12.10.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಮಹಾವೀರರಾಗಿರಿ, ಮಾಯೆಯ ಬಿರುಗಾಳಿಗಳೊಂದಿಗೆ ಯುದ್ಧ ಮಾಡುವ ಬದಲು ಅಚಲ-ಅಡೋಲರಾಗಿರಿ

ಪ್ರಶ್ನೆ:
ಬ್ರಹ್ಮಾ ತಂದೆಯ ಮುಂದೆ ಅನೇಕ ಜಗಳ-ಕಲಹಗಳು ನಡೆಯುತ್ತಿದ್ದರೂ ಸಹ ಎಂದೂ ಬೇಸರ ಪಡಲಿಲ್ಲ - ಏಕೆ?

ಉತ್ತರ:
ಏಕೆಂದರೆ ತಂದೆಗೆ ನಶೆಯಿತ್ತು - ನಾನು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ಇದೆಲ್ಲವೂ ಕಲ್ಪದ ಹಿಂದಿನ ತರಹ ನಡೆಯುತ್ತಿದೆ, ಹೊಸದೇನಲ್ಲ. ಎಲ್ಲರಿಗಿಂತ ಹೆಚ್ಚಿನದಾಗಿ ತಂದೆಯು ಅಪಶಬ್ಧಗಳನ್ನು ಕೇಳಬೇಕಾಯಿತು ಮತ್ತೆ ಕೃಷ್ಣನಿಗೂ ಅವಹೇಳನ ಮಾಡುತ್ತಾರೆ. ಒಂದುವೇಳೆ ನನಗೂ ಅಪಶಬ್ಧಗಳನ್ನು ಕೇಳಬೇಕಾಗಿ ಬಂದರೆ ಅದೇನು ದೊಡ್ಡ ಮಾತು! ಪ್ರಪಂಚದವರು ನಮ್ಮ ಮಾತುಗಳನ್ನು ತಿಳಿದುಕೊಂಡಿಲ್ಲ ಅಂದಮೇಲೆ ಅವಶ್ಯವಾಗಿ ಅವಹೇಳನವನ್ನೇ ಮಾಡುವರು, ಈ ರೀತಿ ತಿಳಿದುಕೊಂಡ ಕಾರಣ ಯಾವುದೇ ಮಾತಿನಲ್ಲಿ ವಿವಶರಾಗಲಿಲ್ಲ ಅದೇರೀತಿ ಫಾಲೋ ಫಾದರ್ ಮಾಡಿರಿ.

ಗೀತೆ:
ಭೋಲಾನಾಥನಿಗಿಂತ ಭಿನ್ನ..................

ಓಂ ಶಾಂತಿ.
ಇದು ಭಕ್ತಿಮಾರ್ಗದವರ ಗೀತೆಯಾಗಿದೆ. ಜ್ಞಾನ ಮಾರ್ಗದಲ್ಲಿ ಗೀತೆ ಇತ್ಯಾದಿಗಳನ್ನು ಹಾಡಲಾಗುವುದಿಲ್ಲ. ರಚಿಸುವುದೂ ಇಲ್ಲ. ಅವಶ್ಯಕತೆಯೂ ಇಲ್ಲ ಏಕೆಂದರೆ ತಂದೆಯಿಂದ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆಯೆಂದು ಗಾಯನವಿದೆ. ಅದರಲ್ಲಿ ಗೀತೆ ಇತ್ಯಾದಿಗಳ ಮಾತೇ ಇಲ್ಲ. ನಮಗೆ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಕ್ತಿಮಾರ್ಗದ ರೀತಿ-ಪದ್ಧತಿಗಳು ಇದರಲ್ಲಿ ಬರುವುದಿಲ್ಲ. ಮಕ್ಕಳು ಕವಿತೆ ಇತ್ಯಾದಿಗಳನ್ನು ರಚಿಸುವುದೂ ಸಹ ಅನ್ಯರಿಗೆ ತಿಳಿಸಿಕೊಡುವುದಕ್ಕಾಗಿ ಮಾತ್ರ. ಅದರ ಅರ್ಥವನ್ನೂ ಸಹ ನೀವು ತಿಳಿಸುವವರೆಗೆ ಯಾರೂ ತಿಳಿದುಕೊಳ್ಳಲೂ ಸಾಧ್ಯವಿಲ್ಲ. ಈಗ ನೀವು ಮಕ್ಕಳಿಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಎಷ್ಟೊಂದು ಖುಷಿಯ ನಶೆಯಿರಬೇಕು! ತಂದೆಯು 84 ಜನ್ಮಗಳ ಚಕ್ರವನ್ನೂ ತಿಳಿಸಿದ್ದಾರೆ, ಅಂದಮೇಲೆ ನಾವೀಗ ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ. ತಂದೆಯಿಂದ ವಿಷ್ಣುಪುರಿಯ ಮಾಲೀಕರಾಗುತ್ತಿದ್ದೇವೆಂದು ಖುಷಿಯಿರಬೇಕಾಗಿದೆ. ನಿಶ್ಚಯ ಬುದ್ಧಿಯವರೇ ವಿಜಯಿಗಳಾಗುವರು, ಯಾರಿಗೆ ನಿಶ್ಚಯವಿರುವುದೋ ಅವರು ಸತ್ಯಯುಗದಲ್ಲಿ ಅವಶ್ಯವಾಗಿ ಹೋಗುವರು ಅಂದಮೇಲೆ ಮಕ್ಕಳಿಗೆ ಸದಾ ಖುಷಿಯಿರಬೇಕು. ತಂದೆಯನ್ನು ಫಾಲೋ ಮಾಡಿರಿ. ಮಕ್ಕಳಿಗೆ ಗೊತ್ತಿದೆ, ನಿರಾಕಾರ ತಂದೆಯು ಯಾವಾಗ ಇವರ ತನುವಿನಲ್ಲಿ ಪ್ರವೇಶ ಮಾಡಿದರೋ ಆಗಿನಿಂದ ಇವರ ಬಳಿಯೂ ಬಹಳಷ್ಟು ಏರುಪೇರುಗಳಾಯಿತು. ಸಹೋದರರ ಜಗಳ, ನಗರದ ಜಗಳ, ಸಿಂಧ್ನವರ ಜಗಳಗಳು ನಡೆಯಿತು. ಮಕ್ಕಳು ದೊಡ್ಡವರಾದರು, ಬೇಗನೆ ವಿವಾಹ ಮಾಡಿ ಎಂದರು. ವಿವಾಹ ಆಗದೇ ಕೆಲಸವು ಹೇಗೆ ನಡೆಯುವುದು? ಎಂದು ಹೇಳತೊಡಗಿದರು. ತಂದೆಯು (ದಾದಾ ಲೇಖರಾಜ್) ಗೀತೆ ಓದುವುದನ್ನು ಎಂದೂ ತಪ್ಪಿಸುತ್ತಿರಲಿಲ್ಲ. ಯಾವಾಗ ಗೀತೆಯ ಭಗವಂತ ಶಿವನೆಂದು ಅರ್ಥವಾಯಿತೋ ಆಗ ಗೀತೆಯನ್ನು ಓದುವುದು ಬಿಟ್ಟು ಹೋಯಿತು. ನಾನು ವಿಶ್ವದ ಮಾಲೀಕನಾಗುತ್ತೇನೆ ಎಂದು ನಶೆಯೇರಿತು, ಇದು ಶಿವ ಭಗವಾನುವಾಚ ಆಗಿದೆಯೆಂದು ತಿಳಿದಾಗ ಆ ಗೀತೆಯನ್ನು ಬಿಟ್ಟು ಬಿಟ್ಟರು ನಂತರ ಪವಿತ್ರತೆಗಾಗಿ ಎಷ್ಟೊಂದು ಜಗಳಗಳು ನಡೆಯಿತು. ಸಹೋದರ-ಸಹೋದರರು, ಚಿಕ್ಕಪ್ಪ, ದೊಡ್ಡಪ್ಪ ಎಷ್ಟೊಂದು ಮಂದಿಯಿದ್ದರು, ಇದರಲ್ಲಿಯೂ ಸಾಹಸ ಬೇಕಲ್ಲವೆ. ನೀವಂತೂ ಮಹಾವೀರ-ಮಹಾವೀರಿಣಿಯರಾಗಿದ್ದೀರಿ, ನಿಮಗೆ ಒಬ್ಬರನ್ನು ಬಿಟ್ಟರೆ ಮತ್ತ್ಯಾರದೇ ಚಿಂತೆಯಿಲ್ಲ. ಪುರುಷನು ರಚಯಿತನಾಗಿರುತ್ತಾನೆ, ರಚಯಿತನು ಪಾವನನಾಗುತ್ತಾರೆಂದರೆ ತಮ್ಮ ರಚನೆಯನ್ನು ಪಾವನ ಮಾಡಬೇಕಾಗಿದೆ. ಪವಿತ್ರ ಹಂಸಗಳು ಮತ್ತು ಅಪವಿತ್ರ ಕೊಕ್ಕರೆಗಳು ಒಟ್ಟಿಗೆ ಇರಲು ಹೇಗೆ ಸಾಧ್ಯ! ರಚಯಿತನಂತೂ (ಪುರುಷ) ಆಜ್ಞೆ ಮಾಡುವರು - ನನ್ನ ಮತದಂತೆ ನಡೆಯುವಂತಿದ್ದರೆ ನಡೆಯಿರಿ ಇಲ್ಲವೆಂದರೆ ಇಲ್ಲಿಂದ ಹೊರಟು ಹೋಗಿ ಎಂದು. ನಿಮಗೆ ತಿಳಿದಿದೆ - ಲೌಕಿಕ ಮಗಳ ವಿವಾಹವಾಗಿತ್ತು, ಅವರಿಗೆ ಯಾವಾಗ ಈ ಜ್ಞಾನವು ಸಿಕ್ಕಿತೋ ಆಗ ಪವಿತ್ರರಾಗಿರಿ ಎಂದು ತಂದೆಯು ಹೇಳುತ್ತಿದ್ದಾರೆ ಅಂದಮೇಲೆ ನಾವೇಕೆ ಪವಿತ್ರರಾಗಬಾರದು ಎಂದು ಹೇಳಿ ತಮ್ಮ ಪತಿಗೆ ನಾನು ವಿಕಾರದ ಸಹಯೋಗದ ಕೊಡುವುದಿಲ್ಲವೆಂದು ಉತ್ತರ ನೀಡಿದಾಗ ಈ ಮಾತಿನ ಮೇಲೆ ಅನೇಕರ ಜಗಳವು ನಡೆಯಿತು. ದೊಡ್ಡ-ದೊಡ್ಡ ಮನೆಗಳಿಂದ ಕನ್ಯೆಯರು ಹೊರಬಂದರು, ಯಾವುದನ್ನೂ ಲಕ್ಷಿಸಲಿಲ್ಲ. ಅದೃಷ್ಟದಲ್ಲಿಲ್ಲವೆಂದರೆ ಇದನ್ನು ತಿಳಿದುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಪವಿತ್ರರಾಗಿರುವಂತಿದ್ದರೆ ಇರಿ, ಇಲ್ಲದಿದ್ದರೆ ಹೋಗಿ ತಮ್ಮ ಪ್ರಬಂಧ ಮಾಡಿಕೊಳ್ಳಿ. ಇಷ್ಟು ಧೈರ್ಯವಾದರೂ ಬೇಕಲ್ಲವೆ. ತಂದೆಯ ಮುಂದೆ ಎಷ್ಟೊಂದು ಗಲಾಟೆಗಳಾಯಿತು ಆದರೆ ತಂದೆಯು ಎಂದಾದರೂ ಬೇಸರ ಪಟ್ಟಿದ್ದನ್ನು ನೋಡಿದಿರಾ! ಪತ್ರಿಕೆಗಳಲ್ಲಿ ಅಮೇರಿಕಾದವರೆಗೂ ಸುದ್ಧಿ ಹರಡಿತು, ಇದು ನತಿಂಗ್ನ್ಯೂ. ಕಲ್ಪದ ಮೊದಲಿನಂತೆ ಇದೆಲ್ಲವೂ ನಡೆಯುತ್ತಿದೆ, ಇದರಲ್ಲಿ ಹೆದರುವ ಮಾತೇನಿದೆ! ನಾವಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನಮ್ಮ ರಚನೆಯನ್ನು ರಕ್ಷಣೆ ಮಾಡಬೇಕಾಗಿದೆ. ತಂದೆಗೆ ಗೊತ್ತಿದೆ, ಇಡೀ ರಚನೆಯು ಈ ಸಮಯದಲ್ಲಿ ಪತಿತವಾಗಿದೆ, ನಾನೇ ಎಲ್ಲರನ್ನೂ ಪಾವನರನ್ನಾಗಿ ಮಾಡಬೇಕಾಗಿದೆ. ಹೇ ಪತಿತ-ಪಾವನ, ಮುಕ್ತಿದಾತ ಬನ್ನಿ ಎಂದು ತಂದೆಗೇ ಎಲ್ಲರೂ ಹೇಳುತ್ತಾರೆ ಅಂದಮೇಲೆ ಅವರಿಗೇ ದಯೆ ಬರುತ್ತದೆ. ಅವರು ದಯಾಹೃದಯಿಯಲ್ಲವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಮಾತಿನಲ್ಲಿ ಹೆದರಬೇಡಿ. ಹೆದರಿದರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ಮಾತೆಯರ ಮೇಲೆ ಅತ್ಯಾಚಾರಗಳಾಗುತ್ತವೆ, ಇದೂ ಸಹ ನಿದರ್ಶನವಿದೆ. ದ್ರೌಪದಿಯನ್ನು ಅಪವಿತ್ರಗೊಳಿಸುತ್ತಾರೆ. ತಂದೆಯು 21 ಜನ್ಮಗಳಿಗಾಗಿ ಅಪವಿತ್ರರಾಗುವುದರಿಂದ ಬಿಡಿಸುತ್ತಾರೆ. ಪ್ರಪಂಚದವರಿಗೂ ಈ ಮಾತುಗಳ ಬಗ್ಗೆ ತಿಳಿದಿಲ್ಲ. ನಾನು ಸದ್ಗತಿ ದಾತನಾಗಿದ್ದೇನೆ ಅಲ್ಲವೆ. ಮನುಷ್ಯರು ದುರ್ಗತಿಯನ್ನು ಹೊಂದಿದಾಗಲೇ ನಾನು ಬಂದು ಸದ್ಗತಿಯನ್ನು ನೀಡುವೆನು. ಸೃಷ್ಟಿಯು ಪತಿತ, ತಮೋಪ್ರಧಾನವಾಗಲೇಬೇಕು, ಪ್ರತಿಯೊಂದು ವಸ್ತು ಹೊಸದರಿಂದ ಹಳೆಯದಾಗುತ್ತದೆ. ಹಳೆಯ ಮನೆಯನ್ನು ಬಿಡಲೇಬೇಕಾಗುತ್ತದೆ. ಹೊಸ ಪ್ರಪಂಚ ಸತ್ಯಯುಗ, ಹಳೆಯ ಪ್ರಪಂಚವು ಕಲಿಯುಗ. ಸದಾ ಹೊಸದಾಗಿರಲು ಸಾಧ್ಯವಿಲ್ಲ. ಇದು ಸೃಷ್ಟಿಚಕ್ರವಾಗಿದೆ. ದೇವಿ-ದೇವತೆಗಳ ರಾಜ್ಯವು ಪುನಃ ಸ್ಥಾಪನೆಯಾಗುತ್ತಿದೆ, ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಪುನಃ ಗೀತಾ ಜ್ಞಾನವನ್ನು ತಿಳಿಸುತ್ತೇನೆ. ಇಲ್ಲಿ ರಾವಣ ರಾಜ್ಯದಲ್ಲಿ ದುಃಖವಿದೆ, ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ ಮತ್ತು ತಿಳಿದುಕೊಳ್ಳುವುದೂ ಇಲ್ಲ. ತಂದೆಯು ಹೇಳುತ್ತಾರೆ - ನಾನು ಸ್ವರ್ಗ ಅಥವಾ ರಾಮ ರಾಜ್ಯದ ಸ್ಥಾಪನೆ ಮಾಡಲು ಬಂದಿದ್ದೇನೆ. ನೀವು ಮಕ್ಕಳು ಅನೇಕ ಬಾರಿ ರಾಜ್ಯವನ್ನು ಪಡೆದಿದ್ದೀರಿ ಮತ್ತೆ ಕಳೆದುಕೊಂಡಿದ್ದೀರಿ, ಇದು ಎಲ್ಲರ ಬುದ್ಧಿಯಲ್ಲಿದೆ. 21 ಜನ್ಮಗಳು ಸತ್ಯಯುಗದಲ್ಲಿರುತ್ತೀರಿ, ಅದಕ್ಕೆ 21 ಪೀಳಿಗೆಗಳು ಎಂದು ಹೇಳಲಾಗುತ್ತದೆ ಅರ್ಥಾತ್ ಯಾವಾಗ ಸಂಪೂರ್ಣ ವೃದ್ಧರಾಗುವರೋ ಆಗಲೇ ಶರೀರ ಬಿಡುತ್ತಾರೆ, ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ನೀವೀಗ ತ್ರಿಕಾಲದರ್ಶಿಗಳಾಗಿ ಬಿಟ್ಟಿದ್ದೀರಿ. ತಿಳಿದುಕೊಂಡಿದ್ದೀರಿ, ನಾವು ಜನ್ಮ-ಜನ್ಮಾಂತರ ಭಕ್ತಿ ಮಾಡುತ್ತೇವೆ, ರಾವಣ ರಾಜ್ಯದಲ್ಲಿ ಎಷ್ಟೊಂದು ಆಡಂಬರವಿದೆ ನೋಡಿರಿ, ಇದು ಕೊನೆಯ ಆಡಂಬರವಾಗಿದೆ. ರಾಮ ರಾಜ್ಯವು ಸತ್ಯಯುಗದಲ್ಲಿರುವುದು, ಅಲ್ಲಿ ಈ ವಿಮಾನ ಇತ್ಯಾದಿಗಳೆಲ್ಲವೂ ಇತ್ತು ನಂತರ ಇದೆಲ್ಲವೂ ಮರೆಯಾಯಿತು. ಮತ್ತೆ ಈ ಸಮಯದಲ್ಲಿ ಇವೆಲ್ಲವೂ ಹೊರಬಂದಿವೆ. ಈಗ ಇದೆಲ್ಲವನ್ನೂ ಕಲಿಯುತ್ತಿದ್ದಾರೆ. ಯಾರು ಕಲಿಯುವವರಿದ್ದಾರೆಯೋ ಅವರು ಸಂಸ್ಕಾರವನ್ನು ತೆಗೆದುಕೊಂಡು ಹೋಗಿ ಸತ್ಯಯುಗದಲ್ಲಿ ಬಂದು ವಿಮಾನಗಳನ್ನು ತಯಾರಿಸುತ್ತಾರೆ. ಇವು ನಿಮಗೆ ಭವಿಷ್ಯದಲ್ಲಿ ಸುಖ ಕೊಡುವಂತಹವಾಗಿವೆ. ಈ ವಿಮಾನ ಇತ್ಯಾದಿಗಳನ್ನು ಭಾರತವಾಸಿಗಳೂ ಸಹ ಮಾಡಬಲ್ಲರು, ಹೊಸ ಮಾತೇನಿಲ್ಲ. ಬುದ್ಧಿವಂತರಾಗಿದ್ದಾರೆ ಅಲ್ಲವೆ. ಈ ವಿಜ್ಞಾನವು ನಿಮಗೆ ಅಲ್ಲಿ ಕೆಲಸಕ್ಕೆ ಬರುವುದು. ಈಗ ಈ ವಿಜ್ಞಾನವು ದುಃಖಕ್ಕಾಗಿ ಇದೆ, ಮತ್ತೆ ಇದೇ ಸುಖಕ್ಕಾಗಿ ಇರುವುದು. ಅಲ್ಲಿ ಪ್ರತೀ ವಸ್ತು ಹೊಸದಾಗಿರುವುದು. ಈಗಂತೂ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ, ತಂದೆಯೇ ಹೊಸ ಪ್ರಪಂಚದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ ಅಂದಾಗ ಮಕ್ಕಳು ಮಹಾವೀರರಾಗಬೇಕು. ಪ್ರಪಂಚದಲ್ಲಿ ಭಗವಂತ ಬಂದಿದ್ದಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ.

ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಇದರಲ್ಲಿ ಹೆದರುವ ಮಾತಿಲ್ಲ. ಭಲೆ ನಿಮಗೆ ನಿಂದನೆ ಸಿಗಬಹುದು, ಇವರಿಗೂ ಸಹ ಬಹಳಷ್ಟು ನಿಂದನೆಯಾಯಿತಲ್ಲವೆ. ಕೃಷ್ಣನಿಗೂ ಸಹ ಇದೆಲ್ಲವೂ ಆಯಿತು, ಇದನ್ನು ತೋರಿಸುತ್ತಾರೆ - ವಾಸ್ತವದಲ್ಲಿ ಕೃಷ್ಣನಿಗೆ ಯಾರೂ ನಿಂದನೆ ಮಾಡಲು ಸಾಧ್ಯವಿಲ್ಲ. ಕಲಿಯುಗದಲ್ಲಿಯೇ ನಿಂದನೆಯನ್ನು ಕೇಳಬೇಕಾಗುತ್ತದೆ. ಈಗ ಇರುವ ನಿಮ್ಮ ರೂಪವು ಮತ್ತೆ ಕಲ್ಪದ ನಂತರ ಇದೇ ಸಮಯದಲ್ಲಿ ಇರುವುದು. ಇದು ಮಧ್ಯದಲ್ಲಿ ಎಂದೂ ಇರಲು ಸಾಧ್ಯವಿಲ್ಲ. ಪ್ರತೀ ಜನ್ಮದಲ್ಲಿ ಮುಖ ಲಕ್ಷಣಗಳು ಬದಲಾಗುತ್ತಾ ಹೋಗುತ್ತವೆ. ಒಂದು ಆತ್ಮನಿಗೆ 84 ಜನ್ಮಗಳಲ್ಲಿ ಒಂದೇ ತರಹದ ಮುಖ ಲಕ್ಷಣಗಳು ಸಿಗಲು ಸಾಧ್ಯವಿಲ್ಲ. ಸತೋ, ರಜೋ, ತಮೋದಲ್ಲಿ ಬರುತ್ತಾ ಹೋದಂತೆ ಮುಖ ಲಕ್ಷಣಗಳು ಬದಲಾಗುತ್ತಾ ಹೋಗುತ್ತವೆ, ಇದು ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. 84 ಜನ್ಮಗಳಲ್ಲಿ ಯಾವ ಮುಖ ಲಕ್ಷಣಗಳಲ್ಲಿ ಜನ್ಮ ಪಡೆದಿದ್ದೀರಿ ಅದನ್ನೇ ಪಡೆಯುತ್ತೀರಿ. ನೀವೀಗ ತಿಳಿದುಕೊಂಡಿದ್ದೀರಿ, ಇವರ ರೂಪವು ಬದಲಾಗಿ ನಂತರದ ಜನ್ಮದಲ್ಲಿ ಇವರು ಲಕ್ಷ್ಮೀ-ನಾರಾಯಣರಾಗಿ ಬಿಡುತ್ತಾರೆ. ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ, ಇದು ಹೊಸ ಮಾತಾಗಿದೆ. ಹೊಸ ತಂದೆ, ಹೊಸ ಮಾತುಗಳು. ಈ ಮಾತುಗಳೇ ಯಾರಿಗೂ ಬೇಗನೆ ಅರ್ಥವಾಗುವುದಿಲ್ಲ. ಅದೃಷ್ಟದಲ್ಲಿದ್ದಾಗಲೇ ಅವರಿಗೆ ಅರ್ಥವಾಗುವುದು. ಮಹಾವೀರರು ಬಿರುಗಾಳಿಗಳಿಗೆ ಹೆದರುವುದಿಲ್ಲ. ಆ ಸ್ಥಿತಿಯು ಕೊನೆಯಲ್ಲಿಯೇ ಇರುವುದು ಆದ್ದರಿಂದ ಅತೀಂದ್ರಿಯ ಸುಖದ ಗಾಯನವನ್ನು ಕೇಳಬೇಕೆಂದರೆ ಗೋಪ-ಗೋಪಿಯರಿಂದ ಕೇಳಿರಿ ಎಂದು ಗಾಯನವಿದೆ. ತಂದೆಯೂ ನೀವು ಮಕ್ಕಳನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದಾರೆ. ಕಲ್ಪದ ಹಿಂದಿನ ತರಹ ನರಕದ ವಿನಾಶವಂತೂ ಆಗಲೇಬೇಕಾಗಿದೆ, ಸತ್ಯಯುಗದಲ್ಲಿ ಒಂದೇ ಧರ್ಮವಿರುವುದು. ಏಕತೆಯಿರಲಿ, ಒಂದು ಧರ್ಮವಿರಲಿ ಎಂದು ಎಲ್ಲರೂ ಬಯಸುತ್ತಾರೆ ಆದರೆ ರಾಮ ರಾಜ್ಯ, ರಾವಣ ರಾಜ್ಯವು ಬೇರೆ-ಬೇರೆಯಾಗಿದೆ ಎಂದು ಯಾರಿಗೂ ತಿಳಿದಿಲ್ಲ. ಇಲ್ಲಿ ವಿಕಾರವಿಲ್ಲದೆ ಜನ್ಮವಾಗಲು ಸಾಧ್ಯವಿಲ್ಲ. ಕೊಳಕಾಗಿದ್ದಾರಲ್ಲವೆ! ಈಗ ತಂದೆಯಲ್ಲಿ ನಿಶ್ಚಯವು ಇರುವುದೇ ಆದರೆ ಸಂಪೂರ್ಣ ಶ್ರೀಮತದಂತೆ ನಡೆಯಬೇಕಲ್ಲವೆ. ಪ್ರತಿಯೊಬ್ಬರ ನಾಡಿ ನೋಡಲಾಗುತ್ತದೆ, ಅದರ ಅನುಸಾರ ಅವರಿಗೆ ಸಲಹೆ ನೀಡುತ್ತಾರೆ. ತಂದೆಯೂ ಸಹ (ಬ್ರಹ್ಮಾ) ಮಕ್ಕಳಿಗೆ ಹೇಳಿದರು - ಒಂದುವೇಳೆ ವಿವಾಹ ಮಾಡಿಕೊಳ್ಳುವಂತಿದ್ದರೆ ಹೋಗಿ ಮಾಡಿಕೊಳ್ಳಿರಿ ಎಂದು. ಅನೇಕ ಮಿತ್ರ ಸಂಬಂಧಿ ಮೊದಲಾದವರಿದ್ದಾರೆ, ಅವರೆಲ್ಲರೂ ವಿವಾಹ ಮಾಡಿಸುವರು ಎಂದು ಹೇಳಿ ತಂದೆಯು ಈ ರೀತಿ ಹೇಳಿದರು. ಅಂದಾಗ ಪ್ರತಿಯೊಬ್ಬರ ನಾಡಿ ನೋಡಿ ಹೇಳಲಾಗುತ್ತದೆ. ಬಾಬಾ, ನಾವು ಇಂತಹ ಪರಿಸ್ಥಿತಿಯಲ್ಲಿದ್ದೇವೆ, ನಾವು ಪವಿತ್ರರಾಗಿರಲು ಬಯಸುತ್ತೇವೆ. ನಮ್ಮ ಸಂಬಂಧಿಗಳು ನಮ್ಮನ್ನು ಮನೆಯಿಂದ ಹೊರಹಾಕಲಿದ್ದಾರೆ. ಈಗ ಏನು ಮಾಡುವುದು ಎಂದು ಕೇಳುತ್ತಾರೆ. ಪವಿತ್ರರಾಗಿರಬೇಕೆಂದು ಕೇಳುತ್ತೀರಿ, ಒಂದುವೇಳೆ ಇರಲು ಇಷ್ಟವೆಂದರೆ ಹೋಗಿ ವಿವಾಹ ಮಾಡಿಕೊಳ್ಳಿ. ಒಂದುವೇಳೆ ಯಾರೊಂದಿಗೋ ನಿಶ್ಚಿತಾರ್ಥವಾಗಿದೆ, ಅವರನ್ನು ಖುಷಿ ಪಡಿಸಬೇಕಾಗಿದೆ ಎನ್ನುವುದಿದ್ದರೆ ಹೋಗಿ ಮಾಡಿಕೊಳ್ಳಿರಿ. ಮಾಂಗಲ್ಯವನ್ನು ಕಟ್ಟುವಾಗಲೂ ಸಹ ನಿಮ್ಮ ಪತಿಯೇ ನಿಮಗೆ ಗುರುವಾಗಿದ್ದಾರೆ ಎಂದು ಹೇಳುತ್ತಾರೆ. ಒಳ್ಳೆಯದು - ಆ ಸಮಯದಲ್ಲಿ ನೀವು ಅವರಿಂದ ಬರೆಸಿಕೊಳ್ಳಿರಿ. ನಾನು ನಿಮ್ಮ ಗುರು - ಈಶ್ವರ ಆಗಿದ್ದೇನೆ ಎಂದು ನೀನು ಒಪ್ಪುವುದಾದರೆ ಇದರಲ್ಲಿ ಬರೆ, ನಾನೀಗ ಪವಿತ್ರರಾಗಿರುವ ಆದೇಶ ನೀಡುತ್ತೇನೆ ಎಂದು ಹೇಳಬಹುದಾಗಿದೆ. ಇಷ್ಟು ಧೈರ್ಯವು ಬೇಕಲ್ಲವೆ. ಬಹಳ ಉನ್ನತ ಗುರಿಯಾಗಿದೆ, ಇಬ್ಬರೂ ಒಟ್ಟಿಗೆ ಹೇಗೆ ಇರಬಹುದು ಎಂಬುದನ್ನು ಎಲ್ಲರಿಗೆ ತೋರಿಸಬೇಕಾಗಿದೆ. ಪ್ರಾಪ್ತಿಯು ಬಹಳಷ್ಟಿದೆ, ಪ್ರಾಪ್ತಿಯ ಬಗ್ಗೆ ಅರಿವಿಲ್ಲದಿದ್ದಾಗ ವಿಕಾರದ ಬೆಂಕಿಯು ಬೀಳುತ್ತದೆ ಮಕ್ಕಳೇ, ಇಷ್ಟು ದೊಡ್ಡ ಪ್ರಾಪ್ತಿಯಾಗುತ್ತದೆ ಅಂದಮೇಲೆ ಒಂದು ಜನ್ಮ ಪವಿತ್ರರಾಗಿರಿ, ಇದೇನು ದೊಡ್ಡ ಮಾತು! ನಾನು ನಿಮ್ಮ ಪತಿ ಈಶ್ವರನಾಗಿದ್ದೇನೆ, ನನ್ನ ಆಜ್ಞೆಯಂತೆ ಪವಿತ್ರರಾಗಿರಬೇಕಾಗುವುದು, ತಂದೆಯು ಯುಕ್ತಿಗಳನ್ನು ತಿಳಿಸುತ್ತಾರೆ. ಭಾರತದಲ್ಲಿ ಇದು ಕಾಯಿದೆಯಿದೆ, ನಿಮ್ಮ ಪತಿಯು ಈಶ್ವರನಾಗಿದ್ದಾರೆ, ಅವರ ಆಜ್ಞೆಯಂತೆ ನಡೆಯಬೇಕೆಂದು ಸ್ತ್ರೀಗೆ ಹೇಳಿಕೊಡುತ್ತಾರೆ. ಪತಿಯ ಕಾಲು ಒತ್ತಬೇಕಾಗಿದೆ ಏಕೆಂದರೆ ಲಕ್ಷ್ಮಿಯು ನಾರಾಯಣನ ಕಾಲು ಒತ್ತುತ್ತಿದ್ದಳು ಎಂದು ತಿಳಿಯುತ್ತಾರೆ ಆದರೆ ಈ ಪದ್ಧತಿ ಎಲ್ಲಿಂದ ಬಂದಿತು? ಸುಳ್ಳು ಚಿತ್ರಗಳಿಂದ. ಸತ್ಯಯುಗದಲ್ಲಿ ಈ ಮಾತುಗಳಿರುವುದೇ ಇಲ್ಲ. ಲಕ್ಷ್ಮಿಯು ಕುಳಿತು ಕಾಲನ್ನೊತ್ತಲು ನಾರಾಯಣನು ಎಂದಾದರೂ ಸುಸ್ತಾಗುವನೇ? ದಣಿವಿನ ಮಾತೇ ಇರಲು ಸಾಧ್ಯವಿಲ್ಲ. ದಣಿಯುವುದು ಎಂದರೆ ಇದು ದುಃಖದ ಮಾತಾಗುತ್ತದೆ, ಅಲ್ಲಿ ದುಃಖವೆಲ್ಲಿಂದ ಬಂದಿತು? ಎಷ್ಟೊಂದು ಅಸತ್ಯ ಮಾತುಗಳನ್ನು ಬರೆದಿದ್ದಾರೆ. ತಂದೆಗೆ ಬಾಲ್ಯದಿಂದಲೇ ವೈರಾಗ್ಯವಿರುತ್ತಿತ್ತು ಆದ್ದರಿಂದ ಭಕ್ತಿ ಮಾಡುತ್ತಿದ್ದರು.

ತಂದೆಯು ಮಕ್ಕಳಿಗೆ ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಯಾರಾದರೂ ಗಂಡು ಮಕ್ಕಳಿಗೆ ಸಂಬಂಧಿಗಳು ವಿವಾಹವಾಗಬೇಕೆಂದು ಬಹಳ ತೊಂದರೆ ಕೊಡುತ್ತಾರೆಂದರೆ ವಿವಾಹ ಮಾಡಿಕೊಳ್ಳಿ, ಆಗ ಸ್ತ್ರೀಯು ನಿಮ್ಮವಳಾದಳು, ಆಗ ಯಾರು ಏನೂ ಮಾಡಲು ಸಾಧ್ಯವಿಲ್ಲ. ಪರಸ್ಪರ ಸೇರಿ ಜೊತೆಗಾರರಾಗಿ ಪವಿತ್ರರಾಗಿ ಇರಿ. ವಿದೇಶದಲ್ಲಿ ವೃದ್ಧರಾದಾಗ ಸಂಭಾಲನೆ ಮಾಡುವುದಕ್ಕಾಗಿ ಸಂಗಾತಿಯನ್ನು ಇಟ್ಟುಕೊಳ್ಳುತ್ತಾರೆ. ಸಿವಿಲ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ, ವಿಕಾರದಲ್ಲಿ ಹೋಗುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಪರಸ್ಪರ ಸಹೋದರ-ಸಹೋದರಿಯರಾಗಿದ್ದೇವೆ, ತಾತನಿಂದ ಆಸ್ತಿಯನ್ನು ಪಡೆಯುತ್ತೇವೆ. ಹೇ ಪತಿತ-ಪಾವನ ಎಲ್ಲಾ ಸೀತೆಯರ ರಾಮನೇ ಎಂದು ಪತಿತ ಪ್ರಪಂಚದಲ್ಲಿ ತಂದೆಯನ್ನು ಕರೆಯುತ್ತಾರೆ, ಮನುಷ್ಯರು ರಾಮ, ರಾಮ ಎಂದು ಜಪಿಸುವಾಗ ಸೀತೆಯನ್ನು ನೆನಪು ಮಾಡುತ್ತಾರೆಯೇ! ಅವರಿಗಿಂತಲೂ ದೊಡ್ಡವರು ಲಕ್ಷ್ಮಿಯಾಗಿದ್ದಾರೆ, ಆದರೂ ಸಹ ನೆನಪನ್ನಂತೂ ಒಬ್ಬ ತಂದೆಯನ್ನೇ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರನ್ನಾದರೂ ತಿಳಿದುಕೊಂಡಿದ್ದಾರೆ, ಶಿವನನ್ನು ಯಾರೂ ತಿಳಿದುಕೊಂಡಿಲ್ಲ. ಆತ್ಮವು ಬಿಂದುವಾಗಿದೆ ಅಂದಮೇಲೆ ಆತ್ಮರ ತಂದೆಯೂ ಸಹ ಬಿಂದುವಾಗಿರುವರಲ್ಲವೆ. ಆತ್ಮದಲ್ಲಿ ಸಂಪೂರ್ಣ ಜ್ಞಾನವಿದೆ, ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ನೀವಾತ್ಮರೂ ಜ್ಞಾನ ಸಾಗರರಾಗುತ್ತೀರಿ, ಜ್ಞಾನ ಸಾಗರನು ಕುಳಿತು ನೀವಾತ್ಮರಿಗೆ ತಿಳಿಸುತ್ತಾರೆ. ಆತ್ಮವು ಚೈತನ್ಯವಾಗಿದೆ, ನೀವಾತ್ಮರು ಜ್ಞಾನ ಸಾಗರರಾಗುತ್ತಿದ್ದೀರಿ. ನಿಮಗೆ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಮಧುರ ಮಕ್ಕಳು ಸಾಹಸವನ್ನು ಇಡಬೇಕಾಗಿದೆ. ನಾವು ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಬೇಹದ್ದಿನ ತಂದೆಯು ಬೇಹದ್ದಿನ ಮಕ್ಕಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ - ನೀವೂ ಸಹ ತಮ್ಮ ರಚನೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಒಂದುವೇಳೆ ಮಗನು ನಿಮ್ಮ ಆಜ್ಞೆಯನ್ನು ಪಾಲಿಸಲಿಲ್ಲವೆಂದರೆ ಆ ಮಗನು ಮಗನಲ್ಲ, ಕುಪುತ್ರನಾದನು. ಆಜ್ಞಾಕಾರಿ, ಪ್ರಾಮಾಣಿಕ ಮಕ್ಕಳಾಗಿದ್ದರೆ ಅವರು ಆಸ್ತಿಗೆ ಹಕ್ಕುದಾರರಾಗುವರು. ಬೇಹದ್ದಿನ ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ನನ್ನ ಶ್ರೀಮತದಂತೆ ನಡೆದರೆ ಇಂತಹ ಶ್ರೇಷ್ಠರಾಗುವಿರಿ, ಇಲ್ಲದಿದ್ದರೆ ಪ್ರಜೆಗಳಲ್ಲಿ ಹೋಗುವಿರಿ. ತಂದೆಯು ನಿಮ್ಮನ್ನು ನರನಿಂದ ನಾರಾಯಣನನ್ನಾಗಿ ಮಾಡಲು ಬಂದಿದ್ದಾರೆ. ಇದು ಸತ್ಯವಾದ ಸತ್ಯ ನಾರಾಯಣನ ಕಥೆಯಾಗಿದೆ. ನೀವು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಬಂದಿದ್ದೀರಿ. ಮಮ್ಮಾ-ಬಾಬಾರವರು ರಾಜ-ರಾಣಿಯಾಗುತ್ತಾರೆ ಅಂದಮೇಲೆ ನೀವೂ ಸಹ ಸಾಹಸವನ್ನಿಡಿ. ತಂದೆಯು ಅವಶ್ಯವಾಗಿ ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಪ್ರಜೆಗಳಾಗುವುದರಲ್ಲಿಯೇ ಖುಷಿ ಪಡಬಾರದು, ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಬಲಿಹಾರಿಯಾಗಬೇಕೆಂದು ಪುರುಷಾರ್ಥ ಮಾಡಬೇಕಾಗಿದೆ, ನೀವು ಅವರನ್ನು ತಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಅವರು ನಿಮಗೆ 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುತ್ತಾರೆ. ತಂದೆಯು ಮಕ್ಕಳಿಗೆ ಬಲಿಹಾರಿಯಾಗುತ್ತಾರೆ. ಮಕ್ಕಳು ಹೇಳುತ್ತಾರೆ - ಬಾಬಾ, ಈ ತನು-ಮನ-ಧನ ಎಲ್ಲವೂ ನಿಮ್ಮದಾಗಿದೆ ಎಂದು. ತಾವು ತಂದೆಯೂ ಆಗಿದ್ದೀರಿ ಮತ್ತೆ ಮಕ್ಕಳೂ ಆಗಿದ್ದೀರಿ. ತ್ವಮೇವ ಮಾತಾಶ್ಚ ಪಿತಾ ತ್ವಮೇವ.... ಒಬ್ಬ ತಂದೆಯ ಮಹಿಮೆಯು ಎಷ್ಟು ದೊಡ್ಡದಾಗಿದೆ. ಪ್ರಪಂಚದಲ್ಲಿ ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಎಲ್ಲವೂ ಭಾರತದ ಮಾತಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಇದು ಅದೇ 5000 ವರ್ಷಗಳ ಹಿಂದಿನ ಯುದ್ಧವಾಗಿದೆ. ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ. ಅಂದಮೇಲೆ ಮಕ್ಕಳು ಸದಾ ಖುಷಿಯಲ್ಲಿರಬೇಕು, ಭಗವಂತನು ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ಅಂದಮೇಲೆ ನಿಮಗೆ ಖುಷಿಯಿರಬೇಕು. ತಂದೆಯು ನೀವು ಮಕ್ಕಳ ಶೃಂಗಾರ ಮಾಡುತ್ತಿದ್ದಾರೆ, ಓದಿಸುತ್ತಿದ್ದಾರೆ. ಬೇಹದ್ದಿನ ತಂದೆ ಜ್ಞಾನಸಾಗರನಾಗಿದ್ದಾರೆ, ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಯಾರು ತಂದೆಯನ್ನೇ ಅರಿತಿಲ್ಲವೋ ಅವರು ನಾಸ್ತಿಕರಾಗಿದ್ದಾರೆ. ನೀವು ತಂದೆ ಮತ್ತು ರಚನೆಯನ್ನು ಅರಿತಿದ್ದೀರಿ, ನೀವು ಆಸ್ತಿಕರಾಗಿದ್ದೀರಿ. ಲಕ್ಷ್ಮೀ-ನಾರಾಯಣರು ಆಸ್ತಿಕರೋ ಅಥವಾ ನಾಸ್ತಿಕರೋ? ನೀವೇನು ಹೇಳುವಿರಿ? ಸತ್ಯಯುಗದಲ್ಲಿ ಪರಮಾತ್ಮನನ್ನು ಯಾರೂ ನೆನಪು ಮಾಡುವುದಿಲ್ಲವೆಂದು ನೀವೇ ಹೇಳುತ್ತೀರಿ, ಅಲ್ಲಿ ಸುಖವಿರುತ್ತದೆ. ಸುಖದಲ್ಲಿ ಪರಮಾತ್ಮನ ಸ್ಮರಣೆ ಮಾಡುವುದಿಲ್ಲ ಏಕೆಂದರೆ ಪರಮಾತ್ಮನನ್ನು ಅರಿತಿರುವುದಿಲ್ಲ. ಈ ಸಮಯದಲ್ಲಿ ನೀವು ಆಸ್ತಿಕರಾಗಿ ಆಸ್ತಿಯನ್ನು ಪಡೆಯುತ್ತಿದ್ದೀರಿ. ಮತ್ತೆ ಅಲ್ಲಿ ನೆನಪೇ ಮಾಡುವುದಿಲ್ಲ. ಇಲ್ಲಿ ನೆನಪು ಮಾಡುತ್ತಾರೆ ಆದರೆ ಅವರನ್ನು ಪೂರ್ಣ ಅರಿತುಕೊಂಡಿಲ್ಲ ಆದ್ದರಿಂದ ನಾಸ್ತಿಕರೆಂದು ಹೇಳಲಾಗುತ್ತದೆ. ಅಲ್ಲಿ ಅರಿತುಕೊಂಡಿರುವುದೂ ಇಲ್ಲ ಮತ್ತು ನೆನಪೂ ಮಾಡುವುದಿಲ್ಲ. ಈ ಆಸ್ತಿಯು ನಮಗೆ ಶಿವ ತಂದೆಯಿಂದ ಸಿಕ್ಕಿದೆ ಎಂಬುದು ಅವರಿಗೆ ಗೊತ್ತೇ ಇರುವುದಿಲ್ಲ ಆದರೆ ಅವರಿಗೆ ನಾಸ್ತಿಕರೆಂದೂ ಹೇಳಲಾಗುವುದಿಲ್ಲ ಏಕೆಂದರೆ ಪಾವನರಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ ನಡೆಯುವ ಪೂರ್ಣ ಸಾಹಸವನ್ನು ಇಡಬೇಕಾಗಿದೆ. ಯಾವುದೇ ಮಾತಿನಲ್ಲಿ ಹೆದರಬಾರದು ಹಾಗೂ ಬೇಸರ ಪಡಬಾರದು.

2. ತಮ್ಮ ರಚನೆಯನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅವರನ್ನು ವಿಕಾರಗಳಿಂದ ಪಾರು ಮಾಡಬೇಕಾಗಿದೆ. ಪಾವನರಾಗುವ ಸಲಹೆ ನೀಡಬೇಕಾಗಿದೆ.

ವರದಾನ:
ಶರೀರವನ್ನು ಈಶ್ವರೀಯ ಸೇವೆಗಾಗಿ ಉಡುಗೊರೆಯೆಂದು ತಿಳಿದುಕೊಂಡು ಕಾರ್ಯದಲ್ಲಿ ಉಪಯೋಗಿಸುವಂತಹ ನಷ್ಟಮೋಹ ಭವ.

ಹೇಗೆ ಯಾರಾದರೂ ಕೊಟ್ಟಿರುವ ಉಡುಗೊರೆಯಾಗಿದ್ದರೆ, ಅದರಲ್ಲಿ ನನ್ನದೆನ್ನುವುದು ಇರುವುದಿಲ್ಲ ಹಾಗೂ ಮಮತ್ವವೂ ಇರುವುದಿಲ್ಲ. ಅಂದಮೇಲೆ ಈ ಶರೀರವೂ ಈಶ್ವರನ ಸೇವೆಗಾಗಿ ಉಡುಗೊರೆಯಾಗಿದೆ. ಈ ಉಡುಗೊರೆಯನ್ನು ಆತ್ಮಿಕ ತಂದೆಯು ಕೊಟ್ಟಿದ್ದಾರೆ, ಅಂದಮೇಲೆ ಅವಶ್ಯವಾಗಿ ಆತ್ಮಿಕ ತಂದೆಯ ನೆನಪಿರುವುದು. ಉಡುಗೊರೆಯೆಂದು ತಿಳಿಯುವುದರಿಂದ ಆತ್ಮೀಯತೆಯು ಬರುತ್ತದೆ, ನನ್ನದೆಂಬ ಮಮತ್ವವಿರುವುದಿಲ್ಲ - ಇದೇ ನಿರಂತರ ಯೋಗಿ, ನಷ್ಟಮೋಹರಾಗಲು ಸಹಜ ಉಪಾಯವಾಗಿದೆ. ಅಂದಾಗ ಈಗ ಆತ್ಮೀಯತೆಯ ಸ್ಥಿತಿಯನ್ನು ಪ್ರತ್ಯಕ್ಷಗೊಳಿಸಿರಿ.

ಸ್ಲೋಗನ್:
ವಾನಪ್ರಸ್ಥ ಸ್ಥಿತಿಯಲ್ಲಿ ಹೋಗಬೇಕೆಂದರೆ ದೃಷ್ಟಿ-ವೃತ್ತಿಯಲ್ಲಿಯೂ ಪವಿತ್ರತೆಯನ್ನು ಅಂಡರ್ ಲೈನ್ ಮಾಡಿರಿ.