14.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಹೇಗೆ ತಂದೆ ಮತ್ತು ದಾದಾ ಇಬ್ಬರೂ ನಿರಹಂಕಾರಿಗಳಾಗಿದ್ದಾರೆ, ನಿಷ್ಕಾಮ ಸೇವೆ ಮಾಡುತ್ತಾರೆ, ತಮಗಾಗಿ ಯಾವುದೇ ಲೋಭವಿಲ್ಲ, ಹಾಗೆಯೇ ತಾವು ಮಕ್ಕಳೂ ಸಹ ತಂದೆಯ ಸಮಾನರಾಗಿ.

ಪ್ರಶ್ನೆ:
ಬಡವರ ಬಂಧುವಾಗಿರುವ ತಂದೆಯು ಬಡ ಮಕ್ಕಳ ಅದೃಷ್ಟವನ್ನು ಯಾವ ಆಧಾರದ ಮೇಲೆ ಶ್ರೇಷ್ಠವನ್ನಾಗಿ ಮಾಡುತ್ತಾರೆ?

ಉತ್ತರ:
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಗೃಹಸ್ಥದಲ್ಲಿರುತ್ತಾ ಎಲ್ಲವನ್ನೂ ಸಂಭಾಲನೆ ಮಾಡುತ್ತಾ ಸದಾ ಬುದ್ಧಿಯಿಂದ ಇದನ್ನೇ ತಿಳಿಯಿರಿ - ಇದೆಲ್ಲವೂ ತಂದೆಯದಾಗಿದೆ. ನಿಮಿತ್ತರಾಗಿ ಇರಿ ಆಗ ಅದೃಷ್ಟವು ಶ್ರೇಷ್ಠವಾಗಿ ಬಿಡುವುದು. ಇದರಲ್ಲಿ ಬಹಳ ಸತ್ಯತೆಯಿರಬೇಕಾಗಿದೆ. ಪೂರ್ಣ ನಿಶ್ಚಯವಿದ್ದಾಗ ಹೇಗೆ ಯಜ್ಞದಿಂದ ನಿಮ್ಮ ಪಾಲನೆಯಾಗುತ್ತಿರುತ್ತದೆ ಹಾಗೆಯೇ ಮನೆಯಲ್ಲಿ ನಿಮಿತ್ತರಾಗಿದ್ದು ಶಿವ ತಂದೆಯ ಭಂಡಾರದಿಂದ ಸ್ವೀಕಾರ ಮಾಡುತ್ತೀರಿ. ತಂದೆಗೆ ಎಲ್ಲವನ್ನೂ ಸತ್ಯವನ್ನೇ ಹೇಳಬೇಕಾಗುತ್ತದೆ.

ಓಂ ಶಾಂತಿ.
ಭಕ್ತಿಮಾರ್ಗದ ಸತ್ಸಂಗಗಳಿಗಿಂತ ಈ ಜ್ಞಾನ ಮಾರ್ಗದ ಸತ್ಸಂಗವು ಬಹಳ ವಿಚಿತ್ರವಾಗಿದೆ. ನಿಮಗೆ ಭಕ್ತಿಯ ಅನುಭವವಂತೂ ಇದೆ. ಇದೂ ಗೊತ್ತಿದೆ - ಅನೇಕಾನೇಕ ಸಾಧು-ಸಂತರು ಭಕ್ತಿಮಾರ್ಗದ ಶಾಸ್ತ್ರ ಮುಂತಾದವುಗಳನ್ನು ತಿಳಿಸುತ್ತಾರೆ. ಇಲ್ಲಂತೂ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ನೀವು ಯಾರ ಸನ್ಮುಖದಲ್ಲಿ ಕುಳಿತಿದ್ದೀರಿ? ಡಬಲ್ ತಂದೆ ಮತ್ತು ತಾಯಿ. ಅಲ್ಲಂತೂ ಈ ರೀತಿಯಿರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಇಲ್ಲಿ ಬೇಹದ್ದಿನ ತಂದೆಯೂ (ಶಿವ ತಂದೆ) ಇದ್ದಾರೆ, ತಾಯಿಯೂ (ಬ್ರಹ್ಮಾ ತಂದೆ) ಇದ್ದಾರೆ, ಚಿಕ್ಕ ಅಮ್ಮ (ಮಮ್ಮಾ) ಇದ್ದಾರೆ. ಇಷ್ಟೊಂದು ಸಂಬಂಧಗಳು ಆಗುತ್ತವೆ ಅಲ್ಲಂತೂ ಈ ರೀತಿ ಯಾವುದೇ ಸಂಬಂಧವಿಲ್ಲ. ಅವರಂತೂ ನಿವೃತ್ತಿ ಮಾರ್ಗದವರಾಗಿದ್ದಾರೆ ಅವರ ಧರ್ಮವೇ ಬೇರೆಯಾಗಿದೆ ನಿಮ್ಮ ಧರ್ಮವೇ ಬೇರೆಯಾಗಿದೆ. ರಾತ್ರಿ-ಹಗಲಿನ ಅಂತರವಿದೆ. ಇದೂ ಸಹ ನಿಮಗೆ ತಿಳಿದಿದೆ - ಲೌಕಿಕ ತಂದೆಯಿಂದ ಅಲ್ಪಕಾಲದ ಕ್ಷಣ ಭಂಗುರ ಸುಖವು ಒಂದು ಜನ್ಮಕ್ಕಾಗಿ ಸಿಗುತ್ತದೆ ಮತ್ತೆ ಹೊಸ ತಂದೆ, ಹೊಸ ಮಾತು. ಇಲ್ಲಂತೂ ಲೌಕಿಕ ತಂದೆಯಿಂದ ಆಸ್ತಿಯು ಸಿಗುತ್ತದೆ ಮತ್ತು ಪಾರಲೌಕಿಕ ತಂದೆಯಿಂದಲೂ ಆಸ್ತಿಯು ಸಿಗುತ್ತದೆ, ಆದರೆ ಈ ಅಲೌಕಿಕ ತಂದೆಯು ವಿಚಿತ್ರ ತಂದೆಯಾಗಿದ್ದಾರೆ, ಇವರಿಂದ ಯಾವುದೇ ಆಸ್ತಿಯು ಸಿಗುವುದಿಲ್ಲ. ಹಾ! ಇವರ ಮೂಲಕ ಶಿವ ತಂದೆಯು ಆಸ್ತಿಯನ್ನು ಕೊಡುತ್ತಾರೆ ಆದ್ದರಿಂದ ಆ ಪಾರಲೌಕಿಕ ತಂದೆಯನ್ನು ಬಹಳ ನೆನಪು ಮಾಡುತ್ತಾರೆ. ಲೌಕಿಕ ತಂದೆಯನ್ನೂ ನೆನಪು ಮಾಡುತ್ತಾರೆ ಆದರೆ ಈ ಅಲೌಕಿಕ ತಂದೆಯನ್ನು ಯಾರೂ ನೆನಪು ಮಾಡುವುದಿಲ್ಲ. ನಿಮಗೆ ಗೊತ್ತಿದೆ ಇವರು ಪ್ರಜಾಪಿತನಾಗಿದ್ದಾರೆ, ಇವರು ಕೇವಲ ಒಬ್ಬರಿಗೆ ಪಿತನಲ್ಲ, ಪ್ರಜಾಪಿತ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಶಿವ ತಂದೆಗೆ ಈ ರೀತಿ ಹೇಳುವುದಿಲ್ಲ - ಲೌಕಿಕ ಸಂಬಂಧದಲ್ಲಿ ಲೌಕಿಕ ತಂದೆ ಮತ್ತು ತಾತ ಇರುತ್ತಾರೆ. ಆದರೆ ಇವರು ಗ್ರೇಟ್ ಗ್ರೇಟ್ ಫಾದರ್ ಆಗಿದ್ದಾರೆ (ಪಿತಾಮಹ) ಹೀಗೆ ಲೌಕಿಕ ತಂದೆಗಾಗಲಿ, ಪಾರಲೌಕಿಕ ತಂದೆಗಾಗಲಿ ಹೇಳುವುದಿಲ್ಲ. ಆದರೆ ಇಂತಹ ಪಿತಾಮಹನಿಂದ ಯಾವುದೇ ಆಸ್ತಿಯು ಸಿಗುವುದಿಲ್ಲ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಭಕ್ತಿಮಾರ್ಗದ ಮಾತುಗಳು ಭಿನ್ನವಾಗಿದೆ, ನಾಟಕದಲ್ಲಿ ಅವರದೂ ಪಾತ್ರವಿದೆ, ಅದು ನಡೆಯುತ್ತಿರುತ್ತದೆ. ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, 84 ಲಕ್ಷ ಜನ್ಮಗಳಲ್ಲ ಎಂಬುದನ್ನು ತಂದೆಯು ತಿಳಿಸುತ್ತಾರೆ. ತಂದೆಯು ಬಂದು ಇಡೀ ಪ್ರಪಂಚ ಮತ್ತು ನಮ್ಮನ್ನು ಸತ್ಯವಂತರನ್ನಾಗಿ ಮಾಡುತ್ತಾರೆ. ಈ ಸಮಯದಲ್ಲಿ ಯಾರೂ ಧರ್ಮಾತ್ಮರಾಗುವುದಿಲ್ಲ, ಪುಣ್ಯಾತ್ಮರ ಪ್ರಪಂಚವೇ ಬೇರೆಯಿದೆ. ಎಲ್ಲಿ ಪಾಪಾತ್ಮರಿರುತ್ತಾರೆಯೋ ಅಲ್ಲಿ ಪುಣ್ಯಾತ್ಮರಿರುವುದಿಲ್ಲ. ಇಲ್ಲಿ ಪಾಪಾತ್ಮರು ಪಾಪಾತ್ಮರಿಗೇ ದಾನ-ಪುಣ್ಯವನ್ನು ಮಾಡುತ್ತಿರುತ್ತಾರೆ. ಪುಣ್ಯಾತ್ಮರ ಪ್ರಪಂಚದಲ್ಲಿ ದಾನ-ಪುಣ್ಯ ಇತ್ಯಾದಿಗಳನ್ನು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ನಾವು ಸಂಗಮಯುಗದಲ್ಲಿ 21 ಜನ್ಮಗಳ ಆಸ್ತಿಯನ್ನು ಪಡೆದಿದ್ದೇವೆನ್ನುವ ಜ್ಞಾನವೂ ಸಹ ಅಲ್ಲಿರುವುದಿಲ್ಲ. ಈ ಜ್ಞಾನವು ಇಲ್ಲಿಯೇ ಬೇಹದ್ದಿನ ತಂದೆಯಿಂದ ಸಿಗುತ್ತದೆ. ಇದರಿಂದ 21 ಜನ್ಮಗಳಿಗಾಗಿ ಸದಾ ಸುಖ-ಆರೋಗ್ಯ-ಭಾಗ್ಯ ಎಲ್ಲವೂ ಸಿಕ್ಕಿ ಬಿಡುತ್ತದೆ. ಅಲ್ಲಿ ನಿಮ್ಮ ಆಯಸ್ಸು ಧೀರ್ಘವಾಗಿರುತ್ತದೆ. ಹೆಸರೇ ಆಗಿದೆ - ಅಮರಪುರಿ. ಶಂಕರನು ಪಾರ್ವತಿಗೆ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಸೂಕ್ಷ್ಮವತನದಲ್ಲಂತೂ ಈ ಮಾತುಗಳು ನಡೆಯುವುದಿಲ್ಲ. ಅಲ್ಲದೆ, ಅಮರ ಕಥೆಯನ್ನು ಕೇವಲ ಒಬ್ಬರಿಗೆ ತಿಳಿಸಲಾಗುತ್ತದೆಯೇ! ಇವು ಭಕ್ತಿಮಾರ್ಗದ ಮಾತುಗಳಾಗಿವೆ, ಇದರ ಮೇಲೆ ಇಲ್ಲಿಯವರೆಗೂ ನಿಂತಿದ್ದಾರೆ. ಎಲ್ಲದಕ್ಕಿಂತ ದೊಡ್ಡ ಅಸತ್ಯವೆಂದರೆ ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳುವುದಾಗಿದೆ. ಹೀಗೆ ಈಶ್ವರನನ್ನು ನಿಂದನೆ ಮಾಡುತ್ತಾರೆ. ಬೇಹದ್ದಿನ ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಆದರೆ ಅಂತಹವರಿಗೆ ಸರ್ವವ್ಯಾಪಿ, ಕಲ್ಲು-ಮುಳ್ಳು, ಕಣ-ಕಣದಲ್ಲಿಯೂ ಇದ್ದಾರೆಂದು ಹೇಳಿ ಬಿಡುತ್ತಾರೆ. ತಮಗಿಂತಲೂ ಹೆಚ್ಚಿನ ನಿಂದನೆ ಮಾಡಿ ಬಿಟ್ಟಿದ್ದಾರೆ. ನಾನು ನಿಮಗೆ ಎಷ್ಟೊಂದು ನಿಷ್ಕಾಮ ಸೇವೆ ಮಾಡುತ್ತೇನೆ. ನನಗೆ ಮೊದಲ ನಂಬರಿನವನಾಗಬೇಕೆಂಬ ಯಾವುದೇ ಲೋಭವಿಲ್ಲ. ಅನ್ಯರನ್ನು ಮಾಡುವ ಇಚ್ಛೆಯೇ ಇರುತ್ತದೆ. ಇದಕ್ಕೆ ನಿಷ್ಕಾಮ ಸೇವೆಯೆಂದು ಹೇಳಲಾಗುತ್ತದೆ. ತಂದೆಯು ತಾವು ಮಕ್ಕಳಿಗೆ ನಮಸ್ತೆ ಮಾಡುತ್ತಾರೆ. ಅವರು ಎಷ್ಟೊಂದು ನಿರಾಕಾರಿ, ನಿರಹಂಕಾರಿಯಾಗಿದ್ದಾರೆ, ಯಾವುದೇ ಅಹಂಕಾರವಿಲ್ಲ. ವೇಷ ಭೂಷಣವೂ ಅದೇ ಆಗಿದೆ, ಏನೂ ಬದಲಾಗಿಲ್ಲ. ಇಲ್ಲವೆಂದರೆ ಅವರು ಪೂರ್ಣ ವೇಷವನ್ನೇ ಬದಲಾಯಿಸುತ್ತಾರೆ. ಆದರೆ ಇವರ ವಸ್ತ್ರಗಳೂ ಅದೇ ಸಾಧಾರಣವಾಗಿದೆ. ಅಧಿಕಾರಿಗಳ ವೇಷ ಭೂಷಣವೂ ಬದಲಾಗುತ್ತದೆ. ಆದರೆ ಇವರದಂತೂ ಅದೇ ಸಾಧಾರಣ ವೇಷ ಭೂಷಣವಾಗಿದೆ, ಯಾವುದೇ ವ್ಯತ್ಯಾಸವಿಲ್ಲ. ಆದ್ದರಿಂದಲೇ ತಂದೆಯೂ ಸಹ ಹೇಳುತ್ತಾರೆ - ನಾನು ಸಾಧಾರಣ ತನುವನ್ನು ಆಧಾರವನ್ನಾಗಿ ತೆಗೆದುಕೊಳ್ಳುತ್ತೇನೆ. ಅದೂ ಎಂತಹದ್ದು? ಯಾರು ತಾವೇ ತಮ್ಮ ಜನ್ಮಗಳನ್ನು ನಾನು ಎಷ್ಟು ಪುನರ್ ಜನ್ಮಗಳನ್ನು ಪಡೆಯುತ್ತೇನೆಂದು ತಿಳಿದುಕೊಂಡಿಲ್ಲವೋ ಅಂತಹವರ ಶರೀರವನ್ನು ಆಧಾರವಾಗಿ ತೆಗೆದುಕೊಳ್ಳುತ್ತೇನೆ. 84 ಲಕ್ಷ ಜನ್ಮಗಳೆಂದು ಮನುಷ್ಯರು ಹೇಳಿ ಬಿಡುತ್ತಾರೆ. ಇವೆಲ್ಲವೂ ಹೇಳಿಕೆ-ಕೇಳಿಕೆಯ ಮಾತುಗಳಾಗಿವೆ, ಇದರಿಂದೇನೂ ಲಾಭವಿಲ್ಲ. ಇಂತಹ ಕರ್ಮ ಮಾಡಿದರೆ ನಾಯಿ, ಕತ್ತೆ ಇತ್ಯಾದಿ ಆಗುತ್ತೀಯೆಂದು ಭಯ ಪಡಿಸುತ್ತಾರೆ. ಹಸುವಿನ ಬಾಲವನ್ನು ಹಿಡಿದುಕೊಂಡರೆ ಉನ್ನತಿಯಾಗಿ ಬಿಡುತ್ತಾರೆಂದು ತಿಳಿಯುತ್ತಾರೆ. ಈಗ ಹಸು ಎಲ್ಲಿಂದ ಬಂದಿತು. ಸ್ವರ್ಗದ ಹೆಸರುಗಳೇ ಬೇರೆಯಾಗಿರುತ್ತವೆ. ಬಹಳ ಸುಂದರವಾಗಿರುತ್ತವೆ. ಹೇಗೆ ನೀವು 100% ಸಂಪೂರ್ಣರೋ ಹಾಗೆಯೇ ಹಸುಗಳೂ ಸಹ ಬಹಳ ಸುಂದರವಾಗಿರುತ್ತವೆ. ಕೃಷ್ಣನೇನು ಹಸುಗಳನ್ನು ಮೇಯಿಸುವುದಿಲ್ಲ. ಇಂತಹ ಕೆಲಸವನ್ನು ಮಾಡಲು ಅವನಿಗೇನಾಗಿದೆ! ಅಲ್ಲಿಯ ಸೌಂದರ್ಯವನ್ನು ಹೀಗೆ ತೋರಿಸುತ್ತಾರಷ್ಟೇ ಬಾಕಿ ಕೃಷ್ಣನು ಯಾವುದೇ ಗೋವುಗಳನ್ನು ಸಾಕಲಿಲ್ಲ. ಆದರೆ ಅಂತಹ ಕೃಷ್ಣನನ್ನು ಗೊಲ್ಲನನ್ನಾಗಿ ಮಾಡಿ ಬಿಟ್ಟಿದ್ದಾರೆ. ಸರ್ವಗುಣ ಸಂಪನ್ನ, ಸತ್ಯಯುಗದ ಮೊದಲ ರಾಜಕುಮಾರನೆಲ್ಲಿ! ಮತ್ತು ಗೊಲ್ಲನೆಲ್ಲಿ! ಏನನ್ನೂ ತಿಳಿದುಕೊಂಡಿಲ್ಲ, ಏಕೆಂದರೆ ದೇವತಾ ಧರ್ಮವಂತೂ ಈಗಿಲ್ಲ. ಪ್ರಾಯಲೋಪವಾಗುವ ಧರ್ಮವು ಇದೊಂದೇ ಆಗಿದೆ. ಈ ಮಾತುಗಳು ಯಾವುದೇ ಶಾಸ್ತ್ರದಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಈ ಜ್ಞಾನವನ್ನು ನೀವು ಮಕ್ಕಳಿಗೆ ಕೊಡುತ್ತೇನೆ. ಮಾಲೀಕರಾಗಿ ಬಿಟ್ಟರೆ ನಂತರ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ಜ್ಞಾನವನ್ನು ಯಾವಾಗಲೂ ಅಜ್ಞಾನಿಗಳಿಗೇ ಕೊಡಲಾಗುತ್ತದೆ. ಜ್ಞಾನಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶವೆಂದು ಗಾಯನವಿದೆ. ಈಗ ಮಕ್ಕಳಿಗೂ ಗೊತ್ತಿದೆ, ಇಡೀ ಪ್ರಪಂಚವು ಅಜ್ಞಾನ ಅಂಧಕಾರದಲ್ಲಿದೆ, ಎಷ್ಟೊಂದು ಸತ್ಸಂಗಗಳಿವೆ. ಇದು ಭಕ್ತಿ ಮಾರ್ಗವಲ್ಲ ಸದ್ಗತಿ ಮಾರ್ಗವಾಗಿದೆ. ಒಬ್ಬ ತಂದೆಯೇ ಸದ್ಗತಿ ಮಾಡುತ್ತಾರೆ. ನೀವು ಭಕ್ತಿ ಮಾರ್ಗದಲ್ಲಿ ಕರೆದಿರಿ - ತಂದೆಯೇ, ತಾವು ಬಂದರೆ ನಾವು ತಮ್ಮವರೇ ಆಗುತ್ತೇವೆ, ತಮ್ಮ ವಿನಃ ಅನ್ಯರ್ಯಾರೂ ಇಲ್ಲ. ಏಕೆಂದರೆ ತಾವೇ ಜ್ಞಾನ ಸಾಗರ, ಸುಖದ ಸಾಗರ, ಪವಿತ್ರತೆಯ ಸಾಗರ, ಸಂಪತ್ತಿನ ಸಾಗರನಾಗಿದ್ದೀರಿ. ಸಂಪತ್ತನ್ನು ಕೊಡುತ್ತಾರಲ್ಲವೇ! ಎಷ್ಟು ಸಂಪನ್ನರನ್ನಾಗಿ ಮಾಡಿ ಬಿಡುತ್ತಾರೆ. ನಿಮಗೂ ಗೊತ್ತಿದೆ, ನಾವು ಶಿವ ತಂದೆಯಿಂದ 21 ಜನ್ಮಗಳಿಗಾಗಿ ಜೋಳಿಗೆಯನ್ನು ತುಂಬಿಸಿಕೊಳ್ಳಲು ಬಂದಿದ್ದೇವೆ ಅರ್ಥಾತ್ ನರನಿಂದ ನಾರಾಯಣನಾಗುತ್ತೇವೆ. ಭಕ್ತಿ ಮಾರ್ಗದಲ್ಲಿ ಬಹಳ ಕಥೆಗಳನ್ನು ಕೇಳಿದರೂ ಸಹ ಏಣಿಯನ್ನು ಇಳಿಯುತ್ತಲೇ ಬಂದಿರಿ, ಯಾರದೂ ಏರುವ ಕಲೆಯಾಗಲು ಸಾಧ್ಯವಿಲ್ಲ. ಹಾಗೆಯೇ ಕಲ್ಪದ ಆಯಸ್ಸನ್ನೂ ಸಹ ಎಷ್ಟೊಂದು ದೀರ್ಘವನ್ನಾಗಿ ಮಾಡಿ ಬಿಡುತ್ತಾರೆ. ನಾಟಕದ ಕಾಲಾವಧಿಯನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಆದರೆ ಈಗ ನಿಮಗೆ ತಿಳಿದಿದೆ - ಕಲ್ಪವು 5000 ವರ್ಷಗಳಾಗಿದೆ. ಹೆಚ್ಚೆಂದರೆ 84 ಜನ್ಮಗಳು ಮತ್ತು ಕಡಿಮೆಯೆಂದರೆ 1 ಜನ್ಮವಾಗಿದೆ. ಅಂತ್ಯದಲ್ಲಿಯೂ ಬರುತ್ತಿರುತ್ತಾರೆ, ನಿರಾಕಾರಿ ವೃಕ್ಷ (ಪರಮಧಾಮದಲ್ಲಿ) ವಿದೆಯಲ್ಲವೆ. ಅಲ್ಲಿಂದ ನಂಬರವಾರ್ ಆಗಿ ಪಾತ್ರವನ್ನಭಿನಯಿಸಲು ಬರುತ್ತಾರೆ. ಮೂಲತಃ ನಾವು ನಿರಾಕಾರಿ ವೃಕ್ಷದವರಾಗಿದ್ದೇವೆ ಮತ್ತೆ ಅಲ್ಲಿಂದ ಪಾತ್ರವನ್ನಭಿನಯಿಸಲು ಇಲ್ಲಿಗೆ ಬರುತ್ತೇವೆ. ಅಲ್ಲಿ ಎಲ್ಲಾ ಆತ್ಮರೂ ಪವಿತ್ರರಾಗಿರುತ್ತಾರೆ, ಆದರೆ ಎಲ್ಲರ ಪಾತ್ರವು ಬೇರೆ-ಬೇರೆಯಾಗಿದೆ. ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಿ, ವೃಕ್ಷವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಿ. ಸತ್ಯಯುಗದಿಂದ ಕಲಿಯುಗ ಅಂತ್ಯವರೆಗಿನ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ. ಇದನ್ನು ಯಾವುದೇ ಮನುಷ್ಯರಾಗಲಿ, ಈ ದಾದಾರವರಾಗಲಿ ತಿಳಿಸುವುದಿಲ್ಲ. ಒಬ್ಬರೇ ಸದ್ಗುರುವಾಗಿದ್ದಾರೆ ಅವರೇ ಸದ್ಗತಿ ಮಾಡುತ್ತಾರೆ. ಉಳಿದೆಲ್ಲಾ ಗುರುಗಳು ಭಕ್ತಿಮಾರ್ಗದವರಾಗಿದ್ದಾರೆ. ಎಷ್ಟೊಂದು ಕರ್ಮಕಾಂಡ ಮಾಡುತ್ತಾರೆ. ಭಕ್ತಿಮಾರ್ಗದ್ದು ಎಷ್ಟೊಂದು ಆಡಂಬರವಿದೆ, ಇದು ಮೃಗತೃಷ್ಣ ಸಮಾನವಿದೆ. ಇದರಲ್ಲಿ ಈ ರೀತಿ ಸಿಕ್ಕಿಹಾಕಿಕೊಂಡಿದ್ದಾರೆ. ಅದರಿಂದ ಯಾರೇ ಬಿಡಿಸಲು ಹೋದರೂ ಸಹ ಅದರಲ್ಲಿ ತಾವೇ ಸಿಕ್ಕಿಕೊಳ್ಳುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಹೊಸ ಮಾತೇನಿಲ್ಲ. ನಿಮ್ಮ ಕ್ಷಣ-ಕ್ಷಣ ಏನು ಕಳೆಯುತ್ತದೆಯೋ ಎಲ್ಲವೂ ನಾಟಕದಲ್ಲಿ ಮಾಡಲ್ಪಟ್ಟಿದೆ. ಮಕ್ಕಳೂ ಸಹ ಇದನ್ನು ತಿಳಿದಿದ್ದೀರಿ, ಈಗ ನಾವು ಬೇಹದ್ದಿನ ತಂದೆಯಿಂದ ರಾಜಯೋಗವನ್ನು ಕಲಿತು ನರನಿಂದ ನಾರಾಯಣ, ವಿಶ್ವದ ಮಾಲೀಕರಾಗುತ್ತೇವೆ. ನೀವು ಮಕ್ಕಳಿಗೆ ಈ ನಶೆಯಿರಬೇಕು, ಬೇಹದ್ದಿನ ತಂದೆಯು ಪ್ರತೀ 5000 ವರ್ಷಗಳ ನಂತರ ಭಾರತದಲ್ಲಿಯೇ ಬರುತ್ತಾರೆ, ಅವರು ಶಾಂತಿಯ ಸಾಗರ, ಸುಖದ ಸಾಗರನಾಗಿದ್ದಾರೆ, ಈ ಮಹಿಮೆಯು ಪಾರಲೌಕಿಕ ತಂದೆಯದೇ ಆಗಿದೆ. ಈ ಮಹಿಮೆಯು ಸಂಪೂರ್ಣ ಸರಿಯಾಗಿದೆ. ಎಲ್ಲವೂ ಒಬ್ಬರಿಂದಲೇ ಸಿಗುತ್ತದೆ ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ, ಅವರ ಸನ್ಮುಖದಲ್ಲಿ ನೀವು ಕುಳಿತಿದ್ದೀರಿ. ನೀವು ತಮ್ಮ ಸೇವಾ ಕೇಂದ್ರದಲ್ಲಿ ಕುಳಿತಿದ್ದರೆ ಯೋಗವನ್ನು ಎಲ್ಲಿ ಜೋಡಿಸುತ್ತೀರಿ. ಶಿವ ತಂದೆಯು ಮಧುಬನದಲ್ಲಿದ್ದಾರೆಂದು ಬುದ್ಧಿಯಲ್ಲಿ ಬರುತ್ತದೆ, ಅವರನ್ನೇ ನೆನಪು ಮಾಡುತ್ತೀರಿ. ಸ್ವಯಂ ಶಿವ ತಂದೆಯೇ ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡಲು ಪ್ರವೇಶ ಮಾಡಿದ್ದೇನೆ. ನಾನು ನಾಟಕದ ಬಂಧನದಲ್ಲಿ ಬಂಧಿತನಾಗಿದ್ದೇನೆ. ನೀವು ನನಗೆ ಎಷ್ಟೊಂದು ನಿಂದನೆ ಮಾಡುತ್ತೀರಿ ಆದರೆ ನಾನು ನಿಮ್ಮನ್ನು ಪೂಜ್ಯನೀಯರನ್ನಾಗಿ ಮಾಡುತ್ತೇನೆ ಆದರೆ ಇದು ನಿನ್ನೆಯ ಮಾತಾಗಿದೆ. ನೀವು ಎಷ್ಟೊಂದು ಪೂಜೆ ಮಾಡುತ್ತಿದ್ದಿರಿ. ನಿಮಗೆ ನಿಮ್ಮ ರಾಜ್ಯಭಾಗ್ಯವನ್ನು ಕೊಟ್ಟೆನು ಆದರೆ ಎಲ್ಲವನ್ನೂ ಕಳೆದುಕೊಂಡಿರಿ. ಈಗ ಮತ್ತೆ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಇದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಂಡಿಲ್ಲ. ಇವರು ದೈವೀ ಗುಣವುಳ್ಳ ದೇವತೆಗಳಾಗಿದ್ದಾರೆ. ಆಗಿರುವುದಂತೂ ಮನುಷ್ಯರೆ, ಯಾರೂ 80-100 ಅಡಿಗಳಷ್ಟು ಉದ್ದವಂತೂ ಇಲ್ಲ ಅಥವಾ ಅವರ ಆಯಸ್ಸು ಅಷ್ಟು ಧೀರ್ಘವಾಗಿರುತ್ತದೆ. ಆದ್ದರಿಂದ ಅವರು ಮಾಳಿಗೆಯಷ್ಟು ಉದ್ದವಾಗಿದ್ದಾರೆಂದೂ ಸಹ ಅಲ್ಲ. ಕಲಿಯುಗದಲ್ಲಿ ನಿಮ್ಮ ಆಯಸ್ಸು ಕಡಿಮೆಯಾಗಿ ಬಿಡುತ್ತದೆ. ತಂದೆಯು ಬಂದು ನಿಮ್ಮ ಆಯಸ್ಸನ್ನು ಧೀರ್ಘವನ್ನಾಗಿ ಮಾಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆರೋಗ್ಯ ಮಂತ್ರಿಗೂ ತಿಳಿಸಿ, ನಾವು ನಿಮಗೆ ಇಂತಹ ಯುಕ್ತಿಗಳನ್ನು ತಿಳಿಸುತ್ತೇವೆ. ಅದರಿಂದ ತಾವು ಎಂದೂ ರೋಗಿಗಳಾಗುವುದಿಲ್ಲ. ಭಗವಾನುವಾಚ - ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಪತಿತರಿಂದ ಪಾವನ, ಸದಾ ಆರೋಗ್ಯವಂತರಾಗಿ ಬಿಡುತ್ತೀರಿ. ನಾನು ಗ್ಯಾರಂಟಿ ಕೊಡುತ್ತೇನೆ. ಯೋಗಿಗಳು ಪವಿತ್ರರಾಗಿರುತ್ತಾರೆ ಆದ್ದರಿಂದ ಆಯಸ್ಸು ಧೀರ್ಘವಾಗಿರುತ್ತದೆ. ಈಗ ನೀವು ರಾಜಯೋಗಿ, ರಾಜಋಷಿಗಳಾಗಿದ್ದೀರಿ. ಆ ಸನ್ಯಾಸಿಗಳು ಎಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಗಂಗೆಯು ಪತಿತ-ಪಾವನಿಯಾಗಿದೆ, ಅಲ್ಲಿ ದಾನ ಮಾಡಿ ಎಂದು ಹೇಳುತ್ತಾರೆ ಅಂದಾಗ ಗಂಗೆಯಲ್ಲಿ ದಾನ ಮಾಡಲಾಗುತ್ತದೆಯೇ! ಮನುಷ್ಯರು ಪೈಸೆಗಳನ್ನು ಹಾಕುತ್ತಾರೆ, ಪಂಡಿತರು ಅದನ್ನು ತೆಗೆದುಕೊಂಡು ಹೋಗುತ್ತಾರೆ. ಈಗ ನೀವು ತಂದೆಯ ಮೂಲಕ ಪಾವನರಾಗುತ್ತಿದ್ದೀರಿ ಅಂದಾಗ ತಂದೆಗೆ ಏನು ಕೊಡುತ್ತೀರಿ? ಏನೂ ಇಲ್ಲ. ತಂದೆಯಂತೂ ದಾತನಾಗಿದ್ದಾರೆ. ನೀವು ಭಕ್ತಿ ಮಾರ್ಗದಲ್ಲಿ ಈಶ್ವರಾರ್ಥವಾಗಿ ಬಡವರಿಗೆ ದಾನ ಮಾಡುತ್ತಿದ್ದಿರಿ ಅಂದರೆ ಪತಿತರಿಗೆ ದಾನ ಮಾಡುತ್ತಾರೆ. ಕುಮಾರಿಯು ಮೊದಲು ಪವಿತ್ರವಾಗಿದ್ದಾಗ ಅವರನ್ನು ದಾನ ಕೊಡುತ್ತಾರೆ, ತಲೆ ಬಾಗುತ್ತಾರೆ, ತಿನ್ನಿಸುತ್ತಾರೆ, ದಕ್ಷಿಣೆಯೂ ಕೊಡುತ್ತಾರೆ. ಆದರೆ ವಿವಾಹದ ನಂತರ ಎಲ್ಲವೂ ಹಾಳಾಗಿ ಬಿಡುತ್ತದೆ. ನಾಟಕದಲ್ಲಿ ಹೀಗೆಯೇ ನಿಗಧಿಯಾಗಿದೆ, ಇದು ಪುನಃ ಹೀಗೆಯೇ ಪುನರಾವರ್ತನೆಯಾಗುತ್ತದೆ. ಭಕ್ತಿ ಮಾರ್ಗದ ಪಾತ್ರವೂ ಆಯಿತು, ಸತ್ಯಯುಗದ ಸಮಾಚಾರವನ್ನೂ ಸಹ ತಂದೆಯು ತಿಳಿಸುತ್ತಾರೆ. ಈಗ ನೀವು ಮಕ್ಕಳಿಗೆ ತಿಳುವಳಿಕೆ ಸಿಕ್ಕಿದೆ, ಮೊದಲು ಬುದ್ಧಿಹೀನರಾಗಿದ್ದಿರಿ. ಶಾಸ್ತ್ರಗಳಲ್ಲಂತೂ ಭಕ್ತಿ ಮಾರ್ಗದ ಮಾತುಗಳಿವೆ. ಅವುಗಳಿಂದ ನನ್ನನ್ನು ಯಾರೂ ಪಡೆಯಲು ಸಾಧ್ಯವಿಲ್ಲ. ನಾನು ಯಾವಾಗ ಬರುತ್ತೇನೆಯೋ ಆಗ ಎಲ್ಲರ ಸದ್ಗತಿ ಮಾಡುತ್ತೇನೆ ಮತ್ತು ನಾನು ಒಂದೇ ಬಾರಿ ಬಂದು ಹಳೆಯದನ್ನು ಹೊಸದನ್ನಾಗಿ ಮಾಡುತ್ತೇನೆ, ಬಡವರ ಬಂಧುವಾಗಿದ್ದೇನೆ. ಬಡವರನ್ನು ಸಾಹುಕಾರರನ್ನಾಗಿ ಮಾಡುತ್ತೇನೆ. ಬಡವರಂತೂ ಬೇಗನೆ ತಂದೆಯ ಮಕ್ಕಳಾಗುತ್ತಾರೆ. ಹೇಳುತ್ತಾರೆ - ಬಾಬಾ, ನಾವು ತಮ್ಮವರಾಗಿದ್ದೇವೆ, ಇದೆಲ್ಲವೂ ತಮ್ಮದಾಗಿದೆ ಅಂದಾಗ ತಂದೆಯೂ ಹೇಳುತ್ತಾರೆ- ಮಕ್ಕಳೇ, ನೀವೇ ನಿಮಿತ್ತರಾಗಿ ಸಂಭಾಲನೆ ಮಾಡಿ. ಬುದ್ಧಿಯಿಂದ ತಿಳಿದುಕೊಳ್ಳಿ, ಇದು ನಮ್ಮದಲ್ಲ ತಂದೆಯದಾಗಿದೆ. ಇದರಲ್ಲಿ ಬಹಳ ಬುದ್ಧಿವಂತ ಮಕ್ಕಳು ಬೇಕು. ಮತ್ತೆ ನೀವು ಮನೆಯಲ್ಲಿ ಭೋಜನವನ್ನು ತಯಾರಿಸಿ ತಿನ್ನುತ್ತೀರೆಂದರೆ ಯಜ್ಞದಿಂದ ತಿನ್ನುತ್ತೀರೆಂದರ್ಥ ಏಕೆಂದರೆ ನೀವು ಯಜ್ಞದವರಾಗಿದ್ದೀರಿ. ಎಲ್ಲವೂ ಯಜ್ಞದ್ದಾಯಿತು, ಮನೆಯಲ್ಲಿಯೂ ಸಹ ನಿಮಿತ್ತರಾಗಿರುತ್ತೀರೆಂದರೆ ನೀವು ಶಿವತಂದೆಯ ಭಂಡಾರದಿಂದ ಸೇವಿಸುತ್ತೀರಿ ಎಂದರ್ಥ ಆದರೆ ಪೂರ್ಣ ನಿಶ್ಚಯ ಬೇಕು. ನಿಶ್ಚಯದಲ್ಲಿ ಸ್ವಲ್ಪ ಏರುಪೇರಾಯಿತೆಂದರೆ.... ಹರಿಶ್ಚಂದ್ರನ ಉದಾಹರಣೆಯನ್ನು ಕೊಡುತ್ತಾರೆ. ತಂದೆಗೆ ಎಲ್ಲವನ್ನೂ ಸತ್ಯವನ್ನೇ ತಿಳಿಸಬೇಕು. ನಾನು ಬಡವರ ಬಂಧುವಾಗಿದ್ದೇನೆ.ಗೀತೆ: ಕೊನೆಗೂ ಆ ದಿನ ಇಂದು ಬಂದಿತು......ಅರ್ಧಕಲ್ಪ ಭಕ್ತಿಯಲ್ಲಿ ನೆನಪು ಮಾಡಿದಿರಿ. ಆದ್ದರಿಂದ ಕೊನೆಗೂ ಈಗ ಸಿಕ್ಕಿದರು. ಈಗ ಜ್ಞಾನಕ್ಕೆ ಜಯವಾಗಲಿದೆ, ಸತ್ಯಯುಗವು ಅವಶ್ಯವಾಗಿ ಬರುತ್ತದೆ, ಮಧ್ಯದಲ್ಲಿ ಸಂಗಮವಿದೆ. ಈ ಸಮಯದಲ್ಲಿಯೇ ನೀವು ಉತ್ತಮರಿಗಿಂತ ಉತ್ತಮ ಪುರುಷರಾಗುತ್ತೀರಿ. ನೀವು ಪವಿತ್ರ ಪ್ರವೃತ್ತಿ ಮಾರ್ಗದವರಾಗಿದ್ದೀರಿ, ಮತ್ತೆ 84 ಜನ್ಮಗಳ ನಂತರ ಅಪವಿತ್ರರಾಗುತ್ತೀರಿ, ಈಗ ಪುನಃ ಪವಿತ್ರರಾಗಬೇಕಾಗಿದೆ. ಕಲ್ಪದ ಹಿಂದೆಯೂ ಸಹ ನೀವು ಹೀಗೆಯೇ ಆಗಿದ್ದಿರಿ. ಕಲ್ಪದ ಹಿಂದೆ ಯಾರೆಷ್ಟು ಪುರುಷಾರ್ಥ ಮಾಡಿದ್ದರೋ ಅವರೇ ಮಾಡುತ್ತಾರೆ. ತಮ್ಮ ಆಸ್ತಿಯನ್ನೂ ಪಡೆಯುತ್ತಾರೆ, ಸಾಕ್ಷಿಯಾಗಿ ನೋಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಸಂದೇಶವಾಹಕರಾಗಿದ್ದೀರಿ ಮತ್ತ್ಯಾರೂ ಸಹ ಸಂದೇಶವಾಹಕರು ಆಗುವುದಿಲ್ಲ. ಸದ್ಗತಿ ಮಾಡುವ ಸದ್ಗುರು ಒಬ್ಬರೇ ಆಗಿದ್ದಾರೆ. ಅನ್ಯ ಧರ್ಮ ನೇತಾರರು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ ಅಂದಮೇಲೆ ಅವರು ಗುರು ಹೇಗಾದರು! ನಾನಂತೂ ಎಲ್ಲರಿಗೆ ಸದ್ಗತಿ ನೀಡುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ಸದಾ ಇದೇ ನಶೆಯಲ್ಲಿರಬೇಕಾಗಿದೆ - ಶಾಂತಿ, ಸುಖ, ಸಂಪತ್ತಿನ ಸಾಗರ ತಂದೆಯು ನಮಗೆ ಸಿಕ್ಕಿದ್ದಾರೆ, ನಮಗೆ ಎಲ್ಲವೂ ಒಬ್ಬರಿಂದಲೇ ಸಿಗುತ್ತದೆ. ಇಂತಹ ತಂದೆಯ ಸನ್ಮುಖದಲ್ಲಿ ನಾವು ಕುಳಿತಿದ್ದೇವೆ. ಅವರು ನಮಗೆ ಓದಿಸುತ್ತಿದ್ದಾರೆ.

2. ತಮ್ಮ ಅಹಂಕಾರವನ್ನು ಬಿಟ್ಟು ತಂದೆಯ ಸಮಾನ ನಿಷ್ಕಾಮ ಸೇವೆಯನ್ನು ಮಾಡಬೇಕಾಗಿದೆ. ನಿರಹಂಕಾರಿಗಳಾಗಿ ಇರಬೇಕಾಗಿದೆ. ಮೆಸೆಂಜರ್-ಪೈಗಂಬರ್ ಆಗಿ ಎಲ್ಲರಿಗೂ ಸಂದೇಶವನ್ನು ಕೊಡಬೇಕಾಗಿದೆ.


ವರದಾನ:
ಅಕಾಲ ಸಿಂಹಾಸನ ಮತ್ತು ಹೃದಯ ಸಿಂಹಾಸನದ ಮೇಲೆ ಕುಳಿತು ಸದಾ ಶ್ರೇಷ್ಠ ಕರ್ಮ ಮಾಡುವಂತಹ ಕರ್ಮಯೋಗಿ ಭವ.

ಈ ಸಮಯದಲ್ಲಿ ನೀವು ಮಕ್ಕಳಿಗೆ ಎರಡು ಸಿಂಹಾಸನ ಸಿಗುವುದು - ಒಂದು ಅಕಾಲ ಸಿಂಹಾಸನ ,ಇನ್ನೊಂದು ಹೃದಯ ಸಿಂಹಾಸನ. ಆದರೆ ರಾಜ್ಯವಿರುವವರು ಮಾತ್ರ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಸಾಧ್ಯ. ಯಾವಾಗ ಅಕಾಲ ಸಿಂಹಾಸನಧಾರಿಗಳಾಗಿರುವಿರಿ ಆಗ ಸ್ವರಾಜ್ಯ ಅಧಿಕಾರಿಯಾಗಿರುವಿರಿ ಮತ್ತು ತಂದೆಯ ಹೃದಯ ಸಿಂಹಾಸನಾಧಿಕಾರಿಗಳಾದರೆ ತಂದೆಯ ಆಸ್ತಿಗೆ ಅಧಿಕಾರಿಯಾಗುವಿರಿ, ಇದರಲ್ಲಿ ರಾಜ್ಯಭಾಗ್ಯ ಎಲ್ಲವೂ ಬಂದು ಬಿಡುವುದು. ಕರ್ಮಯೋಗಿ ಅರ್ಥಾತ್ ಎರಡೂ ಸಿಂಹಾಸನಾಧಿಕಾರಿ. ಈ ರೀತಿಯ ಸಿಂಹಾಸನಾಧಿಕಾರಿ ಆತ್ಮರ ಪ್ರತಿ ಕರ್ಮ ಶ್ರೇಷ್ಠವಾಗಿರುವುದು. ಏಕೆಂದರೆ ಎಲ್ಲಾ ಕರ್ಮೇಂದ್ರಿಯಗಳು ನಿಯಮ ಮತ್ತು ಆದೇಶಾನುಸಾರ ನಡೆಯುತ್ತಿರುವುದು.

ಸ್ಲೋಗನ್:
ಯಾರು ಸದಾ ಸ್ವಮಾನದ ಸೀಟ್ ಮೇಲೆ ಸೆಟ್ ಆಗಿರುತ್ತಾರೆ ಅವರೇ ಗುಣವಾನ್ ಮತ್ತು ಮಹಾನ್ ಆಗಿದ್ದಾರೆ.