13.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಎಷ್ಟು ಸಮಯ ಸಿಗುವುದೋ ಅಂತರ್ಮುಖಿಗಳಾಗುವ ಪುರುಷಾರ್ಥ ಮಾಡಿ, ಬಾಹರ್ಮುಖತೆಯಲ್ಲಿ ಬರಬಾರದು, ಆಗಲೇ ಪಾಪಗಳು ತುಂಡಾಗುತ್ತವೆ.

ಪ್ರಶ್ನೆ:
ಏರುವ ಕಲೆಯ ಪುರುಷಾರ್ಥವೇನಾಗಿದೆ ಅದನ್ನು ತಂದೆಯು ಪ್ರತಿಯೊಬ್ಬ ಮಗುವಿಗೆ ಕಲಿಸುತ್ತಾರೆ?

ಉತ್ತರ:
1. ಮಕ್ಕಳು ಏರುವ ಕಲೆಯಲ್ಲಿ ಹೋಗಬೇಕೆಂದರೆ ಬುದ್ಧಿಯೋಗವನ್ನು ಒಬ್ಬ ತಂದೆಯೊಂದಿಗೆ ಜೋಡಿಸಿ. ಇಂತಹವರು ಹೀಗಿದ್ದಾರೆ ಹಾಗಿದ್ದಾರೆ, ಈ ರೀತಿ ಮಾಡುತ್ತಾರೆ, ಇವರಲ್ಲಿ ಅವಗುಣವಿದೆ - ಈ ಮಾತುಗಳಲ್ಲಿ ಹೋಗುವ ಅವಶ್ಯಕತೆಯಿಲ್ಲ. ಅವಗುಣವನ್ನು ನೋಡುವುದರಿಂದ ಮುಖವನ್ನು ತಿರುಗಿಸಿ ಬಿಡಿ. 2. ಎಂದೂ ಸಹ ವಿದ್ಯೆಯೊಂದಿಗೆ ಮುನಿಸಿಕೊಳ್ಳಬಾರದು. ಮುರುಳಿಯಲ್ಲಿ ಯಾವ ಒಳ್ಳೊಳ್ಳೆಯ ಅಂಶಗಳಿವೆಯೋ ಅದನ್ನು ಧಾರಣೆ ಮಾಡುತ್ತಾ ಇರಿ ಆಗಲೇ ಏರುವ ಕಲೆಯಲ್ಲಿ ಹೋಗಲು ಸಾಧ್ಯ.

ಓಂ ಶಾಂತಿ.
ಈಗ ಇದು ಜ್ಞಾನದ ತರಗತಿಯಾಗಿದೆ ಮತ್ತು ಮುಂಜಾನೆಯಲ್ಲಿ ಯೋಗದ ತರಗತಿಯಿರುತ್ತದೆ. ಯಾವ ಯೋಗ? ಇದನ್ನು ಬಹಳ ಚೆನ್ನಾಗಿ ತಿಳಿಸಿಕೊಡಬೇಕು. ಏಕೆಂದರೆ ಬಹಳ ಮನುಷ್ಯರು ಹಠಯೋಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಆ ಹಠಯೋಗವನ್ನು ಮನುಷ್ಯರು ಕಲಿಸುತ್ತಾರೆ, ಇದು ರಾಜಯೋಗವಾಗಿದೆ. ಇದನ್ನು ಪರಮಾತ್ಮ ಕಲಿಸುತ್ತಾರೆ ಏಕೆಂದರೆ ರಾಜಯೋಗವನ್ನು ಕಲಿಸಲು ಈಗ ರಾಜರೂ ಸಹ ಯಾರೂ ಇಲ್ಲ. ಈ ಲಕ್ಷ್ಮೀ-ನಾರಾಯಣರು ಭಗವಾನ್-ಭಗವತಿಯಾಗಿದ್ದಾರೆ. ಇವರೂ ಸಹ ರಾಜಯೋಗವನ್ನು ಕಲಿತಿರುವುದರಿಂದಲೇ ಭವಿಷ್ಯದಲ್ಲಿ ಭಗವಾನ್-ಭಗವತಿಯಾದರು. ಇದು ಪುರುಷೋತ್ತಮ ಸಂಗಮಯುಗದ ತಿಳುವಳಿಕೆಯಾಗಿದೆ. ಇದಕ್ಕೆ ಪುರುಷೋತ್ತಮ ಎಂದು ಹೇಳಲಾಗುತ್ತದೆ. ಹಳೆಯ ಮತ್ತು ಹೊಸ ಪ್ರಪಂಚದ ನಡುವಿನ ಸಮಯ, ಹಳೆಯ ಮನುಷ್ಯರು ಮತ್ತು ಹೊಸ ದೇವತೆಗಳು. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಹಳಬರಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಹೊಸ ಆತ್ಮಗಳು, ಈ ಸಮಯದಲ್ಲಿ ಎಲ್ಲಾ ಮನುಷ್ಯರು ಹಳಬರಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಹೊಸ ಆತ್ಮಗಳು, ದೇವತೆಗಳಾಗುತ್ತಾರೆ. ಅಲ್ಲಿ ಮನುಷ್ಯರು ಎಂದು ಹೇಳುವುದಿಲ್ಲ. ಭಲೇ ಮನುಷ್ಯರಿರುತ್ತಾರೆ ಆದರೆ ದೈವೀ ಗುಣವುಳ್ಳರಾಗಿರುತ್ತಾರೆ. ಆದ್ದರಿಂದ ದೇವಿ-ದೇವತೆಗಳೆಂದು ಕರೆಯಲಾಗುತ್ತದೆ ಪವಿತ್ರರೂ ಆಗಿರುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ. ಈ ರಾವಣನು ಮೊಟ್ಟ ಮೊದಲ ಭೂತವಾಗಿದೆ. ಕೆಲವರು ಬಹಳ ಕ್ರೋಧ ಮಾಡುತ್ತಾರೆಂದರೆ ಹೇಳಲಾಗುತ್ತದೆ - ಬೌ ಬೌ ಏಕೆ ಮಾಡುತ್ತೀರಿ! ಈ ಎರಡು ವಿಕಾರಗಳು ಬಹಳ ದೊಡ್ಡ ಶತ್ರುಗಳಾಗಿವೆ. ಲೋಭ-ಮೋಹಕ್ಕೆ ಬೌ-ಬೌ ಎಂದು ಹೇಳುವುದಿಲ್ಲ. ಮನುಷ್ಯರು ವಿಜ್ಞಾನದ ಅಹಂನ ಕಾರಣ ಕ್ರೋಧವು ಎಷ್ಟೊಂದಿದೆ - ಇದೂ ಸಹ ಬಹಳ ನಷ್ಟಗೊಳಿಸುವಂತದ್ದಾಗಿದೆ. ಕಾಮದ ಭೂತ ಆದಿ-ಮಧ್ಯ-ಅಂತ್ಯದಲ್ಲಿ ದುಃಖ ಕೊಡುವಂತದ್ದಾಗಿದೆ. ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುತ್ತಿರುತ್ತಾರೆ. ಇದೆಲ್ಲಾ ಮಾತುಗಳು ತಿಳಿದ ನಂತರ ಅನ್ಯರಿಗೂ ತಿಳಿಸಬೇಕಾಗಿದೆ. ನಿಮ್ಮ ವಿನಃ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಸತ್ಯ ಮಾರ್ಗವು ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಮಕ್ಕಳೇ ತಿಳಿದುಕೊಳ್ಳಲು ಸಾಧ್ಯ. ಬೇಹದ್ದಿನ ತಂದೆಯಿಂದ ಇಷ್ಟೂ ಶ್ರೇಷ್ಠತೆಯೂ ಹೇಗೆ ಸಿಗುತ್ತದೆ! ಯಾರಿಗೆ ಅನ್ಯರಿಗೆ ತಿಳಿಸಲು ಸಾಧ್ಯವಿಲ್ಲವೋ ಆಗ ಅವಶ್ಯವಾಗಿ ವಿದ್ಯೆಯ ಮೇಲೆ ಗಮನವಿಡುವುದಿಲ್ಲ. ಬುದ್ಧಿಯೋಗವು ಎಲ್ಲೆಲ್ಲಿಗೋ ಅಲೆಯುತ್ತದೆ. ಯುದ್ಧದ ಮೈದಾನವಾಗಿದೆಯಲ್ಲವೆ. ಸಹಜ ಮಾತೆಂದು ತಿಳಿಯಬೇಡಿ. ಮನಸ್ಸಿನ ಬಿರುಗಾಳಿಗಳು ಅಥವಾ ವಿಕಲ್ಪಗಳು ಇಷ್ಟವಿಲ್ಲದಿದ್ದರೂ ಸಹ ಬಹಳ ಬರುತ್ತದೆ ಇದರಲ್ಲಿ ತಬ್ಬಿಬ್ಬಾಗಬಾರದು. ಯೋಗ ಬಲದಿಂದಲೂ ಮಾಯೆಯು ಓಡಿ ಹೋಗುತ್ತದೆ. ಇದರಲ್ಲಿ ಪುರುಷಾರ್ಥ ಬಹಳ ಇದೆ. ಉದ್ಯೋಗ-ವ್ಯವಹಾರಗಳಲ್ಲಿ ಬಹಳ ಸುಸ್ತಾಗಿ ಬಿಡುತ್ತಾರೆ, ಏಕೆಂದರೆ ದೇಹಾಭಿಮಾನದಲ್ಲಿರುತ್ತಾರೆ. ದೇಹಾಭಿಮಾನದ ಕಾರಣ ಬಹಳ ಮಾತನಾಡಬೇಕಾಗುತ್ತದೆ. ಆದ್ದರಿಂದ ದೇಹೀ-ಅಭಿಮಾನಿಯಾಗಿ ಎಂದು ತಂದೆಯು ತಿಳಿಸುತ್ತಾರೆ. ದೇಹೀ-ಅಭಿಮಾನಿಯಾಗಿರುವುದರಿಂದ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನೇ ಅನ್ಯರಿಗೆ ತಿಳಿಸುತ್ತೀರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ತಂದೆಯೇ ಶಿಕ್ಷಣ ಕೊಡುತ್ತಾರೆ - ಮಕ್ಕಳೇ, ಬಾಹರ್ಮುಖಿಯಾಗಬೇಡಿ, ಅಂತರ್ಮುಖಿಯಾಗಿರಿ. ಭಲೇ ಎಲ್ಲಿಯಾದರೂ ಬಾಹರ್ಮುಖಿಯಾಗಬೇಕಾಗಿ ಬಂದರೂ ಸಮಯ ಸಿಕ್ಕಿದಾಗ ಪ್ರಯತ್ನ ಪಟ್ಟು ಅಂತರ್ಮುಖಿಯಾಗಬೇಕು. ಆಗಲೇ ಪಾಪವು ಕಳೆಯುತ್ತದೆ, ಇಲ್ಲವೆಂದರೆ ಪಾಪವೂ ಕಳೆಯುವುದಿಲ್ಲ, ಶ್ರೇಷ್ಠ ಪದವಿಯನ್ನೂ ಪಡೆಯುವುದಿಲ್ಲ. ಜನ್ಮ-ಜನ್ಮಾಂತರದ ಪಾಪವು ತಲೆಯ ಮೇಲಿದೆ. ಎಲ್ಲರಿಗಿಂತ ಹೆಚ್ಚಿನ ಪಾಪವು ಬ್ರಾಹ್ಮಣರದ್ದಾಗಿದೆ. ಅದರಲ್ಲಿಯೂ ನಂಬರ್ವಾರ್ ಇದೆ. ಯಾರು ಬಹಳ ಶ್ರೇಷ್ಠರಾಗುತ್ತಾರೆಯೋ ಅವರೂ ನೀಚರೂ ಆಗಿದ್ದಾರೆ. ಯಾರು ರಾಜಕುಮಾರನಾಗುತ್ತಾರೆಯೋ ಅವರೇ ಮತ್ತೆ ಭಿಕಾರಿಯೂ ಆಗಬೇಕಾಗಿದೆ ಅಂದಾಗ ನಾಟಕವನ್ನು ಬಹಳ ಚೆನ್ನಾಗಿ ಅರಿತುಕೊಳ್ಳಬೇಕು. ಯಾರು ಮೊದಲು ಬಂದಿದ್ದಾರೆಯೋ ಅವರೇ ಅಂತ್ಯದಲ್ಲಿ ಬರುತ್ತಾರೆ. ಯಾರು ಮೊದಲು ಪಾವನರಾಗುತ್ತಾರೆಯೋ ಅವರೇ ಮೊದಲು ಪತಿತರಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಇವರ ಅನೇಕ ಜನ್ಮಗಳ ಅಂತ್ಯದಲ್ಲಿ ಅದೂ ಸಹ ವಾನಪ್ರಸ್ಥ ಸ್ಥಿತಿಯಲ್ಲಿ ಬರುತ್ತೇನೆ. ಈ ಸಮಯದಲ್ಲಿ ಹಿರಿಯರು-ಕಿರಿಯರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ತಂದೆಗೆ ಸರ್ವರ ಸದ್ಗತಿ ದಾತ ಎಂದು ಗಾಯನವಿದೆ. ಸದ್ಗತಿಯಾಗುವುದೇ ಪುರುಷೋತ್ತಮ ಸಂಗಮದಲ್ಲಿ ಆದ್ದರಿಂದ ಈ ಪುರುಷೋತ್ತಮ ಸಂಗಮಯುಗವನ್ನು ನೆನಪಿಟ್ಟುಕೊಳ್ಳಬೇಕು. ಹೇಗೆ ಮನುಷ್ಯರಿಗೆ ಕಲಿಯುಗವು ನೆನಪಿದೆ, ಸಂಗಮಯುಗವು ನಿಮಗಷ್ಟೇ ನೆನಪಿದೆ. ನಿಮ್ಮಲ್ಲಿಯೂ ನಂಬರ್ವಾರ್ ಅನೇಕರಿಗೆ, ತಮ್ಮ ಉದ್ಯೋಗ-ವ್ಯವಹಾರವೇ ನೆನಪಿರುತ್ತದೆ. ಹೊರಗಿನಿಂದ ಬುದ್ಧಿಯೋಗವನ್ನು ತೆಗೆದಾಗ ಧಾರಣೆಯೂ ಆಗುತ್ತದೆ ಅರ್ಥಾತ್ ತಂದೆಯ ಕಡೆ ಮುಖವಿರಲಿ. ಅಂತ್ಯ ಕಾಲದಲ್ಲಿ ಯಾರು ಸ್ತ್ರೀ ಸ್ಮರಣೆ ಮಾಡಿದರು..... ಎಂದೂ ಸಹ ಒಂದು ಗಾದೆ ಮಾತಿದೆ. ಒಳ್ಳೊಳ್ಳೆಯ ಗೀತೆ ಮತ್ತು ಶ್ಲೋಕಗಳು ನಮ್ಮ ಜ್ಞಾನಕ್ಕೆ ಸಂಬಂಧಪಟ್ಟಿರುತ್ತದೆಯೋ ಅವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಹೇಗೆ ಛೀ ಛೀ ಪ್ರಪಂಚದಿಂದ ಹೋಗಲೇಬೇಕಾಗಿದೆ. ಎರಡನೆಯದಾಗಿ ನಯನಹೀನನಿಗೆ ದಾರಿ ತೋರಿಸು ಪ್ರಭು...... ಇಂತಹ ಗೀತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಇವನ್ನು ರಚಿಸಿರುವುದಂತೂ ಮನುಷ್ಯರೇ ಆದರೆ ಅವರಿಗೆ ಈ ಸಂಗಮಯುಗದ ಬಗ್ಗೆ ಗೊತ್ತೇ ಇಲ್ಲ. ಈ ಸಮಯದಲ್ಲಿ ಎಲ್ಲರೂ ಜ್ಞಾನದ ನೇತ್ರವಿಲ್ಲದೆ ಕುರುಡರಾಗಿದ್ದಾರೆ. ಯಾವಾಗ ಪರಮಾತ್ಮ ಬಂದರು ಆಗ ದಾರಿ ತೋರಿಸಿದರು. ಅಂದಮೇಲೆ ಕೇವಲ ಒಬ್ಬರಿಗೆ ತೋರಿಸುವುದಿಲ್ಲ. ಇದು ಅವರ ಶಿವಶಕ್ತಿ ಸೇನೆಯಾಗಿದೆ. ಈ ಸೇನೆಯು ಏನು ಮಾಡುತ್ತದೆ? ಶ್ರೀಮತದನುಸಾರ ಹೊಸ ಪ್ರಪಂಚದ ಸ್ಥಾಪನೆ. ನೀವೂ ಸಹ ರಾಜಯೋಗವನ್ನು ಕಲಿಯುತ್ತೀರಿ. ಇದನ್ನು ಭಗವಂತನ ವಿನಃ ಯಾರೂ ತಿಳಿಸಲು ಸಾಧ್ಯವಿಲ್ಲ. ಭಗವಂತ ನಿರಾಕಾರನಾಗಿದ್ದಾರೆ ಅವರಿಗೆ ತಮ್ಮ ಶರೀರವಿಲ್ಲ. ಉಳಿದಂತೆ ಎಲ್ಲರೂ ಶರೀರಧಾರಿಗಳಾಗಿದ್ದಾರೆ. ಸರ್ವ ಶ್ರೇಷ್ಠರು ಒಬ್ಬ ತಂದೆಯೇ ಆಗಿದ್ದಾರೆ, ಅವರೇ ನಿಮಗೆ ಓದಿಸುತ್ತಾರೆ. ಇದಂತೂ ನಿಮಗೆ ಗೊತ್ತಿದೆ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಇದ್ದಾರೆ ಆದ್ದರಿಂದ ನೀವು ಎಚ್ಚರಿಕೆ ನೀಡಬೇಕು. ದೊಡ್ಡ-ದೊಡ್ಡ ಪತ್ರಿಕೆಗಳಲ್ಲಿ ಹಾಕಬೇಕು. ಮನುಷ್ಯರು ಯಾವ ಯೋಗವನ್ನು ಕಲಿಸುತ್ತಾರೆಯೋ ಅದು ಹಠಯೋಗವಾಗಿದೆ. ರಾಜಯೋಗವನ್ನು ಒಬ್ಬ ಪರಮಪಿತ ಪರಮಾತ್ಮ ತಂದೆಯೇ ತಿಳಿಸುತ್ತಾರೆ, ಅದರಿಂದ ಮುಕ್ತಿ-ಜೀವನ್ಮುಕ್ತಿಯು ಸಿಗುತ್ತದೆ. ಹಠಯೋಗದಿಂದ ಎರಡೂ ಸಿಗುವುದಿಲ್ಲ, ಅದು ಹಠಯೋಗವಾಗಿದೆ, ಪರಂಪರೆಯಿಂದ ನಡೆದು ಬರುತ್ತದೆ, ಹಳೆಯದಾಗಿದೆ. ಈ ರಾಜಯೋಗವನ್ನು ಕೇವಲ ಸಂಗಮಯುಗದಲ್ಲಿಯೇ ತಂದೆಯು ಕಲಿಸುತ್ತಾರೆ. ತಂದೆಯು ತಿಳಿಸಿದ್ದಾರೆ - ಭಾಷಣ ಮಾಡುವಾಗ ಅದರ ಅಂಶಗಳನ್ನು ರಚಿಸಬೇಕು. ಆದರೆ ಹೀಗೆ ಮಾಡುವುದೇ ಇಲ್ಲ. ಶ್ರೀಮತದಂತೆ ನಡೆಯುವವರು ಬಹಳ ಕಡಿಮೆ. ಮೊದಲು ಭಾಷಣವನ್ನು ಬರೆದು ಪಕ್ಕಾ ಮಾಡಿಕೊಳ್ಳಿ ಆಗ ನೆನಪಿರುತ್ತದೆ. ನೀವಂತೂ ಸರಾಗವಾಗಿ ಭಾಷಣ ಮಾಡಬೇಕು, ಓದಿ ತಿಳಿಸುವುದಲ್ಲ. ವಿಚಾರ ಸಾಗರ ಮಂಥನ ಮಾಡುವ ಶಕ್ತಿಯು ಯಾರು ತಮ್ಮನ್ನು ಆತ್ಮನೆಂದು ತಿಳಿದು ಮಾತನಾಡುತ್ತಾರೆಯೋ ಅವರಲ್ಲಿ ಇರುತ್ತದೆ. ನಾವು ನಮ್ಮ ಸಹೋದರರಿಗೆ ತಿಳಿಸುತ್ತೇವೆ ಎಂದು ಮಾತನಾಡುತ್ತಾರೆಯೋ ಅವರಲ್ಲಿ ಇರುತ್ತದೆ. ನಾವು ನಮ್ಮ ಸಹೋದರರಿಗೆ ತಿಳಿಸುತ್ತೇವೆ ಎಂದು ತಿಳಿಯುವುದರಿಂದ ಶಕ್ತಿ ಬರುತ್ತದೆ. ಇದು ಉನ್ನತ ಗುರಿಯಾಗಿದೆಯಲ್ಲವೆ. ಪ್ರತಿಜ್ಞೆ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ. ನೀವು ಎಷ್ಟು ಶಕ್ತಿಶಾಲಿಗಳಾಗುತ್ತೀರೋ ಅಷ್ಟೇ ಮಾಯೆಯ ಯುದ್ಧವು ನಡೆಯುತ್ತದೆ. ಅಂಗಧ ಹಾಗೂ ಮಹಾವೀರನೂ ಶಕ್ತಿಶಾಲಿಯಾಗಿದ್ದರು ಆದ್ದರಿಂದಲೇ ರಾವಣನೂ ಸಹ ನಮ್ಮನ್ನು ಅಲುಗಾಡಿಸಿ ತೋರಿಸಲಿ ಎಂದು ಹೇಳಿದರು. ಅಂದರೆ ಸ್ಥೂಲ ಮಾತುಗಳಲ್ಲ ಶಾಸ್ತ್ರಗಳಲ್ಲಿ ದಂತ ಕಥೆಗಳಿವೆ. ಈ ಕಿವಿಗಳು ಪರಮಾತ್ಮ ತಂದೆಯ ಶ್ರೇಷ್ಠ ಜ್ಞಾನವನ್ನು ಕೇಳುವಂತಹವಾಗಿದ್ದವು. ಅವು ದಂತ ಕಥೆಗಳನ್ನು ಕೇಳಿ-ಕೇಳಿ ಕಲ್ಲಿನ ಸಮಾನವಾಗಿದೆ. ಮುಕ್ತಿ ಮಾರ್ಗದಲ್ಲಿ ತಲೆ ಬಾಗಿಸಿ-ಬಾಗಿಸಿ ಹಣೆಯನ್ನೂ ಸವೆಸಿದಿರಿ, ಹಣವನ್ನೂ ಕಳೆದುಕೊಂಡಿರಿ. ಏಣಿಯನ್ನು ಕೆಳಗಿಳಿಯುತ್ತಲೇ ಬಂದಿದ್ದೀರಿ, 84 ಜನ್ಮಗಳ ಕಥೆಯೂ ಇದೆಯಲ್ಲವೆ. ಯಾರೆಲ್ಲರೂ ಭಕ್ತಿ ಮಾಡಿದ್ದಾರೆ, ಅವರು ಕೆಳಗಿಳಿದಿದ್ದಾರೆ. ಈಗ ತಂದೆಯು ಮೇಲೇರುವುದನ್ನು ಕಲಿಸುತ್ತಾರೆ. ಈಗ ನಿಮ್ಮದು ಏರುವ ಕಲೆಯಾಗಿದೆ. ಒಂದು ವೇಳೆ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸುವುದಿಲ್ಲವೆಂದರೆ ಅವಶ್ಯವಾಗಿ ಕೆಳಗಿಳಿಯುತ್ತೀರಿ. ತಂದೆಯನ್ನು ನೆನಪು ಮಾಡುತ್ತೀರೆಂದರೆ ಮೇಲೇರುತ್ತೀರಿ ಬಹಳ ಪರಿಶ್ರಮವಿದೆ, ಆದರೆ ಮಕ್ಕಳು ಹುಡುಗಾಟಿಕೆ ಮಾಡುತ್ತಾರೆ. ವ್ಯವಹಾರದಲ್ಲಿ ಹೋಗಿ ತಂದೆ ಮತ್ತು ಜ್ಞಾನವನ್ನೇ ಮರೆತು ಹೋಗುತ್ತಾರೆ. ಮಾಯೆಯು ಬಿರುಗಾಳಿಯನ್ನು ತರುತ್ತದೆ - ಇವರು ಹೀಗಿದ್ದಾರೆ, ಹೀಗೆ ಮಾಡುತ್ತಾರೆ, ಈ ಬ್ರಾಹ್ಮಣಿಯು ಹೀಗಿದ್ದಾರೆ, ಇವರಲ್ಲಿ ಈ ಅವಗುಣವಿದೆ ಎಂದು ನೋಡುತ್ತಾ ಹೋಗುತ್ತಾರೆ. ಆದರೆ ಇದರಲ್ಲಿ ನಿಮ್ಮದೇನು ಹೋಗುತ್ತದೆ. ಸರ್ವಗುಣ ಸಂಪನ್ನರಂತೂ ಯಾರೂ ಆಗಿಲ್ಲ. ಯಾರ ಅವಗುಣವನ್ನೂ ನೋಡದೆ ಗುಣ ಗ್ರಹಣ ಮಾಡಿ, ಅವಗುಣ ನೋಡುವುದರಿಂದ ಮುಖವನ್ನು ತಿರುಗಿಸಿಕೊಳ್ಳಿ. ಮುರುಳಿಯಂತೂ ಸಿಗುತ್ತದೆ ಅದನ್ನು ಕೇಳುತ್ತಾ ಧಾರಣೆ ಮಾಡುತ್ತಾ ಇರಿ. ಬುದ್ಧಿಯಿಂದ ತಿಳಿಯಬೇಕು - ತಂದೆಯ ಈ ಮಾತು ಸಂಪೂರ್ಣ ಸರಿಯಾಗಿದೆ, ಯಾವ ಮಾತು ಸರಿಯೇನಿಸುವುದಿಲ್ಲವೋ ಅದನ್ನು ಬಿಟ್ಟು ಬಿಡಬೇಕು. ವಿದ್ಯೆಯೊಂದಿಗೆ ಎಂದೂ ಮುನಿಸಿಕೊಳ್ಳಬಾರದು. ಬ್ರಾಹ್ಮಣಿಯರೊಂದಿಗೆ ಅಥವಾ ವಿದ್ಯೆಯೊಂದಿಗೆ ಮುನಿಸಿಕೊಂಡರೆ ತಂದೆಯೊಂದಿಗೆ ಮುನಿಸಿಕೊಳ್ಳುವುದಾಗಿದೆ. ಹೀಗೆ ಅನೇಕ ಮಕ್ಕಳಿದ್ದಾರೆ ಮತ್ತೆ ಸೇವಾಕೇಂದ್ರಕ್ಕೆ ಬರುವುದಿಲ್ಲ. ಭಲೇ ಯಾರೇ ಹೇಗೆ ಇರಲಿ ನಿಮ್ಮ ಕೆಲಸ ಮುರುಳಿಯೊಂದಿಗೆ ಇದೆ. ಮುರುಳಿಯಿಂದ ಒಳ್ಳೊಳ್ಳೆಯ ಅಂಶಗಳನ್ನು ಧಾರಣೆ ಮಾಡಬೇಕು. ಯಾರೊಂದಿಗೇ ಮಾತನಾಡಲು ಇಷ್ಟವಾಗದಿದ್ದರೆ ಶಾಂತವಾಗಿದ್ದು ಮುರುಳಿಯನ್ನು ಕೇಳಿ ಹೊರಟು ಹೋಗಬೇಕು. ನಾವು ಇಲ್ಲಿಗೆ ಬರುವುದಿಲ್ಲವೆಂದು ಮುನಿಸಿಕೊಳ್ಳಬಾರದು. ನಂಬರವಾರ೦ತೂ ಇರುತ್ತಾರೆ. ಮುಂಜಾನೆ ನೀವು ಎದ್ದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಾಗಿದೆ. ಏಕೆಂದರೆ ತಂದೆಯು ಬಂದು ಸರ್ಚ್ಲೈಟ್ ಕೊಡುತ್ತಾರೆ. ಬಾಬಾರವರು ತಮ್ಮ ಅನುಭವವನ್ನು ತಿಳಿಸುತ್ತಾರೆ - ನೆನಪಿನಲ್ಲಿ ಕುಳಿತುಕೊಂಡಾಗ ಯಾರು ಅನನ್ಯ ಮಕ್ಕಳಿದ್ದಾರೆಯೋ ಅವರು ಮೊದಲು ನೆನಪಿಗೆ ಬರುತ್ತಾರೆ. ಭಲೇ ವಿದೇಶದಲ್ಲಿರಬಹುದು, ಕಲ್ಕತ್ತಾದಲ್ಲಿರಬಹುದು ಅಂದರೆ ಮೊದಲು ಅನನ್ಯ ಮಕ್ಕಳನ್ನು ನೆನಪು ಮಾಡಿ ಸರ್ಚ್ಲೈಟ್ ಕೊಡುತ್ತಾರೆ. ಮಕ್ಕಳಂತೂ ಭಲೇ ಇಲ್ಲಿಯೂ ಕುಳಿತಿದ್ದಾರೆ. ಆದರೆ ಯಾರು ಸರ್ವೀಸ್ ಮಾಡುತ್ತಾರೆಯೋ ಅವರನ್ನು ತಂದೆಯು ನೆನಪು ಮಾಡುತ್ತಾರೆ. ಹೇಗೆ ಒಳ್ಳೆಯ ಮಕ್ಕಳು ಶರೀರವನ್ನು ಬಿಡುತ್ತಾರೆಂದರೆ ಬಹಳ ಸರ್ವೀಸ್ ಮಾಡಿ ಹೋದರೆಂದು ಅವರ ಆತ್ಮವನ್ನು ನೆನಪು ಮಾಡುತ್ತಾರೆ. ಅಂತಹವರು ಅವಶ್ಯವಾಗಿ ಇಲ್ಲಿಯೇ ಹತ್ತಿರದ ಮನೆಯಲ್ಲಿರುತ್ತಾರೆ. ಅಂದಾಗ ಅವರನ್ನೂ ಸಹ ತಂದೆಯು ನೆನಪು ಮಾಡಿ ಸಕಾಶ ಕೊಡುತ್ತಾರೆ, ಎಲ್ಲರೂ ತಂದೆಯ ಮಕ್ಕಳೇ ಆಗಿದ್ದೀರಿ ಆದರೆ ಯಾರು-ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಂದು ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಸರ್ಚ್ಲೈಟ್ ಕೊಡಿ ಎಂದು ಬಾಬಾ ಹೇಳಿದರೆ ಕೊಡುತ್ತಾರೆ. ಎರಡು ಇಂಜಿನ್ಗಳೂ ಇದೆಯಲ್ಲವೆ! ಈ ಬ್ರಹ್ಮಾ ತಂದೆಯೂ ಸಹ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದರೆ ಅವಶ್ಯವಾಗಿ ಇವರಲ್ಲಿ ಶಕ್ತಿಯಿರುತ್ತದೆ. ಭಲೇ ಬಾಬಾ ಹೇಳುತ್ತಾರೆ - ಮಕ್ಕಳೇ, ಇದನ್ನೇ ತಿಳಿದುಕೊಳ್ಳಿ - ಶಿವ ತಂದೆಯು ಓದಿಸುತ್ತಾರೆ ಅಂದಾಗ ಅವರ ನೆನಪೇ ಇರಬೇಕು. ಆದರೆ ಇದಂತೂ ನಿಮಗೆ ಗೊತ್ತಿದೆ - ಎರಡು ಬತ್ತಿಗಳಿವೆ ಮತ್ತ್ಯಾರಲ್ಲಿಯೂ ಎರಡು ಬತ್ತಿಗಳಿರುವುದಿಲ್ಲ. ಆದ್ದರಿಂದ ಇಲ್ಲಿ ಎರಡು ಬತ್ತಿಗಳ ಸಮ್ಮುಖದಲ್ಲಿ ಬರುತ್ತೀರೆಂದರೆ ಬಹಳ ಚೆನ್ನಾಗಿ ರಿಫ್ರೆಷ್ ಆಗುತ್ತೀರಿ. ಬೆಳಗಿನ ಸಮಯವು ಬಹಳ ಚೆನ್ನಾಗಿದೆ, ಸ್ನಾನ ಮಾಡಿ ಮಾಳಿಗೆಯ ಮೇಲೆ ಏಕಾಂತದಲ್ಲಿ ಹೋಗಿ ಕುಳಿತುಕೊಳ್ಳಬೇಕು. ಆದ್ದರಿಂದಲೇ ತಂದೆಯು ದೊಡ್ಡ-ದೊಡ್ಡ ಮಾಳಿಗೆಗಳನ್ನು ಮಾಡಿಸುತ್ತಾರೆ. ಪಾದ್ರಿಗಳೂ ಸಹ ಶಾಂತಿಯಲ್ಲಿ ಹೋಗುತ್ತಾರೆ. ಅವಶ್ಯವಾಗಿ ಕ್ರಿಸ್ತನನ್ನು ನೆನಪು ಮಾಡುತ್ತಿರುತ್ತಾರೆ ಭಗವಂತನನ್ನಂತೂ ತಿಳಿದುಕೊಂಡಿಲ್ಲ. ಒಂದು ವೇಳೆ ಭಗವಂತನನ್ನು ನೆನಪು ಮಾಡುವಂತಿದ್ದರೆ ಶಿವಲಿಂಗವೇ ಬುದ್ಧಿಯಲ್ಲಿ ಬರುತ್ತಿತ್ತು. ತಮ್ಮ ಮಸ್ತಿಯಲ್ಲಿ ಹೊರಟು ಹೋಗುತ್ತಾರೆ ಅಂದಾಗ ಅವರಿಂದ ಗುಣಗಳನ್ನು ಆರಿಸಿಕೊಳ್ಳಬೇಕು. ಹೇಗೆ ದತ್ತಾತ್ರೇಯನೂ ಸಹ ಎಲ್ಲರಿಂದ ಗುಣಗಳನ್ನು ಆರಿಸಿಕೊಳ್ಳುತ್ತಿದ್ದರೆಂದು ಹೇಳುತ್ತಾರೆ. ನೀವು ಮಕ್ಕಳೂ ಸಹ ನಂಬರ್ವಾರ್ ದತ್ತಾತ್ರೇಯರಾಗಿದ್ದೀರಿ. ಇಲ್ಲಿ ಏಕಾಂತವು ಬಹಳ ಚೆನ್ನಾಗಿದೆ. ಎಷ್ಟು ಬೇಕಾದರೂ ಸಂಪಾದನೆ ಮಾಡಿಕೊಳ್ಳಬಹುದು. ಹೊರಗಡೆಯಂತೂ ಉದ್ಯೋಗ-ವ್ಯವಹಾರಗಳ ನೆನಪೇ ಇರುತ್ತದೆ. 4 ಗಂಟೆಯ ಸಮಯವೂ ಚೆನ್ನಾಗಿದೆ. ಆ ಸಮಯದಲ್ಲಿ ಹೊರಗಡೆ ಹೋಗುವ ಅವಶ್ಯಕತೆಯಿರುವುದಿಲ್ಲ. ಮನೆಯಲ್ಲಿಯೇ ಕುಳಿತಿರುತ್ತೀರಿ, ಕಾವಲುಗಾರನೂ ಇದ್ದಾರೆ. ಯಜ್ಞದಲ್ಲಿ ಕಾವಲುಗಾರನನ್ನು ಇಡಬೇಕಾಗುತ್ತದೆ. ಯಜ್ಞದ ಪ್ರತಿಯೊಂದು ವಸ್ತುವಿನ ಸಂಭಾಲನೆ ಮಾಡಬೇಕಾಗುತ್ತದೆ. ಏಕೆಂದರೆ ಯಜ್ಞದ ಒಂದೊಂದು ವಸ್ತುವೂ ಸಹ ಅತ್ಯಮೂಲ್ಯವಾಗಿದೆ ಆದ್ದರಿಂದ ಸುರಕ್ಷಿತವಾಗಿಡಬೇಕು. ಇಲ್ಲಿಗೆ ಯಾರೂ ಬರುವುದಿಲ್ಲ ಏಕೆಂದರೆ ಇಲ್ಲಿ ಯಾವುದೇ ಆಭರಣ ಮೊದಲಾದವುಗಳಿಲ್ಲ, ಇದು ಮಂದಿರವೂ ಅಲ್ಲ ಎಂದು ತಿಳಿಯುತ್ತಾರೆ. ಇತ್ತೀಚೆಗಂತೂ ಎಲ್ಲಾ ಕಡೆಯೂ ಕಳ್ಳತನವಾಗುತ್ತದೆ. ವಿದೇಶದಲ್ಲಿಯೂ ಸಹ ಹಳೆಯ ವಸ್ತುಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಈಗಿನ ಸಮಯವು ಬಹಳ ಕೊಳಕಾಗಿದೆ, ಕಾಮ ಮಹಾಶತ್ರುವಾಗಿದೆ ಅದು ಎಲ್ಲವನ್ನೂ ಮರೆಸಿ ಬಿಡುತ್ತದೆ. ಅಂದಾಗ ನಿಮ್ಮದು ಮುಂಜಾನೆ ಸದಾ ಆರೋಗ್ಯವಂತರಾಗುವ ತರಗತಿಯಿರುತ್ತದೆ. ಮತ್ತೆ ಇದು (ಜ್ಞಾನದ) ಸದಾ ಐಶ್ವರ್ಯವಂತರಾಗುವ ತರಗತಿಯಾಗಿದೆ. ತಂದೆಯನ್ನು ನೆನಪು ಮಾಡಬೇಕು, ವಿಚಾರ ಸಾಗರ ಮಂಥನವನ್ನೂ ಮಾಡಬೇಕು. ತಂದೆಯನ್ನು ನೆನಪು ಮಾಡುತ್ತೀರೆಂದರೆ ಆಸ್ತಿಯೂ ನೆನಪಿಗೆ ಬರುತ್ತದೆ. ಹೇಗೆ ತಂದೆಯು ಬೀಜ ರೂಪನಾಗಿದ್ದಾರೆ, ವೃಕ್ಷದ ಆದಿ-ಮಧ್ಯ-ಅಂತ್ಯದ ತಿಳುವಳಿಕೆ ಅವರಿಗಿದೆ. ಅಂದಮೇಲೆ ನಿಮ್ಮ ವ್ಯಾಪಾರವೂ ಸಹ ಇದೇ ಆಗಿದೆ. ಬೀಜವನ್ನು ನೆನಪು ಮಾಡುವುದರಿಂದ ಪವಿತ್ರರಾಗುತ್ತೀರಿ, ಚಕ್ರವನ್ನು ನೆನಪು ಮಾಡಿದರೆ ಚಕ್ರವರ್ತಿ ರಾಜರಾಗುತ್ತೀರಿ ಅರ್ಥಾತ್ ಹಣ ಸಿಗುತ್ತದೆ. ರಾಜ ವಿಕ್ರಮ ಮತ್ತು ರಾಜಾ ವಿಕರ್ಮಾಜೀತ್ ಸಂವತ್ಸರ ಎರಡೂ ಸಂವತ್ಸರಗಳನ್ನು ಸೇರಿಸಿ ಬಿಟ್ಟಿದ್ದಾರೆ. ರಾವಣನು ಬಂದಿದ್ದರಿಂದ ವಿಕ್ರಮ ಸಂವತ್ಸರವು ಪ್ರಾರಂಭವಾಯಿತು, ದಿನಾಂಕವು ಬದಲಾಗಿ ಬಿಟ್ಟಿತು. ಅದು ಒಂದರಿಂದ 2500 ವರ್ಷಗಳವರೆಗೆ ನಡೆಯುತ್ತದೆ ನಂತರ ವಿಕ್ರಮ ಸಂವತ್ಸರವು 2500ರಿಂದ 5000 ವರ್ಷಗಳವರೆಗೆ ನಡೆಯುತ್ತದೆ. ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಗೊತ್ತೇ ಇಲ್ಲ. ತಮ್ಮ ಮೂಲ ಧರ್ಮವನ್ನೇ ಮರೆತು ಅಧರ್ಮಿಗಳಾಗಿರುವಂತದ್ದು ಇದೊಂದೇ ಧರ್ಮವಾಗಿದೆ. ಧರ್ಮ ಸ್ಥಾಪಕರನ್ನೂ ಮರೆತಿದ್ದಾರೆ. ಆರ್ಯ ಸಮಾಜವು ಯಾವಾಗ ಆರಂಭವಾಯಿತೆಂಬುದನ್ನು ನೀವು ತಿಳಿಸಿಕೊಡಬಹುದು. ಆರ್ಯರು (ಸುಧಾರಣೆಯಾಗಿರುವವರು) ಸತ್ಯಯುಗದಲ್ಲಿದ್ದರು ಈಗ ಅನಾರ್ಯರಿದ್ದಾರೆ. ತಂದೆಯು ಬಂದು ನಿಮ್ಮನ್ನು ಸುಧಾರಣೆ ಮಾಡುತ್ತಾರೆ. ಚಕ್ರವಿದೆ ನಿಮ್ಮ ಬುದ್ಧಿಯಲ್ಲಿ ಪೂರ್ಣ ಚಕ್ರವಿದೆ. ಯಾರು ಒಳ್ಳೆಯ ಪುರುಷಾರ್ಥಿಗಳಿದ್ದಾರೆಯೋ ಅವರು ತಾವೂ ತಿಳಿಯುತ್ತಾರೆ, ಅನ್ಯರಿಂದಲೂ ಪುರುಷಾರ್ಥ ಮಾಡಿಸುತ್ತಾರೆ. ತಂದೆಯು ಬಡವರ ಬಂಧುವಾಗಿದಾರೆ ಅಂದಮೇಲೆ ಗ್ರಾಮಸ್ಥರಿಗೆ ಸಂದೇಶ ಕೊಡಬೇಕಾಗಿದೆ. ಇದಕ್ಕೆ 6 ಚಿತ್ರಗಳೇ ಸಾಕು. 84ರ ಚಕ್ರದ ಚಿತ್ರವು ಬಹಳ ಚೆನ್ನಾಗಿದೆ. ಇದರ ಬಗ್ಗೆ ಚೆನ್ನಾಗಿ ತಿಳಿಸಿ ಆದರೆ ಮಾಯೆಯು ಇಷ್ಟು ಶಕ್ತಿಶಾಲಿಯಾಗಿದೆ, ಅದು ಎಲ್ಲವನ್ನೂ ಮರೆಸಿ ಬಿಡುತ್ತದೆ. ಇಲ್ಲಿ ಎರಡೂ ದೀಪಗಳೂ ಒಟ್ಟಿಗೆ ಇದ್ದಾರೆ. ಒಂದು ತಂದೆಯದು, ಇನ್ನೊಂದು ಇವರದು (ಬ್ರಹ್ಮಾ) ಇಬ್ಬರೂ ಶಕ್ತಿಶಾಲಿಯಾಗಿದ್ದಾರೆ. ಆದರೆ ಈ ಬ್ರಹ್ಮಾ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಒಂದೇ ಶಕ್ತಿಶಾಲಿ ದೀಪ (ಶಿವಬಾಬಾ) ವನ್ನು ಹಿಡಿದುಕೊಳ್ಳಿ. ಎಲ್ಲಾ ಮಕ್ಕಳು ಬ್ರಹ್ಮಾ ತಂದೆಯು ಇರುವಲ್ಲಿಗೆ ಓಡುತ್ತಾರೆ. ಡಬಲ್ ದೀಪಗಳಿವೆಯೆಂದು ತಿಳಿಯುತ್ತಾರೆ. ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ - ನಿಮ್ಮೊಂದಿಗೇ ಕೇಳುವೆನು, ನಿಮ್ಮೊಂದಿಗೇ ಮಾತನಾಡುವೆನು... ಎಂದು ಗಾಯನವಿದೆ. ಆದರೆ ಇಲ್ಲಿ ಬಂದು ಕುಳಿತು ಬಿಡಬೇಕೆಂದಲ್ಲ. 7 ದಿನಗಳ ಕಾಲ ಕೇಳಿದರೆ ಸಾಕು ಒಂದು ವೇಳೆ ಎಲ್ಲರನ್ನೂ ಇಲ್ಲಿ ಕೂರಿಸಿದರೆ ಬಹಳ ಆಗಿ ಬಿಡುತ್ತಾರೆ. ನಾಟಕದನುಸಾರ ಇದೆಲ್ಲವೂ ನಡೆಯುತ್ತಿರುತ್ತದೆ ಆದರೆ ನಿಮಗೆ ಬಹಳ ಆಂತರಿಕ ಖುಷಿಯಿರಬೇಕು. ಯಾರು ತನ್ನ ಸಮಾನ ಮಾಡಿಕೊಳ್ಳುತ್ತಾರೆಯೋ ಅವರಿಗೆ ಆ ಖುಷಿಯಿರುತ್ತದೆ, ಪ್ರಜೆಗಳನ್ನೂ ಮಾಡಿಕೊಂಡಾಗಲೇ ರಾಜರಾಗಲು ಸಾಧ್ಯವಲ್ಲವೆ! ಪಾಸ್ ಪೋರ್ಟ್ ಬೇಕಲ್ಲವೆ. ತಂದೆಯನ್ನು ಯಾರಾದರೂ ಕೇಳಿದರೆ ತಂದೆಯು ತಕ್ಷಣ ಹೇಳಿ ಬಿಡುತ್ತಾರೆ - ನನ್ನಲ್ಲಿ ಯಾವ ಅವಗುಣವಿದೆ ಎಂದು ತಮ್ಮನ್ನು ನೋಡಿಕೊಳ್ಳಿ. ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಯಜ್ಞದಿಂದ ಏನು ಸಿಗುತ್ತದೆಯೋ ಅದರಲ್ಲಿ ಖುಷಿಯಾಗಿರಬೇಕು. ಯಜ್ಞದ ಭೋಜನದ ಪ್ರತಿ ಬಹಳ ಪ್ರೀತಿಯಿರಬೇಕು. ಸನ್ಯಾಸಿಗಳು ತಟ್ಟೆಯನ್ನೇ ತೊಳೆದು ಕುಡಿಯುತ್ತಾರೆ, ಏಕೆಂದರೆ ಅವರಿಗೆ ಭೋಜನದ ಮಹತ್ವಿಕೆಯಿದೆ. ಕೊನೆಗೆ ಇಂತಹ ಸಮಯವೂ ಬರಲಿದೆ - ಆಹಾರ ಧಾನ್ಯಗಳು ಸಿಗುವುದಿಲ್ಲ. ಆಗ ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ ಆಗಲೇ ಉತ್ತೀರ್ಣರಾಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಯಾರಲ್ಲಿಯಾದರೂ ಯಾವುದೇ ಅವಗುಣ ಕಾಣಿಸಿದರೆ ತಮ್ಮ ಮುಖವನ್ನು ತಿರುಗಿಸಿಕೊಳ್ಳಬೇಕು. ವಿದ್ಯೆಯೊಂದಿಗೆ ಎಂದೂ ಮುನಿಸಿಕೊಳ್ಳಬಾರದು. ದತ್ತಾತ್ರೇಯನ ರೀತಿ ಎಲ್ಲರಿಂದ ಗುಣಗಳನ್ನು ಆರಿಸಿಕೊಳ್ಳಬೇಕು.

2. ಹೊರಗಿನ ಪ್ರಪಂಚದಿಂದ ಬುದ್ಧಿಯನ್ನು ತೆಗೆದು ಅಂತರ್ಮುಖಿಯಾಗುವ ಅಭ್ಯಾಸ ಮಾಡಬೇಕು. ಉದ್ಯೋಗ-ವ್ಯವಹಾರಗಳಲ್ಲಿರುತ್ತಾ ಆತ್ಮಾಭಿಮಾನಿಯಾಗಿರಬೇಕು. ಹೆಚ್ಚಿನ ಮಾತುಕತೆಯಲ್ಲಿ ಬರಬಾರದು.


ವರದಾನ:
ಸುಖ ಸ್ವರೂಪರಾಗಿ ಎಲ್ಲಾ ಆತ್ಮರಿಗೆ ಸುಖವನ್ನು ಕೊಡುವಂತಹ ಮಾಸ್ಟರ್ ದಾತ ಭವ.

ಯಾವ ಮಕ್ಕಳು ಸದಾ ಯಥಾರ್ಥ ಕರ್ಮ ಮಾಡುತ್ತಾರೆ ಅವರಿಗೆ ಆ ಕರ್ಮದ ಪ್ರತ್ಯಕ್ಷ ಫಲ ಖುಷಿ ಮತ್ತು ಶಕ್ತಿ ಸಿಗುವುದು. ಅವರ ಹೃದಯ ಸದಾ ಖುಷಿಯಾಗಿರುವುದು, ಅವರಿಗೆ ಸಂಕಲ್ಪ ಮಾತ್ರವೂ ಸಹಾ ದುಃಖದ ಅಲೆ ಬರಲು ಸಾಧ್ಯವಿಲ್ಲ. ಸಂಗಮಯುಗದ ಬ್ರಾಹ್ಮಣ ಅರ್ಥಾತ್ ದುಃಖದ ಹೆಸರು ಗುರುತೂ ಇರುವುದಿಲ್ಲ. ಏಕೆಂದರೆ ಸುಖದಾತನ ಮಕ್ಕಳಾಗಿದ್ದಾರೆ. ಇಂತಹ ಸುಖದಾತನ ಮಕ್ಕಳು ಸ್ವಯಂ ಸಹಾ ಮಾಸ್ಟರ್ ಸುಖದಾತ ಆಗಿರುತ್ತಾರೆ. ಅವರು ಎಲ್ಲಾ ಆತ್ಮಗಳಿಗೂ ಸದಾ ಸುಖವನ್ನೇ ಕೊಡುತ್ತಾರೆ. ಅವರು ಎಂದೂ ದುಃಖ ಕೊಡುವುದೂ ಇಲ್ಲ ದುಃಖ ತಗೆದುಕೊಳ್ಳುವುದೂ ಇಲ್ಲ.

ಸ್ಲೋಗನ್:
ಮಾಸ್ಟರ್ ದಾತಾ ಆಗಿ ಸಹಯೋಗ, ಸ್ನೇಹ ಮತ್ತು ಸಹಾನುಭೂತಿ ಕೊಡಿ - ಇದೇ ದಯಾಹೃದಯಿ ಆತ್ಮದ ನಿಶಾನಿಯಾಗಿದೆ.