15.03.20    Avyakt Bapdada     Kannada Murli     11.12.85     Om Shanti     Madhuban


ಸತ್ಯ ಸೇವಾಧಾರಿಯ ಲಕ್ಷಣಗಳು


ಇಂದು ಸ್ನೇಹದ ಸಾಗರ ಬಾಪ್ದಾದಾರವರು ಎಲ್ಲಾ ಸ್ನೇಹಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಕ್ಕಳಲ್ಲಿ ಮೂರು ವಿಶೇಷತೆಗಳನ್ನು ನೋಡುತ್ತಿದ್ದಾರೆ - ಪ್ರತಿಯೊಂದು ಮಗುವು ಮೂರು ವಿಶೇಷತೆಗಳಲ್ಲಿ ಎಲ್ಲಿಯವರೆಗೆ ಸಂಪನ್ನರಾಗಿದ್ದಾರೆ. ಆ ಮೂರು ವಿಶೇಷತೆಗಳಾಗಿವೆ - ಸ್ನೇಹ, ಸಹಯೋಗ ಅರ್ಥಾತ್ ಸಹಜಯೋಗ ಮತ್ತು ಶಕ್ತಿ ಸ್ವರೂಪ ಅರ್ಥಾತ್ ನಡೆಯುತ್ತಾ-ಸುತ್ತಾಡುತ್ತಾ ಚೈತನ್ಯ ಲೈಟ್ಹೌಸ್ ಮತ್ತು ಮೈಟ್ಹೌಸ್. ಪ್ರತೀ ಸಂಕಲ್ಪ, ಮಾತು ಹಾಗೂ ಕರ್ಮದ ಮೂಲಕ ಮೂರೂ ಸ್ವರೂಪಗಳನ್ನು ಪ್ರತ್ಯಕ್ಷ ಸ್ವರೂಪದಲ್ಲಿ ಯಾರಿಗಾದರೂ ಅನುಭವವಾಗಲಿ. ಅದು ಕೇವಲ ಸ್ವಯಂಗಾಗಿ ಆಗಬಾರದು ಆದರೆ ಅನ್ಯರಿಗೂ ಸಹ ಈ ಮೂರು ವಿಶೇಷತೆಗಳ ಅನುಭವವಾಗಲಿ. ಹೇಗೆ ತಂದೆಯು ಸ್ನೇಹದ ಸಾಗರನಾಗಿದ್ದಾರೆ ಹಾಗೆಯೇ ಮಾಸ್ಟರ್ ಸಾಗರನ ಮುಂದೆ, ಯಾರೇ ಜ್ಞಾನಿ ಅಥವಾ ಅಜ್ಞಾನಿ ಆತ್ಮರೇ ಬರುತ್ತಾರೆಂದರೆ ಅನುಭವ ಮಾಡಲಿ - ಸ್ನೇಹದ ಮಾಸ್ಟರ್ ಸಾಗರನ ಅಲೆಗಳು, ಸ್ನೇಹದ ಅನುಭೂತಿಯನ್ನು ಮಾಡಿಸುತ್ತಿದೆ. ಹೇಗೆ ಯಾರೇ ಲೌಕಿಕ ಹಾಗೂ ಪ್ರಾಕೃತಿಕ ಸಾಗರದ ದಡದಲ್ಲಿ ಹೋಗುತ್ತಾರೆಂದರೆ ಶೀತಲತೆಯ, ಶಾಂತಿಯ ಅನುಭೂತಿಯನ್ನು ಸ್ವತಹವಾಗಿ ಮಾಡುತ್ತಾರೆ. ಹಾಗೆಯೇ ಮಾಸ್ಟರ್ ಸ್ನೇಹದ ಸಾಗರನ ಮೂಲಕ ಸುಗಂಧವು ವಾಯುಮಂಡಲದಲ್ಲಿ ಅನುಭವವಾಗಲಿ. ತಂದೆಯ ಸ್ನೇಹಿಯಾಗಿದ್ದೇವೆ ಎನ್ನುವುದನ್ನಂತು ಎಲ್ಲರೂ ಹೇಳುತ್ತೀರಿ ಮತ್ತು ತಂದೆಯೂ ತಿಳಿದಿದ್ದಾರೆ - ಎಲ್ಲರಿಗೂ ತಂದೆಯೊಂದಿಗೆ ಎಷ್ಟು ಸ್ನೇಹವಿದೆ ಎಂದು. ಆದರೆ ಈಗ ಸ್ನೇಹದ ಸುಗಂಧವು ಇಡೀ ವಿಶ್ವದಲ್ಲಿ ಹರಡಬೇಕು. ಪ್ರತಿಯೊಂದು ಆತ್ಮನಿಗೂ ಈ ಸುಗಂಧದ ಅನುಭವವನ್ನು ಮಾಡಿಸಬೇಕಾಗಿದೆ. ಪ್ರತಿಯೊಂದು ಆತ್ಮನು ಈ ವರ್ಣನೆಯನ್ನು ಮಾಡಲಿ - ಇವರು ಶ್ರೇಷ್ಠ ಆತ್ಮನಾಗಿದ್ದಾರೆ. ಕೇವಲ ತಂದೆಯ ಸ್ನೇಹಿಯಾಗಿದ್ದಾರೆಂದಲ್ಲ ಆದರೆ ಸರ್ವರ ಸದಾ ಸ್ನೇಹಿಯಾಗಿದ್ದಾರೆ. ಇವೆರಡೂ ಅನುಭೂತಿಗಳು ಯಾವಾಗ ಸರ್ವರಿಗೂ ಸಾದಕಾಲ ಆಗುತ್ತದೆ, ಆಗ ಹೇಳುವರು - ಮಾಸ್ಟರ್ ಸ್ನೇಹದ ಸಾಗರ. ಇಂದಿನ ಪ್ರಪಂಚದಲ್ಲಿ ಸತ್ಯ ಆತ್ಮಿಕ ಸ್ನೇಹದ ಹಸಿವಿದೆ. ಸ್ವಾರ್ಥಿ ಸ್ನೇಹವನ್ನು ನೋಡಿ-ನೋಡಿ, ಆ ಸ್ನೇಹದಿಂದ ಮನಸ್ಸು ಉಪರಾಂ ಆಗಿ ಬಿಟ್ಟಿದೆ ಆದ್ದರಿಂದ ಆತ್ಮಿಕ ಸ್ನೇಹದ ಅನುಭೂತಿಯನ್ನೂ ಸಹ ಸ್ವಲ್ಪ ಗಳಿಗೆಯಲ್ಲಿ ಜೀವನದ ಆಶ್ರಯವೆಂದು ತಿಳಿಯುತ್ತಾರೆ.

ಬಾಪ್ದಾದಾರವರು ನೋಡುತ್ತಿದ್ದರು - ಸ್ನೇಹದ ವಿಶೇಷತೆಯಲ್ಲಿ ಅನ್ಯ ಆತ್ಮರ ಬಗ್ಗೆ ಕರ್ಮದಲ್ಲಿ ಹಾಗೂ ಸೇವೆಯಲ್ಲಿ ತರುವುದರಲ್ಲಿ ಎಲ್ಲಿಯವರೆಗೆ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ? ಕೇವಲ ತನ್ನ ಮನಸ್ಸಿನಲ್ಲಿ ತನಗೆ ತಾನೇ ಖುಷಿಯಾಗುವವರಂತು ಅಲ್ಲ ಅಲ್ಲವೇ? ನಾನಂತು ಬಹಳ ಸ್ನೇಹಿಯಾಗಿದ್ದೇನೆ ಎಂದು. ಒಂದುವೇಳೆ ಸ್ನೇಹವಿಲ್ಲದಿದ್ದರೆ ತಂದೆಯ ಮಗುವಾಗಿ ಹೇಗೆ ಆಗುತ್ತಿದ್ದಿರಿ ಹಾಗೂ ಬ್ರಾಹ್ಮಣ ಜೀವನದಲ್ಲಿ ಹೇಗೆ ಮುಂದುವರೆಯುತ್ತಿದ್ದಿರಿ! ತಮ್ಮ ಮನಸ್ಸಿನಲ್ಲಿ ಸಂತುಷ್ಟತೆಯಿದೆ, ಇದನ್ನು ಬಾಪ್ದಾದಾರವರೂ ತಿಳಿದಿದ್ದಾರೆ. ಮತ್ತು ತಮ್ಮವರೆಗಿದೆ ಎನ್ನುವುದೂ ಸರಿಯಿದೆ ಆದರೆ ತಾವೆಲ್ಲಾ ಮಕ್ಕಳು ತಂದೆಯ ಜೊತೆ ಸೇವಾಧಾರಿಯಾಗಿದ್ದೀರಿ. ಸೇವೆಗಾಗಿಯೇ ಈ ತನು-ಮನ-ಧನ, ತಮ್ಮೆಲ್ಲರಿಗೂ ತಂದೆಯು ನಿಮಿತ್ತರನ್ನಾಗಿ ಮಾಡಿಕೊಟ್ಟಿದ್ದಾರೆ. ಸೇವಾಧಾರಿಯ ಕರ್ತವ್ಯವೇನಾಗಿದೆ? ಪ್ರತಿಯೊಂದು ವಿಶೇಷತೆಯನ್ನು ಸೇವೆಯಲ್ಲಿ ಉಪಯೋಗಿಸುವುದು. ಒಂದುವೇಳೆ ತಮ್ಮ ವಿಶೇಷತೆಯನ್ನು ಸೇವೆಯಲ್ಲಿ ಉಪಯೋಗಿಸಲಿಲ್ಲದಿದ್ದರೆ, ಆ ವಿಶೇಷತೆಯೆಂದಿಗೂ ಸಹ ವೃದ್ಧಿಯನ್ನು ಪಡೆಯುವುದಿಲ್ಲ. ಅದೇ ಸ್ತರದಲ್ಲಿರುತ್ತದೆ ಆದ್ದರಿಂದ ಕೆಲವು ಮಕ್ಕಳು ಇಂತಹ ಅನುಭವವನ್ನೂ ಮಾಡುತ್ತಾರೆ - ತಂದೆಯ ಮಕ್ಕಳಾಗಿ ಬಿಟ್ಟೆವು. ಪ್ರತಿನಿತ್ಯವೂ ಬರುತ್ತಿದ್ದೇವೆ, ಪುರುಷಾರ್ಥದಲ್ಲಿಯೂ ನಡೆಯುತ್ತಿದ್ದೇವೆ. ನಿಯಮವನ್ನೂ ನಿಭಾಯಿಸುತ್ತಿದ್ದೇವೆ ಆದರೆ ಪುರುಷಾರ್ಥದಲ್ಲಿ ಯಾವ ವೃದ್ಧಿಯಾಗಬೇಕು ಅದು ಅನುಭವವಾಗುವುದಿಲ್ಲ. ನಡೆಯುತ್ತಿದ್ದೇವೆ ಆದರೆ ಮುಂದುವರೆಯುತ್ತಿಲ್ಲ. ಇದರ ಕಾರಣವೇನಾಗಿದೆ? ವಿಶೇಷತೆಗಳನ್ನು ಸೇವೆಯಲ್ಲಿ ಉಪಯೋಗಿಸದಿರುವುದು. ಕೇವಲ ಜ್ಞಾನ ಕೊಡುವುದು ಅಥವಾ ಸಪ್ತಾಹದ ಕೋರ್ಸ್ ಮಾಡುವುದು, ಇಲ್ಲಿಯವರೆಗೆ ಸೇವೆಯಲ್ಲ. ತಿಳಿಸುವುದು, ಇದಂತು ದ್ವಾಪರದಿಂದ ಪರಂಪರೆಯಾಗಿ ನಡೆಯುತ್ತಿದೆ. ಆದರೆ ಈ ಬ್ರಾಹ್ಮಣ ಜೀವನದ ವಿಶೇಷತೆಯಾಗಿದೆ - ತಿಳಿಸುವುದು ಅರ್ಥಾತ್ ಸ್ವಲ್ಪ ಕೊಡುವುದು. ಭಕ್ತಿಮಾರ್ಗದಲ್ಲಿ ತಿಳಿಸುವುದು ಅರ್ಥಾತ್ ತೆಗೆದುಕೊಳ್ಳುವುದಾಗುತ್ತದೆ ಮತ್ತು ಈಗ ತಿಳಿಸುವುದು ಸ್ವಲ್ಪ ಕೊಡುವುದಾಗಿದೆ. ದಾತನ ಮಕ್ಕಳಾಗಿದ್ದೀರಿ, ಸಾಗರನ ಮಕ್ಕಳಾಗಿದ್ದೀರಿ. ಯಾರೇ ಸಂಪರ್ಕದಲ್ಲಿ ಬರುತ್ತಾರೆಂದರೆ ಅನುಭವ ಮಾಡಲಿ - ಸ್ವಲ್ಪ ತೆಗೆದುಕೊಂಡು ಹೋಗುತ್ತಿದ್ದೇವೆ. ಕೇವಲ ಕೇಳಿ ಹೋಗುತ್ತಿದ್ದೇವೆ, ಅಲ್ಲ. ಭಲೆ ಜ್ಞಾನದಿಂದ, ಭಲೆ ಸ್ನೇಹದ ಧನದಿಂದ, ಅಥವಾ ನೆನಪಿನ ಬಲದ ಧನದಿಂದ, ಶಕ್ತಿಗಳ ಧನದಿಂದ, ಸಹಯೋಗದ ಧನದಿಂದ ಕೈ ಅರ್ಥಾತ್ ತಿಳುವಳಿಕೆಯನ್ನು ತುಂಬಿಕೊಂಡು ಹೋಗುತ್ತಿದ್ದೇವೆ. ಇದಕ್ಕೆ ಸತ್ಯ ಸೇವೆ ಎಂದು ಹೇಳಲಾಗುತ್ತದೆ. ಸೆಕೆಂಡಿನ ದೃಷ್ಟಿ ಅಥವಾ ಎರಡು ಮಾತುಗಳ ಮೂಲಕ, ತಮ್ಮ ಶಕ್ತಿಶಾಲಿ ವೃತ್ತಿಯ ವೈಬ್ರೇಷನ್ ಮೂಲಕ, ಸಂಪರ್ಕದ ಮೂಲಕ ದಾತರಾಗಿ ಕೊಡಬೇಕಾಗಿದೆ. ಇಂತಹ ಸೇವಾಧಾರಿ ಮಕ್ಕಳು ಸತ್ಯ ಸೇವಾಧಾರಿ ಆಗಿದ್ದಾರೆ. ಹೀಗೆ ಕೊಡುವವರು ಸದಾ ಇದನ್ನು ಅನುಭವ ಮಾಡುತ್ತಾರೆ ಪ್ರತೀ ಸಮಯದಲ್ಲಿ ವೃದ್ಧಿಯನ್ನು ಅಥವಾ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೇವೆ. ಇಲ್ಲವೆಂದರೆ ತಿಳಿಯುತ್ತಾರೆ - ಹಿಂದೆ ಸರಿಯುತ್ತಿಲ್ಲ. ಆದರೆ ಮುಂದುವರೆಯುವುದೇನಿದೆ ಅದರಂತೆ ಮುಂದುವರೆಯುತ್ತಿಲ್ಲ ಆದ್ದರಿಂದ ದಾತರಾಗಿರಿ, ಅನುಭವ ಮಾಡಿಸಿರಿ. ಇದೇ ರೀತಿ ಸಹಯೋಗಿ ಅಥವಾ ಸಹಜಯೋಗಿಯಾಗಿ ಕೇವಲ ಸ್ವಯಂ ಪ್ರತಿ ಇದೆ ಹಾಗೂ ಅನ್ಯರಿಗೂ ತಮ್ಮ ಸಹಯೋಗದ ಉಮ್ಮಂಗ-ಉತ್ಸಾಹದ ಪ್ರಕಂಪನಗಳು ಸಹಯೋಗಿಯನ್ನಾಗಿ ಮಾಡಿ ಬಿಡುತ್ತದೆ. ತಮ್ಮ ಸಹಯೋಗದ ವಿಶೇಷತೆಯು ಸರ್ವ ಆತ್ಮರಿಗೂ ಈ ಅನುಭೂತಿಯಾಗಲಿ - ಇವರು ನಮ್ಮ ಸಹಯೋಗಿಯಾಗಿದ್ದಾರೆ. ಯಾವುದೇ ಬಲಹೀನ ಸ್ಥಿತಿ ಅಥವಾ ಪರಿಸ್ಥಿತಿಯ ಸಮಯದಲ್ಲಿ, ಈ ಸಹಯೋಗದ ಮೂಲಕ ಮುಂದುವರೆಯುವ ಸಾಧನವನ್ನು ಕೊಡುವಂತದ್ದಾಗಿದೆ. ಸಹಯೋಗದ ವಿಶೇಷತೆಯಿದೆಯೆನ್ನುವುದು ಸರ್ವರಿಗೂ ತಮ್ಮ ಪ್ರತಿ ಅನುಭವವಾಗಲಿ. ಇದಕ್ಕೆ ವಿಶೇಷತೆಯನ್ನು ಸೇವೆಯಲ್ಲಿ ಉಪಯೋಗಿಸುವುದು ಎಂದು ಹೇಳಲಾಗುತ್ತದೆ. ತಂದೆಯ ಸಹಯೋಗಿಯಂತು ಹೌದು ಆದರೆ ತಂದೆಯು ವಿಶ್ವ ಸಹಯೋಗಿಯಾಗಿದ್ದಾರೆ. ಮಕ್ಕಳ ಬಗ್ಗೆಯೂ ಪ್ರತಿಯೊಂದು ಆತ್ಮನಿಂದ ಈ ಅನುಭವದ ಮಾತು ಬರಲಿ - ಇವರೂ ಸಹ ತಂದೆಯ ಸಮಾನ ಸರ್ವರ ಸಹಯೋಗಿಯಾಗಿದ್ದಾರೆ. ವ್ಯಕ್ತಿಗತವಾಗಿ ಒಬ್ಬರಿನ್ನೊಬ್ಬರ ಸಹಯೋಗಿಯಾಗದಿರಿ, ಅವರು ಸ್ವಾರ್ಥದ ಸಹಯೋಗಿಯಾಗುತ್ತಾರೆ. ಅಲ್ಪಕಾಲದ ಸಹಯೋಗಿಯಾಗುತ್ತಾರೆ. ಸತ್ಯ ಸಹಯೋಗಿಗಳು ಬೇಹದ್ದಿನ ಸಹಯೋಗಿಯಾಗಿದ್ದಾರೆ. ತಮ್ಮೆಲ್ಲರ ಟೈಟಲ್ ಏನಾಗಿದೆ? ವಿಶ್ವ ಕಲ್ಯಾಣಕಾರಿ ಆಗಿದ್ದೀರಾ ಅಥವಾ ಕೇವಲ ಸೇವಾಕೇಂದ್ರದ ಕಲ್ಯಾಣಕಾರಿಯೇ? ದೇಶದ ಕಲ್ಯಾಣಕಾರಿಯಾಗಿದ್ದೀರಾ ಅಥವಾ ಕೇವಲ ಕ್ಲಾಸಿನ ವಿದ್ಯಾರ್ಥಿಗಳ ಕಲ್ಯಾಣಕಾರಿಯಾಗಿದ್ದೀರಾ? ಇಂತಹ ಟೈಟಲ್ ಇಲ್ಲವಲ್ಲವೆ. ವಿಶ್ವ ಕಲ್ಯಾಣಕಾರಿ ವಿಶ್ವದ ಮಾಲೀಕರಾಗುವವರಿದ್ದೀರಾ ಅಥವಾ ಕೇವಲ ತಮ್ಮ ಮಹಲಿನ ಮಾಲೀಕರಾಗುವವರಿದ್ದೀರಾ. ಯಾರು ಕೇವಲ ಸೇವಾಕೇಂದ್ರದ ಅಲ್ಪದರಲ್ಲಿ ಇರುತ್ತಾರೆ, ಅವರು ಕೇವಲ ತಮ್ಮ ಮಹಲಿನ ಮಾಲೀಕರಾಗುವರು. ಆದರೆ ಬೇಹದ್ದಿನ ತಂದೆಯ ಮೂಲಕ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಅಲ್ಪಕಾಲದ್ದಲ್ಲ. ಅಂದಮೇಲೆ ಸರ್ವರ ಪ್ರತಿ ಸಹಯೋಗದ ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸುವುದಕ್ಕೆ ಹೇಳಲಾಗುತ್ತದೆ - ಸಹಯೋಗಿ ಆತ್ಮ. ಇದೇ ವಿಧಿಯನುಸಾರ ಶಕ್ತಿಶಾಲಿ ಆತ್ಮನು ಸರ್ವಶಕ್ತಿಗಳನ್ನು ಕೇವಲ ಸ್ವಯಂಗಾಗಿ ಅಲ್ಲ, ಆದರೆ ಸರ್ವರ ಬಗ್ಗೆ ಸೇವೆಯಲ್ಲಿ ತೊಡಗಿಸುತ್ತಾರೆ. ಕೆಲವರಲ್ಲಿ ಸಹನಾಶಕ್ತಿ ಇಲ್ಲ, ತಮ್ಮ ಬಳಿ ಇದೆ. ಈ ಶಕ್ತಿಯನ್ನು ಅನ್ಯರಿಗೆ ಕೊಡುವುದು, ಇದಾಯಿತು - ಶಕ್ತಿಯನ್ನು ಸೇವೆಯಲ್ಲಿ ಉಪಯೋಗಿಸುವುದು. ಕೇವಲ ಇದನ್ನು ಯೋಚಿಸಬಾರದು - ನಾನಂತು ಸಹನಶೀಲನಾಗಿರುತ್ತೇನೆ ಆದರೆ ತಮ್ಮ ಸಹನಶೀಲತೆಯ ಗುಣದ ಲೈಟ್ಮೈಟ್ ಅನ್ಯರವರೆಗೂ ತಲುಪಬೇಕು. ಲೈಟ್ಹೌಸ್ನ ಲೈಟ್ ಕೇವಲ ತಮಗಾಗಿ ಇರುವುದಲ್ಲ. ಅನ್ಯರಿಗೆ ಬೆಳಕನ್ನು ಕೊಡುವ ಅಥವಾ ಮಾರ್ಗವನ್ನು ತಿಳಿಸುವುದಕ್ಕಾಗಿ ಇರುತ್ತದೆ. ಹೀಗೆ ಶಕ್ತಿರೂಪ ಅರ್ಥಾತ್ ಲೈಟ್ಹೌಸ್, ಮೈಟ್ಹೌಸ್ ಆಗಿದ್ದು ಅನ್ಯರಿಗೂ ಅದರ ಲಾಭದ ಅನುಭವ ಮಾಡಿಸಿರಿ. ಅವರು ಅನುಭವ ಮಾಡಲಿ - ನಿರ್ಭಲತೆಯ ಅಂಧಕಾರದಿಂದ ಶಕ್ತಿಯ ಬೆಳಕಿನಲ್ಲಿ ಬಂದು ಬಿಡಲಿ ಅಥವಾ ಈ ಆತ್ಮನು ತಮ್ಮ ಶಕ್ತಿಯ ಮೂಲಕ ನನ್ನನ್ನೂ ಶಕ್ತಿಶಾಲಿ ಮಾಡುವುದರಲ್ಲಿ ಸಹಯೋಗಿಯಾಗಿದ್ದಾರೆ ತಿಳಿಯಲಿ. ಸಂಬಂಧವನ್ನು ತಂದೆಯೊಂದಿಗೆ ಮಾಡಿಸುತ್ತಾರೆ ಆದರೆ ನಿಮಿತ್ತರಾಗಿದ್ದು. ಅದು ಹೀಗಾಗಬಾರದು - ಸಹಯೋಗವನ್ನು ಕೊಟ್ಟು ತನ್ನಲ್ಲಿಯೇ ಸಿಲುಕಿಸುವುದು. ತಂದೆಯ ಕೊಡುಗೆಯನ್ನು ಕೊಡುತ್ತಿದ್ದೇವೆ, ಈ ಸ್ಮೃತಿ ಮತ್ತು ಸಮರ್ಥತೆಯಿಂದ ವಿಶೇಷತೆಗಳನ್ನು ಸೇವೆಯಲ್ಲಿ ತೊಡಗಿಸುತ್ತಾರೆ, ಇದು ಸತ್ಯ ಸೇವಾಧಾರಿಗಳ ಲಕ್ಷಣವು ಇದೇ ಆಗಿದೆ. ಪ್ರತೀ ಕರ್ಮದಲ್ಲಿ ಅವರ ಮೂಲಕ ತಂದೆಯು ಕಂಡುಬರಲಿ, ಅವರ ಪ್ರತೀ ಮಾತು ತಂದೆಯ ಸ್ಮೃತಿ ತರಿಸಲಿ. ಪ್ರತಿಯೊಂದು ವಿಶೇಷತೆಯು ದಾತನ ಕಡೆಗೆ ಸನ್ನೆಯನ್ನು ಮಾಡಲಿ. ಸದಾ ತಂದೆಯೇ ಕಾಣಿಸುತ್ತಾರೆ. ಅವರು ತಮ್ಮನ್ನು ನೋಡದೆ, ಸದಾ ತಂದೆಯನ್ನು ನೋಡುವರು. ನನ್ನ ಸಹಯೋಗಿಯಾಗಿದ್ದಾರೆ, ಇದು ಸತ್ಯ ಸೇವಾಧಾರಿಗಳ ಲಕ್ಷಣವಲ್ಲ. ಇದು ಸಂಕಲ್ಪದಲ್ಲಿಯೂ ಯೋಚಿಸಬಾರದು - ನನ್ನ ವಿಶೇಷತೆಯ ಕಾರಣದಿಂದ, ಇವರು ನನಗೆ ಬಹಳ ಸಹಯೋಗಿಯಾಗಿದ್ದಾರೆ. ಸಹಯೋಗಿಗೆ ಸಹಯೋಗ ಕೊಡುವುದು ನನ್ನ ಕೆಲಸವಾಗಿದೆ. ಒಂದುವೇಳೆ ತಮ್ಮನ್ನು ನೋಡಿದರು, ತಂದೆಯನ್ನು ನೋಡಲಿಲ್ಲವೆಂದರೆ ಇದು ಸೇವೆಯಾಗಲಿಲ್ಲ. ಇದು ದ್ವಾಪರಯುಗಿ ಗುರುಗಳಂತೆ ಮುಖ ತಿರುಗಿಸುವುದಾಯಿತು. ತಂದೆಯನ್ನು ಮರೆಸಿದರೇ ಅಥವಾ ಸೇವೆ ಮಾಡಿದಂತಾಯಿತೆ. ಇದು ಬೀಳಿಸುವುದೇ ಅಥವಾ ಏರಿಸುವುದೇ? ಇದು ಪುಣ್ಯವಲ್ಲ, ಇದು ಪಾಪವಾಯಿತು ಏಕೆಂದರೆ ತಂದೆಯಿಲ್ಲವೆಂದರೆ ಖಂಡಿತ ಪಾಪವಿದೆ. ಅಂದಮೇಲೆ ಸತ್ಯ ಸೇವಾಧಾರಿಯು ಸತ್ಯದ ಕಡೆಗೇ ಸಂಬಂಧವನ್ನು ಜೋಡಿಸುವರು.

ಬಾಪ್ದಾದಾರವರಿಗೆ ಕೆಲವೊಮ್ಮೆ ಮಕ್ಕಳ ಪ್ರತಿ ನಗು ಸಹ ಬರುತ್ತದೆ - ಏನೆಂದರೆ, ಲಕ್ಷ್ಯವೇನು ಮತ್ತು ಲಕ್ಷಣವೇನು! ಎಂದು. ತಂದೆಯ ಬಳಿ ತಲುಪಬೇಕು ಮತ್ತು ತಲುಪುತ್ತಾರೆ ತನ್ನ ಕಡೆಗೆ. ಹೇಗೆ ಅನ್ಯ ಡಿವೈನ್ ಫಾದರ್ಸ್ ಎಂದು ಹೇಳುತ್ತೀರಲ್ಲವೆ, ಅವರು ಮೇಲಿಂದ ಕೆಳಗೆ ಕರೆತರುತ್ತಾರೆ. ಮೇಲಕ್ಕೆ ಕರೆದುಕೊಂಡು ಹೋಗುವುದಿಲ್ಲ. ಅಂತಹ ಡಿವೈನ್ ಫಾದರ್ ಆಗದಿರಿ. ಬಾಪ್ದಾದಾರವರು ಇದನ್ನು ನೋಡುತ್ತಿದ್ದರು - ಕೆಲವೊಂದೆಡೆ ಮಕ್ಕಳು ಸೀದಾಮಾರ್ಗಕ್ಕೆ ಬದಲಾಗಿ ಗಲ್ಲಿಗಳಲ್ಲಿ ಸಿಕ್ಕಿಕೊಂಡು ಬಿಡುತ್ತಾರೆ. ಮಾರ್ಗವು ಬದಲಾಗಿ ಬಿಡುತ್ತದೆ ಆದ್ದರಿಂದ ನಡೆಯುತ್ತಿರುತ್ತಾರೆ. ಅದರೆ ಗುರಿಯ ಸಮೀಪಕ್ಕೆ ತಲುಪುವುದಿಲ್ಲ. ಅಂದಮೇಲೆ ಸತ್ಯ ಸೇವಾಧಾರಿಯೆಂದು ಯಾರಿಗೆ ಹೇಳಲಾಗುತ್ತದೆ ಎಂದು ತಿಳಿಯಿತೆ! ಈ ಮೂರು ಶಕ್ತಿಗಳನ್ನು ಹಾಗೂ ವಿಶೇಷತೆಗಳನ್ನು ಬೇಹದ್ದಿನ ದೃಷ್ಟಿಯಿಂದ, ಬೇಹದ್ದಿನ ವೃತ್ತಿಯಿಂದ ಸೇವೆಯಲ್ಲಿ ಉಪಯೋಗಿಸಿರಿ. ಒಳ್ಳೆಯದು.

ಸದಾ ದಾತಾನ ಮಕ್ಕಳು ದಾತಾ ಆಗಿದ್ದು ಪ್ರತಿಯೊಂದು ಆತ್ಮನನ್ನು ಸಂಪನ್ನಗೊಳಿಸುವ, ಪ್ರತಿಯೊಂದು ಖಜಾನೆಯನ್ನು ಸೇವೆಯಲ್ಲಿ ಉಪಯೋಗಿಸಿ, ಪ್ರತೀ ಸಮಯದಲ್ಲಿ ವೃದ್ಧಿ ಹೊಂದುವ, ಸದಾ ತಂದೆಯ ಮೂಲಕ ಪ್ರಭು ಕೊಡುಗೆಯೆಂದು ತಿಳಿದು ಅನ್ಯರಿಗೂ ಪ್ರಭು ಪ್ರಸಾದವನ್ನು ಕೊಡುವಂತಹ, ಸದಾ ಒಬ್ಬರ ಕಡೆಗೆ ಸೂಚನೆ ಕೊಟ್ಟು (ಬೆರಳಿನ ಸನ್ನೆ) ಏಕರಸವಾಗಿರುವವರನ್ನಾಗಿ ಮಾಡುವಂತಹ, ಇಂತಹ ಸದಾ ಹಾಗೂ ಸರ್ವರ ಸತ್ಯ ಸೇವಾಧಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಕುಮಾರಿಯರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:-
ಈ ಆಯುಧವು ಏನು ಮಾಡುತ್ತದೆ? ಆಯುಧ ಹಾಗೂ ಸೇನೆಯು ಸದಾ ವಿಜಯವನ್ನು ಪ್ರಾಪ್ತಿ ಮಾಡಿಸುತ್ತದೆ. ಸೇನೆಯು ವಿಜಯಕ್ಕಾಗಿಯೇ ಇರುತ್ತದೆ. ಶತ್ರುವಿನೊಂದಿಗೆ ಯುದ್ಧ ಮಾಡುವುದಕ್ಕಾಗಿಯೇ ಸೈನ್ಯವನ್ನಿಡುತ್ತಾರೆ. ಅಂದಮೇಲೆ ಮಾಯಾ ಶತ್ರುವಿನ ಮೇಲೆ ವಿಜಯ ಪಡೆಯುವುದೇ ತಮ್ಮೆಲ್ಲರ ಕರ್ತವ್ಯವಾಗಿದೆ. ಸದಾ ತಮ್ಮ ಈ ಕರ್ತವ್ಯವನ್ನು ತಿಳಿದು, ಬಹುಬೇಗನೆ ಮುಂದುವರೆಯುತ್ತಾ ಸಾಗಿರಿ ಏಕೆಂದರೆ ಸಮಯವು ಬಹಳ ತೀವ್ರ ಗತಿಯಿಂದ ಮುಂದೆಸಾಗುತ್ತಿದೆ. ಸಮಯದ ಗತಿಯು ತೀವ್ರವಾಗಿದ್ದು ಮತ್ತು ತಮ್ಮ ಗತಿಯು ಬಲಹೀನವಾಗಿರುತ್ತದೆಯೆಂದರೆ, ಸಮಯದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಗತಿಯನ್ನು ತೀವ್ರಗೊಳಿಸಿರಿ. ಯಾರು ನಿಧಾನ ಗತಿಯವರಾಗಿರುತ್ತಾರೆ ಅವರು ಸ್ವಯಂ ತಾವೇ ಭೇಟೆಯಾಗಿ ಬಿಡುತ್ತಾರೆ. ಶಕ್ತಿಶಾಲಿಗಳು ಸದಾ ವಿಜಯಿಯಾಗಿರುತ್ತಾರೆ. ಅಂದಮೇಲೆ ತಾವೆಲ್ಲರೂ ವಿಜಯಿಯಾಗಿದ್ದೀರಾ?

ಸದಾ ಇದೇ ಲಕ್ಷ್ಯವನ್ನಿಟ್ಟುಕೊಳ್ಳಿರಿ - ಸೇವಾಧಾರಿಯಾಗಿದ್ದು ಸೇವೆಯಲ್ಲಿ ಮುಂದುವರೆಯುತ್ತಾ ಇರಬೇಕು ಏಕೆಂದರೆ ಕುಮಾರಿಯರಿಗೆ ಯಾವುದೇ ಬಂಧನವಿಲ್ಲ. ಸೇವೆಯನ್ನೆಷ್ಟು ಮಾಡಬೇಕೆಂದು ಬಯಸುತ್ತೀರಿ ಅಷ್ಟೂ ಮಾಡಬಲ್ಲಿರಿ. ಸದಾ ತಮ್ಮನ್ನು ತಂದೆಯವನಾಗಿದ್ದೇನೆ ಮತ್ತು ತಂದೆಗಾಗಿಯೇ ಇದ್ದೇನೆ, ಹೀಗೆ ತಿಳಿದುಕೊಂಡು ಮುಂದುವರೆಯುತ್ತಾ ಸಾಗಿರಿ. ಯಾರು ಸೇವೆಯಲ್ಲಿ ನಿಮಿತ್ತರಾಗುತ್ತಾರೆ ಅವರಿಗೆ ಖುಷಿ ಮತ್ತು ಶಕ್ತಿಯ ಪ್ರಾಪ್ತಿಯು ಸ್ವತಹವಾಗಿಯೇ ಆಗುತ್ತದೆ. ಸೇವಾಭಾಗ್ಯವು ಕೋಟಿಯಲ್ಲಿ ಕೆಲವರಿಗಷ್ಟೇ ಸಿಗುತ್ತದೆ. ಕುಮಾರಿಯರು ಸದಾ ಪೂಜ್ಯ ಆತ್ಮರಾಗಿರುತ್ತಾರೆ. ತಮ್ಮ ಪೂಜ್ಯ ಸ್ವರೂಪವನ್ನು ಸ್ಮೃತಿಯಲ್ಲಿಟ್ಟುಕೊಳ್ಳುತ್ತಾ ಪ್ರತಿಯೊಂದು ಕರ್ಮವನ್ನು ಮಾಡಿರಿ. ಮತ್ತು ಪ್ರತೀ ಕರ್ಮವನ್ನು ಮಾಡುವುದಕ್ಕೆ ಮೊದಲು ಪರಿಶೀಲನೆ ಮಾಡಿರಿ - ಈ ಕಾರ್ಯವು ಪೂಜ್ಯಾತ್ಮನ ಸಮಾನವಿದೆಯೇ, ಒಂದುವೇಳೆ ಇಲ್ಲದಿದ್ದರೆ ಪರಿವರ್ತನೆ ಮಾಡಿ ಬಿಡಿ. ಪೂಜ್ಯಾತ್ಮರೆಂದಿಗೂ ಸಾಧಾರಣರಾಗಿರುವುದಿಲ್ಲ, ಮಹಾನರಾಗಿರುತ್ತಾರೆ. 100 ಬ್ರಾಹ್ಮಣರಿಗಿಂತ ಉತ್ಮಮವಾಗಿರುವವರು ಕುಮಾರಿಯರಾಗಿದ್ದಾರೆ. 100 ಬ್ರಾಹ್ಮಣರು ಒಂದೊಂದು ಕುಮಾರಿಯರನ್ನು ತಯಾರು ಮಾಡುತ್ತಾರೆ. ಅವರ ಸೇವೆಯನ್ನು ಮಾಡಬೇಕಾಗಿದೆ. ಕುಮಾರಿಯರು ಯಾವ ಚಮತ್ಕಾರ ಮಾಡುವ ಯೋಜನೆಯನ್ನು ಯೋಚಿಸಿದ್ದಾರೆ. ಯಾವುದೇ ಆತ್ಮನದಾದರೂ ಕಲ್ಯಾಣವಾಗಿ ಬಿಡಲಿ - ಇದಕ್ಕಿಂತಹ ದೊಡ್ಡ ಮಾತೇನಿದೆ? ತಮ್ಮ ಮೋಜಿನಲ್ಲಿರುವವರಾಗಿದ್ದೀರಿ ಅಲ್ಲವೆ. ಕೆಲವೊಮ್ಮೆ ಜ್ಞಾನದ ಮೋಜಿನಲ್ಲಿ, ಕೆಲವೊಮ್ಮೆ ನೆನಪಿನ ಮೋಜಿನಲ್ಲಿ. ಕೆಲವೊಮ್ಮೆ ಪ್ರೇಮದ ಮೋಜಿನಲ್ಲಿ. ಕೇವಲ ಮೋಜಷ್ಟೇ ಇದೆ. ಸಂಗಮಯುಗವಿರುವುದೇ ಮೋಜಿನ ಯುಗ. ಒಳ್ಳೆಯದು - ಕುಮಾರಿಯರ ಬಗ್ಗೆ ಬಾಪ್ದಾದಾರವರ ದೃಷ್ಟಿಯು ಸದಾಕಾಲವೂ ಇರುತ್ತದೆ. ಕುಮಾರಿಯರು ಸ್ವಯಂನ್ನು ಏನು ಮಾಡಿಕೊಳ್ಳುತ್ತಾರೆ - ಇದು ಅವರ ಮೇಲೆ ಆಧಾರಿತವಾಗಿದೆ ಆದರೆ ಬಾಪ್ದಾದಾರವರಂತು ಎಲ್ಲರನ್ನೂ ವಿಶ್ವದ ಮಾಲೀಕರನ್ನಾಗಿ ಮಾಡುವುದಕ್ಕಾಗಿ ಬಂದಿದ್ದಾರೆ. ಸದಾ ವಿಶ್ವದ ಮಾಲೀಕತ್ವದ ಖುಷಿ ಮತ್ತು ನಶೆಯಿರಲಿ. ಸದಾ ಅವಿಶ್ರಾಂತ ಸೇವೆಯಲ್ಲಿ ಮುಂದುವರೆಯುತ್ತಿರಿ. ಒಳ್ಳೆಯದು.

ವರದಾನ:  
ಮಾಡುವವರು ಮತ್ತು ಮಾಡಿಸುವವರ ಸ್ಮೃತಿಯಿಂದ ಲೈಟ್ನ ಕಿರೀಟಧಾರಿ ಭವ.

ನಾನು ನಿಮಿತ್ತ ಕರ್ಮಯೋಗಿ, ಮಾಡುವವನಾಗಿದ್ದೇನೆ, ಮಾಡಿಸುವವರು ತಂದೆಯಾಗಿದ್ದಾರೆ - ಒಂದುವೇಳೆ ಈ ಸ್ಮೃತಿಯು ಸ್ವತಹವಾಗಿಯೇ ಇರುತ್ತದೆಯೆಂದರೆ ಸದಾ ಲೈಟ್ನ ಕಿರೀಟಧಾರಿ ಹಾಗೂ ನಿಶ್ಚಿಂತ ಚಕ್ರವರ್ತಿಯಾಗಿ ಬಿಡುತ್ತೀರಿ. ತಂದೆ ಮತ್ತು ನಾನು ಅಷ್ಟೇ, ಮೂರನೆಯವರು ಯಾರೂ ಇಲ್ಲ - ಈ ಅನುಭೂತಿಯು ಸಹಜವಾಗಿ ನಿಶ್ಚಿಂತ ಚಕ್ರವರ್ತಿಯನ್ನಾಗಿ ಮಾಡಿ ಬಿಡುತ್ತದೆ. ಯಾರು ಇಂತಹ ಚಕ್ರವರ್ತಿಯಾಗುತ್ತಾರೆ, ಅವರೇ ಮಾಯಾಜೀತರು, ಕರ್ಮೇಂದ್ರಿಯಾಜೀತರು ಹಾಗೂ ಪ್ರಕೃತಿಜೀತರಾಗಿ ಬಿಡುತ್ತಾರೆ. ಆದರೆ ಒಂದುವೇಳೆ ಯಾವುದೇ ತಪ್ಪಿನಿಂದ, ಯಾವುದೇ ವ್ಯರ್ಥ ಭಾವದ ಹೊರೆಯು ತಮ್ಮ ಮೇಲೆ ತೆಗೆದುಕೊಂಡು ಬಿಡುತ್ತೀರೆಂದರೆ, ಕಿರೀಟಕ್ಕೆ ಬದಲು ಚಿಂತೆಯ ಅನೇಕ ಹೊರೆಯು ತಲೆಯ ಮೇಲೆ ಬಂದು ಬಿಡುತ್ತದೆ.

ಸ್ಲೋಗನ್:
ಸರ್ವ ಬಂಧನಗಳಿಂದ ಮುಕ್ತರಾಗುವುದಕ್ಕಾಗಿ ದೈಹಿಕ ಸಂಬಂಧದಿಂದ ನಷ್ಟಮೋಹಿಯಾಗಿರಿ.


ಸೂಚನೆ: ಇಂದು ಅಂತರಾಷ್ಟ್ರೀಯ ಯೋಗ ದಿನ ಮೂರನೇ ರವಿವಾರವಾಗಿದೆ, ಸಂಜೆ 6.30 ರಿಂದ 7.30ಯವರೆಗೆ, ಎಲ್ಲಾ ಸಹೋದರ-ಸಹೋದರಿಯರು ಸಂಘಟಿತ ರೂಪದಲ್ಲಿ ಒಟ್ಟಾಗಿ ಸೇರಿ ಯೋಗಾಭ್ಯಾಸದಲ್ಲಿ ಸರ್ವ ಆತ್ಮರ ಬಗ್ಗೆ ಇದೇ ಶುಭಭಾವನೆಯನ್ನಿಡಿ ಸರ್ವ ಆತ್ಮರ ಕಲ್ಯಾಣವಾಗಲಿ, ಸರ್ವ ಆತ್ಮರು ಸತ್ಯ ಮಾರ್ಗದಲ್ಲಿ ನಡೆಯುತ್ತಾ ಪರಮಾತ್ಮನ ಆಸ್ತಿಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಂಡು ಬಿಡಲಿ. ನಾನು ತಂದೆಯ ಸಮಾನ ಸರ್ವಾತ್ಮರಿಗೆ ಮುಕ್ತಿ-ಜೀವನ್ಮುಕ್ತಿಯ ವರದಾನವನ್ನು ತೆಗೆದುಕೊಳ್ಳುವಂತಹ ಆತ್ಮನಾಗಿದ್ದೇನೆ.

ಸ್ವ-ಪರಿವರ್ತನೆ, ಸ್ವ-ಉನ್ನತಿಗಾಗಿ ಸ್ವಯಂನ್ನು ಪರಿಶೀಲನೆ ಮಾಡಿಕೊಳ್ಳಲು ಅವ್ಯಕ್ತ ವಾಣಿಯಿಂದ ಪ್ರಶ್ನೆಗಳು:

1. ಪ್ರತಿಯೊಬ್ಬ ಮಗುವಿನಲ್ಲಿ ಯಾವ ಮೂರು ವಿಶೇಷತೆಗಳಿವೆ?
2. ಸೇವಾಧಾರಿಯ ಕರ್ತವ್ಯ ಏನಾಗಿದೆ?
3. ಬಾಬಾರವರು ಇವತ್ತಿನ ಮುರಳಿಯನುಸಾರ ಮಕ್ಕಳಿಗೆ ಯಾವ ಟೈಟಲಗಳನ್ನು ಕೊಟ್ಟಿದ್ದಾರೆ?
4. ಕುಮಾರಿಯರ ದಳ ಏನು ಮಾಡುತ್ತದೆ?
5. ಆತ್ಮಗಳ ಕಲ್ಯಾಣ ಮಾಡುವವರು ಎಂತಹ ಮೌಜ್(ಮಸ್ತಿ)ನಲ್ಲಿರುತ್ತಾರೆ?
6. ಸರ್ವ ಬಂಧನಗಳಿಂದ ಮುಕ್ತರಾಗಲು ಏನು ಮಾಡಬೇಕು?
7. ಮಾಡುವರು ಮತ್ತು ಮಾಡಿಸುವವರು ಎನ್ನುವ ಸ್ಮೃತಿಯಲ್ಲಿ ಏನು ಸಿಗುವುದು?
8. ಯಾವ ಸ್ಮೃತಿಯಲ್ಲಿರುವುದರಿಂದ ನಿಶ್ಚಿಂತ ಚಕ್ರವರ್ತಿಯಾಗಲು ಸಾಧ್ಯ?
9. ಪ್ರತಿ ಆತ್ಮಕ್ಕೆ ಏನು ಅನುಭವ ಮಾಡಿಸಬೇಕು?
10. ಯಾರು ಚಕ್ರವರ್ತಿಗಳಾಗುವರು?