14.02.21    Avyakt Bapdada     Kannada Murli    02.11.87     Om Shanti     Madhuban


ಸ್ವ-ಪರಿವರ್ತನೆಗೆ ಆಧಾರ ಸತ್ಯ ಹೃದಯದ ಅನುಭೂತಿ'


ಇಂದು ವಿಶ್ವ-ಪರಿವರ್ತಕ, ವಿಶ್ವ-ಕಲ್ಯಾಣಕಾರಿ ಬಾಪ್ದಾದಾರವರು ತನ್ನ ಸ್ನೇಹಿ, ಸಹಯೋಗಿ, ವಿಶ್ವ ಪರಿವರ್ತಕ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರೂ ಸ್ವ-ಪರಿವರ್ತನೆಯ ಮೂಲಕ ವಿಶ್ವ ಪರಿವರ್ತನೆ ಮಾಡುವ ಸೇವೆಯಲ್ಲಿ ತೊಡಗಿದ್ದಾರೆ. ಎಲ್ಲರ ಮನಸ್ಸಿನಲ್ಲಿಯೂ ಒಂದೇ ಒಲವು-ಉತ್ಸಾಹವಿದೆ - ಈ ವಿಶ್ವವನ್ನು ಪರಿವರ್ತನೆ ಮಾಡಲೇಬೇಕು ಮತ್ತು ಅವಶ್ಯವಾಗಿ ಪರಿವರ್ತನೆ ಆಗುತ್ತದೆ ಎಂಬ ನಿಶ್ಚಯವೂ ಇದೆ. ಅಥವಾ ಪರಿವರ್ತನೆ ಆಗಿಬಿಟ್ಟಿದೆ ಎಂದು ಹೇಳುವುದೇ! ಕೇವಲ ಬಾಪ್ದಾದಾರವರ ನಿಮಿತ್ತ ಸಹಯೋಗಿ, ಸಹಜಯೋಗಿ ಆಗಿರುತ್ತಾ ಪರಿವರ್ತನೆ ಹಾಗೂ ಭವಿಷ್ಯ ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಇಂದು ಬಾಪ್ದಾದಾರವರು ನಾಲ್ಕೂ ಕಡೆಯಲ್ಲಿ ನಿಮಿತ್ತವಾದ ವಿಶ್ವ-ಪರಿವರ್ತಕ ಮಕ್ಕಳಲ್ಲಿ ಒಂದು ವಿಶೇಷ ಮಾತನ್ನು ನೋಡುತ್ತಿದ್ದರು - ಎಲ್ಲರೂ ಒಂದೇ ಕಾರ್ಯಕ್ಕಾಗಿ ನಿಮಿತ್ತರಿದ್ದಾರೆ, ಲಕ್ಷ್ಯವೂ ಸಹ ಎಲ್ಲರಲ್ಲಿ ಸ್ವ-ಪರಿವರ್ತನೆ ಮತ್ತು ವಿಶ್ವ-ಪರಿವರ್ತನೆಯ ಲಕ್ಷ್ಯವೇ ಇದೆ ಆದರೆ ಸ್ವ-ಪರಿವರ್ತನೆ ಅಥವಾ ವಿಶ್ವ-ಪರಿವರ್ತನೆಯಲ್ಲಿ ನಿಮಿತ್ತ ಆಗಿದ್ದರೂ ನಂಬರ್ವಾರ್ ಏಕೆ? ಕೆಲವು ಮಕ್ಕಳು ಬಹಳ ಸಹಜ ಹಾಗೂ ಶೀಘ್ರವಾಗಿಯೇ ಸ್ವ-ಪರಿವರ್ತನೆ ಮಾಡಿಕೊಳ್ಳುತ್ತಾರೆ ಮತ್ತೆ ಕೆಲವರು ಈಗೀಗ ಪರಿವರ್ತನೆ ಆಗುವ ಸಂಕಲ್ಪವನ್ನು ಮಾಡುವರು ಆದರೆ ಸ್ವಯಂನ ಸಂಸ್ಕಾರ ಅಥವಾ ಮಾಯೆಯ ಮತ್ತು ಪ್ರಕೃತಿಯ ಮೂಲಕ ಬರುವ ಪರಿಸ್ಥಿತಿಗಳು ಅಥವಾ ಬ್ರಾಹ್ಮಣ ಪರಿವಾರದ ಮೂಲಕ ಕಡಿತವಾಗುವ ಲೆಕ್ಕಾಚಾರಗಳೇನಿವೆ, ಶ್ರೇಷ್ಠ ಪರಿವರ್ತನೆ ಆಗುವ ಒಲವನ್ನು ಬಲಹೀನ ಮಾಡಿಬಿಡುತ್ತವೆ. ಇನ್ನೂ ಕೆಲವು ಮಕ್ಕಳು ಪರಿವರ್ತನೆ ಮಾಡಿಕೊಳ್ಳುವ ಸಾಹಸದಲ್ಲಿ ಬಲಹೀನರಿದ್ದಾರೆ. ಎಲ್ಲಿ ಸಾಹಸವಿಲ್ಲವೋ ಅಲ್ಲಿ ಒಲವು-ಉತ್ಸಾಹವೂ ಇರುವುದಿಲ್ಲ. ಮತ್ತು ಸ್ವ-ಪರಿವರ್ತನೆ ಆಗದೇ ವಿಶ್ವ-ಪರಿವರ್ತನೆಯ ಕಾರ್ಯದಲ್ಲಿ ಮನಃ ಪ್ರಿಯವಾದ ಸಫಲತೆಯು ಆಗುವುದಿಲ್ಲ ಏಕೆಂದರೆ ಈ ಅಲೌಕಿಕ ಈಶ್ವರೀಯ ಸೇವೆಯು ಒಂದೇ ಸಮಯದಲ್ಲಿ ಮೂರು ಪ್ರಕಾರದ ಸೇವೆಯ ಸಿದ್ಧಿಯಿದೆ, ಮೂರು ಪ್ರಕಾರದ ಸೇವೆಯ ಜೊತೆ-ಜೊತೆಗೆ ಏನಿದೆ? 1. ವೃತ್ತಿ 2. ವೈಬ್ರೇಷನ್ 3. ವಾಣಿ. ತಾವು ನಿಮಿತ್ತ, ನಿರ್ಮಾಣ ಮತ್ತು ನಿಸ್ವಾರ್ಥವಾಗುವ ಆಧಾರದ ಮೇಲೆ ಮೇಲಿನ ಮೂರೂ ಸೇವೆಗಳು ಶಕ್ತಿಶಾಲಿಯಾಗುತ್ತವೆ, ಇದರಿಂದ ಮನಃ ಪ್ರಿಯವಾದ ಸಫಲತೆಯೂ ಸಿಗುತ್ತದೆ. ಇಲ್ಲದಿದ್ದರೆ ಸೇವೆಯಾಗುತ್ತದೆ, ಸ್ವಲ್ಪ ಸಮಯಕ್ಕಷ್ಟೇ ತಮ್ಮನ್ನು ಅಥವಾ ಅನ್ಯರನ್ನು ಸೇವೆಯ ಸಫಲತೆಯ ಖುಷಿಯಂತು ಮಾಡಿ ಬಿಡಬಹುದು ಆದರೆ ಮನಃ ಪ್ರಿಯ ಸಫಲತೆ, ಯಾವುದನ್ನು ಬಾಪ್ದಾದಾರವರು ಹೇಳುತ್ತಿದ್ದಾರೆ, ಆ ಸಫಲತೆ ಆಗುವುದಿಲ್ಲ. ಬಾಪ್ದಾದಾರವರೂ ಸಹ ಮಕ್ಕಳ ಖುಷಿಯಲ್ಲಿ ಸ್ವಯಂ ಖುಷಿಯಾಗುತ್ತಾರೆ ಆದರೆ ಹೃದಯ ರಾಮನ ಹೃದಯದಲ್ಲಿ ಅವಶ್ಯವಾಗಿ ಯಥಾ ಶಕ್ತಿಯ ಫಲಿತಾಂಶವು ನೋಟ್ ಆಗುತ್ತಿರುತ್ತದೆ. ಶಭಾಷ್, ಶಭಾಷ್ ಎಂದು ಅವಶ್ಯವಾಗಿ ಹೇಳುತ್ತಾರೆ ಏಕೆಂದರೆ ಬಾಬಾರವರಿಗೆ ಸದಾ ಪ್ರತಿಯೊಂದು ಮಕ್ಕಳ ಮೇಲೆ ವರದಾನದ ದೃಷ್ಟಿ ಹಾಗೂ ವೃತ್ತಿಯಿರುತ್ತದೆ - ಈ ನನ್ನ ಮಕ್ಕಳು ಅವಶ್ಯವಾಗಿ ಇಂದಿಲ್ಲದಿದ್ದರೆ ನಾಳೆ ಸಿದ್ಧಿ-ಸ್ವರೂಪರು ಆಗುತ್ತಾರೆ. ಆದರೆ ವರದಾತನದ ಜೊತೆ-ಜೊತೆಗೆ ಶಿಕ್ಷಕನೂ ಆಗಿದ್ದಾರೆ ಆದ್ದರಿಂದ ಉನ್ನತಿಯಾಗುವ ಗಮನವನ್ನೂ ಕೊಡುತ್ತಾರೆ.

ಇಂದು ಬಾಪ್ದಾದಾರವರು ವಿಶ್ವ-ಪರಿವರ್ತನೆಯ ಕಾರ್ಯದ ಹಾಗೂ ವಿಶ್ವ-ಪರಿವರ್ತಕ ಮಕ್ಕಳ ಫಲಿತಾಂಶವನ್ನು ನೋಡುತ್ತಿದ್ದರು. ಇದರಲ್ಲಿ ವೃದ್ಧಿಯಾಗುತ್ತಿದೆ, ನಾಲ್ಕೂ ಕಡೆಯಲ್ಲಿ ಧ್ವನಿ ಹರಡುತ್ತಿದೆ, ಪ್ರತ್ಯಕ್ಷತೆಯ ಪರದೆಯನ್ನು ತೆರೆಯುವುದಕ್ಕೂ ಆರಂಭವಾಗಿ ಬಿಟ್ಟಿದೆ. ನಾಲ್ಕೂ ಕಡೆಯಲ್ಲಿನ ಆತ್ಮರಲ್ಲೀಗ ಈ ಇಚ್ಛೆಯು ಉತ್ಪನ್ನವಾಗುತ್ತಿದೆ - ಏನೆಂದರೆ, ಸಮೀಪದಲ್ಲಿ ಹೋಗಿ ನೋಡೋಣ. ಈಗ ಹೇಳಿಕೆ-ಕೇಳಿಕೆ ಮಾತುಗಳನ್ನು ನೋಡುವ ಪರಿವರ್ತನೆಯಲ್ಲಿ ಬದಲಾಗುತ್ತಿದೆ. ಒಳ್ಳೆಯದು - ಇವೆಲ್ಲಾ ಪರಿವರ್ತನೆಗಳು ಆಗುತ್ತಿವೆ, ಆದರೂ ಡ್ರಾಮಾ ಅನುಸಾರ ಈಗಿನವರೆಗೆ ತಂದೆ ಹಾಗೂ ನಿಮಿತ್ತರಾಗಿರುವ ಕೆಲವು ಶ್ರೇಷ್ಠ ಆತ್ಮರ ಶಕ್ತಿಶಾಲಿ ಪ್ರಭಾವದ ಪರಿಣಾಮವು ಕಾಣಿಸುತ್ತಿದೆ. ಒಂದುವೇಳೆ ಮೆಜಾರಿಟಿ ಈ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರೆ, ಬಹಳ ಬೇಗನೆ ಸರ್ವ ಬ್ರಾಹ್ಮಣರು ಸಿದ್ಧಿ-ಸ್ವರೂಪದಲ್ಲಿ ಪ್ರತ್ಯಕ್ಷ ಆಗುವರು. ಬಾಪ್ದಾದಾರವರು ನೋಡುತ್ತಿದ್ದರು - ಮನಃ ಪ್ರಿಯ, ಲೋಕ ಪ್ರಿಯ, ಪ್ರಭು ಪ್ರಿಯ ಸಫಲತೆಯ ಆಧಾರವು `ಸ್ವ-ಪರಿವರ್ತನೆ' ಆಗುವುದರಲ್ಲಿ ಈಗ ಕೊರತೆಯಿದೆ, ಮತ್ತು ಸ್ವ-ಪರಿವರ್ತನೆಯಲ್ಲಿ ಕೊರತೆ ಏಕೆ? ಅದರ ಮೂಲ-ಆಧಾರವಾಗಿ ಒಂದು ವಿಶೇಷ ಶಕ್ತಿಯ ಕೊರತೆಯಿದೆ. ಅದು ಯಾವುದೆಂದರೆ - ಅನುಭೂತಿಯ ಶಕ್ತಿ.

ಯಾವುದೇ ಪರಿವರ್ತನೆಯ ಸಹಜ ಆಧಾರವು ಅನುಭೂತಿಯ ಶಕ್ತಿಯಾಗಿದೆ. ಎಲ್ಲಿಯವರೆಗೆ ಅನುಭೂತಿಯ ಶಕ್ತಿಯು ಆಗುವುದಿಲ್ಲವೊ, ಅಲ್ಲಿಯವರೆಗೆ ಅನುಭೂತಿ ಆಗುವುದಿಲ್ಲ ಮತ್ತು ಎಲ್ಲಿಯವರೆಗೆ ಅನುಭೂತಿ ಆಗುವುದಿಲ್ಲವೋ ಅಲ್ಲಿಯವರೆಗೆ ಬ್ರಾಹ್ಮಣ ಜೀವನದ ವಿಶೇಷತೆಯ ಬುನಾದಿಯು ಶಕ್ತಿಶಾಲಿಯಾಗಿ ಇರುವುದಿಲ್ಲ. ಆದಿಯಿಂದ ತ್ಮಮ ಬ್ರಾಹ್ಮಣ ಜೀವನವನ್ನು ಸನ್ಮುಖದಲ್ಲಿ ತಂದುಕೊಳ್ಳಿರಿ.

ಮೊದಲ ಪರಿವರ್ತನೆ - ನಾನು ಆತ್ಮ ಆಗಿದ್ದೇನೆ, ತಂದೆಯು ನನ್ನವರಾಗಿದ್ದಾರೆ - ಈ ಪರಿವರ್ತನೆಯು ಯಾವುದರ ಆಧಾರದಿಂದ ಆಯಿತು? ಎಲ್ಲಿಯವರೆಗೆ `ಹೌದು, ನಾನು ಆತ್ಮನು, ಇವರೇ ನನ್ನ ತಂದೆಯಾಗಿದ್ದಾರೆ' ಎಂಬ ಅನುಭೂತಿ ಮಾಡುತ್ತೀರಿ, ಅಲ್ಲಿಯವರೆಗೆ ಪರಿವರ್ತನೆ ಆಗುತ್ತದೆ. ಎಲ್ಲಿಯವರೆಗೆ ಅನುಭೂತಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಸಾಧಾರಣ ಗತಿಯಿಂದ ನಡೆಯುತ್ತೀರಿ ಮತ್ತು ಯಾವ ಕ್ಷಣದಲ್ಲಿ ಅನುಭೂತಿಯ ಶಕ್ತಿಯ ಅನುಭವಿ ಆಗುವಿರೋ, ಆಗ ತೀವ್ರ ಪುರುಷಾರ್ಥಿ ಆಗಿ ಬಿಡುತ್ತೀರಿ. ಅದೇ ಪ್ರಕಾರವಾಗಿ ಪರಿವರ್ತನೆಯ ವಿಶೇಷವಾದ ಯಾವುದೇ ಮಾತುಗಳಿರಬಹುದು - ಅದು ಭಲೆ ರಚೈತನ ಬಗ್ಗೆ, ರಚನೆಯ ಬಗ್ಗೆ ಇರಬಹುದು. ಇದು ಅದೇ ಸಮಯವಾಗಿದೆ, ಯೋಗವೆಂದರೆ ಅದೇ ಆಗಿದೆ, ನಾನೂ ಸಹ ಅದೇ ಶ್ರೇಷ್ಠ ಆತ್ಮನಾಗಿದ್ದೇನೆಂದು ಎಲ್ಲಿಯವರೆಗೆ ಪ್ರತಿಯೊಂದು ಮಾತಿನಲ್ಲಿಯೂ ಅನುಭೂತಿ ಮಾಡುವುದಿಲ್ಲವೋ, ಅಲ್ಲಿಯವರೆಗೆ ಒಲವು-ಉತ್ಸಾಹದ ಚಲನೆಯಿರುವುದಿಲ್ಲ. ಭಲೆ ಸ್ವಲ್ಪ ಸಮಯಕ್ಕಾಗಿ ಯಾರದೇ ವಾಯುಮಂಡಲದ ಪ್ರಭಾವದಿಂದ ಪರಿವರ್ತನೆ ಆಗಬಹುದು ಆದರೆ ಸದಾ ಕಾಲದ್ದಾಗಿರುವುದಿಲ್ಲ. ಅನುಭೂತಿಯ ಶಕ್ತಿಯು ಸದಾಕಾಲದ ಸಹಜ ಪರಿವರ್ತನೆ ಮಾಡಿ ಬಿಡುತ್ತದೆ.

ಇದೇ ರೀತಿ ಸ್ವ-ಪರಿವರ್ತನೆಯಲ್ಲಿಯೂ - ಎಲ್ಲಿಯವರೆಗೆ ಅನುಭೂತಿಯ ಶಕ್ತಿಯಿಲ್ಲವೋ ಅಲ್ಲಿಯವರೆಗೆ ಸದಾ ಕಾಲದ ಶ್ರೇಷ್ಠ ಪರಿವರ್ತನೆ ಉತ್ಪನ್ನವಾಗಲು ಸಾಧ್ಯವಿಲ್ಲ. ಇದಕ್ಕಾಗಿ ವಿಶೇಷವಾಗಿ ಎರಡು ಮಾತುಗಳ ಅನುಭೂತಿ ಇರಬೇಕಾಗಿದೆ. 1. ತನ್ನ ಬಲಹೀನತೆಯ ಅನುಭೂತಿ. 2. ಯಾವುದೇ ಪರಿಸ್ಥಿತಿ ಅಥವಾ ವ್ಯಕ್ತಿಯು ನಿಮಿತ್ತನಾಗುವನು, ಅವರ ಇಚ್ಛೆ ಮತ್ತು ಅವರ ಮನಸ್ಸಿನ ಭಾವನೆ ಅಥವಾ ವ್ಯಕ್ತಿಯ ಬಲಹೀನತೆ ಅಥವಾ ಪರವಶ ಸ್ಥಿತಿಯ ಅನುಭೂತಿ. ಪರಿಸ್ಥಿತಿಯ ಪರೀಕ್ಷೆಯ ಕಾರಣವನ್ನು ತಿಳಿದುಕೊಂಡು, ಸ್ವಯಂನ್ನು ಉತ್ತೀರ್ಣನಾಗುವ ಶ್ರೇಷ್ಠ ಸ್ವರೂಪದ ಅನುಭೂತಿಯಲ್ಲಿ ಇರಬೇಕು - ನಾನು ಶ್ರೇಷ್ಠನಾಗಿದ್ದೇನೆ, ಸ್ವ-ಸ್ಥಿತಿಯು ಶ್ರೇಷ್ಠವಾಗಿದೆ, ಪರಿಸ್ಥಿತಿಯು ಪರೀಕ್ಷೆಯಾಗಿದೆ ಎಂಬ ಅನುಭೂತಿಯು ಸಹಜವಾಗಿ ಪರಿವರ್ತನೆ ಮಾಡಿ ಬಿಡುತ್ತದೆ ಮತ್ತು ಪಾಸ್ ಮಾಡಿ ಬಿಡುತ್ತದೆ. ಅನ್ಯರ ಇಚ್ಛೆ ಅಥವಾ ಅನ್ಯರ ಸ್ವ-ಉನ್ನತಿಯೂ ಸಹ ಅನುಭೂತಿಗೂ ಸಹ ತಮ್ಮ ಸ್ವ-ಉನ್ನತಿಯ ಆಧಾರವಾಗಿದೆ. ಅಂದಮೇಲೆ ಸ್ವ-ಪರಿವರ್ತನೆಯು ಅನುಭೂತಿಯ ಶಕ್ತಿಯಿಲ್ಲದೆ ಆಗಲು ಸಾಧ್ಯವಿಲ್ಲ. ಇದರಲ್ಲಿಯೂ ಮೊದಲನೆಯದಾಗಿ - ಸತ್ಯ ಹೃದಯದ ಅನುಭೂತಿ, ಇನ್ನೊಂದು - ಚತುರತೆಯ ಅನುಭೂತಿಯೂ ಇದೆ ಏಕೆಂದರೆ ಬಹಳಷ್ಟು ಜ್ಞಾನಪೂರ್ಣರು ಆಗಿ ಬಿಟ್ಟಿದ್ದೀರಿ. ಅಂದಮೇಲೆ ಸಮಯವನ್ನು ನೋಡಿ ತನ್ನ ಕಾರ್ಯವನು ಸಿದ್ಧ ಮಾಡಲು, ತನ್ನ ಹೆಸರನ್ನು ಪ್ರಸಿದ್ಧ ಮಾಡುವುದಕ್ಕಾಗಿ, ಆ ಸಮಯದಲ್ಲಿ ಅನುಭೂತಿಯನ್ನು ಮಾಡಿ ಬಿಡಬಹುದು ಆದರೆ ಆ ಅನುಭೂತಿಯಲ್ಲಿ ಪರಿವರ್ತನೆಯಾಗುವ ಶಕ್ತಿಯಿರುವುದಿಲ್ಲ. ಹೃದಯದ ಅನುಭೂತಿಯು ಹೃದಯ ರಾಮನ ಆಶೀರ್ವಾದವನ್ನು ಪ್ರಾಪ್ತಿ ಮಾಡಿಸುತ್ತದೆ ಮತ್ತು ಚತುರತೆಯಿರುವ ಅನುಭೂತಿಯು ಸ್ವಲ್ಪ ಸಮಯಕ್ಕಾಗಿ ಅನ್ಯರನ್ನು ಖುಷಿ ಪಡಿಸುತ್ತದೆ, ತನ್ನನ್ನೂ ಖುಷಿ ಪಡಿಸಿಕೊಳ್ಳುತ್ತಾರೆ.

ಮೂರನೇ ಪ್ರಕಾರದ ಅನುಭೂತಿ - ಇವರು ಸರಿಯಿಲ್ಲ ಎಂದು ಮನಸ್ಸು ಒಪ್ಪಿಕೊಳ್ಳುತ್ತದೆ, ವಿವೇಕವು ಪ್ರತಿಧ್ವನಿ ಕೊಡುತ್ತದೆ - ಇದು ಯಥಾರ್ಥವಲ್ಲ ಆದರೆ ಬಾಹ್ಯ ರೂಪದಿಂದ ತನ್ನನ್ನು ಮಹಾರಥಿ ಎಂದು ಸಿದ್ಧ ಮಾಡುವುದಕ್ಕಾಗಿ, ಯಾವುದಾದರೊಂದು ರೀತಿಯಿಂದ ತನ್ನ ಹೆಸರನ್ನು ಪರಿವಾರದ ಮಧ್ಯೆ ಬಲಹೀನ ಅಥವಾ ಕಡಿಮೆ ಮಾಡುವ ಕಾರಣದಿಂದ, ವಿವೇಕವನ್ನು ಕೊಲೆ ಮಾಡುತ್ತಿರುತ್ತಾರೆ. ಹೀಗೆ ವಿವೇಕವನ್ನು ಸಾಯಿಸುವುದೂ ಸಹ ಪಾಪವಾಗಿದೆ. ಹೇಗೆ ಅಪಘಾತವು ಮಹಾಪಾಪ ಆಗಿದೆ, ಹಾಗೆಯೇ ಇದೂ ಸಹ ಪಾಪದ ಖಾತೆಯಲ್ಲಿ ಜಮಾ ಆಗುತ್ತದೆ. ಆದ್ದರಿಂದ ಬಾಪ್ದಾದಾರವರು ಮುಗುಳ್ನಗುತ್ತಾ ಇರುತ್ತಾರೆ ಮತ್ತು ಅವರ ಮನಸ್ಸಿನ ಸಂಭಾಷಣೆಯನ್ನು ತಿಳಿಸುತ್ತಾ ಇರುತ್ತಾರೆ. ಬಹಳ ಸುಂದರವಾದ ಸಂಭಾಷಣೆ ಆಗುತ್ತದೆ. ಮೂಲ ಮಾತು - ಇಂತಹ ಅನುಭೂತಿಯಲ್ಲಿ ಇರುವವರು ತಿಳಿಯುತ್ತಾರೆ - ಯಾರಿಗೇನು ಗೊತ್ತಾಗುತ್ತದೆ. ಇದರಿಂದ ಮನಸ್ಸಿಗೆ ಬಂದಂತೆ ನಡೆಯುತ್ತಾರೆ.... ಆದರೆ ತಂದೆಯವರಿಗೆ ಪ್ರತಿಯೊಂದು ಎಲೆಯ(ಮಕ್ಕಳ) ಬಗ್ಗೆ ಗೊತ್ತಿದೆ. ಕೇವಲ ಬಾಯಿಂದ ಹೇಳುವುದರಿಂದಷ್ಟೇ ಗೊತ್ತಾಗಬೇಕಿಲ್ಲ ಆದರೆ ಅದು ತಿಳಿದಿದ್ದರೂ ಸಹ ತಂದೆಯು ಗೊತ್ತಿಲ್ಲದಿರುವಂತೆ ಮುಗ್ಧತೆಯಲ್ಲಿದ್ದು, ಮಕ್ಕಳನ್ನು ಭೋಲಾನಾಥನ ರೂಪದಿಂದ ನಡೆಸುತ್ತಾರೆ. ಯಾವಾಗ ತಂದೆಗೆ ಗೊತ್ತಿದೆ, ಆದರೂ ಏಕೆ ಭೋಲಾ ಆಗುತ್ತಾರೆ? ಏಕೆಂದರೆ ದಯಾ ಸಾಗರ ತಂದೆ ಆಗಿದ್ದಾರೆ ಮತ್ತು ಪಾಪದಲ್ಲಿ, ಪಾಪವು ಹೆಚ್ಚಾಗಬಾರದು ಎಂಬ ದಯೆ ತೋರಿಸುತ್ತಾರೆ. ತಿಳಿಯಿತೆ? ಇಂತಹ ಮಕ್ಕಳು ಚತುರ ತಂದೆಯ ಬಳಿಯೂ ಅಥವಾ ನಿಮಿತ್ತ ಆತ್ಮರ ಸನ್ಮುಖದಲ್ಲಿ ಬಹಳ ಚತುರರಾಗಿ ಬರುತ್ತಾರೆ ಆದ್ದರಿಂದ ತಂದೆಯು ದಯಾ ಸಾಗರ, ಭೋಲಾನಾಥ ಆಗಿ ಬಿಡುತ್ತಾರೆ.

ಬಾಪ್ದಾದಾರವರ ಬಳಿ ಪ್ರತೀ ಸಮಯದಲ್ಲಿ ಪ್ರತಿಯೊಂದು ಮಕ್ಕಳ ಕರ್ಮದ, ಮನಸ್ಸಿನ ಸಂಕಲ್ಪಗಳ ಖಾತೆಯು ಸ್ಪಷ್ಟವಾಗುತ್ತಾ ಇರುತ್ತದೆ. ಹೃದಯಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ ಆದರೆ ಪ್ರತಿಯೊಂದು ಮಕ್ಕಳ ಹೃದಯದ ಬಡಿತದ ಚಿತ್ರವೂ ಸಹ ಸ್ಪಷ್ಟವಾಗಿಯೇ ಇದೆ. ಆದ್ದರಿಂದ ಹೇಳುತ್ತಾರೆ - ನಾನು ಪ್ರತಿಯೊಬ್ಬರ ಹೃದಯವನ್ನು ತಿಳಿದುಕೊಂಡಿಲ್ಲ ಏಕೆಂದರೆ ತಿಳಿಯುವ ಅವಶ್ಯಕತೆಯೇ ಇಲ್ಲ, ತಿಳಿಯುವ ಮೊದಲೇ ಸ್ಪಷ್ಟವಾದ ಚಿತ್ರಣವಿದೆ. ಬಾಪ್ದಾದಾರವರ ಸನ್ಮುಖದಲ್ಲಿ ಮಕ್ಕಳ ಪ್ರತಿ ಕ್ಷಣದ ಹೃದಯ ಬಡಿತ ಅಥವಾ ಮನಸ್ಸಿನ ಸಂಕಲ್ಪಗಳ ಚಾರ್ಟ್ ಇದೆ. ಅದನ್ನು ತಮಗೆ ತಿಳಿಸಬಹುದು, ತಿಳಿಸಬಾರದೆಂದಲ್ಲ. ಅದರ ದಿನಾಂಕ, ಸ್ಥಾನ, ಸಮಯ ಮತ್ತು ಏನೇನು ಮಾಡಿದಿರಿ ಎಲ್ಲವನ್ನೂ ತಿಳಿಸಬಹುದು ಆದರೆ ಎಲ್ಲವನ್ನೂ ತಿಳಿದಿದ್ದರೂ ಸಹ ಮುಗ್ಧನಾಗಿರುತ್ತಾರೆ. ಅಂದಾಗ ಇಂದು ಇಡೀ ದಿನದಲ್ಲಿ ಚಾರ್ಟನ್ನು ನೋಡಿದೆವು.

ಸ್ವ-ಪರಿವರ್ತನೆಯು ತೀವ್ರ ಗತಿಯಿಂದ ಆಗದೇ ಇರುವ ಕಾರಣದಿಂದ `ಸತ್ಯ ಹೃದಯದ ಅನುಭೂತಿ'ಯ ಕೊರತೆಯಿದೆ. ಅನುಭೂತಿಯ ಶಕ್ತಿಯಿಂದ ಬಹಳ ಮಧುರ ಅನುಭವವನ್ನು ಮಾಡಿಸಬಹುದು - ಇದನ್ನಂತು ತಿಳಿದಿದ್ದೀರಲ್ಲವೆ. ಕೆಲವೊಮ್ಮೆ ತಮ್ಮನ್ನು ತಂದೆಯ ಕಣ್ಮಣಿ ಆತ್ಮ ಅರ್ಥಾತ್ ನಯನಗಳಲ್ಲಿ ಸಮಾವೇಶ ಆಗಿರುವ ಶ್ರೇಷ್ಠ ಬಿಂದುವೆಂದು ಅನುಭೂತಿ ಮಾಡಿರಿ. ನಯನಗಳಲ್ಲಂತು ಬಿಂದುವೇ ಸಮಾವೇಶವಾಗಲು ಸಾಧ್ಯ, ಶರೀರವಂತು ಸಮಾವೇಶವಾಗಲು ಆಗುವುದಿಲ್ಲ. ಕೆಲವೊಮ್ಮೆ ತಮ್ಮನ್ನು ಮಸ್ತಕದಲ್ಲಿ ಹೊಳೆಯುತ್ತಿರುವ ಮಸ್ತಕ-ಮಣಿ, ಹೊಳೆಯುತ್ತಿರುವ ನಕ್ಷತ್ರದ ಅನುಭೂತಿ ಮಾಡಿರಿ, ಕೆಲವೊಮ್ಮೆ ತಮ್ಮನ್ನು ಬ್ರಹ್ಮಾ ತಂದೆಯ ಸಹಯೋಗಿ, ಸಾಕಾರ ಬ್ರಾಹ್ಮಣ ರೂಪದಲ್ಲಿ ಬ್ರಹ್ಮಾನ ಭುಜವೆಂಬ ಅನುಭವ ಮಾಡಿರಿ, ಅನುಭೂತಿ ಮಾಡಿರಿ. ಕೆಲವೊಮ್ಮೆ ಅವ್ಯಕ್ತ ಫರಿಶ್ತಾ ಸ್ವರೂಪದ ಅನುಭೂತಿ ಮಾಡಿರಿ - ಇಂತಹ ಅನುಭೂತಿಯ ಶಕ್ತಿಯಿಂದ ಬಹಳ ಅಮೂಲ್ಯವಾದ, ಅಲೌಕಿಕವಾದ ಅನುಭವ ಮಾಡಿರಿ. ಕೇವಲ ಜ್ಞಾನದ ರೀತಿಯಲ್ಲಿ ವರ್ಣನೆ ಮಾಡುವುದಲ್ಲ, ಅನುಭೂತಿ ಮಾಡಿರಿ ಮತ್ತು ಒಂದು ಕಡೆ ಇದನ್ನು ವೃದ್ಧಿ ಮಾಡಿಕೊಳ್ಳುತ್ತಾ ಇರುತ್ತೀರೆಂದರೆ, ಇನ್ನೊಂದು ಕಡೆ ಸ್ವತಹವಾಗಿಯೇ ಬಲಹೀನತೆಯ ಅನುಭೂತಿಯು ಸ್ಪಷ್ಟವಾಗುತ್ತದೆ. ಶಕ್ತಿಶಾಲಿ ದರ್ಪಣದಲ್ಲಿ ಪುಟ್ಟ ಮಚ್ಚೆಯೂ ಸಹ ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಪರಿವರ್ತನೆ ಮಾಡಿಕೊಳ್ಳುತ್ತೀರಿ. ಹಾಗಾಯೇ ಸ್ವ-ಪರಿವರ್ತನೆ ಆಧಾರವು ಅನುಭೂತಿಯ ಶಕ್ತಿಯೆಂದು ತಿಳಿಯಿತೆ! ಈ ಶಕ್ತಿಯನ್ನು ಕಾರ್ಯದಲ್ಲಿ ಉಪಯೋಗಿಸಿರಿ, ಅದನ್ನು ಕೇವಲ ಲೆಕ್ಕ ಮಾಡುತ್ತಾ ಈ ಶಕ್ತಿಯೂ ಇದೆ, ಈ ಶಕ್ತಿಯೂ ಇದೆ ಎಂದು ಖುಷಿಯಾಗುವುದಲ್ಲ. ಆದರೆ ಸದಾ ಸ್ವಯಂ ಪ್ರತಿ, ಸರ್ವರ ಪ್ರತಿ, ಸೇವಾ ಪ್ರತಿ, ಪ್ರತಿಯೊಂದು ಕಾರ್ಯದಲ್ಲಿಯೂ ಉಪಯೋಗಿಸಿರಿ. ತಿಳಿಯಿತೆ? ಕೆಲವು ಮಕ್ಕಳು ಹೇಳುತ್ತಾರೆ - ಬಾಬಾ ಇದೇ ಕಾರ್ಯವನ್ನು ಮಾಡುತ್ತಾ ಇರುತ್ತಾರೇನು? ಆದರೆ ಬಾಬಾರವರು ಏನು ಮಾಡುವುದು, ತಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕು. ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದರೆ ಜೊತೆಗಾರರೂ ಹಾಗೆಯೇ ಇರಬೇಕಲ್ಲವೆ. ಆದ್ದರಿಂದ ನೋಡುತ್ತಾ ಇರುತ್ತಾರೆ ಮತ್ತು ಜೊತೆಗಾರರು ಸಮಾನರು ಆಗಿ ಬಿಡಲೆಂದು ಸಮಾಚಾರವನ್ನು ತಿಳಿಸುತ್ತಾ ಇರುತ್ತಾರೆ. ಇವೆಲ್ಲವೂ ಹಿಂದಿಂದೆ ಬರುವವರ ಮಾತುಗಳಲ್ಲ, ಹಿಂದೆ ಬರುವವರು ಬಹಳಷ್ಟು ಆಗುತ್ತಾರೆ. ಆದರೆ ಜೊತೆಗಾರರಂತು ಸಮಾನರಾಗಬೇಕು ಅಲ್ಲವೆ. ತಾವು ಜೊತೆಗಾರ(ಸಂಗಾತಿ)ರೇ ಅಥವಾ ದಿಬ್ಬಣದಲ್ಲಿ ಇರುವವರೇ? ದಿಬ್ಬಣವಂತು ಬಹಳ ದೊಡ್ಡದಾಗಿರುತ್ತದೆ ಆದ್ದರಿಂದ ಶಿವನ ದಿಬ್ಬಣವು ಪ್ರಸಿದ್ಧವಿದೆ. ದಿಬ್ಬಣವು ವಿಧ-ವಿಧವಾಗಿ ಇರುತ್ತದೆ ಆದರೆ ಸಂಗಾತಿಯಂತು(ಸಮಾನ) ಹಾಗೆಯೇ ಇರಬೇಕಲ್ಲವೆ. ಒಳ್ಳೆಯದು.

ಈಸ್ಟರ್ನ್ ಜೋನಿನವರು ಏನು ಮಾಡುತ್ತಿದ್ದಾರೆ? ಪ್ರತ್ಯಕ್ಷತೆಯ ಸೂರ್ಯನನ್ನು ಎಲ್ಲಿಂದ ಉದಯಗೊಳಿಸುತ್ತೀರಿ? ತಂದೆಯಲ್ಲಿ ಪ್ರತ್ಯಕ್ಷತೆ ಆಯಿತು, ಈಗ ಆ ಮಾತಂತು ಹಳೆಯದಾಯಿತು. ಆದರೆ ಈಗ ಏನು ಮಾಡುವಿರಿ? ಪ್ರಾಚೀನ ಸಿಂಹಾಸನವಿದೆ - ಈ ನಶೆಯಂತು ಒಳ್ಳೆಯದು ಆದರೆ ಈಗ ಏನು ಮಾಡುವಿರಿ? ಈಗ ನವೀನತೆಯ ಸೂರ್ಯೋದಯವನ್ನು ಮಾಡಿರಿ, ಅದರಿಂದ ಎಲ್ಲರ ಮುಖದಿಂದ ಬರಲಿ- ಈಸ್ಟರ್ನ್ ಜೋನ್ನಿಂದ ನವೀನತೆಯ ಸೂರ್ಯನ ಪ್ರಕಟವಾಯಿತು. ಈಗಿನವರೆಗೆ ಯಾವ ಕಾರ್ಯವನ್ನು ಯಾರೂ ಮಾಡಿಲ್ಲವೋ, ಅದನ್ನೀಗ ತಾವು ಮಾಡಿ ತೋರಿಸಿ. ಕಾರ್ಯಕ್ರಮಗಳು, ಸಮ್ಮೇಳನಗಳನ್ನು ಮಾಡಿದಿರಿ, ವಿಶಿಷ್ಟ ವ್ಯಕ್ತಿಗಳ ಸೇವೆಯನ್ನೂ ಮಾಡಿದಿರಿ, ವಾರ್ತಾ ಪತ್ರಿಕೆಯಲ್ಲಿಯೂ ಬಂದಿದೆ- ಇದನ್ನಂತು ಎಲ್ಲರೂ ಮಾಡುವರು ಆದರೆ ನವೀನತೆಯ ಹೊಸ ಜಲಕ್ ತೋರಿಸಿರಿ. ತಿಳಿಯಿತೆ!

ತಂದೆಯ ಮನೆಯು ತಮ್ಮ ಮನೆ ಆಗಿದೆ. ಎಲ್ಲರೂ ಆರಾಮದಿಂದ ತಲುಪಿದ್ದೀರಿ. ಹೃದಯದ ಆರಾಮವು ಸ್ಥೂಲ ಆರಾಮವನ್ನೂ ಕೊಡಿಸುತ್ತದೆ. ಹೃದಯದ ಆರಾಮವು ಇಲ್ಲದಿದ್ದರೆ, ಆರಾಮವಾಗಿರುವ ಸಾಧನಗಳಿದ್ದರೂ ಆರಾಮದಿಂದ ಇರುವುದಿಲ್ಲ. ಹೃದಯದ ಆರಾಮ(ವಿಶ್ರಾಂತಿ/ಸಮಾಧಾನ)ವಿದೆ ಅಂದರೆ ಹೃದಯದಲ್ಲಿ ಸದಾ ರಾಮನ ಸಂಗದಲ್ಲಿರುವುದು. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಆರಾಮದ ಅನುಭವ ಮಾಡುತ್ತಿರಿ. ಆರಾಮದಿಂದ ಇದ್ದೀರಲ್ಲವೆ ಅಥವಾ ಬಂದು-ಹೋಗುವುದು ಕಷ್ಟವೆನಿಸುತ್ತದೆಯೇ? ಆದರೂ ಮಧುರ ಡ್ರಾಮಾದ ಪೂರ್ವ ನಿಶ್ಚಿತವೆಂದು ತಿಳಿದುಕೊಳ್ಳಿರಿ. ಮಿಲನದ ಮೇಳವನ್ನಂತು ಆಚರಿಸುತ್ತಿದ್ದೀರಲ್ಲವೆ. ತಂದೆಯೊಂದಿಗೆ ಮಿಲನ, ಪರಿವಾರದೊಂದಿಗೆ ಮಿಲನವಾಗುವ ಮೇಳವನ್ನು ಆಚರಿಸುವುದೂ ಸಹ ಮಧುರ ಪೂರ್ವ ನಿಶ್ಚಿತವಾಗಿದೆ. ಒಳ್ಳೆಯದು.

ಸರ್ವ ಶಕ್ತಿಶಾಲಿ ಶ್ರೇಷ್ಠ ಆತ್ಮರಿಗೆ, ಪ್ರತಿಯೊಂದು ಶಕ್ತಿಗಳನ್ನು ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸುವ ಸರ್ವ ತೀವ್ರ ಪುರುಷಾರ್ಥಿ ಮಕ್ಕಳಿಗೆ, ಸದಾ ಸ್ವ-ಪರಿವರ್ತನೆಯಿಂದ ಸೇವೆಯಲ್ಲಿ ಮನಃಪ್ರಿಯ ಸಫಲತೆಯನ್ನು ಪಡೆಯುವಂತಹ ದಿಲ್ಖುಷ್ ಮಕ್ಕಳಿಗೆ, ಸದಾ ಹೃದಯರಾಮ ತಂದೆಯ ಮುಂದೆ ಸತ್ಯ ಹೃದಯದಿಂದ ಸ್ಪಷ್ಟವಾಗಿರುವ ಸಫಲತಾ-ಸ್ವರೂಪ ಶ್ರೇಷ್ಠ ಆತ್ಮರಿಗೆ, ಹೃದಯರಾಮ ಬಾಪ್ದಾದಾರವರ ಹೃದಯದಿಂದ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ -

ತಮ್ಮನ್ನು ಸದಾ ತಂದೆಯ ಛತ್ರಛಾಯೆಯಲ್ಲಿ ಇರುವಂತಹ ವಿಶೇಷ ಆತ್ಮರೆಂದು ಅನುಭವ ಮಾಡುತ್ತೀರಾ? ಎಲ್ಲಿ ತಂದೆಯ ಛತ್ರಛಾಯೆಯು ಇರುತ್ತದೆಯೋ ಅಲ್ಲಿ ಸದಾ ಮಾಯೆಯಿಂದ ಸುರಕ್ಷಿತರು ಆಗಿರುತ್ತೀರಿ. ಛತ್ರಛಾಯೆಯಲ್ಲಿ ಮಾಯೆಯು ಬರಲು ಸಾಧ್ಯವಿಲ್ಲ. ಸ್ವತಹವಾಗಿಯೇ ಪರಿಶ್ರಮ ಪಡುವುದರಿಂದ ದೂರವಾಗಿ ಬಿಡುತ್ತೀರಿ. ಸದಾ ಮೋಜಿನಲ್ಲಿ ಇರುತ್ತೀರಿ ಏಕೆಂದರೆ ಯಾವಾಗ ಪರಿಶ್ರಮ ಆಗುತ್ತದೆಯೋ ಆಗ ಮೋಜಿನ ಅನುಭವ ಮಾಡಿಸುವುದಿಲ್ಲ. ಉದಾ:- ಮಕ್ಕಳ ವಿದ್ಯಾಭ್ಯಾಸದ ಸಮಯದಲ್ಲಿ ಪರಿಶ್ರಮ ಆಗುತ್ತದೆಯಲ್ಲವೆ, ಯಾವಾಗ ಪರೀಕ್ಷೆಯ ದಿನಗಳು ಬರುತ್ತವೆಯೋ, ಆಗ ಬಹಳ ಪರಿಶ್ರಮ ಪಡುತ್ತೀರಿ, ಮೋಜಿನಿಂದ ಆಟವಾಡುವುದಿಲ್ಲ. ಮತ್ತು ಯಾವಾಗ ಪರಿಶ್ರಮವು ಸಮಾಪ್ತಿಯಾಯಿತು, ಪರೀಕ್ಷೆಯು ಸಮಾಪ್ತಿ ಆಯಿತೆಂದರೆ ಮೋಜು ಮಾಡುವಿರಿ. ಅಂದಾಗ ಎಲ್ಲಿ ಪರಿಶ್ರಮ ಇದೆಯೋ ಅಲ್ಲಿ ಮೋಜಿರುವುದಿಲ್ಲ, ಎಲ್ಲಿ ಮೋಜಿರುತ್ತದೆಯೋ ಅಲ್ಲಿ ಪರಿಶ್ರಮವಿಲ್ಲ. ಛತ್ರಛಾಯೆಯಲ್ಲಿ ಇರುವವರು ಅರ್ಥಾತ್ ಸದಾ ಮೋಜಿನಲ್ಲಿ ಇರುವವರು. ಏಕೆಂದರೆ ಇಲ್ಲಿ ಶ್ರೇಷ್ಠ ವಿದ್ಯೆಯ ವಿದ್ಯಾಭ್ಯಾಸವನ್ನು ಮಾಡುತ್ತೀರಿ ಆದರೆ ಶ್ರೇಷ್ಠ ವಿದ್ಯೆ ಆಗಿದ್ದರೂ ನಿಶ್ಚಯವಿದೆ - ಅವಶ್ಯವಾಗಿ ನಾವು ವಿಜಯಿಗಳು ಆಗುತ್ತೇವೆ, ಉತ್ತೀರ್ಣರಾಗುತ್ತೇವೆ. ಹೀಗಿರುವ ಕಾರಣದಿಂದ ಮೋಜಿನಲ್ಲಿರುತ್ತೀರಿ. ಇದು ಕಲ್ಪ-ಕಲ್ಪದ ವಿದ್ಯೆಯಾಗಿದೆ, ಹೊಸ ಮಾತೇನಲ್ಲ. ಅಂದಾಗ ಸದಾ ಮೋಜಿನಲ್ಲಿರಿ ಮತ್ತು ಅನ್ಯರನ್ನೂ ಮೋಜಿನಲ್ಲಿರುವ ಸಂದೇಶವನ್ನು ಕೊಡುತ್ತಿರಿ, ಇದೇ ಸೇವೆಯನ್ನು ಮಾಡುತ್ತಿರಿ ಏಕೆಂದರೆ ಸೇವೆಯ ಫಲವನ್ನು ವರ್ತಮಾನ ಸಮಯದಲ್ಲಿಯೂ ಹಾಗೂ ಭವಿಷ್ಯದಲ್ಲಿಯೂ ಅನುಭವಿಸುತ್ತಾ ಇರುತ್ತೀರಿ. ಸೇವೆಯನ್ನು ಮಾಡಿದಾಗಲೇ ಫಲವು ಸಿಗುತ್ತದೆ.

ಬೀಳ್ಕೊಡುಗೆಯ ಸಮಯದಲ್ಲಿ - ಮುಖ್ಯ ಸಹೋದರ-ಸಹೋದರಿಯರ ಜೊತೆ :

ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ಸಮಾನರಾಗುವ ಶುಭ ಭಾವನೆಯಿಂದ ಹಾರಿಸಲು ಬಯಸುತ್ತಾರೆ. ನಿಮಿತ್ತರಾಗಿರುವ ಸೇವಾಧಾರಿಗಳು ತಂದೆಯ ಸಮಾನರಂತು ಆಗಲೇಬೇಕು, ಬಾಬಾರವರು ಹೇಗಾದರೂ ಮಾಡಲೇ ಬೇಕಾಗಿದೆ ಏಕೆಂದರೆ ಅಂತಿಂತಹವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಿಲ್ಲ. ತಂದೆಗೂ ಸಹ ಗೌರವವಿದೆಯಲ್ಲವೆ. ತಂದೆಯು ಸಂಪನ್ನವಾಗಿದ್ದು, ಸಂಗಾತಿಯು ಕುಂಟ ಅಥವಾ ಕುರುಡನಾಗಿದ್ದರೆ ಶೋಭಿಸುವುದಿಲ್ಲ. ಕುರುಡ-ಕುಂಟರಂತು ದಿಬ್ಬಣದಲ್ಲಿರುತ್ತಾರೆ, ಸಂಗಾತಿಯಾಗಿ ಇರುವುದಿಲ್ಲ. ಆದ್ದರಿಂದ ಶಿವನ ದಿಬ್ಬಣದಲ್ಲಿ ಸದಾ ಕುರುಡ-ಕುಂಟ-ಕುರೂಪಿಯನ್ನು ತೋರಿಸಿದ್ದಾರೆ ಏಕೆಂದರೆ ಕೆಲವು ಬಲಹೀನ ಆತ್ಮರು ಧರ್ಮರಾಜ ಪುರಿಯ ಮಾರ್ಗದಲ್ಲಿ ನಡೆಯುತ್ತಾ ಯೋಗ್ಯರಾಗುವರು. ಒಳ್ಳೆಯದು.

ವರದಾನ:  
ಸೇವೆಯ ವೇದಿಕೆಯಲ್ಲಿ ಸಮಾವೇಶ ಶಕ್ತಿಯ ಮೂಲಕ ಸಫಲತಾ ಮೂರ್ತಿಯಾಗುವ ಮಾಸ್ಟರ್ ಸಾಗರ ಭವ.

ಯಾವಾಗ ಸೇವೆಯ ವೇದಿಕೆಯಲ್ಲಿ ಬರುತ್ತೀರಿ, ಆಗ ಅನೇಕ ಪ್ರಕಾರದ ಮಾತುಗಳು ಬರುತ್ತವೆ. ಆ ಮಾತುಗಳನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುತ್ತೀರೆಂದರೆ ಸಫಲತಾ ಮೂರ್ತಿಗಳಾಗುತ್ತೀರಿ. ಸಮಾವೇಶ ಮಾಡಿಕೊಳ್ಳುವುದು ಅಂದರೆ ಸಂಕಲ್ಪ ರೂಪದಲ್ಲಿಯೂ, ಯಾವುದೇ ವ್ಯಕ್ತ ಮಾತುಗಳು ಮತ್ತು ಭಾವದಲ್ಲಿ ಅಂಶದಷ್ಟೂ ಸಮಾವೇಶವಾಗದೇ ಇರುವುದು. ಅಕಲ್ಯಾಣಕಾರಿ ಮಾತುಗಳನ್ನು, ಈ ರೀತಿ ಕಲ್ಯಾಣದ ಭಾವನೆಯಲ್ಲಿ ಬದಲಾಯಿಸಿ, ಹೇಗೆಂದರೆ ಅಕಲ್ಯಾಣದ ಮಾತುಗಳೇ ಇರಲಿಲ್ಲ ಎಂಬಂತೆ. ಅವಗುಣಗಳನ್ನು ಗುಣಗಳಲ್ಲಿ, ನಿಂದನೆಯನ್ನು ಮಹಿಮೆಯಲ್ಲಿ ಬದಲಾಯಿಸಿರಿ - ಈ ರೀತಿಯಿದ್ದಾಗ ಮಾಸ್ಟರ್ ಸಾಗರ ಎಂದು ಹೇಳುತ್ತಾರೆ.

ಸ್ಲೋಗನ್:
ವಿಸ್ತಾರವನ್ನು ನೋಡದೆ ಸಾರವನ್ನು ನೋಡುವ ಅಥವಾ ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುವವರೇ ತೀವ್ರ ಪುರುಷಾರ್ಥಿ ಆಗಿದ್ದಾರೆ.


14-02-21 ಸ್ವ-ಪರಿವರ್ತನೆಗೆ ಆಧಾರ - `ಸತ್ಯ ಹೃದಯದ ಅನುಭೂತಿ' ರಿವೈಜ್: 02-11-87

1. ಎಲ್ಲರ ಮನಸ್ಸಿನಲ್ಲಿ ಯಾವ ಒಂದೇ ಒಲವು-ಉತ್ಸಾಹವಿದೆ?

2. ಅಲೌಕಿಕ ಈಶ್ವರೀಯ ಸೇವೆಯು ಒಂದೇ ಸಮಯದಲ್ಲಿ ಯಾವ ಮೂರು ಪ್ರಕಾರದ ಸೇವೆಯನ್ನು ಸಿದ್ಧ ಮಾಡುತ್ತದೆ?

3. ಮೂರು ಪ್ರಕಾರದ ಸೇವೆಯ ಶಕ್ತಿಶಾಲಿ ಆಧಾರವು ಎನಾಗಿದೆ?

4. ತಂದೆಯು ವರದಾತನ ಜೊತೆಯಲ್ಲಿ ಯಾವ ರೂಪದಲ್ಲಿ ಉನ್ನತಿಯಾಗುವ ಗಮನವನ್ನೂ ಕೊಡುತ್ತಾರೆ?

5. ಮನಃ ಪ್ರಿಯ, ಲೋಕ ಪ್ರಿಯ, ಪ್ರಭು ಪ್ರಿಯ ಸಫಲತೆಯ ಆಧಾರವು ಏನಾಗಿದೆ?

6. ಸ್ವ-ಪರಿವರ್ತನೆಯಲ್ಲಿ ಕೊರತೆಯ ಮೂಲ ಆಧಾರ ಏನಾಗಿದೆ?

7. ಯಾವ ಶಕ್ತಿಯು ಸದಾ ಕಾಲದ ಪರಿವರ್ತನೆ ಮಾಡಿ ಬಿಡುವುದು?

8. ಸದಾಕಾಲದ ಶ್ರೇಷ್ಠ ಪರಿವರ್ತನೆ ಆಗಲು ವಿಶೇಷವಾಗಿ ಯಾವ ಎರಡು ಮಾತುಗಳ ಅನುಭೂತಿ ಇರಬೇಕಾಗಿದೆ?

9. ಸ್ವ-ಪರಿವರ್ತನೆಯು ತೀವ್ರ ಗತಿಯಿಂದ ಆಗದೇ ಇರುವ ಕಾರಣದಿಂದ ಯಾವ ಅನುಭೂತಿಯ ಕೊರತೆಯಿದೆ?

10. ಸಮಾವೇಶ ಮಾಡಿಕೊಳ್ಳುವುದು ಅಂದರೇನು?