12.09.21    Avyakt Bapdada     Kannada Murli    19.03.88     Om Shanti     Madhuban


`ನೆನಪಿನಲ್ಲಿ' ರಮಣೀಕತೆಯನ್ನು ತರುವ ಯುಕ್ತಿಗಳು


ಇಂದು ವಿದಾತ, ವರದಾತ ಬಾಪ್ದಾದಾ ತನ್ನ ಮಾ|| ವಿದಾತ, ವರದಾತ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗುವೂ ವಿದಾತನೂ ಆಗಿದ್ದಾರೆ, ವರದಾತನೂ ಆಗಿದ್ದಾರೆ. ಜೊತೆ ಜೊತೆಗೆ ಬಾಪ್ದಾದಾ ನೋಡುತ್ತಿದ್ದರು - ಮಕ್ಕಳ ಪದವಿಯು ಎಷ್ಟು ಮಹಾನ್ ಆಗಿದೆ, ಈ ಸಂಗಮಯುಗದ ಬ್ರಾಹ್ಮಣ ಜೀವನಕ್ಕೆ ಎಷ್ಟೊಂದು ಮಹತ್ವಿಕೆಯಿದೆ! ವಿದಾತ, ವರದಾತನ ಜೊತೆಗೆ ವಿಧಿ-ವಿದಾತರೂ ತಾವು ಬ್ರಾಹ್ಮಣರಾಗಿದ್ದೀರಿ. ತಮ್ಮ ಪ್ರತೀ ವಿಧಿಯು ಸತ್ಯಯುಗದಲ್ಲಿ ಹೇಗೆ ಪರಿವರ್ತನೆಯಾಗುತ್ತದೆ ಎಂಬುದನ್ನು ಮೊದಲೇ ತಿಳಿಸಲಾಗಿದೆ. ಈ ಸಮಯದ ಪ್ರತೀ ಕರ್ಮದ ವಿಧಿಯು ಭವಿಷ್ಯದಲ್ಲಿ ನಡದೇ ನಡೆಯುತ್ತದೆ ಆದರೆ ದ್ವಾಪರದ ನಂತರವೂ ಸಹ ಈ ಸಮಯದ ಶ್ರೇಷ್ಠ ಕರ್ಮಗಳ ವಿಧಿಯು ಭಕ್ತಿ ಮಾರ್ಗದ ವಿಧಿಯಾಗಿ ಬಿಡುತ್ತದೆ ಅಂದಾಗ ಪೂಜ್ಯ ರೂಪದಲ್ಲಿಯೂ ಈ ಸಮಯದ ವಿಧಿಯು ಜೀವನದ ಶ್ರೇಷ್ಠ ವಿಧಾನದ ರೂಪದಲ್ಲಿ ನಡೆಯುತ್ತದೆ ಮತ್ತು ಪೂಜಾರಿ ಮಾರ್ಗ ಅರ್ಥಾತ್ ಭಕ್ತಿ ಮಾರ್ಗದಲ್ಲಿಯೂ ತಮ್ಮ ಪ್ರತಿಯೊಂದು ವಿಧಿಯು ರೀತಿ-ನೀತಿಯಲ್ಲಿ ನಡೆಯುತ್ತಾ ಬರುತ್ತದೆ ಅಂದಾಗ ವಿದಾತ-ವರದಾತ ಮತ್ತು ವಿಧಿ-ವಿದಾತರೂ ಆಗಿದ್ದೀರಿ.

ತಮ್ಮ ಮೂಲ ಸಿದ್ಧಾಂತವು ಸಿದ್ಧಿ ಪ್ರಾಪ್ತಿಯಾಗಲು ಸಾಧನವಾಗಿ ಬಿಡುತ್ತದೆ. ಹೇಗೆ ಮೂಲ ಸಿದ್ಧಾಂತವಾಗಿದೆ - ``ತಂದೆಯು ಒಬ್ಬರೇ ಆಗಿದ್ದಾರೆ, ಧರ್ಮಾತ್ಮರು ಅನೇಕರಿದ್ದಾರೆ, ಮಹಾನ್ ಆತ್ಮರೂ ಅನೇಕರಿದ್ದಾರೆ ಆದರೆ ಪರಮಾತ್ಮನು ಒಬ್ಬರೇ ಆಗಿದ್ದಾರೆ'' ಇದೇ ಮೂಲ ಸಿದ್ಧಾಂತದ ಮೂಲಕ ಅರ್ಧ ಕಲ್ಪ ನಾವು ಶ್ರೇಷ್ಠಾತ್ಮರಿಗೆ ಒಬ್ಬ ತಂದೆಯ ಮೂಲಕ ಪ್ರಾಪ್ತಿಯಾಗಿರುವ ಆಸ್ತಿಯು ಸಿದ್ಧಿಯ ರೂಪದಲ್ಲಿ ಪ್ರಾಪ್ತವಾಗುತ್ತದೆ. ಪ್ರಾಲಬ್ಧವು ಸಿಗುವುದು ಎಂದರೆ ಸಿದ್ಧಿ ಸ್ವರೂಪರಾಗುವುದು ಏಕೆಂದರೆ ಒಬ್ಬರೇ ತಂದೆಯಾಗಿದ್ದಾರೆ, ಉಳಿದವರು ಮಹಾನ್ ಆತ್ಮರು ಹಾಗೂ ಧರ್ಮಾತ್ಮರೆಲ್ಲರೂ ಸಹೋದರ-ಸಹೋದರರಾಗಿದ್ದಾರೆಯೇ ಹೊರತು ತಂದೆಯಲ್ಲ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ, ಸಹೋದರರಿಂದಲ್ಲ. ಅಂದಾಗ ಈ ಮೂಲ ಸಿದ್ಧಾಂತದ ಮೂಲಕ ಅರ್ಧಕಲ್ಪ ನಿಮಗೆ ಸಿದ್ಧಿಯು ಪ್ರಾಪ್ತಿಯಾಗುತ್ತದೆ ಮತ್ತು ಭಕ್ತಿಯಲ್ಲಿಯೂ ಸಹ `ಭಗವಂತ ಒಬ್ಬನೇ' - ಇದೇ ಸಿದ್ಧಾಂತವು ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಆಧಾರವಾಗುತ್ತದೆ. ಭಕ್ತಿಯ ಆದಿಯ ಆಧಾರವೂ ಸಹ ಒಬ್ಬ ತಂದೆಯ ಶಿವಲಿಂಗದ ರೂಪದಿಂದ ಆರಂಭವಾಗುತ್ತದೆ. ಇದಕ್ಕೆ `ಅವ್ಯಭಿಚಾರಿ ಭಕ್ತಿ' ಎಂದು ಹೇಳಲಾಗುತ್ತದೆ ಅಂದಾಗ ಭಕ್ತಿಮಾರ್ಗದಲ್ಲಿಯೂ ಸಹ ಇದೇ ಒಂದು ಸಿದ್ಧಾಂತದ ಮೂಲಕವೇ ಸಿದ್ಧಿಯು ಪ್ರಾಪ್ತಿಯಾಗುತ್ತದೆ - ತಂದೆಯು ಒಬ್ಬರೇ ಆಗಿದ್ದಾರೆ. ಹೇಗೆ ತಮ್ಮ ಯಾವುದೆಲ್ಲಾ ಮೂಲ ಸಿದ್ಧಾಂತಗಳಿವೆಯೋ ಆ ಒಂದೊಂದು ಸಿದ್ಧಾಂತದ ಮೂಲಕ ಸಿದ್ಧಿಯು ಪ್ರಾಪ್ತಿಯಾಗುತ್ತಾ ಇರುತ್ತದೆ. ಹೇಗೆ ಈ ಜೀವನದ ಮೂಲ ಸಿದ್ಧಾಂತವು ಪವಿತ್ರತೆಯಾಗಿದೆ, ಈ ಪವಿತ್ರತೆಯ ಮೂಲ ಸಿದ್ಧಾಂತದ ಮೂಲಕ ತಾವಾತ್ಮರಿಗೆ ಭವಿಷ್ಯದಲ್ಲಿ ಸಿದ್ಧಿ ಸ್ವರೂಪದ ರೂಪದಲ್ಲಿ ಪ್ರಕಾಶತೆಯ ಕಿರೀಟವು ಸದಾ ಪ್ರಾಪ್ತಿಯಾಗುತ್ತದೆ. ಇದರ ನೆನಪಾರ್ಥ ರೂಪವಾಗಿ ಡಬಲ್ ಕಿರೀಟವನ್ನು ತೋರಿಸುತ್ತಾರೆ ಮತ್ತು ಭಕ್ತಿಯಲ್ಲಿ ಯಾವಾಗ ಯಥಾರ್ಥ ಮತ್ತು ಹೃದಯಪೂರ್ವಕವಾಗಿ ಭಕ್ತಿ ಮಾಡುವರೋ ಆಗ ಪವಿತ್ರತೆಯ ಸಿದ್ಧಾಂತವನ್ನು ಮೂಲಾಧಾರ ಎಂದು ತಿಳಿದುಕೊಳ್ಳುತ್ತಾರೆ ಮತ್ತು ಪವಿತ್ರತೆಯಿಲ್ಲದೆ ಭಕ್ತಿಯ ಸಿದ್ಧಿಯು ಪ್ರಾಪ್ತಿಯಾಗಲು ಸಾಧ್ಯವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಭಲೆ ಅಲ್ಪಕಾಲಕ್ಕಾಗಿ ಅಂದರೆ ಎಷ್ಟು ಸಮಯ ಭಕ್ತಿ ಮಾಡುವರೋ ಅಷ್ಟು ಸಮಯವೇ ಧಾರಣೆ ಮಾಡಿಕೊಳ್ಳಲಿ ಆದರೆ `ಪವಿತ್ರತೆಯೇ ಸಿದ್ಧಿಯ ಸಾಧನವಾಗಿದೆ' - ಈ ಸಿದ್ಧಾಂತವನ್ನು ಅವಶ್ಯವಾಗಿ ಅಳವಡಿಸಿಕೊಳ್ಳುತ್ತಾರೆ. ಇದೇ ಪ್ರಕಾರವಾಗಿ ಪ್ರತಿಯೊಂದು ಜ್ಞಾನದ ಸಿದ್ಧಾಂತ ಹಾಗೂ ಧಾರಣೆಯ ಮೂಲ ಸಿದ್ಧಾಂತವನ್ನು ಬುದ್ಧಿಯಿಂದ ಆಲೋಚಿಸಿ - ಪ್ರತಿಯೊಂದು ಸಿದ್ಧಾಂತವು ಸಿದ್ಧಿಯ ಸಾಧನ ಹೇಗಾಗುತ್ತದೆ? ಇದನ್ನು ಮನನದ ಕೆಲಸ ಕೊಡುತ್ತಿದ್ದೇನೆ, ಹೇಗೆ ಒಂದು ಉದಾಹರಣೆಗೆ ತಿಳಿಸಿದೆವಲ್ಲವೆ ಅದೇರೀತಿ ಮತ್ತೆಲ್ಲವನ್ನೂ ವಿಚಾರ ಮಾಡಿ.

ತಾವು ವಿಧಿ-ವಿದಾತರೂ ಆಗುತ್ತೀರಿ, ಸಿದ್ಧಿ ದಾತರೂ ಆಗುತ್ತೀರಿ ಆದ್ದರಿಂದ ಇಲ್ಲಿಯವರೆಗೂ ಯಾವ ಭಕ್ತಾತ್ಮರು ಯಾವ ಯಾವ ಸಿದ್ಧಿಯನ್ನು ಬಯಸುವರೋ ಅವರು ಭಿನ್ನ-ಭಿನ್ನ ದೇವತೆಗಳ ಮೂಲಕ ಭಿನ್ನ-ಭಿನ್ನ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಅದೇ ದೇವತೆಯ ಪೂಜೆ ಮಾಡುತ್ತಾರೆ ಅಂದಾಗ ಸಿದ್ಧಿದಾತ ತಂದೆಯ ಮೂಲಕ ತಾವೂ ಸಹ ಸಿದ್ಧಿದಾತರಾಗುತ್ತೀರಿ - ತಮ್ಮನ್ನು ಹೀಗೆ ತಿಳಿದುಕೊಳ್ಳುತ್ತೀರಲ್ಲವೆ. ಯಾರಿಗೆ ಸ್ವಯಂ ಸಿದ್ಧಿಗಳು ಪ್ರಾಪ್ತಿಯಾಗಿದೆಯೋ ಅವರೇ ಅನ್ಯರಿಗೂ ಸಿದ್ಧಿಯನ್ನು ಪ್ರಾಪ್ತಿ ಮಾಡಿಸಲು ನಿಮಿತ್ತರಾಗಿದ್ದಾರೆ. ಸಿದ್ಧಿಯು ಕೆಟ್ಟ ಕೆಲಸವಲ್ಲ ಏಕೆಂದರೆ ನಿಮ್ಮದು ರಿದ್ಧಿ-ಸಿದ್ಧಿಯಲ್ಲ. ರಿದ್ಧಿ ಸಿದ್ಧಿಯು ಅಲ್ಪಕಾಲಕ್ಕಾಗಿ ಪ್ರಭಾವಶಾಲಿ ಆಗಿರುತ್ತದೆ ಆದರೆ ತಮ್ಮದು ಯಥಾರ್ಥ ವಿಧಿಯ ಮೂಲಕ ಸಿದ್ಧಿಯಾಗಿದೆ. ಈಶ್ವರೀಯ ವಿಧಿಯ ಮೂಲಕ ಯಾವ ಸಿದ್ಧಿಯು ಪ್ರಾಪ್ತಿ ಆಗುತ್ತದೆಯೋ ಆ ಸಿದ್ಧಿಯೂ ಈಶ್ವರೀಯ ಸಿದ್ಧಿಯಾಗಿದೆ. ಹೇಗೆ ಈಶ್ವರನು ಅವಿನಾಶಿಯಾಗಿದ್ದಾರೆ ಆದ್ದರಿಂದ ಈಶ್ವರೀಯ ವಿಧಿ ಮತ್ತು ಸಿದ್ಧಿಯೂ ಅವಿನಾಶಿಯಾಗಿದೆ. ರಿದ್ಧಿ-ಸಿದ್ಧಿಯನ್ನು ತೋರಿಸುವರು ಸ್ವಯಂ ಅಲ್ಪಜ್ಞ ಆತ್ಮರಾಗಿದ್ದಾರೆ ಆದ್ದರಿಂದ ಅವರ ಸಿದ್ಧಿಯೂ ಸಹ ಅಲ್ಪಕಾಲದ್ದಾಗಿದೆ ಆದರೆ ತಮ್ಮ ಸಿದ್ಧಿಯು ಸಿದ್ಧಾಂತದ ವಿಧಿಯ ಮೂಲಕ ಸಿದ್ಧಿಯಾಗಿದೆ ಆದ್ದರಿಂದ ಅರ್ಧಕಲ್ಪ ಸ್ವಯಂ ಸಿದ್ಧಿ ಸ್ವರೂಪರಾಗುತ್ತೀರಿ. ಇನ್ನರ್ಧಕಲ್ಪ ತಮ್ಮ ಸಿದ್ಧಾಂತದ ಮೂಲಕ ಭಕ್ತಾತ್ಮರು ಯಥಾಶಕ್ತಿಯಂತೆ ಫಲದ ಪ್ರಾಪ್ತಿ ಮತ್ತು ಸಿದ್ಧಿಯ ಪ್ರಾಪ್ತಿ ಮಾಡಿಕೊಳ್ಳುತ್ತಾ ಬರುತ್ತಾರೆ ಏಕೆಂದರೆ ಭಕ್ತಿಯ ಶಕ್ತಿಯು ಸಮಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಸತೋಪ್ರಧಾನದ ಭಕ್ತಿಯ ಶಕ್ತಿಯು ಇತ್ತೀಚಿನ ಭಕ್ತಾತ್ಮರಿಗಿಂತಲೂ ಹೆಚ್ಚು ಸಿದ್ಧಿಯ ಅನುಭೂತಿ ಮಾಡಿಸುತ್ತಿತ್ತು. ಈ ಸಮಯದ ಭಕ್ತಿಯು ತಮೋಪ್ರಧಾನವಾಗಿರುವುದರಿಂದ ಯಥಾರ್ಥವಾದ ಭಕ್ತಿಯೂ ಇಲ್ಲ, ಸಿದ್ಧಿಯೂ ಇಲ್ಲ.

ಅಂದಾಗ ನಾನು ಯಾರು ಎಂದು ಇಷ್ಟೊಂದು ನಶೆಯಿರುತ್ತದೆಯೇ? ಸದಾ ಈ ಶ್ರೇಷ್ಠ ಸ್ವಮಾನದ ಸ್ಥಿತಿಯ ಸೀಟ್ನಲ್ಲಿ ಸ್ಥಿತರಾಗಿರುತ್ತೀರಾ? ಇಷ್ಟು ದೊಡ್ಡ ಸೀಟ್ ಆಗಿದೆಯಲ್ಲವೆ! ಯಾವಾಗ ಸೀಟ್ನಲ್ಲಿ ಸೆಟ್ ಆಗಿರುತ್ತೀರೋ ಘಳಿಗೆ-ಘಳಿಗೆಗೆ ಅಪ್ಸೆಟ್ ಆಗುವುದಿಲ್ಲ, ಇದು ಸ್ಥಿತಿಯಾಗಿದೆಯಲ್ಲವೆ. ಇಷ್ಟೊಂದು ದೊಡ್ಡ ಸ್ಥಿತಿಯಾಗಿದೆ! ವಿಧಿ-ವಿಧಾನದ ದಾತನಾಗಿದ್ದಾರೆ. ಯಾವಾಗ ಈ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರೋ ಆಗ ಮಾಯೆಯು ವಿರೋಧ ಮಾಡುವುದಿಲ್ಲ, ಸದಾ ಸುರಕ್ಷಿತರಾಗಿರುತ್ತೀರಿ. ಅಪ್ಸೆಟ್ ಆಗುವುದರ ಕಾರಣ ತಮ್ಮ ಶ್ರೇಷ್ಠ ಸ್ಥಿತಿಯ ಸೀಟ್ನಿಂದ ಸಾಧಾರಣ ಸ್ಥಿತಿಗೆ ಬಂದು ಬಿಡುತ್ತೀರಿ. ನೆನಪಿನಲ್ಲಿ ಇರುವುದು ಅಥವಾ ಸೇವೆ ಮಾಡುವುದು ಒಂದು ಸಾಧಾರಣ ದಿನಚರಿ ಆಗಿ ಬಿಡುತ್ತದೆ ಆದರೆ ನೆನಪಿನಲ್ಲಂತೂ ಕುಳಿತುಕೊಳ್ಳುತ್ತೀರಿ ಅಂದಾಗ ತಮ್ಮ ಭಿನ್ನ-ಭಿನ್ನವಾದ ಶ್ರೇಷ್ಠ ಸ್ವಮಾನದಲ್ಲಿ ಕುಳಿತುಕೊಳ್ಳಬೇಕು. ಕೇವಲ ನೆನಪಿನ ಸ್ಥಾನದಲ್ಲಿ ಕುಳಿದ್ದೀರಿ ಎಂದಲ್ಲ. ಯೋಗದ ಕೊಠಡಿಯಲ್ಲಿರಬಹುದು, ಹಾಸಿಗೆಯಿಂದ ಎದ್ದು ಇಡೀ ದಿನ ಬಾಬನ ಕುಟೀರದಲ್ಲಿ ಕುಳಿತಿರಬಹುದು ಆದರೆ ಹೇಗೆ ಶರೀರಕ್ಕೆ ಯೋಗ್ಯವಾದ ಸ್ಥಾನವನ್ನು ಕೊಡುತ್ತೀರೋ ಹಾಗೆಯೇ ಬುದ್ಧಿಗೆ ಸ್ಥಿತಿಯ ಸ್ಥಾನವನ್ನು ಕೊಡಬೇಕಾಗಿದೆ. ಬುದ್ಧಿಯ ಸ್ಥಾನವು ಸರಿಯಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ. ಈಶ್ವರೀಯ ನಶೆಯು ಸೀಟ್ನಿಂದ ಸ್ವತಹ ಬರುತ್ತದೆ. ಇತ್ತೀಚೆಗೆ ಕುರ್ಚಿಯ ನಶೆಯೆಂದು ಹೇಳುತ್ತಾರಲ್ಲವೆ. ನಿಮ್ಮದು ಶ್ರೇಷ್ಠ ಸ್ಥಿತಿಯ ಆಸನವಾಗಿದೆ. ಕೆಲವೊಮ್ಮೆ ಮಾ|| ಬೀಜ ರೂಪ ಸ್ಥಿತಿಯ ಆಸನದಲ್ಲಿ ಸೆಟ್ ಆಗಿ, ಕೆಲವೊಮ್ಮೆ ಅವ್ಯಕ್ತ ಫರಿಶ್ತೆಯ ಸೀಟ್ನಲ್ಲಿ ಸೆಟ್ ಆಗಿ, ಕೆಲವೊಮ್ಮೆ ವಿಶ್ವ ಕಲ್ಯಾಣಕಾರಿ ಸೀಟ್ನಲ್ಲಿ ಸೆಟ್ ಆಗಿ. ಹೀಗೆ ಭಿನ್ನ-ಭಿನ್ನ ಸ್ಥಿತಿಯ ಆಸನದ ಮೇಲೆ ಸೆಟ್ ಆಗಿ ಕುಳಿತುಕೊಳ್ಳಿ. ಒಂದುವೇಳೆ ಯಾರಿಗಾದರೂ ಸೀಟಿನಲ್ಲಿ ಸೆಟ್ ಆಗಲು ಆಗದಿದ್ದರೆ ಏರುಪೇರಿನಲ್ಲಿ ಬರುತ್ತಾರಲ್ಲವೆ. ಒಮ್ಮೆ ಹೀಗೆ, ಒಮ್ಮೆ ಹಾಗೆ ಮಾಡುತ್ತಿರುತ್ತಾರೆ. ಯಾವಾಗ ಸೀಟಿನಲ್ಲಿ ಸೆಟ್ ಆಗದಿದ್ದಾಗ ಈ ಬುದ್ಧಿಯೂ ಸಹ ಏರುಪೇರಿನಲ್ಲಿ ಬಂದು ಬಿಡುತ್ತದೆ. ನಾವು ಇಂತಹವರು, ಇಂತಹವರು ಎಂದು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಒಂದುವೇಳೆ ನೀವು ಯಾರು? ಎಂದು ಕೇಳಿದರೆ ದೊಡ್ಡ ಲಿಸ್ಟ್ ತೆಗೆಯುತ್ತೀರಿ ಆದರೆ ಪ್ರತೀ ಸಮಯ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ನೀವು ಒಪ್ಪಿಕೊಳ್ಳಬೇಕು. ಕೇವಲ ತಿಳಿಯುವುದಲ್ಲ, ಒಪ್ಪಿಕೊಳ್ಳಿ ಏಕೆಂದರೆ ತಿಳಿದುಕೊಳ್ಳುವುದರಿಂದ ಹೌದು ನಾನು ಇಂತಹವನಾಗಿದ್ದೇನೆಂದು ಖುಷಿಯು ಸಿಗುತ್ತದೆ. ಒಪ್ಪಿಕೊಂಡು ನಡೆಯುವುದರಿಂದ ನಶೆಯಿರುತ್ತದೆ. ಹೇಗೆ ಯಾರೇ ಒಳ್ಳೆಯ ಸ್ಥಾನದ ಸೀಟ್ನಲ್ಲಿ ಸೆಟ್ ಆಗಿದ್ದರೆ ಖುಷಿಯಂತೂ ಇರುತ್ತದೆ ಆದರೆ ಶಕ್ತಿಯಿರುವುದಿಲ್ಲ. ತಿಳಿದುಕೊಂಡಿದ್ದೀರಿ ಆದರೆ ಒಪ್ಪಿಕೊಂಡು ಅದರಂತೆ ನಡೆಯಬೇಕು ಮತ್ತು ಪದೇ-ಪದೇ ತಮ್ಮನ್ನು ಕೇಳಿಕೊಳ್ಳಬೇಕು. ಪರಿಶೀಲನೆ ಮಾಡಿಕೊಳ್ಳಿ - ಸೀಟಿನಲ್ಲಿ ಸೆಟ್ ಆಗಿದ್ದೇನೆಯೇ? ಅಥವಾ ಸಾಧಾರಣ ಸ್ಥಿತಿಯಲ್ಲಿ ಕೆಳಗಿಳಿದಿದ್ದೇನೆಯೇ? ಬೇರೆಯವರಿಗೆ ಸಿದ್ಧಿಕೊಡುವಂತಹವರು ತಮ್ಮ ಪ್ರತಿಯೊಂದು ಸಂಕಲ್ಪ, ಪ್ರತೀ ಕರ್ಮದಲ್ಲಿ ಅವಶ್ಯವಾಗಿ ಸಿದ್ಧಿ ಸ್ವರೂಪರು ಮತ್ತು ದಾತರಾಗಿರುತ್ತಾರೆ. ನಾನು ಎಷ್ಟೊಂದು ಪುರುಷಾರ್ಥ ಮಾಡುತ್ತಿದ್ದೇನೆ ಅಥವಾ ಶ್ರಮ ಪಡುತ್ತಿದ್ದೇನೆ, ಇದರ ಫಲ ಕಾಣಿಸುತ್ತಿಲ್ಲ, ಎಷ್ಟೊಂದು ನೆನಪಿನ ಅಭ್ಯಾಸ ಮಾಡುತ್ತಿದ್ದೇನೆ ಆದರೆ ಅದರ ಸಿದ್ಧಿಯ ಅನುಭವ ಆಗುತ್ತಿಲ್ಲವೆಂದು ಸಿದ್ಧಿ-ದಾತರು ಎಂದೂ ಯೋಚಿಸುವುದಿಲ್ಲ, ಇದರಿಂದ ಸೀಟ್ನ ಮೇಲೆ ಸೆಟ್ ಆಗುವುದು ಯಥಾರ್ಥವಾಗಿ ಗೊತ್ತಿಲ್ಲವೆಂದು ಸಿದ್ಧವಾಗುತ್ತದೆ.

ಇದು ರಮಣೀಕ ಜ್ಞಾನವಾಗಿದೆ. ರಮಣೀಕ ಅನುಭವವು ಸ್ವತಹವಾಗಿ ಸುಸ್ತನ್ನು ಓಡಿಸಿ ಬಿಡುತ್ತದೆ. ಹಾಗೆಯೇ ಕುಳಿತರೆ ನಿದ್ರೆ ಬರುವುದಿಲ್ಲ, ಯೋಗದಲ್ಲಿ ಕುಳಿತರೆ ಅವಶ್ಯವಾಗಿ ನಿದ್ರೆ ಬರುತ್ತದೆ ಎಂದು ಹೇಳುತ್ತಾರಲ್ಲವೆ ಅಂದಾಗ ಈ ರೀತಿ ಏಕೆ ಆಗುತ್ತದೆ? ಸುಸ್ತಿಲ್ಲ ಎಂಬ ಮಾತಲ್ಲ ಆದರೆ ರಮಣೀಕ ರೀತಿ ಅಥವಾ ಸ್ವಾಭಾವಿಕ ರೂಪದಿಂದ ಬುದ್ಧಿಯನ್ನು ಸೀಟಿನ ಮೇಲೆ ಸೆಟ್ ಮಾಡುವುದಿಲ್ಲ. ಕೇವಲ ಒಂದು ರೂಪದಲ್ಲಲ್ಲ, ವಿಧ ವಿಧವಾದ ರೂಪದಲ್ಲಿ ಸೆಟ್ ಮಾಡಿ. ಒಂದೇ ವಸ್ತುವನ್ನು ಒಂದುವೇಳೆ ವಿಧವಿಧವಾದ ರೂಪದಲ್ಲಿ ಪರಿವರ್ತನೆ ಮಾಡಿ ಉಪಯೋಗಿಸಿದರೆ ಮನಸ್ಸಿಗೆ ಖುಷಿಯಾಗುತ್ತದೆ. ಭಲೆ ಚೆನ್ನಾಗಿರುವ ವಸ್ತುವೇ ಆಗಿರಬಹುದು ಆದರೆ ಒಂದೇ ವಸ್ತುವನ್ನು ಮತ್ತೆ-ಮತ್ತೇ ತಿನ್ನುತ್ತೀರೆಂದರೆ ಏನಾಗುತ್ತದೆ! ಬೀಜರೂಪ ಸ್ಥಿತಿಯಲ್ಲಂತೂ ಸ್ಥಿತರಾಗಿ ಆದರೆ ಕೆಲವೊಮ್ಮೆ ಲೈಟ್ಹೌಸ್ ರೂಪದಲ್ಲಿ, ಕೆಲವೊಮ್ಮೆ ಮೈಟ್ಹೌಸ್ ರೂಪದಲ್ಲಿ, ಕೆಲವೊಮ್ಮೆ ವೃಕ್ಷದ ಮೇಲೆ ಬೀಜ ರೂಪದಲ್ಲಿ, ಕೆಲವೊಮ್ಮೆ ಸೃಷ್ಟಿ ಚಕ್ರದ ಮೇಲೆ ನಿಂತು ಶಕ್ತಿಯನ್ನು ಕೊಡಿ. ಭಿನ್ನ-ಭಿನ್ನವಾದ ಬಿರುದುಗಳು ಸಿಗುತ್ತವೆ, ಆ ಭಿನ್ನ-ಭಿನ್ನವಾದ ಬಿರುದುಗಳನ್ನು ಅನುಭವ ಮಾಡಿ. ಕೆಲವೊಮ್ಮೆ ಕಣ್ಮಣಿಯಾಗಿ ಬಾಬಾನ ಕಣ್ಣುಗಳಲ್ಲಿ ಸಮಾವೇಶವಾಗಿರುವ ಅನುಭೂತಿ ಮಾಡಿ. ಕೆಲವೊಮ್ಮೆ ಮಸ್ತಕ ಮಣಿಯಾಗಿ, ಕೆಲವೊಮ್ಮೆ ಹೃದಯ ಸಿಂಹಾಸನಾಧೀಶರಾಗಿ ಭಿನ್ನ-ಭಿನ್ನ ಸ್ವರೂಪಗಳ ಅನುಭವ ಮಾಡಿ. ವಿಧ ವಿಧವಾಗಿ ಮಾಡುವುದರಿಂದ ರಮಣೀಕತೆ ಬರುತ್ತದೆ. ಬಾಪ್ದಾದಾ ಪ್ರತಿನಿತ್ಯವೂ ಭಿನ್ನ-ಭಿನ್ನವಾದ ಬಿರುದುಗಳನ್ನು ಕೊಡುತ್ತಾರೆ - ಏಕೆ? ಅದೇ ಸೀಟಿನಲ್ಲಿ ಸೆಟ್ ಆಗಿ ಮತ್ತು ಮಧ್ಯ ಮಧ್ಯದಲ್ಲಿ ಪರಿಶೀಲನೆ ಮಾಡಿ. ಮೊದಲೂ ತಿಳಿಸಲಾಗಿತ್ತು ಆದರೆ ನೀವು ಮರೆತು ಹೋಗುತ್ತೀರಿ. 6-8 ಗಂಟೆ ಕಳೆದು ಹೋದ ನಂತರ ಯೋಚಿಸುತ್ತೀರಿ ಆದ್ದರಿಂದ ಉದಾಸರಾಗಿ ಅರ್ಧದಿನ ವ್ಯರ್ಥವಾಯಿತೆಂದು ತಿಳಿದುಕೊಳ್ಳುತ್ತೀರಿ. ಇದು ಸ್ವಾಭಾವಿಕವಾಗಿ ಅಭ್ಯಾಸವಾಗಬೇಕು ಆಗಲೇ ವಿಧಿ-ವಿದಾತ, ಸಿದ್ಧ-ದಾತ ಆಗಿ ಆಗ ವಿಶ್ವದ ಆತ್ಮಗಳಿಗೆ ಕಲ್ಯಾಣ ಮಾಡಬಹುದು. ತಿಳಿಯಿತೆ. ಒಳ್ಳೆಯದು.

ಇಂದು ಮಧುಬನದವರ ದಿನವಾಗಿದೆ. ಡಬಲ್ ವಿದೇಶಿಗಳು ಮಧುಬನ ನಿವಾಸಿಗಳಿಗೆ ತಮ್ಮ ಸಮಯದ ಅವಕಾಶವನ್ನು ಕೊಟ್ಟು ಖುಷಿ ಪಡುತ್ತಿದ್ದಾರೆ. ಮಧುಬನ ನಿವಾಸಿಗಳು ಹೇಳುತ್ತಾರೆ - ಮಹಿಮೆ ಮಾಡಬೇಡಿ, ಮಹಿಮೆಯನ್ನಂತೂ ಬಹಳ ಕೇಳಿದ್ದೇವೆ. ಮಹಿಮೆಯನ್ನು ಕೇಳಿಯೇ ಮಹಾನ್ ಆಗುತ್ತಿದ್ದೇವೆ ಏಕೆಂದರೆ ಈ ಮಹಿಮೆಯು ಒಂದು ಗುರಾಣಿಯಾಗುತ್ತದೆ. ಹೇಗೆ ಯುದ್ಧದಲ್ಲಿ ಸುರಕ್ಷಿತರಾಗಿರುವುದಕ್ಕಾಗಿ ಗುರಾಣಿ ಇರುತ್ತದೆಯಲ್ಲವೆ ಅಂದಾಗ ಈ ಮಹಿಮೆಯೂ ಸಹ ನಾವು ಎಷ್ಟು ಮಹಾನ್ ಆಗಿದ್ದೇವೆಂಬ ಸ್ಮೃತಿಯನ್ನು ತರಿಸುತ್ತದೆ. ಮಧುಬನ ಕೇವಲ ಮಧುಬನವಲ್ಲ ಆದರೆ ವಿಶ್ವದ ಸ್ಟೇಜ್ ಆಗಿದೆ. ಮಧುಬನದಲ್ಲಿ ಇರುವುದು ಎಂದರೆ ವಿಶ್ವದ ಸ್ಟೇಜಿನ ಮೇಲೆ ಇರುವುದಾಗಿದೆ. ಸ್ಟೇಜಿನ ಮೇಲೆ ಯಾರು ಇರುತ್ತಾರೆಯೋ ಅವರು ಎಷ್ಟು ಗಮನವನ್ನು ಇಟ್ಟುಕೊಂಡಿರುತ್ತಾರೆ. ಸಾಧಾರಣ ರೀತಿಯಿಂದ ಯಾವುದೇ ಸ್ಥಾನದಲ್ಲಿದ್ದರೆ ಅಷ್ಟೊಂದು ಗಮನವಿರುವುದಿಲ್ಲ ಆದರೆ ಸ್ಟೇಜಿನ ಮೇಲೆ ಬಂದಾಗ ಪ್ರತೀ ಸಮಯ, ಪ್ರತೀ ಕರ್ಮದ ಬಗ್ಗೆ ಇಷ್ಟೊಂದು ಗಮನ ಬರುತ್ತದೆ ಅಂದಾಗ ಮಧುಬನವು ವಿಶ್ವದ ಸ್ಟೇಜ್ ಆಯಿತಲ್ಲವೆ. ನಾಲ್ಕೂ ಕಡೆಯ ದೃಷ್ಟಿಯು ಮಧುಬನದ ಕಡೆಯಿದೆ. ಅಂದಾಗ ಎಲ್ಲರ ಗಮನವು ಸ್ಟೇಜಿನ ಕಡೆಯೇ ಇರುತ್ತದೆ ಅಂದಮೇಲೆ ಮಧುಬನ ನಿವಾಸಿಗಳು ಸದಾ ವಿಶ್ವದ ಸ್ಟೇಜಿನ ಮೇಲೆ ಸ್ಥಿತರಾಗಿರುತ್ತಾರೆ. ಜೊತೆ ಜೊತೆಗೆ ಮಧುಬನವು ಒಂದು ವಿಚಿತ್ರ ಗುಮ್ಮಟವಾಗಿದೆ. ಗುಮ್ಮಟದಲ್ಲಿ ಯಾವುದೇ ಶಬ್ಧ ಮಾಡಿದರೆ ಅದು ಪ್ರತಿಧ್ವನಿಸುತ್ತದೆ ಆದರೆ ಮಧುಬನವು ಇಂತಹ ವಿಚಿತ್ರವಾದ ಗುಮ್ಮಟವಾಗಿದೆ - ಮಧುಬನದ ಸ್ವಲ್ಪ ಶಬ್ಧವೇ ಆಗಿರಲಿ ಅದು ಇಡೀ ವಿಶ್ವದಲ್ಲಿ ಹರಡುವುದು. ಇತ್ತೀಚೆಗೆ ಹಳೆಯ ಕಾಲದ ಸ್ಥಾನಗಳಲ್ಲಿ ಕೆಲವು ಗುರುತುಗಳಿವೆ - ಯಾವ ಒಂದು ಗೋಡೆಯನ್ನು ಮುಟ್ಟಿದರೆ ಅಥವಾ ಶಬ್ಧ ಮಾಡಿದರೆ 10 ಗೋಡೆಗಳಲ್ಲಿ ಪ್ರತಿಧ್ವನಿಸುವುದು ಮತ್ತು ಅದೇ ರೀತಿ ಕೇಳಿಸುವುದು. ಹೇಗೆ ಗೋಡೆಯೇ ಅಲುಗಾಡುತ್ತಿದೆ ಅಥವಾ ಶಬ್ಧ ಮಾಡುತ್ತಿದೆಯೇನೋ ಎಂಬಂತೆ ಬರುತ್ತದೆ. ಅಂದಾಗ ಮಧುಬನವೂ ಒಂದು ವಿಚಿತ್ರ ಗುಮ್ಮಟವಾಗಿದೆ. ಮಧುಬನದ ಶಬ್ಧವು ಕೇವಲ ಮಧುಬನದಲ್ಲಿರದೇ ನಾಲ್ಕೂ ಕಡೆಯೂ ಹರಡುತ್ತದೆ, ಅದು ಮಧುಬನದಲ್ಲಿ ಇರುವವರಿಗೇ ಗೊತ್ತಾಗುವುದಿಲ್ಲ ಅಂದಮೇಲೆ ಇದು ವಿಚಿತ್ರವಾಗಿದೆಯಲ್ಲವೆ, ಹೊರಗಡೆಯೂ ಹರಡುತ್ತದೆ. ಹೀಗೆ ತಿಳಿದುಕೊಳ್ಳಬಾರದು - ಇಲ್ಲಿ ನೋಡಿದರು, ಇಲ್ಲಿ ಕೇಳಿದರು ಎಂದು. ಆದರೆ ವಿಶ್ವದವರೆಗೆ ಗಾಳಿಯ ರೀತಿಯಲ್ಲಿ ಹರಡುತ್ತದೆ ಏಕೆಂದರೆ ಎಲ್ಲರ ದೃಷ್ಟಿಯಲ್ಲಿ ಬುದ್ಧಿಯಲ್ಲಿ ಮಧುಬನ ಮತ್ತು ಮಧುಬನದ ಬಾಪ್ದಾದಾ ಇರುತ್ತಾರೆ. ಅಂದಮೇಲೆ ಮಧುಬನ ತಂದೆಯ ಕಣ್ಣಿನಲ್ಲಿರುತ್ತದೆ, ಅಂದಾಗ ಮಧುಬನವೂ ಬರುತ್ತದೆಯಲ್ಲವೆ. ಮಧುಬನದ ಬಾಬಾ ಎಂದಾಗ ಮಧುಬನವೂ ಬರುತ್ತದೆ ಮತ್ತು ಮಧುಬನ ಕೇವಲ ಬಾಬಾರವರಿಲ್ಲ, ಮಕ್ಕಳೂ ಸಹ ಇದ್ದಾರೆ ಅಂದಮೇಲೆ ಮಧುಬನ ನಿವಾಸಿಗಳು ಎಲ್ಲರ ದೃಷ್ಟಿಯಲ್ಲಿ ಅವಶ್ಯವಾಗಿ ಬರುತ್ತಾರೆ. ಯಾವುದೇ ಬ್ರಾಹ್ಮಣನನ್ನು ಕೇಳಿದರೆ, ಎಷ್ಟೇ ದೂರದಲ್ಲಿರಲಿ ಏನು ನೆನಪಿಗೆ ಬರುತ್ತದೆ ಮತ್ತು ಮಧುಬನದ ಬಾಬಾ ಎನ್ನುತ್ತಾರೆ. ಅಂದಾಗ ಮಧುಬನ ನಿವಾಸಿಗಳಿಗೆ ಎಷ್ಟೊಂದು ಮಹತ್ವಿಕೆಯಿದೆಲ್ಲವೆ. ತಿಳಿಯಿತೆ. ಒಳ್ಳೆಯದು.

ನಾಲ್ಕೂ ಕಡೆಯ ಎಲ್ಲಾ ಸೇವೆಯ ಉಲ್ಲಾಸ-ಉತ್ಸಾಹದಲ್ಲಿರುವ ಸದಾ ಒಬ್ಬ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ, ಸದಾ ಪ್ರತಿಯೊಂದು ಕರ್ಮವನ್ನು ವಿಧಿಯ ಮೂಲಕ ಸಿದ್ಧಿಯ ಅನುಭವ ಮಾಡುವಂತಹ, ಸದಾ ಸ್ವಯಂನ್ನು ವಿಶ್ವ ಕಲ್ಯಾಣಕಾರಿ ಎಂದು ಅನುಭವ ಮಾಡಿ ಪ್ರತಿಯೊಂದು ಸಂಕಲ್ಪದಲ್ಲಿ, ಮಾತಿನಲ್ಲಿ ಶ್ರೇಷ್ಠ ಕಲ್ಯಾಣದ ಭಾವನೆ ಮತ್ತು ಶ್ರೇಷ್ಠ ಕಾಮನೆಯ ಮೂಲಕ ಸೇವೆಯಲ್ಲಿ ಬ್ಯುಜಿಯಾಗಿರುವಂತಹ ತಂದೆಯ ಸಮಾನ ಸದಾ ಅಥಕ್ ಸೇವಾಧಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ಭೇಟಿ:

1. ಸ್ವಯಂನ್ನು ಕರ್ಮಯೋಗಿ ಶ್ರೇಷ್ಠ ಆತ್ಮನೆಂದು ಅನುಭವ ಮಾಡುವಿರಾ? ಕರ್ಮಯೋಗಿ ಆತ್ಮನು ಕರ್ಮದ ಪ್ರತ್ಯಕ್ಷ ಫಲವಾದ ಖುಷಿ ಮತ್ತು ಶಕ್ತಿಯನ್ನು ಸದಾ ಹಾಗೂ ಸ್ವತಹವಾಗಿಯೇ ಅನುಭವ ಮಾಡುತ್ತಾರೆ. ಅಂದಮೇಲೆ ಕರ್ಮಯೋಗಿ ಆತ್ಮನು ಅರ್ಥಾತ್ ಪ್ರತ್ಯಕ್ಷ ಫಲವಾದ `ಖುಷಿ' ಹಾಗೂ `ಶಕ್ತಿ'ಯ ಅನುಭವ ಮಾಡಿಸುವವರು. ತಂದೆಯು ಸದಾ ಮಕ್ಕಳಿಗೆ ಪ್ರತ್ಯಕ್ಷ ಫಲವನ್ನು ಪ್ರಾಪ್ತಿ ಮಾಡಿಸುವವರಾಗಿದ್ದಾರೆ. ಹೇಗೆಂದರೆ, ಈಗೀಗ ಕರ್ಮ ಮಾಡಿದರು, ಕರ್ಮ ಮಾಡುತ್ತಾ ಖುಷಿ ಹಾಗೂ ಶಕ್ತಿಯ ಅನುಭವ ಮಾಡಿದರು! - ಇಂತಹ ಕರ್ಮಯೋಗಿ ಆತ್ಮನಾಗಿದ್ದೇನೆಂಬ ಸ್ಮೃತಿಯಿಂದ ಮುಂದುವರೆಯುತ್ತಾ ಇರಿ.

2. ಬೇಹದ್ದಿನ ಸೇವೆಯನ್ನು ಮಾಡುವುದರಿಂದ ಸ್ವತಹವಾಗಿಯೇ ಬೇಹದ್ದಿನ ಖುಷಿಯ ಅನುಭವ ಆಗುವುದಲ್ಲವೆ! ಬೇಹದ್ದಿನ ತಂದೆಯು ಬೇಹದ್ದಿನ ಅಧಿಕಾರಿಯನ್ನಾಗಿ ಮಾಡುವರು. ಬೇಹದ್ದಿನ ಸೇವೆಯ ಫಲವು ಸ್ವತಹವಾಗಿಯೇ ಬೇಹದ್ದಿನ ರಾಜ್ಯಭಾಗ್ಯದ ಪ್ರಾಪ್ತಿಯಾಗುವುದು. ಯಾವಾಗ ಬೇಹದ್ದಿನ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಸೇವೆಯನ್ನು ಮಾಡುತ್ತೀರೆಂದರೆ - ಯಾವ ಆತ್ಮರಿಗಾಗಿ ನಿಮಿತ್ತರಾಗುವಿರಿ, ಅವರ ಆಶೀರ್ವಾದಗಳೂ ಸಹ ಸ್ವತಹವಾಗಿಯೇ ಶಕ್ತಿ ಹಾಗೂ ಖುಷಿಯ ಅನುಭೂತಿ ಮಾಡಿಸುತ್ತದೆ. ಒಂದು ಸ್ಥಾನದಲ್ಲಿದ್ದರೂ ಬೇಹದ್ದಿನ ಬೇಹದ್ದಿನ ಸೇವೆಯ ಫಲವು ಸಿಗುತ್ತಿದೆ ಎಂಬ ಬೇಹದ್ದಿನ ನಶೆಯಿಂದ, ಬೇಹದ್ದಿನ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಸಾಗಿರಿ.

ವರದಾನ:
ಸೆಕೆಂಡಿನಲ್ಲಿ ದೇಹವೆಂಬ ಪೋರೆಯಿಂದ ಭಿನ್ನವಾಗಿ ಕರ್ಮಭೋಗದ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವ ಶಕ್ತಿ ಸಂಪನ್ನ ಭವ.

ಯಾವಾಗ ಕರ್ಮಭೋಗವು ಹೆಚ್ಚಾಗುತ್ತದೆ, ಕರ್ಮೇಂದ್ರಿಯಗಳು ಕರ್ಮಭೋಗಕ್ಕೆ ವಶವಾಗಿ ತನ್ನ ಕಡೆಗೆ ಆಕರ್ಷಿಸುತ್ತದೆ ಅರ್ಥಾತ್ ಯಾವ ಸಮಯದಲ್ಲಿ ಬಹಳ ನೋವುಂಟಾಗುತ್ತದೆ, ಅಂತಹ ಸಮಯದಲ್ಲಿ ಕರ್ಮಭೋಗವನ್ನು ಕರ್ಮಯೋಗದಲ್ಲಿ ಪರಿವರ್ತನೆ ಮಾಡುವವರು, ಸಾಕ್ಷಿಯಾಗಿದ್ದು ಕರ್ಮೇಂದ್ರಿಯಗಳಿಂದ ಭೋಗಿಸುವವರೇ ಸರ್ವ ಶಕ್ತಿ ಸಂಪನ್ನ, ಅಷ್ಟ ರತ್ನ ವಿಜಯಿ ಎಂದು ಕರೆಸಿಕೊಳ್ಳುತ್ತಾರೆ. ಇದಕ್ಕಾಗಿ ದೇಹವೆಂಬ ಪೊರೆಯಿಂದ ಭಿನ್ನವಾಗ ಅಭ್ಯಾಸವು ಬಹಳ ಸಮಯದಿಂದ ಇರಲಿ.ಈ ವಸ್ತ್ರ, ಪ್ರಪಂಚದ ಅಥವಾ ಮಾಯೆಯ ಆಕರ್ಷಣೆಯಲ್ಲಿ ಟೈಟ್ ಅರ್ಥಾತ್ ಸೆಳೆತವಿರಬಾರದು, ಹೀಗಿದ್ದಾಗ ಸಹಜವಾಗಿ ಬಿಡಬಹುದು.

ಸ್ಲೋಗನ್:
ಸರ್ವರ ಗೌರವವನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ನಿರಹಂಕಾರಿ ಗುಣವಿರಲಿ, ನಿರಹಂಕಾರಿ ಆಗಿರುವುದು ಮಹಾನತೆಯ ಸಂಕೇತವಾಗಿದೆ.