12.11.23 Avyakt Bapdada
Kannada
Murli 22.03.96 Om Shanti Madhuban
“ಬ್ರಾಹ್ಮಣ ಜೀವನದ
ಪರ್ಸನಾಲಿಟಿ (ವ್ಯಕ್ತಿತ್ವವು) - ಸರ್ವ ಪ್ರಶ್ನೆಗಳಿಂದ ದೂರವಾಗಿ ಸದಾ
ಪ್ರಸನ್ನಚಿತ್ತರಾಗಿರುವುದಾಗಿದೆ’’
ಇಂದು ಸರ್ವ ಪಾಪ್ತಿಗಳ
ದಾತಾರಾದ ಬಾಪ್ದಾದಾರವರು ತಮ್ಮ ಸರ್ವಪ್ರಾಪ್ತಿ ಸ್ವರೂಪ ಮಕ್ಕಳನ್ನು ನೋಡುತ್ತಾ ಇದ್ದಾರೆ.
ಬಾಪ್ದಾದಾರವರ ಮೂಲಕ ಪ್ರಾಪ್ತಿಗಳೇನೋ ತುಂಬಾ ಆಗಿವೆ. ಅದರ ವರ್ಣನೆ ಮಾಡುವುದಾದರೆ ಅನೇಕವಿದೆ. ಆದರೆ
ಉದ್ದವಾದ ಪಟ್ಟಿಯನ್ನು ನಿರೂಪಿಸುವುದಕ್ಕೆ ಬದಲಾಗಿ ಏನು ವರ್ಣನೆ ಮಾಡುತ್ತೀರೆಂದರೆ, ಈ ಬ್ರಾಹ್ಮಣ
ಜೀವನದಲ್ಲಿ ಪ್ರಾಪ್ತಿಯಾಗದಿರುವ ವಸ್ತುವು ಯಾವುದೂ ಇಲ್ಲ ಎಂದು. ಪ್ರಾಪ್ತಿಗಳಂತೂ ಅನೇಕವು
ಇರುವುದನ್ನು ಬಾಪ್ದಾದಾರವರು ನೋಡುತ್ತಾ ಇದ್ದಾರೆ. ಅನೇಕ ಪ್ರಾಪ್ತಿಗಳಿವೆಯಲ್ಲವೇ. ಪಟ್ಟಿಯು
ದೊಡ್ಡದಿದೆಯಲ್ಲವೇ. ಆದ್ದರಿಂದ ಯಾರಿಗೆ ಸರ್ವ ಪ್ರಾಪ್ತಿಗಳೂ ಇವೆಯೋ, ಅದರ ಚಿಹ್ನೆಯು ಪ್ರತ್ಯಕ್ಷ
ಜೀವನದಲ್ಲಿ ಏನು ಕಂಡುಬರುತ್ತದೆ? ಅದನ್ನು ತಿಳಿದುಕೊಂಡಿದ್ದೀರಲ್ಲವೇ? ಸರ್ವ ಪ್ರಾಪ್ತಿಗಳಿಂದ
ಸಂಪನ್ನ ಆಗಿರುವುದರ ಚಿಹ್ನೆಯು ಏನಾಗಿದೆಯೆಂದರೆ “ಸದಾ ಅವರ ಚೆಹರೆ ಹಾಗೂ ನಡೆವಳಿಕೆಯಲ್ಲಿ
ಪ್ರಸನ್ನತೆಯ ಪರ್ಸನಾಲಿಟಿ (ವ್ಯಕ್ತಿತ್ವವು) ಗೋಚರವಾಗುವುದು” ಯಾರನ್ನಾದರೂ ಆಕರ್ಷಿತರನ್ನಾಗಿ
ಮಾಡುವುದು ವ್ಯಕ್ತಿತ್ವವಾಗಿದೆ. ಆದ್ದರಿಂದ ಸರ್ವ ಪ್ರಾಪ್ತಿಗಳ ಕುರುಹು ಪ್ರಸನ್ನತೆಯ (ವ್ಯಕ್ತಿತ್ವ)
ಪರ್ಸನಾಲಿಟಿಯಾಗಿದೆ. ಅದನ್ನು ಸಂತುಷ್ಟತೆಯೆಂದೂ ಕರೆಯಲಾಗುತ್ತದೆ. ಆದರೆ ಈಗಿನ ಸಮಯದಲ್ಲಿ
ಚೆಹರೆಯಲ್ಲಿ ಪ್ರಸನ್ನತೆಯ ಕಾಂತಿಯು ಕಂಡುಬರಬೇಕು. ಒಮ್ಮೊಮ್ಮೆ ಪ್ರಸನ್ನಚಿತ್ತರಾಗಿರುವುದು ಹಾಗೂ
ಒಮ್ಮೊಮ್ಮೆ ಪ್ರಶ್ನಚಿತ್ತರಾಗಿರುವುದಲ್ಲ. ಎರಡು ಪ್ರಕಾರದ ಮಕ್ಕಳಿದ್ದಾರೆ. ಒಂದು ಪ್ರಕಾರದವರು
ಸಣ್ಣಪುಟ್ಟ ಪರಿಸ್ಥಿತಿಯು ಬಂದರೆ ಪ್ರಶ್ನಚಿತ್ತರಾಗಿ ಬಿಡುತ್ತಾರೆ - ಏಕೆ, ಏನು, ಹೇಗೆ, ಯಾವಾಗ
ಮುಂತಾದ ಪ್ರಶ್ನೆಗಳು ಅವರನ್ನು ಕಾಡಿಸುತ್ತವೆ ಇವರು ಪ್ರಶ್ನಚಿತ್ತರಾಗಿದ್ದಾರೆ. ಹಾಗೂ ಪ್ರಾಪ್ತಿ
ಸ್ವರೂಪರಾದವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ. ಅವರಿಗೆ ಎಂದೂ ಯಾವುದೇ ಪರಿಸ್ಥಿತಿಯಲ್ಲಿ
ಪ್ರಶ್ನೆಯು ಉದ್ಭವವಾಗುವುದಿಲ್ಲ. ಪ್ರಶ್ನೆಯು ಕಾಡಿಸುವುದಿಲ್ಲ. ಏಕೆ? ಏಕೆಂದರೆ ಸರ್ವ
ಪ್ರಾಪ್ತಿಗಳಿಂದ ಸಂಪನ್ನರಾಗಿದ್ದಾರೆ, ಹೀಗೆ ಇದು ಏಕೆ, ಏನು ಎನ್ನುವ ಪ್ರಶ್ನೆಗಳೇನಿವೆಯೋ ಅವು
ಗಾಬರಿ ಅಥವಾ ಗಡಿಬಿಡಿಯ ಚಿಹ್ನೆಯಾಗಿವೆ. ಯಾರು ಸಂಪನ್ನರಾಗಿರುತ್ತಾರೋ ಅವರಲ್ಲಿ ಗಾಬರಿ ಅಥವಾ
ಗೊಂದಲವಿರುವುದಿಲ್ಲ. ಯಾರು ಖಾಲಿಯಾಗಿರುತ್ತಾರೋ ಅವರಲ್ಲಿ ಗೊಂದಲ, ಗಾಬರಿಯಾಗುತ್ತದೆ. ಆದ್ದರಿಂದ
ಸದಾ ನಾನು ಪ್ರಸನ್ನಚಿತ್ತನಾಗಿರುತ್ತೇನೆಯೇ ಎಂದು ನಿಮ್ಮೊಂದಿಗೆ ಕೇಳಿಕೊಳ್ಳಿರಿ,
ಪ್ರಸನ್ನಚಿತ್ತರಾಗಿರುತ್ತೀರಾ? ಒಮ್ಮೊಮ್ಮೆ ಪ್ರಸನ್ನಚಿತ್ತರಾಗಿರುವುದಿಲ್ಲ. ಸದಾ
ಪ್ರಸನ್ನಚಿತ್ತರಾಗಿರಬೇಕು. 10 ವರ್ಷದಿಂದ ಜ್ಞಾನದಲ್ಲಿ ಇರುವವರು ಸದಾ
ಪ್ರಸನ್ನಚಿತ್ತರಾಗಿರುತ್ತಾರೋ ಅಥವಾ ಇಲ್ಲವೋ, ಹೌದು ಎಂದು ಹೇಳುವುದಿಲ್ಲ. ಬಹುಶಃ ಯೋಚನೆ ಮಾಡುತ್ತಾ
ಇದ್ದಾರೆ. ಪ್ರಸನ್ನತೆಯು ಒಂದುವೇಳೆ ಕಡಿಮೆಯಿದ್ದರೆ ಅದರ ಕಾರಣವು ಪ್ರಾಪ್ತಿಯು ಕಡಿಮೆ
ಇರುವುದಾಗಿದೆ ಹಾಗೂ ಕಡಿಮೆ ಇರುವ ಕಾರಣದಿಂದ ಯಾವುದಾದರೊಂದು ಇಚ್ಛೆಯಿರುತ್ತದೆ. ಇಚ್ಛೆಯ
ಅಸ್ತಿಭಾರವು (ಫೌಂಡೇಶನ್) ಈರ್É ಹಾಗೂ ಅಪ್ರಾಪ್ತಿಯಾಗಿದೆ. ಅನೇಕ ಸೂಕ್ಷ್ಮವಾದ ಇಚ್ಛೆಗಳು
ಅಪ್ರಾಪ್ತಿಯ ಕಡೆಗೆ ಬುದ್ಧಿಯನ್ನು ಸೆಳೆಯುತ್ತವೆ. ಆಮೇಲೆ ರಾಯಲ್ ರೂಪದಲ್ಲಿ ಏನು ಹೇಳುತ್ತಾರೆಂದರೆ
ನನಗೆ ಇಚ್ಚೆಯೇನಿಲ್ಲ. ಆದರೆ ಆಗಿಬಿಟ್ಟರೆ ಒಳ್ಳೆಯದು. ಆದರೆ ಎಲ್ಲಿ ಅಲ್ಪಕಾಲದ ಇಚ್ಛೆಯಿದೆಯೋ
ಅಲ್ಲಿ ಒಳ್ಳೆಯದಾಗುವುದು ಸಾಧ್ಯವಿಲ್ಲ. ಆದ್ದರಿಂದ ಏನು ಪರಿಶೀಲನೆ (ಚೆಕ್) ಮಾಡಿಕೊಳ್ಳಿರೆಂದರೆ
ಜ್ಞಾನದ ಜೀವನದಲ್ಲಿಯಾಗಲೀ, ಜ್ಞಾನದ ರಾಯಲ್ರೂಪದ ಇಚ್ಛೆಗಳು, ಅಥವಾ ಸ್ಥೂಲರೂಪದ ಇಚ್ಛೆಗಳು ಇವೆಯೇ
ಎಂದು. ಈಗ ಸ್ಥೂಲರೂಪದ ಇಚ್ಛೆಗಳು ಸಮಾಪ್ತಿಯಾಗಿರುವುದನ್ನು ನೋಡಬಹುದು. ಆದರೆ ರಾಯಲ್ (ಸೂಕ್ಷ್ಮವಾದ)
ಇಚ್ಛೆಗಳು ಜ್ಞಾನದಲ್ಲಿ ಬಂದನಂತರ ಸೂಕ್ಷ್ಮರೂಪದಲ್ಲಿ ಉಳಿದುಕೊಂಡಿವೆ. ಅದನ್ನು ಪರಿಶೀಲನೆ
ಮಾಡಿಕೊಳ್ಳಿರಿ. ಏಕೆ? ಬಾಪ್ದಾದಾರವರು ಈಗ ಮಕ್ಕಳೆಲ್ಲರನ್ನೂ ತಂದೆಯ ಸಮಾನ ಸಂಪನ್ನರನ್ನಾಗಿ
ಸಂಪೂರ್ಣರನ್ನಾಗಿ ಮಾಡಲು ಬಯಸುತ್ತಾರೆ. ಯಾರೊಂದಿಗೆ ಪ್ರೀತಿಯಿರುತ್ತದೆಯೋ ಅವರ ಸಮಾನ ಆಗುವುದೇನೂ
ಕಷ್ಟವಾದ ಕಾರ್ಯವಾಗಿರುವುದಿಲ್ಲ.
ಬಾಪ್ದಾದಾರೊಂದಿಗೆ
ನಿಮ್ಮೆಲ್ಲರಿಗೂ ತುಂಬಾ ಪ್ರೀತಿಯಿದೆಯೋ ಅಥವಾ ಕೇವಲ ಪ್ರೀತಿಯಿದೆಯೋ? ಏನು ಇದೆ? (ತುಂಬಾ
ಪ್ರೀತಿಯಿದೆ) ಪಕ್ಕಾ ಇದೆಯೇ? ಹಾಗಾದರೆ ಪ್ರೀತಿಯ ಸಲುವಾಗಿ ತ್ಯಾಗ ಮಾಡುವುದು ಅಥವಾ
ಪರಿವರ್ತನೆಯಾಗುವುದು ದೊಡ್ಡ ಸಂಗತಿಯಾಗಿದೆಯೇ? ಇಲ್ಲ ತಾನೇ. ಹಾಗಾದರೆ ಪೂರ್ತಿ ತ್ಯಾಗ ಮಾಡಿದ್ದೀರಾ?
ತಂದೆಯು ಏನು ಹೇಳುತ್ತಾರೋ, ತಂದೆಯು ಏನು ಬಯಸುತ್ತಾರೋ ಅದನ್ನು ಮಾಡಿದ್ದೀರಾ? ಸದಾ? ಒಮ್ಮೊಮ್ಮೆ
ಮಾಡುವುದರಿಂದ ಕೆಲಸ ನಡೆಯುವುದಿಲ್ಲ. ಸದಾ ಕಾಲದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದು
ಬಯಸುತ್ತೀರೋ ಅಥವಾ ಒಮ್ಮೊಮ್ಮೆ ಪಡೆಯಲು ಬಯಸುತ್ತೀರೋ? ಸದಾಕಾಲದ ರಾಜ್ಯಭಾಗ್ಯವನ್ನು
ಬಯಸುತ್ತೀರಲ್ಲವೇ? ಆದ್ದರಿಂದ ಸದಾ ಪ್ರಸನ್ನತೆಯ ಭಾವದ ಹೊರತು ಅನ್ಯ ಯಾವ ಭಾವವೂ ಚೆಹರೆಯಲ್ಲಿ ಅಥವಾ
ನಡೆವಳಿಕೆಯಲ್ಲಿ ಕಂಡುಬರದಿರಲಿ, ಈ ದಿನ ಸೋದರಿಯವರ ಅಥರಾ ಸೋದರರ ಮೂಡ್ (ಮನೋಭಾವವು) ಬೇರ ಆಗಿದೆ
ಎಂದು ಒಮ್ಮೊಮ್ಮೆ ಹೇಳುತ್ತಾರಲ್ಲವೇ. ಹೀಗೆ ಹೇಳುತ್ತಾರಲ್ಲವೇ, ಈ ದಿನ ನನ್ನ ಮೂಡ್ ಬೇರೆ
ಆಗಿದೆಯೆಂದು ನೀವೂ ಹೇಳುತ್ತೀರಿ, ಇದನ್ನು ಏನೆಂದು ಹೇಳಬಹುದು. ಸದಾ ಪ್ರಸನ್ನತೆ ಇದೆಯೆಂದು
ಹೇಳಬಹುದೋ? ಹಲವು ಮಕ್ಕಳು ಪ್ರಶಂಸೆಯ ಆಧಾರದ ಮೇಲೆ ಪ್ರಸನ್ನತೆಯು ಅನುಭವ ಮಾಡುತ್ತಾರೆ. ಆದರೆ ಆ
ಪ್ರಸನ್ನತೆಯು ಅಲ್ಪಕಾಲದ್ದಾಗಿವೆ, ಈ ದಿನ ಇರುತ್ತದೆ. ಸ್ವಲ್ಪ ಸಮಯದ ನಂತರ ಸಮಾಪ್ತಿಯಾಗಿ
ಬಿಡುತ್ತದೆ. ಆದ್ದರಿಂದ ಏನು ಪರಿಶೀಲನೆ ಮಾಡಿಕೊಳ್ಳಬೇಕೆಂದರೆ ನನ್ನ ಪ್ರಸನ್ನತೆಯು ಪ್ರಶಂಸೆಯ
ಆಧಾರವನ್ನು ಅವಲಂಬಿಸಿಲ್ಲವೇ ಎಂದು. ಇದನ್ನು ಯಾವುದಕ್ಕೆ ಹೇಳಿಕೆ ಮಾಡಬಹುದೆಂದರೆ, ಈಗಿನ ಕಾಲದಲ್ಲಿ
ಮನೆಯನ್ನು ಕಟ್ಟುವಾಗ ಸಿಮೆಂಟಿನ ಜೊತೆಯಲ್ಲಿ ಮರಳಿನ ಪ್ರಮಾಣವನ್ನು ಜಾಸ್ತಿ ಹಾಕಿಬಿಡುತ್ತಾರೆ.
ಬೆರಕೆ ಮಾಡುತ್ತಾರೆ. ಹಾಗೆಯೇ ಇದರಲ್ಲಿಯೂ ಅಸ್ತಿಭಾರವು ಬೆರಕೆ ಆಗಿದೆ. ಯಥಾರ್ಥವಾದುದಾಗಿಲ್ಲ.
ಆದ್ದರಿಂದ ಸ್ವಲ್ಪವೇ ಪರಿಸ್ಥಿತಿಯ ಬಿರುಗಾಳಿಯು ಬಂದರೆ ಅಥವಾ ಯಾವುದಾದರೂ ಪ್ರಕಾರದ ಉಪದ್ರವವಾದರೆ
ಅದು ಪ್ರಸನ್ನತೆಯನ್ನು ಸಮಾಪ್ತಿ ಮಾಡಿಬಿಡುತ್ತದೆ. ನಿಮ್ಮದು ಅಂತಹ ಅಸ್ತಿಭಾರವಾಗಿಲ್ಲ ತಾನೇ?
ಬಾಪ್ದಾದಾರು ಮುಂಚೆಯೂ
ಏನು ಹೇಳಿದ್ದಾರೆ. ಈಗ ಪುನಃ ಒತ್ತಿ ಹೇಳುತ್ತಿದ್ದಾರೆಂದರೆ, ರಾಯಲ್ ರೂಪದ ಇಚ್ಛೆಯ ಸ್ವರೂಪವು
ಹೆಸರು, ಗೌರವ ಹಾಗೂ ಕೀರ್ತಿಯಾಗಿದೆ. ಆಧಾರವೇನೋ ಸೇವೆಯದನ್ನು ತೆಗೆದುಕೊಳ್ಳುತ್ತಾರೆ. ಸೇವೆಯಲ್ಲಿ
ಹೆಸರು ಗಳಿಸಬೇಕು ಎಂದು ಬಯಸುತ್ತಾರೆ. ಆದರೆ ಯಾರು ಹೆಸರಿಗಾಗಿ ಸೇವೆ ಮಾಡುತ್ತಾರೋ ಅವರ ಹೆಸರು
ಅಲ್ಪಕಾಲದವರೆಗೆ ಪ್ರಖ್ಯಾತವಾಗಿ ಬಿಡುತ್ತದೆ. ತುಂಬಾ ಒಳ್ಳೆಯ ಸೇವಾಧಾರಿಯಾಗಿದ್ದಾರೆ. ತುಂಬಾ
ಚೆನ್ನಾಗಿ ಆಕರ್ಷಿತರನ್ನಾಗಿ ಮಾಡುವವರಾಗಿದ್ದಾರೆ ಎಂದು ಹೆಸರು ಗಳಿಸುತ್ತಾರೆ. ಆದರೆ ಹೆಸರಿನ
ಆಧಾರದಿಂದ ಸೇವೆ ಮಾಡುವವರ ಹೆಸರು ಉನ್ನತ ಪದವಿಯನ್ನು ಪಡೆಯುವವರಲ್ಲಿ ಕೊನೆಯವರಾಗಿ ಬಿಡುತ್ತದೆ.
ಏಕೆಂದರೆ ಕಚ್ಚಾ ಆಗಿರುವ ಫಲವನ್ನು ತಿಂದುಬಿಟ್ಟರು. ಪಕ್ವವಾಗಲು ಬಿಡಲಿಲ್ಲ. ಪಕ್ವವಾದ ಹಣ್ಣನ್ನು
ಎಲ್ಲಿ ತಿನ್ನುವರು. ಕಚ್ಚಾ ಆಗಿರುವುದನ್ನೇ ತಿಂದುಹಾಕಿದರು. ಈಗತಾನೇ ಸೇವೆ ಮಾಡಿದರು ಈಗಲೇ
ಹೆಸರನ್ನು ಪಡೆದರು. ಇದು ಕಚ್ಚಾ ಫಲವಾಗಿದೆಯೋ ಅಥವಾ ಇಚ್ಛೆಯನ್ನು ಇಟ್ಟುಕೊಂಡರು. ಸೇವೆಯನ್ನಂತೂ
ನಾನು ತುಂಬಾ ಮಾಡಿದೆನು. ಎಲ್ಲರಿಗಿಂತಲೂ ಹೆಚ್ಚು ಸೇವೆಗೆ ನಿಮಿತ್ತನು ನಾನಾಗಿದ್ದೇನೆ ಎಂದು
ತಿಳಿಯುತ್ತಾರೆ. ಇದು ಹೆಸರಿನ ಆಧಾರದಿಂದ ಸೇವೆ ಮಾಡುವ ಸೇವೆಯಾಯಿತು. ಇವರು ಕಚ್ಚಾ ಫಲವನ್ನು
ತಿನ್ನುವವರಾದರು. ಕಚ್ಚಾ ಫಲದಲ್ಲಿ ಶಕ್ತಿಯಿರುತ್ತದೆಯೇನು? ಅಥವಾ ಸೇವೆ ಮಾಡಿದರೆ ಸೇವೆಯ
ಪರಿಣಾಮದಿಂದ ನನಗೆ ಗೌರವವು ದೊರೆಯಬೇಕು ಎಂದು ತಿಳಿಯುತ್ತಾರೆ. ಇದು ಗೌರವ ಅಥವಾ ಸನ್ಮಾನವಲ್ಲ.
ಅಭಿಮಾನವಾಗಿದೆ. ಎಲ್ಲಿ ಅಭಿಮಾನವಿದೆಯೋ ಅಲ್ಲಿ ಪ್ರಸನ್ನತೆಯು ಇರುವುದು ಸಾಧ್ಯವಿಲ್ಲ.
ಎಲ್ಲಕ್ಕಿಂತಲೂ ದೊಡ್ಡ ಸ್ಥಾನ ಮಾನವಾದ ಬಾಪ್ದಾದಾರವರ ಹೃದಯದಲ್ಲಿ ಸ್ಥಾನವನ್ನು
ಪ್ರಾಪ್ತಿಮಾಡಿಕೊಳ್ಳಿರಿ. ಆತ್ಮರ ಹೃದಯದಲ್ಲಿ ಒಂದುವೇಳೆ ಸ್ಥಾನವು ಸಿಕ್ಕಿಬಿಟ್ಟರೂ ಸಹ ಆತ್ಮರು
ಸ್ವಯಂ ತಾವೇ ತೆಗೆದುಕೊಳ್ಳುವವರಾಗಿದ್ದಾರೆ. ಮಾಸ್ಟರ್ ದಾತಾ ಆಗಿದ್ದಾರೆ. ದಾತಾ ಆಗಿಲ್ಲ.
ಆದ್ದರಿಂದ ಸ್ಥಾನವು ಬೇಕಾಗಿದ್ದರೆ, ಸದಾ ಬಾಪ್ದಾದಾರವರ ಹೃದಯದಲ್ಲಿ ನಿಮ್ಮ ಸ್ಥಾನವನ್ನು ಪ್ರಾಪ್ತಿ
ಮಾಡಿಕೊಳ್ಳಿರಿ. ಈ ರಾಯಲ್ ಇಚ್ಚೆಗಳೆಲ್ಲವೂ ಪ್ರಾಪ್ತಿಸ್ವರೂಪ ಆಗಗೊಡುವುದಿಲ್ಲ. ಆದ್ದರಿಂದ
ಪ್ರಸನ್ನತೆಯ ಪರ್ಸನಾಲಿಟಿಯು ಸದಾ ಚೆಹರೆ ಹಾಗೂ ನಡೆವಳಿಕೆಯಲ್ಲಿ ಕಂಡುಬರುವುದಿಲ್ಲ. ಯಾವುದಾದರೂ
ಪರಿಸ್ಥಿತಿಯಲ್ಲಿ ಪ್ರಸನ್ನತೆಯ ಮನೋಭಾವವು ಪರಿವರ್ತನೆಯಾದರೆ ಸದಾ ಕಾಲದ ಪ್ರಸನ್ನತೆಯೆಂದು
ಹೇಳುವುದಿಲ್ಲ. ಬ್ರಾಹ್ಮಣ ಜೀವನದ ಮನೋಭಾವವು (ಮೂಡ್) ಸದಾ ಹರ್ಷಿತ (ಚಿಯರ್ ಫುಲ್) ಹಾಗೂ ಕೇರ್ಫುಲ್
(ಜಾಗರೂಕ) ಆಗಿರುವುದಾಗಿದೆ. ಮೂಡ್ ಬದಲಾವಣೆ ಆಗಬಾರದು. ಆಮೇಲೆ ರಾಯಲ್ರೂಪದಲ್ಲಿ ಏನು
ಹೇಳುತ್ತಾರೆಂದರೆ, ಈ ದಿನ ನನಗೆ ತುಂಬಾ ಏಕಾಂತದ ಅವಶ್ಯಕತೆಯಿದೆ ಎಂದು. ಏಕೆ ಬೇಕು? ಸೇವೆ ಮಾಡಬೇಕೋ
ಅಥವಾ ಪರಿವಾರದಿಂದ ದೂರವಿದ್ದುಕೊಂಡು ಶಾಂತಿಯು ಬೇಕೋ, ಏಕಾಂತವು ಬೇಕೋ. ಈದಿನ ನನ್ನ ಮೂಡ್
ಇಂತಹುದಾಗಿದೆ, ಹೀಗೆ ಮನೋಭಾವವನ್ನು ಬದಲಾಯಿಸಬೇಡಿರಿ. ಕಾರಣವೇನೇ ಇರಲಿ. ಆದರೆ ನೀವು ಕಾರಣವನ್ನು
ನಿವಾರಣೆ ಮಾಡುವವರಾಗಿದ್ದೀರೋ ಅಥವಾ ಕಾರಣದಲ್ಲಿ ಸಿಕ್ಕಿಬೀಳುವವರಾಗಿದ್ದೀರೋ? ನಿವಾರಣೆ
ಮಾಡುವವರಲ್ಲವೇ. ಏನು ಗುತ್ತಿಗೆಯನ್ನು ತೆಗೆದುಕೊಂಡಿದ್ದೀರಿ? ನೀವು ಕಂಟ್ರಾಕ್ಟರ್ ಆಗಿದ್ದೀರಲ್ಲವೇ?
ಆದ್ದರಿಂದ ಏನು ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಿ? ಪ್ರಕೃತಿಯ ಮೂಡ್ ಸಹ (ಮನೋಭಾವವನ್ನೂ)
ಪರಿವರ್ತನೆ ಮಾಡುವೆವು ಎಂದು. ಪ್ರಕೃತಿಯನ್ನೂ ಸಹ ಪರಿವರ್ತನೆ ಮಾಡಬೇಕಲ್ಲವೇ? ಹೀಗೆ ಪ್ರಕೃತಿಯನ್ನು
ಪರಿವರ್ತನೆ ಮಾಡುವವರು ನಿಮ್ಮ ಮೂಡ್ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಮೂಡ್
ಬದಲಾವಣೆಯಾಗುತ್ತದೆಯೋ ಇಲ್ಲವೋ? ಒಮ್ಮೊಮ್ಮೆ ಆಗುತ್ತದೆಯೇ? ಆಮೇಲೆ ಏನು ಹೇಳುತ್ತೀರೆಂದರೆ, ಸಾಗರದ
ತೀರದಲ್ಲಿ ಹೋಗಿ ಕುಳಿತುಕೊಳ್ಳುತ್ತೇನೆ ಎಂದು. ಜ್ಞಾನಸಾಗರ ಅಲ್ಲ ಸ್ಥೂಲಸಾಗರದ ತೀರದಲ್ಲಿ.
ವಿದೇಶೀಯರು ಹೀಗೆ ಮಾಡುತ್ತಾರಲ್ಲವೇ? ಅಥವಾ ಈದಿನ ಒಂಟಿಯಾಗಿ ಏಕಾಕಿಯಾಗಿದ್ದೇನೆನ್ನಿಸುತ್ತದೆ ಎಂದು
ಹೇಳುತ್ತಾರೆ, ಹಾಗಾದರೆ ತಂದೆಯ ಕಂಬೈಂಡ್ (ಸಂಯುಕ್ತ) ರೂಪವು ಎಲ್ಲಿ ಹೋಯಿತು? ತಂದೆಯನ್ನು ದೂರ
ಮಾಡಿಬಿಟ್ಟಿರಾ? ಕಂಬೈಂಡ್ ಆಗಿದ್ದವರು ಒಂಟಿಯಾಗಿ ಬಿಟ್ಟಿರಿ, ಇದನ್ನೇ ಪ್ರೀತಿಯೆಂದು
ಕರೆಯಲಾಗುತ್ತದೆಯೇ? ಹೀಗೆ ಯಾವುದೇ ಪ್ರಕಾರದ ಮನೋಭಾವ ಮೂಡ್ ಆಫ್ ಆಗುವುದು ದೊಡ್ಡ ಕೊರತೆಯಾಯಿತು.
ಆದರೆ ಮೂಡ್ ಪರಿವರ್ತನೆಯಾಗುವುದೂ ಸಹ ಸರಿಯಲ್ಲ. ಮೂಡ್ ಆಫ್ ಆಗುವವರಂತೂ ಅನೇಕ ಭಿನ್ನ ಭಿನ್ನ
ಪ್ರಕಾರದ ಲೀಲೆಯನ್ನು ತೋರಿಸುತ್ತಾರೆ. ಹಿರಿಯರಿಗೆ ತುಂಬಾ ಲೀಲೆಯನ್ನು ತೋರಿಸುವುದನ್ನು ಅಥವಾ
ತಮ್ಮ ಸಾಥಿಗಳಿಗೆ ತುಂಬಾ ಲೀಲೆಯನ್ನು ತೋರಿಸುವುದನ್ನು ಬಾಪ್ದಾದಾರವರು ನೋಡುತ್ತಾರೆ. ಇಂತಹ ಲೀಲೆ
ಮಾಡಬೇಡಿರಿ. ಏಕೆಂದರೆ ಬಾಪ್ದಾದಾರವರಿಗೆ ಮಕ್ಕಳೊಂದಿಗೆ ಎಲ್ಲರೊಂದಿಗೂ ಪ್ರೀತಿಯಿದೆ. ಯಾರು
ವಿಶೇಷವಾಗಿ ನಿಮಿತ್ತರಾಗಿದ್ದಾರೋ ಅವರು ತಂದೆಯ ಸಮಾನರಾಗಬೇಕೆಂದೂ ಹಾಗೂ ಉಳಿದವರು ಆದರೆ ಆಗಲಿ,
ಇಲ್ಲದಿದ್ದರೆ ಬೇಡ ಎಂದು ಬಾಪ್ದಾದಾರವರು ಬಯಸುವುದಿಲ್ಲ. ಎಲ್ಲರನ್ನೂ ಸಮಾರನ್ನಾಗಿ ಮಾಡಬೇಕಾಗಿದೆ.
ಇದೇ ಬಾಪ್ದಾದಾರವರ ಪ್ರೀತಿಯಾಗಿದೆ. ಆದ್ದರಿಂದ ಪ್ರೀತಿಗೆ ರೆಸ್ಪಾನ್ಸ್ (ಪ್ರತಿಯಾಗಿ ಪ್ರೀತಿ)
ಕೊಡುವುದು ಬರುತ್ತದೆಯೇ ಅಥವಾ ಬಿಂಕ ಬಿನ್ನಾಣದಿಂದ ಪ್ರತಿಕ್ರಿಯೆ ತೋರಿಸುತ್ತೀರೋ? ಒಮ್ಮೊಮ್ಮೆ
ಬಿಂಕ ಬಿನ್ನಾಣವನ್ನು ತೋರಿಸುತ್ತಾರೆ ಹಾಗೂ ಒಮ್ಮೊಮ್ಮೆ ಸಮಾನ ಆಗಿ ತೋರಿಸುತ್ತಾರೆ. ಈಗ ಈ ಸಮಯವು
ಸಮಾಪ್ತಿಯಾಯಿತು.
ಈಗ ಡೈಮಂಡ್ ಜೂಬಿಲಿ
ಆಚರಿಸುತ್ತಿದ್ದೀರಲ್ಲವೇ? 60 ವಯಸ್ಸಾದ ನಂತರ ಸಾಮಾನ್ಯವಾಗಿಯೂ ವಾನಪ್ರಸ್ಥವು ಪ್ರಾರಂಭವಾಗುತ್ತದೆ.
ಇನ್ನೂ ನೀವು ಸಣ್ಣ ಮಕ್ಕಳಲ್ಲ. ಈಗ ವಾನಪ್ರಸ್ಥ ಅರ್ಥಾತ್ ಎಲ್ಲವನ್ನೂ ತಿಳಿದುಕೊಂಡಿರುವವರು ಅನುಭವೀ
ಆತ್ಮರಾಗಿದ್ದೀರಿ. ಜ್ಞಾನಪೂರ್ಣ ರಾಗಿದ್ದೀರಿ. ಶಕ್ತಿಪೂರ್ಣರಾಗಿದ್ದೀರಿ, ಸಫಲತಾಪೂರ್ಣರಾಗಿದ್ದೀರಿ.
ಪೂರ್ಣರಾಗಿದ್ದೀರಾ? ಶಕ್ತಿಪೂರ್ಣರಾಗಿದ್ದೀರಾ? ಸಫಲತಾಪೂರ್ಣರಾಗಿದ್ದೀರಾ? ಒಮ್ಮೊಮ್ಮೆ
ಆಗಿರುತ್ತೀರೋ ಅಥವಾ ಸದಾ ಆಗಿದ್ದೀರೋ? ಸದಾ ಹೇಗೆ ಜ್ಞಾನಪೂರ್ಣರಾಗಿದ್ದೀರೋ ಹಾಗೆಯೇ ಶಕ್ತಿಪೂರ್ಣರೂ
ಸಫಲತಾಪೂರ್ಣರೂ ಯಾವಾಗಲಾದರೂ ಕಾರಣವೇನು? ಬಾಪ್ ದಾದಾರು ಸಫಲತಾಪೂರ್ಣರಾಗಿರುವುದಿಲ್ಲ, “ಏನು
ನೋಡಿದ್ದೇವೆಂದರೆ, ಮೆಜಾರಿಟಿ (ಅಧಿಕ ಸಂಖ್ಯೆಯ ಮಕ್ಕಳು) ತಮ್ಮ ದುರ್ಬಲ ಸಂಕಲ್ಪವನ್ನು ಮೊದಲೇ
ಪ್ರಕಟ ಮಾಡುತ್ತಾರೆ. ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎನ್ನುವ ಸಂಕಲ್ಪವನ್ನು ತಂದುಕೊಳ್ಳುತ್ತಾರೆ.
ಆದ್ದರಿಂದ ತಮ್ಮ ಈ ಪ್ರಸನ್ನಚಿತ್ತರನ್ನಾಗಿ ಮಾಡದೆ ಪ್ರಶ್ನಚಿತ್ತರನ್ನಾಗಿ ಮಾಡುತ್ತದೆ. ದುರ್ಬಲ
ಸಂಕಲ್ಪವೆ ಇಲ್ಲವೋ? ಏನಾಗುತ್ತದೆಯೋ? ಗೊತ್ತಿಲ್ಲ…….. ಈ ಸಂಕಲವೇ ಗೋಡೆಯಾಗಿ ಆಗುತ್ತದೆಯೋ
ಬಿಡುತ್ತದೆ ಹಾಗೂ ಸಫಲತೆಯು ಆ ಗೋಡೆಯೊಳಗೆ ಅಡಗಿಹೋಗಿಬಿಡುತ್ತದೆ. ನಿಶ್ಚಯ ಬುದ್ಧಿಯುಳ್ಳವರು
ವಿಜಯಶಾಲಿಯಾಗುತ್ತಾರೆ ಎನ್ನುವುದು ನಿಮ್ಮ ಸ್ಲೋಗನ್ ಆಗಿದೆಯಲ್ಲವೇ? 10 ವರ್ಷದವರ ಸೋರ್ಗ ಆಗಿವೆಯೇ?
ಪಕ್ಕಾ ಆಗಿದೆಯೇ? ಇದು ಈ ಸಮಯದ ಸೋಗನ್ ಆಗಿದೆ. ಭವಿಷ್ಯದಲ್ಲ. ವರ್ತಮಾನ ಸಮಯದ್ದಾಗಿದೆ. ಇರಬೇಕು?
ಪ್ರಸನ್ನ ಚಿತ್ತರಾಗಿರಬೇಕೋ ಅಥವಾ ಪ್ರಶ್ನಚಿತ್ತರಾಗಿರಬೇಕೋ? ಮಾಯೆ ತನ್ನದೇ ದುರ್ಬಲ ಸಂಕಲದ
ಜಾಲವನ್ನು ಹರಡಿ ಬಿಡುತ್ತದೆ. ಹಾಗೂ ನಿಮ್ಮದೇ ಬಲೆಯಲ್ಲಿ ಸಿಕ್ಕಿಬೀಳುತ್ತೀರಿ. ಆದ್ದರಿಂದ ಸದಾ ಏನು
ವಿಜಯಶಾಲಿ ಆಗಿಯೇ ಇದರಿಂದ ಈ ದುರ್ಬಲತೆಯ, ಜಾಲವನ್ನು ಸಮಾಪ್ತಿಮಾಡಿರಿ, ಸಿಕ್ಕಿಹಾಕಿಕೊಳ್ಳಬೇಡಿರಿ.
ಆದರೆ ಸಮಾಪ್ತಿ ಮಾಡಿರಿ, ಸಮಾಪ್ತಿ ಮಾಡುವ ಶಕ್ತಿಯಿದೆಯೇ? ನಿಧಾನವಾಗಿ ಸಮಾಪ್ತಿ ಮಾಡಲು ಹೋಗಬೇಡಿರಿ.
ತಕ್ಷಣವೇ ಒಂದು ಸೆಕೆಂಡಿನಲ್ಲಿ ಈ ಜಾಲವನ್ನು ಬಲಗೊಳ್ಳಲು ಬಿಡಬೇಡಿರಿ. ಒಂದುವೇಳೆ: ಒಂದು ಸಲವಾದರೂ
ಈ ಬಲೆಯಲ್ಲಿ ಸಿಕ್ಕಿಬಿದ್ದರೆ ಅದರಿಂದ ಹೊರಗೆ ಬರುವುದು ಕಪ್ಪವಿದೆ. ವಿಜಯವು ನನ್ನ ಜನ್ಮಸಿದ್ಧ
ಅಧಿಕಾರವಾಗಿದೆ. ಸಫಲತೆಯು ನನ್ನ ಜನ್ಮಸಿದ್ಧ ಅಧಿಕಾರವಾಗಿದೆ ಎನ್ನುವ ನಿಶ್ಚಯವಿರಲಿ. ಈ
ಜನ್ಮಸಿದ್ಧ ಅಧಿಕಾರವು ಪರಮಾತ್ಮದತ್ತವಾದ (ಈಶ್ವರಿ) ಜನ್ಮಸಿದ್ಧ ಅಧಿಕಾರವಾಗಿದೆ. ಇದನ್ನು ಯಾರೂ
ಕಸಿದುಕೊಳ್ಳಲು ಸಾಧ್ಯವಿಲ್ಲ. ಇಂತಹ ನಿಶ್ಚಯಬುದ್ಧಿಯುಳ್ಳವರು ಸದಾ ಸಹಜವಾಗಿ ಮಾಗೂ ಸ್ವತಃವಾಗಿ
ಪ್ರಸನ್ನಚಿತ್ತರಾಗಿರುತ್ತಾರೆ. ಪರಿಶ್ರಮಿಸುವ ಅಗತ್ಯವೂ ಇರುವುದಿಲ್ಲ.
ಅಸಫಲತೆಯಾಗುವ ಎರಡನೆಯ
ಕಾರಣವು ಏನಾಗಿದೆಯೆಂದರೆ, ಸಮಯ, ಸಂಕಲ್ಪ ಸಂಪತ್ತು ಎಲ್ಲವನ್ನೂ ಸಫಲ ಮಾಡಿಕೊಳ್ಳಿರೆಂದು ನೀವೇ
ಅನ್ಯರಿಗೂ ಹೇಳುತ್ತೀರಿ. ಆದ್ದರಿಂದ ಸಫಲ ಮಾಡಿಕೊಳ್ಳಿರಿ ಆರ್ಥಾತ್ ಸಫಲತೆಯನ್ನು ಪಡೆಯಿರಿ. ಸಫಲ
ಮಾಡಿಕೊಳ್ಳುವುದೇ ಸಫಲತೆಯ ಆಧಾರವಾಗಿದೆ. ಒಂದುವೇಳೆ ಸಫಲತೆಯು ದೊರೆಯದಿದ್ದರೆ, ಅದರ
ಕಾರಣವೇನಾಗಿದೆಯೆಂದರೆ ನೀವು ಯಾವುದಾದರೂ ಒಂದು ಖಜಾನೆಯನ್ನು ಸಫಲ ಮಾಡಿಕೊಂಡಿಲ್ಲ. ಆದ್ದರಿಂದ
ಸಫಲತೆಯು ದೊರೆಯಲಿಲ್ಲ. ಆದ್ದರಿಂದ ಯಾವ ಖಜಾನೆಯನ್ನು ಸಫಲ ಮಾಡಿಕೊಂಡಿಲ್ಲ. ವ್ಯರ್ಥವಾಗಿ
ಕಳೆದಿದ್ದೇನೆ ಎಂದು ಪರಿಶೀಲನೆ ಮಾಡಿಕೊಳ್ಳಿರಿ. ಖಜಾನೆಗಳ ಪಟ್ಟಿಯನ್ನು ತಿಳಿದುಕೊಂಡಿದ್ದೀರಲ್ಲವೇ,
ಖಜಾನೆಗಳನ್ನು ಸಫಲ ಮಾಡಿಕೊಂಡರೆ, ಸಫಲತೆಯು ಸ್ವತಃವಾಗಿಯೇ ಪ್ರಾಪ್ತಿಯಾಗಿ ಬಿಡುವುದು. ಇದು
ಆಸ್ತಿಯೂ ಆಗಿದೆ. ವರದಾನವೂ ಆಗಿದೆ, ಸಫಲ ಮಾಡಿಕೊಳ್ಳಿರಿ ಹಾಗೂ ಸಫಲತೆಯನ್ನು ಪಡೆಯಿರಿ. ಸಫಲ
ಮಾಡಿಕೊಳ್ಳುವುದು ಬರುತ್ತದೆಯೋ ಅಥವಾ ಇಲ್ಲವೋ ಹೌದು ಅಥವಾ ಇಲ್ಲ ಎಂದು ಹೇಳಿರಿ. ಹಾಗಾದರೆ ಸಫಲತೆಯು
ದೊರೆಯುತ್ತದೆಯೇ? ಸಫಲ ಮಾಡಿಕೊಳ್ಳುವುದು ಬೀಜ ಬಿತ್ತುವುದಾಗಿದೆ ಹಾಗೂ ಸಫಲತೆಯು ಫಲವಾಗಿದೆ.
ಒಂದುವೇಳೆ ಬೀಜವು ಉತ್ತಮವಾಗಿದ್ದರೆ ಫಲವು ದೊರೆಯದಿರುವುದು ಸಾಧ್ಯವಿಲ್ಲ. ಹಾಗಾದರೆ ಏನು ಮಾಡಬೇಕು.
ಸದಾ ಪ್ರಸನ್ನತೆಯ ಪರ್ಸನಾಲಿಟಿಯಲ್ಲಿ ಇರಿ. ಪ್ರಸನ್ನಚಿತ್ತರು ತುಂಬಾ ಒಳ್ಳೆಯ ಅನುಭವ ಮಾಡುವರು.
ಸಾಮಾನ್ಯವಾಗಿಯೂ ಯಾರಾದರೂ ಪ್ರಸನ್ನಚಿತ್ತರಾಗಿರುವುದನ್ನು ನೋಡಿದರೆ ಎಷ್ಟು ಹಿತವೆನಿಸುತ್ತದೆ.
ಸಂಗದಲ್ಲಿ ಇರುವುದು, ಅವರ ಜೊತೆಯಲ್ಲಿ ಮಾತನಾಡುವುದು, ಕುಳಿತಿರುವುದು ಎಷ್ಟು ಹಿತವೆನಿಸುತ್ತದೆ.
ಹಾಗೂ ಯಾರಾದರೂ ಪ್ರಶ್ನಚಿತ್ತರು. ಬಂದು ಬಿಟ್ಟರೆ, ಬೇಸರಗೊಂಡು ಬಿಡುವಿರಿ. ಆದ್ದರಿಂದ ಏನು
ಲಕ್ಷ್ಯವನ್ನು ಇಟ್ಟುಕೊಳ್ಳಿರೆಂದರೆ ಪ್ರಸನ್ನಚಿತ್ತರಾಗಬೇಕು. ಏನಾಗಬೇಕು ಎಂಬುದನ್ನು
ಪ್ರಶ್ನಚಿತ್ತರಲ್ಲ.
ಇಂದು ಈ ಸೀಜನ್ನಿನ
ಅಂತ್ಯ ದಿನವಾಗಿದೆ. ಅಂತ್ಯದಲ್ಲಿ ಏನು ಮಾಡಲಾಗುತ್ತದೆ. ಯಾವುದಾದರೂ ಯಜ್ಞವನ್ನು ರಚನೆ ಮಾಡಿದರೆ
ಅಂತ್ಯದಲ್ಲಿ ಏನು ಮಾಡುತ್ತಾರೆ? ಸ್ವಾಹಾ ಮಾಡುತ್ತಾರೆ, ಹಾಗಾದರೆ ನೀವು ಏನು ಮಾಡುವಿರಿ?
ಪ್ರಶ್ನಚಿತ್ತ ಆಗುವುದನ್ನು ಸ್ವಾಹಾ ಮಾಡಿರಿ. ಆಗುತ್ತದೆ? ಇದು ಏನು ಆಗುತ್ತದೆ? ಈ ಪ್ರಶ್ನೆಗಳನ್ನು
ಸಮಾಪ್ತಿ ಮಾಡಿಸಿ. ಜ್ಞಾನಪೂರ್ಣರಾಗಿರುವುದರಿಂದ ಏಕೆ ಎನ್ನುವ ಪ್ರಶ್ನೆಗಳು ಬೇಡ. ಇಂದಿನಿಂದ ಈ
ವ್ಯರ್ಥ ಪ್ರಶ್ನೆಗಳನ್ನು ಸ್ವಾಹಾ ಮಾಡಿರಿ. ಇದರಿಂದ ನಿಮ್ಮ ಸಮಯವ ಉಳಿತಾಯವಾಗುವುದು ಹಾಗೂ ಅನ್ಯರ
ಸಮಯವೂ ವಾಗುವುದು. ದಾದಿಯರ ಸಮಯವೂ ಇದರಲ್ಲಿ ಉಳಿತಾಯವಾಗುವುದು. ದಾದಿಯರ ಸಮಯವೂ ಇದರಲ್ಲಿ
ವ್ಯರ್ಥವಾಗುತ್ತದೆ. ಇದು ಏಕೆ, ಇದೇನು, ಇದು ಹೇಗೆ ಎನ್ನುವ ಪ್ರಶ್ನೆಗಳಲ್ಲಿ ವ್ಯರ್ಥವಾಗುವ
ಸಮಯವನ್ನು ಉಳಿತಾಯ. ಮಾಡಿರಿ, ಉಳಿತಾಯದ ಖಾತೆಯನ್ನು ಜಮಾ ಮಾಡಿಕೊಳ್ಳಿರಿ, ಆಮೇಲೆ 21 ಜನಗಳವರೆಗೆ
ಆರಾಮದಿಂದ ಊಟ ಮಾಡಿರಿ. ಪಾನೀಯ, ಸೇವಿಸಿ. ಮೋಜು ಮಾಡಿರಿ. ಅಲ್ಲಿ ಜಮಾ ಮಾಡುವ ಅಗತ್ಯವಿರುವುದಿಲ್ಲ,
ಹಾಗಾದರೆ ಸ್ವಾಹಾ ಮಾಡಿದಿರಾ? ಅಥವಾ ಮಾಡುವಿರೋ? ವಿಚಾರ ಮಾಡಬೇಕೇನು. ಒಳ್ಳೆಯದು, ವಿಚಾರ ಮಾಡಿಲ,
ನಿಮ್ಮೊ0ದಿಗೆ ಕೇಳಿಕೊಳ್ಳಿರಿ - ಇದು ಹೇಗೆ ಆಗುವುದು, ಇದನ್ನು ಮಾಡಬೇಕಾಗುವುದೋ, ಇಲ್ಲವೋ? ಇದನ್ನು
ಒಂದು ನಿಮಿಷದಲ್ಲಿ ವಿಚಾರ ಮಾಡಿಬಿಡಿ, ಮಾಡಿಬಿಡಿ, ನಿಮ್ಮೊಂದಿಗೆ ಎಷ್ಟು ಪ್ರಶ್ನೆಗಳು ಬೇಕೋ
ಅವುಗಳನ್ನು ಒಂದು ನಿಮಿಷದಲ್ಲಿ ಕೇಳಿಕೊಳ್ಳಿರಿ: ಕೇಳಿಕೊಂಡಿರಾ? ಸ್ವಾಹಾ ಸಹ ಮಾಡಿಬಿಟ್ಟಿರೋ ಅಥವಾ
ಕೇವಲ ಪ್ರಶ್ನೆಯನ್ನು ಕೇಳಿಕೊಂಡಿರೋ? ಮುಂದೆ ಪ್ರಶ್ನೆಗಳೆಲ್ಲವನ್ನೂ ಸಮಾಪ್ತಿ ಮಾಡಿರಿ,
ಸಮಾಪ್ತಿಯಾದವೇನು? ಸಮಾಪ್ತಿ ಮಾಡಿದಿರಾ? ಸುಮ್ಮನೆ ಹೌದು ಎಂದು ಹೇಳಿಬಿಡಬೇಡಿರಿ.
ಪ್ರಶ್ನಚಿತ್ತರಾಗಿರುವುದು ಅರ್ಥಾತ್ ವ್ಯಾಕುಲರಾಗುವ ಬಹಳಕಾಲದ ಅನುಭವವಿದೆಯಲ್ಲವೇ? ಚೆನ್ನಾಗಿ
ಅನುಭವವಿದೆಯೇ? ಹೀಗೆ ನಿಮ್ಮ ನಿಶ್ಚಯ ಹಾಗೂ ಜನ್ಮಸಿದ್ದ ಅಧಿಕಾರದ ಸಾಮಥ್ರ್ಯದಲ್ಲಿ ಇದ್ದರೆ
ವ್ಯಾಕುಲರಾಗುವುದಿಲ್ಲ. ಯಾವಾಗ ಸಾಮಥ್ರ್ಯದಿಂದ ದೂರವಾಗುತ್ತೀರೋ ಆಗ ವ್ಯಾಕುಲರಾಗುತ್ತೀರಿ.
ಚೆನ್ನಾಗಿ ತಿಳಿದುಕೊಂಡಿರಾ? ಅಥವಾ ತಿಳಿದುಕೊಂಡೆನು ಎಂದು ಈಗ ಹೇಳಿ ಒಟ್ಟು ವಿದೇಶದಲ್ಲಿ ಹೋದನಂತರ
ಕಷ್ಟವಿದೆಯೆಂದು ಹೇಳುವಿರೋ? ಮಾಡುವುದಿಲ್ಲ ತಾನೇ? ಒಳ್ಳೆಯದು.
ಒಂದು ಸೆಕೆಂಡಿನಲ್ಲಿ
ಅಶರೀರಿಯಾಗುವ ಪಾಠವು ಪಕ್ಕಾ ಆಗಿದೆಯೇ? ಈಗ ತಾನೇ ವಿಸ್ತಾರದಲ್ಲಿ ಹೋಗಿ ಇದೀಗಲೇ ಸಾರದಲ್ಲಿ
ಸ್ಥಿತರಾಗಿ ಬಿಡಿ, (ಬಾಪ್ದಾದಾರವರು ಡ್ರಿಲ್ ಮಾಡಿಸಿದರು) ಒಳ್ಳೆಯದು ಈ ಅಭ್ಯಾಸವನ್ನು ಸದಾ
ಜೊತೆಯಲ್ಲಿ ಇಟ್ಟುಕೊಳ್ಳಿರಿ.
ನಾಲ್ಕೂ ಕಡೆಯ ಸರ್ವ
ಪ್ರಶ್ನಚಿತ್ತದಿಂದ ಪರಿವರ್ತನೆಯಾಗುವ ಸದಾ ಪ್ರಸನ್ನಚಿತ್ತದ ಪರ್ಸನಾಲಿಟಿ (ವ್ಯಕ್ತಿತ್ವ) ಉಳ್ಳ
ಶ್ರೇಷ್ಠ ಆತ್ಮರು, ಸದಾ ತಮ್ಮ ವಿಜಯ ಹಾಗೂ ಜನಸಿದ್ಧ ಅಧಿಕಾರದ ಸ್ಮೃತಿಯಲ್ಲಿರುವ ಸ್ಮೃತಿಸ್ವರೂಪ
ವಿಶೇಷ ಆತ್ಮರು, ಸದಾ ಸಫಲ ಮಾಡಿಕೊಳ್ಳುವುದರಿಂದ ಸಹಜವಾಗಿ ಸಫಲತೆಯ ಅನುಭವ ಮಾಡುವ ತಂದೆಯ ಸಮೀಪ
ಆತ್ಮರಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.
ಯಾರು ಡಬ್ಬಲ್ ವಿದೇಶದ
ನಾಲ್ಕೂ ಕಡೆಯ 10 ವರ್ಷದ ಮಕ್ಕಳಿದ್ದಾರೋ ಅವರಿಗೆ ವಿಶೇಷ ಶುಭಾಶಯಗಳು ಹಾಗೂ ನೆನಪು, ಪ್ರೀತಿ,
ದಾದಿಯರೊಂದಿಗೆ :
ಬಾಪ್ದಾದಾರಿಗೆ ಪರಿವಾರದ ಕಿರೀಟಪ್ರಾಯರಾದ ನಿಮಿತ್ತ ಅತ್ಮರ ಸಲುವಾಗಿ “ಸದಾ ಜೀವಿಸಿರಿ, ಹಾರುತ್ತಾ
ಇರಿ ಹಾಗೂ ಹಾರಿಸುತ್ತಾ ಇರಿ” ಎನ್ನುವ ಸಂಕಲ್ಪವು ಇರುತ್ತದೆ. ನಿಮ್ಮ ಯೋಗದ ತಪಸ್ಸಿನ ಶಕ್ತಿಯಿಂದ
ಶರೀರಗಳನ್ನು ನಡೆಸುವುದೇನೋ ನಡೆಸುತ್ತಾ ಇದ್ದೀರಿ. ಆದರೆ ನಿಮಗಿಂತಲೂ ಅಧಿಕವಾಗಿ ಬಾಪ್ದಾದಾರವರಿಗೆ
ಕಾಳಜಿಯಿರುತ್ತದೆ. ಆದ್ದರಿಂದ ಸಮಯದ ಅನುಸಾರವಾಗಿ ತೀವ್ರಗತಿಯಿಂದ ಸುತ್ತಬೇಡಿರಿ. ಸುಖವಾಗಿ ಹೋಗಿರಿ
ಹಾಗೂ ಬನ್ನಿರಿ, ಏಕೆಂದರೆ ಪ್ರಪಂಚದ ಪರಿಸ್ಥಿತಿಗಳೂ ಸಹ ತೀವ್ರಗತಿಯಿಂದ ಬದಲಾವಣೆಯಾಗುತ್ತಾ ಇವೆ.
ಆದ್ದರಿಂದ ಸೇವೆಯನ್ನು ಮಾಡಬೇಡಿರೆಂದು ಬಾಪ್ದಾದಾರವರು ಹೇಳುವುದಿಲ್ಲ. ಆದರೆ, ಬ್ಯಾಲೆನ್ಸ್
ಇಟ್ಟುಕೊಳ್ಳರಿ. ಎಲ್ಲರ ಪ್ರಾಣಗಳೂ ನಿಮ್ಮ ಶರೀರಗಳಲ್ಲಿ ಇವೆ. ಶರೀರವು ಸರಿಯಾಗಿದ್ದರೆ, ಸೇವೆಯೂ
ಚೆನ್ನಾಗಿ ಆಗುತ್ತಾ ಇರುವುದು. ಆದ್ದರಿಂದ ಸೇವೆಯನ್ನು ಚೆನ್ನಾಗಿ ಮಾಡಿರಿ. ಆದರೆ ಜಾಸ್ತಿ ಘಾಸಿ
ಮಾಡಿಕೊಳ್ಳಬೇಡಿರಿ. ಸ್ವಲ್ಪ ಶರೀರವನ್ನು ಮುಂದಕ್ಕೆ ದೂಡಿರಿ. ಜಾಸ್ತಿ ಮುಂದೆ ನೂಕುವುದರಿಂದ
ಏನಾಗುತ್ತದೆ. ಬ್ಯಾಟರಿಯು ಸ್ಲೋ (ನಿಧಾನ) ಆಗಿಬಿಡುತ್ತದೆ. ಆದ್ದರಿಂದ ಈಗಿನಿಂದ ಬ್ಯಾಲೆನ್ಸ್
ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಈ ವರ್ಷವಂತೂ ಮಾಡಿಬಿಡೋಣ, ಮುಂದಿನ ವರ್ಷ ಏನಾಗುತ್ತದೆಯೋ
ಗೊತ್ತಿಲ್ಲ ಎಂದು ಯೋಚಿಸಬೇಡಿರಿ. ಜೀವಿಸಿರಬೇಕು ಹಾಗೂ ಹಾರಿಸಬೇಕು. ಈಗಂತೂ ನಿಮ್ಮ ಪಾತ್ರವು
ಇದೆಯಲ್ಲವೇ? ಆದ್ದರಿಂದ ನಿಮ್ಮ ಪಾತ್ರವನ್ನು ಅರಿತುಕೊಂಡು ಶರೀರವನ್ನು ಮುಂದಕ್ಕೆ ತಳ್ಳಿರಿ. ಆದರೆ
ಬ್ಯಾಲೆನ್ಸ್ನಲ್ಲಿ ಮುಂದಕ್ಕೆ ದೂಡಿರಿ. ಸರಿಯಾಗಿದೆ. ತೀವ್ರಗತಿಯಿಂದ ಕಾರ್ಯ ಮಾಡಿಸಬೇಡಿರಿ. ಎರಡು
ದಿನ ಇಲ್ಲಿ ಇರುವುದು, ಮೂರನೆಯ ದಿನ ಇನ್ನೊಂದು ಸ್ಥಳದಲ್ಲಿ ಹೋಗುವುದು ಮಾಡಬೇಡಿರಿ. ಈಗ ಆ
ಸಮಯವಲ್ಲ. ಯಾವಾಗ ಅಂತಹ ಸಮಯ ಬರುವುದೋ ಆಗ ಒಂದು ದಿನದಲ್ಲಿಯೇ ನಾಲ್ಕು ನಾಲ್ಕು ಸ್ಥಳಗಳಿಗೂ
ಹೋಗಬೇಕಾಗುವುದು. ಆದರೆ ಈಗಲೇ ಅಲ್ಲ.
ವರದಾನ:
ದಿವ್ಯಗುಣಗಳ
ಆಹ್ವಾನದ ಮೂಲಕ ಸರ್ವ ಅವಗುಣಗಳ ಆಹುತಿಕೊಡುವಂತಹ ಸಂತುಷ್ಠ ಆತ್ಮ ಭವ
ಹೇಗೆ ದೀಪಾವಳಿಯಲ್ಲಿ
ವಿಶೇಷವಾಗಿ ಸ್ವಚ್ಚತೆ ಹಾಗೂ ಸಂಪಾದನೆಯ ಕಡೆ ಗಮನವಿಡುತ್ತಾರೆ. ಅದೇ ರೀತಿ ನೀವೂ ಸಹ ಎಲ್ಲಾ
ಪ್ರಕಾರದ ಸ್ವಚ್ಛತೆ ಮತ್ತು ಸಂಪಾದನೆಯ ಕಡೆ ಲಕ್ಷ್ಯ ಇಟ್ಟು ಸಂತುಷ್ಠ ಆತ್ಮ ಆಗಿ. ಸಂತುಷ್ಟತೆಯ
ಮೂಲಕವೇ ಸರ್ವ ದಿವ್ಯ ಗುಣಗಳ ಆಹ್ವಾನ ಮಾಡಲು ಸಾಧ್ಯ ನಂತರ ಅವಗುಣಗಳ ಆಹುತಿ ಸ್ವತಃ ಆಗಿಬಿಡುವುದು.
ಒಳಗೆ ಏನೆಲ್ಲಾ ಬಲಹೀನತೆ, ಕೊರತೆ, ನಿರ್ಬಲತೆಗಳು, ಕೋಮಲತೆ ಉಳಿದುಕೊಂಡಿದೆ, ಅವುಗಳನ್ನು ಸಮಾಪ್ತಿ
ಮಾಡಿ ಈಗ ಹೊಸ ಖಾತೆ ಪ್ರಾರಂಭ ಮಾಡಿ ಮತ್ತು ಹೊಸ ಸಂಸ್ಕಾರಗಳ ಹೊಸ ವಸ್ತ್ರ ಧಾರಣೆ ಮಾಡಿಕೊಂಡು
ಸತ್ಯ ದೀಪಾವಳಿ ಆಚರಿಸಿ.
ಸ್ಲೋಗನ್:
ತಂದೆಗೆ
ಆಜ್ಞಾಕಾರಿಯಾಗಿದ್ದಾಗ ಗುಪ್ತ ಆಶೀರ್ವಾದಗಳು ಸಮಯದಲ್ಲಿ ಸಹಾಯ ಮಾಡುತ್ತಿರುತ್ತವೆ.