14.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - 21 ಜನ್ಮಗಳ ಪೂರ್ಣ ಪ್ರಾಲಬ್ಧವನ್ನು ತೆಗೆದುಕೊಳ್ಳುವುದಕ್ಕಾಗಿ ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಿ, ಅರ್ಧಂಬರ್ಧ ಅಲ್ಲ, ಬಲಿಹಾರಿ ಆಗುವುದು ಎಂದರೆ ತಂದೆಯ ಮಕ್ಕಳಾಗುವುದು

ಪ್ರಶ್ನೆ:
ಯಾವ ಒಂದು ಗುಹ್ಯ ಮಾತನ್ನು ಅರಿತುಕೊಳ್ಳುವುದಕ್ಕಾಗಿ ಬೇಹದ್ದಿನ ಬುದ್ಧಿಯಿರಬೇಕಾಗುತ್ತದೆ?

ಉತ್ತರ:
ಇದು ಬೇಹದ್ದಿನ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಕಳೆದು ಹೋಗಿರುವಂತಹ ನಾಟಕವು ಪೂರ್ಣವಾಗುತ್ತದೆ, ನಾವು ಮನೆಗೆ ಹೋಗುತ್ತೇವೆ, ನಂತರ ಹೊಸದಾಗಿ ಪಾತ್ರವು ಪ್ರಾರಂಭವಾಗುವುದು...... ಈ ಗುಹ್ಯ ಮಾತುಗಳನ್ನು ಅರಿತುಕೊಳ್ಳಲು ಬೇಹದ್ದಿನ ಬುದ್ಧಿಯಿರಬೇಕಾಗಿದೆ. ಬೇಹದ್ದಿನ ರಚನೆಯ ಜ್ಞಾನವನ್ನು ಬೇಹದ್ದಿನ ತಂದೆಯೇ ಕೊಡುತ್ತಾರೆ.

ಪ್ರಶ್ನೆ:
ಮನುಷ್ಯರು ಯಾವ ಮಾತಿನಲ್ಲಿ ಅಯ್ಯಯ್ಯೋ ಎಂದು ಕೂಗಾಡುತ್ತಾರೆ ಮತ್ತು ನೀವು ಮಕ್ಕಳು ಖುಷಿಯಾಗುತ್ತೀರಿ?

ಉತ್ತರ:
ಅಜ್ಞಾನಿ ಮನುಷ್ಯರಲ್ಲಿ ಸ್ವಲ್ಪ ಕಾಯಿಲೆ ಬಂದರೂ ಸಹ ಕೂಗಾಡುತ್ತಾರೆ, ನೀವು ಮಕ್ಕಳು ಖುಷಿ ಪಡುತ್ತೀರಿ ಏಕೆಂದರೆ ಈ ಹಳೆಯ ಲೆಕ್ಕಾಚಾರವು ಸಮಾಪ್ತಿಯಾಗುತ್ತಿದೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ.

ಗೀತೆ:
ನೀನು ರಾತ್ರಿಯನ್ನು ಮಲಗುತ್ತಾ ಕಳೆದೆ, ಹಗಲನ್ನು ತಿನ್ನುತ್ತಾ ಕಳೆದೆ............

ಓಂ ಶಾಂತಿ.
ವಾಸ್ತವದಲ್ಲಿ ಓಂಶಾಂತಿ ಎಂದು ಹೇಳುವ ಆವಶ್ಯಕತೆಯೂ ಇಲ್ಲ. ಆದರೆ ಒಂದಲ್ಲ ಒಂದು ಮಾತನ್ನು ಮಕ್ಕಳಿಗೆ ತಿಳಿಸಬೇಕಾಗುತ್ತದೆ, ಪರಿಚಯ ಕೊಡಬೇಕಾಗುತ್ತದೆ. ವರ್ತಮಾನದಲ್ಲಿ ಇಂತಹವರು ಅನೇಕರಿದ್ದಾರೆ, ಯಾರು ಓಂ ಶಾಂತಿ - ಓಂ ಶಾಂತಿ ಎಂದು ಜಪಿಸುತ್ತಿರುತ್ತಾರೆ. ಅರ್ಥವನ್ನಂತೂ ಅರಿತುಕೊಳ್ಳುವುದಿಲ್ಲ. ಓಂ ಶಾಂತಿ ಎಂದರೆ ನಾನು ಆತ್ಮದ ಸ್ವಧರ್ಮ ಶಾಂತಿಯಾಗಿದೆ ಎಂದರ್ಥ. ಇದಂತೂ ಸರಿಯಾಗಿದೆ ಆದರೆ ಓಂ ಶಿವೋಹಂ ಎಂದು ಹೇಳಿಬಿಟ್ಟಿದ್ದಾರೆ, ಇದು ತಪ್ಪಾಗಿದೆ. ವಾಸ್ತವದಲ್ಲಿ ಈ ಗೀತೆ ಮುಂತಾದವುಗಳ ಆವಶ್ಯಕತೆಯೂ ಇಲ್ಲ. ಪ್ರಪಂಚದಲ್ಲಿ ವರ್ತ,ಆಮ ದಿನಗಳಲ್ಲಿ ತುಂಬಾ ಕೇಳುವ ರುಚಿಯಿದೆ. ಇವೆಲ್ಲಾ ರುಚಿಗಳಲ್ಲಿ ಲಾಭವೇನೂ ಇಲ್ಲ. ಒಂದು ಮಾತಿನ ಮನರಸವಂತು ಈಗಲೇ ಉತ್ಪನ್ನವಾಗುತ್ತದೆ. ತಂದೆಯು ಮಕ್ಕಳಿಗೆ ಸಮ್ಮುಖದಲ್ಲಿ ತಿಳಿಸುತ್ತಾರೆ, ಹೇಳುತ್ತಾರೆ - ನೀವು ಭಕ್ತಿಯನ್ನಂತು ಬಹಳಷ್ಟು ಮಾಡಿದಿರಿ, ಈಗ ಭಕ್ತಿಯ ರಾತ್ರಿಯು ಪೂರ್ಣವಾಗಿ ಮುಂಜಾನೆಯಾಗುತ್ತಿದೆ. ಮುಂಜಾನೆಯ ಸಮಯಕ್ಕೆ ಬಹಳ ಮಹತ್ವಿಕೆಯಿದೆ. ಮುಂಜಾನೆಯ ಸಮಯದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುಂಜಾನೆಯ ಸಮಯದಲ್ಲಿ ಅನೇಕರು ಭಕ್ತಿಯನ್ನು ಮಾಡುತ್ತಾರೆ, ಮಾಲೆಯನ್ನು ಜಪಿಸುತ್ತಾರೆ. ಈ ಭಕ್ತಿಮಾರ್ಗದ ಪದ್ಧತಿಯು ನಡೆಯುತ್ತಾ ಬಂದಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ನಾಟಕವು ಪೂರ್ಣವಾಗುತ್ತದೆ, ಪುನಃ ಚಕ್ರವು ಪುನರಾವರ್ತನೆಯಾಗುತ್ತದೆ. ಅಲ್ಲಂತೂ ಭಕ್ತಿಯ ಅವಶ್ಯಕತೆಯಿರುವುದಿಲ್ಲ. ಭಕ್ತಿಯ ನಂತರ ಭಗವಂತ ಸಿಗುತ್ತಾರೆಂದು ಸ್ವಯಂ ಅವರೇ ಹೇಳುತ್ತಾರೆ. ಭಗವಂತನನ್ನು ನೆನಪು ಮಾಡುತ್ತಾರೆ ಏಕೆಂದರೆ ದುಃಖಿಯಾಗಿದ್ದಾರೆ. ಯಾವಾಗ ಯಾವುದೇ ಆಪತ್ತುಗಳು ಬರುತ್ತದೆ ಅಥವಾ ಕಾಯಿಲೆ ಬರುತ್ತವೆಯೆಂದರೆ ಭಗವಂತನನ್ನು ನೆನಪು ಮಾಡುತ್ತಾರೆ, ಭಕ್ತರೇ ಭಗವಂತನನ್ನು ನೆನಪು ಮಾಡುತ್ತಾರೆ. ಸತ್ಯಯುಗ-ತ್ರೇತಾದಲ್ಲಿ ಭಕ್ತಿಯಿರುವುದಿಲ್ಲ. ಒಂದುವೇಳೆ ಅಲ್ಲಿಯೂ ಭಕ್ತಿಯಿದ್ದರೆ ಎಲ್ಲವೂ ಭಕ್ತಿಕಾಂಡವಾಗಿ ಬಿಡುತ್ತದೆ. ಭಕ್ತಿ, ಜ್ಞಾನ ನಂತರ ವೈರಾಗ್ಯವಾಗಿದೆ. ಭಕ್ತಿಯ ನಂತರ ಮತ್ತೆ ಹಗಲಾಗುತ್ತದೆ. ಹೊಸ ಪ್ರಪಂಚಕ್ಕೆ ಹಗಲು ಎಂದು ಹೇಳಲಾಗುತ್ತದೆ. ಭಕ್ತಿ, ಜ್ಞಾನ, ವೈರಾಗ್ಯ ಈ ಶಬ್ದಗಳು ಸರಿಯಾಗಿವೆ. ಯಾವುದರ ಮೇಲೆ ವೈರಾಗ್ಯವಿರುವುದು? ಹಳೆಯ ಪ್ರಪಂಚ, ಹಳೆಯ ಸಂಬಂಧ ಇತ್ಯಾದಿಯೊಂದಿಗೆ ವೈರಾಗ್ಯ. ನಾವು ಮುಕ್ತಿಧಾಮದಲ್ಲಿ ತಂದೆಯ ಬಳಿ ಹೋಗಬೇಕೆಂದು ಬಯಸುತ್ತಾರೆ. ಭಕ್ತಿಯ ನಂತರ ನಮಗೆ ಭಗವಂತನು ಅವಶ್ಯವಾಗಿ ಸಿಗುತ್ತಾರೆ. ಭಕ್ತರಿಗೆ ಭಗವಂತ ತಂದೆಯು ಸಿಗುವರು. ಭಕ್ತರಿಗೆ ಸದ್ಗತಿಯನ್ನು ಕೊಡುವುದು ಭಗವಂತನ ಕೆಲಸವಾಗಿದೆ. ಮತ್ತೆ ಇನ್ನೇನನ್ನೂ ಮಾಡಬೇಕಾಗಿಲ್ಲ, ಕೇವಲ ತಂದೆಯನ್ನು ಅರಿತುಕೊಳ್ಳಬೇಕು. ತಂದೆಯು ಈ ಮನುಷ್ಯಸೃಷ್ಟಿ ವೃಕ್ಷದ ಬೀಜವಾಗಿದ್ದಾರೆ, ಇದಕ್ಕೆ ಉಲ್ಟಾ ವೃಕ್ಷವೆಂದು ಹೇಳುತ್ತಾರೆ. ಬೀಜದಿಂದ ವೃಕ್ಷ ಹೇಗೆ ಹೊರಬರುತ್ತದೆ, ಇದಂತು ಬಹಳ ಸಹಜವಾಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ - ಈ ವೇದ, ಶಾಸ್ತ್ರ, ಗ್ರಂಥ ಇತ್ಯಾದಿ ಓದುವುದು, ಜಪ-ತಪ ಮಾಡುವುದು ಇದು ಭಕ್ತಿಮಾರ್ಗವಾಗಿದೆ. ಇವೆಲ್ಲವೂ ಭಗವಂತನನ್ನು ಪಡೆಯುವ ಸತ್ಯಮಾರ್ಗವಲ್ಲ. ಮುಕ್ತಿ-ಜೀವನ್ಮುಕ್ತಿಯ ಸತ್ಯವಾದ ಮಾರ್ಗವನ್ನು ಭಗವಂತನೇ ತೋರಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಈಗ ನಾಟಕವು ಪೂರ್ಣವಾಗುತ್ತದೆ, ಏನು ಕಳೆದು ಹೋಗಿದೆಯೋ ಅದು ಡ್ರಾಮಾ. ಇದನ್ನು ಅರಿತುಕೊಳ್ಳಲು ಬೇಹದ್ದಿನ ಬುದ್ಧಿಯೂ ಇರಬೇಕಾಗಿದೆ. ಬೇಹದ್ದಿನ ಮಾಲೀಕನೇ ಇಡೀ ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಬೇಹದ್ದಿನ ಜ್ಞಾನವನ್ನು ಕೊಡುತ್ತಾರೆ. ಅವರನ್ನೇ ಜ್ಞಾನೇಶ್ವರ, ರಚಯಿತ ಎಂದು ಹೇಳಲಾಗುತ್ತದೆ. ಜ್ಞಾನೇಶ್ವರ ಅರ್ಥಾತ್ ಈಶ್ವರನಲ್ಲಿ ಜ್ಞಾನವಿದೆ, ಇದನ್ನು ಆತ್ಮಿಕ ಆಧ್ಯಾತ್ಮಿಕ ಜ್ಞಾನವೆಂದು ಹೇಳುತ್ತಾರೆ. ಈಶ್ವರೀಯ ಜ್ಞಾನವಾಗಿದೆ. ನೀವೂ ಸಹ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ. ಭಗವಾನುವಾಚವಿದೆ - ನಿಮಗೆ ರಾಜಯೋಗವನ್ನು ಅವಶ್ಯವಾಗಿ ಕಲಿಸುತ್ತೇನೆ ಅಂದರೆ ಭಗವಂತನು ಶಿಕ್ಷಕನಾದರು. ನೀವು ವಿದ್ಯಾರ್ಥಿಗಳೂ ಆಗಿದ್ದೀರಿ, ಮಕ್ಕಳೂ ಆಗಿದ್ದೀರಿ. ಮಕ್ಕಳಿಗೆ ತಾತನಿಂದ ಆಸ್ತಿಯು ಸಿಗುತ್ತದೆ. ಇದಂತು ಬಹಳ ಸಹಜ ಮಾತುಗಳಾಗಿವೆ. ಮಕ್ಕಳು ಒಂದುವೇಳೆ ಯೋಗ್ಯರಾಗಿಲ್ಲವೆಂದರೆ ತಂದೆಯು ಕಾಲಿನಿಂದ ತಳ್ಳಿ ಹೊರಗಡೆ ಹಾಕುತ್ತಾರೆ, ವ್ಯವಹಾರ ಮುಂತಾದವುಗಳಲ್ಲಿ ಯಾರು ಒಳ್ಳೆಯ ಸಹಯೋಗಿಗಳಾಗುತ್ತಾರೆ ಅವರಿಗೇ ಭಾಗವು ಸಿಗುತ್ತದೆ. ಅಂದಮೇಲೆ ನೀವು ಮಕ್ಕಳಿಗೂ ಸಹ ತಂದೆಯ ಸಂಪತ್ತಿನ ಮೇಲೆ ಅಧಿಕಾರವಿದೆ. ಅವರು ನಿರಾಕಾರನಾಗಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ನಾವು ನಮ್ಮ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅವರೇ ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಜ್ಞಾನಪೂರ್ಣನಾಗಿದ್ದಾರೆ. ಬ್ರಹ್ಮ, ವಿಷ್ಣು, ಶಂಕರನಿಗೆ ಪತಿತ-ಪಾವನನೆಂದು ಹೇಳುವುದಿಲ್ಲ ಏಕೆಂದರೆ ಅವರು ದೇವತೆಗಳಾಗಿದ್ದಾರೆ ಆದ್ದರಿಂದ ಅವರನ್ನು ಸದ್ಗತಿದಾತ ಎಂದು ಹೇಳುವುದಿಲ್ಲ. ಅವರು ಒಬ್ಬರೇ ಆಗಿದ್ದಾರೆ. ಎಲ್ಲರೂ ಒಬ್ಬರನ್ನೇ ನೆನಪು ಮಾಡುತ್ತಾರೆ. ತಂದೆಯನ್ನು ತಿಳಿಯದಿರುವ ಕಾರಣ ಎಲ್ಲರಲ್ಲಿ ಪರಮಾತ್ಮನಿದ್ದಾರೆಂದು ಹೇಳಿ ಬಿಡುತ್ತಾರೆ. ಒಂದುವೇಳೆ ಯಾರಿಗೇ ಸಾಕ್ಷಾತ್ಕಾರಗುತ್ತದೆ ಎಂದರೆ ತಿಳಿಯುತ್ತಾರೆ - ಹನುಮಂತನು ದರ್ಶನ ಮಾಡಿಸಿದರು. ಭಗವಂತನಂತು ಸರ್ವವ್ಯಾಪಿಯಾಗಿದ್ದಾರೆ ಎಂದು ತಿಳಿಯುತ್ತಾರೆ. ಯಾವುದೇ ವಸ್ತುವಿನಲ್ಲಿ ಭಾವನೆ ಇಟ್ಟುಕೊಂಡಾಗ ಸಾಕ್ಷಾತ್ಕಾರ ಆಗಿ ಬಿಡುತ್ತದೆ. ಆದರೆ ಇಲ್ಲಂತು ವಿದ್ಯೆಯ ಮಾತಾಗಿದೆ. ತಂದೆಯು ಹೇಳುತ್ತಾರೆ - ನಾನು ಬಂದು ನನ್ನ ಮಕ್ಕಳಿಗೆ ಓದಿಸುತ್ತೇನೆ. ಅವರು ಹೇಗೆ ಓದಿಸುತ್ತಾರೆ ಎನ್ನುವುದನ್ನೂ ಸಹ ನೀವು ನೋಡುತ್ತೀರಿ. ಹಾಗೆಯೇ ಬೇರೆ ಯಾರು ಶಿಕ್ಷಕನಾಗಿರುತ್ತಾರೆ ಅವರು ಸಂಪೂರ್ಣ ಸಾಧಾರಣ ರೀತಿಯಲ್ಲಿ ಓದಿಸುತ್ತಾರೆ. ಬ್ಯಾರಿಸ್ಟರ್ ಆಗಿದ್ದರೆ ಅವರು ತಮ್ಮ ಸಮಾನ ಬ್ಯಾರಿಸ್ಟರ್ ಮಾಡುತ್ತಾರೆ. ಇದಂತೂ ನೀವೇ ಅರಿತುಕೊಂಡಿದ್ದೀರಿ, ಈ ಭಾರತವನ್ನು ಸ್ವರ್ಗವನ್ನಾಗಿ ಮಾಡಿದವರು ಯಾರು ಮತ್ತು ಭಾರತದಲ್ಲಿ ಇರುವಂತಹ ಸೂರ್ಯವಂಶಿ ದೇವೀ-ದೇವತೆಗಳು ಎಲ್ಲಿಂದ ಬಂದರು? ಮನುಷ್ಯರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ಈಗ ಸಂಗಮಯುಗವಾಗಿದೆ. ನೀವು ಸಂಗಮಯುಗದಲ್ಲಿ ನಿಂತಿದ್ದೀರಿ, ಬೇರೆ ಯಾರೂ ಸಂಗಮದಲ್ಲಿಲ್ಲ. ಈ ಸಂಗಮದ ಮೇಳ ಹೇಗಿದೆಯೆಂದು ನೋಡಿ! ಮಕ್ಕಳೇ ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೀರಿ. ಈ ಮಿಲನವೇ ಕಲ್ಯಾಣಕಾರಿಯಾಗಿದೆ. ಬಾಕಿ ಕುಂಭಮೇಳ ಇತ್ಯಾದಿ ಏನಾಗುತ್ತವೆ ಅವುಗಳಿಂದ ಯಾವುದೇ ಪ್ರಾಪ್ತಿಯಿಲ್ಲ. ಸಂಗಮವನ್ನೇ ಸತ್ಯ-ಸತ್ಯ ಕುಂಭಮೇಳವೆಂದು ಹೇಳಲಾಗುತ್ತದೆ. ಆತ್ಮರು ಹಾಗೂ ಪರಮಾತ್ಮ ಬಹಳ ಕಾಲ ಅಗಲಿದ್ದರೆಂದು ಗಾಯನ ಮಾಡುತ್ತಾರೆ ನಂತರ ಸುಂದರ ಸೌಭಾಗ್ಯದ ಮಿಲನ ಮಾಡಿ ಬಿಟ್ಟಿದ್ದಾರೆ. ಈ ಸಮಯವು ಎಷ್ಟು ಚೆನ್ನಾಗಿದೆ. ಈ ಸಂಗಮದ ಸಮಯವು ಎಷ್ಟೊಂದು ಕಲ್ಯಾಣಕಾರಿಯಾಗಿದೆ! ಏಕೆಂದರೆ ಈ ಸಮಯವೇ ಎಲ್ಲರ ಕಲ್ಯಾಣವಾಗುತ್ತದೆ. ತಂದೆಯೇ ಬಂದು ಎಲ್ಲರಿಗೆ ಓದಿಸುತ್ತಾರೆ, ಅವರು ನಿರಾಕಾರ, ಬಿಂದುವಾಗಿದ್ದಾರೆ. ತಿಳಿಸುವುದಕ್ಕೋಸ್ಕರ ಲಿಂಗರೂಪವನ್ನಿಟ್ಟಿದ್ದಾರೆ. ಬಿಂದುವನ್ನಿಡುವುದರಿಂದ ಏನನ್ನೂ ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ತಿಳಿಸಬಹುದು - ಆತ್ಮ ಒಂದು ನಕ್ಷತ್ರವಾಗಿದೆ. ತಂದೆಯೂ ನಕ್ಷತ್ರವಾಗಿದ್ದಾರೆ. ಆತ್ಮ ಹೇಗಿದೆಯೋ ಹಾಗೆಯೇ ಪರಮಾತ್ಮನು ಇದ್ದಾರೆ. ಅಂತರವೇನೂ ಇಲ್ಲ. ನೀವಾತ್ಮಗಳೂ ಸಹ ನಂಬರ್ವಾರ್ ಆಗಿದ್ದೀರಿ. ಕೆಲವರ ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವಿದೆ, ಇನ್ನೂ ಕೆಲವರ ಬುದ್ಧಿಯಲ್ಲಿ ಬಹಳಷ್ಟಿದೆ. ಈಗ ನಾವು ಆತ್ಮಗಳು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ನೀವು ತಿಳಿಯುತ್ತೀರಿ. ಪ್ರತಿಯೊಬ್ಬರೂ ತಮ್ಮ ಲೆಕ್ಕಾಚಾರವನ್ನು ಅನುಭವಿಸಬೇಕಾಗುತ್ತದೆ. ಕೆಲವರು ರೋಗಿಗಳಾಗುತ್ತಾರೆ ಏಕೆಂದರೆ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ. ಈಶ್ವರೀಯ ಸಂತಾನರಾಗಿ ಇದನ್ನೇಕೆ ಅನುಭವಿಸಬೇಕು! ಎನ್ನುವಂತಲ್ಲ. ತಂದೆಯು ತಿಳಿಸಿದ್ದಾರೆ - ಮಕ್ಕಳೇ ಜನ್ಮ-ಜನ್ಮಾಂತರಗಳ ಪಾಪಗಳಿದೆ. ಭಲೆ ಕುಮಾರಿಯಾಗಿದ್ದಾರೆ, ಕುಮಾರಿಯಿಂದ ಪಾಪವೇನಾಗುತ್ತದೆ? ಆದರೆ ಇದಂತೂ ಅನೇಕ ಜನ್ಮಗಳ ಲೆಕ್ಕಾಚಾರಗಳಾಗಿರುವ ಕಾರಣದಿಂದ ಈ ಲೆಕ್ಕಾಚಾರವು ಸಮಾಪ್ತಿಯಾಗಬೇಕಲ್ಲವೇ. ಈ ಜನ್ಮದಲ್ಲಿಯೂ ಸಹ ಮಾಡಿರುವಂತಹ ಪಾಪಗಳನ್ನು ಒಂದುವೇಳೆ ತಿಳಿಸದಿದ್ದರೆ ಆ ಪಾಪಗಳು ಒಳಗಡೆ ವೃದ್ಧಿಯಾಗುತ್ತಿರುತ್ತದೆ. ತಂದೆಗೆ ತಿಳಿಸುವುದರಿಂದ ಮತ್ತೆ ಅದರ ವೃದ್ಧಿಯಾಗುವುದಿಲ್ಲ. ಎಲ್ಲದಕ್ಕಿಂತ ಭಾರತವು ನಂಬರ್ವನ್ ಪಾವನವಾಗಿತ್ತು, ಈಗ ಭಾರತವೇ ಎಲ್ಲದಕ್ಕಿಂತ ಪತಿತವಾಗಿದೆ ಅದ್ದರಿಂದ ಯಾರು ತಮ್ಮ ತಪ್ಪನ್ನು ತಿಳಿಸುವುದಿಲ್ಲವೋ ಅವರು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಯಾರು ಬಹಳ ಸರ್ವೀಸ್ ಮಾಡುತ್ತಾರೆ, ನಾವು ಉತ್ತಮ ನಂಬರ್ನಲ್ಲಿ ಹೋಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ಅಂಶ ಮಾತ್ರ ಲೆಕ್ಕಾಚಾರ ಉಳಿದುಕೊಂಡಿದ್ದರೂ ಸಹ ಅನುಭವಿಸಬೇಕಾಗುತ್ತದೆ. ಅದನ್ನೂ ಸಹ ಖುಷಿ-ಖುಷಿಯಿಂದ ಅನುಭವಿಸಬೇಕಾಗಿದೆ. ಅಜ್ಞಾನಿ ಮನುಷ್ಯರಿಗೆ ಏನಾದರೂ ಆಗುತ್ತದೆಯೆಂದರೆ ಕೂಡಲೆ ಅಯ್ಯೋ ಎಂದು ಚೀರಾಡುತ್ತಾರೆ ಆದರೆ ಇಲ್ಲಂತೂ ಖುಷಿಯಿಂದ ಅನುಭವಿಸಬೇಕಾಗಿದೆ. ನಾವೇ ಪಾವನರಾಗಿದ್ದೆವು ನಂತರ ನಾವೇ ಎಲ್ಲರಿಗಿಂತ ಪತಿತರಾಗುತ್ತೇವೆ. ಈ ವಸ್ತ್ರವೂ ಸಹ ಪಾತ್ರವನ್ನಭಿನಯಿಸುವುದಕ್ಕಾಗಿ ನಮಗೆ ಸಿಕ್ಕಿದೆ. ಈಗ ನಾವು ಎಲ್ಲರಿಗಿಂತ ಜಾಸ್ತಿ ಪತಿತರಾಗಿದ್ದೇವೆ ಎಂದು ಬುದ್ಧಿಯಲ್ಲಿ ಬಂದಿದೆಯಲ್ಲವೆ. ಬಹಳ ಪರಿಶ್ರಮ ಪಡಬೇಕಾಗುತ್ತದೆ. ಇಂತಹವರಿಗೆ ಈ ಕಾಯಿಲೆ ಏಕೆ ಬಂದಿದೆ ಎಂದು ಆಶ್ಚರ್ಯ ಪಡಬಾರದು. ಅರೇ! ಕೃಷ್ಣನ ಹೆಸರೂ ಸಹ ಗಾಯನ ಮಾಡಲ್ಪಟ್ಟಿದೆ - ಶ್ಯಾಮ ಮತ್ತು ಸುಂದರ. ಚಿತ್ರವನ್ನು ಬರೆಯುವವರಂತೂ ಅರಿತುಕೊಳ್ಳುವುದಿಲ್ಲ. ಅವರು ರಾಧೆಯನ್ನು ಸುಂದರವಾಗಿಯೂ, ಕೃಷ್ಣನನ್ನು ಶ್ಯಾಮನನ್ನಾಗಿ ತೋರಿಸುತ್ತಾರೆ. ಅವರು ತಿಳಿಯುತ್ತಾರೆ- ರಾಧೆಯು ಕುಮಾರಿಯಾಗಿರುವುದರಿಂದ ಅವರಿಗೆ ಗೌರವ ಕೊಡುತ್ತಾರೆ. ಅವರು ಹೇಗೆ ಶ್ಯಾಮನಾಗುತ್ತಾರೆ ಎಂದು ತಿಳಿಯುತ್ತಾರೆ ಆದರೆ ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ಅರಿತುಕೊಳ್ಳುತ್ತೀರಿ. ಯಾರು ದೇವತಾ ಕುಲದವರಾಗಿದ್ದರು ಅವರೇ ತಮ್ಮನ್ನು ಹಿಂದೂ ಧರ್ಮದವರೆಂದು ತಿಳಿದುಕೊಳ್ಳುತ್ತಿದ್ದಾರೆ.

ನೀವು ಶ್ರೀಮತದನುಸಾರ ತಮ್ಮ ಕುಲದ ಉದ್ಧಾರ ಮಾಡುತ್ತೀರಿ. ಎಲ್ಲಾ ಕುಲಗಳನ್ನು ಪಾವನ ಮಾಡಬೇಕಾಗಿದೆ, ರಕ್ಷಣೆ ಮಾಡಿ ಮೇಲೆ ಕರೆದುಕೊಂಡು ಬರಬೇಕಾಗಿದೆ. ನೀವು ರಕ್ಷಣಾ ಸೇನೆ ಆಗಿದ್ದೀರಲ್ಲವೆ. ತಂದೆಯೇ ದುರ್ಗತಿಯಿಂದ ಸದ್ಗತಿ ಕೊಡುತ್ತಾರೆ. ಅವರೇ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿ ಎಂದು ಗಾಯನ ಮಾಡಲ್ಪಟ್ಟಿದೆ. ಅವರು ಪಾತ್ರಧಾರಿ ಹೇಗಾಗಿದ್ದಾರೆ, ಪತಿತ ಪಾವನ ತಂದೆಯು ಬಂದು ಪತಿತ ಪ್ರಪಂಚದಲ್ಲಿ ಎಲ್ಲರನ್ನು ಪಾವನ ಮಾಡುತ್ತಾರೆಂದರೆ ಮುಖ್ಯ ಪಾತ್ರಧಾರಿ ಆದರಲ್ಲವೆ. ಬ್ರಹ್ಮಾ, ವಿಷ್ಣು, ಶಂಕರನನ್ನೂ ಸಹ ಮಾಡಿ-ಮಾಡಿಸುವವರೆಂದು ಯಾರೂ ಸಹ ಹೇಳುವುದಿಲ್ಲ. ನೀವೀಗ ಅನುಭವದಿಂದ ಹೇಳಬಲ್ಲಿರಿ.... ತಂದೆಗೆ ಮಾಡಿ-ಮಾಡಿಸುವವರೆಂದು ಹೇಳಲಾಗುತ್ತದೆ ಏಕೆಂದರೆ ಅವರು ಈ ಸಮಯದಲ್ಲಿ ಪಾತ್ರವನ್ನಭಿನಯಿಸುತ್ತಾರೆ. ಅವರು ಪಾತ್ರವನ್ನೂ ಸಹ ಸಂಗಮದಲ್ಲಿಯೇ ಅಭಿನಯಿಸುತ್ತಾರೆ ಆದರೆ ಅವರನ್ನು ಯಾರೂ ಅರಿತುಕೊಳ್ಳುವುದಿಲ್ಲ. ಮನುಷ್ಯರು 14 ಕಲೆಗಳಿಂದ ಮತ್ತೆ ಕೆಳಗಿಳಿಯುತ್ತಾರೆ. ನಿಧಾನ-ನಿಧಾನವಾಗಿ ಕಲೆಗಳು ಕಡಿಮೆ ಆಗುತ್ತಾ ಹೋಗುತ್ತದೆ. ಪ್ರತೀ ಜನ್ಮದಲ್ಲಿ ಒಂದಲ್ಲ ಒಂದು ಕಲೆಯು ಕಡಿಮೆಯಾಗುತ್ತದೆ. ಸತ್ಯಯುಗದಲ್ಲಿ 8 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದೊಂದು ಜನ್ಮದಲ್ಲಿಯೂ ಸಹ ಡ್ರಾಮಾನುಸಾರ ಒಂದಲ್ಲ ಒಂದು ಕಲೆಯು ಕಡಿಮೆಯಾಗುತ್ತದೆ. ಈಗ ಏರುವ ಸಮಯವಾಗಿದೆ. ಯಾವಾಗ ಸಂಪೂರ್ಣವಾಗಿ ಏರುತ್ತೀರಿ ನಂತರ ನಿಧಾನ-ನಿಧಾನವಾಗಿ ಇಳಿಯುತ್ತೀರಿ. ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಈ ರಾಜಧಾನಿಯು ಸ್ಥಾಪನೆ ಆಗುತ್ತಿದೆ. ರಾಜಧಾನಿಯಲ್ಲಂತೂ ಪ್ರತಿಯೊಂದು ಪ್ರಕಾರದವವರಿರಬೇಕು. ಯಾರು ಒಳ್ಳೆಯ ರೀತಿಯಲ್ಲಿ ಶ್ರೀಮತದಂತೆ ನಡೆಯುತ್ತಾರೆ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಆದರೂ ಸಹ ತಂದೆಯಿಂದ ಸಲಹೆಯನ್ನು ಕೇಳಬೇಕಾಗಿದೆ. ತಂದೆಗೆ ತಮ್ಮ ಚಾರ್ಟನ್ನು ಕಳುಹಿಸಬೇಕು ಆಗ ತಂದೆಯು ಸಲಹೆ ಕೊಡುತ್ತಾರೆ. ತಂದೆಯಂತೂ ಎಲ್ಲವನ್ನು ಬಲ್ಲವರು ಎನ್ನುವಂತಲ್ಲ. ಅವರಂತೂ ಇಡೀ ಪ್ರಪಂಚದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ. ಆದರೆ ಸ್ವಯಂ ಕುಳಿತು ಒಬ್ಬೊಬ್ಬರ ಹೃದಯವನ್ನು ಅರಿತುಕೊಳ್ಳುವುದಿಲ್ಲ, ಅವರು ಜ್ಞಾನಪೂರ್ಣನಾಗಿದ್ದಾರೆ. ತಂದೆಯು ಹೇಳುತ್ತಾರೆ- ನಾನು ಆದಿ-ಮಧ್ಯ-ಅಂತ್ಯವನ್ನು ಅರಿತಿದ್ದೇನೆ ಆದ್ದರಿಂದಲೇ ನೀವು ಈ ರೀತಿ ಬೀಳುತ್ತೀರಿ, ಈ ರೀತಿ ಏರುತ್ತೀರಿ ಎಂದು ತಿಳಿಸುತ್ತೇನೆ. ಈ ಪಾತ್ರವು ಭಾರತದ್ದಾಗಿದೆ. ಭಕ್ತಿಯನ್ನಂತೂ ಎಲ್ಲರೂ ಮಾಡುತ್ತಾರೆ ಆದರೆ ಯಾರು ಎಲ್ಲರಿಗಿಂತ ಹೆಚ್ಚಿನದಾಗಿ ಭಕ್ತಿ ಮಾಡುತ್ತಾರೆ ಮೊದಲು ಅವರಿಗೆ ಸದ್ಗತಿ ಸಿಗಬೇಕು. ಯಾರು ಪೂಜ್ಯರಾಗಿದ್ದರೋ ಅವರಿಗಾಗಿಯೇ 84 ಜನ್ಮಗಳೂ ಸಹ ಇದೆ. ಭಕ್ತಿಯನ್ನೂ ಸಹ ಅವರು ನಂಬರ್ವಾರ್ ಮಾಡಿದ್ದಾರೆ. ಭಲೆ ಈ ಸಮಯದಲ್ಲಿ ಜನ್ಮ ಸಿಕ್ಕಿದೆ ಆದರೆ ಹಿಂದಿನ ಜನ್ಮದ ಪಾಪವಂತೂ ಇರುತ್ತದೆಯಲ್ಲವೇ, ಅದು ನೆನಪಿನ ಬಲದಿಂದಲೇ ಪರಿಹಾರವಾಗುತ್ತದೆ. ನೆನಪು ಮಾಡುವುದೇ ಕಠಿಣವಾಗಿದೆ. ನಿಮಗೋಸ್ಕರ ತಂದೆಯು ತಿಳಿಸುತ್ತಾರೆ - ನೀವು ನೆನಪಿನಲ್ಲಿ ಕುಳಿತುಕೊಳ್ಳುತ್ತೀರೆಂದರೆ ನಿರೋಗಿಯಾಗುತ್ತೀರಿ. ತಂದೆಯಿಂದ ಸುಖ-ಶಾಂತಿ ಪವಿತ್ರತೆಯ ಆಸ್ತಿ ಸಿಗುತ್ತದೆ. ನೆನಪಿನಿಂದಲೇ ನಿರೋಗಿ ಶರೀರ ಅಥವಾ ದೀರ್ಘಾಯಸ್ಸು ಸಿಗುತ್ತದೆ. ಜ್ಞಾನದಿಂದ ನೀವು ತ್ರಿಕಾಲದರ್ಶಿಗಳಾಗುತ್ತೀರಿ. ತ್ರಿಕಾಲದರ್ಶಿಯ ಅರ್ಥವನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ರಿದ್ಧಿ-ಸಿದ್ಧಿಯವರೂ ಸಹ ಅನೇಕರಿರುತ್ತಾರೆ. ಇಲ್ಲಿ ಕುಳಿತಿದ್ದಂತೆಯೇ ಲಂಡನ್ನಿನ ಪಾರ್ಲಿಮೆಂಟ್ ಮುಂತಾದವುಗಳನ್ನು ನೋಡುತ್ತಿರುತ್ತಾರೆ ಆದರೆ ಈ ರಿದ್ಧಿ-ಸಿದ್ಧಿಯಿಂದ ಲಾಭವೇನೂ ಇಲ್ಲ. ಸಾಕ್ಷಾತ್ಕಾರವೂ ಸಹ ದಿವ್ಯದೃಷ್ಟಿಯಿಂದ ಆಗುತ್ತದೆ, ಈ ಸ್ಥೂಲ ಕಣ್ಣುಗಳಿಂದಲ್ಲ. ಈ ಸಮಯದಲ್ಲಿ ಎಲ್ಲರೂ ಕಪ್ಪಾಗಿದ್ದಾರೆ. ನೀವು ಬಲಿಹಾರಿ ಆಗುತ್ತೀರಿ ಅರ್ಥಾತ್ ತಂದೆಯ ಮಕ್ಕಳಾಗುತ್ತೀರಿ. ಬ್ರಹ್ಮಾ ತಂದೆಯೂ ಸಹ ಪೂರ್ಣ ಬಲಿಹಾರಿಯಾದರು, ಯಾರು ಅರ್ಧ ಬಲಿಹಾರಿ ಆಗುತ್ತಾರೆ ಅವರಿಗೆ ಅರ್ಧದಷ್ಟೇ ಸಿಗುತ್ತದೆ. ಬ್ರಹ್ಮಾ ತಂದೆಯೂ ಸಹ ಬಲಿಹಾರಿ ಆದರಲ್ಲವೇ. ಏನೆಲ್ಲಾ ಇತ್ತು ಅದನ್ನು ಸಮರ್ಪಣೆ ಮಾಡಿ ಬಿಟ್ಟರು. ಯಾರು ಇಷ್ಟೆಲ್ಲವನ್ನು ಸಮರ್ಪಣೆ ಮಾಡುತ್ತಾರೆ ಅವರಿಗೆ 21 ಜನ್ಮಗಳಿಗೆ ಪ್ರಾಪ್ತಿಯಾಗುತ್ತದೆ, ಜೀವಘಾತದ ಮಾತಿಲ್ಲ. ಜೀವಘಾತಿ ಮಹಾಪಾಪಿ ಎಂದು ಹೇಳಲಾಗುತ್ತದೆ. ಆತ್ಮವೇ ತನ್ನ ಶರೀರದ ಹತ್ಯೆ ಮಾಡುತ್ತದೆಯೆಂದರೆ ಇದು ಒಳ್ಳೆಯದಲ್ಲ. ಮನುಷ್ಯರು ಅನ್ಯರ ಕುತ್ತಿಗೆಯನ್ನು ಕತ್ತರಿಸುತ್ತಾರೆಂದರೆ, ಅವರು ತಮ್ಮ ಕುತ್ತಿಗೆಯನ್ನೂ ಕತ್ತರಿಸಿಕೊಳ್ಳುತ್ತಾರೆ ಆದ್ದರಿಂದ ಜೀವಘಾತ ಮಹಾಪಾಪಿ ಎಂದು ಹೇಳಲಾಗುತ್ತದೆ.

ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಎಷ್ಟು ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ- ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಈ ಕುಂಭಮೇಳದಲ್ಲಿ ಬರುತ್ತಾರೆ, ಇವರು ಅದೇ ಮಾತಾಪಿತಾ ಆಗಿದ್ದಾರೆ. ಬಾಬಾ ತಾವೇ ನಮ್ಮ ಸರ್ವಸ್ವವಾಗಿದ್ದೀರೆಂದು ಹೇಳುತ್ತಾರೆ. ತಂದೆಯೂ ಸಹ ಹೇ ಮಕ್ಕಳೇ, ನೀವು ಆತ್ಮಗಳು ನನ್ನವರಾಗಿದ್ದೀರೆಂದು ಹೇಳುತ್ತಾರೆ. ಶಿವಬಾಬಾ ಕಲ್ಪದ ಮೊದಲಿನಂತೆ ಬಂದಿದ್ದಾರೆ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ ಅವರಿಗೇ ತಂದೆಯು ಶೃಂಗಾರ ಮಾಡುತ್ತಿದ್ದಾರೆ. ನೀವು ಆತ್ಮರಿಗೆ ತಿಳಿದಿದೆ, ಬಾಬಾ ಜ್ಞಾನಪೂರ್ಣ ಪತಿತ-ಪಾವನನಾಗಿದ್ದಾರೆ. ಅವರು ನಮಗೆ ಈಗ ಎಲ್ಲಾದರ ಜ್ಞಾನವನ್ನು ಕೊಡುತ್ತಾರೆ. ಅವರೇ ಜ್ಞಾನ ಸಾಗರ ಆಗಿದ್ದಾರೆ ಇದರಲ್ಲಿ ಶಾಸ್ತ್ರಗಳ ಯಾವುದೇ ಮಾತಿಲ್ಲ. ಇಲ್ಲಂತು ದೇಹ ಸಹಿತ ಎಲ್ಲವನ್ನೂ ಮರೆತು ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಒಬ್ಬ ತಂದೆಯ ಮಕ್ಕಳಾಗಿದ್ದೀರೆಂದರೆ ಮತ್ತೆಲ್ಲವನ್ನು ಮರೆತು ಬಿಡಬೇಕಾಗಿದೆ. ಎಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬರ ಸಂಗದೊಂದಿಗೆ ಜೋಡಿಸಬೇಕಾಗಿದೆ. ಗಾಯನವೂ ಇದೆ- ನಾವು ನಿಮ್ಮ ಸಂಗವನ್ನೇ ಜೋಡಿಸುತ್ತೇವೆ, ಬಾಬಾ ನಾವು ನಿಮ್ಮ ಮೇಲೆ ಬಲಿಹಾರಿಯಾಗುತ್ತೇವೆ. ತಂದೆಯೂ ಹೇಳುತ್ತಾರೆ - ಮಕ್ಕಳೇ, ನಿಮ್ಮ ಮೇಲೆ ಬಲಿಹಾರಿಯಾಗುತ್ತೇನೆ. ಮಧುರ ಮಕ್ಕಳೇ, ಇಡೀ ವಿಶ್ವದ ಮಾಲೀಕರನ್ನಾಗಿ ನಿಮ್ಮನ್ನು ಮಾಡುತ್ತೇನೆ, ನಾನಂತು ನಿಷ್ಕಾಮನಾಗಿದ್ದೇನೆ. ಮನುಷ್ಯರು ಹೇಳುತ್ತಾರೆ - ನಾವು ನಿಷ್ಕಾಮ ಸೇವೆ ಮಾಡುತ್ತೇವೆ, ಆಗ ಫಲವಂತೂ ಸಿಗುತ್ತದೆಯಲ್ಲವೆ. ತಂದೆಯು ನಿಷ್ಕಾಮ ಸೇವೆ ಮಾಡುತ್ತಾರೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನಾವು ನಿಷ್ಕಾಮ ಸೇವೆ ಮಾಡುತ್ತೇವೆಂದು ಆತ್ಮವೇ ಹೇಳುತ್ತದೆ, ಇದನ್ನು ಎಲ್ಲಿಂದ ಕಲಿತಿದೆ! ಏಕೆಂದರೆ ನಿಮಗೆ ತಿಳಿದಿದೆ- ನಿಷ್ಕಾಮ ಸೇವೆಯನ್ನು ತಂದೆಯೇ ಮಾಡುತ್ತಾರೆ. ಕಲ್ಪದ ಸಂಗಮಯುಗದಲ್ಲಿಯೇ ಬರುತ್ತಾರೆ. ಈಗಲೂ ಸಹ ನಿಮ್ಮ ಸಮ್ಮುಖದಲ್ಲಿ ಕುಳಿತಿದ್ದಾರೆ. ತಂದೆಯು ಸ್ವಯಂ ಹೇಳುತ್ತಾರೆ- ನಾನಂತೂ ನಿರಾಕಾರನಾಗಿದ್ದೇನೆ ಆದ್ದರಿಂದ ನಿಮಗೆ ಈ ಆಸ್ತಿಯನ್ನು ಹೇಗೆ ಕೊಡಲಿ? ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಹೇಗೆ ತಿಳಿಸಲಿ? ಇದರಲ್ಲಿ ಪ್ರೇರಣೆಯ ಮಾತಿಲ್ಲ. ಶಿವ ಜಯಂತಿಯನ್ನು ಆಚರಿಸುತ್ತೀರೆಂದರೆ ಅವಶ್ಯವಾಗಿ ಬರುತ್ತೇನಲ್ಲವೆ. ನಾನು ಭಾರತದಲ್ಲಿ ಬರುತ್ತೇನೆ. ಭಾರತದ ಮಹಿಮೆಯಲ್ಲಿ ಸಂಪೂರ್ಣ ಮಹಾನ್ ಪವಿತ್ರವಾಗಿತ್ತು ಎಂದು ಹೇಳುತ್ತಾರೆ, ಅದು ಈಗ ಮತ್ತೆ ಆಗುತ್ತಿದೆ. ತಂದೆಗೆ ಮಕ್ಕಳ ಮೇಲೆ ಎಷ್ಟೊಂದು ಪ್ರೀತಿಯಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದನುಸಾರ ತಮ್ಮ ಕುಲದ ಉದ್ಧಾರ ಮಾಡಬೇಕು. ಎಲ್ಲಾ ಕುಲವನ್ನು ಪಾವನ ಮಾಡಬೇಕಾಗಿದೆ. ತಂದೆಗೆ ತಮ್ಮ ಸತ್ಯ-ಸತ್ಯ ಲೆಕ್ಕವನ್ನು ಕೊಡಬೇಕಾಗಿದೆ.

2. ನೆನಪಿನ ಬಲದಿಂದ ತಮ್ಮ ಶರೀರವನ್ನು ನಿರೋಗಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ತಂದೆಯ ಮೇಲೆ ಸಂಪೂರ್ಣವಾಗಿ ಬಲಿಹಾರಿಯಾಗಬೇಕಾಗಿದೆ. ಎಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬರ ಸಂಗದೊಂದಿಗೆ ಜೋಡಿಸಬೇಕಾಗಿದೆ.

ವರದಾನ:
ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ - ಈ ಸ್ಮೃತಿಯಿಂದ ನಿಮಿತ್ತರಾಗಿದ್ದು ಸೇವೆ ಮಾಡುವಂತಹ ಸರ್ವ ಸೆಳೆತಮುಕ್ತ ಭವ.

ಯಾವ ಮಕ್ಕಳು ಸದಾ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ - ಇದೇ ಸ್ಮೃತಿಯಲ್ಲಿರುತ್ತಾರೆಯೋ ಅವರ ಮನಸ್ಸು-ಬುದ್ಧಿಯು ಸಹಜವಾಗಿ ಏಕಾಗ್ರವಾಗಿ ಬಿಡುತ್ತದೆ. ಅವರು ಸೇವೆಯಲ್ಲಿಯೂ ನಿಮಿತ್ತರಾಗಿದ್ದು ಮಾಡುತ್ತಾರೆ ಆದ್ದರಿಂದ ಅದರಲ್ಲಿ ಅವರಿಗೆ ಸೆಳೆತವಿರುವುದಿಲ್ಲ. ಸೆಳೆತ ಚಿಹ್ನೆಯಾಗಿದೆ - ಎಲ್ಲಿ ಸೆಳೆತವಿರುವುದೋ ಅಲ್ಲಿ ಬುದ್ಧಿಯು ಹೋಗುವುದು, ಮನಸ್ಸು ಓಡುತ್ತದೆ ಆದ್ದರಿಂದ ಎಲ್ಲಾ ಜವಾಬ್ದಾರಿಗಳನ್ನು ತಂದೆಯವರಿಗೆ ಅರ್ಪಣೆ ಮಾಡಿ ಟ್ರಸ್ಟಿ ಅಥವಾ ನಿಮಿತ್ತರಾಗಿದ್ದು ಸಂಭಾಲಿಸುತ್ತೀರೆಂದರೆ ಸೆಳೆತಮುಕ್ತರು ಆಗಿ ಬಿಡುತ್ತೀರಿ.

ಸ್ಲೋಗನ್:
ವಿಘ್ನವೇ ಆತ್ಮನನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತದೆ ಆದ್ದರಿಂದ ವಿಘ್ನಗಳಿಂದ ಭಯ ಪಡಬಾರದು.