15.11.20    Avyakt Bapdada     Kannada Murli     18.01.87     Om Shanti     Madhuban


ಕರ್ಮಾತೀತ ಸ್ಥಿತಿಯ ಲಕ್ಷಣಗಳು


ಇಂದು ಅವ್ಯಕ್ತ ಬಾಪ್ದಾದಾರವರು ತನ್ನ ಅವ್ಯಕ್ತ ಸ್ಥಿತಿ ಭವದ ವರದಾನಿ ಮಕ್ಕಳ ಅಥವಾ ಅವ್ಯಕ್ತ ಫರಿಶ್ತಾಗಳೊಂದಿಗೆ ಮಿಲನವಾಗಲು ಬಂದಿದ್ದಾರೆ. ಇಡೀ ಕಲ್ಪದಲ್ಲಿ ಕೇವಲ ಈಗ ಒಂದು ಬಾರಿ ಸಂಗಮಯುಗದಲ್ಲಿ ಅವ್ಯಕ್ತ ಮಿಲನ ಆಗುತ್ತದೆ. ಸತ್ಯಯುಗದಲ್ಲಿಯೂ ದೇವತೆಗಳ ಮಿಲನ ಆಗುತ್ತದೆ ಆದರೆ ಫರಿಶ್ತೆಗಳ ಈ ಮಿಲನ, ಅವ್ಯಕ್ತ ಮಿಲನವು ಸಂಗಮಯುಗದ ಸಮಯವೇ ಆಗುತ್ತದೆ. ನಿರಾಕಾರ ತಂದೆಯೂ ಸಹ ಅವ್ಯಕ್ತ ಬ್ರಹ್ಮಾ ತಂದೆಯ ಮೂಲಕ ಮಿಲನವಾಗುತ್ತಾರೆ. ನಿರಾಕಾರನಿಗೂ ಫರಿಶ್ತೆಗಳ ಈ ಸಭೆಯು ಅತಿ ಪ್ರಿಯ ಅನಿಸುತ್ತದೆ, ಆದ್ದರಿಂದ ಮಿಲನವಾಗಲು ತನ್ನ ಧಾಮವನ್ನು ಬಿಟ್ಟು ಆಕಾರಿ ಅಥವಾ ಸಾಕಾರ ವತನದಲ್ಲಿ ಬಂದಿದ್ದಾರೆ. ಫರಿಶ್ತೆಯು ಮಕ್ಕಳ ಸ್ನೇಹದ ಆಕರ್ಷಣೆಯಿಂದ ಮಕ್ಕಳ ಪ್ರಪಂಚಕ್ಕೆ ತಂದೆಯೂ ಸಹ ರೂಪ ಬದಲಾಯಿಸಿ, ವೇಷ ಬದಲಾಯಿಸಿಕೊಂಡು ಬರಲೇ ಬೇಕಾಗುತ್ತದೆ. ಈ ಸಂಗಮಯುಗವು ತಂದೆ ಮಕ್ಕಳ ಅತಿಪ್ರಿಯ ಹಾಗೂ ಭಿನ್ನವಾದ ಸಂಸಾರ(ಪರಿವಾರ/ಪ್ರಪಂಚ)ವಾಗಿದೆ. ಸ್ನೇಹವು ಅತ್ಯಂತ ರೂಪದಲ್ಲಿ ಆಕರ್ಷಣೆ ಮಾಡುವ ಶಕ್ತಿಯಾಗಿದೆ, ಅದು ಪರಮ-ಆತ್ಮ ಬಂಧನ ಮುಕ್ತನನ್ನೂ, ಶರೀರದಿಂದ ಮುಕ್ತ ಆಗಿರುವವನ್ನೂ ಸ್ನೇಹದ ಬಂಧನದಲ್ಲಿ ಬಂಧಿಸುತ್ತದೆ, ಅಶರೀರಿಯನ್ನೂ ಲೋನ್ ತೆಗೆದುಕೊಳ್ಳುವ ಶರೀರಧಾರಿಯನ್ನಾಗಿ ಮಾಡಿ ಬಿಡುತ್ತದೆ. ಮಕ್ಕಳ ಸ್ನೇಹದ ಪ್ರತ್ಯಕ್ಷ ಪ್ರಮಾಣವು ಇದೇ ಆಗಿದೆ.

ಇಂದಿನ ದಿನ ನಾಲ್ಕೂ ಕಡೆಯಲ್ಲಿರುವ ಅನೇಕ ಮಕ್ಕಳ ಸ್ನೇಹದ ಸಂಬಂಧವು, ಸ್ನೇಹದ ಸಾಗರನಲ್ಲಿ ಸಮಾವೇಶವಾದ ದಿನವಾಗಿದೆ. ಮಕ್ಕಳು ಹೇಳುವರು- ನಾವು ಬಾಪ್ದಾದಾ ಅವರೊಂದಿಗೆ ಮಿಲನವಾಗಲು ಬಂದಿದ್ದೇವೆ'. ಮಕ್ಕಳು ಮಿಲನವಾಗಲು ಬಂದಿದ್ದಾರೆಯೇ? ಅಥವಾ ಮಕ್ಕಳೊಂದಿಗೆ ತಂದೆಯು ಮಿಲನವಾಗಲು ಬಂದಿದ್ದಾರೆಯೇ? ಅಥವಾ ಇಬ್ಬರೂ ಮಧುಬನದಲ್ಲಿ ಮಿಲನವಾಗಲು ಬರಲಾಯಿತೆ? ಮಕ್ಕಳು ಸ್ನೇಹದ ಸಾಗರನಲ್ಲಿ ಮುಳುಗಳು ಬಂದಿದ್ದಾರೆ. ಆದರೆ ತಂದೆಯು ಸಾವಿರಾರು ಗಂಗೆಗಳಲ್ಲಿ ಮಿಲನವಾಗಲು ಬಂದಿದ್ದಾರೆ. ಆದ್ದರಿಂದ ಗಂಗಾ-ಸಾಗರದ ಮೇಳವು ವಿಚಿತ್ರ ಮೇಳವಾಗಿದೆ. ಸ್ನೇಹದ ಸಾಗರನಲ್ಲಿ ಸಮಾವೇಶವಾಗಿ ಸಾಗರನ ಸಮಾನವಾಗಿ ಬಿಡುತ್ತದೆ. ಇಂದಿನ ದಿನದಂದು ತಂದೆಯ ಸಮಾನರಾಗುವ ಸ್ಮೃತಿ ಅರ್ಥಾತ್ ಸಮರ್ಥ ದಿನವೆಂದು ಹೇಳುತ್ತೇವೆ. ಏಕೆ? ಇಂದಿನ ದಿನ ಬ್ರಹ್ಮಾ ತಂದೆಯ ಸಂಪನ್ನ ಹಾಗೂ ಸಂಪೂರ್ಣ, ತಂದೆಯ ಸಮಾನ ಆಗುವ ನೆನಪಾರ್ಥ ದಿನವಾಗಿದೆ. ಬ್ರಹ್ಮಾ ಮಗುವಿನಿಂದ ತಂದೆ, ಏಕೆಂದರೆ ಬ್ರಹ್ಮನು ಮಗುವೂ ಆಗಿದ್ದಾರೆ, ತಂದೆಯೂ ಆಗಿದ್ದಾರೆ, ಇಂದು ಬ್ರಹ್ಮನು ಮಗುವಿನ ರೂಪದಲ್ಲಿ ಸುಪುತ್ರ ಮಗುವಾಗುವ ಸ್ನೇಹದ ಸ್ವರೂಪದ, ಸಮಾನ ಆಗುವ ಪ್ರತ್ಯಕ್ಷ ಪ್ರಮಾಣವನ್ನು ಕೊಟ್ಟರು, ಅತಿಪ್ರಿಯ ಹಾಗೂ ಅತಿಭಿನ್ನ ಆಗುವ ಪ್ರಮಾಣವನ್ನು ಕೊಟ್ಟರು. ತಂದೆಯ ಸಮಾನ ಕರ್ಮಾತೀತ ಅರ್ಥಾತ್ ಕರ್ಮದ ಬಂಧನದಿಂದ ಮುಕ್ತ, ಭಿನ್ನನಾಗುವ ಪ್ರಮಾಣವನ್ನು ಕೊಟ್ಟರು. ಇಡೀ ಕಲ್ಪದ ಕರ್ಮಗಳ ಲೆಕ್ಕಾಚಾರದಿಂದ ಮುಕ್ತನಾಗುವ ಪ್ರಮಾಣವನ್ನು ಕೊಟ್ಟರು. ಸೇವೆಯ ಸ್ನೇಹವಲ್ಲದೆ ಮತ್ತ್ಯಾವುದೇ ಬಂಧನವಿಲ್ಲ, ಸೇವೆಯಲ್ಲಿಯೂ ಸೇವೆಯ ಬಂಧದಲ್ಲಿ ಬಂಧಿತ ಆಗಿರುವ ಸೇವಾಧಾರಿಯಲ್ಲ ಏಕೆಂದರೆ ಸೇವೆಯಲ್ಲಿ ಕೆಲವರು ಬಂಧನಮುಕ್ತನಾಗಿ ಸೇವೆ ಮಾಡುತ್ತಾರೆ ಮತ್ತು ಕೆಲವರು ಬಂಧನಯುಕ್ತವಾಗಿ ಸೇವೆ ಮಾಡುತ್ತಾರೆ. ಬ್ರಹ್ಮಾ ತಂದೆಯೂ ಸಹ ಸೇವಾಧಾರಿ ಆಗಿದ್ದಾರೆ ಆದರೆ ಸೇವೆಯ ಮೂಲಕ ಅಲ್ಪಕಾಲದ ರಾಯಲ್ ಇಚ್ಛೆಗಳು, ಸೇವೆಯಲ್ಲಿಯೂ ಲೆಕ್ಕಾಚಾರದ ಬಂಧನದಲ್ಲಿ ಬಂಧಿಸುತ್ತದೆ. ಆದರೆ ಸತ್ಯ ಸೇವಾಧಾರಿಯು ಈ ಲೆಕ್ಕಾಚಾರದಿಂದಲೂ ಮುಕ್ತರಾಗಿರುತ್ತಾರೆ, ಇದಕ್ಕೇ ಕರ್ಮಾತೀತ ಸ್ಥಿತಿಯೆಂದು ಹೇಳಲಾಗುತ್ತದೆ. ಹೇಗೆ ದೇಹದ ಬಂಧನ, ದೇಹದ ಸಂಬಂಧದ ಬಂಧನವಿದೆಯೋ ಹಾಗೆಯೇ ಸೇವೆಯಲ್ಲಿ ಸ್ವಾರ್ಥ - ಈ ಬಂಧನವೂ ಸಹ ಕರ್ಮಾತೀತ ಆಗುವುದರಲ್ಲಿ ವಿಘ್ನ ಹಾಕುತ್ತದೆ. ಕರ್ಮಾತೀತ ಆಗುವುದು ಅರ್ಥಾತ್ ಈ ರಾಯಲ್ ಲೆಕ್ಕಾಚಾರದಿಂದಲೂ ಮುಕ್ತರಾಗುವುದು.

ಮೆಜಾರಿಟಿ ಗೀತಾ-ಪಾಠಶಾಲೆಗಳ ನಿಮಿತ್ತ ಸೇವಾಧಾರಿಗಳು ಬಂದಿದ್ದಾರಲ್ಲವೆ. ಅಂದಾಗ ಸೇವೆ ಅರ್ಥಾತ್ ಅನ್ಯರನ್ನೂ ಮುಕ್ತರನ್ನಾಗಿ ಮಾಡುವುದು. ಅನ್ಯರನ್ನು ಮುಕ್ತಗೊಳಿಸುತ್ತಾ, ಸ್ವಯಂನ್ನು ಬಂಧನದಲ್ಲಂತು ಬಂಧಿಸುವುದಿಲ್ಲವೇ? ನಷ್ಟಮೋಹಿ ಆಗುವ ಬದಲು, ಲೌಕಿಕ ಮಕ್ಕಳು ಮುಂತಾದವರು ಅವರೊಂದಿಗಿನ ಮೋಹವನ್ನು ತ್ಯಾಗ ಮಾಡಿ, ವಿದ್ಯಾರ್ಥಿಯೊಂದಿಗೆ ಮೋಹವನ್ನು ಇಡುವುದಿಲ್ಲವೇ? ಇವರು ಬಹಳ ಒಳ್ಳೆಯವರು, ಇವರು ಬಹಳ ಒಳ್ಳೆಯವರಿದ್ದಾರೆ.... ಒಳ್ಳೆಯವರು-ಒಳ್ಳೆಯವರೆಂದು ತಿಳಿದು ನನ್ನದೆನ್ನುವ ಇಚ್ಛೆಯ ಬಂಧನದಲ್ಲಂತು ಬಂಧಿತ ಆಗುವುದಿಲ್ಲವೇ? ಚಿನ್ನದ ಪಂಜರವಂತು ಪ್ರಿಯವೆನಿಸುವುದಿಲ್ಲವೇ? ಇಂದಿನ ದಿನವು ಅಲ್ಪಕಾಲದ ನನ್ನದು-ನನ್ನದೆನ್ನುವುದರಿಂದ ಮುಕ್ತನಾಗುವ ಅರ್ಥಾತ್ ಕರ್ಮಾತೀತ ಆಗುವ ಅವ್ಯಕ್ತ ದಿನವನ್ನು ಆಚರಿಸಿರಿಸುವುದಕ್ಕೇ ಸ್ನೇಹದ ಪ್ರಮಾಣವೆಂದು ಹೇಳಲಾಗುತ್ತದೆ. ಎಲ್ಲರಲ್ಲಿ ಕರ್ಮಾತೀತನಾಗುವ ಲಕ್ಷ್ಯವಂತು ಚೆನ್ನಾಗಿದೆ. ಈಗ ಪರಿಶೀಲನೆ ಮಾಡಿರಿ - ಕರ್ಮದ ಬಂಧನಗಳಿಂದ ನಾನು ಎಲ್ಲಿಯವರೆಗೆ ಭಿನ್ನನಾಗಿದ್ದೇನೆ? ಮೊದಲ ಮಾತು - ಲೌಕಿಕ ಮತ್ತು ಅಲೌಕಿಕ, ಕರ್ಮ ಮತ್ತು ಸಂಬಂಧ, ಎರಡರಲ್ಲಿಯೂ ಸ್ವಾರ್ಥ ಭಾವದಿಂದ ಮುಕ್ತನಾಗಿರುವುದು. ಎರಡನೇ ಮಾತು - ಹಿಂದಿನ ಜನ್ಮಗಳ ಕರ್ಮಗಳ ಲೆಕ್ಕಾಚಾರ ಅಥವಾ ವರ್ತಮಾನ ಪುರುಷಾರ್ಥದ ಬಲಹೀನತೆಯ ಕಾರಣ, ಯಾವುದೇ ವ್ಯರ್ಥ ಸ್ವಭಾವ-ಸಂಸ್ಕಾರಕ್ಕೆ ವಶ ಆಗುವುದರಿಂದ ಮುಕ್ತನಾಗಿದ್ದೇನೆಯೇ? ಕೆಲವೊಮ್ಮೆ ಯಾವುದೇ ಬಲಹೀನ ಸ್ವಭಾವ-ಸಂಸ್ಕಾರವು ಅಥವಾ ಹಿಂದಿನ ಸಂಸ್ಕಾರ ಸ್ವಭಾವಕ್ಕೆ ವಶ ಪಡಿಸುತ್ತದೆ ಎಂದರೆ ಬಂಧನಯುಕ್ತ ಆಗಿರುವುದು, ಬಂಧನಮುಕ್ತನಲ್ಲ. ಹೀಗೂ ತಿಳಿಯಬಾರದು - ನಾನಂತು ಬಯಸುವುದಿಲ್ಲ. ಆದರೆ ಸ್ವಭಾವ-ಸಂಸ್ಕಾರವು ಮಾಡಿಸಿ ಬಿಡುತ್ತದೆ. ಇದೂ ಸಹ ಬಂಧನ ಮುಕ್ತರ ಲಕ್ಷಣವಲ್ಲ ಆದರೆ ಬಂಧನಯುಕ್ತ ಆಗಿರುವುದು ಆಗಿದೆ. ಮತ್ತೊಂದು ಮಾತು - ಯಾವುದೇ ಸೇವೆಯ, ಸಂಘಟನೆಯ, ಪ್ರಕೃತಿಯ ಪರಿಸ್ಥಿತಿಯು ಸ್ವ ಸ್ಥಿತಿಯನ್ನು ಅಥವಾ ಶ್ರೇಷ ಸ್ಥಿತಿಯನ್ನು ಏರುಪೇರು ಮಾಡುತ್ತದೆ ಎಂದರೆ ಇದೂ ಸಹ ಬಂಧನ ಮುಕ್ತ ಸ್ಥಿತಿಯಲ್ಲ, ಈ ಬಂಧನದಿಂದಲೂ ಮುಕ್ತರಾಗಿರಿ. ಮೂರನೇ ಮಾತು - ಹಳೆಯ ಪ್ರಪಂಚದಲ್ಲಿ, ಹಳೆಯ ಅಂತಿಮ ಶರೀರದಲ್ಲಿ ಯಾವುದೇ ಪ್ರಕಾರದ ರೋಗವು ತಮ್ಮ ಶ್ರೇಷ್ಠ ಸ್ಥಿತಿಯನ್ನು ಏರು-ಪೇರಿನಲ್ಲಿ ತರುವುದರಿಂದಲೂ ಮುಕ್ತರಾಗಿರಿ. ಒಂದು - ರೋಗ ಬರುವುದು, ಇನ್ನೊಂದು - ರೋಗವು ತಮ್ಮನ್ನು ಅಲುಗಾಡಿಸುವುದು (ಭಯಭೀತ). ರೋಗ ಬರುವುದಂತು ಪೂರ್ವ ನಿಶ್ಚಿತವಿದೆ ಆದರೆ ಸ್ಥಿತಿಯು ಹೆಚ್ಚು ಕಡಿಮೆ ಆಗುವುದು ಬಂಧನಯುಕ್ತ ಚಿಹ್ನೆ/ಲಕ್ಷಣವಾಗಿದೆ. ಸ್ವ ಚಿಂತನೆ, ಜ್ಞಾನ ಚಿಂತನೆ, ಶುಭ ಚಿಂತಕನಾಗುವ ಚಿಂತನೆಗೆ ಬದಲು ಶರೀರದ ರೋಗ/ವ್ಯಾಧಿಯ ಚಿಂತನೆ ಮಾಡುವುದರಿಂದ ಮುಕ್ತರಾಗಿರಿ. ಏಕೆಂದರೆ ಹೆಚ್ಚು ಪ್ರಕೃತಿಯ ಚಿಂತನೆಯು ಚಿಂತೆಯ ರೂಪದಲ್ಲಿ ಬದಲಾಗಿ ಬಿಡುತ್ತದೆ. ಅಂದಮೇಲೆ ಇದರಿಂದ ಮುಕ್ತರಾಗಬೇಕು - ಇದಕ್ಕೇ ಕರ್ಮಾತೀತ ಸ್ಥಿತಿಯೆಂದು ಹೇಳಲಾಗುತ್ತದೆ. ಇವೆಲ್ಲಾ ಬಂಧನಗಳನ್ನು ಬಿಡುವುದೇ ಕರ್ಮಾತೀತ ಸ್ಥಿತಿಯ ಚಿಹ್ನೆಯಾಗಿದೆ. ಬ್ರಹ್ಮಾ ತಂದೆಯು ಇವೆಲ್ಲಾ ಬಂಧನಗಳಿಂದ ಮುಕ್ತನಾಗಿ, ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಂಡರು. ಆದ್ದರಿಂದ ಇಂದಿನ ದಿನವು ಬ್ರಹ್ಮಾ ತಂದೆಯ ಸಮಾನ ಕರ್ಮಾತೀತ ಆಗುವ ದಿನವಾಗಿದೆ. ಇಂದಿನ ದಿನದ ಮಹತ್ವಿಕೆಯು ತಿಳಿಯಿತೆ? ಒಳ್ಳೆಯದು.

ಇಂದಿನ ಈ ಸಭೆಯು ವಿಶೇಷ ಸೇವಾಧಾರಿ ಅಂದರೆ ಪುಣ್ಯಾತ್ಮರು ಆಗುವವರ ಸಭೆಯಾಗಿದೆ. ಗೀತಾ ಪಾಠಶಾಲೆಯನ್ನು ತೆರೆಯುವುದು ಎಂದರೆ ಪುಣ್ಯಾತ್ಮರು ಆಗುವುದು, ಪ್ರತಿಯೊಂದು ಆತ್ಮನಿಗೆ ಸದಾಕಾಲಕ್ಕಾಗಿ ಅರ್ಥಾತ್ ಅನೇಕ ಜನ್ಮಗಳಿಗಾಗಿ ಪಾಪಗಳಿಂದ ಮುಕ್ತಗೊಳಿಸುವುದೇ ಅತಿ ಶ್ರೇಷ್ಠ ಪುಣ್ಯವಾಗಿದೆ. ಗೀತಾ ಪಾಠಶಾಲೆ ಎಂಬ ಹೆಸರು ಬಹಳ ಚೆನ್ನಾಗಿದೆ. ಅಂದಮೇಲೆ ಗೀತಾ ಪಾಠಶಾಲೆಯವರು ಅರ್ಥಾತ್ ತಾವು ಸದಾ ಗೀತಾ ಪಠಣ ಮಾಡುವವರು ಮತ್ತು ಅನ್ಯರಿಗೂ ಓದಿಸುವವರು. ಗೀತಾ-ಜ್ಞಾನದ ಮೊದಲ ಪಾಠವಾಗಿದೆ - ಅಶರೀರಿ ಆತ್ಮನಾಗಿರಿ ಮತ್ತು ಅಂತಿಮ ಪಾಠ - ನಷ್ಟಮೋಹ, ಸ್ಮೃತಿ ಸ್ವರೂಪರಾಗಿರಿ. ಅಂದಮೇಲೆ ಮೊದಲ ಪಾಠವಾಗಿದೆ - ವಿಧಿ ಮತ್ತು ಅಂತಿಮ ಪಾಠವಾಗಿದೆ - ವಿಧಿಯಿಂದ ಸಿದ್ಧಿ. ಗೀತಾ ಪಾಠಶಾಲೆಯವರು ಪ್ರತೀ ಸಮಯದಲ್ಲಿಯೂ ಈ ಪಾಠವನ್ನು ಓದುತ್ತೀರಾ ಅಥವಾ ಕೇವಲ ಮುರುಳಿ ತಿಳಿಸುತ್ತೀರಾ? ಏಕೆಂದರೆ ಸತ್ಯ ಗೀತಾ ಪಾಠಶಾಲೆಯ ವಿಧಿಯು ಇದಾಗಿದೆ - ಮೊದಲು ಸ್ವಯಂ ಓದುವುದು ಅರ್ಥಾತ್ ಆ ರೀತಿ ತಯಾರಾಗುವುದು, ನಂತರ ಅನ್ಯರಿಗೆ ನಿಮಿತ್ತರಾಗಿದ್ದು ಓದಿಸುವುದು. ಎಲ್ಲಾ ಗೀತಾ ಪಾಠಶಾಲೆಯವರು ಈ ವಿಧಿಯಿಂದ ಸೇವೆಯನ್ನು ಮಾಡುತ್ತೀರಾ? ಏಕೆಂದರೆ ತಾವೆಲ್ಲರೂ ಈ ವಿಶ್ವದ ಮುಂದೆ ಪರಮಾತ್ಮ-ವಿದ್ಯೆಯ ಸ್ಯಾಂಪಲ್ ಆಗಿದ್ದೀರಿ. ಅಂದಮೇಲೆ ಸ್ಯಾಂಪಲ್ನ ಮಹತ್ವವಿರುತ್ತದೆ. ಅನೇಕ ಆತ್ಮರಲ್ಲಿ ಆ ರೀತಿಯಾಗಲು ಸ್ಯಾಂಪಲ್ ಪ್ರೇರಣೆಯನ್ನು ಕೊಡುತ್ತದೆ, ಅಂದಾಗ ಗೀತಾ ಪಾಠಶಾಲೆಯವರ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ. ಸ್ಯಾಂಪಲ್ ಆಗುವುದರಲ್ಲಿ ಸ್ವಲ್ಪವೂ ಕೊರತೆ ಕಂಡು ಬಂದಿತೆಂದರೆ, ಅನೇಕ ಆತ್ಮರುಗಳ ಭಾಗ್ಯವನ್ನು ರೂಪಿಸುವ ಬದಲು, ಭಾಗ್ಯದಿಂದ ವಂಚಿತರನ್ನಾಗಿ ಮಾಡುವುದಕ್ಕೂ ನಿಮಿತ್ತರಾಗಿ ಬಿಡುತ್ತೀರಿ ಏಕೆಂದರೆ ನೋಡುವವರು, ಕೇಳಿಸಿಕೊಳ್ಳುವವರು ಸಾಕಾರ ರೂಪದಲ್ಲಿ ನಿಮಿತ್ತರಾಗಿರುವ ಆತ್ಮರನ್ನು ನೋಡುತ್ತಾರೆ. ತಂದೆಯಂತು ಗುಪ್ತವಾಗಿದ್ದಾರಲ್ಲವೆ ಆದ್ದರಿಂದ ಅಂತಹ ಶ್ರೇಷ್ಠ ಕರ್ಮವನ್ನು ಮಾಡಿತೋರಿಸಿ, ಯಾವುದರಿಂದ ತಮ್ಮ ಶ್ರೇಷ್ಠ ಕರ್ಮವನ್ನು ನೋಡಿ, ಅನೇಕ ಆತ್ಮರು ಶ್ರೇಷ್ಠ ಕರ್ಮವನ್ನು ಮಾಡುತ್ತಾ, ತನ್ನ ಭಾಗ್ಯ ರೇಖೆಯನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಲಿ. ಅಂದಾಗ ಒಂದಂತು- ತಮ್ಮನ್ನು ಸದಾ ಸ್ಯಾಂಪಲ್ ಎಂದು ತಿಳಿಯುವುದು, ಮತ್ತೊಂದು - ಸದಾ ತಮ್ಮ ಸ್ಯಾಂಪಲ್ನ್ನು ನೆನಪಿಟ್ಟುಕೊಳ್ಳುವುದು. ಗೀತಾ ಪಾಠಶಾಲೆಯವರ ಸ್ಯಾಂಪಲ್ ಯಾವುದಾಗಿದೆ, ಗೊತ್ತಿದೆಯೇ? ಕಮಲಪುಷ್ಪ. ಬಾಪ್ದಾದಾರವರು ತಿಳಿಸಿದ್ದಾರೆ - ಕಮಲಪುಷ್ಪವಾಗಿರಿ ಮತ್ತು ಅಮಲು (ಧಾರಣೆ) ಮಾಡಿರಿ. ಕಮಲವಾಗುವ ಸಾಧನವೇ ಅಮಲು ಮಾಡುವುದಾಗಿದೆ. ಒಂದು ವೇಳೆ ಧಾರಣೆ ಮಾಡದಿದ್ದರೆ ಕಮಲಪುಷ್ಪದ ಸಮಾನ ಆಗಲು ಸಾಧ್ಯವಿಲ್ಲ. ಆದ್ದರಿಂದ ಸದಾ ಸ್ಯಾಂಪಲ್ ಆಗಿದ್ದೇವೆ' ಮತ್ತು ಕಮಲ ಪುಷ್ಪ'ದ ಸಂಕೇತವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿರಿ. ಎಷ್ಟೇ ಸೇವೆಯ ವೃದ್ಧಿಯ ಪ್ರಾಪ್ತಿಯಾಗಲಿ ಆದರೆ ಸೇವೆಯನ್ನು ಮಾಡುತ್ತಾ ಭಿನ್ನವಾಗಿ ಪ್ರಿಯರಾಗಿರಿ. ಕೇವಲ ಪ್ರಿಯರಾಗಬಾರದು, ಭಿನ್ನರಾಗಿ ಪ್ರಿಯರಾಗಿರಿ ಏಕೆಂದರೆ ಸೇವೆಯೊಂದಿಗೆ ಬಹಳ ಚೆನ್ನಾಗಿ ಪ್ರೀತಿಯಿದೆ. ಆದರೆ ಪ್ರೀತಿಯು ಸೆಳೆತದ ರೂಪದಲ್ಲಿ ಬದಲಾಗದಿರಲಿ, ಇದಕ್ಕೆ ಭಿನ್ನವಾಗಿ ಪ್ರಿಯರಾಗುವುದು ಎಂದು ಹೇಳಲಾಗುತ್ತದೆ. ಸೇವೆಗೆ ನಿಮಿತ್ತರಾಗಿದ್ದೀರಿ, ಇದಂತು ಬಹಳ ಒಳ್ಳೆಯದನ್ನೇ ಮಾಡಿದಿರಿ. ಪುಣ್ಯಾತ್ಮನ ಟೈಟಲ್ ಸಿಕ್ಕಿ ಬಿಟ್ಟಿತು. ಆದ್ದರಿಂದ ನೋಡಿ, ವಿಶೇಷ ನಿಮಂತ್ರಣ ಕೊಡಲಾಯಿತು. ಏಕೆಂದರೆ ಪುಣ್ಯಾತ್ಮನ ಕಾರ್ಯವನ್ನು ಮಾಡಿದ್ದೀರಿ. ಈಗ ಸಿದ್ಧಿಯ ಪಾಠವನ್ನೇನು ಓದಿಸಲಾಯಿತು, ಆ ಸಿದ್ಧಿಯ ಸ್ಥಿತಿಯಿಂದ ವೃದ್ಧಿಯನ್ನು ಹೊಂದುತ್ತಿರಿ. ಮುಂದೇನು ಮಾಡಬೇಕು? ತಿಳಿಯಿತೆ! ಒಳ್ಳೆಯದು.

ಎಲ್ಲರೂ ವಿಶೇಷವಾಗಿ ಒಂದು ಮಾತಿನ ನಿರೀಕ್ಷಣೆಯಲ್ಲಿ ಇದ್ದಾರೆ, ಅದು ಯಾವುದು? (ಫಲಿತಾಂಶ ತಿಳಿಸಲಿ) ಫಲಿತಾಂಶವನ್ನು ತಾವು ತಿಳಿಸುವಿರಾ ಅಥವಾ ತಂದೆಯು ತಿಳಿಸುವರೇ? ಬಾಪ್ದಾದಾರವರು ಏನನ್ನು ಹೇಳಿದ್ದರು - ಫಲಿತಾಂಶವನ್ನು ತೆಗೆದುಕೊಳ್ಳುತ್ತೇವೆ ಅಥವಾ ಕೊಡುತ್ತೇವೆ? ಡ್ರಾಮಾನುಸಾರ ಏನು ನಡೆಯಿತು, ಹೇಗೆ ನಡೆಯಿತೋ ಅದನ್ನು ಒಳ್ಳೆಯದು ಎಂದೇ ಹೇಳುತ್ತೇವೆ. ಲಕ್ಷ್ಯವನ್ನಂತು ಎಲ್ಲರೂ ಒಳ್ಳೆಯದನ್ನೇ ಇಟ್ಟುಕೊಂಡಿದ್ದಿರಿ, ಲಕ್ಷಣವು ಯಥಾಶಕ್ತಿಯಾಗಿ ಕರ್ಮದಲ್ಲಿ ತೋರಿಸಿದಿರಿ. ಬಹಳ ಕಾಲದ ವರದಾನವು ನಂಬರ್ವಾರ್ ಆಗಿಯೂ ಧಾರಣೆ ಮಾಡಿಕೊಂಡಿರಿ ಮತ್ತು ಈಗಲೂ ವರದಾನದ ಪ್ರಾಪ್ತಿ ಏನಾಯಿತು, ಆ ವರದಾನಿ ಮೂರ್ತಿಯಾಗಿ ತಂದೆಯ ಸಮಾನ ವರದಾನ-ದಾತಾರಾಗಿರಿ. ಈಗ ಬಾಪ್ದಾದಾರವರು ಬಯಸುವುದೇನು? ವರದಾನವಂತು ಸಿಕ್ಕಿತು, ಈಗ ಈ ವರ್ಷದಲ್ಲಿ ಬಹಳ ಕಾಲದ ಬಂಧನಮುಕ್ತ ಅರ್ಥಾತ್ ತಂದೆಯ ಸಮಾನ ಕರ್ಮಾತೀತ ಸ್ಥಿತಿಯ ವಿಶೇಷ ಅಭ್ಯಾಸವನ್ನು ಮಾಡುತ್ತಾ, ಪ್ರಪಂಚದವರಿಗೆ ಭಿನ್ನ ಹಾಗೂ ಪ್ರಿಯರಾಗುವ ಅನುಭವ ಮಾಡಿಸಿರಿ. ಕೆಲ ಕೆಲವೊಮ್ಮೆ ಅನುಭವ ಮಾಡುವ ಈ ವಿಧಿಗೆ ಬದಲಾಗಿ, ಬಹಳಕಾಲದ ಅನುಭೂತಿಗಳ ಪ್ರತ್ಯಕ್ಷ ಪ್ರಮಾಣವಾಗಿ - ಬಹಳ ಕಾಲದ ಅಚಲ-ಅಡೋಲ, ನಿರ್ವಿಘ್ನ-ನಿರ್ಬಂಧನ, ನಿರ್ವಿಕಲ್ಪ-ನಿರ್ವಿಕರ್ಮ ಅರ್ಥಾತ್ ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ ಸ್ಥಿತಿಯನ್ನು ಪ್ರಪಂಚದವರ ಮುಂದೆ ಪ್ರತ್ಯಕ್ಷ ರೂಪದಲ್ಲಿ ತನ್ನಿರಿ. ಹೀಗೆ ಆಗುವುದಕ್ಕೆ ತಂದೆಯ ಸಮಾನ ಆಗುವುದು ಎಂದು ಹೇಳಲಾಗುವುದು. ತಿಳಿಯಿತೆ?

ಫಲಿತಾಂಶದಲ್ಲಿ ಮೊದಲು - ಸ್ವಯಂನೊಂದಿಗೆ ಸ್ವಯಂ ಸಂತುಷ್ಟವಾಗಿ ಎಷ್ಟಿದ್ದೆವು? ಏಕೆಂದರೆ ಒಂದಾಗಿದೆ - ಸ್ವಯಂನ ಸಂತುಷ್ಟತೆ, ಇನ್ನೊಂದು - ಬ್ರಾಹ್ಮಣ ಪರಿವಾರದ ಸಂತುಷ್ಟತೆ, ಮೂರನೆಯದು - ತಂದೆಯ ಸಂತುಷ್ಟತೆ. ಮೂರರ ಫಲಿತಾಂಶದಲ್ಲಿ ಈಗ ಇನ್ನೂ ಅಂಕಗಳನ್ನು ತೆಗೆದುಕೊಳ್ಳಬೇಕು. ಅಂದಮೇಲೆ ಸಂತುಷ್ಟವಾಗಿರಿ, ಸಂತುಷ್ಟ ಪಡಿಸಿ. ಬಾಬಾರವರ ಸಂತುಷ್ಟ ಮಣಿ ಆಗಿದ್ದು ಸದಾ ಪ್ರಕಾಶವಾಗಿ ಹೊಳೆಯುತ್ತಿರಿ. ಬಾಪ್ದಾದಾರವರು ಮಕ್ಕಳ ಬಗ್ಗೆ ರಿಗಾರ್ಡ್ ಇಡುತ್ತಾರೆ ಆದ್ದರಿಂದ ಗುಪ್ತ ರಿಕಾರ್ಡ್ನ್ನು ತಿಳಿಸುತ್ತಾರೆ. ತಾವೇ ಮಾಲೀಕ ಆಗುವವರು ಆಗಿದ್ದೀರಿ ಆದ್ದರಿಂದ ತಂದೆಯು ಸದಾ ಸಂಪನ್ನತೆಯ ಸ್ಥಿತಿಯನ್ನು ನೋಡುತ್ತಾರೆ. ಒಳ್ಳೆಯದು.

ಎಲ್ಲರೂ ಸಂತುಷ್ಟ ಮಣಿ ಆಗಿದ್ದೀರಲ್ಲವೆ? ವೃದ್ಧಿಯನ್ನು ನೋಡುತ್ತಾ ಖುಷಿಯಾಗಿರಿ. ತಾವೆಲ್ಲರೂ ನಿರೀಕ್ಷಣೆಯಲ್ಲಿರಿ - ಅಬು ರೋಡಿನವರೆಗೂ ಕ್ಯೂ ನಿಲ್ಲಲಿ. ಈಗಂತು ಕೇವಲ ಈ ಹಾಲ್ ತುಂಬಿದೆ, ಮತ್ತೇನು ಮಾಡುವಿರಿ? ಮಲಗುವಿರಾ ಅಥವಾ ಅಖಂಡ ಯೋಗ ಮಾಡುವಿರಾ? ಇದೂ ಸಹ ಆಗಬೇಕು ಆದ್ದರಿಂದ ಸ್ವಲ್ಪದರಲ್ಲಿ ಖುಷಿಯಾಗಿ ಇರಿ, ಮೂರು ಹೆಜ್ಜೆಗಳಿಗೆ ಬದಲು ಒಂದು ಹೆಜ್ಜೆಯಷ್ಟು ಸಿಕ್ಕಿದರೂ ಖುಷಿಯಾಗಿ ಇರಿ. ಮೊದಲು ಹೀಗಾಗುತ್ತಿತ್ತು ಎಂದು ಯೋಚಿಸಬಾರದು, ಪರಿವಾರದ ವೃದ್ಧಿಯ ಖುಷಿಯನ್ನಾಚರಿಸಿ. ಆಕಾಶ ಮತ್ತು ಪೃಥ್ವಿಯಂತು ನಶಿಸುವುದಿಲ್ಲ ಅಲ್ಲವೆ. ಬೆಟ್ಟವಂತು ಬಹಳ ದೊಡ್ಡದಾಗಿದೆ. ಇದೂ ಆಗಬೇಕು, ಇದೂ ಸಿಗಬೇಕು - ಹೀಗೆ ದೊಡ್ಡ ಮಾತನ್ನಾಗಿ ಮಾಡಿ ಬಿಡುತ್ತೀರಿ, ಈ ದಾದಿಯರೂ ಸಹ ಏನು ಮಾಡುವುದು, ಹೇಗೆ ಮಾಡುವುದು? ಎಂದು ಯೋಚನೆಯಲ್ಲಿ ಮುಳುಗಿ ಬಿಡುತ್ತಾರೆ. ಅಂತಹ ದಿನವೂ ಬರುತ್ತದೆ, ಆ ದಿನದಲ್ಲಿ ಬಿಸಿಲಿರುವಾಗ ಮಲಗಿ ಬಿಡುತ್ತಾರೆ, ರಾತ್ರಿಯಲ್ಲಿ ಏಳುತ್ತಾರೆ. ಆ ಜನರು (ಲೌಕಿಕ) ಪರಸ್ಪರ ಬೆಂಕಿ ಹಾಕಿಕೊಂಡು ಬೆಚ್ಚಗೆ ಕುಳಿತು ಬಿಡುತ್ತಾರೆ, ತಾವು ಯೋಗಾಗ್ನಿಯನ್ನು ಹಚ್ಚಿ ಕುಳಿತು ಬಿಡುತ್ತೀರಿ. ಇದು ಇಷ್ಟ ಆಯಿತಲ್ಲವೆ ಅಥವಾ ಮಂಚವು ಬೇಕೆನ್ನುತ್ತೀರಾ? ಕುಳಿತುಕೊಳ್ಳಲು ಕುರ್ಚಿಯು ಬೇಕಾ? ಈ ಬೆಟ್ಟವನ್ನೇ ಕುರ್ಚಿಯನ್ನಾಗಿ ಮಾಡಿಕೊಳ್ಳಬೇಕು, ಎಲ್ಲಿಯವರೆಗೆ ಸಾಧನಗಳಿವೆಯೋ ಸುಖ ತೆಗೆದುಕೊಳ್ಳಿರಿ, ಇಲ್ಲದಿರುವಾಗ ಬೆಟ್ಟವನ್ನೇ ಕುರ್ಚಿಯನ್ನಾಗಿ ಮಾಡಿಕೊಳ್ಳಿರಿ. ಬೆನ್ನಿಗೆ ವಿಶ್ರಾಂತಿ ಬೇಕಲ್ಲವೆ, ಮತ್ತೇನೂ ಇಲ್ಲ ಅಷ್ಟೇ. ಐದು ಸಾವಿರ ಮಂದಿ ಬರುತ್ತಾರೆಂದರೆ ಕುರ್ಚಿಗಳನ್ನು ತೆಗೆಯಬೇಕಾಗುತ್ತದೆ ಅಲ್ಲವೆ. ಮತ್ತೆ ಯಾವಾಗ ಕ್ಯೂ ನಿಲ್ಲುತ್ತದೆಯೋ ಆಗ ಮಂಚವನ್ನೂ ಬಿಡಬೇಕಾಗುತ್ತದೆ. ಎವರೆಡಿಯಾಗಿರಿ. ಒಂದು ವೇಳೆ ಮಂಚ ಸಿಕ್ಕಿದರೂ ಹಾಂ-ಜಿ', ಧರಣಿ ಸಿಕ್ಕಿದರೂ ಹಾಂ-ಜಿ'. ಯಜ್ಞದ ಪ್ರಾರಂಭದಲ್ಲಿ ಇಂತಹ ಬಹಳಷ್ಟು ಅಭ್ಯಾಸಗಳನ್ನು ಮಾಡಿಸಿದೆವು. 15-15 ದಿನದವರೆಗೆ ಆಸ್ಪತ್ರೆಯು ಬಂಧ್ ಇರುತ್ತದೆ, ಕೆಮ್ಮಿರುವವರೂ ಸಹ ಸಜ್ಜೆ ರೊಟ್ಟಿ ಮತ್ತು ಮಜ್ಜಿಗೆಯನ್ನು ಕುಡಿಯುತ್ತಿದ್ದರು. ಆದರೆ ರೋಗಿಯಾಗಲಿಲ್ಲ, ಎಲ್ಲರೂ ಗುಣವಾಗಿ ಬಿಟ್ಟರು. ಅಂದಮೇಲೆ ಪ್ರಾರಂಭದಲ್ಲಿ ಈ ಅಭ್ಯಾಸವನ್ನು ಮಾಡಿ ತೋರಿಸಿದ್ದಾರೆ, ಹಾಗಾದರೆ ಅಂತ್ಯದಲ್ಲಿಯೂ ಆಗುತ್ತದೆಯಲ್ಲವೆ. ಇದನ್ನು ಯೋಚಿಸಿ - ಅಸ್ತಮಾ ರೋಗಿಗೆ ಒಂದು ವೇಳೆ ಮಜ್ಜಿಗೆಯನ್ನು ಕೊಟ್ಟರೆ, ಮೊದಲೇ ಗಾಬರಿಯಾಗಿ ಬಿಡುತ್ತಾರೆ. ಆದರೆ ದುವಾ ಕಿ ದವಾ (ತಂದೆಯ ನೆನಪಿನ ಔಷಧಿ) ಜೊತೆಯಿಲ್ಲಿತ್ತು ಆದ್ದರಿಂದ ಮನೋರಂಜನೆ ಆಗಿ ಬಿಡುತ್ತದೆ. ಅದು ಪರೀಕ್ಷೆಯೆನಿಸುವುದಿಲ್ಲ, ಕಷ್ಟವೆನಿಸುವುದಿಲ್ಲ. ಅದು ತ್ಯಾಗವಲ್ಲ, ಹೊರ ಸಂಚಾರವೆನಿಸುತ್ತದೆ. ಅಂದಮೇಲೆ ಎಲ್ಲರೂ ತಯಾರಿದ್ದೀರಾ ಅಥವಾ ಟೀಚರ್ಸ್ ಪ್ರಬಂಧ ಮಾಡುವವರ ಬಳಿ ಹೆಸರುಗಳ ಪಟ್ಟಿಯನ್ನು ತೆಗೆದುಕೊಂಡು ಹೋಗುವಿರಾ? ಆದ್ದರಿಂದಲೇ ಕರೆಸುವುದಿಲ್ಲ ಅಲ್ಲವೆ. ಮಿಲಿಟರಿಯ ಪಾತ್ರವನ್ನೂ ಅಭಿನಯಿಸಬೇಕು, ಈಗಂತು ಸ್ನೇಹಿ ಪರಿವಾರವಿದೆ, ಮನೆಯಾಗಿದೆ ಎಂಬ ಅನುಭವವನ್ನೂ ಮಾಡುತ್ತಿದ್ದೀರಿ. ಆದರೆ ಸಮಯದಲ್ಲಿ ಆತ್ಮಿಕ ಮಿಲಿಟರಿಯಾಗಿದ್ದು, ಸಮಯದ ಅನುಸಾರವಾಗಿ ಸ್ನೇಹದಿಂದ ಪಾರು ಮಾಡಬೇಕು - ಇದೂ ಸಹ ಮಿಲಿಟರಿಯ ವಿಶೇಷತೆಯಾಗಿದೆ. ಒಳ್ಳೆಯದು.

ಗುಜರಾತಿನವರಿಗೆ ವಿಶೇಷವಾಗಿ ಈ ವರದಾನವಿದೆ - ಅವರು ಎವರೆಡಿ ಆಗಿರುತ್ತಾರೆ. ಏನು ಮಾಡಲಿ, ಹೇಗೆ ಬರುವುದು, ರಿಸರ್ವೇಷನ್ ಸಿಗುವುದಿಲ್ಲ ಎಂದು ಕಾರಣಗಳನ್ನು ಕೊಡುವುದಿಲ್ಲ, ತಲುಪಿ ಬಿಡುತ್ತಾರೆ. ಸಮೀಪ ಇರುವ ಲಾಭವಿದೆ. ಗುಜರಾತಿನವರಿಗೆ ಆಜ್ಞಾಕಾರಿಯಾಗುವ ವಿಶೇಷ ಆಶೀರ್ವಾದವಿದೆ ಏಕೆಂದರೆ ಸೇವೆಯಲ್ಲಿಯೂ ಹಾಂ-ಜಿ, ಮಾಡುತ್ತೀರಲ್ಲವೆ. ಪರಿಶ್ರಮದ ಸೇವೆಯನ್ನು ಸದಾ ಗುಜರಾತಿನವರಿಗೆ ಕೊಡುತ್ತಾರಲ್ಲವೆ. ರೋಟಿ ಸೇವೆಯನ್ನು ಯಾರು ಮಾಡುವರು? ಸ್ಥಾನ (ಅಕಾಮಡೇಷನ್) ಕೊಡುವ, ಪರಿಶ್ರಮದ ಸೇವೆಯನ್ನು ಗುಜರಾತಿಗೆ ಕೊಡುತ್ತಾರೆ. ಬಾಪ್ದಾದಾರವರು ಎಲ್ಲವನ್ನೂ ನೋಡುತ್ತಾರೆ, ಹಾಗೆಯೇ ಗೊತ್ತಾಗುವುದಿಲ್ಲ. ಪರಿಶ್ರಮ ಪಡುವವರಿಗೆ ವಿಶೇಷವಾಗಿ ಬಹಳ ಪ್ರೀತಿಯು ಪ್ರಾಪ್ತವಾಗುತ್ತದೆ. ಸಮೀಪದಲ್ಲಿ ಇರುವ ಭಾಗ್ಯವಿದೆ ಮತ್ತು ಭಾಗ್ಯವನ್ನು ವೃದ್ಧಿಗೊಳಿಸುವ ವಿಧಿಯನ್ನೂ ಬಹಳ ಚೆನ್ನಾಗಿ ಇಡುತ್ತಾರೆ. ಭಾಗ್ಯವನ್ನು ವೃದ್ಧಿಗೊಳಿಸುವ ಶೈಲಿಯು ಎಲ್ಲರಿಗೂ ಬರುವುದಿಲ್ಲ. ಕೆಲವರಿಗೆ ಭಾಗ್ಯವು ಪ್ರಾಪ್ತವಾಗುತ್ತದೆ ಆದರೆ ಅಷ್ಟೇ ಇರುತ್ತದೆ, ವೃದ್ಧಿಗೊಳಿಸುವುದು ಬರುವುದಿಲ್ಲ. ಆದರೆ ಗುಜರಾತಿನವರಿಗೆ ಭಾಗ್ಯವಿದೆ ಮತ್ತು ವೃದ್ಧಿ ಮಾಡುವುದೂ ಬರುತ್ತದೆ. ಆದ್ದರಿಂದ ತಮ್ಮ ಭಾಗ್ಯವನ್ನು ವೃದ್ಧಿ ಮಾಡುತ್ತಿದ್ದೀರಿ - ಇದನ್ನು ನೋಡಿ ಬಾಪ್ದಾದಾರವರೂ ಸಹ ಖುಷಿಯಾಗಿದ್ದಾರೆ. ತಂದೆಯ ವಿಶೇಷ ಆಶೀರ್ವಾದವೂ ಸಹ ಭಾಗ್ಯದ ಚಿಹ್ನೆ ಆಗಿದೆ. ತಿಳಿಯಿತೆ?

ನಾಲ್ಕೂ ಕಡೆಯಲ್ಲಿರುವ ಯಾರೆಲ್ಲಾ ಸ್ನೇಹಿ ಮಕ್ಕಳು ತಲುಪಿದ್ದಾರೆ, ದೇಶ-ವಿದೇಶದ ಆ ಎಲ್ಲಾ ಸ್ನೇಹಿ ಮಕ್ಕಳಿಗೆ ಬಾಪ್ದಾದಾರವರು ಸ್ನೇಹದ ರಿಟರ್ನ್ನಲ್ಲಿ - ಸದಾ ಅವಿನಾಶಿ ಸ್ನೇಹಿ ಭವ'ದ ವರದಾನವನ್ನು ಕೊಡುತ್ತಿದ್ದಾರೆ. ಸ್ನೇಹದಲ್ಲಿ ಯಾವ ರೀತಿ ದೂರ-ದೂರದಿಂದ ಓಡೋಡಿಕೊಂಡು ತಲುಪಿದಿರಿ, ಹಾಗೆಯೇ ಪುರುಷಾರ್ಥದಲ್ಲಿಯೂ ವಿಶೇಷ ಹಾರುವ ಕಲೆಯ ಮೂಲಕ ತಂದೆಯ ಸಮಾನರಾಗಿರಿ ಅರ್ಥಾತ್ ಸದಾ ತಂದೆಯ ಸಮೀಪದಲ್ಲಿರಿ. ಯಾವ ರೀತಿ ಇಲ್ಲಿ ಸನ್ಮುಖದಲ್ಲಿ ತಲುಪಿದಿರಿ, ಹಾಗೆಯೇ ಸದಾ ಹಾರುವ ಕಲೆಯ ಮೂಲಕ ತಂದೆಯ ಸಮೀಪದಲ್ಲಿಯೇ ಇರಿ. ಏನು ಮಾಡಬೇಕು? ತಿಳಿಯಿತೆ. ಹೃದಯದ ಸ್ನೇಹವು ತಾವು ತಲುಪುವುದಕ್ಕೆ ಮೊದಲೇ, ಹೃದಯರಾಮ ತಂದೆಯ ಬಳಿ ತಲುಪಿ ಬಿಡುತ್ತದೆ. ಭಲೆ ಸನ್ಮುಖದಲ್ಲಿರಿ, ಭಲೆ ಇಂದು ದೇಶ-ವಿದೇಶದಲ್ಲಿ ಇರುವ ಮಕ್ಕಳು ಶರೀರದಿಂದ ದೂರವಿದ್ದಾರೆ. ಆದರೆ ಎಲ್ಲಾ ಮಕ್ಕಳು ದೂರವಿದ್ದರೂ ಅತಿ ಸಮೀಪ ಹೃದಯ ಸಿಂಹಾಸನ ಅಧಿಕಾರಿ ಆಗಿದ್ದಾರೆ. ಹಾಗಾದರೆ ಅತಿ ಸಮೀಪ ಸ್ಥಾನವು ಹೃದಯವಾಯಿತು. ಅಂದಾಗ ವಿದೇಶ ಅಥವಾ ದೇಶದಲ್ಲಿ ಕುಳಿತಿಲ್ಲ ಆದರೆ ಹೃದಯ ಸಿಂಹಾಸನದಲ್ಲಿ ಕುಳಿತಿದ್ದಾರೆ, ಅಂದಮೇಲೆ ಸಮೀಪವಾಗಿ ಬಿಟ್ಟಿರಲ್ಲವೆ. ಎಲ್ಲಾ ಮಕ್ಕಳ ನೆನಪು-ಪ್ರೀತಿ, ದೂರುಗಳು, ಮಧುರಾತಿ ಮಧುರ ವಾರ್ತಾಲಾಪ, ಉಡುಗೊರೆಗಳು - ಎಲ್ಲವೂ ತಂದೆಯ ಬಳಿ ತಲುಪಿ ಬಿಟ್ಟಿತು. ಬಾಪ್ದಾದಾರವರೂ ಸಹ ಸ್ನೇಹಿ ಮಕ್ಕಳಿಗೆ ಸದಾ ಪರಿಶ್ರಮದಿಂದ ಮುಕ್ತರಾಗಿದ್ದು ಪ್ರೀತಿಯಲ್ಲಿ ಮಗ್ನರಾಗಿರಿ' ಎನ್ನುವ ವರದಾನವನ್ನು ಕೊಡುತ್ತಿದ್ದಾರೆ. ಹಾಗಾದರೆ ಎಲ್ಲರಿಗೂ ರಿಟರ್ನ್ನಲ್ಲಿ ಸಿಕ್ಕಿತಲ್ಲವೆ. ಒಳ್ಳೆಯದು.

ಸರ್ವ ಸ್ನೇಹಿ ಆತ್ಮರಿಗೆ, ಸದಾ ಸಮೀಪವಿರುವ ಆತ್ಮರಿಗೆ, ಸದಾ ಬಂಧನಮುಕ್ತ, ಕರ್ಮಾತೀತ ಸ್ಥಿತಿಯಲ್ಲಿ ಬಹಳ ಕಾಲದ ಅನುಭವ ಮಾಡುವಂತಹ ವಿಶೇಷ ಆತ್ಮರಿಗೆ, ಸರ್ವ ಹೃದಯ ಸಿಂಹಾಸನ ಅಧಿಕಾರಿ ಸಂತುಷ್ಟ ಮಣಿಗಳಿಗೆ, ಬಾಪ್ದಾದಾರವರ ಅವ್ಯಕ್ತ ಸ್ಥಿತಿ ಭವ'ದ ವರದಾನದ ಜೊತೆಗೆ ನೆನಪು-ಪ್ರೀತಿ ಮತ್ತು ಗುಡ್ನೈಟ್ ಹಾಗೂ ಗುಡ್ಮಾರ್ನಿಂಗ್.

ವರದಾನ:  
ವರದಾನ: ಹಳೆಯ ಖಾತೆಯನ್ನು ಸಮಾಪ್ತಿಗೊಳಿಸಿ, ಹೊಸ ಸಂಸ್ಕಾರಗಳೆಂಬ ಹೊಸ ವಸ್ತ್ರವನ್ನು ಧಾರಣೆ ಮಾಡುವಂತಹ ತಂದೆಯ ಸಮಾನ ಸಂಪನ್ನ ಭವ.

ಹೇಗೆ ದೀಪಾವಳಿಯಲ್ಲಿ ಹೊಸ ವಸ್ತ್ರವನ್ನು ಧಾರಣೆ ಮಾಡುವರು, ಹಾಗೆಯೇ ತಾವು ಮಕ್ಕಳು ಈ ಮರುಜೀವಾ ಹೊಸ ಜನ್ಮದಲ್ಲಿ, ಹೊಸ ಸಂಸ್ಕಾರವೆಂಬ ವಸ್ತ್ರವನ್ನು ಧಾರಣೆ ಮಾಡಿಕೊಂಡು, ಹೊಸ ವರ್ಷವನ್ನು ಆಚರಿಸಿರಿ. ತಮ್ಮ ಬಲಹೀನತೆ, ಕೊರತೆ, ನಿರ್ಬಲತೆ, ಕೋಮಲತೆ ಇತ್ಯಾದಿ ಯಾವುದೆಲ್ಲಾ ಹಳೆಯ ಖಾತೆಯು ಉಳಿದುಕೊಂಡಿದೆಯೋ ಅದನ್ನು ಸಮಾಪ್ತಿ ಮಾಡುತ್ತಾ, ಸತ್ಯ ದೀಪಾವಳಿಯನ್ನು ಆಚರಿಸಿರಿ. ಈ ಹೊಸ ಜನ್ಮದಲ್ಲಿ ಹೊಸ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತೀರಿ ಎಂದರೆ ತಂದೆಯ ಸಮಾನರಾಗಿ ಬಿಡುತ್ತೀರಿ.

ಸ್ಲೋಗನ್:
ಶುದ್ಧ ಸಂಕಲ್ಪದ ಖಜಾನೆಯು ಜಮಾ ಆಗಿದ್ದರೆ ವ್ಯರ್ಥ ಸಂಕಲ್ಪದಲ್ಲಿ ಸಮಯವು ವ್ಯರ್ಥವಾಗುವುದಿಲ್ಲ.


ಸೂಚನೆ:- ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ರಾಜಯೋಗಿ-ತಪಸ್ವಿ ಸಹೋದರ-ಸಹೋದರಿಯರೆಲ್ಲರೂ ಸಂಜೆ 6.30ರಿಂದ 7.30 ಗಂಟೆಯವರೆಗೆ, ವಿಶೇಷವಾಗಿ ಯೋಗಾಭ್ಯಾಸದ ಸಮಯದಲ್ಲಿ - ತಮ್ಮ ಶುಭ ಭಾವನೆಗಳ ಶ್ರೇಷ್ಠ ವೃತಿಯ ಮೂಲಕ ಮನಸ್ಸಾ ಮಹಾದಾನಿಯಾಗಿದ್ದು, ಎಲ್ಲರಿಗೂ ನಿರ್ಭಯತೆಯ ವರದಾನವನ್ನು ಕೊಡುವ ಸೇವೆಯನ್ನು ಮಾಡಿರಿ.

ಮುರಳಿ ಪ್ರಶ್ನೆಗಳು -

1. ಸತ್ಯಯುಗದಲ್ಲಿ ಯಾರ ಜೊತೆ ಮಿಲನ ಮಾಡುತ್ತೇವೆ ಮತ್ತು ಇಲ್ಲಿಯ ಮಿಲನ ಎಂತಹ ಮಿಲನವಾಗಿದೆ?

2. ಮಕ್ಕಳ ಸ್ನೇಹದ ಪ್ರತ್ಯಕ್ಷ ಪ್ರಮಾಣ ಯಾವುದಾಗಿದೆ?

3. ಬ್ರಹ್ಮಾ ತಂದೆಯು ಇಂದಿನ ದಿನ ಯಾವ ಪೂರಾವೆಯನ್ನು (ಪ್ರೂಫ್) ಕೊಟ್ಟಿದ್ದಾರೆ?

4. ಕರ್ಮಾತೀತರಾಗುವುದರಲ್ಲಿ ಯಾವ ಬಂಧನ ವಿಘ್ನ ಹಾಕುತ್ತದೆ?

5. ಇಂದಿನ ದಿನವನ್ನು ಯಾವುದರಿಂದ ಮುಕ್ತರಾಗುವ ದಿನವನ್ನಾಗಿ ಆಚರಿಸಬೇಕು?

6. ಕರ್ಮಾತೀತರಾಗಲು ಎಂತಹ ಮೂರು ಪ್ರಕಾರದ ಬಂಧನಗಳನ್ನು ಬಿಡಬೇಕು?

7. ಗೀತಾ ಪಾಠಶಾಲೆಯನ್ನು ತೆರೆಯುವುದು ಎಂದರೆ ಎಂತಹ ಆತ್ಮರಾಗುವುದು?

8. ಗೀತಾ ಜ್ಞಾನದ ಮೊದಲನೇ ಪಾಠ ಯಾವುದು?

9. ಕಮಲ ಪುಷ್ಪ ಯಾವುದರ ಸಂಕೇತವಾಗಿದೆ?

10. ತಂದೆಯ ಸಮಾನರಾಗಲು ಯಾವ ಯಾವ ಸ್ಥಿತಿಗಳನ್ನು ಪ್ರತ್ಯಕ್ಷ ರೂಪದಲ್ಲಿ ತರಬೇಕು?