15.06.22         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- ಈಗ ನಿಮ್ಮೆಲ್ಲರ ವಾನಪ್ರಸ್ಥ ಸ್ಥಿತಿಯಾಗಿದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆ ಮತ್ತು ಮನೆಯನ್ನು ನೆನಪು ಮಾಡಿ, ಪಾವನರಾಗಿ, ಎಲ್ಲಾ ಖಾತೆಗಳನ್ನು ಸಮಾಪ್ತಿ ಮಾಡಿರಿ

ಪ್ರಶ್ನೆ:
ತಂದೆಯು ಮಕ್ಕಳಿಗೆ ಯಾವ ಧೈರ್ಯವನ್ನು ಕೊಡುತ್ತಾರೆ?

ಉತ್ತರ:
ಮಕ್ಕಳೇ, ಈಗ ಈ ರುದ್ರಜ್ಞಾನ ಯಜ್ಞದಲ್ಲಿ ಅನೇಕಪ್ರಕಾರದ ವಿಘ್ನಗಳು ಬೀಳುತ್ತವೆ ಆದರೆ ಧೈರ್ಯವನ್ನು ತೆಗೆದುಕೊಳ್ಳಬೇಕಾಗಿದೆ. ಯಾವಾಗ ನಿಮ್ಮ ಪ್ರಭಾವವಾಗುತ್ತದೆ ಆಗ ಅನೇಕರು ಬರತೊಡಗುತ್ತಾರೆ ಮತ್ತೆ ಎಲ್ಲರೂ ಸಹ ನಿಮ್ಮ ಮುಂದೆ ಬಂದು ತಲೆಬಾಗುತ್ತಾರೆ. ಬಂಧನದಲ್ಲಿರುವವರ ಬಂಧನವು ಸಮಾಪ್ತಿಯಾಗುತ್ತಾ ಹೋಗುತ್ತದೆ. ನೀವು ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ ಅಷ್ಟು ಬಂಧನವೂ ಸಹ ದೂರವಾಗುತ್ತಿರುತ್ತದೆ. ನೀವು ವಿಕರ್ಮಾಜೀತರಾಗುತ್ತೀರಿ.

ಗೀತೆ:
ಭೋಲಾನಾಥನಿಗಿಂತ ಭಿನ್ನ....

ಓಂ ಶಾಂತಿ.
ಶಿವನನ್ನೇ ಸದಾ ಭೋಲಾನಾಥನೆಂದು ಕರೆಯುತ್ತಾರೆ, ಶಿವ-ಶಂಕರನ ವ್ಯತ್ಯಾಸವಂತೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಶಿವನಂತು ಶ್ರೇಷ್ಠಾತಿಶ್ರೇಷ್ಠ ಮೂಲವತನದಲ್ಲಿ ಇರುತ್ತಾರೆ. ಶಂಕರನು ಸೂಕ್ಷ್ಮವತನವಾಸಿ ಆಗಿರುವುದರಿಂದ ಅವರನ್ನು ಭಗವಂತನೆಂದು ಹೇಗೆ ಹೇಳುವುದು. ಶ್ರೇಷ್ಠಾತಿಶ್ರೇಷ್ಠ ಸ್ಥಾನದಲ್ಲಿರುವವರು ಒಬ್ಬ ತಂದೆಯಾಗಿದ್ದಾರೆ. ಮತ್ತೆ ಇನ್ನೊಂದು ಅಂತಸ್ತಿನಲ್ಲಿ ಮೂವರು ದೇವತೆಗಳಿದ್ದಾರೆ. ಶಿವತಂದೆಯು ಶ್ರೇಷ್ಠಾತಿಶ್ರೇಷ್ಠ ನಿರಾಕಾರನಾಗಿದ್ದಾರೆ. ಶಂಕರನಂತೂ ಆಕಾರಿಯಾಗಿದ್ದಾನೆ. ಶಿವ ಭೋಲಾನಾಥ, ಜ್ಞಾನಸಾಗರನಾಗಿದ್ದಾರೆ, ಶಂಕರನನ್ನು ಜ್ಞಾನಸಾಗರನೆಂದು ಹೇಳಲಾಗುವುದಿಲ್ಲ. ಮಕ್ಕಳಾದ ನಾವು ಅರಿತುಕೊಂಡಿದ್ದೇವೆ- ಭೋಲಾನಾಥ ತಂದೆಯು ಬಂದು ನಮ್ಮ ಜೋಳಿಗೆಯನ್ನು ತುಂಬಿಸುತ್ತಾರೆ. ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ರಚಯಿತ ಮತ್ತು ರಚನೆಯ ರಹಸ್ಯವು ತುಂಬಾ ಸರಳವಾಗಿದೆ. ಇದನ್ನು ದೊಡ್ಡ-ದೊಡ್ಡ ಋಷಿ-ಮುನಿ ಮುಂತಾದವರೂ ಸಹ ಈ ಸಹಜ ಮಾತುಗಳನ್ನು ಅರಿತುಕೊಳ್ಳಲಾಗುವುದಿಲ್ಲ. ಯಾವಾಗ ಈ ರಜೋಗುಣದವರೇ ಅರಿತುಕೊಂಡಿಲ್ಲವೆಂದರೆ ತಮೋಗುಣಿಗಳು ಹೇಗೆ ತಿಳಿಯುತ್ತಾರೆ! ಈಗ ನೀವು ಮಕ್ಕಳು ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ಅಮರಕಥೆಯನ್ನು ತಿಳಿಸುತ್ತಿದ್ದಾರೆ. ನೀವು ಮಕ್ಕಳಿಗೆ ನಿಶ್ಚಯವಿದೆ- ನಮ್ಮ ತಂದೆಯು ಸತ್ಯ-ಸತ್ಯವಾದ ಅಮರಕಥೆಯನ್ನು ತಿಳಿಸುತ್ತಿದ್ದಾರೆ, ಯಾವುದೇ ಮನುಷ್ಯರು ಇದನ್ನು ನಮಗೆ ತಿಳಿಸುತ್ತಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇರಬಾರದು. ಭೋಲಾನಾಥ ಶಿವತಂದೆಯಾಗಿದ್ದಾರೆ, ಹೇಳುತ್ತಾರೆ- ನನಗೆ ನನ್ನದೇ ಆದ ಶರೀರವಿಲ್ಲ, ನಾನು ನಿರಾಕಾರನಾಗಿದ್ದೇನೆ, ಪೂಜೆಯನ್ನೂ ನಾನು ನಿರಾಕಾರನಿಗೆ ಮಾಡುತ್ತಾರೆ. ಶಿವಜಯಂತಿಯನ್ನೂ ಆಚರಿಸುತ್ತಾರೆ, ಈಗ ತಂದೆಯಂತೂ ಜನನ-ಮರಣ ರಹಿತನಾಗಿದ್ದಾರೆ. ಅವರು ಭೋಲಾನಾಥನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬಂದು ಎಲ್ಲರ ಜೋಳಿಗೆಯನ್ನು ತುಂಬಿಸುತ್ತಾರೆ. ಹೇಗೆ ತುಂಬಿಸುತ್ತಾರೆ ಎನ್ನುವುದನ್ನು ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ. ಅವಿನಾಶಿ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸುತ್ತಾರೆ. ಜ್ಞಾನಸಾಗರ ತಂದೆಯು ಬಂದು ಜ್ಞಾನವನ್ನು ಕೊಡುತ್ತಾರೆ ಎನ್ನುವುದೇ ತಿಳುವಳಿಕೆಯಾಗಿದೆ. ಗೀತೆಯಂತೂ ಅದೊಂದೇ ಆಗಿದೆ. ಯಾವುದೇ ಸಂಸ್ಕೃತ ಶ್ಲೋಕಗಳಂತೂ ಇಲ್ಲ. ಮುಗ್ದ ಮಾತೆಯರು ಸಂಸ್ಕೃತ ಮುಂತಾದವುಗಳಿಂದ ಏನು ತಿಳಿಯುತ್ತಾರೆ! ಅವರಿಗಾಗಿಯೇ ಭೋಲಾನಾಥ ತಂದೆಯು ಬರುತ್ತಾರೆ. ಪಾಪ! ಈ ಮಾತೆಯರಂತೂ ಮನೆಯ ಕೆಲಸದಲ್ಲಿಯೇ ಇರುತ್ತಾರೆ. ಈಗಂತೂ ಫ್ಯಾಷನ್ ಆಗಿಬಿಟ್ಟಿದೆ, ಇವರೂ ಸಹ ನೌಕರಿ ಮಾಡುತ್ತಾರೆ. ತಂದೆಯು ಈಗ ಮಕ್ಕಳಿಗೆ ಶ್ರೇಷ್ಠಾತಿಶ್ರೇಷ್ಠ ವಿದ್ಯೆಯನ್ನು ಓದಿಸುತ್ತಾರೆ, ಯಾರು ಸಂಪೂರ್ಣವಾಗಿ ಏನೂ ಓದಿರಲಿಲ್ಲವೋ ಮೊದಲು ಅಂತಹವರ ಮೇಲೆ ವಿದ್ಯೆಯ ಕಳಶವನ್ನಿಡುತ್ತಾರೆ. ಈ ಭಕ್ತಿನಿಯರೆಲ್ಲರೂ ಸೀತೆಯರಾಗಿದ್ದಾರೆ, ರಾವಣನ ಲಂಕೆಯಿಂದ ಮುಕ್ತಗೊಳಿಸಲು ಅರ್ಥಾತ್ ದುಃಖದಿಂದ ಮುಕ್ತರನ್ನಾಗಿ ಮಾಡಲು ರಾಮನು ಬಂದಿದ್ದಾರೆ. ನಂತರ ತಂದೆಯ ಜೊತೆ ಮನೆಗೆ ಹೋಗುತ್ತೇವೆ, ಮತ್ತೆಲ್ಲಿಗೆ ಹೋಗಲು ಸಾಧ್ಯ? ಮನೆಯನ್ನೇ ನೆನಪು ಮಾಡುತ್ತಾರೆ, ನಾವು ದುಃಖದಿಂದ ಮುಕ್ತರಾಗಬೇಕೆಂದು ಬಯಸುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ- ಮಧ್ಯದಲ್ಲಿ ಯಾರಿಗೂ ಮುಕ್ತಿಯು ಸಿಗಲು ಸಾಧ್ಯವಿಲ್ಲ. ಎಲ್ಲರೂ ತಮೋಪ್ರಧಾನರು ಆಗಲೇಬೇಕಾಗಿದೆ. ಮುಖ್ಯವಾಗಿ ಯಾವ ತಳಪಾಯವಿದೆ ಅದು ಸುಟ್ಟುಹೋಗುತ್ತದೆ, ಆ ಧರ್ಮವೇ ಪ್ರಾಯಃಲೋಪವಾಗಿಬಿಡುತ್ತದೆ. ಬಾಕಿ ಕೆಲವು ಚಿತ್ರಗಳು ಮುಂತಾದವಷ್ಟೇ ಉಳಿದುಕೊಳ್ಳುತ್ತವೆ. ಲಕ್ಷ್ಮೀ-ನಾರಾಯಣರ ಚಿತ್ರವೂ ಸಹ ಮರೆಯಾಗಿಬಿಟಿದ್ದರೆ ನೆನಪಾರ್ಥವು ಹೇಗೆ ಸಿಗುತ್ತಿತ್ತು? ಖಂಡಿತವಾಗಿ ಆ ನೆನಪಾರ್ಥದಿಂದ ದೇವೀ-ದೇವತೆಗಳು ರಾಜ್ಯ ಮಾಡುತ್ತಿದ್ದರೆಂದು ತಿಳಿಯುತ್ತಾರೆ. ಅವರ ಚಿತ್ರಗಳೂ ಸಹ ಇಲ್ಲಿಯ ತನಕ ಇವೆ. ಮಕ್ಕಳು ಇದರಬಗ್ಗೆ ತಿಳಿಸಬೇಕಾಗಿದೆ. ನಿಮಗೆ ತಿಳಿದಿದೆ- ಲಕ್ಷ್ಮೀ-ನಾರಾಯಣರು ಬಾಲ್ಯದಲ್ಲಿ ರಾಜಕುಮಾರ-ರಾಜಕುಮಾರಿ, ರಾಧಾ-ಕೃಷ್ಣನಾಗಿದ್ದರು ನಂತರ ಅವರೇ ಮಹಾರಾಜಾ-ಮಹಾರಾಣಿಯಾದರು. ಅವರೇ ಸತ್ಯಯುಗದ ಮಾಲೀಕರಾಗಿದ್ದರು. ದೇವತೆಗಳು ಈ ಪತಿತಪ್ರಪಂಚದಲ್ಲಿ ಹೆಜ್ಜೆಯನ್ನಿಡುವುದಕ್ಕೂ ಸಾಧ್ಯವಿಲ್ಲ. ಶ್ರೀಕೃಷ್ಣನಂತು ಸತ್ಯಯುಗದ ರಾಜಕುಮಾರನಾಗಿದ್ದಾರೆ ಆದ್ದರಿಂದ ಕೃಷ್ಣನು ಗೀತೆಯನ್ನು ತಿಳಿಸಲು ಸಾಧ್ಯವಿಲ್ಲ ಆದರೆ ಎಷ್ಟು ದೊಡ್ಡತಪ್ಪನ್ನು ಮಾಡಿಬಿಟ್ಟಿದ್ದಾರೆ! ಕೃಷ್ಣನು ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಕೃಷ್ಣನು ಮನುಷ್ಯನಾಗಿದ್ದಾರೆ, ದೇವೀ-ದೇವತಾ ಧರ್ಮದವರಾಗಿದ್ದಾರೆ. ವಾಸ್ತವದಲ್ಲಿ ದೇವತೆಗಳಾದ ಬ್ರಹ್ಮಾ-ವಿಷ್ಣು-ಶಂಕರ ಸೂಕ್ಷ್ಮವತನದಲ್ಲಿಯೇ ಇರುತ್ತಾರೆ, ಇಲ್ಲಿ ಮನುಷ್ಯರಿರುತ್ತಾರೆ. ಮನುಷ್ಯರನ್ನು ಸೂಕ್ಷ್ಮವತನವಾಸಿಗಳೆಂದು ಹೇಳಲಾಗುವುದಿಲ್ಲ, ಬ್ರಹ್ಮಾ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರಲ್ಲವೇ. ಅವರದು ದೇವೀ-ದೇವತಾ ಧರ್ಮವಾಗಿದೆ. ಶ್ರೀಲಕ್ಷ್ಮಿಯನ್ನು ದೇವಿ, ಶ್ರೀನಾರಾಯಣನನ್ನು ದೇವತಾ ಎಂದು ಹೇಳುತ್ತಾರೆ. ಮನುಷ್ಯರೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗ ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ- ಮೂಲತಃ ನಾವು ದೇವತಾ ಧರ್ಮದವರಾಗಿದ್ದೆವು, ಆ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ ಆದರೆ ಅಲ್ಲಿ ನಾವೇಕೆ ಇರುವುದಿಲ್ಲ! ಎಂದು ಯಾರೂ ಸಹ ಹೇಳಲು ಸಾಧ್ಯವಿಲ್ಲ ಏಕೆಂದರೆ ಇದಂತೂ ನಿಮಗೆ ತಿಳಿದಿದೆ- ಅಲ್ಲಿ ಒಂದೇ ಆದಿಸನಾತನ ದೇವೀ-ದೇವತಾ ಧರ್ಮವಿತ್ತು ನಂತರ ಉಳಿದೆಲ್ಲಾ ಧರ್ಮದವರು ನಂಬರ್ವಾರ್ ಬರುತ್ತಾರೆ. ಇದನ್ನು ನೀವು ಮಕ್ಕಳೇ ತಿಳಿಸಬಲ್ಲಿರಿ. ಇದು ಅನಾದಿ ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ, ಇದರಲ್ಲಿ ಮತ್ತೆ ಸತ್ಯಯುಗವು ಸ್ಥಾಪನೆ ಆಗುತ್ತದೆ. ಇದು ಭಾರತದಲ್ಲಿಯೇ ಆಗಬೇಕಾಗಿದೆ ಏಕೆಂದರೆ ಭಾರತವೇ ಅವಿನಾಶಿ ಖಂಡವಾಗಿದೆ. ಇದರ ವಿನಾಶವಾಗುವುದಿಲ್ಲ.

ಇದನ್ನೂ ಸಹ ತಿಳಿಸಬೇಕಾಗುತ್ತದೆ- ತಂದೆಯ ಜನ್ಮವೂ ಸಹ ಇಲ್ಲಿಯೇ ಆಗುತ್ತದೆ ಆದರೆ ಅವರದು ದಿವ್ಯಜನ್ಮವಾಗಿದೆ ಅರ್ಥಾತ್ ಮನುಷ್ಯರ ಜನ್ಮದಂತೆ ಆಗುವುದಿಲ್ಲ. ತಂದೆಯು ನಮ್ಮನ್ನು ಮುಕ್ತಗೊಳಿಸಲು ಬಂದಿದ್ದಾರೆ ಆದ್ದರಿಂದ ನೀವು ಕೇವಲ ತಂದೆ ಮತ್ತು ಮನೆಯನ್ನು ನೆನಪು ಮಾಡಬೇಕು ನಂತರ ನೀವು ರಾಜಧಾನಿಯಲ್ಲಿ ಬಂದುಬಿಡುತ್ತೀರಿ. ಇದಂತೂ ಆಸುರೀ ರಾಜಸ್ಥಾನವಾಗಿದೆ, ತಂದೆಯು ದೈವೀ ರಾಜಸ್ಥಾನದಲ್ಲಿ ಕರೆದುಕೊಂಡು ಹೋಗುತ್ತಾರೆ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ, ಮತ್ಯಾವುದೇ ಕಷ್ಟವನ್ನು ತಂದೆಯು ಕೊಡುವುದಿಲ್ಲ. ಇದು ಅಜಪಾಜಪವಾಗಿದೆ...... ಬಾಯಿಂದ ಮತ್ತೇನೂ ಹೇಳುವ ಅವಶ್ಯಕತೆಯಿಲ್ಲ. ಸೂಕ್ಷ್ಮದಲ್ಲಿಯೂ ಸಹ ಹೇಳುವ ಆವಶ್ಯಕತೆಯಿಲ್ಲ. ಮನೆಯಲ್ಲಿ ಕುಳಿತಿದ್ದರೂ ಶಾಂತಿಯಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಬಂಧನದಲ್ಲಿ ಇರುವವರೂ ಸಹ ಮನೆಯಲ್ಲಿ ಕುಳಿತಿದ್ದರೂ ಕೇಳುತ್ತಾರೆ ಏಕೆಂದರೆ ಅವರಿಗೆ ಬರುವುದಕ್ಕೆ ಅನುಮತಿ ಸಿಗುವುದಿಲ್ಲ. ಮನೆಯಲ್ಲಿ ಕುಳಿತೇ ಕೇವಲ ಪವಿತ್ರರಾಗಿರಲು ಪ್ರಯತ್ನ ಪಡುತ್ತಿರಬೇಕಾಗಿದೆ. ನಮಗೆ ಸ್ವಪ್ನದಲ್ಲಿಯೂ ಪವಿತ್ರರಾಗಿ ಎಂದು ಸಲಹೆಯೂ ಸಿಗುತ್ತದೆ ಎಂದು ಹೇಳಿ. ಈಗ ಮೃತ್ಯು ಸಮ್ಮುಖದಲ್ಲಿ ನಿಂತಿದೆ. ನೀವೀಗ ವಾನಪ್ರಸ್ಥ ಸ್ಥಿತಿಯಲ್ಲಿದ್ದೀರಿ. ವಾನಪ್ರಸ್ಥದಲ್ಲಿದ್ದಾಗಿ ಎಂದಾದರೂ ವಿಕಾರದ ವಿಚಾರವಿರುತ್ತದೆಯೇ! ಈಗ ತಂದೆಯೂ ಇಡೀ ಪ್ರಪಂಚಕ್ಕೇ ಹೇಳುತ್ತಾರೆ- ಈಗ ಎಲ್ಲರ ವಾನಪ್ರಸ್ಥ ಸ್ಥಿತಿಯಾಗಿದೆ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ ಆದ್ದರಿಂದ ಮನೆಯನ್ನು ನೆನಪು ಮಾಡಬೇಕಾಗಿದೆ. ನಂತರ ಭಾರತದಲ್ಲಿಯೇ ಬರುತ್ತೀರಿ. ಮುಖವಂತೂ ಮನೆಯ ಕಡೆಯೇ ಇರುತ್ತದೆಯಲ್ಲವೇ. ಮಕ್ಕಳಿಗೆ ಮತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಇದು ತುಂಬಾ ಸಹಜವಾಗಿದೆ. ಮನೆಯಲ್ಲಿ ಕುಳಿತೂ ಸಹ ಶಿವತಂದೆಯ ನೆನಪಿನಲ್ಲಿ ಭೋಜನವನ್ನು ತಯಾರು ಮಾಡುತ್ತಿರಬೇಕಾಗಿದೆ. ಮನೆಯಲ್ಲಿ ಭೋಜನವನ್ನು ತಯಾರಿಸುತ್ತಾ ಪತಿಯ ನೆನಪಿರುತ್ತದೆಯಲ್ಲವೇ ಅಂದಮೇಲೆ ತಂದೆಯು ಪತಿಯರ ಪತಿ ಆಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದ 21 ಜನ್ಮಗಳಿಗೋಸ್ಕರ ಆಸ್ತಿಯು ಸಿಗುತ್ತದೆ. ಯಾರಿಗಾದರೂ ಬರಲು ಅನುಮತಿ ಸಿಗಲಿಲ್ಲವೆಂದರೆ ಅಂತಹವರು ಮನೆಯಲ್ಲಿಯೇ ಇರುತ್ತಾ ತಂದೆಯ ಆಸ್ತಿಯನ್ನು ನೆನಪು ಮಾಡಿ ತಮ್ಮನ್ನು ಬಿಡುಗಡೆ ಮಾಡಿಕೊಳ್ಳಬೇಕು, ಆಗ ತಂದೆಯಿಂದ ಪೂರ್ಣಆಸ್ತಿಯನ್ನು ಪಡೆಯಬಹುದು. ನಿಧಾನ-ನಿಧಾನವಾಗಿ ಬಿಡುಗಡೆ ಆಗಲೇಬೇಕಾಗಿದೆ. ರುದ್ರಜ್ಞಾನಯಜ್ಞದಲ್ಲಿ ಅವಶ್ಯವಾಗಿ ವಿಘ್ನಗಳು ಬೀಳುತ್ತದೆ. ಕೊನೆಗೆ ಯಾವಾಗ ನಿಮ್ಮ ಪ್ರಭಾವವಾಗುತ್ತದೆ ಆಗ ನಿಮ್ಮ ಚರಣಗಳಲ್ಲಿ ಬಂದು ತಲೆಬಾಗಿಸುತ್ತಾರೆ. ವಿಘ್ನಗಳಂತು ಬರುತ್ತಲೇ ಇರುತ್ತದೆ. ಇದರಲ್ಲಿ ಧೈರ್ಯವಾಗಿರಬೇಕು, ಚಂಚಲರಾಗಬಾರದಾಗಿದೆ. ನನ್ನನ್ನು ನೆನಪು ಮಾಡಿ, ಆಸ್ತಿಯನ್ನು ತೆಗೆದುಕೊಳ್ಳಿ ಎನ್ನುವ ಮಾತನ್ನು ಮನೆಯಲ್ಲಿ ಪತಿ ಮುಂತಾದ ಮಿತ್ರ-ಸಂಬಂಧಗಳಿಗೂ ತಿಳಿಸಿಕೊಡಿ. ಕೃಷ್ಣನಂತು ಭಗವಂತನಾಗಲು ಸಾಧ್ಯವಿಲ್ಲ, ತಂದೆಯನ್ನೇ ನೆನಪು ಮಾಡಬೇಕಾಗಿದೆ, ತಂದೆಯ ಪರಿಚಯವನ್ನು ಕೊಡುತ್ತೀರೆಂದರೆ ನಮ್ಮ ತಂದೆಯು ಶಿವಬಾಬಾ ಆಗಿದ್ದಾರೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳುತ್ತಾರೆ. ತಂದೆಯ ನೆನಪೂ ಸಹ ಈಗ ಒಳ್ಳೆಯ ರೀತಿಯಲ್ಲಿ ಇರುತ್ತದೆ. ಈ ಬಂಧನ, ಜಗಳ-ಕಲಹ ಮುಂತಾದವುಗಳು ಸ್ವಲ್ಪ ಸಮಯಕ್ಕೋಸ್ಕರ ಇರುತ್ತದೆ. ಮುಂದೆ ಹೋದಂತೆ ಇದೆಲ್ಲವೂ ಸಮಾಪ್ತಿಯಾಗುವುದು. ಕೆಲವು ಕಾಯಿಲೆಗಳು ಬರುತ್ತವೆ, ಮತ್ತೆ ಹೋಗುತ್ತವೆ. ಇನ್ನೂ ಕೆಲವು ಕಾಯಿಲೆಗಳು 2 ವರ್ಷಗಳವರೆಗೂ ಇರುತ್ತದೆ. ಇದಕ್ಕಾಗಿ ಉಪಾಯವಿದೆ- ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಬಂಧನದಿಂದ ಮುಕ್ತರಾಗುವಿರಿ ಅಂದಮೇಲೆ ಪ್ರತಿಯೊಂದು ಮಾತಿನಲ್ಲಿ ತಾಳ್ಮೆಯಿರಬೇಕು. ನೀವು ಎಷ್ಟು ನೆನಪು ಮಾಡುತ್ತೀರಿ ಅಷ್ಟು ವಿಕರ್ಮ ವಿನಾಶವಾಗುತ್ತದೆ. ಇವೆಲ್ಲದರಿಂದ ಬುದ್ಧಿಯು ದೂರವಾಗುತ್ತಾ ಹೋಗುತ್ತದೆ. ವಿಕರ್ಮಗಳ ಬಂಧನವೂ ಸಹ ಇರುತ್ತದೆ. ವಿಕಾರವನ್ನೇ ನಂಬರ್ವನ್ ವಿಕರ್ಮ ಎಂದು ಹೇಳಲಾಗುತ್ತದೆ.

ಈಗ ನೀವು ವಿಕರ್ಮಾಜೀತರಾಗುತ್ತೀರಿ. ನೆನಪಿನಿಂದಲೇ ವಿಕರ್ಮಾಜೀತರಾಗಬೇಕಾಗುತ್ತದೆ. ಎಲ್ಲಾ ಖಾತೆಗಳು ಸಮಾಪ್ತಿಯಾಗುತ್ತವೆ ತದನಂತರ ಸುಖದ ಖಾತೆಯು ಪ್ರಾರಂಭವಾಗುತ್ತದೆ. ವ್ಯಾಪಾರಿಗಳಿಗೆ ಇದು ತುಂಬಾ ಸಹಜವಾಗಿದೆ ಏಕೆಂದರೆ ಹಳೆಯ ಖಾತೆಯು ಸಮಾಪ್ತಿಯಾಗಿ ಮತ್ತೆ ಹೊಸಖಾತೆಯನ್ನು ಪ್ರಾರಂಭ ಮಾಡಬೇಕೆಂದು ತಿಳಿಯುತ್ತಾರೆ. ನೆನಪು ಮಾಡುತ್ತಾ ಇರುತ್ತೀರೆಂದರೆ ಜಮಾ ಆಗುತ್ತಿರುವುದು. ನೆನಪು ಮಾಡುವುದಿಲ್ಲವೆಂದರೆ ಜಮಾ ಹೇಗಾಗುತ್ತದೆ? ಇದೂ ಸಹ ವ್ಯಾಪಾರವಾಗಿದೆಯಲ್ಲವೇ. ತಂದೆಯು ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಪೆಟ್ಟುತಿನ್ನುವ ಅವಶ್ಯಕತೆಯಿಲ್ಲ. ಅದನ್ನಂತೂ ಜನ್ಮ-ಜನ್ಮಾಂತರದಿಂದ ಅನುಭವಿಸುತ್ತಲೇ ಬಂದಿದ್ದೀರಿ ಆದ್ದರಿಂದ ಈಗ ಸತ್ಯತಂದೆಯು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ. ಭಗವಂತನೇ ಸತ್ಯವನ್ನು ತಿಳಿಸುತ್ತಾರೆ, ಉಳಿದವರೆಲ್ಲರೂ ಅಸತ್ಯವನ್ನೇ ಹೇಳುತ್ತಾರೆ. ತಂದೆಯು ಏನು ತಿಳಿಸುತ್ತಾರೆ ಮತ್ತು ಮನುಷ್ಯರು ಏನು ತಿಳಿಸುತ್ತಾರೆ ಎನ್ನುವುದರಲ್ಲಿ ಎಷ್ಟೊಂದು ಅಂತರವಿದೆ! ಇದು ನಾಟಕವಾಗಿದೆ, ಇದು ಮತ್ತೆ ಇದೇರೀತಿ ಪುನರಾವರ್ತನೆಯಾಗುತ್ತದೆ. ನಾವು ಶ್ರೀಮತದನುಸಾರ ನಡೆಯುವುದರಿಂದ ಸದ್ಗತಿಯನ್ನು ಪಡೆಯುತ್ತೇವೆ. ಇಲ್ಲವೆಂದರೆ ಇಷ್ಟು ಶ್ರೇಷ್ಠಪದವಿ ಸಿಗುವುದಿಲ್ಲವೆಂದು ನೀವು ಮಕ್ಕಳಿಗೆ ತಿಳಿದಿದೆ. ಸ್ವರ್ಗದಲ್ಲಿ ಹೋಗಲು ನೀವೀಗ ನಿಮಿತ್ತರಾಗುತ್ತೀರಿ, ಅಲ್ಲಿ ಯಾವುದೇ ವಿಕರ್ಮವಾಗುವುದಿಲ್ಲ. ಇಲ್ಲಿ ವಿಕರ್ಮವಾಗುವುದರಿಂದ ಶಿಕ್ಷೆಯನ್ನೂ ಸಹ ಅನುಭವಿಸಬೇಕಾಗುತ್ತದೆ. ಯಾರು ಶ್ರೀಮತದಂತೆ ನಡೆಯುವುದಿಲ್ಲ ಅವರನ್ನು ಏನೆಂದು ಹೇಳುವುದು? ನಾಸ್ತಿಕರು. ಭಲೆ ತಂದೆಯು ನಮ್ಮನ್ನು ಆಸ್ತಿಕರನ್ನಾಗಿ ಮಾಡುತ್ತಾರೆ ಎನ್ನುವುದನ್ನು ತಿಳಿಯುತ್ತಾರೆ, ಒಂದುವೇಳೆ ಅವರ ಮತದಂತೆ ನಡೆಯುವುದಿಲ್ಲವೆಂದರೆ ನಾಸ್ತಿಕರಾದರಲ್ಲವೇ. ನಾವು ಶಿವತಂದೆಯ ಮತದಂತೆಯೇ ನಡೆಯಬೇಕಾಗಿದೆ ಎನ್ನುವುದನ್ನೂ ಸಹ ತಿಳಿದಿರುತ್ತಾರೆ, ಆದರೆ ತಿಳಿದಿದ್ದರೂ ಸಹ ನಡೆಯುವುದಿಲ್ಲವೆಂದರೆ ಅವರಿಗೆ ಏನೆಂದು ಹೇಳುವುದು! ಶ್ರೇಷ್ಠರಾಗುವುದಕ್ಕಾಗಿಯೇ ಶ್ರೀಮತವಿದೆ. ಎಲ್ಲರಗಿಂತ ಸರ್ವಶ್ರೇಷ್ಠವಾದ ಸದ್ಗುರು ಅವರಾಗಿದ್ದಾರೆ. ಅಂತಹ ತಂದೆಯೇ ಮಕ್ಕಳ ಸಮ್ಮುಖದಲ್ಲಿ ಕುಳಿತು ತಿಳಿಸುತ್ತಾರೆ, ಕಲ್ಪ-ಕಲ್ಪವೂ ತಿಳಿಸಿದ್ದರು. ಉಳಿದ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅನೇಕಾನೇಕ ಶಾಸ್ತ್ರಗಳಿವೆ. ಶಾಸ್ತ್ರಗಳಿಗೂ ಸಹ ತುಂಬಾ ಗೌರವ ಕೊಡುತ್ತಾರೆ. ಹೇಗೆ ಶಾಸ್ತ್ರಗಳನ್ನು ಮೆರವಣಿಗೆ ಮಾಡುತ್ತಾರೆಯೋ ಹಾಗೆಯೇ ಚಿತ್ರಗಳನ್ನೂ ಸಹ ಮೆರವಣಿಗೆ ಮಾಡಿಸುತ್ತಾರೆ. ಈಗ ತಂದೆಯೂ ತಿಳಿಸುತ್ತಾರೆ- ಮಕ್ಕಳೇ, ನೀವು ಇವೆಲ್ಲವನ್ನೂ ಮರೆತುಬಿಡಬೇಕು. ಒಂದು ಕ್ಷಣದಲ್ಲಿ ಬಿಂದು(ಜೀರೋ)ಆಗಿಬಿಡಿ. ಬಿಂದುವನ್ನು ಇಡಿ ಮತ್ತ್ಯಾರ ಮಾತುಗಳನ್ನೂ ಕೇಳಬಾರದು. ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಮಾತನಾಡಬಾರದು. ಒಬ್ಬ ತಂದೆಯ ವಿನಃ ಬೇರೆ ಯಾರ ಮಾತುಗಳನ್ನು ಕೇಳಬಾರದು. ಅಶರೀರಿಯಾಗಿ ಮತ್ತೆಲ್ಲವನ್ನೂ ಮರೆತುಬಿಡಿ. ನೀವಾತ್ಮಗಳು ಶರೀರದೊಂದಿಗೆ ಕೇಳುತ್ತೀರಿ. ತಂದೆಯು ಬಂದು ಬ್ರಹ್ಮಾರವರ ಮುಖಾಂತರ ತಿಳಿಸುತ್ತಾರೆ. ಮಕ್ಕಳಿಗೆ ಸದ್ಗತಿಯ ಮಾರ್ಗವನ್ನು ತಿಳಿಸುತ್ತಾರೆ. ಭಲೆ ಮೊದಲೂ ಸಹ ಎಷ್ಟೊಂದು ಪ್ರಯತ್ನಗಳನ್ನು ಮಾಡಿರಬಹುದು ಆದರೆ ಮುಕ್ತಿ-ಜೀವನ್ಮುಕ್ತಿಯನ್ನಂತು ಯಾರೂ ಪಡೆಯಲು ಸಾಧ್ಯವಾಗಲಿಲ್ಲ. ಕಲ್ಪದ ಆಯಸ್ಸನ್ನೇ ದೀರ್ಘವಾಗಿ ಮಾಡಿಬಿಟ್ಟಿದ್ದಾರೆ. ಯಾರ ಅದೃಷ್ಠದಲ್ಲಿ ಇದೆಯೋ ಅವರು ಕೇಳುತ್ತಾರೆ. ಅದೃಷ್ಠದಲ್ಲಿ ಇಲ್ಲವೆಂದರೆ ಅವರು ಬರುವುದಿಲ್ಲ. ಇಲ್ಲಿಯೂ ಸಹ ಅದೃಷ್ಟದ ಮಾತಾಗಿದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ, ಆದರೆ ಕೆಲವರು ಹೇಳುತ್ತಾರೆ- ಬಾಬಾ ನಮ್ಮ ಬಾಯಿ ತೆರೆಯುವುದೇ ಇಲ್ಲ. ಅರೇ! ಇಷ್ಟೊಂದು ಸಹಜ ಮಾತಾಗಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಅಷ್ಟೇ. ಇದನ್ನೇ ಸಂಸ್ಕೃತದಲ್ಲಿ ಮನ್ಮನಾಭವ ಎಂದು ಹೇಳುತ್ತಾರೆ. ಶಿವತಂದೆಯು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಕೃಷ್ಣನನ್ನು ಈ ರೀತಿ ಹೇಳಲು ಸಾಧ್ಯವಿಲ್ಲ. ಬ್ರಹ್ಮಾರವರೂ ಸಹ ಎಲ್ಲಾ ಪ್ರಜೆಗಳ ತಂದೆ ಆಗಿದ್ದಾರೆ. ಆತ್ಮಗಳ ತಂದೆಯು ದೊಡ್ಡವರೋ ಅಥವಾ ಪ್ರಜೆಗಳ ತಂದೆಯು ದೊಡ್ಡವರೋ? ದೊಡ್ಡ ತಂದೆಯ ನೆನಪು ಮಾಡುವುದರಿಂದ ಅದರ ಪ್ರಾಲಬ್ಧವಾಗಿ ಸ್ವರ್ಗದ ಆಸ್ತಿಯು ಸಿಗುತ್ತದೆ. ಮುಂದೆ ಹೋದಂತೆ ನಿಮ್ಮ ಬಳಿ ಅನೇಕರು ಬರುತ್ತಾರೆ. ಇನ್ನೆಲ್ಲಿಗೆ ಹೋಗುತ್ತಾರೆ! ಬರುತ್ತಾ ಇರುತ್ತಾರೆ. ಎಲ್ಲಿಯಾದರೂ ಅನೇಕರು ಹೋಗುತ್ತಾರೆಂದರೆ ಒಬ್ಬರನ್ನು ನೋಡಿ ಅನೇಕರು ಬರುತ್ತಾರೆ. ನಿಮ್ಮಲ್ಲಿಯೂ ಸಹ ವೃದ್ಧಿಯಾಗುತ್ತಿರುತ್ತಾರೆ. ಎಷ್ಟೇ ವಿಘ್ನಗಳು ಬರಲಿ ಆ ಏರುಪೇರುಗಳಿಂದ ಉತ್ತೀರ್ಣರಾಗಿ ತಮ್ಮ ರಾಜಧಾನಿಯ ಸ್ಥಾಪನೆ ಮಾಡಲೇಬೇಕಾಗಿದೆ. ರಾಮರಾಜ್ಯದ ಸ್ಥಾಪನೆ ಮಾಡುತ್ತಿದ್ದಾರೆ. ರಾಮರಾಜ್ಯವು ಹೊಸ ಪ್ರಪಂಚವಾಗಿದೆ. ನೀವು ಅರಿತುಕೊಂಡಿದ್ದೀರಿ- ನಾವು ನಮ್ಮದೇ ತನು-ಮನ-ಧನದಿಂದ ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ಮೊದಲು ಕೇಳಿ- ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನಿದೆ? ಪ್ರಜಾಪಿತ ಬ್ರಹ್ಮನೊಂದಿಗೆ ನಿಮ್ಮ ಸಂಬಂಧವೇನಿದೆ? ಪರಮಾತ್ಮ ಬೇಹದ್ದಿನ ತಂದೆಯಾಗಿದ್ದಾರೆ, ನಂತರ ಇವೆಲ್ಲವು ಮನೆತನಗಳಾಗಿವೆ. ಇವೆಲ್ಲವೂ ಒಂದರಿಂದಲೇ ಹೊರಟಿದೆಯಲ್ಲವೇ. ಪರಮಪಿತ ಪರಮಾತ್ಮನ ಪ್ರಜಾಪಿತ ಬ್ರಹ್ಮಾರವರ ಮುಖಾಂತರ ಸೃಷ್ಟಿಯನ್ನು ರಚಿಸಿದ್ದಾರೆ ಅರ್ಥಾತ್ ಪತಿತರಿಂದ ಪಾವನರನ್ನಾಗಿ ಮಾಡಿದ್ದಾರೆ. ನಾವೇ ಪೂಜ್ಯ, ನಾವೇ ಪೂಜಾರಿಗಳು..... ಇದನ್ನು ಜಗತ್ತು ಅರಿತುಕೊಂಡಿಲ್ಲ. ಗಾಯನ ಮಾಡುತ್ತಾರೆ ಆದರೆ ಅವರು ಮತ್ತೆ ಭಗವಂತನಿಗೋಸ್ಕರ ಈ ರೀತಿ ಹೇಳಿಬಿಡುತ್ತಾರೆ. ಒಂದುವೇಳೆ ಭಗವಂತನೇ ಪೂಜಾರಿಯಾದರೆ ಮತ್ತೆ ಪೂಜ್ಯರನ್ನಾಗಿ ಮಾಡುವವರು ಯಾರು!.... ಇದನ್ನು ಕೇಳಬೇಕು. ಮಕ್ಕಳಿಗೆ ಹಮ್ ಸೋ, ಸೋ ಹಮ್ನ ಅರ್ಥವನ್ನು ತಿಳಿಸಲಾಗಿದೆ. ನಾವೇ ಶೂದ್ರರಾಗಿದ್ದೆವು, ಈಗ ನಾವೇ ದೇವತೆಗಳಾಗುತ್ತಿದ್ದೇವೆ. ಚಕ್ರವನ್ನಂತೂ ನೆನಪು ಮಾಡುತ್ತೀರಲ್ಲವೇ! ಗಾಯನವನ್ನೂ ಮಾಡಲಾಗುತ್ತದೆ, ಸನ್ ಶೋಸ್ ಫಾದರ್ ನಂತರ ಫಾದರ್ ಶೋಸ್ ಸನ್(ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುತ್ತಾರೆ, ನಂತರ ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುತ್ತಾರೆ) ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬುದ್ಧಿವಂತ ವ್ಯಾಪಾರಿಗಳಗಿ ಹಳೆಯ ಎಲ್ಲಾ ಖಾತೆಗಳನ್ನು ಸಮಾಪ್ತಿ ಮಾಡಿ, ಸುಖದ ಖಾತೆಯನ್ನು ಪ್ರಾರಂಭ ಮಾಡಬೇಕಾಗಿದೆ. ನೆನಪಿನಲ್ಲಿ ಇದ್ದು ವಿಕರ್ಮಗಳ ಬಂಧನವನ್ನು ಕತ್ತರಿಸಬೇಕಾಗಿದೆ. ಧೈರ್ಯದಿಂದ ಇರಬೇಕಾಗಿದೆ, ಚಂಚಲವಾಗಬಾರದಾಗಿದೆ.

2. ಮನೆಯಲ್ಲಿ ಕುಳಿತೇ ಭೋಜನವನ್ನು ತಯಾರಿಸುತ್ತಾ, ಪ್ರತಿ ಕರ್ಮ ಮಾಡುತ್ತಾ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ತಂದೆಯೇ ಯಾವ ಅವಿನಾಶಿ ಜ್ಞಾನರತ್ನಗಳನ್ನು ಕೊಡುತ್ತಾರೆ ಅವುಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ಅನ್ಯರಿಗೆ ದಾನ ಮಾಡಬೇಕಾಗಿದೆ.

ವರದಾನ:
ಸಾಕ್ಷಿಯಾಗಿ ಮಾಯೆಯ ಆಟವನ್ನು ಮನೋರಂಜನೆಯೆಂದು ತಿಳಿದು ನೋಡುವಂತಹ ಮಾಸ್ಟರ್ ರಚೈತ ಭವ

ಮಾಯೆಯು ಎಷ್ಟಾದರೂ ತನ್ನ ಬಣ್ಣವನ್ನು ತೋರಿಸಲಿ, ನಾನು ಮಾಯಾಪತಿ ಆಗಿದ್ದೇನೆ, ಮಾಯೆಯು ರಚನೆಯಾಗಿದೆ, ನಾನು ಮಾಸ್ಟರ್ ರಚೈತನಾಗಿದ್ದೇನೆ ಎಂಬ ಸ್ಮೃತಿಯಿಂದ ಮಾಯೆಯ ಆಟವನ್ನು ನೋಡಿರಿ, ಆಟದಲ್ಲಿ ಸೋಲನ್ನು ಅನುಭವಿಸಬಾರದು. ಅದನ್ನು ಮನೋರಂಜನೆಯೆಂದು ತಿಳಿದು ಸಾಕ್ಷಿಯಾಗಿದ್ದು ನೋಡುತ್ತಾ ಇರುತ್ತೀರೆಂದರೆ ಮೊದಲ ನಂಬರಿನಲ್ಲಿ ಬಂದುಬಿಡುತ್ತೀರಿ. ಅಂತಹವರಿಗಾಗಿ ಮಾಯೆಯ ಯಾವುದೇ ಸಮಸ್ಯೆಯು, ಸಮಸ್ಯೆಯೆನಿಸುವುದಿಲ್ಲ, ಯಾವುದೇ ಪ್ರಶ್ನೆಯೂ ಇರುವುದಿಲ್ಲ. ಸದಾ ಸಾಕ್ಷಿಯಾಗಿದ್ದು ಹಾಗೂ ತಂದೆಯ ಜೊತೆಯ ಸ್ಮೃತಿಯಿಂದ ವಿಜಯಿಯಾಗಿಬಿಡುತ್ತೀರಿ.

ಸ್ಲೋಗನ್:
ಮನಸ್ಸನ್ನು ಶೀತಲ, ಬುದ್ಧಿಯನ್ನು ದಯಾಹೃದಯಿ ಹಾಗೂ ಮುಖವನ್ನು ಮಧುರವನ್ನಾಗಿ ಮಾಡಿಕೊಳ್ಳಿರಿ.