15.01.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವು ಅರ್ಧಕಲ್ಪ ಯಾರ ಭಕ್ತಿಯನ್ನು ಮಾಡಿದ್ದೀರೋ ಆ ತಂದೆಯೇ ಸ್ವಯಂ ನಿಮಗೆ ಓದಿಸುತ್ತಿದ್ದಾರೆ, ಈ ವಿದ್ಯೆಯಿಂದಲೇ ನೀವು ದೇವಿ-ದೇವತೆಗಳಾಗುತ್ತೀರಿ

ಪ್ರಶ್ನೆ:
ಯೋಗಬಲದ ಲಿಫ್ಟ್ನ ಚಮತ್ಕಾರವೇನಾಗಿದೆ?

ಉತ್ತರ:
ನೀವು ಮಕ್ಕಳು ಯೋಗಬಲದ ಲಿಫ್ಟ್ನಿಂದ ಸೆಕೆಂಡಿನಲ್ಲಿ ಮೇಲೇರಿ ಬಿಡುತ್ತೀರಿ ಅರ್ಥಾತ್ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ನಿಮಗೆ ಸಿಗುತ್ತದೆ. ನಿಮಗೆ ತಿಳಿದಿದೆ - ಏಣಿಯನ್ನು ಇಳಿಯುವುದರಲ್ಲಿ 5000 ವರ್ಷಗಳು ಹಿಡಿಸಿತು ಮತ್ತು ಈಗ ಒಂದು ಸೆಕೆಂಡಿನಲ್ಲಿ ಮೇಲೇರುತ್ತೀರಿ. ಇದೇ ಯೋಗಬಲದ ಕಮಾಲ್ ಆಗಿದೆ. ತಂದೆಯ ನೆನಪಿನಿಂದ ಎಲ್ಲಾ ಪಾಪಗಳು ಕಳೆಯುತ್ತವೆ. ಆತ್ಮವು ಸತೋಪ್ರಧಾನವಾಗಿ ಬಿಡುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಕುಳಿತು ತಿಳಿಸುತ್ತಾರೆ. ಆತ್ಮಿಕ ತಂದೆಯ ಮಹಿಮೆಯನ್ನಂತೂ ಮಕ್ಕಳಿಗೆ ತಿಳಿಸಿದ್ದಾರೆ. ಅವರು ಜ್ಞಾನ ಸಾಗರ, ಸತ್-ಚಿತ್-ಆನಂದ ಸ್ವರೂಪನಾಗಿದ್ದಾರೆ, ಶಾಂತಿಯ ಸಾಗರನಾಗಿದ್ದಾರೆ. ಅವರಿಗೆ ಎಲ್ಲಾ ಬೇಹದ್ದಿನ ಬಿರುದುಗಳನ್ನು ಕೊಡಲಾಗುತ್ತದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಮತ್ತು ಈ ಸಮಯದಲ್ಲಿ ಯಾರೆಲ್ಲಾ ಮನುಷ್ಯರಿದ್ದಾರೆಯೋ ಎಲ್ಲರಿಗೂ ಗೊತ್ತಿದೆ - ನಾವು ಭಕ್ತಿಯ ಸಾಗರರಾಗಿದ್ದೇವೆ ಎಂದು. ಭಕ್ತಿಯಲ್ಲಿ ಯಾರು ಎಲ್ಲರಿಗಿಂತ ಮುಂದಿರುವರೋ ಅವರಿಗೆ ಮಾನ್ಯತೆ ಸಿಗುತ್ತದೆ. ಈ ಸಮಯದಲ್ಲಿ ಕಲಿಯುಗದಲ್ಲಿ ಭಕ್ತಿ, ದುಃಖವಿದೆ. ಸತ್ಯಯುಗದಲ್ಲಿ ಜ್ಞಾನದ ಸುಖವಿರುತ್ತದೆ. ಅಲ್ಲಿ ಜ್ಞಾನವಿರುತ್ತದೆಯೆಂದಲ್ಲ. ಈ ಮಹಿಮೆಯು ಕೇವಲ ಒಬ್ಬ ತಂದೆಯದೇ ಆಗಿದೆ ಮತ್ತು ಮಕ್ಕಳಿಗೂ ಮಹಿಮೆಯಿದೆ ಏಕೆಂದರೆ ತಂದೆಯು ಮಕ್ಕಳಿಗೆ ಓದಿಸುತ್ತಾರೆ ಅಥವಾ ಯಾತ್ರೆಯನ್ನು ಕಲಿಸುತ್ತಾರೆ. ತಂದೆಯು ತಿಳಿಸಿದ್ದಾರೆ - ಎರಡು ಯಾತ್ರೆಗಳಿವೆ. ಭಕ್ತರು ತೀರ್ಥ ಯಾತ್ರೆ ಮಾಡುತ್ತಾರೆ, ನಾಲ್ಕಾರು ಕಡೆ ಸುತ್ತಾಡಿ ಬರುತ್ತಾರೆ ಅಂದಾಗ ಎಷ್ಟು ಸಮಯ ನಾಲ್ಕಾರು ಕಡೆ ಸುತ್ತಾಡುವರೋ ಅಷ್ಟು ಸಮಯ ವಿಕಾರದಲ್ಲಿ ಹೋಗುವುದಿಲ್ಲ. ಮಧ್ಯಪಾನ ಇತ್ಯಾದಿ., ಛೀ ಛೀ ಪದಾರ್ಥಗಳನ್ನು ಸೇವಿಸುವುದಿಲ್ಲ. ಕೆಲವೊಮ್ಮೆ ಬದರೀನಾಥ, ಕೆಲವೊಮ್ಮೆ ಕಾಶಿಗೂ ಹೋಗುತ್ತಾರೆ. ಭಗವಂತನಿಗೆ ಭಕ್ತಿ ಮಾಡುತ್ತಾರೆ ಅಂದಮೇಲೆ ಭಗವಂತನು ಒಬ್ಬರೇ ಇರಬೇಕಲ್ಲವೆ. ಎಲ್ಲಾ ಕಡೆ ಸುತ್ತಾಡುವ ಅವಶ್ಯಕತೆಯಿಲ್ಲ ಅಲ್ಲವೆ. ಶಿವ ತಂದೆಯ ತೀರ್ಥ ಸ್ಥಾನವನ್ನು ನೋಡಿಕೊಂಡು ಬರುತ್ತಾರೆ, ಕಾಶಿಯು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವೆಂದು ಗಾಯನವಿದೆ. ಅದಕ್ಕೆ ಶಿವ ಪುರಿಯೆಂತಲೂ ಹೇಳುತ್ತಾರೆ. ನಾಲ್ಕಾರೂ ಕಡೆ ಹೋಗುತ್ತಾರೆ ಆದರೆ ಯಾರ ದರ್ಶನ ಮಾಡಲು ಹೋಗುವರು ಅಥವಾ ಯಾರ ಭಕ್ತಿ ಮಾಡುವರು ಅವರ ಚರಿತ್ರೆ, ಕರ್ತವ್ಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಅದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ಅವರ ಜೀವನ ಕಥೆಯನ್ನು ತಿಳಿದುಕೊಳ್ಳದೇ ಅವರಿಗೆ ಪೂಜೆ ಮಾಡುವುದು, ತಲೆ ಬಾಗುವುದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುವುದು. ಮನೆಯಲ್ಲಿಯೇ ಆಚರಣೆ ಮಾಡುತ್ತಾರೆ. ದೇವಿಯರಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ. ಮಣ್ಣಿನ ಅಥವಾ ಕಲ್ಲಿನ ದೇವಿಯರನ್ನು ಮಾಡಿ ಅವರನ್ನು ಬಹಳ ಶೃಂಗರಿಸುತ್ತಾರೆ. ತಿಳಿದುಕೊಳ್ಳಿ, ಲಕ್ಷ್ಮಿಯ ಚಿತ್ರವನ್ನೂ ಮಾಡುತ್ತಾರೆ. ಇವರ ಚರಿತ್ರೆಯನ್ನು ತಿಳಿಸಿ ಎಂದು ಕೇಳಿದರೆ ಸತ್ಯಯುಗದ ಮಹಾರಾಣಿಯಾಗಿದ್ದರು ಎಂದು ಹೇಳುತ್ತಾರೆ. ತ್ರೇತಾಯುಗದ ಮಹಾರಾಣಿಯು ಸೀತೆಯಾಗಿದ್ದಳು. ಬಾಕಿ ಅವರು ಎಷ್ಟು ಸಮಯ ರಾಜ್ಯ ಮಾಡಿದರು, ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗಿನಿಂದ ಎಲ್ಲಿಯವರೆಗೆ ನಡೆಯಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಭಕ್ತಿಮಾರ್ಗದಲ್ಲಿ ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ. ಇವೆಲ್ಲವೂ ಭಗವಂತನೊಂದಿಗೆ ಮಿಲನ ಮಾಡುವ ಉಪಾಯವಾಗಿದೆ. ಶಾಸ್ತ್ರಗಳನ್ನು ಓದುವುದೂ ಸಹ ಭಗವಂತನೊಂದಿಗೆ ಮಿಲನ ಮಾಡಲು ಉಪಾಯವಾಗಿದೆ ಆದರೆ ಭಗವಂತ ಎಲ್ಲಿದ್ದಾರೆ? ಅದಕ್ಕೆ ಅವರು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ.

ವಿದ್ಯೆಯಿಂದ ನಾವು ಈ ದೇವಿ-ದೇವತೆಗಳಾಗುತ್ತೇವೆಂದು ಈಗ ನಿಮಗೆ ತಿಳಿದಿದೆ. ಸ್ವಯಂ ತಂದೆಯೇ ಬಂದು ಓದಿಸುತ್ತಾರೆ ಯಾರ ಮಿಲನಕ್ಕಾಗಿ ಅರ್ಧಕಲ್ಪ ಭಕ್ತಿಮಾರ್ಗವು ನಡೆಯುತ್ತದೆ. ಬಾಬಾ, ಪಾವನರನ್ನಾಗಿ ಮಾಡಿ ಮತ್ತೆ ತಾವು ಯಾರು ಎಂದು ತಮ್ಮ ಪರಿಚಯವನ್ನೂ ಕೊಡಿ ಎಂದು ಹೇಳುತ್ತಾರೆ. ತಂದೆಯು ತಿಳಿಸಿದ್ದಾರೆ - ನೀವಾತ್ಮರು ಬಿಂದುಗಳಾಗಿದ್ದೀರಿ. ಆತ್ಮಕ್ಕೆ ಇಲ್ಲಿ ಶರೀರವು ಸಿಕ್ಕಿದೆ ಆದ್ದರಿಂದ ಇಲ್ಲಿ ಕರ್ಮ ಮಾಡುತ್ತದೆ. ದೇವತೆಗಳು ಸತ್ಯಯುಗದಲ್ಲಿ ರಾಜ್ಯ ಮಾಡಿ ಹೋಗಿದ್ದಾರೆಂದು ಹೇಳುತ್ತಾರೆ. ಅವಶ್ಯವಾಗಿ ಗಾಡ್ಫಾದರ್ ಸ್ವರ್ಗ ಸ್ಥಾಪನೆ ಮಾಡಿದರು, ಆಗ ನಾವು ಇರಲಿಲ್ಲ. ಭಾರತದಲ್ಲಿ ಸ್ವರ್ಗವಿತ್ತು ಎಂದು ಕ್ರಿಶ್ಚಿಯನ್ನರೂ ಸಹ ತಿಳಿದುಕೊಳ್ಳುತ್ತಾರೆ. ಭಾರತವಾಸಿಗಳಿಗಿಂತಲೂ ಅವರ ಬುದ್ಧಿಯಾದರೂ ಸ್ವಲ್ಪ ಚೆನ್ನಾಗಿದೆ. ಸತೋಪ್ರಧಾನರೂ ಭಾರತವಾಸಿಗಳೇ ಆಗುತ್ತಾರೆ ಮತ್ತು ತಮೋಪ್ರಧಾನರೂ ಆಗುತ್ತಾರೆ. ಕ್ರಿಶ್ಚಿಯನ್ನರು ಇಷ್ಟು ಸುಖವನ್ನೂ ನೋಡುವುದಿಲ್ಲ, ಇಷ್ಟು ದುಃಖವನ್ನೂ ನೋಡುವುದಿಲ್ಲ. ಈಗಿನ ಕ್ರಿಶ್ಚಿಯನ್ನರು ಎಷ್ಟೊಂದು ಸುಖಿಯಾಗಿದ್ದಾರೆ! ಮೊದಲಂತೂ ಅವರು ಬಡವರಾಗಿದ್ದರು, ಹಣವನ್ನಂತೂ ಪರಿಶ್ರಮದಿಂದಲೇ ಸಂಪಾದಿಸಲಾಗುತ್ತದೆಯಲ್ಲವೆ. ಮೊದಲು ಒಬ್ಬ ಕ್ರಿಸ್ತನು ಬಂದನು ಮತ್ತು ಅವರ ಧರ್ಮವು ಸ್ಥಾಪನೆಯಾಗುತ್ತದೆ, ವೃದ್ಧಿಯಾಗುತ್ತಾ ಹೋಗುತ್ತದೆ. ಒಬ್ಬರಿಂದ ಇಬ್ಬರು, ಇಬ್ಬರಿಂದ ನಾಲ್ಕು ಜನ - ಹೀಗೆ ವೃದ್ಧಿಯಾಗ ತೊಡಗುತ್ತದೆ. ಈಗ ನೋಡಿ, ಕ್ರಿಶ್ಚಿಯನ್ನರ ವಂಶವೃಕ್ಷವು ಎಷ್ಟೊಂದಾಗಿ ಬಿಟ್ಟಿದೆ. ದೇವಿ-ದೇವತಾ ಮನೆತನವು ತಳಹದಿಯಾಗಿದೆ. ಅದು ಮತ್ತೆ ಈ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ಮೊದಲು ಒಬ್ಬ ಬ್ರಹ್ಮಾ ಮತ್ತೆ ಬ್ರಾಹ್ಮಣರ ದತ್ತು ಸಂತಾನ ವೃದ್ಧಿಯಾಗ ತೊಡಗುತ್ತದೆ. ತಂದೆಯು ಓದಿಸುತ್ತಾರೆ, ಆದ್ದರಿಂದ ಅನೇಕರು ಬ್ರಾಹ್ಮಣರಾಗಿ ಬಿಡುತ್ತಾರೆ. ಮೊದಲು ಇವರೊಬ್ಬರೇ ಇದ್ದರಲ್ಲವೆ. ಒಬ್ಬರಿಂದ ಎಷ್ಟೊಂದು ವೃದ್ಧಿಯಾಗಿದೆ! ಇನ್ನೂ ಎಷ್ಟು ಆಗುವುದಿದೆ! ಎಷ್ಟು ಸೂರ್ಯವಂಶಿ, ಚಂದ್ರವಂಶಿ ದೇವತೆಗಳಿದ್ದರೋ ಅವರೆಲ್ಲರೂ ಈಗಲೇ ತಯಾರಾಗಬೇಕಾಗಿದೆ. ಮೊದಲು ಒಬ್ಬ ತಂದೆಯಾಗಿದ್ದಾರೆ, ಆ ತಂದೆಗೆ ನಾವಾತ್ಮರು ಎಷ್ಟೊಂದು 77 ಮಂದಿ ಸಂತಾನರಿದ್ದೇವೆ. ನಾವೆಲ್ಲಾ ಆತ್ಮರ ತಂದೆಯು ಅನಾದಿಯಾಗಿದ್ದಾರೆ, ಈ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ. ಎಲ್ಲಾ ಮನುಷ್ಯರು ಸದಾ ಇರುವುದಿಲ್ಲ. ಆತ್ಮರು ಭಿನ್ನ-ಭಿನ್ನ ಪಾತ್ರವನ್ನಭಿನಯಿಸಬೇಕಾಗಿದೆ. ಈ ವೃಕ್ಷಕ್ಕೆ ದೇವಿ-ದೇವತೆಗಳು ಮೊದಲ ಬುನಾದಿಯಾಗಿದ್ದಾರೆ. ನಂತರ ಅವರಿಂದ ಶಾಖೆಗಳು ಹೊರಟಿವೆ ಅಂದಾಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ಬಂದು ಏನು ಮಾಡುತ್ತೇನೆ ಎಂಬುದನ್ನು ಮಕ್ಕಳಿಗೆ ತಿಳಿಸುತ್ತಾರೆ. ಆತ್ಮದಲ್ಲಿಯೇ ಧಾರಣೆಯಾಗುತ್ತದೆ. ನಾನು ಹೇಗೆ ಬಂದೆನು ಎಂದು ತಂದೆಯು ಕುಳಿತು ತಿಳಿಸುತ್ತಾರೆ. ನೀವೆಲ್ಲಾ ಮಕ್ಕಳು ಈಗ ಪತಿತರಾಗಿದ್ದೀರಿ, ಆದ್ದರಿಂದ ನೆನಪು ಮಾಡುತ್ತೀರಿ. ಸತ್ಯ-ತ್ರೇತಾಯುಗದಲ್ಲಿ ನೀವು ಸುಖಿಯಾಗಿದ್ದಿರಿ, ಆದ್ದರಿಂದ ನೆನಪು ಮಾಡುತ್ತಿರಲಿಲ್ಲ. ದ್ವಾಪರದ ನಂತರ ಯಾವಾಗ ದುಃಖವು ಹೆಚ್ಚಾಯಿತೋ ಆಗ ಹೇ ಪರಮಪಿತ ಪರಮಾತ್ಮ ತಂದೆಯೇ ಎಂದು ಕರೆದಿರಿ. ಹೌದು ಮಕ್ಕಳೇ, ಕೇಳಿಸಿಕೊಂಡೆನು. ಏನನ್ನು ಬಯಸುತ್ತೀರಿ? ಬಾಬಾ, ಬಂದು ಪತಿತರನ್ನು ಪಾವನ ಮಾಡಿ. ಬಾಬಾ, ನಾವು ಬಹಳ ದುಃಖಿ, ಪತಿತರಾಗಿದ್ದೇವೆ. ಬಂದು ನಮ್ಮನ್ನು ಪಾವನ ಮಾಡಿ, ಕೃಪೆ ಮಾಡಿ, ಆಶೀರ್ವಾದ ಮಾಡಿ ಎಂದು ನೀವು ನನ್ನನ್ನು ಕರೆದಿರಿ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಇದನ್ನೂ ಸಹ ಸ್ವಯಂ ತಂದೆಯು ತಿಳಿಸುತ್ತಾರೆ. ಡ್ರಾಮಾ ಪ್ಲಾನನುಸಾರ ಯಾವಾಗ ಸಂಗಮಯುಗವಾಗುವುದೋ, ಸೃಷ್ಟಿಯು ಹಳೆಯದಾಗುವುದೋ ಆಗ ನಾನು ಬರುತ್ತೇನೆ.

ನೀವು ತಿಳಿದುಕೊಂಡಿದ್ದೀರಿ, ಸನ್ಯಾಸಿಗಳು ಎರಡು ಪ್ರಕಾರದವರಿದ್ದಾರೆ, ಅವರು ಹಠಯೋಗಿಗಳಾಗಿದ್ದಾರೆ, ರಾಜಯೋಗಿಗಳೆಂದು ಹೇಳಲಾಗುವುದಿಲ್ಲ. ಅವರದು ಹದ್ದಿನ ಸನ್ಯಾಸವಾಗಿದೆ, ಮನೆ-ಮಠವನ್ನು ಬಿಟ್ಟು ಹೋಗಿ ಕಾಡಿನಲ್ಲಿರುತ್ತಾರೆ. ಗುರುಗಳಿಗೆ ಅನುಯಾಯಿಗಳಾಗುತ್ತಾರೆ. ಗೋಪಿ ಚಂದ ರಾಜನ ಒಂದು ಕಥೆಯನ್ನೂ ಹೇಳುತ್ತಾರೆ. ಅವರು ಕೇಳಿದರು - ನೀವು ಮನೆಯನ್ನು ಏಕೆ ಬಿಡುತ್ತೀರಿ? ಎಲ್ಲಿಗೆ ಹೋಗುತ್ತೀರಿ? ಶಾಸ್ತ್ರಗಳಲ್ಲಿ ಬಹಳಷ್ಟು ಕಥೆಗಳಿವೆ. ನೀವೀಗ ಬ್ರಹ್ಮಾಕುಮಾರ-ಕುಮಾರಿಯರು ಹೋಗಿ ರಾಜರಿಗೂ ರಾಜಯೋಗವನ್ನು ಕಲಿಸುತ್ತೀರಿ. ಒಂದು ಅಷ್ಟವಕ್ರ ಗೀತೆಯೂ ಇದೆ, ಅದರಲ್ಲಿ ತೋರಿಸುತ್ತಾರೆ - ರಾಜನಿಗೆ ವೈರಾಗ್ಯ ಬಂದಿತು. ನಮಗೆ ಯಾರಾದರೂ ಪರಮಾತ್ಮನೊಂದಿಗೆ ಮಿಲನ ಮಾಡಿಸಿ ಎಂದು ಕೇಳಿದರು. ಡಂಗುರ ಹೊಡೆಸಿದರು. ಅದು ಇದೇ ಸಮಯವಾಗಿದೆ. ನೀವು ಹೋಗಿ ತಂದೆಯೊಂದಿಗೆ ಮಿಲನ ಮಾಡಿಸಲು ರಾಜರಿಗೂ ಜ್ಞಾನ ಕೊಡುತ್ತೀರಲ್ಲವೆ. ಹೇಗೆ ನೀವು ಮಿಲನ ಮಾಡಿದ್ದೀರೋ ಹಾಗೆಯೇ ಅನ್ಯರನ್ನೂ ಮಿಲನ ಮಾಡಿಸುವ ಪ್ರಯತ್ನ ಪಡುತ್ತೀರಿ. ನಾವು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇವೆ, ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತೇವೆಂದು ಹೇಳುತ್ತೀರಿ ಮತ್ತು ನೀವು ತಿಳಿಸಿ ಶಿವ ತಂದೆಯನ್ನು ನೆನಪು ಮಾಡಿ, ಮತ್ತ್ಯಾರನ್ನೂ ಅಲ್ಲ. ಆರಂಭದಲ್ಲಿ ನಿಮ್ಮ ಬಳಿಯೂ ಕುಳಿತು-ಕುಳಿತಿದ್ದಂತೆಯೇ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು, ಬಹಳ ಆಶ್ಚರ್ಯವೆನಿಸುತ್ತಿತ್ತು. ಇವರಲ್ಲಿ ತಂದೆಯಿದ್ದರಲ್ಲವೆ. ಅವರು ಚಮತ್ಕಾರ ತೋರಿಸುತ್ತಿದ್ದರು. ಎಲ್ಲರ ಬುದ್ಧಿಯ ಹಗ್ಗವನ್ನು ಸೆಳೆಯುತ್ತಿದ್ದರು. ಬಾಪ್ದಾದಾ ಒಟ್ಟಿಗೆ ಸೇರಿ ಬಿಟ್ಟರಲ್ಲವೆ. ಇಲ್ಲಿ ಸ್ಮಶಾನ ಮಾಡಿ ಬಿಡುತ್ತಿದ್ದರು, ಎಲ್ಲರೂ ತಂದೆಯ ನೆನಪಿನಲ್ಲಿ ಮಲಗಿ ಬಿಡಿ ಎಂದು ಹೇಳಿದಾಗ ಎಲ್ಲರೂ ಧ್ಯಾನದಲ್ಲಿ ಹೊರಟು ಹೋಗುತ್ತಿದ್ದರು. ಇದೆಲ್ಲವೂ ಶಿವ ತಂದೆಯ ಚತುರತೆಯಾಗಿತ್ತು, ಇದನ್ನು ಅನ್ಯರು ಜಾದುವೆಂದು ಹೇಳತೊಡಗಿದರು. ಇದು ಶಿವ ತಂದೆಯ ಆಟವಾಗಿತ್ತು. ತಂದೆಯು ಜಾದೂಗಾರ, ಸೌಧಾಗಾರ, ರತ್ನಾಗಾರನಲ್ಲವೆ. ಅಗಸನೂ ಆಗಿದ್ದಾರೆ, ಅಕ್ಕಸಾಲಿಗನೂ ಆಗಿದ್ದಾರೆ, ವಕೀಲನೂ ಆಗಿದ್ದಾರೆ. ಎಲ್ಲರನ್ನೂ ರಾವಣನ ಬಂಧನದಿಂದ ಬಿಡಿಸುತ್ತಾರೆ. ಹೇ ಪತಿತ-ಪಾವನ, ಹೇ ದೂರ ದೇಶದಲ್ಲಿರುವ ತಂದೆಯೇ.... ಬಂದು ನಮ್ಮನ್ನು ಪಾವನ ಮಾಡಿ, ಪತಿತ ಪ್ರಪಂಚದಲ್ಲಿ ಪತಿತ ಶರೀರದಲ್ಲಿ ಬಂದು ನಮ್ಮನ್ನು ಪಾವನ ಮಾಡಿ ಎಂದೇ ಅವರನ್ನು ಕರೆಯುತ್ತಾರೆ. ನೀವೀಗ ಅದರ ಅರ್ಥವನ್ನೂ ತಿಳಿದುಕೊಂಡಿದ್ದೀರಿ. ತಂದೆಯು ಬಂದು ತಿಳಿಸುತ್ತಾರೆ - ನೀವು ಮಕ್ಕಳು ರಾವಣನ ದೇಶದಲ್ಲಿ ನನ್ನನ್ನು ಕರೆದಿರಿ, ನಾನಂತೂ ಪರಮಧಾಮದಲ್ಲಿ ಕುಳಿತಿದ್ದೆನು, ಸ್ವರ್ಗ ಸ್ಥಾಪನೆ ಮಾಡಲು ನನ್ನನ್ನು ನರಕ, ರಾವಣನ ದೇಶದಲ್ಲಿ ನಮ್ಮನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಕರೆದಿರಿ. ಈಗ ನೀವು ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ. ಇದು ಡ್ರಾಮಾ ಆಗಿದೆ. ನಾನು ನಿಮಗೆ ಯಾವ ರಾಜ್ಯವನ್ನು ಕೊಟ್ಟಿದ್ದೆನೋ ಅದು ಕಳೆದು ಹೋಯಿತು ಮತ್ತೆ ದ್ವಾಪರದಿಂದ ರಾವಣ ರಾಜ್ಯವು ನಡೆಯಿತು. ಪಂಚ ವಿಕಾರಗಳಲ್ಲಿ ಬಿದ್ದಿರಿ, ಜಗನ್ನಾಥ ಪುರಿಯಲ್ಲಿ ವಾಮ ಮಾರ್ಗದ ಚಿತ್ರಗಳೂ ಇವೆ. ಮೊದಲ ನಂಬರಿನಲ್ಲಿ ಯಾರಿದ್ದರೋ ಅವರೇ ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ಈಗ ಅಂತಿಮದಲ್ಲಿದ್ದಾರೆ. ಈಗ ಮತ್ತೆ ಅವರೇ ಮೊದಲ ನಂಬರಿನಲ್ಲಿ ಹೋಗಬೇಕಾಗಿದೆ. ಈ ಬ್ರಹ್ಮಾರವರು ಕುಳಿತಿದ್ದಾರೆ, ವಿಷ್ಣುವೂ ಕುಳಿತಿದ್ದಾರೆ. ಪರಸ್ಪರ ಇವರ ಸಂಬಂಧವೇನು? ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮಾ-ಸರಸ್ವತಿಯೂ ಸಹ ಮೂಲತಃ ಸತ್ಯಯುಗದ ಮಾಲೀಕರು ಲಕ್ಷ್ಮೀ-ನಾರಾಯಣರಾಗಿದ್ದರು. ಈಗ ನರಕದ ಮಾಲೀಕರಾಗಿದ್ದಾರೆ. ಮತ್ತೆ ಲಕ್ಷ್ಮೀ-ನಾರಾಯಣರಾಗಲು ಈಗ ತಪಸ್ಸು ಮಾಡುತ್ತಿದ್ದಾರೆ. ದಿಲ್ವಾಡಾ ಮಂದಿರದಲ್ಲಿ ಪೂರ್ಣ ನೆನಪಾರ್ಥವಿದೆ. ತಂದೆಯು ಇಲ್ಲಿಯೇ ಬಂದಿದ್ದಾರೆ ಆದ್ದರಿಂದ ಈಗ ಬರೆಯುತ್ತಾರೆ. ಅಬು ಪರ್ವತವು ಸರ್ವ ತೀರ್ಥ ಸ್ಥಾನಗಳಲ್ಲಿ, ಎಲ್ಲಾ ಧರ್ಮಗಳ ತೀರ್ಥ ಸ್ಥಾನಗಳಿಗಿಂತಲೂ ಮುಖ್ಯ ತೀರ್ಥ ಸ್ಥಾನವಾಗಿದೆ ಏಕೆಂದರೆ ತಂದೆಯು ಇಲ್ಲಿಯೇ ಬಂದು ಸರ್ವ ಧರ್ಮಗಳ ಸದ್ಗತಿ ಮಾಡುತ್ತಾರೆ. ನೀವು ಶಾಂತಿಧಾಮಕ್ಕೆ ಹೋಗಿ ನಂತರ ಸುಖಧಾಮದಲ್ಲಿ ಬರುತ್ತೀರಿ. ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುವರು. ಆ ಮಂದಿರವು ಜಡ ನೆನಪಾರ್ಥವಾಗಿದೆ, ಇದು ಚೈತನ್ಯವಾಗಿದೆ. ಯಾವಾಗ ನೀವು ಚೈತನ್ಯದಲ್ಲಿ ಆಗಿ ಬಿಡುತ್ತೀರೋ ಆಗ ಈ ಮಂದಿರಗಳೆಲ್ಲವೂ ಸಮಾಪ್ತಿಯಾಗುತ್ತವೆ. ಮತ್ತೆ ಭಕ್ತಿಮಾರ್ಗದಲ್ಲಿ ಈ ನೆನಪಾರ್ಥಗಳನ್ನು ಮಾಡಿಸುತ್ತಾರೆ. ನೀವೀಗ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದೀರಿ. ಸ್ವರ್ಗವು ಮೇಲಿದೆಯೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಇದೇ ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಈ ಚಕ್ರವನ್ನು ನೋಡುತ್ತಿದ್ದಂತೆಯೇ ಎಲ್ಲಾ ಜ್ಞಾನವು ಬಂದು ಬಿಡುತ್ತದೆ. ದ್ವಾಪರದಿಂದ ಬೇರೆ-ಬೇರೆ ಧರ್ಮದವರು ಬರುತ್ತಾರೆ. ಆದ್ದರಿಂದ ನೋಡಿ, ಈಗ ಎಷ್ಟೊಂದು ಧರ್ಮಗಳಿವೆ! ಇದು ಕಲಿಯುಗವಾಗಿದೆ. ನೀವೀಗ ಸಂಗಮದಲ್ಲಿದ್ದೀರಿ. ಸತ್ಯಯುಗದಲ್ಲಿ ಹೋಗಲು ಪುರುಷಾರ್ಥ ಮಾಡುತ್ತೀರಿ. ಕಲಿಯುಗದಲ್ಲಿ ಎಲ್ಲರೂ ಕಲ್ಲು ಬುದ್ಧಿಯವರಾಗಿದ್ದಾರೆ. ಸತ್ಯಯುಗದಲ್ಲಿ ಪಾರಸ ಬುದ್ಧಿಯವರಿರುತ್ತಾರೆ. ನೀವೇ ಪಾರಸ ಬುದ್ಧಿಯವರಿದ್ದಿರಿ, ನೀವೇ ನಂತರ ಕಲ್ಲು ಬುದ್ಧಿಯವರಾಗಿದ್ದೀರಿ. ಈಗ ಪುನಃ ಪಾರಸ ಬುದ್ಧಿಯವರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಕರೆದಿರಿ, ಆದ್ದರಿಂದ ನಾನು ಬಂದಿದ್ದೇನೆ ಮತ್ತು ನಿಮಗೆ ಹೇಳುತ್ತೇನೆ - ಕಾಮವನ್ನು ಜಯಿಸಿದರೆ ಜಗತ್ಜೀತರಾಗುವಿರಿ. ಮುಖ್ಯವಾದ ವಿಕಾರವು ಇದೇ ಆಗಿದೆ. ಸತ್ಯಯುಗದಲ್ಲಿ ಎಲ್ಲರೂ ನಿರ್ವಿಕಾರಿಗಳಿರುತ್ತಾರೆ. ಕಲಿಯುಗದಲ್ಲಿ ವಿಕಾರಿಗಳಾಗಿದ್ದಾರೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನಿರ್ವಿಕಾರಿಗಳಾಗಿ. 63 ಜನ್ಮಗಳಂತೂ ವಿಕಾರದಲ್ಲಿ ಹೋಗಿದ್ದೀರಿ, ಈ ಅಂತಿಮ ಜನ್ಮ ಪವಿತ್ರರಾಗಿ. ಈಗ ಎಲ್ಲರೂ ಸಾಯಲೇಬೇಕಾಗಿದೆ. ನಾನು ಸ್ವರ್ಗ ಸ್ಥಾಪನೆ ಮಾಡಲು ಬಂದಿದ್ದೇನೆ ಅಂದಮೇಲೆ ಈಗ ನನ್ನ ಶ್ರೀಮತದಂತೆ ನಡೆಯಿರಿ. ನಾನು ಏನು ಹೇಳುವೆನೋ ಅದನ್ನು ಕೇಳಿಸಿಕೊಳ್ಳಿ. ನೀವೀಗ ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುವ ಪುರುಷಾರ್ಥ ಮಾಡುತ್ತಿದ್ದೀರಿ. ನೀವೇ ಪೂರ್ಣ ಏಣಿಯನ್ನು ಏರುತ್ತೀರಿ ಮತ್ತು ಇಳಿಯುತ್ತೀರಿ. ನೀವು ಹೇಗೆ ಜಿನ್ಹ್ರಾಗಿದ್ದೀರಿ. ಜಿನ್ಹನ ಕಥೆಯಿದೆಯಲ್ಲವೆ - ನನಗೆ ಕೆಲಸ ಕೊಡಿ ಎಂದು ಜಿನ್ಹನು ಹೇಳಿದನು ಆಗ ಒಳ್ಳೆಯದು, ಏಣಿಯನ್ನು ಹತ್ತು ಮತ್ತು ಇಳಿ ಎಂದು ರಾಜನು ಹೇಳಿದನು. ಅನೇಕ ಮನುಷ್ಯರು ಹೇಳುತ್ತಾರೆ - ಭಗವಂತನಿಗೆ ಏನಾಗಿತ್ತು ಏಣಿಯನ್ನು ಹತ್ತಿಸುತ್ತಾರೆ ಮತ್ತು ಇಳಿಸುತ್ತಾರೆ! ಇಂತಹ ಏಣಿಯನ್ನು ಮಾಡಲು ಭಗವಂತನಿಗೇನಾಗಿತ್ತು ಎಂದು ಹೇಳುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಇದು ಅನಾದಿ ಆಟವಾಗಿದೆ. ನೀವು 5000 ವರ್ಷಗಳಲ್ಲಿ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ನೀವು ಕೆಳಗಿಳಿಯುವುದರಲ್ಲಿ 5000 ವರ್ಷಗಳು ಹಿಡಿಸಿತು, ಈಗ ಒಂದು ಸೆಕೆಂಡಿನಲ್ಲಿ ಮೇಲೇರುತ್ತೀರಿ. ಇದು ನಿಮ್ಮ ಯೋಗಬಲದ ಲಿಫ್ಟ್ ಆಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುತ್ತವೆ. ತಂದೆಯು ಬರುತ್ತಾರೆಂದರೆ ಸೆಕೆಂಡಿನಲ್ಲಿ ನೀವು ಮೇಲೇರುತ್ತೀರಿ. ಮತ್ತೆ ಕೆಳಗಿಳಿಯುವುದರಲ್ಲಿ 5000 ವರ್ಷಗಳು ಹಿಡಿಸಿತು. ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಏರುವುದಕ್ಕಂತೂ ಲಿಫ್ಟ್ ಇದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ. ಸತೋಪ್ರಧಾನರಾಗಬೇಕಾಗಿದೆ ನಂತರ ಕ್ರಮೇಣವಾಗಿ ತಮೋಪ್ರಧಾನರಾಗುತ್ತೀರಿ. 5000 ವರ್ಷಗಳು ಹಿಡಿಸುತ್ತವೆ, ಒಳ್ಳೆಯದು, ಈಗ ಮತ್ತೆ ತಮೋಪ್ರಧಾನರಿಂದ ಇದೊಂದು ಜನ್ಮದಲ್ಲಿ ಸತೋಪ್ರಧಾನರಾಗಬೇಕಾಗಿದೆ. ನಾನೀಗ ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆ ಅಂದಮೇಲೆ ನೀವೇಕೆ ಪವಿತ್ರರಾಗುವುದಿಲ್ಲ! ಆದರೆ ಕಾಮೇಶು, ಕ್ರೋದೇಶುಗಳು ಇದ್ದಾರಲ್ಲವೆ. ವಿಕಾರ ಸಿಗದಿದ್ದರೆ ಮತ್ತೆ ಸ್ತ್ರೀಯನ್ನು ಹೊಡೆಯುತ್ತಾರೆ, ಹೊರ ಹಾಕುತ್ತಾರೆ, ಬೆಂಕಿಯನ್ನಿಟ್ಟು ಬಿಡುತ್ತಾರೆ. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ! ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಜಗತ್ತಿನ ಮಾಲೀಕರಾಗಲು ಅಥವಾ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಮುಖ್ಯವಾಗಿ ಕಾಮ ವಿಕಾರದ ಮೇಲೆ ಜಯ ಗಳಿಸಬೇಕಾಗಿದೆ. ಸಂಪೂರ್ಣ ನಿರ್ವಿಕಾರಿಗಳು ಅವಶ್ಯವಾಗಿ ಆಗಬೇಕಾಗಿದೆ.

2. ಹೇಗೆ ನಮಗೆ ತಂದೆಯು ಸಿಕ್ಕಿದ್ದಾರೆ, ಹಾಗೆಯೇ ಎಲ್ಲರನ್ನೂ ತಂದೆಯೊಂದಿಗೆ ಮಿಲನ ಮಾಡಿಸುವ ಪ್ರಯತ್ನ ಪಡಬೇಕಾಗಿದೆ. ತಂದೆಯ ಸತ್ಯ ಪರಿಚಯವನ್ನು ಕೊಡಬೇಕಾಗಿದೆ. ಸತ್ಯ-ಸತ್ಯವಾದ ಯಾತ್ರೆಯನ್ನು ಕಲಿಸಬೇಕಾಗಿದೆ.

ವರದಾನ:
ಸೈಲೆನ್ಸ್ನ (ಶಾಂತಿಯ) ಶಕ್ತಿಯ ಮುಖಾಂತರ ಸೆಕೆಂಡ್ನಲ್ಲಿ ಎಲ್ಲಾ ಸಮಸ್ಯೆಗಳಿಗೆ ಸಮಾಧಾನ ಮಾಡುವಂತಹ ಏಕಾಂತವಾಸಿ ಭವ.

ಯಾವಾಗ ಏನಾದರೂ ಹೊಸ ಅಥವಾ ಶಕ್ತಿಶಾಲಿ ಆವಿಷ್ಕಾರ ಮಾಡುವಿರಿ ಎಂದಾಗ ಅಂಡರ್ಗ್ರೌಂಡ್ ಆಗುತ್ತಾರೆ. ಹೀಗೆ ಏಕಾಂತವಾಸಿಗಳಾಗುವುದೇ ಅಂಡರ್ಗ್ರೌಂಡ್ ಆಗಿದೆ. ಏನೇ ಸಮಯ ಸಿಕ್ಕಿದರೂ, ಕಾರ್ಯ ವ್ಯವಹಾರ ಮಾಡುತ್ತಿದ್ದರೂ ಸಹ, ಹೇಳುತ್ತಾ-ಕೇಳುತ್ತಾ, ಸೂಚನೆಗಳನ್ನು ಕೊಡುತ್ತಿದ್ದರೂ ಸಹ ಈ ದೇಹದ ಜಗತ್ತು ಮತ್ತು ದೇಹದ ಭಾನದಿಂದ ದೂರ ಸೈಲೆನ್ಸ್ನಲ್ಲಿ ಹೋಗಿ ಬಿಡಿ. ಈ ಅಭ್ಯಾಸ ಹಾಗೂ ಅನುಭವ ಮಾಡುವ ಮಾಡಿಸುವ ಸ್ಟೇಜ್ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಿಂದ ಒಂದು ಸೆಕೆಂಡ್ನಲ್ಲಿ ಯಾರಿಗಾದರೂ ಸಹ ಶಾಂತಿ ಅಥವಾ ಶಕ್ತಿಯ ಅನುಭೂತಿ ಮಾಡಿಸಬಹುದು. ಯಾರೇ ಎದುರಿಗೆ ಬಂದರೂ ಅವರೂ ಇದೇ ಸ್ಟೇಜ್ನಲ್ಲಿ ಸಾಕ್ಷಾತ್ಕಾರದ ಅನುಭವ ಮಾಡುತ್ತಾರೆ.

ಸ್ಲೋಗನ್:
ವ್ಯರ್ಥ ಸಂಕಲ್ಪ ಅಥವಾ ವಿಕಲ್ಪದಿಂದ ದೂರ ಹೋಗಿ ಆತ್ಮಿಕ ಸ್ಥಿತಿಯಲ್ಲಿರುವುದೇ ಯೋಗಯುಕ್ತರಾಗಿರುವುದು.


ಡಬ್ಬಲ್ಲೈಟ್ ಸ್ಥಿತಿಯ ಅನುಭವ:-
ಶುಭ ಚಿಂತನೆ, ಜ್ಞಾನ ಚಿಂತನೆಯ ಮೂಲಕ ವ್ಯರ್ಥ ಹಾಗೂ ನಕಾರಾತ್ಮಕತೆಯ ಹೊರೆಯಿಂದ ಹಗುರರಾಗಿ ಪ್ರಕಾಶತೆಯ ವತನದ ಪರಿಕ್ರಮಣ ಮಾಡಿರಿ. ವ್ಯರ್ಥ ಸಮಯ, ವ್ಯರ್ಥ ಸಂಗ ಮತ್ತು ವ್ಯರ್ಥ ವಾತಾವರಣದಿಂದ ಸ್ವಯಂನ್ನು ಮುಕ್ತಗೊಳಿಸುತ್ತಾ ಡಬ್ಬಲ್ಲೈಟ್ ಫರಿಶ್ತಾ ಆಗಿರಿ.