13.03.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನಿಮ್ಮ ದೋಣಿಯನ್ನು ಪಾರು ಮಾಡಲು ಅಂಬಿಗನು ಬಂದಿದ್ದಾರೆ, ನೀವು ತಂದೆಯೊಂದಿಗೆ ಸತ್ಯವಾಗಿರಿ ಆಗ ಸತ್ಯದ ದೋಣಿಯು ಅಲುಗಾಡುವುದು, ಮೇಲೆ-ಕೆಳಗಾಗುವುದು ಆದರೆ ಮುಳುಗಲು ಸಾಧ್ಯವಿಲ್ಲ

ಪ್ರಶ್ನೆ:
ತಂದೆಯ ನೆನಪು ಮಕ್ಕಳಿಗೆ ಯಥಾರ್ಥವಾಗಿ ಇಲ್ಲದೇ ಇರಲು ಮುಖ್ಯವಾದ ಕಾರಣವೇನು?

ಉತ್ತರ:
ಸಾಕಾರದಲ್ಲಿ ಬರುತ್ತಾ-ಬರುತ್ತಾ ನಾವಾತ್ಮಗಳು ನಿರಾಕಾರಿಯಾಗಿದ್ದೇವೆ ಮತ್ತು ನಮ್ಮ ತಂದೆಯು ನಿರಾಕಾರನಾಗಿದ್ದಾರೆಂಬುದನ್ನು ಮರೆತು ಹೋಗಿದ್ದೀರಿ. ಸಾಕಾರಿಯಾಗಿರುವ ಕಾರಣ ಸಾಕಾರದ ನೆನಪು ಸಹಜವಾಗಿ ಬಂದು ಬಿಡುತ್ತದೆ. ದೇಹೀ-ಅಭಿಮಾನಿಯಾಗಿ ತಮ್ಮನ್ನು ಬಿಂದುವೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ.

ಓಂ ಶಾಂತಿ.
ಶಿವ ಭಗವಾನುವಾಚ. ಇವರ ಹೆಸರಂತೂ ಶಿವನಲ್ಲ ಅಲ್ಲವೆ, ಇವರ ಹೆಸರು ಬ್ರಹ್ಮಾನೆಂದಾಗಿದೆ ಮತ್ತು ಇವರ ಮೂಲಕ ಶಿವನು ಮಾತನಾಡುತ್ತಾರೆ. ಇದನ್ನಂತೂ ಅನೇಕ ಬಾರಿ ತಿಳಿಸಲಾಗಿದೆ - ಯಾವುದೇ ಮನುಷ್ಯ ಹಾಗೂ ದೇವತೆಗಳಿಗೆ ಅಥವಾ ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಯಾರಿಗೆ ಆಕಾರ ಮತ್ತು ಸಾಕಾರ ಚಿತ್ರ (ಶರೀರ) ವಿದೆಯೋ ಅವರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಬೇಹದ್ದಿನ ತಂದೆಗೇ ಭಗವಂತನೆಂದು ಹೇಳಲಾಗುತ್ತದೆ. ಭಗವಂತ ಯಾರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನೇತಿ-ನೇತಿ ಅರ್ಥಾತ್ ನಮಗೂ ಗೊತ್ತಿಲ್ಲವೆಂದು ಹೇಳುತ್ತಾರೆ. ನಿಮ್ಮಲ್ಲಿಯೂ ಸಹ ಕೆಲವರೇ ಯಥಾರ್ಥ ರೀತಿಯಿಂದ ತಿಳಿದುಕೊಂಡಿದ್ದಾರೆ. ಹೇ ಭಗವಂತ ಎಂದು ಆತ್ಮ ಹೇಳುತ್ತದೆ. ಆತ್ಮವು ಬಿಂದುವಾಗಿದೆ. ಅಂದಮೇಲೆ ತಂದೆಯೂ ಬಿಂದುವೇ ಆಗಿರಬೇಕು. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ತಂದೆಯ ಬಳಿ 30-35 ವರ್ಷಗಳ ಮಕ್ಕಳೂ ಇದ್ದಾರೆ. ನಾವಾತ್ಮಗಳು ಹೇಗೆ ಬಿಂದುಗಳಾಗಿದ್ದೇವೆ ಎಂಬುದನ್ನೂ ತಿಳಿದುಕೊಂಡಿಲ್ಲ. ಕೆಲವರಂತೂ ಬಹಳ ಚೆನ್ನಾಗಿ ಅರಿತುಕೊಳ್ಳುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ. ಬೇಹದ್ದಿನ ತಂದೆಯು ಸತ್ಯ ವಜ್ರವಾಗಿದ್ದಾರೆ. ವಜ್ರವನ್ನು ಬಹಳ ಒಳ್ಳೆಯ ಡಬ್ಬಿಯಲ್ಲಿ ಹಾಕಿಡುತ್ತಾರೆ. ಯಾರ ಬಳಿಯಾದರೂ ಒಳ್ಳೆಯ ವಜ್ರಗಳಿದ್ದರೆ ಅವನ್ನು ತೋರಿಸಬೇಕಾದರೆ ಚಿನ್ನ ಅಥವಾ ಬೆಳ್ಳಿಯ ಡಬ್ಬಿಯಲ್ಲಿ ಹಾಕಿಯೇ ತೋರಿಸುತ್ತಾರೆ. ವಜ್ರವು ವಜ್ರದ ವ್ಯಾಪಾರಿಗೇ ಗೊತ್ತು ಮತ್ತ್ಯಾರಿಗೂ ಗೊತ್ತಿಲ್ಲ. ನಕಲಿ ವಜ್ರಗಳನ್ನು ತೋರಿಸಿದರೂ ಸಹ ಯಾರಿಗೂ ಅರ್ಥವಾಗುವುದಿಲ್ಲ. ಹೀಗೆ ಅನೇಕರು ಮೋಸ ಹೋಗುತ್ತಾರೆ ಅಂದಾಗ ಈಗ ಸತ್ಯ ತಂದೆಯು ಬಂದಿದ್ದಾರೆ. ಆದರೆ ಇಲ್ಲಿ ಅಸತ್ಯವು ಈ ರೀತಿಯಿದೆ, ಮನುಷ್ಯರಿಗೆ ಅರ್ಥವಾಗುವುದೇ ಇಲ್ಲ. ಸತ್ಯದ ದೋಣಿಯು ಅಲುಗಿತು, ಏರುಪೇರಾಯಿತು ಆದರೆ ಮುಳುಗಲಿಲ್ಲವೆಂದು ಗಾಯನವಿದೆ. ಅಸತ್ಯ ದೋಣಿಯು ಅಲುಗಾಡುವುದಿಲ್ಲ, ಆದರೆ ಸತ್ಯ ದೋಣಿಯನ್ನು ಎಷ್ಟೊಂದು ಅಲುಗಾಡಿಸುವ ಪ್ರಯತ್ನ ಮಾಡುತ್ತಾರೆ. ಇದೇ ದೋಣಿಯಲ್ಲಿ ಕುಳಿತಿರುವವರೂ ಸಹ ಅದನ್ನು ಅಲುಗಾಡಿಸುವ ಪ್ರಯತ್ನ ಪಡುತ್ತಾರೆ. ವಿರೋಧಿಗಳೆಂದು ಗಾಯನವಿದೆಯಲ್ಲವೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಅಂಬಿಗನಾಗಿ ಬಂದಿದ್ದಾರೆ. ಹೂದೋಟದ ಮಾಲೀಕನೂ ಆಗಿದ್ದಾರೆ, ತಂದೆಯು ತಿಳಿಸುತ್ತಾರೆ - ಇದು ಮುಳ್ಳಿನ ಕಾಡಾಗಿದೆ. ಎಲ್ಲರೂ ಪತಿತರಾಗಿದ್ದಾರೆ, ಎಷ್ಟೊಂದು ಅಸತ್ಯವಿದೆ! ಸತ್ಯ ತಂದೆಯನ್ನು ವಿರಳ ಕೆಲವರೇ ಅರಿತುಕೊಂಡಿದ್ದಾರೆ. ಇಲ್ಲಿದ್ದವರೂ ಸಹ ಪೂರ್ಣ ಅರಿತುಕೊಂಡಿಲ್ಲ, ಪೂರ್ಣ ಪರಿಚಯವಿಲ್ಲ ಏಕೆಂದರೆ ಗುಪ್ತವಾಗಿದ್ದಾರಲ್ಲವೆ. ಭಗವಂತನನ್ನು ಎಲ್ಲರೂ ನೆನಪು ಮಾಡುತ್ತಾರೆ. ಅವರು ನಿರಾಕಾರನಾಗಿದ್ದಾರೆ, ಪರಮಧಾಮದಲ್ಲಿರುತ್ತಾರೆಂಬುದನ್ನೂ ಸಹ ಅರಿತುಕೊಂಡಿರುತ್ತಾರೆ ಆದರೆ ನಾವಾತ್ಮಗಳೂ ನಿರಾಕಾರಿಯಾಗಿದ್ದೇವೆಂದು ತಿಳಿದುಕೊಂಡಿಲ್ಲ. ಸಾಕಾರದಲ್ಲಿ ಕುಳಿತುಕೊಳ್ಳುತ್ತಾ ಅದನ್ನು ಮರೆತು ಹೋಗಿದ್ದಾರೆ. ಸಾಕಾರದಲ್ಲಿರುತ್ತಾ-ಇರುತ್ತಾ ಸಾಕಾರವೇ ನೆನಪಿಗೆ ಬಂದು ಬಿಡುತ್ತದೆ. ನೀವು ಮಕ್ಕಳು ಈಗ ದೇಹೀ-ಅಭಿಮಾನಿಯಾಗುತ್ತೀರಿ. ಭಗವಂತನಿಗೆ ಪರಮಪಿತ ಎಂದು ಕರೆಯಲಾಗುತ್ತದೆ. ಇದನ್ನು ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ಪರಮಪಿತ ಎಂದರೆ ಅತಿ ದೂರಕ್ಕಿಂತ ದೂರವಿರುವಂತಹ ಪರಮ ಆತ್ಮನಾಗಿದ್ದಾರೆ. ನಿಮಗೆ ಆತ್ಮನೆಂದು ಹೇಳಲಾಗುತ್ತದೆ ಪರಮಾತ್ಮನೆಂದು ಹೇಳುವುದಿಲ್ಲ ಏಕೆಂದರೆ ನೀವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಲ್ಲವೆ. ಈ ಮಾತುಗಳನ್ನು ಯಾರೂ ಅರಿತುಕೊಂಡಿಲ್ಲ, ಭಗವಂತನನ್ನೂ ಸಹ ಸರ್ವವ್ಯಾಪಿಯಂದು ಹೇಳಿಬಿಡುತ್ತಾರೆ. ಭಕ್ತರು ಭಗವಂತನನ್ನು ಹುಡುಕುತ್ತಾರೆ. ಪರ್ವತಗಳಲ್ಲಿ, ತೀರ್ಥ ಯಾತ್ರೆಗಳಲ್ಲಿ, ನದಿಗಳ ಬಳಿಯೂ ಹೋಗುತ್ತಾರೆ. ನದಿಯು ಪತಿತ-ಪಾವನಿಯಾಗಿದೆ, ಅದರಲ್ಲಿ ಸ್ನಾನ ಮಾಡಿ ನಾವು ಪಾವನರಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಭಕ್ತಿಮಾರ್ಗದಲ್ಲಿ ನಮಗೆ ಬೇಕಾಗಿರುವುದಾದರೂ ಏನೆಂಬುದೇ ಯಾರಿಗೂ ಅರ್ಥವಾಗಿಲ್ಲ. ಕೇವಲ ಮುಕ್ತಿ ಬೇಕು, ಮೋಕ್ಷ ಬೇಕೆಂದು ಹೇಳುತ್ತಾರೆ. ಏಕೆಂದರೆ ಇಲ್ಲಿ ದುಃಖಿಯಾಗಿರುವ ಕಾರಣ ಬೇಸತ್ತು ಹೋಗಿದ್ದಾರೆ. ಸತ್ಯಯುಗದಲ್ಲಿ ಯಾರೂ ಮೋಕ್ಷ ಅಥವಾ ಮುಕ್ತಿಯನ್ನು ಬೇಡುವುದಿಲ್ಲ, ಅಲ್ಲಿ ಯಾರೂ ಭಗವಂತನನ್ನು ಕರೆಯುವುದೇ ಇಲ್ಲ. ಇಲ್ಲಿ ದುಃಖಿಯಾಗಿರುವ ಕಾರಣ ಕರೆಯುತ್ತಾರೆ. ಭಕ್ತಿಯಿಂದ ಯಾರ ದುಃಖವೂ ದೂರವಾಗುವುದಿಲ್ಲ. ಭಲೆ ಯಾರಾದರೂ ಇಡೀ ದಿನ ರಾಮ-ರಾಮ ಎಂದು ಕುಳಿತು ಜಪ ಮಾಡಿದರೂ ಸಹ ದುಃಖವು ದೂರವಾಗಲು ಸಾಧ್ಯವಿಲ್ಲ. ಇದು ರಾವಣ ರಾಜ್ಯವಾಗಿದೆ. ದುಃಖವು ಹೇಗೆ ಕೊರಳಿಗೆ ಬಂಧಿಸಲ್ಪಟ್ಟಿದೆ, ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲವೆಂದು ಹಾಡುತ್ತಾರೆ ಅಂದರೆ ಇದರ ಅರ್ಥ ಅವಶ್ಯವಾಗಿ ಸುಖವಿತ್ತು, ಈಗ ದುಃಖವಿದೆ. ಸುಖವು ಸತ್ಯಯುಗದಲ್ಲಿತ್ತು, ದುಃಖವು ಈಗ ಕಲಿಯುಗದಲ್ಲಿದೆ. ಆದ್ದರಿಂದ ಇದಕ್ಕೆ ಮುಳ್ಳಿನ ಕಾಡೆಂದು ಹೇಳಲಾಗುತ್ತದೆ. ಮೊಟ್ಟ ಮೊದಲನೆಯ ಮುಳ್ಳು ದೇಹಾಭಿಮಾನವಾಗಿದೆ ನಂತರ ಕಾಮದ ಮುಳ್ಳಾಗಿದೆ.

ಈಗ ತಂದೆಯು ತಿಳಿಸುತ್ತಾರೆ - ನೀವು ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ವಿನಾಶವಾಗಲಿದೆ. ಈಗ ನೀವು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ತಮ್ಮ ಮನೆ ಮತ್ತು ರಾಜಧಾನಿಯನ್ನು ನೆನಪು ಮಾಡಿ. ಮನೆಯ ನೆನಪಿನ ಜೊತೆಗೆ ತಂದೆಯ ನೆನಪು ಅವಶ್ಯವಾಗಿದೆ ಏಕೆಂದರೆ ಮನೆಯು ಪತಿತ-ಪಾವನಿಯಲ್ಲ. ನೀವು ಪತಿತ-ಪಾವನನೆಂದು ತಂದೆಗೆ ಹೇಳುತ್ತೀರಿ ಅಂದಮೇಲೆ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಬಾಬಾ, ಬಂದು ಪಾವನ ಮಾಡಿ ಎಂದು ನೀವೇ ಕರೆಯುತ್ತೀರಿ. ಜ್ಞಾನಸಾಗರನೆಂದಮೇಲೆ ಅವಶ್ಯವಾಗಿ ಬಂದು ಮುಖದಿಂದಲೇ ತಿಳಿಸಬೇಕಲ್ಲವೆ, ಪ್ರೇರಣೆಯಿಂದ ಹೇಳುವುದಿಲ್ಲ. ಒಂದು ಕಡೆ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಇನ್ನೊಂದು ಕಡೆ ನಾಮ-ರೂಪದಿಂದ ಭಿನ್ನವೆಂದೂ ಹೇಳುತ್ತಾರೆ. ನಾಮ-ರೂಪವಿಲ್ಲದ ವಸ್ತು ಯಾವುದೂ ಇರುವುದಿಲ್ಲ. ಮತ್ತೆ ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ. ಅನೇಕ ಮತಗಳಿವೆಯಲ್ಲವೆ. ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಪಂಚ ವಿಕಾರರೂಪಿ ರಾವಣನು ತುಚ್ಛ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದ್ದಾನೆ, ಆದ್ದರಿಂದ ದೇವತೆಗಳ ಮುಂದೆ ಹೋಗಿ ನಮಸ್ಕಾರ ಮಾಡುತ್ತಾರೆ. ಕೆಲವರಂತೂ ನಾಸ್ತಿಕರಿರುತ್ತಾರೆ ಅವರಂತೂ ಯಾರನ್ನೂ ಒಪ್ಪುವುದಿಲ್ಲ. ಇಲ್ಲಂತೂ ತಂದೆಯ ಬಳಿ ಬ್ರಾಹ್ಮಣರೇ ಬರುತ್ತೀರಿ ಯಾರಿಗೆ 5000 ವರ್ಷಗಳ ಹಿಂದೆಯೂ ತಿಳಿಸಿದ್ದೆನು. ಪರಮಪಿತ ಪರಮಾತ್ಮ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆಂದು ಬರೆಯಲ್ಪಟ್ಟಿದೆ ಅಂದಮೇಲೆ ಬ್ರಹ್ಮಾನ ಸಂತಾನರಾದರಲ್ಲವೆ. ಪ್ರಜಾಪಿತ ಬ್ರಹ್ಮಾನು ಹೆಸರುವಾಸಿಯಾಗಿದ್ದಾರೆ, ಅವಶ್ಯವಾಗಿ ಬ್ರಾಹ್ಮಣ-ಬ್ರಾಹ್ಮಿಣಿಯರೂ ಇರುವರು, ಈಗ ನೀವು ಶೂದ್ರ ಧರ್ಮದವರಿಂದ ಹೊರ ಬಂದು ಬ್ರಾಹ್ಮಣ ಧರ್ಮದಲ್ಲಿ ಬಂದಿದ್ದೀರಿ. ವಾಸ್ತವದಲ್ಲಿ ಹಿಂದೂಗಳೆಂದು ಕರೆಸಿಕೊಳ್ಳುವವರು ತಮ್ಮ ಮೂಲ ಧರ್ಮವನ್ನು ಅರಿತುಕೊಂಡಿಲ್ಲ. ಆದ್ದರಿಂದ ಕೆಲಕೆಲವೊಮ್ಮೆ ಕೆಲಕೆಲವರನ್ನು ಒಪ್ಪುತ್ತಾರೆ. ಅನೇಕರ ಬಳಿ ಹೋಗುತ್ತಿರುತ್ತಾರೆ. ಕ್ರಿಶ್ಚಿಯನ್ನರು ಎಂದೂ ಯಾರ ಬಳಿಗೂ ಹೋಗುವುದಿಲ್ಲ. ಈಗ ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ಭಗವಂತನು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ. ಒಂದು ದಿನ ಪತ್ರಿಕೆಗಳಲ್ಲಿಯೂ ಸಹ ಬರುವುದು - ಭಗವಂತನು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡುವುದರಿಂದಲೇ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ. ಯಾವಾಗ ವಿನಾಶವು ಹತ್ತಿರ ಬರುವುದೋ ಆಗ ಪತ್ರಿಕೆಗಳ ಮೂಲಕವೂ ಸಹ ಈ ಸಂದೇಶವು ಎಲ್ಲರ ಕಿವಿಗಳ ಮೇಲೆ ಬೀಳುವುದು. ಪತ್ರಿಕೆಗಳಲ್ಲಂತೂ ಎಲ್ಲೆಲ್ಲಿಂದಲೋ ಸಮಾಚಾರಗಳು ಬರುತ್ತವೆಯಲ್ಲವೆ. ಈಗಲೂ ಸಹ ನೀವು ಹಾಕಿಸಬಹುದು. ಭಗವಾನುವಾಚ - ಪರಮಪಿತ ಪರಮಾತ್ಮ ಶಿವನು ತಿಳಿಸುತ್ತಾರೆ, ನಾನು ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ಈ ಪತಿತ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ, ವಿನಾಶವು ಅವಶ್ಯವಾಗಿ ಆಗಲಿದೆ. ಇದೂ ಸಹ ಎಲ್ಲರಿಗೂ ನಿಶ್ಚಯವಾಗಿ ಬಿಡುವುದು. ಎಲ್ಲವೂ ರಿಹರ್ಸಲ್ ಆಗುತ್ತಿರುತ್ತದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲಿಯವರೆಗೆ ರಾಜ್ಯ ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯವರೆಗೆ ವಿನಾಶವು ಅವಶ್ಯವಾಗಿ ಆಗುವುದಿಲ್ಲ. ಭೂಕಂಪ ಇತ್ಯಾದಿಗಳೂ ಆಗಲಿವೆಯಲ್ಲವೆ. ಒಂದು ಕಡೆ ಬಾಂಬುಗಳ ಸ್ಫೋಟ ಇನ್ನೊಂದು ಕಡೆ ಪ್ರಾಕೃತಿಕ ವಿಕೋಪಗಳೂ ಬರುತ್ತವೆ, ಆಹಾರವು ಸಿಗುವುದಿಲ್ಲ, ಹಡಗುಗಳು ಬರುವುದಿಲ್ಲ, ಬರಗಾಲವಾಗಿ ಬಿಡುತ್ತದೆ. ಹಸಿವೆಯಿಂದ ನರಳಿ-ನರಳಿ ಸಮಾಪ್ತಿಯಾಗುತ್ತಾರೆ. ಉಪವಾಸ ಸತ್ಯಾಗ್ರಹ ಮಾಡುವವರಾದರೂ ನೀರು ಅಥವಾ ಜೇನು ಏನನ್ನಾದರೂ ತೆಗೆದುಕೊಳ್ಳುತ್ತಿರುತ್ತಾರೆ, ತೂಕದಲ್ಲಿ ಕಡಿಮೆಯಾಗಿ ಬಿಡುತ್ತಾರೆ. ಆದರೆ ಇಲ್ಲಂತೂ ಕುಳಿತು-ಕುಳಿತಿದ್ದಂತೆಯೇ ಆಕಸ್ಮಿಕವಾಗಿ ಭೂಕಂಪಗಳಾಗುವುದು, ಎಲ್ಲರೂ ಸತ್ತು ಹೋಗುವರು. ವಿನಾಶವು ಅವಶ್ಯವಾಗಿ ಆಗಲಿದೆ. ಆದರೆ ಸಾಧು-ಸಂತ ಮೊದಲಾದವರು ಈಗ ವಿನಾಶವಾಗಲಿದೆ ಆದ್ದರಿಂದ ರಾಮ ಸ್ಮರಣೆ ಮಾಡಿ ಎಂದು ಹೇಳುವುದಿಲ್ಲ. ಏಕೆಂದರೆ ಅವರು ಭಗವಂತನನ್ನೇ ಅರಿತುಕೊಂಡಿಲ್ಲ. ಭಗವಂತನಿಗೆ ತನ್ನ ಪರಿಚಯ ತನಗೇ ತಿಳಿದಿದೆ ಮತ್ತ್ಯಾರಿಗೂ ತಿಳಿದಿಲ್ಲ. ಅವರು ಬರುವ ಸಮಯವಾಗಿದೆ ಆದ್ದರಿಂದ ಅವರು ಈ ವೃದ್ಧನ ಶರೀರದಲ್ಲಿ ಬಂದು ಆದಿ, ಮಧ್ಯ, ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನಾವು ಶಾಂತಿಧಾಮಕ್ಕೆ ಹೋಗುತ್ತೇವೆಂದು ಖುಷಿಯಿರಬೇಕು. ಮನುಷ್ಯರು ಶಾಂತಿಯನ್ನೇ ಬಯಸುತ್ತಾರೆ ಆದರೆ ಶಾಂತಿಯನ್ನು ಯಾರು ಕೊಡುವರು? ಶಾಂತಿದೇವ ಎಂದು ಹೇಳುತ್ತಾರಲ್ಲವೆ. ಈಗ ದೇವರ ದೇವ ಒಬ್ಬರೇ ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ, ತಿಳಿಸುತ್ತಾರೆ - ನಾನು ನಿಮ್ಮೆಲ್ಲರನ್ನೂ ಪಾವನ ಮಾಡಿ ಕರೆದುಕೊಂಡು ಹೋಗುತ್ತೇನೆ. ಒಬ್ಬರನ್ನೂ ಬಿಡುವುದಿಲ್ಲ. ನಾಟಕದನುಸಾರ ಎಲ್ಲರೂ ಹೋಗಲೇಬೇಕಾಗಿದೆ. ಎಲ್ಲಾ ಆತ್ಮಗಳು ಸೊಳ್ಳೆಗಳೋಪಾದಿಯಲ್ಲಿ ಹೋಗುತ್ತಾರೆಂದು ಗಾಯನವಿದೆ. ಸತ್ಯಯುಗದಲ್ಲಿ ಕೆಲವು ಮನುಷ್ಯರೇ ಇರುತ್ತಾರೆ. ಈಗ ಕಲಿಯುಗದ ಅಂತಿಮದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ! ಅಂದಮೇಲೆ ಕೆಲವರೇ ಹೇಗಿರುತ್ತಾರೆ? ಈಗ ಸಂಗಮವಾಗಿದೆ, ನೀವು ಸತ್ಯಯುಗದಲ್ಲಿ ಹೋಗಲು ಪುರುಷಾರ್ಥ ಮಾಡುತ್ತೀರಿ. ನಿಮಗೆ ತಿಳಿದಿದೆ, ವಿನಾಶವು ಅವಶ್ಯವಾಗಿ ಆಗುವುದು, ಎಲ್ಲಾ ಆತ್ಮಗಳೂ ಸೊಳ್ಳೆಗಳೋಪಾದಿಯಲ್ಲಿ ಹೋಗುವರು. ಇಡೀ ಸಮೂಹವೇ ಹೊರಟು ಹೋಗುವುದು. ನಂತರ ಸತ್ಯಯುಗದಲ್ಲಿ ಬಹಳ ಕೆಲವರೇ ಇರುತ್ತಾರೆ.

ತಂದೆಯು ತಿಳಿಸುತ್ತಾರೆ - ಯಾವುದೇ ದೇಹಧಾರಿಗಳನ್ನು ನೆನಪು ಮಾಡಬೇಡಿ. ನೋಡಿಯೂ ನೋಡದಂತಿರಿ. ನಾವಾತ್ಮಗಳಾಗಿದ್ದೇವೆ, ನಾವು ನಮ್ಮ ಮನೆಗೆ ಹೋಗುತ್ತೇವೆ. ಖುಷಿಯಿಂದ ಹಳೆಯ ಶರೀರವನ್ನು ಬಿಡಬೇಕಾಗಿದೆ, ಶಾಂತಿಧಾಮವನ್ನು ನೆನಪು ಮಾಡುತ್ತಾ ಇದ್ದರೆ ಅಂತಿಮಗತಿ ಸೋ ಗತಿಯಾಗುವುದು. ಒಬ್ಬ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಪರಿಶ್ರಮವಿದೆ. ಪರಿಶ್ರಮವಿಲ್ಲದೆ ಶ್ರೇಷ್ಠ ಪದವಿಯು ಸಿಗುವುದಿಲ್ಲ. ನಿಮ್ಮನ್ನು ನರನಿಂದ ನಾರಾಯಣನನ್ನಾಗಿ ಮಾಡುವುದಕ್ಕಾಗಿಯೇ ತಂದೆಯು ಬರುತ್ತಾರೆ. ಈಗ ಈ ಹಳೆಯ ಪ್ರಪಂಚದಲ್ಲಿ ಯಾವುದೇ ಸುಖವಿಲ್ಲ. ಶಾಂತಿಧಾಮ ಮತ್ತು ಸುಖಧಾಮದಲ್ಲಿಯೇ ಸುಖವಿರುತ್ತದೆ. ಇಲ್ಲಂತೂ ಮನೆ-ಮನೆಯಲ್ಲಿ ಅಶಾಂತಿ, ಜಗಳ-ಕಲಹಗಳಿದೆ. ತಂದೆಯು ತಿಳಿಸುತ್ತಾರೆ - ಈಗ ಈ ಛೀ ಛೀ ಪ್ರಪಂಚವನ್ನು ಮರೆಯಿರಿ. ಮಧುರಾತಿ ಮಧುರ ಮಕ್ಕಳೇ, ನಾನು ನಿಮಗಾಗಿ ಸ್ವರ್ಗ ಸ್ಥಾಪನೆ ಮಾಡಲು ಬಂದಿದ್ದೇನೆ, ಈ ನರಕದಲ್ಲಿ ನೀವು ಪತಿತರಾಗಿ ಬಿಟ್ಟಿದ್ದೀರಿ. ಈಗ ಸ್ವರ್ಗದಲ್ಲಿ ಹೋಗಬೇಕಾಗಿದೆ. ಆದ್ದರಿಂದ ತಂದೆ ಮತ್ತು ಸ್ವರ್ಗವನ್ನು ನೆನಪು ಮಾಡಿ ಆಗ ಅಂತಿಮ ಗತಿ ಸೋ ಗತಿಯಾಗುವುದು. ಭಲೆ ವಿವಾಹ-ಸಮಾರಂಭಗಳಿಗೆ ಹೋಗಿ ಆದರೆ ತಂದೆಯನ್ನು ನೆನಪು ಮಾಡಿ. ಸಂಪೂರ್ಣ ಜ್ಞಾನವು ಬುದ್ಧಿಯಲ್ಲಿರಲಿ. ಭಲೆ ಮನೆಯಲ್ಲಿಯೇ ಇರಿ, ಮಕ್ಕಳು ಮೊದಲಾದವರ ಪಾಲನೆ ಮಾಡಿ ಆದರೆ ಬುದ್ಧಿಯಲ್ಲಿರಲಿ - ತಂದೆಯ ಆಜ್ಞೆಯಾಗಿದೆ, ನನ್ನನ್ನು ನೆನಪು ಮಾಡಿ. ಮನೆಯನ್ನು ಬಿಡಬೇಕಾಗಿಲ್ಲ, ಇಲ್ಲವೆಂದರೆ ಮಕ್ಕಳ ಸಂಭಾಲನೆ ಯಾರು ಮಾಡುತ್ತಾರೆ? ಭಕ್ತರು ಮನೆಯಲ್ಲಿಯೇ ಇರುತ್ತಾರೆ, ಗೃಹಸ್ಥ ವ್ಯವಹಾರದಲ್ಲಿರುತ್ತಾರೆ ಆದರೂ ಸಹ ಭಕ್ತರೆಂದೇ ಕರೆಯುತ್ತಾರೆ ಏಕೆಂದರೆ ಭಕ್ತಿ ಮಾಡುತ್ತಾರೆ. ಗೃಹಸ್ಥವನ್ನು ಸಂಭಾಲನೆ ಮಾಡುತ್ತಾರೆ. ವಿಕಾರದಲ್ಲಿ ಹೋಗುತ್ತಾರೆಂದರೂ ಸಹ ಗುರುಗಳು ಅವರಿಗೆ ಹೇಳುತ್ತಾರೆ - ಕೃಷ್ಣನನ್ನು ನೆನಪು ಮಾಡಿ ಆಗ ಅಂತಹ ಮಗುವಾಗುವುದು. ಈ ಮಾತುಗಳಲ್ಲಿ ಈಗ ನೀವು ಹೋಗಬಾರದು ಏಕೆಂದರೆ ನಿಮಗೆ ಈಗ ಸತ್ಯಯುಗದಲ್ಲಿ ಹೋಗುವ ಮಾತುಗಳನ್ನು ತಿಳಿಸಲಾಗುತ್ತದೆ. ಈಗ ಅದರ ಸ್ಥಾಪನೆಯೂ ಆಗುತ್ತಿದೆ. ವೈಕುಂಠದ ಸ್ಥಾಪನೆಯನ್ನು ಕೃಷ್ಣನು ಮಾಡುವುದಿಲ್ಲ, ಕೃಷ್ಣನಂತೂ ಮಾಲೀಕನಾಗಿದ್ದಾನೆ, ತಂದೆಯಿಂದ ಆಸ್ತಿಯನ್ನು ಪಡೆದಿದ್ದಾನೆ. ಸಂಗಮದ ಸಮಯದಲ್ಲಿಯೇ ಗೀತೆಯ ಭಗವಂತನು ಬರುತ್ತಾರೆ. ಕೃಷ್ಣನಿಗೆ ಭಗವಂತನೆಂದು ಹೇಳುವುದಿಲ್ಲ, ಇವರಂತೂ ಓದುವವರಾದರಲ್ಲವೆ. ಗೀತೆಯನ್ನು ತಂದೆಯು ತಿಳಿಸಿದರು ಮತ್ತು ಮಗುವು ಕೇಳಿಸಿಕೊಂಡಿತು. ಭಕ್ತಿಮಾರ್ಗದಲ್ಲಿ ತಂದೆಯ ಬದಲಾಗಿ ಮಗುವಿನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ತಂದೆಯನ್ನು ಮರೆತಿರುವ ಕಾರಣ ಗೀತೆಯು ಖಂಡನೆಯಾಯಿತು, ಆ ಖಂಡನೆಯಾಗಿರುವ ಗೀತೆಯನ್ನು ಕೇಳುವುದರಿಂದ ಏನು ಲಾಭ? ತಂದೆಯಂತೂ ರಾಜಯೋಗವನ್ನು ಕಲಿಸಿ ಹೋದರು, ಇದರಿಂದ ಕೃಷ್ಣನು ಸತ್ಯಯುಗದ ಮಾಲೀಕನಾದನು. ಭಕ್ತಿಮಾರ್ಗದಲ್ಲಿ ಸತ್ಯ ನಾರಾಯಣನ ಕಥೆಯನ್ನು ಕೇಳುವುದರಿಂದ ಯಾರಾದರೂ ಸತ್ಯಯುಗದ ಮಾಲೀಕರಾಗುವರೇ? ಅಥವಾ ಯಾರೂ ಈ ವಿಚಾರದಿಂದ ಕೇಳುವುದಿಲ್ಲ ಮತ್ತು ಅದರಿಂದ ಲಾಭವೇನೂ ಸಿಗುವುದಿಲ್ಲ. ಸಾಧು-ಸಂತ ಮೊದಲಾದವರು ತಮ್ಮ-ತಮ್ಮ ಮಂತ್ರಗಳನ್ನು ಕೊಡುತ್ತಾರೆ, ಭಾವಚಿತ್ರಗಳನ್ನು ಕೊಡುತ್ತಾರೆ. ಇಲ್ಲಿ ಆ ಮಾತಿಲ್ಲ. ಅನ್ಯ ಸತ್ಸಂಗಗಳಲ್ಲಿ ಹೋದಾಗ ಇಂತಹ ಸ್ವಾಮೀಜಿಯವರ ಕಥೆಯಾಗಿದೆ ಎಂದು ಹೇಳುತ್ತಾರೆ. ಯಾರ ಕಥೆ? ವೇದಾಂತದ ಕಥೆ, ಗೀತೆಯ ಕಥೆ, ಭಾಗವತದ ಕಥೆ. ಆದರೆ ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ಓದಿಸುವವರು ಯಾವುದೇ ದೇಹಧಾರಿಯಲ್ಲ, ಅಥವಾ ಯಾವುದೇ ವೇದ-ಶಾಸ್ತ್ರ ಮೊದಲಾದುವುಗಳನ್ನು ಓದಿಲ್ಲ. ಶಿವ ತಂದೆಯು ಯಾವುದಾದರೂ ಶಾಸ್ತ್ರಗಳನ್ನು ಓದಿದ್ದಾರೆಯೇ? ಮನುಷ್ಯರೇ ಓದುತ್ತಾರೆ. ಶಿವ ತಂದೆಯು ತಿಳಿಸುತ್ತಾರೆ - ನಾನು ಗೀತೆ ಇತ್ಯಾದಿಗಳನ್ನು ಓದಿಲ್ಲ, ನಾನು ಯಾವ ರಥದಲ್ಲಿ ಕುಳಿತಿದ್ದೇನೆಯೋ ಇವರು ಓದಿದ್ದಾರೆ. ನಾನು ಓದಿಲ್ಲ. ನನ್ನಲ್ಲಿ ಇಡೀ ಸೃಷ್ಟಿಚಕ್ರದ ಆದಿ, ಮಧ್ಯ, ಅಂತ್ಯದ ಜ್ಞಾನವಿದೆ. ಇವರು ಪ್ರತಿನಿತ್ಯವೂ ಗೀತೆಯನ್ನು ಓದುತ್ತಿದ್ದರು. ಗಿಳಿಯ ತರಹ ಕಂಠಪಾಠ ಮಾಡುತ್ತಿದ್ದರು. ಯಾವಾಗ ತಂದೆಯು ಪ್ರವೇಶ ಮಾಡಿದರೋ ಆಗ ಗೀತೆಯನ್ನು ಬಿಟ್ಟು ಬಿಟ್ಟರು ಏಕೆಂದರೆ ಇಲ್ಲಿ ಶಿವ ತಂದೆಯು ತಿಳಿಸುತ್ತಾರೆಂದು ಬುದ್ಧಿಯಲ್ಲಿ ಬಂದು ಬಿಟ್ಟಿತು.

ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆ, ಆದ್ದರಿಂದ ಈಗ ಹಳೆಯ ಪ್ರಪಂಚದೊಂದಿಗಿನ ಮಮತ್ವವನ್ನು ಕಳೆಯಿರಿ ಕೇವಲ ನನ್ನೊಬ್ಬನನ್ನೇ ನೆನಪು ಮಾಡಿ. ಈ ಪರಿಶ್ರಮ ಪಡಬೇಕಾಗಿದೆ. ಸತ್ಯ ಪ್ರಿಯತಮೆಗೆ ಪದೇ-ಪದೇ ಪ್ರಿಯತಮನ ನೆನಪೇ ಬರುತ್ತಿರುತ್ತದೆ. ಅಂದಾಗ ಈಗ ತಂದೆಯ ನೆನಪೂ ಸಹ ಇಷ್ಟು ಪಕ್ಕಾ ಆಗಿರಬೇಕು. ಪಾರಲೌಕಿಕ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಸ್ವರ್ಗದ ಆಸ್ತಿಯನ್ನುನೆನಪು ಮಾಡಿ. ಇದರಲ್ಲಿ ಮತ್ತ್ಯಾವುದೇ ಶಬ್ಧ ಮಾಡುವ, ಭಜನೆ ಮಾಡುವ ಅವಶ್ಯಕತೆಯಿಲ್ಲ. ಒಳ್ಳೊಳ್ಳೆಯ ಗೀತೆಗಳು ಬಂದಾಗ ಅವನ್ನು ಹಾಕಲಾಗುತ್ತದೆ. ಅದರ ಅರ್ಥವನ್ನೂ ಸಹ ನಿಮಗೆ ತಿಳಿಸುತ್ತೇವೆ. ಗೀತೆಯನ್ನು ಬರೆಯುವವರು ತಾವೇ ಏನನ್ನೂ ತಿಳಿದುಕೊಂಡಿಲ್ಲ. ಮೀರಾ ಭಕ್ತಿನಿಯಾಗಿದ್ದಳು, ನೀವಂತೂ ಈಗ ಜ್ಞಾನಿಗಳಾಗಿದ್ದೀರಿ. ಮಕ್ಕಳು ಸರಿಯಾಗಿ ಕೆಲಸ ಮಾಡದಿದ್ದರೆ ತಂದೆಯು ಹೇಳುತ್ತಾರೆ - ನೀವಂತೂ ಹೇಗೆ ಭಕ್ತರಾಗಿದ್ದೀರಿ ಆಗ ತಂದೆಯು ನಮಗೆ ಈ ರೀತಿ ಏಕೆ ಹೇಳಿದರೆಂದು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ತಂದೆಯನ್ನು ನೆನಪು ಮಾಡಿ, ಮಾರ್ಗದರ್ಶಕರಾಗಿ ಸಂದೇಶ ಪುತ್ರರಾಗಿ ಎಲ್ಲರಿಗೆ ಇದೇ ಸಂದೇಶವನ್ನು ಕೊಡಿ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿದರೆ ಜನ್ಮ-ಜನ್ಮಾಂತರದ ಪಾಪವು ಭಸ್ಮವಾಗುವುದು. ಈಗ ಹಿಂತಿರುಗಿ ಮನೆಗೆ ಹೋಗುವ ಸಮಯವಾಗಿದೆ. ಭಗವಂತನೊಬ್ಬರೇ ನಿರಾಕಾರನಾಗಿದ್ದಾರೆ. ಅವರಿಗೆ ತಮ್ಮ ದೇಹವಿಲ್ಲ. ತಂದೆಯೇ ತಮ್ಮ ಪರಿಚಯವನ್ನು ಕೊಡುತ್ತಾರೆ. ಮನ್ಮನಾಭವದ ಮಂತ್ರವನ್ನೂ ಕೊಡುತ್ತಾರೆ. ಸಾಧು-ಸನ್ಯಾಸಿಗಳೆಂದೂ ಸಹ ಈಗ ವಿನಾಶವಾಗುತ್ತದೆ, ತಂದೆಯನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ. ತಂದೆಯೇ ಬ್ರಾಹ್ಮಣ ಮಕ್ಕಳಿಗೆ ನೆನಪು ತರಿಸುತ್ತಾರೆ. ನೆನಪಿನಿಂದ ಆರೋಗ್ಯ, ವಿದ್ಯೆಯಿಂದ ಐಶ್ವರ್ಯವು ಸಿಗುವುದು. ನೀವು ಕಾಲನ ಮೇಲೆ ಜಯ ಗಳಿಸುತ್ತೀರಿ. ಸತ್ಯಯುಗದಲ್ಲೆಂದೂ ಅಕಾಲಮೃತ್ಯುವಾಗುವುದಿಲ್ಲ. ದೇವತೆಗಳು ಕಾಲದ ಮೇಲೆ ವಿಜಯವನ್ನು ಹೊಂದಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಮೂಲಕ ಭಕ್ತರೆಂಬ ಬಿರುದು ಸಿಗುವಂತಹ ಯಾವುದೇ ಕರ್ಮವನ್ನು ಮಾಡಬಾರದು. ಸಂದೇಶ ಪುತ್ರರಾಗಿ ಎಲ್ಲರಿಗೆ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವ ಸಂದೇಶವನ್ನು ಕೊಡಬೇಕಾಗಿದೆ.

2. ಈ ಹಳೆಯ ಪ್ರಪಂಚದಲ್ಲಿ ಯಾವುದೇ ಸುಖವಿಲ್ಲ. ಇದು ಛೀ ಛೀ ಪ್ರಪಂಚವಾಗಿದೆ. ಇದನ್ನು ಮರೆಯುತ್ತಾ ಹೋಗಬೇಕಾಗಿದೆ. ಮನೆಯ ನೆನಪಿನ ಜೊತೆ ಜೊತೆಗೆ ಪಾವನರಾಗಲು ತಂದೆಯನ್ನೂ ಸಹ ಅವಶ್ಯವಾಗಿ ನೆನಪು ಮಾಡಬೇಕಾಗಿದೆ.

ವರದಾನ:
ತ್ಯಾಗ, ತಪಸ್ಯಾ ಮತ್ತು ಸೇವಾಭಾವದ ವಿಧಿಯ ಮೂಲಕ ಸದಾ ಸಫಲತಾ ಸ್ವರೂಪ ಭವ.

ತ್ಯಾಗ ಮತ್ತು ತಪಸ್ಯೆಯೇ ಸಫಲತೆಗೆ ಆಧಾರವಾಗಿದೆ. ತ್ಯಾಗದ ಭಾವನೆವುಳ್ಳವರೇ ಸತ್ಯ ಸೇವಾಧಾರಿಗಳಾಗಲು ಸಾಧ್ಯ. ತ್ಯಾಗದಿಂದಲೇ ಸ್ವಯಂನ ಮತ್ತು ಬೇರೆಯವರ ಭಾಗ್ಯ ರೂಪುಗೊಳ್ಳುತ್ತೆ. ನಂತರ ದೃಢ ಸಂಕಲ್ಪ ಮಾಡುವುದು ಇದೂ ಸಹ ತಪಸ್ಯಾ ಆಗಿದೆ. ಆದ್ದರಿಂದ ತ್ಯಾಗ, ತಪಸ್ಯಾ ಮತ್ತು ಸೇವಾಭಾವದಿಂದ ಅನೇಕ ಪರಿಮಿತ ಭಾವ ಸಮಾಪ್ತಿಯಾಗಿ ಬಿಡುವುದು. ಸಂಘಟನೆ ಶಕ್ತಿಶಾಲಿಯಾಗುವುದು. ಒಬ್ಬರು ಹೇಳಿದನ್ನು ಇನ್ನೊಬ್ಬರು ಮಾಡುವರು, ಎಂದೂ ಸಹ ನೀನು, ನಾನು, ನಿನ್ನದು, ನನ್ನದು ಬರಬಾರದು. ಆಗ ಸಫಲತಾ ಸ್ವರೂಪ, ನಿರ್ವಿಘ್ನರಾಗಿ ಬಿಡುವಿರಿ.

ಸ್ಲೋಗನ್:
ಸಂಕಲ್ಪದ ಮೂಲಕವೂ ಸಹ ಯಾರಿಗೂ ದುಃಖ ಕೊಡಬಾರದು - ಇದೇ ಸಂಪೂರ್ಣ ಅಹಿಂಸೆಯಾಗಿದೆ.