14.11.23         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಸರ್ವೀಸಿನಲ್ಲಿ ವಿಘ್ನಗಳು ಅವಶ್ಯವಾಗಿ ಬರುತ್ತವೆ, ತಾವು ಕಷ್ಟವನ್ನು ಸಹನೆ ಮಾಡಿಯೂ ಈ ಸರ್ವೀಸಿನಲ್ಲಿ ತತ್ಫರರಾಗಿರಬೇಕು, ದಯಾಹೃದಯಿಗಳಾಗಬೇಕಾಗಿದೆ”

ಪ್ರಶ್ನೆ:
ಯಾರಿಗೆ ಅಂತಿಮ ಜನ್ಮದ ಸ್ಮೃತಿಯಿರುತ್ತದೆಯೋ ಅವರ ಚಿಹ್ನೆಗಳು ಏನಾಗಿರುವುದು?

ಉತ್ತರ:
ಅವರ ಬುದ್ಧಿಯಲ್ಲಿರುವುದು - ಈಗ ಈ ಪ್ರಪಂಚದಲ್ಲಿ ಇನ್ನೊಂದು ಜನ್ಮವನ್ನು ನಾವೂ ತೆಗೆದುಕೊಳ್ಳಬಾರದು ಮತ್ತು ಅನ್ಯರಿಗೆ ಜನ್ಮವನ್ನು ಕೊಡಲೂಬಾರದು. ಇದು ಪಾಪಾತ್ಮರ ಪ್ರಪಂಚವಾಗಿದೆ. ಈಗ ಇದರ ವೃದ್ಧಿಯು ಬೇಕಿಲ್ಲ. ಇದು ವಿನಾಶವಾಗಬೇಕಾಗಿದೆ. ನಾವು ಈ ಹಳೆಯ ವಸ್ತ್ರಗಳನ್ನು ಕಳಚಿ ನಮ್ಮ ಮನೆಗೆ ಹೋಗುತ್ತೇವೆ. ಈ ನಾಟಕವು ಈಗ ಮುಕ್ತಾಯವಾಯಿತು.

ಗೀತೆ:
ಹೊಸ ಯುಗದ ಮೊಗ್ಗುಗಳು....

ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ನೀವು ಮಕ್ಕಳು ಪ್ರತಿಯೊಬ್ಬರ ಜ್ಯೋತಿಯನ್ನು ಬೆಳಗಿಸಬೇಕಾಗಿದೆ. ಇದು ನಿಮ್ಮ ಬುದ್ಧಿಯಲ್ಲಿದೆ. ತಂದೆಗೂ ಸಹ ಬೇಹದ್ದಿನ ಚಿಂತನೆಯಿರುತ್ತದೆ - ಮನುಷ್ಯ ಮಾತ್ರರಿಗೆ ಮುಕ್ತಿಯ ಮಾರ್ಗವನ್ನು ತಿಳಿಸಬೇಕು. ತಂದೆಯು ಬರುವುದೇ ಮಕ್ಕಳ ಸೇವೆ ಮಾಡಲು, ದುಃಖದಿಂದ ಬಿಡಿಸಲು. ಆದರೆ ಇದು ದುಃಖವಾಗಿದೆ ಅಂದಮೇಲೆ ಸುಖದ ಯಾವುದಾದರೂ ಸ್ಥಾನವಿರಬೇಕೆಂದು ಮನುಷ್ಯರು ತಿಳಿದುಕೊಳ್ಳುವುದೇ ಇಲ್ಲ. ಶಾಸ್ತ್ರಗಳಲ್ಲಿ ಸುಖದ ಸ್ಥಾನವನ್ನು ದುಃಖದ ಸ್ಥಾನವನ್ನಾಗಿ ಮಾಡಿಬಿಟ್ಟಿದ್ದಾರೆ. ಈಗ ತಂದೆಯು ದಯಾಹೃದಯಿಯಾಗಿದ್ದಾರೆ. ನಾವು ದುಃಖಿಯಾಗಿದ್ದೇವೆ ಎಂಬುದನ್ನೂ ಸಹ ಮನುಷ್ಯರು ತಿಳಿದುಕೊಂಡಿಲ್ಲ ಏಕೆಂದರೆ ಸುಖ ಮತ್ತು ದುಃಖ ಕೊಡುವವರ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ಇದೂ ಸಹ ನಾಟಕದ ಪೂರ್ವ ನಿಶ್ಚಿತವಾಗಿದೆ. ಸುಖ ಎಂದು ಯಾವುದಕ್ಕೆ ಹೇಳುತ್ತಾರೆ, ದುಃಖವೆಂದು ಯಾವುದಕ್ಕೆ ಹೇಳುತ್ತಾರೆಂದು ಗೊತ್ತಿಲ್ಲ. ಈಶ್ವರನೇ ಸುಖ-ದುಃಖವನ್ನು ಕೊಡುತ್ತಾರೆಂದು ಹೇಳಿಬಿಡುತ್ತಾರೆ ಅಂದರೆ ಅವರ ಮೇಲೆ ಕಳಂಕವನ್ನು ಹೊರಿಸುತ್ತಾರೆ. ಈಶ್ವರ, ಯಾರನ್ನು ತಂದೆಯೆಂದು ಹೇಳುತ್ತಾರೆಯೋ ಅವರನ್ನೆ ತಿಳಿದುಕೊಂಡಿಲ್ಲ. ನಾನು ಮಕ್ಕಳಿಗೆ ಸುಖವನ್ನೇ ಕೊಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಈಗ ನೀವು ಮಕ್ಕಳಿಗೆ ಗೊತ್ತಿದೆ-ಬಾಬಾ ಪತಿತರನ್ನು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ನಾನು ಎಲ್ಲರನ್ನು ಮಧುರ ಮನೆಗೆ ಕರೆದುಕೊಂಡು ಹೋಗುತ್ತೇನೆಂದು ತಿಳಿಸುತ್ತಾರೆ. ಆ ಮಧುರ ಮನೆಯೂ ಸಹ ಪಾವನವಾಗಿದೆ. ಅಲ್ಲಿ ಯಾವುದೇ ಪತಿತ ಆತ್ಮಗಳಿರುವುದಿಲ್ಲ. ಆ ನೆಲೆಯನ್ನು ಯಾರೂ ಅರಿತುಕೊಂಡಿಲ್ಲ. ಇಂತಹವರು ನಿರ್ವಾಣಕ್ಕೆ ಹೋದರೆಂದು ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಬುದ್ಧನು ಪಾರನಿರ್ವಾಣಕ್ಕೆ ಹೋದರೆಂದರೆ ಅವಶ್ಯವಾಗಿ ಅಲ್ಲಿಯವರಾಗಿದ್ದರು, ಅಲ್ಲಿಗೇ ಹೋದರು. ಅಂದಮೇಲೆ ಅವರಂತೂ ಹೋದರು ಉಳಿದವರು ಹೇಗೆ ಹೋಗುವುದು? ಜೊತೆಯಂತೂ ಯಾರನ್ನೂ ಕರೆದುಕೊಂಡು ಹೋಗಲಿಲ್ಲ. ವಾಸ್ತವದಲ್ಲಿ ಅವರು ಹೋಗುವುದೇನೂ ಇಲ್ಲ ಆದ್ದರಿಂದ ಎಲ್ಲರೂ ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಾರೆ. ಪಾವನ ಪ್ರಪಂಚಗಳು ಎರಡು ಇವೆ. ಒಂದು ಮುಕ್ತಿಧಾಮ ಇನ್ನೊಂದು ಜೀವನ್ಮುಕ್ತಿಧಾಮ. ಶಿವಪುರಿ, ವಿಷ್ಣುಪುರಿ ಇದು ರಾವಣಪುರಿಯಾಗಿದೆ. ಪರಮಪಿತ ಪರಮಾತ್ಮನನ್ನು ರಾಮನೆಂದು ಸಹ ಹೇಳುತ್ತಾರೆ. ರಾಮರಾಜ್ಯವೆಂದು ಹೇಳಿದಾಗ ಬುದ್ಧಿಯು ಪರಮಾತ್ಮನ ಕಡೆ ಹೊರಟುಹೋಗುತ್ತದೆ. ಮನುಷ್ಯರಂತೂ ಎಲ್ಲರೂ ಪರಮಾತ್ಮನೆಂದು ಒಪ್ಪುವುದಿಲ್ಲ ಅಂದಾಗ ನಿಮಗೆ ದಯೆ ಬರುತ್ತದೆ. ತೊಂದರೆಯನ್ನಂತೂ ನೀವು ಸಹನೆ ಮಾಡಲೇಬೇಕಾಗುತ್ತದೆ.

ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದರಲ್ಲಿ ಈ ಜ್ಞಾನಯಜ್ಞದಲ್ಲಿ ಅನೇಕ ವಿಘ್ನಗಳು ಬರುತ್ತವೆ. ಗೀತೆಯ ಭಗವಂತನೂ ಸಹ ನಿಂದನೆಯನ್ನು ಸಹನೆ ಮಾಡಿದ್ದರಲ್ಲವೆ. ನಿಂದನೆಯು ಇವರಿಗೂ (ಬ್ರಹ್ಮಾ) ಮತ್ತು ನಿಮಗೂ ಆಗುತ್ತದೆ. ಆದ್ದರಿಂದಲೇ ಇವರು ಬಹಷಃ ಚೌತಿಯ ಚಂದ್ರಮನನ್ನು ನೋಡಿರಬೇಕು ಎಂದು ಹೇಳುತ್ತಾರಲ್ಲವೆ. ಇವೆಲ್ಲವೂ ದಂತಕಥೆಗಳಾಗಿವೆ. ಪ್ರಪಂಚದಲ್ಲಂತೂ ಎಷ್ಟೊಂದು ಕೊಳಕಿದೆ, ಮನುಷ್ಯರು ಏನೇನನ್ನೋ ತಿನ್ನುತ್ತಾರೆ, ಪ್ರಾಣಿಗಳನ್ನು ಸಾಯಿಸುತ್ತಾರೆ, ಏನೇನು ಮಾಡುತ್ತಾರೆ! ತಂದೆಯು ಬಂದು ಇವೆಲ್ಲಾ ಮಾತುಗಳಿಂದ ಬಿಡಿಸುತ್ತಾರೆ. ಪ್ರಪಂಚದಲ್ಲಿ ಎಷ್ಟೊಂದು ಹೊಡೆದಾಟವಿದೆ ಆದರೆ ನಿಮಗಾಗಿ ತಂದೆಯು ಎಷ್ಟೊಂದು ಸಹಜ ಮಾಡಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೆ, ಕೇವಲ ನೀವು ನನ್ನನ್ನು ನೆನಪು ಮಾಡಿದಾಗ ವಿಕರ್ಮಗಳು ವಿನಾಶವಾಗಿಬಿಡುತ್ತವೆ. ಎಲ್ಲರಿಗೂ ಒಂದೇ ಮಾತನ್ನು ತಿಳಿಸಿ. ತಂದೆಯು ಹೇಳುತ್ತಾರೆ - ತಮ್ಮ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿ. ನೀವು ಮೂಲತಃ ಅಲ್ಲಿಯ ನಿವಾಸಿಗಳಾಗಿದ್ದೀರಿ. ಸನ್ಯಾಸಿಗಳೂ ಸಹ ಅಲ್ಲಿ ಹೋಗುವುದಕ್ಕೋಸ್ಕರವೇ ಮಾರ್ಗವನ್ನು ತಿಳಿಸುತ್ತಾರೆ. ಒಂದುವೇಳೆ ಒಬ್ಬರು ನಿರ್ವಾಣಧಾಮಕ್ಕೆ ಹೋಗಿಬಿಟ್ಟರೆ ನಂತರ ಉಳಿದವರನ್ನು ಹೇಗೆ ಕರೆದುಕೊಂಡು ಹೋಗುವರು? ಅವರನ್ನು ಯಾರು ಕರೆದುಕೊಂಡು ಹೋಗುವುದು? ತಿಳಿದುಕೊಳ್ಳಿ, ಬುದ್ಧನು ನಿರ್ವಾಣಧಾಮಕ್ಕೆ ಹೋದರು ಆದರೆ ಅವರ ಅನುಯಾಯಿ ಬೌದ್ಧಿಯರಂತೂ ಇಲ್ಲಿಯೇ ಕುಳಿತಿದ್ದಾರೆ. ಅವರನ್ನೂ ಹಿಂತಿರುಗಿ ಕರೆದುಕೊಂಡು ಹೋಗಬೇಕಲ್ಲವೆ. ಯಾರು ಪೈಗಂಬರರಿದ್ದಾರೆ ಅವರೆಲ್ಲರ ಆತ್ಮಗಳು ಇಲ್ಲಿಯೇ ಇವೆ ಅಂದರೆ ಒಂದಲ್ಲ ಒಂದು ಶರೀರದಲ್ಲಿದ್ದಾರೆ ಎಂದು ಹೇಳುತ್ತಾರೆ. ಆದರೂ ಸಹ ಮಹಿಮೆ ಮಾಡುತ್ತಿರುತ್ತಾರೆ. ಒಳ್ಳೆಯದು ಧರ್ಮಸ್ಥಾಪನೆ ಮಾಡಿಹೋದರು ಮತ್ತೇನಾಯಿತು? ಮುಕ್ತಿಯಲ್ಲಿ ಹೋಗಲು ಮನುಷ್ಯರು ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ. ಅವರಂತೂ ಈ ಜಪ, ತಪ, ತೀರ್ಥ ಇತ್ಯಾದಿಗಳನ್ನು ಕಲಿಸಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಎಲ್ಲರ ಗತಿ-ಸದ್ಗತಿ ಮಾಡುವುದಕ್ಕೋಸ್ಕರವೇ ಬರುತ್ತೇನೆ. ಎಲ್ಲರನ್ನು ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಜೀವನ್ಮುಕ್ತಿಯಿರುತ್ತದೆ, ಒಂದೇ ಧರ್ಮವಿರುತ್ತದೆ. ಉಳಿದೆಲ್ಲಾ ಆತ್ಮಗಳನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಇದನ್ನೂ ಸಹ ನೀವು ನೋಡುತ್ತೀರಿ, ಬೀಜವನ್ನು ಹಾಕುತ್ತಿರುತ್ತಾರೆ ಮಕ್ಕಳು ಪುರುಷಾರ್ಥ ಮಾಡಿ ಬೀಜ ಬಿತ್ತುತ್ತಿರುತ್ತಾರೆ. ಮಮ್ಮಾ-ಬಾಬಾ ಹಾಗೂ ಎಲ್ಲಾ ಮಕ್ಕಳೂ ಸಹ ಬೀಜವನ್ನು ಬಿತ್ತುತ್ತಿರುತ್ತಾರೆ. ದೊಡ್ಡ ಮಾಲಿಯು ಬೀಜವನ್ನು ಹೇಗೆ ಹಾಕುವುದೆಂದು ಕಲಿಸುತ್ತಾರೆ. ಇವರು ಹೂದೋಟದ ಮಾಲೀಕನಾಗಿದ್ದಾರೆ. ನೀವು ಬೀಜವನ್ನು ಬಿತ್ತುತ್ತೀರಿ, ಸಸಿಯೂ ಸಹ ಆಗುತ್ತದೆ. ಆದರೆ ಮತ್ತೆ ಮಾಯೆಯ ಬಿರುಗಾಳಿಗಳು ಬೀಸುತ್ತವೆ. ಅನೇಕ ಪ್ರಕಾರದ ಬಿರುಗಾಳಿಗಳು ಬರುತ್ತವೆ. ಇವು ಮಾಯೆಯ ವಿಘ್ನಗಳಾಗಿವೆ. ಬಿರುಗಾಳಿಗಳು ಬರುತ್ತವೆಯೆಂದರೆ ಕೇಳಬೇಕು - ಬಾಬಾ, ಇದಕ್ಕೆ ಏನು ಮಾಡಬೇಕು? ಶ್ರೀಮತವನ್ನು ಕೊಡುವವರು ತಂದೆಯಾಗಿದ್ದಾರೆ. ಬಿರುಗಾಳಿಗಳಂತೂ ಬಂದೇ ಬರುತ್ತವೆ. ಇದರಲ್ಲಿ ಮೊದಲನೆಯದು ದೇಹಾಭಿಮಾನವಾಗಿದೆ. ನಾನಾತ್ಮ ಅವಿನಾಶಿಯಾಗಿದ್ದೇನೆ, ಈ ಶರೀರವು ವಿನಾಶಿಯಾಗಿದೆ. ನನ್ನ 84 ಜನ್ಮಗಳು ಮುಕ್ತಾಯವಾಯಿತು. ಆತ್ಮವೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ, ಘಳಿಗೆ-ಘಳಿಗೆಯೂ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುವುದು ಆತ್ಮನ ಕೆಲಸವೇ ಆಗಿದೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ನಿಮ್ಮ ಅಂತಿಮ ಜನ್ಮವಾಗಿದೆ. ಈ ಪ್ರಪಂಚದಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳಲೂ ಬಾರದು, ಯಾರಿಗೂ ಜನ್ಮ ಕೊಡಲೂಬಾರದು. ಇದಕ್ಕೆ ಕೆಲವರು ಈ ಸೃಷ್ಟಿಯ ವೃದ್ಧಿಯು ಹೇಗಾಗುತ್ತದೆ ಎಂದು ಕೇಳುತ್ತಾರೆ. ಅರೆ! ಈ ಸಮಯದಲ್ಲಿ ಸೃಷ್ಟಿಯ ವೃದ್ಧಿಯು ಬೇಕಿಲ್ಲ. ಇದಂತೂ ಭ್ರಷ್ಟಾಚಾರದ ವೃದ್ಧಿಯಾಗಿದೆ. ಈ ಸಂಪ್ರದಾಯವು ರಾವಣನಿಂದ ಪ್ರಾರಂಭವಾಗಿದೆ. ಪ್ರಪಂಚವನ್ನು ಭ್ರಷ್ಟಾಚಾರಿಯನ್ನಾಗಿ ಮಾಡುವವರು ರಾವಣನೇ ಆಗಿದ್ದಾನೆ. ರಾಮನು ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತಾರೆ, ಇದರಲ್ಲಿಯೂ ನೀವು ಬಹಳ ಪರಿಶ್ರಮ ಪಡಬೇಕಾಗುತ್ತದೆ. ಘಳಿಗೆ-ಘಳಿಗೆಯೂ ದೇಹಾಭಿಮಾನದಲ್ಲಿ ಬಂದುಬಿಡುತ್ತೀರಿ. ಒಂದುವೇಳೆ ದೇಹಾಭಿಮಾನದಲ್ಲಿ ಬರದೇ ಇದ್ದರೆ ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುವಿರಿ. ಸತ್ಯಯುಗದಲ್ಲಿಯೂ ಸಹ ತಮ್ಮನ್ನು ಆತ್ಮವೆಂದಂತೂ ತಿಳಿಯುತ್ತಾರಲ್ಲವೆ. ಈಗ ಈ ನಮ್ಮ ಶರೀರವು ವೃದ್ಧಾವಸ್ತೆಯಲ್ಲಿದೆ ಇದನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತೇವೆಂದು ಗೊತ್ತಿರುತ್ತದೆ. ಇಲ್ಲಂತೂ ಆತ್ಮದ ಜ್ಞಾನವೂ ಸಹ ಇಲ್ಲ. ತಮ್ಮನ್ನು ದೇಹವೆಂದು ತಿಳಿದು ಕುಳಿತಿದ್ದಾರೆ. ಯಾರು ದುಃಖಿಯಾಗಿರುತ್ತಾರೆಯೋ ಅವರಿಗೆ ಈ ಪ್ರಪಂಚದಿಂದ ಹೋಗುವ ಮನಸ್ಸಾಗುತ್ತದೆ. ಅಲ್ಲಂತೂ ಸುಖವೇ ಸುಖವಿರುತ್ತದೆ. ಆತ್ಮದ ಜ್ಞಾನವು ಅಲ್ಲಿರುತ್ತದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ ಆದ್ದರಿಂದ ದುಃಖವಾಗುವುದಿಲ್ಲ. ಅದು ಸುಖದ ಪ್ರಾಲಬ್ಧವಾಗಿದೆ. ಇಲ್ಲಿಯೂ ಸಹ ಆತ್ಮವೆಂದಂತೂ ಹೇಳುತ್ತಾರೆ ಆದರೆ ಅದನ್ನೇ ಕೆಲವರು ಆತ್ಮವೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಆತ್ಮವಾಗಿದ್ದೇವೆ ಎನ್ನುವ ಜ್ಞಾನವಂತೂ ಇದೆಯಲ್ಲವೆ. ಆದರೆ ನಾವು ಈ ಪಾತ್ರದಿಂದ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕೆಂಬುದನ್ನು ತಿಳಿದುಕೊಂಡಿಲ್ಲ. ಪುನರ್ಜನ್ಮವನ್ನಂತೂ ಎಲ್ಲರೂ ಒಪ್ಪುತ್ತಾರೆ. ಎಲ್ಲಾ ಕರ್ಮಗಳಂತೂ ಕಾಡುತ್ತಿರುತ್ತದೆಯಲ್ಲವೆ. ಮಾಯೆಯ ರಾಜ್ಯದಲ್ಲಿ ಕರ್ಮ ವಿಕರ್ಮವೇ ಆಗುತ್ತವೆ ಅಂದರೆ ಮನಸ್ಸು ತಿನ್ನುವಂತಹ ಕರ್ಮಗಳೇ ಆಗುತ್ತಿರುತ್ತವೆ. ಅಲ್ಲಿ ಮನಸ್ಸು ತಿನ್ನುವಂತಹ ಕರ್ಮವೇ ಆಗುವುದಿಲ್ಲ.

ನೀವೀಗ ತಿಳಿದು ಕೊಂಡಿದ್ದೀರಿ, ನಾವೀಗ ಮನೆಗೆ ಹಿಂತಿರುಗಲೇಬೇಕು, ವಿನಾಶವಂತೂ ಆಗಲೇಬೇಕು, ಬಾಂಬುಗಳನ್ನು ಹಾಕಲು ಪ್ರಯತ್ನವನ್ನೂ ಮಾಡುತ್ತಾರೆ. ಕೊನೆಗೆ ಕೋಪದಲ್ಲಿ ಬಂದು ಬಾಂಬು ಹಾಕಿಬಿಡುತ್ತಾರೆ. ಇವು ಶಕ್ತಿಶಾಲಿ ಬಾಂಬುಗಳಾಗಿವೆ ಆದ್ದರಿಂದ ಯೂರೋಪಿಯನ್ನರನ್ನು ಯಾದವರೆಂದು ಗಾಯನ ಮಾಡುತ್ತಾರೆ. ನಾವು ಎಲ್ಲಾ ಧರ್ಮದವರಿಗೂ ಯುರೋಪ್ ವಾಸಿಗಳೆಂದೇ ಹೇಳುತ್ತೇವೆ. ಭಾರತ ಮಾತ್ರ ಒಂದುಕಡೆ ಇದ್ದು ಉಳಿದವರೆಲ್ಲರನ್ನೂ ಒಂದು ಧರ್ಮದಲ್ಲಿ ಸೇರಿಸಲಾಗಿದೆ. ತಮ್ಮ ಖಂಡದ ಬಗ್ಗೆ ಅವರಿಗೆ ತುಂಬಾ ಪ್ರೀತಿಯಿರುತ್ತದೆ ಆದರೆ ವಿಧಿಯೇ ಈ ರೀತಿ ಇರುವಾಗ ಏನು ಮಾಡಲಾಗುತ್ತದೆ? ಆ ಶಕ್ತಿಯನ್ನೂ ಸಹ ಈಗ ನಿಮಗೆ ತಂದೆಯು ಕೊಡುತ್ತಿದ್ದಾರೆ. ಯೋಗಬಲದಿಂದ ನೀವು ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಕೇವಲ ನನ್ನನ್ನು ನೆನಪು ಮಾಡಿ, ದೇಹಾಭಿಮಾನವನ್ನು ಬಿಡಿ ಎಂದು ಹೇಳುತ್ತಾರೆ. ನಾನು ರಾಮನನ್ನು ನೆನಪು ಮಾಡುತ್ತೇನೆ, ಕೃಷ್ಣನನ್ನು ನೆನಪು ಮಾಡುತ್ತೇನೆ ಎಂದು ಹೇಳುತ್ತಾರೆ, ಆದರೆ ಅವರು ತಮ್ಮನ್ನು ಆತ್ಮನೆಂದು ತಿಳಿದುಕೊಂಡಿದ್ದಾರೇನು. ಆತ್ಮವೆಂದು ತಿಳಿದುಕೊಂಡಿದ್ದರೆ ಆತ್ಮನ ತಂದೆಯನ್ನು ಏಕೆ ನೆನಪು ಮಾಡುವುದಿಲ್ಲ? ಆದ್ದರಿಂದ ಪರಮಪಿತ ಪರಮಾತ್ಮನಾದ ನನ್ನನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ನೀವು ಜೀವಾತ್ಮನನ್ನು ಏಕೆ ನೆನಪು ಮಾಡುತ್ತೀರಿ? ನೀವು ದೇಹೀ ಅಭಿಮಾನಿಯಾಗಬೇಕು. ನಾನು ಆತ್ಮನಾಗಿದ್ದೇನೆ, ತಂದೆಯನ್ನು ನೆನಪು ಮಾಡುತ್ತೇನೆ. ತಂದೆಯೂ ಸಹ ಆಜ್ಞೆ ಮಾಡಿದ್ದಾರೆ - ನೆನಪು ಮಾಡುವುದರಿಂದ ವಿಕರ್ಮವು ವಿನಾಶವಾಗುತ್ತದೆ ಮತ್ತು ಆಸ್ತಿಯೂ ಸಹ ಬುದ್ಧಿಯಲ್ಲಿ ನೆನಪಿರುತ್ತದೆ. ತಂದೆ ಹಾಗೂ ಆಸ್ತಿ ಅರ್ಥಾತ್ ಮುಕ್ತಿ ಹಾಗೂ ಜೀವನ್ಮುಕ್ತಿಯಾಗಿದೆ. ಇದಕ್ಕಾಗಿಯೇ ಕಷ್ಟಪಡುತ್ತಿರುತ್ತಾರೆ. ಯಜ್ಞ, ಜಪ, ತಪ ಮುಂತಾದುವುಗಳನ್ನು ಮಾಡುತ್ತಿರುತ್ತಾರೆ. ಪೋಪ್ನಿಂದಲೂ ಆಶೀರ್ವಾದಗಳನ್ನು ಪಡೆದು ಹೋಗುತ್ತಿರುತ್ತಾರೆ. ಇಲ್ಲಂತೂ ತಂದೆಯು ಕೇವಲ ದೇಹಾಭಿಮಾನವನ್ನು ಬಿಡಿ, ನಿಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಈಗ ನಾಟಕವು ಮುಗಿದಿದೆ, ನಮ್ಮ 84 ಜನ್ಮಗಳೂ ಪೂರ್ತಿಯಾಗಿವೆ. ಈಗ ಮನೆಗೆ ಹಿಂತಿರುಗಬೇಕಾಗಿದೆ. ಎಷ್ಟೊಂದು ಸಹಜ ಮಾಡಿ ತಿಳಿಸುತ್ತಾರೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಿ. ಹೇಗೆ ನಾಟಕವು ಮುಗಿಯುವ ಸಮಯದಲ್ಲಿ ಪಾತ್ರಧಾರಿಯು ಇನ್ನು 15 ನಿಮಿಷ ಪಾತ್ರ ಮಾಡಬೇಕೆಂದು ತಿಳಿದುಕೊಳ್ಳುತ್ತಾರೆ. ಈಗ ಈ ದೃಶ್ಯವು ಪೂರ್ಣವಾಗುವುದಿದೆ. ನಾವು ಈ ವಸ್ತ್ರಗಳನ್ನು ಕಳಚಿ ಮನೆಗೆ ಹೋಗುತ್ತೇವೆಂದು ಪಾತ್ರಧಾರಿಗಳು ತಿಳಿದುಕೊಳ್ಳುತ್ತಾರೆ. ಈಗ ನಾವು ವಾಪಸ್ಸು ಹೋಗಬೇಕು. ಈ ರೀತಿ ಮಾತುಗಳನ್ನು ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳಬೇಕು. ಎಷ್ಟೊಂದು ಸಮಯದಿಂದ ನಾವು ಸುಖ-ದುಃಖದ ಪಾತ್ರವನ್ನು ಅಭಿನಯಿಸಿದ್ದೇವೆಂದೂ ಸಹ ತಿಳಿದುಕೊಂಡಿದ್ದೀರಿ. ಈಗ ತಂದೆಯೂ ಹೇಳುತ್ತಾರೆ - ನನ್ನನ್ನು ನೆನಪು ಮಾಡಿ, ಪ್ರಪಂಚದಲ್ಲಿ ಏನೇನೆಲ್ಲವೂ ಆಗುತ್ತಿದೆ, ಇದೆಲ್ಲವನ್ನೂ ಮರೆತುಬಿಡಿ - ಇದೆಲ್ಲವೂ ನಾಶವಾಗುವುದಿದೆ. ಈಗ ಮನೆಗೆ ಹಿಂತಿರುಗಬೇಕಾಗಿದೆ. ಅವರಂತೂ ಇನ್ನೂ ಕಲಿಯುಗ 4ಂ ಸಾವಿರ ವರ್ಷಗಳಿವೆಯೆಂದು ತಿಳಿದುಕೊಂಡಿದ್ದಾರೆ ಇದನ್ನು ಘೋರ ಅಂಧಕಾರವೆಂದು ಕರೆಯಲಾಗುವುದು. ಅವರಿಗೆ ತಂದೆಯ ಪರಿಚಯವಿಲ್ಲ. ಜ್ಞಾನವೆಂದರೆ ತಂದೆಯ ಪರಿಚಯವಿರುತ್ತದೆ. ಅಜ್ಞಾನವೆಂದರೆ ತಂದೆಯ ಪರಿಚಯವಿರುವುದಿಲ್ಲ ಆದುದರಿಂದ ಈಗ ಅವರು ಘೋರ ಅಂಧಕಾರದಲ್ಲಿದ್ದಾರೆ. ಈಗ ನೀವು ನಂಬರ್ವಾರ್ ಪುರುಷಾರ್ಥದನುಸಾರ ಅಪಾರವಾದಂತಹ ಪ್ರಕಾಶತೆಯಲ್ಲಿದ್ದೀರಿ. ಈಗ ರಾತ್ರಿಯು ಮುಗಿಯುವ ಸಮಯವಾಗಿದೆ, ನಾವು ಮನೆಗೆ ಹಿಂತಿರುಗುತ್ತೇವೆ. ಇಂದು ಬ್ರಹ್ಮನ ರಾತ್ರಿ, ನಾಳೆ ಬ್ರಹ್ಮನ ಹಗಲಾಗುತ್ತದೆ. ಪರಿವರ್ತನೆ ಆಗುವುದರಲ್ಲಿ ಸಮಯ ಹಿಡಿಯುತ್ತದೆಯಲ್ಲವೆ. ಈಗ ನಾವು ಮೃತ್ಯುಲೋಕದಲ್ಲಿದ್ದೇವೆ, ನಾಳೆ ಅಮರಲೋಕದಲ್ಲಿ ಇರುತ್ತೇವೆಂದು ತಿಳಿದುಕೊಂಡಿದ್ದೀರಿ. ಮೊದಲು ಮನೆಗೆ ಹಿಂತಿರುಗಬೇಕಾಗುತ್ತದೆ. ಹೀಗೆ ಈ 84 ಜನ್ಮಗಳ ಚಕ್ರವು ತಿರುಗುತ್ತಿರುತ್ತದೆ. ಈ ಚಕ್ರವು ತಿರುಗುತ್ತಿರುವುದು ನಿಲ್ಲುವುದಿಲ್ಲ. ನೀವು ಎಷ್ಟೊಂದು ಬಾರಿ ನನ್ನೊಂದಿಗೆ ಮಿಲನ ಮಾಡಿದ್ದೀರೆಂದು ತಂದೆಯು ಹೇಳುತ್ತಾರೆ. ನಾವು ಅನೇಕ ಬಾರಿ ಮಿಲನ ಮಾಡಿದ್ದೇವೆಂದು ಮಕ್ಕಳು ಹೇಳುತ್ತಾರೆ. ನಿಮ್ಮ 84 ಜನ್ಮಗಳ ಚಕ್ರ ಪೂರ್ತಿಯಾಗುತ್ತದೆ. ಆದುದರಿಂದ ಎಲ್ಲರ ಪಾತ್ರವೂ ಪೂರ್ಣವಾಗುತ್ತದೆ. ಇದಕ್ಕೆ ಜ್ಞಾನವೆಂದು ಕರೆಯಲಾಗುವುದು. ಜ್ಞಾನ ಕೊಡುವಂತಹವರು ಜ್ಞಾನಸಾಗರ, ಪರಮಪಿತ ಪರಮಾತ್ಮ, ಪತಿತ-ಪಾವನ ಆಗಿದ್ದಾರೆ. ಪತಿತ-ಪಾವನ ಎಂದು ಯಾರಿಗೆ ಕರೆಯಲಾಗುವುದು? ಎಂದು ನೀವು ಕೇಳಬಹುದು. ಭಗವಂತನೆಂದು ನಿರಾಕಾರನಿಗೆ ಕರೆಯಲಾಗುವುದು. ಹಾಗಾದರೆ ನೀವು ರಘುಪತಿ ರಾಘವ ರಾಜಾರಾಂ ಎಂದು ಏಕೆ ಹೇಳುತ್ತೀರಿ? ಆತ್ಮಗಳ ತಂದೆಯಂತೂ ಆ ನಿರಾಕಾರನೇ ಆಗಿದ್ದಾರೆ, ಈ ರೀತಿ ತಿಳಿಸಿಕೊಡುವಂತಹ ಒಳ್ಳೆಯ ಯುಕ್ತಿ ಬೇಕಾಗಿದೆ.

ದಿನ-ಪ್ರತಿದಿನ ನಿಮ್ಮ ಉನ್ನತಿಯಾಗುತ್ತಿರುತ್ತದೆ ಏಕೆಂದರೆ ಗುಹ್ಯವಾದ ಜ್ಞಾನವು ಸಿಗುತ್ತಿರುತ್ತದೆ. ತಿಳಿಸಿಕೊಡಲು ಕೇವಲ (ಅಲ್ಫ್)ತಂದೆಯ ಮಾತೊಂದೇ ಆಗಿದೆ. (ಅಲ್ಫ್) ತಂದೆಯನ್ನು ಮರೆತಿರುವ ಕಾರಣ ಅನಾಥರಾಗಿದ್ದಾರೆ, ದುಃಖಿಗಳಾಗುತ್ತಿರುತ್ತಾರೆ. ಒಬ್ಬರ ಮೂಲಕ ಇನ್ನೊಬ್ಬರನ್ನು ಅರಿತುಕೊಳ್ಳುವ ಕಾರಣ ನೀವು 21 ಜನ್ಮಗಳು ಸುಖಿಗಳಾಗುತ್ತೀರಿ. ಇದು ಜ್ಞಾನವಾಗಿದೆ, ಅದು ಅಜ್ಞಾನವಾಗಿದೆ, ಪರಮಾತ್ಮನನ್ನು ಸರ್ವವ್ಯಾಪಿಯೆಂದು ಹೇಳಿಬಿಡುತ್ತಾರೆ. ಅರೆ! ಅವರಂತೂ ತಂದೆಯಾಗಿದ್ದಾರೆ, ನಿಮ್ಮೊಳಗೆ ಭೂತಗಳು ಸರ್ವವ್ಯಾಪಿಯಾಗಿವೆ ಎಂದು ತಂದೆಯು ಹೇಳುತ್ತಾರೆ. ಪಂಚವಿಕಾರಗಳೆಂಬ ರಾವಣ ಸರ್ವವ್ಯಾಪಿಯಾಗಿದ್ದಾನೆ. ನೀವು ಈ ಮಾತುಗಳನ್ನು ತಿಳಿಸಬೇಕಾಗುತ್ತದೆ. ನಾವು ಈಶ್ವರನ ಮಡಿಲಲ್ಲಿದ್ದೇವೆ ಎಂಬ ಅತಿ ದೊಡ್ಡ ನಶೆಯಿರಬೇಕಾಗಿದೆ. ಮತ್ತೆ ಭವಿಷ್ಯದಲ್ಲಿ ಈ ದೇವತೆಗಳ ಮಡಿಲಲ್ಲಿ ಹೋಗುತ್ತೇವೆ. ಅಲ್ಲಂತೂ ಸದಾ ಸುಖವಿರುತ್ತದೆ, ಶಿವತಂದೆಯು ನಮ್ಮನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನು ನೆನಪು ಮಾಡಬೇಕು. ನಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಿದಾಗ ರಾಜ್ಯವು ಸಿಗುತ್ತದೆ. ಇದು ತಿಳಿದುಕೊಳ್ಳುವಂತಹ ಒಳ್ಳೆಯ ಮಾತಾಗಿದೆ. ಶಿವತಂದೆಯು ನಿರಾಕಾರನಾಗಿದ್ದಾರೆ, ನಾವು ಆತ್ಮರೂ ಸಹ ನಿರಾಕಾರ ಆಗಿದ್ದೇವೆ. ಅಲ್ಲಿ ನಾವು ಅಶರೀರಿಯಾಗಿದ್ದೆವು. ತಂದೆಯಂತೂ ಸದಾ ಅಶರೀರಿಯಾಗಿಯೇ ಇರುತ್ತಾರೆ, ತಂದೆಯು ಎಂದಿಗೂ ಶರೀರವೆಂಬ ವಸ್ತ್ರವನ್ನು ಧರಿಸಿ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ತಂದೆಯು ಒಮ್ಮೆ ಪುನರವತರಣೆ ಮಾಡುತ್ತಾರೆ. ಮೊಟ್ಟಮೊದಲು ಬ್ರಾಹ್ಮಣರನ್ನು ರಚಿಸಿ, ಅವರನ್ನು ತಮ್ಮವರನ್ನಾಗಿ ಮಾಡಿಕೊಂಡು ಅವರಿಗೆ ಹೆಸರಿಡಬೇಕಾಗುತ್ತದೆಯಲ್ಲವೆ. ಬ್ರಹ್ಮನಿಲ್ಲದೇ ಹೋದರೆ ಬ್ರಾಹ್ಮಣರೆಲ್ಲಿಂದ ಬರುತ್ತಾರೆ? ಯಾರು ಪೂರ್ತಿ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಯೋ ಅವರೇ ಇವರಾಗಿದ್ದಾರೆ. ಪಾವನರಾಗಿದ್ದಂತಹವರು ಪತಿತರಾಗಿದ್ದಾರೆ, ಸುಂದರರಿಂದ ಶ್ಯಾಮ, ಶ್ಯಾಮದಿಂದ ಸುಂದರರಾಗುತ್ತಾರೆ. ನಾವು ಭಾರತಕ್ಕೂ ಸಹ ಶ್ಯಾಮಸುಂದರ ಎಂದು ಹೆಸರಿಡಬಹುದು. ಭಾರತವನ್ನೇ ಶ್ಯಾಮ, ಭಾರತವನ್ನೇ ಗೋಲ್ಡನ್ ಏಜ್, ಸುಂದರ ಎಂದು ಹೇಳುತ್ತಾರೆ. ಭಾರತವೇ ಕಾಮಚಿತೆಯ ಮೇಲೆ ಕುಳಿತು ಕಪ್ಪಾಗುತ್ತದೆ. ಭಾರತವೇ ಜ್ಞಾನಚಿತೆಯ ಮೇಲೆ ಕುಳಿತು ಸುಂದರವಾಗುತ್ತದೆ. ಭಾರತವನ್ನೇ ಕುರಿತು ಕಷ್ಟಪಡಬೇಕಾಗುತ್ತದೆ. ಭಾರತವಾಸಿಗಳೇ ಮತ್ತೆ ಬೇರೆ-ಬೇರೆ ಧರ್ಮಗಳಲ್ಲಿ ಪರಿವರ್ತನೆಯಾಗಿಬಿಟ್ಟಿದ್ದಾರೆ. ಯುರೋಪಿಯನ್ನರು ಹಾಗೂ ಭಾರತೀಯರಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಅಲ್ಲಿಯೇ ಹೋಗಿ ವಿವಾಹವನ್ನೂ ಮಾಡಿಕೊಳ್ಳುತ್ತಾರೆ ಮತ್ತೆ ಅವರನ್ನು ಕ್ರಿಶ್ಚಿಯನ್ನರೆಂದು ಹೇಳಿಕೊಳ್ಳುತ್ತಾರೆ. ಅವರ ಮಕ್ಕಳು ಮೊದಲಾದವರು ಅದೇ ಲಕ್ಷಣವುಳ್ಳವರಾಗಿರುತ್ತಾರೆ. ಆಫ್ರಿಕಾದಲ್ಲಿಯೂ ಹೋಗಿ ವಿವಾಹವನ್ನು ಮಾಡಿಕೊಳ್ಳುತ್ತಾರೆ.

ಈಗ ತಂದೆಯು ಚಕ್ರವನ್ನು ತಿಳಿದುಕೊಳ್ಳಲು ವಿಶಾಲ ಬುದ್ಧಿಯನ್ನು ಕೊಡುತ್ತಾರೆ. ವಿನಾಶಕಾಲೆ ವಿಪರೀತ ಬುದ್ಧಿಯೆಂದು ಬರೆಯಲಾಗಿದೆ. ಯಾದವರು ಹಾಗೂ ಕೌರವರು ಪ್ರೀತಿಯನ್ನಿಡಲಿಲ್ಲ. ಯಾರು ಪ್ರೀತಿಯನ್ನಿಟ್ಟರು ಅವರಿಗೆ ವಿಜಯವಾಯಿತು. ಶತ್ರುಗಳಿಗೆ ವಿಪರೀತ ಬುದ್ಧಿಯವರೆಂದು ಕರೆಯಲಾಗುತ್ತದೆ. ಈ ಸಮಯ ಎಲ್ಲರೂ ಪರಸ್ಪರ ಶತ್ರುಗಳಾಗಿದ್ದಾರೆಂದು ತಂದೆಯು ಹೇಳುತ್ತಾರೆ. ತಂದೆಗೂ ಸಹ ಸರ್ವವ್ಯಾಪಿಯೆಂದು ನಿಂದನೆ ಮಾಡುತ್ತಾರೆ. ಮತ್ತೆ ಜನನ-ಮರಣ ರಹಿತನೆಂದು ಹೇಳಿಬಿಡುತ್ತಾರೆ, ಅವರಿಗೆ ಯಾವುದೇ ನಾಮರೂಪವು ಇಲ್ಲವೆಂದೂ ಸಹ ಹೇಳುತ್ತಾರೆ. ಓ ಗಾಡ್ ಫಾದರ್ ಎಂದು ಹೇಳುತ್ತಾರೆ, ಆತ್ಮ-ಪರಮಾತ್ಮನ ಸಾಕ್ಷಾತ್ಕಾರವೂ ಸಹ ಆಗುತ್ತದೆ. ಅದರಲ್ಲಿ ಆತ್ಮನಿಗೂ, ಪರಮಾತ್ಮನಿಗೂ ಅಂತರವಿರುವುದಿಲ್ಲ. ಉಳಿದ ಹಾಗೆ ಶಕ್ತಿಯು ನಂಬರ್ವಾರ್ ಹೆಚ್ಚು ಕಡಿಮೆಯಿರುತ್ತದೆ. ಮನುಷ್ಯರಂತೂ ಮನುಷ್ಯರೇ ಆಗಿದ್ದಾರೆ. ಹೇಗೆ ಅವರಲ್ಲಿ ಪದವಿ ಬೇರೆ-ಬೇರೆಯಾಗಿರುತ್ತದೆ. ಬುದ್ಧಿಯಲ್ಲಿ ವ್ಯತ್ಯಾಸವಿರುತ್ತದೆ. ಜ್ಞಾನಸಾಗರ ತಂದೆಯು ನಿಮಗೀಗ ಅವರನ್ನು ನೆನಪು ಮಾಡುವಂತಹ ಜ್ಞಾನವನ್ನು ಕೊಟ್ಟಿದ್ದಾರೆ, ಆ ಸ್ಥಿತಿಯು ನಿಮಗೆ ಅಂತ್ಯದಲ್ಲಾಗುತ್ತದೆ.

ಅಮೃತವೇಳೆಯಲ್ಲಿ ಸ್ಮರಣೆ ಮಾಡುತ್ತಾ ಮಾಡುತ್ತಾ ಸುಖವನ್ನು ಹೊಂದಿ, ಬಲೇ ಕಾಲುಚಾಚಿ ಮಲಗಿರಿ ಆದರೆ ನಿದ್ರೆ ಮಾಡಬೇಡಿ. ತಮಗೆ ತಾವೇ ಹಠ ಮಾಡಿ ಕುಳಿತುಕೊಳ್ಳಬೇಕು. ಇದರಲ್ಲೇ ಪರಿಶ್ರಮವಿದೆ. ವೈದ್ಯರೂ ಸಹ ಅಮೃತವೇಳೆಗಾಗಿ ಔಷಧಿಯನ್ನು ಕೊಡುತ್ತಾರೆ. ಇದೂ ಸಹ ಔಷಧಿಯಾಗಿದೆ. ರಚೈತ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣರನ್ನು ರಚಿಸಿ ಓದಿಸುತ್ತಿದ್ದಾರೆ - ಈ ಮಾತನ್ನು ಎಲ್ಲರಿಗೂ ತಿಳಿಸಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ಈಶ್ವರನ ಮಡಿಲನ್ನು ತೆಗೆದುಕೊಂಡಿದ್ದೇವೆ ನಂತರ ದೇವತಾ ಮಡಿಲಿನಲ್ಲಿ ಹೋಗುತ್ತೇವೆಂಬ ಆತ್ಮೀಕ ನಶೆಯಿರಬೇಕು. ತಮ್ಮ ಹಾಗೂ ಅನ್ಯರ ಕಲ್ಯಾಣವನ್ನು ಮಾಡಬೇಕು.

2. ಅಮೃತವೇಳೆ ಎದ್ದು ಜ್ಞಾನಸಾಗರನ ಜ್ಞಾನವನ್ನು ಮನನ ಮಾಡಬೇಕು. ಒಬ್ಬ ತಂದೆಯ ಅವ್ಯಭಿಚಾರಿ ನೆನಪಿನಲ್ಲಿರಬೇಕು. ದೇಹಾಭಿಮಾನವನ್ನು ಬಿಟ್ಟು ಸ್ವಯಂನ್ನು ಆತ್ಮನೆಂದು ನಿಶ್ಚಯ ಮಾಡಬೇಕು.

ವರದಾನ:
ಅಮೃತವೇಳೆಯಿಂದ ರಾತ್ರಿಯವರೆಗೆ ನೆನಪಿನಲ್ಲಿ ವಿಧಿಪೂರ್ವಕವಾಗಿ ಪ್ರತೀಕರ್ಮವನ್ನು ಮಾಡುವಂತಹ ಸಿದ್ಧಿ ಸ್ವರೂಪ ಭವ

ಅಮೃತವೇಳೆಯಿಂದ ರಾತ್ರಿಯವರೆಗೂ ಏನೆಲ್ಲವೂ ಕರ್ಮವನ್ನೇ ಮಾಡಿರಿ, ನೆನಪಿನಲ್ಲಿ ವಿಧಿಪೂರ್ವಕವಾಗಿ ಕರ್ಮವನ್ನು ಮಾಡುತ್ತೀರೆಂದರೆ ಪ್ರತೀಕರ್ಮದ ಸಿದ್ಧಿಯು ಸಿಗುವುದು. ಎಲ್ಲದಕ್ಕಿಂತಲೂ ಅತಿದೊಡ್ಡ ಸಿದ್ಧಿಯು ಇದಾಗಿದೆ- ಪ್ರತ್ಯಕ್ಷ ಫಲದ ರೂಪದಲ್ಲಿ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಸದಾ ಸುಖದ ಅಲೆಗಳಲ್ಲಿ, ಖುಷಿಯ ಅಲೆಗಳಲ್ಲಿ ತೇಲಾಡುತ್ತಿರುತ್ತೀರಿ. ಅಂದಮೇಲೆ ಈ ಪ್ರತ್ಯಕ್ಷ ಫಲವೂ ಸಿಗುತ್ತದೆ ಹಾಗೂ ಭವಿಷ್ಯ ಫಲವೂ ಸಿಗುತ್ತದೆ. ಈ ಸಮಯದ ಪ್ರತ್ಯಕ್ಷ ಫಲವು ಭವಿಷ್ಯದ ಅನೇಕ ಜನ್ಮಗಳ ಫಲಕ್ಕಿಂತಲೂ ಶ್ರೇಷ್ಠವಿದೆ. ಈಗೀಗ ಮಾಡಲಾಯಿತು, ಈಗೀಗ ಸಿಕ್ಕಿತು- ಇದಕ್ಕೇ ಪ್ರತ್ಯಕ್ಷ ಫಲ ಎಂದು ಹೇಳಲಾಗುತ್ತದೆ.

ಸ್ಲೋಗನ್:
ಸ್ವಯಂನ್ನು ನಿಮಿತ್ತನೆಂದು ತಿಳಿದುಕೊಂಡು ಪ್ರತೀ ಕರ್ಮವನ್ನೂ ಮಾಡಿರಿ, ಆಗ ಭಿನ್ನ ಹಾಗೂ ಪ್ರಿಯರಾಗಿರುತ್ತೀರಿ, ನಾನು ಎನ್ನುವುದು ಬರಲು ಸಾಧ್ಯವಿಲ್ಲ.