13.05.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ತಂದೆಯು ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ನೀವು ಬ್ರಾಹ್ಮಣರು ಈ ಯಜ್ಞದ ಸಂಭಾಲನೆ ಮಾಡುವವರಾಗಿದ್ದೀರಿ, ಆದ್ದರಿಂದ ನೀವು ಅವಶ್ಯವಾಗಿ ಪವಿತ್ರರಾಗಿರಾಬೇಕು

ಪ್ರಶ್ನೆ:
ಅಂತಿಮ ಸಮಯದಲ್ಲಿ ತಂದೆಯು ಎಂತಹ ಮಕ್ಕಳಿಗೆ ಸಹಾಯ ಮಾಡುತ್ತಾರೆ?

ಉತ್ತರ:
ಯಾರು ಒಳ್ಳೆಯ ರೀತಿಯಲ್ಲಿ ಸೇವೆ ಮಾಡುತ್ತಾರೆ, ಅವರಿಗೆ ಅಂತ್ಯದಲ್ಲಿ ಯಾವಾಗ ತುಂಬಾ ಆಪತ್ತುಗಳು ಬರುತ್ತವೆ, ಆ ಸಮಯದಲ್ಲಿ ತಂದೆಯ ಸಹಾಯ ಸಿಗುವುದು. ಅವಶ್ಯವಾಗಿ ಯಾರು ತಂದೆಯ ಸಹಯೋಗಿಗಳಾಗುತ್ತಾರೆ, ಅಂತಹವರಿಗೆ ತಂದೆಯು ಸಹಯೋಗ ಕೊಡುತ್ತಾರೆ.

ಪ್ರಶ್ನೆ:
ಅದ್ಭುತವಾದ ಮುಖವು ಯಾವುದಾಗಿದೆ? ಅದರ ನೆನಪಾರ್ಥವು ಯಾವ ರೂಪದಲ್ಲಿದೆ?

ಉತ್ತರ:
ಶಿವಬಾಬಾ ಯಾರಿಗೆ ತಮ್ಮದೇ ಆದ ಮುಖವಿಲ್ಲವೋ ಅವರು ಯಾವಾಗ ಈ ಮುಖದ (ಬ್ರಹ್ಮಾ) ಆಧಾರವನ್ನು ತೆಗೆದುಕೊಳ್ಳುವುದರಿಂದ ಇದು ಅದ್ಭುತವಾದ ಮುಖವಾಗಿ ಬಿಡುತ್ತದೆ. ಆದ್ದರಿಂದಲೇ ನೀವು ಮಕ್ಕಳು ಸಮ್ಮುಖದಲ್ಲಿ ಮುಖವನ್ನು ನೋಡುವುದಕ್ಕೋಸ್ಕರ ಬರುತ್ತೀರಿ. ಇದರ ನೆನಪಾರ್ಥವನ್ನು ರುಂಡ ಮಾಲೆಯಲ್ಲಿ ಮುಖವನ್ನು ತೋರಿಸುತ್ತಾರೆ.

ಗೀತೆ:
ಎಷ್ಟೊಂದು ಮಧುರ, ಎಷ್ಟು ಪ್ರಿಯ ಶಿವಭೋಲಾ ಭಗವಾನ್.....

ಓಂ ಶಾಂತಿ.
ಬೇಹದ್ದಿನ ತಂದೆಯು ಹೇಳುತ್ತಾರೆ - ಒಂದೇ ಬಾರಿ 5000 ವರ್ಷಗಳ ನಂತರ ಮಕ್ಕಳ ಮುಖವನ್ನು ನೋಡುತ್ತೇನೆ. ತಂದೆಗೆ ತಮ್ಮ ಮುಖವಂತು ಇಲ್ಲ. ತಂದೆಯೂ ಸಹ ಹಳೆಯ ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ನೀವು ಬಾಪ್ದಾದಾರವರಿಬ್ಬರ ಮುಖವನ್ನು ನೋಡುತ್ತೀರಿ. ಆಗಲೇ ಬಾಪ್ದಾದಾರವರು ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿ ಎಂದು ಹೇಳುತ್ತಾರೆ. ಈಗ ರುಂಡ ಮಾಲೆಯನ್ನು ಮಕ್ಕಳು ನೋಡಿದೀರಿ, ಅದರಲ್ಲಿ ಮುಖವನ್ನು ತೋರಿಸುತ್ತಾರೆ. ರುಂಡ ಮಾಲೆಯನ್ನು ಮಾಡಲಾಗುತ್ತದೆ ಎಂದರೆ ಶಿವಬಾಬಾರವರದೂ ಇಂತಹ ಮುಖವನ್ನು ನೋಡುತ್ತೀರಿ. ಶಿವಬಾಬಾರವರು ಬಂದು ಶರೀರವನ್ನು ಲೋನ್ ತೆಗೆದುಕೊಳ್ಳುತ್ತಾರೆಂದು ಯಾರಿಗೂ ಗೊತ್ತಿಲ್ಲ. ತಂದೆಯು ಈ ಬ್ರಹ್ಮಾರವರ ಮುಖದಿಂದ ಮಾತನಾಡುತ್ತಾರೆ ಎಂದಾಗ ಇದು ಅವರ ಮುಖವಾಯಿತ್ತಲ್ಲವೇ. ಈ ಸಮಯದಲ್ಲಿ ತಂದೆಯು ಒಂದೇ ಬಾರಿ ಬಂದು ಮಕ್ಕಳ ಮುಖವನ್ನು ನೋಡುತ್ತಾರೆ. ಶಿವಬಾಬಾರವರು ಈ ಮುಖವನ್ನು ಬಾಡಿಗೆಯ ರೂಪದಲ್ಲಿ ಲೋನ್ ತೆಗೆದುಕೊಂಡಿದ್ದಾರೆ ಎನ್ನುವುದನ್ನು ನಾವು ಮಕ್ಕಳು ತಿಳಿದುಕೊಂಡಿದ್ದೇವೆ. ಇಂತಹ ತಂದೆಗೆ ತಮ್ಮ ಮನೆಯನ್ನು ಬಾಡಿಗೆಯ ರೂಪದಲ್ಲಿ ಕೊಡುವುದರಿಂದ ಎಷ್ಟು ಲಾಭವಾಗುತ್ತದೆ. ಮೊದಲು-ಮೊದಲು ಬ್ರಹ್ಮಾರವರ ಕಿವಿಗಳೇ ಕೇಳುತ್ತವೆ. ಭಲೆ ನೀವು ತಕ್ಷಣ ಕೇಳುತ್ತೀರಿ, ಆದರೂ ಸಹ ಎಲ್ಲರಿಗಿಂತ ಹತ್ತಿರದಲ್ಲಿ ಇವರ ಕಿವಿಗಳಿವೆ. ನೀವಾತ್ಮರು ದೂರದಲ್ಲಿ ಕುಳಿತಿದೀರಲ್ಲವೇ. ಆತ್ಮವು ಕಿವಿಗಳ ಮುಖಾಂತರ ಕೇಳಿದಾಗ ಸ್ವಲ್ಪ ವ್ಯತ್ಯಾಸವಾಗುತ್ತದೆ, ಆದ್ದರಿಂದಲೇ ನೀವು ಮಕ್ಕಳು ಸಮ್ಮುಖದಲ್ಲಿ ಮುಖವನ್ನು ನೋಡಲು ಇಲ್ಲಿ ಬರುತ್ತೀರಿ. ಇದು ಅದ್ಭುತವಾದ ಮುಖವಾಗಿದೆ. ಶಿವರಾತ್ರಿಯನ್ನು ಆಚರಿಸುತ್ತಾರೆಂದಾಗ ಅವಶ್ಯವಾಗಿ ಶಿವಬಾಬಾ ಯಾರು ನಿರಾಕಾರ ಆಗಿದ್ದಾರೆ ಅವರು ಇಲ್ಲಿ ಬಂದು ಪ್ರವೇಶ ಮಾಡುತ್ತಾರೆ, ಆದ್ದರಿಂದ ಇವರದೂ ಸಹ ಭಾರತ ದೇಶವಾಯಿತಲ್ಲವೇ! ಭಾರತವು ಅವಿನಾಶಿ ಪರಮಪಿತ ಪರಮಾತ್ಮನ ಜನ್ಮಸ್ಥಾನವಾಗಿದೆ. ಆದರೆ ಅವರ ಜನ್ಮವು ಅನ್ಯ ಮನುಷ್ಯರ ರೀತಿ ಇಲ್ಲ. ಸ್ವಯಂ ತಂದೆಯು ಹೇಳುತ್ತಾರೆ - ನಾನು ಬಂದು ಇವರಲ್ಲಿ ಪ್ರವೇಶ ಮಾಡುತ್ತೇನೆ ಮತ್ತು ನೀವು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತೇನೆ. ಎಲ್ಲಾ ಆತ್ಮಗಳಿಗೆ ತಮ್ಮ-ತಮ್ಮ ಶರೀರವಿದೆ. ಆದರೆ ನನಗೆ ಯಾವುದೇ ಶರೀರವಿಲ್ಲ. ಶಿವನಿಗೆ ಯಾವಗಲೂ ಲಿಂಗ ರೂಪ ತೋರಿಸುತ್ತಾರೆ. ರುದ್ರ ಯಜ್ಞವನ್ನು ರಚಿಸಿದಾಗ, ಮಣ್ಣಿನಲ್ಲಿ ಗೋಲಾಕಾರದ ಲಿಂಗವನ್ನು ಮಾಡುತ್ತಾರೆ. ಸಾಲಿಗ್ರಾಮಗಳನ್ನು ಚಿಕ್ಕ-ಚಿಕ್ಕದಾಗಿ ಮಾಡುತ್ತಾರೆ, ಶಿವಲಿಂಗವನ್ನು ದೊಡ್ಡ-ದೊಡ್ಡದಾಗಿ ಮಾಡುತ್ತಾರೆ. ವಾಸ್ತವದಲ್ಲಿ ಚಿಕ್ಕದು, ದೊಡ್ಡದು ಇಲ್ಲ. ಕೇವಲ ಇವರು ತಂದೆ ಆಗಿದ್ದಾರೆ, ಇವರು ಮಕ್ಕಳಾಗಿದ್ದಾರೆ ಎಂದು ವ್ಯತ್ಯಾಸವನ್ನು ತೋರಿಸುವುದಕ್ಕೋಸ್ಕರ ಈ ರೀತಿ ಮಾಡುತ್ತಾರೆ. ಪೂಜೆಯನ್ನೂ ಸಹ ಇಬ್ಬರಿಗೂ ಬೇರೆ-ಬೇರೆಯಾಗಿ ಮಾಡುತ್ತಾರೆ. ಇವರು ಶಿವ ಆಗಿದ್ದಾರೆ, ಅವರು ಸಾಲಿಗ್ರಾಮಗಳು ಆಗಿದ್ದಾರೆ ಎಂದು ತಿಳಿಯುತ್ತಾರೆ. ಎಲ್ಲರೂ ಶಿವನೇ ಶಿವನಾಗಿದ್ದಾರೆ ಎಂದು ಹೇಳುವುದಿಲ್ಲ. ಶಿವಲಿಂಗವನ್ನು ದೊಡ್ಡದಾಗಿ ಮಾಡಿ, ಸಾಲಿಗ್ರಾಮಗಳನ್ನು ಚಿಕ್ಕ-ಚಿಕ್ಕದಾಗಿ ಮಾಡುತ್ತಾರೆ. ಈ ಸಾಲಿಗ್ರಾಮಗಳೆಲ್ಲರೂ ಶಿವನ ಜೊತೆಗಿರುವ ಮಕ್ಕಳಾಗಿದ್ದಾರೆ. ತಂದೆಯು ತಿಳಿಸಿದ್ದಾರೆ ಈ ಸಾಲಿಗ್ರಾಮಗಳ ಪೂಜೆಯನ್ನು ಏಕೆ ಮಾಡುತ್ತಾರೆ? ಏಕೆಂದರೆ ನೀವೆಲ್ಲರೂ ಆತ್ಮಗಳಾಗಿದ್ದೀರಲ್ಲವೇ. ನೀವು ಈ ಶರೀರದ ಜೊತೆ ಭಾರತವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡುತಿದೀರಿ. ಶಿವಬಾಬಾನ ಶ್ರೀಮತವನ್ನು ಸಾಲಿಗ್ರಾಮಗಳು ತೆಗೆದುಕೊಳ್ಳುತಿದ್ದಾರೆ. ರುದ್ರ ಶಿವಬಾಬಾನ ಜ್ಞಾನ ಯಜ್ಞವು ರಚಿಸಲ್ಪಟ್ಟಿದೆ. ಶಿವಬಾಬಾನೂ ಮಾತನಾಡುತ್ತಾರೆ, ಸಾಲಿಗ್ರಾಮಗಳೂ ಮಾತನಾಡುತ್ತಾರೆ. ಇದು ಅಮರ ಕಥೆ, ಸತ್ಯ ನಾರಾಯಣ ಕಥೆಯಾಗಿದೆ. ಈ ಕಥೆಯು ಮನುಷ್ಯನನ್ನು ನರನಿಂದ ನಾರಾಯಣನನ್ನಾಗಿ ಮಾಡುತ್ತದೆ. ಆದ್ದರಿಂದ ಶ್ರೇಷ್ಠ ಪೂಜೆಯು ಇವರದಾಯಿತಲ್ಲವೇ. ಆತ್ಮವು ತುಂಬಾ ದೊಡ್ಡದಾಗಿಲ್ಲ, ಸಂಪೂರ್ಣವಾಗಿ ಬಿಂದುವಿನ ರೂಪದಲ್ಲಿ ಇದೆ. ಇದರಲ್ಲಿ ಎಷ್ಟೊಂದು ಜ್ಞಾನವಿದೆ, ಎಷ್ಟೊಂದು ಪಾತ್ರವೂ ತುಂಬಲ್ಪಟ್ಟಿದೆ. ಇಷ್ಟು ಚಿಕ್ಕ ಆತ್ಮವು ನಾನು ಶರೀರದಲ್ಲಿ ಪ್ರವೇಶ ಮಾಡಿ ಪಾತ್ರವನ್ನು ಅಭಿನಯಿಸುತ್ತೇನೆ ಎಂದು ಹೇಳುತ್ತದೆ. ಶರೀರವು ಎಷ್ಟು ದೊಡ್ಡದಿದೆ. ಶರೀರದಲ್ಲಿ ಆತ್ಮವು ಪ್ರವೇಶವಾಗುವುದರಿಂದ ಚಿಕ್ಕಂದಿನಿಂದಲೇ ಪಾತ್ರವನ್ನು ಅಭಿನಯಿಸಲು ತೊಡಗುತ್ತದೆ. ಅನಾದಿ, ಅವಿನಾಶಿ ಪಾತ್ರವು ಸಿಕ್ಕಿದೆ. ಶರೀರವಂತೂ ಜಡವಾಗಿದೆ. ಅದರಲ್ಲಿ ಯಾವಾಗ ಚೈತನ್ಯ ಆತ್ಮವು ಪ್ರವೇಶ ಮಾಡುತ್ತದೆ ಆ ನಂತರ ಗರ್ಭದಲ್ಲಿ ಶಿಕ್ಷೆಗಳನ್ನು ಅನುಭವಿಸಲಾಗುತ್ತದೆ. ಶಿಕ್ಷೆಗಳನ್ನೂ ಸಹ ಹೇಗೆ ಅನುಭವಿಸುತ್ತದೆ! ಭಿನ್ನ-ಭಿನ್ನ ಶರೀರ ಧಾರಣೆ ಮಾಡಿ, ಯಾರ್ಯಾರಿಗೆ ಯಾವ ರೂಪದಲ್ಲಿ ದುಃಖ ಕೊಟ್ಟಿದ್ದರೆ ಅದು ಸಾಕ್ಷಾತ್ಕಾರ ವಾಗುತ್ತಾ ಹೋಗುತ್ತದೆ. ಶಿಕ್ಷೆಯೂ ಸಿಗುತ್ತಾ ಹೋಗುತ್ತದೆ. ಅಯ್ಯಯ್ಯೋ ಎನ್ನುತ್ತದೆ, ಆದ್ದರಿಂದಲೇ ಗರ್ಭ ಜೈಲು ಎಂದು ಹೇಳುತ್ತಾರೆ. ನಾಟಕವು ಎಷ್ಟು ಚೆನ್ನಾಗಿ ಮಾಡಲ್ಪಟ್ಟಿದೆ. ಎಷ್ಟೊಂದು ಪಾತ್ರಗಳನ್ನು ಅಭಿನಯಿಸುತ್ತಾರೆ. ಆತ್ಮವು ಪ್ರತಿಜ್ಞೆ ಮಾಡುತ್ತದೆ - ನಾನು ಎಂದೂ ಪಾಪವನ್ನು ಮಾಡುವುದಿಲ್ಲ. ಇಷ್ಟು ಚಿಕ್ಕ ಆತ್ಮನಿಗೆ ಎಷ್ಟೊಂದು ಅವಿನಾಶಿ ಪಾತ್ರವು ಸಿಕ್ಕಿದೆ. 84 ಜನ್ಮಗಳ ಪಾತ್ರವನ್ನು ಅಭಿನಯಿಸಿ ಪುನಃ ರಿಪೀಟ್ ಮಾಡುತ್ತಾರೆ. ಅದ್ಭುತವಾಗಿದೆಯಲ್ಲವೇ. ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ಮಕ್ಕಳು ತಿಳಿಯುತ್ತಾರೆ - ಇದಂತು ಯಥಾರ್ಥವಾದ ಮಾತಾಗಿದೆ, ಇಷ್ಟು ಚಿಕ್ಕ ಬಿಂದುವಿನಲ್ಲಿ ಎಷ್ಟೊಂದು ಪಾತ್ರವಿದೆ, ಅನೇಕಿಗೆ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ಆತ್ಮವೂ ನಕ್ಷತ್ರವಾಗಿದೆ. ಅದು ಈ ಭೃಕುಟಿಯ ಮಧ್ಯದಲ್ಲಿ ಇರುತ್ತದೆ ಎಂದು ಗಾಯನಾ ಮಾಡುತ್ತಾರೆ. ಇದು ಎಷ್ಟೊಂದು ಪಾತ್ರವನ್ನು ಅಭಿನಯಿಸುತ್ತದೆ. ಅದಕ್ಕೆ ರಚನೆ ಎಂದು ಹೇಳಲಾಗುತ್ತದೆ. ನಾವಾತ್ಮರು ಒಂದು ಶರೀರವನ್ನು ಬಿಟ್ಟು ಇನ್ನೊಂದು ತೆಗೆದುಕೊಳ್ಳುತ್ತೇವೆಂದು ನೀವಂತೂ ತಿಳಿದುಕೊಂಡಿದ್ದೀರಿ. ಎಷ್ಟೊಂದು ಪಾತ್ರ ಅಭಿನಯಿಸುತ್ತೇವೆ. ನಮಗೆ ತಂದೆಯು ಬಂದು ತಿಳಿಸಿಕೊಡುತ್ತಾರೆ. ಎಷ್ಟು ಶ್ರೇಷ್ಠ ಜ್ಞಾನವಾಗಿದೆ, ಇದು ಪ್ರಪಂಚದಲ್ಲಿ ಯಾರಿಗೂ ಇಲ್ಲ. ಬ್ರಹ್ಮನೂ ಸಹ ಮನುಷ್ಯನಾಗಿದ್ದರು, ಇವರಲ್ಲಿ ಈಗ ತಂದೆಯು ಪ್ರವೇಶ ಮಾಡಿದ್ದಾರೆ. ಈ ರೀತಿ ಅಲ್ಲ - ಇವರು ಗುರು ಗೋಸಾಯಿಒಯ ಶಿಷ್ಯನಾಗಿರಬಹುದು, ಅವರಿಂದ ಈ ರಿದ್ದಿ-ಸಿದ್ಧಿಯನ್ನು ಕಲಿಯುತ್ತಾರೆಂದಲ್ಲ. ಕೆಲ-ಕೆಲವರು ಇವರಿಗೆ ಗುರುಗಳ ವರದಾನ ಅಥವಾ ಗುರುವಿನ ಶಕ್ತಿ ಸಿಕ್ಕಿದೆ ಎಂದು ತಿಳಿಯುತ್ತಾರೆ. ಈ ಎಲ್ಲಾ ಮಾತುಗಳು ಭಿನ್ನವಾಗಿದೆ. ಸಮ್ಮುಖದಲ್ಲಿ ಕೇಳುವುದರಿಂದ ನಿಮಗೆ ತುಂಬಾ ಮಜಾ ಇರುತ್ತದೆ. ನಮಗೆ ತಂದೆಯು ಸಮ್ಮುಖದಲ್ಲಿ ತಿಳಿಸುತ್ತಿದ್ದಾರೆಂದು ನೀವು ತಿಳಿಯುತ್ತೀರಿ. ತಂದೆಯೂ ಸಹ ಇಷ್ಟು ಚಿಕ್ಕದಾಗಿದ್ದಾರೆ. ನಾವಾತ್ಮರು ಹೇಗಿದ್ದೇವೆಯೋ ಅವರು ಅಷ್ಟೇ ಚಿಕ್ಕದಾಗಿದ್ದಾರೆ. ಅವರಿಗೆ ಪರಮಪಿತ ಪರಮಾತ್ಮ ಎಂದು ಹೇಳಲಾಗುತ್ತದೆ, ಪರಮ ಎಂದರೆ ಸುಪ್ರೀಮ್ ಎಂದರ್ಥ. ಅವರು ದೂರಕ್ಕಿಂತ ದೂರ ಪರಮಧಾಮದಲ್ಲಿ ಇರುವವರು. ನೀವು ಮಕ್ಕಳೂ ಸಹ ದೂರಕ್ಕಿಂತ ದೂರ ಇರುತ್ತೀರಿ. ತಂದೆಯು ಎಷ್ಟೊಂದು ಆಳವಾದ ಮಾತುಗಳನ್ನು ತಿಳಿಸುತ್ತಾರೆ. ಹೀಗೆ ಶುರುವಿನಲ್ಲಿ ತಿಳಿಸುತ್ತಿದ್ದರೇನು! ದಿನ ಪ್ರತಿದಿನ ನೀವು ಮಕ್ಕಳಿಗೆ ಎಷ್ಟು ಗಂಭೀರವಾದ ಜ್ಞಾನವು ಸಿಗುತ್ತಾ ಇರುತ್ತದೆ. ಯಾರು ಕೊಡುತ್ತಾರೆ? ಶ್ರೇಷ್ಠಾತಿ ಶ್ರೇಷ್ಠ ಭಗವಂತ. ಅವರು ಬಂದು ಹೇಳುತ್ತಾರೆ - ಮಕ್ಕಳೇ.... ಆತ್ಮವೂ ಕರ್ಮೇಂದ್ರಿಯಗಳ ಮುಖಾಂತರ ಮಾತನಾಡುತ್ತದೆ. ಹೇಳುತ್ತಾರೆ ಅದು ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತದೆ ಎಂದು, ಆದರೆ ಕೇವಲ ಹೇಳುವುದಷ್ಟೇ ಹೇಳುತ್ತಾರೆ. ಇದು ಯಾರ ಬುಧಿಯಲ್ಲೂ ಬರುವುದಿಲ್ಲ. ಯಾರಾದರು ತಿಳಿಸಲು ಅವರಿಗೆ ಈ ಜ್ಞಾನವೇ ಇಲ್ಲವಲ್ಲ! ನಿಮ್ಮಲ್ಲಿಯೂ ಸಹ ಈ ಮಾತುಗಳನ್ನು ತುಂಬಾ ಕಡಿಮೆ ತಿಳಿದುಕೊಳ್ಳುತ್ತಾರೆ. ಯಾರು ತಿಳಿದುಕೊಳ್ಳುತ್ತಾರೆ ಅವರು ಒಳ್ಳೆಯ ರೀತಿಯಲ್ಲಿ ಧಾರಣೆ ಮಾಡುತ್ತಾರೆ ನಂತರ ಅನ್ಯರಿಗೆ ಧಾರಣೆ ಮಾಡಿಸುತ್ತಾರ್. ಅರ್ಥಾತ್ ವರ್ಣನೆ ಮಾಡುತ್ತಾರೆ. ಪರಮಪಿತ ಪರಮಾತ್ಮ ಎಂದು ಹೇಳುತ್ತೀರೆಂದರೆ ಪಿತನಿಂದ ಅವಶ್ಯವಾಗಿ ಆತಿಯು ಸಿಗಬೇಕಲ್ಲವೇ. ಸ್ವರ್ಗದ ಮಾಲೀಕರೂ ಆಗಬೇಕು. ಅವರಿಗೆ ಅವಶ್ಯವಾಗಿ ತಂದೆಯಿಂದ ಸ್ವರ್ಗದ ಆಸ್ತಿಯು ಸಿಕ್ಕಿರಬಹುದಲ್ಲವೇ. ಆಸ್ತಿಯನ್ನು ಎಲ್ಲಿ ಕೊಟ್ಟರು? ಸತ್ಯಯುಗದಲ್ಲಿ ಕೊಟ್ಟರೇ? ಅವಶ್ಯವಾಗಿ ಹಿಂದಿನ ಕರ್ಮವಾಗಿದೆ. ಈಗ ನೀವು ಕರ್ಮಗಳ ಸಿದ್ಧಾಂತವನ್ನು ತಿಳಿದುಕೊಂಡಿದೀರಿ. ನಿಮಗೆ ತಂದೆ ಇಂತಹ ಕರ್ಮವನ್ನು ಕಲಿಸುತ್ತಾರೆ, ಯಾವುದರಿಂದ ನೀವು ಇಂತಹ ದೇವತೆಗಳಾಗುತ್ತೀರಿ. ಯಾವಾಗ ನೀವು ಬ್ರಹ್ಮಾ ಮುಖಾವಂಶಾವಳಿ ಆಗುತ್ತೀರಿ, ಆಗ ಶಿವಬಾಬಾ ಬ್ರಹ್ಮನ ಮುಖದಿಂದ ನಿಮಗೆ ಈ ಜ್ಞಾನವನ್ನು ತಿಳಿಸುತ್ತಾರೆ. ಎಷ್ಟೊಂದು ರಾತ್ರಿ-ದಿನದ ಅಂತರವಿದೆ. ಈಗ ಎಷ್ಟು ಘೋರ ಅಂಧಕಾರವಾಗಿ ಬಿಟ್ಟಿದೆ. ಯಾವ ತಂದೆಯಿಂದ ಜ್ಞಾನದ ಪ್ರಕಾಶ ಸಿಗುತ್ತದೋ ಆ ತಂದೆಯನ್ನು ಅರಿತುಕೊಂಡಿಲ್ಲ. ನಾವು ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸಲು ಈ ಕರ್ಮಕ್ಷೇತ್ರದಲ್ಲಿ ಬಂದಿದ್ದೇವೆ ಎಂದು ಹೇಳುತ್ತಾರೆ, ಆದರೆ ನವು ಯಾರಾಗಿದ್ದೇವೆ, ನಮ್ಮ ತಂದೆಯು ಯಾರಾಗಿದ್ದಾರೆ-ಏನನ್ನೂ ತಿಳಿದುಕೊಂಡಿಲ್ಲ. ಸೃಷ್ಟಿ ಚಕ್ರವು ಹೇಗೆ ತಿರುಗುತ್ತದೆ ಎನ್ನುವುದನ್ನೂ ತಿಳಿದುಕೊಂಡಿಲ್ಲ. ಗಾಯನವೂ ಇದೆ. ತಂದೆಯು ಅಹಲ್ಯೆಯರನ್ನು, ಕುಬ್ಜರನ್ನು, ಘಣಿಕೆಯರನ್ನು ಓದಿಸಲು ಬರುತ್ತಾರೆ. ಪ್ರದರ್ಶನಿಗಳಲ್ಲಿ ತುಂಬಾ ದೊಡ್ಡ-ದೊಡ್ಡ ಮನುಷ್ಯರು ಬರುತ್ತಾರೆ. ಆದರೆ ಅವರ ಅದೃಷ್ಟದಲ್ಲಿ ಇಲ್ಲ. ತಂದೆಯು ಬಡವರ ಬಂಧು ಆಗಿದ್ದಾರೆ. ನೂರು ಜನದಲ್ಲಿ ಪರಿಶ್ರಮದಿಂದ ಕೆಲವೊಬ್ಬರು ಸಾಹುಕಾರರು ಸಿಗುತ್ತಾರೆ. ಆದರೂ ಸಹ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಕೆಲವರು ಮಾತ್ರವೇ ಮಾಡುತ್ತಾರೆ. ನೀವು ಬಡವರಾಗಿದೀರಿ. ಮಾತೆಯರ ಹತ್ತಿರ ತುಂಬಾ ಹಣವೇನೂ ಇರುವುದಿಲ್ಲ. ಕನ್ಯೆಯರ ಹತ್ತಿರ ಹಣವೆಲ್ಲಿಂದ ಬರುತ್ತದೆ? ಮಾತೆಯರಂತು ಹಾಫ್ ಪಾರ್ಟ್ನರ್ ಆಗಿದ್ದಾರೆ. ಕನ್ಯೆರಿಗಂತು ಏನೂ ಸಿಗುವುದಿಲ್ಲ. ಅವರು ಮದುವೆ ಆದರೆ ಹಾಫ್ ಪಾರ್ಟ್ನರಂತು ಆಗುತ್ತಾರೆ ಆದರೆ ಆಸ್ತಿಯನ್ನು ತೆಗೆದುಕೊಳ್ಳುವುದಿಲ್ಲ. ಗಂಡು ಮಕ್ಕಳು ಪೂರ್ಣ ಮಾಲೀಕರಾಗುತ್ತಾರೆ. ಆದ್ದರಿಂದ ಇಂತಹ ಕನ್ಯೆಯರನ್ನೇ ಮೊದಲು-ಮೊದಲು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ಒಂದಂತು ವಿದ್ಯೆಯದು ಬ್ರಹ್ಮಾಚಾರಿ ಜೀವನವಾಗಿದೆ, ಬಡವರಾಗಿರುತ್ತಾರೆ, ಪವಿತ್ರರಾಗಿರುತ್ತಾರೆ, ಆದ್ದರಿಂದಲೇ ಅವರದೇ ಪೂಜೆಯಾಗುತ್ತದೆ. ಇದೆಲ್ಲವೂ ಈ ಸಮಯದ ಮಾತುಗಳಾಗಿದೆ. ಈ ಸಮಯದಲ್ಲಿ ನಿಮ್ಮ ಪಾತ್ರವು ನಡೆಯುತ್ತದೆ, ಅದನ್ನು ನಂತರ ಪೂಜಿಸಲಾಗುತ್ತದೆ. ಶಿವ ಜಯಂತಿ ವಿನಃ ಕೃಷ್ಣ ಜಯಂತಿ ಆಗಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ ಶಿವ ಜಯಂತಿ ನಂತರ ಕೃಷ್ಣ ಜಯಂತಿ, ರಾಮನ ಜಯಂತಿ. ಶಿವ ಜಯಂತಿಯಿಂದ ಜಗದಾಂಬಾ, ಜಗತ್ಪಿತಾರವರ ಜನ್ಮವೂ ಆಗುತ್ತದೆ. ಅಂದಾಗ ಅವಶ್ಯವಾಗಿ ಜಗತ್ತಿಗೆ ಆಸ್ತಿಯು ಸಿಗುತ್ತದೆ. ಇಡೀ ಜಗತ್ತಿನ ಮಾಲೀಕರು ನೀವು ಆಗುತ್ತೀರಿ. ಜಗತ್ಮಾತಾ, ಜಗತ್ತಿನ ಮಾಲೀಕರಾಗಿದ್ದಾರೆ. ಜಗದಂಬನಿಗೆ ಅನೇಕ ಮೇಳಗಳು ಸೇರುತ್ತವೆ. ಆದರೆ ಬ್ರಹ್ಮನನ್ನು ಇಷ್ಟೊಂದು ಪೂಜಿಸುವುದಿಲ್ಲ. ಆದ್ದರಿಂದ ತಂದೆಯು ಮಾತೆಯರನ್ನು ಮುಂದಿಡುತ್ತಾರೆ. ಶಿವ ಶಕ್ತಿಯರು ಮಾತೆಯರಿಗೆ ಎಲ್ಲರೂ ಅದರಲ್ಲೂ ವಿಶೇಷವಾಗಿ ಪತಿಯರು ತುಂಬಾ ದುಃಖವನ್ನು ಕೊಟ್ಟಿದ್ದಾರೆ. ತಂದೆಯಂತು ಪತಿಯರ ಪತಿ ಆಗಿದ್ದಾರೆ. ತಂದೆಯು ಕನ್ಯೆಯರಿಗೆ ತಿಳಿಸುತ್ತಾರೆ ನೀವು ಜಗದಂಬನ ಮಕ್ಕಳು ಮಾಸ್ಟರ್ ಜಗದಂಬಾ ಆಗಿದೀರಲ್ಲವೇ. ಈ ಮಕ್ಕಳೂ ಸಹ ತಾಯಿಯ ತರಹ ಕಾರ್ಯ ಮಾಡುತ್ತಿದ್ದಾರೆ. ಮಮ್ಮನ ತರಹ ನೀವೂ ಸಹ ತ್ರಿಕಾಲದರ್ಶಿಗಳಾಗಿದ್ದೀರಿ. ಸ್ತ್ರೀ-ಪುರುಷ ಇಬ್ಬರೂ ಇದ್ದೀರಿ. ಇದು ಪ್ರವೃತ್ತಿ ಮಾರ್ಗವಾಗಿದೆಯಲ್ಲವೇ. ಮೆಜಾರಿಟಿ ಮಾತೆಯರದಾಗಿದೆ. ಹೆಸರೂ ಸಹ ಇವರದೇ ಪ್ರಸಿಧವಾಗಿದೆ, ಆದರೆ ಬ್ರಹ್ಮನದು ಇಷ್ಟು ಪ್ರಸಿದ್ಧವಾಗಿಲ್ಲ. ಸಾರಸಿದ್ಧ ಬ್ರಾಹ್ಮಣರು ಬ್ರಹ್ಮನನ್ನು ಪೂಜಿಸುತ್ತಾರೆ, ಎರಡು ಪ್ರಕಾರದ ಬ್ರಾಹ್ಮಣರು ಇರುತ್ತಾರೆ - ಸಾರಸಿದ್ಧರು ಮತ್ತು ಪುಷ್ಕರಣಿ. ಶಾಸ್ತ್ರಗಳು ಹೇಳುವವರು ಬೇರೆ ಇರುತ್ತಾರೆ. ಈ ಎಲ್ಲಾ ಮಾತುಗಳನ್ನು ತಂದೆಯೇ ಕುಳಿತು ತಿಳಿಸಿಕೊಡುತ್ತಾರೆ. ಹೇಗೆ ಈ ಚಕ್ರವು ತಿರುಗುತ್ತದೆ, ನಾನು ಹೇಗೆ ಬರುತ್ತೇನೆ. ನಾನು ಪುನಃ 5000 ವರ್ಷಗಳ ನಂತರ ಜ್ಞಾನವನ್ನು ತಿಳಿಸುತ್ತೇನೆ ಎನ್ನುವ ಪ್ರತಿಜ್ಞೆಯಂತು ಇದೆಯಲ್ಲವೇ. ಗೀತೆಯಲ್ಲಿಯೂ ಇದೆಯಲ್ಲವೇ. ಏನು ಕಳೆದುಹೋಗುತ್ತದೆ ಅದನ್ನು ನಂತರ ಭಕ್ತಿಮಾರ್ಗದಲ್ಲಿ ಗಾಯನ ಮಾಡಲಾಗುತ್ತದೆ. ಇದು ಅನಾದಿ ನಾಟಕವಾಗಿದೆ. ಇದು ಎಂದೂ ಷೂಟ್ ಆಗುವುದಿಲ್ಲ, ಇದಕ್ಕೆ ಯಾವುದೇ ಆದಿ, ಮಧ್ಯ ಅಂತ್ಯವಿಲ್ಲ. ನಡೆಯುತ್ತಲೇ ಬರುತ್ತದೆ. ಈ ನಾಟಕವು ಹೇಗೆ ನಡೆಯುತ್ತದೆ ಎಂದು ತಂದೆಯು ಬಂದು ತಿಳಿಸುತ್ತಾರೆ. 84 ಜನ್ಮಗಳನ್ನು ನೀವೇ ತೆಗೆದುಕೊಳ್ಳಬೇಕಾಗುತ್ತದೆ. ನೀವೇ ಬ್ರಾಹ್ಮಣ, ದೇವತಾ, ಕ್ಷತ್ರಿಯ ಮುಂತಾದ ವರ್ಣಗಳಲ್ಲಿ ಬರುತ್ತೀರಿ. ಶಿವಬಾಬಾ ಮತ್ತು ಬ್ರಾಹ್ಮಣ ಇಬ್ಬರನ್ನು ಮುಚ್ಚಿ ಬಿಟ್ಟಿದ್ದಾರೆ. ಬ್ರಹ್ಮನ ಮುಖಾಂತರ ನೀವು ಬ್ರಾಹ್ಮಣರಾಗುತ್ತೀರಿ. ಬ್ರಾಹ್ಮಣರೇ ಯಜ್ಞವನ್ನು ಸಂಭಾಲನೆ ಮಾಡುತ್ತಾರೆ. ಪತಿತರು ಯಜ್ಞದ ಸಂಭಾಲನೆ ಮಾಡುವುದಿಲ್ಲ. ಯಾವಾಗ ಯಜ್ಞವನ್ನು ರಚಿಸುತ್ತಾರೆಂದರೆ ವಿಕಾರದಲ್ಲಿ ಹೋಗುವುದಿಲ್ಲ. ಯಾತ್ರೆಯಲ್ಲಿಯೂ ಸಹ ವಿಕಾರದಲ್ಲಿ ಹೋಗುವುದಿಲ್ಲ. ನೀವು ಆತ್ಮಿಕ ಯಾತ್ರೆಯಲ್ಲಿ ಇದ್ದೀರಿ. ಆದ್ದರಿಂದ ವಿಕಾರದಲ್ಲಿ ಹೋಗಬಾರದಾಗಿದೆ. ಇಲ್ಲದಿದ್ದರೆ ವಿಘ್ನಗಳು ಬೀಳುವುದು. ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ತಂದೆಯು ಹೇಳುತ್ತಾರೆ ನಾನು ನೀವು ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತೇನೆ. ಸೊಳ್ಳೆಗಳ ರೀತಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಾವಾತ್ಮಗಳು ಇರುತ್ತೇವೆ. ಅದು ಪರಮಧಾಮವಾಗಿದೆ. ಅಲ್ಲಿ ಆತ್ಮಗಳು ನಿವಾಸ ಮಾಡುತ್ತಾರೆ. ನಂತರ ನಾವು ಬಂದು ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ ಮತ್ತೆ ಬ್ರಾಹ್ಮಣರಾಗಿದ್ದೇವೆ. ಯಾರು ಬ್ರಾಹ್ಮಣರಾಗುತ್ತಾರೋ ಅವರೇ ಸ್ವರ್ಗದಲ್ಲಿ ಹೋಗುತ್ತಾರೆ. ಅಲ್ಲಿಯೂ ಸಹ ಉಯ್ಯಾಲೆಯಲ್ಲಿ ತೂಗುತ್ತಾರಲ್ಲವೇ. ಅಲ್ಲಿ ನೀವು ರತ್ನ-ಜಡಿತ ಉಯ್ಯಾಲಗಳಲ್ಲಿ ತೂಗುತ್ತೀರಿ. ಶ್ರೀಕೃಷ್ಣನ ಉಯ್ಯಾಲೆಯನ್ನು ಎಷ್ಟು ಚೆನ್ನಾಗಿ ಶೃಂಗರಿಸುತ್ತಾರೆ. ಕೃಷ್ಣನ ಜೊತೆ ಎಲ್ಲರ ಪ್ರೀತಿಯಿದೆ. ಗಾಯನ ಮಾಡುತ್ತಾರಲ್ಲವೇ ರಾಧೆ, ಗೋವಿಂದನಿರುವ ವೃಂದಾವನಕ್ಕೆ ಹೋಗೋಣ..... ಈಗ ನೀವು ಪ್ರತ್ಯಕ್ಷದಲ್ಲಿ ಅಲ್ಲಿ ಹೋಗುವುದಕ್ಕೋಸ್ಕರ ತಯಾರಾಗುತ್ತಿದೀರಿ. ನಮ್ಮ ಮನೋಕಾಮನೆಗಳೆಲ್ಲ ಪೂರ್ಣ ಆಗುತ್ತದೆ ಎನ್ನುವುದನ್ನು ನೀವು ತಿಳಿದುಕೊಂಡಿದೀರಿ. ಈಗ ನೀವು ಈಶ್ವರೀಯ ಪುರಿಯಲ್ಲಿ ಹೋಗುತ್ತೀರಿ. ತಿಳಿದುಕೊಂಡಿದ್ದೀರಿ ತಂದೆಯು ಎಲ್ಲರನ್ನು ಹೇಗೆ ಕರೆದುಕೊಂಡು ಹೋಗುತ್ತಾರೆ. ಬೆಣ್ಣೆಯಿಂದ ಕೂದಲನ್ನು ತೆಗೆಯುವ ಹಾಗೆ ತಂದೆಯು ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ. ನಿಮಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಸಹಜವಾಗಿ ರಾಜ್ಯಭಾಗ್ಯವನ್ನು ಕೊಡುತ್ತಾರೆ, ತಂದೆಯು ಹೇಳುತ್ತಾರೆ ನೀವೆಲ್ಲಿಗೆ ಹೋಗಬೇಕಾಗಿದೆಯೋ ಆ ಕೃಷ್ಣ ಪುರಿಯನ್ನು ನೆನಪು ಮಾಡಿ. ಮೊದಲು-ಮೊದಲು ಅವಶ್ಯವಾಗಿ ತಂದೆಯು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಮತ್ತೆ ಅಲ್ಲಿಂದ ಸ್ವರ್ಗದಲ್ಲಿ ಕಲಿಸುತ್ತಾರೆ. ಈಗ ನೀವು ವಯಾ ಶಾಂತಿಧಾಮ ಶ್ರೀಕೃಷ್ಣಪುರಿಯಲ್ಲಿ ಹೋಗುತ್ತೀರಿ. ಹೇಗೆ ದೆಹಲಿಯ ಮುಖಾಂತರ ಹೋಗಬೇಕಾಗುತ್ತದೆಯಲ್ಲವೇ. ಈಗ ಹಿಂತಿರುಗಿ ಹೋಗುತ್ತೇವೆ, ನಂತರ ಕೃಷ್ಣ ಪುರಿಯಲ್ಲಿ ಬರುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ನಾವು ಶ್ರೀಮತದ ಮೇಲೆ ನಡೆಯುತ್ತಿರುವದರಿಂದ ತಂದೆಯನ್ನು ನೆನಪು ಮಾಡಬೇಕು, ಪವಿತ್ರರಾಗಬೇಕಾಗಿದೆ. ಯಾವಗಲೂ ಯಾತ್ರೆಯಲ್ಲಿ ಪವಿತ್ರರಾಗಿರುತ್ತಾರೆ, ವಿದ್ಯೆಯನ್ನೂ ಸಹ ಬ್ರಹ್ಮಚರ್ಯದಲ್ಲಿಯೇ ಓದುತ್ತಾರೆ, ಪವಿತ್ರತೆಯು ಅವಶ್ಯವಾಗಿ ಬೇಕು. ತಂದೆಯು ಮಕ್ಕಳಿಗೆ ಪುರುಷಾರ್ಥ ಮಾಡಿಸುತ್ತಾರೆ. ಈ ಸಮಯದ ಪುರುಷಾರ್ಥವು ನಿಮ್ಮ ಕಲ್ಪ-ಕಲ್ಪದ್ದಾಗಿ ಬಿಡುವುದು. ಪುರುಷಾರ್ಥವಂತು ಮಾಡಬೇಕಲ್ಲವೇ. ಇದು ಶಾಲೆಯಾಗಿದೆ. ಇದರಲ್ಲಿ ಅವಶ್ಯವಾಗಿ ಓದಲೇಬೇಕು. ಸ್ವಯಂ ಭಗವಂತನೇ ಓದಿಸುತ್ತಾರೆ. ಆದ್ದರಿಂದ ಒಂದು ದಿನವೂ ತಪ್ಪಿಸಿಕೊಳ್ಳಬಾರದು. ಇದು ತುಂಬಾ ಬೆಲೆಯುಳ್ಳ ವಿದ್ಯೆಯಾಗಿದೆ. ಈ ಬ್ರಹ್ಮಾ ತಂದೆಯೂ ಸಹ ಇದನ್ನು ಎಂದೂ ತಪ್ಪಿಸುವುದಿಲ್ಲ. ಇಲ್ಲಿ ನೀವು ಮಕ್ಕಳು ಸಮ್ಮುಖ ಖಜಾನೆಯಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ. ಎಷ್ಟು ಓದುತ್ತೀರೋ ಅಷ್ಟು ನಶೆ ಏರುವುದು. ಬಂಧನವಿಲ್ಲದಿದ್ದರೆ, ಇಲ್ಲಿ ಇರಬಹುದಾಗಿದೆ. ಆದರೆ ಮಾಯೆಯು ಇಂತಹದಾಗಿದೆ ಅದು ಬಂಧನದಲ್ಲಿ ಬಂಧಿಸಿ ಬಿಡುತ್ತದೆ. ಅನೇಕರಿದ್ದಾರೆ ಅವರಿಗೆ ರಜೆಯೂ ಸಿಗುತ್ತದೆ. ಅವರಿಗೆ ತಂದೆಯು ಹೇಳುತ್ತಾರೆ ಪೂರ್ಣ ರಿಫ್ರೆಷ್ ಆಗಿ ಹೋಗಿ ಎಂದು. ಆದರೆ ಹೊರಗಡೆ ಹೋದಾಗ ಮತ್ತೆ ಈ ನಶೆಯೇ ಇರುವುದಿಲ್ಲ. ಅನೇಕರಿಗೆ ಕೇವಲ ಮುರಳಿ ಓದುವುದರಿಂದಲೂ ನಶೆ ಏರಿಬಿಡುತ್ತದೆ. ತುಂಬಾ ಆಪತ್ತುಗಳು ಬರುವುದಿಲ್ಲ. ಈಗ ಯಾರು ಸಹಯೋಗಿಗಳಾಗುತ್ತಾರೆ, ಅವರಿಗೆ ತಂದೆಯ ಸಹಯೋಗ ಸಿಗುತ್ತದೆ. ಯಾರು ಒಳ್ಳೆಯ ರೀತಿಯಲ್ಲಿ ಸೇವೆ ಮಾಡುತ್ತಾರೆ ಅವರಿಗೇ ಅಂತ್ಯದಲ್ಲಿ ತಂದೆಯ ಸಹಾಯವಂತು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆಯು ಬಹಳ ಬೆಲೆಯುಳ್ಳದ್ದಾಗಿದೆ. ಸ್ವಯಂ ಭಗವಂತನೇ ಓದಿಸುತ್ತಾರೆ ಆದ್ದರಿಂದ ವಿದ್ಯೆಯನ್ನು ಒಂದು ದಿನವೂ ತಪ್ಪಿಸಬಾರದಾಗಿದೆ. ಜ್ಞಾನದ ಖಜಾನೆಯಿಂದ ಪ್ರತಿದಿನ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ.

2. ಇದು ವಿದ್ಯೆಯ ಸಮಯವಾಗಿದೆ. ಯಾತ್ರೆಯಲ್ಲಿ ನಡೆಯುತ್ತಿದ್ದೀರಿ. ರುದ್ರ ಯಜ್ಞದ ಸಂಭಾಲನೆ ಮಾಡಬೇಕಾಗಿದೆ. ಆದ್ದರಿಂದ ಅವಶ್ಯವಾಗಿ ಪವಿತ್ರರಾಗಿರಬೇಕಾಗಿದೆ. ಯಾವುದೇ ವಿಕಾರಕ್ಕೆ ವಶರಾಗಿ ವಿಘ್ನ ಹಾಕಬರದಾಗಿದೆ.

ವರದಾನ:
ಭಾಗ್ಯವಿದಾತ ತಂದೆಯ ಮೂಲಕ ಸಿಕ್ಕಿರುವಂತಹ ಭಾಗ್ಯವನ್ನು ಹಂಚುವ ಹಾಗೂ ವೃದ್ಧಿಗೊಳಿಸುವಂತಹ ಅದೃಷ್ಠಶಾಲಿ ಭವ.

ಅತಿ ಶ್ರೇಷ್ಠವಾದ ಅದೃಷ್ಟವೆಂದರೆ - ಭಾಗ್ಯವಿದಾತಾ ತಂದೆಯು ತಮ್ಮವರಾಗಿ ಬಿಟ್ಟರು! ಪ್ರಪಂಚದವರಂತು ಭಗವಂತನು ಒಂದು ಸೆಕೆಂಡಿಗಾದರೂ ದರ್ಶನ ಕೊಡಲಿ ಎಂದು ಚಡಪಡಿಸುತ್ತಿದ್ದಾರೆ ಮತ್ತು ತಾವು ಸದಾ ನಯನಗಳಲ್ಲಿ ಸಮಾವೇಶವಾಗಿದ್ದೀರಿ. ಇದಕ್ಕೆ ಅದೃಷ್ಟವೆಂದು ಹೇಳಲಾಗುತ್ತದೆ. ಭಾಗ್ಯವು ತಮ್ಮ ಆಸ್ತಿಯಾಗಿದೆ, ಇಡೀ ಕಲ್ಪದಲ್ಲಿ ಇಂತಹ ಭಾಗ್ಯವು ಈಗಲೇ ಸಿಗುವುದು ಅಂದಮೇಲೆ ಭಾಗ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಾ ಸಾಗಿರಿ. ವೃದ್ಧಿ ಮಾಡಿಕೊಳ್ಳುವುದರ ಸಾಧನವಾಗಿದೆ - ಹಂಚುವುದು. ಅನ್ಯರಿಗೆ ಎಷ್ಟು ಹಂಚುವಿರಿ ಅರ್ಥಾತ್ ಭಾಗ್ಯಶಾಲಿಯನ್ನಾಗಿ ಮಾಡುತ್ತೀರೋ ಅಷ್ಟು ಭಾಗ್ಯವು ವೃದ್ಧಿಯಾಗುತ್ತದೆ.

ಸ್ಲೋಗನ್:
ನಿರ್ವಿಘ್ನ ಹಾಗೂ ಏಕರಸ ಸ್ಥಿತಿಯ ಅನುಭವ ಮಾಡಬೇಕೆಂದರೆ ಏಕಾಗ್ರತೆಯ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿರಿ.