13.02.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಶಾಂತಿ ಬೇಕೆಂದರೆ ಅಶರೀರಿಯಾಗಿರಿ, ಈ ದೇಹದ ಪರಿವೆಯಲ್ಲಿ ಬರುವುದರಿಂದಲೇ ಅಶಾಂತಿಯಾಗುತ್ತದೆ ಆದ್ದರಿಂದ ತನ್ನ ಸ್ವಧರ್ಮದಲ್ಲಿ ಸ್ಥಿತರಾಗಿ

ಪ್ರಶ್ನೆ:
ಯಥಾರ್ಥ ನೆನಪೆಂದರೇನು? ನೆನಪಿನ ಸಮಯದಲ್ಲಿ ಯಾವ ಮಾತಿನ ಕಡೆ ವಿಶೇಷವಾಗಿ ಗಮನ ಕೊಡಬೇಕು?

ಉತ್ತರ:
ತನ್ನನ್ನು ಈ ದೇಹದಿಂದ ಭಿನ್ನ ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ಇದೇ ಯಥಾರ್ಥವಾದ ನೆನಪಾಗಿದೆ. ಯಾವುದೇ ದೇಹದ ನೆನಪು ಬರಬಾರದು ಅದಕ್ಕಾಗಿ ಬಹಳ ಗಮನ ಕೊಡುವುದು ಅವಶ್ಯಕ. ನೆನಪಿನಲ್ಲಿರಲು ಜ್ಞಾನದ ನಶೆಯೇರಿರಲಿ. ಬುದ್ಧಿಯಲ್ಲಿರಲಿ - ತಂದೆಯು ನಮ್ಮನ್ನು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ನಾವು ಇಡೀ ಭೂಮಿ, ಸಮುದ್ರ, ಎಲ್ಲದಕ್ಕೆ ಮಾಲೀಕರಾಗುತ್ತೇವೆ.

ಗೀತೆ:
ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು......

ಓಂ ಶಾಂತಿ.
ಓಂ ಎಂಬುದರ ಅರ್ಥವೇ ಆಗಿದೆ - ಅಹಂ, ಅಂದರೆ ನಾನು ಆತ್ಮ. ಓಂ ಎಂದರೆ ಭಗವಂತನೆಂದು ಮನುಷ್ಯರು ತಿಳಿಯುತ್ತಾರೆ, ಆದರೆ ಆ ರೀತಿಯಿಲ್ಲ. ಓಂ ಎಂದರೆ ನಾನು ಆತ್ಮ. ಇದು ನನ್ನ ಶರೀರವಾಗಿದೆ. ಓಂ ಶಾಂತಿ ಎಂದು ಹೇಳುತ್ತೀರಲ್ಲವೆ! ನಾನು ಆತ್ಮನ ಸ್ವಧರ್ಮವು ಶಾಂತಿಯಾಗಿದೆ, ಆತ್ಮವು ತನ್ನ ಪರಿಚಯವನ್ನು ಕೊಡುತ್ತದೆ. ಮನುಷ್ಯರು ಭಲೆ ಓಂ ಶಾಂತಿ ಎಂದು ಹೇಳುತ್ತಾರೆ. ಆದರೆ ಓಂನ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಓಂ ಶಾಂತಿಯ ಶಬ್ಧವು ಒಳ್ಳೆಯದಾಗಿದೆ. ನಾವಾತ್ಮಗಳಾಗಿದ್ದೇವೆ, ನಮ್ಮ ಸ್ವಧರ್ಮವು ಶಾಂತಿಯಾಗಿದೆ, ನಾವಾತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಎಷ್ಟು ಸಹಜ ಅರ್ಥವಿದೆ! ಯಾವುದೇ ವಿಸ್ತಾರವಾದ ಸುಳ್ಳು ಮಾತುಗಳಿಲ್ಲ. ಈ ಸಮಯದ ಮನುಷ್ಯಾತ್ಮರು ಈಗ ಹೊಸ ಪ್ರಪಂಚವೋ ಅಥವಾ ಹಳೆಯ ಪ್ರಪಂಚವೋ ಎಂದು ತಿಳಿದುಕೊಂಡಿಲ್ಲ. ಹೊಸ ಪ್ರಪಂಚವು ಮತ್ತೆ ಯಾವಾಗ ಹಳೆಯದಾಗುತ್ತದೆ? ಹಳೆಯದರಿಂದ ಯಾವಾಗ ಹೊಸ ಪ್ರಪಂಚವಾಗುತ್ತದೆ ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ಪ್ರಪಂಚವು ಯಾವಾಗ ಹೊಸದಾಗುತ್ತದೆ ಮತ್ತು ಹೇಗೆ ಹಳೆಯದಾಗುತ್ತದೆ ಎಂಬುದಾಗಿ ಯಾರನ್ನಾದರೂ ಪ್ರಶ್ನಿಸಿದರೆ ಯಾರೂ ತಿಳಿಸುವುದಿಲ್ಲ. ಈಗಂತೂ ಕಲಿಯುಗವು ಹಳೆಯ ಪ್ರಪಂಚವಾಗಿದೆ, ಸತ್ಯಯುಗಕ್ಕೆ ಹೊಸ ಪ್ರಪಂಚವೆಂದು ಕರೆಯಲಾಗುತ್ತದೆ. ಒಳ್ಳೆಯದು, ಹೊಸದಕ್ಕೆ ಹಳೆಯದಾಗುವುದರಲ್ಲಿ ಎಷ್ಟು ವರ್ಷಗಳು ಹಿಡಿಸುತ್ತವೆ? ಇದನ್ನೂ ಸಹ ಯರೂ ತಿಳಿದುಕೊಂಡಿಲ್ಲ. ಮನುಷ್ಯರಾಗಿಯೂ ಇದನ್ನು ಅರಿತುಕೊಂಡಿಲ್ಲ. ಇವರಿಗೆ ಪ್ರಾಣಿಗಳಿಗಿಂತಲೂ ಕೀಳೆಂದು ಹೇಳಲಾಗುತ್ತದೆ. ಪ್ರಾಣಿಗಳಂತೂ ತಮ್ಮ ಪ್ರತಿ ಏನೂ ಹೇಳಿಕೊಳ್ಳುವುದಿಲ್ಲ, ಆದರೆ ಮನುಷ್ಯರು ಹೇಳುತ್ತಾರೆ - ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಆದರೆ ಅವರನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಪಾವನ ಶಬ್ಧವು ಎಷ್ಟು ಚೆನ್ನಾಗಿದೆ! ಪಾವನ ಪ್ರಪಂಚ, ಸ್ವರ್ಗವು ಹೊಸ ಪ್ರಪಂಚವೇ ಆಗಿರುವುದು. ದೇವತೆಗಳ ಚಿತ್ರಗಳೂ ಇವೆ ಆದರೆ ಈ ಲಕ್ಷ್ಮಿ-ನಾರಾಯಣರು ಹೊಸ ಪಾವನ ಪ್ರಪಂಚದ ಮಾಲೀಕರಾಗಿದ್ದಾರೆಂದು ಯಾರೂ ತಿಳಿದುಕೊಂಡಿಲ್ಲ. ಇವೆಲ್ಲಾ ಮಾತುಗಳನ್ನು ಬೇಹದ್ದಿನ ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಹೊಸ ಪ್ರಪಂಚವೆಂದು ಸ್ವರ್ಗಕ್ಕೆ ಹೇಳಲಾಗುತ್ತದೆ. ದೇವತೆಗಳಿಗೆ ಸ್ವರ್ಗವಾಸಿಗಳೆಂದು ಹೇಳುತ್ತಾರೆ. ಈಗಂತೂ ಹಳೆಯ ಪ್ರಪಂಚ, ನರಕವಾಗಿದೆ. ಇಲ್ಲಿ ಮನುಷ್ಯರು ನರಕವಾಸಿಗಳಾಗಿದ್ದಾರೆ. ಯಾರಾದರೂ ಮರಣ ಹೊಂದಿದಾಗಲೂ ಸ್ವರ್ಗವಾಸಿಗಳಾದರು ಎಂದು ಹೇಳುತ್ತಾರೆ. ಅಂದಮೇಲೆ ಇಲ್ಲಿ ನರಕವಾಸಿಗಳಾಗಿದ್ದರೆಂದು ಅರ್ಥವಲ್ಲವೆ! ಅವರ ಬಾಯಿಂದಲೇ ಹೇಳುತ್ತಾರೆ ಅಂದಮೇಲೆ ಇದು ನರಕವಾಯಿತು ಆದರೆ ನೀವು ನರಕವಾಸಿಗಳಾಗಿದ್ದೀರೆಂದು ಹೇಳಿದರೆ ಕೋಪ ಬಂದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನೋಡಲು ಭಲೆ ಮನುಷ್ಯರಾಗಿದ್ದಾರೆ, ಮುಖವು ಮನುಷ್ಯನದಾಗಿದೆ ಆದರೆ ಗುಣಗಳು ಮಂಗನಂತಿದೆ. ಇದೂ ಸಹ ಗಾಯನವಿದೆಯಲ್ಲವೆ. ತಾವೇ ಮಂದಿರಗಳಲ್ಲಿ ಹೋಗಿ ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರೆಂದು ಹಾಡುತ್ತಾರೆ ಮತ್ತು ತಮಗಾಗಿ ನಾವು ಪಾಪಿ, ನೀಚರಾಗಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಆದರೆ ನೀವು ವಿಕಾರಿಗಳಾಗಿದ್ದೀರೆಂದು ನೇರವಾಗಿ ಹೇಳಿದ್ದೇ ಆದರೆ ಕ್ರೋಧಿತರಾಗಿ ಬಿಡುತ್ತಾರೆ. ಆದ್ದರಿಂದ ತಂದೆಯು ಕೇವಲ ಮಕ್ಕಳೊಂದಿಗೇ ಕೇಳುತ್ತಾರೆ, ತಿಳಿಸಿಕೊಡುತ್ತಾರೆ. ಹೊರಗಿನವರೊಂದಿಗೆ ಮಾತನಾಡುವುದಿಲ್ಲ ಏಕೆಂದರೆ ಕಲಿಯುಗೀ ಮನುಷ್ಯರು ನರಕವಾಸಿಗಳಾಗಿದ್ದಾರೆ. ಈಗ ನೀವು ಸಂಗಮಯುಗದ ನಿವಾಸಿಗಳಾಗಿದ್ದೀರಿ, ನೀವು ಪವಿತ್ರರಾಗುತ್ತಿದ್ದೀರಿ. ನಿಮಗೆ ತಿಳಿದಿದೆ, ನಾವು ಬ್ರಾಹ್ಮಣರಿಗೆ ಶಿವ ತಂದೆಯು ಓದಿಸುತ್ತಾರೆ. ಅವರು ಪತಿತ-ಪಾವನನಾಗಿದ್ದಾರೆ, ನಾವೆಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ, ಎಷ್ಟೊಂದು ಸರಳ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವಾತ್ಮಗಳು ಶಾಂತಿಧಾಮದಿದ ಪಾತ್ರವನ್ನಭಿನಯಿಸಲು ಬರುತ್ತೀರಿ. ಆದರೆ ಈ ದುಃಖಧಾಮದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ. ಆದ್ದರಿಂದ ಮನಃಶ್ಯಾಂತಿ ಹೇಗೆ ಸಿಗುವುದು ಎಂದು ಹೇಳುತ್ತಿರುತ್ತಾರೆ. ಆತ್ಮಕ್ಕೆ ಶಾಂತಿ ಹೇಗೆ ಸಿಗುವುದು ಎಂದು ಹೇಳುವುದಿಲ್ಲ. ಅರೆ! ಓಂ ಶಾಂತಿ, ನನ್ನ ಸ್ವಧರ್ಮವು ಶಾಂತಿಯಾಗಿದೆ ಎಂದು ನೀವೇ ಹೇಳುತ್ತೀರಲ್ಲವೆ ಅಂದಮೇಲೆ ಮತ್ತೆ ಶಾಂತಿಯನ್ನೇಕೆ ಬೇಡುತ್ತೀರಿ. ತನ್ನನ್ನು ಆತ್ಮವೆಂಬುದನ್ನು ಮರೆತು ದೇಹಾಭಿಮಾನದಲ್ಲಿ ಬಂದು ಬಿಡುತ್ತೀರಿ. ಆತ್ಮಗಳಂತೂ ಶಾಂತಿಧಾಮದ ನಿವಾಸಿಗಳಾಗಿದ್ದೀರಿ, ಅಂದಮೇಲೆ ಮತ್ತೆ ಈಗ ಶಾಂತಿಯು ಎಲ್ಲಿಂದ ಸಿಗುವುದು? ಅಶರೀರಿಯಾದಾಗಲೇ ಶಾಂತಿ ಸಿಗುವುದು. ಶರೀರದ ಜೊತೆ ಆತ್ಮವಿದೆ ಎಂದಮೇಲೆ ಅದಕ್ಕೆ ಅವಶ್ಯವಾಗಿ ಮಾತನಾಡಬೇಕಾಗುತ್ತದೆ, ನಡೆದಾಡಬೇಕಾಗುತ್ತದೆ. ನಾವಾತ್ಮಗಳು ಶಾಂತಿಧಾಮದಿಂದ ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ರಾವಣನೇ ನಮ್ಮ ಶತ್ರುವಾಗಿದ್ದಾನೆಂದು ಯಾರೂ ತಿಳಿದುಕೊಂಡಿಲ್ಲ. ಈ ರಾವಣನು ಯಾವಾಗಿನಿಂದ ಶತ್ರುವಾಗಿದ್ದಾನೆಂದೂ ತಿಳಿದುಕೊಂಡಿಲ್ಲ. ದೊಡ್ಡ-ದೊಡ್ಡ ವಿದ್ವಾಂಸರು, ಪಂಡಿತರು ಯಾರೂ ಸಹ ರಾವಣ ಯಾರು? ಯಾರ ಪ್ರತಿಮೆಯನ್ನು ಮಾಡಿ ಸುಡುತ್ತೇವೆಂದು ಅರಿತುಕೊಂಡಿಲ್ಲ. ಜನ್ಮ-ಜನ್ಮಾಂತರದಿಂದ ಸುಡುತ್ತಾ ಬಂದಿದ್ದಾರೆ ಆದರೂ ಸಹ ಏನನ್ನೂ ತಿಳಿದುಕೊಂಡಿಲ್ಲ. ರಾವಣ ಯಾರೆಂದು ಯಾರನ್ನಾದರೂ ಕೇಳಿ, ಇದೆಲ್ಲವೂ ಕಲ್ಪನೆಯಾಗಿದೆ ಎಂದು ಹೇಳುತ್ತಾರೆ. ತಿಳಿದುಕೊಂಡೇ ಇಲ್ಲವೆಂದರೆ ಪ್ರತ್ಯುತ್ತರವನ್ನೇನು ಕೊಡುತ್ತಾರೆ! ಶಾಸ್ತ್ರಗಳಲ್ಲಿಯೂ ಇದೆಯಲ್ಲವೆ - ಹೇ ರಾಮನೆ, ಈ ಸಂಸಾರವನ್ನು ರಚಿಸಿಯೇ ಇಲ್ಲ ಅಂದರೆ ಇದು ಸಂಸಾರವೇ ಇಲ್ಲ, ಇದೆಲ್ಲವೂ ಕಲ್ಪನೆಯಾಗಿದೆ ಎಂದು ಬಹಳ ಹೇಳುತ್ತಾರೆ. ಕಲ್ಪನೆ ಎಂಬುದರ ಅರ್ಥವೇನು? ಇದು ಸಂಕಲ್ಪಗಳ ಪ್ರಪಂಚವೆಂದು ಹೇಳುತ್ತಾರೆ. ಯಾರು ಹೇಗೆ ಸಂಕಲ್ಪ ಮಾಡುತ್ತಾರೆಯೋ ಅದು ಆ ರೀತಿಯಾಗಿ ಬಿಡುತ್ತದೆ ಎಂದು ಹೇಳಿ ಬಿಡುತ್ತಾರೆ, ಇದರ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಇದರಲ್ಲಿ ಕೆಲವರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಕೆಲವರು ತಿಳಿದುಕೊಳ್ಳುವುದೇ ಇಲ್ಲ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರಿಗೆ ಸ್ವಂತ ಮಕ್ಕಳೆಂದು ಹೇಳುತ್ತಾರೆ. ಯಾರು ಅರಿತುಕೊಳ್ಳುವುದಿಲ್ಲವೋ ಅವರು ಮಲತಾಯಿ ಮಕ್ಕಳಾದರು. ಮಲತಾಯಿ ಮಕ್ಕಳು ವಾರಸುಧಾರರಾಗುವರೇ? ತಂದೆಯ ಬಳಿ ಸ್ವಂತ ಮಕ್ಕಳೂ ಇದ್ದಾರೆ, ಮಲತಾಯಿ ಮಕ್ಕಳೂ ಇದ್ದಾರೆ. ಸ್ವಂತ ಮಕ್ಕಳು ತಂದೆಯ ಸಂಪೂರ್ಣ ಶ್ರೀಮತದಂತೆ ನಡೆಯುತ್ತಾರೆ, ಮಲತಾಯಿ ಮಕ್ಕಳು ನಡೆಯುವುದಿಲ್ಲ. ಇವರು ನನ್ನ ಮತದಂತೆ ನಡೆಯುವುದಿಲ್ಲ, ರಾವಣನ ಮತದ ಮೇಲೆ ಇದ್ದಾರೆಂದು ತಿಳಿಯುತ್ತಾರೆ. ರಾಮ ಮತ್ತು ರಾವಣ - ಎರಡು ಶಬ್ಧಗಳಿವೆ. ಹಾಗೆಯೇ ರಾಮ ರಾಜ್ಯ ಮತ್ತು ರಾವಣ ರಾಜ್ಯ, ಈಗ ಸಂಗಮವಾಗಿದೆ. ತಂದೆಯು ತಿಳಿಸುತ್ತಾರೆ - ಇವರೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದಾರೆ, ನೀವೂ ಪಡೆಯುವಿರಾ? ಶ್ರೀಮತದಂತೆ ನಡೆಯುತ್ತೀರಾ? ಆಗ ಯಾವ ಮತವೆಂದು ಕೇಳುತ್ತಾರೆ. ತಂದೆಯು ಶ್ರೀಮತವನ್ನು ಕೊಡುತ್ತಾರೆ - ಪವಿತ್ರರಾಗಿ. ನಾವು ಪವಿತ್ರರಾಗಿದ್ದು ಪತಿಯು ನಮ್ಮನ್ನು ಒಪ್ಪದಿದ್ದರೆ ನಾನೇನು ಮಾಡಲಿ ಎಂದು ಹೇಳುತ್ತಾರೆ. ತಂದೆಯಂತೂ ನಮ್ಮ ಪತಿ ಪರಮೇಶ್ವರನಾಗಿದ್ದಾರೆ ಏಕೆಂದರೆ ಭಾರತದಲ್ಲಿ ಪತಿಯು ನಿಮ್ಮ ಗುರು, ಇಡೀ ಸರ್ವಸ್ವವೆಂದು ಕಲಿಸಿಕೊಡಲಾಗುತ್ತದೆ. ಆದರೆ ಈ ರೀತಿ ಯಾರೂ ತಿಳಿದುಕೊಳ್ಳುವುದಿಲ್ಲ. ಆ ಸಮಯದಲ್ಲಿ ಹೌದು ಎಂದು ಹೇಳುತ್ತಾರೆ ಆದರೆ ಪಾಲಿಸುವುದೇ ಇಲ್ಲ. ಆದರೂ ಸಹ ಮಂದಿರಗಳಿಗೆ ಹೋಗುತ್ತಾರೆ, ನೀನು ಹೊರಗಡೆ ಹೋಗಬೇಡ, ನಾನು ರಾಮನ ಮೂರ್ತಿಯನ್ನು ಮನೆಯಲ್ಲಿಯೇ ತಂದಿಡುತ್ತೇನೆ, ಮತ್ತೆ ಅಯೋಧ್ಯೆ, ಮೊದಲಾದ ಕಡೆ ಹೋಗಿ ಏಕೆ ಅಲೆದಾಡುತ್ತೀಯಾ ಎಂದು ಮನುಷ್ಯರು ಕೇಳುತ್ತಾರೆ, ಇದಕ್ಕೆ ಒಪ್ಪುವುದಿಲ್ಲ. ಇದು ಭಕ್ತಿಮಾರ್ಗದ ಅಲೆದಾಟವಾಗಿದೆ, ಅವರು ಅವಶ್ಯವಾಗಿ ಆಲೆದಾಡುತ್ತಾರೆ ತಂದೆಯು ಇದನ್ನು ಒಪ್ಪುವುದಿಲ್ಲ. ಅದಂತೂ ಅವರ ಮಂದಿರವಾಗಿದೆ ಎಂದು ತಿಳಿಯುತ್ತಾರೆ. ಅರೆ! ನೀವು ರಾಮನನ್ನು ನೆನಪು ಮಾಡಬೇಕೋ ಅಥವಾ ಮಂದಿರವನ್ನೋ? ಆದರೆ ತಿಳಿದುಕೊಳ್ಳುವುದೇ ಇಲ್ಲ. ಭಕ್ತಿಮಾರ್ಗದಲ್ಲಿ ಹೇ ಭಗವಂತ ಸದ್ಗತಿ ಮಾಡಿ ಎಂದು ಕೇಳುತ್ತಾರೆ ಏಕೆಂದರೆ ಅವರೊಬ್ಬರೇ ಸರ್ವರ ಸದ್ಗತಿದಾತನಾಗಿದ್ದಾರೆ ಅಂದಮೇಲೆ ಅವರು ಯಾವಾಗ ಬರುತ್ತಾರೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ.

ತಂದೆಯು ತಿಳಿಸುತ್ತಾರೆ - ರಾವಣನೇ ನಿಮ್ಮ ಶತ್ರುವಾಗಿದ್ದಾನೆ, ರಾವಣನದು ವಿಚಿತ್ರವೇನೆಂದರೆ ರಾವಣನನ್ನು ಸುಡುತ್ತಾ ಬಂದಿದ್ದಾರೆ ಆದರೆ ಸಾಯುವುದೇ ಇಲ್ಲ. ರಾವಣನೆಂದರೆ ಯಾರೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ಶಿವಜಯಂತಿಯನ್ನೂ ಆಚರಿಸುತ್ತಾರೆ ಆದರೆ ಶಿವನನ್ನೂ ಸಹ ಅರಿತುಕೊಂಡಿಲ್ಲ. ಸರ್ಕಾರದವರಿಗೂ ಸಹ ನೀವು ತಿಳಿಸುತ್ತೀರಿ - ಶಿವನು ಭಗವಂತನಾಗಿದ್ದಾನೆ, ಅವರೇ ಕಲ್ಪ-ಕಲ್ಪವೂ ಬಂದು ಭಾರತವನ್ನು ನರಕವಾಸಿಯಿಂದ ಸ್ವರ್ಗವಾಸಿ, ಭಿಕ್ಷುಕನಿಂದ ರಾಜಕುಮಾರನನ್ನಾಗಿ ಮಾಡುತ್ತಾರೆ, ಪತಿತರನ್ನು ಪಾವನ ಮಾಡುತ್ತಾರೆ, ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯಾತ್ಮರು ಇಲ್ಲಿದ್ದಾರೆ. ಕ್ರಿಸ್ತನ ಆತ್ಮವೂ ಸಹ ಯಾವುದಾದರೊಂದು ಜನ್ಮದಲ್ಲಿ ಇಲ್ಲಿಯೇ ಇದೆ, ಹಿಂತಿರುಗಿ ಹೋಗಲು ಯಾರಿಗೂ ಸಾಧ್ಯವಿಲ್ಲ. ಇವರೆಲ್ಲರ ಸದ್ಗತಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಅವರು ಭಾರತದಲ್ಲಿಯೇ ಬರುತ್ತಾರೆ, ವಾಸ್ತವದಲ್ಲಿ ಯಾರು ಸದ್ಗತಿ ಮಾಡುವರೋ ಅವರ ಭಕ್ತಿಯನ್ನೇ ಮಾಡಬೇಕಾಗಿದೆ. ಆ ನಿರಾಕಾರ ತಂದೆಯು ಇಲ್ಲಂತೂ ಇಲ್ಲ. ಯಾವಾಗಲೂ ಅವರು ಮೇಲಿದ್ದಾರೆಂದು ತಿಳಿದೇ ನೆನಪು ಮಾಡುತ್ತಾರೆ. ಕೃಷ್ಣನನ್ನು ಮೇಲಿದ್ದಾನೆಂದು ತಿಳಿಯುವುದಿಲ್ಲ. ಮತ್ತೆಲ್ಲರನ್ನೂ ಇಲ್ಲಿ ಕೆಳಗೆ ನೆನಪು ಮಾಡುತ್ತಾರೆ, ಕೃಷ್ಣನನ್ನು ಇಲ್ಲಿಯೇ ನೆನಪು ಮಾಡುತ್ತಾರೆ. ನೀವು ಮಕ್ಕಳದೇ ಯಥಾರ್ಥವಾದ ನೆನಪಾಗಿದೆ. ನೀವು ತಮ್ಮನ್ನು ಈ ದೇಹದಿಂದ ಭಿನ್ನ ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರಿ. ತಂದೆಯು ತಿಳಿಸುತ್ತಾರೆ - ನಿಮಗೆ ಯಾವುದೇ ದೇಹವು ನೆನಪಿಗೆ ಬರಬಾರದು. ಈ ಗಮನವನ್ನಿಡುವುದು ಅವಶ್ಯಕವಾಗಿದೆ. ನೀವು ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತಂದೆಯು ನಮ್ಮನ್ನು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಇಡೀ ಸಾಗರ, ಆಕಾಶ, ಭೂಮಿ ಎಲ್ಲದರ ಮಾಲೀಕರನ್ನಾಗಿ ಮಾಡುತ್ತಾರೆ, ಈಗಂತೂ ಎಷ್ಟೊಂದು ತುಂಡು-ತುಂಡಾಗಿ ಬಿಟ್ಟಿದೆ. ಒಬ್ಬರು ಇನ್ನೊಬ್ಬರ ಜಾಗದಲ್ಲಿ ಬರಲು ಬಿಡುವುದಿಲ್ಲ. ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ, ಎಲ್ಲರೂ ತಂದೆಯರೇ ತಂದೆಯರಾಗಿದ್ದಾರೆ ಎಂದಲ್ಲ. ಹಿಂದೂ-ಚೀನಿ ಭಾಯಿ-ಭಾಯಿ, ಹಿಂದೂ-ಮುಸ್ಲೀಂ ಭಾಯಿ-ಭಾಯಿ (ಸಹೋದರ-ಸಹೋದರ) ಎಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಹಿಂದೂ-ಮುಸಲ್ಮಾನರು ಸಹೋದರ-ಸಹೋದರಿಯೆಂದು ಹೇಳುವುದಿಲ್ಲ. ಆತ್ಮಗಳು ಪರಸ್ಪರ ಎಲ್ಲರೂ ಸಹೋದರರಾಗಿದ್ದಾರೆ ಆದರೆ ಈ ಮಾತನ್ನು ಅರಿತುಕೊಂಡಿಲ್ಲ. ಶಾಸ್ತ್ರ ಮೊದಲಾದುವುಗಳನ್ನು ಕೇಳುತ್ತಾ ಸತ್ಯ-ಸತ್ಯವೆಂದು ಹೇಳುತ್ತಿರುತ್ತಾರೆ, ಅರ್ಥವೇನೂ ಇಲ್ಲ. ವಾಸ್ತವದಲ್ಲಿ ಇಲ್ಲಿ ಸುಳ್ಳು, ಅಸತ್ಯವಿದೆ. ಸತ್ಯ ಖಂಡದಲ್ಲಿ ಸತ್ಯವೇ ಸತ್ಯವನ್ನು ಹೇಳುತ್ತಾರೆ. ಇಲ್ಲಿ ಅಸತ್ಯವೇ ಅಸತ್ಯವಿದೆ. ನೀವು ಸುಳ್ಳು ಹೇಳಿದಿರೆಂದು ಯಾರಿಗಾದರೂ ಹೇಳಿದರೆ ಅವರು ಮುನಿಸಿಕೊಳ್ಳುತ್ತಾರೆ. ನೀವು ಸತ್ಯವನ್ನು ಹೇಳಿದರೂ ಸಹ ಕೆಲವರು ನಿಂದನೆ ಮಾಡತೊಡಗುತ್ತಾರೆ. ಈಗ ತಂದೆಯನ್ನಂತೂ ನೀವು ಬ್ರಾಹ್ಮಣರೇ ಅರಿತುಕೊಂಡಿದ್ದೀರಿ. ನೀವು ಮಕ್ಕಳು ಈಗ ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ. ನಿಮಗೆ ತಿಳಿದಿದೆ, ಈಗ ಪಂಚತತ್ವಗಳೂ ತಮೋಪ್ರಧಾನವಾಗಿವೆ, ಇತ್ತೀಚಿನ ದಿನಗಳಲ್ಲಿ ಮನುಷ್ಯರು ಭೂತಗಳ ಪೂಜೆ ಮಾಡುತ್ತಾರೆ, ಭೂತಗಳ ನೆನಪೇ ಇರುತ್ತದೆ. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಭೂತಗಳನ್ನು ನೆನಪು ಮಾಡಬೇಡಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಿ. ಈಗ ಆತ್ಮಾಭಿಮಾನಿಗಳಾಗಬೇಕಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ವಿಕರ್ಮಗಳು ವಿನಾಶವಾಗುವುದು, ಜ್ಞಾನದ ಮೂರನೆಯ ನೇತ್ರವು ನಿಮಗೆ ಸಿಗುತ್ತದೆ.

ಈಗ ನೀವು ವಿಕರ್ಮಾಜೀತರಾಗಬೇಕಾಗಿದೆ. ಅದು (ಸತ್ಯಯುಗ) ವಿಕರ್ಮಾಜೀತ ಸಂವತ್ಸರವಾಗಿದೆ, ಇದು ವಿಕರ್ಮಿ ಸಂವತ್ಸರವಾಗಿದೆ. ನೀವು ಯೋಗಬಲದಿಂದ ವಿಕರ್ಮಗಳ ಮೇಲೆ ಜಯ ಗಳಿಸುತ್ತೀರಿ. ಭಾರತದ ಯೋಗವು ಪ್ರಸಿದ್ಧವಾಗಿದೆ, ಮನುಷ್ಯರು ತಿಳಿದುಕೊಂಡಿಲ್ಲ. ಸನ್ಯಾಸಿಗಳೂ ಸಹ ವಿದೇಶದಲ್ಲಿ ಹೋಗಿ ನಾವು ಭಾರತದ ಯೋಗವನ್ನು ಕಲಿಸಲು ಬಂದಿದ್ದೇವೆಂದು ಹೇಳುತ್ತಾರೆ. ಇವರು ಹಠಯೋಗಿ ಆಗಿದ್ದಾರೆಂದರೆ ಇವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ ಎಂಬುದು ವಿದೇಶಿಯರಿಗೆ ತಿಳಿದೇ ಇಲ್ಲ. ನೀವು ರಾಜಋಷಿಗಳಾಗಿದ್ದೀರಿ. ಅವರು ಹದ್ದಿನ ಸನ್ಯಾಸಿಗಳು, ನೀವು ಬೇಹದ್ದಿನ ಸನ್ಯಾಸಿಗಳಾಗಿದ್ದೀರಿ. ರಾತ್ರಿ-ಹಗಲಿನ ಅಂತರವಿದೆ. ನೀವು ಬ್ರಾಹ್ಮಣರ ವಿನಃ ಮತ್ತ್ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಇವು ಹೊಸ ಮಾತುಗಳಾಗಿವೆ, ಹೊಸ ವ್ಯಕ್ತಿಗಳು ಇದನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಹೊಸಬರಿಗೆ ಎಂದೂ ಅನುಮತಿ ಕೊಡುವುದಿಲ್ಲ. ಇದು ಇಂದ್ರ ಸಭೆಯಾಗಿದೆಯಲ್ಲವೆ. ಈ ಸಮಯದಲ್ಲಿ ಎಲ್ಲರೂ ಕಲ್ಲು ಬುದ್ಧಿಯವರಾಗಿದ್ದಾರೆ. ಸತ್ಯಯುಗದಲ್ಲಿ ನೀವು ಪಾರಸ ಬುದ್ಧಿಯವರಾಗುತ್ತೀರಿ, ಈಗ ಸಂಗಮವಾಗಿದೆ. ತಂದೆಯ ವಿನಃ ಮತ್ತ್ಯಾರೂ ಕಲ್ಲಿನ ಸಮಾನರಿಂದ ಪಾರಸ ಬುದ್ಧಿಯ ಸಮಾನರನ್ನಾಗಿ ಮಾಡಲು ಸಾಧ್ಯವಿಲ್ಲ. ಇಲ್ಲಿ ನೀವು ಪಾರಸ ಬುದ್ಧಿಯವರಾಗಲು ಬಂದಿದ್ದೀರಿ. ಅವಶ್ಯವಾಗಿ ಭಾರತವು ಚಿನ್ನದ ಪಕ್ಷಿಯಾಗಿತ್ತಲ್ಲವೆ. ಈ ಲಕ್ಷ್ಮಿ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು. ಇವರು ಎಂದಾದರೂ ರಾಜ್ಯ ಮಾಡುತ್ತಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ಇಂದಿಗೆ 5000 ವರ್ಷಗಳ ಮೊದಲು ಇವರ ರಾಜ್ಯವಿತ್ತು, ಇವರು ಮತ್ತೆ ಎಲ್ಲಿ ಹೋದರು! 84 ಜನ್ಮಗಳನ್ನು ತೆಗೆದುಕೊಂಡರೆಂದು ನೀವು ಹೇಳುತ್ತೀರಿ. ಈಗ ತಮೋಪ್ರಧಾನರಾಗಿದ್ದಾರೆ ಮತ್ತೆ ತಂದೆಯ ಮೂಲಕ ಸತೋಪ್ರಧಾನರಾಗುತ್ತಿದ್ದಾರೆ, ತತ್ತ್ವಂ. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾವ ಸಾಧು-ಸಂತ ತಿಳಿಸಲು ಸಾಧ್ಯವಿಲ್ಲ. ಅದು ಭಕ್ತಿಮಾರ್ಗವಾಗಿದೆ, ಇದು ಜ್ಞಾನಮಾರ್ಗವಾಗಿದೆ. ನೀವು ಮಕ್ಕಳ ಬಳಿ ಯಾವ ಒಳ್ಳೊಳ್ಳೆಯ ಗೀತೆಗಳಿವೆಯೋ ಅದನ್ನು ಕೇಳಿದಾಗ ರೋಮಾಂಚನವಾಗಿ ನಿಂತು ಬಿಡುತ್ತೀರಿ, ಖುಷಿಯ ನಶೆಯು ಒಮ್ಮೆಲೆ ಏರಿ ಬಿಡುವುದು ಮತ್ತೆ ಆ ನಶೆಯು ಸ್ಥಿರವಾಗಿರಬೇಕು. ಇದು ಜ್ಞಾನಾಮೃತವಾಗಿದೆ, ಹೇಗೆ ಅವರು ಮಧ್ಯಪಾನ ಸೇವಿಸಿದರೆ ನಶೆಯು ಏರಿ ಬಿಡುತ್ತದೆ. ಇದಂತೂ ಜ್ಞಾನಾಮೃತವಾಗಿದೆ, ನಿಮ್ಮ ನಶೆಯು ಸದಾ ಏರಿರಬೇಕು, ಎಂದೂ ಇಳಿಯಬಾರದು. ನೀವು ಈ ಲಕ್ಷ್ಮಿ-ನಾರಾಯಣರನ್ನು ನೋಡಿ ಎಷ್ಟೊಂದು ಖುಷಿಯಾಗುತ್ತೀರಿ! ಏಕೆಂದರೆ ನಿಮಗೆ ತಿಳಿದಿದೆ - ನಾವು ಶ್ರೀಮತದಿಂದ ಪುನಃ ಶ್ರೇಷ್ಠಾಚಾರಿಗಳಾಗುತ್ತಿದ್ದೇವೆ. ಇಲ್ಲಿ ನೋಡುತ್ತಿದ್ದರೂ ಸಹ ಬುದ್ಧಿಯೋಗವು ತಂದೆ ಮತ್ತು ಆಸ್ತಿಯಲ್ಲಿ ತೊಡಗಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿಕರ್ಮಾಜೀತರಾಗಲು ಯೋಗಬಲದಿಂದ ವಿಕರ್ಮಗಳ ಮೇಲೆ ವಿಜಯ ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನೋಡುತ್ತಿದ್ದರೂ ಬುದ್ಧಿಯೋಗವು ತಂದೆ ಮತ್ತು ಆಸ್ತಿಯಲ್ಲಿ ತೊಡಗಿರಲಿ.

2. ತಂದೆಯ ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳಲು ಸ್ವಂತ ಮಕ್ಕಳಾಗಬೇಕಾಗಿದೆ. ಒಬ್ಬ ತಂದೆಯ ಶ್ರೀಮತದನುಸಾರವೇ ನಡೆಯಬೇಕಾಗಿದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ತಿಳಿದುಕೊಂಡು ಅನ್ಯರಿಗೂ ತಿಳಿಸಬೇಕಾಗಿದೆ.

ವರದಾನ:
ಸಂಪೂರ್ಣತೆಯ ಬೆಳಕಿನ ಮೂಲಕ ಅಜ್ಞಾನದ ಪರದೆಯನ್ನು ಸರಿಸುವಂತಹ ಸರ್ಚ್ ಲೈಟ್ ಭವ.

ಈಗ ಪ್ರತ್ಯಕ್ಷತೆಯ ಸಮಯ ಸಮೀಪ ಬರುತ್ತಿದೆ, ಆದ್ದರಿಂದ ಅಂರ್ತಮುಖಿಯಾಗಿ ಗುಹ್ಯ ಅನುಭವಗಳ ರತ್ನಗಳಿಂದ ಸ್ವಯಂನ್ನು ಭರ್ಪೂರ್ ಮಾಡಿಕೊಳ್ಳಿ. ಇಂತಹ ಸರ್ಚ್ಲೈಟ್ ಆಗಿ ಯಾವುದು ತಮ್ಮ ಸಂಪೂರ್ಣತೆಯ ಬೆಳಕಿನಿಂದ ಅಜ್ಞಾನದ ಪರದೆ ದೂರ ಸರಿದು ಬಿಡಬೇಕು. ಏಕೆಂದರೆ ನೀವು ಈ ಧರಣಿಯ ನಕ್ಷತ್ರಗಳು ಈ ವಿಶ್ವವನ್ನು ಹಲ್ಚಲ್ ನಿಂದ ಬಚಾವ್ ಮಾಡಿ ಸುಖಿ ಸಂಸಾರ, ಸ್ವರ್ಣಿಮ ಸಂಸಾರವನ್ನಾಗಿ ಮಾಡುವಂತಹವರಾಗಿರುವಿರಿ. ತಾವು ಪುರುಷೋತ್ತಮ ಆತ್ಮರು ವಿಶ್ವವನ್ನು ಸುಖ-ಶಾಂತಿಯ ಶ್ವಾಸ ಕೊಡಲು ನಿಮಿತ್ತರಾಗಿರುವಿರಿ.

ಸ್ಲೋಗನ್:
ಮಾಯೆ ಮತ್ತು ಪ್ರಕೃತಿಯ ಆಕರ್ಷಣೆಯಿಂದ ದೂರವಿರಿ ಆಗ ಸದಾ ಹರ್ಷಿತರಾಗಿರುವಿರಿ.