15.10.21         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಕರ್ಮ ಮಾಡುತ್ತಾ ಸ್ವಯಂನ್ನು ಪ್ರಿಯತಮೆಯೆಂದು ತಿಳಿದು ನಾನೊಬ್ಬ ಪ್ರಿಯತಮನನ್ನು ನೆನಪು ಮಾಡಿರಿ, ನೆನಪಿನಿಂದಲೇ ನೀವು ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗುತ್ತೀರಿ

ಪ್ರಶ್ನೆ:
ಮಹಾಭಾರತ ಯುದ್ಧದ ಸಮಯದಲ್ಲಿ ನೀವು ಮಕ್ಕಳಿಗೂ ತಂದೆಯ ಯಾವ ಆಜ್ಞೆ ಅಥವಾ ಆದೇಶ ಸಿಕ್ಕಿದೆ?

ಉತ್ತರ:
ಮಕ್ಕಳೇ, ತಂದೆಯ ಆದೇಶವಾಗಿದೆ - ದೇಹೀ-ಅಭಿಮಾನಿಗಳಾಗಿರಿ. ಎಲ್ಲರಿಗೆ ಸಂದೇಶ ನೀಡಿ - ಈಗ ತಂದೆ ಮತ್ತು ರಾಜಧಾನಿಯನ್ನು ನೆನಪು ಮಾಡಿರಿ. ತಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳಿ, ಬಹಳ-ಬಹಳ ಮಧುರರಾಗಿ. ಯಾರಿಗೂ ದುಃಖ ಕೊಡಬೇಡಿ. ನೆನಪಿನಲ್ಲಿರುವ ಹವ್ಯಾಸ ಮಾಡಿಕೊಳ್ಳಿ ಮತ್ತು ಸ್ವದರ್ಶನ ಚಕ್ರಧಾರಿಗಳಾಗಿ. ಮುಂದುವರೆಯುವ ಪುರುಷಾರ್ಥ ಮಾಡಿ.

ಓಂ ಶಾಂತಿ.
ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ಮತ್ತ್ಯಾವುದೇ ಸತ್ಸಂಗದಲ್ಲಿ ಎಲ್ಲಾ ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿರುವುದಿಲ್ಲ. ಇದೊಂದೇ ಸ್ಥಾನವಾಗಿದೆ ಎಲ್ಲಿ ಎಲ್ಲರೂ ನಾವು ತಂದೆಯ ನೆನಪಿನಲ್ಲಿ ಕುಳಿತಿದ್ದೇವೆಂದು ಹೇಳುತ್ತಾರೆ. ಮಕ್ಕಳಿಗೆ ತಿಳಿದಿದೆ - ತಂದೆಯು ಆದೇಶ ನೀಡಿದ್ದಾರೆ. ಎಲ್ಲಿಯವರೆಗೆ ಜೀವಿಸಿರುತ್ತೀರೋ ಅಲ್ಲಿಯವರೆಗೆ ತಂದೆಯನ್ನು ನೆನಪು ಮಾಡುತ್ತಾ ಇರಿ. ಹೇ ಮಕ್ಕಳೇ ಎಂಬ ಮಾತನ್ನು ಪಾರಲೌಕಿಕ ತಂದೆಯೇ ಹೇಳುತ್ತಾರೆ. ಎಲ್ಲಾ ಮಕ್ಕಳು ಕೇಳುತ್ತಿದ್ದೀರಿ, ಕೇವಲ ನೀವು ಮಕ್ಕಳಷ್ಟೇ ಅಲ್ಲ, ಎಲ್ಲರಿಗೂ ಹೇಳುತ್ತೇನೆ. ಮಕ್ಕಳೇ, ತಂದೆಯ ನೆನಪಿನಲ್ಲಿರಿ ಆಗ ನಿಮ್ಮ ಜನ್ಮ-ಜನ್ಮಾಂತರದ ಯಾವ ಪಾಪವಿದೆಯೋ, ಯಾವುದರ ಕಾರಣದಿಂದ ತುಕ್ಕು ಹಿಡಿದಿದೆಯೋ ಅದೆಲ್ಲವೂ ಬಿಟ್ಟು ಹೋಗುವುದು ಮತ್ತು ನೀವಾತ್ಮರು ಸತೋಪ್ರಧಾನರಾಗಿ ಬಿಡುವಿರಿ. ನೀವು ಮೂಲತಃ ಸತೋಪ್ರಧಾನರಾಗಿದ್ದಿರಿ ನಂತರ ಪಾತ್ರವನ್ನು ಅಭಿನಯಿಸುತ್ತಾ - ಅಭಿನಯಿಸುತ್ತಾ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈ ಮಹಾವಾಕ್ಯಗಳನ್ನು ತಂದೆಯ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಲೌಕಿಕ ತಂದೆಗೆ ಭಲೆ 2-4 ಜನ ಮಕ್ಕಳಿರಬಹುದು. ಅವರಿಗೆ ರಾಮ-ರಾಮ ಎಂದು ಹೇಳಿರಿ ಅಥವಾ ಪತಿತ-ಪಾವನ ಸೀತಾರಾಮ ಎಂದು ಹೇಳಿರಿ, ಇಲ್ಲವೆ ಶ್ರೀಕೃಷ್ಣನನ್ನು ನೆನಪು ಮಾಡಿರಿ ಎಂದು ಹೇಳಿ ಕೊಡುತ್ತಾರೆ. ಹೇ ಮಕ್ಕಳೇ, ಈಗ ತಂದೆಯಾದ ನನ್ನನ್ನು ನೆನಪು ಮಾಡಿರಿ ಎಂದು ಹೇಳುವುದಿಲ್ಲ. ತಂದೆಯಂತೂ ಮನೆಯಲ್ಲಿಯೇ ಇರುತ್ತಾರೆ, ನೆನಪು ಮಾಡುವ ಮಾತಿರುವುದಿಲ್ಲ. ಇದನ್ನು ಬೇಹದ್ದಿನ ತಂದೆಯೇ ಜೀವಾತ್ಮರಿಗೆ ಹೇಳುತ್ತಾರೆ. ಆತ್ಮರೇ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಆತ್ಮರ ತಂದೆಯು ಒಂದೇ ಬಾರಿ ಬರುತ್ತಾರೆ, 5000 ವರ್ಷಗಳ ನಂತರ ಆತ್ಮರು ಮತ್ತು ಪರಮಾತ್ಮನು ಮಿಲನ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ಈ ಪಾಠವನ್ನು ಓದಿಸುತ್ತೇನೆ. ಹೇ ಮಕ್ಕಳೇ, ನೀವು ನನ್ನನ್ನು ಹೇ ಪತಿತ-ಪಾವನ ಬನ್ನಿ ಎಂದು ನೆನಪು ಮಾಡುತ್ತಾ ಬಂದಿದ್ದೀರಿ. ನಾನು ಅವಶ್ಯವಾಗಿ ಬರುತ್ತೇನೆ. ಇಲ್ಲದಿದ್ದರೆ ಎಲ್ಲಿಯ ತನಕ ನೆನಪು ಮಾಡುತ್ತಾ ಇರುತ್ತೀರಿ! ಅದಕ್ಕೆ ಮಿತಿಯೂ ಇರಬೇಕಲ್ಲವೆ. ಮನುಷ್ಯರಿಗೆ ಕಲಿಯುಗವು ಯಾವಾಗ ಮುಕ್ತಾಯವಾಗುತ್ತದೆ ಎಂಬುದು ತಿಳಿದಿಲ್ಲ. ಇದನ್ನು ತಂದೆಯೇ ತಿಳಿಸಬೇಕಾಗುತ್ತದೆ. ತಂದೆಯಲ್ಲದೆ ಮತ್ತ್ಯಾರೂ ಸಹ ಹೇ ಮಕ್ಕಳೇ ನನ್ನನ್ನು ನೆನಪು ಮಾಡಿರಿ ಎಂದು ಹೇಳುವುದಿಲ್ಲ. ಮುಖ್ಯ ಮಾತು ನೆನಪಿನದಾಗಿದೆ. ರಚನೆಯ ಚಕ್ರವನ್ನು ನೆನಪು ಮಾಡುವುದೂ ಸಹ ದೊಡ್ಡ ಮಾತಲ್ಲ, ಕೇವಲ ತಂದೆಯನ್ನು ನೆನಪು ಮಾಡುವುದರಲ್ಲಿ ಪರಿಶ್ರಮವಾಗುತ್ತದೆ. ತಂದೆಯು ಹೇಳುತ್ತಾರೆ - ಅರ್ಧಕಲ್ಪ ಭಕ್ತಿಮಾರ್ಗ, ಅರ್ಧಕಲ್ಪ ಜ್ಞಾನ ಮಾರ್ಗವಾಗಿದೆ. ಅರ್ಧಕಲ್ಪ ನೀವು ಜ್ಞಾನದ ಪ್ರಾಲಬ್ಧವನ್ನು ಪಡೆದಿದ್ದೀರಿ ಮತ್ತು ಅರ್ಧಕಲ್ಪ ಭಕ್ತಿಯ ಪ್ರಾಲಬ್ಧವಿದೆ. ಅದು ಸುಖದ ಪ್ರಾಲಬ್ಧ, ಇದು ದುಃಖದ ಪ್ರಾಲಬ್ಧವಾಗಿದೆ. ದುಃಖ ಮತ್ತು ಸುಖದ ಆಟವು ಮಾಡಲ್ಪಟ್ಟಿದೆ, ಹೊಸ ಪ್ರಪಂಚದಲ್ಲಿ ಸುಖ, ಹಳೆಯ ಪ್ರಪಂಚದಲ್ಲಿ ದುಃಖವಿದೆ. ಮನುಷ್ಯರಿಗೆ ಈ ಮಾತುಗಳ ಬಗ್ಗೆ ಏನೂ ತಿಳಿದಿಲ್ಲ. ನಮ್ಮ ದುಃಖ ದೂರ ಮಾಡಿ ಸುಖ ಕೊಡಿ ಎಂದು ಕೇಳುತ್ತಾರೆ. ಅರ್ಧಕಲ್ಪ ರಾವಣ ರಾಜ್ಯವು ನಡೆಯುತ್ತದೆ. ಇದೂ ಸಹ ಯಾರಿಗೂ ತಿಳಿದಿಲ್ಲ, ತಂದೆಯ ವಿನಃ ಮತ್ತ್ಯಾರೂ ದುಃಖವನ್ನು ಕಳೆಯಲು ಸಾಧ್ಯವಿಲ್ಲ. ಶಾರೀರಿಕ ರೋಗಗಳನ್ನು ವೈದ್ಯರು ನಿವಾರಣೆ ಮಾಡುತ್ತಾರೆ, ಅದು ಅಲ್ಪ ಕಾಲಕ್ಕಾಯಿತು, ಇದಂತೂ ಸ್ಥಿರವಾಗಿದೆ ಅರ್ಧ ಕಲ್ಪಕ್ಕಾಗಿ. ಹೊಸ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅವಶ್ಯವಾಗಿ ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಅಂದಮೇಲೆ ಬಾಕಿ ಇಷ್ಟೆಲ್ಲಾ ಆತ್ಮರು ಎಲ್ಲಿರುವರು? ಇದು ಯಾರ ವಿಚಾರದಲ್ಲಿಯೂ ಬರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಇದು ಹೊಸ ವಿದ್ಯೆಯಾಗಿದೆ, ಓದಿಸುವವರೂ ಹೊಸಬರಾಗಿದ್ದಾರೆ. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಇದೂ ಸಹ ನಿಶ್ಚಿತವಾಗಿದೆ, ಸತ್ಯಯುಗದಲ್ಲಿ ಒಂದೇ ಧರ್ಮವಿರುತ್ತದೆ ಉಳಿದೆಲ್ಲವೂ ವಿನಾಶವಾಗುತ್ತವೆ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ, ಸತ್ಯಯುಗದಲ್ಲಿ ಯಾರಿರುತ್ತಾರೆ ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ರಾಜ್ಯವಿತ್ತು, ಇದು ನೆನ್ನೆಯ ಮಾತಾಗಿದೆ, ಇದು 5000 ವರ್ಷಗಳ ಕಥೆಯಾಗಿದೆ. ತಂದೆಯು ತಿಳಿಸುತ್ತಾರೆ 5000 ವರ್ಷಗಳ ಮೊದಲು ಭಾರತದಲ್ಲಿ ಈ ದೇವಿ-ದೇವತೆಗಳ ರಾಜ್ಯವಿತ್ತು, ಅವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪತಿತರಾಗಿದ್ದಾರೆ. ಆದ್ದರಿಂದ ಬಂದು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ. ನಿರಾಕಾರಿ ಪ್ರಪಂಚದಲ್ಲಿ ಎಲಲ ಆತ್ಮರು ಪಾವನರಿರುತ್ತಾರೆ, ನಂತರ ಕೆಳಗೆ ಬಂದು ಪಾತ್ರವನ್ನು ಅಭಿನಯಿಸುವುದರಿಂದ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಸತೋಪ್ರಧಾನರಿಗೆ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ತಮೋಪ್ರಧಾನರು ತಮ್ಮನ್ನು ವಿಕಾರಿಗಳೆಂದು ಕರೆಸಿಕೊಳ್ಳುತ್ತಾರೆ. ಈ ದೇವಿ-ದೇವತೆಗಳು ನಿರ್ವಿಕಾರಿಗಳಾಗಿದ್ದರು, ನಾವು ವಿಕಾರಿಗಳಾಗಿದ್ದೇವೆ ಎಂದು ತಿಳಿಯುತ್ತಾರೆ, ಆದ್ದರಿಂದ ತಂದೆಯು ಹೇಳುತ್ತಾರೆ - ದೇವತೆಗಳ ಪೂಜಾರಿಗಳಿಗೆ ಈ ಜ್ಞಾನವು ಬೇಗನೆ ಕುಳಿತುಕೊಳ್ಳುತ್ತದೆ ಏಕೆಂದರೆ ದೇವತಾ ಧರ್ಮದವರು ಆಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾವೇ ಪೂಜ್ಯರಾಗಿದ್ದೆವು, ಈಗ ನಾವೇ ಪೂಜಾರಿಗಳಾಗಿದ್ದೇವೆ. ಹೇಗೆ ಕ್ರಿಶ್ಚಿಯನ್ನರು ಕ್ರೈಸ್ಟ್ನ ಪೂಜೆ ಮಾಡುತ್ತಾರೆ ಏಕೆಂದರೆ ಆ ಧರ್ಮದವರಾಗಿದ್ದಾರೆ. ನೀವೂ ಸಹ ದೇವತೆಗಳ ಪೂಜಾರಿಗಳಾಗಿದ್ದೀರಿ ಅಂದಮೇಲೆ ಆ ಧರ್ಮದವರಾದಿರಿ. ದೇವತೆಗಳು ನಿರ್ವಿಕಾರಿಗಳಾಗಿದ್ದರು, ಈಗ ವಿಕಾರಿಗಳಾಗಿದ್ದಾರೆ. ವಿಕಾರಕ್ಕಾಗಿಯೇ ಎಷ್ಟೊಂದು ಅತ್ಯಾಚಾರಗಳಾಗುತ್ತವೆ.

ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸದಾ ಸುಖಿಯಾಗುತ್ತೀರಿ. ಇಲ್ಲಿ ಸದಾ ದುಃಖಿಯಾಗಿದ್ದಾರೆ, ಅಲ್ಪಕಾಲದ ಸುಖವಿದೆ. ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದರೂ ಶಬ್ಧದಲ್ಲಿ ಅಂತರವಿದೆಯಲ್ಲವೆ. ಸುಖದ ರಾಜಧಾನಿಯೂ ಇದೆ, ದುಃಖದ ರಾಜಧಾನಿಯೂ ಇದೆ. ತಂದೆಯು ಬಂದಾಗ ವಿಕಾರಿ ರಾಜರ ರಾಜ್ಯಭಾರವು ಸಮಾಪ್ತಿಯಾಗುತ್ತದೆ ಏಕೆಂದರೆ ಇಲ್ಲಿನ ಪ್ರಾಲಬ್ಧವು ಮುಕ್ತಾಯವಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ತಂದೆಯು ಹೇಳುತ್ತಾರೆ - ಹೇಗೆ ನಾನು ಶಾಂತಿಯ ಸಾಗರ, ಪ್ರೀತಿಯ ಸಾಗರನಾಗಿದ್ದೇನೆಯೋ ನಿಮ್ಮನ್ನೂ ಅದೇರೀತಿ ಮಾಡುತ್ತೇನೆ. ಈ ಮಹಿಮೆಯು ಒಬ್ಬ ತಂದೆಯದಾಗಿದೆ. ಯಾವುದೇ ಮನುಷ್ಯರ ಮಹಿಮೆಯಲ್ಲ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಪವಿತ್ರತೆಯ ಸಾಗರನಾಗಿದ್ದಾರೆ. ನಾವಾತ್ಮರೂ ಸಹ ಪರಮಧಾಮದಲ್ಲಿ ಇದ್ದಾಗ ಪವಿತ್ರರಾಗಿರುತ್ತೇವೆ. ಈ ಈಶ್ವರೀಯ ಜ್ಞಾನವು ನೀವು ಮಕ್ಕಳ ಬಳಿಯೇ ಇದೆ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೇಗೆ ಈಶ್ವರನು ಜ್ಞಾನ ಸಾಗರನಾಗಿದ್ದಾರೆ. ಸ್ವರ್ಗದ ಆಸ್ತಿಯನ್ನು ಕೊಡುವವರಾಗಿದ್ದಾರೆ. ಅವರು ಮಕ್ಕಳನ್ನೂ ಸಹ ಅವಶ್ಯವಾಗಿ ತಮ್ಮ ಸಮಾನರನ್ನಾಗಿ ಮಾಡಬೇಕಾಗಿದೆ. ಮೊದಲು ನಿಮ್ಮ ಬಳಿ ತಂದೆಯ ಪರಿಚಯವಿರಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಪರಮಾತ್ಮನಿಗೆ ಇಷ್ಟೊಂದು ಮಹಿಮೆಯಿದೆ, ಅವರೇ ನಮ್ಮನ್ನು ಇಷ್ಠು ಶ್ರೇಷ್ಠರನ್ನಾಗಿ ಮಾಡುತ್ತಾರೆ ಅಂದಮೇಲೆ ತಮ್ಮನ್ನು ಅಂತಹ ಶ್ರೇಷ್ಠರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಇವರಲ್ಲಿ ದೈವೀ ಗುಣಗಳು ಬಹಳ ಚೆನ್ನಾಗಿವೆ, ಹೇಗೆ ಇವರು ದೇವತೆಯಾಗಿದ್ದಾರೆ ಎಂದು ಹೇಳುತ್ತಾರಲ್ಲವೆ. ಯಾರ ಸ್ವಭಾವವಾದರೂ ಶಾಂತ ಸ್ವಭಾವ ಆಗಿರುತ್ತದೆ, ಯಾರನ್ನೂ ಅವಹೇಳನ ಮಾಡುವುದಿಲ್ಲವೆಂದರೆ ಅವರಿಗೆ ಒಳ್ಳೆಯ ವ್ಯಕ್ತಿಗಳೆಂದು ಹೇಳಲಾಗುತ್ತದೆ ಆದರೆ ಅವರು ತಂದೆಯನ್ನು ಮತ್ತು ಸೃಷ್ಟಿಚಕ್ರವನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಬಂದು ನೀವು ಮಕ್ಕಳನ್ನು ಅಮರ ಲೋಕದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಹೊಸ ಪ್ರಪಂಚದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ಇದು ಹಳೆಯ ಪ್ರಪಂಚ, ಅದು ಹೊಸ ಪ್ರಪಂಚವಾಗಿದೆ. ಅಲ್ಲಿ ದೇವಿ-ದೇವತೆಗಳ ರಾಜಧಾನಿಯಿರುತ್ತದೆ, ಕಲಿಯುಗದಲ್ಲಿ ಆ ರಾಜಧಾನಿಯಿಲ್ಲ, ಬಾಕಿ ಅನೇಕ ರಾಜಧಾನಿಗಳಿವೆ. ಈಗ ಪುನಃ ಅನೇಕ ರಾಜಧಾನಿಗಳ ವಿನಾಶ ಮತ್ತು ಒಂದು ರಾಜಧಾನಿಯ ಸ್ಥಾಪನೆಯಾಗಬೇಕಾಗಿದೆ. ಅವಶ್ಯವಾಗಿ ಯಾವಾಗ ಆ ರಾಜಧಾನಿಯು ಇರುವುದಿಲ್ಲವೋ ಆಗಲೇ ತಂದೆಯು ಬಂದು ಸ್ಥಾಪನೆ ಮಾಡುವರು. ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ತಂದೆಯಲ್ಲಿ ಎಷ್ಟೊಂದು ಪ್ರೀತಿಯಿರಬೇಕು. ತಂದೆಯೇನು ಹೇಳುವರೋ ಅದನ್ನು ಅವಶ್ಯವಾಗಿ ಮಾಡಿರಿ. ಮೊದಲನೆಯದಾಗಿ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಮತ್ತು ಸರ್ವೀಸ್ ಮಾಡಿ, ಅನ್ಯರಿಗೆ ಮಾರ್ಗವನ್ನು ತಿಳಿಸಿ. ದೇವಿ-ದೇವತಾ ಧರ್ಮದವರಾಗಿದ್ದರೆ ಅವರಿಗೆ ಖಂಡಿತ ಪ್ರಭಾವ ಬೀರುವುದು. ನಾವು ಒಬ್ಬ ತಂದೆಯ ಮಹಿಮೆಯನ್ನೇ ಮಾಡುತ್ತೇವೆ. ತಂದೆಯಲ್ಲಿ ಗುಣಗಳಿವೆ ಅಂದಮೇಲೆ ತಂದೆಯೇ ಬಂದು ನಮ್ಮನ್ನು ಗುಣವಂತರನ್ನಾಗಿ ಮಾಡುತ್ತಾರೆ. ಹೇಳುತ್ತಾರೆ - ಮಕ್ಕಳೇ, ಬಹಳ ಮಧುರರಾಗಿ, ಪ್ರೀತಿಯಿಂದ ಕುಳಿತು ಎಲ್ಲರಿಗೆ ತಿಳಿಸಿರಿ. ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುವೆನು. ನೀವೀಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಹಳೆಯ ಪ್ರಪಂಚದ ಮಹಾವಿನಾಶವು ಸನ್ಮುಖದಲ್ಲಿ ನಿಂತಿದೆ. ಮೊದಲೂ ಸಹ ಮಹಾಭಾರಿ ಮಹಾಭಾರತ ಯುದ್ಧವಾಗಿತ್ತು. ಭಗವಂತನು ರಾಜಯೋಗವನ್ನು ಕಲಿಸಿದ್ದರು, ಈಗ ಅನೇಕ ಧರ್ಮಗಳಿವೆ ಸತ್ಯಯುಗದಲ್ಲಿ ಒಂದು ಧರ್ಮವಿತ್ತು, ಅದು ಈಗ ಪ್ರಾಯಲೋಪವಾಗಿ ಬಿಟ್ಟಿದೆ. ಈಗ ತಂದೆಯು ಬಂದು ಅನೇಕ ಧರ್ಮಗಳ ವಿನಾಶ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಈ ಯಜ್ಞವನ್ನು ರಚಿಸುತ್ತೇನೆ, ಅಮರಪುರಿಗೆ ಹೋಗುವುದಕ್ಕಾಗಿ ನಿಮಗೆ ಅಮರಕಥೆಯನ್ನು ತಿಳಿಸುತ್ತೇನೆ. ಅಮರಲೋಕಕ್ಕೆ ಹೋಗಬೇಕಾಗಿದೆ ಅಂದಾಗ ಅವಶ್ಯವಾಗಿ ಈ ಮೃತ್ಯುಲೋಕದ ವಿನಾಶವಾಗುವುದು, ತಂದೆಯೇ ಹೊಸ ಪ್ರಪಂಚದ ರಚಯಿತನಾಗಿದ್ದಾರೆ ಆದ್ದರಿಂದ ತಂದೆಯು ಅವಶ್ಯವಾಗಿ ಇಲ್ಲಿಯೇ ಬರಬೇಕಾಗುತ್ತದೆ. ಈಗ ವಿನಾಶ ಜ್ವಾಲೆಯು ಸನ್ಮುಖದಲ್ಲಿ ನಿಂತಿದೆ. ಕೊನೆಯಲ್ಲಿ ಎಲ್ಲರೂ ತಿಳಿದುಕೊಳ್ಳುತ್ತಾರೆ ಆಗ ನಿಜವಾಗಿಯೂ ತಾವು ಸತ್ಯವನ್ನು ಹೇಳುತ್ತೀರಿ, ಇದು ಅದೇ ಮಹಾಭಾರತ ಯುದ್ಧವಾಗಿದೆ. ಇದು ಪ್ರಸಿದ್ಧವಾಗಿದೆ, ಅವಶ್ಯವಾಗಿ ಈ ಸಮಯದಲ್ಲಿ ಭಗವಂತನು ಇದ್ದಾರೆ ಎಂಬುದನ್ನು ಎಲ್ಲರೂ ಹೇಳುವರು. ಭಗವಂತನು ಹೇಗೆ ಬರುತ್ತಾರೆ ಎಂಬುದನ್ನು ನೀವು ತಿಳಿಸಬಲ್ಲಿರಿ. ನೀವು ಎಲ್ಲರಿಗೆ ತಿಳಿಸಿರಿ - ನಮಗೆ ಡೈರೆಕ್ಟ್ ಭಗವಂತನು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿರಿ ಎಂದು ಅವರು ಹೇಳುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಸತೋಪ್ರಧಾನರಾಗಿರುತ್ತಾರೆ, ಈಗ ತಮೋಪ್ರಧಾನರಾಗಿದ್ದಾರೆ. ಈಗ ಪುನಃ ಸತೋಪ್ರಧಾನರಾಗಿರಿ ಆಗ ನೀವು ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗುವಿರಿ.

ತಂದೆಯು ಹೇಳುತ್ತಾರೆ - ಕೇವಲ ನನ್ನ ನೆನಪಿನಿಂದಲೇ ನೀವು ಸತೋಪ್ರಧಾನರಾಗಿ ಸತೋಪ್ರಧಾನ ಪ್ರಪಂಚದ ಮಾಲೀಕರಾಗುವಿರಿ. ನಾವು ಆತ್ಮಿಕ ಮಾರ್ಗದರ್ಶಕರಾಗಿದ್ದೇವೆ, ಮನ್ಮನಾಭವದ ಯಾತ್ರೆ ಮಾಡುತ್ತೇವೆ. ತಂದೆಯು ಬಂದು ಬ್ರಾಹ್ಮಣ ಧರ್ಮ ಸೂರ್ಯವಂಶಿ-ಚಂದ್ರವಂಶಿ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ತಿಳಿಸುತ್ತಾರೆ - ನನ್ನನ್ನು ನೆನಪು ಮಾಡದಿದ್ದರೆ ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ಕಳೆಯುವುದಿಲ್ಲ. ಇದು ಅತಿ ದೊಡ್ಡ ಚಿಂತೆಯಾಗಿದೆ. ಕರ್ಮ ಮಾಡುತ್ತಾ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಲೂ ನನ್ನ ಪ್ರಿಯತಮೆಯರೇ, ಪ್ರಿಯತಮನಾದ ನನ್ನನ್ನು ನೆನಪು ಮಾಡಿರಿ. ಪ್ರತಿಯೊಬ್ಬರೂ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ, ತಂದೆಯನ್ನು ನೆನಪು ಮಾಡಿರಿ, ಯಾವುದೇ ಪತಿತ ಕರ್ಮ ಮಾಡಬೇಡಿ. ಮನೆ-ಮನೆಗೆ ತಂದೆಯ ಸಂದೇಶ ಕೊಡುತ್ತಾ ಇರಿ. ಭಾರತವು ಸ್ವರ್ಗವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ನರಕವಾಗಿದೆ, ನರಕದ ವಿನಾಶಕ್ಕಾಗಿ ಇದು ಅದೇ ಮಹಾಭಾರತ ಯುದ್ಧವಾಗಿದೆ. ಈಗ ಆತ್ಮಾಭಿಮಾನಿಗಳಾಗಿರಿ. ಇದು ತಂದೆಯ ಆಜ್ಞೆಯಾಗಿದೆ, ಒಪ್ಪಿದರೆ ಒಪ್ಪಿಕೊಳ್ಳಿ ಇಲ್ಲದಿದ್ದರೆ ಬಿಟ್ಟು ಬಿಡಿ. ನಾವಂತೂ ಸಂದೇಶವನ್ನು ತಿಳಿಸಲು ಬಂದಿದ್ದೇವೆ. ತಂದೆಯ ಆಜ್ಞೆಯಾಗಿದೆ - ಎಲ್ಲರಿಗೆ ಸಂದೇಶವನ್ನು ತಿಳಿಸಿ. ಯಾವ ಸರ್ವೀಸ್ ಮಾಡುವುದು ಎಂದು ತಂದೆಯೊಂದಿಗೆ ಕೆಲವರು ಕೇಳುತ್ತಾರೆ, ತಂದೆಯು ತಿಳಿಸುತ್ತಾರೆ - ಸಂದೇಶ ಕೊಡುತ್ತಾ ಇರಿ. ತಂದೆಯನ್ನು ನೆನಪು ಮಾಡಿರಿ, ರಾಜಧಾನಿಯನ್ನು ನೆನಪು ಮಾಡಿರಿ. ಅಂತಿಮ ಗತಿ ಸೋ ಗತಿಯಾಗುವುದು. ಮಂದಿರಗಳಲ್ಲಿ ಹೋಗಿರಿ, ಗೀತಾಪಾಠಶಾಲೆಗಳಿಗೆ ಹೋಗಿರಿ, ಅಲ್ಲಿ ಸರ್ವೀಸ್ ಮಾಡಿರಿ. ಮುಂದೆ ಹೋದಂತೆ ಅನೇಕರು ನಿಮ್ಮ ಬಳಿ ಬರುತ್ತಾ ಇರುವರು. ನೀವು ದೇವಿ-ದೇವತಾ ಧರ್ಮದವರನ್ನು ಮೇಲೆತ್ತಬೇಕಾಗಿದೆ.

ತಂದೆಯು ತಿಳಿಸುತ್ತಾರೆ - ಬಹಳ-ಬಹಳ ಮಧುರರಾಗಿರಿ. ನಡವಳಿಕೆಯು ಸರಿಯಿಲ್ಲದಿದ್ದರೆ ಪದವಿ ಭ್ರಷ್ಟವಾಗುವುದು. ಯಾರಿಗೂ ದುಃಖವನ್ನು ಕೊಡಬೇಡಿ, ಸಮಯವು ಬಹಳ ಕಡಿಮೆಯಿದೆ. ಅತಿ ಪ್ರಿಯ ತಂದೆಯನ್ನು ನೆನಪು ಮಾಡಿರಿ, ಅವರಿಂದಲೇ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ಯಾರಿಗಾದರೂ ಜ್ಞಾನವನ್ನು ಹೇಳಲು ಬರದಿದ್ದರೆ ಏಣಿಚಿತ್ರದ ಮುಂದೆ ಕುಳಿತು ಕೇವಲ ವಿಚಾರ ಮಾಡಿರಿ - ನಾವು ಹೀಗೀಗೆ ಜನ್ಮ ಪಡೆಯುತ್ತೇವೆ, ಚಕ್ರವು ಈ ರೀತಿ ಸುತ್ತುತ್ತಾ ಇರುತ್ತದೆ.... ಹೀಗೆ ಚಿಂತನೆ ಮಾಡಿದಾಗ ತಾನಾಗಿಯೇ ಬಂದು ಬಿಡುವುದು. ಯಾವ ಮಾತು ಒಳಗೆ ಇರುತ್ತದೆಯೋ ಅದು ಅವಶ್ಯವಾಗಿ ಹೊರ ಬರುತ್ತದೆ. ನೆನಪು ಮಾಡುವುದರಿಂದ ನಾವು ಪವಿತ್ರರಾಗುತ್ತೇವೆ ಮತ್ತು ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೇವೆ. ನಮ್ಮದು ಈಗ ಏರುವ ಕಲೆಯಾಗಿದೆ, ಅಂದಮೇಲೆ ಆಂತರಿಕ ಖುಷಿಯಿರಬೇಕಾಗಿದೆ. ನಾವು ಮುಕ್ತಿಧಾಮದಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರುತ್ತೇವೆ. ಬಹಳ ದೊಡ್ಡ ಸಂಪಾದನೆಯಾಗಿದೆ. ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿರಿ. ಕೇವಲ ಬುದ್ಧಿಯಿಂದ ನೆನಪು ಮಾಡಿರಿ. ನೆನಪು ಮಾಡುವುದು ಹವ್ಯಾಸವಾಗಿ ಬಿಡಬೇಕು. ಸ್ವದರ್ಶನ ಚಕ್ರಧಾರಿಗಳಾಗಬೇಕು, ಚಲನೆಯು ಸರಿಯಿಲ್ಲದಿದ್ದರೆ ಧಾರಣೆಯಾಗುವುದಿಲ್ಲ. ಅನ್ಯರಿಗೆ ತಿಳಿಸುವುದಕ್ಕೂ ಸಾಧ್ಯವಿಲ್ಲ. ಮುನ್ನಡೆಯುವ ಪುರುಷಾರ್ಥ ಮಾಡಬೇಕಾಗಿದೆ, ಹಿಂದೆ ಸರಿಯಬಾರದು. ಪ್ರದರ್ಶನಿಯಲ್ಲಿ ಸರ್ವೀಸ್ ಮಾಡುವುದರಿಂದ ಬಹಳ ಖುಷಿಯಿರುವುದು. ಕೇವಲ ತಿಳಿಸಬೇಕಾಗಿದೆ - ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿರಿ. ದೇಹಧಾರಿಗಳನ್ನು ನೆನಪು ಮಾಡುವುದರಿಂದ ವಿಕರ್ಮಗಳಾಗುತ್ತವೆ. ಆಸ್ತಿಯನ್ನು ಕೊಡುವವನು ನಾನಾಗಿದ್ದೇನೆ. ನಾನು ಎಲ್ಲರ ತಂದೆಯಾಗಿದ್ದೇನೆ. ನಾನೇ ಬಂದು ನಿಮ್ಮನ್ನು ಮುಕ್ತಿ-ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಪ್ರದರ್ಶನಿ, ಮೇಳಗಳಲ್ಲಿ ಸರ್ವೀಸ್ ಮಾಡುವ ಬಹಳ ಉಮ್ಮಂಗವಿರಬೇಕು, ಸರ್ವೀಸಿನಲ್ಲಿ ಗಮನ ಕೊಡಬೇಕು. ಮಕ್ಕಳಿಗೆ ತಾನಾಗಿಯೇ ಈ ವಿಚಾರಗಳು ನಡೆಯಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಬ್ಬ ತಂದೆಯಲ್ಲಿಯೇ ಸಂಪೂರ್ಣ ಪ್ರೀತಿಯನ್ನು ಇಡಬೇಕಾಗಿದೆ. ಎಲ್ಲರಿಗೆ ಸತ್ಯ ಮಾರ್ಗವನ್ನು ತಿಳಿಸಬೇಕಾಗಿದೆ, ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ತನ್ನನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ.

2. ಸರ್ವೀಸ್ ಮಾಡುವ ಬಹಳ-ಬಹಳ ಉಮ್ಮಂಗವನ್ನಿಟ್ಟುಕೊಳ್ಳಬೇಕಾಗಿದೆ. ತಮ್ಮ ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಬೇಕು, ಸ್ವದರ್ಶನ ಚಕ್ರಧಾರಿಗಳಾಗಬೇಕು.

ವರದಾನ:
ಮಾಡಿ-ಮಾಡಿಸುವವರ ಸ್ಮೃತಿಯ ಮೂಲಕ ಸಹಜಯೋಗದ ಅನುಭವ ಮಾಡುವಂತಹ ಸಫಲತಾಮೂರ್ತಿ ಭವ.

ಯಾವುದೇ ಕಾರ್ಯವನ್ನು ಮಾಡುತ್ತಿದ್ದರೂ ಇದೇ ಸ್ಮೃತಿಯಿರಲಿ - ಈ ಕಾರ್ಯಕ್ಕಾಗಿ ನಿಮಿತ್ತ ಮಾಡುವಂತಹ ಬೆನ್ನೆಲುಬು (ಸ್ಥೈರ್ಯ ಕೊಡುವವರು) ಯಾರಾಗಿದ್ದಾರೆ. ಸ್ಥೈರ್ಯ ಕೊಡುವವರಿಲ್ಲದೆ ಯಾವುದೇ ಕರ್ಮದಲ್ಲಿ ಸಫಲತೆಯು ಸಿಗಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಕಾರ್ಯವನ್ನು ಮಾಡುತ್ತಿದ್ದರೂ ಇದನ್ನಷ್ಟೇ ಚಿಂತನೆ ಮಾಡಿರಿ - ನಾನು ನಿಮಿತ್ತನಷ್ಟೇ, ಮಾಡಿಸುವವರು ಸ್ವಯಂ ಸರ್ವ ಸಮರ್ಥ ತಂದೆಯಾಗಿದ್ದಾರೆ - ಈ ಸ್ಮೃತಿಯನ್ನು ಇಟ್ಟುಕೊಂಡು ಕರ್ಮ ಮಾಡುತ್ತೀರೆಂದರೆ ಸಹಜ ಯೋಗದ ಅನುಭೂತಿ ಆಗುತ್ತಿರುವುದು. ನಂತರ ಈ ಸಹಜಯೋಗವು ಅಲ್ಲಿ ಸಹಜ ರಾಜ್ಯಾಡಳಿತವನ್ನು ಮಾಡಿಸುತ್ತದೆ. ಇಲ್ಲಿನ ಸಂಸ್ಕಾರವನ್ನು ಅಲ್ಲಿಗೆ ತೆಗೆದುಕೊಂಡು ಹೋಗುವಿರಿ.

ಸ್ಲೋಗನ್:
ಇಚ್ಛೆಗಳು ನೆರಳಿನಂತೆ, ಅದಕ್ಕೆ ತಾವು ಬೆನ್ನು ಮಾಡಿ ಬಿಡುತ್ತೀರೆಂದರೆ ಅದು ತಮ್ಮ ಹಿಂದಿಂದೆಯೇ ಬರುವುದು.