15.11.19         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಶಾಂತಿಯ ಗುಣವು ಎಲ್ಲದಕ್ಕಿಂತ ದೊಡ್ಡ ಗುಣವಾಗಿದೆ, ಆದ್ದರಿಂದ ಶಾಂತಿಯಿಂದ ಮಾತನಾಡಿ, ಅಶಾಂತಿ ಹರಡುವುದನ್ನು ನಿಲ್ಲಿಸಿ

ಪ್ರಶ್ನೆ:
ಸಂಗಮಯುಗದಲ್ಲಿ ತಂದೆಯಿಂದ ಮಕ್ಕಳಿಗೆ ಯಾವ ಆಸ್ತಿಯು ಸಿಗುತ್ತದೆ? ಗುಣವಂತ ಮಕ್ಕಳ ಲಕ್ಷಣಗಳೇನು?

ಉತ್ತರ:
ತಂದೆಯಿಂದ ಮೊದಲನೆಯದಾಗಿ 1. ಜ್ಞಾನ 2. ಶಾಂತಿ 3. ಗುಣಗಳ ಆಸ್ತಿಯು ಸಿಗುತ್ತದೆ. ಗುಣವಂತ ಮಕ್ಕಳು ಸದಾ ಖುಷಿಯಲ್ಲಿರುತ್ತಾರೆ, ಯಾರ ಅವಗುಣವನ್ನೂ ನೋಡುವುದಿಲ್ಲ, ಯಾರ ಪ್ರತಿಯೂ ದೂರು ಕೊಡುವುದಿಲ್ಲ. ಯಾರಲ್ಲಿ ಅವಗುಣಗಳಿವೆಯೋ ಅವರ ಸಂಗವನ್ನೂ ಮಾಡುವುದಿಲ್ಲ. ಯಾರೇನಾದರೂ ಹೇಳಿದರೆ ಅದನ್ನು ಕೇಳಿಯೂ ಕೇಳದಂತೆ ತಮ್ಮ ಮಸ್ತಿಯಲ್ಲಿರುತ್ತಾರೆ.

ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಒಂದಂತೂ ನಿಮಗೆ ತಂದೆಯಿಂದ ಜ್ಞಾನದ ಆಸ್ತಿಯು ಸಿಗುತ್ತದೆ. ತಂದೆಯಿಂದಲೂ ಗುಣಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಈ ಲಕ್ಷ್ಮಿ-ನಾರಾಯಣರ ಚಿತ್ರದಿಂದಲೂ ಗುಣಗಳನ್ನು ತೆಗೆದುಕೊಂಡು ಅಳವಡಿಸಿಕೊಳ್ಳಬೇಕಾಗಿದೆ. ತಂದೆಗೆ ಶಾಂತಿ ಸಾಗರನೆಂದೂ ಹೇಳಲಾಗುತ್ತದೆ, ಅಂದಮೇಲೆ ಶಾಂತಿಯನ್ನೂ ಧಾರಣೆ ಮಾಡಬೇಕಾಗುತ್ತದೆ. ಶಾಂತಿಗಾಗಿಯೇ ತಂದೆಯು ತಿಳಿಸುತ್ತಾರೆ - ಪರಸ್ಪರ ಒಬ್ಬರು ಇನ್ನೊಬ್ಬರೊಂದಿಗೆ ಶಾಂತಿಯಿಂದ ಮಾತನಾಡಿ. ಇದೇ ಗುಣವನ್ನು ಆರಿಸಿಕೊಳ್ಳುವುದಾಗಿದೆ. ಜ್ಞಾನದ ಗುಣವನ್ನು ತೆಗೆದುಕೊಳ್ಳುತ್ತಲೇ ಇದ್ದೀರಿ. ಈ ಜ್ಞಾನವನ್ನು ಓದಬೇಕಾಗಿದೆ, ಇದನ್ನು ಕೇವಲ ಈ ವಿಚಿತ್ರ ತಂದೆಯೇ ಓದಿಸುತ್ತಾರೆ, ವಿಚಿತ್ರ ಆತ್ಮಗಳೇ ಓದುತ್ತೀರಿ. ಇದು ಇಲ್ಲಿನ ಹೊಸ ವಿಶೇಷತೆಯಾಗಿದೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಕೃಷ್ಣನಂತಹ ದೈವೀ ಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ನಾನು ಶಾಂತಿಯ ಸಾಗರನಾಗಿದ್ದೇನೆ ಅಂದಮೇಲೆ ಶಾಂತಿಯನ್ನು ಇಲ್ಲಿಯೇ ಸ್ಥಾಪನೆ ಮಾಡಬೇಕಾಗಿದೆ, ಅಶಾಂತಿಯು ಸಮಾಪ್ತಿಯಾಗಬೇಕಾಗಿದೆ. ನಾವು ಎಲ್ಲಿಯವರೆಗೆ ಶಾಂತಿಯಲ್ಲಿರುತ್ತೇವೆಂದು ತಮ್ಮ ಚಲನೆಯನ್ನು ನೋಡಿಕೊಳ್ಳಬೇಕು. ಬಹುತೇಕ ಮಂದಿ ಪುರುಷರು ಶಾಂತಿಯನ್ನು ಇಷ್ಟ ಪಡುತ್ತಾರೆ. ಶಾಂತಿಯಲ್ಲಿರುವುದು ಬಹಳ ಒಳ್ಳೆಯದೆಂದು ತಿಳಿಯುತ್ತಾರೆ, ಶಾಂತಿಯ ಗುಣವೂ ಸಹ ಬಹಳ ದೊಡ್ಡದಾಗಿದೆ ಆದರೆ ಶಾಂತಿಯು ಹೇಗೆ ಸ್ಥಾಪನೆಯಾಗುವುದು, ಶಾಂತಿಯ ಅರ್ಥವೇನೆಂದು ಭಾರತವಾಸಿ ಮಕ್ಕಳು ತಿಳಿದುಕೊಂಡಿಲ್ಲ. ತಂದೆಯು ಭಾರತವಾಸಿಗಳಿಗಾಗಿಯೇ ಹೇಳುತ್ತಾರೆ. ತಂದೆಯು ಬರುವುದೂ ಭಾರತದಲ್ಲಿಯೇ. ಈಗ ನೀವು ತಿಳಿದುಕೊಳ್ಳುತ್ತೀರಿ - ಅವಶ್ಯವಾಗಿ ಆಂತರಿಕವಾಗಿಯೂ ಶಾಂತಿಯಿರಲೇಬೇಕು. ಯಾರಾದರೂ ಅಶಾಂತಗೊಳಿಸಿದರೆ ತಮ್ಮನ್ನು ಅಶಾಂತ ಮಾಡಿಕೊಳ್ಳುವುದಲ್ಲ. ಅಶಾಂತರಾಗುವುದೂ ಸಹ ಅವಗುಣವಾಗಿದೆ, ಅವಗುಣವನ್ನು ತೆಗೆಯಬೇಕಾಗಿದೆ. ಪ್ರತಿಯೊಬ್ಬರಿಂದ ಗುಣ ಗ್ರಹಣ ಮಾಡಬೇಕಾಗಿದೆ. ಅವಗುಣದ ಕಡೆ ನೋಡಲೂಬಾರದು. ಭಲೆ ಸದ್ದು ಗದ್ದಲವನ್ನು ಕೇಳುತ್ತೀರಿ ಆದರೂ ಸಹ ತಾನು ಶಾಂತಿಯಲ್ಲಿರಬೇಕು, ಏಕೆಂದರೆ ತಂದೆ ಮತ್ತು ದಾದಾ ಇಬ್ಬರೂ ಶಾಂತಿಯಲ್ಲಿರುತ್ತಾರೆ, ಎಂದಿಗೂ ಅಶಾಂತರಾಗುವುದಿಲ್ಲ, ಕೂಗಾಡುವುದಿಲ್ಲ. ಈ ಬ್ರಹ್ಮಾರವರೂ ಕಲಿತಿದ್ದಾರಲ್ಲವೆ. ಎಷ್ಟು ಶಾಂತಿಯಲ್ಲಿರುವರೋ ಅಷ್ಟು ಒಳ್ಳೆಯದು. ಶಾಂತಿಯಿಂದಲೇ ನೆನಪು ಮಾಡಲು ಸಾಧ್ಯ. ಅಶಾಂತಿಯಿಂದಿರುವವರು ನೆನಪು ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಂದ ಗುಣ ಗ್ರಹಣ ಮಾಡಲೇಬೇಕಾಗಿದೆ. ದತ್ತಾತ್ರೇಯ ಮೊದಲಾದವರ ಉದಾಹರಣೆಯು ಇಲ್ಲಿಗೆ ಹೋಲುತ್ತದೆ. ದೇವತೆಗಳಂತಹ ಗುಣವಂತರು ಯಾರೂ ಇರುವುದಿಲ್ಲ. ಒಂದು ವಿಕಾರವೇ ಮೂಲವಾಗಿದೆ, ಅದರ ಮೇಲೆ ನೀವು ವಿಜಯ ಪಡೆಯುತ್ತಿದ್ದೀರಿ, ಪಡೆಯುತ್ತಲೇ ಇರುತ್ತೀರಿ. ಕರ್ಮೇಂದ್ರಿಯಗಳ ಮೇಲೆ ವಿಜಯ ಗಳಿಸಬೇಕಾಗಿದೆ. ಅವಗುಣಗಳನ್ನು ಬಿಟ್ಟು ಬಿಡಬೇಕಾಗಿದೆ. ನೋಡಲೂಬಾರದು, ಹೇಳಲೂಬಾರದು. ಯಾರಲ್ಲಿ ಗುಣಗಳಿದೆಯೋ ಅವರ ಬಳಿಯೇ ಹೋಗಬೇಕಾಗಿದೆ ಮತ್ತು ಬಹಳ ಮಧುರ, ಶಾಂತವಾಗಿರಬೇಕಾಗಿದೆ. ಸ್ವಲ್ಪವೇ ಮಾತನಾಡುವುದರಿಂದ ನೀವು ಎಲ್ಲಾ ಕಾರ್ಯವನ್ನೂ ಮಾಡಬಲ್ಲಿರಿ. ಎಲ್ಲರಿಂದ ಗುಣ ಗ್ರಹಣ ಮಾಡಿ ಗುಣವಂತರಾಗಬೇಕಾಗಿದೆ. ಯಾರು ಬುದ್ಧಿವಂತರು ಹಾಗೂ ಪ್ರಾಮಾಣಿಕರಾಗಿರುವರೋ ಅವರು ಶಾಂತಿಯಲ್ಲಿರಲು ಇಚ್ಛಿಸುತ್ತಾರೆ. ಕೆಲವು ಭಕ್ತರು ಜ್ಞಾನಿಗಳಿಗಿಂತಲೂ ಪ್ರಾಮಾಣಿಕ, ನಿರ್ಮಾಣ ಚಿತ್ತರಾಗಿರುತ್ತಾರೆ. ಬ್ರಹ್ಮಾ ತಂದೆಯಂತೂ ಅನುಭವಿಯಾಗಿದ್ದಾರಲ್ಲವೆ. ಇವರ ಲೌಕಿಕ ತಂದೆಯು ಶಿಕ್ಷಕರಾಗಿದ್ದರು, ಬಹಳ ನಿರ್ಮಾಣ, ಶಾಂತವಾಗಿರುತ್ತಿದ್ದರು, ಎಂದೂ ಕ್ರೋಧದಲ್ಲಿ ಬರುತ್ತಿರಲಿಲ್ಲ. ಹೇಗೆ ಸಾಧು-ಸಂತರ ಮಹಿಮೆ ಮಾಡಲಾಗುತ್ತದೆ, ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಅವರು ಪುರುಷಾರ್ಥ ಮಾಡುತ್ತಿರುತ್ತಾರಲ್ಲವೆ. ಕಾಶಿ-ಹರಿದ್ವಾರದಲ್ಲಿ ಹೋಗಿ ಇರುತ್ತಾರೆ, ಮಕ್ಕಳು ಬಹಳ ಶಾಂತ ಮತ್ತು ಮಧುರರಾಗಿರಬೇಕು. ಇಲ್ಲಿ ಯಾರಾದರೂ ಅಶಾಂತಿಯಲ್ಲಿರುತ್ತಾರೆಂದರೆ ಶಾಂತಿಯನ್ನು ಹರಡಲು ನಿಮಿತ್ತರಾಗಲು ಸಾಧ್ಯವಿಲ್ಲ. ಅಶಾಂತಿಯಲ್ಲಿರುವವರೊಂದಿಗೆ ಮಾತನಾಡಲೂಬಾರದು, ದೂರವಿರಬೇಕು. ಅಂತರವಿದೆಯಲ್ಲವೆ! ಅವರು ಕೊಕ್ಕರೆಗಳು ಮತ್ತು ಇವರು ಹಂಸಗಳು. ಹಂಸಗಳು ಇಡೀ ದಿನ ಮುತ್ತುಗಳನ್ನು ಆರಿಸಿಕೊಳ್ಳುತ್ತಿರುತ್ತಾರೆ. ಏಳುತ್ತಾ-ಕುಳಿತುಕೊಳ್ಳುತ್ತಾ ತಮ್ಮ ಜ್ಞಾನ ಸ್ಮರಣೆ ಮಾಡುತ್ತಾ ಇರಿ. ಇಡೀ ದಿನ ಇದೇ ಬುದ್ಧಿಯಲ್ಲಿರಲಿ - ಯಾರಿಗೆ ಹೇಗೆ ತಿಳಿಸುವುದು, ತಂದೆಯ ಪರಿಚಯವನ್ನು ಹೇಗೆ ಕೊಡುವುದು!

ತಂದೆಯು ತಿಳಿಸಿದ್ದಾರೆ - ಯಾವ ಮಕ್ಕಳೇ ಬರಲಿ ಅವರಿಂದ ಫಾರ್ಮನ್ನು ತುಂಬಿಸಿಕೊಳ್ಳಬೇಕು. ಸೇವಾಕೇಂದ್ರಗಳಲ್ಲಿ ಯಾರಾದರೂ ಕೋರ್ಸ್ನ್ನು ತೆಗೆದುಕೊಳ್ಳಬಯಸುತ್ತಾರೆಂದರೆ ಅವರಿಂದ ಫಾರ್ಮನ್ನು ತುಂಬಿಸಬೇಕು. ಕೋರ್ಸ್ ತೆಗೆದುಕೊಳ್ಳುವುದಿಲ್ಲವೆಂದರೆ ಫಾರ್ಮ್ ತುಂಬಿಸುವ ಅವಶ್ಯಕತೆಯಿಲ್ಲ. ಇವರಲ್ಲಿ ಏನೇನಿದೆ, ಏನೇನನ್ನು ತಿಳಿಸಬೇಕೆಂಬುದನ್ನು ತಿಳಿಯುವುದಕ್ಕಾಗಿಯೇ ಫಾರ್ಮನ್ನು ತುಂಬಿಸಲಾಗುತ್ತದೆ. ಏಕೆಂದರೆ ಪ್ರಪಂಚದಲ್ಲಿ ಈ ಮಾತುಗಳನ್ನು ಯಾರೂ ಅರಿತುಕೊಂಡಿಲ್ಲ ಅಂದಾಗ ಅದೆಲ್ಲವೂ ಫಾರ್ಮ್ನಿಂದಲೇ ತಿಳಿದು ಬರುತ್ತದೆ. ತಂದೆಯೊಂದಿಗೆ ಯಾರಾದರೂ ಮಿಲನ ಮಾಡುತ್ತಾರೆಂದರೂ ಫಾರ್ಮನ್ನು ತುಂಬಿಸಲಾಗುತ್ತದೆ. ಇದರಿಂದ ಅವರು ಏಕೆ ಮಿಲನ ಮಾಡುತ್ತಿದ್ದಾರೆಂಬುದು ತಿಳಿಯುವಂತಿರಬೇಕು. ಯಾರೇ ಬಂದರೂ ಅವರಿಗೆ ಹದ್ದು ಮತ್ತು ಬೇಹದ್ದಿನ ತಂದೆಯ ಪರಿಚಯವನ್ನು ಕೊಡಬೇಕು. ಏಕೆಂದರೆ ನಿಮಗೆ ಬೇಹದ್ದಿನ ತಂದೆಯು ಬಂದು ತಮ್ಮ ಪರಿಚಯವನ್ನು ಕೊಟ್ಟಿದ್ದಾರೆ ಅಂದಮೇಲೆ ಮತ್ತೆ ನೀವು ಅನ್ಯರಿಗೂ ಪರಿಚಯವನ್ನು ಕೊಡುತ್ತಾ ಇರಿ. ಅವರ ಹೆಸರಾಗಿದೆ - ಶಿವ ತಂದೆ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರಲ್ಲವೆ. ಅವರು ಕೃಷ್ಣನಿಗೆ ದೇವತಾಯ ನಮಃ ಎಂದು ಹೇಳುತ್ತಾರೆ, ಶಿವನಿಗೆ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಲು ಅವಶ್ಯವಾಗಿ ಪವಿತ್ರ ಆತ್ಮಗಳಾಗಬೇಕು. ಅದು ಪವಿತ್ರ ಪ್ರಪಂಚವಾಗಿದೆ, ಅದಕ್ಕೆ ಸತೋಪ್ರಧಾನ ಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿಗೆ ಹೋಗಬೇಕೆಂದರೆ ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದು ಬಹಳ ಸಹಜವಾಗಿದೆ. ಯಾರಿಂದಲಾದರೂ ಮೊದಲು ಫಾರ್ಮನ್ನು ತುಂಬಿಸಿಕೊಂಡು ನಂತರ ನೀವು ಕೋರ್ಸ್ ಕೊಡುತ್ತೀರಿ. ಒಂದು ದಿನ ತುಂಬಿಸಿ ಮತ್ತೆ ತಿಳಿಸಿ ಮತ್ತೆ ಫಾರ್ಮನ್ನು ತುಂಬಿಸಿ, ಇದರಿಂದ ನಾವೇನನ್ನು ತಿಳಿಸಿದೆವೋ ಅದು ಅವರಿಗೆ ನೆನಪಿನಲ್ಲಿತ್ತೆ ಅಥವಾ ಇಲ್ಲವೆ ಎಂಬುದು ತಿಳಿದು ಬರುತ್ತದೆ. ನೀವು ನೋಡುತ್ತೀರಿ - ಎರಡು ದಿನದ ಫಾರ್ಮನಲ್ಲಿ ಅಂತರವಂತೂ ಅವಶ್ಯವಾಗಿ ಇರುತ್ತದೆ. ಇವರು ಏನನ್ನು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ನಾವು ತಿಳಿಸಿದುದರ ಮೇಲೆ ವಿಚಾರ ಮಾಡಿದ್ದಾರೆಯೇ ಅಥವಾ ಇಲ್ಲವೆ ಎಂದು ನಿಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಈ ಫಾರ್ಮ್ ಎಲ್ಲರ ಬಳಿಯೂ ಇರಬೇಕು. ತಂದೆಯು ಮುರುಳಿಯಲ್ಲಿ ಸಲಹೆ ನೀಡುತ್ತಾರೆಂದರೆ ದೊಡ್ದ-ದೊಡ್ಡ ಸೇವಾಕೇಂದ್ರಗಳಲ್ಲಿರುವವರು ಇದನ್ನು ಬೇಗನೆ ಪ್ರಯೋಗದಲ್ಲಿ ತರಬೇಕು. ಫಾರ್ಮನ್ನು ಇಟ್ಟುಕೊಳ್ಳಬೇಕು ಇಲ್ಲವೆಂದರೆ ಹೇಗೆ ತಿಳಿಯುತ್ತದೆ! ನೆನ್ನೆಯ ದಿನ ಏನು ಬರೆದಿದ್ದೆನು, ಇಂದು ಏನನ್ನು ಬರೆಯುತ್ತೇನೆಂದು ತಾವೂ ಸಹ ಅನುಭವ ಮಾಡುತ್ತಾರೆ. ಆದ್ದರಿಂದ ಇದು ಬಹಳ ಅತ್ಯವಶ್ಯಕವಾಗಿದೆ. ಬೇರೆ-ಬೇರೆ ಮುದ್ರಿಸಿದರೂ ಪರವಾಗಿಲ್ಲ, ಇಲ್ಲವೆ ಒಂದು ಸ್ಥಾನದಲ್ಲಿ ಮುದ್ರಿಸಿ ಎಲ್ಲಾ ಕಡೆ ಕಳುಹಿಸಬಹುದು. ಇದು ಅನ್ಯರ ಕಲ್ಯಾಣ ಮಾಡುವುದಾಗಿದೆ.

ನೀವು ಮಕ್ಕಳು ಇಲ್ಲಿ ದೇವಿ-ದೇವತೆಗಳಾಗಲು ಬಂದಿದ್ದೀರಿ. ದೇವತಾ ಎಂಬ ಶಬ್ಧವು ಬಹಳ ಶ್ರೇಷ್ಠವಾಗಿದೆ, ದೈವೀ ಗುಣಗಳನ್ನು ಧಾರಣೆ ಮಾಡುವವರಿಗೆ ದೇವತೆಗಳೆಂದು ಕರೆಯಲಾಗುತ್ತದೆ. ಈಗ ನೀವು ದೈವೀ ಗುಣಗಳನ್ನು ಧಾರಣೆ ಮಾಡುತ್ತಿದ್ದೀರಿ. ಆದ್ದರಿಂದ ಎಲ್ಲಿ ಪ್ರದರ್ಶನಿ ಹಾಗೂ ಮ್ಯೂಸಿಯಂಗಳಿರುವುದೋ ಅಲ್ಲಿ ಈ ಫಾರ್ಮ್ ಬಹಳಷ್ಟಿರಬೇಕು, ಇದರಿಂದ ಸ್ಥಿತಿಯು ಹೇಗಿದೆ ಎಂದು ತಿಳಿಯಬಹುದು. ಅವರ ಅನಿಸಿಕೆಯನ್ನು ತಿಳಿದುಕೊಂಡು ನಂತರ ತಿಳಿಸಬೇಕಾಗುತ್ತದೆ. ಮಕ್ಕಳಂತೂ ಸದಾ ಗುಣಗಳನ್ನೇ ಧಾರಣೆ ಮಾಡಬೇಕಾಗಿದೆ ಅವಗುಣಗಳನ್ನಲ್ಲ. ನೀವು ಗುಣವಂತರಾಗುತ್ತೀರಲ್ಲವೆ. ಯಾರಲ್ಲಿ ಬಹಳ ಗುಣಗಳಿರುವುದೋ ಅವರು ಅನ್ಯರಲ್ಲಿಯೂ ಗುಣಗಳನ್ನೇ ತುಂಬಿಸಲು ಸಾಧ್ಯ. ಅವಗುಣಗಳಿರುವವರು ಎಂದೂ ಗುಣ ದಾನ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ ಗೊತ್ತಿದೆ, ಇನ್ನು ಸಮಯವೇನೂ ಬಹಳ ಇಲ್ಲ, ಪುರುಷಾರ್ಥವನ್ನೂ ಬಹಳ ಮಾಡಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ನೀವು ಪ್ರತಿನಿತ್ಯವೂ ಯಾತ್ರೆ ಮಾಡುತ್ತಾ ಇರುತ್ತೀರಿ. ಅತೀಂದ್ರಿಯ ಸುಖವನ್ನು ಗೋಪ-ಗೋಪಿಕೆಯರಿಂದ ಕೇಳಿ ಎಂಬ ಯಾವ ಗಾಯನವಿದೆಯೋ ಇದು ಅಂತಿಮದ ಮಾತಾಗಿದೆ. ಈಗಂತೂ ನಂಬರ್ವಾರ್ ಇದ್ದೀರಿ. ಕೆಲವರಂತೂ ಒಳಗಿಂದೊಳಗೆ ಖುಷಿಯ ಗೀತೆಯನ್ನು ಹಾಡುತ್ತಿರುತ್ತಾರೆ - ಓಹೋ! ಪರಮಪಿತ ಪರಮಾತ್ಮನು ನಮಗೆ ಸಿಕ್ಕಿದ್ದಾರೆ, ಅವರಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಅಂತಹವರ ಬಳಿ ಯಾವುದೇ ದೂರುಗಳಿರಲು ಸಾಧ್ಯವಿಲ್ಲ. ಯಾರಾದರೂ ಏನಾದರೂ ಹೇಳಿದರೂ ಸಹ ಕೇಳಿಯೂ ಕೇಳದಂತೆ ತಮ್ಮ ಮಸ್ತಿಯಲ್ಲಿ ಮಸ್ತರಾಗಿರಬೇಕು. ಯಾವುದೇ ಖಾಯಿಲೆ ಅಥವಾ ದುಃಖ ಮೊದಲಾದುವುಗಳಿದ್ದರೂ ಸಹ ನೀವು ನೆನಪಿನಲ್ಲಿರಿ. ಈ ಲೆಕ್ಕಾಚಾರಗಳನ್ನು ಈಗಲೇ ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ ನಂತರ ನೀವು 21 ಜನ್ಮಗಳಿಗೆ ಹೂಗಳಾಗುತ್ತೀರಿ, ಅಲ್ಲಿ ದುಃಖದ ಮಾತೇ ಇರುವುದಿಲ್ಲ. ಖುಷಿಯಂಥಹ ಔಷಧಿಯಿಲ್ಲ ಎಂದು ಗಾಯನ ಮಾಡಲಾಗುತ್ತದೆ. ಖುಷಿಯಿಂದ ಧಣಿವೆಲ್ಲವೂ ಹಾರಿ ಹೋಗುತ್ತದೆ. ಇದರಲ್ಲಂತೂ ಇದು ಸತ್ಯವಾದ ಖುಷಿಯಾಗಿದೆ, ಅದು ಸುಳ್ಳಾಗಿದೆ. ಅವರು ಹಣ ಸಿಕ್ಕಿತು, ಆಭರಣಗಳು ಸಿಕ್ಕಿತೆಂದರೆ ಖುಷಿಯಾಗುತ್ತಾರೆ ಆದರೆ ಇಲ್ಲಿ ಇದು ಬೇಹದ್ದಿನ ಮಾತಾಗಿದೆ. ನೀವು ಅಪಾರ ಖುಷಿಯಲ್ಲಿರಬೇಕು, ನಿಮಗೆ ತಿಳಿದಿದೆ - ನಾವು 21 ಜನ್ಮಗಳಿಗಾಗಿ ಸದಾ ಸುಖಿಯಾಗಿರುತ್ತೇವೆ ಅಂದಮೇಲೆ ಇದೇ ಸ್ಮೃತಿಯಲ್ಲಿರಿ - ನಾವು ಏನಾಗುವವರಿದ್ದೇವೆ, ಹೃದಯದಿಂದ ಬಾಬಾ ಎಂದು ಹೇಳುವುದರಿಂದಲೇ ದುಃಖವು ದೂರವಾಗಿ ಬಿಡಬೇಕು. ಇದಂತೂ 21 ಜನ್ಮಗಳ ಖುಷಿಯಾಗಿದೆ. ಈಗ ಇನ್ನು ಸ್ವಲ್ಪವೇ ದಿನಗಳಿಗೆ ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ, ಮತ್ತಿನ್ನೇನೂ ನೆನಪಿರಬಾರದು. ಈ ತಂದೆಯು (ಬ್ರಹ್ಮಾ) ತಮ್ಮ ಅನುಭವವನ್ನು ತಿಳಿಸುತ್ತಾರೆ. ಎಷ್ಟೊಂದು ಸಮಾಚಾರಗಳು ಬರುತ್ತವೆ, ಏರುಪೇರುಗಳಾಗುತ್ತವೆ. ತಂದೆಗೆ ಯಾವುದೇ ಮಾತಿನ ದುಃಖವಾಗುವುದಿಲ್ಲ, ಕೇಳಿದರೂ ಸಹ ಒಳ್ಳೆಯದು, ಇದು ನಾಟಕದ ಪೂರ್ವ ನಿಶ್ಚಿತವಾಗಿದೆ, ಇದಂತೂ ಏನೇನೂ ಇಲ್ಲ. ನಾನು ಕುಬೇರನ ಖಜಾನೆಯನ್ನು ಪಡೆಯುತ್ತೇವೆಂದು ತಿಳಿಯುತ್ತಾರೆ. ತಮ್ಮೊಂದಿಗೆ ಮಾತನಾಡುವುದರಿಂದಲೇ ಖುಷಿಯಾಗುತ್ತದೆ, ಬಹಳ ಶಾಂತವಾಗಿರುತ್ತಾರೆ. ಅವರ ಚಹರೆಯೂ ಸಹ ಬಹಳ ಪ್ರಸನ್ನಚಿತ್ತವಾಗಿರುತ್ತದೆ. ವಿದ್ಯಾರ್ಥಿ ವೇತನವು ಸಿಗುತ್ತದೆಯೆಂದರೆ ಚಹರೆಯು ಎಷ್ಟೊಂದು ಪ್ರಸನ್ನಚಿತ್ತವಾಗಿರುತ್ತದೆ, ಹಾಗೆಯೇ ನೀವೂ ಸಹ ಈ ಲಕ್ಷ್ಮಿ-ನಾರಾಯಣರಂತೆ ಹರ್ಷಿತಮುಖಿಯಾಗಿರಲು ಪುರುಷಾರ್ಥ ಮಾಡುತ್ತಿದ್ದೀರಿ. ಇವರಲ್ಲಿ (ಲಕ್ಷ್ಮಿ-ನಾರಾಯಣ) ಜ್ಞಾನವಂತೂ ಇಲ್ಲ. ನಿಮಗೆ ಜ್ಞಾನವಿದೆಯೆಂದರೆ ಖುಷಿಯಿರಬೇಕಲ್ಲವೆ, ಹರ್ಷಿತಮುಖವೂ ಇರಬೇಕು. ಈ ದೇವತೆಗಳಿಗಿಂತ ನೀವು ಬಹಳ ಶ್ರೇಷ್ಠರಾಗಿದ್ದೀರಿ. ಜ್ಞಾನ ಸಾಗರ ತಂದೆಯು ನಮಗೆ ಇಷ್ಟು ಶ್ರೇಷ್ಠ ಜ್ಞಾನವನ್ನು ಕೊಡುತ್ತಾರೆ, ಅವಿನಾಶಿ ಜ್ಞಾನರತ್ನಗಳ ಲಾಟರಿ ಸಿಗುತ್ತಿದೆಯೆಂದರೆ ಎಷ್ಟೊಂದು ಖುಷಿಯಿರಬೇಕು! ಈ ನಿಮ್ಮ ಜನ್ಮವು ವಜ್ರ ಸಮಾನವಾಗಿದೆಯೆಂದು ಗಾಯನವಿದೆ, ಜ್ಞಾನ ಸಾಗರನೆಂದು ತಂದೆಗೇ ಹೇಳಲಾಗುತ್ತದೆ, ಈ ದೇವತೆಗಳಿಗಲ್ಲ. ನೀವು ಬ್ರಾಹ್ಮಣರೇ ಜ್ಞಾನಪೂರ್ಣರಾಗಿದ್ದೀರಿ ಆದ್ದರಿಂದ ನಿಮಗೆ ಜ್ಞಾನದ ಖುಷಿಯಿರುತ್ತದೆ. ಮೊದಲನೆಯದಾಗಿ ತಂದೆಯನ್ನು ಮಿಲನ ಮಾಡುವ ಖುಷಿಯಿರುತ್ತದೆ. ನಿಮ್ಮ ವಿನಃ ಮತ್ತ್ಯಾರಿಗೂ ಖುಷಿಯಿರಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಅಪಾರ ಸುಖವಿರುವುದಿಲ್ಲ. ಭಕ್ತಿಮಾರ್ಗದಲ್ಲಿ ಆಡಂಬರದ ಅಲ್ಪಕಾಲದ ಸುಖವಿರುತ್ತದೆ. ಸತ್ಯಯುಗದ ಹೆಸರೇ ಸ್ವರ್ಗ, ಸುಖಧಾಮವಾಗಿದೆ. ಅಲ್ಲಿ ಸ್ವರ್ಗ ಅಪಾರ ಸುಖ, ಇಲ್ಲಿ ಅಪಾರ ದುಃಖವಿದೆ. ರಾವಣ ರಾಜ್ಯದಲ್ಲಿ ನಾವು ಎಷ್ಟೊಂದು ಪತಿತರಾಗಿದ್ದೇವೆ, ನಿಧಾನ-ನಿಧಾನವಾಗಿ ಕೆಳಗಿಳಿಯುತ್ತಾ ಬಂದಿದ್ದೇವೆ ಎಂದು ಈಗ ಮಕ್ಕಳಿಗೆ ಅರ್ಥವಾಗಿದೆ. ಇದಂತೂ ವಿಷಯ ಸಾಗರವಾಗಿದೆ, ಈಗ ತಂದೆಯು ನಿಮ್ಮನ್ನು ಈ ವಿಷಯ ಸಾಗರದಿಂದ ಹೊರ ತೆಗೆದು ಕ್ಷೀರ ಸಾಗರದೆಡೆಗೆ ಕರೆದುಕೊಂಡು ಹೋಗುತ್ತಾರೆ. ಮಕ್ಕಳಿಗೆ ಇಲ್ಲಿ ಬಹಳ ಮಧುರವೆನಿಸುತ್ತದೆ, ಮತ್ತೆ ಮರೆತು ಹೋಗುವುದರಿಂದ ಸ್ಥಿತಿಯೇನಾಗಿ ಬಿಡುತ್ತದೆ! ತಂದೆಯು ಎಷ್ಟೊಂದು ಖುಷಿಯ ನಶೆಯನ್ನೇರಿಸುತ್ತಾರೆ. ಈ ಜ್ಞಾನಾಮೃತದ ಗಾಯನವೇ ಇದೆ. ಜ್ಞಾನಾಮೃತವನ್ನು ಕುಡಿಯುತ್ತಲೇ ಇರಬೇಕಾಗಿದೆ. ಇಲ್ಲಿ ನಿಮಗೆ ಬಹಳ ಒಳ್ಳೆಯ ನಶೆಯೇರುತ್ತದೆ ಮತ್ತೆ ಹೊರಗೆ ಹೋದಾಗ ಆ ನಶೆಯು ಕಡಿಮೆಯಾಗಿ ಬಿಡುತ್ತದೆ. ಬಾಬಾರವರು (ಬ್ರಹ್ಮಾ) ಸ್ವಯಂ ಅನುಭವ ಮಾಡುತ್ತಾರೆ. ಇಲ್ಲಿ ಮಕ್ಕಳಿಗೆ ಬಹಳ ಒಳ್ಳೆಯ ಅನುಭವವಾಗುತ್ತದೆ - ನಾವು ನಮ್ಮ ಮನೆಗೆ ಹೋಗುತ್ತೇವೆ. ನಾವು ತಂದೆಯ ಶ್ರೀಮತದಂತೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ನಾವು ದೊಡ್ಡ ಯೋಧರಾಗಿದ್ದೇವೆ, ಇದೆಲ್ಲವೂ ಬುದ್ಧಿಯಲ್ಲಿ ಜ್ಞಾನವಿದೆ. ಇದರಿಂದ ನೀವು ಇಷ್ಟೊಂದು ಪದವಿ ಪಡೆಯುತ್ತೀರಿ. ಯಾರು ಓದಿಸುತ್ತಾರೆಂದು ನೋಡಿ! ಬೇಹದ್ದಿನ ತಂದೆ. ಒಮ್ಮೆಲೆ ಪರಿವರ್ತನೆ ಮಾಡಿ ಬಿಡುತ್ತಾರೆ ಅಂದಾಗ ಮಕ್ಕಳಿಗೆ ಹೃದಯದಲ್ಲಿ ಎಷ್ಟೊಂದು ಖುಷಿಯಿರಬೇಕು! ಇದೂ ಸಹ ಮನಸ್ಸಿನಲ್ಲಿ ಬರಬೇಕು - ನಾವು ಅನ್ಯರಿಗೂ ಖುಷಿಯನ್ನು ಕೊಡಬೇಕು, ರಾವಣನಿಂದ ಶಾಪ ಸಿಗುತ್ತದೆ ಮತ್ತು ತಂದೆಯಿಂದ ಆಸ್ತಿಯು ಸಿಗುತ್ತದೆ. ರಾವಣನ ಶಾಪದಿಂದ ನೀವು ಎಷ್ಟೊಂದು ದುಃಖಿ, ಅಶಾಂತರಾಗಿದ್ದೀರಿ. ಬಹಳ ಮಂದಿ ಸಹೋದರರಿಗೆ ಸೇವೆ ಮಾಡಬೇಕೆಂದು ಬಹಳ ಬಯಕೆಯಿದೆ ಆದರೆ ಕಳಶವು ಮಾತೆಯರಿಗೆ ಸಿಗುತ್ತದೆ, ಶಕ್ತಿದಳವಲ್ಲವೆ! ವಂದೇ ಮಾತರಂ ಎಂದು ಗಾಯನವಿದೆ. ಜೊತೆಯಲ್ಲಿ ವಂದೇ ಪಿತರಂ ಇದ್ದೇ ಇದೆ ಆದರೆ ಹೆಸರು ಮಾತೆಯರದಾಗಿದೆ. ಮೊದಲು ಲಕ್ಷ್ಮಿ ನಂತರ ನಾರಾಯಣ, ಮೊದಲು ಸೀತೆ ನಂತರ ರಾಮ. ಇಲ್ಲಿ ಮೊದಲು ಪುರುಷನ ಹೆಸರು ನಂತರ ಸ್ತ್ರೀನ ಹೆಸರನ್ನು ಹಾಕುತ್ತಾರಲ್ಲವೆ. ಇದು ಆಟವಾಗಿದೆಯಲ್ಲವೆ! ತಂದೆಯಂತೂ ಎಲ್ಲವನ್ನೂ ತಿಳಿಸುತ್ತಾರೆ. ಭಕ್ತಿಮಾರ್ಗದ ರಹಸ್ಯವನ್ನೂ ತಿಳಿಸುತ್ತಾರೆ. ಭಕ್ತಿಯಲ್ಲಿ ಏನೇನಾಗುತ್ತದೆ, ಎಲ್ಲಿಯವರೆಗೆ ಜ್ಞಾನವಿರುವುದಿಲ್ಲವೋ ಅಲ್ಲಿಯವರೆಗೆ ಏನೂ ಅರ್ಥವಾಗುವುದಿಲ್ಲ. ಈಗ ನಿಮಗೆ ತಿಳಿದಿದೆ, ನಾವು ಮೊದಲಂತೂ ಹೇಗೆ ಅವಿದ್ಯಾವಂತ ಜಾಟರಾಗಿದ್ದೆವು, ಕೊಳಕಿನಲ್ಲಿ ಬಿದ್ದಿದ್ದೆವು ಈಗ ಎಲ್ಲರ ನಡವಳಿಕೆಯು ಸುಧಾರಣೆಯಾಗುತ್ತದೆ. ನಿಮ್ಮದು ದೈವೀ ನಡವಳಿಕೆಯಾಗುತ್ತಿದೆ. ಪಂಚ ವಿಕಾರಗಳಿಂದ ಆಸುರೀ ನಡುವಳಿಕೆಯಾಗಿ ಬಿಡುತ್ತದೆ. ಎಷ್ಟೊಂದು ಪರಿವರ್ತನೆಯಾಗುತ್ತದೆ ಅಂದಮೇಲೆ ಪರಿವರ್ತನೆಯಲ್ಲಿ ಬರಬೇಕಲ್ಲವೆ. ಶರೀರ ಬಿಟ್ಟು ಹೋದರೆ ಮತ್ತೆ ಪರಿವರ್ತನೆಯಾಗಲು ಸಾಧ್ಯವೆ! ತಂದೆಯಲ್ಲಿ ಶಕ್ತಿಯಿದೆ ಎಷ್ಟೊಂದು ಪರಿವರ್ತನೆಯನ್ನು ತರುತ್ತಾರೆ! ಕೆಲವು ಮಕ್ಕಳು ತಮ್ಮ ಅನುಭವವನ್ನು ತಿಳಿಸುತ್ತಾರೆ - ನಾನು ಬಹಳ ಕಾಮಿಯಾಗಿದ್ದೆನು, ಮಧ್ಯಪಾನ ಮಾಡುತ್ತಿದ್ದೆನು, ನನ್ನಲ್ಲಿ ಬಹಳ ಪರಿವರ್ತನೆಯಾಗಿದೆ ಈಗ ನಾನು ಬಹಳ ಪ್ರೀತಿಯಿಂದಿರುತ್ತೇನೆ - ಹೀಗೆ ಅವರಿಗೆ ಆನಂದ ಭಾಷ್ಪ ಬಂದು ಬಿಡುತ್ತದೆ. ತಂದೆಯು ಬಹಳಷ್ಟು ತಿಳಿಸುತ್ತಾರೆ ಆದರೆ ಇವೆಲ್ಲಾ ಮಾತುಗಳು ಮರೆತು ಹೋಗುತ್ತವೆ. ಇಲ್ಲವೆಂದರೆ ನಾವು ಅನೇಕರ ಕಲ್ಯಾಣ ಮಾಡಬೇಕು, ಮನುಷ್ಯರು ಬಹಳ ದುಃಖಿಯಾಗಿದ್ದಾರೆ, ಅವರಿಗೆ ಮಾರ್ಗವನ್ನು ತೋರಿಸಬೇಕೆಂದು ಖುಷಿಯ ನಶೆಯೇರಿರಬೇಕು. ತಿಳಿಸುವುದಕ್ಕಾಗಿ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ಬಹಳಷ್ಟು ನಿಂದನೆಯನ್ನೂ ಸಹನೆ ಮಾಡಬೇಕಾಗುತ್ತದೆ. ಇವರು ಎಲ್ಲರನ್ನೂ ಸಹೋದರ-ಸಹೋದರಿಯನ್ನಾಗಿ ಮಾಡುತ್ತಾರೆಂದು ಮೊದಲಿನಿಂದಲೂ ಈ ಪ್ರಚಾರವಿದೆ. ಅರೆ! ಸಹೋದರ-ಸಹೋದರಿಯ ಸಂಬಂಧವಂತೂ ಒಳ್ಳೆಯದಲ್ಲವೆ. ನೀವಾತ್ಮಗಳು ಸಹೋದರ-ಸಹೋದರರಾಗಿದ್ದೀರಿ ಆದರೆ ಜನ್ಮ-ಜನ್ಮಾಂತರದಿಂದ ಆ ದೃಷ್ಟಿಯು ಪಕ್ಕಾ ಆಗಿರುವುದರಿಂದ ಅದು ಹೋಗುವುದೇ ಇಲ್ಲ. ತಂದೆಯ ಬಳಿ ಬಹಳ ಸಮಾಚಾರಗಳು ಬರುತ್ತವೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಛೀ ಛೀ ಪ್ರಪಂಚದಿಂದ ನೀವು ಮಕ್ಕಳ ದೂರವಾಗಬೇಕು, ಹೂಗಳಾಗಬೇಕು. ಅನೇಕರು ಜ್ಞಾನವನ್ನು ಕೇಳಿಯೂ ಮರೆತು ಹೋಗುತ್ತಾರೆ, ಎಲ್ಲಾ ಜ್ಞಾನವು ಹಾರಿ ಹೋಗುತ್ತದೆ. ಕಾಮ ಮಹಾಶತ್ರುವಾಗಿದೆಯಲ್ಲವೆ. ಈ ಬಾಬಾರವರಂತೂ ಬಹಳ ಅನುಭವಿಯಾಗಿದ್ದಾರೆ. ಈ ವಿಕಾರಗಳ ಹಿಂದೆ ರಾಜರೂ ಸಹ ತಮ್ಮ ರಾಜ್ಯಭಾಗ್ಯವನ್ನು ಕಳೆದುಕೊಂಡಿದ್ದಾರೆ. ಕಾಮವು ಬಹಳ ಕೆಟ್ಟದ್ದಾಗಿದೆ. ಬಾಬಾ, ಇದು ಬಹಳ ಕಠಿಣ ಶತ್ರುವಾಗಿದೆಯೆಂದು ಎಲ್ಲರೂ ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಕಾಮವನ್ನು ಜಯಿಸುವುದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ ಆದರೆ ಕಾಮ ವಿಕಾರವು ಇಷ್ಟು ಕಠಿಣವಾಗಿದೆ, ಪ್ರತಿಜ್ಞೆ ಮಾಡಿದ ನಂತರವೂ ಮತ್ತೆ ಕೆಳಗೆ ಬೀಳುತ್ತಾರೆ. ಬಹಳ ಪರಿಶ್ರಮದಿಂದ ಕೆಲವರು ಪುನಃ ಸುಧಾರಣೆಯಾಗುತ್ತಾರೆ. ಈ ಸಮಯದಲ್ಲಿ ಇಡೀ ಪ್ರಪಂಚದ ಚಾರಿತ್ರ್ಯವು ಕೆಟ್ಟು ಹೋಗಿದೆ. ಪಾವನ ಪ್ರಪಂಚವು ಯಾವಾಗಿತ್ತು, ಹೇಗಾಯಿತು, ಇವರು ರಾಜ್ಯಭಾಗ್ಯವನ್ನು ಹೇಗೆ ಪಡೆದುಕೊಂಡರು - ಇದನ್ನು ಎಂದೂ ಯಾರೂ ತಿಳಿಸಲು ಸಾಧ್ಯವಿಲ್ಲ. ಮುಂದೆ ಒಂದು ದಿನ ಇಂತಹ ಸಮಯವು ಬರುತ್ತದೆ, ನೀವು ವಿದೇಶಕ್ಕೂ ಹೋಗುತ್ತೀರಿ. ಅವರೂ ಸಹ ಈ ಜ್ಞಾನವನ್ನು ಕೇಳುತ್ತಾರೆ, ಸ್ವರ್ಗವು ಹೇಗೆ ಸ್ಥಾಪನೆಯಾಗುತ್ತದೆ ಎಂದು ಎಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿ ಒಳ್ಳೆಯ ರೀತಿಯಲ್ಲಿವೆ ಅಂದಾಗ ಈಗ ನಿಮಗೆ ಇದೊಂದೇ ಚಿಂತೆ ಮತ್ತು ಚಿಂತನೆಯಿರಬೇಕು ಮತ್ತೆಲ್ಲಾ ಮಾತುಗಳನ್ನು ಮರೆಯಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆದಾಡುತ್ತಾ ಜ್ಞಾನದ ಸ್ಮರಣೆ ಮಾಡಿ, ಮುತ್ತುಗಳನ್ನು ಆರಿಸಿಕೊಳ್ಳುವಂತಹ ಹಂಸಗಳಾಗಬೇಕು. ಎಲ್ಲರಿಂದ ಗುಣ ಗ್ರಹಣ ಮಾಡಬೇಕಾಗಿದೆ. ಒಬ್ಬರು ಇನ್ನೊಬ್ಬರಲ್ಲಿರುವ ಗುಣವನ್ನೇ ಗ್ರಹಣ ಮಾಡಬೇಕಾಗಿದೆ.

2. ತಮ್ಮ ಚಹರೆಯು ಸದಾ ಪ್ರಸನ್ನಚಿತ್ತವನ್ನಾಗಿಟ್ಟುಕೊಳ್ಳಲು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ - ಅಹೋ! ನಾವಂತೂ ಕುಬೇರನ ಖಜಾನೆಗೆ ಮಾಲೀಕರಾಗುತ್ತೇವೆ. ಜ್ಞಾನ ಸಾಗರ ತಂದೆಯ ಮುಖಾಂತರ ನಮಗೆ ಜ್ಞಾನ ರತ್ನಗಳ ಲಾಟರಿಯು ಸಿಗುತ್ತಾ ಇದೆ!

ವರದಾನ:
ಸದಾ ಸಂತುಷ್ಟರಾಗಿದ್ದು ತಮ್ಮ ದೃಷ್ಟಿ, ವೃತ್ತಿ, ಕೃತ್ತಿಯ ಮೂಲಕ ಸಂತುಷ್ಟತೆಯ ಅನುಭೂತಿ ಮಾಡುವಂತಹ ಸಂತುಷ್ಟ ಮಣಿ ಭವ.

ಬ್ರಾಹ್ಮಣ ಕುಲದಲ್ಲಿ ವಿಶೇಷ ಆತ್ಮಗಳು ಅವರೇ ಆಗಿದ್ದಾರೆ ಯಾರು ಸದಾ ಸಂತುಷ್ಟತೆಯ ವಿಶೇಷತೆಯ ಮೂಲಕ ಸ್ವಯಂ ಸಹ ಸಂತುಷ್ಟರಾಗಿರುತ್ತಾರೆ ಮತ್ತು ತಮ್ಮ ದೃಷ್ಠಿ, ವೃತ್ತಿ ಮತ್ತು ಕೃತಿಯ ಮೂಲಕ ಬೇರೆಯವರಿಗೂ ಸಹಾ ಸಂತುಷ್ಟತೆಯ ಅನುಭೂತಿ ಮಾಡಿಸುವುದು, ಅವರೇ ಸಂತುಷ್ಟ ಮಣಿಗಳು ಯಾರು ಸದಾ ಸಂಕಲ್ಪ, ಮಾತು, ಸಂಘಟನೆಯ ಸಂಬಂಧ-ಸಂಪರ್ಕ ಹಾಗೂ ಕರ್ಮದಲ್ಲಿ ಬಾಪ್ದಾದಾರವರ ಮೂಲಕ ತಮ್ಮ ಮೇಲೆ ಸಂತುಷ್ಟತೆಯ ಚಿನ್ನದ ಪುಷ್ಪವೃಷ್ಟಿಯ ಅನುಭವ ಮಾಡುತ್ತಾರೆ. ಈ ರೀತಿಯ ಸಂತುಷ್ಟ ಮಣಿಗಳೇ ಬಾಪ್ದಾದಾರವರ ಕೊರಳಿನ ಹಾರವಾಗುತ್ತಾರೆ, ರಾಜ್ಯ ಅಧಿಕಾರಿಗಳಾಗುತ್ತಾರೆ ಮತ್ತು ಭಕ್ತರ ಸ್ಮರಣೆಯ ಮಾಲೆಯಾಗುತ್ತಾರೆ.

ಸ್ಲೋಗನ್:
ನಕಾರಾತ್ಮಕ ಮತ್ತು ವ್ಯರ್ಥವನ್ನು ಸಮಾಪ್ತಿ ಮಾಡಿ ಪರಿಶ್ರಮ ಮುಕ್ತರಾಗಿ.