12.07.20    Avyakt Bapdada     Kannada Murli     22.02.86     Om Shanti     Madhuban


ಆತ್ಮಿಕ ಸೇವೆ - ನಿಸ್ವಾರ್ಥ ಸೇವೆ


ಇಂದು ಸರ್ವಾತ್ಮರ ವಿಶ್ವ ಕಲ್ಯಾಣಕಾರಿ ತಂದೆಯು, ತನ್ನ ಸೇವಾಧಾರಿ ಸೇವೆಯ ಜೊತೆಗಾರ ಮಕ್ಕಳನ್ನು ನೋಡುತ್ತಿದ್ದಾರೆ. ಆದಿಯಿಂದಲೂ ಬಾಪ್ದಾದಾರವರ ಜೊತೆ ಜೊತೆಗೆ ಸೇವಾಧಾರಿ ಮಕ್ಕಳು ಜೊತೆಗಾರರಾದರು ಮತ್ತು ಅಂತ್ಯದವರೆಗೂ ಬಾಪ್ದಾದಾರವರು ಗುಪ್ತ ರೂಪದಲ್ಲಿ ಮತ್ತು ಪ್ರತ್ಯಕ್ಷ ರೂಪದಲ್ಲಿ ಮಕ್ಕಳನ್ನು ವಿಶ್ವದ ಸೇವೆಗೆ ನಿಮಿತ್ತರನ್ನಾಗಿ ಮಾಡಿದರು. ಆದಿಯಲ್ಲಿ ಬ್ರಹ್ಮಾ ತಂದೆ ಮತ್ತು ಬ್ರಾಹ್ಮಣ ಮಕ್ಕಳು ಗುಪ್ತ ರೂಪದಲ್ಲಿ ಸೇವೆಗೆ ನಿಮಿತ್ತರಾದರು. ಈಗ ಸೇವಾಧಾರಿ ಮಕ್ಕಳಾದ ಶಿವಶಕ್ತಿ ಮತ್ತು ಪಾಂಡವ ಸೇನೆಯು ವಿಶ್ವದ ಮುಂದೆ ಪ್ರತ್ಯಕ್ಷ ರೂಪದಲ್ಲಿ ಕಾರ್ಯವನ್ನು ಮಾಡುತ್ತಿದ್ದಾರೆ. ಸೇವೆಯ ಉಮ್ಮಂಗ-ಉತ್ಸಾಹವು ಮೆಜಾರಿಟಿ ಮಕ್ಕಳಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತದೆ. ಸೇವೆಯ ಲಗನ್ ಆದಿಯಿಂದ ಇದೆ. ಮತ್ತು ಅಂತ್ಯದವರೆಗೂ ಇರುತ್ತದೆ. ಬ್ರಾಹ್ಮಣ ಜೀವನವೇ ಸೇವೆಯ ಜೀವನವಾಗಿದೆ. ಬ್ರಾಹ್ಮಣ ಆತ್ಮರು ಸೇವೆಯಿಲ್ಲದೇ ಬದುಕಲು ಸಾಧ್ಯವಿಲ್ಲ. ಮಾಯೆಯಿಂದ ಜೀವಂತವಾಗಿಡುವ ಶ್ರೇಷ್ಠ ಸಾಧನವೇ ಸೇವೆಯಾಗಿದೆ. ಸೇವೆಯು ಯೋಗಯುಕ್ತರನ್ನಾಗಿಯೂ ಮಾಡುತ್ತದೆ. ಆದರೆ ಯಾವ ಸೇವೆ? ಒಂದಿದೆ - ಕೇವಲ ಮುಖದ ಸೇವೆ, ಕೇಳಿರುವುದನ್ನು ತಿಳಿಸುವ ಸೇವೆ. ಇನ್ನೊಂದಿದೆ - ಮನಸ್ಸಿನಿಂದ ಮುಖದ ಸೇವೆ. ಕೇಳಿರುವ ಮಧುರ ವಾಕ್ಯಗಳ ಸ್ವರೂಪರಾಗಿ, ಸ್ವರೂಪದಿಂದ ಸೇವೆ, ನಿಸ್ವಾರ್ಥ ಸೇವೆ. ತ್ಯಾಗ, ತಪಸ್ಯಾ ಸ್ವರೂಪದಿಂದ ಸೇವೆ. ಅಲ್ಪಕಾಲದ ಕಾಮನೆಗಳಿಂದ ದೂರವಿರುವ ನಿಷ್ಕಾಮ ಸೇವೆ. ಇದಕ್ಕೆ ಹೇಳಲಾಗುತ್ತದೆ - ಈಶ್ವರೀಯ ಸೇವೆಯು ಮನಸ್ಸು ಮತ್ತು ಮುಖದ ಜೊತೆ ಜೊತೆಗೆ ಆಗುತ್ತದೆ. ಮನಸ್ಸಿನಿಂದ ಅರ್ಥಾತ್ ಮನ್ಮನಾಭವದ ಸ್ಥಿತಿಯಿಂದ ಮುಖದ ಸೇವೆ.

ಬಾಪ್ದಾದಾರವರು ಇಂದು ತನ್ನ ರೈಟ್ಹ್ಯಾಂಡ್ ಸೇವಾಧಾರಿ ಮತ್ತು ಲೈಫ್ಟ್ಹ್ಯಾಂಡ್ ಸೇವಾಧಾರಿ ಇಬ್ಬರನ್ನೂ ನೋಡುತ್ತಿದ್ದರು. ಸೇವಾಧಾರಿಯಂತು ಇಬ್ಬರೂ ಆಗಿದ್ದಾರೆ ಆದರೆ ರೈಟ್ ಮತ್ತು ಲೆಫ್ಟ್ನಲ್ಲಿ ಅಂತರವಂತು ಇದೆಯಲ್ಲವೆ. ರೈಟ್ಹ್ಯಾಂಡ್ ಸದಾ ನಿಷ್ಕಾಮ ಸೇವಾಧಾರಿ ಆಗಿದ್ದಾರೆ. ಲೆಫ್ಟ್ಹ್ಯಾಂಡ್ ಒಂದಲ್ಲ ಒಂದು ಅಲ್ಪಕಾಲದ್ದು, ಈ ಜನ್ಮಕ್ಕಾಗಿ ಸೇವೆಯ ಫಲವನ್ನನುಭವಿಸುವ ಇಚ್ಛೆಯಿಂದ ಸೇವೆಗೆ ನಿಮಿತ್ತರಾಗುತ್ತಾರೆ. ಅವರು ಗುಪ್ತ ಸೇವಾಧಾರಿ ಮತ್ತು ಅವರು ಹೆಸರಿಗಿರುವ ಸೇವಾಧಾರಿ. ಈಗೀಗ ಸೇವೆ ಮಾಡಿದರು, ಈಗೀಗ ಹೆಸರಾಯಿತು - ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ. ಆದರೆ ಈಗ ಮಾಡಿದರು ಈಗ ಅದನ್ನನುಭವಿಸಿದರು. ಜಮಾದ ಖಾತೆಯಿಲ್ಲ. ಗುಪ್ತ ಸೇವಾಧಾರಿ ಅರ್ಥಾತ್ ನಿಷ್ಕಾಮ ಸೇವಾಧಾರಿ. ಅಂದಮೇಲೆ ಒಂದಿದೆ - ನಿಷ್ಕಾಮ ಸೇವಾಧಾರಿ, ಇನ್ನೊಂದಿದೆ - ಹೆಸರಿಗಷ್ಟೇ ಸೇವಾಧಾರಿ. ಅಂದಾಗ ಗುಪ್ತ ಸೇವಾಧಾರಿಯ ಹೆಸರು ಭಲೆ ವರ್ತಮಾನ ಸಮಯದಲ್ಲಿ ಗುಪ್ತವಾಗಿಯೇ ಇರುತ್ತದೆ. ಆದರೆ ಗುಪ್ತ ಸೇವಾಧಾರಿಯು ಸಫಲತೆಯ ಖುಷಿಯಲ್ಲಿ ಸದಾ ಸಂಪನ್ನವಾಗಿರುತ್ತಾರೆ. ಕೆಲ ಮಕ್ಕಳಿಗೆ ಸಂಕಲ್ಪ ಬರುತ್ತದೆ - ನಾವು ಮಾಡುತ್ತಿರುತ್ತೇವೆ ಆದರೆ ಹೆಸರಾಗುವುದಿಲ್ಲ. ಮತ್ತು ಯಾರು ಬಾಹ್ಯ ರೂಪದಲ್ಲಿ ಹೆಸರಿನವರಾಗಿ ಸೇವೆಯ ಶೋ ತೋರಿಸುತ್ತಾರೆ, ಅವರ ಹೆಸರು ಹೆಚ್ಚಾಗಿ ಆಗುತ್ತದೆ. ಆದರೆ ಅದು ಹೀಗಲ್ಲ- ಯಾರು ನಿಷ್ಕಾಮ ಅವಿನಾಶಿ ಹೆಸರನ್ನು ಸಂಪಾದಿಸುವವರಾಗಿದ್ದಾರೆ, ಅವರ ಮನಸ್ಸಿನ ಧ್ವನಿಯು ಮನಸ್ಸಿನವರೆಗೆ ತಲುಪುತ್ತದೆ. ಬಚ್ಚಿಟ್ಟುಕೊಂಡಿರಲು ಸಾಧ್ಯವಿಲ್ಲ. ಅವರ ಚಹರೆಯಲ್ಲಿ, ಮೂರ್ತಿಯಲ್ಲಿ ಸತ್ಯಸೇವಾಧಾರಿಯ ಹೊಳಪು ಅವಶ್ಯವಾಗಿ ಕಾಣಿಸುತ್ತದೆ. ಒಂದುವೇಳೆ ಯಾರೇ ಹೆಸರಿಗಿರುವವರು ಇಲ್ಲಿ ಹೆಸರನ್ನು ಗಳಿಸಿಬಿಡುತ್ತಾರೆಂದರೆ ಭವಿಷ್ಯಕ್ಕಾಗಿ ಮಾಡಿಕೊಂಡರು ಮತ್ತು ತಿಂದರು ಮತ್ತು ಸಮಾಪ್ತಿ ಮಾಡಿಬಿಟ್ಟರು, ಭವಿಷ್ಯ ಶ್ರೇಷ್ಠವಿಲ್ಲ, ಅವಿನಾಶಿಯಿಲ್ಲ. ಆದ್ದರಿಂದ ಬಾಪ್ದಾದಾರವರ ಬಳಿ ಎಲ್ಲಾ ಸೇವಾಧಾರಿಗಳ ಸಂಪೂರ್ಣ ರಿಕಾರ್ಡ್ ಇದೆ. ಸೇವೆಯನ್ನು ಮಾಡುತ್ತಾ ನಡೆಯಿರಿ, ಹೆಸರಾಗಲಿ ಎಂಬ ಸಂಕಲ್ಪವನ್ನು ಮಾಡಬಾರದು. ಜಮಾ ಆಗಲಿ ಎನ್ನುವುದನ್ನು ಯೋಚಿಸಿರಿ. ಅವಿನಾಶಿ ಫಲದ ಅಧಿಕಾರಿಯಾಗಿರಿ. ಅವಿನಾಶಿ ಆಸ್ತಿಗಾಗಿ ಬಂದಿದ್ದೀರಿ. ಸೇವೆಯ ಫಲವನ್ನು ವಿನಾಶಿ ಸಮಯಕ್ಕಾಗಿ ಅನುಭವಿಸಿದಿರೆಂದರೆ, ಅವಿನಾಶಿ ಆಸ್ತಿಯ ಅಧಿಕಾರವು ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಸದಾ ವಿನಾಶಿ ಕಾಮನೆಗಳಿಂದ ಮುಕ್ತರಾಗಿ ನಿಷ್ಕಾಮ ಸೇವಾಧಾರಿ, ರೈಟ್ಹ್ಯಾಂಡ್ ಆಗಿ ಸೇವೆಯಲ್ಲಿ ಮುಂದುವರೆಯುತ್ತಾ ನಡೆಯಿರಿ. ಗುಪ್ತ ದಾನದ ಮಹತ್ವ, ಗುಪ್ತ ಸೇವೆಯ ಮಹತ್ವವು ಹೆಚ್ಚಾಗಿರುತ್ತದೆ. ಆ ಆತ್ಮವು ಸದಾ ಸ್ವಯಂನಲ್ಲಿ ಸಂಪನ್ನವಾಗಿರುತ್ತಾನೆ. ನಿಶ್ಚಿಂತ ಚಕ್ರವರ್ತಿಯಾಗಿರುತ್ತಾನೆ. ಹೆಸರು-ಸ್ಥಾನದ ಚಿಂತೆಯಿಲ್ಲ. ಇದರಲ್ಲಿಯೇ ನಿಶ್ಚಿಂತ ಚಕ್ರವರ್ತಿಯಾಗಿರುವುದು ಅರ್ಥಾತ್ ಸದಾ ಸ್ವಮಾನದ ಸಿಂಹಾಸನಾಧೀಶನಾಗಿರುತ್ತಾನೆ. ಅಲ್ಪಕಾಲದ ಮಾನ್ಯತೆಯ ಸಿಂಹಾಸನಾಧೀಶನಲ್ಲ. ಸ್ವಮಾನದ ಸಿಂಹಾಸನಾಧೀಶ, ಅವಿನಾಶಿ ಸಿಂಹಾಸನಾಧೀಶ. ಅಟಲ, ಅಖಂಡ ಪ್ರಾಪ್ತಿಯ ಸಿಂಹಾಸನಾಧೀಶ. ಇವರಿಗೆ ಹೇಳಲಾಗುತ್ತದೆ - ವಿಶ್ವಕಲ್ಯಾಣಕಾರಿ ಸೇವಾಧಾರಿ. ಕೆಲವೊಮ್ಮೆ ಸಾಧಾರ ಸಂಕಲ್ಪಗಳ ಕಾರಣದಿಂದ ವಿಶ್ವ ಸೇವೆಯ ಕಾರ್ಯದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ಹಿಂಜರಿಯಬಾರದು. ತ್ಯಾಗ ಮತ್ತು ತಪಸ್ಸಿನಿಂದ ಸದಾ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡು ಮುಂದುವರೆಯುತ್ತಿರಿ. ತಿಳಿಯಿತೆ!

ಸೇವಾಧಾರಿ ಎಂದು ಯಾರಿಗೆ ಹೇಳಲಾಗುತ್ತದೆ. ಹಾಗಾದರೆ ಎಲ್ಲರೂ ಸೇವಾಧಾರಿಯಾಗಿದ್ದೀರಾ? ಸೇವೆಯು ಸ್ಥಿತಿಯನ್ನು ಏರುಪೇರು ಮಾಡುತ್ತಿದೆಯೆಂದರೆ ಅದು ಸೇವೆಯಲ್ಲ. ಕೆಲವರು ಯೋಚಿಸುತ್ತಾರೆ - ಸೇವೆಯಲ್ಲಿ ಬಹಳ ಏರುಪೇರುಗಳಾಗುತ್ತದೆ. ವಿಘ್ನವೂ ಸೇವೆಯಲ್ಲಿ ಬರುತ್ತದೆ ಮತ್ತು ನಿರ್ವಿಘ್ನವನ್ನಾಗಿಯೂ ಸೇವೆಯೇ ಮಾಡಿಸುತ್ತದೆ. ಆದರೆ ಯಾವ ಸೇವೆಯು ವಿಘ್ನರೂಪವಾಗುತ್ತದೆ, ಅದು ಸೇವೆಯಲ್ಲ. ಅದಕ್ಕೆ ಸತ್ಯ ಸೇವೆಯೆಂದು ಹೇಳಲಾಗುವುದಿಲ್ಲ. ನಾಮಧಾರಿ ಸೇವೆ ಎಂದು ಹೇಳಲಾಗುತ್ತದೆ. ಸತ್ಯ ಸೇವೆಯು ಸತ್ಯ ವಜ್ರವಾಗಿದೆ. ಹೇಗೆ ಸತ್ಯ ವಜ್ರವು ಎಂದಿಗೂ ಹೊಳಪಿನಿಂದ ಬಚ್ಚಿಟ್ಟಿಕೊಂಡಿರಲು ಸಾಧ್ಯವಿಲ್ಲ. ಹಾಗೆಯೇ ಸತ್ಯ ಸೇವಾಧಾರಿಗಳು ಸತ್ಯ ವಜ್ರವಾಗಿದ್ದಾರೆ. ಭಲೆ ಅಸತ್ಯ ವಜ್ರದಲ್ಲಿ ಎಷ್ಟಾದರೂ ಹೊಳಪು ಹೆಚ್ಚಾಗಿಯೇ ಇರಲಿ ಆದರೆ ಮೌಲ್ಯವಿರುವುದು ಯಾವುದಕ್ಕೆ? ಮೌಲ್ಯವಂತು ಸತ್ಯ ವಜ್ರಕ್ಕೆ ಇರುತ್ತದೆಯಲ್ಲವೆ. ಅಸತ್ಯಕ್ಕಿರುವುದಿಲ್ಲ. ಅಮೂಲ್ಯ ರತ್ನವು ಸತ್ಯ ಸೇವಾಧಾರಿಯಾಗಿದೆ. ಅನೇಕ ಜನ್ಮಗಳ ಮೌಲ್ಯವು ಸತ್ಯ ಸೇವಾಧಾರಿಗಳಾದಾಗಿದೆ. ಅಲ್ಪಕಾಲದ ಹೊಳಪಿನ ಶೋ, ಹೆಸರಿಗೆ ಸೇವೆಯಾಗಿದೆ ಆದ್ದರಿಂದ ಸದಾ ಸೇವಾಧಾರಿಗಳಾಗಿದ್ದು ಸೇವೆಯಿಂದ ವಿಶ್ವ ಕಲ್ಯಾಣ ಮಾಡುತ್ತಾ ಸಾಗಿರಿ. ತಿಳಿಯಿತೆ - ಸೇವೆಯ ಮಹತ್ವಿಕೆಯೇನು ಎಂದು. ಯಾರೂ ಕಡಿಮೆಯಲ್ಲ. ಪ್ರತಿಯೊಬ್ಬ ಸೇವಾಧಾರಿಯೂ ತನ್ನ-ತನ್ನ ವಿಶೇಷತೆಯಿಂದ ವಿಶೇಷ ಸೇವಾಧಾರಿಯಾಗಿದ್ದಾರೆ. ತನ್ನನ್ನು ಕಡಿಮೆಯೆಂದೂ ಸಹ ತಿಳಿಯದಿರಿ ಮತ್ತು ಅದನ್ನು ಮಾಡುವುದರಿಂದ ಹೆಸರಿನ ಇಚ್ಛೆಯನ್ನೂ ಇಡದಿರಿ. ಸೇವೆಯನ್ನು ವಿಶ್ವ ಕಲ್ಯಾಣಕ್ಕಾಗಿ ಅರ್ಪಣೆ ಮಾಡುತ್ತಾ ಸಾಗಿರಿ. ಹಾಗೆಯೇ ಭಕ್ತಿಯಲ್ಲಿ ಯಾರು ಗುಪ್ತ ದಾನಿ ಪುಣ್ಯಾತ್ಮರಾಗಿರುತ್ತಾರೆ, ಅವರು ಇದೇ ಸಂಕಲ್ಪವನ್ನು ಮಾಡುತ್ತಾರೆ- ಸರ್ವರ ಕಲ್ಯಾಣಕ್ಕಾಗಿ ಆಗಲಿ! ನನಗಾಗಿ ಆಗಲಿ, ನನಗೆ ಫಲ ಸಿಗಲಿ, ಎಂದಿರುವುದಿಲ್ಲ, ಸರ್ವರಿಗೂ ಫಲ ಸಿಗಲಿ. ಸರ್ವರ ಸೇವೆಯಲ್ಲಿ ಅರ್ಪಣೆಯಾಗಲಿ. ಕೆಲವೊಮ್ಮೆಗೂ ನನಗಾಗಲಿ ಎನ್ನುವ ಕಾಮನೆಯನ್ನಿಡಬಾರದು. ಅದೇರೀತಿ ಸರ್ವರ ಪ್ರತಿ ಸೇವೆಯನ್ನು ಮಾಡಿರಿ. ಸರ್ವರ ಕಲ್ಯಾಣದ ಬ್ಯಾಂಕ್ನಲ್ಲಿ ಜಮಾ ಮಾಡುತ್ತಾ ಸಾಗಿರಿ. ಆಗ ಎಲ್ಲರೂ ಏನಾಗಿ ಬಿಡುತ್ತಾರೆ? ನಿಷ್ಕಾಮ ಸೇವಾಧಾರಿ. ಈಗ ಯಾರೂ ಕೇಳಲಿಲ್ಲವೆಂದರೆ, 2500 ವರ್ಷಗಳು ತಮ್ಮನ್ನು ಕೇಳುತ್ತಾರೆ. ಒಂದು ಜನ್ಮದಲ್ಲಿ ಯಾರೇ ಕೇಳುವರು ಅಥವಾ 2500 ವರ್ಷಗಳಲ್ಲಿ ಯಾರೇ ಕೇಳುತ್ತಾರೆಂದರೆ ಹೆಚ್ಚು ಯಾವುದಾಯಿತು. ಅದು(2500) ಹೆಚ್ಚಾಯಿತಲ್ಲವೆ. ಅಲ್ಪಕಾಲದ ಸಂಕಲ್ಪದಿಂದ ದೂರವಿದ್ದು ಬೇಹದ್ದಿನ ಸೇವಾಧಾರಿಯಾಗಿ ತಂದೆಯ ಹೃದಯ ಸಿಂಹಾಸನಾಧೀಶ ನಿಶ್ಚಿಂತ ಚಕ್ರವರ್ತಿಯಾಗಿ, ಸಂಗಮಯುಗದ ಖುಷಿಗಳನ್ನು, ಮೋಜುಗಳನ್ನು ಆಚರಿಸುತ್ತಾ ಸಾಗಿರಿ. ಕೆಲವೊಮ್ಮೆ ಯಾವುದೇ ಸೇವೆಯನ್ನು ಬೇಸರವಾಗಿ ಮಾಡಿದರೆ ತಿಳಿದುಕೊಳ್ಳಿರಿ - ಅದು ಸೇವೆಯಲ್ಲ. ಹೆಚ್ಚು ಕಡಿಮೆ ಮಾಡಿದರು, ಏರುಪೇರಿನಲ್ಲಿ ತಂದರೆಂದರೆ ಅದು ಸೇವೆಯಲ್ಲ. ಸೇವೆಯಂತು ಹಾರಿಸುವಂತದ್ದಾಗಿದೆ. ಸೇವೆಯು ನಿಶ್ಚಿಂತಪುರದ ಚಕ್ರವರ್ತಿಯನ್ನಾಗಿ ಮಾಡುವಂತದ್ದಾಗಿದೆ. ಇಂತಹ ಸೇವಾಧಾರಿ ಆಗಿದ್ದೀರಲ್ಲವೇ? ನಿಶ್ಚಿಂತ ಚಕ್ರವರ್ತಿ, ನಿಶ್ಚಿಂತ ಪುರದ ಚಕ್ರವರ್ತಿ. ಅವರ ಬಳಿ ಸಫಲತೆಯು ತಾನಾಗಿಯೇ ಬರುತ್ತದೆ. ಸಫಲತೆಯ ಹಿಂದೆ ಅವರು ಓಡುವುದಿಲ್ಲ. ಸಫಲತೆಯು ಅವರ ಹಿಂದಿಂದೆ ಇದೆ. ಒಳ್ಳೆಯದು - ಬೇಹದ್ದಿನ ಸೇವೆಯ ಯೋಜನೆಗಳನ್ನು ಮಾಡುತ್ತೀರಲ್ಲವೆ. ಬೇಹದ್ದಿನ ಸ್ಥಿತಿಯಿಂದ ಬೇಹದ್ದಿನ ಸೇವೆಯ ಯೋಜನೆಗಳು ಸಹಜವಾಗಿ ಸಫಲವಾಗಿಯೇ ಆಗುತ್ತದೆ. (ಡಬಲ್ ವಿದೇಶಿ ಸಹೋದರ-ಸಹೋದರಿಯರು ಒಂದು ಯೋಜನೆಯನ್ನು ಮಾಡಿದ್ದಾರೆ, ಅದರಲ್ಲಿ ಎಲ್ಲಾ ಆತ್ಮರುಗಳಿಂದ ಸ್ವಲ್ಪ ನಿಮಿಷಗಳ ಶಾಂತಿಯ ದಾನವನ್ನು ತೆಗೆದುಕೊಳ್ಳಬೇಕು).

ಇವರೂ ಸಹ ವಿಶ್ವವನ್ನು ಮಹಾದಾನಿಯನ್ನಾಗಿ ಮಾಡುವ ಒಳ್ಳೆಯ ಯೋಜನೆಯನ್ನು ಮಾಡಿದ್ದಾರಲ್ಲವೆ! ಸ್ವಲ್ಪ ಸಮಯವಾದರೂ ಸಹ ಶಾಂತಿಯ ಸಂಸ್ಕಾರಗಳನ್ನು ಭಲೆ ವಿವಶತೆಯಿಂದ, ಭಲೆ ಸ್ನೇಹದಿಂದಲಾದರೂ ಇಮರ್ಜಂತು ಮಾಡುತ್ತಾರಲ್ಲವೆ. ಕಾರ್ಯಕ್ರಮದನುಸಾರವಾಗಿಯಾದರೂ ಮಾಡಲಿ, ಆದರೂ ಯಾವಾಗ ಆತ್ಮನಲ್ಲಿ ಶಾಂತಿಯ ಸಂಸ್ಕಾರವು ಇಮರ್ಜ್ ಆಗುತ್ತದೆ, ಆಗ ಶಾಂತಿ ಸ್ವಧರ್ಮವಂತು ಇದ್ದೇ ಇದೆಯಲ್ಲವೆ. ಶಾಂತಿ ಸಾಗರನ ಮಕ್ಕಳಂತು ಆಗಿಯೇ ಇದ್ದೇವೆ. ಶಾಂತಿಧಾಮದ ನಿವಾಸಿಯೂ ಹೌದು. ಅಂದಾಗ ಕಾರ್ಯಕ್ರಮದನುಸಾರವೂ ಅದು ಇಮರ್ಜ್ ಆಗುವುದರಿಂದ, ಆ ಶಾಂತಿಯ ಶಕ್ತಿಯು ಅವರನ್ನು ಆಕರ್ಷಿಸುತ್ತಿರುತ್ತದೆ. ಹೇಗೆ ಹೇಳುತ್ತಾರಲ್ಲವೆ ಒಂದು ಬಾರಿ ಯಾರು ಸಿಹಿಯ ರುಚಿಯನ್ನು ನೋಡಿದರು, ಭಲೆ ಆ ಸಿಹಿಯು ಸಿಗಲಿ ಅಥವಾ ಸಿಗದಿರಲಿ, ಆದರೆ ರುಚಿ ನೋಡಿರುವ ರಸವು ಅವರನ್ನು ಮತ್ತೆ-ಮತ್ತೆ ಸೆಳೆಯುತ್ತಿರುತ್ತದೆ. ಅಂದಾಗ ಈ ಶಾಂತಿಯ ರುಚಿಯನ್ನೂ ಸವಿಯಬೇಕಾಗಿದೆ. ಆಗ ಈ ಶಾಂತಿಯ ಸಂಸ್ಕಾರವು ಸ್ವತಹವಾಗಿಯೇ ಸ್ಮೃತಿ ತರಿಸುತ್ತಿರುತ್ತದೆ. ಆದ್ದರಿಂದ ನಿಧಾನ-ನಿಧಾನವಾಗಿ ಆತ್ಮರಲ್ಲಿ ಶಾಂತಿಯ ಜಾಗೃತಿ ಬರುತ್ತಿರುತ್ತದೆ, ಇದನ್ನೂ ಸಹ ತಾವೆಲ್ಲಾ ಶಾಂತಿಯ ದಾನವನ್ನು ಕೊಟ್ಟು, ಅವರನ್ನೂ ದಾನಿಯನ್ನಾಗಿ ಮಾಡುತ್ತೀರಿ. ತಾವುಗಳ ಶುಭ ಸಂಕಲ್ಪವಿದೆ - ಯಾವುದಾದರೂ ಪ್ರಕಾರದಿಂದ ಆತ್ಮರು ಶಾಂತಿಯ ಅನುಭೂತಿ ಮಾಡಲಿ. ವಿಶ್ವ ಶಾಂತಿಯೂ ಸಹ ಆತ್ಮಿಕ ಶಾಂತಿಯ ಆಧಾರದಿಂದ ಆಗುತ್ತದೆಯಲ್ಲವೆ. ಪ್ರಕೃತಿ(ಶರೀರ)ಯೂ ಸಹ ಪುರುಷನ ಆಧಾರ(ಆತ್ಮ)ದಿಂದ ನಡೆಯುತ್ತದೆ. ಈ ಪ್ರಕೃತಿಯೂ ಆಗ ಶಾಂತವಾಗುತ್ತದೆ, ಯಾವಾಗ ಆತ್ಮರಲ್ಲಿ ಶಾಂತಿಯ ಸ್ಮೃತಿಯು ಬರುತ್ತದೆ. ಭಲೆ ಯಾವುದೇ ವಿಧಿಯಿಂದಾದರೂ ಮಾಡಲಿ, ಆದರೆ ಅಶಾಂತಿಯಿಂದಂತು ದೂರವಾಗಿ ಬಿಟ್ಟರಲ್ಲವೆ. ಮತ್ತು ಒಂದು ನಿಮಿಷದ ಶಾಂತಿಯೂ ಸಹ ಅವರಿಗೆ ಅನೇಕ ಸಮಯಕ್ಕಾಗಿ ಆಕರ್ಷಣೆ ಮಾಡುತ್ತಿರುತ್ತದೆ. ಅಂದಾಗ ಒಳ್ಳೆಯ ಪ್ಲಾನ್ ಆಗಿದೆ. ಇದೂ ಸಹ ಹೇಗೆಂದರೆ, ಯಾರಿಗಾದರೂ ಸ್ವಲ್ಪ ಆಮ್ಲಜನಕವನ್ನು ಕೊಟ್ಟು ಶಾಂತಿಯ ಶ್ವಾಸವನ್ನು ನಡೆಸುವ ಸಾಧನವಾಗಿದೆ. ಶಾಂತಿಯ ಶ್ವಾಸದಿಂದ ವಾಸ್ತವದಲ್ಲಿ ಮೂರ್ಛಿತರಾಗಿದ್ದಾರೆ. ಅಂದಾಗ ಈ ಸಾಧನವು ಆಮ್ಲಜನಕದಂತಾಯಿತು. ಅದರಿಂದ ಸ್ವಲ್ಪ ಶ್ವಾಸ ನಡೆಸುವುದು ಪ್ರಾರಂಭವಾಗುತ್ತದೆ. ಕೆಲವರ ಶ್ವಾಸವು ಆಮ್ಲಜನಕದಿಂದ ನಡೆಯುತ್ತಾ-ನಡೆಯುತ್ತಾ ನಡೆಯತೊಡಗುತ್ತಾರೆ. ಅಂದಾಗ ಎಲ್ಲರೂ ಉಮ್ಮಂಗ-ಉತ್ಸಾಹದಿಂದ ಮೊದಲು ಸ್ವಯಂನ ಪೂರ್ಣ ಸಮಯದಲ್ಲಿ ಶಾಂತಿ ಹೌಸ್ ಆಗಿದ್ದು ಶಾಂತಿಯ ಕಿರಣಗಳನ್ನು ಕೊಡಿ. ಆಗಲೇ ತಮ್ಮ ಶಾಂತಿಯ ಕಿರಣಗಳ ಸಹಯೋಗದಿಂದ, ತಮ್ಮ ಶಾಂತಿಯ ಸಂಕಲ್ಪದಿಂದ ಅವರಿಗೂ ಸಂಕಲ್ಪವು ಉತ್ಪನ್ನವಾಗುತ್ತದೆ ಮತ್ತು ಯಾವುದಾದರೂ ವಿಧಿಯಿಂದ ಮಾಡುತ್ತಾರೆ, ಆದರೆ ತಾವುಗಳ ಶಾಂತಿಯ ಪ್ರಕಂಪನಗಳು, ಅವರನ್ನು ಸತ್ಯ ವಿಧಿಯವರೆಗೆ ಸೆಳೆದುಕೊಂಡು ಬರುತ್ತದೆ. ಇದೂ ಸಹ ಯಾರಿಗೇ ಭರವಸೆಯಿಲ್ಲವೋ, ಅವರಿಗೆ ಭರವಸೆಯ ಹೊಳಪನ್ನು ತೋರಿಸುವ ಸಾಧನವಾಗಿದೆ. ಭರವಸೆಯಿಲ್ಲದವರಲ್ಲಿ ಭರವಸೆಯನ್ನು ಉತ್ಪನ್ನ ಮಾಡುವ ಸಾಧನವಾಗಿದೆ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಯಾರೇ ಸಂಪರ್ಕದಲ್ಲಿ ಬರುತ್ತಾರೆ, ಯಾರದೇ ಸಂಪರ್ಕದಲ್ಲಿ ಬರುತ್ತೀರೆಂದರೆ, ಅವರಿಗೆ ಎರಡು ಶಬ್ಧಗಳಲ್ಲಿ ಆತ್ಮಿಕ ಶಾಂತಿ, ಮನಸ್ಸಿನ ಶಾಂತಿಯ ಪರಿಚಯವನ್ನು ಕೊಡುವ ಪ್ರಯತ್ನವನ್ನು ಅವಶ್ಯವಾಗಿ ಮಾಡಬೇಕು. ಏಕೆಂದರೆ ಪ್ರತಿಯೊಬ್ಬರೂ ತಮ್ಮ-ತಮ್ಮ ಹೆಸರನ್ನು ಅವಶ್ಯವಾಗಿ ಸೇರ್ಪಡೆ ಮಾಡಿಯೇ ಮಾಡಿಸುತ್ತಾರೆ. ಭಲೆ ಪತ್ರ ವ್ಯವಹಾರದ ಮೂಲಕವೇ ಮಾಡಲಿ, ಆದರೆ ಸಂಪರ್ಕದಲ್ಲಂತು ಬರುತ್ತಾರಲ್ಲವೆ. ಪಟ್ಟಿ(ಲಿಸ್ಟ್)ಯಲ್ಲಂತು ಬರುತ್ತಾರಲ್ಲವೆ. ಅಂದಾಗ ಎಲ್ಲಿಯವರೆಗೆ ಸಾಧ್ಯವೋ ಶಾಂತಿಯ ಅರ್ಥವೇನು, ಆ ಎರಡು ಶಬ್ಧಗಳಲ್ಲಿಯೂ ಸ್ಪಷ್ಟ ಪಡಿಸುವ ಪ್ರಯತ್ನ ಪಡಿ. ಒಂದು ನಿಮಿಷದಲ್ಲಿಯೂ ಸಹ ಆತ್ಮನಲ್ಲಿ ಜಾಗೃತಿ ಬರಬಹುದು. ತಿಳಿಯಿತೆ! ಯೋಜನೆಯಂತು ತಮ್ಮೆಲ್ಲರೀಗೂ ಸಹ ಇಷ್ಟವಾಗಿದೆಯಲ್ಲವೆ. ಅನ್ಯರಂತು ಕೆಲಸವನ್ನು ಸ್ಥಗಿತಗೊಳಿಸುತ್ತಾರೆ, ತಾವು ಕಾರ್ಯವನ್ನು ಮಾಡುತ್ತೀರಿ. ತಾವಿರುವುದೇ ಶಾಂತಿದೂತರು, ಅಂದಾಗ ನಾಲ್ಕೂ ಕಡೆಯಗಳಲ್ಲಿ ಶಾಂತಿದೂತನ ಈ ಶಬ್ಧವು ಮೊಳಗುತ್ತದೆ ಮತ್ತು ಶಾಂತಿಯ ಫರಿಶ್ತೆಯಾಗಿ ಪ್ರತ್ಯಕ್ಷವಾಗುತ್ತಾ ಸಾಗುತ್ತೀರಿ. ಕೇವಲ ಪರಸ್ಪರದಲ್ಲಿ ಈ ಸಲಹೆ ತೆಗೆದುಕೊಳ್ಳಿರಿ - ಶಾಂತಿ ಎಂಬ ಶಬ್ಧದ ಮೊದಲು ಅಂತಯ ಯಾವುದಾದರೂ ಶಬ್ಧವಿರಲಿ, ಅದು ಪ್ರಪಂಚದ ಶಬ್ಧದಿಂದ ಸ್ವಲ್ಪ ಭಿನ್ನವೆನಿಸಲಿ. ಪೀಸ್ ಮಾರ್ಚ್ ಅಥವಾ ಪೀಸ್ - ಈ ಶಬ್ಧವಂತು ಪ್ರಪಂಚವೂ ಉಪಯೋಗ ಮಾಡುತ್ತದೆ. ಅಂದಾಗ ಪೀಸ್ ಶಬ್ಧದ ಜೊತೆ, ಇನ್ನ್ಯಾವುದಾದರೂ ಶಬ್ಧವಿರಲಿ, ಅದು ಯುನಿವರ್ಸಲ್ ಆಗಿರಲಿ ಮತ್ತು ಕೇಳಿದ ಕೂಡಲೇ ಹೀಗೇನಿಸಲಿ - ಇದು ಭಿನ್ನವಾಗಿದೆ/ವಿಶೇಷವಾಗಿದೆ. ಅದನ್ನು ಅನ್ವೇಷಣೆ ಮಾಡಿರಿ. ಬಾಕಿ ಒಳ್ಳೆಯ ಮಾತಿದೆ. ಕೊನೆಪಕ್ಷ ಇದು ಎಷ್ಟೇ ಸಮಯ ಕಾರ್ಯಕ್ರಮವು ನಡೆಯಲಿ, ಅಷ್ಟು ಸಮಯದಲ್ಲಿ ಏನೇ ಆಗಲಿ, ಸ್ವಯಂ ಅಶಾಂತರಾಗಬಾರದು, ಅಶಾಂತ ಮಾಡಬಾರದು. ಶಾಂತಿಯನ್ನು ಬಿಡಬಾರದು. ಮೊದಲಂತು ಬ್ರಾಹ್ಮಣರು ಈ ಕಂಕಣವನ್ನು ಕಟ್ಟಿಕೊಳ್ಳುತ್ತೀರಲ್ಲವೆ! ಯಾವಾಗ ಅವರಿಗೂ ಕಂಕಣವನ್ನು ಕಟ್ಟುತ್ತೀರಿ, ಅದಕ್ಕೆ ಮೊದಲು ಬ್ರಾಹ್ಮಣರು ಯಾವಾಗ ತಮಗೆ ಕಂಕಣವನ್ನು ಕಟ್ಟಿಕೊಳ್ಳುತ್ತೀರಿ, ಆಗಲೇ ಅನ್ಯರಿಗೂ ಕಟ್ಟಲು ಸಾಧ್ಯವಾಗುವುದು. ಹೇಗೆ ರಜತ ಮಹೋತ್ಸವದಲ್ಲಿ ಎಲ್ಲರೂ ಯಾವ ಸಂಕಲ್ಪ ಮಾಡಿದಿರಿ? ನಾವು ಸಮಸ್ಯಾ ಸ್ವರೂಪರು ಆಗುವುದಿಲ್ಲ, ಇದೇ ಸಂಕಲ್ಪವನ್ನು ಮಾಡಿದಿರಲ್ಲವೆ. ಇದಕ್ಕೇ ಮತ್ತೆ-ಮತ್ತೆ ಒತ್ತುಕೊಡಿ. ಹೀಗಾಗಬಾರದು - ಸಮಸ್ಯೆಯಾಗಿ ಮತ್ತು ಸಮಸ್ಯಾ ಸ್ವರೂಪರಾಗುವುದಿಲ್ಲ. ಅಂದಾಗ ಈ ಕಂಕಣವು ಇಷ್ಟವಿದೆಯಲ್ಲವೆ. ಮೊದಲು ಸ್ವಯಂ, ಆನಂತರ ವಿಶ್ವ. ಸ್ವಯಂನ ಪ್ರಭಾವವು ವಿಶ್ವದ ಮೇಲೆ ಬೀಳುತ್ತದೆ. ಒಳ್ಳೆಯದು!

ಇಂದು ಯುರೋಪ್ನ ಟರ್ನ್ ಆಗಿದೆ. ಯುರೋಪ್ ಸಹ ಬಹಳ ದೊಡ್ಡದಿದೆಯಲ್ಲವೆ. ಎಷ್ಟು ದೊಡ್ಡ ಯುರೋಪ್ ಇದೆ, ಅಷ್ಟು ದೊಡ್ಡ ಹೃದಯದವರಾಗಿದ್ದೀರಲ್ಲವೆ. ಹೇಗೆ ಯುರೋಪಿನ ವಿಸ್ತಾರವಿದೆ, ಎಷ್ಟು ವಿಸ್ತಾರವಾಗಿದೆ ಅಷ್ಟೇ ಸೇವೆಯಲ್ಲಿ ಸಾರವಿದೆ. ವಿನಾಶದ ಕಿಡಿಯೂ ಸಹ ಎಲ್ಲಿಂದ ಹೊರ ಬರುತ್ತದೆ? ಯುರೋಪ್ನಿಂದ ಬರುತ್ತದೆಯಲ್ಲವೆ! ಅಂದಾಗ ಹೇಗೆ ವಿನಾಶದ ಸಾಧನವು ಯುರೋಪಿನಿಂದ ಹೊರ ಬರುತ್ತದೆಯೆಂದರೆ ಸ್ಥಾಪನೆಯ ಕಾರ್ಯದಲ್ಲಿ ವಿಶೇಷವಾಗಿ ಯುರೋಪಿನಿಂದ ಆತ್ಮರು ಪ್ರಖ್ಯಾತರಾಗಲೇಬೇಕು. ಹೇಗೆ ಮೊದಲು ಬಾಂಬುಗಳು ಅಂಡರ್ಗ್ರೌಂಡ್ನಲ್ಲಾಯಿತು, ನಂತರ ಕಾರ್ಯರೂಪದಲ್ಲಿ ತಂದರು. ಹಾಗೆಯೇ ಇಂತಹ ಆತ್ಮರೂ ಸಹ ತಯಾರಾಗುತ್ತಿದ್ದಾರೆ, ಈಗ ಗುಪ್ತವಾಗಿದ್ದಾರೆ, ಅಂಡರ್ಗ್ರೌಂಡ್ ಆಗಿದ್ದಾರೆ. ಆದರೆ ಪ್ರಖ್ಯಾತವೂ ಆಗುತ್ತಿದ್ದಾರೆ ಮತ್ತು ಆಗುತ್ತಿರುತ್ತಾರೆ. ಹೇಗೆ ಪ್ರತಿಯೊಂದು ದೇಶದ ವಿಶೇಷತೆಯು ತನ್ನ-ತನ್ನದಾಗಿರುತ್ತದೆಯಲ್ಲವೆ, ಹಾಗಾದರೆ ಇಲ್ಲಿಯೂ ಪ್ರತಿಯೊಂದು ಸ್ಥಾನದ್ದೂ ತನ್ನ ವಿಶೇಷತೆಯಿದೆ. ಹೆಸರು ಪ್ರಸಿದ್ಧವಾಗಲು ಯುರೋಪಿನ ಯಂತ್ರಗಳು ಕೆಲಸಕ್ಕೆ ಬರುತ್ತದೆ. ಹೇಗೆ ವಿಜ್ಞಾನದ ಯಂತ್ರಗಳು ಕಾರ್ಯದಲ್ಲಿ ಬಂದಿತು, ಹಾಗೆಯೇ ಧ್ವನಿ ಮೊಳಗಿಸುವುದಕ್ಕೂ ಯುರೋಪಿನಿಂದ ಯಂತ್ರಗಳು ನಿಮಿತ್ತವಾಗುತ್ತವೆ. ಹೊಸ ವಿಶ್ವದ ತಯಾರಿ ಮಾಡುವುದಕ್ಕಾಗಿ ಯುರೋಪ್ ರಾಷ್ಟ್ರವೇ ತಮಗೆ ಸಹಯೋಗಿಯಾಗುತ್ತದೆ. ಯುರೋಪಿನ ವಸ್ತುಗಳು ಸದಾ ಶಕ್ತಿಶಾಲಿಯಾಗಿರುತ್ತವೆ. ಜರ್ಮನಿಯ ವಸ್ತುಗಳಿಗೆ ಎಲ್ಲರೂ ಮಹತ್ವಿಕೆ ಕೊಡುತ್ತಾರೆ. ಅಂದಾಗ ಅದೇ ರೀತಿಯಲ್ಲಿ ಸೇವೆಗೆ ನಿಮಿತ್ತ ಮಹತ್ವವಾಗಿರುವ ಆತ್ಮರು ಪ್ರತ್ಯಕ್ಷವಾಗುತ್ತಾ ಇರುತ್ತಾರೆ. ತಿಳಿಯಿತೆ! ಯುರೋಪ್ ಸಹ ಕಡಿಮೆಯೇನೂ ಇಲ್ಲ. ಈಗ ಪ್ರತ್ಯಕ್ಷತೆಯು ಪರದೆಯು ತೆರೆಯುವುದು ಪ್ರಾರಂಭವಾಗುತ್ತಿದೆ. ಸಮಯದಲ್ಲಿ ಹೊರಗೆ ಬಂದು ಬಿಡುತ್ತಾರೆ. ಒಳ್ಳೆಯದು ಸ್ವಲ್ಪ ಸಮಯದಲ್ಲಿ ನಾಲ್ಕೂ ಕಡೆಗಳಲ್ಲಿ ಒಳ್ಳೆಯ ರೀತಿ ವಿಸ್ತಾರವನ್ನು ಮಾಡಲಾಗಿದೆ, ರಚನೆಯು ಒಳ್ಳೆಯ ರಚನೆ ಆಗಿದೆ. ಈಗ ಈ ರಚನೆಗೆ ಪಾಲನೆಯ ನೀರನ್ನು ಕೊಟ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತಿದ್ದಾರೆ. ಹೇಗೆ ಯುರೋಪ್ನ ಸ್ಥೂಲ ವಸ್ತುಗಳು ಶಕ್ತಿಶಾಲಿಯಾಗಿರುತ್ತದೆ. ಹಾಗೆಯೇ ಆತ್ಮರೂ ಸಹ ವಿಶೇಷ ಅಚಲ-ಅಡೋಲವಾಗಿರುತ್ತಾರೆ. ಪರಿಶ್ರಮವನ್ನು ಪ್ರೀತಿಯಿಂದ ಮಾಡುತ್ತಿದ್ದೀರಿ. ಆದ್ದರಿಂದ ಪರಿಶ್ರಮ, ಪರಿಶ್ರಮವಲ್ಲ. ಆದರೆ ಸೇವೆಯ ಲಗನ್ ಚೆನ್ನಾಗಿದೆ. ಎಲ್ಲಿ ಲಗನ್ ಇದೆಯೋ ಅಲ್ಲಿ ವಿಘ್ನವು ಬರುತ್ತಿದ್ದರೂ ಸಮಾಪ್ತಿಯಾಗಿ, ಸಫಲತೆಯು ಸಿಗುತ್ತಿರುತ್ತದೆ. ಹಾಗೆ ನೋಡಿದರೆ ಇಡೀ ಯುರೋಪ್ನ ಕ್ವಾಲಿಟಿಯೇನಾದರೂ ನೋಡಿದರೆ ಬಹಳ ಚೆನ್ನಾಗಿದೆ. ಬ್ರಾಹ್ಮಣರೂ ಸಹ ಐ.ಪಿ. ಆಗಿದ್ದಾರೆ. ಹಾಗೆ ನೋಡಿದರೆ ಐ.ಪಿ.,ಗಳಿದ್ದಾರೆ, ಆದ್ದರಿಂದ ಯುರೋಪ್ನ ನಿಮಿತ್ತ ಸೇವಾಧಾರಿಗಳಿಗೆ ಸ್ನೇಹ ತುಂಬಿದ ಶ್ರೇಷ್ಠ ಪಾಲನೆಯಿಂದ ಇನ್ನೂ ಶಕ್ತಿಶಾಲಿಗೊಳಿಸುತ್ತಾ, ವಿಶೇಷವಾಗಿ ಸೇವೆಯ ಮೈದಾನದಲ್ಲಿ ತರುತ್ತಿರಿ. ಅದೇ ರೀತಿ ಧರಣಿಯೂ ಫಲ ಕೊಡುವಂತದ್ದಾಗಿದೆ. ಒಳ್ಳೆಯದು - ಇದಂತು ವಿಶೇಷತೆಯಾಗಿದೆ, ಯಾರು ತಂದೆಯ ಮಕ್ಕಳಾಗುತ್ತಿದ್ದಂತೆಯೇ ಅನ್ಯರನ್ನೂ ಮಾಡುವುದರಲ್ಲಿ ತೊಡಗಿ ಬಿಡುತ್ತಾರೆ. ಒಳ್ಳೆಯ ಸಾಹಸವನ್ನಿಟ್ಟಿದ್ದಾರೆ ಮತ್ತು ಸಾಹಸದ ಕಾರಣವೇ ಇದು ಗಿಫ್ಟ್ ಆಗಿದೆ, ಅದರಿಂದ ಸೇವಾಕೇಂದ್ರಗಳು ವೃದ್ಧಿಯನ್ನು ಪಡೆಯುತ್ತಿರುತ್ತದೆ. ಕ್ವಾಲಿಟಿಯನ್ನೂ ವೃದ್ಧಿ ಮಾಡಿರಿ ಮತ್ತು ಕ್ವಾಂಟಿಟಿಯನ್ನೂ ವೃದ್ಧಿ ಮಾಡಿರಿ. ಎರಡರ ಬ್ಯಾಲೆನ್ಸ್ ಇರಲಿ. ಕ್ವಾಲಿಟಿಯ ಶೋಭೆ ತನ್ನದಾಗಿದೆ ಮತ್ತು ಕ್ವಾಂಟಿಟಿಯ ಶೋಭೆ ಮತ್ತೆ ತನ್ನದಾಗಿದೆ. ಎರಡೂ ಇರಬೇಕು. ಕೇವಲ ಕ್ವಾಲಿಟಿಯಿದ್ದು ಕ್ವಾಂಟಿಟಿಯಿಲ್ಲದಿದ್ದರೂ, ಸೇವೆ ಮಾಡುವವರು ಸುಸ್ತಾಗಿ ಬಿಡುತ್ತಾರೆ. ಆದ್ದರಿಂದ ಇಬ್ಬರೂ ತಮ್ಮ-ತಮ್ಮ ವಿಶೇಷತೆಗಳ ಕಾರ್ಯಕ್ಕಿದ್ದಾರೆ. ಇಬ್ಬರ ಸೇವೆಯೂ ಅವಶ್ಯಕ, ಏಕೆಂದರೆ 9 ಲಕ್ಷವಂತು ಮಾಡಲೇಬೇಕಲ್ಲವೆ. 9 ಲಕ್ಷದಲ್ಲಿ ವಿದೇಶದಿಂದ ಎಷ್ಟಾಗಿದ್ದಾರೆ? (5000) ಒಳ್ಳೆಯದು. ಒಂದು ಕಲ್ಪದ ಚಕ್ರವಂತು ಪೂರ್ಣಗೊಳಿಸಿದಿರಿ. ವಿದೇಶಕ್ಕೆ ಲಾಸ್ಟ್ ಸೋ ಫಾಸ್ಟ್ನ ವರದಾನವಿದೆ, ಅಂದಾಗ ಭಾರತಕ್ಕಿಂತ ಫಾಸ್ಟ್ ಹೋಗಬೇಕು ಏಕೆಂದರೆ ಭಾರತದವರಿಗೆ ಧರಣಿ ತಯಾರು ಮಾಡುವುದರಲ್ಲಿ ಪರಿಶ್ರಮವಾಗುತ್ತದೆ. ವಿದೇಶದಲ್ಲಿ ಬಂಜರು ಭೂಮಿಯಿಲ್ಲ. ಇಲ್ಲಿ ಮೊದಲು ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಮಾಡಬೇಕಾಗುತ್ತದೆ, ಅಲ್ಲಿ ಕೆಟ್ಟದ್ದು ಎನ್ನುವುದನ್ನೇ ಕೇಳಿಲ್ಲ ಅಂದಾಗ ಕೆಟ್ಟ ಮಾತು, ಉಲ್ಟಾ ಮಾತು ಕೇಳೇ ಇಲ್ಲ. ಆದ್ದರಿಂದ ಸ್ವಚ್ಛವಾಗಿದೆ. ಮತ್ತು ಭಾರತದವರು ಮೊದಲು ಸ್ಲೇಟ್ನ್ನು ಸ್ವಚ್ಛಗೊಳಿಸಬೇಕಾಗುತ್ತದೆ, ನಂತರ ಬರೆಯಬೇಕಾಗುತ್ತದೆ. ವಿದೇಶಕ್ಕೆ ಸಮಯದನುಸಾರವಾಗಿ ವರದಾನವಿದೆ - ಲಾಸ್ಟ್ ಸೋ ಫಾಸ್ಟ್ ಹೋಗಬಹುದು. ಆದ್ದರಿಂದ ಯುರೋಪ್ನವರು ಎಷ್ಟು ಲಕ್ಷ ತಯಾರು ಮಾಡುವರು? ಹೇಗೆ ಈ ಮಿಲಿಯನ್ ಮಿನಿಟ್ನ ಕಾರ್ಯಕ್ರಮವನ್ನು ಮಾಡಿದ್ದೀರಿ, ಹಾಗೆಯೇ ಪ್ರಜೆಗಳನ್ನೂ ತಯಾರು ಮಾಡಿರಿ. ಪ್ರಜೆಗಳಂತು ಆಗಬಹುದಲ್ಲವೆ. ಮಿಲಿಯನ್ ಮಿನಿಟ್ ಮಾಡಬಹುದೆಂದರೆ, ಮಿಲಿಯನ್ ಪ್ರಜೆಗಳನ್ನೂ ಮಾಡಬಲ್ಲಿರಿ. ಇನ್ನೂ ಒಂದು ಲಕ್ಷ ಕಡಿಮೆ, 9 ಲಕ್ಷವೆಂದೇ ಹೇಳುತ್ತೀರಾ! ತಿಳಿಯಿತೆ - ಯುರೋಪಿಯನ್ನರು ಏನು ಮಾಡಬೇಕು ಎಂದು. ಬಹಳ ವಿಜೃಂಭಣೆಯಿಂದ ತಯಾರು ಮಾಡಿರಿ. ಒಳ್ಳೆಯದು- ಡಬಲ್ ವಿದೇಶಿಗಳ ಡಬಲ್ಲಾಕ್ ಇದೆ, ಹಾಗೆಯೇ ಎಲ್ಲರಿಗೂ ಎರಡು ಬಾರಿ ಮುರುಳಿಗಳನ್ನು ಕೇಳುವುದಕ್ಕೆ ಸಿಗುತ್ತದೆ, ತಮಗೆ ಡಬಲ್ ಸಿಕ್ಕಿದೆ. ಕಾನ್ಫ್ರೆನ್ಸ್ ಸಹ ನೋಡಿದಿರಿ, ಗೋಲ್ಡನ್ ಜುಬಿಲಿಯನ್ನೂ ನೋಡಿದಿರಿ. ಹಿರಿಯ ದಾದಿಯರನ್ನೂ ನೋಡಿದಿರಿ. ಗಂಗೆ, ಜಮುನಾ, ಗೋದಾವರಿ, ಬ್ರಹ್ಮಾಪುತ್ರ, ಎಲ್ಲರನ್ನೂ ನೋಡಿದಿರಿ. ಎಲ್ಲಾ ದೊಡ್ಡ-ದೊಡ್ಡ ದಾರಿಯರನ್ನು ನೋಡಿದಿರಲ್ಲವೆ! ಒಬ್ಬೊಬ್ಬ ದಾದಿಯ ವಿಶೇಷತೆಯನ್ನು ಉಡುಗೊರೆಯಲ್ಲಿ ತೆಗೆದುಕೊಂಡು ಹೋಗುತ್ತೀರೆಂದರೆ, ಎಲ್ಲರ ವಿಶೇಷತೆಯು ಕೆಲಸಕ್ಕೆ ಬಂದು ಬಿಡುತ್ತದೆ. ವಿಶೇಷತೆಗಳ ಉಡುಗೊರೆಯ ಜೋಳಿಗೆಯನ್ನು ತುಂಬಿಸಿಕೊಂಡು ಹೋಗಿರಿ. ಇದರಲ್ಲಿ ಕಸ್ಟಮ್ನವರೇನೂ(ಚೆಕಿಂಗ್) ತಡೆಯುವುದಿಲ್ಲ. ಒಳ್ಳೆಯದು.

ಸದಾ ವಿಶ್ವ ಕಲ್ಯಾಣಕಾರಿಯಾಗಿ ವಿಶ್ವ ಸೇವೆಗೆ ನಿಮಿತ್ತರಾಗುವ ಸತ್ಯ ಸೇವಾಧಾರಿ ಶ್ರೇಷ್ಠಾತ್ಮರು, ಸದಾ ಸಫಲತೆಯ ಜನ್ಮಸಿದ್ಧ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವ ಆತ್ಮರಿಗೆ, ಸದಾ ಸ್ವಯಂನ ಸ್ವರೂಪದ ಮೂಲಕ ಸರ್ವರಿಗೆ ಸ್ವರೂಪದ ಸ್ಮೃತಿಯನ್ನು ತರಿಸುವಂತಹ ಸಮೀಪ ಆತ್ಮರಿಗೆ, ಸದಾ ಬೇಹದ್ದಿನ ನಿಷ್ಕಾಮ ಸೇವಾಧಾರಿಯಾಗಿ ಹಾರುವ ಕಲೆಯಲ್ಲಿ ಹಾರುವಂತಹ, ಡಬಲ್ಲೈಟ್ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವರದಾನ:  
ತಮ್ಮ ಫರಿಶ್ತಾರೂಪದ ಮೂಲಕ ಗತಿ-ಸದ್ಗತಿಯ ಪ್ರಸಾದವನ್ನು ಹಂಚುವಂತಹ ಮಾಸ್ಟರ್ ಗತಿ-ಸದ್ಗತಿದಾತಾ ಭವ.

ವರ್ತಮಾನ ಸಮಯದಲ್ಲಿ ವಿಶ್ವದ ಅನೇಕ ಆತ್ಮರು ಪರಿಸ್ಥಿತಿಗಳಿಗೆ ವಶರಾಗಿ ಚೀರಾಡುತ್ತಿದ್ದಾರೆ, ಕೆಲವರು ಆರ್ಥಿಕತೆಯಿಂದ, ಕೆಲವರು ಹಸಿವಿನಿಂದ, ಕೆಲವರು ತನುವಿನ ರೋಗದಿಂದ, ಕೆಲವರು ಮನಸ್ಸಿನ ಅಶಾಂತಿಯಿಂದ....... ಎಲ್ಲರ ದೃಷ್ಟಿಯು ಶಾಂತಿ ಸ್ಥಂಭದ ಕಡೆಗೆ ಹೋಗುತ್ತಿದೆ. ಎಲ್ಲರೂ ನೋಡುತ್ತಿದ್ದಾರೆ - ಹಾ-ಹಾಕಾರದ ನಂತರ ಜಯ-ಜಯಕಾರವು ಯಾವಾಗ ಆಗುತ್ತದೆ. ಅಂದಾಗ ಈಗ ತಮ್ಮ ಸಾಕಾರಿ, ಫರಿಶ್ತಾ ರೂಪದ ಮೂಲಕ ವಿಶ್ವದ ದುಃಖವನ್ನು ಹರಣ ಮಾಡಿರಿ, ಮಾಸ್ಟರ್ ಗತಿ-ಸದ್ಗತಿದಾತಾ ಆಗಿದ್ದು ಭಕ್ತರಿಗೆ ಗತಿ ಮತ್ತು ಸದ್ಗತಿಯ ಪ್ರಸಾದವನ್ನು ಹಂಚಿರಿ.

ಸ್ಲೋಗನ್:
ತಾವು ಸಾಹಸದ ಒಂದು ಹೆಜ್ಜೆಯನ್ನು ಮುಂದಿಡುತ್ತೀರೆಂದರೆ, ತಂದೆಯ ಸಹಯೋಗದ ಸಾವಿರ ಹೆಜ್ಜೆಗಳು ಮುಂದಿಡಿಸುತ್ತದೆ.


ಮುರಳಿ ಪ್ರಶ್ನೆಗಳು -
ಆತ್ಮಿಕ ಸೇವೆ - ನಿಸ್ವಾರ್ಥ ಸೇವೆ :

1. ಬ್ರಾಹ್ಮಣ ಜೀವನ ಎಂತಹ ಜೀವನವಾಗಿದೆ?
2. ಸೇವೆಯ ಪ್ರಕಾರಗಳನ್ನು ತಿಳಿಸಿ.
3. ಶಾಂತಿಯ ಕಿರಣಗಳಿಂದ ಎಂತಹ ಸೇವೆ ಮಾಡಬೇಕು?
4. ರೈಟ್ಹ್ಯಾಂಡ್ ಸೇವಾಧಾರಿ ಮತ್ತು ಲೈಫ್ಟ್ಹ್ಯಾಂಡ್ ಸೇವಾಧಾರಿಗಳ ವ್ಯತ್ಯಾಸವೇನು?
5. ನಿಷ್ಕಾಮ ಸೇವಾಧಾರಿ ಯಾರಾಗಿದ್ದಾರೆ?

1) ವಿನಾಶಿ ಕಾಮನೆಗಳಿಂದ ಮುಕ್ತರಾಗಿರುವವರು
2) ಸರ್ವ ಆಕರ್ಷಣೆಗಳಿಂದ ಮುಕ್ತರಾಗಿರುವವರು
3) ಸರ್ವ ಬಂಧನಗಳಿಂದ ಮುಕ್ತರಾಗಿರುವವರು

6. ವಿಘ್ನವೂ _____ ಬರುತ್ತದೆ ಮತ್ತು ನಿರ್ವಿಘ್ನವನ್ನಾಗಿಯೂ _____ ಮಾಡಿಸುತ್ತದೆ.
1) ಯೋಗ
2) ಸೇವೆ
3) ಧಾರಣೆ

7. ಮಾಯೆಯಿಂದ ಜೀವಂತವಾಗಿಡುವ ಶ್ರೇಷ್ಠ ಸಾಧನ ಯಾವುದು?
1) ಯೋಗ
2) ಸೇವೆ
3) ಧಾರಣೆ

8. ಯಾವುದರಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡು ಮುಂದುವರೆಯುತ್ತಿರಬೇಕು?
1) ಜ್ಞಾನ ಮತ್ತು ಯೋಗದಿಂದ
2) ಸೇವೆ ಮತ್ತು ಯೋಗದ ಬಾಲೆನ್ಸ್ನಿಂದ
3) ತ್ಯಾಗ ಮತ್ತು ತಪಸ್ಸಿನಿಂದ

9. ಸೇವೆಯು __________ ಮಾಡುವಂತದ್ದಾಗಿದೆ

1) ನಿಶ್ಚಿಂತಪುರದ ಚಕ್ರವರ್ತಿಯನ್ನಾಗಿ
2) ತ್ರಿಕಾಲದರ್ಶಿಯನ್ನಾಗಿ
3) ಸಫಲತಾಮುರ್ತರನ್ನಾಗಿ

10. ಸಂಪರ್ಕದಲ್ಲಿ ಬರುವವರಿಗೆ ಎರಡು ಶಬ್ಧಗಳಲ್ಲಿ ಯಾವ ಪರಿಚಯವನ್ನು ಕೊಡುಬೇಕು?
1) ಆತ್ಮಿಕ ಶಾಂತಿ, ಮನಸ್ಸಿನ ಶಾಂತಿ
2) ಮನಸ್ಸಾ ಶಕ್ತಿ, ವಾಚಾ ಶಕ್ತಿ
3) ಲೌಕಿಕತೆ ಮತ್ತು ಅಲೌಕಿಕತೆ