16.01.23         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಎಷ್ಟೆಷ್ಟು ಅನ್ಯರಿಗೆ ಜ್ಞಾನವನ್ನು ಹೇಳುತ್ತೀರಿ ಅಷ್ಟು ತಮ್ಮ ಬುದ್ಧಿಯಲ್ಲಿ ಜ್ಞಾನವು ಪರಿಶುದ್ಧವಾಗುತ್ತದೆ, ಆದ್ದರಿಂದ ಅವಶ್ಯವಾಗಿ ಸರ್ವೀಸ್ ಮಾಡಬೇಕು

ಪ್ರಶ್ನೆ:
ತಂದೆಯ ಬಳಿ ಎರಡು ಪ್ರಕಾರದ ಮಕ್ಕಳಿದ್ದಾರೆ, ಅವರಿಬ್ಬರಲ್ಲಿ ಅಂತರವೇನು?

ಉತ್ತರ:
ತಂದೆಯ ಬಳಿ ಒಂದು ಪ್ರಕಾರದವರು ಸ್ವಂತ ಮಕ್ಕಳಿದ್ದಾರೆ. ಎರಡನೆಯವರು ಮಲತಾಯಿ ಮಕ್ಕಳು. ಮಲತಾಯಿ ಮಕ್ಕಳು - ಮುಖದಿಂದ ಕೇವಲ ಬಾಬಾ-ಮಮ್ಮಾ ಎಂದು ಹೇಳುತ್ತಾರೆ ಆದರೆ ಶ್ರೀಮತದಂತೆ ಪೂರ್ಣ ನಡೆಯುವುದಿಲ್ಲ. ಸಂಪೂರ್ಣ ಬಲಿಹಾರಿಗಳು ಆಗುವುದಿಲ್ಲ. ಸ್ವಂತ ಮಕ್ಕಳು ತನು-ಮನ-ಧನದಿಂದ ಪೂರ್ಣ ಸಮರ್ಪಿತರು ಅಂದರೆ ಅರ್ಥ ನಿಮಿತ್ತರಾಗುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯುತ್ತಾರೆ. ಮಲತಾಯಿ ಮಕ್ಕಳು ಸೇವೆ ಮಾಡದಿರುವ ಕಾರಣ ಬಿದ್ದು ಹೋಗುತ್ತಾರೆ. ಸಂಶಯ ಬರುತ್ತದೆ. ಸ್ವಂತ ಮಕ್ಕಳು ಪೂರ್ಣ ನಿಶ್ಚಯ ಬುದ್ಧಿಯವರಾಗುತ್ತಾರೆ.

ಗೀತೆ:
ಬಾಲ್ಯದ ದಿನಗಳನ್ನು ಮರೆಯಬಾರದು....

ಓಂ ಶಾಂತಿ.
ತಂದೆ ಮಕ್ಕಳಿಗೆ ತಿಳಿಸುತ್ತಾರೆ. ಯಾವ ತಂದೆ? ವಾಸ್ತವಿಕವಾಗಿ ಇಬ್ಬರು ತಂದೆಯರಿದ್ದಾರೆ. ಒಬ್ಬರು ಆತ್ಮೀಕ, ಇವರಿಗೆ ಬಾಬಾ ಎಂದು ಹೇಳುತ್ತಾರೆ. ಇನ್ನೊಬ್ಬರು ಶಾರೀರಿಕ, ಇವರಿಗೆ ದಾದಾ ಎಂದು ಹೇಳುತ್ತಾರೆ. ಇದಂತೂ ಎಲ್ಲಾ ಸೇವಾಕೇಂದ್ರದ ಮಕ್ಕಳು ತಿಳಿದಿದ್ದಾರೆ ನಾವು ಬಾಪ್ದಾದಾರವರ ಮಕ್ಕಳು. ಆತ್ಮೀಯ ತಂದೆ ಶಿವ ಆಗಿದ್ದಾರೆ. ಅವರು ಸರ್ವ ಆತ್ಮಗಳ ತಂದೆ ಹಾಗೂ ಬ್ರಹ್ಮಾದಾದಾ [ಅಣ್ಣ] ಇವರು ಪೂರ್ಣ ಮನುಷ್ಯ ಸೃಷ್ಟಿಯ ಹಿರಿಯರಾಗಿದ್ದಾರೆ. ತಾವು ಬಂದು ಅವರಿಗೆ ಮಕ್ಕಳಾಗಿದ್ದೀರಿ. ಮಕ್ಕಳಲ್ಲಿಯೂ ಸಹ ಕೆಲವರು ಪಕ್ಕಾ ಸ್ವಂತ ಮಕ್ಕಳಾಗಿದ್ದಾರೆ, ಇನ್ನೂ ಕೆಲವರು ಮಲತಾಯಿ ಮಕ್ಕಳಿದ್ದಾರೆ. ಮಮ್ಮಾ-ಬಾಬಾ ಎಂದು ಇಬ್ಬರೂ ಹೇಳುತ್ತಾರೆ ಆದರೆ ಮಲತಾಯಿ ಮಕ್ಕಳು ಬಲಿ ಆಗುವುದಿಲ್ಲ. ಬಲಿ ಆಗದಿದ್ದವರಿಗೆ ಅಷ್ಟೊಂದು ಶಕ್ತಿಯು ಸಿಗುವುದಿಲ್ಲ ಅಂದರೆ ಅರ್ಥ ತಮ್ಮ ತಂದೆಯನ್ನು ತನು-ಮನ-ಧನದ ಟ್ರಸ್ಟಿ ಮಾಡುವುದಿಲ್ಲ. ಶ್ರೇಷ್ಠರಾಗಲು ಅವರು ಶ್ರೀಮತದಂತೆ ನಡೆಯಲು ಸಾಧ್ಯವಿಲ್ಲ. ಸ್ವಂತ ಮಕ್ಕಳಿಗೆ ಸೂಕ್ಷ್ಮ ಸಹಯೋಗವು ಸಿಗುತ್ತದೆ ಆದರೆ ಅವರು ಬಹಳ ಕಡಿಮೆ ಇದ್ದಾರೆ. ಭಲೆ ಸ್ವಂತ ಮಕ್ಕಳಿದ್ದಾರೆ ಆದರೆ ಅವರನ್ನು ಫಲಿತಾಂಶ ಬರುವ ತನಕ ಪಕ್ಕಾ ಎಂದು ಹೇಳುವುದಿಲ್ಲ. ಭಲೆ ಇಲ್ಲಿಯೇ ಇರುತ್ತಾರೆ, ಬಹಳ ಚೆನ್ನಾಗಿದ್ದಾರೆ, ಸರ್ವೀಸನ್ನೂ ಮಾಡುತ್ತಾರೆ ಆದರೂ ಬಿದ್ದು ಹೋಗುತ್ತಾರೆ. ಇದೆಲ್ಲವೂ ಬುದ್ಧಿಯೋಗದ ಮಾತಾಗಿದೆ. ಬಾಬಾರವರನ್ನು ಮರೆಯಬಾರದು. ಈ ಭಾರತವನ್ನು ಮಕ್ಕಳ ಸಹಯೋಗದಿಂದ ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಗಾಯನವಿದೆ - ಶಿವಶಕ್ತಿ ಸೇನೆ. ಪ್ರತಿಯೊಬ್ಬರು ತಮ್ಮ ಜೊತೆ ತಾವೇ ಮಾತನಾಡಿಕೊಳ್ಳಬೇಕು - ಅವಶ್ಯವಾಗಿ ನಾವು ಶಿವಬಾಬಾರವರ ದತ್ತು ಮಕ್ಕಳಾಗಿದ್ದೇವೆ. ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ. ದ್ವಾಪರಯುಗದಿಂದ ನಾವು ಯಾವ ಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆದೆವೋ ಅದು ನರಕದ್ದಾಗಿದೆ. ದುಃಖಿಗಳು ಆಗುತ್ತಲೇ ಬಂದೆವು. ಭಕ್ತಿಮಾರ್ಗದಲ್ಲಿ ಇರುವುದೇ ಅಂಧಶ್ರದ್ದೆ. ಯಾವಾಗಿನಿಂದ ಭಕ್ತಿ ಮಾರ್ಗ ಪ್ರಾರಂಭವಾಯಿತೋ ಆಗಿನಿಂದ ಯಾವ ವರ್ಷಗಳು ಕಳೆಯಿತೋ ನಾವು ಕೆಳಗೆ ಇಳಿಯುತ್ತಲೇ ಬಂದೆವು. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿ ಆಗಿತ್ತು. ಒಬ್ಬರ ಪೂಜೆಯನ್ನು ಮಾಡುತ್ತಿದ್ದೆವು. ಅವರ ಬದಲಾಗಿ ಈಗ ಅನೇಕರನ್ನು ಪೂಜೆ ಮಾಡುತ್ತಾ ಬಂದೆವು. ಈಗ ಈ ಎಲ್ಲಾ ಮಾತುಗಳನ್ನು ಋಷಿ, ಮುನಿ, ಸಾಧು, ಸಂತರು ಯಾರೂ ಸಹ ಭಕ್ತಿ ಮಾರ್ಗವು ಯಾವಾಗ ಪ್ರಾರಂಭವಾಯಿತು ಎಂಬುದನ್ನು ತಿಳಿದಿಲ್ಲ. ಶಾಸ್ತ್ರಗಳಲ್ಲಿ ಬ್ರಹ್ಮನ ಹಗಲು, ಬ್ರಹ್ಮನ ರಾತ್ರಿ ಎನ್ನುವ ವಿಚಾರ ಇದೆ. ಭಲೆ ಬ್ರಹ್ಮಾ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ಆದರೆ ಬ್ರಹ್ಮನ ಹೆಸರನ್ನು ನೀಡಿದ್ದಾರೆ. ಬ್ರಹ್ಮನ ಜೊತೆ ಬಹಳ ಮಕ್ಕಳಿದ್ದಾರೆ. ಲಕ್ಷ್ಮೀ-ನಾರಾಯಣ ಮಕ್ಕಳು ಬಹಳ ಇರುವುದಿಲ್ಲ. ಪ್ರಜಾಪಿತ ಎಂದು ಅವರಿಗೆ ಹೇಳುವುದಿಲ್ಲ. ಈಗ ಹೊಸ ಪ್ರಜೆಗಳು ಆಗುತ್ತಿದ್ದಾರೆ. ಬ್ರಾಹ್ಮಣರೇ ಹೊಸ ಪ್ರಜೆಗಳು. ಬ್ರಾಹ್ಮಣರೇ ತಮ್ಮನ್ನು ಈಶ್ವರೀಯ ಸಂತಾನರೆಂದು ತಿಳಿಯುತ್ತಾರೆ. ದೇವತೆಗಳು ತಿಳಿಯುವುದಿಲ್ಲ. ಅವರಿಗೆ ಚಕ್ರದ ಬಗ್ಗೆ ಗೊತ್ತೇ ಇಲ್ಲ.

ನಾವು ಶಿವಬಾಬಾರವರ ಮಕ್ಕಳಾಗಿದ್ದೇವೆ ಎಂದು ತಾವು ತಿಳಿದಿದ್ದೀರಿ. ಅವರೇ ನಮಗೆ 84 ಜನ್ಮದ ಚಕ್ರವನ್ನು ತಿಳಿಸಿದ್ದಾರೆ. ಅವರ ಸಹಯೋಗದಿಂದ ನಾವು ಭಾರತವನ್ನು ಮತ್ತೆ ದೈವೀ ಪಾವನ ರಾಜಸ್ಥಾನವನ್ನಾಗಿ ಮಾಡುತ್ತಿದ್ದೇವೆ. ಇದು ಬಹಳ ತಿಳಿದುಕೊಳ್ಳುವ ವಿಚಾರವಾಗಿದೆ. ಯಾರಿಗಾದರೂ ತಿಳಿಸಲು ಧೈರ್ಯವಿರಬೇಕು. ತಾವು ಶಿವಶಕ್ತಿ ಸೇನೆ ಪಾಂಡವರಾಗಿದ್ದೀರಿ. ಮಾರ್ಗದರ್ಶಕರೂ ಆಗಿದ್ದಾರೆ. ಎಲ್ಲರಿಗೂ ಮಾರ್ಗವನ್ನು ತೋರಿಸುತ್ತೀರಿ. ತಮ್ಮ ವಿನಃ ಆತ್ಮೀಯ ಸಿಹಿಯಾದ ಮನೆಯ ದಾರಿಯನ್ನು ಯಾರೂ ಹೇಳಲು ಸಾಧ್ಯವಿಲ್ಲ. ಅಲ್ಲಿನ ಮಾರ್ಗದರ್ಶಕರು ಅಮರನಾಥಕ್ಕೋ ಅಥವಾ ಬೇರೆ ಯಾವುದೇ ತೀರ್ಥ ಯಾತ್ರಕ್ಕೆ ಕರೆದೊಯ್ಯುತ್ತಾರೆ. ತಾವು ಬಿ.ಕೆ ಗಳು ಒಂದೇ ಸಲ ಎಲ್ಲದಕ್ಕಿಂತ ದೂರ ಪರಂಧಾಮಕ್ಕೆ ಕರೆದೊಯ್ಯುತ್ತೀರಿ. ಆ ಶಾರೀರಿಕ ಮಾರ್ಗದರ್ಶಕರು ಕಷ್ಟ ಪಡಿಸುತ್ತಾರೆ. ತಾವು ಎಲ್ಲರನ್ನೂ ತಂದೆಯ ಬಳಿ ಶಾಂತಿಧಾಮಕ್ಕೆ ಕರೆದೊಯ್ಯುತ್ತೀರಿ ಅಂದಮೇಲೆ ಸದಾ ಇದನ್ನು ನೆನಪು ಮಾಡಬೇಕು - ನಾವು ಭಾರತವನ್ನು ಮತ್ತೆ ದೈವೀ ರಾಜಸ್ಥಾನವನ್ನಾಗಿ ಮಾಡುತ್ತಿದ್ದೇವೆ. ಇದಂತೂ ಯಾರಾದರೂ ಒಪ್ಪಿಕೊಳ್ಳುತ್ತಾರೆ. ಭಾರತದ ಆದಿ-ಸನಾತನ ದೇವೀ-ದೇವತಾ ಧರ್ಮವಿತ್ತು. ಭಾರತ ಸತ್ಯಯುಗದಲ್ಲಿ ಬೇಹದ್ದಿನ ದೈವೀ ಪಾವನ ರಾಜಸ್ಥಾನವಾಗಿತ್ತು, ಮತ್ತೆ ಪಾವನ ಕ್ಷತ್ರಿಯ ರಾಜಸ್ಥಾನವಾಯಿತು, ನಂತರ ಮಾಯೆ ಪ್ರವೇಶವಾದ ಕಾರಣ ಆಸುರೀ ರಾಜಸ್ಥಾನವಾಗಿದೆ. ಇಲ್ಲಿಯೂ ಸಹ ಮೊದಲು ರಾಜಾ-ರಾಣಿ ರಾಜ್ಯ ಮಾಡುತ್ತಿದ್ದರು, ಆದರೆ ಪ್ರಕಾಶತೆಯ ಕಿರೀಟವಿಲ್ಲದೆ ರಾಜ್ಯ ನಡೆಯುತ್ತಾ ಬಂದಿದೆ. ದೈವೀ ರಾಜಸ್ಥಾನದ ನಂತರ ಆಸುರೀ ಪತಿತ ರಾಜಸ್ಥಾನವಾಯಿತು, ಈಗಂತೂ ಪತಿತ ಪ್ರಜಾಸ್ಥಾನವಾಗಿದೆ, ಪಂಚಾಯಿತೀ ರಾಜಸ್ಥಾನ. ವಾಸ್ತವಿಕವಾಗಿ ಇದಕ್ಕೆ ರಾಜಸ್ಥಾನ ಎಂದು ಹೇಳುವುದಿಲ್ಲ. ಆದರೆ ಹೆಸರು ಇಡಲಾಗಿದೆ, ರಾಜ್ಯವಂತೂ ಇಲ್ಲ. ಈ ಡ್ರಾಮಾ ಮಾಡಲ್ಪಟ್ಟಿದೆ. ಈ ಲಕ್ಷ್ಮೀ-ನಾರಾಯಣರ ಚಿತ್ರ ತಮಗೆ ಬಹಳ ಕೆಲಸಕ್ಕೆ ಬರುತ್ತದೆ. ಇದರ ಮೇಲೆ ತಿಳಿಸಬೇಕು, ಭಾರತ ಈ ರೀತಿ ಡಬಲ್ ಕಿರೀಟಧಾರಿ ಆಗಿತ್ತು. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಬಾಲ್ಯದಲ್ಲಿ ರಾಧಾ-ಕೃಷ್ಣರು ಇದ್ದರು, ನಂತರ ತ್ರೇತಾದಲ್ಲಿ ರಾಮರಾಜ್ಯವಾಯಿತು, ನಂತರ ದ್ವಾಪರದಲ್ಲಿ ಮಾಯೆ ಬಂದಿದೆ. ಇದಂತೂ ಸಂಪೂರ್ಣ ಸಹಜವಾಗಿದೆ ತಾನೇ. ಭಾರತದ ಇತಿಹಾಸ-ಭೂಗೋಳವನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾರೆ. ದ್ವಾಪರದಲ್ಲಿಯೇ ನಂತರ ಪಾವನ ರಾಜಾ-ರಾಣಿ ಲಕ್ಷ್ಮಿ-ನಾರಾಯಣ ಮಂದಿರ ಮಾಡಿದರು. ದೇವತೆಗಳು ಸ್ವಯಂ ವಾಮ ಮಾರ್ಗದಲ್ಲಿ ಬಂದರು. ಪತಿತರಾದರು ನಂತರ ಯಾವ ಪಾವನ ದೇವತೆಗಳು ಇದ್ದು ಹೋಗಿದ್ದರೋ ಅವರ ಮಂದಿರವನ್ನು ಮಾಡಿ ಪೂಜೆಯನ್ನು ಪ್ರಾರಂಭಿಸಿದರು. ಪತಿತರೇ ಪಾವನರಿಗೆ ತಲೆ ಬಾಗಿಸಿದರು. ಬ್ರಿಟೀಷ ಸರ್ಕಾರದ ರಾಜ್ಯ ಇರುವ ತನಕ ರಾಜಾ-ರಾಣಿ ಇದ್ದರು. ಜಮೀನ್ದಾರರೂ ಸಹ ರಾಜಾ-ರಾಣಿಯ ಬಿರುದನ್ನು ಪಡೆಯುತ್ತಿದ್ದರು. ಇದರಿಂದ ಅವರಿಗೆ ದರ್ಬಾರಿನಲ್ಲಿ ಮಾನ್ಯತೆ ಇರುತ್ತಿತ್ತು. ಈಗಂತೂ ಯಾವುದೇ ರಾಜರಿಲ್ಲ. ನಂತರ ಯಾವಾಗ ಪರಸ್ಪರದಲ್ಲಿ ಯುದ್ಧವಾಯಿತೋ ಆಗ ಮುಸಲ್ಮಾನರು ಬಂದರು. ಈಗ ತಾವು ಮಕ್ಕಳು ತಿಳಿದಿದ್ದೀರಿ - ಮತ್ತೆ ಕಲಿಯುಗದ ಅಂತ್ಯ ಬಂದಿದೆ. ವಿನಾಶ ಎದುರುಗಡೆ ನಿಂತಿದೆ. ತಂದೆ ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ಹೇಗೆ ಸ್ಥಾಪನೆ ಆಗುತ್ತದೆ, ಎಂಬುದು ತಮಗೆ ತಿಳಿದಿದೆ ನಂತರ ಈ ಇತಿಹಾಸ ಭೂಗೋಳವೂ ಅಳಿಸಿಹೋಗುತ್ತದೆ. ಮತ್ತೆ ಭಕ್ತಿಯಲ್ಲಿ ಅವರು ತಮ್ಮ ಗೀತೆಯನ್ನು ಮಾಡುತ್ತಾರೆ ಅದರಲ್ಲಿ ಬಹಳ ವ್ಯತ್ಯಾಸವಾಗುತ್ತದೆ. ಭಕ್ತಿಗಾಗಿ ಅವರು ದೇವೀ-ದೇವತಾ ಧರ್ಮದ ಪುಸ್ತಕವನ್ನು ಅವಶ್ಯವಾಗಿ ಮಾಡಬೇಕು. ಡ್ರಾಮಾದನುಸಾರ ಗೀತೆಯನ್ನು ಮಾಡಿದ್ದಾರೆ. ಭಕ್ತಿ ಮಾರ್ಗದಲ್ಲಿ ಯಾವುದೇ ಗೀತೆಯಿಂದ ರಾಜಸ್ಥಾನ ಅಥವಾ ರಾಜ್ಯಸ್ಥಾಪನೆಯನ್ನು ಮಾಡುತ್ತಾರೆ ಅಥವಾ ನರನಿಂದ ನಾರಾಯಣರಾಗುತ್ತಾರೆ - ಈ ರೀತಿ ಇಲ್ಲ. ಆ ರೀತಿ ಸಾಧ್ಯವೇ ಇಲ್ಲ.

ಈಗ ತಂದೆಯು ತಿಳಿಸುತ್ತಾರೆ ತಾವು ಗುಪ್ತ ಸೇನೆ ಆಗಿದ್ದೀರಿ. ಬಾಬಾನೂ ಸಹ ಗುಪ್ತವಾಗಿದ್ದಾರೆ. ತಮಗೂ ಸಹ ಗುಪ್ತ ಯೋಗಬಲದಿಂದ ರಾಜ್ಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಬಾಹುಬಲದಿಂದ ಕ್ಷಣಿಕ ರಾಜ್ಯ ಸಿಗುತ್ತದೆ. ಯೋಗಬಲದಿಂದ ಬೇಹದ್ದಿನ ರಾಜ್ಯ ಸಿಗುತ್ತದೆ. ತಾವು ಮಕ್ಕಳಿಗೆ ಅಂತರಾಳದಲ್ಲಿ ಈ ನಿಶ್ಚಯವಿದೆ - ನಾವೀಗ ಭಾರತವನ್ನು ಅದೇ ದೈವೀ ರಾಜಸ್ಥಾನವನ್ನಾಗಿ ಮಾಡುತ್ತಿದ್ದೇವೆ. ಯಾರು ಶ್ರಮ ಪಡುತ್ತಾರೋ ಅವರು ಶ್ರಮ ಮರೆಯಾಗಿರಲು ಸಾಧ್ಯವಿಲ್ಲ. ವಿನಾಶವಂತೂ ಆಗಲೇ ಬೇಕು. ಗೀತೆಯಲ್ಲಿಯೂ ಸಹ ಈ ಮಾತು ಇದೆ. ಕೇಳುತ್ತಾರೆ, ಈ ಸಮಯದ ಪರಿಶ್ರಮಕ್ಕೆ ಅನುಸಾರವಾಗಿ ನಮಗೆ ಏನು ಪದವಿ ಸಿಗುತ್ತದೆಯೇ? ಇಲ್ಲಿಯೂ ಸಹ ಯಾರಾದರೂ ಶರೀರ ಬಿಟ್ಟರೆ ಸಂಕಲ್ಪ ನಡೆಯುತ್ತದೆ - ಇವರು ಯಾವ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಅದು ತಂದೆಗೆ ಗೊತ್ತಿದೆ. ಅಂದಮೇಲೆ ಇವರು ಯಾವ ಪ್ರಕಾರದಿಂದ ತನ-ಮನ-ಧನದ ಸೇವೆಯನ್ನು ಮಾಡಿದ್ದಾರೆ ಎಂಬುದನ್ನು ಮಕ್ಕಳು ತಿಳಿಯಲು ಸಾಧ್ಯವಿಲ್ಲ. ಬಾಪ್ದಾದಾ ತಿಳಿಯುತ್ತಾರೆ - ನೀವು ಈ ಪ್ರಕಾರದ ಸೇವೆಯನ್ನು ಮಾಡಿದ್ದೀರಿ ಎಂಬುದನ್ನೂ ಸಹ ಹೇಳುತ್ತಾರೆ. ಜ್ಞಾನ ಪಡೆದರೋ ಇಲ್ಲವೋ ಆದರೆ ಸಹಯೋಗವಂತೂ ಬಹಳ ನೀಡಿದ್ದಾರೆ. ಹೇಗೆ ಮನುಷ್ಯರು ದಾನ ಮಾಡಿದಾಗ ತಿಳಿಯುತ್ತಾರೆ - ಈ ಸಂಸ್ಥೆ ಬಹಳ ಚೆನ್ನಾಗಿದೆ, ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ ಆದರೆ ನನ್ನಲ್ಲಿ ಪಾವನವಾಗುವ ಶಕ್ತಿ ಇಲ್ಲ. ನಾನು ಯಜ್ಞಕ್ಕೆ ಸಹಯೋಗ ಕೊಡುತ್ತೇನೆ. ಅಂದಮೇಲೆ ಅದಕ್ಕೂ ಸಹ ಅವರಿಗೆ ಪ್ರತಿಫಲ ಸಿಗುತ್ತದೆ. ಹೇಗೆ ಮನುಷ್ಯರು ಕಾಲೇಜ್ ಕಟ್ಟಿಸುತ್ತಾರೆ, ಆಸ್ಪತ್ರೆ ಕಟ್ಟಿಸುತ್ತಾರೆ ಅನ್ಯರಿಗಾಗಿ. ನನಗೆ ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಬೇಕೆಂದು ಕಟ್ಟಿಸುವುದಿಲ್ಲ. ಏನೆ ಮಾಡಿದರೂ ಅದು ಅನ್ಯರಿಗಾಗಿ ಮಾಡುತ್ತಾರೆ. ಅದರ ಫಲವೂ ಸಹ ಅವರಿಗೆ ಸಿಗುತ್ತದೆ, ಅದಕ್ಕೆ ದಾನ ಎಂದು ಹೇಳಲಾಗುತ್ತದೆ. ಇಲ್ಲಿ ಏನಾಗುತ್ತದೆ. ನಿಮ್ಮ ಲೋಕ ಹಾಗೂ ಪರಲೋಕ ಸುಖವಾಗಿರಲಿ, ನೀವು ಸುಖಿಯಾಗಿರಿ ಎಂದು ಆಶೀರ್ವಾದ ಕೊಡುತ್ತಾರೆ. ಲೋಕ ಹಾಗೂ ಪರಲೋಕ, ಇದು ಈ ಸಂಗಮಯುಗದ ವಿಚಾರವಾಗಿದೆ. ಇದು ಮೃತ್ಯುಲೋಕದ ಜನ್ಮ ಹಾಗೂ ಅಮರಲೋಕದ ಜನ್ಮ, ಇವೆರಡು ಸಫಲವಾಗಲಿ. ಅವಶ್ಯವಾಗಿ ತಮ್ಮದು ಈ ಜನ್ಮ ಸಫಲವಾಗುತ್ತಿದೆ, ನಂತರ ಕೆಲವರು ತನುವಿನಿಂದ ಕೆಲವರು ಮನಸ್ಸಿನಿಂದ ಕೆಲವರು ಧನದಿಂದ ಸೇವೆ ಮಾಡುತ್ತಾರೆ. ಅನೇಕರಿದ್ದಾರೆ - ಅವರು ಜ್ಞಾನವನ್ನು ಪಡೆಯುವುದಿಲ್ಲ. ಹೇಳುತ್ತಾರೆ - ಬಾಬಾ ನಮ್ಮಲ್ಲಿ ಧೈರ್ಯವಿಲ್ಲ, ಬಾಕಿ ಸಹಯೋಗ ಕೊಡುತ್ತೇವೆ. ಅಂದಮೇಲೆ ಬಾಬಾ ಹೇಳುತ್ತಾರೆ - ತಾವು ಇಷ್ಟು ಧನವಂತರಾಗಬಹುದು. ಯಾವುದೇ ಮಾತಿರಲಿ ತಾವು ಕೇಳಬಹುದು. ತಂದೆಯನ್ನು ಅನುಸರಿಸಬೇಕಾದರೆ ಅವರನ್ನೇ ಕೇಳಬೇಕು, ಈ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು? ಶ್ರೀಮತ ಕೊಡುವಂತಹ ತಂದೆ ಕುಳಿತಿದ್ದಾರೆ. ಅವರನ್ನು ಕೇಳಬೇಕು, ಮುಚ್ಚಿಡಬಾರದು. ಇಲ್ಲವೆಂದರೆ ಕಾಯಿಲೆ ಹೆಚ್ಚಾಗುತ್ತದೆ. ಹೆಜ್ಜೆ-ಹೆಜ್ಜೆಯಲ್ಲೂ ಶ್ರೀಮತದಂತೆ ನಡೆಯದಿದ್ದರೆ ಅಳಬೇಕಾಗುತ್ತದೆ. ಬಾಬಾ ದೂರ ಇದ್ದಾರೇನು? ಸಮ್ಮುಖದಲ್ಲಿ ಬಂದು ಕೇಳಬೇಕು. ಇಂತಹ ಬಾಪ್ದಾದಾರವರ ಬಳಿ ಪದೇ-ಪದೇ ಬರಬೇಕು. ವಾಸ್ತವಿಕವಾಗಿ ಇಂತಹ ಪ್ರೀತಿಯ ತಂದೆಯ ಜೊತೆಯಲ್ಲಿಯೇ ಇರಬೇಕು. ಪ್ರಿಯತಮನಿಗೆ ಆಕರ್ಷಣೆ ಆಗಬೇಕು, ಅವರು ಶಾರೀರಿಕ, ಇವರು ಆತ್ಮಿಕ, ಇದರಲ್ಲಿ ಆಕರ್ಷಣೆ ಆಗುವ ಮಾತಿಲ್ಲ, ಇಲ್ಲಿ ಎಲ್ಲರನ್ನು ಇಟ್ಟುಕೊಳ್ಳುವುದಿಲ್ಲ. ಇದು ಅಂತಹ ವಸ್ತು ಆಗಿದೆ - ಮುಂದೆಯೇ ಕುಳಿತಿರೋಣ, ಕೇಳುತ್ತಲೇ ಇರೋಣ, ಅವರ ಮತದಂತೆಯೇ ನಡೆಯುತ್ತಿರಬೇಕು ಎನಿಸುತ್ತದೆ. ಆದರೆ ಬಾಬಾ ಹೇಳುತ್ತಾರೆ - ಇಲ್ಲಿಯೇ ಕುಳಿತುಕೊಳ್ಳಬಾರದು. ಗಂಗಾನದಿಯಾಗಿ ಹೋಗಿ ಸರ್ವೀಸ್ ಮಾಡಿ. ಮಕ್ಕಳಿಗೆ ಪ್ರೀತಿ ಆ ರೀತಿ ಇರಬೇಕು ಮಗ್ನರಾಗುವ ಹಾಗೆ. ಆದರೆ ಸರ್ವೀಸಂತೂ ಮಾಡಲೇಬೇಕು. ನಿಶ್ಚಯಬುದ್ಧಿಯವರಂತೂ ಒಂದೇ ಸಲ ಬಾಬಾನ ಪ್ರೀತಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಮಕ್ಕಳು ಬರೆಯುತ್ತಾರೆ - ಇಂತಹವರು ಬಹಳ ಒಳ್ಳೆಯ ನಿಶ್ಚಯಬುದ್ಧಿಯವರಾಗಿದ್ದಾರೆ. ನಾನು ಬರೆಯುತ್ತೇನೆ- ಏನನ್ನೂ ತಿಳಿದಿಲ್ಲ ಎಂದು. ಒಂದುವೇಳೆ ನಿಶ್ಚಯ ಬುದ್ಧಿಯವರಾಗಿದ್ದರೆ ಸ್ವರ್ಗದ ಮಾಲೀಕರನ್ನಾಗಿ ಮಾಡುವಂತಹ ತಂದೆ ಬಂದಿದ್ದಾರೆ ಎಂದಮೇಲೆ ಒಂದು ಸೆಕೆಂಡೂ ಸಹ ಮಿಲನವಿಲ್ಲದೆ ಇರಲು ಸಾಧ್ಯವಿಲ್ಲ. ಬಹಳಷ್ಟು ಹೆಣ್ಣು ಮಕ್ಕಳಿದ್ದಾರೆ, ಬಹಳ ಒದ್ದಾಡುತ್ತಿದ್ದಾರೆ. ನಂತರ ಮನೆಯಲ್ಲೇ ಬ್ರಹ್ಮನ ಅಥವಾ ಕೃಷ್ಣನ ಸಾಕ್ಷಾತ್ಕಾರವಾಗುತ್ತದೆ. ನಿಶ್ಚಯವಿರಲಿ - ತಂದೆ ಪರಮಧಾಮದಿಂದ ನಮಗೆ ರಾಜಧಾನಿಯನ್ನು ಕೊಡಲು ಬಂದಿದ್ದಾರೆ ಅಂದಮೇಲೆ ಬಂದು ತಂದೆಯನ್ನು ಮಿಲನ ಮಾಡಬೇಕು. ಹಾಗೆಯೇ ಬರುತ್ತಾರೆ ನಂತರ ಬಾಬಾ ತಿಳಿಸುತ್ತಾರೆ ನೀನು ಜ್ಞಾನ ಗಂಗೆ ಆಗು ಎಂದು ಪ್ರಜೆಗಳಂತೂ ಬಹಳ ಬೇಕಾಗಿದೆ. ರಾಜಧಾನಿ ಸ್ಥಾಪನೆ ಆಗುತ್ತಿದೆ. ಈ ಚಿತ್ರಗಳು ತಿಳಿಸಲು ಬಹಳ ಚೆನ್ನಾಗಿದೆ. ನೀವು ಯಾರಿಗಾದರೂ ಹೇಳಬಹುದು ನಾವು ಮತ್ತೆ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ವಿನಾಶವೂ ಎದುರುಗಡೆ ನಿಂತಿದೆ. ಸಾಯುವ ಮೊದಲು ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಎಲ್ಲರೂ ಸಹ ಒಂದೇ ಸರ್ವಾಧಿಕಾರ ಸರ್ಕಾರವಾಗಬೇಕೆಂದು ಬಯಸುತ್ತಾರೆ. ಈಗ ಎಲ್ಲರೂ ಸೇರಿ ಒಂದೇ ಆಗಲು ಸಾಧ್ಯವೇ! ಅವಶ್ಯವಾಗಿ ಒಂದೇ ರಾಜ್ಯವಿತ್ತು ಎಂದು ಅದರ ಗಾಯನವನ್ನು ಮಾಡುತ್ತಾರೆ. ಸತ್ಯಯುಗದ ಹೆಸರು ಬಹಳ ಪ್ರಸಿದ್ಧವಾಗಿದೆ. ಪುನಃ ಅದರ ಸ್ಥಾಪನೆ ಆಗುತ್ತಿದೆ. ಕೆಲವರು ಈ ಮಾತುಗಳನ್ನು ತಕ್ಷಣ ತಿಳಿದುಕೊಳ್ಳುತ್ತಾರೆ, ಕೆಲವರು ತಿಳಿದುಕೊಳ್ಳುವುದಿಲ್ಲ. 5000 ವರ್ಷದ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗ ಪುನಃ ಅದೇ ರಾಜರುಗಳ ರಾಜ್ಯವಾಗುತ್ತದೆ. ಈಗ ರಾಜರೂ ಸಹ ಪತಿತವಾಗಿದ್ದಾರೆ. ಪುನಃ ಪಾವನ ಲಕ್ಷ್ಮೀ-ನಾರಾಯಣರ ರಾಜ್ಯವಾಗುತ್ತಿದೆ. ಇದೆಲ್ಲವನ್ನೂ ತಿಳಿಸಲು ಬಹಳ ಸಹಜವಾಗಿದೆ. ನಾವೇ ಈಗ ಶಿವತಂದೆಯ ಶ್ರೀಮತದಿಂದ ಮತ್ತು ಅವರ ಸಹಯೋಗದಿಂದ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ ಹಾಗೂ ಶಿವತಂದೆಯಿಂದ ಶಕ್ತಿ ಸಿಗುತ್ತದೆ ಎನ್ನುವ ನಶೆ ಇರಬೇಕು. ನೀವೆಲ್ಲರೂ ಯೋಧರಾಗಿದ್ದೀರಿ, ಸ್ವರ್ಗದ ಸ್ಥಾಪನೆ ಅವಶ್ಯವಾಗಿ ರಚಯಿತನ ಮುಖಾಂತರ ಆಗುತ್ತದೆ ಎಂದು ನೀವು ಮಂದಿರಗಳಿಗೆ ಹೋಗಿ ತಿಳಿಸಿಕೊಡಬೇಕು. ಬೇಹದ್ದಿನ ತಂದೆ ಒಬ್ಬರೇ ಆಗಿದ್ದಾರೆ ಎಂದು ನಿಮಗೆ ತಿಳಿದಿದೆ. ನಿಮ್ಮ ಮುಂದೆ ಈಗ ತಂದೆಯು ಜ್ಞಾನದ ಶೃಂಗಾರವನ್ನು ನಿಮಗೆ ಮಾಡುತ್ತಿದ್ದಾರೆ. ರಾಜಯೋಗವನ್ನು ಕಲಿಸುತ್ತಿದ್ದಾರೆ. ಗೀತೆಯನ್ನು ತಿಳಿಸುವಂತಹವರು ಎಂದೂ ಸಹ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಈಗ ಇದೆಲ್ಲವೂ ಸಹ ನಿಮ್ಮ ಬುದ್ಧಿಯಲ್ಲಿ ನಶೆಯನ್ನು ತರಿಸಲಾಗುತ್ತದೆ. ಸ್ವರ್ಗವನ್ನು ಸ್ಥಾಪನೆ ಮಾಡುವುದಕ್ಕೋಸ್ಕರ ತಂದೆಯೇ ಬಂದಿದ್ದಾರೆ. ಸ್ವರ್ಗದಲ್ಲಿ ಪಾವನ ರಾಜಸ್ಥಾನವಿತ್ತು. ಆದರೆ ಈಗ ಮನುಷ್ಯರು ಲಕ್ಷ್ಮೀ-ನಾರಾಯಣರ ರಾಜ್ಯವನ್ನೇ ಮರೆತಿದ್ದಾರೆ. ಈಗ ತಂದೆಯೇ ಸಮ್ಮುಖದಲ್ಲಿ ಕುಳಿತು ತಿಳಿಸುತ್ತಿದ್ದಾರೆ. ನೀವು ಯಾವುದೇ ಗೀತಾಪಾಠಶಾಲೆಯಲ್ಲಿ ಹೋಗಿ ತಿಳಿಸಿಕೊಡಿ. ಇಡೀ ಇತಿಹಾಸ, ಭೂಗೋಳ ಅಥವಾ 84 ಜನ್ಮಗಳ ಸಮಾಚಾರವನ್ನು ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣ ಚಿತ್ರದ ಜೊತೆಗೆ ರಾಧಾ-ಕೃಷ್ಣರದ್ದು ಇದ್ದಾಗ ತಿಳಿಸಲು ಬಹಳ ಸಹಜವಾಗಿದೆ. ಇದು ಸರಿಯಾದ ಚಿತ್ರವಾಗಿದೆ. ಅಲ್ಲಿ ಬರೆದಿರುವುದೂ ಸಹ ಬಹಳ ಚೆನ್ನಾಗಿದೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರದ ನೆನಪು ಜೊತೆಯಲ್ಲಿ ಚಕ್ರದ ಬಗ್ಗೆ ತಿಳಿಸುವಂತಹವರ ನೆನಪು ಇದೆ. ಬಾಕಿ ನಿರಂತರ ನೆನಪಿನ ಅಭ್ಯಾಸದಲ್ಲಿ ಬಹಳಷ್ಟು ಶ್ರಮವಿದೆ. ಅಂತಿಮದಲ್ಲಿ ಯಾವುದೇ ಕೊಳಕಿನ ಪಟ್ಟಿ ನೆನಪಿಗೆ ಬರದ ಹಾಗೆ ನಿರಂತರ ನೆನಪಿನಲ್ಲಿ ಇರಬೇಕು. ತಂದೆಯನ್ನು ಎಂದೂ ಸಹ ಮರೆಯಬಾರದು. ಚಿಕ್ಕ ಮಕ್ಕಳೂ ಸಹ ತಂದೆಯನ್ನು ಬಹಳ ನೆನಪು ಮಾಡುತ್ತಾರೆ. ದೊಡ್ಡವರಾದ ನಂತರ ಹಣವನ್ನು ನೆನಪು ಮಾಡುತ್ತಾರೆ. ನಿಮಗೂ ಸಹ ಸಂಪತ್ತು ಸಿಗುತ್ತಿದೆ. ಚೆನ್ನಾಗಿ ಧಾರಣೆ ಮಾಡಿ ನಂತರ ದಾನ ಮಾಡಬೇಕಾಗಿದೆ. ಪೂರ್ಣ ಆಧ್ಯಾತ್ಮಿಕ ವ್ಯಕ್ತಿಗಳು ಆಗಬೇಕು. ನಾನು ಸಮ್ಮುಖದಲ್ಲೇ ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ. ಆ ಗೀತೆಯನ್ನು ಜನ್ಮ-ಜನ್ಮಾಂತರದಿಂದ ಓದಿದ್ದೀರಿ. ಆದರೆ ಏನೂ ಸಹ ಪ್ರಾಪ್ತಿ ಇಲ್ಲ. ಇಲ್ಲಿ ನಿಮಗೆ ನರನಿಂದ ನಾರಾಯಣರಾಗುವುದಕ್ಕೋಸ್ಕರ ಈ ಶಿಕ್ಷಣವನ್ನು ಕೊಡುತ್ತಿದ್ದೇನೆ. ಅದು ಭಕ್ತಿ ಮಾರ್ಗವಾಗಿದೆ. ಇಲ್ಲೂ ಸಹ ಯಾರು ದೈವೀ ಮನೆತನದವರು ಆಗಿದ್ದಾರೋ ಅಂತಹವರು ಕೋಟಿಯಲ್ಲಿ ಕೆಲವರು ಮಾತ್ರ ಬರುತ್ತಾರೆ. ಪುನಃ ಬ್ರಾಹ್ಮಣರಾಗುವುದಕ್ಕೋಸ್ಕರ ಅವಶ್ಯವಾಗಿ ಬರುತ್ತಾರೆ, ಕೆಲವರು ರಾಜಾ-ರಾಣಿ ಆಗುತ್ತಾರೆ, ಕೆಲವರು ಪ್ರಜೆಗಳು ಆಗುತ್ತಾರೆ. ಅದರಲ್ಲೂ ಕೆಲವರು ಕೇಳುತ್ತಾರೆ, ಭಾಗವಹಿಸುತ್ತಾರೆ, ಓಡಿ ಹೋಗುತ್ತಾರೆ. ಯಾರು ಮಕ್ಕಳಾಗಿ ನಂತರ ವಿಚ್ಚೇದನ ಕೊಡುತ್ತಾರೋ ಅವರ ಮೇಲೆ ಬಹಳ ದೊಡ್ಡ ಶಿಕ್ಷೆ ಇರುತ್ತದೆ, ಕಠಿಣ ಶಿಕ್ಷೆ ಇರುತ್ತದೆ. ನಾವು ನಿರಂತರವಾಗಿ ನೆನಪಿನಲ್ಲಿ ಇದ್ದೇವೆ ಎಂದು ಈ ಸಮಯದಲ್ಲಿ ಯಾರೂ ಹೇಳಲು ಸಾಧ್ಯವಿಲ್ಲ. ಒಂದುವೇಳೆ ಯಾರಾದರೂ ಹೇಳಿದರೆ ಚಾರ್ಟ್ ಬರೆದು ಕಳಿಸಿದಾಗ ತಂದೆಯು ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಭಾರತದ ಸೇವೆಯಲ್ಲಿಯೇ ತನು-ಮನ-ಧನವನ್ನು ತೊಡಗಿಸುತ್ತಿದ್ದೀರಿ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ಸದಾ ಕಾಲ ಪಾಕೆಟ್ನಲ್ಲಿ ಇಟ್ಟುಕೊಳ್ಳಬೇಕು ಹಾಗೂ ನೀವು ಮಕ್ಕಳಿಗೆ ಬಹಳ ನಶೆ ಇರಬೇಕು.

ಸಮಾಜ ಸೇವಕರೂ ಸಹ ನೀವು ಭಾರತಕ್ಕೆ ಏನು ಸೇವೆ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ನಾವು ನಮ್ಮ ತನು-ಮನ-ಧನದಿಂದ ದೈವೀ ರಾಜಸ್ಥಾನವನ್ನಾಗಿ ಮಾಡುತ್ತಿದ್ದೇವೆ ಎಂದು ಹೇಳಿ. ಈ ರೀತಿ ಸೇವೆ ಯಾರೂ ಸಹ ಮಾಡಲು ಸಾಧ್ಯವಿಲ್ಲ. ನೀವು ಎಷ್ಟು ಸೇವೆಯನ್ನು ಮಾಡುತ್ತೀರಿ ಅಷ್ಟು ನಿಮ್ಮ ಬುದ್ಧಿ ಸ್ವಚ್ಚವಾಗುತ್ತದೆ. ಕೆಲವು ಮಕ್ಕಳು ಸರಿಯಾದ ರೀತಿಯಲ್ಲಿ ತಿಳಿಸದಿದ್ದ ಕಾರಣ ಹೆಸರನ್ನು ಹಾಳು ಮಾಡುತ್ತಾರೆ. ಕೆಲವು-ಕೆಲವರಲ್ಲಿ ಕ್ರೋಧದ ಭೂತವಿದ್ದಾಗ ಅದು ವಿನಾಶದ ಕೆಲಸವಾಗುತ್ತದೆ. ಅವರಿಗೆ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದು ಹೇಳಲಾಗುತ್ತದೆ. ನೀವು ಲಕ್ಷ್ಮೀ ಹಾಗೂ ನಾರಾಯಣರನ್ನು ವರಿಸುವುದಕ್ಕೆ ಯೋಗ್ಯರಾಗಿದ್ದೀರಾ? ಮರ್ಯಾದೆಯನ್ನು ಹಾಳು ಮಾಡುವಂತಹ ಮಕ್ಕಳು ಎಂತಹ ಪದವಿಯನ್ನು ತೆಗೆದುಕೊಳ್ಳುತ್ತಾರೆ ಅವರು ಕಾಲಾಳುಗಳ ಸಾಲಿನಲ್ಲಿ ಬರುತ್ತಾರೆ. ನೀವೂ ಸೇನೆ ಆಗಿದ್ದೀರಲ್ಲವೇ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅವಿನಾಶಿ ಜ್ಞಾನ ರತ್ನಗಳ ಮಹಾದಾನಿಗಳಾಗಬೇಕಾಗಿದೆ. ತನು-ಮನ-ಧನದಿಂದ ಭಾರತವನ್ನು ಸ್ವರ್ಗ ಮಾಡುವ ಸೇವೆ ಮಾಡಬೇಕಾಗಿದೆ.

2. ಯಾವುದೇ ವಿನಾಶಕಾರೀ ಕಾರ್ಯವನ್ನು ಮಾಡಬಾರದಾಗಿದೆ. ನಿರಂತರವಾಗಿ ನೆನಪಿನಲ್ಲಿ ಇರುವ ಅಭ್ಯಾಸವನ್ನು ಮಾಡಬೇಕಾಗಿದೆ.

ವರದಾನ:
ಏಕರಸ ಮತ್ತು ನಿರಂತರ ಖುಷಿಯ ಅನುಭೂತಿಯ ಮುಖಾಂತರ ನಂಬರ್ಒನ್ ಪಡೆಯುವಂತಹ ಅಕೂಟ್ ಖಜಾನೆಯಿಂದ ಸಂಪನ್ನ ಭವ

ನಂಬರ್ಒನ್ನಲ್ಲಿ ಬರಬೇಕಾದರೆ ಏಕರಸ ಮತ್ತು ನಿರಂತರ ಖುಷಿಯ ಅನುಭೂತಿ ಮಾಡುತ್ತಿರಿ, ಯಾವುದೇ ಗೊಂದಲದಲ್ಲಿ ಬರಬೇಡಿ. ಗೊಂದಲದಲ್ಲಿ ಹೋಗುವುದರಿಂದ ಖುಷಿಯ ಉಯ್ಯಾಲೆ ಸಡಿಲವಾಗಿಬಿಡುವುದು ನಂತರ ವೇಗವಾಗಿ ಆಡಲು ಆಗುವುದಿಲ್ಲ ಆದ್ದರಿಂದ ಸದಾ ಮತ್ತು ಏಕರಸವಾಗಿ ಖುಶಿಯ ಉಯ್ಯಾಲೆಯಲ್ಲಿ ತೂಗಾಡುತ್ತಿರಿ. ಬಾಪ್ದಾದಾರವರ ಮುಖಾಂತರ ಎಲ್ಲಾ ಮಕ್ಕಳಿಗೂ ಅವಿನಾಶಿ, ಅಕೂಟ್ ಮತ್ತು ಬೆಹದ್ದಿನ ಖಜಾನೆ ದೊರೆಯುವುದು. ಅದ್ದರಿಂದ ಸದಾ ಆ ಖಜಾನೆಗಳ ಪ್ರಾಪ್ತಿಯಲ್ಲಿ ಏಕರಸ ಮತ್ತು ಸಂಪನ್ನರಾಗಿರಿ. ಸಂಗಮಯುಗದ ವಿಶೇಷತೆಯಾಗಿದೆ ಅನುಭವ, ಈ ಯುಗದ ವಿಶೇಷತೆಯ ಲಾಭವನ್ನು ಪಡೆಯಿರಿ.

ಸ್ಲೋಗನ್:
ಮನಸ್ಸಿನಿಂದ ಮಹಾಧಾನಿಯಾಗಬೇಕಾದರೆ ಆತ್ಮೀಯ ಸ್ಥಿತಿಯಲ್ಲಿ ಸದಾ ಸ್ಥಿತರಾಗಿರಿ.