14.04.19    Avyakt Bapdada     Kannada Murli     07.05.84     Om Shanti     Madhuban


"ಬ್ಯಾಲೆನ್ಸ್ ಇಡುವುದರಿಂದಲೇ ಬ್ಲೆಸ್ಸಿಂಗ್ನ ಪ್ರಾಪ್ತಿ"


ಇಂದು ಪ್ರೇಮ ಸ್ವರೂಪ, ನೆನಪಿನ ಸ್ವರೂಪ ಮಕ್ಕಳಿಗೆ ಪ್ರೇಮ ಮತ್ತು ನೆನಪಿನ ರಿಟರ್ನ್ ಕೊಡುವುದಕ್ಕಾಗಿ ಪ್ರೇಮದ ಸ್ವಂತ ತಂದೆಯು, ಈ ಪ್ರೀತಿಯ ಮಹಾ ಸಭೆಯಲ್ಲಿ ಬಂದಿದ್ದಾರೆ. ಈ ಆತ್ಮಿಕ ಪ್ರೀತಿಯ ಮಹಾಸಭೆಯು ಆತ್ಮಿಕ ಸಂಬಂಧದ ಮಿಲನದ ಮಹಾಸಭೆಯಾಗಿದೆ, ಇದೂ ಸಹ ಇಡೀ ಕಲ್ಪದಲ್ಲಿ ಈಗಲೇ ಅನುಭವ ಮಾಡುತ್ತೀರಿ. ಈ ಒಂದು ಜನ್ಮದಲ್ಲಿ ಬಿಟ್ಟು ಮತ್ತೆಂದಿಗೂ ಸಹ ಆತ್ಮಿಕ ತಂದೆಯ ಆತ್ಮಿಕ ಪ್ರೀತಿಯು ಸಿಗಲು ಸಾಧ್ಯವಿಲ್ಲ. ಈ ಆತ್ಮಿಕ ಪ್ರೀತಿಯು ಆತ್ಮರಿಗೆ ಸತ್ಯವಾದ ಮಾರ್ಗವನ್ನು ಕೊಡುತ್ತದೆ. ಸತ್ಯಮಾರ್ಗವನ್ನು ತಿಳಿಸುತ್ತದೆ. ಸತ್ಯವಾದ ಸರ್ವ ಪ್ರಾಪ್ತಿಗಳನ್ನೂ ಮಾಡಿಸುತ್ತದೆ. ಇಂತಹ ಸಂಕಲ್ಪವೆಂದಿಗಾದರೂ ಬಂದಿರುತ್ತದೆಯೇ - ಈ ಸಾಕಾರ ಸೃಷ್ಟಿಯಲ್ಲಿ ಈ ಜನ್ಮದಲ್ಲಿ ಮತ್ತು ಇಷ್ಟು ಸಹಜ ವಿಧಿಯಿಂದ, ಹೀಗೆ ಆತ್ಮ ಮತ್ತು ಪರಮಾತ್ಮನ ಆತ್ಮಿಕ ಮಿಲನವು ಸನ್ಮುಖದಲ್ಲಿ ಆಗುತ್ತದೆ? ಹೇಗೆ ತಂದೆಗಾಗಿ ಕೇಳಿದ್ದೆವು - ಅವರು ಸರ್ವ ಶ್ರೇಷ್ಠ ಬಹಳ ತೇಜೋಮಯ, ಅತೀ ಶ್ರೇಷ್ಠವಿದ್ದಾರೆ, ಅದೇ ರೀತಿ ಮಿಲನದ ವಿಧಿಯೂ ಕಷ್ಟ ಮತ್ತು ಶ್ರೇಷ್ಠ ಅಭ್ಯಾಸದಿಂದ ಆಗುತ್ತದೆ- ಹೀಗೆ ಯೋಚಿಸುತ್ತಾ-ಯೋಚಿಸುತ್ತಾ ಭರವಸೆಯಿರದಿರುವವರು ಆಗಿ ಬಿಟ್ಟಿದ್ದೆವು ಆದರೆ ತಂದೆಯವರು ಭರವಸೆಯಿರದಿರುವ ಮಕ್ಕಳನ್ನು ಭರವಸೆಯುಳ್ಳವರನ್ನಾಗಿ ಮಾಡಿ ಬಿಟ್ಟರು. ಹೃದಯವಿಧೀರ್ಣ ಮಕ್ಕಳನ್ನು ಶಕ್ತಿಶಾಲಿ ಮಾಡಿ ಬಿಟ್ಟರು. ಯಾವಾಗ ಮಿಲನವಾಗುತ್ತಾರೆ, ಈಗ ಅವರ ಮಿಲನದ ಅನುಭವವನ್ನು ಮಾಡಿಸಿ ಬಿಟ್ಟರು. ಸಂಪೂರ್ಣ ಆಸ್ತಿಗೆ ಅಧಿಕಾರಿಯನ್ನಾಗಿ ಮಾಡಿ ಬಿಟ್ಟರು. ಈಗ ಅಧಿಕಾರಿ ಆತ್ಮರು ತಮ್ಮ ಅಧಿಕಾರವನ್ನು ತಿಳಿದಿದ್ದೀರಲ್ಲವೆ! ಬಹಳ ಚೆನ್ನಾಗಿ ತಿಳಿದು ಬಿಟ್ಟಿದ್ದೀರಾ ಅಥವಾ ತಿಳಿದುಕೊಳ್ಳಬೇಕೆ? ಇಂದು ಬಾಪ್ದಾದಾರವರು ಮಕ್ಕಳನ್ನು ನೋಡುತ್ತಾ ಆತ್ಮಿಕ ವಾರ್ತಾಲಾಪವನ್ನು ಮಾಡುತ್ತಿದ್ದರು - ಎಲ್ಲಾ ಮಕ್ಕಳಲ್ಲಿ ನಿಶ್ಚಯವೂ ಸದಾ ಇದೆ, ಪ್ರೀತಿಯೂ ಇದೆ, ನೆನಪಿನ ಲಗನ್ ಸಹ ಇದೆ, ಸೇವೆಯ ಉಮ್ಮಂಗವೂ ಇದೆ. ಲಕ್ಷ್ಯವೂ ಶ್ರೇಷ್ಠವಾದುದಿದೆ. ಯಾರೊಂದಿಗೇ ಏನಾಗುವಿರಿ ಎಂದು ಕೇಳುತ್ತೇವೆ? ಆಗ ಎಲ್ಲರೂ ಲಕ್ಷ್ಮೀ-ನಾರಾಯಣ ಆಗುವವರೆಂದು ಹೇಳುತ್ತಾರೆ. ರಾಮ-ಸೀತೆ ಎಂದು ಯಾರೂ ಹೇಳುವುದಿಲ್ಲ. 16 ಸಾವಿರದ ಮಾಲೆಯನ್ನೂ ಸಹ ಹೃದಯದಿಂದ ಬಯಸುವುದಿಲ್ಲ. 108ರ ಮಾಲೆಯ ಮಣಿಯಾಗುತ್ತೇವೆ - ಇದೇ ಉಮ್ಮಂಗವು ಎಲ್ಲರಿಗೂ ಇರುತ್ತದೆ. ಸೇವೆಯಲ್ಲಿ, ಓದುವುದರಲ್ಲಿ ಪ್ರತಿಯೊಬ್ಬರೂ ತನ್ನಮ್ಮನ್ನು ಯಾರಿಗಿಂತಲೂ ಕಡಿಮೆ ಯೋಗ್ಯರೆಂದು ತಿಳಿಯುವುದಿಲ್ಲ. ಆದರೂ ಸದಾ ಏಕರಸ ಸ್ಥಿತಿ, ಸದಾ ಹಾರುವ ಕಲೆಯ ಅನುಭೂತಿ, ಸದಾ ಒಬ್ಬರಲ್ಲಿ ಸಮಾವೇಶವಾಗಿರುತ್ತಾ, ದೇಹ ಮತ್ತು ದೇಹದ ಅಲ್ಪಕಾಲದ ಪ್ರಾಪ್ತಿಗಳಿಂದ ಸದಾ ಭಿನ್ನ, ವಿನಾಶಿಯದೆಲ್ಲವನ್ನೂ ಸಂಪೂರ್ಣವಾಗಿ ಮರೆತಿರುವವರು- ಇಂತಹ ಸ್ಥಿತಿಯನ್ನು ಸದಾ ಅನುಭವ ಮಾಡುವವರಲ್ಲಿ ನಂಬರವಾರ್ ಆಗಿ ಬಿಡುತ್ತಾರೆ- ಹೀಗೆ ಏಕೆ? ಬಾಪ್ದಾದಾರವರು ಇದರ ವಿಶೇಷ ಕಾರಣವನ್ನು ನೋಡುತ್ತಿದ್ದರು. ಯಾವ ಕಾರಣವನ್ನು ನೋಡಿದರು? ಒಂದೇ ಶಬ್ಧದ ಕಾರಣವಿದೆ. ಎಲ್ಲವನ್ನೂ ತಿಳಿದಿದ್ದಾರೆ ಮತ್ತು ಎಲ್ಲವೂ ಎಲ್ಲರಿಗೂ ಪ್ರಾಪ್ತಿಯೂ ಆಗಿದೆ, ವಿಧಿಯ ಜ್ಞಾನವೂ ಇದೆ, ಸಿದ್ಧಿಯದೂ ಜ್ಞಾನವಿದೆ. ಕರ್ಮ ಮತ್ತು ಫಲ- ಎರಡರ ಜ್ಞಾನವಿದೆ ಆದರೆ ಸದಾ ಬ್ಯಾಲೆನ್ಸ್ ನಲ್ಲಿ ಇರುವುದು ಬರುವುದಿಲ್ಲ. ಈ ಬ್ಯಾಲೆನ್ಸ್ ನ ಈಶ್ವರೀಯ ನೀತಿಯನ್ನು ಸಮಯದಲ್ಲಿ ನಿಭಾಯಿಸುವುದಕ್ಕೆ ಬರುವುದಿಲ್ಲ ಆದ್ದರಿಂದ ಪ್ರತೀ ಸಂಕಲ್ಪದಲ್ಲಿ, ಪ್ರತೀ ಕರ್ಮದಲ್ಲಿ ಬಾಪ್ದಾದಾ ಹಾಗೂ ಸರ್ವ ಶ್ರೇಷ್ಠ ಆತ್ಮರ ಶ್ರೇಷ್ಠ ಆಶೀರ್ವಾದ, ಬ್ಲೆಸ್ಸಿಂಗ್ ಪ್ರಾಪ್ತಿಯಾಗುವುದಿಲ್ಲ. ಪರಿಶ್ರಮ ಪಡಬೇಕಾಗುತ್ತದೆ. ಸಹಜ ಸಫಲತೆಯ ಅನುಭವವಾಗುವುದಿಲ್ಲ. ಯಾವ ಮಾತಿನ ಬ್ಯಾಲೆನ್ಸ್ ಮರೆತು ಹೋಗುತ್ತದೆ? ಒಂದಂತು ನೆನಪು ಮತ್ತು ಸೇವೆ. ನೆನಪಿನಲ್ಲಿದ್ದು ಸೇವೆಯನ್ನು ಮಾಡುವುದು- ಇದು ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಆಯಿತು. ಆದರೆ ಸೇವೆಯಲ್ಲಿದ್ದು ಸಮಯದನುಸಾರವಾಗಿ ನೆನಪು ಮಾಡುವುದು, ಸಮಯ ಸಿಕ್ಕಿತು, ನೆನಪು ಮಾಡಿದೆವು, ಇಲ್ಲವೆಂದರೆ ಸೇವೆಯನ್ನೇ ನೆನಪು ಎಂದು ತಿಳಿಯುವುದು- ಇದಕ್ಕೆ ಹೇಳಲಾಗುತ್ತದೆ ಅನ್ ಬ್ಯಾಲೆನ್ಸ್. ಕೇವಲ ಸೇವೆಯೇ ನೆನಪಾಗಿದೆ ಮತ್ತು ನೆನಪಿನಲ್ಲಿಯೇ ಸೇವೆಯಿದೆ- ಇದರಲ್ಲಿ ಸ್ವಲ್ಪ ವಿಧಿಯ ಅಂತರದ ಸಿದ್ಧಿಯನ್ನು ಬದಲಾಯಿಸಿ ಬಿಡುತ್ತದೆ. ಆದರೂ ಯಾವಾಗ ಫಲಿತಾಂಶವನ್ನು ಕೇಳುತ್ತೇವೆ- ನೆನಪಿನ ಪರ್ಸೆಂಟೇಜ್ ಹೇಗಿತ್ತು? ಆಗ ಏನು ಹೇಳುತ್ತಾರೆ? ಸೇವೆಯಲ್ಲಿ ಇಷ್ಟೂ ಬ್ಯುಸಿಯಿದ್ದೆವು, ಯಾವುದೇ ಮಾತೂ ನೆನಪಿರಲಿಲ್ಲ. ಸಮಯವೇ ಇರಲಿಲ್ಲವೇ ಅಥವಾ ಸೇವೆಯೂ ತಂದೆಯೇ ಆಗಿತ್ತು ಎಂದು ಹೇಳುವುದಾದರೆ, ತಂದೆಯಂತು ನೆನಪಿನಲ್ಲಿದ್ದರು. ಆದರೆ ಎಷ್ಟು ಸೇವೆಯಲ್ಲಿ ಸಮಯ ಮತ್ತು ಲಗನ್ ಇರುತ್ತದೆಯೋ, ಅಷ್ಟೇ ನೆನಪಿನ ಶಕ್ತಿಶಾಲಿ ಅನುಭೂತಿಯಿದ್ದಿತೆ? ಸೇವೆಯಲ್ಲಿ ಎಷ್ಟು ಸ್ವಮಾನವಿತ್ತು ಅಷ್ಟೇ ನಿರ್ಮಾಣ ಭಾವವಿದ್ದಿತೆ? ಇದರ ಬ್ಯಾಲೆನ್ಸ್ ಅದರಲ್ಲಿತ್ತೆ? ಬಹಳ ಶ್ರೇಷ್ಠ, ಬಹಳ ಒಳ್ಳೆಯ ಸೇವೆಯನ್ನು ಮಾಡಿದೆವು- ಈ ಸ್ವಮಾನವಂತು ಚೆನ್ನಾಗಿದೆ ಆದರೆ ಎಷ್ಟು ಸ್ವಮಾನವೋ ಅಷ್ಟೂ ನಿರ್ಮಾಣ ಭಾವ ಇದ್ದಿತೆ! ಮಾಡಿಸುವ ತಂದೆಯು ನಿಮಿತ್ತರನ್ನಾಗಿ ಮಾಡಿ ಸೇವೆಯನ್ನು ಮಾಡಿಸಿದರು- ಇದಾಗಿದೆ ನಿಮಿತ್ತ, ನಿರ್ಮಾಣ ಭಾವ. ನಿಮಿತ್ತರಾದೆವು, ಸೇವೆಯು ಚೆನ್ನಾಗಿ ಆಯಿತು, ವೃದ್ಧಿಯಾಯಿತು, ಸಫಲತಾ ಸ್ವರೂಪರಾದೆವು- ಈ ಸ್ವಮಾನವಂತು ಚೆನ್ನಾಗಿದೆ ಆದರೆ ಕೇವಲ ಸ್ವಮಾನವಲ್ಲ, ನಿರ್ಮಾಣ ಭಾವದ ಬ್ಯಾಲೆನ್ಸ್ ಸಹ ಇರಲಿ. ಈ ಬ್ಯಾಲೆನ್ಸ್ ಸದಾಕಾಲವೂ ಸಹಜ ಸಫಲತಾ ಸ್ವರೂಪರನ್ನಾಗಿ ಮಾಡಿ ಬಿಡುತ್ತದೆ. ಸ್ವಮಾನವೂ ಅವಶ್ಯವಾಗಿರಬೇಕು. ದೇಹಭಾನವಲ್ಲ, ಸ್ವಮಾನವಿರಲಿ ಆದರೆ ಸ್ವಮಾನ ಮತ್ತು ನಿರ್ಮಾಣವೆರಡರ ಬ್ಯಾಲೆನ್ಸ್ ಇರದಿರುವ ಕಾರಣದಿಂದ, ಸ್ವಮಾನವು ದೇಹ-ಅಭಿಮಾನದಲ್ಲಿ ಬದಲಾಗಿ ಬಿಡುತ್ತದೆ. ಸೇವೆಯಾಯಿತು, ಸಫಲತೆಯಾಯಿತು- ಈ ಖುಷಿಯಂತು ಆಗಬೇಕು. ವಾಹ್ ಬಾಬಾ! ತಾವು ನಿಮಿತ್ತನನ್ನಾಗಿ ಮಾಡಿದಿರಿ! ನಾನು ಮಾಡಲಿಲ್ಲ, ಈ ನಾನೆನ್ನುವುದು ಸ್ವಮಾನವನ್ನು ದೇಹ-ಅಭಿಮಾನದಲ್ಲಿ ತೆಗೆದುಕೊಂಡು ಬರುತ್ತದೆ. ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಇಡುವವರು ಸ್ವಮಾನ ಮತ್ತು ನಿರ್ಮಾಣದ ಬ್ಯಾಲೆನ್ಸ್ನ್ನೂ ಇಡುತ್ತಾರೆ. ಅಂ ಮೇಲೆ ಬ್ಯಾಲೆನ್ಸ್ ಯಾವ ಮಾತಿನಲ್ಲಿ ಏರುಪೇರಾಗುತ್ತದೆ ಎಂದು ತಿಳಿಯಿತೆ! ಅದೇ ರೀತಿ ಜವಾಬ್ದಾರಿಯ ಕಿರೀಟಧಾರಿಯಾಗುವ ಕಾರಣದಿಂದ ಪ್ರತೀ ಕಾರ್ಯದಲ್ಲಿ ಜವಾಬ್ದಾರಿಯನ್ನೂ ಸಂಪೂರ್ಣವಾಗಿ ನಿಭಾಯಿಸಬೇಕು. ಭಲೇ ಲೌಕಿಕ ಸೋ ಅಲೌಕಿಕ ಪ್ರವೃತ್ತಿಯಿರಬಹುದು, ಭಲೇ ಈಶ್ವರೀಯ ಸೇವೆಯ ಪ್ರವೃತ್ತಿಯಿರಬಹುದು. ಎರಡೂ ಪ್ರವೃತ್ತಿಯವರು ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಎಷ್ಟು ಭಿನ್ನವೋ ಅಷ್ಟು ಪ್ರಿಯರು- ಇದರ ಬ್ಯಾಲೆನ್ಸ್ ಇರಲಿ. ಪ್ರತಿಯೊಂದು ಜವಾಬ್ದಾರಿಯನ್ನು ನಿಭಾಯಿಸುವುದು, ಇದೂ ಸಹ ಅವಶ್ಯಕವಾಗಿರಬೇಕು ಆದರೆ ಎಷ್ಟು ದೊಡ್ಡ ಜವಾಬ್ದಾರಿಯೋ ಅಷ್ಟೇ ಡಬಲ್ಲೈಟ್ ಆಗಿರಬೇಕು. ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೂ ಜವಾಬ್ದಾರಿಯ ಹೊರೆಯಿಂದ ಭಿನ್ನರಾಗಿದ್ದರೆ ಹೇಳಲಾಗುತ್ತದೆ- ತಂದೆಯ ಪ್ರಿಯರು. ಏನು ಮಾಡಲಿ, ಬಹಳ ಜವಾಬ್ದಾರಿಯಿದೆ ಎಂದು ಗಾಬರಿಯಾಗಬಾರದು. ಇದು ಮಾಡಲೇ ಅಥವಾ ಬೇಡವೆ, ಇದೂ ಮಾಡಬೇಕು ಅದನ್ನೂ ಮಾಡಬೇಕು- ಬಹಳ ಕಷ್ಟವಿದೆ! ಈ ಅನುಭೂತಿ ಅರ್ಥಾತ್ ಹೊರೆಯಿದೆ. ಅಂದಮೇಲೆ ಡಬಲ್ಲೈಟ್ ಆಗಿಯಂತು ಆಗಿಲ್ಲ ಅಲ್ಲವೆ. ಡಬಲ್ಲೈಟ್ ಅರ್ಥಾತ್ ಭಿನ್ನರು. ಯಾವುದೇ ಜವಾಬ್ದಾರಿಯ ಕರ್ಮದ ಏರುಪೇರಗಳ ಹೊರೆಯಿಲ್ಲ. ಇದಕ್ಕೆ ಹೇಳಲಾಗುತ್ತದೆ- ಭಿನ್ನ ಹಾಗೂ ಪ್ರಿಯರಾಗಿರುವ ಬ್ಯಾಲೆನ್ಸ್ ಇಡುವವರು. ಇನ್ನೊಂದು ಮಾತು- ಪುರುಷಾರ್ಥದಲ್ಲಿ ನಡೆಯುತ್ತಾ-ನಡೆಯುತ್ತಾ ಪುರುಷಾರ್ಥದಿಂದ ಪ್ರಾಪ್ತಿಯೇನಾಗುತ್ತದೆಯೋ, ಅದನ್ನು ಅನುಭವ ಮಾಡುತ್ತಾ-ಮಾಡುತ್ತಾ ಬಹಳ ಪ್ರಾಪ್ತಿಯ ನಶೆ ಮತ್ತು ಖುಷಿಯಲ್ಲಿ ಬಂದು ಬಿಡುತ್ತೀರಿ. ನಾವು ಪಡೆದು ಬಿಟ್ಟೆವು, ಅನುಭವ ಮಾಡಿ ಬಿಟ್ಟೆವು. ಮಹಾವೀರ, ಮಹಾರಥಿಯಾಗಿ ಬಿಟ್ಟೆವು, ಜ್ಞಾನಿಯಾಗಿ ಬಿಟ್ಟೆವು, ಯೋಗಿಯಾಗಿ ಬಿಟ್ಟೆವು, ಸೇವಾಧಾರಿಯಾಗಿ ಬಿಟ್ಟೆವು ಅಷ್ಟೇ. ಈ ಪ್ರಾಪ್ತಿಯು ಬಹಳ ಒಳ್ಳೆಯದಿದೆ ಆದರೆ ಈ ಪ್ರಾಪ್ತಿಯ ನಶೆಯಲ್ಲಿ ಹುಡುಗಾಟಿಕೆಯೂ ಬಂದು ಬಿಡುತ್ತದೆ. ಇದರ ಕಾರಣವೇನು? ಜ್ಞಾನಿಯಾದಿರಿ, ಯೋಗಿಯಾದಿರಿ, ಸೇವಾಧಾರಿಯಾದಿರಿ ಆದರೆ ಪ್ರತೀ ಹೆಜ್ಜೆಯಲ್ಲಿ ಹಾರುವ ಕಲೆಯ ಅನುಭವವನ್ನು ಮಾಡುತ್ತೀರಾ? ಎಲ್ಲಿಯವರೆಗೆ ಜೀವಿಸಿರುತ್ತೇವೆ ಅಲ್ಲಿಯವರೆಗೂ ಪ್ರತೀ ಹೆಜ್ಜೆಯಲ್ಲಿ ಹಾರುವ ಕಲೆಯಲ್ಲಿ ಹಾರಬೇಕು. ಈ ಲಕ್ಷ್ಯದಿಂದ ಇಂದೇನು ಮಾಡುತ್ತೀರಿ, ಅದರಲ್ಲಿ ಇನ್ನೂ ನವೀನತೆಯು ಬಂದಿತೆ ಅಥವಾ ಎಲ್ಲಿಯವರೆಗೆ ತಲುಪಲಾಯಿತು ಅದನ್ನೇ ಸಂಪೂರ್ಣತೆಯ ಗುರಿಯೆಂದು ತಿಳಿದು ಬಿಟ್ಟಿರಾ? ಪುರುಷಾರ್ಥದಲ್ಲಿ ಪ್ರಾಪ್ತಿಯ ನಶೆ ಮತ್ತು ಖುಷಿಯೂ ಅವಶ್ಯಕವಿರುತ್ತದೆ ಆದರೆ ಪ್ರತೀ ಹೆಜ್ಜೆಯಲ್ಲಿ ಉನ್ನತಿ ಮತ್ತು ಹಾರುವ ಕಲೆಯ ಅನುಭವವೂ ಅವಶ್ಯಕವಾಗಿರಬೇಕು. ಒಂದು ವೇಳೆ ಬ್ಯಾಲೆನ್ಸ್ ಇಲ್ಲದಿದ್ದರೆ ಹುಡುಗಾಟಿಕೆಯು ಬ್ಲೆಸ್ಸಿಂಗ್ನ ಪ್ರಾಪ್ತಿಯನ್ನು ಮಾಡಿಸಲು ಸಾಧ್ಯವಿಲ್ಲ ಆದ್ದರಿಂದ ಪುರುಷಾರ್ಥಿ ಜೀವನದಲ್ಲಿ ಎಷ್ಟು ಪಡೆದುಕೊಂಡಿದ್ದೀರಿ, ಅದರ ನಶೆಯೂ ಇದೆ ಮತ್ತು ಪ್ರತೀ ಹೆಜ್ಜೆಯಲ್ಲಿ ಉನ್ನತಿಯ ಅನುಭವವೂ ಆಗಿದೆ- ಇದಕ್ಕೆ ಬ್ಯಾಲೆನ್ಸ್ ಎಂದು ಹೇಳಲಾಗುತ್ತದೆ. ಈ ಬ್ಯಾಲೆನ್ಸ್ ಸದಾ ಇರಲಿ. ನಾವಂತು ಎಲ್ಲವನ್ನೂ ತಿಳಿದುಬಿಟ್ಟೆವು, ಅನುಭವಿಯಾಗಿ ಬಿಟ್ಟೆವು, ಬಹಳ ಚೆನ್ನಾಗಿ ನಡೆಯುತ್ತಿದ್ದೇವೆ ಎಂದು ತಿಳಿಯಬಾರದು. ಒಳ್ಳೆಯವರಾಗಿದ್ದೀರಿ, ಇದಂತು ಬಹಳ ಒಳ್ಳೆಯದು ಆದರೆ ಇನ್ನೂ ಉನ್ನತಿಯನ್ನು ಪಡೆಯಬೇಕಾಗಿದೆ. ಅಂತಹ ವಿಶೇಷ ಕಾರ್ಯವನ್ನು ಮಾಡುತ್ತಾ ಸರ್ವಾತ್ಮರ ಮುಂದೆ ನಿಮಿತ್ತವಾಗಿ ಉದಾಹರಣೆಯಾಗಬೇಕು. ಇದನ್ನು ಮರೆಯಬಾರದು. ಯಾವ-ಯಾವ ಮಾತುಗಳಲ್ಲಿ ಬ್ಯಾಲೆನ್ಸ್ ಇಡಬೇಕು ಎಂದು ತಿಳಿಯಿತೆ? ಈ ಬ್ಯಾಲೆನ್ಸ್ ಮೂಲಕ ಸ್ವತಹವಾಗಿಯೇ ಬ್ಲೆಸ್ಸಿಂಗ್ ಸಿಗುತ್ತಿರುತ್ತದೆ. ಅಂದಮೇಲೆ ನಂಬರವಾರ್ ಏಕೆ ಆಗುತ್ತದೆ? ಕೆಲವರು ಕೆಲವು ಮಾತಿನ ಬ್ಯಾಲೆನ್ಸ್ ನಲ್ಲಿ, ಕೆಲವರು ಕೆಲವು ಮಾತಿನ ಬ್ಯಾಲೆನ್ಸ್ ನಲ್ಲಿ ಹುಡುಗಾಟಿಕೆಯಲ್ಲಿರುತ್ತಾರೆ. ಬಾಂಬೆ ನಿವಾಸಿಗಳಂತು ಹುಡುಗಾಟಿಕೆಯವರಲ್ಲ ಅಲ್ಲವೇ? ಪ್ರತೀ ಮಾತಿನಲ್ಲಿ ಬ್ಯಾಲೆನ್ಸ್ ಇಡುವವರಾಗಿದ್ದರಲ್ಲವೇ? ಬ್ಯಾಲೆನ್ಸ್ ನ ಕಲೆಯಲ್ಲಿ ಬುದ್ಧಿವಂತರಾಗಿದ್ದೀರಲ್ಲವೆ. ಬ್ಯಾಲೆನ್ಸ್ ಸಹ ಒಂದು ಕಲೆಯಾಗಿದೆ. ಈ ಕಲೆಯಲ್ಲಿ ಸಂಪನ್ನರಾಗಿದ್ದೀರಲ್ಲವೇ! ಬಾಂಬೆಗೆ ಹೇಳಲಾಗುತ್ತದೆ- ಸಂಪದ್ಭರಿತ ಸಂಪನ್ನವಾದ ದೇಶ. ಅಂದಮೇಲೆ ಬ್ಯಾಲೆನ್ಸ್ ನ ಸಂಪತ್ತು, ಬ್ಲೆಸ್ಸಿಂಗ್ನ ಸಂಪತ್ತಿಯಲ್ಲಿಯೂ ಸಂಪನ್ನವಾಗಿದ್ದೀರಲ್ಲವೆ! ಸಂಪದ್ಭರಿತರಾಗುವ ಆಶೀರ್ವಾದವಿದೆ! ಬಾಂಬೆಯವರು ವಿಶೇಷತೆಯನ್ನೇನು ತೋರಿಸುವಿರಿ? ಬಾಂಬೆಯಲ್ಲಿ ಮಲ್ಟಿ ಮಿಲ್ಯುನಿಯರ್ಸ್ (ಸಂಪದ್ಭರಿತರು) ಬಹಳ ಇದ್ದಾರಲ್ಲವೆ. ಅಂದಮೇಲೆ ಬಾಂಬೆಯವರು ಇಂತಹ ಆತ್ಮರಿಗೆ ಇದೆ ಅನುಭವವನ್ನು ಮಾಡಿಸುವ ಅವಶ್ಯಕತೆಯಿದೆ- ಆತ್ಮಿಕ ಅವಿನಾಶಿ ಪದಮಾಪದಮ ಪತಿ ಸರ್ವ ಖಜಾನೆಗಳ ಗಣಿಗಳ ಮಾಲೀಕರು ಹೇಗಿರುತ್ತಾರೆ- ಇದನ್ನು ಅವರಿಗೆ ಅನುಭವ ಮಾಡಿಸಿರಿ. ಇಲ್ಲಿರುವುದಂತು ಕೇವಲ ವಿನಾಶಿ ಧನದ ಮಾಲೀಕರು, ಇಂತಹವರಿಗೆ ಈ ಅವಿನಾಶಿ ಖಜಾನೆಗಳ ಮಹತ್ವಿಕೆಯನ್ನು ತಿಳಿಸುತ್ತಾ ಅವಿನಾಶಿ ಸಂಪತ್ತಿನಿಂದ ಸಂಪನ್ನಗೊಳಿಸಿರಿ. ಅವರುಗಳು ಅನುಭವ ಮಾಡಲಿ- ಈ ಖಜಾನೆಯು ಅವಿನಾಶಿ, ಶ್ರೇಷ್ಠವಾದ ಖಜಾನೆಯಾಗಿದೆ. ಇಂತಹ ಸೇವೆಯನ್ನು ಮಾಡುತ್ತಿದ್ದೀರಲ್ಲವೆ! ಸಂಪತ್ತಿರುವವರ ದೃಷ್ಟಿಯಲ್ಲಿ ಈ ಅವಿನಾಶಿ ಸಂಪತ್ಭರಿತ ಆತ್ಮರು ಶ್ರೇಷ್ಠವಾಗಿದ್ದಾರೆ, ಇಂತಹ ಅನುಭವ ಮಾಡಲಿ ತಿಳಿಯಿತೆ! ಹೀಗೆ ಯೋಚಿಸಬಾರದು- ಇವರ ಪಾತ್ರವಂತು ಇಲ್ಲವೇ ಇಲ್ಲ. ಅಂತ್ಯದಲ್ಲಿ ಇವರದೂ ಸಹ ಜಾಗೃತರಾಗುವ ಪಾತ್ರವಿದೆ. ಸಂಬಂಧದಲ್ಲಿ ಬರುವುದಿಲ್ಲ, ಆದರೆ ಸಂಪರ್ಕದಲ್ಲಿ ಬರುವರು. ಆದ್ದರಿಂದ ಈಗ ಅಂತಹ ಆತ್ಮರನ್ನೂ ಸಹ ಜಾಗೃತಗೊಳಿಸುವ ಸಮಯದಲ್ಲಿ ತಲುಪಿ ಬಿಟ್ಟಿದ್ದೀರಿ. ಅಂದಮೇಲೆ ಬಹಳ ಚೆನ್ನಾಗಿ ಅವರನ್ನು ಜಾಗೃತಗೊಳಿಸಿರಿ ಏಕೆಂದರೆ ಸಂಪತ್ತಿನ ನಶೆಯ ನಿದ್ರೆಯಲ್ಲಿ ಮಲಗಿದ್ದಾರೆ. ನಶೆಯಿರುವವರನ್ನು ಮತ್ತೆ-ಮತ್ತೆ ಜಾಗೃತಗೊಳಿಸಬೇಕಾಗುತ್ತದೆ. ಒಂದು ಸಾರಿಯೇ ಜಾಗೃತವಾಗುವುದಿಲ್ಲ ಅಂದಾಗ ಈಗ ಇಂತಹ ನಶೆಯಲ್ಲಿ ಮಲಗಿರುವ ಆತ್ಮರನ್ನಿಗೆ ಅವಿನಾಶಿ ಸಂಪತ್ತಿನ ಅನುಭವಗಳಿಂದ ಪರಿಚಯ ಮಾಡಿಸಿರಿ. ತಿಳಿಯಿತೆ! ಬಾಂಬೆಯವರಂತು ಮಾಯಾಜೀತರಾಗಿದ್ದೀರಲ್ಲವೇ! ಮಾಯೆಯನ್ನು ಸಮುದ್ರದಲ್ಲಿ ಹಾಕಿದ್ದೀರಲ್ಲವೆ. ಆಳದಲ್ಲಿ ಹಾಕಿದ್ದೀರಾ ಅಥವಾ ಮೇಲೆ-ಮೇಲೆಯೇ? ಒಂದು ವೇಳೆ ಯಾವುದೇ ವಸ್ತುವು ಮೇಲೆ ಇರುತ್ತದೆಯೆಂದರೆ, ಅದು ಮತ್ತೆ ಅಲೆಗಳಿಂದ ದಡಕ್ಕೆ ಬಂದು ಬಿಡುತ್ತದೆ, ಆಳದಲ್ಲಿ ಹಾಕಿ ಬಿಟ್ಟಿದ್ದೀರೆಂದರೆ ಸ್ವಾಹಾ. ಅಂದಾಗ ಮಾಯೆಯು ಪುನಃ ದಡದಲ್ಲಂತು ಬರುವುದಿಲ್ಲವೇ? ಬಾಂಬೆ ನಿವಾಸಿಗಳೂ ಪ್ರತೀ ಮಾತಿನಲ್ಲಿಯೂ ಉದಾಹರಣೆಯಾಗಬೇಕು. ಪ್ರತೀ ವಿಶೇಷತೆಯಲ್ಲಿ ಉದಾಹರಣೆ. ಹೇಗೆ ಬಾಂಬೆಯ ಸುಂದರತೆಯನ್ನು ನೋಡುವುದಕ್ಕಾಗಿ ದೂರ-ದೂರದಿಂದಲೂ ಬರುತ್ತಾರಲ್ಲವೆ! ಹಾಗೆಯೇ ದೂರ-ದೂರದಿಂದ ನೋಡುವುದಕ್ಕೆ ಬರುತ್ತಾರೆ. ಪ್ರತೀ ಗುಣದ ಪ್ರತ್ಯಕ್ಷ ಸ್ವರೂಪದ ಉದಾಹರಣೆಯಾಗಿರಿ. ಜೀವನದಲ್ಲಿ ಸರಳತೆಯನ್ನು ನೋಡಬೇಕೆಂದರೆ, ಈ ಸೇವಾ ಕೇಂದ್ರದಲ್ಲಿ ಹೋಗಿ ಈ ಪರಿವಾರವನ್ನು ನೋಡಿರಿ. ಸಹನಶೀಲತೆಯನ್ನು ನೋಡಬೇಕೇಂದರೆ ಈ ಸೇವಾಕೇಂದ್ರದಲ್ಲಿ ಈ ಪರಿವಾರದಲ್ಲಿ ಹೋಗಿ ನೋಡಿರಿ, ಬ್ಯಾಲೆನ್ಸ್ ನೋಡಬೇಕೆಂದರೆ ಈ ವಿಶೇಷ ಆತ್ಮರಲ್ಲಿ ನೋಡಿರಿ- ಹೀಗೆ ಕಮಾಲ್ ಮಾಡುವವರಲ್ಲವೆ. ಬಾಂಬೆಯವರು ಡಬಲ್ ರಿಟರ್ನ್ ಕೊಡಬೇಕಾಗಿದೆ. ಒಂದು- ಜಗದಂಬೆಯ ಪಾಲನೆ ಮತ್ತು ಇನ್ನೊಂದು- ಬ್ರಹ್ಮಾ ತಂದೆಯ ವಿಶೇಷ ಪಾಲನೆಯ ರಿಟರ್ನ್. ಜಗದಂಬಾ ಮಾರವರ ಪಾಲನೆಯೂ ಸಹ ವಿಶೇಷವಾಗಿ ಬಾಂಬೆಯವರಿಗೆ ಸಿಕ್ಕಿದೆ. ಅಂದಮೇಲೆ ಬಾಂಬೆಯವರು ಇಷ್ಟು ರಿಟರ್ನ್ ಕೊಡಬೇಕಾಗುತ್ತದೆಯಲ್ಲವೆ. ಪ್ರತಿಯೊಂದು ಸ್ಥಾನ, ಪ್ರತಿಯೊಂದು ವಿಶೇಷ ಆತ್ಮರ ಮೂಲಕ ತಂದೆಯ, ಮಮ್ಮಾರವರ ವಿಶೇಷ ಆತ್ಮರ ವಿಶೇಷತೆಯು ಕಾಣಿಸಲಿ- ಇದಕ್ಕೆ ರಿಟರ್ನ್ ಕೊಡುವುದು ಎಂದು ಹೇಳಲಾಗುತ್ತದೆ. ಒಳ್ಳೆಯದು- ಭಲೇ ಬಂದಿದ್ದೀರಿ. ತಂದೆಯ ಮನೆಯಲ್ಲಿ ಅಥವಾ ತಮ್ಮ ಮನೆಯಲ್ಲಿ ಬಂದಿದ್ದೀರಿ. ತಂದೆಯವರಂತು ಸದಾ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಒಂದೊಂದು ಮಗುವು ವಿಶ್ವದ ದೀಪವಾಗಿದ್ದಾರೆ. ಕೇವಲ ಕುಲ ದೀಪಕರಲ್ಲ, ವಿಶ್ವದ ದೀಪಕರು. ಪ್ರತಿಯೊಬ್ಬರೂ ವಿಶ್ವದ ಕಲ್ಯಾಣಾರ್ಥವಾಗಿ ನಿಮಿತ್ತವಾಗಿದ್ದಾರೆ, ಅಂದಮೇಲೆ ವಿಶ್ವದ ದೀಪಕರಾಗಿ ಬಿಟ್ಟರಲ್ಲವೆ. ಹಾಗೆ ನೋಡಿದಾಗ ಇಡೀ ವಿಶ್ವವೂ ಬೇಹದ್ದಿನ ಕುಲವಾಗಿದೆ. ಅದೇ ಸಂಬಂಧದಿಂದ ಬೇಹದ್ದಿನ ಕುಲ ದೀಪಕರೆಂದೂ ಹೇಳಬಹುದು. ಆದರೆ ಅಲ್ಪಕಾಲದ ಕುಲದವರಲ್ಲ. ಬೇಹದ್ದಿನ ಕುಲದ ದೀಪಕರೆಂದಾದರೂ ಹೇಳಿರಿ ಅಥವಾ ವಿಶ್ವದ ದೀಪಕವೆಂದಾದರೂ ಹೇಳಿರಿ- ಹೀಗಿದ್ದೀರಲ್ಲವೆ. ಸದಾ ಬೆಳಗುತ್ತಿರುವ ದೀಪಕರಲ್ಲವೆ? ಟಿಮ್ಟಿಮಾ ಎನ್ನುವ ದೀಪಗಳಂತು ಅಲ್ಲ. ಯಾವಾಗ ದೀಪವು ಟಿಮ್ಟಿಮಾ ಎನ್ನುತ್ತಿರುತ್ತದೆ, ಅದನ್ನು ನೋಡುವುದರಿಂದ ಕಣ್ಣುಗಳು ಹಾಳಾಗಿ ಬಿಡುತ್ತದೆ. ಅದು ಇಷ್ಟವಾಗುವುದಿಲ್ಲ. ಅಂದಮೇಲೆ ಸದಾ ಬೆಳಗುತ್ತಿರುವ ದೀಪಕರಾಗಿದ್ದೀರಲ್ಲವೆ. ಅಂತಹ ದೀಪಕಗಳನ್ನು ನೋಡುತ್ತಾ ಬಾಪ್ದಾದಾರವರು ಸದಾ ಹರ್ಷಿತವಾಗುತ್ತಾರೆ. ತಿಳಿಯಿತೆ! ಒಳ್ಳೆಯದು.

ಸದಾ ಪ್ರತೀ ಕರ್ಮದಲ್ಲಿ ಬ್ಯಾಲೆನ್ಸ್ ಇಡುವಂತಹ, ಸದಾ ತಂದೆಯ ಮೂಲಕ ಬ್ಲೆಸ್ಸಿಂಗ್ ತೆಗೆದುಕೊಳ್ಳುವ, ಪ್ರತೀ ಹೆಜ್ಜೆಯಲ್ಲಿ ಹಾರುವ ಕಲೆಯ ಅನುಭವ ಮಾಡುವಂತಹ, ಸದಾ ಪ್ರೀತಿಯ ಸಾಗರನದಲ್ಲಿ ಮುಳುಗಿರುವ, ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿರುವ, ಪದಮಾಪದಮ ಭಾಗ್ಯಶಾಲಿ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ದಾದಿಯರೊಂದಿಗೆ - ಎಲ್ಲರೂ ಕಿರೀಟಧಾರಿ ರತ್ನಗಳಾಗಿದ್ದೀರಲ್ಲವೆ! ಸದಾ ಎಷ್ಟು ದೊಡ್ಡ ಕಿರೀಟವೋ ಅಷ್ಟೇ ಹಗುರಕ್ಕಿಂತಲೂ ಹಗುರತೆ. ಇಂತಹ ಕಿರೀಟ ಧಾರಣೆ ಮಾಡಲಾಗಿದೆ, ಈ ಕಿರೀಟವನ್ನು ಧಾರಣೆ ಮಾಡಿಕೊಂಡು ಪ್ರತಿಯೊಂದು ಕರ್ಮವನ್ನೂ ಮಾಡುತ್ತಿದ್ದರೂ ಕಿರೀಟಧಾರಿಯಾಗಿ ಇರಬಹುದು. ರತ್ನಜಡಿತ ಕಿರೀಟವೇನಿರುತ್ತದೆ, ಅದನ್ನಾದರೂ ಸಮಯದನುಸಾರವಾಗಿ ಧಾರಣೆ ಮಾಡಿಕೊಳ್ಳುವರು ಮತ್ತು ತೆಗೆಯುತ್ತಾರೆ ಆದರೆ ಈ ಕಿರೀಟವು ಇಂತಹದ್ದಾಗಿದೆ, ಅದನ್ನು ತೆಗೆಯುವ ಅವಶ್ಯಕತೆಯೇ ಇಲ್ಲ. ಮಲಗಿರುವಾಗಲೂ ಕಿರೀಟಧಾರಿ ಮತ್ತು ಏಳುವಾಗಲೂ ಕಿರೀಟಧಾರಿ. ಅನುಭವವಿದೆಯಲ್ಲವೆ! ಕಿರೀಟವು ಹಗುರವಾಗಿದೆಯಲ್ಲವೆ? ಭಾರವೇನು ಇಲ್ಲವೇ! ಹೆಸರು ಶ್ರೇಷ್ಠವಿದೆ, ಅದರ ತೂಕ ಹಗುರವಿದೆ. ಸುಖದಾಯಿ ಕಿರೀಟವಾಗಿದೆ. ಖುಷಿ ಕೊಡುವ ಕಿರೀಟವಾಗಿದೆ. ಇಂತಹ ಕಿರೀಟಧಾರಿಯನ್ನಾಗಿ ತಂದೆಯವರು ಮಾಡುತ್ತಾರೆ, ಅದರಿಂದ ಜನ್ಮ-ಜನ್ಮದಲ್ಲಿಯೂ ಕಿರೀಟವು ಸಿಗುತ್ತಿರಲಿ. ಇಂತಹ ಕಿರೀಟಧಾರಿ ಮಕ್ಕಳನ್ನು ನೋಡುತ್ತಾ ಬಾಪ್ದಾದಾರವರು ಹರ್ಷಿತವಾಗುತ್ತಾರೆ. ಬಾಪ್ದಾದಾರವರು ಕಿರೀಟ ಧಾರಣೆಯ ದಿನವನ್ನಾಗಿ ಈಗಿನಿಂದಲೇ ಆಚರಿಸುತ್ತಾ, ಸದಾಕಾಲದ ಪದ್ಧತಿಯನ್ನು ನಿಯಮಯವನ್ನಾಗಿ ಮಾಡಿ ಬಿಟ್ಟರು. ಸತ್ಯಯುಗದಲ್ಲಿಯೂ ಕಿರೀಟ ಧಾರಣೆಯ ದಿನವನ್ನು ಆಚರಿಸುತ್ತಾರಲ್ಲವೆ. ಯಾರು ಸಂಗಮದಲ್ಲಿ ಕಿರೀಟ ಧಾರಣೆಯ ದಿನವನ್ನು ಆಚರಿಸಿಕೊಂಡರು, ಅದೇ ನೆನಪಾರ್ಥದಲ್ಲಿ ಅವಿನಾಶಿಯಾಗಿ ನಡೆಯುತ್ತಿರುತ್ತದೆ. ಅವ್ಯಕ್ತ ವತನದಲ್ಲಿ ಸೇವಾಧಾರಿಯಾಗಿದ್ದಾರೆ ಆದರೆ ಸಾಕಾರ ವತನದಿಂದ ವಾನಪ್ರಸ್ಥರಾಗಿದ್ದಾರಲ್ಲವೆ. ಸ್ವಯಂ ತಂದೆಯು ಸಾಕಾರ ವತನದಿಂದ ವಾನಪ್ರಸ್ಥವಾಗಿರುವ ಮಕ್ಕಳಿಗೆ ಕಿರೀಟ, ಸಿಂಹಾಸನವನ್ನು ಕೊಟ್ಟು, ಸ್ವಯಂ ಅವ್ಯಕ್ತ ವತನದಲ್ಲಿ ಹೊರಡುತ್ತಾರೆ. ಅಂದಮೇಲೆ ಕಿರೀಟ ಧಾರಣೆಯ ದಿನವಾಗಿ ಬಿಟ್ಟಿತಲ್ಲವೆ! ವಿಚಿತ್ರ ಡ್ರಾಮಾ ಆಗಿದೆಯಲ್ಲವೆ. ಒಂದುವೇಳೆ ಹೋಗುವುದಕ್ಕೆ ಮೊದಲೇ ತಿಳಿಸಿದ್ದರೆ, ಅದು ವಿಚಿತ್ರ ಡ್ರಾಮಾ ಆಗುತ್ತಿರಲಿಲ್ಲ. ಇಂತಹ ವಿಚಿತ್ರ ಡ್ರಾಮಾ ಆಗಿದೆ, ಅದರ ಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ. ವಿಚಿತ್ರ ತಂದೆಯ ವಿಚಿತ್ರ ಪಾತ್ರವಿದೆ, ಅವರ ಚಿತ್ರವನ್ನು ಬುದ್ಧಿಯಲ್ಲಿ ಸಂಕಲ್ಪದ ಮೂಲಕವೂ ತೆಗೆಯುವುದಕ್ಕಾಗುವುದಿಲ್ಲ, ಇದಕ್ಕೇ ಹೇಳಲಾಗುತ್ತದೆ- ವಿಚಿತ್ರ. ಆದ್ದರಿಂದ ವಿಚಿತ್ರ ಕಿರೀಟ ಧಾರಣೆಯಾಯಿತು. ಬಾಪ್ದಾದಾರವರು ಸದಾ ಮಹಾವೀರ ಮಕ್ಕಳನ್ನು ಕಿರೀಟಧಾರಿಯನ್ನಾಗಿ ಮಾಡುವವರು, ಕಿರೀಟಧಾರಿಯ ಸ್ವರೂಪದಲ್ಲಿ ನೋಡುತ್ತಾರೆ. ಬಾಪ್ದಾದಾರವರು ಜೊತೆ ಕೊಡುವುದರಲ್ಲಿ ಗುಪ್ತವಾಗಿಲ್ಲ ಆದರೆ ಸಾಕಾರ ಪ್ರಪಂಚದಿಂದ ಗುಪ್ತವಾಗಿ, ಅವ್ಯಕ್ತ ವತನದಲ್ಲಿ ಉದಯವಾಗಿ ಬಿಟ್ಟರು. ಜೊತೆಯಿರುತ್ತಾರೆ, ಜೊತೆಯಲ್ಲಿ ನಡೆಯುತ್ತೇವೆ- ಇದಂತು ಪ್ರತಿಜ್ಞೆಯಿದ್ದೇ ಇದೆ. ಈ ಪ್ರತಿಜ್ಞೆಯಿಂದ ಎಂದಿಗೂ ಮುಕ್ತರಾಗಲು ಸಾಧ್ಯವಿಲ್ಲ, ಆದ್ದರಿಂದಲೇ ಬ್ರಹ್ಮಾ ತಂದೆಯು ನಿರೀಕ್ಷಣೆ ಮಾಡುತ್ತಿದ್ದಾರೆ. ಇಲ್ಲವೆಂದರೆ ಕರ್ಮಾತೀತರಾಗಿಬಿಟ್ಟರೆಂದರೆ ಹೋಗಬಹುದು. ಬಂಧನವಂತು ಇಲ್ಲವಲ್ಲವೆ. ಆದರೆ ಸ್ನೇಹದ ಬಂಧನವಿದೆ ಸ್ನೇಹದ ಬಂಧನದ ಕಾರಣದಿಂದ ಜೊತೆ ನಡೆಯುವ ಪ್ರತಿಜ್ಞೆಯನ್ನು ನಿಭಾಯಿಸುವ ಕಾರಣದಿಂದ ತಂದೆಯವರು ನಿರೀಕ್ಷಣೆ ಮಾಡಲೇಬೇಕಾಗಿದೆ. ಜೊತೆ ನಿಭಾಯಿಸಬೇಕಾಗಿದೆ ಮತ್ತು ಜೊತೆಯಲ್ಲಿ ನಡೆಯಬೇಕಾಗಿದೆ. ಹೀಗೆಯೇ ಅನುಭವವಿದೆಯಲ್ಲವೆ. ಒಳ್ಳೆಯದು. ಪ್ರತಿಯೊಬ್ಬರೂ ವಿಶೇಷವಾಗಿದ್ದಾರೆ. ಒಬ್ಬೊಬ್ಬರ ವಿಶೇಷತೆಯ ವರ್ಣನೆ ಮಾಡಿದರೆ ಎಷ್ಟೊಂದಾಗುತ್ತದೆ! ಮಾಲೆಯಾಗಿ ಬಿಡುತ್ತದೆ. ಆದ್ದರಿಂದ ಹೃದಯದಲ್ಲಿಯೇ ಇಡುತ್ತೇವೆ, ವರ್ಣನೆ ಮಾಡುವುದಿಲ್ಲ. ಒಳ್ಳೆಯದು.

ವರದಾನ:
ವ್ಯರ್ಥ ಹಾಗೂ ತೊಂದರೆ ಮಾಡುವಂತಹ ಮಾತುಗಳಿಂದ ಮುಕ್ತ ಡಬಲ್ ಲೈಟ್ ಅವ್ಯಕ್ತ ಫರಿಶ್ತಾ ಭವ.

ಅವ್ಯಕ್ತ ಫರಿಶ್ತಾ ಆಗಬೇಕೆಂದರೆ ವ್ಯರ್ಥ ಮಾತು- ಯಾವುದು ಯಾರಿಗೂ ಇಷ್ಟವೆನಿಸುವುದಿಲ್ಲವೋ ಅದನ್ನು ಸದಾಕಾಲಕ್ಕಾಗಿ ಸಮಾಪ್ತಿಗೊಳಿಸಿರಿ. ಎರಡು ಶಬ್ಧಗಳಲ್ಲಿಯೇ ಮಾತಾಗುತ್ತದೆ ಆದರೆ ಅದನ್ನು ಉದ್ದ ಮಾಡಿ ಮಾತನಾಡುತ್ತಿರುವುದು- ಇದೂ ಸಹ ವ್ಯರ್ಥವಾಗಿದೆ. ಯಾವ ಕಾರ್ಯವು ನಾಲ್ಕು ಶಬ್ಧಗಳಲ್ಲಿಯೇ ಆಗಲು ಸಾಧ್ಯವಿದೆ, ಅದನ್ನು 12-15 ಶಬ್ಧಗಳಲ್ಲಿ ಮಾತನಾಡದಿರಿ. ಕಡಿಮೆ ಮಾತನಾಡಿರಿ - ನಿಧಾನವಾಗಿ ಮಾತನಾಡಿರಿ...... ಈ ಸ್ಲೋಗನ್ನ್ನು ಕೊರಳಿನಲ್ಲಿ ಧರಿಸಿರಿ. ವ್ಯರ್ಥ ಅಥವಾ ತೊಂದರೆ ಮಾಡುವ ಮಾತುಗಳಿಂದ ಮುಕ್ತರಾಗುತ್ತೀರೆಂದರೆ, ಅವ್ಯಕ್ತ ಫರಿಶ್ತಾ ಆಗುವುದರಲ್ಲಿ ಬಹಳ ಸಹಯೋಗವು ಸಿಗುತ್ತದೆ.

ಸ್ಲೋಗನ್:
ಯಾರು ಸ್ವಯಂನ್ನು ಪರಮಾತ್ಮ ಪ್ರೀತಿಯಲ್ಲಿ ಅರ್ಪಣೆ ಮಾಡುತ್ತಾರೆ, ಸಫಲತೆಯು ಅವರ ಕೊರಳಿನ ಮಾಲೆಯಾಗಿ ಬಿಡುತ್ತದೆ.