಿ ಎಲ್ಲಾ ನಿನ್ನದು ಎಂದು ಎಲ್ಲರ ಮೊಟ್ಟ ಮೊದಲನೇ ಪ್ರತಿಜ್ಞೆಯಾಗಿದೆ. ಈ ಪ್ರತಿಜ್ಞೆಯನ್ನು ಎಲ್ಲರೂ ಮಾಡಿದ್ದೀರಾ?

ಈಗ ಪ್ರತಿಜ್ಞೆ ಮಾಡುವವರು ಕೈ ಎತ್ತಿ. ಯಾರು ಸ್ವಲ್ಪ ಜೇಬು ಖರ್ಚಿಗೆ ಬೇಕೆಂದು ತಿಳಿಯುತ್ತಾರೋ, ಎಲ್ಲಾ ತಂದೆಗೆ ಕೊಟ್ಟಿಬಿಟ್ಟರೆ ಹೇಗೆ? ಸ್ವಲ್ಪ ಅಂತೂ ಹತ್ತಿರ ಇಟ್ಟುಕೊಳ್ಳಬೇಕು, ಯಾರು ಇದು ಬುದ್ಧಿವಂತಿಕೆಯ ಕೆಲಸ ಎಂದು ತಿಳಿಯುತ್ತಾರೋ ಅವರು ಕೈ ಎತ್ತಿ? ಸ್ವಲ್ಪ ಹತ್ತಿರ ಇಟ್ಟುಕೊಂಡಿದ್ದೀರೇನು? ನೋಡಿ ನಂತರ ನಮ್ಮನ್ನು ಯಾರು ನೋಡುತ್ತಾರೆ? ಎಂದು ಹೇಳಬಾರದು. ಇಷ್ಟು ಗುಂಪಲ್ಲಿ ಯಾರು ನೋಡುತ್ತಾರೆ? ತಂದೆಯ ಹತ್ತಿರ ಟಿ.ವಿ ಬಹಳ ಸ್ಪಷ್ಟವಾಗಿದೆ. ಅದರಿಂದ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಯೋಚನೆ ಮಾಡಿ, ಅರ್ಥ ಮಾಡಿಕೊಂಡು ಸ್ವಲ್ಪ ಇಟ್ಟುಕೊಳ್ಳಬೇಕು, ಭಲೆ ಇಟ್ಟುಕೊಳ್ಳಿ. ಪಾಂಡವರು ಏನು ತಿಳಿದುಕೊಂಡಿದ್ದೀರಿ? ಸ್ವಲ್ಪ ಇಟ್ಟುಕೊಳ್ಳಬೇಕೇನು? ಚೆನ್ನಾಗಿ ಯೋಚನೆ ಮಾಡಿ. ಯಾರು ಇಟ್ಟುಕೊಳ್ಳಬೇಕೋ ಅವರು ಕೈ ಎತ್ತಿ, ಪಾರಾಗುತ್ತಾರೆ. ಇಲ್ಲವೆಂದರೆ ಈ ಸಮಯ, ಈ ಸಭೆ, ನಿಮ್ಮ ಭುಜಗಳನ್ನು ಅಲುಗಾಡಿಸುವುದು ಎಲ್ಲಾ ಕಾಣಿಸುತ್ತದೆ.ಎಂದೂ ನನ್ನತನವನ್ನು ಇಟ್ಟುಕೊಳ್ಳಬಾರದು. ತಂದೆ ಎಂದು ಹೇಳಿದಾಗ ಪಾಪವೆಲ್ಲಾ ಹೋಗುತ್ತದೆ. ತಂದೆ ಎಂದು ಹೇಳಿಲ್ಲವೆಂದರೆ ಪಾಪವಾಗಿಡುತ್ತದೆ. ಪಾಪಕ್ಕೆ ವಶರಾದಾಗ ಬುದ್ಧಿ ಕೆಲಸ ಮಾಡುವುದಿಲ್ಲ. ಎಷ್ಟು ತಿಳಿಸಿದರೂ ಇದು ಸರಿಯಾದೆ, ತಪ್ಪಲ್ಲ ಎಂದು ಹೇಳಿಬಿಡುತ್ತಾರೆ. ಈ ರೀತಿ ಆಗಲೇಬೇಕು. ತಂದೆಗೂ ದಯೆ ಬರುತ್ತದೆ ಏಕೆಂದರೆ ಆ ಸಮಯದಲ್ಲಿ ಪಾಪಕ್ಕೆ ವಶವಾಗಿಬಿಡುತ್ತಾರೆ. ತಂದೆಯನ್ನು ಮರೆತುಬಿಟ್ಟರೆ ಪಾಪವಾಗಿಬಿಡುತ್ತದೆ. ಮತ್ತೆ ಪಾಪಕ್ಕೆ ವಶವಾಗಿರುವ ಕಾರಣ ಏನೆಲ್ಲಾ ಮಾತನಾಡುತ್ತಾರೊ, ಏನು ಮಾಡುತ್ತಾರೋ ಅದನ್ನು ಸ್ವಯಂ ಕೂಡ ಅರ್ಥ ಮಾಡಿಕೊಳ್ಳುವುದಿಲ್ಲ ಏಕೆಂದರೆ ಪರವಶ ಆಗುತ್ತಾರೆ. ಅಂದಾಗ ಸದಾ ಜ್ಞಾನದ ನಶೆಯಲ್ಲಿ ಇರಬೇಕು. ಪಾಪದ .. ಬರಬೇಡಿ. ಮಧ್ಯ-ಮಧ್ಯದಲ್ಲಿ ಮಾಯೆಯ ಅಲೆಗಳು ಬರುತ್ತದೆ. ತಾವು ಹೊಸಬರು ಈ ವಿಷಯಗಳಿಂದ ಬಚಾವ್ ಆಗಿಬಿಡಿ. ನನ್ನದು-ನನ್ನದು ಎನ್ನುವುದರಲ್ಲಿ ಬರಬಾರದು. ಸ್ವಲ್ಪ ಹಳಬರಾಗಿದ್ದೇ ಆದರೆ ನನ್ನದು-ನನ್ನದು ಎನ್ನುವ ಮಾಯೆ ಬಹಳ ಬಂದುಬಿಡುತ್ತದೆ. ನನ್ನ ವಿಚಾರ, ನನ್ನ ಬುದ್ಧಿನೇ ಇಲ್ಲವೆಂದರೆ ನನ್ನ ವಿಚಾರ ಎಲ್ಲಿಂದ ಬಂದಿತ್ತು? ಅಂದಾಗ ಜಮಾ ಮಾಡಿಕೊಳ್ಳುವ ವಿಧಿ ಏನು? ಕಾರ್ಯದಲ್ಲಿ ಉಪಯೋಗಿಸುವುದು. ಸಫಲ ಮಾಡಿ, ತಮ್ಮ ಈಶ್ವರೀಯ ಸಂಸ್ಕಾರಗಳಲ್ಲಿ ಸಫಲ ಮಾಡಿದ್ದೇ ಆದರೆ ವ್ಯರ್ಥ ಸಂಸ್ಕಾರ ಸ್ವತಹವಾಗಿ ಸಮಾಪ್ತಿಯಾಗಿಬಿಡುತ್ತದೆ. ಈಶ್ವರೀಯ ಸಂಸ್ಕಾರಗಳನ್ನು ಕಾರ್ಯದಲ್ಲಿ ಉಪಯೋಗಿಸಲಿಲವೆಂದರೆ, ಲಾಕರ್ಲ್ಲಿ ಇಟ್ಟು ಮುಚ್ಚಿಟ್ಟಿದ್ದೇ ಆದರೆ ಹಳೆಯದು ಕೆಲಸ ಮಾಡುತ್ತದೆ. ಕೆಲವರಿಗೆ ಬ್ಯಾಂಕಿನಲ್ಲಿ ಅಥವಾ ಬೀರುವಾನಲ್ಲಿ ಇಟ್ಟುಕೊಳ್ಳುವಂತಹ ಅಭ್ಯಾಸವಿರುತ್ತದೆ. ಚೆನ್ನಾಗಿರುವ ಬಟ್ಟೆ, ಹಣ, ವಸ್ತುಗಳು ಎಲ್ಲಾ ಇರುತ್ತದೆ ಆದರೂ ಹಳೆಯದನ್ನೇ ಉಪಯೋಗಿಸುತ್ತಾರೆ. ಹಳೆಯ ವಸ್ತುಗಳ ಮೇಲೆ ಅವರಿಗೆ ಪ್ರೀತಿ ಇರುತ್ತದೆ ಮತ್ತೆ ಬೀರುವಿನಲ್ಲಿ ಇರುವ ವಸ್ತುಗಳು ಬಿರುವಿನಲ್ಲೇ ಇರುತ್ತದೆ, ಮತ್ತೆ ಹಳೆಯದರಿಂದಲೇ ಸಮಾಪ್ತಿಯಾಗಿಬಿಡುತ್ತಾರೆ. ಅಂದಾಗ ಹಳೆಯ ಸಂಸ್ಕಾರವನ್ನು ಉಪಯೋಗಿಸುವುದು ಈಶ್ವರೀಯ ಸಂಸ್ಕಾರಗಳನ್ನು ಲಾಕರ್ಲ್ಲಿ ಇಟ್ಟುಕೊಳ್ಳುವುದು ಈ ರೀತಿ ಮಾಡಬಾರದು. ಕಾರ್ಯದಲ್ಲಿ ತೊಡಗಿಸಬೇಕು, ಸಫಲ ಮಾಡಿಕೊಳ್ಳಬೇಕು. ಎಷ್ಟು ಸಫಲವಾಗಿದೆ ಎಂದು ಚಾರ್ಟ್ ಇಟ್ಟುಕೊಳ್ಳಬೇಕು. ಸಫಲ ಮಾಡುವುದು ಅರ್ಥಾತ್ ಬಾಚಾವ್ ಮಾಡುವುದು ಮತ್ತೆ ವೃದ್ಧಿ ಮಾಡಿಕೊಳ್ಳುವುದು. ಮನಸ್ಸನ್ನು ಶಕ್ತಿಶಾಲಿ ವೃತ್ತಿಯ ಮುಖಾಂತರ ಸಫಲ ಮಾಡಿ, ಈ ರೀತಿ ಅಲ್ಲ ನನ್ನ ವೃತ್ತಿಯಂತೂ ಚೆನ್ನಾಗಿರುತ್ತದೆ ಆದರೆ ಎಷ್ಟು ಸಫಲವಾಗಿದೆ? ನನ್ನ ಸಂಸ್ಕಾರವೇ ಶಾಂತಿಯ ಸಂಸ್ಕಾರವಾಗಿದೆ ಆದರೆ ಎಷ್ಟು ಸಫಲ ಆಯಿತು? ಕಾರ್ಯದಲ್ಲಿ ತೊಡಗಿಸಿದ್ದೇನೆಯೇ? ಅಂದಾಗ ಈ ವಿಧಿಯನ್ನು ತಮ್ಮದನ್ನಾಗಿ ಮಾಇಕೊಂಡಾಗ ಸಂಪೂರ್ಣತೆಯ ಸಿದ್ಧಿಯನ್ನು ಸಹಜವಾಗಿ ಅನುಭವ ಮಾಡುತ್ತೀರಿ. ಸಫಲ ಮಾಡುವುದೇ ಸಫಲತೆಯ ಬೀಗದ ಕೈಯಾಗಿದೆ. ಏನು ಮಾಡಬೇಎಂದು ತಿಳಿದಿದೆಯೇ? ನಾನು ಬಹಳ ಗುಣವಂತ, ನಾನು ಚೆನ್ನಾಗಿ ಭಾಷಣ ಮಾಡುತ್ತೇನೆ, ನಾನು ಬಹಳ ಒಳ್ಳೆ ಜ್ಞಾನಿ ಆಗಿದ್ದೇನೆ, ನನ್ನ ಯೋಗವೂ ಬಹಳ ಚೆನ್ನಾಗಿರುತ್ತದೆಂದು ಕೇವಲ ನಿಮ್ಮಲ್ಲಿಯೇ ಖುಷಿ ಪಡೆಯಬೇಡಿ. ಅದರೆ ಚೆನ್ನಾಗಿದ್ದರೆ ಉಪಯೋಗ ಮಾಡಿರಿ. ಅದನ್ನು ಸಫಲ ಮಾಡಿ. ಕಾರ್ಯದಲ್ಲಿ ತೊಡಗಿಸುವುದು ಮತ್ತೆ ವೃದ್ಧಿ ಮಾಡುವುದು ಸಹಜ ವಿಧಿಯಾಗಿದೆ. ಪರಿಶ್ರಮವಿಲ್ಲದೆ ವೃದ್ಧಿಯಾಗಿಬಿಡುತ್ತದೆ ಮತ್ತೆ 21 ಜನ್ಮಗಳು ಆರಾಮವಾಗಿ ತಿನ್ನುತ್ತಿರಿ. ಅಲ್ಲಿ ಪರಿಶ್ರಮ ಪಡಬೇಕಾಗಿಲ್ಲ. ಒಳ್ಳೆಯದು.

ನಾಲ್ಕಾರು ಕಡೆಯ ಎಲ್ಲಾ ಮಿಲನ ಮಾಡುವ, ಜ್ಞಾನರತ್ನಗಳನ್ನು ಧಾರಣೆ ಮಾಡುವ ಚಾತ್ರಿಕ ಆತ್ಮರಿಗೆ, ಆಕಾರ ರೂಪದಲ್ಲಿ ಅಥವಾ ಸಾಕಾರ ರೂಪದಲ್ಲಿ ಮಿಲನದ ಮೇಳ ಮಾಡುವಂತಹ ಶ್ರೇಷ್ಠ ಆತ್ಮರಿಗೆ, ಸದಾ ಸರ್ವ ಖಜಾನೆಗಳನ್ನು ಸಫಲ ಮಾಡಿ ಸಫಲತಾ ಸ್ವರೂಪರಾಗುವಂತಹ ಆತ್ಮರಿಗೆ, ಸದಾ ನನ್ನ ಬಾಬಾ ಮತ್ತ್ಯಾವುದೇ ಹದ್ದಿನ ನನ್ನತನದ ಅಂಶವನ್ನೂ ಸಹ ಇಟ್ಟುಕೊಳ್ಳದೇ ಇರುವಂತಹ ಬೇಹದ್ದಿನ ವೈರಾಗಿ ಆತ್ಮರಿಗೆ ಸದಾ ಪ್ರತಿ ಸಮಯದಲ್ಲಿ ವಿಧಿಯ ಮೂಲಕ ಸಂಪೂರ್ಣತೆಯ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:
ಶ್ರೇಷ್ಠ ಕರ್ಮದ ಮೂಲಕ ಆಶೀರ್ವಾದಗಳ ಸ್ಟಾಕ್ನ್ನು ಜಮಾ ಮಾಡುವಂತಹ ಚೈತನ್ಯ ದರ್ಶನೀಯ ಮೂರ್ತಿ ಭವ

ಯಾವುದೇ ಕರ್ಮವನ್ನು ಮಾಡಿರಿ, ಅದರಲ್ಲಿ ಆಶೀರ್ವಾದವನ್ನು ಪಡೆಯಿರಿ ಹಾಗೂ ಆಶೀರ್ವಾದವನ್ನು ಕೊಡಿ. ಶ್ರೇಷ್ಠ ಕರ್ಮ ಮಾಡುವುದರಿಂದ ಸ್ವತಹವಾಗಿಯೇ ಆಶೀರ್ವಾದಗಳು ಸಿಗುತ್ತವೆ. ಎಲ್ಲರ ಮುಖದಿಂದ ಇದೇ ಬರುತ್ತದೆ- ಇವರಂತು ಬಹಳ ಒಳ್ಳೆಯವರು, ವಾಹ್! ಅವರ ಕರ್ಮವೇ ನೆನಪಾರ್ಥವಾಗಿಬಿಡುತ್ತದೆ. ಭಲೆ ಯಾವುದೇ ಕರ್ಮವನ್ನು ಮಾಡಿರಿ ಆದರೆ ಖುಷಿಯನ್ನು ಪಡೆಯಿರಿ ಹಾಗೂ ಖುಷಿ ಕೊಡಿ, ಆಶೀರ್ವಾದವನ್ನು ಪಡೆಯಿರಿ, ಆಶೀರ್ವಾದವನ್ನು ಕೊಡಿ. ಸಂಗಮದಲ್ಲಿ ಯಾವಾಗ ಆಶೀರ್ವಾದ ಪಡೆಯುವಿರಿ ಹಾಗೂ ಕೊಡುವಿರೋ, ಆಗಲೇ ತಮ್ಮ ಜಡಚಿತ್ರಗಳ ಮೂಲಕವೂ ಆಶೀರ್ವಾದವು ಸಿಗುತ್ತಿರುತ್ತದೆ ಮತ್ತು ವರ್ತಮಾನದಲ್ಲಿಯೂ ಚೈತನ್ಯ ದರ್ಶನೀಯ ಮೂರ್ತಿ ಆಗಿಬಿಡುತ್ತೀರಿ.

ಸ್ಲೋಗನ್:
ಸದಾ ಒಲವು-ಉತ್ಸಾಹದಲ್ಲಿ ಇರುತ್ತೀರೆಂದರೆ ಆಲಸ್ಯವು ಸಮಾಪ್ತಿಯಾಗಿಬಿಡುತ್ತದೆ.