14.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಾವೀಗ ಸತ್ಯ-ಸತ್ಯವಾದ ಪಾಠಶಾಲೆಯಲ್ಲಿ ಕುಳಿತಿದ್ದೀರಿ, ಇದು ಸತ್ಸಂಗವೂ ಆಗಿದೆ, ಇಲ್ಲಿ ನಿಮಗೆ ಸತ್ಯ ತಂದೆಯ ಸಂಗವು ಸಿಕ್ಕಿದೆ, ಇದು ನಿಮ್ಮನ್ನು ಪಾರು ಮಾಡುತ್ತದೆ".

ಪ್ರಶ್ನೆ:
ಲೆಕ್ಕಾಚಾರದ ಆಟದಲ್ಲಿ ಮನುಷ್ಯರ ತಿಳುವಳಿಕೆ ಮತ್ತು ನಿಮ್ಮ ತಿಳುವಳಿಕೆಯಲ್ಲಿ ಯಾವ ಅಂತರವಿದೆ?

ಉತ್ತರ:
ಯಾವ ಈ ಸುಖ-ದುಃಖದ ಆಟವು ನಡೆಯುತ್ತದೆಯೋ ಇದೆಲ್ಲವನ್ನೂ ಪರಮಾತ್ಮನೇ ಮಾಡುತ್ತಾರೆಂದು ಮನುಷ್ಯರು ತಿಳಿಯುತ್ತಾರೆ ಮತ್ತು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ಇದು ಪ್ರತಿಯೊಬ್ಬರ ಕರ್ಮ ಲೆಕ್ಕಾಚಾರದ ಆಟವಾಗಿದೆ, ತಂದೆಯು ಯಾರಿಗೂ ದುಃಖವನ್ನು ಕೊಡುವುದಿಲ್ಲ, ಅವರು ಸುಖದ ಮಾರ್ಗವನ್ನು ತಿಳಿಸುವುದಕ್ಕಾಗಿಯೇ ಬರುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ಯಾರನ್ನೂ ದುಃಖಿಯನ್ನಾಗಿ ಮಾಡಿಲ್ಲ, ಇದು ನಿಮ್ಮದೇ ಕರ್ಮಗಳ ಫಲವಾಗಿದೆ.

ಗೀತೆ:
ಈ ಪಾಪದ ಪ್ರಪಂಚದಿಂದ.......................

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರನ್ನು ಕರೆಯುತ್ತಾರೆ? ತಂದೆಯನ್ನು. ಬಾಬಾ, ಬಂದು ಈ ಪಾಪದ ಕಲಿಯುಗೀ ಪ್ರಪಂಚದಿಂದ ಸತ್ಯಯುಗೀ ಪುಣ್ಯದ ಪ್ರಪಂಚದಲ್ಲಿ ಕರೆದುಕೊಂಡು ಹೋಗಿ. ಎಲ್ಲಾ ಜೀವಾತ್ಮರು ಈಗ ಕಲಿಯುಗಿಗಳಾಗಿದ್ದಾರೆ. ಅವರ ಬುದ್ಧಿಯು ಮೇಲೆ ಹೋಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆಯೋ ಯಥಾರ್ಥವಾಗಿ ನನ್ನನ್ನು ಯಾರೂ ತಿಳಿದುಕೊಂಡಿಲ್ಲ. ನಾವು ರಚಯಿತ ಮಾಲೀಕ ಅರ್ಥಾತ್ ಬೇಹದ್ದಿನ ತಂದೆ ಮತ್ತು ಅವರ ಬೇಹದ್ದಿನ ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲವೆಂದು ಋಷಿ-ಮುನಿಗಳೂ ಸಹ ಹೇಳುತ್ತಾರೆ. ಆತ್ಮಗಳು ಇರುವ ಸ್ಥಾನವು ಬ್ರಹ್ಮ ಮಹಾತತ್ವವಾಗಿದೆ ಎಲ್ಲಿ ಸೂರ್ಯ-ಚಂದ್ರರಿರುವುದಿಲ್ಲ. ಸೂರ್ಯ-ಚಂದ್ರರು ಮೂಲವತನದಲ್ಲಾಗಲಿ, ಸೂಕ್ಷ್ಮವತನದಲ್ಲಾಗಲಿ ಇರುವುದಿಲ್ಲ. ಬಾಕಿ ಈ ರಂಗಮಂಚದಲ್ಲಿ ದೀಪಗಳು ಬೇಕಲ್ಲವೆ ಆದ್ದರಿಂದ ಈ ರಂಗಮಂಟಪಕ್ಕೆ ರಾತ್ರಿಯಲ್ಲಿ ಚಂದ್ರ-ನಕ್ಷತ್ರಗಳ, ದಿನದಲ್ಲಿ ಸೂರ್ಯನ ಬೆಳಕು ಸಿಗುತ್ತದೆ. ಇವು ದೀಪಗಳಾಗಿವೆ. ಈ ದೀಪಗಳಿದ್ದರೂ ಸಹ ಇಲ್ಲಿ ಅಂಧಕಾರವೆಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ದೀಪಗಳನ್ನು ಬೆಳಗಿಸಬೇಕಾಗುತ್ತದೆ. ಸತ್ಯ-ತ್ರೇತಾಯುಗಕ್ಕೆ ದಿನವೆಂದು, ಭಕ್ತಿಮಾರ್ಗಕ್ಕೆ ರಾತ್ರಿಯಂದು ಹೇಳಲಾಗುವುದು. ಇದು ತಿಳಿದುಕೊಳ್ಳುವ ಮಾತಾಗಿದೆ. ಹೊಸ ಪ್ರಪಂಚವೇ ಮತ್ತೆ ಅವಶ್ಯವಾಗಿ ಹಳೆಯದಾಗುವುದು ಮತ್ತೆ ಹೊಸದಾಗುತ್ತದೆ ಆಗ ಹಳೆಯದರ ವಿನಾಶವು ಖಂಡಿತ ಆಗುವುದು. ಇದು ಬೇಹದ್ದಿನ ಪ್ರಪಂಚವಾಗಿದೆ. ರಾಜರ ಮನೆಗಳೂ ಸಹ ಬಹಳ ದೊಡ್ಡ-ದೊಡ್ಡದಾಗಿವೆ. ಇದು ಬೇಹದ್ದಿನ ಮನೆಯಾಗಿದೆ, ಮಂಟಪ ಅಥವಾ ಸ್ಟೇಜ್, ಇದಕ್ಕೆ ಕರ್ಮಕ್ಷೇತ್ರವೆಂದೂ ಕರೆಯಲಾಗುತ್ತದೆ. ಕರ್ಮವನ್ನು ಅವಶ್ಯವಾಗಿ ಮಾಡಬೇಕಾಗಿದೆ. ಎಲ್ಲಾ ಮನುಷ್ಯರಿಗಾಗಿ ಇದು ಕರ್ಮಕ್ಷೇತ್ರವಾಗಿದೆ. ಇದರಲ್ಲಿ ಎಲ್ಲರೂ ಕರ್ಮ ಮಾಡಲೇಬೇಕು, ಪಾತ್ರವನ್ನಭಿನಯಿಸಲೇಬೇಕಾಗಿದೆ. ಪ್ರತಿಯೊಂದು ಆತ್ಮನಿಗೆ ಪಾತ್ರವು ಮೊದಲೇ ಸಿಕ್ಕಿದೆ, ನಿಮ್ಮಲ್ಲಿಯೂ ಕೆಲವರೇ ಈ ಮಾತುಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ಇದು ಗೀತಾ ಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಎಂದಾದರೂ ವೃದ್ಧರು ಓದುತ್ತಾರೆಯೇ? ಇಲ್ಲಂತೂ ಯುವಕರು, ವೃದ್ಧರು ಎಲ್ಲರೂ ಓದುತ್ತೀರಿ. ವೇದಗಳ ಪಾಠಶಾಲೆಯಂದು ಹೇಳುವುದಿಲ್ಲ, ಅಲ್ಲಿ ಯಾವುದೇ ಲಕ್ಷ್ಯವಿರುವುದಿಲ್ಲ. ನಾವು ಇಷ್ಟು ವೇದ-ಶಾಸ್ತ್ರ ಇತ್ಯಾದಿಗಳನ್ನು ಓದುತ್ತೇವೆ ಆದರೆ ಇದರಿಂದ ನಾವು ಏನಾಗುತ್ತೇವೆಂದು ತಿಳಿದಿಲ್ಲ. ಯಾವುದೆಲ್ಲಾ ಸತ್ಸಂಗಗಳಿವೆಯೋ ಎಲ್ಲಿಯೂ ಗುರಿ-ಧ್ಯೇಯ ಇಲ್ಲ. ಈಗಂತೂ ಅವಕ್ಕೆ ಸತ್ಸಂಗಗಳೆಂದು ಹೇಳಿದರೆ ಸಂಕೋಚವಾಗುತ್ತದೆ. ಸತ್ಯ ತಂದೆಯು ಒಬ್ಬರೇ ಆಗಿದ್ದಾರೆ, ಸತ್ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಕೆಳಗೆ ಬೀಳಿಸುವುದು ಎಂದು ಇದಕ್ಕಾಗಿಯೇ ಹೇಳಲಾಗುವುದು. ಕೆಟ್ಟ ಸಂಗವು ಕಲಿಯುಗೀ ಮನುಷ್ಯರ ಸಂಗವಾಗಿದೆ, ಸತ್ಯ ಸಂಗವು ಒಂದೇ ಆಗಿದೆ, ಈಗ ನಿಮಗೆ ಆಶ್ಚರ್ಯವೆನಿಸುತ್ತದೆ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಹೇಗೆ ತಂದೆಯು ಕೊಡುತ್ತಾರೆ. ನಿಮಗಂತೂ ಖುಷಿಯಾಗಬೇಕು. ನೀವೀಗ ಸತ್ಯ-ಸತ್ಯವಾದ ಪಾಠಶಾಲೆಯಲ್ಲಿ ಕುಳಿತಿದ್ದೀರಿ. ಉಳಿದೆಲ್ಲವೂ ಅಸತ್ಯ ಪಾಠಶಾಲೆಗಳಾಗಿವೆ. ಆ ಸತ್ಸಂಗಗಳಿಂದ ಯಾವುದೇ ಗುರಿಯನ್ನು ತಲುಪುವುದಿಲ್ಲ. ಶಾಲಾ-ಕಾಲೇಜುಗಳಿಂದಲಾದರೂ ಏನಾದರೊಂದು ಸಾಧನೆ ಮಾಡಿ ಬರುತ್ತಾರೆ ಏಕೆಂದರೆ ಓದುತ್ತಾರೆ. ಉಳಿದಂತೆ ಇನ್ನೆಲ್ಲಿಯೂ ವಿದ್ಯಾಭ್ಯಾಸವಿಲ್ಲ, ಸತ್ಸಂಗಕ್ಕೂ ವಿದ್ಯೆಯಂದು ಹೇಳುವುದಿಲ್ಲ. ಶಾಸ್ತ್ರ ಇತ್ಯಾದಿಗಳನ್ನು ಓದಿ ತಮ್ಮ ಅಂಗಡಿಗಳನ್ನು ತೆರೆದು ಕುಳಿತಿದ್ದಾರೆ, ಅದರಿಂದ ಹಣ ಸಂಪಾದಿಸುತ್ತಾರೆ. ಸ್ವಲ್ಪ ಗ್ರಂಥವನ್ನು ಕಲಿತರೂ ಸಹ ಗುರುದ್ವಾರವನ್ನು ತೆರೆದು ಕುಳಿತು ಬಿಡುತ್ತಾರೆ. ಹೀಗೆ ಎಷ್ಟೊಂದು ತೆರೆಯುತ್ತಾರೆ. ಗುರುವಿನ ದ್ವಾರ ಅರ್ಥಾತ್ ಮನೆಯಂದು ಹೇಳುತ್ತಾರಲ್ಲವೆ. ಬಾಗಿಲು ತೆರೆದೊಡನೆಯೇ ಹೋಗಿ ಶಾಸ್ತ್ರಗಳನ್ನು ಓದುತ್ತಾರೆ. ನಿಮ್ಮ ಗುರುದ್ವಾರವು ಮುಕ್ತಿ ಮತ್ತು ಜೀವನ್ಮುಕ್ತಿಧಾಮವಾಗಿದೆ. ಇದು ಸದ್ಗುರುವಿನ ದ್ವಾರವಾಗಿದೆ. ಸದ್ಗುರುವಿನ ಹೆಸರೇನು? ಅಕಾಲಮೂರ್ತಿ. ಸದ್ಗುರುವಿಗೆ ಅಕಾಲಮೂರ್ತಿಯಂದು ಹೇಳುತ್ತಾರೆ. ಅವರು ಬಂದು ಮುಕ್ತಿ-ಜೀವನ್ಮುಕ್ತಿಯ ದ್ವಾರವನ್ನು ತೆರೆಯುತ್ತಾರೆ. ಅಕಾಲಮೂರ್ತಿಯಲ್ಲವೆ! ಯಾರನ್ನು ಕಾಲವೂ ಕಬಳಿಸಲು ಸಾಧ್ಯವಿಲ್ಲ. ಆತ್ಮವೂ ಬಿಂದುವಾಗಿದೆ ಅದನ್ನು ಕಾಲವು (ಮೃತ್ಯು) ಹೇಗೆ ಕಬಳಿಸುವುದು. ಆ ಆತ್ಮವು ಶರೀರವನ್ನು ಬಿಟ್ಟು ಹೊರಟು ಹೋಗುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದನ್ನು ತೆಗೆದುಕೊಳ್ಳುವುದು ಅಂದಮೇಲೆ ಇದರಲ್ಲಿ ಅಳುವುದೇನಿದೆ ಎಂಬ ಮಾತನ್ನು ತಿಳಿದುಕೊಳ್ಳುತ್ತಾರೆಯೇ! ಇದನ್ನು ನೀವು ತಿಳಿದುಕೊಂಡಿದ್ದೀರಿ - ಅನಾದಿ ನಾಟಕವು ಮಾಡಲ್ಪಟ್ಟಿದೆ, ಪ್ರತಿಯೊಬ್ಬರೂ ಪಾತ್ರವನ್ನಭಿನಯಿಸಲೇಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಸತ್ಯಯುಗದಲ್ಲಿ ನಷ್ಟಮೋಹಿಗಳಿರುತ್ತಾರೆ. ಮೋಹಜೀತ ರಾಜನ ಕಥೆಯಿದೆಯಲ್ಲವೆ. ಪಂಡಿತರು ತಿಳಿಸುತ್ತಾರೆ - ಮಾತೆಯರೂ ಸಹ ಕೇಳಿ-ಕೇಳಿ ಅನ್ಯರಿಗೆ ತಿಳಿಸಲು ಗ್ರಂಥವನ್ನಿಟ್ಟುಕೊಂಡು ಕುಳಿತು ಬಿಡುತ್ತಾರೆ, ಬಹಳ ಮಂದಿ ಹೋಗಿ ಕೇಳುತ್ತಾರೆ ಅದಕ್ಕೆ ಕನರಸವೆಂದು ಹೇಳುತ್ತಾರೆ. ಡ್ರಾಮಾದ ಪ್ಲಾನನುಸಾರ ಮನುಷ್ಯರು ಹೇಳುತ್ತಾರೆ - ನಮ್ಮ ದೋಷವೇನಿದೆ? ತಂದೆಯು ತಿಳಿಸುತ್ತಾರೆ - ನನ್ನನ್ನು ದುಃಖದಲ್ಲಿರುವಾಗ ಕರೆದುಕೊಂಡು ಹೋಗಿ ಎಂದು ನೀವು ಕರೆದಿರಿ. ಆದ್ದರಿಂದ ನಾನೀಗ ಬಂದಿದ್ದೇನೆ ಅಂದಮೇಲೆ ನಾನು ಹೇಳುವುದನ್ನು ಕೇಳಬೇಕಲ್ಲವೆ. ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಒಳ್ಳೆಯ ಮತವನ್ನು ಕೊಡುತ್ತಾರೆ ಅದನ್ನು ತೆಗೆದುಕೊಳ್ಳಬೇಕಲ್ಲವೆ ಆದರೆ ನಿಮ್ಮದೇನೂ ದೋಷವಿಲ್ಲ. ಇದು ನಾಟಕದಲ್ಲಿತ್ತು. ರಾಮ ರಾಜ್ಯ-ರಾವಣ ರಾಜ್ಯದ ಆಟವು ಮಾಡಲ್ಪಟ್ಟಿದೆ. ಆಟದಲ್ಲಿ ಯಾರಾದರೂ ಸೋಲುತ್ತಾರೆಂದರೆ ಅವರ ದೋಷವೇನಿದೆ? ಸೋಲು ಮತ್ತು ಗೆಲುವಾಗುತ್ತದೆ. ಇದರಲ್ಲಿ ಯುದ್ಧದ ಮಾತಿಲ್ಲ. ನಿಮಗೆ ರಾಜಧಾನಿಯಿತ್ತು, ಈ ಮಾತು ಮೊದಲು ನಿಮಗೆ ತಿಳಿದಿರಲಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ - ಯಾರು ಸೇವಾಧಾರಿಗಳಿದ್ದಾರೆಯೋ ಅವರ ಹೆಸರು ಪ್ರಸಿದ್ಧವಾಗಿದೆ. ದೆಹಲಿಯಲ್ಲಿ ಎಲ್ಲರಿಗಿಂತ ಸುಂದರವಾಗಿ ತಿಳಿಸಿಕೊಡುವವರು ಯಾರು? ಕೂಡಲೇ ಜಗದೀಶ ಸಹೋದರನ ಹೆಸರನ್ನು ತೆಗೆದುಕೊಳ್ಳುತ್ತೀರಿ. ನಿಮಗಾಗಿ ಮ್ಯಾಗ್ಜಿನ್ನ್ನು ಮುದ್ರಿಸುತ್ತಾರೆ. ಅದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಅನೇಕ ಪ್ರಕಾರದ ವಿಚಾರಗಳನ್ನು ಬರೆಯುತ್ತಾರೆ, ಬೃಜಮೋಹನ್ (ಸಹೋದರ) ಕೂಡ ಬರೆಯುತ್ತಾರೆ. ಬರೆಯುವುದೂ ಸಹ ಚಿಕ್ಕಮ್ಮನ ಮನೆಯಂತಲ್ಲ. ಅವಶ್ಯವಾಗಿ ವಿಚಾರ ಸಾಗರ ಮಂಥನ ಮಾಡುತ್ತಾರೆ, ಒಳ್ಳೆಯ ಸರ್ವೀಸ್ ಮಾಡುತ್ತಾರೆ. ಈ ಮಾಸ ಪತ್ರಿಕೆಗಳನ್ನು ಓದಿ ಎಷ್ಟೊಂದು ಮಂದಿ ಖುಷಿ ಪಡುತ್ತಾರೆ. ಮಕ್ಕಳಿಗೂ ರಿಫ್ರೆಷ್ಮೆಂಟ್ ಸಿಗುತ್ತದೆ. ಕೆಲಕೆಲವರು ಪ್ರದರ್ಶನಿಯಲ್ಲಿ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ, ಇನ್ನೂ ಕೆಲವರು ಕರ್ಮ ಬಂಧನದಲ್ಲಿ ಸಿಕ್ಕಿಕೊಂಡಿದ್ದಾರೆ. ಆದ್ದರಿಂದ ಅಷ್ಟು ಮೇಲೆತ್ತಲು ಸಾಧ್ಯವಿಲ್ಲ. ಇದಕ್ಕೂ ಡ್ರಾಮಾ ಎಂದು ಹೇಳಬಹುದು. ಅಬಲೆಯರ ಮೇಲೆ ಅತ್ಯಾಚಾರಗಳಾಗುವುದು ಡ್ರಾಮಾದಲ್ಲಿ ಪಾತ್ರವಿದೆ. ಇಂತಹ ಪಾತ್ರವನ್ನು ಏಕೆ ಅಭಿನಯಿಸಿದಿರಿ ಎಂಬ ಪ್ರಶ್ನೆಯೇ ಬರುವುದಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಅದನ್ನು ಯಾರೇನೂ ಮಾಡಲು ಸಾಧ್ಯವಿಲ್ಲ. ನಾವೇನು ಅಪರಾಧ ಮಾಡಿದೆವು, ನಮಗೆ ಇಂತಹ ಪಾತ್ರವು ಸಿಕ್ಕಿದೆ ಎಂದು ಹೇಳುತ್ತಾರೆ ಆದರೆ ಇಲ್ಲಿ ಅಪರಾಧದ ಮಾತೇ ಇಲ್ಲ, ಇದು ಪಾತ್ರವಾಗಿದೆ. ದುಃಖವನ್ನು ಸಹಿಸಲು ಅಬಲೆಯರು ಯಾರಾದರೂ ನಿಮಿತ್ತರಾಗಬೇಕಲ್ಲವೆ. ಹಾಗೆ ಹೇಳುವುದಾದರೆ ನಮಗೇ ಇಂತಹ ಪಾತ್ರವೇಕೆ ಎಂದು ಎಲ್ಲರೂ ಹೇಳತೊಡಗುತ್ತಾರೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಪುರುಷರ ಮೇಲೂ ಅತ್ಯಾಚಾರಗಳಾಗುತ್ತವೆ, ಈ ಮಾತುಗಳಲ್ಲಿ ಎಷ್ಟೊಂದು ಸಹನಶೀಲತೆಯಿರಬೇಕು! ಮಾಯೆಯ ವಿಘ್ನಗಳು ಬಹಳ ಬರುತ್ತವೆ, ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರೆಂದರೆ ಸ್ವಲ್ಪ ಪರಿಶ್ರಮವನ್ನೂ ಪಡಬೇಕಾಗುತ್ತದೆ. ನಾಟಕದಲ್ಲಿ ಆಪತ್ತುಗಳು, ಕಿರಿಕಿರಿ, ಏರುಪೇರುಗಳು ಎಷ್ಟೊಂದಿವೆ. ಅಬಲೆಯರ ಮೇಲೆ ಅತ್ಯಾಚಾರವೆಂದು ಬರೆಯಲ್ಪಟ್ಟಿದೆ, ರಕ್ತದ ನದಿಗಳು ಹರಿಯುವುದು. ಎಲ್ಲಿಯೂ ರಕ್ಷಣೆಯಿರುವುದಿಲ್ಲ. ಈಗಂತೂ ಮುಂಜಾನೆ ತರಗತಿಗಾಗಿ ಸೇವಾಕೇಂದ್ರಗಳಿಗೆ ಹೋಗುತ್ತೀರಿ. ಆದರೆ ಇಂತಹ ಸಮಯವೂ ಬರುವುದು - ಯಾವಾಗ ನೀವು ಹೊರಗಡೆ ಹೋಗುವುದಕ್ಕೇ ಸಾಧ್ಯವಾಗುವುದಿಲ್ಲ. ದಿನ-ಪ್ರತಿದಿನ ಕಳೆದಂತೆ ಕಾಲವು ಹದಗೆಡುತ್ತಾ ಹೋಗುತ್ತದೆ ಮತ್ತು ಇದೆಲ್ಲವೂ ಆಗಲೇಬೇಕಾಗಿದೆ. ಇನ್ನೂ ಬಹಳಷ್ಟು ದುಃಖದ ದಿನಗಳು ಬಹಳ ತೀಕ್ಷ್ಣವಾಗಿ ಬರುತ್ತದೆ. ಕಾಯಿಲೆ ಇತ್ಯಾದಿಗಳಲ್ಲಿ ದುಃಖವಾದಾಗ ಭಗವಂತನನ್ನು ನೆನಪು ಮಾಡುತ್ತಾರೆ, ಕೂಗುತ್ತಾರೆ. ಈಗ ನಿಮಗೆ ತಿಳಿದಿದೆ - ಇನ್ನು ಕೆಲವೇ ದಿನಗಳು ಉಳಿದಿವೆ ನಂತರ ನಾವು ನಮ್ಮ ಶಾಂತಿಧಾಮ-ಸುಖಧಾಮಕ್ಕೆ ಹೋಗುತ್ತೇವೆ. ಪ್ರಪಂಚದವರಿಗಂತೂ ಇದೂ ತಿಳಿದಿಲ್ಲ. ಈಗ ನೀವು ಮಕ್ಕಳು ಅನುಭವ ಮಾಡುತ್ತೀರಲ್ಲವೆ. ತಂದೆಯನ್ನು ಈಗ ಪೂರ್ಣ ರೀತಿಯಿಂದ ಅರಿತುಕೊಂಡಿದ್ದೀರಿ. ಆ ಮನುಷ್ಯರೆಲ್ಲರೂ ಪರಮಾತ್ಮನು ಲಿಂಗ ರೂಪವೆಂದು ತಿಳಿದುಕೊಂಡಿದ್ದಾರೆ. ಶಿವಲಿಂಗದ ಪೂಜೆಯನ್ನೂ ಮಾಡುತ್ತಾರೆ. ನೀವು ಶಿವನ ಮಂದಿರದಲ್ಲಿ ಹೋಗುತ್ತಿದ್ದಿರಿ ಅಂದಾಗ ಈ ಶಿವಲಿಂಗವೆಂದರೇನು ಎಂಬ ವಿಚಾರವನ್ನೆಂದಾದರೂ ಮಾಡಿದ್ದೀರಾ? ಅವಶ್ಯವಾಗಿ ಈ ಜಡ ಲಿಂಗವಿದೆಯೆಂದರೆ ಚೈತನ್ಯವೂ ಇರುವುದು! ಅಂದಮೇಲೆ ಇದೇನು? ಭಗವಂತ ರಚಯಿತನು ಮೇಲಿದ್ದಾರೆ. ಕೇವಲ ಇದು ಪೂಜೆಗಾಗಿ ಅವರ ಗುರುತಾಗಿದೆ. ನೀವು ಪೂಜ್ಯರಾಗಿದ್ದಾಗ ಈ ವಸ್ತುಗಳಿರುವುದಿಲ್ಲ. ಶಿವ ಕಾಶಿಯ ಮಂದಿರದಲ್ಲಿ ಹೋಗುತ್ತಾರೆ ಆದರೆ ಭಗವಂತನು ನಿರಾಕಾರ, ನಾವು ಅವರ ಮಕ್ಕಳಾಗಿದ್ದೇವೆ, ಆ ತಂದೆಯ ಮಕ್ಕಳಾಗಿಯೂ ನಾವೇಕೆ ದುಃಖಿಯಾಗಿದ್ದೇವೆಂದು ಯಾರಿಗೂ ಅರ್ಥವಾಗುವುದಿಲ್ಲ. ಇದು ವಿಚಾರ ಮಾಡುವ ಮಾತಲ್ಲವೆ. ಆತ್ಮವೂ ಹೇಳುತ್ತದೆ - ನಾವು ಪರಮಾತ್ಮನ ಸಂತಾನರಾಗಿದ್ದೇವೆ ಅಂದಮೇಲೆ ನಾವೇಕೆ ದುಃಖಿಗಳಾಗಿದ್ದೇವೆ? ತಂದೆಯು ಸುಖ ಕೊಡುವವರಾಗಿದ್ದಾರೆ. ಹೇ ಭಗವಂತ, ನಮ್ಮ ದುಃಖವನ್ನು ಕಳೆಯಿರಿ ಎಂದು ತಂದೆಯನ್ನೇ ಕರೆಯುತ್ತಾರೆ ಅಂದಮೇಲೆ ಅದನ್ನು ಹೇಗೆ ಕಳೆಯುವುದು? ಸುಖ-ದುಃಖ, ಇದು ತಮ್ಮ ಕರ್ಮಗಳ ಲೆಕ್ಕಾಚಾರವಾಗಿದೆ. ಸುಖಕ್ಕೆ ಪ್ರತಿಯಾಗಿ ಸುಖವನ್ನು, ದುಃಖಕ್ಕೆ ಫಲವಾಗಿ ದುಃಖವನ್ನು ಪರಮಾತ್ಮನು ಕೊಡುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಎಲ್ಲವನ್ನು ಅವರ ಮೇಲೆ ಹಾಕಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೆಂದೂ ದುಃಖವನ್ನು ಕೊಡುವುದಿಲ್ಲ, ನಾನು ಅರ್ಧಕಲ್ಪಕ್ಕಾಗಿ ಸುಖವನ್ನು ಕೊಟ್ಟು ಹೋಗುತ್ತೇನೆ, ಇದು ಸುಖ ಮತ್ತು ದುಃಖದ ಆಟವಾಗಿದೆ. ಕೇವಲ ಸುಖದ ಆಟವೇ ನಡೆಯುವಂತಿದ್ದರೆ ಮತ್ತೆ ಈ ಭಕ್ತಿ ಇತ್ಯಾದಿಗಳೇನೂ ಇರುತ್ತಿರಲಿಲ್ಲ. ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಈ ಭಕ್ತಿ ಇತ್ಯಾದಿಗಳೆಲ್ಲವನ್ನೂ ಮಾಡುತ್ತಾರೆ. ಈಗ ತಂದೆಯು ಇದೆಲ್ಲಾ ಸಮಾಚಾರವನ್ನು ತಿಳಿಸುತ್ತಾರೆ. ನೀವು ಮಕ್ಕಳು ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ! ಆ ಋಷಿ-ಮುನಿ ಮೊದಲಾದವರಿಗೆ ಎಷ್ಟೊಂದು ಹೆಸರಿದೆ! ನೀವು ರಾಜ ಋಷಿಗಳು, ಅವರು ಹಠಯೋಗದ ಋಷಿಗಳಾಗಿದ್ದಾರೆ. ಋಷಿ ಅರ್ಥಾತ್ ಪವಿತ್ರರು, ನೀವು ಸ್ವರ್ಗದ ರಾಜರಾಗುತ್ತೀರಿ ಅಂದಮೇಲೆ ಅವಶ್ಯವಾಗಿ ಪವಿತ್ರರಾಗಬೇಕಾಗುವುದು. ಸತ್ಯ-ತ್ರೇತಾಯುಗದಲ್ಲಿ ಯಾರ ರಾಜ್ಯವಿತ್ತು, ಅದು ಪುನಃ ಬರುವುದು. ಉಳಿದೆಲ್ಲರೂ ಕೊನೆಯಲ್ಲಿ ಬರುತ್ತಾರೆ. ನಾವೀಗ ಶ್ರೀಮತದನುಸಾರ ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವೀಗ ಹೇಳುತ್ತೀರಿ ಅಂದಮೇಲೆ ಹಳೆಯ ಪ್ರಪಂಚದ ವಿನಾಶವಾಗುವುದರಲ್ಲಿಯೂ ಸಮಯವು ಹಿಡಿಸುತ್ತದೆಯಲ್ಲವೆ. ಸತ್ಯಯುಗವು ಬರಲಿದೆ, ಕಲಿಯುಗವು ಹೋಗುವುದಿದೆ.

ಎಷ್ಟು ದೊಡ್ಡ ಪ್ರಪಂಚವಾಗಿದೆ, ಒಂದೊಂದು ನಗರವೂ ಎಷ್ಟೊಂದು ಜನಸಂಖ್ಯೆಯಿಂದ ತುಂಬಿದೆ. ಧನವಂತ ವ್ಯಕ್ತಿಗಳು ಪ್ರಪಂಚವನ್ನೇ ಸುತ್ತಿ ಬರುತ್ತಾರೆ. ಆದರೆ ಇಲ್ಲಿ ಇಡೀ ಪ್ರಪಂಚವನ್ನಂತೂ ಯಾರೂ ನೋಡಲು ಸಾಧ್ಯವಿಲ್ಲ. ಹಾ! ಸತ್ಯಯುಗದಲ್ಲಿ ನೋಡಬಹುದು ಏಕೆಂದರೆ ಸತ್ಯಯುಗದಲ್ಲಿ ಒಂದು ರಾಜ್ಯವೇ ಇರುತ್ತದೆ, ಕೆಲವರೇ ರಾಜರಿರುತ್ತಾರೆ. ಎಲ್ಲಾದರೂ ಇಲ್ಲಂತೂ ನೋಡಿ, ಎಷ್ಟು ದೊಡ್ಡ ಪ್ರಪಂಚವಾಗಿದೆ! ಇಷ್ಟು ವಿಸ್ತಾರವಾದ ಪ್ರಪಂಚವನ್ನು ಸುತ್ತಾಡುವವರು ಯಾರು! ಅಲ್ಲಿ ನಿಮಗೆ ಸಮುದ್ರದ ಮೂಲಕ ಹೋಗುವ ಅವಶ್ಯಕತೆಯೂ ಇರುವುದಿಲ್ಲ. ಅಲ್ಲಿ ಶ್ರೀಲಂಕಾ, ಬರ್ಮಾ ಇತ್ಯಾದಿಗಳಿರುತ್ತವೆಯೇ? ಇಲ್ಲ. ಇವೇನೂ ಇರುವುದಿಲ್ಲ. ಈ ಕರಾಚಿಯೂ ಇರುವುದಿಲ್ಲ. ನೀವೆಲ್ಲರೂ ಸಿಹಿ ನೀರಿನ ನದಿಗಳ ತೀರದಲ್ಲಿರುತ್ತೀರಿ. ಹೊಲ-ಗದ್ದೆಗಳೆಲ್ಲವೂ ಇರುತ್ತದೆ. ಸೃಷ್ಟಿಯಂತೂ ದೊಡ್ಡದಾಗಿರುತ್ತದೆ, ಆದರೆ ಮನುಷ್ಯರು ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತಾರೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ಮತ್ತೆ ಅಲ್ಲಿಗೆ ಹೋಗಿ (ವಿದೇಶ) ತಮ್ಮ ರಾಜ್ಯವನ್ನು ಸ್ಥಾಪನೆ ಮಾಡಿದರು, ನಿಧಾನ-ನಿಧಾನವಾಗಿ ಅದನ್ನು ಆಕ್ರಮಿಸುತ್ತಾ ಹೋದರು. ತಮ್ಮ ರಾಜ್ಯ ಸ್ಥಾಪನೆ ಮಾಡಿದಿರಿ, ಈಗಂತೂ ಎಲ್ಲವನ್ನೂ ಬಿಡಬೇಕಾಗುವುದು. ಒಂದು ಭಾರತವಷ್ಟೇ ಯಾರ ರಾಜ್ಯವನ್ನೂ ಕಬಳಿಸಲಿಲ್ಲ, ಏಕೆಂದರೆ ಭಾರತವು ಮೂಲತಃ ಅಹಿಂಸಕವಾಗಿತ್ತಲ್ಲವೆ. ಭಾರತವೇ ಇಡೀ ಪ್ರಪಂಚದ ಮಾಲೀಕನಾಗಿತ್ತು ನಂತರ ಉಳಿದೆಲ್ಲರೂ ಕೊನೆಯಲ್ಲಿ ಬಂದರು. ಅವರು ತುಂಡು-ತುಂಡಾಗಿ ಮಾಡುತ್ತಾ ಹೋಗುತ್ತಾರೆ. ನೀವು ಯಾರ ಆಸ್ತಿಯನ್ನೂ ಕಬಳಿಸಲಿಲ್ಲ, ಬ್ರಿಟೀಷರು ಕಬಳಿಸಿದ್ದಾರೆ. ನೀವು ಭಾರತವಾಸಿಗಳನ್ನು ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ನೀವೆಲ್ಲಿಗೂ ಹೋಗಲಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿವೆ. ವೃದ್ಧ ಮಾತೆಯರು ಇಷ್ಟೆಲ್ಲಾ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಏನನ್ನೂ ಓದಿಲ್ಲ, ಇದು ಒಳ್ಳೆಯದಾಗಿದೆ ಏಕೆಂದರೆ ಈಗ ಓದಿರುವುದೆಲ್ಲವನ್ನೂ ಬುದ್ಧಿಯಿಂದ ತೆಗೆದು ಹಾಕಬೇಕಾಗಿದೆ. ಕೇವಲ ಒಂದು ಮಾತನ್ನು ಧಾರಣೆ ಮಾಡಿಕೊಳ್ಳಿ - ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿರಿ. ಬಾಬಾ, ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ, ಅರ್ಪಿತರಾಗುತ್ತೇವೆ ಎಂದು ನೀವು ಹೇಳುತ್ತಿದ್ದಿರಲ್ಲವೆ ಅಂದಮೇಲೆ ಈಗ ನನಗೆ ಬಲಿಹಾರಿಯಾಗಿರಿ. ಹೇಗೆ ಲೇವಾದೇವಿಯಿರುತ್ತದೆಯಲ್ಲವೆ. ವಿವಾಹದ ಸಮಯದಲ್ಲಿ ಸ್ತ್ರೀ-ಪುರುಷರು ಒಬ್ಬರು ಇನ್ನೊಬ್ಬರ ಕೈಯಲ್ಲಿ ಉಪ್ಪನ್ನು ಕೊಡುತ್ತಾರೆ. ಇಲ್ಲಿ ತಂದೆಗೂ ಹೇಳುತ್ತೀರಿ - ಬಾಬಾ, ನಾವು ತಮಗೆ ಹಳೆಯದೆಲ್ಲವನ್ನೂ ಕೊಡುತ್ತೇವೆ. ಎಲ್ಲರೂ ಮರಣ ಹೊಂದುವುದಂತೂ ಖಂಡಿತ, ಇದೆಲ್ಲವೂ ಸಮಾಪ್ತಿಯಾಗಲಿದೆ. ಆದ್ದರಿಂದ ಇದಕ್ಕೆ ಪ್ರತಿಯಾಗಿ ತಾವು ನಮಗೆ ಹೊಸ ಪ್ರಪಂಚದಲ್ಲಿ ಕೊಡಿ. ತಂದೆಯು ಬರುವುದೇ ಎಲ್ಲರನ್ನೂ ಕರೆದುಕೊಂಡು ಹೋಗಲು, ಮಹಾಕಾಲನಲ್ಲವೆ! ಇವರು ಯಾರೋ ಮಹಾಕಾಲ ಬಂದಿದ್ದಾರೆ, ಎಲ್ಲರನ್ನೂ ಓಡಿಸಿಕೊಂಡು ಹೋಗುತ್ತಿದ್ದಾರೆಂದು ಆರಂಭದಲ್ಲಿ ಸಿಂಧ್ನಲ್ಲಿಯೂ ಹೇಳುತ್ತಿದ್ದರು. ನೀವು ಮಕ್ಕಳಂತೂ ಖುಷಿಯಾಗುತ್ತೀರಿ. ತಂದೆಯು ಕರೆದುಕೊಂಡು ಹೋಗುವುದಕ್ಕಾಗಿಯೇ ಬರುತ್ತಾರೆ. ನಾವು ಖುಷಿಯಿಂದ ನಮ್ಮ ಮನೆಗೆ ಹೋಗುತ್ತೇವೆ. ಸಹನೆಯನ್ನೂ ಮಾಡಬೇಕಾಗುವುದು. ಒಳ್ಳೊಳ್ಳೆಯ ದೊಡ್ಡ-ದೊಡ್ಡ ಮನೆತನಗಳ ಮಾತೆಯರೂ ಸಹ ಪೆಟ್ಟು ತಿನ್ನುತ್ತಾರೆ. ನೀವು ಸತ್ಯ ಸಂಪಾದನೆ ಮಾಡಿಕೊಳ್ಳುತ್ತೀರಿ. ಆದರೆ ಇದು ಮನುಷ್ಯರಿಗೆ ಗೊತ್ತಿದೆಯೇ! ಅವರು ಕಲಿಯುಗೀ ಶೂದ್ರ ಸಂಪ್ರದಾಯದವರಾಗಿದ್ದಾರೆ, ನೀವು ಸಂಗಮಯುಗಿಗಳು ಪುರುಷೋತ್ತಮರಾಗುತ್ತಿದ್ದೀರಿ. ನಿಮಗೆ ತಿಳಿದಿದೆ ಮೊಟ್ಟ ಮೊದಲನೆಯದಾಗಿ ಪುರುಷೋತ್ತಮರು ಈ ಲಕ್ಷ್ಮೀ-ನಾರಾಯಣರಲ್ಲವೆ, ಇವರ ನಂತರ ದರ್ಜೆಯು ಕಡಿಮೆಯಾಗುತ್ತಾ ಹೋಗುವುದು. ಮೇಲಿಂದ ಕೆಳಗಡೆ ಬರುತ್ತಾ ಇರುತ್ತಾರೆ ನಂತರ ನಿಧಾನ-ನಿಧಾನವಾಗಿ ಕೆಳಗಿಳಿಯುತ್ತಾರೆ. ಈ ಸಮಯದಲ್ಲಿ ಎಲ್ಲರೂ ಕನಿಷ್ಟ ಮಟ್ಟದಲ್ಲಿದ್ದಾರೆ. ವೃಕ್ಷವು ಹಳೆಯದಾಗಿ ಬಿಟ್ಟಿದೆ, ಇದರ ಬೇರುಗಳೂ ಸಡಿಲವಾಗಿದೆ. ಇದು ಪುನಃ ಸ್ಥಾಪನೆಯಾಗುತ್ತಿದೆ. ಸಸಿಯನ್ನು ನಾಟಿ ಮಾಡಲಾಗುತ್ತದೆಯಲ್ಲವೆ. ಸಸಿಯು ಎಷ್ಟು ಚಿಕ್ಕದಾಗಿರುತ್ತದೆ ಮತ್ತೆ ಅದರಿಂದ ಎಷ್ಟು ದೊಡ್ಡ ವೃಕ್ಷವು ವೃದ್ಧಿಯಾಗುತ್ತಾ ಹೋಗುತ್ತದೆ. ಇದೂ ಸಹ ವೃಕ್ಷವಾಗಿದೆ, ಸತ್ಯಯುಗದಲ್ಲಿ ಬಹಳ ಚಿಕ್ಕದಾದ ಸಸಿಯಾಗಿರುತ್ತದೆ. ಈಗ ಎಷ್ಟೊಂದು ಹೆಮ್ಮರವಾಗಿದೆ! ಮನುಷ್ಯ ಸೃಷ್ಟಿಯ ವಿಭಿನ್ನ ಹೂಗಳು ಎಷ್ಟೊಂದು ಒಂದೇ ವೃಕ್ಷದಲ್ಲಿ ಎಷ್ಟೊಂದು ವಿಭಿನ್ನತೆಯಿದೆ. ಮನುಷ್ಯರ ವಿವಿಧ ಧರ್ಮಗಳ ವೃಕ್ಷವಾಗಿದೆ. ಒಂದು ಮುಖವು ಇನ್ನೊಬ್ಬರಿಗೆ ಹೋಲುವುದಿಲ್ಲ. ಮಾಡಿ-ಮಾಡಲ್ಪಟ್ಟ ನಾಟಕವಲ್ಲವೆ. ಒಬ್ಬರ ಪಾತ್ರದಂತೆ ಇನ್ನೊಬ್ಬರ ಪಾತ್ರವಿರಲು ಸಾಧ್ಯವಿಲ್ಲ. ಇದಕ್ಕೆ ಸೃಷ್ಟಿಯ ಮಾಡಿ-ಮಾಡಲ್ಪಟ್ಟ ಬೇಹದ್ದಿನ ನಾಟಕವೆಂದು ಹೇಳಲಾಗುತ್ತದೆ. ಇದರಲ್ಲಿ ಕೃತಕವಾದುದು ಬಹಳ ಇದೆ. ಯಾವುದು ಅಪ್ಪಟ ವಸ್ತುವಾಗಿರುವುದೋ ಅದು ಸಮಾಪ್ತಿಯೂ ಆಗುತ್ತದೆ. ಈ ಚಿತ್ರ ಇತ್ಯಾದಿಗಳೂ ಸಹ ಸತ್ಯವಾದವುಗಳಲ್ಲ. ಬ್ರಹ್ಮನ ಮುಖವನ್ನೂ ಸಹ ಮತ್ತೆ 5000 ವರ್ಷಗಳ ನಂತರವೇ ನೀವು ನೋಡುತ್ತೀರಿ. ಈ ಡ್ರಾಮಾದ ರಹಸ್ಯವನ್ನು ತಿಳಿದುಕೊಳ್ಳುವುದರಲ್ಲಿ ಬುದ್ಧಿಯು ಬಹಳ ವಿಶಾಲವಾಗಿರಬೇಕು. ಮತ್ತೇನನ್ನೂ ತಿಳಿದುಕೊಳ್ಳಬೇಡಿ ಕೇವಲ ಒಂದು ಮಾತನ್ನು ಬುದ್ಧಿಯಲ್ಲಿಡಿ - ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಬಾಬಾ, ನಾವು ತಮ್ಮನ್ನೇ ನೆನಪು ಮಾಡುತ್ತೇನೆ ಎಂದು ಆತ್ಮವು ಹೇಳುತ್ತದೆ. ಇದು ಸಹಜವಲ್ಲವೆ. ಕೈಗಳಿಂದ ಕರ್ಮವನ್ನು ಮಾಡುತ್ತಿರಿ ಮತ್ತು ಬುದ್ಧಿಯಿಂದ ತಂದೆಯನ್ನು ನೆನಪು ಮಾಡುತ್ತಾ ಇರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸಹನಶೀಲತೆಯ ಗುಣವನ್ನು ಧಾರಣೆ ಮಾಡಿಕೊಂಡು ಮಾಯೆಯ ವಿಘ್ನಗಳಲ್ಲಿ ಪಾರಾಗಬೇಕಾಗಿದೆ. ಅನೇಕ ಆಪತ್ತುಗಳು ಬರುತ್ತವೆ, ಅತ್ಯಾಚಾರಗಳಾಗುತ್ತವೆ, ಇಂತಹ ಸಮಯದಲ್ಲಿ ಸಹನೆ ಮಾಡುತ್ತಾ ತಂದೆಯ ನೆನಪಿನಲ್ಲಿರಬೇಕಾಗಿದೆ. ಸತ್ಯ ಸಂಪಾದನೆ ಮಾಡಿಕೊಳ್ಳಬೇಕು.

2. ವಿಶಾಲ ಬುದ್ಧಿಯವರಾಗಿ ಈ ಮಾಡಿ-ಮಾಡಲ್ಪಟ್ಟ ನಾಟಕವನ್ನು ಚೆನ್ನಾಗಿ ಅರಿತುಕೊಳ್ಳಬೇಕಾಗಿದೆ, ಈ ನಾಟಕದ ಲೀಲೆಯು ಮಾಡಲ್ಪಟ್ಟಿದೆ. ಆದ್ದರಿಂದ ಇದರಲ್ಲಿ ಪ್ರಶ್ನೆಯು ಉದ್ಭವಿಸಲು ಸಾಧ್ಯವಿಲ್ಲ. ತಂದೆಯು ಯಾವ ಒಳ್ಳೆಯ ಮತವನ್ನು ಕೊಡುವರೋ ಅದರಂತೆಯೇ ನಡೆಯುತ್ತಿರಬೇಕಾಗಿದೆ.

ವರದಾನ:
ತಂದೆಯ ಸಮಾನ ಿಯಾಗಿ ಪ್ರತಿಯೊಬ್ಬರ ಹೃದಯಕ್ಕೆ ಆರಾಮ ಕೊಡುವಂತಹ ಮಾಸ್ಟರ್ ದಿಲಾರಾಮ ಭವ.

ಯಾರು ತಂದೆಯ ಸಮಾನ ವರದಾನಿ ಮೂರ್ತಿ ಮಕ್ಕಳಿದ್ದಾರೆ ಅವರು ಎಂದೂ ಯಾರದೇ ಬಲಹೀನತೆಗಳನ್ನು ನೋಡುವುದಿಲ್ಲ, ಅವರು ಎಲ್ಲರ ಮೇಲೆ ದಯಾಹೃದಯಿಗಳಾಗಿರುತ್ತಾರೆ. ಹೇಗೆ ತಂದೆ ಯಾರದೇ ಬಲಹೀನತೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ, ಅದೇ ರೀತಿ ವರದಾನಿ ಮಕ್ಕಳೂ ಸಹ ಯಾರದೇ ಬಲಹೀನತೆಗಳನ್ನು ಹೃದಯದಲ್ಲಿ ಧಾರಣೆ ಮಾಡುವುದಿಲ್ಲ, ಅವರು ಪ್ರತಿಯೊಬ್ಬರ ಹೃದಯಕ್ಕೆ ಆರಾಮ ಕೊಡುವಂತಹ ಮಾಸ್ಟರ್ ದಿಲಾರಾಮ ಆಗಿರುತ್ತಾರೆ ಆದ್ದರಿಂದ ಜೊತೆಗಾರರಿರಲಿ ಅಥವಾ ಪ್ರಜೆ ಎಲ್ಲರೂ ಅವರ ಗುಣಗಾನ ಮಾಡುತ್ತಾರೆ. ಎಲ್ಲರಿಗೆ ಒಳಗಿನಿಂದ ಇದೇ ಆಶೀರ್ವಾದ ಹೊರಡುತ್ತೆ ಇವರು ನಮಗೆ ಸದಾ ಸ್ನೇಹಿ ಸಹಯೋಗಿಯಾಗಿದ್ದಾರೆ ಎಂದು.

ಸ್ಲೋಗನ್:
ಯಾರು ಸದಾ ನಿಶ್ಚಿಂತ ಚಕ್ರವರ್ತಿಯಾಗಿದ್ದಾರೆ, ಅವರೇ ಸಂಗಮಯುಗದಲ್ಲಿ ಶ್ರೇಷ್ಠ ಆತ್ಮರು ಆಗಿದ್ದಾರೆ.