15.05.21    Avyakt Bapdada     Kannada Murli    18.01.91     Om Shanti     Madhuban


ವಿಶ್ವ ಕಲ್ಯಾಣಕಾರಿ ಆಗಲು ಸರ್ವ ಸ್ಮೃತಿಗಳಿಂದ ಸಂಪನ್ನ ಆಗಿ ಸರ್ವರಿಗೂ ಸಹಯೋಗ ಕೊಡಿ


ಇಂದು ಸಮರ್ಥ ತಂದೆ ತಮ್ಮ ಸ್ಮೃತಿ ಸ್ವರೂಪ ಮಕ್ಕಳನ್ನು ನೋಡಿ ಹರ್ಷಿತ ಆಗುತ್ತಿರುವರು. ವಿಶ್ವದ ದೇಶ ವಿದೇಶದ ಸರ್ವ ಮಕ್ಕಳು ಸ್ಮೃತಿ ದಿವಸವನ್ನು ಆಚರಿಸುತ್ತಿರುವರು. ಇಂದಿನ ಸ್ಮೃತಿ ದಿವಸ ಮಕ್ಕಳಿಗೆ ತಮ್ಮ ಬ್ರಾಹ್ಮಣ ಜೀವನ ಅರ್ಥಾತ್ ಸಮರ್ಥ ಜೀವನದ ಸ್ಮೃತಿ ತಂದು ಕೊಡುತ್ತಿದೆ. ಏಕೆಂದರೆ ಬ್ರಹ್ಮಾ ತಂದೆಯ ಜೀವನ ಕಥೆಯ ಜೊತೆ ಬ್ರಾಹ್ಮಣ ಮಕ್ಕಳ ಜೀವನ ಕಥೆಯೂ ಇದೆ. ನಿರಾಕಾರ ತಂದೆ ಸಾಕಾರ ಬ್ರಹ್ಮಾ ಜೊತೆಗೆ ಬ್ರಾಹ್ಮಣರನ್ನು ರಚನೆ ಮಾಡಿದರು, ಆಗ ಬ್ರಾಹ್ಮಣರ ಮೂಲಕ ಅವಿನಾಶಿ ಯಜ್ಞದ ರಚನೆ ಆಯಿತು. ಬ್ರಹ್ಮಾ ತಂದೆ ನೀವು ಬ್ರಾಹ್ಮಣ ಮಕ್ಕಳ ಜೊತೆ ಜೊತೆಗೆ ಸ್ಥಾಪನೆಗೆ ನಿಮಿತ್ತ ಆದರು. ಆದ್ದರಿಂದ ಬ್ರಹ್ಮಾ ತಂದೆಯ ಜೊತೆಗೆ ಆದಿ ಬ್ರಾಹ್ಮಣ ಆತ್ಮರ ಜೀವನ ಕಥೆ ಇದೆ. ಆದಿ ದೇವ ಬ್ರಹ್ಮಾ ಮತ್ತು ಆದಿ ಬ್ರಾಹ್ಮಣ ಇಬ್ಬರ ಮಹತ್ವ ಯಜ್ಞ ಸ್ಥಾಪನೆಯಲ್ಲಿ ಇದೆ. ಅನಾದಿ ತಂದೆ ಆದಿ ದೇವ ಬ್ರಹ್ಮಾ ಅವರ ಮೂಲಕ ಆದಿ ಬ್ರಾಹ್ಮಣರ ರಚನೆ ಮಾಡಿದರು. ಮತ್ತು ಆದಿ ಬ್ರಾಹ್ಮಣರು ಅನೇಕ ಬ್ರಾಹ್ಮಣರ ವೃದ್ಧಿ ಮಾಡಿದರು. ಇದೇ ಸ್ಥಾಪನೆಯ, ಬ್ರಹ್ಮಾ ತಂದೆಯ ಕಥೆ ಇಂದಿನ ಸ್ಮೃತಿ ದಿನದಂದು ವರ್ಣನೆ ಮಾಡುತ್ತೀರಿ. ಸ್ಮೃತಿ ದಿವಸ ಎಂದು ಹೇಳುತ್ತೀರಿ ಅಂದಮೇಲೆ ಕೇವಲ ಬ್ರಹ್ಮಾ ತಂದೆಯನ್ನು ನೆನಪು ಮಾಡಿದಿರಿ ಅಥವಾ ಬ್ರಹ್ಮಾ ತಂದೆಯ ಮೂಲಕ ಯಾವ ಸ್ಮೃತಿಯನ್ನು ತಂದೆ ತರಿಸಿಕೊಟ್ಟಿದ್ದಾರೆ ಆ ಎಲ್ಲ ಸ್ಮೃತಿಗಳು ಸ್ಮೃತಿಯಲ್ಲಿ ಬಂದಿದೆ. ಆದಿಯಿಂದ ಇಲ್ಲಿಯವರೆಗೆ ಏನೇನು ಸ್ಮೃತಿಗಳನ್ನು ತಂದು ಕೊಟ್ಟಿರುವರು ನೆನಪಿದೆಯೇ? ಅಮೃತ ವೇಳೆಯಿಂದ ರಾತ್ರಿಯವರೆಗೂ ಸರ್ವ ಸ್ಮೃತಿಗಳನ್ನು ಎದುರಿಗೆ ತಂದು ಕೊಳ್ಳಿ. ಒಂದು ದಿನದಲ್ಲಿ ಪೂರ್ಣ ಆಗುತ್ತದೆಯೇ! ದೊಡ್ಡ ಪಟ್ಟಿ ಇದೆ ಅಲ್ಲವೇ! ಸ್ಮೃತಿ ಸಪ್ತಾಹ ಆಚರಿಸಿದರೂ ವಿಸ್ತಾರ ತುಂಬಾ ಇದೆ, ಏಕೆಂದರೆ ಕೇವಲ ರಿವ್ಶೆಜ್ ಮಾಡುವುದಲ್ಲ ಆದರೆ ಅನುಭೂತಿ ಮಾಡುತ್ತೀರಿ. ಆದ್ದರಿಂದ ಸ್ಮೃತಿ ಸ್ವರೂಪ ಎಂದು ಹೇಳುತ್ತೀರಿ. ಸ್ವರೂಪ ಅರ್ಥಾತ್ ಸರ್ವ ಸ್ಮೃತಿಯ ಅನುಭೂತಿ. ನೀವು ಸ್ಮೃತಿ ಸ್ವರೂಪ ಆಗುತ್ತೀರಿ ಮತ್ತು ಭಕ್ತರು ಕೇವಲ ಸ್ಮರಣೆ ಮಾಡುತ್ತಾರೆ. ಹಾಗಾದರೆ ಯಾವ ಯಾವ ಸ್ಮೃತಿಗಳನ್ನು ಅನುಭವ ಮಾಡಿರುವಿರಿ ಅದರ ವಿಸ್ತಾರ ಅಂತೂ ಬಹಳ ದೊಡ್ಡದಾಗಿದೆ. ತಂದೆಯ ಪರಿಚಯ ದೊಡ್ಡದಿದೆ ಆದರೆ ನೀವು ಸಾರ ರೂಪದಲ್ಲಿ ಐದು ಮಾತಿನಲ್ಲಿ ಪರಿಚಯ ಕೊಡುತ್ತೀರಿ. ಅದೇ ರೀತಿ ಸ್ಮೃತಿಯ ವಿಸ್ತಾರವನ್ನು ಐದು ಮಾತಿನಲ್ಲಿ ಸಾರ ರೂಪದಲ್ಲಿ ತನ್ನಿರಿ ಏನೆಂದರೆ ಆದಿಯಿಂದ ಇಲ್ಲಿಯವರೆಗೆ ಬಾಪದಾದಾ ಅವರು ಎಷ್ಟು ಹೆಸರನ್ನು ಸ್ಮೃತಿಗೆ ತಂದು ಕೊಟ್ಟಿದ್ದಾರೆ! ಎಷ್ಟು ಹೆಸರು ಇರಬಹುದು! ವಿಸ್ತಾರ ಇದೆ ಅಲ್ಲವೇ. ಒಂದೊಂದು ಹೆಸರನ್ನು ಸ್ಮೃತಿಗೆ ತಂದುಕೊಳ್ಳಿ. ಮತ್ತು ಸ್ವರೂಪ ಆಗಿ ಅನುಭವ ಮಾಡಿರಿ. ಕೇವಲ ರಿಪೀಟ ಮಾಡುವುದಲ್ಲ. ಸ್ಮೃತಿ ಸ್ವರೂಪ ಆಗುವ ಆನಂದ ಅತೀ ನ್ಯಾರಾ ಮತ್ತು ಪ್ಯಾರಾ ಅಗಿದೆ. ಯಾವ ರೀತಿ ತಂದೆ ನಿಮಗೆ ನೂರೆ(ಪ್ರಕಾಶ) ರತ್ನ ಎನ್ನುವ ಸ್ಮೃತಿ ತಂದು ಕೊಡುತ್ತಾರೆ. ತಂದೆಯ ಕಣ್ಣಿನ ಬೆಳಕು. ಬೆಳಕಿನ ವಿಶೇಷತೆ ಏನಾಗಿದೆ? ಬೆಳಕಿನ ಕರ್ತವ್ಯ ಏನಾಗಿರುತ್ತದೆ? ಬೆಳಕಿನ ಶಕ್ತಿ ಎಂತಹದಾಗಿರುತ್ತದೆ? ಇಂತಹ ಅನುಭೂತಿಗಳನ್ನು ಮಾಡಿರಿ ಅರ್ಥಾತ್ ಸ್ಮೃತಿ ಸ್ವರೂಪ ಆಗಿರಿ. ಇದೇ ರೀತಿ ಪ್ರತಿಯೊಂದು ಹೆಸರಿನ ಸ್ಮೃತಿ ಅನುಭವ ಮಾಡುತ್ತಿರಿ. ಇದು ಒಂದು ದೃಷ್ಟಾಂತ ರೂಪದಲ್ಲಿ ಹೇಳಿದೆವು. ಇಂತಹ ಶ್ರೇಷ್ಠ ಸ್ವರೂಪದ ಸ್ಮೃತಿಗಳು ಏಷ್ಟು ಇವೆ? ನೀವು ಬ್ರಾಹ್ಮಣರ ಎಷ್ಟು ರೂಪಗಳಿವೆ. ತಂದೆಯ ರೂಪ ಬ್ರಾಹ್ಮಣರ ರೂಪ ಆಗಿದೆ. ಆ ಎಲ್ಲ ರೂಪಗಳ ಸ್ಮೃತಿಯ ಅನುಭವ ಮಾಡಿರಿ. ನಾಮ, ಗುಣ, ರೂಪ ಅನಾದಿ ಆದಿ ಮತ್ತು ಈಗಿನ ಬ್ರಾಹ್ಮಣ ಜೀವನದ ಸರ್ವ ಗುಣಗಳ ಸ್ಮೃತಿ ಸ್ವರೂಪ ಆಗಿರಿ.

ಅದೇ ರೀತಿ ಕರ್ತವ್ಯ. ಎಷ್ಟು ಶ್ರೇಷ್ಠ ಕರ್ತವ್ಯದ ನಿಮಿತ್ತ ಆಗಿರುವಿರಿ! ಆ ಕರ್ತವ್ಯದ ಸ್ಮೃತಿ ಇಮರ್ಜ್ ಮಾಡಿಕೊಳ್ಳಿರಿ. ಐದನೇ ಮಾತು ಬಾಪದಾದಾರವರು ಅನಾದಿ-ಆದಿ ದೇಶದ ಸ್ಮೃತಿ ತಂದು ಕೊಟ್ಟರು. ದೇಶದ ಸ್ಮೃತಿಯಿಂದ ವಾಪಸ ಮನೆಗೆ ಹೋಗುವ ಸಾಮಥ್ರ್ಯ ಬಂದಿತು. ನಿಮ್ಮ ರಾಜ್ಯದಲ್ಲಿ ರಾಜ್ಯ ಅಧಿಕಾರಿ ಆಗುವ ಧೈರ್ಯ ಬಂದಿತು ಮತ್ತು ವರ್ತಮಾನ ಬ್ರಾಹ್ಮಣ ಜಗತ್ತಿನಲ್ಲಿ ಖುಷಿಯ ಜೀವನ ನಡೆಸುವ ಕಲೆ ಸ್ಮೃತಿಗೆ ಬಂದಿತು. ಜೀವನ ನಡೆಸುವ ಕಲೆ ಚೆನ್ನಾಗಿ ಬಂದಿದೆ ಅಲ್ಲವೇ? ಜಗತ್ತು ಸಾಯುವ ಕಲೆಯಲ್ಲಿ ತೀವ್ರವಾಗಿ ಹೋಗುತ್ತಿದೆ ಮತ್ತು ನೀವು ಬ್ರಾಹ್ಮಣರು ಸುಖಮಯ ಖುಷಿಯ ಜೀವನದ ಕಲೆಯಲ್ಲಿ ಹಾರುತ್ತಿರುವಿರಿ. ಎಷ್ಟು ಅಂತರ ಇದೆ!

ಆದ್ದರಿಂದ ಸ್ಮೃತಿ ದಿನ ಅರ್ಥಾತ್ ಸರ್ವ ಆತ್ಮಿಕ ನಶೆಯ ಅನುಭವ ಮಾಡುವುದು. ಈ ಸ್ಮೃತಿ ದಿನದಂದು ಜಗತ್ತಿನವರ ತರಹ ನೀವು ನಮ್ಮ ಬ್ರಹ್ಮಾ ಬಾಬಾ ಹೀಗಿದ್ದರು ಎಂದು ಹೇಳುವುದಿಲ್ಲ. ಅವರು ಹೀಗೆ ಮಾಡಿದರು, ಹೀಗೆ ಹೇಳಿದರು, ಜಗತ್ತಿನವರು ಇದ್ದರು.... ಇದ್ದರು.... ಎಂದು ಹೇಳುತ್ತಾರೆ ಮತ್ತು ದುಃಖದ ಅಲೆಯನ್ನು ಹರಡಿಸುತ್ತಾರೆ ಆದರೆ ನೀವು ಬ್ರಾಹ್ಮಣರ ವಿಶೇಷತೆ ಆಗಿದೆ - ನೀವು ಹೇಳುತ್ತೀರಿ ಈಗಲೂ ನಮ್ಮ ಜೊತೆಯಲ್ಲಿ ಇದ್ದಾರೆ. ಜೊತೆಯ ಅನುಭವ ಮಾಡುತ್ತೀರಿ. ಇಂತಹ ವಿಶೇಷತೆ ನಿಮ್ಮಲ್ಲಿ ಇದೆ. ಬ್ರಹ್ಮಾ ತಂದೆ ಹೋದರು ಎಂದು ನೀವು ಹೇಳುವುದಿಲ್ಲ. ವಾಯಿದೆ ಮಾಡಿದ್ದಾರೆ - ಜೊತೆಯಲ್ಲಿ ಇರುತ್ತೇವೆ, ಜೊತೆಯಲ್ಲಿ ಹೋಗುತ್ತೇವೆ. ಆದಿ ಆತ್ಮ ಆದವರೇ ವಾಯಿದೇ ನಿಭಾಯಿಸದಿದ್ದರೆ ಇನ್ನು ಯಾರು ವಾಯಿದೆ ನಿಭಾಯಿಸುವರು? ಕೇವಲ ರೂಪ ಮತ್ತು ಸೇವೆಯ ವಿಧಿ ಪರಿವರ್ತನೆ ಆಗಿದೆ. ನಿಮ್ಮೆಲ್ಲರ ಲಕ್ಷ್ಯ ಆಗಿದೆ ಫರಿಶ್ತಾ ಸೋ ದೇವತೆ. ಫರಿಶ್ತಾ ರೂಪದ ಮಾದರಿ ಬ್ರಹ್ಮಾ ತಂದೆ ಆಗಿದ್ದಾರೆ. ಸರ್ವ ಮಕ್ಕಳ ಪಾಲನೆ ಈಗಲೂ ಬ್ರಹ್ಮಾ ತಂದೆಯ ಮೂಲಕವೇ ಆಗುತ್ತಿದೆ. ಆದ್ದರಿಂದ ಬ್ರಹ್ಮಾ ಕುಮಾರ ಕುಮಾರಿ ಎಂದು ಹೇಳುತ್ತೀರಿ. ತಿಳಿಯಿತೇ? ಸ್ಮೃತಿ ದಿವಸದ ಮಹತ್ವ ಏನೆಂದು? ಈ ಸ್ಮೃತಿಗಳಲ್ಲಿ ಸದಾ ಲವ್ಲೀನ ಆಗಿರಿ. ಇದಕ್ಕೆ ಹೇಳಲಾಗುತ್ತದೆ - ತಂದೆ ಸಮಾನ ಆಗುವ ಅನುಭೂತಿ. ನೀವು ಆತ್ಮಗಳು ತಂದೆ ಸಮಾನ ಆಗುವ ಅನುಭವ ಮಾಡಿದಿರಿ, ಈ ಸಮಾನ ಶಬ್ದವನ್ನು ಜನರು ಸಾಮಾವೇಶಗೊಳ್ಳುವುದು ಎಂದು ಹೇಳಿದರು. ಆತ್ಮ ಪರಮಾತ್ಮನಲ್ಲಿ ಸಮ್ಮಾವೇಶ ಆಗುವುದಿಲ್ಲ ಆದರೆ ಸಮಾನ ಆಗುತ್ತದೆ. ಎಲ್ಲ ಮಕ್ಕಳು ತಮ್ಮ ತಮ್ಮ ಹೆಸರಿನಿಂದ ಸ್ಮೃತಿ ದಿವಸದ ನೆನಪು ಕಳಿಸಿರುವರು. ಕೆಲವರು ಸಂದೇಶಿಗಳಾಗಿ ನೆನಪು ಪ್ರೀತಿಯನ್ನು ಹೇಳಿದರು ಮತ್ತು ಪ್ರತಿಯೊಬ್ಬರು ನನ್ನ ವಿಶೇಷ ನೆನಪು ಕೊಡಿ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿ ಪತ್ರ ಬರೆಯುವುದರ ಬದಲಾಗಿ ಪತ್ರ ಹೃದಯದಿಂದ ಬರೆಯುತ್ತಿದ್ದೇವೆ. ಪ್ರತಿಯೊಬ್ಬರ ಹೃದಯದ ನೆನಪು ಪ್ರೀತಿ ಬಾಪದಾದಾ ಅವರ ನಯನಗಳಲ್ಲಿ, ಹೃದಯದಲ್ಲಿ ಸಮಾವೇಶ ಆಗಿದೆ ಮತ್ತು ಈಗ ವಿಶೇಷ ಸಮಾವೇಶ ಆಗಿದೆ. ವಿಶೇಷ ನೆನಪು ಮಾಡುವವರನ್ನು ಬಾಪದಾದಾ ಈಗಲೂ ವಿಶೇಷವಾಗಿ ಇಮರ್ಜ ಮಾಡಿಕೊಂಡು ನೆನಪು ಪ್ರೀತಿಯನ್ನು ಕೊಡುತ್ತಿರುವರು. ಪ್ರತಿಯೊಬ್ಬರ ಹೃದಯದ ಉಮಂಗ ಮತ್ತು ಹೃದಯದ ವಾರ್ತಾಲಾಪ, ಹೃದಯದ ಸ್ಥಿತಿಗತಿ, ಹೃದಯರಾಮನ ಬಳಿ ತಲುಪಿದೆ. ಬಾಪದಾದಾ ಸರ್ವ ಮಕ್ಕಳಿಗೆ ಇದೇ ಸ್ಮೃತಿಯನ್ನು ತಂದು ಕೊಡುತ್ತಿರುವರು ಏನೆಂದರೆ ನೀವು ಸದಾ ಹೃದಯದ ಜೊತೆ ಇರುವಿರಿ, ಸೇವೆಯಲ್ಲಿ ಜೊತೆ ಇರುವಿರಿ ಮತ್ತು ಸ್ಥಿತಿಯಲ್ಲಿ ಸದಾ ಸಾಕ್ಷಿ ಇರುವಿರಿ. ಆದ್ದರಿಂದ ಸದಾ ಮಾಯಾಜೀತದ ಬಾವುಟ ಹಾರುತ್ತಿರುತ್ತದೆ.

ಯಾವುದೂ ಹೊಸದಲ್ಲ ಎನ್ನುವ ಪಾಠ ಎಲ್ಲ ಮಕ್ಕಳಿಗೂ ಪ್ರತಿ ಪರಿಸ್ಥಿತಿಯಲ್ಲಿ ಸದಾ ಸ್ಮೃತಿಯಲ್ಲಿರಬೇಕು. ಬ್ರಾಹ್ಮಣ ಜೀವನ ಅರ್ಥಾತ್ ಪ್ರಶ್ನಾರ್ಥಕ ಚಿನ್ಹೆ ಮತ್ತು ಆಶ್ಚರ್ಯದ ಚಿನ್ಹೆ ಇರಲು ಸಾಧ್ಯ ಇಲ್ಲ. ಎಷ್ಟು ಬಾರಿ ಈ ಸಮಾಚಾರ ಕೇಳಿರಬಹುದು. (ಯಾವುದೋ ದೇಶದಲ್ಲಿ ಯುದ್ಧ ನಡೆದಿದೆ) ಇದು ಹೊಸ ಸಮಾಚಾರ ಏನು? ಬ್ರಾಹ್ಮಣ ಜೀವನ ಅರ್ಥಾತ್ ಪ್ರತಿ ಸಮಾಚಾರ ಕೇಳುತ್ತಾ ಕಲ್ಪದ ಹಿಂದಿನ ಸ್ಮೃತಿಯಿಂದ ಸಮರ್ಥ ಆಗಿರಬೇಕು ಏನು ನಡೆಯಬೇಕಾಗಿತ್ತು ಅದು ನಡೆಯುತ್ತಿದೆ, ಆದ್ದರಿಂದ ಏನಾಗುವುದು? ಈ ಪ್ರಶ್ನೆ ಬರಲು ಸಾಧ್ಯ ಇಲ್ಲ. ತ್ರಿಕಾಲದರ್ಶಿ ಆಗಿರುವಿರಿ, ಡ್ರಾಮಾದ ಆದಿ ಮಧ್ಯ ಅಂತ್ಯ ತಿಳಿದವರಾಗಿರುವಿರಿ ಅಂದ ಮೇಲೆ ವರ್ತಮಾನವನ್ನು ತಿಳಿದಿಲ್ಲವೇ? ಭಯಪಡುವುದಿಲ್ಲ ತಾನೆ! ಬ್ರಾಹ್ಮಣ ಜೀವನದಲ್ಲಿ ಪ್ರತಿ ಹೆಜ್ಜೆಯಲ್ಲಿ ಕಲ್ಯಾಣ ಇದೆ. ಭಯಪಡುವ ಮಾತಿಲ್ಲ. ನಿಮ್ಮೆಲ್ಲರ ಕರ್ತವ್ಯ ಆಗಿದೆ ನಿಮ್ಮ ಶಾಂತಿಯ ಶಕ್ತಿಯಿಂದ ಅಶಾಂತ ಆತ್ಮರಿಗೆ ಶಾಂತಿಯ ಕಿರಣಗಳನ್ನು ಕೊಡುವುದು. ನಿಮ್ಮವರೇ ಆಗಿರುವ ಸಹೋದರ ಸಹೋದರಿ ಆಗಿರುವರು, ಆದ್ದರಿಂದ ನಿಮ್ಮ ಈಶ್ವರೀಯ ಪರಿವಾರದ ಸಂಬಂಧದಿಂದ ಸಹಯೋಗಿ ಆಗಿರಿ. ಯುದ್ಧ ಎಷ್ಟು ತೀವ್ರ ಗತಿಯದಾಗಿರುತ್ತದೆ ಅಷ್ಟು ನೀವು ಯೋಗಿ ಆತ್ಮರ ಯೋಗ ಅವರಿಗೆ ಶಾಂತಿಯ ಸಹಯೋಗ ಕೊಡುತ್ತದೆ. ಆದ್ದರಿಂದ ಇನ್ನೂ ಹೆಚ್ಚು ಸಮಯ ತೆಗೆದು ಶಾಂತಿಯ ಸಹಯೋಗ ಕೊಡಿ ಇದಾಗಿದೆ ಬ್ರಾಹ್ಮಣ ಆತ್ಮರಾದ ನಿಮ್ಮ ಕರ್ತವ್ಯ.

ಸರ್ವ ಸ್ಮೃತಿ ಸ್ವರೂಪ ಶ್ರೇಷ್ಠ ಆತ್ಮರಿಗೆ, ಸದಾ ತಂದೆ ಸಮಾನ ಲಕ್ಷ್ಯ ಮತ್ತು ಲಕ್ಷಣ ಧಾರಣೆ ಮಾಡುವಂತಹ ಆತ್ಮರಿಗೆ, ಸದಾ ಸ್ವಯಂನ್ನು ತಂದೆಯ ಜೊತೆ ಅನುಭವ ಮಾಡುವಂತಹ ಸಮೀಪ ಆತ್ಮರಿಗೆ, ಸದಾ ಯಾವುದೂ ಹೊಸತಲ್ಲ ಎನ್ನುವ ಪಾಠವನ್ನು ಸಹಜ ಸ್ವರೂಪದಲ್ಲಿ ತರುವಂತಹ, ಸದಾ ವಿಶ್ವ ಕಲ್ಯಾಣಕಾರಿ ಆಗಿ ವಿಶ್ವದ ಆತ್ಮಗಳಿಗೆ ಸಹಯೋಗ ಕೊಡುವಂತಹ - ಇಂತಹ ಸದಾ ವಿಜಯಿ ರತ್ನ ಆದವರಿಗೆ ಬಾಪ್ದಾದಾರವರ ನೆನಪು ಪ್ರೀತಿ ಮತ್ತು ನಮಸ್ತೆ.

ಪಾರ್ಟಿಗಳ ಜೊತೆ:

ದಾದಿಯವರ ಜೊತೆ: ಆದಿ ಬ್ರಾಹ್ಮಣರ ಮಾಲೆ ಬ್ರಹ್ಮಾ ತಂದೆಯ ಜೊತೆ ಆದಿ ಆತ್ಮರು ನಿಮಿತ್ತ ಆಗಿರುವಿರಿ. ಆದಿ ಬ್ರಾಹ್ಮಣರ ಮಹತ್ವ ಬಹಳ ಇದೆ. ಸ್ಥಾಪನೆ, ಪಾಲನೆ ಮತ್ತು ಪರಿವರ್ತನೆ. ವಿನಾಶ ಶಬ್ದ ಸ್ವಲ್ಪ ಔಪಚಾರಿಕ ಆಗುತ್ತದೆ ಆದ್ದರಿಂದ ಸ್ಥಾಪನೆ, ಪಾಲನೆ ಮತ್ತು ವಿಶ್ವ ಪರಿವರ್ತನೆ ಮಾಡುವುದರಲ್ಲಿ ಆದಿ ಬ್ರಾಹ್ಮಣರ ವಿಶೇಷ ಕರ್ತವ್ಯ ಆಗಿದೆ. ಶಕ್ತಿಯರ ಪೂಜೆ ಬಹಳ ವೈಭವದಿಂದ ನಡೆಯುತ್ತದೆ. ನಿರಾಕಾರ ತಂದೆ ಮತ್ತು ಬ್ರಹ್ಮಾ ತಂದೆಯ ಪೂಜೆ ಇಷ್ಟು ವೈಭವದಿಂದ ನಡೆಯುವುದಿಲ್ಲ. ಬ್ರಹ್ಮನ ಮಂದಿರವೂ ಸಹ ಬಹಳ ಗುಪ್ತ ಆಗಿದೆ. ಆದರೆ ಶಕ್ತಿ ಸೇನೆ ಭಕ್ತಿಯಲ್ಲಿಯೂ ಸಹ ಬಹಳ ಪ್ರಸಿದ್ಧ ಇದೆ. ಆದ್ದರಿಂದ ಅಂತ್ಯದವರೆಗೆ ಸ್ಟೇಜಿನ ಮೇಲೆ ವಿಶೇಷ ಮಕ್ಕಳ ಪಾತ್ರ ಇದೆ. ಬ್ರಹ್ಮಾ ಅವರದೂ ಗುಪ್ತ ಪಾತ್ರ ಇದೆ ಅವ್ಯಕ್ತ ರೂಪ ಅರ್ಥಾತ್ ಗುಪ್ತ. ಬ್ರಾಹ್ಮಣರನ್ನು ತಯಾರ ಮಾಡಿದರು ಮತ್ತು ಬ್ರಹ್ಮಾ ಅವರ ಪಾತ್ರ ಗುಪ್ತ ಆಗಿ ಬಿಟ್ಟಿತು. ಸರಸ್ವತಿಯನ್ನೂ ಸಹ ಗುಪ್ತ ತೋರಿಸುತ್ತಾರೆ ಏಕೆಂದರೆ ಅವರದು ನಾಟಕದಲ್ಲಿ ಗುಪ್ತ ಪಾತ್ರ ನಡೆಯುತ್ತಿದೆ. ಆದಿ ಬ್ರಾಹ್ಮಣ ಆತ್ಮರು ಪರಸ್ಪರ ಸಮೀಪ ಇರುವರು ಮತ್ತು ಶಕ್ತಿಶಾಲಿ ಆಗಿರುವರು. ಶರೀರವೂ ದುರ್ಬಲ ಇಲ್ಲ ಶಕ್ತಿಶಾಲಿ ಆಗಿದೆ. (ದಾದಿ ಜಾನಕಿಯವರಿಗೆ) ಇದಂತೂ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುವ ಸಾಧನ ಆಯಿತು. ಇನ್ನೇನೂ ಇಲ್ಲ. ನೀವು ವಿಶ್ರಾಂತಿಯನ್ನೇ ತೆಗೆದುಕೊಳ್ಳುವುದಿಲ್ಲ. ವಿಶ್ರಾಂತಿ ಪಡೆಯಲು ಏನಾದರು ಕಾರಣ ಆಗುತ್ತದೆ. ಎಲ್ಲ್ಲಾ ದಾದಿಯರಲ್ಲಿ ಪ್ರೇಮ ಇದೆ ಅಲ್ಲವೇ! ತಂದೆಯ ಜೊತೆ ಜೊತೆಗೆ ನಿಮಿತ್ತ ಆಗಿರುವ ಆದಿ ಬ್ರಾಹ್ಮಣರೊಂದಿಗೆ ಸಹ ಪ್ರೀತಿ ಇದೆ. ಆದ್ದರಿಂದ ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದಗಳು, ಶುಭ ಭಾವನೆ ಬ್ರಾಹ್ಮಣ ಆತ್ಮರನ್ನು ಆರೋಗ್ಯವಂತರನ್ನಾಗಿ ಇಡುತ್ತದೆ. ಚೆನ್ನಾಗಿದೆ - ಶಾಂತಿಯ ಸೇವೆಯ ಪಾತ್ರ ಚೆನ್ನಾಗಿರುವುದು ಸಿಕ್ಕಿದೆ. ಎಷ್ಟು ಆತ್ಮರು ಅಶಾಂತಿಯಲ್ಲಿದ್ದಾರೆ, ಎಷ್ಟು ಪ್ರಾರ್ಥನೆ ಮಾಡುತ್ತಿರುವರು.! ಅವರಿಗೆ ಎನಾದರೂ ಅಂಜಲಿ ಕೊಡುವಿರಿ ಅಲ್ಲವೇ? ದೇವಿಯರ ಬಳಿ ಹೋಗಿ ಶಕ್ತಿಯನ್ನು ಬೇಡುತ್ತಾರೆ ಅಲ್ಲವೇ! ಅಂದ ಮೇಲೆ ಶಕ್ತಿ ಕೊಡುವುದು ವಿಶೇಷ ಆತ್ಮಗಳಾದ ನಿಮ್ಮ ಕರ್ತವ್ಯ ಆಗಿದೆ ಅಲ್ಲವೇ? ದಿನ ಪ್ರತಿ ದಿನ ಎಲ್ಲಿಂದಲೋ ಶಾಂತಿಯ ಕಿರಣಗಳು ಬರುತ್ತಿವೆ ಎಂದು ಅನುಭವ ಮಾಡುತ್ತಾರೆ. ನಂತರ ಹುಡುಕುತ್ತಾರೆ, ಎಲ್ಲರ ದೃಷ್ಟಿ ಭಾರತದ ಭೂಮಿಯ ಕಡೆ ತಿರುಗುತ್ತದೆ. ಒಳ್ಳೆಯದು.

ಗ್ರೂಪ ನಂ. 1: ನಿಶ್ಚಯ ಬುದ್ಧಿ ವಿಜಯಿ ಆತ್ಮರಾಗಿರುವಿರಿ ಇಂತಹ ಅನುಭವ ಮಾಡುತ್ತೀರಿ ಅಲ್ಲವೇ? ಸದಾ ನಿಶ್ಚಯ ಅಟಲ ಆಗಿರುತ್ತದೆಯೇ? ಅಥವಾ ಎಂದಾದರೂ ಏರು ಪೇರು ಆಗುತ್ತದೆಯೇ? ನಿಶ್ಚಯ ಬುದ್ಧಿಯ ಚಿನ್ಹೆ ಆಗಿದೆ ಅವರು ಎಲ್ಲ ಕಾರ್ಯದಲ್ಲಿ, ವ್ಯವಹಾರಿಕವೇ ಇರಲಿ, ಪಾರಮಾರ್ಥವೇ ಇರಲಿ, ಆದರೆ ಎಲ್ಲ ಕಾರ್ಯದಲ್ಲಿ ವಿಜಯದ ಅನುಭವ ಮಾಡುತ್ತಾರೆ. ಎಂತಹದೇ ಸಾಧಾರಣ ಕರ್ಮವೇ ಇರಲಿ, ಆದರೆ ವಿಜಯದ ಅಧಿಕಾರ ಅವರಿಗೆ ಅವಶ್ಯವಾಗಿ ಪ್ರಾಪ್ತಿ ಆಗುತ್ತದೆ, ಏಕೆಂದರೆ ಬ್ರಾಹ್ಮಣ ಜೀವನದ ವಿಶೇಷ ಜನ್ಮ ಸಿದ್ಧ ಅಧಿಕಾರ ವಿಜಯ ಆಗಿದೆ. ಯಾವುದೇ ಕಾರ್ಯದಲ್ಲಿ ಸ್ವಯಂನಿಂದ ಹೃದಯವಿಧೀರ್ಣ ಆಗಬೇಡಿ, ಏಕೆಂದರೆ ಅವರಿಗೆ ನಿಶ್ಚಯ ಇದೆ ವಿಜಯ ಜನ್ಮ ಸಿದ್ಧ ಅಧಿಕಾರ ಆಗಿದೆ. ಹಾಗಾದರೆ ಇಷ್ಟು ಅಧಿಕಾರದ ನಶೆ ಇರುತ್ತದೆಯೇ. ಯಾರಿಗೆ ಭಗವಂತ ಸಹಾಯಕ ಆಗಿದ್ದಾರೆ ಅವರ ವಿಜಯ ಆಗದಿದ್ದರೆ ಇನ್ನು ಯಾರದು ಆಗುತ್ತದೆ! ಕಲ್ಪದ ಹಿಂದಿನ ನೆನಪಾರ್ಥವೂ ಸಹ ತೋರಿಸುತ್ತಾರೆ ಎಲ್ಲಿ ಭಗವಂತ ಇರುವರು ಅಲ್ಲಿ ವಿಜಯ ಇದೆ. ಪಾಂಡವರು ಐವರೇ ಇದ್ದರೂ, ವಿಜಯ ಏಕೆ ಆಯಿತು? ಭಗವಂತ ಜೊತೆಯಲ್ಲಿರುವರು, ಅಂದ ಮೇಲೆ ಕಲ್ಪದ ಹಿಂದಿನ ನೆನಪಾರ್ಥದಲ್ಲಿ ವಿಜಯಿ ಆಗಿದ್ದಿರಿ, ಈಗಲೂ ಆಗುವಿರಿ ಅಲ್ಲವೇ? ಎಂದೂ ಯಾವ ಕಾರ್ಯದಲ್ಲಿ ಸಂಕಲ್ಪ ಬರಬಾರದು ಇದು ಆಗುವುದೊ, ಇಲ್ಲವೊ, ವಿಜಯ ಆಗುವುದೊ ಅಥವಾ ಇಲ್ಲವೊ.. ... ಈ ಪ್ರಶ್ನೆ ಏಳುವುದಿಲ್ಲ. ತಂದೆಯ ಜೊತೆ ಇರುವವರ ಸೋಲು ಎಂದೂ ಆಗುವುದಿಲ್ಲ. ಇದು ನಿಶ್ಚಿತವಾಗಿಯೂ ಕಲ್ಪ ಕಲ್ಪದಲ್ಲಿ ನಿಗದಿ ಆಗಿದೆ. ಆದ್ದರಿಂದ ಸದಾ ವಿಜಯದ ಖುಷಿಯಲ್ಲಿ ಹಾಡುತ್ತಾ ನೃತ್ಯ ಮಾಡುತ್ತಾ ಇರಿ.

2) ಸದಾ ನಿಮ್ಮನ್ನು ನೀವು ಭಾಗ್ಯವಿಧಾತಾ ತಂದೆಯ ಭಾಗ್ಯಶಾಲಿ ಮಕ್ಕಳು ಈ ರೀತಿ ಅನುಭವ ಮಾಡುತ್ತೀರಾ? ಪದಮಾಪದಮ ಭಾಗ್ಯಶಾಲಿ ಆಗಿರುವಿರೊ ಅಥವಾ ಸೌಭಾಗ್ಯಶಾಲಿ ಆಗಿರುವಿರೊ? ಇಷ್ಟು ಶ್ರೇಷ್ಠ ಭಾಗ್ಯ ಇರುವವರು ಸದಾ ಹರ್ಷಿತ ಆಗಿರುವರು ಏಕೆಂದರೆ ಭಾಗ್ಯಶಾಲಿ ಆತ್ಮರಿಗೆ ಅಪ್ರಾಪ್ತಿ ಯಾವುದೂ ಇರುವುದೇ ಇಲ್ಲ. ಆದ್ದರಿಂದ ಎಲ್ಲಿ ಸರ್ವ ಪ್ರಾಪ್ತಿಗಳಿವೆ ಅಲ್ಲಿ ಸದಾ ಸಂತೋಷ ಇದ್ದೆ ಇರುತ್ತದೆ. ಅಲ್ಪ ಕಾಲದ ಲಾಟರಿ ಸಿಕ್ಕವರ ಚಹರೆಯೂ ಸಹ ಅವರಿಗೆ ಏನೋ ಸಿಕ್ಕಿದೆ ಎನ್ನುವುದನ್ನು ಹೇಳುತ್ತದೆ. ಹಾಗಾದರೆ ಯಾರಿಗೆ ಪದ್ಮಾ ಪದ್ಮ ಪ್ರಾಪ್ತಿ ಆಗಿರುತ್ತದೊ ಅವರು ಹೇಗೆ ಇರುತ್ತಾರೆ? ಸದಾ ಹರ್ಷಿತ. ನೋಡಿದವರು ಏನು ಸಿಕ್ಕಿದೆ ಎಂದು ಕೇಳಬೇಕು ಅಷ್ಟು ಹರ್ಷಿತವಾಗಿರಿ. ಎಷ್ಟು ಪುರುಷಾರ್ಥದಲ್ಲಿ ಮುಂದುವರೆಯುತ್ತಾ ಹೋಗುತ್ತೀರಿ ಅಷ್ಟು ನೀವು ಮಾತನಾಡುವ ಅವಶ್ಯಕತೆ ಸಹ ಇರುವುದಿಲ್ಲ. ನಿಮ್ಮ ಚಹರೆ ನಿಮಗೆ ಏನು ಸಿಕ್ಕಿದೆ ಎನ್ನುವುದನ್ನು ಹೇಳುತ್ತದೆ, ಏಕೆಂದರೆ ಚಹರೆ ದರ್ಪಣ ಆಗಿರುತ್ತದೆ. ದರ್ಪಣದಲ್ಲಿ ವಸ್ತು ಯಾವ ರೀತಿ ಇರುತ್ತದೆಯೊ ಅದೇ ರೀತಿ ಕಾಣಿಸುತ್ತದೆ. ಹಾಗಾದರೆ ನಿಮ್ಮ ಚಹರೆ ದರ್ಪಣದ ಕೆಲಸ ಮಾಡಬೇಕು. ಇಷ್ಟೊಂದು ಆತ್ಮರಿದ್ದಾರೆ ಅವರಿಗೆ ಕುಳಿತು ಹೇಳಲು ಎಲ್ಲಿ ಸಮಯ ಇದೆ. ಸಮಯವೂ ಸಹ ನಾಜೂಕ ಆಗುತ್ತಾ ಹೋಗುತ್ತದೆ. ಅಂದ ಮೇಲೆ ಸೇವೆ ಹೇಗೆ ಆಗಬೇಕು? ನಿಮ್ಮ ಚಹರೆಯಿಂದ. ಯಾವ ರೀತಿ ಮ್ಯೂಜಿಯಮ್ನಲ್ಲಿ ಚಿತ್ರಗಳ ಮೂಲಕ ಸೇವೆ ಮಾಡುತ್ತೀರಿ. ಚಿತ್ರ ನೋಡಿ ಪ್ರಭಾವಿತರಾಗುತ್ತಾರೆ ಅಲ್ಲವೇ. ಹಾಗೆಯೇ ನಿಮ್ಮ ಚೈತನ್ಯ ಚಿತ್ರ ಸೇವೆ ಮಾಡಬೇಕು ಇಂತಹ ತಯಾರಾಗಿರುವ ಚಿತ್ರ ಆಗಿರುವಿರಾ? ಇಂತಹ ಚಿತ್ರಗಳು ತಯಾರಾದರೆ ಧ್ವನಿ ಮೊಳಗಿಸಿ ಬಿಡುವಿರಿ. ಸದಾ ಕಾಲ ನಡೆದಾಡುತ್ತಾ, ಓಡಾಡುತ್ತಾ, ಕೂಡುತ್ತಾ, ಏಳುತ್ತಾ ಇದೇ ಸ್ಮೃತಿ ಇರಲಿ ನಾವು ಚೈತನ್ಯ ಚಿತ್ರ ಆಗಿದ್ದೇವೆ. ಇಡೀ ವಿಶ್ವದ ಆತ್ಮರ ದೃಷ್ಟಿ ನಮ್ಮ ಮೇಲಿದೆ. ಚೈತನ್ಯ ಚಿತ್ರದಲ್ಲಿ ಎಲ್ಲದಕ್ಕಿಂತ ಆಕರ್ಷಕ ಮಾತು ಯಾವುದಾಗಿರುತ್ತದೆ? ಸದಾ ಖುಷಿ ಇರುತ್ತದೆ. ಹಾಗಾದರೆ ಸದಾ ಖುಷಿ ಇರುತ್ತದೊ ಅಥವಾ ಕೆಲವು ಬಾರಿ ಗೊಂದಲದಲ್ಲಿ ಬರುತ್ತೀರೊ? ಅಥವಾ ಅಲ್ಲಿ ಹೋಗಿ ಹೇಳುತ್ತೀರಿ - ಹೀಗಾಯಿತು ಆದ್ದರಿಂದ ಖುಷಿ ಕಡಿಮೆ ಆಯಿತು. ಏನೇ ಆದರೂ ಖುಷಿ ಕಡಿಮೆ ಆಗಬಾರದು. ಈ ರೀತಿ ಪಕ್ಕಾ ಆಗಿರುವಿರಾ? ದೊಡ್ಡ ಪರೀಕ್ಷೆ ಬಂದರೆ ಪಾಸ ಆಗಿ ಬಿಡುವಿರಾ? ಬಾಪದಾದಾ ಹಾ ಎನ್ನುತ್ತಿರುವರೆಲ್ಲರ ಫೋಟೊ ತೆಗೆಯುತ್ತಿರುವರು. ಆ ಸಮಯದಲ್ಲಿ ಹೇಳಿಬಿಟ್ಟೆವು ಎಂದು ಹೇಳಬಾರದು. ಮಾಸ್ಟರ್ ಸರ್ವಶಕ್ತಿವಾನರಿಗೆ ಯಾವ ಮಾತೂ ದೊಡ್ಡದಲ್ಲ. ಎರಡನೇಯ ಮಾತು ನಿಶ್ಚಯ ಇದ್ದೇ ಇದೆ ಏನೆಂದರೆ ನಮ್ಮ ವಿಜಯ ಆಗಿಯೇ ಇದೆ. ಆದ್ದರಿಂದ ಯಾವ ದೊಡ್ಡ ಮಾತಲ್ಲ. ಸರ್ವ ಶಕ್ತಿಗಳ ಖಜಾನೆ ಯಾರ ಬಳಿ ಇದೆ ಅವರು ಯಾವ ಶಕ್ತಿಗೆ ಆಜ್ಞೆ ಮಾಡಿದರೂ ಆ ಶಕ್ತಿ ಸಹಾಯಕ ಆಗುತ್ತದೆ. ಆದರೆ ಆಜ್ಞೆ ಮಾಡುವವರು ಧೈರ್ಯಶಾಲಿ ಆಗಿರಬೇಕು. ಹಾಗಾದರೆ ಆಜ್ಞೆ ಮಾಡಲು ಬರುತ್ತದೆಯೇ ಅಥವಾ ಆಜ್ಞೆಯಂತೆ ನಡೆಯಲು ಬರುತ್ತದೆಯೋ? ಮಾಯೆಯ ಆಜ್ಞೆಯಂತೆ ನಡೆಯುವುದಿಲ್ಲ ತಾನೇ? ಯಾವುದಾದರೂ ಮಾತು ಬಂದು ಸಮಾಪ್ತಿ ಆಗಿ ಹೋದ ನಂತರ ಹೀಗೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ವಿಚಾರ ಮಾಡುತ್ತೀರಾ? ಈ ರೀತಿ ಅಂತೂ ಇಲ್ಲವಲ್ಲ? ಸಮಯಾನುಸಾರ ಶಕ್ತಿಗಳು ಉಪಯೋಗ ಆಗುತ್ತದೆಯೊ ಅಥವಾ ನಂತರ ಬರುತ್ತದೆಯೋ? ಮಾಸ್ಟರ ಸರ್ವಶಕ್ತಿವಾನ ಸೀಟ ಮೇಲೆ ಇದ್ದರೆ ಶಕ್ತಿಗಳು ಆಜ್ಞೆಯನ್ನು ಒಪ್ಪಲಿಲ್ಲ ಎನ್ನುವ ಮಾತಿಲ್ಲ. ಸೀಟ್ ಬಿಟ್ಟು ಕೆಳಗೆ ಇಳಿದು ಆಜ್ಞೆ ಮಾಡಿದರೆ ಅವು ಒಪ್ಪುವುದಿಲ್ಲ. ಲೌಕಿಕದಲ್ಲಿಯೂ ಯಾರಾದರು ಕುರ್ಚಿಯಿಂದ ಇಳಿದ ಮೇಲೆ ಆಜ್ಞೆ ಮಾಡಿದರೆ ಯಾರೂ ಒಪ್ಪುವುದಿಲ್ಲ. ಶಕ್ತಿಗಳು ನಿಮ್ಮ ಆಜ್ಞೆಯನ್ನು ಒಪ್ಪದಿದ್ದರೆ ನೀವು ನಿಮ್ಮ ಸ್ಥಾನದಿಂದ ಕೆಳಗೆ ಅವಶ್ಯ ಬಂದಿರುತ್ತೀರಿ. ಆದ್ದರಿಂದ ಸದಾ ಮಾಸ್ಟರ್ ಸರ್ವ ಶಕ್ತಿವಾನನ ಸೀಟಿನಲ್ಲಿ ಸೆಟ ಆಗಿರಿ, ಸದಾ ಅಚಲ ಅಡೋಲ ಆಗಿರಿ. ಏರುಪೇರಿನಲ್ಲಿ ಬರುವವರು ಅಲ್ಲ. ಬಾಪದಾದಾ ಹೇಳುತ್ತಾರೆ ಶರೀರ ಹೋದರೂ ಚಿಂತೆ ಇಲ್ಲ ಆದರೆ ಖುಷಿ ಹೋಗಬಾರದು. ಹಣವಂತೂ ಅದರ ಮುಂದೆ ಏನೂ ಅಲ್ಲ. ಯಾರ ಬಳಿ ಖುಷಿಯ ಖಜಾನೆ ಇದೆ ಅವರ ಮುಂದೆ ಯಾವ ಮಾತೂ ದೊಡ್ಡದಲ್ಲ ಮತ್ತು ಬಾಪದಾದಾ ಸದಾ ಸಹಯೋಗಿ ಸೇವಾಧಾರಿ ಮಕ್ಕಳ ಜೊತೆಯಲ್ಲಿರುವರು. ಮಗು ತಂದೆಯ ಜೊತೆ ಇರುವಾಗ ದೊಡ್ಡ ಮಾತು ಯಾವುದು? ಆದ್ದರಿಂದ ಹೆದರುವ ಮಾತು ಇಲ್ಲ. ತಂದೆ ಇರುವಾಗ ಮಕ್ಕಳಿಗೆ ಯಾವ ಚಿಂತೆ ಇದೆ. ತಂದೆ ಅಂತೂ ಭರಪೂರ ಆಗಿರುವರು. ಯಾವುದಾದರೂ ಯುಕ್ತಿಯಿಂದ ಮಕ್ಕಳ ಪಾಲನೆ ಮಾಡಲೇಬೇಕಾಗಿದೆ. ಆದ್ದರಿಂದ ನಿಶ್ಚಿಂತ. ದುಃಖಧಾಮದಲ್ಲಿ ಸುಖಧಾಮದ ಸ್ಥಾಪನೆ ಮಾಡುತ್ತಿರುವಿರಿ ಅಂದ ಮೇಲೆ ದುಃಖಧಾಮದಲ್ಲಿ ಏರುಪೇರಂತೂ ಆಗಿಯೇ ಆಗುತ್ತದೆ. ಬೇಸಗೆ ಕಾಲದಲ್ಲಿ ಸೆಕೆ ಆಗುವುದಲ್ಲವೇ! ಆದರೆ ತಂದೆಯ ಮಕ್ಕಳು ಸದಾ ಸುರಕ್ಷಿತವಾಗಿರುವರು, ಏಕೆಂದರೆ ತಂದೆಯ ಜೊತೆ ಇದ್ದೀರಿ.

ಸರ್ವ ಮಕ್ಕಳ ಪ್ರತಿ ಬಾಪದಾದಾರವರ ಸಂದೇಶ:

ಸರ್ವ ತಪಸ್ವೀ ಮಕ್ಕಳ ಪ್ರತಿ ನೆನಪು ಪ್ರೀತಿ. ನೋಡಿ ಮಕ್ಕಳೇ, ಸಮಯದ ಸಮಾಚಾರವನು ಕೇಳುತ್ತಾ ಶ್ರೇಷ್ಠಾತಿ ಶ್ರೇಷ್ಠ ಸಾಕ್ಷೀತನದ ಆಸನದಲ್ಲಿ ಮತ್ತು ನಿಶ್ಚಿಂತ ಚಕ್ರವರ್ತಿಯ ಸಿಂಹಾಸನದಲ್ಲಿ ಕುಳಿತು ಎಲ್ಲ ಆಟ ನೋಡುತ್ತಿರುವಿರಿ ಅಲ್ಲವೇ? ಈ ಬ್ರಾಹ್ಮಣ ಜೀವನದಲ್ಲಿ ಸ್ವಪ್ನದಲ್ಲಿಯೂ ಹೆದರುವ ಸಂಕಲ್ಪ ಬರಲು ಸಾಧ್ಯ ಇಲ್ಲ. ಇದಂತೂ ತಪಸ್ಯಾ ವರ್ಷದಲ್ಲಿ ಲಗನ್ನ ಅಗ್ನಿಯಲ್ಲಿ ಬೇಹದ್ನ ವೈರಾಗ್ಯ ವೃತ್ತಿಯನ್ನು ಪ್ರಜ್ವಲಿತ ಮಾಡಲು ಗಾಳಿ ಹಾಕಲಾಗುತ್ತಿದೆ. ನೀವು ತಂದೆ ಸಮಾನ ಆಗುವ ಸಂಕಲ್ಪ ಮಾಡಿದಿರಿ ಅರ್ಥಾತ್ ವಿಜಯದ ಬವುಟ ಹಾರಿಸುವ ಯೋಜನೆ ಮಾಡಿದಿರಿ, ಅಂದಮೇಲೆ ಇನ್ನೊಂದು ಕಡೆ ಸಮಾಪ್ತಿಯ ಹಲಚಲ ಸಹ ಜೊತೆ ಜೊತೆಯಲ್ಲಿ ನಿಗದಿ ಆಗಿದೆ ಅಲ್ಲವೇ? ರಿಹರ್ಸಲ್ ಸಹ ಡ್ರಾಮಾದ ರೀಲನ್ನು ಸಮಾಪ್ತಿ ಮಾಡುವ ಸಾಧನ ಆಗಿದೆ, ಆದ್ದರಿಂದ ಯಾವುದೂ ಹೊಸದಲ್ಲ.

ಸಮಯದ ಪರಿಸ್ಥಿತಿ ಪ್ರಮಾಣ ಬಂದು ಹೋಗುವುದರಲ್ಲಿ ಅಥವಾ ಯಾವುದಾದರೂ ವಸ್ತು ಸಿಗುವುದರಲ್ಲಿ ಸೆಣಸಾಟ ಆದರೂ ಮನಸ್ಸಿನ ಸಂಕಲ್ಪದಲ್ಲಿ ಎಂದೂ ಸೆಣಸಾಟ ಆಗಬಾರದು. ಎಲ್ಲಿ ಎಂತಹ ಪರಿಸ್ಥಿತಿಯಲ್ಲಿರಲಿ ದಿಲ್ಖುಷ ಮಿಠಾಯಿ ತಿನ್ನುತ್ತಿರಿ. ಖುಷಿಯಿಂದ ಇರಿ, ಫರಿಶ್ತೆಗಳಂತೆ ಹಾರುತ್ತಿರಿ. ಜೊತೆ-ಜೊತೆಗೆ ಇಂತಹ ಸಮಯದಲ್ಲಿ ಪ್ರತಿ ಸೆಂಟರನಲ್ಲಿ ತಪಸ್ಸಿನ ಕಾರ್ಯಕ್ರಮ ನಡೆಯುತ್ತಿರಲಿ. ಯಾರು ಎಷ್ಟು ಹೆಚ್ಚು ಸಮಯ ತೆಗೆಯಲು ಸಾಧ್ಯ ಅಷ್ಟು ಶಾಂತಿಯ ಸಹಯೋಗ ಕೊಡಿ. ಒಳ್ಳೆಯದು. ಓಂ ಶಾಂತಿ.

ವರದಾನ:
ಸರ್ವ ಖಜಾನೆಗಳಿಂದ ಸಂಪನ್ನರಾಗಿ ಪ್ರತೀ ಸಮಯ ಸೇವೆಯಲ್ಲಿ ವ್ಯಸ್ತವಾಗಿರುವ ವಿಶ್ವ ಕಲ್ಯಾಣಕಾರಿ ಭವ.

ವಿಶ್ವ ಕಲ್ಯಾಣಕ್ಕೆ ನಿಮಿತ್ತವಾಗಿರುವ ಆತ್ಮರು ಮೊದಲು ಸ್ವಯಂ ಸರ್ವ ಖಜಾನೆಗಳಿಂದ ಸಂಪನ್ನರಾಗಿರುವರು. ಒಂದುವೇಳೆ ಜ್ಞಾನದ ಖಜಾನೆಯಿದ್ದರೆ ಪೂರ್ಣ ಜ್ಞಾನವಿರಲಿ, ಯಾವುದೇ ಕೊರತೆಯಿರದಿದ್ದರೆ ಸಂಪನ್ನರೆಂದು ಹೇಳುತ್ತಾರೆ. ಕೆಲಕೆಲವರ ಬಳಿ ಖಜಾನೆಗಳಿದ್ದರೂ ಸಮಯದಲ್ಲಿ ಕಾರ್ಯದಲ್ಲಿ ಉಪಯೋಗಿಸಲು ಸಾಧ್ಯವಿಲ್ಲ, ಸಮಯ ಕಳೆದುಹೋದ ನಂತರ ಯೋಚಿಸುತ್ತಾರೆ, ಅಂತಹವರನ್ನು ಫುಲ್ (ಸಂಪನ್ನ) ಎಂದು ಹೇಳುವುದಿಲ್ಲ. ವಿಶ್ವ ಕಲ್ಯಾಣಕಾರಿ ಆತ್ಮರು ಮನಸಾ, ವಾಚಾ, ಕರ್ಮಣಾ, ಸಂಬಂಧ-ಸಂಪರ್ಕದಲ್ಲಿ ಪ್ರತೀ ಸಮಯದಲ್ಲಿಯೂ ಸೇವೆಯಲ್ಲಿ ವ್ಯಸ್ತರಾಗಿರುತ್ತಾರೆ.

ಸ್ಲೋಗನ್:
ಜ್ಞಾನ ಹಾಗೂ ಯೋಗದ ಸ್ವಭಾವವನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಪ್ರತೀ ಕರ್ಮವು ಸ್ವಾಭಾವಿಕವಾಗಿ ಶ್ರೇಷ್ಠ ಹಾಗೂ ಯುಕ್ತಿಯುಕ್ತವಾಗಿರುತ್ತದೆ.