15.02.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಈ
ಸಂಗಮಯುಗವು ಏರುವ ಕಲೆಯ ಯುಗವಾಗಿದೆ, ಇದರಲ್ಲಿ ಎಲ್ಲರ ಉನ್ನತಿಯಾಗುತ್ತದೆ ಆದ್ದರಿಂದ ನಿಮ್ಮ ಏರುವ
ಕಲೆಯಿಂದ ಸರ್ವರ ಉನ್ನತಿಯೆಂದು ಹೇಳಲಾಗುತ್ತದೆ.”
ಪ್ರಶ್ನೆ:
ತಂದೆಯು ಎಲ್ಲಾ
ಬ್ರಾಹ್ಮಣ ಮಕ್ಕಳಿಗೆ ಬಹಳ-ಬಹಳ ಶುಭಾಷಯಗಳನ್ನು ಕೊಡುತ್ತಾರೆ - ಏಕೆ?
ಉತ್ತರ:
ಏಕೆಂದರೆ ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳು ಮನುಷ್ಯರಿಂದ ದೇವತೆಗಳಾಗುತ್ತೀರಿ.
ನೀವೀಗ ರಾವಣನ ಬಂಧನಗಳಿಂದ ಮುಕ್ತರಾಗುತ್ತೀರಿ, ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ.
ಪಾಸ್-ವಿತ್-ಆನರ್ ಆಗುತ್ತೀರಿ, ನಾನಲ್ಲ. ಆದ್ದರಿಂದ ತಂದೆಯು ನಿಮಗೆ ಬಹಳ-ಬಹಳ ಶುಭಾಷಯಗಳನ್ನು
ನೀಡುತ್ತಾರೆ. ನೀವಾತ್ಮಗಳು ಪತಂಗಗಳಾಗಿದ್ದೀರಿ, ನಿಮ್ಮ ಸೂತ್ರದ ದಾರವು ನನ್ನ ಕೈಯಲ್ಲಿದೆ. ನಾನು
ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ.
ಗೀತೆ:
ಕೊನೆಗೂ ಆ ದಿನ
ಇಂದು ಬಂದಿತು.........
ಓಂ ಶಾಂತಿ.
ಈ ಅಮರ ಕಥೆಯನ್ನು ಯಾರು ತಿಳಿಸುತ್ತಿದ್ದಾರೆ? ಅಮರ ಕಥೆಯೆಂದಾದರೂ ಹೇಳಿ, ಸತ್ಯ ನಾರಾಯಣನ
ಕಥೆಯೆಂದಾದರೂ ಹೇಳಿ ಅಥವಾ ಮೂರನೇ ನೇತ್ರದ ಕಥೆಯೆಂದಾದರೂ ಹೇಳಿ - ಮೂರೂ ಮುಖ್ಯವಾಗಿದೆ. ಈಗ ನೀವು
ಯಾರ ಸಮ್ಮುಖದಲ್ಲಿ ಕುಳಿತಿದ್ದೀರಿ, ಮತ್ತು ಯಾರು ನಿಮಗೆ ತಿಳಿಸುತ್ತಿದ್ದಾರೆ? ಸತ್ಸಂಗಗಳನ್ನಂತೂ
ಇವರೂ ಸಹ (ಬ್ರಹ್ಮಾ) ಬಹಳ ಮಾಡಿದ್ದಾರೆ. ಅಲ್ಲಂತೂ ಎಲ್ಲಾ ಮನುಷ್ಯರು ನೋಡಲು ಹೋಗುತ್ತಾರೆ, ಇಂತಹ
ಸನ್ಯಾಸಿಯು ಕಥೆಯನ್ನು ತಿಳಿಸುತ್ತಾರೆ, ಶಿವಾನಂದರು ತಿಳಿಸುತ್ತಾರೆಂದು ಹೇಳುತ್ತಾರೆ. ಭಾರತದಲ್ಲಿ
ಅನೇಕ ಸತ್ಸಂಗಗಳಿವೆ, ಗಲ್ಲಿ-ಗಲ್ಲಿಯಲ್ಲಿಯೂ ಸತ್ಸಂಗಗಳಿವೆ, ಮಾತೆಯರೂ ಸಹ ಪುಸ್ತಕವನ್ನು ಹಿಡಿದು
ಸತ್ಸಂಗ ಮಾಡುತ್ತಾರೆ. ಆದ್ದರಿಂದ ಅಲ್ಲಿ ಮನುಷ್ಯರು ಹೋಗಿ ನೋಡುತ್ತಾರೆ ಆದರೆ ಇಲ್ಲಂತೂ ಇದು
ಅದ್ಭುತವಾದ ಮಾತಾಗಿದೆ. ನಿಮ್ಮ ಬುದ್ಧಿಯಲ್ಲಿ ಯಾರಿದ್ದಾರೆ? ಪರಮಾತ್ಮ. ನೀವು ಹೇಳುತ್ತೀರಿ - ಈಗ
ತಂದೆಯು ಸಮ್ಮುಖದಲ್ಲಿ ಬಂದಿದ್ದಾರೆ, ನಿರಾಕಾರ ತಂದೆಯು ನಮಗೆ ಓದಿಸುತ್ತಾರೆ. ವಾಹ್! ಈಶ್ವರನಂತೂ
ನಾಮ-ರೂಪದಿಂದ ಭಿನ್ನನಾಗಿದ್ದಾರೆಂದು ಮನುಷ್ಯರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ -
ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ -
ಇಲ್ಲಿ ಯಾವುದೇ ಸಾಕಾರ ಮನುಷ್ಯರು ಓದಿಸುವುದಿಲ್ಲ. ಮತ್ತೆಲ್ಲಿಯಾದರೂ ಹೋಗಿ ಇಡೀ ವಿಶ್ವದಲ್ಲಿ
ಸಾಕಾರಿ ಮನುಷ್ಯರೇ ಓದಿಸುತ್ತಾರೆ. ಇಲ್ಲಂತೂ ಪರಮಾತ್ಮ ತಂದೆಯಾಗಿದ್ದಾರೆ, ಯಾರಿಗೆ ನಿರಾಕಾರ
ಪರಮಪಿತನೆಂದು ಹೇಳಲಾಗುತ್ತದೆ. ಆ ನಿರಾಕಾರನೇ ಸಾಕಾರದಲ್ಲಿ ಕುಳಿತು ಓದಿಸುತ್ತಾರೆ. ಇದು ಸಂಪೂರ್ಣ
ಹೊಸ ಮಾತಾಯಿತು. ಪ್ರತಿ ಜನ್ಮದಲ್ಲಿ ನೀವು ಕೇಳುತ್ತಲೇ ಬಂದಿದ್ದೀರಿ, ಇವರು ಇಂತಹ
ಪಂಡಿತನಾಗಿದ್ದಾರೆ, ಗುರುವಾಗಿದ್ದಾರೆ ಎಂದು. ಅನೇಕಾನೇಕ ಹೆಸರುಗಳಿವೆ, ಭಾರತವಂತೂ ಬಹಳ
ದೊಡ್ಡದಾಗಿದೆ, ಯಾರೆಲ್ಲಾ ಏನೆಲ್ಲಾ ಕಲಿಸುವರೋ, ತಿಳಿಸುವರೋ ಎಲ್ಲರೂ ಮನುಷ್ಯರೇ ಆಗಿದ್ದಾರೆ.
ಮನುಷ್ಯರೇ ಶಿಷ್ಯರಾಗಿದ್ದಾರೆ. ಅನೇಕ ಪ್ರಕಾರದ ಮನುಷ್ಯರಿದ್ದಾರೆ, ಇಂತಹವರು ತಿಳಿಸಿ
ಕೊಡುತ್ತಾರೆಂದು ಯಾವಾಗಲೂ ಶರೀರದ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ಹೇ
ಪತಿತ-ಪಾವನ ಬನ್ನಿ ಎಂದು ನಿರಾಕಾರನನ್ನು ಕರೆಯುತ್ತಾರೆ. ಅವರೇ ಬಂದು ಮಕ್ಕಳಿಗೆ ತಿಳಿಸುತ್ತಾರೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ಇಡೀ ಪ್ರಪಂಚವು ಪತಿತವಾಗಿ ಬಿಡುತ್ತದೆ,
ಅದನ್ನು ಪಾವನ ಮಾಡುವವರು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ. ನೀವು ಇಲ್ಲಿ ಯಾರೆಲ್ಲಾ
ಕುಳಿತಿದ್ದೀರಿ, ನಿಮ್ಮಲ್ಲಿಯೂ ಕೆಲವರು ಕಚ್ಚಾ ಇದ್ದಾರೆ, ಕೆಲವರು ಪಕ್ಕಾ ಇದ್ದಾರೆ ಏಕೆಂದರೆ
ಅರ್ಧಕಲ್ಪ ನೀವು ದೇಹಾಭಿಮಾನಿಯಾಗಿದ್ದೀರಿ. ಈಗ ಈ ಜನ್ಮದಲ್ಲಿ ದೇಹೀ-ಅಭಿಮಾನಿಯಾಗಬೇಕಾಗಿದೆ. ನಮ್ಮ
ದೇಹದಲ್ಲಿರುವ ಆತ್ಮಕ್ಕೆ ಪರಮಾತ್ಮನು ಕುಳಿತು ತಿಳಿಸಿ ಕೊಡುತ್ತಾರೆ. ಆತ್ಮವೇ ಸಂಸ್ಕಾರವನ್ನು
ತೆಗೆದುಕೊಂಡು ಹೋಗುತ್ತದೆ. ಆತ್ಮವೇ ಕರ್ಮೇಂದ್ರಿಯಗಳ ಮೂಲಕ ನಾನು ಇಂತಹವನಾಗಿದ್ದೇನೆ ಎಂದು
ಹೇಳುತ್ತದೆ ಆದರೆ ಆತ್ಮಾಭಿಮಾನಿಗಳಂತೂ ಯಾರೂ ಆಗಿಲ್ಲ. ತಂದೆಯು ತಿಳಿಸುತ್ತಾರೆ - ಯಾರು ಈ
ಭಾರತದಲ್ಲಿ ಸೂರ್ಯವಂಶಿ, ಚಂದ್ರವಂಶಿಯರಾಗಿದ್ದರೋ ಅವರೇ ಈ ಸಮಯದಲ್ಲಿ ಬಂದು ಬ್ರಾಹ್ಮಣರಾಗುತ್ತಾರೆ
ನಂತರ ದೇವತೆಗಳಾಗುತ್ತಾರೆ. ಮನುಷ್ಯರು ದೇಹಾಭಿಮಾನಿಗಳಾಗಿರುವ ಅಭ್ಯಾಸಿಗಳಾಗಿದ್ದಾರೆ ಆದ್ದರಿಂದ
ದೇಹೀ-ಅಭಿಮಾನಿಯಾಗಿರುವುದನ್ನು ಮರೆತು ಹೋಗುತ್ತಾರೆ. ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ
- ದೇಹೀ-ಅಭಿಮಾನಿಯಾಗಿರಿ, ಆತ್ಮವೇ ಭಿನ್ನ-ಭಿನ್ನ ಶರೀರವನ್ನು ತೆಗೆದುಕೊಂಡು
ಪಾತ್ರವನ್ನಭಿನಯಿಸುತ್ತದೆ. ಇವು ಅದರ ಕರ್ಮೇಂದ್ರಿಯಗಳಾಗಿವೆ. ಈಗ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಮನ್ಮನಾಭವ. ಕೇವಲ ಗೀತೆಯನ್ನು ಓದುವುದರಿಂದ ಯಾವುದೇ ರಾಜ್ಯಭಾಗ್ಯವು ಸಿಗಲು ಸಾಧ್ಯವಿಲ್ಲ.
ನಮ್ಮನ್ನು ಈ ಸಮಯದಲ್ಲಿ ತ್ರಿಕಾಲದರ್ಶಿಗಳನ್ನಾಗಿ ಮಾಡಲಾಗುತ್ತದೆ. ರಾತ್ರಿ-ಹಗಲಿನ ಅಂತರವಾಗಿ
ಬಿಟ್ಟಿದೆ. ತಂದೆಯು ತಿಳಿಸುತ್ತಾರೆ - ನಾನು ನಮಗೆ ರಾಜಯೋಗವನ್ನು ಕಲಿಸುತ್ತೇನೆ, ಕೃಷ್ಣನಂತೂ
ಸತ್ಯಯುಗದ ರಾಜಕುಮಾರನಾಗಿದ್ದಾನೆ. ಯಾರು ಸೂರ್ಯವಂಶಿ ದೇವತೆಗಳಾಗಿದ್ದರೋ ಅವರಲ್ಲಿಯೂ
ಜ್ಞಾನವಿರಲಿಲ್ಲ, ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ, ಜ್ಞಾನವು ಸದ್ಗತಿಗಾಗಿಯೇ ಇದೆ.
ಸತ್ಯಯುಗದಲ್ಲಿ ಯಾರೂ ದುರ್ಗತಿಯಲ್ಲಿರುವುದಿಲ್ಲ. ಅದು ಸತ್ಯಯುಗವಾಗಿದೆ, ಈಗ ಕಲಿಯುಗವಾಗಿದೆ.
ಭಾರತದಲ್ಲಿ ಮೊದಲು ಸೂರ್ಯವಂಶಿಯರು 8 ಜನ್ಮ, ನಂತರ ಚಂದ್ರವಂಶಿಯರು 12 ಜನ್ಮಗಳನ್ನು
ತೆಗೆದುಕೊಳ್ಳುತ್ತಾರೆ. ಇದೊಂದು ಜನ್ಮ ನಮ್ಮದು ಎಲ್ಲರಿಗಿಂತ ಒಳ್ಳೆಯ ಜನ್ಮವಾಗಿದೆ. ನೀವು
ಪ್ರಜಾಪಿತ ಬ್ರಹ್ಮನ ಮುಖ ವಂಶಾವಳಿಯಾಗಿದ್ದೀರಿ, ಇದು ಸರ್ವೋತ್ತಮ ಧರ್ಮವಾಗಿದೆ. ದೇವತಾ ಧರ್ಮಕ್ಕೂ
ಸಹ ಸರ್ವೋತ್ತಮ ಧರ್ಮವೆಂದು ಹೇಳುವುದಿಲ್ಲ. ಬ್ರಾಹ್ಮಣ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ.
ದೇವತೆಗಳಂತೂ ಇಲ್ಲಿನ ಪ್ರಾಲಬ್ಧವನ್ನು ಭೋಗಿಸುತ್ತಾರೆ.
ಇತ್ತೀಚೆಗೆ ಬಹಳ ಮಂದಿ
ಸಮಾಜ ಸೇವಕರಿದ್ದಾರೆ. ನಮ್ಮದು ಆತ್ಮಿಕ ಸೇವೆಯಾಗಿದೆ. ಅವರದು ಶಾರೀರಿಕ ಸೇವೆ ಮಾಡುವುದಾಗಿದೆ.
ಆತ್ಮಿಕ ಸೇವೆಯು ಒಂದೇ ಬಾರಿ ನಡೆಯುತ್ತದೆ. ಮೊದಲು ಈ ಸಮಾಜ ಸೇವಕರು ಮೊದಲಾದವರು ಇರಲಿಲ್ಲ,
ರಾಜ-ರಾಣಿಯರು ರಾಜ್ಯ ಮಾಡುತ್ತಿದ್ದರು. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು. ನೀವೇ
ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾದಿರಿ. ಲಕ್ಷ್ಮೀ-ನಾರಾಯಣರು ದ್ವಾಪರದಲ್ಲಿ ವಾಮಮಾರ್ಗದಲ್ಲಿ
ಇಳಿಯುತ್ತಾರೆ. ಆಗ ಮಂದಿರಗಳನ್ನು ಕಟ್ಟಿಸುತ್ತಾರೆ. ಮೊಟ್ಟ ಮೊದಲು ಶಿವನ ಮಂದಿರವನ್ನು
ಕಟ್ಟಿಸುತ್ತಾರೆ. ಶಿವನು ಸರ್ವರ ಸದ್ಗತಿದಾತನಾಗಿದ್ದಾರೆ ಅಂದಮೇಲೆ ಅವರಿಗೆ ಖಂಡಿತವಾಗಿ ಪೂಜೆ
ನಡೆಯಬೇಕು. ಶಿವ ತಂದೆಯೇ ಆತ್ಮರನ್ನು ನಿರ್ವಿಕಾರಿಯನ್ನಾಗಿ ಮಾಡಿದ್ದರು. ಅವರ ನಂತರ ದೇವತೆಗಳ ಪೂಜೆ
ನಡೆಯುತ್ತದೆ. ನೀವೇ ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾದಿರಿ. ತಂದೆಯು ತಿಳಿಸಿದ್ದಾರೆ -
ಚಕ್ರವನ್ನು ನೆನಪು ಮಾಡುತ್ತಾ ಇರಿ, ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಒಮ್ಮೆಲೆ ಬಂದು ನೆಲವನ್ನು
ತಲುಪಿದ್ದೀರಿ. ಈಗ ನಮ್ಮದು ಏರುವ ಕಲೆಯಾಗಿದೆ. ಏರುವ ಕಲೆಯಿಂದ ಸರ್ವರ ಉನ್ನತಿಯೆಂದು ಹೇಳುತ್ತಾರೆ.
ನಾನೀಗ ಇಡೀ ಪ್ರಪಂಚದ ಮನುಷ್ಯ ಮಾತ್ರರ ಉನ್ನತಿ ಮಾಡುತ್ತೇನೆ. ಪತಿತ ಪಾವನನು ಬಂದು ಎಲ್ಲರನ್ನೂ
ಪಾವನ ಮಾಡುತ್ತಾರೆ. ಸತ್ಯಯುಗವಿದ್ದಾಗ ಏರುವ ಕಲೆಯಾಗಿತ್ತು, ಉಳಿದೆಲ್ಲಾ ಆತ್ಮರು
ಮುಕ್ತಿಧಾಮದಲ್ಲಿದ್ದರು.
ತಂದೆಯು ತಿಳಿಸುತ್ತಾರೆ
- ಮಧುರಾತಿ ಮಧುರ ಮಕ್ಕಳೇ, ನನ್ನ ಜನ್ಮವು ಭಾರತದಲ್ಲಿಯೇ ಆಗುತ್ತದೆ. ಶಿವ ತಂದೆಯು ಬಂದಿದ್ದರು
ಎಂಬ ಗಾಯನವಿದೆ, ಈಗ ಪುನಃ ಬಂದಿದ್ದಾರೆ. ಇದಕ್ಕೆ ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ
ಯಜ್ಞವೆಂದು ಹೇಳಲಾಗುತ್ತದೆ. ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಈ ಯಜ್ಞವನ್ನು ರಚಿಸಲಾಗಿದೆ.
ವಿಘ್ನಗಳೂ ಬಂದಿತ್ತು, ಈಗಲೂ ಬರುತ್ತಿದೆ. ಮಾತೆಯರ ಮೇಲೆ ಅತ್ಯಾಚಾರವಾಗುತ್ತದೆ. ಬಾಬಾ, ನಮ್ಮನ್ನು
ಇವರು ಅಪವಿತ್ರರನ್ನಾಗಿ ಮಾಡುತ್ತಾರೆ, ನಮ್ಮನ್ನು ಇವರು ಬಿಡುವುದಿಲ್ಲ, ಬಾಬಾ ನಮ್ಮ ರಕ್ಷಣೆ ಮಾಡಿ
ಎಂದು ಹೇಳುತ್ತಾರೆ. ದ್ರೌಪದಿಯ ರಕ್ಷಣೆಯಾಯಿತು ಎಂಬುದನ್ನು ತೋರಿಸುತ್ತಾರೆ. ನೀವೀಗ 21
ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ, ನೆನಪಿನ
ಯಾತ್ರೆಯಲ್ಲಿದ್ದು ತಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳುತ್ತೀರಿ ಮತ್ತೆ ಒಂದುವೇಳೆ ವಿಕಾರದಲ್ಲಿ
ಹೋದರೆ ಸಮಾಪ್ತಿ, ಒಮ್ಮೆಲೆ ಕೆಳಗೆ ಬೀಳುತ್ತೀರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ -
ಖಂಡಿತವಾಗಿಯೂ ಪವಿತ್ರರಾಗಿರಬೇಕು. ಯಾರು ಕಲ್ಪದ ಮೊದಲು ಆಗಿದ್ದರೋ ಅವರೇ ಪವಿತ್ರತೆಯ ಪ್ರತಿಜ್ಞೆ
ಮಾಡುತ್ತಾರೆ ನಂತರ ಕೆಲವರು ಪವಿತ್ರರಾಗಿರುತ್ತಾರೆ, ಕೆಲವರು ಇರಲು ಆಗುವುದಿಲ್ಲ. ಮುಖ್ಯವಾದ ಮಾತು
ನೆನಪಿನದಾಗಿದೆ. ನೆನಪು ಮಾಡುತ್ತೀರಿ, ಪವಿತ್ರರಾಗಿರುತ್ತೀರಿ ಮತ್ತು ಸ್ವದರ್ಶನ ಚಕ್ರವನ್ನು
ತಿರುಗಿಸುತ್ತಾ ಇದ್ದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ವಿಷ್ಣುವಿನ ಎರಡು ರೂಪಗಳು (ಲಕ್ಷ್ಮೀ-ನಾರಾಯಣ)
ರಾಜ್ಯಭಾರ ಮಾಡುತ್ತಾರಲ್ಲವೆ ಆದರೆ ವಿಷ್ಣುವಿಗೆ ಯಾವ ಶಂಖ-ಚಕ್ರವನ್ನು ತೋರಿಸಿದ್ದಾರೆಯೋ ಅವು
ದೇವತೆಗಳಿಗೆ ಇರಲಿಲ್ಲ. ಲಕ್ಷ್ಮೀ-ನಾರಾಯಣರಿಗೂ ಇರಲಿಲ್ಲ. ವಿಷ್ಣುವಂತೂ
ಸೂಕ್ಷ್ಮವತನದಲ್ಲಿರುತ್ತಾರೆ. ಅವರಿಗೆ ಚಕ್ರದ ಜ್ಞಾನದ ಅವಶ್ಯಕತೆಯಿಲ್ಲ. ಅಲ್ಲಿ ಮೂವ್ಹಿ (ಸನ್ನೆಯ
ಭಾಷೆ) ನಡೆಯುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅದು
ನಿರಾಕಾರಿ ಪ್ರಪಂಚವಾಗಿದೆ, ಆತ್ಮವೆಂದರೇನು ಎಂಬುದನ್ನೂ ಸಹ ಮನುಷ್ಯ ಮಾತ್ರರು ತಿಳಿದುಕೊಂಡಿಲ್ಲ.
ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ, ಆತ್ಮವು ಹೊಳೆಯುತ್ತಿರುವ ನಕ್ಷತ್ರವಾಗಿದೆ, ಅದು
ಭೃಕುಟಿಯ ಮಧ್ಯದಲ್ಲಿರುತ್ತದೆ ಎಂದು ಹೇಳುತ್ತಾರೆ, ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಭಲೆ ಯಾರು
ಎಷ್ಟಾದರೂ ಪ್ರಯತ್ನ ಪಡಲಿ, ಗಾಜು ಇತ್ಯಾದಿಗಳಲ್ಲಿ ಬಂಧಿಸಿ ಆತ್ಮವು ಹೇಗೆ ಹೊರ ಹೋಗುತ್ತದೆ
ಎಂಬುದನ್ನು ನೋಡೋಣವೆಂದು ಪ್ರಯತ್ನ ಪಡುತ್ತಾರೆ ಆದರೆ ಆತ್ಮವೆಂದರೇನು, ಹೇಗೆ ಹೊರ ಹೋಗುತ್ತದೆ?
ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಬಾಕಿ ಇಷ್ಟಂತೂ ಹೇಳುತ್ತಾರೆ - ಆತ್ಮವು ನಕ್ಷತ್ರ
ಮಾದರಿಯಾಗಿದೆ, ದಿವ್ಯ ದೃಷ್ಟಿಯ ವಿನಃ ಅದನ್ನು ನೋಡಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಅನೇಕರಿಗೆ
ಸಾಕ್ಷಾತ್ಕಾರವಾಗುತ್ತದೆ. ಅರ್ಜುನನಿಗೆ ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾಯಿತು, ನಾನು ಸಹನೆ ಮಾಡಲು
ಆಗುವುದಿಲ್ಲ ಎಂದು ಅರ್ಜುನನು ಹೇಳಿದನೆಂದು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು
ಇಷ್ಟೊಂದು ತೇಜೋಮಯನಾಗಿಲ್ಲ, ಹೇಗೆ ಆತ್ಮವು ಬಂದು ಶರೀರದಲ್ಲಿ ಪ್ರವೇಶ ಮಾಡುತ್ತದೆ, ಇದು
ತಿಳಿಯುತ್ತದೆಯೇ? ಈಗ ನೀವೂ ಸಹ ತಿಳಿದುಕೊಂಡಿದ್ದೀರಿ - ತಂದೆಯು ಹೇಗೆ ಪ್ರವೇಶ ಮಾಡಿ
ಮಾತನಾಡುತ್ತಾರೆ, ಆತ್ಮವು ಬಂದು ಮಾತನಾಡುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಇದರಲ್ಲಿ
ಯಾರದೇ ತಾಕತ್ತಿನ ಮಾತಿಲ್ಲ. ಆತ್ಮವು ಶರೀರವನ್ನು ಬಿಟ್ಟು ಹೋಗುವುದಿಲ್ಲ. ಇದು ಕೇವಲ
ಸಾಕ್ಷಾತ್ಕಾರದ ಮಾತಾಗಿದೆ. ಆಶ್ಚರ್ಯದ ಮಾತಲ್ಲವೆ. ತಂದೆಯು ತಿಳಿಸುತ್ತಾರೆ - ನಾನೂ ಸಹ ಸಾಧಾರಣ
ತನುವಿನಲ್ಲಿ ಬರುತ್ತೇನೆ, ಆತ್ಮವನ್ನು ಕರೆಸುತ್ತಾರಲ್ಲವೆ. ಮೊದಲು ಆತ್ಮರನ್ನು ಕರೆಸಿ ಅವರೊಂದಿಗೆ
ಕೇಳುತ್ತಿದ್ದರು. ಈಗಂತೂ ತಮೋಪ್ರಧಾನರಾಗಿ ಬಿಟ್ಟಿದ್ದಾರಲ್ಲವೆ. ನಾನು ಪತಿತರನ್ನು ಹೋಗಿ ಪಾವನ
ಮಾಡೋಣವೆಂದೇ ತಂದೆಯು ಬರುತ್ತಾರೆ. 84 ಜನ್ಮಗಳೆಂದು ಹೇಳುತ್ತಾರೆ ಅಂದಮೇಲೆ ತಿಳಿದುಕೊಳ್ಳಬೇಕು -
ಯಾರು ಮೊದಲು ಬಂದಿದ್ದಾರೆಯೋ ಅವರೇ ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿರುತ್ತಾರೆ. ಇದಕ್ಕೆ
ಅವರು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ನಮ್ಮನ್ನು
ಸ್ವರ್ಗದಲ್ಲಿ ಕಳುಹಿಸಿದ್ದೆನು, ನೀವು ಹೋಗಿ ರಾಜ್ಯ ಮಾಡಿದ್ದಿರಿ, ನೀವು ಭಾರತವಾಸಿಗಳನ್ನು
ಸ್ವರ್ಗದಲ್ಲಿ ಕಳುಹಿಸಿದ್ದೆನು, ಸಂಗಮದಲ್ಲಿ ರಾಜಯೋಗವನ್ನು ಕಲಿಸಿದ್ದೆನು, ನಾನು ಕಲ್ಪದ
ಸಂಗಮಯುಗದಲ್ಲಿ ಬರುತ್ತೇನೆ, ಆದರೆ ಗೀತೆಯಲ್ಲಿ ಯುಗ-ಯುಗದಲ್ಲಿ ಬರುತ್ತೇನೆಂದು ಬರೆದು
ಬಿಟ್ಟಿದ್ದಾರೆ.
ನೀವೀಗ
ತಿಳಿದುಕೊಂಡಿದ್ದೀರಿ - ನಾವು ಏಣಿಯನ್ನು ಹೇಗೆ ಇಳಿಯುತ್ತೇವೆ ಮತ್ತೆ ಹತ್ತುತ್ತೇವೆ. ಏರುವ ಕಲೆ
ನಂತರ ಇಳಿಯುವ ಕಲೆ, ಈಗ ಈ ಸಂಗಮಯುಗವು ಸರ್ವರ ಏರುವ ಕಲೆಯ ಯುಗವಾಗಿದೆ, ಎಲ್ಲರೂ ಏರುತ್ತಾರೆ.
ಎಲ್ಲರೂ ಮೇಲೆ ಹೋಗುತ್ತಾರೆ, ನಂತರ ನೀವು ಸ್ವರ್ಗದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ.
ಸತ್ಯಯುಗದಲ್ಲಿ ಬೇರೆ ಯಾವುದೇ ಧರ್ಮವಿರಲಿಲ್ಲ. ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ.
ನಂತರ ದೇವಿ-ದೇವತೆಗಳು ವಾಮಮಾರ್ಗದಲ್ಲಿ ಹೋಗಿ ವಿಕಾರಿಯಾಗ ತೊಡಗುತ್ತಾರೆ. ಯಥಾ ರಾಜ-ರಾಣಿ ತಥಾ
ಪ್ರಜಾ. ತಂದೆಯು ತಿಳಿಸುತ್ತಾರೆ- ಹೇ ಭಾರತವಾಸಿಗಳೇ, ನೀವು ನಿರ್ವಿಕಾರಿ ಪ್ರಪಂಚದಲ್ಲಿದ್ದಿರಿ,
ಈಗ ವಿಕಾರಿ ಪ್ರಪಂಚವಾಗಿದೆ, ಅನೇಕ ಧರ್ಮಗಳಿವೆ ಬಾಕಿ ಒಂದು ದೇವಿ-ದೇವತಾ ಧರ್ಮವಿಲ್ಲ. ಅವಶ್ಯವಾಗಿ
ಯಾವಾಗ ಅದು ಇರುವುದಿಲ್ಲವೋ ಆಗಲೇ ಪುನಃ ಸ್ಥಾಪನೆಯಾಗುವುದು. ತಂದೆಯು ತಿಳಿಸುತ್ತಾರೆ - ನಾನು
ಬ್ರಹ್ಮಾರವರ ಮೂಲಕ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ, ಇಲ್ಲಿಯೇ
ಮಾಡುವರಲ್ಲವೆ! ಸೂಕ್ಷ್ಮವತನದಲ್ಲಂತೂ ಮಾಡುವುದಿಲ್ಲ. ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ
ಧರ್ಮದ ರಚನೆ ಮಾಡುತ್ತಾರೆಂದು ಬರೆಯಲ್ಪಟ್ಟಿದೆ. ನಿಮಗೆ ಈ ಸಮಯದಲ್ಲಿ ಪಾವನರೆಂದು ಹೇಳುವುದಿಲ್ಲ,
ಪಾವನರಾಗುತ್ತಿದ್ದೀರಿ. ಸಮಯವಂತೂ ಹಿಡಿಸುತ್ತದೆಯಲ್ಲವೆ. ಪತಿತರಿಂದ ಹೇಗೆ ಪಾವನರಾಗುವುದು, ಇದು
ಯಾವುದೇ ಶಾಸ್ತ್ರಗಳಲ್ಲಿಲ್ಲ. ವಾಸ್ತವದಲ್ಲಿ ಮಹಿಮೆಯು ಒಬ್ಬ ತಂದೆಯದಾಗಿದೆ, ಆ ತಂದೆಯನ್ನು
ಮರೆತಿರುವ ಕಾರಣವೇ ಅನಾಥರಾಗಿ ಬಿಟ್ಟಿದ್ದಾರೆ, ಹೊಡೆದಾಡುತ್ತಿರುತ್ತಾರೆ. ಮತ್ತೆ ಎಲ್ಲರೂ ಸೇರಿ
ಹೇಗೆ ಒಂದಾಗುವುದು ಎಂದು ಹೇಳುತ್ತಾರೆ. ಸಹೋದರ-ಸಹೋದರರಲ್ಲವೆ, ಈ ತಂದೆಯಂತೂ ಅನುಭವಿಯಾಗಿದ್ದಾರೆ,
ಭಕ್ತಿಯನ್ನೂ ಇವರು ಪೂರ್ಣ ಮಾಡಿದ್ದಾರೆ. ಎಲ್ಲರಿಗಿಂತ ಅಧಿಕ ಗುರುಗಳನ್ನು ಮಾಡಿಕೊಂಡಿದ್ದಾರೆ. ಈಗ
ತಂದೆಯು ತಿಳಿಸುತ್ತಾರೆ - ಇದೆಲ್ಲವನ್ನೂ ಬಿಡಿ, ಈಗ ನಾನು ನಿಮಗೆ ಸಿಕ್ಕಿದ್ದೇನೆ, ಸರ್ವರ
ಸದ್ಗತಿದಾತ ಒಬ್ಬರೇ ಸತ್ಶ್ರೀ ಅಕಾಲ್ ಎಂದು ಹೇಳುತ್ತಾರಲ್ಲವೆ, ಅರ್ಥವನ್ನು ತಿಳಿದುಕೊಂಡಿಲ್ಲ.
ಬಹಳಷ್ಟು ಓದುತ್ತಿರುತ್ತಾರೆ. ಈಗ ಎಲ್ಲರೂ ಪತಿತರಾಗಿದ್ದಾರೆ, ಮತ್ತೆ ಪಾವನ ಪ್ರಪಂಚವಾಗುವುದು.
ಭಾರತವೇ ಅವಿನಾಶಿಯಾಗಿದೆ, ಇದು ಯಾರಿಗೂ ತಿಳಿದಿಲ್ಲ. ಭಾರತವೆಂದೂ ವಿನಾಶವಾಗುವುದಿಲ್ಲ, ಮತ್ತೆ
ಪ್ರಳಯವೂ ಆಗುವುದಿಲ್ಲ. ಸಾಗರದಲ್ಲಿ ಆಲದ ಎಲೆಯ ಮೇಲೆ ಕೃಷ್ಣನು ತೇಲಿ ಬಂದನೆಂದು ಯಾವುದನ್ನು
ತೋರಿಸುತ್ತಾರೆಯೋ ಈ ರೀತಿಯಾಗಿ ಯಾವುದೇ ಮಗುವು ಬರಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ -
ನೀವು ಸತ್ಯಯುಗದಲ್ಲಿ ಗರ್ಭದಿಂದ ಜನ್ಮ ಪಡೆಯುತ್ತೀರಿ ಆದರೆ ಆರಾಮದಿಂದ. ಅಲ್ಲಿ ಗರ್ಭ ಮಹಲು ಎಂದು
ಹೇಳಲಾಗುತ್ತದೆ, ಇಲ್ಲಿ ಗರ್ಭವು ಜೈಲಿನಂತಾಗಿದೆ. ಸತ್ಯಯುಗದಲ್ಲಿ ಗರ್ಭವು ಮಹಲಾಗಿರುತ್ತದೆ,
ಆತ್ಮಕ್ಕೆ ಮೊದಲೇ ಸಾಕ್ಷಾತ್ಕಾರವಾಗುತ್ತದೆ - ನಾನು ಈ ತನುವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳಬೇಕು ಎಂದು. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ಮನುಷ್ಯರಂತೂ ರಚಯಿತನನ್ನಾಗಲಿ,
ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ಅರಿತುಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು
ಜ್ಞಾನ ಸಾಗರನಾಗಿದ್ದಾರೆ, ನೀವು ಮಾ|| ಸಾಗರರಾಗಿದ್ದೀರಿ. ನೀವು (ಮಾತೆಯರು) ನದಿಗಳಾಗಿದ್ದೀರಿ
ಮತ್ತು ಈ ಗೋಪರು (ಪಾಂಡವರು) ಜ್ಞಾನ ಮಾನಸ ಸರೋವರವಾಗಿದ್ದಾರೆ. ಇವರು (ಮಾತೆಯರು) ಜ್ಞಾನ
ನದಿಗಳಾಗಿದ್ದಾರೆ, ನೀವು ಸರೋವರವಾಗಿದ್ದೀರಿ. ಪ್ರವೃತ್ತಿ ಮಾರ್ಗವು ಬೇಕಲ್ಲವೆ. ನಿಮ್ಮದು ಪವಿತ್ರ
ಗೃಹಸ್ಥ ಆಶ್ರಮವಾಗಿತ್ತು ಈಗ ಪತಿತರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ಇದನ್ನು ಸದಾ
ನೆನಪಿಟ್ಟುಕೊಳ್ಳಿ, ನಾವು ಆತ್ಮರಾಗಿದ್ದೇವೆ, ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು
ಆದೇಶ ನೀಡಿದ್ದಾರೆ - ಮಕ್ಕಳೇ, ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಈ ಕಣ್ಣುಗಳಿಂದ
ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸಮಾಪ್ತಿಯಾಗುವುದು. ಆದ್ದರಿಂದ ಮನ್ಮನಾಭವ, ಮಧ್ಯಾಜೀಭವ. ಈ
ಸ್ಮಶಾನವನ್ನು ಮರೆಯುತ್ತಾ ಹೋಗಿ. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಇದಕ್ಕೆ ಹೆದರಬೇಡಿ.
ಬಹಳಷ್ಟು ಬಿರುಗಾಳಿಗಳು ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ವಿಕರ್ಮ ಮಾಡಬಾರದು. ಯಾವಾಗ ನೀವು
ತಂದೆಯನ್ನು ಮರೆತು ಹೋಗುತ್ತೀರೋ ಆಗಲೇ ಬಿರುಗಾಳಿಗಳು ಬರುತ್ತವೆ. ಈ ನೆನಪಿನ ಯಾತ್ರೆಯು ಒಂದೇ ಬಾರಿ
ಆಗುತ್ತದೆ, ಅವೆಲ್ಲವೂ ಮೃತ್ಯುಲೋಕದ ಯಾತ್ರೆಗಳಾಗಿವೆ, ಇದು ಅಮರ ಲೋಕದ ಯಾತ್ರೆಯಾಗಿದೆ. ಆದ್ದರಿಂದ
ಈಗ ತಂದೆಯು ತಿಳಿಸುತ್ತಾರೆ - ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ.
ಮಕ್ಕಳು ಶಿವ ಜಯಂತಿಯಂದು
ಎಷ್ಟೊಂದು ಪತ್ರಗಳನ್ನು ಕಳುಹಿಸುತ್ತಾರೆ. ತಂದೆಯು ಹೇಳುತ್ತಾರೆ - ತತ್ತ್ವಂ. ನೀವು ಮಕ್ಕಳಿಗೂ ಸಹ
ತಂದೆಯು ಶುಭಾಷಯಗಳನ್ನು ನೀಡುತ್ತೇವೆ. ವಾಸ್ತವದಲ್ಲಿ ನಿಮಗೆ ಶುಭಾಷಯಗಳು ಏಕೆಂದರೆ ನೀವೇ
ಮನುಷ್ಯರಿಂದ ದೇವತೆಗಳಾಗುತ್ತೀರಿ ನಂತರ ಯಾರು ಪಾಸ್-ವಿತ್-ಆನರ್ ಆಗುವರೋ ಅವರಿಗೆ ಹೆಚ್ಚು ಅಂಕಗಳು
ಮತ್ತು ಒಳ್ಳೆಯ ನಂಬರ್ ಸಿಗುವುದು. ತಂದೆಯು ನಿಮಗೆ ಶುಭಾಷಯಗಳನ್ನು ಕೊಡುತ್ತಾರೆ - ಮಕ್ಕಳೇ,
ನೀವೀಗ ರಾವಣನ ಬಂಧನದಿಂದ ಮುಕ್ತರಾಗುತ್ತೀರಿ, ಎಲ್ಲಾ ಆತ್ಮಗಳು ಪತಂಗಗಳಾಗಿದ್ದಾರೆ. ಎಲ್ಲರ ದಾರವು
ತಂದೆಯ ಕೈಯಲ್ಲಿದೆ, ಅವರು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ, ಸರ್ವರ ಸದ್ಗತಿದಾತನಾಗಿದ್ದಾರೆ
ಆದರೆ ನೀವು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಪಾಸ್-ವಿತ್-ಆನರ್ ಆಗಲು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ, ಯಾವುದೇ ದೇಹಧಾರಿಯನ್ನಲ್ಲ. ಈ
ಕಣ್ಣುಗಳಿಂದ ಏನೆಲ್ಲವೂ ಕಾಣುತ್ತಿದೆಯೋ ಅದನ್ನು ನೋಡಿಯೂ ನೋಡದಂತಿರಬೇಕಾಗಿದೆ.
2. ನಾವು ಅಮರ ಲೋಕದ
ಯಾತ್ರೆಯಲ್ಲಿ ಹೋಗುತ್ತಿದ್ದೇವೆ ಆದ್ದರಿಂದ ಮೃತ್ಯುಲೋಕದ್ದೇನೂ ನೆನಪಿರಬಾರದು,
ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗಬಾರದು - ಈ ಗಮನವನ್ನಿಡಬೇಕಾಗಿದೆ.
ವರದಾನ:
ಅತೀಂದ್ರಿಯ
ಸುಖಮಯ ಸ್ಥಿತಿಯ ಮುಖಾಂತರ ಅನೇಕ ಆತ್ಮಗಳ ಆಹ್ವಾನ ಮಾಡುವಂತಹ ವಿಶ್ವ ಕಲ್ಯಾಣಕಾರಿ ಭವ.
ಎಷ್ಟು ಅಂತಿಮ ಕರ್ಮಾತೀತ
ಸ್ಟೇಜ್ನ ಸಮೀಪ ಬರುತ್ತಾ ಹೋಗುವಿರಿ ಅಷ್ಟು ಶಬ್ಧದಿಂದ ದೂರ ಶಾಂತ ಸ್ವರೂಪದ ಸ್ಥಿತಿ ಅಧಿಕ ಪ್ರೀಯ
ಎನ್ನಿಸುತ್ತದೆ - ಈ ಸ್ಥಿತಿಯಲ್ಲಿ ಸದಾ ಅತೀಂದ್ರಿಯ ಸುಖದ ಅನುಭೂತಿಯಾಗುವುದು ಮತ್ತು ಇದೇ
ಅತೀಂದ್ರಿಯ ಸುಖಮಯ ಸ್ಥಿತಿಯ ಮುಖಾಂತರ ಅನೇಕ ಆತ್ಮರನ್ನು ಸಹಜವಾಗಿ ಆಹ್ವಾನ ಮಾಡಲು ಸಾಧ್ಯ. ಈ
ಶಕ್ತಿಶಾಲಿ ಸ್ಥಿತಿಯೆ ವಿಶ್ವ ಕಲ್ಯಾಣಕಾರಿ ಸ್ಥಿತಿಯಾಗಿದೆ. ಈ ಸ್ಥಿತಿಯ ಮುಖಾಂತರ ಎಷ್ಟೇ
ದೂರದಲ್ಲಿರುವ ಆತ್ಮರಿಗೆ ಸಂದೇಶವನ್ನು ತಲುಪಿಸಲು ಸಾಧ್ಯ.
ಸ್ಲೋಗನ್:
ಪ್ರತಿಯೊಬ್ಬರ
ವಿಶೇಷತೆಗಳನ್ನು ಸ್ಮೃತಿಯಲ್ಲಿಡುತ್ತಾ ನಂಬಿಕಸ್ತರಾದಾಗ ಸಂಘಟನೆಯಲ್ಲಿ ಏಕಮತ ಬರುವುದು.