13.01.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮ್ಮ ಬಾಯಿಂದ ಸದಾ ಜ್ಞಾನ ರತ್ನಗಳೇ ಹೊರ ಬರುತ್ತಿರಬೇಕು, ನಿಮ್ಮ ಚಹರೆಯು ಸದಾ ಹರ್ಷಿತವಾಗಿರಬೇಕಾಗಿದೆ

ಪ್ರಶ್ನೆ:
ಯಾವ ಮಕ್ಕಳು ಬ್ರಾಹ್ಮಣ ಜೀವನದಲ್ಲಿ ಜ್ಞಾನದ ಧಾರಣೆ ಮಾಡಿದ್ದಾರೆಯೋ ಅವರ ಲಕ್ಷಣಗಳೇನಾಗಿರುವುದು?

ಉತ್ತರ:
1. ಅವರ ಚಲನೆಯು ದೇವತೆಗಳ ತರಹ ಇರುತ್ತದೆ, ಅವರಲ್ಲಿ ದೈವೀ ಗುಣಗಳ ಧಾರಣೆಯಾಗಿರುವುದು. 2. ಅವರಿಗೆ ಜ್ಞಾನದ ವಿಚಾರ ಸಾಗರ ಮಂಥನ ಮಾಡುವ ಅಭ್ಯಾಸವಿರುವುದು. ಅವರೆಂದೂ ಆಸುರೀ ಮಾತುಗಳ ಅರ್ಥಾತ್ ಕೊಳಕು ಮಾತುಗಳ ಮಂಥನ ಮಾಡುವುದಿಲ್ಲ. 3. ಅವರ ಜೀವನದಿಂದ ಅವಹೇಳನ ಮಾಡುವುದು ಮತ್ತು ನಿಂದನೆ ಮಾಡುವುದು ನಿಂತು ಹೋಗುತ್ತದೆ. 4. ಅವರ ಮುಖವು ಸದಾ ಹರ್ಷಿತವಾಗಿರುತ್ತದೆ.

ಓಂ ಶಾಂತಿ.
ತಂದೆಯು ಜ್ಞಾನ ಮತ್ತು ಭಕ್ತಿಯ ಮೇಲೆ ತಿಳಿಸುತ್ತಾರೆ. ಇದಂತೂ ಮಕ್ಕಳಿಗೆ ಅರ್ಥವಾಗಿದೆ, ಭಕ್ತಿಯಿಂದ ಸದ್ಗತಿಯಾಗುವುದಿಲ್ಲ ಮತ್ತು ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ. ಜ್ಞಾನವೂ ಸತ್ಯಯುಗದಲ್ಲಿ ಸಿಗುವುದಿಲ್ಲ. ಕೃಷ್ಣನು ಭಕ್ತಿಯನ್ನೂ ಮಾಡುವುದಿಲ್ಲ, ಜ್ಞಾನದ ಮುರುಳಿಯನ್ನೂ ನುಡಿಸುವುದಿಲ್ಲ. ಮುರುಳಿಯೆಂದರೆ ಜ್ಞಾನ ಕೊಡುವುದಾಗಿದೆ. ಮುರುಳಿಯಲ್ಲಿ ಜಾದು ಎಂದು ಗಾಯನವಿದೆಯಲ್ಲವೆ. ಅಂದಮೇಲೆ ಅವಶ್ಯವಾಗಿ ಯಾವುದೇ ಜಾದುವಿರಬೇಕಲ್ಲವೆ. ಕೇವಲ ಮುರುಳಿಯನ್ನು ನುಡಿಸುವುದನ್ನು ಸಾಮಾನ್ಯ ಕಾಡು ಜನರೂ ಸಹ ನುಡಿಸುತ್ತಿರುತ್ತಾರೆ. ಆದರೆ ಈ ಮುರುಳಿಯಲ್ಲಿ ಜ್ಞಾನದ ಜಾದುವಿದೆ, ಅಜ್ಞಾನಕ್ಕೆ ಜಾದುವೆಂದು ಹೇಳಲಾಗುವುದಿಲ್ಲ. ಮುರುಳಿಗೆ ಜಾದುವೆಂದು ಹೇಳುತ್ತಾರೆ. ಜ್ಞಾನದಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ. ಸತ್ಯಯುಗವಿದ್ದಾಗ ಈ ಜ್ಞಾನದ ಆಸ್ತಿಯಿರುತ್ತದೆ. ಅಲ್ಲಿ ಭಕ್ತಿಯಿರುವುದಿಲ್ಲ. ದ್ವಾಪರದಿಂದ ಭಕ್ತಿಯು ಆರಂಭವಾಗುತ್ತದೆ, ಆಗ ದೇವತೆಗಳಿಂದ ಮನುಷ್ಯರಾಗಿ ಬಿಡುತ್ತಾರೆ. ಮನುಷ್ಯರಿಗೆ ವಿಕಾರಿಗಳು, ದೇವತೆಗಳಿಗೆ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ದೇವತೆಗಳ ಸೃಷ್ಟಿಯು ಪವಿತ್ರ ಪ್ರಪಂಚವೆಂದು ಹೇಳಲಾಗುತ್ತದೆ. ನೀವೀಗ ದೇವತೆಗಳಾಗುತ್ತಿದ್ದೀರಿ, ಜ್ಞಾನವೆಂದು ಯಾವುದಕ್ಕೆ ಹೇಳಲಾಗುತ್ತದೆ? ಮೊದಲನೆಯದಾಗಿ ಸ್ವಯಂನ ಹಾಗೂ ತಂದೆಯ ಪರಿಚಯ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ತಿಳುವಳಿಕೆಗೆ ಜ್ಞಾನವೆಂದು ಹೇಳಲಾಗುವುದು. ಜ್ಞಾನದಿಂದ ಸದ್ಗತಿಯಾಗುತ್ತದೆ ನಂತರ ಭಕ್ತಿ ಆರಂಭವಾಗುತ್ತದೆಯೆಂದರೆ ಇಳಿಯುವ ಕಲೆಯೆಂದು ಹೇಳಲಾಗುತ್ತದೆ ಏಕೆಂದರೆ ಭಕ್ತಿಗೆ ರಾತ್ರಿಯೆಂತಲೂ, ಜ್ಞಾನಕ್ಕೆ ದಿನವೆಂತಲೂ ಹೇಳಲಾಗುತ್ತದೆ. ಇದು ಯಾರ ಬುದ್ಧಿಯಲ್ಲಾದರೂ ಕುಳಿತುಕೊಳ್ಳುತ್ತದೆ. ಆದರೆ ದೈವೀ ಗುಣಗಳನ್ನು ಧಾರಣೆ ಮಾಡುವುದಿಲ್ಲ. ದೈವೀ ಗುಣಗಳು ಇದ್ದಿದ್ದೇ ಆದರೆ ಜ್ಞಾನದ ಧಾರಣೆಯಾಗಿದೆ ಎಂದು ತಿಳಿದುಕೊಳ್ಳಲಾಗುವುದು. ಜ್ಞಾನದ ಧಾರಣೆಯಿರುವವರ ಚಲನೆಯು ದೇವತೆಗಳ ತರಹ ಇರುತ್ತದೆ, ಕಡಿಮೆ ಧಾರಣೆಯಿರುವವರ ಚಲನೆಯು ಬೆರಕೆಯಿರುತ್ತದೆ, ಧಾರಣೆಯಿಲ್ಲವೆಂದರೆ ಅವರು ಮಕ್ಕಳೇ ಅಲ್ಲ. ಮನುಷ್ಯರು ತಂದೆಗೆ ಎಷ್ಟೊಂದು ನಿಂದನೆ ಮಾಡುತ್ತಾರೆ! ಬ್ರಾಹ್ಮಣ ಕುಲದಲ್ಲಿ ಬಂದ ಮೇಲೆ ಅವಹೇಳನ, ನಿಂದನೆ ಮಾಡುವುದು ನಿಂತು ಹೋಗುತ್ತದೆ. ನಿಮಗೆ ಜ್ಞಾನ ಸಿಗುತ್ತದೆ, ಅದರಮೇಲೆ ತನ್ನ ವಿಚಾರ ಸಾಗರ ಮಂಥನ ಮಾಡುವುದರಿಂದ ಅಮೃತ ಸಿಗುವುದು. ವಿಚಾರ ಸಾಗರ ಮಂಥನವೇ ಮಾಡಲಿಲ್ಲವೆಂದರೆ ಇನ್ನ್ಯಾವ ಮಂಥನವಾಗುವುದು? ಆಸುರೀ ವಿಚಾರ. ಅದರಿಂದ ಕೆಸರೇ ಹೊರ ಬರುವುದು. ನೀವೀಗ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ, ನಿಮಗೆ ತಿಳಿದಿದೆ, ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯನ್ನು ಓದುತ್ತಿದ್ದೇವೆ. ದೇವತೆಗಳು ಈ ವಿದ್ಯೆಯನ್ನು ಓದುವುದಿಲ್ಲ. ದೇವತೆಗಳಿಗೆಂದೂ ಜ್ಞಾನ ಸಾಗರರೆಂದು ಹೇಳಲಾಗುವುದಿಲ್ಲ. ಒಬ್ಬ ತಂದೆಗೇ ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ದೈವೀ ಗುಣಗಳೂ ಸಹ ಜ್ಞಾನದಿಂದಲೇ ಧಾರಣೆಯಾಗುತ್ತದೆ. ಈ ಜ್ಞಾನವಂತೂ ನೀವು ಮಕ್ಕಳಿಗೆ ಈಗ ಸಿಗುತ್ತದೆ, ಇದು ಸತ್ಯಯುಗದಲ್ಲಿರುವುದಿಲ್ಲ. ದೇವತೆಗಳಲ್ಲಿ ದೈವೀ ಗುಣಗಳಿವೆ, ಸರ್ವಗುಣ ಸಂಪನ್ನರು.... ಎಂದು ನೀವು ಅವರ ಮಹಿಮೆಯನ್ನು ಮಾಡುತ್ತೀರಿ. ಅಂದಮೇಲೆ ನೀವೀಗ ಆ ರೀತಿಯಾಗಬೇಕಾಗಿದೆ. ತಮ್ಮೊಂದಿಗೆ ಕೇಳಿಕೊಳ್ಳಿ, ನಮ್ಮಲ್ಲಿ ಎಲ್ಲಾ ದೈವೀ ಗುಣಗಳಿವೆಯೇ? ಅಥವಾ ಯಾವುದಾದರೂ ಆಸುರೀ ಅವಗುಣವಿದೆಯೇ? ಒಂದುವೇಳೆ ಆಸುರೀ ಅವಗುಣವಿದ್ದರೆ ಅದನ್ನು ತೆಗೆದು ಹಾಕಬೇಕು ಆಗಲೇ ದೇವತೆಯೆಂದು ಹೇಳಲಾಗುವುದು. ಇಲ್ಲದಿದ್ದರೆ ಕಡಿಮೆ ದರ್ಜೆಯನ್ನು ಪಡೆಯುತ್ತೀರಿ.

ಈಗ ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ. ಬಹಳ ಒಳ್ಳೊಳ್ಳೆಯ ಮಾತುಗಳನ್ನು ತಿಳಿಸುತ್ತೀರಿ. ಇದಕ್ಕೆ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ ಯಾವಾಗ ನೀವು ಪುರುಷೋತ್ತಮರಾಗುತ್ತಿದ್ದೀರಿ. ಅಂದಮೇಲೆ ವಾತಾವರಣವೂ ಬಹಳ ಚೆನ್ನಾಗಿರಬೇಕು. ಛೀ ಛೀ ಮಾತು ಹೊರಬರಬಾರದು. ಇಲ್ಲವೆಂದರೆ ಇವರು ಕಡಿಮೆ ದರ್ಜೆಯವರೆಂದು ಹೇಳಲಾಗುವುದು. ವಾತಾವರಣದಿಂದ ಕೂಡಲೇ ಅರ್ಥವಾಗಿ ಬಿಡುತ್ತದೆ, ನಿಮ್ಮ ಮುಖವು ಸದಾ ಹರ್ಷಿತವಾಗಿರಬೇಕು. ಇಲ್ಲದಿದ್ದರೆ ಅವರಲ್ಲಿ ಜ್ಞಾನವಿದೆಯೆಂದು ಹೇಳಲಾಗುವುದಿಲ್ಲ. ಬಾಯಿಂದ ಸದಾ ರತ್ನಗಳೇ ಹೊರ ಬರಲಿ. ಈ ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟು ಹರ್ಷಿತಮುಖಿಯಾಗಿದ್ದಾರೆ! ಇವರ ಆತ್ಮವು ಜ್ಞಾನ ರತ್ನಗಳ ಧಾರಣೆ ಮಾಡಿತ್ತು, ಮುಖದಿಂದ ಸದಾ ಜ್ಞಾನ ರತ್ನಗಳೇ ಬರುತ್ತವೆ. ರತ್ನಗಳನ್ನೇ ಕೇಳುತ್ತಾ-ಹೇಳುತ್ತಾ ಎಷ್ಟೊಂದು ಖುಷಿಯಿರುತ್ತದೆ! ಯಾವುದೆಲ್ಲಾ ಜ್ಞಾನ ರತ್ನಗಳನ್ನು ನೀವೀಗ ತೆಗೆದುಕೊಳ್ಳುತ್ತೀರೋ ಇವೆಲ್ಲವೂ ಮತ್ತೆ ವಜ್ರ ರತ್ನಗಳಾಗಿ ಬಿಡುತ್ತವೆ. ನವರತ್ನಗಳ ಮಾಲೆಯು ಯಾವುದೇ ವಜ್ರ ವೈಡೂರ್ಯಗಳದಲ್ಲ. ಇದು ಜ್ಞಾನ ರತ್ನಗಳ ಮಾಲೆಯಾಗಿದೆ. ಇದಕ್ಕಾಗಿ ಮನುಷ್ಯರು ಆ ಸ್ಥೂಲವಾದ ರತ್ನಗಳೆಂದು ತಿಳಿದು ಉಂಗುರವನ್ನು ಧರಿಸುತ್ತಾರೆ. ಈ ಜ್ಞಾನ ರತ್ನಗಳ ಮಾಲೆಯು ಪುರುಷೋತ್ತಮ ಸಂಗಮಯುಗದಲ್ಲಿಯೇ ಬೀಳುತ್ತದೆ. ಈ ರತ್ನಗಳೇ ನಿಮ್ಮನ್ನು ಭವಿಷ್ಯ 21 ಜನ್ಮಗಳಿಗಾಗಿ ಸಂಪನ್ನರನ್ನಾಗಿ ಮಾಡುತ್ತವೆ, ಇದನ್ನು ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀವು ಸ್ಥೂಲ ವಜ್ರ ರತ್ನಗಳನ್ನು ಧರಿಸಿದ್ದೇ ಆದರೆ ಕೂಡಲೇ ಲೂಟಿ ಮಾಡಿಕೊಂಡು ಹೋಗುವರು ಅಂದಾಗ ತಮ್ಮನ್ನು ಬಹಳ-ಬಹಳ ಬುದ್ಧಿವಂತರನ್ನಾಗಿ ಮಾಡಿಕೊಳ್ಳಬೇಕಾಗಿದೆ, ಆಸುರೀ ಅವಗುಣಗಳನ್ನು ತೆಗೆಯಬೇಕಾಗಿದೆ. ಆಸುರೀ ಅವಗುಣಗಳಿಂದ ಚಹರೆಯೇ ಬದಲಾಗಿ ಬಿಡುತ್ತದೆ. ಕ್ರೋಧದಲ್ಲಿ ಚಹರೆಯು ಬಹಳ ಕೆಂಪಗಿನ ತಾಮ್ರದಂತಾಗಿ ಬಿಡುತ್ತದೆ, ಕಾಮ ವಿಕಾರದವರು ಕಪ್ಪಾಗಿ ಬಿಡುತ್ತಾರೆ ಅಂದಾಗ ಪ್ರತಿಯೊಂದು ಮಾತಿನಲ್ಲಿ ಮಕ್ಕಳು ವಿಚಾರ ಸಾಗರ ಮಂಥನ ಮಾಡಬೇಕು. ಈ ವಿದ್ಯೆಯು ಬಹಳ ಧನ ಪಡೆಯುವಂತದ್ದಾಗಿದೆ. ಆ ವಿದ್ಯೆಯೇನೂ ರತ್ನಗಳಲ್ಲ. ಹಾ! ಭಲೆ ಜ್ಞಾನವನ್ನು ಓದಿ ದೊಡ್ಡ ಪದವಿಯನ್ನು ಪಡೆಯಬಹುದು ಅಂದಾಗ ವಿದ್ಯೆಯು ಕೆಲಸಕ್ಕೆ ಬಂದಿತೇ ಹೊರತು ಹಣವಲ್ಲ. ವಿದ್ಯೆಯೇ ಧನವಾಗಿದೆ. ಅದು ಹದ್ದಿನ ಧನ, ಇದು ಮತ್ತೆ ಬೇಹದ್ದಿನ ಧನವಾಗಿದೆ. ಎರಡೂ ವಿದ್ಯೆಯಾಗಿದೆ, ನೀವೀಗ ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡಿ ಬಿಡುತ್ತಾರೆ. ಅದು ಒಂದು ಜನ್ಮಕ್ಕಾಗಿ ಅಲ್ಪಕಾಲ ಕ್ಷಣ ಭಂಗುರ ವಿದ್ಯೆಯಾಗಿದೆ. ಮತ್ತೆ ಇನ್ನೊಂದು ಜನ್ಮದಲ್ಲಿ ಹೊಸದಾಗಿ ಓದಬೇಕಾಗುತ್ತದೆ. ಅಲ್ಲಿ ಧನಕ್ಕಾಗಿ ವಿದ್ಯೆಯ ಅವಶ್ಯಕತೆಯಿರುವುದಿಲ್ಲ. ಸತ್ಯಯುಗದಲ್ಲಂತೂ ಈಗಿನ ಪುರುಷಾರ್ಥದಿಂದ ಅಪಾರ ಧನವು ಸಿಕ್ಕಿ ಬಿಡುತ್ತದೆ. ಧನವು ಅವಿನಾಶಿಯಾಗಿ ಬಿಡುತ್ತದೆ. ದೇವತೆಗಳ ಬಳಿ ಬಹಳ ಹಣವಿತ್ತು ನಂತರ ಭಕ್ತಿಮಾರ್ಗ ಅರ್ಥಾತ್ ರಾವಣ ರಾಜ್ಯದಲ್ಲಿ ಬಂದಾಗಲೇ ಎಷ್ಟೊಂದು ಹಣವಿತ್ತು! ಎಷ್ಟೊಂದು ಮಂದಿರಗಳನ್ನು ಕಟ್ಟಿಸಿದ್ದಾರೆ! ನಂತರ ಮುಸಲ್ಮಾನರು ಮೊದಲಾದವರು ಬಂದು ಹಣವನ್ನು ಲೂಟಿ ಮಾಡಿದರು. ಎಷ್ಟೊಂದು ಧನವಂತರಾಗಿದ್ದಿರಿ, ಇಂದಿನ ವಿದ್ಯೆಯಿಂದ ಯಾರೂ ಅಷ್ಟು ಹಣವಂತರಾಗಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಇಷ್ಟು ಶ್ರೇಷ್ಠ ವಿದ್ಯೆಯನ್ನು ಓದುತ್ತೇವೆ ಯಾವುದರಿಂದ ಈ ದೇವಿ-ದೇವತೆಗಳಾಗುತ್ತೇವೆ. ಅಂದಾಗ ವಿದ್ಯೆಯಿಂದ ನೋಡಿ, ಮನುಷ್ಯರು ಏನಾಗಿ ಬಿಡುತ್ತಾರೆ! ಬಡವರಿಂದ ಸಾಹುಕಾರರಾಗಿ ಬಿಡುತ್ತಾರೆ. ಈಗ ಭಾರತವೂ ಸಹ ಎಷ್ಟೊಂದು ಬಡ ದೇಶವಾಗಿದೆ. ಸಾಹುಕಾರರಿಗಂತೂ ಬಿಡುವೇ ಇಲ್ಲ. ನಾನು ಇಂತಹವನಾಗಿದ್ದೇನೆಂದು ತನ್ನ ಅಹಂಕಾರವಿರುತ್ತದೆ ಆದರೆ ಇದರಲ್ಲಿ ಅಹಂಕಾರ ಇತ್ಯಾದಿಗಳನ್ನು ಕಳೆಯಬೇಕು. ನಾವಾತ್ಮರಾಗಿದ್ದೇವೆ, ಆತ್ಮದ ಬಳಿಯಂತೂ ಹಣ, ಅಧಿಕಾರ, ವಜ್ರ ರತ್ನಗಳೇನೂ ಇಲ್ಲ. ದೇಹ ಸಹಿತ ಎಲ್ಲಾ ಸಂಬಂಧಗಳನ್ನು ಬಿಡಿ ಎಂದು ತಂದೆಯೂ ಹೇಳುತ್ತಾರೆ. ಆತ್ಮವು ಶರೀರ ಬಿಟ್ಟಾಗ ಸಾಹುಕಾರಿತನವೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಯಾವಾಗ ಹೊಸದಾಗಿ ಹೋಗಿ ಮತ್ತೆ ಹಣ ಸಂಪಾದಿಸುವರೋ ಅಥವಾ ಚೆನ್ನಾಗಿ ದಾನ ಪುಣ್ಯ ಮಾಡಿರುವರೆಂದರೆ ಸಾಹುಕಾರರ ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಇದು ಇವರ ಹಿಂದಿನ ಕರ್ಮ ಫಲವೆಂದು ಹೇಳುತ್ತಾರಲ್ಲವೆ. ಜ್ಞಾನ ದಾನ ಮಾಡಿರಬೇಕು ಅಥವಾ ಕಾಲೇಜು, ಧರ್ಮ ಶಾಲೆ ಇತ್ಯಾದಿಗಳನ್ನು ಕಟ್ಟಿಸಿದ್ದರು ಅದರ ಫಲ ಸಿಗುತ್ತದೆ ಆದರೆ ಅಲ್ಪಕಾಲಕ್ಕಾಗಿ. ಈ ದಾನ ಪುಣ್ಯಗಳನ್ನೂ ಸಹ ಇಲ್ಲಿಯೇ ಮಾಡಲಾಗುತ್ತದೆ. ಸತ್ಯಯುಗದಲ್ಲಿ ಮಾಡುವುದಿಲ್ಲ. ಸತ್ಯಯುಗದಲ್ಲಿ ಒಳ್ಳೆಯ ಕರ್ಮವೇ ಆಗುತ್ತದೆ ಏಕೆಂದರೆ ಇಲ್ಲಿನ ಆಸ್ತಿಯು ಸಿಗುತ್ತದೆ. ಅಲ್ಲಿ ಯಾರದೂ ವಿಕರ್ಮವಾಗುವುದಿಲ್ಲ ಏಕೆಂದರೆ ರಾವಣನೇ ಇರುವುದಿಲ್ಲ. ಬಡವರದೂ ವಿಕರ್ಮವಾಗುವುದಿಲ್ಲ. ಇಲ್ಲಂತೂ ಸಾಹುಕಾರರದೂ ಸಹ ವಿಕರ್ಮಗಳಾಗುತ್ತವೆ ಆದ್ದರಿಂದಲೇ ಈ ರೋಗ ಇತ್ಯಾದಿ ದುಃಖವಾಗುತ್ತದೆ, ಅಲ್ಲಿ ವಿಕಾರದಲ್ಲಿಯೇ ಹೋಗುವುದಿಲ್ಲ ಅಂದಾಗ ವಿಕರ್ಮವು ಹೇಗಾಗುವುದು? ಎಲ್ಲವೂ ಕರ್ಮಗಳ ಮೇಲೆ ಆಧಾರಿತವಾಗಿದೆ. ಇದು ಮಾಯಾ ರಾವಣನ ರಾಜ್ಯವಾಗಿದೆ, ಮನುಷ್ಯರು ವಿಕಾರಿಗಳಾಗಿ ಬಿಡುತ್ತಾರೆ. ತಂದೆಯು ನಿರ್ವಿಕಾರಿಗಳನ್ನಾಗಿ ಮಾಡಲು ಓದಿಸುತ್ತಾರೆ. ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ ಮತ್ತೆ ಮಾಯೆಯು ವಿಕಾರಿಗಳನ್ನಾಗಿ ಮಾಡುತ್ತದೆ. ರಾಮ ವಂಶಿ ಮತ್ತು ರಾವಣ ವಂಶಿಯರ ಯುದ್ಧ ನಡೆಯುತ್ತದೆ. ನೀವು ತಂದೆಯ ಮಕ್ಕಳಾಗಿದ್ದೀರಿ, ಅವರು ರಾವಣನ ಮಕ್ಕಳಾಗಿದ್ದಾರೆ. ಎಷ್ಟು ಒಳ್ಳೊಳ್ಳೆಯ ಮಕ್ಕಳು ಮಾಯೆಯಿಂದ ಸೋಲನ್ನನುಭವಿಸುತ್ತಾರೆ. ಮಾಯೆಯು ಬಹಳ ಪ್ರಬಲವಾಗಿದೆ ಆದರೂ ಸಹ ಭರವಸೆಯನ್ನಿಡುತ್ತೇನೆ. ಅಧಮರಿಗಿಂತಲೂ ಅಧಮರ ಉದ್ಧಾರವನ್ನೂ ಮಾಡಲಾಗುತ್ತದೆಯಲ್ಲವೆ. ತಂದೆಗಂತೂ ಇಡೀ ವಿಶ್ವದ ಉದ್ಧಾರ ಮಾಡಬೇಕಾಗಿದೆ. ಅನೇಕರು ಬೀಳುತ್ತಾರೆ, ಒಮ್ಮೆಲೆ ಸಂಪಾದನೆ ನಷ್ಟ ಮಾಡಿಕೊಂಡು ಅಧಮರಿಗಿಂತಲೂ ಅಧಮರಾಗಿ ಬಿಡುತ್ತಾರೆ, ಇಂತಹವರನ್ನೂ ತಂದೆಯು ಉದ್ಧಾರ ಮಾಡುತ್ತಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಅಧಮರಾಗಿದ್ದಾರೆ. ಆದರೆ ತಂದೆಯು ರಕ್ಷಣೆ ಮಾಡುತ್ತಾರೆ ಆದರೂ ಸಹ ಬೀಳುತ್ತಿರುತ್ತಾರೆ. ಆದ್ದರಿಂದ ಬಹಳ ಅಧಮರಾಗಿ ಬಿಡುತ್ತಾರೆ ಮತ್ತೆ ಅವರು ಅಷ್ಟೊಂದು ಮೇಲೇರಲು ಆಗುವುದಿಲ್ಲ. ಆ ಅಧಮತನವೇ (ಪತಿತತನ) ಒಳಗೆ ತಿನ್ನುತ್ತಿರುತ್ತದೆ. ಹೇಗೆ ನೀವು ಅಂತ್ಯ ಕಾಲದಲ್ಲಿ ಯಾರು ಸ್ತ್ರೀ ಸ್ಮರಣೆ ಮಾಡುತ್ತೀರಿ.... ಎಂದು ಹೇಳುತ್ತೀರಿ ಹಾಗೆಯೇ ಅವರ ಬುದ್ಧಿಯಲ್ಲಿ ಆ ಅಧಮತನವೇ ನೆನಪಿಗೆ ಬರುತ್ತಿರುವುದು. ಆದ್ದರಿಂದ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಕಲ್ಪ-ಕಲ್ಪವೂ ನೀವೇ ದೇವತೆಗಳಾಗುತ್ತೀರಿ, ಪ್ರಾಣಿಗಳು ಆಗುತ್ತವೆಯೇ? ಮನುಷ್ಯರೇ ಆಗುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ. ಈ ಲಕ್ಷ್ಮೀ-ನಾರಾಯಣರಿಗೂ ಸಹ ಮೂಗು, ಕಿವಿ, ಇತ್ಯಾದಿಗಳಿವೆಯಲ್ಲವೆ, ಮನುಷ್ಯರೇ ಅಲ್ಲವೆ ಆದರೆ ದೈವೀ ಗುಣವಂತರಾಗಿದ್ದಾರೆ. ಆದ್ದರಿಂದ ಇವರಿಗೆ ದೇವತೆಗಳೆಂದು ಹೇಳಲಾಗುತ್ತದೆ. ಇವರು ಇಂತಹ ಸುಂದರ ದೇವತೆಗಳು ಹೇಗಾಗುತ್ತಾರೆ? ಮತ್ತು ಹೇಗೆ ಕೆಳಗಿಳಿಯುತ್ತಾರೆ, ಈ ಚಕ್ರದ ಬಗ್ಗೆ ನಿಮಗೆ ಅರ್ಥವಾಗಿದೆ. ಯಾರು ವಿಚಾರ ಸಾಗರ ಮಂಥನ ಮಾಡುವರೋ ಅವರಿಗೆ ಧಾರಣೆಯೂ ಚೆನ್ನಾಗಿ ಆಗುವುದು. ವಿಚಾರ ಸಾಗರ ಮಂಥನವನ್ನೇ ಮಾಡದಿದ್ದರೆ ಮಂಧ ಬುದ್ಧಿಯವರಾಗಿ ಬಿಡುತ್ತಾರೆ. ಮುರುಳಿಯನ್ನು ಹೇಳುವವರಿಗೆ ವಿಚಾರ ಸಾಗರ ಮಂಥನ ನಡೆಯುತ್ತಿರುವುದು - ಈ ವಿಷಯದ ಬಗ್ಗೆ ಹೀಗೀಗೆ ತಿಳಿಸಬೇಕು ಎಂದು. ತಾನಾಗಿಯೇ ವಿಚಾರ ಸಾಗರ ಮಂಥನ ನಡೆಯುತ್ತದೆ. ಇಂತಹವರು ಬರುವವರಿದ್ದಾರೆ, ಅವರಿಗೂ ಸಹ ಉಲ್ಲಾಸದಿಂದ ತಿಳಿಸುತ್ತೇವೆ. ಅವರೂ ಸಹ ಸ್ವಲ್ಪ ತಿಳಿದುಕೊಳ್ಳಬಹುದು. ಎಲ್ಲವೂ ಭಾಗ್ಯದ ಮೇಲಿದೆ. ಕೆಲವರು ಕೂಡಲೇ ನಿಶ್ಚಯ ಮಾಡಿಕೊಳ್ಳುತ್ತಾರೆ, ಕೆಲವರು ಮಾಡಿಕೊಳ್ಳುವುದಿಲ್ಲ. ಭರವಸೆಯನ್ನು ಇಡಲಾಗುತ್ತದೆ. ಈಗಿಲ್ಲದಿದ್ದರೆ ಮುಂದೆ ಖಂಡಿತ ತಿಳಿದುಕೊಳ್ಳುವರು ಎಂದು ಭರವಸೆಯಿಡಬೇಕಲ್ಲವೆ! ಭರವಸೆಯನ್ನಿಡುವುದು ಎಂದರೆ ಸರ್ವೀಸಿನ ಉಮ್ಮಂಗವಿದೆಯೆಂದರ್ಥ. ಸುಸ್ತಾಗಬಾರದು, ಭಲೆ ಯಾರಾದರೂ ಓದಿ ಮತ್ತೆ ಅಧಮರಾಗಿದ್ದಾರೆ, ಬರುತ್ತಾರೆಂದರೆ ಅವಶ್ಯವಾಗಿ ಅವರನ್ನು ವಿಜಿಟಿಂಗ್ ರೂಮ್ನಲ್ಲಿ ಕೂರಿಸುತ್ತೀರಿ ಅಥವಾ ಹೊರಟು ಹೋಗಿರಿ ಎಂದು ಹೇಳುವಿರಾ? ಅವಶ್ಯವಾಗಿ ಇದನ್ನೇ ಕೇಳುವಿರಿ, ಇಷ್ಟು ದಿನ ಏಕೆ ಬರಲಿಲ್ಲ? ಆಗ ಅವರು ಮಾಯೆಯಿಂದ ಸೋಲನ್ನನುಭವಿಸಿದೆವು ಎಂದು ಹೇಳುತ್ತಾರೆ. ಹೀಗೆ ಅನೇಕರು ಹೇಳುತ್ತಾರೆ. ಜ್ಞಾನವು ಬಹಳ ಚೆನ್ನಾಗಿತ್ತು ಆದರೆ ಮಾಯೆಯು ಸೋಲಿಸಿ ಬಿಟ್ಟಿತು ಎಂದು ತಿಳಿದುಕೊಳ್ಳುತ್ತಾರೆ. ಸ್ಮೃತಿಯಂತೂ ಇರುತ್ತದೆಯಲ್ಲವೆ. ಭಕ್ತಿಯಲ್ಲಿ ಸೋಲುವ ಮತ್ತು ಗೆಲ್ಲುವ ಮಾತೇ ಇರುವುದಿಲ್ಲ. ಈ ಜ್ಞಾನವು ಧಾರಣೆ ಮಾಡಿಕೊಳ್ಳುವಂತದ್ದಾಗಿದೆ. ನೀವೀಗ ತಂದೆಯ ಮೂಲಕ ಸತ್ಯ ಗೀತೆಯನ್ನು ಕೇಳುತ್ತೀರಿ, ಇದರಿಂದ ದೇವತೆಗಳಾಗುತ್ತೀರಿ. ಬ್ರಾಹ್ಮಣರಾಗದೇ ದೇವತೆಗಳಾಗಲು ಸಾಧ್ಯವಿಲ್ಲ. ಕ್ರಿಶ್ಚಿಯನ್ನರು, ಪಾರಸಿಯರು, ಮುಸಲ್ಮಾನರಲ್ಲಿ ಬ್ರಾಹ್ಮಣರಿರುವುದೇ ಇಲ್ಲ. ಇವೆಲ್ಲಾ ಮಾತುಗಳನ್ನು ನೀವು ಈಗ ತಿಳಿದುಕೊಳ್ಳುತ್ತೀರಿ.

ನಿಮಗೆ ತಿಳಿದಿದೆ - ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದಲೇ ರಾಜ್ಯ ಭಾಗ್ಯವು ಸಿಗುತ್ತದೆ. ನಿಮಗೆ ಯಾರೇ ಸಿಕ್ಕಿದರೂ ಹೇಳಿ - ಅಲ್ಲಾನನ್ನು ನೆನಪು ಮಾಡಿ, ಅವರಿಗೆ ಶ್ರೇಷ್ಠರೆಂದು ಹೇಳಲಾಗುತ್ತದೆ. ಬೆರಳಿನಿಂದ ಮೇಲೆ ಸೂಚಿಸುತ್ತಾರಲ್ಲವೆ. ಅಲ್ಫ್ಗೆ ಒಂದು ಎಂದೂ ಹೇಳಲಾಗುತ್ತದೆ. ಅಂದರೆ ಒಬ್ಬರೇ ಭಗವಂತನಾಗಿದ್ದಾರೆ, ಉಳಿದೆಲ್ಲರೂ ಮಕ್ಕಳಾಗಿದ್ದೀರಿ. ತಂದೆಯಂತೂ ಸದಾ ಒಬ್ಬರೇ ಇರುತ್ತಾರೆ, ರಾಜ್ಯಭಾರ ಮಾಡುವುದಿಲ್ಲ, ಜ್ಞಾನವನ್ನೂ ಕೊಡುತ್ತಾರೆ, ತಮ್ಮ ಮಕ್ಕಳನ್ನಾಗಿಯೂ ಮಾಡಿಕೊಳ್ಳುತ್ತಾರೆ ಅಂದಮೇಲೆ ಮಕ್ಕಳು ಎಷ್ಟೊಂದು ಖುಷಿಯಲ್ಲಿರಬೇಕು! ತಂದೆಯು ಎಷ್ಟೊಂದು ನಮ್ಮ ಸೇವೆ ಮಾಡುತ್ತಾರೆ, ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಆದರೆ ಅವರು ಮಾತ್ರ ಹೊಸ ಪವಿತ್ರ ಪ್ರಪಂಚದಲ್ಲಿ ಬರುವುದೇ ಇಲ್ಲ. ಪಾವನ ಪ್ರಪಂಚದಲ್ಲಿ ಅವರನ್ನು ಕರೆಯುವುದೇ ಇಲ್ಲ. ಪತಿತರೇ ಕರೆಯುತ್ತಾರೆ. ತಂದೆಯು ಪಾವನ ಪ್ರಪಂಚದಲ್ಲಿ ಬಂದು ಏನು ಮಾಡುವರು? ಇವರ ಹೆಸರೇ ಆಗಿದೆ ಪತಿತ ಪಾವನ ಅಂದಮೇಲೆ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುವುದು ಅವರ ಕರ್ತವ್ಯವಾಗಿದೆ. ತಂದೆಯ ಹೆಸರು ಶಿವ ಎಂದಾಗಿದೆ ಮತ್ತು ಮಕ್ಕಳಿಗೆ ಸಾಲಿಗ್ರಾಮಗಳೆಂದು ಹೇಳಲಾಗುತ್ತದೆ. ಅವರ ಪೂಜೆ ನಡೆಯುತ್ತದೆ. ಶಿವ ತಂದೆಯೆಂದು ಹೇಳಿ ಎಲ್ಲರೂ ನೆನಪು ಮಾಡುತ್ತಾರೆ. ಎರಡನೆಯದಾಗಿ ಬ್ರಹ್ಮನಿಗೂ ತಂದೆಯೆಂದು ಹೇಳುವರು. ಪ್ರಜಾಪಿತ ಬ್ರಹ್ಮನೆಂದು ಅನೇಕರು ಹೇಳುವರು ಆದರೆ ಬ್ರಹ್ಮನು ಯಾರ ಮಗನಾಗಿದ್ದಾರೆ ಎಂಬುದನ್ನು ಯಥಾರ್ಥ ರೀತಿಯಿಂದ ತಿಳಿದುಕೊಂಡಿಲ್ಲ. ಪರಮಪಿತ ಪರಮಾತ್ಮ ಶಿವನು ಅವರನ್ನು ದತ್ತು ಮಾಡಿಕೊಂಡಿದ್ದಾರೆ ಎಂದು ನೀವು ಹೇಳುತ್ತೀರಿ. ಇವರಂತೂ ಶರೀರಧಾರಿಯಲ್ಲವೆ. ಎಲ್ಲಾ ಆತ್ಮರು ಈಶ್ವರ ಸಂತಾನರಾಗಿದ್ದಾರೆ. ಎಲ್ಲಾ ಆತ್ಮರಿಗೆ ತಮ್ಮ ಶರೀರವಿದೆ, ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಅದನ್ನು ಅಭಿನಯಿಸಲೇಬೇಕಾಗಿದೆ. ಇದು ಪರಂಪರೆಯಿಂದ ನಡೆದು ಬರುತ್ತದೆ. ಅನಾದಿ ಎಂದರೆ ಅದಕ್ಕೆ ಆದಿ-ಮಧ್ಯ-ಅಂತ್ಯವಿಲ್ಲವೆಂದರ್ಥ. ಮನುಷ್ಯರು ಮುಕ್ತಾಯವಾಗುತ್ತದೆ ಎಂದು ಕೇಳಿದಾಗ ತಬ್ಬಿಬ್ಬಾಗುತ್ತಾರೆ - ಮತ್ತೆ ಆಗುವುದು ಹೇಗೆ? ಎಂದು. ತಂದೆಯು ತಿಳಿಸುತ್ತಾರೆ - ಇದು ಅನಾದಿಯಾಗಿದೆ, ಯಾವಾಗ ಆಗಿದೆ ಎಂದು ಕೇಳುವಂತಿಲ್ಲ, ಪ್ರಳಯವಾಗುವುದೇ ಇಲ್ಲ ಕೇವಲ ಸುಳ್ಳು ಹೇಳಿದ್ದಾರೆ. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಾಗಿ ಬಿಡುತ್ತಾರೆ. ಆದ್ದರಿಂದ ಪ್ರಳಯವಾಗಿ ಬಿಟ್ಟಿತು ಎಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಪ್ರಳಯವಾಗುವುದಿಲ್ಲ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದು ಈಗಲೇ ಇಮರ್ಜ್ ಆಗುತ್ತದೆ. ತಂದೆಯ ಮಹಿಮೆಯನ್ನೇ ಮಾಡುತ್ತಾರೆ - ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿ, ಗಿಡ ಮರಗಳನ್ನು ಲೇಖನಿ ಮಾಡಿ.... ಬರೆದರೂ ಸಹ ತಂದೆಯ ಮಹಿಮೆ ಪೂರ್ಣವಾಗುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತನ್ನ ಹರ್ಷಿತ ಮುಖದಿಂದ ತಂದೆಯ ಹೆಸರನ್ನು ಪ್ರಸಿದ್ಧ ಮಾಡಬೇಕಾಗಿದೆ. ಜ್ಞಾನ ರತ್ನಗಳನ್ನೇ ಕೇಳಬೇಕು ಹಾಗೂ ಹೇಳಬೇಕಾಗಿದೆ. ಕೊರಳಲ್ಲಿ ಜ್ಞಾನ ರತ್ನಗಳ ಮಾಲೆಯು ಸದಾ ಇರಲಿ, ಆಸುರೀ ಅವಗುಣಗಳನ್ನು ತೆಗೆದು ಹಾಕಬೇಕಾಗಿದೆ.

2. ಸರ್ವೀಸಿನಲ್ಲಿ ಎಂದೂ ಸುಸ್ತಾಗಬಾರದು. ಭರವಸೆಯನ್ನಿಟ್ಟು ಉಮ್ಮಂಗದಿಂದ ಸರ್ವೀಸ್ ಮಾಡಬೇಕು, ವಿಚಾರ ಸಾಗರ ಮಂಥನ ಮಾಡಿ ಉಲ್ಲಾಸದಲ್ಲಿರಬೇಕಾಗಿದೆ.

ವರದಾನ:
ಸ್ನೇಹಕ್ಕೆ ಪ್ರತಿಯಾಗಿ ಸಮಾನತೆಯ ಅನುಭವ ಮಾಡುವಂತಹ ಸರ್ವಶಕ್ತಿ ಸಂಪನ್ನ ಭವ.

ಯಾವ ಮಕ್ಕಳು ತಂದೆಯ ಸ್ನೇಹದಲ್ಲಿ ಸದಾ ಸಮಾವೇಶವಾಗಿರುತ್ತಾರೆ ಅವರಿಗೆ ಸ್ನೇಹಕ್ಕೆ ಪ್ರತಿಯಾಗಿ ತಂದೆ ಸಮಾನರಾಗುವ ವರದಾನ ಪ್ರಾಪ್ತಿಯಾಗಿ ಬಿಡುವುದು. ಯಾರು ಸದಾ ಸ್ನೇಹಯುಕ್ತ ಮತ್ತು ಯೋಗಯುಕ್ತರಿದ್ದಾರೆ ಅವರು ಸರ್ವಶಕ್ತಿಗಳಿಂದ ಸಂಪನ್ನ ಸ್ವತಃವಾಗಿ ಆಗಿ ಬಿಡುತ್ತಾರೆ. ಸರ್ವಶಕ್ತಿಗಳು ಸದಾ ಜೊತೆಯಲ್ಲಿದ್ದಾಗ ವಿಜಯ ಖಂಡಿತ ಸಿಗುತ್ತದೆ. ಯಾರಿಗೆ ಸರ್ವಶಕ್ತಿವಂತ ತಂದೆ ನನ್ನ ಜೊತೆಯಲ್ಲಿದ್ದಾರೆ ಎನ್ನುವ ಸ್ಮೃತಿ ಇರುತ್ತದೆ. ಅವರು ಎಂದೂ ಯಾವುದೇ ಮಾತಿನಲ್ಲಿ ವಿಚಲಿತರಾಗಲು ಸಾಧ್ಯವಿಲ್ಲ.

ಸ್ಲೋಗನ್:
ಪುರುಷಾರ್ಥಿ ಜೀವನದಲ್ಲಿ ಯಾರು ಸದಾ ಸಂತುಷ್ಠ ಮತ್ತು ಖುಷಿಯಾಗಿರುವರು ಅವರೇ ಅದೃಷ್ಟಶಾಲಿಗಳು.


ಡಬ್ಬಲ್ ಲೈಟ್ ಸ್ಥಿತಿಯ ಅನುಭವ:-
1. ಅನುಭವ ಮಾಡಿರಿ - ನಾನು ಡಬ್ಬಲ್ ಲೈಟ್ ಸ್ಥಿತಿಯಲ್ಲಿರುವ ಫರಿಶ್ತಾ ಆಗಿದ್ದೇನೆ. ತಮ್ಮ ಎಲ್ಲಾ ಹೊರೆ ಅಥವಾ ಬಂಧನವನ್ನು ತಂದೆಗೆ ಅರ್ಪಣೆ ಮಾಡುತ್ತಾ, ಡಬ್ಬಲ್ ಲೈಟ್ ಆಗಿ ಹಾರಿ ಮತ್ತು ಹಾರಿಸಿರಿ.