13.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಇದು ನರನಿಂದ ನಾರಾಯಣನಾಗುವ ಪಾಠಶಾಲೆಯಾಗಿದೆ, ಓದಿಸುವವರು ಸ್ವಯಂ ಸತ್ಯತಂದೆ, ಸತ್ಯಶಿಕ್ಷಕ ಮತ್ತು ಸದುರುವಾಗಿದ್ದಾರೆ, ನೀವು ಇದೇ ನಶೆಯಲ್ಲಿ ಪಕ್ಕಾ ಇರಬೇಕಾಗಿದೆ

ಪ್ರಶ್ನೆ:
ನೀವು ಮಕ್ಕಳಿಗೆ ಯಾವ ಮಾತಿನ ಚಿಂತೆಯು ಅಂಶದಷ್ಟೂ ಇರಬಾರದು- ಏಕೆ?

ಉತ್ತರ:
ಒಂದುವೇಳೆ ಯಾರಾದರೂ ನಡೆಯುತ್ತಾ-ನಡೆಯುತ್ತಾ ಹಾರ್ಟ್ಫೇಲ್ ಆಗಿಬಿಡುತ್ತದೆ, ಶರೀರವನ್ನು ಬಿಡುತ್ತಾರೆಂದರೆ ನಿಮಗೆ ಚಿಂತೆಯಾಗಬಾರದು ಏಕೆಂದರೆ ಪ್ರತಿಯೊಬ್ಬರೂ ತಮ್ಮ ಪಾತ್ರ ಅಭಿನಯಿಸಬೇಕಾಗಿದೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ನಿಮಗೆ ಖುಷಿಯಾಗಬೇಕು ಏಕೆಂದರೆ ಆತ್ಮವು ಜ್ಞಾನ ಮತ್ತು ಯೋಗದ ಸಂಸ್ಕಾರವನ್ನು ತೆಗೆದುಕೊಂಡು ಹೋಗುವುದರಿಂದ ಇನ್ನೂ ಹೆಚ್ಚಿನದಾಗಿ ಭಾರತದ ಸೇವೆ ಮಾಡುತ್ತಾರೆ ಆದ್ದರಿಂದ ಚಿಂತೆಯ ಮಾತಿಲ್ಲ. ಇದಂತು ನಾಟಕದ ಪೂರ್ವನಿಶ್ಚಿತವಾಗಿದೆ.

ಗೀತೆ:
ನೀವೇ ಮಾತಾ ಆಗಿದ್ದೀರಿ, ಪಿತನೂ ಆಗಿದ್ದೀರಿ...........

ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳೂ ಸಹ ಇದನ್ನು ತಿಳಿದುಕೊಂಡಿದ್ದೀರಿ- ತಂದೆಯು ಮಕ್ಕಳೇ ಎಂದು ಕರೆಯುತ್ತಾರೆ ಮತ್ತು ಈ ಬಾಪ್ದಾದಾ ಇಬ್ಬರೂ ಕಂಬೈಂಡ್ ಆಗಿದ್ದಾರೆ. ಮೊದಲು ಬಾಪ್ದಾದಾ ನಂತರ ಮಕ್ಕಳಿದ್ದೀರಿ, ಇದು ಹೊಸರಚನೆ ಆಯಿತಲ್ಲವೇ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. 5000 ವರ್ಷಗಳ ಹಿಂದಿನಂತೆ ಮತ್ತೆ ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದನ್ನು ಭಕ್ತಿಮಾರ್ಗದಲ್ಲಿ ಅವರು ಪುಸ್ತಕವನ್ನಾಗಿ ಮಾಡಿ ಅದನ್ನು ಗೀತೆ ಎಂದು ಹೇಳಿಬಿಟ್ಟಿದ್ದಾರೆ ಆದರೆ ಈ ಸಮಯವಂತು ಗೀತೆಯ ಯಾವುದೇ ಮಾತಿಲ್ಲ. ಇದನ್ನು ನಂತರದಲ್ಲಿ ಶಾಸ್ತ್ರಗಳನ್ನಾಗಿ ಮಾಡಿ ಅದನ್ನು ಶ್ರೀಮತ್ಭಗವತ್ ಗೀತಾ, ಸಹಜ ರಾಜಯೋಗದ ಪುಸ್ತಕವೆಂದು ಹೇಳಿದ್ದಾರೆ. ಭಕ್ತಿಮಾರ್ಗದಲ್ಲಿ ಪುಸ್ತಕಗಳನ್ನು ಓದುವುದರಿಂದ ಏನೂ ಲಾಭವಾಗುವುದಿಲ್ಲ. ಭಕ್ತಿಮರ್ಗದಲ್ಲಿ ಕೇವಲ ಶಿವನನ್ನು ನೆನಪು ಮಾಡುವುದರಿಂದ ಆಸ್ತಿಯೇನೂ ಸಿಗುವುದಿಲ್ಲ. ಆಸ್ತಿಯು ಕೇವಲ ಈಗ ಸಂಗಮದಲ್ಲಿಯೇ ಸಿಗುತ್ತದೆ. ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುವವರು ಮತ್ತು ಆಸ್ತಿಯನ್ನೂ ಸಹ ಸಂಗಮದಲ್ಲಿಯೇ ಕೊಡುತ್ತಾರೆ. ತಂದೆಯು ರಾಜಯೋಗವನ್ನು ಕಲಿಸುತ್ತಾರೆ. ಸನ್ಯಾಸಿಗಳು ಮುಂತಾದವರು ಏನನ್ನು ಕಲಿಸುತ್ತಾರೆ. ಅವರು ಕಲಿಸುವುದರಲ್ಲಿ ಮತ್ತು ಇದರಲ್ಲಿ ಹಗಲು-ರಾತ್ರಿಯ ವ್ಯತ್ಯಾಸವಿದೆ. ಅವರ ಬುದ್ಧಿಯಲ್ಲಿ ಗೀತೆಯಿರುತ್ತದೆ ಮತ್ತೆ ಕೃಷ್ಣನು ಗೀತೆಯನ್ನು ತಿಳಿಸಿದನೆಂದು ತಿಳಿಯುತ್ತಾರೆ. ವ್ಯಾಸನು ಬರೆದನು ಆದರೆ ಗೀತೆಯನ್ನು ಕೃಷ್ಣನು ತಿಳಿಸಲಿಲ್ಲ, ತಿಳಿಸುವಂತಹ ಸಮಯವೂ ಅಲ್ಲ. ಆ ಸಮಯದಲ್ಲಿ ಕೃಷ್ಣನ ರೂಪವಾಗಲು ಸಾಧ್ಯವಿಲ್ಲ. ಈಗ ತಂದೆಯು ಎಲ್ಲಾ ಮಾತುಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ ಮತ್ತು ಈಗ ನಿರ್ಣಯ ಮಾಡಿ ಎಂದು ಹೇಳುತ್ತಾರೆ. ಅವರ ಹೆಸರೂ ಸಹ ಪ್ರಸಿದ್ಧವಾಗಿದೆ. ಸತ್ಯವನ್ನು ತಿಳಿಸುವವರೇ ನರನಿಂದ ನಾರಾಯಣರನ್ನಾಗಿ ಮಾಡಬಲ್ಲರು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ನರನಿಂದ ನಾರಾಯಣರಾಗುವುದಕ್ಕಾಗಿ ಈ ಪಾಠಶಾಲೆ ಅಥವಾ ರುದ್ರಜ್ಞಾನ ಯಜ್ಞದಲ್ಲಿ ಕುಳಿತಿದ್ದೇವೆ. ಶಿವಬಾಬಾ ಅಕ್ಷರವು ಬಹಳ ಪ್ರಿಯವೆನಿಸುತ್ತದೆ. ಅವಶ್ಯವಾಗಿ ತಂದೆ ಮತ್ತು ದಾದಾ ಇಬ್ಬರೂ ಇದ್ದಾರೆ. ಈ ನಿಶ್ಚಯದಿಂದಲೇ ನೀವು ಬಂದಿದ್ದೀರಿ. ತಂದೆಯು ಬ್ರಹ್ಮಾರವರ ಮುಖಾಂತರ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ ಮತ್ತು ನಾನು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಿದ್ದೇನೆ ಎಂದು ತಿಳಿಸುತ್ತಿದ್ದಾರೆ. ನೀವು ತ್ರಿಲೋಕಿನಾಥರಾಗುತ್ತೀರಿ ಎನ್ನುವಂತಲ್ಲ. ನೀವು ಕೇವಲ ಒಂದು ಶಿವಪುರಿಯ ಮಾಲೀಕರಾಗುತ್ತೀರಿ. ಅದನ್ನು ಲೋಕವೆಂದು ಹೇಳುವುದಿಲ್ಲ. ಮನುಷ್ಯ ಸೃಷ್ಟಿಯನ್ನೇ ಲೋಕವೆಂದು ಹೇಳಲಾಗುತ್ತದೆ. ಮನುಷ್ಯ ಲೋಕವು ಚೈತನ್ಯ ಲೋಕವಾಗಿದೆ ಮತ್ತು ಅದು ನಿರಾಕಾರ ಲೋಕವಾಗಿದೆ. ನಿಮಗೆ ಕೇವಲ ತ್ರಿಲೋಕದ ಜ್ಞಾನವನ್ನು ತಿಳಿಸುತ್ತಾರೆ, ತ್ರಿಲೋಕದ ನಾಥ(ಮಾಲೀಕ)ರನ್ನಾಗಿ ಮಾಡುವುದಿಲ್ಲ. ಮೂರು ಲೋಕಗಳ ಜ್ಞಾನವು ಸಿಕ್ಕಿದೆ ಆದ್ದರಿಂದ ತ್ರಿಕಾಲದರ್ಶಿಗಳೆಂದು ಹೇಳಲಾಗುತ್ತದೆ. ವಿಷ್ಣುವನ್ನೂ ಸಹ ತ್ರಿಲೋಕಿನಾಥನೆಂದು ಹೇಳುವುದಿಲ್ಲ. ಅವರಿಗೆ ಮೂರೂ ಲೋಕಗಳ ಜ್ಞಾನವೇ ಇರುವುದಿಲ್ಲ. ಲಕ್ಷ್ಮೀ-ನಾರಾಯಣರು ಯಾವಾಗ ರಾಧ-ಕೃಷ್ಣನಾಗಿರುತ್ತಾರೆ, ಅವರಿಗೂ ಸಹ ತ್ರಿಲೋಕದ ಜ್ಞಾನವಿರುವುದಿಲ್ಲ. ನೀವು ತ್ರಿಕಾಲದರ್ಶಿಗಳಾಗಬೇಕಾಗಿದೆ. ಜ್ಞಾನವನ್ನು ಪಡೆಯಬೇಕಾಗಿದೆ, ಬಾಕಿ ಕೃಷ್ಣನಿಗಾಗಿ ಹೇಳುತ್ತಾರೆ- ತ್ರಿಲೋಕಿನಾಥನಾಗಿದ್ದರು, ಆದರೆ ಈ ರೀತಿಯಿಲ್ಲ. ಯಾರು ರಾಜ್ಯಭಾರ ಮಾಡುತ್ತಾರೆ ಅವರಿಗೆ ಮೂರು ಲೋಕಗಳ ನಾಥನೆಂದು ಹೇಳುತ್ತಾರೆ. ಅವರಂತು ಕೇವಲ ವೈಕುಂಠನಾಥನಾಗುತ್ತಾರೆ, ಸತ್ಯಯುಗವನ್ನು ವೈಕುಂಠವೆಂದು ಹೇಳಲಾಗುತ್ತದೆ. ತ್ರೇತಾವನ್ನು ವೈಕುಂಠವೆಂದು ಹೇಳುವುದಿಲ್ಲ. ಈ ಲೋಕಕ್ಕೂ ಸಹ ನಾವು ನಾಥರಾಗುವುದಿಲ್ಲ. ಬಾಬಾರವರೂ ಸಹ ಕೇವಲ ಬ್ರಹ್ಮಮಹಾತತ್ವದ ನಾಥನಾಗಿದ್ದಾರೆ, ಬ್ರಹ್ಮಾಂಡದಲ್ಲಿ ನಾವು ಆತ್ಮಗಳು ಅಂಡಾಕಾರದಂತೆ ಇರುತ್ತೇವೆ, ಅದರ ಮಾಲೀಕನಾಗಿದ್ದಾರೆ. ಬ್ರಹ್ಮಾ-ವಿಷ್ಣು ಹಾಗೂ ಶಂಕರ ಸೂಕ್ಷ್ಮವತನದಲ್ಲಿ ಇರುವವರಾಗಿದ್ದಾರೆ ಅಂದಮೇಲೆ ಅವರು ಅಲ್ಲಿಯ ನಾಥರೆಂದು ಹೇಳುತ್ತಾರೆ. ನೀವು ವೈಕುಂಠನಾಥರಾಗುತ್ತೀರಿ. ಅದು ಸೂಕ್ಷ್ಮವತನದ ಮಾತಾಗಿದೆ, ಇದು ಮೂಲವತನದ ಮಾತಾಗಿದೆ. ಕೇವಲ ನೀವು ತ್ರಿಕಾಲದರ್ಶಿಗಳಾಗುತ್ತೀರಿ. ನಿಮ್ಮ ಮೂರನೆಯ ನೇತ್ರವು ತೆರೆದಿದೆ. ಭೃಕುಟಿಯ ಮಧ್ಯದಲ್ಲಿ ಮೂರನೆಯ ನೇತ್ರವಿದೆ ಎಂದು ತೋರಿಸುತ್ತಾರೆ ಆದ್ದರಿಂದ ತ್ರಿನೇತ್ರಿ ಎಂದು ಹೇಳುತ್ತಾರೆ ಆದರೆ ಇದರ ಚಿಹ್ನೆಗಳನ್ನು ದೇವತೆಗಳಿಗೆ ಕೊಡುತ್ತಾರೆ ಏಕೆಂದರೆ ಯಾವಾಗ ನಿಮ್ಮ ಕರ್ಮಾತೀತ ಸ್ಥಿತಿಯಾಗುತ್ತದೆ ಆಗ ನೀವು ತ್ರಿನೇತ್ರಿ ಆಗುತ್ತೀರಿ, ಅದಂತೂ ಈ ಸಮಯದ ಮಾತಾಗಿದೆ. ಬಾಕಿ ಮನುಷ್ಯರು ಜ್ಞಾನದ ಶಂಖುವನ್ನು ಮೊಳಗಿಸುವುದಿಲ್ಲ. ಅವರು ಸ್ಥೂಲಶಂಖುವೆಂದು ಬರೆದುಬಿಟ್ಟಿದ್ದಾರೆ. ಇದು ಮುಖದ ಮಾತಾಗಿದೆ. ಇದರಿಂದ ನೀವು ಜ್ಞಾನಶಂಖುವನ್ನು ಮೊಳಗಿಸುತ್ತೀರಿ. ಜ್ಞಾನವನ್ನು ಓದುತ್ತಿದ್ದೀರಿ. ಹೇಗೆ ದೊಡ್ಡ ವಿಶ್ವವಿದ್ಯಾಲಯದಲ್ಲಿ ವಿದ್ಯೆಯನ್ನು ಓದುತ್ತಾರೋ ಹಾಗೆಯೇ ಇದೂ ಶ ಪತಿತ-ಪಾವನ ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ನೀವು ಎಷ್ಟು ದೊಡ್ಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಿರಿ. ಜೊತೆಜೊತೆಗೆ ನೀವು ಇದನ್ನು ತಿಳಿದುಕೊಂಡಿದ್ದೀರಿ- ನಮ್ಮ ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಸರ್ವಸ್ವವಾಗಿದ್ದಾರೆ. ಈ ಮಾತಾಪಿತಾ ಪ್ರತಿಯೊಂದು ಪರಿಸ್ಥಿತಿಯಲ್ಲಿ ಸುಖ ಕೊಡುವವರಾಗಿದ್ದಾರೆ ಆದ್ದರಿಂದ ನೀವು ಮಾತಾ-ಪಿತಾ.....ಎಂದು ಹೇಳುತ್ತಾರೆ. ಇವರು ಸ್ಯಾಕ್ರೀನ್, ಅತಿಮಧುರನಾಗಿದ್ದಾರೆ. ದೇವತೆಗಳಂತಹ ಮಧುರರು ಯಾರೂ ಇರಲು ಸಾಧ್ಯವಿಲ್ಲ. ಭಾರತವೇ ಸುಖಿ, ಸದಾ ಆರೋಗ್ಯವಂತ, ಸಂಪದ್ಭರಿತ ದೇಶವಾಗಿತ್ತು, ಸಂಪೂರ್ಣ ಪವಿತ್ರವಾಗಿತ್ತು. ಅದನ್ನು ನಿರ್ವಿಕಾರಿ ಭಾರತವೆಂದು ಹೇಳಲಾಗುತ್ತದೆ ಆದರೆ ಈಗ ಹೇಳಲಾಗುವುದಿಲ್ಲ. ಈಗಂತು ವಿಕಾರಿ, ಪತಿತರೆಂದು ಹೇಳಲಾಗುತ್ತದೆ. ತಂದೆಯು ಎಲ್ಲವನ್ನು ಎಷ್ಟು ಸಹಜವಾಗಿ ತಿಳಿಸುತ್ತಿದ್ದಾರೆ. ತಂದೆ ಮತ್ತು ಆಸ್ತಿಯನ್ನು ಅರಿತುಕೊಳ್ಳುತ್ತೀರಿ. ತಂದೆಯು ಎಷ್ಟು ಮಧುರರನ್ನಾಗಿ ಮಾಡುತ್ತಾರೆ, ನೀವೂ ಸಹ ಅನುಭವ ಮಾಡುತ್ತೀರಿ. ನಾವು ಶ್ರೀಮತದನುಸಾರ ಓದಬೇಕು ಮತ್ತು ಓದಿಸಬೇಕಾಗಿದೆ. ಇದೇ ವ್ಯಾಪಾರವಾಗಿದೆ. ಬಾಕಿ ಕರ್ಮಭೋಗವಂತು ಅನೇಕ ಜನ್ಮ-ಜನ್ಮಾಂತರದ್ದಾಗಿದೆ. ಯಾರೇ ರೋಗಿ ಆಗುತ್ತಾರೆ, ಹಾರ್ಟ್ಫೇಲ್ ಆಗುತ್ತದೆಯೆಂದರೆ ಅದು ನಾಟಕದ ಪೂರ್ವನಿಶ್ಚಿತವೆಂದು ತಿಳಿಸಲಾಗುತ್ತದೆ. ಅವರು ಬಹುಶಃ ಬೇರೆ ಪಾತ್ರವನ್ನು ಅಭಿನಯಿಸಬೇಕಾಗಿರುತ್ತದೆ ಆದ್ದರಿಂದ ದುಃಖದ ಮಾತಿರುವುದಿಲ್ಲ. ಡ್ರಾಮಾ ಅಟಲವಾಗಿದೆ. ಅವರು ಮತ್ತೊಂದು ಪಾತ್ರವನ್ನು ಅಭಿನಯಿಸಬೇಕಾಗಿರುತ್ತ ಅಂದಾಗ ಚಿಂತೆಯ ಮಾತೇನಿದೆ. ಇದಕ್ಕಿಂತಲೂ ಒಳ್ಳೆಯ ಸೇವೆಯನ್ನು ಭಾರತಕ್ಕಾಗಿ ಮಾಡುತ್ತಾರೆ ಏಕೆಂದರೆ ಕಲ್ಯಾಣಾರ್ಥವಾಗಿ ಅಂತಹದೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ ಅಂದಮೇಲೆ ಖುಷಿಯಾಗಬೇಕಲ್ಲವೇ. ಆದ್ದರಿಂದ ಅಮ್ಮ ಸತ್ತರೂ ಹಲ್ವ(ಜ್ಞಾನದ ಚಿಂತನೆ) ತಿನ್ನಿರಿ.... ಇದರಲ್ಲಿ ತಿಳುವಳಿಕೆಯಿರಬೇಕು. ನಾವು ಪಾತ್ರಧಾರಿಗಳಾಗಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರಿಗೂ ತಮ್ಮ ಪಾತ್ರವನ್ನು ಅಭಿನಯಿಸಬೇಕಾಗಿದೆ. ನಾಟಕದಲ್ಲಿ ನಿಗದಿಯಾಗಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದು ಪಾತ್ರವನ್ನು ಅಭಿನಯಿಸಬೇಕಾಗಿದೆ. ಇಲ್ಲಿಂದ ಎಂತಹ ಸಂಸ್ಕಾರಗಳಿಂದ ಹೋಗುತ್ತೀರಿ ಅಲ್ಲಿ ಗುಪ್ತವಾಗಿಯೂ ಸರ್ವೀಸ್ ಮಾಡುತ್ತೀರಿ. ಆತ್ಮದಲ್ಲಿ ಸಂಸ್ಕಾರವಂತೂ ಇರುತ್ತದೆಯಲ್ಲವೇ. ಯಾರು ಮುಖ್ಯವಾದ ಸೇವಾಧಾರಿ ಮಕ್ಕಳಿದ್ದಾರೆ ಅವರಿಗೆ ಗೌರವವೂ ಇದೆ. ಸರ್ವೀಸ್ ಮಾಡುವವರು, ಭಾರತದ ಕಲ್ಯಾಣ ಮಾಡುವವರು ಕೇವಲ ನೀವು ಮಕ್ಕಳಾಗಿದ್ದೀರಿ. ಉಳಿದೆಲ್ಲರೂ ಅಕಲ್ಯಾಣವನ್ನೇ ಮಾಡುತ್ತಾರೆ, ಪತಿತರನ್ನಾಗಿ ಮಾಡುತ್ತಾರೆ. ಫಸ್ಟ್ಕ್ಲಾಸ್ ಸನ್ಯಾಸಿಯು ಒಂದುವೇಳೆ ಸಾಯುತ್ತಾರೆಂದರೆ ನಾವು ಶರೀರವನ್ನು ಬಿಟ್ಟು ಬ್ರಹ್ಮಮಹಾತತ್ವದಲ್ಲಿ ಹೋಗಿ ಲೀನವಾಗುತ್ತೇವೆಂದು ಅವರು ಹಾಗೆಯೇ ಕುಳಿತುಬಿಡುತ್ತಾರೆ. ಅವರು ಯಾರದೇ ಕಲ್ಯಾಣವನ್ನೂ ಮಾಡುವುದಿಲ್ಲ ಏಕೆಂದರೆ ಅವರು ಕಲ್ಯಾಣಕಾರಿ ತಂದೆಯ ಸಂತಾನರಾಗಿದ್ದಾರೆಯೆ! ನೀವು ಕಲ್ಯಾಣಕಾರಿ ತಂದೆಯ ಸಂತಾನರಾಗಿದ್ದೀರಿ ಆದ್ದರಿಂದ ಯಾರದೇ ಅಕಲ್ಯಾಣವನ್ನು ಮಾಡುವುದಿಲ್ಲ. ನೀವಂತು ಕಲ್ಯಾಣಾರ್ಥವಾಗಿ ಹೋಗುತ್ತೀರಿ. ಇದು ಪತಿತ ಪ್ರಪಂಚವಾಗಿದೆ. ತಂದೆಯು ಆದೇಶವನ್ನು ಹೊರಡಿಸಿದ್ದಾರೆ- ಈಗ ಈ ಭೋಗಬಲದ ರಚನೆಯು ರಚಿಸಬಾರದು, ಇದು ತಮೋಪ್ರಧಾನವಾಗಿದೆ. ಅರ್ಧಕಲ್ಪದಿಂದ ನೀವು ಒಬ್ಬರು ಇನ್ನೊಬ್ಬರಿಗೆ ಕಾಮಕಟಾರಿಯಿಂದ ದುಃಖವನ್ನು ಕೊಡುತ್ತಾ ಬಂದಿದ್ದೀರಿ. ಈ ರಾವಣನ ಪಂಚಭೂತಗಳು ನಿಮಗೆ ದುಃಖವನ್ನು ಕೊಡುತ್ತವೆ. ಇವು ನಿಮ್ಮ ದೊಡ್ಡ ಶತ್ರುವಾಗಿದೆ. ಬಾಕಿ ಯಾವುದೇ ಚಿನ್ನದ ಲಂಕೆ ಇತ್ಯಾದಿ ಇರಲಿಲ್ಲ. ಈ ಎಲ್ಲಾ ಮಾತುಗಳನ್ನು ಕುಳಿತು ತಿಳಿಸುತ್ತಾರೆ. ಇವಂತೂ ಬೇಹದ್ದಿನ ಮಾತುಗಳಾಗಿವೆ, ಮನುಷ್ಯ ಸೃಷ್ಟಿಯೇ ರಾವಣನ ಬಂಧನದಲ್ಲಿ ಬಂಧಿಸಲ್ಪಟ್ಟಿದೆ ಎಂದು ತಂದೆಯು ತಿಳಿಸುತ್ತಾರೆ. ಪತ್ರಿಕೆಯಲ್ಲಿಯೂ ಸಹ ಚಿತ್ರಗಳು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ- ಎಲ್ಲರೂ ರಾವಣನ ಪಂಜರದಲ್ಲಿದ್ದಾರೆ, ಶೋಕವಾಟಿಕೆಯಲ್ಲಿದ್ದಾರೆ. ಇದು ಅಶೋಕವಾಟಿಕೆಯಲ್ಲ. ಅಶೋಕ ಹೋಟೆಲ್ ಈಗ ಇಲ್ಲ. ಇದಂತು ಶೋಕದ ಹೋಟೆಲ್ಗಳಾಗಿವೆ, ತುಂಬಾ ಕೆಟ್ಟಪದಾರ್ಥಗಳನ್ನು ತಯಾರಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಯಾರು ಸ್ವಚ್ಚವಾಗಿದ್ದಾರೆ, ಯಾರು ಕೊಳಕಾಗಿದ್ದಾರೆ? ನೀವೀಗ ಹೂಗಳಾಗುತ್ತಿದ್ದೀರಿ.

ಆತ್ಮದ ಸಂಸ್ಕಾರದಲ್ಲಿ ಎಷ್ಟೊಂದು ದೊಡ್ಡಪಾತ್ರವು ನೊಂದಣಿಯಾಗಿದೆ. ಇವು ತುಂಬಾ ವಿಚಿತ್ರವಾದ ಮಾತುಗಳಾಗಿವೆ. ಇಷ್ಟು ಚಿಕ್ಕದಾದ ಆತ್ಮದಲ್ಲಿ 84 ಜನ್ಮಗಳ ಪಾತ್ರವು ತುಂಬಿದೆ. ನಾವು ಪತಿತ ತಮೋಪ್ರಧಾನರಾಗಿದ್ದೇವೆ ಎಂತಲೂ ಹೇಳುತ್ತಾರೆ. ಈಗ ಇದರ ಅಂತ್ಯವಾಗಲಿದೆ. ರಕ್ತಪಾತದ ಆಟವಾಗಿದೆಯಲ್ಲವೇ. ಒಂದು ಬಾಂಬ್ನಿಂದ ಎಷ್ಟೊಂದು ಮಂದಿ ಸಾಯುತ್ತಾರೆ ಆದ್ದರಿಂದ ಈಗ ಈ ಹಳೆಯ ಪ್ರಪಂಚವು ಇರುವುದಿಲ್ಲ ಎನ್ನುವುದು ನಿಮಗೆ ತಿಳಿದಿದೆ. ಇದು ಹಳೆಯ ಶರೀರ, ಹಳೆಯ ಪ್ರಪಂಚವಾಗಿದೆ. ನಮಗೆ ಹೊಸಪ್ರಪಂಚದಲ್ಲಿ ಹೊಸಶರೀರವೂ ಸಿಗುವುದಿದೆ ಆದ್ದರಿಂದ ಶ್ರೀಮತದನುಸಾರ ಪುರುಷಾರ್ಥ ಮಾಡುತ್ತಿದ್ದೇವೆ. ಅವಶ್ಯವಾಗಿ ಇಷ್ಟೆಲ್ಲಾ ಮಕ್ಕಳು ತಂದೆಯ ಸಹಯೋಗಿಗಳಾಗಿದ್ದಾರೆ. ಶ್ರೀ, ಶ್ರೀಯವರ ಶ್ರೀಮತದಂತೆ ನಾವು ಶ್ರೀಲಕ್ಷ್ಮಿ, ಶ್ರೀನಾರಾಯಣನಾಗುತ್ತೇವೆ. ಉಪರಾಷ್ಟ್ರಪತಿಯನ್ನು ರಾಷ್ಟ್ರಪತಿ ಎಂದು ಹೇಳಲು ಸಾಧ್ಯವೇ! ಈ ರೀತಿಯಂತೂ ಆಗಲು ಸಾಧ್ಯವಿಲ್ಲ. ಕಲ್ಲು-ಮುಳ್ಳಿನಲ್ಲಿ ಭಗವಂತನು ಹೇಗೆ ಅವತರಿಸುತ್ತಾರೆ. ಅವರಿಗೋಸ್ಕರ ಗಾಯನವಿದೆ- ಯಧಾಯಧಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ .... ಯಾವಾಗ ಸಂಪೂರ್ಣವಾಗಿ ಪತಿತರಾಗಿಬಿಡುತ್ತೀರಿ, ಕಲಿಯುಗದ ಅಂತ್ಯವು ಸಮೀಪಕ್ಕೆ ಬರುತ್ತದೆ ಆಗ ನಾನು ಬರಬೇಕಾಗುತ್ತದೆ. ಈಗ ನೀವು ಮಕ್ಕಳು ನನ್ನನ್ನು ನೆನಪು ಮಾಡಿ. ತಂದೆಯು ಕೇಳುತ್ತಾರೆ- ತಂದೆಯ ನೆನಪಿರುತ್ತದೆಯೇ? ಬಾಬಾ ಗಳಿಗೆ-ಗಳಿಗೆಯೂ ಮರೆತುಬಿಡುತ್ತೇವೆ ಎಂದು ಹೇಳುತ್ತಾರೆ. ತಂದೆಯು ಕೇಳುತ್ತಾರೆ- ಮಕ್ಕಳೇ, ಲೌಕಿಕ ತಂದೆಯನ್ನು ಎಂದಾದರೂ ಮರೆಯುತ್ತೀರೇನು! ಈ ಮಾತು ಹೊಸದಾಗಿದೆ. ತಂದೆಯು ನಿರಾಕಾರ ಬಿಂದುವಾಗಿದ್ದಾರೆ. ಇದು ಅಭ್ಯಾಸವಲ್ಲ. ಹೇಳುತ್ತಾರಲ್ಲವೇ- ನಾವಂತೂ ಈ ರೀತಿ ಎಂದೂ ಕೇಳಿಲ್ಲ, ಅವರನ್ನು ಈ ರೀತಿ ನೆನಪು ಮಾಡಿಲ್ಲ ಎನ್ನುತ್ತಾರೆ. ದೇವತೆಗಳಿಗೂ ಸಹ ಈ ಜ್ಞಾನವಿರುವುದಿಲ್ಲ ಏಕೆಂದರೆ ನಂತರ ಇದು ಪ್ರಾಯಃಲೋಪವಾಗಿಬಿಡುತ್ತದೆ ಆದ್ದರಿಂದ ಅವರನ್ನು ಸ್ವದರ್ಶನಚಕ್ರಧಾರಿಗಳು ಎಂದು ಕರೆಯಲಾಗುವುದಿಲ್ಲ. ಭಲೆ ವಿಷ್ಣುವಿಗೆ ಎರಡುರೂಪ ಲಕ್ಷ್ಮೀ-ನಾರಾಯಣನಾಗುತ್ತಾರೆ ಎಂದು ಹೇಳುತ್ತಾರೆ. ಪ್ರವೃತ್ತಿ ಮಾರ್ಗದ ಕಾರಣದಿಂದ ಎರಡು ರೂಪಗಳನ್ನು ತೋರಿಸಿದ್ದಾರೆ. ಬ್ರಹ್ಮಾ-ಸರಸ್ವತಿ, ಶಂಕರ-ಪಾರ್ವತಿ, ಲಕ್ಷ್ಮೀ-ನಾರಾಯಣ. ಶ್ರೇಷ್ಠಾತಿಶ್ರೇಷ್ಟ ಒಬ್ಬರಾಗಿದ್ದಾರೆ, ನಂತರ ಸೆಕೆಂಡ್, ಥರ್ಡ್.....ಈಗ ತಂದೆಯು ಹೇಳುತ್ತಾರೆ- ಮಕ್ಕಳೇ, ದೇಹಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಡಬೇಕಾಗಿದೆ, ಸ್ವಯಂನ್ನು ಆತ್ಮನೆಂದು ತಿಳಿಯಿರಿ. ನಾನು ಆತ್ಮ ತಂದೆಯ ಮಗುವಾಗಿದ್ದೇನೆ, ನಾನು ಸನ್ಯಾಸಿಯಲ್ಲ, ಈ ರೀತಿ ತಿಳಿದು ತಂದೆಯನ್ನು ನೆನಪು ಮಾಡಿ, ಸ್ವಯಂನ್ನು ಆತ್ಮನೆಂದು ತಿಳಿಯಿರಿ. ಇದು ಬಹಳ ಸಹಜವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಬ್ರಹ್ಮಾರವರ ಮುಖಾಂತರ ತಿಳಿಸುತ್ತಾರೆ. ಬಾಪ್ದಾದಾ ಇಬ್ಬರೂ ಕಂಬೈಂಡ್ ಆಗಿದ್ದಾರೆ. ಹೇಗೆ ಅವಳಿ ಮಕ್ಕಳು ಜೊತೆಯಲ್ಲಿ ಜನ್ಮ ಪಡೆಯುತ್ತಾರಲ್ಲವೇ, ಹಾಗೆಯೇ ಇವರಿಬ್ಬರ ಪಾತ್ರವು ಜೊತೆಯಲ್ಲಿ ನಡೆಯುತ್ತಿದೆ. ತಂದೆಯು ತಿಳಿಸಿದ್ದಾರೆ- ಮಕ್ಕಳೇ, ಅಂತ್ಯಮತಿ ಸೋ ಗತಿ. ಯಾವಾಗ ಶರೀರವನ್ನು ಬಿಡುತ್ತೀರಿ, ಆ ಸಮಯದಲ್ಲಿ ಬುದ್ಧಿಯು ಎಲ್ಲಿ ಹೋಗುತ್ತದೆಯೋ ಅಲ್ಲಿಗೆ ಹೋಗಿ ಜನ್ಮವನ್ನು ಪಡೆಯಬೇಕಾಗುತ್ತದೆ. ಅಂತ್ಯಕಾಲದಲ್ಲಿ ಪತಿಯ ಮುಖವನ್ನು ನೋಡುತ್ತಾರೆಂದರೆ ಬುದ್ದಿಯು ಅಲ್ಲಿಯೇ ಹೊರಟುಹೋಗುತ್ತದೆ. ಅಂತ್ಯಕಾಲದಲ್ಲಿ ಯಾರು ಎಂತಹ ಸ್ಮೃತಿಯಲ್ಲಿರುತ್ತಾರೆ ಆ ಸಮಯದ ಪ್ರಭಾವ ಅಧಿಕವಾಗಿರುತ್ತದೆ. ಒಂದುವೇಳೆ ಆ ಸಮಯದಲ್ಲಿ ಕೃಷ್ಣನಂತಹ ಮಗುವಾಗುತ್ತೇನೆ ಎಂಬ ಸ್ಮೃತಿಯಿರುತ್ತದೆ ಎಂದರೆ ಮಾತೇ ಕೇಳಬೇಡಿ. ಅವರು ಸುಂದರ ಮಗುವಾಗಿ ಜನ್ಮವನ್ನು ಪಡೆಯುತ್ತಾರೆ. ಈಗಂತೂ ಅಂತ್ಯಮತಿಗಾಗಿ ಒಂದೇ ಲಗನ್ ಇಟ್ಟುಕೊಳ್ಳಬೇಕಲ್ಲವೇ. ಈ ಸಮಯದಲ್ಲಿ ನೀವು ಏನು ಮಾಡುತ್ತಿದ್ದೀರಿ- ನಾವು ಶಿವತಂದೆಯನ್ನು ನೆನಪು ಮಾಡುತ್ತೇವೆಂದು ತಿಳಿಯುತ್ತೀರಿ. ಎಲ್ಲರಿಗೂ ಸಾಕ್ಷಾತ್ಕಾರಗಳಂತೂ ಆಗುತ್ತವೆ. ಮುಕುಟಧಾರಿಯಂತು ಕೃಷ್ಣನೂ ಆಗಿದ್ದಾನೆ, ರಾಧೆಯೂ ಆಗಿದ್ದಾಳೆ. ರಾಜಕುಮಾರ-ಕುಮಾರಿಯರಂತೂ ಇರುತ್ತಾರೆ, ಆದರೆ ಯಾವಾಗ? ಸತ್ಯಯುಗದಲ್ಲಿ ಇರುತ್ತಾರೆಯೇ ಅಥವಾ ತ್ರೇತಾದಲ್ಲಿಯೇ? ಅವರೀಗ ಮತ್ತೆ ಪುರುಷಾರ್ಥದಲ್ಲಿದ್ದಾರೆ. ಎಷ್ಟು ಪುರುಷಾರ್ಥ ಮಾಡುತ್ತೀರಿ ಅಷ್ಟು ಉತ್ತಮ ಪದವಿಯನ್ನು ಪಡೆಯುತ್ತೀರಿ ಆದ್ದರಿಂದ ಹೇಳುತ್ತೀರಿ- ಬಾಬಾ ನಾವಂತು 21 ಜನ್ಮಗಳಿಗೋಸ್ಕರ ರಾಜ್ಯಪದವಿಯನ್ನು ತೆಗೆದುಕೊಳ್ಳುತ್ತೇವೆ. ಬಾಬಾ ಮಮ್ಮಾ ತೆಗೆದುಕೊಳ್ಳುತ್ತಾರೆಂದರೆ ನಾವೇಕೆ ಅವರನ್ನು ಅನುಕರಣೆ ಮಾಡಬಾರದು! ಧಾರಣೆ ಮಾಡಿ, ಅನ್ಯರಿಗೆ ಮಾಡಿಸಬೇಕಾಗಿದೆ, ಇಷ್ಟೊಂದು ಸರ್ವೀಸ್ ಮಾಡಬೇಕಾಗಿದೆ, ಆಗಲೇ 21 ಜನ್ಮಗಳಿಗಾಗಿ ಪ್ರಾಲಬ್ಧವೂ ಸಿಗುತ್ತದೆ. ಶಾಲೆಯಲ್ಲಿ ಯಾರು ಬಹಳಚೆನ್ನಾಗಿ ಪುರುಷಾರ್ಥ ಮಾಡುವುದಿಲ್ಲವೋ ಅವರು ಕಡಿಮೆ ಅಂಕಗಳನ್ನು ತೆಗೆದುಕೊಳ್ಳುತ್ತಾರೆ. ನೀವೀಗ ಪಂಚವಿಕಾರವೆಂಬ ಮಾಯಾ ರಾವಣನ ಮೇಲೆ ವಿಜಯವನ್ನು ಪಡೆಯುತ್ತೀರಿ. ನಿಮ್ಮದು ಅಹಿಂಸಕ ಯುದ್ಧವಾಗಿದೆ. ಒಂದುವೇಳೆ ರಾಮನಿಗೆ ಚಿಹ್ನೆಗಳನ್ನು ಕೊಡದಿದ್ದರೆ ಸೂರ್ಯವಂಶಿ, ಚಂದ್ರವಂಶಿ ಎಂದು ಹೇಗೆ ಹೇಳುವುದು! ಆದ್ದರಿಂದ ಚಿಹ್ನೆಗಳನ್ನು(ಬಿಲ್ಲು-ಬಾಣ) ಕೊಡಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನೀವು ಎಷ್ಟು ಪುರುಷಾರ್ಥ ಮಾಡುತ್ತೀರಿ ಅದರಿಂದ ಅಂತ್ಯಮತಿ ಸೋ ಗತಿಯಾಗುವುದು. ದೇಹದ ವಿಚಾರವೂ ಸಹ ಬರದಿರಲಿ, ಎಲ್ಲವನ್ನೂ ಮರೆಯಬೇಕಾಗಿದೆ. ನೀವು ಅಶರೀರಿಯಾಗಿ ಬಂದಿದ್ದೀರಿ ಮತ್ತೆ ಅಶರೀರಿಯಾಗಿಯೇ ಹೋಗಬೇಕಾಗಿದೆ. ನೀವು ಇಷ್ಟು ಚಿಕ್ಕಬಿಂದು ಈ ಕಿವಿಗಳಿಂದ ಕೇಳುತ್ತೀರಿ, ಬಾಯಿಂದ ಮಾತನಾಡುತ್ತೀರಿ. ನಾವು ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದರಲ್ಲಿ ಪ್ರವೇಶವಾಗುತ್ತೇವೆ. ಈಗ ನಾವು ಆತ್ಮಗಳು ಮನೆಗೆ ಹೋಗುತ್ತಿದ್ದೇವೆ. ಬಾಬಾ ತುಂಬಾ ಶೃಂಗಾರ ಮಾಡುತ್ತಾರೆ, ಇದರಿಂದ ನಾವು ಮನುಷ್ಯರಿಂದ ದೇವತೆಗಳಾಗಿಬಿಡುತ್ತೇವೆ. ನಿಮಗೆ ತಿಳಿದಿದೆ- ಶಿವತಂದೆಯನ್ನು ನೆನಪು ಮಾಡುವುದರಿಂದಲೇ ನಾವು ಈ ರೀತಿ ಆಗುತ್ತೇವೆ. ಗೀತೆಯಲ್ಲಿಯೂ ಇದೆ- ನನ್ನನ್ನು ನೆನಪು ಮಾಡಿ ಹಾಗೂ ಆಸ್ತಿಯನ್ನು ನೆನಪು ಮಾಡಿ ಆಗ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಇದು ಸಂಪೂರ್ಣ ಸಹಜವಾಗಿದೆ. ಅವಶ್ಯವಾಗಿ ನಾವು ಕಲ್ಪ-ಕಲ್ಪವೂ ತಮ್ಮಿಂದ ಬ್ರಹ್ಮಾರವರ ಮುಖಾಂತರ ಆಸ್ತಿಯನ್ನು ಪಡೆದುಕೊಳ್ಳುತ್ತೇವೆ ಎನ್ನುವುದನ್ನು ತಿಳಿಯುತ್ತೀರಿ. ಗಾಯನವೂ ಇದೆ- ಬ್ರಹ್ಮಾರವರ ಮುಖಾಂತರ ದೇವತಾಧರ್ಮದ ಸ್ಥಾಪನೆಯಾಗುತ್ತದೆ. ಅನುತ್ತೀರ್ಣರಾಗುವುದರಿಂದ ಮತ್ತೆ ತ್ರೇತಾದ ಕ್ಷತ್ರಿಯಧರ್ಮದಲ್ಲಿ ಹೊರಟುಹೋಗುತ್ತಾರೆ. ಬ್ರಹ್ಮಾರವರ ಮುಖಾಂತರ ಬ್ರಾಹ್ಮಣ, ದೇವತಾ, ಕ್ಷತ್ರಿಯ........ ಮೂರೂ ಧರ್ಮಗಳು ಸ್ಥಾಪನೆಯಾಗುತ್ತವೆ. ಸತ್ಯಯುಗದಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಎಲ್ಲರೂ ಸಹ ನಂತರದಲ್ಲಿ ಬರುತ್ತಾರೆ. ಅವರೊಂದಿಗೆ ನಮ್ಮ ಯಾವುದೇ ಸಂಬಂಧವಿಲ್ಲ. ನಾವು ಆದಿಸನಾತನ ದೇವೀ-ದೇವತಾ ಧರ್ಮದವರಾಗಿದ್ದೇವೆ ಎನ್ನುವುದನ್ನು ಭಾರತವಾಸಿಗಳು ಮರೆತುಬಿಟ್ಟಿದ್ದಾರೆ. ಇದರಲ್ಲಿ ಡ್ರಾಮಾದ ಪಾತ್ರವೂ ಸಹ ಹೀಗೆಯೇ ಮಾಡಲ್ಪಟ್ಟಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದನುಸಾರ ಓದುವ ಹಾಗೂ ಓದಿಸುವ ವ್ಯಾಪಾರ ಮಾಡಬೇಕಾಗಿದೆ. ನಾಟಕದ ಪೂರ್ವನಿಶ್ಚಿತದಲ್ಲಿ ಸ್ಥಿರವಾಗಿರಬೇಕಾಗಿದೆ. ಎಂದೂ ಯಾವುದೇ ಮಾತಿನ ಚಿಂತೆ ಮಾಡಬಾರದು.

2. ಅಂತ್ಯಕಾಲದಲ್ಲಿ ಒಬ್ಬ ತಂದೆಯಲ್ಲದೆ ಮತ್ತ್ಯಾರೂ ನೆನಪಿಗೆ ಬರಬಾರದು ಆದ್ದರಿಂದ ಈ ದೇಹವನ್ನೂ ಸಹ ಮರೆಯುವ ಅಭ್ಯಾಸ ಮಾಡಬೇಕು. ಅಶರೀರಿಯಾಗಬೇಕಾಗಿದೆ.

ವರದಾನ:
ಮನಸ್ಸು-ಬುದ್ಧಿಯಿಂದ ಎಂತಹದ್ದೇ ಕೆಡುಕನ್ನು ಸ್ಪರ್ಷಿಸದಿರುವಂತಹ ಸಂಪೂರ್ಣ ವೈಷ್ಣವ ಅಥವಾ ಸಫಲ ತಪಸ್ವಿ ಭವ

ಪವಿತ್ರತೆಯ ವ್ಯಕ್ತಿತ್ವ ಅಥವಾ ಘನತೆಯಿರುವವರು ಮನಸ್ಸು-ಬುದ್ಧಿಯಿಂದ ಯಾವುದೇ ಕೆಡುಕನ್ನೂ ಸ್ಪರ್ಷಿಸಲು ಸಾಧ್ಯವಿಲ್ಲ. ಹೇಗೆ ಬ್ರಾಹ್ಮಣ ಜೀವನದಲ್ಲಿ ಶಾರೀರಿಕ ಆಕರ್ಷಣೆ ಅಥವಾ ಶಾರೀರಿಕ ಸ್ಪರ್ಷವು ಅಪವಿತ್ರತೆಯಾಗಿದೆಯೋ, ಹಾಗೆಯೇ ಮನಸ್ಸು-ಬುದ್ಧಿಯಲ್ಲಿ ಯಾವುದೇ ವಿಕಾರವು ಸಂಕಲ್ಪದಲ್ಲಾದರೂ ಆಕರ್ಷಣೆ ಅಥವಾ ಸ್ಪರ್ಷವು ಅಪವಿತ್ರತೆಯಾಗಿದೆ. ಅಂದಮೇಲೆ ಯಾವುದೇ ಕೆಡುಕನ್ನು ಸಂಕಲ್ಪದಲ್ಲಿಯೂ ಸ್ಪರ್ಷಿಸದೇ ಇರುವುದೇ ಸಂಪೂರ್ಣ ವೈಷ್ಣವ ಅಥವಾ ಸಫಲ ತಪಸ್ವಿಯ ಸಂಕೇತವಾಗಿದೆ.

ಸ್ಲೋಗನ್:
ಮನಸ್ಸಿನ ತೊಡಕುಗಳನ್ನು ಸಮಾಪ್ತಿಗೊಳಿಸಿ ವರ್ತಮಾನ ಹಾಗೂ ಭವಿಷ್ಯವನ್ನು ಉಜ್ವಲಗೊಳಿಸಿರಿ.