12.11.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ತಂದೆಯು ಏನನ್ನು ಓದಿಸುತ್ತಾರೆಯೋ ಅದನ್ನು ಚೆನ್ನಾಗಿ ಓದಿರಿ, ಆಗ 21 ಜನ್ಮಗಳಿಗಾಗಿ ಆದಾಯದ ಮೂಲವಾಗಿ ಬಿಡುವುದು, ಸದಾ ಸುಖಿಯಾಗಿ ಬಿಡುತ್ತೀರಿ

ಪ್ರಶ್ನೆ:
ನೀವು ಮಕ್ಕಳ ಅತೀಂದ್ರಿಯ ಸುಖದ ಗಾಯನ ಏಕೆ ಇದೆ?

ಉತ್ತರ:
ಏಕೆಂದರೆ ನೀವು ಮಕ್ಕಳೇ ಈ ಸಮಯದಲ್ಲಿ ತಂದೆಯನ್ನು ಅರಿತುಕೊಂಡಿದ್ದೀರಿ. ನೀವೇ ತಂದೆಯ ಮೂಲಕ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತಿದ್ದೀರಿ. ನೀವೀಗ ಸಂಗಮಯುಗದಲ್ಲಿ ಬೇಹದ್ದಿನಲ್ಲಿ ನಿಂತಿದ್ದೀರಿ. ನಿಮಗೆ ತಿಳಿದಿದೆ - ನಾವೀಗ ಈ ಉಪ್ಪು ನೀರಿನ ಕಣಿವೆಯಿಂದ ಅಮೃತದ ಕಡೆ ಹೋಗುತ್ತಿದ್ದೇವೆ. ನಮಗೆ ಸ್ವಯಂ ಭಗವಂತನೇ ಓದಿಸುತ್ತಿದ್ದಾರೆ. ಈ ಖುಷಿಯು ಬ್ರಾಹ್ಮಣರಿಗೇ ಇರುತ್ತದೆ ಆದ್ದರಿಂದ ನಿಮ್ಮದೇ ಅತೀಂದ್ರಿಯ ಸುಖದ ಗಾಯನವಿದೆ.

ಓಂ ಶಾಂತಿ.
ಆತ್ಮಿಕ ಬೇಹದ್ದಿನ ತಂದೆಯು ಆತ್ಮಿಕ ಬೇಹದ್ದಿನ ಮಕ್ಕಳ ಪ್ರತಿ ತಿಳಿಸುತ್ತಿದ್ದೇವೆ ಅರ್ಥಾತ್ ತಮ್ಮ ಮತ ಕೊಡುತ್ತಿದ್ದೇವೆ. ನಾವು ಜೀವಾತ್ಮರಾಗಿದ್ದೇವೆ ಎಂಬುದನ್ನಂತೂ ಅವಶ್ಯವಾಗಿ ನೀವು ತಿಳಿದುಕೊಳ್ಳುತ್ತೀರಿ ಆದರೆ ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಬೇಕಲ್ಲವೆ. ನಾವೇನೂ ಹೊಸ ಶಾಲೆಯಲ್ಲಿ ಓದುತ್ತಿಲ್ಲ. ಪ್ರತೀ 5000 ವರ್ಷಗಳ ನಂತರ ನಾವು ಓದಲು ಬರುತ್ತೇವೆ. ಮೊದಲು ಎಂದಾದರೂ ಓದಲು ಬಂದಿದ್ದಿರಾ? ಎಂದು ತಂದೆಯು ಕೇಳುತ್ತಾರಲ್ಲವೆ. ಅದಕ್ಕೆ ಎಲ್ಲರೂ ಹೌದು ಬಾಬಾ ನಾವು ಪ್ರತೀ 5000 ವರ್ಷಗಳ ನಂತರ ಬರುತ್ತೇವೆಂದು ಹೇಳುತ್ತಾರೆ. ಪುರುಷೋತ್ತಮ ಸಂಗಮಯುಗದಲ್ಲಿ ತಂದೆಯ ಬಳಿ ಬರುತ್ತೀರಿ. ಇದಂತೂ ನೆನಪಿರಬೇಕಲ್ಲವೆ ಅಥವಾ ಇದನ್ನೂ ಮರೆತು ಹೋಗುತ್ತೀರಾ? ವಿದ್ಯಾರ್ಥಿಗೆ ಅವಶ್ಯವಾಗಿ ಶಾಲೆಯು ನೆನಪಿಗೆ ಬರುತ್ತದೆ. ನಿಮ್ಮ ಗುರಿ-ಧ್ಯೇಯವಂತೂ ಒಂದೇ ಆಗಿದೆ, ಯಾರೆಲ್ಲರೂ ಮಕ್ಕಳಾಗುವರೋ ಎರಡು ದಿನಗಳ ಮಗುವಿರಬಹುದು ಅಥವಾ ಹಳಬರಿರಬಹುದು ಆದರೆ ಎಲ್ಲರಿಗಾಗಿ ಗುರಿ-ಧ್ಯೇಯವು ಒಂದೇ ಆಗಿದೆ, ಯಾರಿಗೂ ನಷ್ಟವಾಗುವುದಿಲ್ಲ. ವಿದ್ಯೆಯಲ್ಲಿ ಸಂಪಾದನೆಯಿದೆ, ಹೇಗೆ ಅವರೂ ಸಹ ಗ್ರಂಥಗಳನ್ನು ಓದಿ ತಿಳಿಸುತ್ತಾರೆಂದರೆ ಸಂಪಾದನೆಯಾಗುತ್ತದೆ. ಶರೀರ ನಿರ್ವಹಣೆಯಾಗುತ್ತದೆ. ಸಾಧುವಾಗಿ ಒಂದೆರಡು ಶಾಸ್ತ್ರಗಳನ್ನು ಓದಿ ತಿಳಿಸಿದರೆ ಸಾಕು ಸಂಪಾದನೆಯಾಗುವುದು. ಈಗ ಇದೆಲ್ಲವೂ ಆದಾಯದ ಮೂಲವಾಗಿದೆ. ಪ್ರತಿಯೊಂದು ಮಾತಿನಲ್ಲಿ ಆದಾಯ ಬೇಕಲ್ಲವೆ. ಹಣವಿದ್ದರೆ ಎಲ್ಲಿ ಬೇಕಾದರೂ ಸುತ್ತಿ ಬರಬಹುದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಬಹಳ ಒಳ್ಳೆಯ ವಿದ್ಯೆಯನ್ನು ಓದಿಸುತ್ತಾರೆ, ಇದರಿಂದ 21 ಜನ್ಮಗಳಿಗಾಗಿ ಸಂಪಾದನೆಯಾಗುತ್ತದೆ. ಇದು ಇಂತಹ ಸಂಪಾದನೆಯಾಗಿದೆ ಯಾವುದರಿಂದ ನಾವು ಸದಾ ಸುಖಿಯಾಗಿ ಬಿಡುತ್ತೇವೆ. ಎಂದೂ ರೋಗಿಯಾಗುವುದಿಲ್ಲ, ಸದಾ ಅಮರರಾಗಿರುತ್ತೇವೆ. ಇದನ್ನು ನಿಶ್ಚಯ ಮಾಡಿಕೊಳ್ಳಲಾಗುತ್ತದೆ. ಹೀಗೀಗೆ ನಿಶ್ಚಯವನ್ನಿಟ್ಟುಕೊಳ್ಳುವುದರಿಂದ ನಿಮಗೆ ಉಲ್ಲಾಸ ಬರುವುದು ಇಲ್ಲವಾದರೆ ಯಾವುದಾದರೊಂದು ಮಾತಿನಲ್ಲಿ ನಿಂತು ಹೋಗುತ್ತೀರಿ. ಆದ್ದರಿಂದ ಆಂತರ್ಯದಲ್ಲಿ ಈ ಸ್ಮರಣೆಯಿರಬೇಕು - ನಾವು ಬೇಹದ್ದಿನ ತಂದೆಯಿಂದ ಓದುತ್ತಿದ್ದೇವೆ, ಭಗವಾನುವಾಚ - ಇದಂತೂ ಗೀತೆಯಾಗಿದೆ. ಗೀತಾಯುಗವು ಬರುತ್ತದೆಯಲ್ಲವೆ. ಕೇವಲ ಮರೆತು ಹೋಗಿದ್ದಾರೆ. ಇದು 5ನೇ ಯುಗವಾಗಿದೆ. ಬಹಳ ಚಿಕ್ಕದಾದ ಸಂಗಮವಾಗಿದೆ. ವಾಸ್ತವದಲ್ಲಿ ಇದಕ್ಕೆ ನಾಲ್ಕನೆಯದೆಂದೂ ಹೇಳುವುದಿಲ್ಲ, ಪರ್ಸೆಂಟೇಜ್ ಹಾಕಬಹುದಾಗಿದೆ. ಅದನ್ನೂ ಮುಂದೆ ಹೋದಂತೆ ತಂದೆಯು ತಿಳಿಸುತ್ತಿರುತ್ತಾರೆ. ತಂದೆಯು ತಿಳಿಸುವ ಸಮಯವೂ ಡ್ರಾಮಾದಲ್ಲಿ ನಿಗಧಿಯಾಗಿದೆಯಲ್ಲವೆ. ನೀವೆಲ್ಲಾ ಆತ್ಮಗಳಲ್ಲಿ ಪಾತ್ರವು ನಿಗಧಿಯಾಗಿದೆ, ಅದು ಪುನರಾವರ್ತನೆಯಾಗುತ್ತಿದೆ. ನೀವು ಏನನ್ನು ಕಲಿಯುತ್ತೀರೋ ಅದೂ ಸಹ ಪುನರಾವರ್ತನೆಯಾಗುತ್ತಿದೆಯಲ್ಲವೆ. ಪುನರಾವರ್ತನೆಯ ರಹಸ್ಯವು ನೀವು ಮಕ್ಕಳಿಗೇ ಅರ್ಥವಾಗುವುದು. ಹೆಜ್ಜೆ-ಹೆಜ್ಜೆಯಲ್ಲಿ ಪಾತ್ರವು ಬದಲಾಗುತ್ತಾ ಹೋಗುತ್ತಿದೆ. ಒಂದು ಕ್ಷಣವು ಇನ್ನೊಂದು ಕ್ಷಣಕ್ಕೆ ಹೋಲುವುದಿಲ್ಲ. ಇದು ನಿಧಾನವಾಗಿ ಟಿಕ್-ಟಿಕ್ ಎಂದು ನಡೆಯುತ್ತಿರುತ್ತದೆ. ಒಂದು ಸಲ ಟಿಕ್ ಆಯಿತೆಂದರೆ ಒಂದು ಕ್ಷಣವು ಕಳೆಯಿತು. ನೀವೀಗ ಬೇಹದ್ದಿನಲ್ಲಿ ನಿಂತಿದ್ದೀರಿ, ಮತ್ತ್ಯಾವ ಮನುಷ್ಯ ಮಾತ್ರರೂ ಬೇಹದ್ದಿನಲ್ಲಿ ನಿಂತಿಲ್ಲ, ಯಾರಿಗೂ ಸಹ ಬೇಹದ್ದಿನ ಅರ್ಥಾತ್ ಆದಿ-ಮಧ್ಯ-ಅಂತ್ಯದ ಜ್ಞಾನವಿಲ್ಲ. ಈಗ ನಿಮಗೆ ಭವಿಷ್ಯದ ಬಗ್ಗೆಯೂ ಅರ್ಥವಾಗಿದೆ - ನಾವು ಹೊಸ ಪ್ರಪಂಚದಲ್ಲಿ ಹೋಗುತ್ತಿದ್ದೇವೆ, ಇದು ಸಂಗಮಯುಗವಾಗಿದೆ, ಈಗ ಇದನ್ನು ದಾಟಬೇಕಾಗಿದೆ. ಉಪ್ಪು ನೀರಿನ ಕಣಿವೆಯಿದೆಯಲ್ಲವೆ. ಒಂದು ಕಡೆ ಸಿಹಿ ನೀರಿನ (ಅಮೃತದ) ಕಣಿವೆಯಿದೆ, ಇನ್ನೊಂದು ಕಡೆ ಉಪ್ಪು ನೀರಿನ (ವಿಷದ) ಕಣಿವೆಯಿದೆ. ನೀವೀಗ ವಿಷಯ ಸಾಗರದಿಂದ ಕ್ಷೀರ ಸಾಗರದೆಡೆಗೆ ಹೋಗುತ್ತಿದ್ದೀರಿ. ಇದು ಬೇಹದ್ದಿನ ಮಾತಾಗಿದೆ. ಪ್ರಪಂಚದಲ್ಲಿ ಈ ಮಾತುಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಹೊಸ ಮಾತಲ್ಲವೆ. ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ, ಅವರು ಯಾವ ಪಾತ್ರವನ್ನಭಿನಯಿಸುತ್ತಾರೆ ಎಂಬುದನ್ನೂ ನೀವೇ ತಿಳಿದುಕೊಂಡಿದ್ದೀರಿ. ಬನ್ನಿ, ನಾವು ನಿಮಗೆ ಪರಮಪಿತ ಪರಮಾತ್ಮನ ಚರಿತ್ರೆಯನ್ನು ತಿಳಿಸುತ್ತೇವೆಂದು ನೀವು ಭಾಷಣದ ರೂಪದಲ್ಲಿಯೂ ಇದನ್ನು ತಿಳಿಸುತ್ತಾ ಹೋಗಿ. ಹಾಗೆ ಹೇಳುವುದಾದರೆ ಮಕ್ಕಳು ತಂದೆಯ ಚರಿತ್ರೆಯನ್ನು ತಿಳಿಸುತ್ತಾರೆ, ಇದು ಸರ್ವೆ ಸಾಮಾನ್ಯವಾಗಿದೆ ಆದರೆ ಇಲ್ಲಂತೂ ಇವರು ತಂದೆಯರಿಗೂ ತಂದೆಯಲ್ಲವೆ. ಇವರನ್ನು ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಅರಿತುಕೊಂಡಿದ್ದಾರೆ. ನೀವೀಗ ಯಥಾರ್ಥ ರೀತಿಯಲ್ಲಿ ತಂದೆಯ ಪರಿಚಯ ಕೊಡಬೇಕಾಗಿದೆ. ನಿಮಗೂ ಸಹ ತಂದೆಯು ತಿಳಿಸಿದ್ದಾರೆ ಆದ್ದರಿಂದ ನೀವು ತಿಳಿಸಿಕೊಡುತ್ತೀರಿ, ಮತ್ತ್ಯಾರೂ ಬೇಹದ್ದಿನ ತಂದೆಯನ್ನು ಅರಿತುಕೊಂಡಿರಲು ಸಾಧ್ಯವಿಲ್ಲ. ನೀವು ಈ ಸಂಗಮದಲ್ಲಿಯೇ ಅರಿತುಕೊಂಡಿದ್ದೀರಿ. ಮನುಷ್ಯ ಮಾತ್ರರು ದೇವತೆಗಳಾಗಲಿ, ಶೂದ್ರರಾಗಲಿ, ಪುಣ್ಯಾತ್ಮರಾಗಲಿ, ಪಾಪಾತ್ಮರಾಗಲಿ ಯಾರೂ ತಿಳಿದುಕೊಂಡಿಲ್ಲ. ಕೇವಲ ನೀವು ಬ್ರಾಹ್ಮಣರು ಯಾರು ಸಂಗಮಯುಗದಲ್ಲಿದ್ದೀರಿ, ನೀವೇ ಅರಿತುಕೊಳ್ಳುತ್ತಿದ್ದೀರಿ ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ಆದುದರಿಂದಲೇ ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರಿಂದ ಕೇಳಿ ಎಂದು ಗಾಯನವಿದೆ.

ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಸುಪ್ರೀಂ ಶಬ್ಧವನ್ನು ಅವಶ್ಯವಾಗಿ ಬರೆಯಬೇಕು. ಕೆಲಕೆಲವೊಮ್ಮೆ ಮಕ್ಕಳು ಮರೆತು ಹೋಗುತ್ತೀರಿ, ಇವೆಲ್ಲಾ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿರಬೇಕು. ಶಿವ ತಂದೆಯ ಮಹಿಮೆಯಲ್ಲಿ ಈ ಶಬ್ಧವನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಇದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡೇ ಇಲ್ಲ. ನೀವೇ ತಿಳಿಸಬಲ್ಲಿರಿ ಅಂದಮೇಲೆ ನಿಮ್ಮದೇ ವಿಜಯವಾಯಿತಲ್ಲವೆ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯು ಸರ್ವರ ಶಿಕ್ಷಕ, ಸರ್ವರ ಸದ್ಗತಿದಾತನಾಗಿದ್ದಾರೆ, ಬೇಹದ್ದಿನ ಸುಖ, ಬೇಹದ್ದಿನ ಜ್ಞಾನವನ್ನು ಕೊಡುವವರಾಗಿದ್ದಾರೆ, ಆದರೆ ಇಂತಹ ತಂದೆಯನ್ನೇ ಮರೆತು ಹೋಗಿದ್ದೀರಿ. ಮಾಯೆ ಎಷ್ಟು ಸಮರ್ಥನಾಗಿದೆ! ಈಶ್ವರನಿಗಂತೂ ಸರ್ವ ಸಮರ್ಥನೆಂದು ಹೇಳುತ್ತಾರೆ, ಆದರೂ ಮಾಯೆಯೂ ಕಡಿಮೆಯಿಲ್ಲ. ನೀವು ಮಕ್ಕಳು ಈಗ ನಿಖರವಾಗಿ ತಿಳಿದುಕೊಂಡಿದ್ದೀರಿ - ಇದರ ಹೆಸರೇ ರಾವಣನೆಂದು ಇಟ್ಟಿದ್ದಾರೆ, ರಾಮ ರಾಜ್ಯ ಮತ್ತು ರಾವಣ ರಾಜ್ಯ. ಇದನ್ನು ಕುರಿತು ನೀವು ಬಹಳ ಚೆನ್ನಾಗಿ ತಿಳಿಸಿಕೊಡಬೇಕು. ರಾಮ ರಾಜ್ಯವಿದೆಯೆಂದರೆ ಅವಶ್ಯವಾಗಿ ರಾವಣ ರಾಜ್ಯವೂ ಇದೆ. ಸದಾ ರಾಮ ರಾಜ್ಯವೇ ಇರಲು ಸಾಧ್ಯವಿಲ್ಲ. ರಾಮ ರಾಜ್ಯ, ಶ್ರೀಕೃಷ್ಣನ ರಾಜ್ಯವನ್ನು ಯಾರು ಸ್ಥಾಪನೆ ಮಾಡುತ್ತಾರೆಂಬುದನ್ನು ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ನೀವು ಭಾರತ ಖಂಡದ ಬಹಳ ಮಹಿಮೆ ಮಾಡಬೇಕು. ಭಾರತವು ಸತ್ಯ ಖಂಡವಾಗಿತ್ತು, ಎಷ್ಟು ಮಹಿಮೆಯಿತ್ತು, ಆ ರೀತಿ ಮಾಡುವವರು ತಂದೆಯೇ ಆಗಿದ್ದಾರೆ. ತಂದೆಯ ಜೊತೆ ನಿಮಗೆ ಎಷ್ಟೊಂದು ಪ್ರೀತಿಯಿದೆ! ಗುರಿ-ಧ್ಯೇಯವು ಬುದ್ಧಿಯಲ್ಲಿದೆ. ಇದೂ ಸಹ ಗೊತ್ತಿದೆ, ನಾವು ವಿದ್ಯಾರ್ಥಿಗಳಿಗೆ ನಮ್ಮ ವಿದ್ಯೆಯ ನಶೆಯಿರಬೇಕು. ಚಲನೆಯ ಕಡೆ ಗಮನವಿರಬೇಕು. ವಿವೇಕವು ಹೇಳುತ್ತದೆ - ಯಾವಾಗ ಇದು ಈಶ್ವರನ ವಿದ್ಯೆಯಾಗಿದೆ ಅಂದಮೇಲೆ ಇದನ್ನು ಒಂದು ದಿನವೂ ತಪ್ಪಿಸಬಾರದು ಹಾಗು ಶಿಕ್ಷಕರು ಬಂದನಂತರ ತಡವಾಗಿಯೂ ಬರಬಾರದು. ಶಿಕ್ಷಕರು ಬಂದ ನಂತರ ಬರುವುದೂ ಸಹ ಶಿಕ್ಷಕರಿಗೆ ಅಗೌರವ ಸೂಚಿಸುವುದಾಗಿದೆ. ಶಾಲೆಯಲ್ಲಿಯೂ ತಡವಾಗಿ ಬಂದರೆ ಅವರನ್ನು ಶಿಕ್ಷಕರು ಹೊರಗಡೆ ನಿಲ್ಲಿಸುತ್ತಾರೆ. ಬ್ರಹ್ಮಾ ತಂದೆಯೂ ತಮ್ಮ ಬಾಲ್ಯದ ಉದಾಹರಣೆ ಕೊಡುತ್ತಾರೆ - ನಮ್ಮ ಶಿಕ್ಷಕರು ಬಹಳ ಕಠಿಣವಾಗಿದ್ದರು, ಒಳಗೆ ಬರುವುದಕ್ಕೆ ಬಿಡುತ್ತಿರಲಿಲ್ಲ. ಇಲ್ಲಂತೂ ಅನೇಕ ಮಕ್ಕಳು ತಡವಾಗಿ ಬರುತ್ತಾರೆ. ಸರ್ವೀಸ್ ಮಾಡುವಂತಹ ಮಕ್ಕಳು ಅವಶ್ಯವಾಗಿ ತಂದೆಗೆ ಪ್ರಿಯರಾಗುತ್ತಾರಲ್ಲವೆ. ನೀವೀಗ ತಿಳಿದುಕೊಳ್ಳುತ್ತೀರಿ ಆದಿ ಸನಾತನ ದೇವಿ-ದೇವತಾ ಧರ್ಮವು ಇದೇ ಆಗಿತ್ತಲ್ಲವೆ. ಆದರೆ ಈ ಧರ್ಮವು ಯಾವಾಗ ಸ್ಥಾಪನೆಯಾಯಿತು ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ನಿಮ್ಮ ಬುದ್ಧಿಯಿಂದಲೇ ಮತ್ತೆ ಮತ್ತೆ ಜಾರಿ ಹೋಗುತ್ತದೆ. ನೀವೀಗ ದೇವಿ-ದೇವತೆಗಳಾಗಲು ಪುರುಷಾರ್ಥ ಮಾಡುತ್ತಿದ್ದೀರಿ, ಯಾರು ಓದಿಸುತ್ತಾರೆ? ಸ್ವಯಂ ಪರಮಪಿತ ಪರಮಾತ್ಮ. ನೀವು ತಿಳಿದುಕೊಂಡಿದ್ದೀರಿ - ನಮ್ಮದು ಇದು ಬ್ರಾಹ್ಮಣ ಕುಲವಾಗಿದೆ, ಬ್ರಾಹ್ಮಣರ ರಾಜಧಾನಿಯಿರುವುದಿಲ್ಲ. ಇದು ಸರ್ವೋತ್ತಮ ಬ್ರಾಹ್ಮಣ ಕುಲವಾಗಿದೆ. ತಂದೆಯೂ ಸರ್ವೋತ್ತಮನಲ್ಲವೆ. ಸರ್ವಶ್ರೇಷ್ಠನೆಂದ ಮೇಲೆ ಅವರ ಸಂಪಾದನೆಯೂ ಸರ್ವಶ್ರೇಷ್ಠವಾಗಿರುವುದು. ಅವರಿಗೇ ಶ್ರೀ ಶ್ರೀ ಎಂದು ಹೇಳುತ್ತಾರೆ. ನಿಮ್ಮನ್ನೂ ಸಹ ಶ್ರೇಷ್ಠರನ್ನಾಗಿ ಮಾಡುತ್ತಾರೆ. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುವವರು ಯಾರು? ಮತ್ತ್ಯಾರಿಗೂ ತಿಳಿದಿಲ್ಲ. ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ, ಓದಿಸುತ್ತಿದ್ದಾರೆ, ನಾವಾತ್ಮರಾಗಿದ್ದೇವೆ. ನೀವು ನನ್ನ ಸಂತಾನರಾಗಿದ್ದೀರಿ ಎಂದು ತಂದೆಯು ನಮಗೆ ಸ್ಮೃತಿ ತರಿಸಿದ್ದಾರೆ. ವಿಶ್ವ ಭ್ರಾತೃತ್ವವಲ್ಲವೆ. ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರೆ, ಅವರು ನಿರಾಕಾರಿ ತಂದೆಯಾಗಿದ್ದಾರೆ ಎಂಬುದೂ ತಿಳಿದಿದೆ ಅಂದಮೇಲೆ ಅವಶ್ಯವಾಗಿ ಆತ್ಮನಿಗೂ ನಿರಾಕಾರಿಯೆಂದು ಹೇಳಲಾಗುವುದು. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ಪಾತ್ರವನ್ನಭಿನಯಿಸುತ್ತದೆ ಆದರೆ ಮನುಷ್ಯರು ಆತ್ಮನ ಬದಲು ಶರೀರವೆಂದು ತಿಳಿಯುತ್ತಾರೆ. ನಾನಾತ್ಮನಾಗಿದ್ದೇನೆ ಎಂಬುದನ್ನೇ ಮರೆತು ಹೋಗುತ್ತಾರೆ ಆದರೆ ನಾನೆಂದೂ ಮರೆಯುವುದಿಲ್ಲ. ನೀವಾತ್ಮಗಳೆಲ್ಲರೂ ಸಾಲಿಗ್ರಾಮಗಳಾಗಿದ್ದೀರಿ, ನಾನು ಪರಮಪಿತ ಅರ್ಥಾತ್ ಪರಮ ಆತ್ಮನಾಗಿದ್ದೇನೆ. ತಂದೆಗೆ ಮತ್ತ್ಯಾವುದೇ ಹೆಸರಿಲ್ಲ, ಆ ಪರಮ ಆತ್ಮನ ಹೆಸರಾಗಿದೆ - ಶಿವ. ನೀವೂ ಸಹ ಅದೇ ರೀತಿಯ ಆತ್ಮಗಳಾಗಿದ್ದೀರಿ ಆದರೆ ನೀವೆಲ್ಲರೂ ಸಾಲಿಗ್ರಾಮಗಳಾಗಿದ್ದೀರಿ. ಶಿವನ ಮಂದಿರದಲ್ಲಿ ಹೋಗುತ್ತೀರಿ, ಅಲ್ಲಿಯೂ ಬಹಳಷ್ಟು ಸಾಲಿಗ್ರಾಮಗಳನ್ನಿಟ್ಟಿರುತ್ತಾರೆ. ಶಿವನ ಪೂಜೆ ಮಾಡುವಾಗ ಸಾಲಿಗ್ರಾಮಗಳಿಗೂ ಮಾಡುತ್ತಾರಲ್ಲವೆ. ಆದ್ದರಿಂದ ತಂದೆಯು ತಿಳಿಸಿದ್ದಾರೆ - ನೀವಾತ್ಮ ಮತ್ತು ಶರೀರ ಎರಡಕ್ಕೂ ಪೂಜೆ ನಡೆಯುತ್ತದೆ. ನನಗಾದರೆ ಕೇವಲ ಆತ್ಮಕ್ಕೆ ಮಾತ್ರ ಪೂಜೆಯು ನಡೆಯುತ್ತದೆ. ನನಗೆ ಶರೀರವಿಲ್ಲ ಅಂದಾಗ ನೀವು ಎಷ್ಟು ಶ್ರೇಷ್ಠರಾಗುತ್ತೀರಿ! ತಂದೆಗೆ ಖುಷಿಯಾಗುತ್ತದೆಯಲ್ಲವೆ. ತಂದೆಯು ಬಡವರಾಗುತ್ತಾರೆ ಅದರೆ ಮಕ್ಕಳು ಓದಿ ಎಷ್ಟು ಉನ್ನತ ಮಟ್ಟಕ್ಕೆ ಏರುತ್ತೀರಿ. ಹೇಗಿದ್ದವರು ಏನಾಗುತ್ತೀರಿ! ತಂದೆಗೂ ಸಹ ಗೊತ್ತಿದೆ, ನೀವು ಎಷ್ಟು ಶ್ರೇಷ್ಠರಾಗುತ್ತೀರಿ! ಈಗ ಎಷ್ಟು ಅನಾಥರಾಗಿ ಬಿಟ್ಟಿದ್ದೀರಿ, ತಂದೆಯನ್ನೇ ಅರಿತುಕೊಂಡಿಲ್ಲ. ನೀವೀಗ ತಂದೆಗೆ ಅರ್ಪಿತರಾದರೆ ಇಡೀ ವಿಶ್ವದ ಮಾಲೀಕರಾಗಿ ಬಿಡುವಿರಿ.

ತಂದೆಯು ತಿಳಿಸುತ್ತಾರೆ - ಹೆವೆನ್ಲೀ ಗಾಡ್ಫಾದರ್(ಸ್ವರ್ಗದ ರಚಯಿತ) ಎಂದು ನೀವು ನನಗಾಗಿಯೇ ಹೇಳುತ್ತೀರಿ. ಈಗ ಸ್ವರ್ಗ ಸ್ಥಾಪನೆಯಾಗುತ್ತಿದೆ ಎಂಬುದನ್ನೂ ನೀವೇ ತಿಳಿದುಕೊಂಡಿದ್ದೀರಿ. ಅಲ್ಲಿ ಏನೇನಿರುವುದು ಎಂಬುದು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನಾವು ವಿಶ್ವದ ಮಾಲೀಕರಾಗಿದ್ದೆವು, ಈಗ ಪುನಃ ಆಗುತ್ತಿದ್ದೇವೆಂಬುದು ನಿಮಗೇ ತಿಳಿದಿದೆ. ಸತ್ಯಯುಗದಲ್ಲಿ ನಾವು ಮಾಲೀಕರೆಂದು ಪ್ರಜೆಗಳೂ ಸಹ ಹೇಳುವರಲ್ಲವೆ. ಈ ಮಾತುಗಳು ನಿಮಗೇ ತಿಳಿದಿದೆ ಅಂದಮೇಲೆ ಖುಷಿಯಿರಬೇಕಲ್ಲವೆ. ಈ ಮಾತುಗಳನ್ನು ಕೇಳಿ ಅನ್ಯರಿಗೂ ತಿಳಿಸಬೇಕಾಗಿದೆ. ಆದ್ದರಿಂದ ಸೇವಾಕೇಂದ್ರ ಹಾಗೂ ಮ್ಯೂಸಿಯಂಗಳನ್ನು ತೆರೆಯುತ್ತಿರುತ್ತೀರಿ. ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುತ್ತಿರುವುದು. ಮ್ಯೂಸಿಯಂ, ಸೇವಾಕೇಂದ್ರ ಇತ್ಯಾದಿಗಳಿಗಾಗಿ ನಿಮಗೆ ಬಹಳ ಅವಕಾಶ ನೀಡುತ್ತಾರೆ. ಇಂತಹವರು ಅನೇಕರು ಬರುತ್ತಾರೆ. ದಿನ ಕಳೆದಂತೆ ಎಲ್ಲರಲ್ಲಿ ಪರಿವರ್ತನೆ ಬರತೊಡಗುತ್ತದೆ. ನೀವೀಗ ಇಡೀ ಪ್ರಪಂಚದವರ ಮೂಳೆಗಳನ್ನು ಮೃದು ಅರ್ಥಾತ್ ಅವರನ್ನೂ ಪರಿವರ್ತನೆ ಮಾಡುತ್ತಾ ಹೋಗುತ್ತೀರಿ. ನಿಮ್ಮ ಯೋಗದಲ್ಲಿ ಇಷ್ಟು ಪ್ರಬಲ ಶಕ್ತಿಯಿದೆ, ತಂದೆಯು ತಿಳಿಸುತ್ತಾರೆ - ನಿಮ್ಮಲ್ಲಿ ಬಹಳ ಶಕ್ತಿಯಿದೆ. ನೀವು ಯೋಗದಲ್ಲಿದ್ದು ಭೋಜನವನ್ನು ತಯಾರಿಸಿ ಹಾಗೂ ತಿನ್ನಿಸಿ ಆಗ ಅವರ ಬುದ್ಧಿಯು ಈ ಕಡೆ ಸೆಳೆಯುವುದು. ಭಕ್ತಿಮಾರ್ಗದಲ್ಲಂತೂ ಗುರುಗಳ ಎಂಜಲು ಅನ್ನವನ್ನೂ ತಿನ್ನುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಭಕ್ತಿಮಾರ್ಗದ ವಿಸ್ತಾರವು ಬಹಳಷ್ಟಿದೆ, ಅದರ ವರ್ಣನೆ ಮಾಡಲು ಸಾಧ್ಯವಿಲ್ಲ. ಇದು ಬೀಜ, ಅದು ವೃಕ್ಷವಾಗಿದೆ. ಬೀಜದ ವರ್ಣನೆ ಮಾಡಬಹುದು ಆದರೆ ವೃಕ್ಷದ ಎಲೆಗಳೆಲ್ಲವನ್ನೂ ಎಣಿಕೆ ಮಾಡಿ ಎಂದು ಯಾರಿಗಾದರೂ ಹೇಳಿದರೆ ಅದು ಎಣಿಕೆ ಮಾಡಲು ಸಾಧ್ಯವಿಲ್ಲ ಏಕೆಂದರೆ ಲೆಕ್ಕವಿಲ್ಲದಷ್ಟು ಎಲೆಗಳಿರುತ್ತವೆ. ಬೀಜವಂತೂ ಸಾರ ರೂಪದಲ್ಲಿರುತ್ತದೆ. ಅದ್ಭುತವಲ್ಲವೆ. ಇದಕ್ಕೆ ಸೃಷ್ಟಿಯೆಂದು ಹೇಳುತ್ತಾರೆ. ಜೀವ ಜಂತುಗಳು ಎಷ್ಟೊಂದು ಅದ್ಭುತವಾಗಿವೆ! ಅನೇಕ ಪ್ರಕಾರದ ಕೀಟಗಳಿವೆ. ಇವು ಹೇಗೆ ಹುಟ್ಟುತ್ತವೆ! ಇದು ಬಹಳ ಅದ್ಭುತ ನಾಟಕವಾಗಿದೆ. ಇದಕ್ಕೇ ಪ್ರಕೃತಿಯೆಂದು ಹೇಳಲಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ಆಟವಾಗಿದೆ, ಸತ್ಯಯುಗದಲ್ಲಿ ಏನೇನು ನೋಡುತ್ತೀರಿ ಎಲ್ಲವೂ ಹೊಸದಾಗಿರುತ್ತದೆ. ನವಿಲಿಗಾಗಿ ತಂದೆಯು ತಿಳಿಸಿದ್ದಾರೆ - ನವಿಲು ಭಾರತದ ರಾಷ್ಟ್ರ ಪಕ್ಷಿಯೆಂದು ಹೇಳುತ್ತಾರೆ ಏಕೆಂದರೆ ಶ್ರೀಕೃಷ್ಣನ ಕಿರೀಟದಲ್ಲಿ ನವಿಲು ಗರಿಯನ್ನು ತೋರಿಸುತ್ತಾರೆ. ನವಿಲು ಬಹಳ ಸುಂದರ ಪಕ್ಷಿಯಾಗಿದೆ, ಅದರ ಗರ್ಭ ಧಾರಣೆಯೂ ಸಹ ಕಣ್ಣೀರಿನಿಂದ ಆಗುತ್ತದೆ. ಆದ್ದರಿಂದ ಅದಕ್ಕೆ ರಾಷ್ಟ್ರ ಪಕ್ಷಿ ಎಂದು ಹೇಳುತ್ತಾರೆ. ಇಂತಹ ಸುಂದರ ಪಕ್ಷಿಗಳು ವಿದೇಶದ ಕಡೆಯೂ ಇರುತ್ತವೆ.

ಈಗ ನೀವು ಮಕ್ಕಳಿಗೆ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿದ್ದೇನೆ, ಇದು ಮತ್ತ್ಯಾರಿಗೂ ತಿಳಿದಿಲ್ಲ. ಎಲ್ಲರಿಗೆ ಹೇಳಿ, ನಾವು ನಿಮಗೆ ಪರಮಪಿತ ಪರಮಾತ್ಮನ ಚರಿತ್ರೆಯನ್ನು ತಿಳಿಸುತ್ತೇವೆ. ರಚಯಿತನಿರುವುರೆಂದರೆ ಅವಶ್ಯವಾಗಿ ಅವರ ರಚನೆಯೂ ಇರುವುದು. ಅದರ ಇತಿಹಾಸವನ್ನೂ ನಾವು ತಿಳಿದುಕೊಂಡಿದ್ದೇವೆ. ಸರ್ವ ಶ್ರೇಷ್ಠ ಬೇಹದ್ದಿನ ತಂದೆಯ ಪಾತ್ರವೇನು ಎಂಬುದನ್ನು ನಾವು ತಿಳಿದಿದ್ದೇವೆ. ಪ್ರಪಂಚದವರಿಗೆ ಏನೂ ತಿಳಿದಿಲ್ಲ. ಇದು ಬಹಳ ಛೀ ಛೀ ಪ್ರಪಂಚವಾಗಿದೆ. ಈ ಸಮಯದಲ್ಲಿ ಸೌಂದರ್ಯವಿದ್ದರೂ ಕಷ್ಟ. ಕುಮಾರಿಯರನ್ನು ನೋಡಿ ಹೇಗೆ ಓಡಿಸಿಕೊಂಡು ಹೋಗುತ್ತಾರೆ. ನೀವು ಮಕ್ಕಳಿಗೆ ಈ ವಿಕಾರಿ ಪ್ರಪಂಚದೊಂದಿಗೆ ತಿರಸ್ಕಾರವಿರಬೇಕು. ಇದು ಛೀ ಛೀ ಪ್ರಪಂಚ, ಛೀ ಛೀ ಶರೀರವಾಗಿದೆ. ನಾವಂತೂ ಈಗ ತಂದೆಯನ್ನು ನೆನಪು ಮಾಡಿ, ನಾವಾತ್ಮರನ್ನು ಪವಿತ್ರವನ್ನಾಗಿ ಮಾಡಿಕೊಳ್ಳಬೇಕಾಗಿದೆ. ನಾವು ಸತೋಪ್ರಧಾನರಾಗಿದ್ದೆವು, ಸುಖಿಯಾಗಿದ್ದೆವು, ಈಗ ತಮೋಪ್ರಧಾನರಾಗಿದ್ದೇವೆ ಆದ್ದರಿಂದ ದುಃಖಿಯಾಗಿದ್ದೇವೆ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ನಾವು ಪತಿತರಿಂದ ಪಾವನರಾಗಬೇಕೆಂದು ನೀವು ಬಯಸುತ್ತೀರಿ. ಪತಿತ-ಪಾವನ ಎಂದು ಭಲೆ ಹಾಡುತ್ತಾರೆ ಆದರೆ ಈ ಪತಿತ ಪ್ರಪಂಚದೊಂದಿಗೆ ತಿರಸ್ಕಾರವೇ ಬರುವುದಿಲ್ಲ. ನಿಮಗೆ ತಿಳಿದಿದೆ, ಇದು ಛೀ ಛೀ ಪ್ರಪಂಚವಾಗಿದೆ. ಹೊಸ ಪ್ರಪಂಚದಲ್ಲಿ ನಮಗೆ ಶರೀರವು ಪವಿತ್ರವಾದದ್ದು ಸಿಗುವುದು. ನಾವೀಗ ಅಮರ ಪುರಿಯ ಮಾಲೀಕರಾಗುತ್ತಿದ್ದೇವೆ ಅಂದಾಗ ಮಕ್ಕಳಿಗೆ ಸದಾ ಖುಷಿ, ಹರ್ಷಿತಮುಖಿಯಾಗಿರಬೇಕು. ನೀವು ಬಹಳ ಮಧುರ ಮಕ್ಕಳಾಗಿದ್ದೀರಿ. ತಂದೆಯು 5000 ವರ್ಷಗಳ ನಂತರ ಪುನಃ ಅದೇ ಮಕ್ಕಳೊಂದಿಗೆ ಮಿಲನ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ನಾನು ಪುನಃ ಮಿಲನ ಮಾಡಲು ಬಂದಿದ್ದೇನೆಂದು ಖುಷಿಯಾಗುತ್ತದೆಯಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ, ಆದ್ದರಿಂದ ವಿದ್ಯೆಯ ನಶೆಯೂ ಇರಬೇಕು ಜೊತೆಗೆ ನಡವಳಿಕೆಯ ಪ್ರತಿ ಗಮನವೂ ಇರಬೇಕು. ಒಂದು ದಿನವೂ ವಿದ್ಯಾಭ್ಯಾಸವನ್ನು ತಪ್ಪಿಸಬಾರದು. ತಡವಾಗಿ ತರಗತಿಗೆ ಬಂದು ಶಿಕ್ಷಕರಿಗೆ ಅಗೌರವ ಮಾಡಬಾರದು.

2. ಈ ವಿಕಾರೀ, ಛೀ ಛೀ ಪ್ರಪಂಚದೊಂದಿಗೆ ತಿರಸ್ಕಾರವನ್ನಿಡಬೇಕು. ತಂದೆಯ ನೆನಪಿನಿಂದ ತಮ್ಮನ್ನು ಪವಿತ್ರ, ಸತೋಪ್ರಧಾನರನ್ನಾಗಿ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕು. ಸದಾ ಖುಷಿ, ಹರ್ಷಿತಮುಖಿಯಾಗಿರಬೇಕು.

ವರದಾನ:
ಅಂತಃವಾಹಕ ಶರೀರದ ಮುಖಾಂತರ ಸೇವೆ ಮಾಡುವಂತಹ ಕರ್ಮ ಬಂಧನ ಮುಕ್ತ ಡಬಲ್ ಲೈಟ್ ಭವ.

ಹೇಗೆ ಸ್ಥೂಲ ಶರೀರದ ಮುಖಾಂತರ ಸಾಕಾರಿ ಈಶ್ವರೀಯ ಸೇವೆಯಲ್ಲಿ ಬಿಝಿಯಾಗಿರುವಿರಿ, ಅದೇರೀತಿ ತಮ್ಮ ಆಕಾರೀ ಶರೀರದ ಮುಖಾಂತರ ಅಂತಃವಾಹಕ ಸೇವೆಯೂ ಸಹ ಜೊತೆ-ಜೊತೆಯಲ್ಲಿ ಮಾಡಬೇಕು. ಹೆಗೆ ಬ್ರಹ್ಮಾರವರ ಮೂಲಕ ಸ್ಥಾಪನೆಯ ವೃದ್ಧಿಯಾಯಿತು ಅದೇ ರೀತಿ ಈಗ ತಮ್ಮ ಸೂಕ್ಷ್ಮ ಶರೀರದ ಮುಖಾಂತರ, ಶಿವ ಶಕ್ತಿಯ ಕಂಭೈಂಡ್ ರೂಪದ ಸಾಕ್ಷಾತ್ಕಾರ ಮತ್ತು ಸಂದೇಶ ಸಿಗುವಂತಹ ಕಾರ್ಯ ಆಗಬೇಕಿದೆ. ಆದರೆ ಈ ಸೇವೆಗಾಗಿ ಕರ್ಮ ಮಾಡುತ್ತಿದ್ದರೂ ಸಹ ಯಾವುದೇ ಕರ್ಮ ಬಂಧನದಿಂದ ಮುಕ್ತ ಸದಾ ಡಬಲ್ ಲೈಟ್ ರೂಪದಲ್ಲಿರಿ.

ಸ್ಲೋಗನ್:
ಮನದ ತ್ಯಾಗದಲ್ಲಿ ಸರ್ವರ ಮಾನನೀಯ ಆಗುವಂತಹ ಭಾಗ್ಯ ಸಮಾವೇಶ ಆಗಿದೆ.