15.09.20         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ತಂದೆಯು ನಿಮಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಡಲು ಬಂದಿದ್ದಾರೆ, ಇದರಿಂದ ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೀರಿ".

ಪ್ರಶ್ನೆ:
ಸಿಂಹಿಣಿ ಶಕ್ತಿಯರೇ ಯಾವ ಮಾತನ್ನು ಸಾಹಸದಿಂದ ತಿಳಿಸಿಕೊಡುವರು?

ಉತ್ತರ:
ಅನ್ಯ ಧರ್ಮದವರಿಗೆ ಈ ಮಾತನ್ನು ತಿಳಿಸಬೇಕಾಗಿದೆ - ತಂದೆಯು ತಿಳಿಸುತ್ತಾರೆ, ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ, ಪರಮಾತ್ಮನೆಂದಲ್ಲ. ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಮುಕ್ತಿಧಾಮದಲ್ಲಿ ಹೋಗುವಿರಿ. ಪರಮಾತ್ಮನೆಂದು ತಿಳಿಯುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ಬಹಳ ಸಾಹಸದಿಂದ ಸಿಂಹಿಣಿ ಶಕ್ತಿಯರೇ ತಿಳಿಸಿಕೊಡುವರು. ತಿಳಿಸಿಕೊಡುವುದಕ್ಕೂ ಅಭ್ಯಾಸ ಬೇಕು.

ಗೀತೆ:
ನಯನಹೀನನಿಗೆ ದಾರಿ ತೋರಿಸು ಪ್ರಭು.....

ಓಂ ಶಾಂತಿ.
ಈ ಆತ್ಮಿಕ ನೆನಪಿನ ಯಾತ್ರೆಯಲ್ಲಿ ಕಷ್ಟವೆನಿಸುತ್ತದೆಯಂದು ಮಕ್ಕಳು ಅನುಭವ ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ಅಲ್ಲಿ-ಇಲ್ಲಿ ಅಲೆದಾಡಿ ಮೋಸವನ್ನೇ ಹೊಂದುತ್ತಾರೆ. ಅನೇಕ ಪ್ರಕಾರದ ಯಜ್ಞ, ಜಪ-ತಪ, ಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ. ಇದರ ಕಾರಣವೇ ಬ್ರಹ್ಮನ ರಾತ್ರಿಯಂದು ಹೇಳಲಾಗುತ್ತದೆ. ಅರ್ಧಕಲ್ಪ ರಾತ್ರಿ, ಅರ್ಧಕಲ್ಪ ದಿನ. ಬ್ರಹ್ಮನು ಒಬ್ಬರೇ ಇರುವುದಿಲ್ಲ ಅಲ್ಲವೆ, ಪ್ರಜಾಪಿತ ಬ್ರಹ್ಮನಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರ ಮಕ್ಕಳು ಕುಮಾರ-ಕುಮಾರಿಯರಿರುವರು ಆದರೆ ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯೇ ಮಕ್ಕಳಿಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ ಇದರಿಂದ ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಕ್ಕಿದೆ. ನೀವು ಕಲ್ಪದ ಮೊದಲೂ ಸಹ ಬ್ರಾಹ್ಮಣರಾಗಿದ್ದಿರಿ, ಸತ್ಯಯುಗದಲ್ಲಿ ದೇವತೆಗಳಾಗಿದ್ದಿರಿ. ಯಾರಾಗಿದ್ದರೋ ಅವರೇ ಈಗಲೂ ಆಗುವರು. ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ನೀವೇ ಪೂಜ್ಯರು ಮತ್ತು ಪೂಜಾರಿಗಳಾಗುತ್ತೀರಿ. ಆಂಗ್ಲ ಭಾಷೆಯಲ್ಲಿ ಪೂಜ್ಯರಿಗೆ ವರ್ಷಿಪ್ವರ್ಧಿ, ಪೂಜಾರಿಗಳಿಗೆ ವರ್ಷಿಪರ್ ಎಂದು ಹೇಳಲಾಗುತ್ತದೆ. ಭಾರತವೇ ಅರ್ಧಕಲ್ಪ ಪೂಜಾರಿಯಾಗುತ್ತದೆ. ಆತ್ಮವೂ ಸಹ ಒಪ್ಪುತ್ತದೆ, ನಾವು ಪೂಜ್ಯರಾಗಿದ್ದೆವು ಮತ್ತೆ ನಾವೇ ಪೂಜಾರಿಯಾಗಿದ್ದೇವೆ. ಪೂಜ್ಯರಿಂದ ಪೂಜಾರಿ ಮತ್ತೆ ಪೂಜ್ಯರಾಗುತ್ತೇವೆ. ತಂದೆಯಂತೂ ಪೂಜ್ಯ, ಪೂಜಾರಿಯಾಗುವುದಿಲ್ಲ. ನಾವು ಪೂಜ್ಯ, ಪಾವನರು ಸೋ ದೇವಿ-ದೇವತೆಗಳಾಗಿದ್ದೆವು, ಮತ್ತೆ 84 ಜನ್ಮಗಳ ನಂತರ ಸಂಪೂರ್ಣ ಪತಿತ, ಪೂಜಾರಿಗಳಾಗುತ್ತೀರಿ ಎಂದು ನೀವು ಹೇಳುತ್ತೀರಿ. ಈಗ ಭಾರತವಾಸಿಗಳೇ ಯಾರು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದರು, ಅವರಿಗೂ ಸಹ ತಮ್ಮ ಧರ್ಮದ ಬಗ್ಗೆ ಏನೂ ತಿಳಿದಿಲ್ಲ. ನಿಮ್ಮ ಈ ಮಾತುಗಳನ್ನು ಎಲ್ಲಾ ಧರ್ಮದವರು ತಿಳಿದುಕೊಳ್ಳುವುದಿಲ್ಲ. ಯಾರು ಈ ಧರ್ಮದಿಂದ ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆಯೋ ಅವರೇ ಬರುವರು. ಹೀಗೆ ಅನೇಕರು ಮತಾಂತರಗೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ಯಾರು ಶಿವನ ಮತ್ತು ದೇವತೆಗಳ ಪೂಜಾರಿಗಳಿದ್ದಾರೆಯೋ ಅವರಿಗೆ ಸಹಜವಾಗುತ್ತದೆ. ಅನ್ಯ ಧರ್ಮದವರು ತಲೆ ಕೆಡಿಸಿಕೊಳ್ಳುತ್ತಾರೆ, ಯಾರು ಈ ಧರ್ಮದಿಂದ ಹೋಗಿರುವರೋ ಅವರಿಗೆ ಮಾತ್ರ ಇದು ಅರ್ಥವಾಗುವುದು ಮತ್ತು ಬಂದು ತಿಳಿದುಕೊಳ್ಳುವ ಪ್ರಯತ್ನ ಪಡುತ್ತಾರೆ ಇಲ್ಲವೆಂದರೆ ಈ ಜ್ಞಾನವನ್ನು ಒಪ್ಪುವುದೇ ಇಲ್ಲ. ಆರ್ಯ ಸಮಾಜಿಗಳಿಂದಲೂ ಅನೇಕರು ಬಂದಿದ್ದಾರೆ, ಸಿಖ್ಖರೂ ಬಂದಿದ್ದಾರೆ, ಆದಿ ಸನಾತನ ದೇವಿ-ದೇವತಾ ಧರ್ಮದಿಂದ ಯಾರು ಹೋಗಿದ್ದಾರೆಯೋ ಅವರು ಮತ್ತೆ ತಮ್ಮ ಧರ್ಮದಲ್ಲಿ ಖಂಡಿತ ಬರಬೇಕಾಗುವುದು. ಕಲ್ಪವೃಕ್ಷದಲ್ಲಿಯೂ ಬೇರೆ-ಬೇರೆ ವಿಭಾಗಗಳಿವೆ. ಹೀಗೆ ಕಲ್ಪದ ನಂತರವೂ ನಂಬರ್ವಾರ್ ಆಗಿ ಬರುತ್ತಾರೆ, ರೆಂಬೆ-ಕೊಂಬೆಗಳು ಬರುತ್ತಿರುತ್ತವೆ. ಅವರು ಈಗೀಗ ಬರುವ ಕಾರಣ ಮತ್ತು ಪವಿತ್ರ ಆತ್ಮಗಳಾಗಿರುವ ಕಾರಣ ಸ್ವಲ್ಪ ಸಮಯ ಅವರ ಪ್ರಭಾವವಿರುತ್ತದೆ. ಈ ಸಮಯದಲ್ಲಿ ದೇವಿ-ದೇವತಾ ಧರ್ಮದ ಬುನಾದಿಯೇ ಇಲ್ಲ, ಅದನ್ನು ಈಗ ಮತ್ತೆ ಹಾಕಬೇಕಾಗಿದೆ. ಸಹೋದರ-ಸಹೋದರಿಯರನ್ನಾಗಿ ಮಾಡಿಕೊಳ್ಳಲೇಬೇಕಾಗುವುದು. ನಾವು ಒಬ್ಬ ತಂದೆಯ ಮಕ್ಕಳು ಎಲ್ಲಾ ಆತ್ಮಗಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಮತ್ತೆ ಶರೀರದ ಲೆಕ್ಕದಲ್ಲಿ ಸಹೋದರ-ಸಹೋದರಿಯರಾಗುತ್ತೇವೆ. ಈಗ ಹೊಸ ಸೃಷ್ಟಿಯ ಸ್ಥಾಪನೆಯಾಗುತ್ತಿದೆ. ಮೊಟ್ಟ ಮೊದಲು ಬ್ರಾಹ್ಮಣರಿದ್ದೀರಿ, ಹೊಸ ಸೃಷ್ಟಿಯ ಸ್ಥಾಪನೆಗೆ ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಬೇಕು. ಬ್ರಹ್ಮಾರವರ ಮೂಲಕ ಬ್ರಾಹ್ಮಣರಾಗುತ್ತೀರಿ, ಇದಕ್ಕೆ ರುದ್ರ ಜ್ಞಾನ ಯಜ್ಞವೆಂದೂ ಹೇಳಲಾಗುವುದು ಅಂದಮೇಲೆ ಇದರಲ್ಲಿ ಬ್ರಾಹ್ಮಣರು ಅವಶ್ಯವಾಗಿ ಬೇಕಾಗಿದೆ. ಪ್ರಜಾಪಿತ ಬ್ರಹ್ಮನ ಸಂತಾನರು ಖಂಡಿತ ಬೇಕಾಗಿದೆ. ತಂದೆಯು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಬ್ರಾಹ್ಮಣರು ಮೊಟ್ಟ ಮೊದಲನೇ ನಂಬರಿನಲ್ಲಿ ಶಿಖೆಗೆ ಸಮಾನರಾಗಿದ್ದೀರಿ. ಆದಂ ಬೀಬಿ, ಆಡಂ ಈವ್ನ್ನು ಎಲ್ಲರೂ ಒಪ್ಪುತ್ತಾರೆ. ಈ ಸಮಯದಲ್ಲಿ ನೀವು ಪೂಜಾರಿಗಳಿಂದ ಪೂಜ್ಯರಾಗುತ್ತಿದ್ದೀರಿ. ಎಲ್ಲದಕ್ಕಿಂತ ಒಳ್ಳೆಯ ನೆನಪಾರ್ಥ ಮಂದಿರವು ದಿಲ್ವಾಡಾ ಮಂದಿರವಾಗಿದೆ. ಅದರಲ್ಲಿ ಕೆಳಗಡೆ ತಪಸ್ಸಿನಲ್ಲಿ ಕುಳಿತಿದ್ದಾರೆ, ಮೇಲೆ ರಾಜಧಾನಿಯಿದೆ ಮತ್ತು ಇಲ್ಲಿ ಚೈತನ್ಯದಲ್ಲಿ ಕುಳಿತಿದ್ದೀರಿ. ಈ ಮಂದಿರವು ಸಮಾಪ್ತಿಯಾಗುತ್ತದೆ ಮತ್ತೆ ಭಕ್ತಿಮಾರ್ಗದಲ್ಲಿ ಪುನಃ ನಿರ್ಮಾಣವಾಗುತ್ತದೆ.

ನೀವು ತಿಳಿದುಕೊಂಡಿದ್ದೀರಿ - ನಾವೀಗ ರಾಜಯೋಗವನ್ನು ಕಲಿಯುತ್ತಿದ್ದೇವೆ ನಂತರ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ. ಅದು ಜಡ ಮಂದಿರ, ನೀವು ಚೈತನ್ಯದಲ್ಲಿ ಕುಳಿತಿದ್ದೀರಿ. ಮುಖ್ಯ ಮಂದಿರವು ಇದು ಬಹಳ ಸರಿಯಾಗಿ ಮಾಡಲ್ಪಟ್ಟಿದೆ. ಇಲ್ಲಿ ಸ್ವರ್ಗವನ್ನು ಮೇಲೆ ತೋರಿಸಿದ್ದಾರೆ. ಇಲ್ಲದಿದ್ದರೆ ಮತ್ತೆಲ್ಲಿ ತೋರಿಸುವುದು? ಆದ್ದರಿಂದ ಮೇಲ್ಛಾವಣೆಯಲ್ಲಿ ಸ್ವರ್ಗವನ್ನು ತೋರಿಸಿದ್ದಾರೆ, ಇದರ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಿಕೊಡಬಹುದಾಗಿದೆ. ತಿಳಿಸಿ, ಭಾರತವೇ ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಈ ಧರ್ಮದವರು ಕೂಡಲೇ ಅರಿತುಕೊಳ್ಳುತ್ತಾರೆ. ಹಿಂದೂಗಳಲ್ಲಿಯೂ ನೋಡಿದಾಗ ಅನೇಕ ಪ್ರಕಾರದ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಅವರನ್ನು ಹೊರ ತೆಗೆಯುವುದರಲ್ಲಿ ನೀವು ಬಹಳ ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ ಸಾಕು, ಮತ್ತೇನನ್ನೂ ಮಾತನಾಡಲೇಬಾರದು. ಯಾರಿಗೆ ಇದರ ಅಭ್ಯಾಸವಿಲ್ಲವೋ ಅವರು ಮಾತನಾಡಲೂಬಾರದು. ಇಲ್ಲದಿದ್ದರೆ ಬ್ರಹ್ಮಾಕುಮಾರ-ಕುಮಾರಿಯರ ಹೆಸರನ್ನು ಕೆಡಿಸಿ ಬಿಡುತ್ತೀರಿ. ಒಂದುವೇಳೆ ಅನ್ಯ ಧರ್ಮದವರಾಗಿದ್ದರೆ ತಿಳಿಸಿ - ಒಂದುವೇಳೆ ನೀವು ಮುಕ್ತಿಧಾಮದಲ್ಲಿ ಹೋಗಲು ಬಯಸುತ್ತೀರೆಂದರೆ ತನ್ನನ್ನು ಆತ್ಮನೆಂದು ತಿಳಿಯಿರಿ, ತಮ್ಮನ್ನು ಪರಮಾತ್ಮನೆಂದು ತಿಳಿಯಬೇಡಿ. ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಕಳೆಯುತ್ತವೆ ಮತ್ತು ಮುಕ್ತಿಧಾಮದಲ್ಲಿ ಹೋಗುತ್ತಿರಿ. ನಿಮಗಾಗಿ ಈ ಮನ್ಮನಾಭವದ ಮಂತ್ರವೇ ಸಾಕು ಆದರೆ ಮಾತನಾಡುವ ಸಾಹಸವಿರಬೇಕು. ಸಿಂಹಿಣಿ ಶಕ್ತಿಯರೇ ಸವೀಸ್ ಮಾಡುತ್ತಾರೆ. ಸನ್ಯಾಸಿಗಳು ವಿದೇಶಕ್ಕೆ ಹೋಗಿ ವಿದೇಶಿಯರನ್ನೂ ಸಹ ನಿಮಗೆ ನಾವು ಆಧ್ಯಾತ್ಮಿಕ ಜ್ಞಾನವನ್ನು ತಿಳಿಸುತ್ತೇವೆಂದು ಕರೆದುಕೊಂಡು ಬರುತ್ತಾರೆ ಆದರೆ ಅವರಂತೂ ತಂದೆಯನ್ನೇ ತಿಳಿದುಕೊಂಡಿಲ್ಲ, ಬ್ರಹ್ಮತತ್ವವನ್ನೂ ಭಗವಂತನೆಂದು ತಿಳಿದು ಇದನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಹೇಗೆ ಯಾವುದಾದರೂ ಪಕ್ಷಿಯನ್ನು ತನ್ನ ಪಂಜರದಲ್ಲಿ ಹಾಕಿದಂತೆ, ಕೇವಲ ಈ ಮಂತ್ರವನ್ನು ಕೊಟ್ಟು ಬಿಡುತ್ತಾರೆ. ಆದ್ದರಿಂದ ಇಂತಹವರಿಗೆ ತಿಳಿಸುವುದರಲ್ಲಿಯೂ ಸಮಯ ಹಿಡಿಸುತ್ತದೆ. ತಂದೆಯೂ ತಿಳಿಸಿದ್ದರು, ಪ್ರತಿಯೊಂದು ಚಿತ್ರದ ಮೇಲೆ ಶಿವ ಭಗವಾನುವಾಚ ಎಂದು ಬರೆಯಲ್ಪಟ್ಟಿರಲಿ.

ನಿಮಗೆ ತಿಳಿದಿದೆ - ಈ ಪ್ರಪಂಚದಲ್ಲಿ ಮಾಲೀಕನ ಪರಿಚಯವಿಲ್ಲದ ಕಾರಣ ಎಲ್ಲರೂ ಅನಾಥರಾಗಿದ್ದಾರೆ. ನೀವು ಮಾತಾಪಿತಾ...... ಎಂದು ಕರೆಯುತ್ತಾರೆ. ಒಳ್ಳೆಯದು - ಅದರ ಅರ್ಥವೇನು? ನಿಮ್ಮ ಕೃಪೆಯಿಂದ ಆಪಾರ ಸುಖ ಸಿಗುವುದೆಂದು ಕೇವಲ ಹಾಗೆಯೇ ಹೇಳುತ್ತಿರುತ್ತಾರೆ. ಈಗ ತಂದೆಯು ನಿಮಗೆ ಸ್ವರ್ಗದ ಸುಖಕ್ಕಾಗಿ ಓದಿಸುತ್ತಿದ್ದಾರೆ. ಇದಕ್ಕಾಗಿಯೇ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಯಾರು ಮಾಡುವರೋ ಅವರು ಪಡೆಯುವರು. ಈ ಸಮಯದಲ್ಲಂತೂ ಎಲ್ಲರೂ ಪತಿತರಾಗಿದ್ದಾರೆ. ಪಾವನ ಪ್ರಪಂಚವು ಸ್ವರ್ಗವು ಒಂದೇ ಆಗಿದೆ. ಇಲ್ಲಿ ಯಾರೂ ಸತೋಪ್ರಧಾನರಿರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಯಾರೂ ಸತೋಪ್ರಧಾನರಿದ್ದರೋ ಅವರೇ ತಮೋಪ್ರಧಾನ ಪತಿತರಾಗಿ ಬಿಡುತ್ತಾರೆ. ಕ್ರಿಸ್ತನ ಹಿಂದೆ ಅವರ ಧರ್ಮದವರು ಯಾರು ಬರುತ್ತಾರೆಯೋ ಅವರು ಮೊದಲು ಸತೋಪ್ರಧಾನರಾಗಿರುತ್ತಾರಲ್ಲವೆ. ಯಾವಾಗ ಲಕ್ಷಾಂತರ ಅಂದಾಜಿನಲ್ಲಿ ಆಗಿ ಬಿಡುವರೋ ಆಗ ಹೋರಾಡಿ ರಾಜ್ಯವನ್ನು ಪಡೆಯಲು ಸೈನ್ಯವು ತಯಾರಾಗುತ್ತದೆ. ಅವರಿಗೆ ಸುಖವೂ ಕಡಿಮೆ ಮತ್ತು ದುಃಖವೂ ಕಡಿಮೆ. ನಿಮ್ಮ ತರಹದ ಸುಖವು ಯಾರಿಗೂ ಸಿಗಲು ಸಾಧ್ಯವಿಲ್ಲ. ನೀವೀಗ ಸುಖಧಾಮದಲ್ಲಿ ಬರುವುದಕ್ಕಾಗಿ ತಯಾರಾಗುತ್ತಿದ್ದೀರಿ. ಉಳಿದೆಲ್ಲಾ ಧರ್ಮದವರು ಸ್ವರ್ಗದಲ್ಲಿ ಬರುವುದಿಲ್ಲ, ಭಾರತವು ಸ್ವರ್ಗವಾಗಿದ್ದಾಗ ಅದರಂತಹ ಪಾವನ ಖಂಡ ಮತ್ತ್ಯಾವುದೂ ಇರುವುದಿಲ್ಲ. ಯಾವಾಗ ತಂದೆಯು ಬರುವರೋ ಆಗಲೇ ಈಶ್ವರೀಯ ರಾಜ್ಯವು ಸ್ಥಾಪನೆಯಾಗುತ್ತದೆ, ಅಲ್ಲಿ ಯುದ್ಧದ ಮಾತೇ ಇರುವುದಿಲ್ಲ. ಹೊಡೆದಾಡುವುದು, ಜಗಳವಾಡುವುದು ಎಲ್ಲವೂ ಕೊನೆಯಲ್ಲಿ ಆರಂಭವಾಗುತ್ತದೆ. ಭಾರತವಾಸಿಗಳು ಅಷ್ಟು ಹೊಡೆದಾಡಿಲ್ಲ. ಪರಸ್ಪರ ಸ್ವಲ್ಪ ಹೊಡೆದಾಡಿ ಬೇರೆಯಾಗಿ ಬಿಟ್ಟಿದ್ದಾರೆ. ದ್ವಾಪರದಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತಾರೆ. ಈ ಚಿತ್ರ ಇತ್ಯಾದಿಗಳನ್ನು ಮಾಡಿಸುವುದರಲ್ಲಿ ಬಹಳ ಬುದ್ಧಿಯಿರಬೇಕು. ಇದನ್ನೂ ಬರೆಯಬೇಕು - ಭಾರತವು ಯಾವುದು ಸ್ವರ್ಗವಾಗಿತ್ತು ಅದು ಮತ್ತೆ ಹೇಗೆ ನರಕವಾಯಿತು ಎಂಬುದನ್ನು ಬಂದು ತಿಳಿದುಕೊಳ್ಳಿ. ಭಾರತವು ಸದ್ಗತಿಯಲ್ಲಿತ್ತು, ಈಗ ದುರ್ಗತಿಯಲ್ಲಿದೆ. ಈಗ ಸದ್ಗತಿಯನ್ನು ಪಡೆಯಲು ತಂದೆಯ ಜ್ಞಾನವನ್ನು ಪಡೆಯುತ್ತಾರೆ. ಮನುಷ್ಯರಲ್ಲಿ ಈ ಆತ್ಮಿಕ ಜ್ಞಾನವಿರುವುದಿಲ್ಲ, ಇದು ಪರಮಪಿತ ಪರಮಾತ್ಮನಲ್ಲಿರುತ್ತದೆ. ತಂದೆಯೇ ಅತ್ಮಗಳಿಗೆ ಈ ಜ್ಞಾನವನ್ನು ಕೊಡುತ್ತಾರೆ. ಉಳಿದೆಲ್ಲಾ ಶಾಸ್ತ್ರಗಳ ಜ್ಞಾನವನ್ನು ಮನುಷ್ಯರು ಮನುಷ್ಯರಿಗೆ ಕೊಡುತ್ತಾರೆ. ಶಾಸ್ತ್ರಗಳನ್ನೂ ಸಹ ಮನುಷ್ಯರೇ ಬರೆದಿದ್ದಾರೆ, ಮನುಷ್ಯರೇ ಓದಿದ್ದಾರೆ. ಇಲ್ಲಂತೂ ನಿಮಗೆ ಆತ್ಮಿಕ ತಂದೆಯು ಓದಿಸುತ್ತಾರೆ ಮತ್ತು ಆತ್ಮವು ಓದುತ್ತದೆ. ಓದುವುದು ಆತ್ಮವೇ ಅಲ್ಲವೆ. ಆದರೆ ಅಲ್ಲಿ ಬರೆಯುವವರು, ಓದುವವರು ಮನುಷ್ಯರೇ ಆಗಿದ್ದಾರೆ. ಪರಮಾತ್ಮನಿಗಂತೂ ಶಾಸ್ತ್ರಗಳನ್ನು ಓದುವ ಅವಶ್ಯಕತೆಯಿಲ್ಲ. ತಂದೆಯು ತಿಳಿಸುತ್ತಾರೆ - ಈ ಶಾಸ್ತ್ರ ಮೊದಲಾದವುಗಳಿಂದ ಯಾರ ಸದ್ಗತಿಯಾಗುವುದಕ್ಕೂ ಸಾಧ್ಯವಿಲ್ಲ, ನಾನೇ ಬಂದು ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗಬೇಕಾಗಿದೆ. ಈಗಂತೂ ಪ್ರಪಂಚದಲ್ಲಿ ಕೋಟ್ಯಾಂತರ ಮನುಷ್ಯರಿದ್ದಾರೆ, ಮನುಷ್ಯರಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಕೇವಲ 9 ಲಕ್ಷ ಜನಸಂಖ್ಯೆಯಿರುತ್ತದೆ. ಇದು ಬಹಳ ಚಿಕ್ಕ ಸಸಿಯಾಗಿರುವುದು ಅಂದಮೇಲೆ ವಿಚಾರ ಮಾಡಿ - ಇಷ್ಟೆಲ್ಲಾ ಆತ್ಮಗಳು ಎಲ್ಲಿ ಹೋದರು? ಬ್ರಹ್ಮತತ್ವದಲ್ಲಿ ಅಥವಾ ನೀರಿನಲ್ಲಂತೂ ಲೀನವಾಗಲಿಲ್ಲ. ಅವರೆಲ್ಲರೂ ಮುಕ್ತಿಧಾಮದಲ್ಲಿರುತ್ತಾರೆ. ಪ್ರತಿಯೊಂದು ಆತ್ಮವು ಅವಿನಾಶಿಯಾಗಿದೆ, ಅದರಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಅದೆಂದೂ ಅಳಿಸಿ ಹೋಗಲು ಸಾಧ್ಯವಿಲ್ಲ. ಆತ್ಮವು ವಿನಾಶವಾಗುವುದಿಲ್ಲ. ಆತ್ಮವು ಬಿಂದುವಾಗಿದೆ ಬಾಕಿ ನಿರ್ವಾಣದಲ್ಲಿ ಯಾರೂ ಹೋಗುವುದಿಲ್ಲ. ಎಲ್ಲರೂ ಪಾತ್ರವನ್ನಭಿನಯಿಸಲೇಬೇಕಾಗಿದೆ. ಯಾವಾಗ ಎಲ್ಲಾ ಆತ್ಮಗಳು ಬಂದು ಬಿಡುವರೋ ಆಗ ನಾನು ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ತಂದೆಯ ಪಾತ್ರವೇ ಅಂತ್ಯದಲ್ಲಿದೆ. ಹೊಸ ಪ್ರಪಂಚದ ಸ್ಥಾಪನೆ ಮತ್ತೆ ಹಳೆಯ ಪ್ರಪಂಚದ ವಿನಾಶ, ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ನೀವು ಆರ್ಯ ಸಮಾಜಿಗಳ ಗುಂಪಿನವರಿಗೆ ತಿಳಿಸಿದರೆ ಅವರಲ್ಲಿ ಯಾರು ಈ ಧರ್ಮದವರಿರುವರೋ ಅವರಿಗೆ ಬಹಳ ಬೇಗನೆ ನಾಟುತ್ತದೆ - ಅವಶ್ಯವಾಗಿ ಈ ಮಾತು ಸರಿಯಾಗಿದೆ, ಪರಮಾತ್ಮನು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ಭಗವಂತನು ತಂದೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಯಾರಾದರೂ ಆರ್ಯ ಸಮಾಜಿಗಳು ನಿಮ್ಮ ಬಳಿ ಬಂದೇ ಬರುತ್ತಾರಲ್ಲವೆ. ಅದನ್ನೇ ಸರಿ ಎಂದು ಹೇಳುವರು ನೀವು ತಿಳಿಸುತ್ತಾ ಇರಿ ಆಗ ಯಾರು ನಿಮ್ಮ ಕುಲದವರಿರುವರೋ ಅವರು ಬಹಳ ಬೇಗನೆ ಬಂದು ಬಿಡುವರು. ಭಗವಂತ ತಂದೆಯೇ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ, ನಾನು ಪತಿತ-ಪಾವನನಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಮುಕ್ತಿಧಾಮದಲ್ಲಿ ಬಂದು ಬಿಡುವಿರಿ. ಈ ಸಂದೇಶವು ಎಲ್ಲಾ ಧರ್ಮದವರಿಗಾಗಿ ಇದೆ ಆದ್ದರಿಂದ ತಿಳಿಸಿ - ತಂದೆಯು ಹೇಳುತ್ತಾರೆ, ದೇಹದ ಎಲ್ಲಾ ಧರ್ಮಗಳನ್ನೂ ಬಿಟ್ಟು ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನಾನು ಇಂತಹವನಾಗಿದ್ದೇನೆ, ನಾನು ಗುಜರಾತಿನವನಾಗಿದ್ದೇನೆ..... ಇದೆಲ್ಲವನ್ನೂ ಬಿಟ್ಟು ಬಿಡಿ. ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ, ಇದು ಯೋಗಾಗ್ನಿಯಾಗಿದೆ. ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಬೇಕಾಗಿದೆ. ಎಲ್ಲರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಪತಿತ ಪಾವನನು ನಾನೇ ಆಗಿದ್ದೇನೆ. ನೀವೆಲ್ಲರೂ ಪತಿತರಾಗಿದ್ದೀರಿ. ಪಾವನರಾಗದೇ ನಿರ್ವಾಣಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ರಚನೆಯ ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಳ್ಳಬೇಕಾಗಿದೆ. ಪೂರ್ಣ ತಿಳಿದುಕೊಳ್ಳುವುದರಿಂದಲೇ ಉತ್ತಮ ಪದವಿಯನ್ನು ಪಡೆಯುವಿರಿ. ಸ್ವಲ್ಪ ಭಕ್ತಿ ಮಾಡಿದರೂ ಸ್ವಲ್ಪ ಜ್ಞಾನವನ್ನು ತಿಳಿದುಕೊಳ್ಳುತ್ತಾರೆ. ಬಹಳ ಭಕ್ತಿ ಮಾಡಿದರೆ ಬಹಳ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಬೇಕು. ವಾನಪ್ರಸ್ಥಿಗಳಿಗಂತೂ ಇದು ಇನ್ನೂ ಸಹಜವಾಗಿದೆ ಏಕೆಂದರೆ ಗೃಹಸ್ಥ ವ್ಯವಹಾರದಿಂದ ದೂರ ಸರಿಯುತ್ತೀರಿ. 60 ವರ್ಷಗಳ ನಂತರ ವಾನಪ್ರಸ್ಥ ಸ್ಥಿತಿಯಾಗುತ್ತದೆ ಆಗಲೇ ಗುರುಗಳನ್ನು ಮಾಡಿಕೊಳ್ಳುತ್ತಾರೆ. ಇತ್ತೀಚೆಗಂತೂ ಬಾಲ್ಯದಲ್ಲಿಯೇ ಧೀಕ್ಷೆಯನ್ನು ಕೊಡಿಸುತ್ತಾರೆ. ಇಲ್ಲವಾದರೆ ಮೊದಲು ತಂದೆ ಮತ್ತೆ ಶಿಕ್ಷಕ ನಂತರ 60 ವರ್ಷಗಳಾದ ಮೇಲೆ ಗುರುಗಳನ್ನು ಮಾಡಿಕೊಳ್ಳಲಾಗುತ್ತದೆ. ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಈ ಅನೇಕ ಗುರುಗಳಲ್ಲ. ಇವರೆಲ್ಲರದೂ ಹಣ ಸಂಪಾದಿಸುವ ಯುಕ್ತಿಗಳಾಗಿವೆ. ಎಲ್ಲರ ಸದ್ಗತಿ ಮಾಡುವ ಸದ್ಗುರು ಒಬ್ಬರೇ ತಂದೆಯಾಗಿದ್ದಾರೆ, ಆ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ, ಇವೆಲ್ಲದರಿಂದ ಏಣಿಯನ್ನು ಇಳಿಯಲೇಬೇಕಾಗುವುದು. ಜ್ಞಾನ, ಭಕ್ತಿ ಮತ್ತು ಭಕ್ತಿಯ ನಂತರ ವೈರಾಗ್ಯ. ಯಾವಾಗ ಜ್ಞಾನವು ಸಿಗುವುದೋ ಆಗಲೇ ಭಕ್ತಿಯೊಂದಿಗೆ ವೈರಾಗ್ಯ ಬರುತ್ತದೆ. ಈ ಹಳೆಯ ಪ್ರಪಂಚದೊಂದಿಗೆ ನಿಮಗೆ ವೈರಾಗ್ಯವುಂಟಾಗುತ್ತದೆ. ಆದರೆ ಪ್ರಪಂಚವನ್ನು ಬಿಟ್ಟು ಎಲ್ಲಿಗೆ ಹೋಗುತ್ತೀರಿ? ನಿಮಗೆ ತಿಳಿದಿದೆ - ಈ ಪ್ರಪಂಚವೇ ಸಮಾಪ್ತಿಯಾಗುವುದಿದೆ. ಆದ್ದರಿಂದ ಈಗ ಬೇಹದ್ದಿನ ಪ್ರಪಂಚದ ಸನ್ಯಾಸ ಮಾಡಬೇಕಾಗಿದೆ, ಪವಿತ್ರರಾಗದೇ ಮನೆಗೆ ಹೋಗಲು ಸಾಧ್ಯವಿಲ್ಲ. ಪವಿತ್ರರಾಗಲು ನೆನಪಿನ ಯಾತ್ರೆಯು ಬೇಕು. ಭಾರತದಲ್ಲಿ ರಕ್ತದ ನದಿಗಳು ಹರಿದ ನಂತರ ಮತ್ತೆ ಹಾಲಿನ ನದಿಗಳು ಹರಿಯುವವು. ವಿಷ್ಣುವನ್ನೂ ಕ್ಷೀರ ಸಾಗರದಲ್ಲಿ ತೋರಿಸುತ್ತಾರೆ ಅಂದರೆ ಈ ಯುದ್ಧದಿಂದ ಮುಕ್ತಿ-ಜೀವನ್ಮುಕ್ತಿಯ ದ್ವಾರವು ತೆರೆಯುತ್ತದೆ. ನೀವು ಮಕ್ಕಳು ಎಷ್ಟು ಮುಂದುವರೆಯುತ್ತೀರೋ ಅಷ್ಟು ಈ ಸಂದೇಶವು ಹರಡುತ್ತಾ ಹೋಗುವುದು. ಈಗ ಯುದ್ಧವಾಯಿತೆಂದರೆ ಆಯಿತು. ಒಂದು ಬೆಂಕಿಯ ಕಿಡಿಯಿಂದ ನೋಡಿ, ಮೊದಲು ಏನಾಗಿ ಬಿಟ್ಟಿತ್ತು! ಹಾಗೆಯೇ ಕೊನೆಯಲ್ಲಿಯೂ ಸಹ ಯುದ್ಧವಾಗುವುದೆಂದು ಖಂಡಿತ ಅರ್ಥವಾಗುತ್ತದೆ. ಯುದ್ಧವು ನಡೆಯುತ್ತಲೇ ಇರುತ್ತದೆ. ಒಬ್ಬರು ಇನ್ನೊಬ್ಬರಿಗೆ ಯುದ್ಧದಲ್ಲಿ ಸಹಯೋಗಿಗಳಾಗುತ್ತಿರುತ್ತಾರೆ. ನಿಮಗೂ ಸಹ ಹೊಸ ಪ್ರಪಂಚವು ಬೇಕಾಗಿದೆ. ಆದ್ದರಿಂದ ಹಳೆಯ ಪ್ರಪಂಚವು ಖಂಡಿತವಾಗಿಯೂ ಸಮಾಪ್ತಿಯಾಗಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ಆದ್ದರಿಂದ ಈ ಹಳೆಯ ಪ್ರಪಂಚದ ಸನ್ಯಾಸ ಮಾಡಬೇಕಾಗಿದೆ. ಪ್ರಪಂಚವನ್ನು ಬಿಟ್ಟು ಎಲ್ಲಿಗೂ ಹೋಗಬೇಕಾಗಿಲ್ಲ. ಆದರೂ ಇದನ್ನು ಬುದ್ಧಿಯಿಂದ ಮರೆಯಬೇಕಾಗಿದೆ.

2. ನಿರ್ವಾಣಧಾಮದಲ್ಲಿ ಹೋಗಲು ಸಂಪೂರ್ಣ ಪಾವನರಾಗಬೇಕಾಗಿದೆ, ರಚನೆಯ ಆದಿ-ಮಧ್ಯ-ಅಂತ್ಯವನ್ನು ಪೂರ್ಣ ಅರಿತುಕೊಂಡು ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ.

ವರದಾನ:
ಬೇಜವಾಬ್ದಾರಿತನದ ನಿದ್ದೆಗೆ ವಿಛ್ಛೇದನ ಕೊಡುವಂತಹ ನಿದ್ರಾಜೀತ್, ಚಕ್ರವರ್ತಿ ಭವ.

ಸಾಕ್ಷಾತ್ಕಾರ ಮೂರ್ತಿಗಳಾಗಿ ಭಕ್ತರಿಗೆ ಸಾಕ್ಷಾತ್ಕಾರ ಮಾಡಿಸುವುದಕ್ಕಾಗಿ ಅಥವಾ ಚಕ್ರವರ್ತಿಗಳಾಗುವುದಕ್ಕಾಗಿ ನಿದ್ರಾಜೀತ್ ಆಗಿ. ಯಾವಾಗ ವಿನಾಶಕಾಲವನ್ನು ಮರೆಯುವಿರಿ ಆಗ ಬೇಜವಾಬ್ದಾರಿತನದ ನಿದ್ದೆ ಬರುವುದು. ಭಕ್ತರ ಕೂಗನ್ನು ಕೇಳಿ, ದುಃಖಿ ಆತ್ಮಗಳ ದುಃಖದ ಕೂಗನ್ನು ಕೇಳಿ, ಬಾಯಾರಿರುವ ಆತ್ಮರ ಪ್ರಾರ್ಥನೆಯ ಧ್ವನಿಯನ್ನು ಕೇಳಿ ಆಗ ಎಂದೂ ಸಹ ಬೇಜವಾಬ್ದಾರಿತನದ ನಿದ್ದೆ ಬರುವುದಿಲ್ಲ. ಆದ್ದರಿಂದ ಈಗ ಸದಾ ಬೆಳಗುತ್ತಿರುವ ಜ್ಯೋತಿಯಾಗಿ ಬೇಜವಾಬ್ದಾರಿತನದ ನಿದ್ದೆಗೆ ವಿಛ್ಚೇದನ ಕೊಡಿ ಮತ್ತು ಸಾಕ್ಷಾತ್ಕಾರ ಮೂರ್ತಿಯಾಗಿ.

ಸ್ಲೋಗನ್:
ತನು-ಮನ-ಧನ, ಮನಸ್ಸು, ವಾಣಿ, ಕರ್ಮ ಯಾವುದೇ ಪ್ರಕಾರದಿಂದ ತಂದೆಯ ಕರ್ತವ್ಯದಲ್ಲಿ ಸಹಯೋಗಿಗಳಾಗಿ ಆಗ ಸಹಜಯೋಗಿಗಳಾಗಿ ಬಿಡುವಿರಿ.