15.03.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಅಂತರ್ಮುಖಿಗಳಾಗಿ ವಿಚಾರ ಸಾಗರ ಮಂಥನ ಮಾಡಿ, ಆಗ ಖುಷಿ ಮತ್ತು ನಶೆಯಿರುವುದು, ನೀವು ತಂದೆಯ ಸಮಾನ ಶಿಕ್ಷಕರಾಗಿ ಬಿಡುತ್ತೀರಿ.

ಪ್ರಶ್ನೆ:
ಯಾವ ಆಧಾರದ ಮೇಲೆ ಆಂತರಿಕ ಖುಷಿ ಸ್ಥಿರವಾಗಿರಲು ಸಾಧ್ಯ?

ಉತ್ತರ:
ಯಾವಾಗ ಅನ್ಯರ ಕಲ್ಯಾಣ ಮಾಡಿ ಎಲ್ಲರನ್ನೂ ಖುಷಿ ಪಡಿಸುತ್ತೀರೋ ಆಗ ಸ್ಥಿರವಾಗಿರಲು ಸಾಧ್ಯ. ದಯಾಹೃದಯಿಗಳಾಗಿ ಆಗ ಖುಷಿಯಿರುತ್ತದೆ. ಯಾರು ದಯಾಹೃದಯಿಯಾಗುತ್ತಾರೆಯೋ ಆಗ ಅವರ ಬುದ್ಧಿಯಲ್ಲಿರುತ್ತದೆ - ಓಹೋ, ನಮಗೆ ಸರ್ವ ಆತ್ಮಗಳ ತಂದೆಯು ಓದಿಸುತ್ತಿದ್ದಾರೆ, ಪಾವನರನ್ನಾಗಿ ಮಾಡುತ್ತಿದ್ದಾರೆ, ನಾವು ವಿಶ್ವದ ಮಹಾರಾಜರಾಗುತ್ತಿದ್ದೇವೆ! ಇಂತಹ ಖುಷಿಯನ್ನು ಅವರು ದಾನವನ್ನು ಮಾಡುತ್ತಾ ಇರುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳನ್ನು ಕೇಳುತ್ತಾರೆ - ಮಕ್ಕಳೇ, ಈ ಓಂ ಶಾಂತಿ ಎಂದು ಯಾರು ಹೇಳಿದರು? (ಶಿವ ತಂದೆ) ಹೌದು ಶಿವ ತಂದೆಯು ಹೇಳಿದರು. ಏಕೆಂದರೆ ಮಕ್ಕಳಿಗೂ ಸಹ ಇದು ತಿಳಿದಿದೆ, ಇವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಈ ರಥದಲ್ಲಿಯೇ ಬಂದು ಓದಿಸುತ್ತೇನೆ. ಇವರು ಓದಿಸುವಂತಹ ಶಿಕ್ಷಕರಾದರು. ಹೇಗೆ ಶಿಕ್ಷಕರು ಬರುವರೆಂದರೆ ಗುಡ್ಮಾರ್ನಿಂಗ್ ಎಂದು ಹೇಳುತ್ತಾರೆ. ಆಗ ಮಕ್ಕಳೂ ಸಹ ಗುಡ್ ಮಾರ್ನಿಂಗ್ ಎಂದು ಹೇಳುತ್ತಾರೆ. ಇಲ್ಲಿ ನೀವು ಸಹ ತಿಳಿದುಕೊಂಡಿದ್ದೀರಿ - ಆತ್ಮಗಳಿಗೆ ಸ್ವಯಂ ಪರಮಾತ್ಮನೇ ಗುಡ್ ಮಾರ್ನಿಂಗ್ ಹೇಳುತ್ತಾರೆ. ಲೌಕಿಕ ರೀತಿಯಿಂದಂತೂ ಗುಡ್ಮಾರ್ನಿಂಗ್ ಬಹಳ ಹೇಳುತ್ತಿರುತ್ತಾರೆ. ಆದರೆ ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ, ಅವರೇ ಬಂದು ಓದಿಸುತ್ತಾರೆ. ಮಕ್ಕಳಿಗೆ ಇಡೀ ನಾಟಕದ ರಹಸ್ಯವನ್ನು ತಿಳಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಯಾರೆಲ್ಲಾ ಆತ್ಮಗಳಿದ್ದಾರೆಯೋ, ಅವರೆಲ್ಲರ ತಂದೆಯು ಬಂದಿದ್ದಾರೆ. ಇಡೀ ದಿನದಲ್ಲಿ ಈ ನಿಶ್ಚಯವು ಬುದ್ಧಿಯಲ್ಲಿರಬೇಕು - ಬೇಹದ್ದಿನ ತಂದೆಯು ನಮಗೆ ಓದಿಸುತ್ತಿದ್ದಾರೆ, ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಅವರನ್ನು ರಚಯಿತನೆಂತಲೂ ಹೇಳಲಾಗುತ್ತದೆ ಇದನ್ನೂ ಸಹ ತಿಳಿಸಬಹುದು. ಆತ್ಮಗಳನ್ನು ರಚಿಸುವುದಿಲ್ಲ ತಂದೆಯು ತಿಳಿಸುತ್ತಾರೆ - ನಾನು ಬೀಜರೂಪನಾಗಿದ್ದೇನೆ. ಈ ಮನುಷ್ಯ ಸೃಷ್ಟಿ ರೂಪಿ ವೃಕ್ಷದ ಜ್ಞಾನವನ್ನು ನಿಮಗೆ ತಿಳಿಸುತ್ತೇನೆ. ಈ ಜ್ಞಾನವನ್ನು ಬೀಜ (ತಂದೆ)ದ ವಿನಃ ಮತ್ತೆ ಯಾರು ಕೊಡುತ್ತಾರೆ? ಅವರು ವೃಕ್ಷವನ್ನು ರಚಿಸಿದರು ಎಂದು ಹೇಳುವುದಿಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ, ಇದಂತೂ ಅನಾದಿಯಾಗಿದೆ ಇಲ್ಲವೆಂದರೆ ವೃಕ್ಷವು ಯಾವಾಗ, ಹೇಗೆ ರಚನೆಯಾಯಿತು. ನಾನು ತಿಥಿ-ತಾರೀಖು ಎಲ್ಲವನ್ನು ತಿಳಿಸುತ್ತಿದ್ದೆನು ಆದರೆ ಇದಂತೂ ಅನಾದಿ ರಚನೆಯಾಗಿದೆ. ತಂದೆಯನ್ನು ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ತಿಳಿದು-ತಿಳಿಸುವವರು ಅಂದರೆ ವೃಕ್ಷದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿದಿದ್ದಾರೆ. ತಂದೆಯೇ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದಾರೆ, ಜ್ಞಾನದ ಸಾಗರನಾಗಿದ್ದಾರೆ. ಅವರಲ್ಲಿಯೇ ಎಲ್ಲ ಜ್ಞಾನವಿದೆ, ಅವರೇ ಬಂದು ಮಕ್ಕಳಿಗೆ ಓದಿಸುತ್ತಾರೆ. ಎಲ್ಲಾ ಮನುಷ್ಯರು ಕೇಳುತ್ತಿರುತ್ತಾರೆ - ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ? ನೀವೀಗ ಹೇಳುತ್ತೀರಿ - ಶಾಂತಿಯಂತೂ ಜ್ಞಾನಸಾಗರನೇ ಸ್ಥಾಪನೆ ಮಾಡುತ್ತಾರೆ. ಅವರು ಶಾಂತಿ-ಸುಖ ಮತ್ತು ಜ್ಞಾನದ ಸಾಗರನಾಗಿದ್ದಾರೆ. ಯಾವ ಜ್ಞಾನವಿದೆ? ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಶಾಸ್ತ್ರಗಳನ್ನೂ ಸಹ ಜ್ಞಾನವೆಂದು ಮನುಷ್ಯರು ತಿಳಿಯುತ್ತಾರೆ. ಈಗ ಶಾಸ್ತ್ರಗಳನ್ನು ತಿಳಿಸುವವರು ಅನೇಕರಿದ್ದಾರೆ. ಬೇಹದ್ದಿನ ತಂದೆಯೇ ತಾವೇ ಬಂದು ಪರಿಚಯವನ್ನು ಕೊಡುತ್ತಾರೆ ಮತ್ತು ಅವರು ಬರುವುದರಿಂದಲೇ ಶಾಂತಿ ಸ್ಥಾಪನೆಯಾಗುತ್ತದೆ. ಶಾಂತಿಧಾಮದಲ್ಲಂತೂ ಶಾಂತಿಯೇ ಶಾಂತಿಯಿರುತ್ತದೆ. ಶಾಂತಿಧಾಮದಲ್ಲಿ ಎಲ್ಲರೂ ಶಾಂತಿಯಲ್ಲಿದ್ದೆವು ಎಂಬ ಮಾತನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಇಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎನ್ನುತ್ತಿರುತ್ತಾರೆ. ಆದರೆ ಇಲ್ಲಿ ಅವಶ್ಯವಾಗಿ ಶಾಂತಿಯಿತ್ತು, ರಾಮ ರಾಜ್ಯದ ಶಾಂತಿಯು ಬೇಕು ಆ ರಾಮ ರಾಜ್ಯವು ಯಾವಾಗ ಇತ್ತು ಎಂದು ಯಾರಿಗೂ ತಿಳಿದಿಲ್ಲ. ತಂದೆಗೆ ತಿಳಿದಿದೆ - ಅನೇಕ ಆತ್ಮಗಳಿದ್ದಾರೆ ನಾನು ಇವರೆಲ್ಲರ ತಂದೆಯಾಗಿದ್ದೇನೆ. ಹೀಗೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಯಾರೆಲ್ಲಾ ಆತ್ಮಗಳು ಇದ್ದಾರೆಯೋ ಎಲ್ಲರೂ ಈ ಸಮಯದಲ್ಲಿ ಇಲ್ಲಿಯೇ ಇದ್ದಾರೆ. ಮೊದಲು ಶಾಂತಿಧಾಮದಲ್ಲಿ ಇದ್ದರು ನಂತರ ಸುಖಧಾಮದಿಂದ ದುಃಖಧಾಮದಲ್ಲಿ ಬಂದಿದ್ದಾರೆ. ಈ ಸುಖ-ದುಃಖದ ಆಟವು ಹೇಗೆ ಮಾಡಲ್ಪಟ್ಟಿದೆ ಎಂದು ಯಾರಿಗೂ ಗೊತ್ತಿಲ್ಲ. ಇದು ಆವಾಗಮನದ ಆಟವಾಗಿದೆ ಎಂದು ಹೇಳಿ ಬಿಡುತ್ತಾರೆ. ಆದರೆ ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇದೆ - ಅವರು ನಾವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ನಮಗೆ ಜ್ಞಾನವನ್ನು ತಿಳಿಸುತ್ತಿದ್ದಾರೆ. ಅವರು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಹಾಗೂ ನಮಗೆ ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೇ ದೇವತೆಗಳಾಗಿದ್ದಿರಿ ನಾನು ಎಲ್ಲಾ ಆತ್ಮಗಳ ತಂದೆ ನಿಮಗೆ ಓದಿಸುತ್ತೇನೆ ಎಂಬ ಮಾತನ್ನು ಯಾರೂ ಹೇಳುವುದಿಲ್ಲ. ಇದು ಎಷ್ಟು ದೊಡ್ಡ ಬೇಹದ್ದಿನ ನಾಟಕವಾಗಿದೆ. ಅವರು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಆದರೆ ಇದು 5000 ವರ್ಷಗಳ ಆಟವಾಗಿದೆ ಎಂದು ನೀವು ಹೇಳುತ್ತೀರಿ. ಈಗ ನಿಮಗೆ ಗೊತ್ತಿದೆ - ಶಾಂತಿ ಎರಡು ಪ್ರಕಾರದ್ದಾಗಿದೆ. ಒಂದು ಶಾಂತಿಧಾಮದ ಶಾಂತಿ ಇನ್ನೊಂದು ಸುಖಧಾಮದ ಶಾಂತಿಯಾಗಿದೆ. ಎಲ್ಲಾ ಆತ್ಮಗಳ ತಂದೆಯು ನಮಗೆ ಓದಿಸುತ್ತಾರೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಇದು ಯಾವುದೇ ಶಾಸ್ತ್ರಗಳಲ್ಲಿಲ್ಲ. ಬೇಹದ್ದಿನ ತಂದೆಯಾಗಿದ್ದಾರಲ್ಲವೆ. ಎಲ್ಲಾ ಧರ್ಮದವರು ಅವರಿಗೆ ಅಲ್ಲಾ, ಗಾಡ್ ಫಾದರ್ ಇತ್ಯಾದಿಯಾಗಿ ಹೇಳುತ್ತಾರೆ. ಅವರ ವಿದ್ಯೆಯೂ ಸಹ ಅವಶ್ಯವಾಗಿ ಇಷ್ಟು ಶ್ರೇಷ್ಠವಾಗಿ ಇರುತ್ತದೆಯಲ್ಲವೆ. ಇದು ಇಡೀ ದಿನ ಬುದ್ಧಿಯಲ್ಲಿರಬೇಕು. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಹೊಸ ಮಾತುಗಳನ್ನು ತಿಳಿಸುತ್ತೇನೆ. ಹೊಸ ಪದ್ಧತಿಯಿಂದ ಓದಿಸುತ್ತೇನೆ. ನೀವು ಮತ್ತೆ ಅನ್ಯರಿಗೆ ಓದಿಸುತ್ತೀರಿ. ಭಕ್ತಿ ಮಾರ್ಗದಲ್ಲಿ ದೇವಿಯರಿಗೂ ಬಹಳ ಮಹಿಮೆಯಿದೆ. ವಾಸ್ತವದಲ್ಲಿ ಈ ಬ್ರಹ್ಮಾರವರೂ ಸಹ ದೊಡ್ಡ ತಾಯಿಯಾಗಿದ್ದಾರೆ. ಇವರಿಗಂತೂ (ಶಿವ ತಂದೆ) ಕೇವಲ ತಂದೆಯೆಂದು ಹೇಳುತ್ತಾರೆ. ಇಬ್ಬರನ್ನು ಸೇರಿಸಿ ಮಾತಾ-ಪಿತಾ ಎಂದು ಹೇಳುತ್ತಾರೆ. ಈ ತಾಯಿಯ ಮೂಲಕ ತಂದೆಯು ನಿಮ್ಮನ್ನು ದತ್ತು ಮಾಡಿಕೊಂಡು ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ. ಈ ಚಕ್ರವು ನಿಮ್ಮ ಬುದ್ಧಿಯಲ್ಲಿದೆ. ನೀವು ಒಂದೊಂದು ಶಬ್ಧವನ್ನು ಹೊಸದಾಗಿ ಕೇಳುತ್ತೀರಿ. ಜ್ಞಾನ ಸಾಗರ ತಂದೆಯದು ಆತ್ಮಿಕ ಜ್ಞಾನವಾಗಿದೆ. ಪರಮ ಆತ್ಮನಾದ ತಂದೆಯೇ ಜ್ಞಾನಸಾಗರನಾಗಿದ್ದಾರೆ. ಆತ್ಮವು ಬಾಬಾ ಎಂದು ಹೇಳುತ್ತದೆ. ಮಕ್ಕಳೂ ಸಹ ಎಲ್ಲಾ ಮಾತುಗಳನ್ನು ಚೆನ್ನಾಗಿ ಬುದ್ಧಿಯಲ್ಲಿ ಧಾರಣೆ ಮಾಡುತ್ತೀರಿ. ಯಾವಾಗ ಅಂತರ್ಮುಖಿಯಾಗಿ ಹೀಗೆ ವಿಚಾರಸಾಗರ ಮಂಥನ ಮಾಡುತ್ತೀರಿ. ಆಗ ಆ ಖುಷಿ ಮತ್ತು ನಶೆಯಿರುತ್ತದೆ. ಹಿರಿಯ ಶಿಕ್ಷಕರಂತೂ ಶಿವ ತಂದೆಯಾಗಿದ್ದಾರೆ. ಅವರು ಮತ್ತೆ ನಿಮ್ಮನ್ನೂ ಶಿಕ್ಷಕರನ್ನಾಗಿ ಮಾಡುತ್ತಾರೆ. ಶಿಕ್ಷಕರಲ್ಲಿಯೂ ನಂಬರವಾರ್ ಇದ್ದಾರೆ. ತಂದೆಗೆ ಗೊತ್ತಿದೆ - ಇಂತಿಂತಹ ಮಕ್ಕಳು ಬಹಳ ಚೆನ್ನಾಗಿ ಓದಿಸುತ್ತಾರೆ. ಆದ್ದರಿಂದ ಎಲ್ಲರೂ ಖುಷಿಯಾಗಿ ಹೇಳುತ್ತಾರೆ - ನಿಮ್ಮನ್ನು ಈ ರೀತಿ ಯಾರು ಮಾಡಿದರು ಅವರ ಬಳಿ ನಮ್ಮನ್ನೂ ಸಹ ಬೇಗನೆ ಕರೆದುಕೊಂಡು ಹೋಗಿ. ತಂದೆಯು ತಿಳಿಸುತ್ತಾರೆ - ನಾನು ಇವರ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತಿಮದಲ್ಲಿ ಇವರಲ್ಲಿ ಪ್ರವೇಶ ಮಾಡಿ ನಿಮಗೆ ಓದಿಸುತ್ತೇನೆ. ಕಲ್ಪ-ಕಲ್ಪವು ನಾನು ಅನೇಕ ಬಾರಿ ಈ ಭಾರತದಲ್ಲಿ ಬಂದಿರುತ್ತೇನೆ. ಈ ಮಾತುಗಳನ್ನು ಕೇಳಿ ನೀವು ಆಶ್ಚರ್ಯ ಚಕಿತರಾಗುತ್ತೀರಿ. ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ. ಅವರಿಗೇ ಭಕ್ತಿ ಮಾರ್ಗದಲ್ಲಿ ಎಷ್ಟೊಂದು ಹೆಸರುಗಳಿವೆ, ಕೆಲವರು ಪರಮಾತ್ಮ, ಇನ್ನೂ ಕೆಲವರು ರಾಮ, ಪ್ರಭು, ಅಲ್ಲಾ, ಗಾಡ್...... ಎಂದು ಹೇಳುತ್ತಾರೆ. ಒಬ್ಬರೇ ಶಿಕ್ಷಕನಿಗೆ ಎಷ್ಟೊಂದು ಹೆಸರುಗಳನ್ನಿಟ್ಟಿದ್ದಾರೆ. ಶಿಕ್ಷಕರಿಗಂತೂ ಒಂದೇ ಹೆಸರಿರುತ್ತದೆ. ಅನೇಕ ಹೆಸರುಗಳಿರುತ್ತದೆಯೇ? ಎಷ್ಟೊಂದು ಭಾಷೆಗಳಿವೆ ಅಂದಾಗ ಕೆಲವರು ಖುದಾ, ಕೆಲವರು ಗಾಡ್ ಏನೇನನ್ನು ಹೇಳಿ ಬಿಡುತ್ತಾರೆ. ತಂದೆಯು ತಿಳಿಯುತ್ತಾರೆ - ನಾನು ಮಕ್ಕಳಿಗೆ ಓದಿಸಲು ಬಂದಿದ್ದೇನೆ. ಓದಿ ಯಾವಾಗ ದೇವತೆಯಾಗುತ್ತೀರೋ ಆಗ ವಿನಾಶ ಆಗಿ ಬಿಡುವುದು. ಈಗಂತೂ ಹಳೆಯ ಪ್ರಪಂಚವಾಗಿದೆ ಅದನ್ನು ಹೊಸದನ್ನಾಗಿ ಯಾರು ಮಾಡುವುದು? ತಂದೆಯು ತಿಳಿಸುತ್ತಾರೆ - ಇದು ನನ್ನದೇ ಪಾತ್ರವಾಗಿದೆ, ನಾನು ನಾಟಕದ ವಶವಾಗಿದ್ದೇನೆ. ಅರ್ಧ ಕಲ್ಪ ಹಿಡಿಸುತ್ತದೆ. ಈಗ ಮತ್ತೆ ತಂದೆಯು ಬಂದಿದ್ದಾರೆ, ನಮಗೆ ಓದಿಸುವವರೂ ಸಹ ಅವರೇ ಆಗಿದ್ದಾರೆ. ಶಾಂತಿ ಸ್ಥಾಪನೆ ಮಾಡುವವರೂ ಆಗಿದ್ದಾರೆ. ಯಾವಾಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೋ ಆಗ ಶಾಂತಿಯಿತ್ತು. ಇಲ್ಲಿ ಅಶಾಂತಿಯಿದೆ. ತಂದೆಯು ಒಬ್ಬರೇ ಆಗಿದ್ದಾರೆ. ಆತ್ಮಗಳು ಅನೇಕರಿದ್ದಾರೆ. ಇದು ಎಷ್ಟೊಂದು ವಿಚಿತ್ರವಾದ ಮತವಾಗಿದೆ. ತಂದೆಯು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಅವರೇ ನಮಗೆ ಓದಿಸುತ್ತಿದ್ದಾರೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು? ನೀವು ತಿಳಿಯುತ್ತೀರಿ - ನಾವೇ ಗೋಪ-ಗೋಪಿಕೆಯರಾಗಿದ್ದೇವೆ ಮತ್ತು ತಂದೆಯು ಗೋಪಿ ವಲ್ಲಭನಾಗಿದ್ದಾನೆ. ಕೇವಲ ಆತ್ಮಗಳಿಗೆ ಗೋಪ-ಗೋಪಿಕೆಯರೆಂದು ಹೇಳುವುದಿಲ್ಲ, ಶರೀರವಿದೆ. ಆದ್ದರಿಂದಲೇ ಗೋಪ-ಗೋಪಿಕೆಯರು ಅಥವಾ ಸಹೋದರ-ಸಹೋದರಿಯರೆಂದು ಹೇಳಲಾಗುತ್ತದೆ. ಗೋಪಿ ವಲ್ಲಭ ಶಿವ ತಂದೆಯ ಮಕ್ಕಳಾಗಿದ್ದೇವೆ. ಗೋಪ-ಗೋಪಿಕೆಯರೆಂಬ ಶಬ್ಧವೇ ಮಧುರವಾಗಿದೆ. ಗಾಯನವಿದೆ - ಅಚ್ಯುತಂ, ಕೇಶವಂ ಗೋಪಿ ವಲ್ಲಭಂ ಜಾನಕಿನಾಥಂ.... ಈ ಮಹಿಮೆಯು ಈ ಸಮಯದ್ದಾಗಿದೆ. ಆದರೆ ಇದನ್ನು ಅರಿಯದಿರುವ ಕಾರಣ ಎಲ್ಲಾ ಮಾತುಗಳನ್ನು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು ಎನ್ನುವಂತೆ ಮಾಡಿ ಬಿಟ್ಟಿದ್ದಾರೆ. ತಂದೆಯು ಕುಳಿತು ವಿಶ್ವದ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ. ಮನುಷ್ಯರು ಕೇವಲ ಈ ಖಂಡಗಳ ಬಗ್ಗೆ ತಿಳಿದಿದ್ದಾರೆ. ಸತ್ಯಯುಗದಲ್ಲಿ ಯಾರ ರಾಜ್ಯವಿತ್ತು, ಎಷ್ಟು ಸಮಯ ನಡೆಯಿತು ಎಂಬುದನ್ನು ತಿಳಿದುಕೊಂಡಿಲ್ಲ. ಏಕೆಂದರೆ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ, ಘೋರ ಅಂಧಕಾರದಲ್ಲಿದ್ದಾರೆ. ಈಗ ತಂದೆಯು ಬಂದು ನಿಮಗೆ ಸೃಷ್ಟಿ ಚಕ್ರದ ಜ್ಞಾನವನ್ನು ತಿಳಿಸುತ್ತಾರೆ, ಇದನ್ನು ತಿಳಿಯುವುದರಿಂದ ನೀವು ತ್ರಿಕಾಲದರ್ಶಿ, ತ್ರಿನೇತ್ರಿಗಳಾಗಿ ಬಿಡುತ್ತೀರಿ. ಇದು ವಿದ್ಯೆಯಾಗಿದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವು ಕಲ್ಪದ ಸಂಗಮಯುಗದಲ್ಲಿ ಬಂದು ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡುತ್ತೇನೆ. ನಂಬರ್ ನೀವೇ ಆಗುತ್ತೀರಿ. ವಿದ್ಯೆಯಿಂದಲೇ ಪದವಿ ಸಿಗುತ್ತದೆ. ಬೇಹದ್ದಿನ ತಂದೆಯೇ ಓದಿಸುತ್ತಾರೆಂದು ನಿಮಗೆ ಗೊತ್ತಿದೆ. ಪರಮಾತ್ಮನು ನಾಮ-ರೂಪದಿಂದ ಭಿನ್ನವಾಗಿದ್ದಾರೆ, ಕಲ್ಲು-ಮುಳ್ಳಿನಲ್ಲಿದ್ದಾರೆ ಎಂದು ಮನುಷ್ಯರು ಹೇಳಿ ಬಿಡುತ್ತಾರೆ. ಏನೇನನ್ನೋ ಹೇಳುತ್ತಿರುತ್ತಾರೆ. ದೇವಿಯರಿಗೂ ಸಹ ಎಷ್ಟೊಂದು ಭುಜಗಳನ್ನು ತೋರಿಸಿದ್ದಾರೆ. ರಾವಣನಿಗೆ ಹತ್ತು ತಲೆಗಳನ್ನು ತೋರಿಸುತ್ತಾರೆ ಅಂದಾಗ ಮಕ್ಕಳಿಗೆ ಹೃದಯದಲ್ಲಿ ಬರಬೇಕು - ಎಲ್ಲಾ ಆತ್ಮಗಳ ತಂದೆಯು ನಮಗೆ ಓದಿಸುತ್ತಾರೆ, ಪಾವನರನ್ನಾಗಿ ಮಾಡುತ್ತಾರೆ ಅಂದಮೇಲೆ ಆಂತರಿಕವಾಗಿ ಎಷ್ಟೊಂದು ಖುಷಿಯಿರಬೇಕು. ಆದರೆ ಆ ಖುಷಿಯು ಯಾವಾಗ ನೀವು ಅನ್ಯರ ಕಲ್ಯಾಣ ಮಾಡಿ ಎಲ್ಲರನ್ನು ಖುಷಿ ಪಡಿಸುತ್ತೀರೋ ದಯಾ ಹೃದಯಗಳಾಗುತ್ತೀರೋ ಆಗ ಆ ಖುಷಿಯಿರುತ್ತದೆ. ಓಹೋ! ಬಾಬಾ ನಮ್ಮನ್ನು ವಿಶ್ವದ ಮಹಾರಾಜರನ್ನಾಗಿ ಮಾಡುತ್ತೀರಿ! ರಾಜ-ರಾಣಿ, ಪ್ರಜೆ ಎಲ್ಲರೂ ವಿಶ್ವದ ಮಾಲೀಕರಾಗುತ್ತಾರಲ್ಲವೆ. ಅಲ್ಲಿ ಮಂತ್ರಿಗಳಿರುವುದಿಲ್ಲ. ಈಗ ರಾಜರಿಲ್ಲದ ಕಾರಣ ಎಲ್ಲದಕ್ಕೂ ಮಂತ್ರಿಗಳೇ ಇದ್ದಾರೆ. ಈಗಂತೂ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ ಅಂದಮೇಲೆ ಇದು ಬುದ್ಧಿಯಲ್ಲಿ ಬರಬೇಕು - ಬೇಹದ್ದಿನ ತಂದೆಯು ನಮಗೆ ಏನನ್ನು ಓದಿಸುತ್ತಾರೆ! ಯಾರು ಚೆನ್ನಾಗಿ ಓದುವರೋ ಅವರೇ ಮೊದಲು ಬರುತ್ತಾರೆ ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈ ಲಕ್ಷ್ಮೀ-ನಾರಾಯಣರು ಇಷ್ಟೊಂದು ಸಾಹುಕಾರರು ಹೇಗಾದರು? ಏನು ಮಾಡಿದರು? ಭಕ್ತಿ ಮಾರ್ಗದಲ್ಲಿ ಯಾರಾದರೂ ಬಹಳ ಸಾಹುಕಾರರಾದರೆ ಇವರು ಇಂತಹ ಶ್ರೇಷ್ಠ ಕರ್ಮ ಮಾಡಿದ್ದಾರೆಂದು ತಿಳಿಯುತ್ತಾರೆ. ಈಶ್ವರಾರ್ಥವಾಗಿ ದಾನ-ಪುಣ್ಯವನ್ನೂ ಮಾಡುತ್ತಾರೆ. ಇದರ ಪ್ರತಿಯಾಗಿ ನಮಗೆ ಬಹಳಷ್ಟು ಸಿಗುತ್ತದೆಯೆಂದು ತಿಳಿಯುತ್ತಾರೆ. ಅದರಿಂದ ಇನ್ನೊಂದು ಜನ್ಮದಲ್ಲಿ ಸಾಹುಕಾರರಾಗಿ ಬಿಡುತ್ತಾರೆ ಆದರೆ ಅವರು ಪರೋಕ್ಷವಾಗಿ ಕೊಡುವ ಕಾರಣ ಅದರಿಂದ ಅಲ್ಪಕಾಲಕ್ಕಾಗಿ ಸ್ವಲ್ಪ ಫಲವೂ ಸಿಗುತ್ತದೆ. ಈಗ ತಂದೆಯು ಪ್ರತ್ಯಕ್ಷ ರೂಪದಲ್ಲಿ ಬಂದಿದ್ದಾರೆ. ಪತಿತ-ಪಾವನನೇ ಬಂದು ಪಾವನ ಮಾಡಿ ಎಂದು ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಈ ಜ್ಞಾನವನ್ನು ಕೊಟ್ಟು ಇಂತಹ ಲಕ್ಷ್ಮೀ-ನಾರಾಯಣರನ್ನಾಗಿ ಮಾಡಿ ಎಂದು ಹೇಳುವುದಿಲ್ಲ. ಮನುಷ್ಯರ ಬುದ್ಧಿಯಲ್ಲಂತೂ ಕೃಷ್ಣನೇ ನೆನಪು ಬರುತ್ತಾನೆ. ತಂದೆಯನ್ನು ಅರಿಯದಿರುವ ಕಾರಣ ಎಷ್ಟೊಂದು ದುಃಖಿಯಾಗಿ ಬಿಟ್ಟಿದ್ದಾರೆ. ಈಗ ತಂದೆಯು ನಮ್ಮನ್ನು ದೈವೀ ಸಂಪ್ರದಾಯದವರನ್ನಾಗಿ ಮಾಡುತ್ತಾರೆ. ನೀವು ಶಾಂತಿಧಾಮಕ್ಕೆ ಹೋಗಿ ಮತ್ತೆ ಸುಖಧಾಮದಲ್ಲಿ ಬರುತ್ತೀರಿ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಭಲೇ ಕೇಳುತ್ತಾರೆ ಆದರೆ ಕೇಳುತ್ತಿಲ್ಲವೇನೋ ಎನ್ನುವಂತೆ. ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರಾಗುವುದೇ ಇಲ್ಲ. ಇಡೀ ದಿನ ತಂದೆಯೇ ನೆನಪೇ ಇರಬೇಕು. ಸ್ತ್ರೀಯು ಪತಿಗಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಸ್ತ್ರೀಗೆ ಬಹಳ ಪ್ರೀತಿಯಿರುತ್ತದೆ ಇಲ್ಲಂತೂ ನೀವೆಲ್ಲರೂ ಮಕ್ಕಳಾಗಿದ್ದೀರಿ ಆದರೂ ನಂಬರವಾರ್ ಇದ್ದೀರಲ್ಲವೆ. ನಿಮಗೆ ಗೊತ್ತಿದೆ - ಇಂತಹ ಬೇಹದ್ದಿನ ತಂದೆಯನ್ನು ನಾವು ಪದೇ-ಪದೇ ಮರೆತು ಹೋಗುತ್ತೇವೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಎಲ್ಲಾ ವಿಕರ್ಮಗಳು ವಿನಾಶವಾಗುತ್ತವೆ. ಆದರೂ ಮರೆತು ಹೋಗುತ್ತೀರಿ. ಅರೇ! ಇಂತಹ ತಂದೆಯು ಯಾರು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಅವರನ್ನೇ ನೀವೇಕೆ ಮರೆಯುತ್ತೀರಿ? ಮಾಯೆಯ ಬಿರುಗಾಳಿಗಳು ಬರುತ್ತವೆ. ಆದರೂ ಸಹ ನೀವು ಪ್ರಯತ್ನ ಪಡುತ್ತಿರಿ. ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಸಿಕ್ಕಿ ಬಿಡುತ್ತದೆ. ಸ್ವರ್ಗವಾಸಿ ದೇವತೆಗಳಂತೂ ಎಲ್ಲರೂ ಆಗುತ್ತೀರಿ. ಆದರೆ ಶಿಕ್ಷೆಯನ್ನನುಭವಿಸಿ ನಂತರ ಆಗುತ್ತೀರಿ, ಪದವಿಯೂ ಬಹಳ ಕಡಿಮೆಯಾಗುತ್ತದೆ. ಇವೆಲ್ಲವೂ ಹೊಸ ಮಾತುಗಳಾಗಿವೆ. ಯಾವಾಗ ತಂದೆಯನ್ನು, ಶಿಕ್ಷಕನನ್ನು ನೆನಪು ಮಾಡುತ್ತೀರೋ ಆಗ ಗಮನಕ್ಕೆ ಬರುತ್ತದೆ. ನೀವು ಶಿಕ್ಷಕರನ್ನೂ ಸಹ ಮರೆತು ಹೋಗುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಎಲ್ಲಿಯವರೆಗೆ ಇರುತ್ತೇನೆ, ವಿನಾಶದ ಸಮಯವೂ ಬರುತ್ತದೆ, ಮತ್ತೆಲ್ಲವೂ ಈ ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುತ್ತದೆಯೋ ಅಲ್ಲಿಯವರೆಗೆ ವಿದ್ಯಾಭ್ಯಾಸವು ನಡೆಯುತ್ತಿರುತ್ತದೆ. ಎಲ್ಲವನ್ನೂ ಈಗಾಗಲೇ ಓದಿಸಿದ್ದಾರೆ, ಮತ್ತೇನು ಓದಿಸುತ್ತಾರೆಂದು ನೀವು ಕೇಳುತ್ತೀರಿ. ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೊಸ-ಹೊಸ ವಿಚಾರಗಳು ಬರುತ್ತಿರುತ್ತವೆ. ಅದನ್ನು ಕೇಳಿ ನೀವು ಖುಷಿಯಾಗುತ್ತೀರಲ್ಲವೆ ಅಂದಮೇಲೆ ಚೆನ್ನಾಗಿ ಓದಿ ಮತ್ತು ಸುಧಾಮನಂತೆ ಏನನ್ನು ವರ್ಗಾವಣೆ ಮಾಡಬೇಕೋ ಅದನ್ನು ಮಾಡುತ್ತಿರಿ. ಇದಂತೂ ದೊಡ್ಡ ವ್ಯಾಪಾರವಾಗಿದೆ, ಈ ಬಾಬಾರವರು ವ್ಯಾಪಾರದಲ್ಲಿ ಬಹಳ ವಿಶಾಲ ಹೃದಯಿಗಳಾಗಿದ್ದರು, ರೂಪಾಯಿಯಿಂದ ಒಂದು ಆಣೆಯನ್ನು ದಾನವನ್ನು ತೆಗೆಯುತ್ತಿದ್ದರು. ಭಲೇ ನಷ್ಟವಾಗುತ್ತಿತ್ತು, ಏಕೆಂದರೆ ಎಲ್ಲರಿಗಿಂತ ಮೊದಲು ನಾವೇ ಹಾಕಬೇಕಾಗುತ್ತಿತ್ತು ಏಕೆಂದರೆ ತಾವೆಷ್ಟು ಹೆಚ್ಚಿಗೆ ದಾನ ನೀಡುತ್ತೀರೋ ಅದನ್ನು ನೋಡಿ ಎಲ್ಲರೂ ಹಾಕುತ್ತಾರೆ. ಆಗ ಅನೇಕರ ಕಲ್ಯಾಣವಾಗಿ ಬಿಡುತ್ತದೆಯೆಂದು ಹೇಳಿ ಬಿಡುತ್ತಾರೆ. ಅದು ಭಕ್ತಿ ಮಾರ್ಗವಾಗಿತ್ತು. ಇಲ್ಲಂತೂ ಬಾಬಾ ತೆಗೆದುಕೊಳ್ಳಿ ಎಂದು ಎಲ್ಲವನ್ನೂ ಕೊಟ್ಟು ಬಿಟ್ಟರು. ತಂದೆಯು ತಿಳಿಸುತ್ತಾರೆ - ನಿಮಗೆ ಇಡೀ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ವಿನಾಶದ ಸಾಕ್ಷಾತ್ಕಾರ, ಚತುರ್ಭುಜ ವಿಷ್ಣುವಿನ ಸಾಕ್ಷಾತ್ಕಾರವಾಯಿತು. ಆ ಸಮಯದಲ್ಲಿ ನಾನು ವಿಶ್ವದ ಮಾಲೀಕನಾಗುತ್ತೇನೆಂದು ತಿಳಿಯಿತು, ತಂದೆಯ ಪ್ರವೇಶತೆಯಾಗಿತ್ತಲ್ಲವೆ. ವಿನಾಶವನ್ನು ನೋಡಿದೆನು ಅಷ್ಟೆ, ಈ ಪ್ರಪಂಚವು ಸಮಾಪ್ತಿಯಾಗುತ್ತಿದೆ. ಈ ವ್ಯಾಪಾರವನ್ನೇನು ಮಾಡಲಿ, ಈ ಕತ್ತೆ ಜೀವನವನ್ನು ಬಿಟ್ಟು ಬಿಡಬೇಕೆನಿಸಿತು. ನಮಗೆ ರಾಜ್ಯಭಾಗ್ಯವು ಸಿಗುತ್ತಿದೆ. ಈಗ ತಂದೆಯು ನಿಮಗೂ ಸಹ ತಿಳಿಸುತ್ತಿದ್ದಾರೆ - ಇಡೀ ಹಳೆಯ ಪ್ರಪಂಚವು ವಿನಾಶವಾಗಲಿದೆ, ನಿಮ್ಮನ್ನು ಕುಂಭಕರ್ಣನ ನಿದ್ರೆಯಿಂದ ಎದ್ದೇಳಿಸುವ ಎಷ್ಟೊಂದು ಪುರುಷಾರ್ಥ ಮಾಡಿಸುತ್ತಿದ್ದಾರೆ. ಆದರೂ ಸಹ ನೀವು ಎದ್ದೇಳುವುದೇ ಇಲ್ಲ. ಅಂದಾಗ ಮಕ್ಕಳು ಒಬ್ಬ ತಂದೆಯನ್ನೇ ನೆನಪು ಮಾಡಬೇಕು. ಎಲ್ಲವನ್ನೂ ತಂದೆಗೆ ಕೊಟ್ಟು ಬಿಟ್ಟಿರೆಂದರೆ ಅವಶ್ಯವಾಗಿ ಒಬ್ಬ ತಂದೆಯೇ ನೆನಪಿಗೆ ಬರುತ್ತಾರೆ. ನೀವು ಮಕ್ಕಳು ಹೆಚ್ಚು ನೆನಪನ್ನು ಮಾಡಬಹುದು. ಯಾರಿಗೆ ಹೆಚ್ಚು ಜವಾಬ್ದಾರಿ ಇರುತ್ತದೆಯೋ..... ಎಷ್ಟೊಂದು ಬಂಧನದಲ್ಲಿರುವವರ ಸಮಾಚಾರಗಳು ಬರುತ್ತವೆ. ಪಾಪ ಇಷ್ಟೊಂದು ಏಟು ತಿನ್ನುತ್ತಾರೆಂದು ಬಾಬಾರವರಿಗೆ ವಿಚಾರವು ತಲುಪುತ್ತದೆ. ಪತಿಯು ಎಷ್ಟೊಂದು ಸತಾಯಿಸುತ್ತಾರೆ. ಭಲೇ ತಿಳಿಯುತ್ತೇವೆ - ಡ್ರಾಮಾದಲ್ಲಿ ಇದೆ, ನಾವು ಏನು ಮಾಡಲು ಸಾಧ್ಯ. ಕಲ್ಪದ ಹಿಂದೆಯೂ ಸಹ ಅಬಲೆಯರ ಮೇಲೆ ಅತ್ಯಾಚಾರವಾಗಿತ್ತು. ಹೊಸ ಪ್ರಪಂಚವಂತೂ ಸ್ಥಾಪನೆಯಾಗಲೇಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಇವರ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತ್ಯದಲ್ಲಿ ಪ್ರವೇಶ ಮಾಡುತ್ತೇನೆ ಅಂದಾಗ ಅವಶ್ಯವಾಗಿ ನಾವೇ ಸುಂದರರಾಗಿದ್ದೆವು, ಈಗ ನಾವೇ ಕಪ್ಪಾಗಿದ್ದೇವೆ, ನಾನೇ ಮೊದಲಿಗನಾಗಿ ಬರುತ್ತೇನೆ. ನಾನೇ ಹೋಗಿ ಕೃಷ್ಣನಾಗಿದ್ದೇನೆ. ಈ ಚಿತ್ರವನ್ನು ನೋಡುತ್ತಾ ನಾನೇ ಹೀಗಾಗುತ್ತೇನೆಂದು ವಿಚಾರವು ಬರುತ್ತದೆ. ತಂದೆಯು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ, ಅದನ್ನು ತಿಳಿದುಕೊಂಡು ಅನ್ಯರಿಗೆ ತಿಳಿಸುವುದು ಮಕ್ಕಳ ಕರ್ತವ್ಯವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:
1. ನಾವು ಗೋಪಿವಲ್ಲಭನ ಗೋಪ-ಗೋಪಿಕೆಯರಾಗಿದ್ದೇವೆ - ಈ ಖುಷಿ ಹಾಗೂ ನಶೆಯಲ್ಲಿರಬೇಕಾಗಿದೆ. ಅಂತರ್ಮುಖಿಯಾಗಿ ವಿಚಾರ ಸಾಗರ ಮಂಥನ ಮಾಡಿ ತಂದೆಯ ಸಮಾನ ಶಿಕ್ಷಕರಾಗಬೇಕಾಗಿದೆ.

2. ಸುಧಾಮನಂತೆ ತಮ್ಮದೆಲ್ಲವನ್ನೂ ವರ್ಗಾವಣೆ ಮಾಡುವುದರ ಜೊತೆ ಜೊತೆಗೆ ವಿದ್ಯೆಯನ್ನೂ ಚೆನ್ನಾಗಿ ಓದಬೇಕಾಗಿದೆ. ವಿನಾಶಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿರುವವರನ್ನು ಜಾಗೃತಗೊಳಿಸಬೇಕಾಗಿದೆ.


ವರದಾನ:
ತ್ರಿಕಾಲದರ್ಶಿಯಾಗಿ ದಿವ್ಯ ಬುದ್ಧಿಯ ವನ್ನು ಕಾರ್ಯದಲ್ಲಿ ತೊಡಗಿಸುವಂತಹ ಸಫಲತಾ ಸಂಪನ್ನ ಭವ.

ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ದಿವ್ಯ ಬುದ್ಧಿಯ ವರದಾನವನ್ನು ಕೊಟ್ಟಿದ್ದಾರೆ. ದಿವ್ಯ ಬುದ್ಧಿಯಿಂದಲೇ ತಂದೆಯನ್ನು ಸ್ವಯಂ ಅನ್ನು ಮತ್ತು ಮೂರೂ ಕಾಲಗಳನ್ನು ಸ್ಪಷ್ಠವಾಗಿ ತಿಳಿಯಲು ಸಾಧ್ಯ. ಸರ್ವ ಶಕ್ತಿಗಳನ್ನು ಧಾರಣೆ ಮಾಡಲು ಸಾಧ್ಯ. ದಿವ್ಯ ಬುದ್ಧಿಯುಳ್ಳ ಆತ್ಮ ಯಾವುದೇ ಸಂಕಲ್ಪವನ್ನು ಕಾರ್ಯದಲ್ಲಿ ಅಥವಾ ವಾಣಿಯಲ್ಲಿ ತರುವ ಮೊದಲು ಪ್ರತಿ ಮಾತು ಅಥವಾ ಕರ್ಮದ ಮೂರೂ ಕಾಲಗಳನ್ನು ತಿಳಿದು ನಂತರ ಕಾರ್ಯ ರೂಪದಲ್ಲಿ ತರುತ್ತಾರೆ. ಅವರ ಮುಂದೆ. ಭೂತ ಮತ್ತು ಭವಿಷ್ಯ ಸಹಾ ಇಷ್ಟು ಸ್ಪಷ್ಠವಾಗಿರುತ್ತದೆ ಹೇಗೆ ವರ್ತಮಾನ ಸ್ಪಷ್ಠವಾಗಿರುವುದು ಹಾಗೆ. ಈ ರೀತಿಯ ದಿವ್ಯ ಬುದ್ಧಿಯುಳ್ಳವರು ತ್ರಿಕಾಲದರ್ಶಿಯಾಗಿರುವ ಕಾರಣ ಸದಾ ಸಫಲತಾ ಸಂಪನ್ನರಾಗಿರುತ್ತಾರೆ.

ಸ್ಲೋಗನ್:
ಸಂಪೂರ್ಣ ಪವಿತ್ರತೆಯನ್ನು ಧಾರಣೆ ಮಾಡುವಂತಹವರೇ ಪರಮಾನಂದದ ಅನುಭವ ಮಾಡಲು ಸಾಧ್ಯ.